‘ಮತ್ತೆ ಶುರು ಮಾಡೋಣ್ವ’ ಬಿಗ್​​ಬಾಸ್ ಬಾಗಿಲು ತೆರೆದ ಸುದೀಪ್ – Kannada News | Bigg Boss Kannada season 13: Sudeep’s first promo released

ಕನ್ನಡದ ಬಲು ಜನಪ್ರಿಯ ರಿಯಾಲಿಟಿ ಶೋ ಬಿಗ್​​ಬಾಸ್ (Bigg Boss) ಈ ವರ್ಷ ತುಸು ಬೇಗನೆ ಶುರುವಾಗುತ್ತಿದೆ. ಪ್ರತಿ ಬಾರಿ ವರ್ಷಾಂತ್ಯಕ್ಕೆ ಶುರು ಆಗುತ್ತಿದ್ದ ಬಿಗ್​​ಬಾಸ್ ರಿಯಾಲಿಟಿ ಶೋ ಈ ಬಾರಿ ತುಸು ಬೇಗನೆ ಶುರು ಆಗಲಿದ್ದು, ಇಂದು (ಜುಲೈ 02) ಸುದೀಪ್ ಅವರ ಮೊದಲ ಪ್ರೋಮೊ ಬಿಡುಗಡೆ ಆಗಿದೆ. ಆ ಮೂಲಕ ಈ ವರ್ಷದ ಬಿಗ್​​ಬಾಸ್​​ಗೆ ಚಾಲನೆ ದೊರೆತಂತಾಗಿದೆ. ಪ್ರತಿ ಬಾರಿಯೂ ಅದ್ಧೂರಿಯಾಗಿ ಬಿಗ್​​ಬಾಸ್ ಪ್ರೋಮೊ ಅನ್ನು ಅದ್ಧೂರಿಯಾಗಿ ಚಿತ್ರೀಕರಿಸಿ ಬಿಡುಗಡೆ ಮಾಡಲಾಗುತ್ತದೆ. ಈ ಬಾರಿಯೂ ಅದನ್ನೇ ಪುನರಾವರ್ತಿಸಲಾಗಿದೆ.

ಸುದೀಪ್ ಅವರು ದೊಡ್ಡ ಬಾಗಿಲನ್ನು ತೆರೆದು ಸ್ಟೈಲ್ ಆಗಿ ಎಂಟ್ರಿ ಕೊಡುತ್ತಿರುವ ದೃಶ್ಯ ಪ್ರೋಮೊನಲ್ಲಿದೆ. ಪ್ರೋಮೊನಲ್ಲಿ ಗಮನ ಸೆಳೆಯುತ್ತಿರುವುದು ಹಿನ್ನೆಲೆಯಲ್ಲಿ ಸುದೀಪ್ ಆಡಿರುವ ಮಾತುಗಳು, ‘ಕರ್ನಾಟಕದ ಜನ ಯಾರಿಗಾದರೂ ಕಾದಿದ್ದು ಇತಿಹಾಸದಲ್ಲೇ ಇಲ್ಲ. ಆದರೆ ಪ್ರತಿ ವರ್ಷ ಒಂದು ವಿಷಯಕ್ಕಾಗಿ ಕಾಯುತ್ತಾರೆ’ ಎಂದು ಬಿಗ್​​ಬಾಸ್​​ಗಾಗಿ ವೀಕ್ಷಕರು ಕಾಯುತ್ತಿದ್ದಾರೆ ಎಂದಿದ್ದಾರೆ ಕಿಚ್ಚ.

‘ಒಂದೇ ಮನೆ, ಒಂದು ಅವಕಾಶ, ಕೋಟಿ ಕನಸುಗಳು’ ಎನ್ನುವ ಸುದೀಪ್, ಸ್ಟೈಲ್ ಆಗಿ ‘ಮತ್ತೆ ಶುರುಮಾಡೋಣ್ವ’ ಎಂದು ಬಿಗ್​​ಬಾಸ್​​ನ ಹೊಸ ಸೀಸನ್​​ಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಪ್ರೋಮೊ ಅದ್ಧೂರಿಯಾಗಿಯೂ ಭಿನ್ನವಾಗಿಯೂ ಇದೆ. ಪ್ರೋಮೊನಲ್ಲಿ ಸುದೀಪ್ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:‘ಬಿಗ್​​ಬಾಸ್’ ಅಪ್​​ಡೇಟ್ ಹೊತ್ತು ಬರುತ್ತಿದ್ದಾರೆ ಕಿಚ್ಚ ಸುದೀಪ್

ಈ ವರ್ಷದ್ದು, 13ನೇ ಸೀಸನ್ ಆಗಿದ್ದು, ಸಾಕಷ್ಟು ಭಿನ್ನತೆಯನ್ನು ಈ ಸೀಸನ್​​ನಲ್ಲಿ ತರುವ ಪ್ರಯತ್ನ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ವರ್ಷ ಸಾಮಾನ್ಯರನ್ನು ಸಹ ಬಿಗ್​​ಬಾಸ್ ಮನೆಯ ಒಳಗೆ ಕಳಿಸಲಾಗುತ್ತಿದೆ. ಜೊತೆಗೆ ಪ್ರತಿ ವರ್ಷದಂತೆ ಸಿನಿಮಾ, ಟಿವಿ ಮತ್ತು ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಗಳು ಇದ್ದೇ ಇರಲಿದ್ದಾರೆ. ಸುದೀಪ್ ಸಹ ಪ್ರತಿ ಬಾರಿಯಂತೆ ಈ ಬಾರಿಯೂ ಶೋನ ನಿರೂಪಣೆ ಮಾಡಲಿದ್ದಾರೆ. ಮತ್ತೊಂದು ವಿಶೇಷವೆಂದರೆ ಈ ವರ್ಷ ಒಂದು ತಿಂಗಳು ಮುಂಚಿತವಾಗಿಯೇ ಶೋ ಪ್ರಾರಂಭ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:28 pm, Sun, 2 August 26

Source link

ತೀರ್ಥಹಳ್ಳಿಯಲ್ಲಿ ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ – Kannada News | Victims revels how and when land sliding in thirthahalli

ಶಿವಮೊಗ್ಗ, (ಆಗಸ್ಟ್ 02): ಜಿಲ್ಲೆಯ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಯ ಆರ್ಭಟಕ್ಕೆ ಗುಡ್ಡ ಕುಸಿದು (thirthahalli land sliding ), ಶೆಡ್ ಮೇಲೆ ಮಣ್ಣು ಬಿದ್ದ ಪರಿಣಾಮ ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಕಾರ್ಮಿಕರು ದುರ್ಮರಣ ಹೊಂದಿದ್ದಾರೆ. ತಡರಾತ್ರಿ 2:30 ವೇಳೆಯಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಪಕ್ಕದ ಶೆಡ್​​ನಲ್ಲಿ ವಾಸವಿದ್ದವರಿಗೂ ಗಂಭೀರ ಗಾಯಗಳಾಗಿವೆ. ಕೊಪ್ಪಳ. ರಾಯಚೂರು, ದಾವಣಗೆರೆಸ ಜಿಲ್ಲೆಯ ಕೂಲಿ ಕಾರ್ಮಿಕರು ನೆಲೆಸಿದ್ದ ಶೆಡ್​​​​​ಗಳ ಮೇಲೆ ತಡೆಗೋಡೆ ಕುಸಿದು ಬಿದ್ದು ನಂತರ ಗುಡ್ಡದ ಮಣ್ಣು ಶೆಡ್ ಮೇಲೆ ಬಿದ್ದಿದೆ. ಗುಡ್ಡ ಕುಸಿತದ ಶಬ್ದ ಆಗುತ್ತಿದಂತೆ ಕೂಲಿ ಕಾರ್ಮಿಕರು ಶಡ್ ನಿಂದ ಹೊರಗೆ ಬಂದಿದ್ದಾರೆ. ಇದರೊಂದಿಗೆ ಪವಾಡ ರೀತಿಯಲ್ಲಿ ಪಾರಾಗಿದ್ದು, 22 ಜನರ ಜೀವ ಉಳಿದಿದೆ. ಇನ್ನು ಟಿವಿ9 ಮುಂದೆ ಗುಡ್ಡ ಕುಸಿದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಮಳೆ ಅಬ್ಬರಕ್ಕೆ ಗುಡ್ಡ ಕುಸಿದು ತೀರ್ಥಹಳ್ಳಿಯಲ್ಲಿ ದುರಂತ: ಮಗು ಸೇರಿ ಒಂದೇ ಕುಟುಂಬದ ಮೂವರು ದುರ್ಮರಣ

Source link

ದೊಡ್ಡಬಳ್ಳಾಪುರದಲ್ಲಿ ಕಣ್ಣುಮನ ಸೆಳೆದ ಗಾಳಿಪಟ ಉತ್ಸವ: ಇಲ್ಲಿವೆ ಫೋಟೋಸ್​ – Kannada News | Doddaballapur Kite Festival: 10th Annual Aashada Maasa Celebration Near Bengaluru Airport

ಈ ವಿಶೇಷ ಗಾಳಿಪಟ ಉತ್ಸವಕ್ಕಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸ್ಪರ್ಧಿಗಳು ಆಗಮಿಸಿದ್ದರು. ಆಕಾಶದಲ್ಲಿ ಬಸವ, ಆಂಜನೇಯ, ಗಣೇಶ, ಛತ್ರಪತಿ ಶಿವಾಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರಗಳಿದ್ದ ವಿಭಿನ್ನ ಗಾಳಿಪಟಗಳು ರಾರಾಜಿಸುವ ಮೂಲಕ ಎಲ್ಲರ ಗಮನ ಸೆಳೆದವು.

Source link

ಜಂತರ್ ಮಂತರ್​ನಲ್ಲಿ ಬಂಗಾಳ ಸಿಎಂ ಮೇಲೆ ದಾಳಿಗೆ ನಡೆದಿತ್ತಾ ಪಿತೂರಿ? ಗರ್ಲ್​ಫ್ರೆಂಡ್​ಳ ಸೋಷಿಯಲ್ ಮೀಡಿಯಾದಿಂದ ಸಂಚು ಬಯಲು

ಕೋಲ್ಕತಾ, ಆಗಸ್ಟ್ 2: ಪಶ್ಚಿಮ ಬಂಗಾಳದಲ್ಲಿ ಬಂಧಿತನಾಗಿರುವ ಶಂಕಿತ ಉಗ್ರನೊಬ್ಬ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯನ್ನು ಗುರಿಯಾಗಿಸಿಕೊಂಡು ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಎಂದು ಪಶ್ಚಿಮ ಬಂಗಾಳದ ಸ್ಪೆಷಲ್ ಟಾಸ್ಕ್ ಫೋರ್ಸ್ (STF) ಬಹಿರಂಗಪಡಿಸಿದೆ. ಬಂಧಿತನಾಗಿರುವ ಈ ಶಂಕಿತ ಉಗ್ರನ ಹೆಸರು ಹಮಿಮ್ ಮೊಂಡಲ್ (Hamim Mondal). ಪಶ್ಚಿಮ ಬಂಗಾಳದ ಪೂರಬ ಬರ್ಧಮಾನ್ ಜಿಲ್ಲೆಯಲ್ಲಿ ಎಸ್​ಟಿಎಫ್ ಪೊಲೀಸರು ಬಂಧಿಸಿರುವ ಈ ಶಂಕಿತ ಉಗ್ರನು ಪಾಕಿಸ್ತಾನ ಮೂಲದ ‘ಜೈಶ್-ಎ-ಮೊಹಮ್ಮದ್’ (JeM) ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವುದು ತಿಳಿದುಬಂದಿದೆ.

ಪೊಲೀಸ್ ಸಮವಸ್ತ್ರದಲ್ಲಿ ಒಳನುಸುಳಲು ಸಂಚು

ಎಸ್​ಟಿಎಫ್ ವಿಚಾರಣೆ ವೇಳೆ ತಿಳಿದುಬಂದಿರುವ ಮಾಹಿತಿ ಪ್ರಕಾರ, ಪಾಕಿಸ್ತಾನದಲ್ಲಿರುವ ಉಗ್ರರ ಹ್ಯಾಂಡ್ಲರ್‌ಗಳ ಸೂಚನೆಯಂತೆ, ಹಮಿಮ್ ಮೊಂಡಲ್ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನಾ ಸ್ಥಳಕ್ಕೆ ಪೊಲೀಸ್ ಸಮವಸ್ತ್ರ ಧರಿಸಿ ನುಗ್ಗಿ ಗಲಭೆ ಸೃಷ್ಟಿಸಲು ಯೋಜನೆ ರೂಪಿಸಿದ್ದ ಎಂದು ಎಸ್‌ಟಿಎಫ್ ಐಜಿ ಗೌರವ್ ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ: ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಯಾರು? ಡಿಜಿಟಲ್ ಫಂಡ್ ಹಾಗೂ ವಿದೇಶಿ ಶಿಕ್ಷಣದ ವೆಚ್ಚದ ತನಿಖೆಗೆ ಆರ್‌ಟಿಐ ಅರ್ಜಿ

ಈ ಉಗ್ರ ಸಂಚಿನ ಭಾಗವಾಗಿ ಪ್ರಮುಖ ರಾಜಕೀಯ ವ್ಯಕ್ತಿಗಳು ಹಾಗೂ ಮುಖ್ಯಮಂತ್ರಿಗಳ ಓಡಾಟದ ಮೇಲೂ ನಿಗಾ ಇಡಲು ಆತನಿಗೆ ಸೂಚಿಸಲಾಗಿತ್ತು. ಭದ್ರತೆ ಇಲ್ಲದ ಸ್ಥಳಗಳ ಕುರಿತು ಮಾಹಿತಿ ಕಲೆಹಾಕುವಂತೆ ಹ್ಯಾಂಡ್ಲರ್‌ಗಳು ಸೂಚಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಪ್ರೇಮಿಯ ಮೂಲಕ ಹನಿಟ್ರ್ಯಾಪ್ ಜಾಲ

ಹಮಿಮ್ ಮೊಂಡಲ್‌ನ ಪ್ರೇಯಸಿ ಅರ್ಪಿತಾ ಸರ್ಕಾರ್ ಎಂಬಾಕೆಯನ್ನು ಜಾರ್ಖಂಡ್‌ನಲ್ಲಿ ಎಸ್‌ಟಿಎಫ್ ಬಂಧಿಸಿದೆ. ಈ ಜೋಡಿಯು ಪ್ರಮುಖ ರಾಜಕಾರಣಿಗಳ ಮಕ್ಕಳನ್ನು ಹನಿಟ್ರ್ಯಾಪ್ ಮಾಡಿ ಅಪಹರಿಸಲು ಮತ್ತು ಸುಲಿಗೆ ಮಾಡಲು ಸಂಚು ಹೂಡಿತ್ತು. ಅರ್ಪಿತಾಳ ಸಾಮಾಜಿಕ ಜಾಲತಾಣದ ಚಾಟ್‌ಗಳು ಮತ್ತು ವಾಟ್ಸಾಪ್ ಸಂದೇಶಗಳಿಂದ ಪಾಕಿಸ್ತಾನದ ನಂಟು ಹೊರಬಂದಿದೆ.

ಅಂತರರಾಷ್ಟ್ರೀಯ ಸಿಮ್ ಕಾರ್ಡ್‌ಗಳ ವಶ

ಉಗ್ರರೊಂದಿಗೆ ಎನ್‌ಕ್ರಿಪ್ಟ್ ಮಾಡಲಾದ ಸಂದೇಶಗಳ ಮೂಲಕ ಸಂಪರ್ಕ ಸಾಧಿಸಲು ಬ್ರಿಟನ್ (UK) ಮತ್ತು ಮೆಕ್ಸಿಕೋ ದೇಶಗಳಿಗೆ ಸೇರಿದ ಅಂತರರಾಷ್ಟ್ರೀಯ ಸಿಮ್ ಕಾರ್ಡ್‌ಗಳನ್ನು ಬಳಸುತ್ತಿರುವುದು ಪತ್ತೆಯಾಗಿದೆ.

ಇದನ್ನೂ ಓದಿ: ಕಾವೇರಿ ವಿವಾದ: ಕರ್ನಾಟಕ-ತಮಿಳುನಾಡು ಭಾರತ-ಪಾಕಿಸ್ತಾನವಲ್ಲ; ಕಾಂಗ್ರೆಸ್ ಎಂಪಿ ಮಾಣಿಕಂ ಟ್ಯಾಗೋರ್

‘ರಾಣಾ’, ‘ಉಜೈರ್’, ‘ಅಬೀದ್ ಜಾಟ್ 333’ ಮತ್ತು ‘ಹಮಾದ್’ ಎಂಬ ಪಾಕಿಸ್ತಾನಿ ಹ್ಯಾಂಡ್ಲರ್‌ಗಳು ಶಹಜಾದ್ ಭಟ್ಟಿ ಗ್ಯಾಂಗ್ ಮೂಲಕ ಈ ಭಯೋತ್ಪಾದನಾ ಜಾಲ, ಮಾದಕವಸ್ತು ಕಳ್ಳಸಾಗಣೆ ಮತ್ತು ಉಗ್ರರ ನೇಮಕಾತಿಯಲ್ಲಿ ಸಕ್ರಿಯವಾಗಿದ್ದಾರೆ.

ಪ್ರಸ್ತುತ ಬಂಧಿತ ಶಂಕಿತನನ್ನು 14 ದಿನಗಳ ಕಾಲ ಎಸ್‌ಟಿಎಫ್ ಕಸ್ಟಡಿಗೆ ಪಡೆಯಲಾಗಿದ್ದು, ಈ ಜಾಲದ ಹಿಂದೆ ಇರುವ ಇತರ ವ್ಯಕ್ತಿಗಳು ಮತ್ತು ಅಂತರರಾಷ್ಟ್ರೀಯ ನಂಟಿನ ಕುರಿತು ತೀವ್ರ ತನಿಖೆ ಮುಂದುವರಿದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಯೂಟ್ಯೂಬ್​​ನಿಂದ ಬಾಲಿವುಡ್​​ ವರೆಗೆ ಬೆಂಗಳೂರು ಯುವತಿಯ ಛಲ ಸಾಮಾನ್ಯದ್ದಲ್ಲ – Kannada News | Who is Niharika NM, Ex YouTuber now Bollywood heroine

ಛಲ ಒಂದಿದ್ದರೆ ಅಂದುಕೊಂಡಿದ್ದನ್ನು ಸಾಧಿಸಬಹುದು ಎಂಬುದಕ್ಕೆ ಬೆಂಗಳೂರಿನ ಯುವತಿ ನಿಹಾರಿಕ ಎನ್​​ಎಂ (Niharika NM) ತಾಜಾ ಸಾಕ್ಷಿ. ನಿಹಾರಿಕಾ ಈಗ ಬಾಲಿವುಡ್​​ ಸಿನಿಮಾದ ನಾಯಕಿ. ಇದಕ್ಕೂ ಮುಂಚೆ ತೆಲುಗಿನ ಕೆಲ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ವಿಶೇಷವೆಂದರೆ ಬೆಂಗಳೂರಿನ ಈ ಯುವತಿ, ಯೂಟ್ಯೂಬ್ ಕಾಮಿಡಿ ವಿಡಿಯೋಗಳನ್ನು ನಟಿಸುತ್ತಿದ್ದರು. ಆದರೆ ತಾವು ಯೂಟ್ಯೂಬಿನಿಂದ ಹೊರಬಂದು ಸಿನಿಮಾ ನಾಯಕಿಯಾಗ ಬೇಕು ಎಂದು ನಿಶ್ಚಯಿಸಿದ್ದು ಮಾತ್ರವಲ್ಲದೆ ಸತತ ಪ್ರಯತ್ನ, ಶ್ರಮ, ತ್ಯಾಗದ ಬಳಿಕ ಈಗ ನಾಯಕಿ ಆಗಿದ್ದಾರೆ. ಬಾಲಿವುಡ್​​ ಯುವ ಸ್ಟಾರ್ ನಟನ ಜೊತೆಗೆ ನಾಯಕಿಯಾಗಿ ನಟಿಸಿದ್ದಾರೆ.

ಯೂಟ್ಯೂಬ್​​ನಲ್ಲಿ ಕಾಮಿಡಿ ವಿಡಿಯೋ ನೋಡುವವರು ನಿಹಾರಿಕಾ ಅವರನ್ನು ನೋಡಿರುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ನಿಹಾರಿಕಾ ಬೆಂಗಳೂರಿನ ಬಲು ಜನಪ್ರಿಯ ಯೂಟ್ಯೂಬ್ ಚಾನೆಲ್ ಆಗಿರುವ ‘ಜಾರ್ಡ್ ಇಂಡಿಯನ್​​’ನ ಯೂಟ್ಯೂಬ್ ವಿಡಿಯೋಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದರು. ನಾಸರ್ ಹಾಗೂ ವಿನೀತ್ ಅವರು ಥರಹೇವಾರಿ ಹಾಸ್ಯ ಪ್ರಧಾನ ವಿಡಿಯೋಗಳನ್ನು ಈ ಜಾರ್ಡ್ ಇಂಡಿಯನ್ ಚಾನೆಲ್​​ನಲ್ಲಿ ಅಪ್​ಲೋಡ್ ಮಾಡುತ್ತಿದ್ದರು. ಇವರ ವಿಡಿಯೋಗಳಲ್ಲಿ ಆಗೊಮ್ಮೆ ಈಗೊಮ್ಮೆ, ವಿಶೇಷವಾಗಿ ವಯಸ್ಸಾದ ಮಹಿಳೆಯ ಪಾತ್ರದಲ್ಲಿ ನಿಹಾರಿಕಾ ಕಾಣಿಸಿಕೊಳ್ಳುತ್ತಿದ್ದರು. ನಿಹಾರಿಕ ಮೂಲತಃ ಕನ್ನಡತಿ ಅಲ್ಲದೇ ಹೋದರೂ ಅವರು ಬೆಳೆದಿದ್ದೆಲ್ಲ ಬೆಂಗಳೂರಿನಲ್ಲೇ.

ಜಾರ್ಡ್ ಇಂಡಿಯನ್ ವಿಡಿಯೋಗಳಲ್ಲಿ ಸಾಮಾನ್ಯವಾಗಿ ತಾಯಿಯ ಪಾತ್ರದಲ್ಲಿ ನಿಹಾರಿಕಾ ಕಾಣಿಸಿಕೊಳ್ಳುತ್ತಿದ್ದರು. ತಮ್ಮ ನಟನೆ, ತಮಾಷೆ ರೀತಿಯ ಇಂಗ್ಲೀಷ್ ಮಾತು, ಹಾವ-ಭಾವಗಳಿಂದ ಸಖತ್ ನಗಿಸುತ್ತಿದ್ದರು. ಆ ಬಳಿಕ ಒಬ್ಬರೇ ಯೂಟ್ಯೂಬ್ ಕಂಟೆಂಟ್ ಕೊಡಲು ಪ್ರಾರಂಭಿಸಿದರು. ‘ಕೆಜಿಎಫ್’ ಸಿನಿಮಾ ಬಿಡುಗಡೆ ಸಮಯದಲ್ಲಿ ನಿಹಾರಿಕಾ ಅವರು ಯಶ್ ಜೊತೆಗೆ ಮಾಡಿದ್ದ ವಿಡಿಯೋ ನೆನಪಿದ್ದೇ ಇರುತ್ತದೆ. ಅದಾದ ಬಳಿಕ ಮಹೇಶ್ ಬಾಬು, ಚಿಯಾನ್ ವಿಕ್ರಂ ಇನ್ನೂ ಹಲವರೊಟ್ಟಿಗೆ ವಿಡಿಯೋಗಳನ್ನು ಸಹ ನಿಹಾರಿಕಾ ಮಾಡಿದರು. ಹಾಲಿವುಡ್​​ಗೆ ಹೋಗಿ ಸೂಪರ್ ಸ್ಟಾರ್ ಟಾಮ್ ಕ್ರೂಸ್ ಅವರನ್ನು ಭೇಟಿ ಆದರು, ಮೈಖಲ್ ಜಾರ್ಡನ್ ಅನ್ನು ಅಪ್ಪಿಕೊಂಡರು. ಚಿತ್ರರಂಗವನ್ನು ಸಹ ಆ ಸಮಯದಲ್ಲಿ ಹತ್ತಿರದಿಂದ ನೋಡಿದರು. ತಾವೂ ನಟಿ ಆಗಬೇಕು ಎಂದು ಕನಸು ಕಟ್ಟಿಕೊಂಡರು.

ಇದನ್ನೂ ಓದಿ:‘ಡಯಾಲಿಸಿಸ್ ಮಾಡಿಸಿಕೊಂಡು ಸಿನಿಮಾ ಶೂಟಿಂಗ್​​ಗೆ ಬರುತ್ತಿದ್ದರು ಅಂಬರೀಶ್’

ತಮ್ಮನ್ನು ಯೂಟ್ಯೂಬ್​​ಗೆ ಸೀಮಿತಗೊಳಿಸಿಕೊಳ್ಳದ ನಿಹಾರಿಕಾ ಮುಂದುವರೆದು ಪ್ರಯತ್ನ ಮಾಡಿ ಈಗ ಸಿನಿಮಾ ನಾಯಕಿ ಆಗಿದ್ದಾರೆ. ನಿಹಾರಿಕಾ ಮೊದಲು ‘ಪೆರುಸು’ ಹೆಸರಿನ ತಮಿಳು ಸಿನಿಮಾನಲ್ಲಿ ನಟಿಸಿದರು. ಆ ಸಿನಿಮಾನಲ್ಲಿ ಮಧ್ಯಮ ವರ್ಗ ಕುಟುಂಬದ ಯುವತಿಯ ಪಾತ್ರ. ಆ ಸಿನಿಮಾ ಸಾಧಾರಣ ಯಶಸ್ಸು ಕಂಡಿತು. ಬಳಿಕ 2025ರಲ್ಲೇ ತೆಲುಗಿನ ‘ಮಿತ್ರ ಮಂಡಳಿ’ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಿದರು. ಆ ಸಿನಿಮಾ ಹಿಟ್ ಆಯ್ತು. ನಿಹಾರಿಕಾ ನಟನೆಗೂ ಮೆಚ್ಚುಗೆ ವ್ಯಕ್ತವಾಯ್ತು.

ಇದೀಗ ನಿಹಾರಿಕಾ, ಬಾಲಿವುಡ್​​ನ ಯುವ ಸ್ಟಾರ್ ನಟ ರಾಘವ್ ಜುರೆಲ್ ಜೊತೆಗೆ ‘ಭಾಯಿ ಥೆರ ಸ್ಟಾರ್ ಹೇ’ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದ ಪ್ರಚಾರವನ್ನು ರಾಘವ್ ಜೊತೆ ಸೇರಿ ಅದ್ಧೂರಿಯಾಗಿ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಲೇಟೆಂಟ್​​ಗೆ ಸಹ ಹೋಗಿ ಬಂದರು. ಯೂಟ್ಯೂಬರ್ ಆಗಿ ಕಾಮಿಡಿ ವಿಡಿಯೋಗಳನ್ನು ಮಾಡುತ್ತಿದ್ದ ನಿಹಾರಿಕಾ ತನ್ನ ಸತತ ಪರಿಶ್ರಮ, ಶ್ರಮದಿಂದ ಇಂದು ಬಾಲಿವುಡ್ ಹೀರೋಯಿನ್ ಆಗಿದ್ದಾರೆ. ‘ಭಾಯಿ ಥೆರ ಸ್ಟಾರ್ ಹೇ’ ಸಿನಿಮಾದ ಬಳಿಕ ‘ಇದಯುಂ ಮುರಲಿ’ ಹೆಸರಿನ ತಮಿಳು ಸಿನಿಮಾನಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:45 pm, Sun, 2 August 26

Source link

ದಿಲ್ಲಿಯಿಂದ ಡಿಕೆಶಿಗೆ ಕರೆ: ನಾಳೆ ಸಚಿವ ಸಂಪುಟ ವಿಸ್ತರಣೆ ಆಗುತ್ತಾ, ಇಲ್ವಾ? – Kannada News | No Any Clarification about August 3rd cabinet expansion , Likely KCV to arrive with final list

ಬೆಂಗಳೂರು, (ಆಗಸ್ಟ್ 02): ಕರ್ನಾಟಕ (Karnataka) ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ವಿಸ್ತರಣೆಯ (cabinet expansion)  ಸಸ್ಪೆನ್ಸ್ ಇನ್ನೂ ಮುಂದುವರಿದಿದೆ. ಸೋಮವಾರ (ಆಗಸ್ಟ್ 03) ಸಂಜೆ ನಾಲ್ಕು ಗಂಟೆಗೆ ಪ್ರಮಾಣವಚನ ಕಾರ್ಯಕ್ರಮ ನಡೆಸುವ ಬಗ್ಗೆ ಮೌಖಿಕ ಮಾಹಿತಿ ನೀಡಲಾಗಿದೆ. ಆದರೆ, ಈವರೆಗೆ ಯಾವುದೇ ಲಿಖಿತ ಆದೇಶ ಲೋಕಭವನಕ್ಕೆ ತಲುಪಿಲ್ಲ. ಇದೇ ಕಾರಣಕ್ಕೆ ಅಧಿಕಾರಿಗಳೂ ಅಂತಿಮ ಸಿದ್ಧತೆಗೆ ಕೈ ಹಾಕಿಲ್ಲ. ಆದ್ರೆ ಸಿಎಂ ಡಿಕೆ ಶಿವಕುಮಾರ್ ಸಹ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಕೇವಲ ಮೌಖಿಕ ಮಾಹಿತಿಯ ಆಧಾರದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸುವುದು ಸಾಧ್ಯವಿಲ್ಲ ಅನ್ನೋದು ಲೋಕಭವನದ ಸ್ಪಷ್ಟ ನಿಲುವು. ಅಧಿಕೃತ ಪತ್ರ ಬಂದ ನಂತರವೇ ವೇದಿಕೆ, ಭದ್ರತೆ, ಪ್ರೋಟೋಕಾಲ್ ಸೇರಿದಂತೆ ಎಲ್ಲಾ ವ್ಯವಸ್ಥೆ ಆರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದೆಡೆ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲೂ ತೀವ್ರ ಗೊಂದಲ ಮನೆ ಮಾಡಿದೆ. ಸೋಮಾವಾರ ಪ್ರಮಾಣವಚನ ಇದ್ಯಾ? ಇಲ್ಲವಾ? ಎನ್ನುವ ಪ್ರಶ್ನೆಗೆ ಅವರ ಬಳಿಯೂ ಉತ್ತರ ಇಲ್ಲ. ಆದರೂ, ರಾತ್ರಿ ವೇಳೆಯಾದರೂ ಹೈಕಮಾಂಡ್‌ನಿಂದ ಕರೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಬಹುತೇಕ ಆಕಾಂಕ್ಷಿಗಳು ಕಾದು ಕುಳಿತಿದ್ದಾರೆ. ನಾಳೆ 99 ಪರ್ಸೆಂಟ್ ಸಚಿವ ಸಂಪುಟ ವಿಸ್ತರಣೆ ಆಗುತ್ತೆ, ಇನ್ನೊಂದು ಪರ್ಸೆಂಟ್ ಏನ್ ಬೇಕಾದ್ರೂ ಆಗ್ಬೋದು ಅಂತಾ ಮಾಜಿ ಶಾಸಕ ಹೆಚ್​.ಸಿ.ಬಾಲಕೃಷ್ಣ ಹೇಳಿದ್ದಾರೆ. ಇನ್ನು ಸೋಮವಾರ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಆದ್ರೆ, ಸಿಎಂ ಡಿಕೆ ಶಿವಕುಮಾರ್ ಮಾತ್ರ ಯಾವುದು ಸುಳಿವು ಬಿಟ್ಟು ಕೊಟ್ಟಿಲ್ಲ.

ಇದನ್ನೂ ಓದಿ: ಬಿಜೆಪಿ ರಾಜ್ಯ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ: ಯಾವೆಲ್ಲ ಪ್ರಮುಖ ವಿಷಯಗಳು ಚರ್ಚೆ?

ದೆಹಲಿ ಮಟ್ಟದಲ್ಲೂ ಇನ್ನೂ ಮುಗಿದಿಲ್ಲ ಕಸರತ್ತು

ದೆಹಲಿ ಮಟ್ಟದಲ್ಲೂ ಇನ್ನೂ ಕಸರತ್ತು ಮುಗಿದಿಲ್ಲ. ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಡುವೆ ಕೆಲ ಹೆಸರುಗಳ ಬಗ್ಗೆ ಇನ್ನೂ ಸಂಪೂರ್ಣ ಒಮ್ಮತ ಮೂಡಿಲ್ಲ ಎನ್ನಲಾಗುತ್ತಿದೆ. ಕೊನೆಯ ಕ್ಷಣದಲ್ಲಿ ಕೆಲವು ಅಚ್ಚರಿಯ ಹೆಸರುಗಳು ಪಟ್ಟಿಗೆ ಸೇರುವ ಸಾಧ್ಯತೆಯೂ ಇರುವುದರಿಂದ ಹಿರಿಯ ನಾಯಕರಲ್ಲೂ ಆತಂಕ ಹೆಚ್ಚಾಗಿದೆ. ಇದರ ಮಧ್ಯೆ ಹೈಕಮಾಂಡ್​​​​ನಿಂದ ಸಿಎಂ ಡಿಕೆ ಶಿವಕುಮಾರ್​​​ಗೆ ಬರೆಬಂದಿದ್ದು, ಇಂದು ಮತ್ತೊಂದು ಸುತ್ತು ಎಐಸಿಸಿ ನಾಯಕರ ಅಂತಿಮ ಚರ್ಚೆ ಆಗಲಿದ್ದು, ನಾಳೆ ಬೆಳಗ್ಗೆ 10 ಗಂಟೆಗೆ ಪಟ್ಟಿ ರವಾನಿಸುವುದಾಗಿ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಕೆ.ಸಿ. ವೇಣುಗೋಪಾಲ್ ಹಾಗೂ ಸುರ್ಜೇವಾಲ ಬೆಂಗಳೂರಿಗೆ ಯಾವಾಗ ಬರುತ್ತಾರೆ ಅನ್ನೋದರ ಬಗ್ಗೆಯೂ ಇನ್ನೂ ಅಧಿಕೃತ ಮಾಹಿತಿ ಇಲ್ಲ. ಇಬ್ಬರೂ ಬಂದು ಸಿಎಂಗೆ ಅಂತಿಮ ಪಟ್ಟಿ ನೀಡುತ್ತಾರಾ? ಅಥವಾ ಎಐಸಿಸಿಯೇ ಅಧಿಕೃತವಾಗಿ ಸಚಿವರ ಪಟ್ಟಿಯನ್ನು ಪ್ರಕಟಿಸುತ್ತಾ? ಎನ್ನುವುದೂ ಇನ್ನೂ ನಿಗೂಢವಾಗಿಯೇ ಉಳಿದಿದೆ.

ಬೆಂಬಲಿಗರಲ್ಲಿ ಗೊಂದಲ

ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಹಲವು ಶಾಸಕರ ಬೆಂಬಲಿಗರು ನಾಳೆ ಬೆಂಗಳೂರಿಗೆ ಹೊರಡಲು ಸಿದ್ಧತೆ ನಡೆಸಿದ್ದರು. ಆದರೆ, ಇನ್ನೂ ಯಾವುದೇ ಅಧಿಕೃತತೆ ಇಲ್ಲದ ಕಾರಣ, ಸದ್ಯಕ್ಕೆ ಬೆಂಗಳೂರಿಗೆ ಬಾರದಂತೆ ಹಲವು ಆಕಾಂಕ್ಷಿಗಳೇ ತಮ್ಮ ಬೆಂಬಲಿಗರಿಗೆ ಸಂದೇಶ ರವಾನಿಸಿದ್ದಾರೆ.

ಸೋಮವಾರ ಬಿಟ್ರೆ ಬುಧವಾರ ಸಂಪುಟ ವಿಸ್ತರಣೆ

ಇದು ಸಚಿವ ಸಂಪುಟ ವಿಸ್ತರಣೆಗೆ ಮೂರನೇ ಬಾರಿ ನಿಗದಿಯಾಗಿರುವ ಮುಹೂರ್ತ. ಒಂದು ವೇಳೆ ನಾಳೆಯೂ ಕಾರ್ಯಕ್ರಮ ನಡೆಯದೇ ಹೋದರೆ, ಬುಧವಾರಕ್ಕೆ ಮತ್ತೆ ಮುಂದೂಡುವ ಸಾಧ್ಯತೆಯ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಆಕಾಂಕ್ಷಿಗಳ ಆತಂಕವೂ ಹೆಚ್ಚಾಗಿದೆ. ಸಚಿವ ಸಂಪುಟ ವಿಸ್ತರಣೆಗೆ ವೇದಿಕೆ ಸಿದ್ಧವಾಗಿದೆ ಅನ್ನೋ ಸಂದೇಶ ಹೊರಬಿದ್ದಿದ್ರೂ, ಅಧಿಕೃತ ಆದೇಶ ಮಾತ್ರ ಇನ್ನೂ ಹೊರಬಿದ್ದಿಲ್ಲ. ಸಚಿವರಾಗೋವರ ಪಟ್ಟಿಯೂ ಫೈನಲ್ ಆಗಿಲ್ಲ. ಹೈಕಮಾಂಡ್‌ನಿಂದ ಅಂತಿಮ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕವೇ ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ. ಸೋಮವಾರ ಸಂಜೆ ಪ್ರಮಾಣ ವಚನ ನಡೆಯುತ್ತಾ? ಅಥವಾ ಮತ್ತೊಮ್ಮೆ ಮುಂದೂಡಿಕೆಯಾಗುತ್ತಾ? ಅನ್ನೋ ಕುತೂಹಲವೇ ಈಗ ರಾಜ್ಯ ರಾಜಕೀಯದ ಕೇಂದ್ರಬಿಂದುವಾಗಿದೆ.

ಒಟ್ಟಿನಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಘೋಷಣೆ ಸಮೀಪದಲ್ಲಿದೆ ಎಂಬ ವಾತಾವರಣ ನಿರ್ಮಾಣವಾಗಿದ್ದರೂ, ಅಧಿಕೃತ ಸ್ಪಷ್ಟತೆ ಮಾತ್ರ ಇನ್ನೂ ಇಲ್ಲ. ಹೀಗಾಗಿ ಸಚಿವ ಸ್ಥಾನದ ಆಕಾಂಕ್ಷಿಗಳಿಂದ ಹಿಡಿದು ಅವರ ಬೆಂಬಲಿಗರವರೆಗೂ ಎಲ್ಲರ ಕಣ್ಣು ಈಗ ದೆಹಲಿ ಮತ್ತು ಸಿಎಂ ಕಚೇರಿಯತ್ತ ನೆಟ್ಟಿದೆ. ಕೊನೆಯ ಕ್ಷಣದಲ್ಲಿ ಯಾವ ತೀರ್ಮಾನ ಹೊರಬೀಳುತ್ತೆ ಅನ್ನೋದು ಮುಂದಿನ ಕೆಲ ಗಂಟೆಗಳಲ್ಲಿ ಗೊತ್ತಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:49 pm, Sun, 2 August 26

Source link

Video: ಟ್ರಾಫಿಕ್ ಕ್ಲಿಯರ್ ಮಾಡಿ ಆಂಬ್ಯುಲೆನ್ಸ್‌ ಹೋಗಲು ದಾರಿ ಮಾಡಿಕೊಟ್ಟ ಯುವಕ – Kannada News | A young man made way for an ambulance stuck in traffic.

ಈಗಿನ ಕಾಲದಲ್ಲಿ ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಸಿಗುವುದೇ ಅಪರೂಪ. ಅಪರಿಚಿತ ವ್ಯಕ್ತಿಗಳಿಗೆ ಸಹಾಯ (helping nature) ಮಾಡುವ ವ್ಯಕ್ತಿಗಳನ್ನು ಕಂಡಾಗ ನಿಜಕ್ಕೂ ಖುಷಿಯಾಗುತ್ತದೆ. ಇದೀಗ ಯುವಕನೊಬ್ಬ ಜವಾಬ್ದಾರಿ ಹಾಗೂ ಮಾನವೀಯ ಕೆಲಸ ಮೆಚ್ಚುಗೆ ಪಾತ್ರವಾಗಿದೆ. ಹೌದು, ಟ್ರಾಫಿಕ್ (traffic) ನಡುವೆ ಸಿಲುಕಿದ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟು, ಹೃದಯ ಶ್ರೀಮಂತಿಕೆ ಮೆರೆದಿದ್ದಾನೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಲಕ್ಷ್ಮಣ್‌ ಭಟ್ರೇ (Lakshman Bhatree) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಯೂಟ್ಯೂಬರ್ ಆಗಿರುವ ಯುವಕ ಟ್ರಾಫಿಕ್ ನಡುವೆ ಸಿಲುಕಿದ ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟಿರುವ ದೃಶ್ಯವನ್ನು ಕಾಣಬಹುದು. ಆಂಬ್ಯುಲೆನ್ಸ್ ಡ್ರೈವರ್ ಗೆ ಎಮರ್ಜೆನ್ಸಿ ಇದ್ಯಾ ಎಂದು ಕೇಳಿದ್ದಾನೆ. ಡ್ರೈವರ್ ಹೌದು ಎನ್ನುತ್ತಿದ್ದಂತೆ ತನ್ನ ಬೈಕನ್ನು ಫುಟ್ ಪಾತ್‌ನಲ್ಲಿ ಚಲಾಯಿಸಿ ಟ್ರಾಫಿಕ್ ಪೊಲೀಸರಿಗೆ ಈ ವಿಷ್ಯ ತಿಳಿಸಿದ್ದಾನೆ. ಕೊನೆಗೆ ಟ್ರಾಫಿಕ್ ಕ್ಲಿಯರ್ ಮಾಡಿ ಆಂಬ್ಯುಲೆನ್ಸ್ ಹೋಗಲು ದಾರಿ ಮಾಡಿಕೊಟ್ಟಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಇದು ಕಾರ್ಪೋರೆಟ್ ಜಗತ್ತು; ಟ್ರಾಫಿಕ್ ಜಾಮ್‌ ನಡುವೆಯೇ ಬೈಕ್‌ನಲ್ಲಿ ಲ್ಯಾಪ್ ಟಾಪ್ ತೆರೆದು ಕೆಲಸ ಮಾಡಿದ ವ್ಯಕ್ತಿ

ಈ ವಿಡಿಯೋ ಇಪ್ಪತ್ತೆರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಒಳ್ಳೆಯ ಕೆಲಸ ಎಂದರೆ, ಮತ್ತೊಬ್ಬರು, ನನ್ನ ಪ್ರಕಾರ ಆಂಬುಲೆನ್ಸ್ ಗೆ ಬೇರೆ ಒಂದು ರೋಡ್ ಇದ್ದರೆ ಒಳ್ಳೆಯದು ಅಲ್ವಾ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಮ್ಮ ಪ್ರಯತ್ನಕ್ಕೆ ನನ್ನದೊಂದು ಮೆಚ್ಚುಗೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಮುಸ್ಲಿಮರು ಕಾಫಿರರೊಂದಿಗೆ ಸ್ನೇಹ ಬೆಳೆಸಬಾರದು’ – ಭಾರತ ಮತ್ತು ಅಫ್ಘಾನ್ ಸಂಬಂಧಕ್ಕೆ ಹುಳಿ ಹಿಂಡಲು ಪಾಕಿಸ್ತಾನ ಯತ್ನ – Kannada News | Muslims should not make friendship with Kafirs, says Pakistan Army on India Afghan relationship

ಪಾಕಿಸ್ತಾನದ ಬಾವುಟದ ಚಿತ್ರImage Credit source: Getty Images

ಇಸ್ಲಾಮಾಬಾದ್, ಆಗಸ್ಟ್ 2: ಭಾರತ ಮತ್ತು ಅಫ್ಘಾನಿಸ್ತಾನ್ ನಡುವೆ ಬೆಳೆಯುತ್ತಿರುವ ರಾಜತಾಂತ್ರಿಕ ಹಾಗೂ ಆರ್ಥಿಕ ಬಾಂಧವ್ಯದ ಕುರಿತು ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗದ (DG ISPR) ವಕ್ತಾರರು ಅತ್ಯಂತ ವಿವಾದಾತ್ಮಕ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. “ಮುಸ್ಲಿಮರು ಕಾಫಿರ್‌ಗಳೊಂದಿಗೆ (ಮುಸ್ಲಿಮೇತರರು) ಸ್ನೇಹ ಬೆಳೆಸಬಾರದು” ಎಂದು ಪಾಕ್ ಸೇನೆಯ ಅಧಿಕಾರಿ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ (Lt Gen Ahmed Sharif Chaudhary) ಹೇಳಿದ್ದಾರೆ. ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವು ಭಾರತದೊಂದಿಗೆ ಹತ್ತಿರವಾಗುತ್ತಿರುವುದನ್ನು ಟೀಕಿಸುವ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಅಫ್ಘಾನ್ ಪ್ರಜೆಗಳು ಮತ್ತು ಅಲ್ಲಿನ ತಾಲಿಬಾನ್ ಸರ್ಕಾರವು ಭಾರತದೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳುತ್ತಿರುವುದಕ್ಕೆ ಪಾಕಿಸ್ತಾನ ಸೇನೆ ಅಸಮಾಧಾನ ವ್ಯಕ್ತಪಡಿಸಿದೆ. ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ಉದ್ದೇಶದಿಂದ ಮುಸ್ಲಿಮರು ಮುಸ್ಲಿಮೇತರರೊಂದಿಗೆ ಸಂಬಂಧ ಹೊಂದಬಾರದು ಎಂಬ ಧರ್ಮಧಾರಿತ ಹೇಳಿಕೆಯನ್ನು ವಕ್ತಾರರು ನೀಡಿದ್ದಾರೆ.

ಇದನ್ನೂ ಓದಿ: ಇಂಡೋನೇಷ್ಯಾದ ಮಧುರಾ ದ್ವೀಪದ ಬಳಿ ಹೊತ್ತಿ ಉರಿದ ಹಡಗು: ಐವರು ಸಜೀವ ದಹನ, 41 ಮಂದಿ ನಾಪತ್ತೆ

ಭಾರತ-ಅಫ್ಘಾನ್ ಬಾಂಧವ್ಯಕ್ಕೆ ಕಿರಿಕಿರಿ: ಅಫ್ಘಾನಿಸ್ತಾನ್‌ನಲ್ಲಿ ಭಾರತವು ಕೈಗೊಳ್ಳುತ್ತಿರುವ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು, ಮಾನವೀಯ ನೆರವು ಮತ್ತು ಬೆಳೆಯುತ್ತಿರುವ ರಾಜತಾಂತ್ರಿಕ ನಿಕಟತೆಯು ಪಾಕಿಸ್ತಾನಕ್ಕೆ ಸಹಿಸಲಾಗದ ಮುಳ್ಳಾಗಿದೆ.

ಪಾಕ್ ಸೇನಾ ವಕ್ತಾರರ ಈ ಪ್ರಚೋದನಕಾರಿ ಹೇಳಿಕೆಗೆ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಗಡಿಭಾಗದ ರಾಜಕೀಯ ಮತ್ತು ರಾಜತಾಂತ್ರಿಕ ಬಿಕ್ಕಟ್ಟನ್ನು ಧಾರ್ಮಿಕ ಬಣ್ಣ ಬಳಿದು ಪ್ರಚೋದಿಸಲು ಪಾಕಿಸ್ತಾನ ಯತ್ನಿಸುತ್ತಿದೆ ಎಂದು ವಿಶ್ಲೇಷಕರು ಟೀಕಿಸಿದ್ದಾರೆ.

ಇದನ್ನೂ ಓದಿ: ಜಬಲ್ಪುರ ದೋಣಿ ದುರಂತ, ಸಾವು ಬಂದ್ರೂ, ತಬ್ಬಿಕೊಂಡ ಮಗನನ್ನು ಬಿಡದ ತಾಯಿ

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ್ ಗಡಿಭಾಗದಲ್ಲಿ (ದುರಾಂಡ್ ಲೈನ್) ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ ಈ ಹೇಳಿಕೆ ಬಂದಿದೆ. ಅಫ್ಘಾನಿಸ್ತಾನ ತನ್ನ ಆರ್ಥಿಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳಿಗಾಗಿ ಭಾರತದೊಂದಿಗೆ ನಿಕಟ ಬಾಂಧವ್ಯ ಕಾಯ್ದುಕೊಳ್ಳುತ್ತಿರುವುದು ಪಾಕಿಸ್ತಾನದ ಭದ್ರತಾ ಪಡೆಗಳಿಗೆ ಭಾರಿ ಹಿನ್ನಡೆಯಾಗಿ ಪರಿಣಮಿಸಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಒಂದೆಡೆ ಭೀಕರ ಬರ, ಇನ್ನೊಂದೆಡೆ ಹಕ್ಕಿ ಜ್ವರದ ಭೀತಿ: ಕೊಪ್ಪಳ ಜನತೆಗೆ ಎದುರಾಯ್ತು ಮತ್ತೊಂದು ಕಂಟಕ! – Kannada News | Koppal Faces Double Crisis: Severe Drought and Bird Flu Threat Deepen Public Concerns

ಕೊಪ್ಪಳ, ಆಗಸ್ಟ್​​ 02: ಜಿಲ್ಲೆಯಲ್ಲಿ ಒಂದೆಡೆ ಬರಗಾಲದ ತಾಂಡವವಾಡುತ್ತಿದೆ. ಮಳೆಯಿಲ್ಲದೆ ಜನರು ಕಂಗಾಲಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಹಕ್ಕಿ ಜ್ವರ (bird flu) ಆತಂಕ ಶುರುವಾಗಿದೆ. ಕೊಪ್ಪಳ (koppal) ನಗರದ ಹೃದಯಭಾಗದಲ್ಲೇ ನೂರಾರು ಹಕ್ಕಿಗಳು ಸಾವನ್ನಪ್ಪುತ್ತಿವೆ. ಇತ್ತ ನಗರದಲ್ಲಿ ಜನರಿಗೆ ಹಕ್ಕಿ ಜ್ವರದ ಆತಂಕ ಶುರುವಾಗಿದೆ.

ನಿಗೂಢವಾಗಿ ಸಾವನ್ನಪ್ಪುತ್ತಿವೆ ಬೆಳ್ಳಕ್ಕಿಗಳು

ಕೊಪ್ಪಳದಲ್ಲಿ ಕಳೆದ ಮೂರು ತಿಂಗಳಿಂದ ಕೊಪ್ಪಳದ ನಗರಸಭೆ ಹಿಂಭಾಗದ ಮರದಲ್ಲಿ ಸಾವಿರಾರು ಬೆಳ್ಳಕ್ಕಿಗಳ ಹಿಂಡು ಗೂಡು ಕಟ್ಟಿಕೊಂಡು ಮೊಟ್ಟೆ ಇಟ್ಟು ಸಂಸಾರ ಹೂಡಿದ್ದವು. ಆದರೆ ಕಳೆದ ಒಂದು ವಾರದಿಂದ ಪ್ರತಿನಿತ್ಯ ಹತ್ತಾರು ಹಕ್ಕಿಗಳು ಸತ್ತು ಬೀಳ್ತಿವೆ‌. ಅಸ್ವಸ್ಥಗೊಂಡಿರುವ ನೂರಾರು ಹಕ್ಕಿಗಳು ಹಾರಲಾರದ ಪರಿಸ್ಥಿತಿಗೆ ತಲುಪಿವೆ.

ಇದನ್ನೂ ಓದಿ: ತುಂಗಭದ್ರಾ ಜಲಾಶಯದ ಮಣ್ಣು ಲೂಟಿ: ಟಿಪ್ಪರ್ ತಡೆದ ಬಿಜೆಪಿ MLCಗೆ ‘ನಾನೇ ದಂಡ ಕಟ್ಟುತ್ತೇನೆಂದ’ ಸಿಪಿಐ

ಹಕ್ಕಿಗಳ ಈ ಸಾವಿನಿಂದ ಜನರಿಗೆ ಹಕ್ಕಿ ಜ್ವರದ ಆತಂಕ ಶುರುವಾಗಿದೆ. ಒಂದೆಡೆ ಜಿಲ್ಲೆಯಲ್ಲಿ ಮಳೆಯಿಲ್ಲದೆ ಬರಗಾಲ ಆವರಿಸಿದೆ. ಇದರ ನಡುವೆ ಇದೀಗ ಈ ರೀತಿ ಸಾಲು ಸಾಲು ಬೆಳ್ಳಕ್ಕಿಗಳು ನಿಗೂಢವಾಗಿ ಸಾಯುತ್ತಿರುವುದು ಸಾರ್ವಜನಿಕರಲ್ಲಿ ಹಕ್ಕಿ ಜ್ವರದ ಭೀತಿಯನ್ನು ಹುಟ್ಟುಹಾಕಿದೆ. ಮರದಲ್ಲಿದ್ದ ನೂರಾರು ಹಕ್ಕಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಹಕ್ಕಿಗಳು ಈಗಾಗಲೇ ಅಸ್ವಸ್ಥಗೊಂಡಿದ್ದು, ಒಂದೊಂದಾಗಿ ನೆಲಕ್ಕೆ ಬೀಳುತ್ತಿವೆ. ಹಾರಾಡುವುದಕ್ಕೆ ಆಗದೆ, ಸಂಕಷ್ಟ ಎದುರಿಸುತ್ತಿವೆ.

ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

ವಿಪರ್ಯಾಸವೆಂದರೆ ಕಣ್ಣೆದುರೇ ದಿನವೂ ಹಕ್ಕಿಗಳು ಸತ್ತು ಬೀಳುತ್ತಿದ್ದರೂ ನಗರಸಭೆ ಅಧಿಕಾರಿಗಳಾಗಲಿ ಅಥವಾ ಪಶುಸಂಗೋಪನಾ ಇಲಾಖೆಯವರಾಗಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವ ಗೋಜಿಗೆ ಹೋಗಿಲ್ಲ. ಮೃತಪಟ್ಟ ಹಕ್ಕಿಗಳ ರಕ್ತ ಅಥವಾ ಸ್ಯಾಂಪಲ್ ಸಂಗ್ರಹಿಸಿ ತಪಾಸಣೆಗೆ ಕಳುಹಿಸುವ ಕೆಲಸವೂ ನಡೆದಿಲ್ಲ. ನಗರಸಭೆ ಹಿಂಭಾಗವೇ ಘಟನೆ ನಡೆದಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ‌‌. ಅಲ್ಲದೆ ಸ್ಥಳೀಯರು ಮಾಹಿತಿ ನೀಡಿದರು, ನಾವು ಎಸ್​​ಐಆರ್ ಕೆಲಸದಲ್ಲಿ ಬ್ಯೂಸಿ ಇದ್ದೇವೆ ಎನ್ನುತ್ತಿದ್ದಾರೆ. ಇದು ಸಹಜವಾಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಬಲ್ಡೋಟಾ ಕಾರ್ಖಾನೆ ಕೆರೆ ವಿವಾದ: ರಾತ್ರೋರಾತ್ರಿ ಗೇಟ್ ಮರುನಿರ್ಮಾಣ; ಮತ್ತೆ ಸಿಡಿದೆದ್ದ ರೈತರು

ಹಕ್ಕಿಗಳ ನಿರಂತರ ಸಾವಿಗೆ, ಜನರಲ್ಲಿ ಆತಂಕ ಮನೆ ಮಾಡಿದೆ. ಆರೋಗ್ಯ ಇಲಾಖೆ,‌ ಪಶುಸಂಗೋಪನಾ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಕೂಡಲೇ ಪರಿಶೀಲನೆ ಮಾಡಬೇಕು. ಅಲ್ಲದೆ ಜಿಲ್ಲೆಯಲ್ಲಿ ಅತೀ ಹೆಚ್ಚು ಕೋಳಿ ಫಾರಂಗಳಿವೆ. ಇದೀಗ ಹಕ್ಕಿ ಜ್ವರದ ಆತಂಕ ಎಲ್ಲರಲ್ಲೂ ಮನೆ ಮಾಡಿದ್ದು, ಜೊತೆಗೆ ಭಯ ಆವರಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Karnataka Weather Forecast: ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ: ಹಲವೆಡೆ ರೆಡ್, ಆರೆಂಜ್ ಅಲರ್ಟ್ – Kannada News | Karnataka Weather Forecast: IMD issues heavy rain warnings across Karnataka Next 7 days

ಬೆಂಗಳೂರು, (ಆಗಸ್ಟ್ 02): ಮುಂದಿನ 7 ದಿನಗಳ ಕಾಲ ಕರ್ನಾಟಕದ (Karnataka) ಹಲವೆಡೆ ಭಾರೀ ಮಳೆಯಾಗಲಿದೆ (Rain) ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯಾದ್ಯಂತ ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾದಾರಣ ಮಳೆ ಹಾಗೂ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಅತಿ ಭಾರಿ ಮಳೆ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಮೀನುಗಾರರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಹಲವೆಡೆ ರೆಡ್-ಆರೆಂಜ್ ಅಲರ್ಟ್

ದಕ್ಷಿಣ ಕನ್ನಡ, ಶಿವಮೊಗ್ಗ, ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅತ್ಯಂತ ಭಾರೀ ಮಳೆಯಾಗುತ್ತಿರುವುದರಿಂದ ರೆಡ್ ಅಲರ್ಟ್ ನೀಡಲಾಗಿದೆ. ಇನ್ನು ಕರಾವಳಿಯ ಉಳಿದ ಜಿಲ್ಲೆಗಳು ಸೇರಿದಂತೆ ಒಟ್ಟು 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಬಳ್ಳಾರಿ , ಬೆಂಗಳೂರು (ಗ್ರಾಮೀಣ) ಬೆಂಗಳೂರು (ನಗರ) ಚಾಮರಾಜನಗರ ,ಚಿಕ್ಕಬಳ್ಳಾಪುರ , ಚಿತ್ರದುರ್ಗ, ದಾವಣಗೆರೆ ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ನಿರಂತರ ಗಾಳಿಯೊಂದಿಗೆ (40-50 ಕಿಮೀ) ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಕರ್ನಾಟಕ ಜಿಲ್ಲೆಗಳಾದ ಬಾಗಲಕೋಟೆ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಗಾಳಿಯೊಂದಿಗೆ (40-50 ಕಿ.ಮೀ. ವೇಗದಲ್ಲಿ) ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version