ಬೆಂಗಳೂರಿನ ಘನತ್ಯಾಜ್ಯ ನಿರ್ವಹಣೆಗೆ 39,437 ಕೋಟಿ ಟೆಂಡರ್ ವಿವಾದ: ಉನ್ನತ ಮಟ್ಟದ ಸಮಿತಿಗೆ ವಿಪಕ್ಷ ನಾಯಕ ಆರ್​​. ಅಶೋಕ್​​ ವಿಶೇಷ ಮನವಿ – Kannada News | Bengaluru Waste Management Tender Controversy: Oppn Leader R Ashoka Urges High Level Committee to Submit Unbiased Report

ಉನ್ನತ ಮಟ್ಟದ ಸಮಿತಿಗೆ ವಿಪಕ್ಷ ನಾಯಕ ಆರ್​​. ಅಶೋಕ್​​ ವಿಶೇಷ ಮನವಿImage Credit source: PTI

ಬೆಂಗಳೂರು, ಜೂನ್ 14: ಗ್ರೇಟರ್​​ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆಂಗಳೂರಿನ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ 39,437 ಕೋಟಿ ಟೆಂಡರ್ ಕುರಿತು ಪರಿಶೀಲನೆ ನಡೆಸುತ್ತಿರುವ ಉನ್ನತ ಮಟ್ಟದ ಸಮಿತಿಗೆ ವಿಪಕ್ಷ ನಾಯಕ ಆರ್​​. ಅಶೋಕ್​​ ವಿಶೇಷ ಮನವಿಯನ್ನು ಮಾಡಿದ್ದಾರೆ. ಯಾವುದೇ ರಾಜಕೀಯ, ಆಡಳಿತಾತ್ಮಕ ಅಥವಾ ಬಾಹ್ಯ ಒತ್ತಡಗಳಿಗೆ ಮಣಿಯದೆ, ಆತ್ಮಸಾಕ್ಷಿ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ವರದಿ ಸಲ್ಲಿಸಿ ಎಂದು ಆಗ್ರಹಿಸಿರುವ ಅವರು, ಇದು ಕೇವಲ ಒಂದು ಟೆಂಡರ್ ವಿಚಾರವಲ್ಲ. ಬೆಂಗಳೂರಿನ ಭವಿಷ್ಯ, ತೆರಿಗೆದಾರರ ಹಣ ಮತ್ತು ಸಾರ್ವಜನಿಕ ವಿಶ್ವಾಸದ ಪ್ರಶ್ನೆಯಾಗಿದೆ ಎಂದು ತಿಳಿಸಿದ್ದಾರೆ.

ಅಶೋಕ್​​ ಮನವಿಯಲ್ಲಿ ಏನಿದೆ?

ಬೆಂಗಳೂರಿಗೆ ಸಂಬಂಧಿಸಿದ ಅತ್ಯಂತ ಮಹತ್ವದ ವಿಷಯವನ್ನು ಪರಿಶೀಲಿಸಲು ರಾಜ್ಯ ಸರ್ಕಾರ ನಿಮ್ಮನ್ನು ಉನ್ನತ ಮಟ್ಟದ ಸಮಿತಿಗೆ ನೇಮಿಸಿದೆ. ನೀವು ಕೇವಲ ಈ ಸಮಿತಿಯ ಸದಸ್ಯರಲ್ಲ. ನೀವು ಈ ನಗರದ ನಾಗರಿಕರು, ತೆರಿಗೆ ಪಾವತಿಸುವವರು, ಬೆಂಗಳೂರಿನ ಪ್ರಗತಿಯ ಪಾಲುದಾರರು ಮತ್ತು ಹಕ್ಕುದಾರರು. ನಿಮ್ಮ ಕುಟುಂಬಗಳು ಮತ್ತು ಮಕ್ಕಳ ಭವಿಷ್ಯವೂ ಇದೇ ನಗರದ ಭವಿಷ್ಯದೊಂದಿಗೆ ಬೆಸೆದುಕೊಂಡಿದೆ. ಹೀಗಾಗಿ, ನಿಮ್ಮ ಮುಂದೆ ಇರುವ ಪ್ರಶ್ನೆ ಕೇವಲ ಒಂದು ಟೆಂಡರ್ ಕಡತದ ಪ್ರಶ್ನೆಯಲ್ಲ. ಮುಂದಿನ ಮೂರು ದಶಕಗಳ ಕಾಲ ಬೆಂಗಳೂರಿನ ಜನರ ಹಣ, ನಗರದ ಆಡಳಿತ ಮತ್ತು ಸಾರ್ವಜನಿಕ ಸಂಪನ್ಮೂಲಗಳ ಭವಿಷ್ಯವನ್ನು ನಿರ್ಧರಿಸುವ ಪ್ರಶ್ನೆಯಾಗಿದೆ.

ಇದನ್ನೂ ಓದಿ: ಬೆಂಗಳೂರು ಕಸದಲ್ಲಿ 36 ಸಾವಿರ ಕೋಟಿ ರೂ. ಲೂಟಿ ಆರೋಪ; ಬಿಜೆಪಿಗೆ ಡಿಕೆಶಿ ಓಪನ್ ಚಾಲೆಂಜ್

ರಾಜ್ಯದ ಹಣಕಾಸು ಇಲಾಖೆಯೇ ಈ ಟೆಂಡ‌ರ್​​ ಕುರಿತು ಗಂಭೀರ ಆಕ್ಷೇಪಣೆಗಳನ್ನು ದಾಖಲಿಸಿದೆ. ಈಗಾಗಲೇ ಬೆಂಗಳೂರು ನಗರದ ಜನರು ಆಸ್ತಿ ತೆರಿಗೆ, ವಿವಿಧ ಸೆಸ್‌ಗಳು, ಬಳಕೆದಾರರ ಶುಲ್ಕಗಳು ಹಾಗೂ ಇತರೆ ತೆರಿಗೆಗಳ ಭಾರವನ್ನು ಹೊರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಹಣದ ಸಾವಿರಾರು ಕೋಟಿ ರೂಪಾಯಿಗಳ ಬಳಕೆಯ ಬಗ್ಗೆ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ಅತ್ಯಂತ ಜವಾಬ್ದಾರಿಯುತವಾಗಿರಬೇಕು. ನಿಮ್ಮ ಸಮಿತಿಯ ವರದಿ ಕೇವಲ ಸರ್ಕಾರಕ್ಕೆ ಸಲ್ಲಿಸುವ ಒಂದು ದಾಖಲೆಯಾಗಿರುವುದಿಲ್ಲ; ಅದು ಮುಂದಿನ ಪೀಳಿಗೆಗಳ ಮೇಲೂ ಪರಿಣಾಮ ಬೀರುವ ನಿರ್ಧಾರದ ಅಡಿಪಾಯವಾಗಲಿದೆ. ಆದ್ದರಿಂದ ಯಾವುದೇ ರಾಜಕೀಯ, ಆಡಳಿತಾತ್ಮಕ ಅಥವಾ ಇತರ ಒತ್ತಡಗಳಿಗೆ ಮಣಿಯದೆ, ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ, ಸಾರ್ವಜನಿಕ ಹಿತಾಸಕ್ತಿಯನ್ನು ಮಾತ್ರ ಮಾನದಂಡವನ್ನಾಗಿಸಿಕೊಂಡು ಸಂಪೂರ್ಣ ಪಾರದರ್ಶಕ, ಪ್ರಾಮಾಣಿಕ ಹಾಗೂ ನಿರ್ಭೀತ ವರದಿಯನ್ನು ಸಲ್ಲಿಸುವಂತೆ ವಿನಂತಸೋದಾಗಿ ಮನವಿಯಲ್ಲಿ ಅಶೋಕ್​​ ಉಲ್ಲೇಖಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Daily Devotional: ಸಂಧ್ಯಾಕಾಲದಲ್ಲಿ, ಮನೆ ಬಾಗಿಲ ಮುಂದೆ ಕುಳಿತುಕೊಳ್ಳಬಾರದು ಯಾಕೆ? – Kannada News | Daily Devotional: Is Sitting at the Doorstep in the Evening Auspicious or Inauspicious?

ಮನೆಯ ಸಿಂಹದ್ವಾರದ ಮಹತ್ವImage Credit source: Pinterest

ಭಾರತೀಯ ಸಂಸ್ಕೃತಿಯಲ್ಲಿ ಮನೆ ಮತ್ತು ಅದರ ಪ್ರತಿಯೊಂದು ಭಾಗಕ್ಕೂ ತನ್ನದೇ ಆದ ಪಾವಿತ್ರ್ಯತೆ ಹಾಗೂ ಮಹತ್ವವಿದೆ. ವಿಶೇಷವಾಗಿ ಮನೆಯ ಮುಖ್ಯ ದ್ವಾರ, ಇದನ್ನು ಸಿಂಹದ್ವಾರ ಎಂದು ಕರೆಯುತ್ತೇವೆ, ಇದು ಕೇವಲ ಪ್ರವೇಶ ದ್ವಾರ ಮಾತ್ರವಲ್ಲದೆ, ಮನೆಯ ಶಕ್ತಿ ಕೇಂದ್ರವೂ ಹೌದು. ಆದರೆ, ಅನೇಕ ಮನೆಗಳಲ್ಲಿ, ವಿಶೇಷವಾಗಿ ಹಳ್ಳಿಗಳಲ್ಲಿ ಮತ್ತು ನಗರ ಪ್ರದೇಶಗಳಲ್ಲೂ, ಸಂಜೆ ವೇಳೆ ಮನೆ ಬಾಗಿಲ ಮುಂದೆ ಅಥವಾ ಜಗಳಿಯ ಮೇಲೆ ಕುಳಿತುಕೊಳ್ಳುವ ರೂಢಿ ಕಂಡುಬರುತ್ತದೆ. ಈ ಅಭ್ಯಾಸ ಶುಭಕರವೇ ಅಥವಾ ಅಶುಭಕರವೇ ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಜನರು ಸಾಮಾನ್ಯವಾಗಿ ಸೂರ್ಯಾಸ್ತದ ಸಮಯದಲ್ಲಿ, ಸಂಧ್ಯಾಕಾಲದಲ್ಲಿ ಮನೆಯ ಮುಂದೆ ಕುಳಿತುಕೊಳ್ಳುತ್ತಾರೆ. ಇದಕ್ಕೆ ಮುಖ್ಯ ಕಾರಣ ಮನಸ್ಸಿಗೆ ಒಂದು ರೀತಿಯ ನೆಮ್ಮದಿ, ಬೀದಿಯಲ್ಲಿ ಹೋಗುವವರನ್ನು ಗಮನಿಸುವುದು, ಅಥವಾ ಅಕ್ಕಪಕ್ಕದವರೊಂದಿಗೆ ಹರಟೆ ಹೊಡೆಯುವುದು. ಆದರೆ, ಈ ಸಮಯದಲ್ಲಿ ಯಾವುದೇ ದೇವರ ನಾಮಸ್ಮರಣೆ ಅಥವಾ ಆಧ್ಯಾತ್ಮಿಕ ಚಿಂತನೆಗಿಂತ ಹೆಚ್ಚಾಗಿ ಲೌಕಿಕ ವಿಷಯಗಳ ಬಗ್ಗೆಯೇ ಮಾತುಕತೆ ನಡೆಸುವುದು ಹೆಚ್ಚು ಸಾಮಾನ್ಯವಾಗಿದೆ. ಈ ಅಭ್ಯಾಸದ ಬಗ್ಗೆ ಶಾಸ್ತ್ರಗಳು ಏನು ಹೇಳುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ.

ಸಿಂಹದ್ವಾರದ ಅಪಾರ ಮಹತ್ವ:

ಮನೆಯ ಮುಖ್ಯ ಬಾಗಿಲು ಅಥವಾ ಸಿಂಹದ್ವಾರವನ್ನು ಅತಿ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇದನ್ನು ಮನೆಯ ಶಕ್ತಿ ಕೇಂದ್ರ ಎಂದು ಕರೆಯುವುದರಲ್ಲಿ ತಪ್ಪಿಲ್ಲ. ಈ ಬಾಗಿಲಿಗೆ ಧನಾತ್ಮಕ ಶಕ್ತಿಗಳನ್ನು ಆಕರ್ಷಿಸುವ ಮತ್ತು ಮನೆಯೊಳಗೆ ಪ್ರವೇಶಿಸಲು ಅನುವು ಮಾಡಿಕೊಡುವ ಸಾಮರ್ಥ್ಯವಿದೆ. ಶಾಸ್ತ್ರೋಕ್ತವಾಗಿ ಈ ಬಾಗಿಲನ್ನು ಪ್ರತಿಷ್ಠಾಪಿಸುವಾಗ, ಅದರ ಅಡಿಯಲ್ಲಿ ಚಿನ್ನ, ಬೆಳ್ಳಿ, ಹಳೆಯ ನಾಣ್ಯಗಳು ಅಥವಾ ಕುಟುಂಬದ ಕೆಲವು ಪವಿತ್ರ ವಸ್ತುಗಳನ್ನು ಇಡುವ ಸಂಪ್ರದಾಯವಿದೆ. ಇದು ಬಾಗಿಲಿಗೆ ಮತ್ತಷ್ಟು ದೈವಿಕ ಶಕ್ತಿಯನ್ನು ನೀಡುತ್ತದೆ.

ಬೆಳಗಿನ ಬ್ರಾಹ್ಮಿ ಮುಹೂರ್ತ, ಅಭಿಜಿತ್ ಮುಹೂರ್ತ ಮತ್ತು ವಿಶೇಷವಾಗಿ ಸಂಜೆಯ ಗೋದೋಳಿ ಮುಹೂರ್ತದಲ್ಲಿ ಸಿಂಹದ್ವಾರಕ್ಕೆ ಅಪಾರ ಶಕ್ತಿ ಇರುತ್ತದೆ. ಈ ಸಮಯದಲ್ಲಿ ಮಹಾಲಕ್ಷ್ಮಿಯು ಮನೆಯೊಳಗೆ ಪ್ರವೇಶಿಸುತ್ತಾಳೆ ಎಂದು ನಂಬಲಾಗಿದೆ. ಮನೆಯ ಗಡಿಭಾಗ ಮತ್ತು ಪ್ರವೇಶ ದ್ವಾರವಾಗಿರುವುದರಿಂದ, ಯಾವುದೇ ಶುಭ ಶಕ್ತಿಯು ಮೊದಲು ಈ ಬಾಗಿಲಿನ ಮೂಲಕವೇ ಪ್ರವೇಶಿಸುತ್ತದೆ. ಹಾಗಾಗಿ, ಈ ಬಾಗಿಲನ್ನು ಸದಾ ಶುಭ್ರವಾಗಿ ಮತ್ತು ಪವಿತ್ರವಾಗಿಡುವುದು ಅತಿ ಮುಖ್ಯ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಸಂಜೆ ವೇಳೆ ಬಾಗಿಲ ಮುಂದೆ ಕುಳಿತುಕೊಳ್ಳುವುದು ಏಕೆ ಅಶುಭ?

ಮಹಾಲಕ್ಷ್ಮಿ ಪ್ರವೇಶಿಸುವ ಇಂತಹ ಪವಿತ್ರ ಸ್ಥಳದಲ್ಲಿ ಸಂಧ್ಯಾಕಾಲದಲ್ಲಿ ಕುಳಿತುಕೊಳ್ಳುವುದು ಅಷ್ಟು ಶುಭಸೂಚಕವಲ್ಲ ಎಂದು ಶಾಸ್ತ್ರಗಳು ಹೇಳುತ್ತವೆ. ಇದಕ್ಕೆ ಹಲವಾರು ಕಾರಣಗಳಿವೆ:

  • ನಕಾರಾತ್ಮಕ ಶಕ್ತಿಗಳ ಪ್ರವೇಶ: ಸಂಧ್ಯಾಕಾಲದಲ್ಲಿ ನಕಾರಾತ್ಮಕ ಶಕ್ತಿಗಳ ಸಂಚಾರ ಹೆಚ್ಚಿರುತ್ತದೆ ಎಂದು ನಂಬಲಾಗಿದೆ. ಮನೆಯ ಮುಂದೆ ಕುಳಿತಿರುವ ವ್ಯಕ್ತಿಯು ಆ ಶಕ್ತಿಗಳಿಗೆ ದ್ವಾರಪಾಲಕನಂತೆ ವರ್ತಿಸಬಹುದು, ಇದರಿಂದ ಅವು ಸುಲಭವಾಗಿ ಮನೆಯೊಳಗೆ ಪ್ರವೇಶಿಸಬಹುದು.
  • ಅನವಶ್ಯಕ ಮಾತುಕತೆ ಮತ್ತು ಒತ್ತಡ: ಮನೆ ಬಾಗಿಲ ಮುಂದೆ ಕುಳಿತಾಗ, ಅನೇಕರು ನೆರೆಹೊರೆಯವರ ಬಗ್ಗೆ, ಹಾದಿಹೋಕರ ಬಗ್ಗೆ, ಅವರ ಮದುವೆ, ಮಕ್ಕಳು, ವೃತ್ತಿಯ ಬಗ್ಗೆ ಹೀಗೆ ಹಲವು ವಿಷಯಗಳನ್ನು ಅತಿಯಾಗಿ ಮಾತನಾಡುತ್ತಾರೆ. ಇಂತಹ ಗಾಸಿಪ್ ಮತ್ತು ಅನವಶ್ಯಕ ಮಾತುಕತೆಗಳು ಮನೆಯೊಳಗೆ ನಕಾರಾತ್ಮಕ ಕಂಪನಗಳನ್ನು ತರುತ್ತವೆ ಮತ್ತು ಮನೆಯ ಸದಸ್ಯರಲ್ಲಿ ಒತ್ತಡವನ್ನು ಸೃಷ್ಟಿಸುತ್ತವೆ. ಇದು ಮನೆಯ ಶಾಂತಿ ಮತ್ತು ಸಮೃದ್ಧಿಗೆ ಭಂಗ ತರುತ್ತದೆ.
  • ಮಹಾಲಕ್ಷ್ಮಿಗೆ ಅಡ್ಡಿ: ಮಹಾಲಕ್ಷ್ಮಿ ಪ್ರವೇಶಿಸುವ ದ್ವಾರದಲ್ಲಿ ವ್ಯಕ್ತಿ ಕುಳಿತಿದ್ದರೆ, ಅದು ಲಕ್ಷ್ಮಿಯ ಪ್ರವೇಶಕ್ಕೆ ಅಡ್ಡಿಯಾಗಬಹುದು. ಅಲ್ಲದೆ, ಅಶುಭ ಮಾತುಕತೆಗಳು ಲಕ್ಷ್ಮಿಗೆ ಸ್ವಾಗತಾರ್ಹವಲ್ಲ.

ಪೌರಾಣಿಕ ಉಲ್ಲೇಖ:

ವಿಷ್ಣುಪುರಾಣದಲ್ಲಿ ಬರುವ ಹಿರಣ್ಯಕಶಿಪುವಿನ ಸಂಹಾರದ ಕಥೆಯೂ ಸಿಂಹದ್ವಾರದ ಮಹತ್ವವನ್ನು ಎತ್ತಿ ತೋರಿಸುತ್ತದೆ. ನರಸಿಂಹನು ಹಿರಣ್ಯಕಶಿಪುವನ್ನು ಮನೆಯ ಹೊಸ್ತಿಲ ಮೇಲೆ ಇಟ್ಟುಕೊಂಡು ಸಂಹಾರ ಮಾಡುತ್ತಾನೆ. ಇದು ಹೊಸ್ತಿಲಿಗೆ ಇರುವ ಬಲ ಮತ್ತು ಅದರ ಮಹತ್ವವನ್ನು ಸೂಚಿಸುತ್ತದೆ. ಇಂತಹ ಪವಿತ್ರ ಸ್ಥಳದಲ್ಲಿ ಅನವಶ್ಯಕವಾಗಿ ಕುಳಿತು ನಕಾರಾತ್ಮಕ ಕಾರ್ಯಗಳಲ್ಲಿ ತೊಡಗುವುದು ಸಮಂಜಸವಲ್ಲ.

ಆದ್ದರಿಂದ, ಸಂಧ್ಯಾಕಾಲದಲ್ಲಿ ಮನೆ ಬಾಗಿಲ ಮುಂದೆ ಕುಳಿತುಕೊಳ್ಳುವ ಪದ್ಧತಿ ಅಷ್ಟು ಶುಭಕರವಲ್ಲ. ಮನೆಯವರು ಅಥವಾ ಅನ್ಯರು ಯಾರೇ ಆಗಿರಲಿ, ಈ ಪವಿತ್ರ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ ಮನೆಯ ಶಾಂತಿಗೆ ಮತ್ತು ಧನಾತ್ಮಕ ಶಕ್ತಿಗಳ ಪ್ರವೇಶಕ್ಕೆ ಧಕ್ಕೆಯಾಗುತ್ತದೆ. ಬದಲಿಗೆ, ಸಂಜೆಯ ಸಮಯದಲ್ಲಿ ವಾಕಿಂಗ್ ಹೋಗುವುದು, ದೇವರ ನಾಮಸ್ಮರಣೆ ಮಾಡುವುದು ಅಥವಾ ಮನೆಯೊಳಗೆ ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಹೆಚ್ಚು ಸೂಕ್ತ. ಮನೆಯ ಸಮೃದ್ಧಿ ಮತ್ತು ಶಾಂತಿಗಾಗಿ ಈ ಧಾರ್ಮಿಕ ಸಲಹೆಯನ್ನು ಪಾಲಿಸುವುದು ಉತ್ತಮ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಅಬ್ಸೆಷನ್’ ಚಿತ್ರಕ್ಕೆ ಹೆಚ್ಚು ಶೋ: ತಮ್ಮ ಸಿನಿಮಾಗೆ ಚಿತ್ರಮಂದಿರ ಸಿಗದಿದ್ದಕ್ಕೆ ಅನುರಾಗ್ ಕಶ್ಯಪ್ ಬೇಸರ – Kannada News | Bandar director Anurag Kashyap unhappy with Obsession movie shows in India

ಕಳೆದ ಕೆಲವು ದಿನಗಳಿಂದ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಪ್ರಾದೇಶಿಕ ಸಿನಿಮಾಗಳು ಮತ್ತು ಹಾಲಿವುಡ್ ಚಿತ್ರ ‘ಅಬ್ಸೆಷನ್’ (Obsession) ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸದ್ಯ ಚಿತ್ರಮಂದಿರಗಳಲ್ಲಿ ಬರೋಬ್ಬರಿ 14ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಗೊಳ್ಳುತ್ತಿದ್ದು, ಪರದೆಗಾಗಿ ಕಸರತ್ತು ನಡೆಸುತ್ತಿವೆ. ಈ ಮಧ್ಯೆ, ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ಅವರು ಚಿತ್ರಮಂದಿರಗಳ ಶೋ ಹಂಚಿಕೆ ವಿಚಾರವಾಗಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅವರು ನಿರ್ದೇಶನ ಮಾಡಿರುವ ‘ಬಂದರ್’ ಸಿನಿಮಾಗೆ ಸರಿಯಾದ ಶೋಗಳು ಸಿಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಸದ್ಯ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಅನುರಾಗ್ ಕಶ್ಯಪ್, ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಬಗ್ಗೆ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಸೂಪರ್ ಹಿಟ್ ಆಗಿ ಮುನ್ನುಗ್ಗುತ್ತಿರುವ ಹಾಲಿವುಡ್ ಚಿತ್ರ ‘ಅಬ್ಸೆಷನ್’ಗೆ ಪ್ರೈಮ್ ಟೈಮ್ (ಉತ್ತಮ ಪ್ರದರ್ಶನದ ಸಮಯ) ನೀಡಲಾಗುತ್ತಿದೆ, ಆದರೆ ನಮ್ಮದೇ ದೇಶದ ಸಿನಿಮಾಗಳು ಚಿತ್ರಮಂದಿರ ಸಿಗದೇ ಪರದಾಡುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಪ್ರತಿಯೊಬ್ಬರೂ ಅಬ್ಸೆಷನ್ ಸಿನಿಮಾ ನೋಡಲು ಬಯಸುತ್ತಾರೆ ಎಂಬುದನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲೆ. ಆದರೆ ಕಡಿಮೆ ಶೋಗಳೊಂದಿಗೆ ಆ ಸಿನಿಮಾ ದೀರ್ಘಕಾಲ ಓಡಬಹುದು. ನಾವು ನಮ್ಮದೇ ಆದ ಸಿನಿಮಾಗಳಿಗೆ ಆದ್ಯತೆ ನೀಡಿ ಉತ್ತಮ ಪ್ರದರ್ಶನಗಳನ್ನು ನೀಡದಿದ್ದರೆ, ನಮ್ಮ ಚಿತ್ರರಂಗ ಹೇಗೆ ಬೆಳೆಯಲು ಸಾಧ್ಯ?’ ಎಂದು ಅನುರಾಗ್ ಕಶ್ಯಪ್ ಪ್ರಶ್ನೆ ಮಾಡಿದ್​ದಾರೆ.

‘ಕಳೆದ ವಾರ ನನ್ನ ‘ಬಂದರ್’ ಚಿತ್ರಕ್ಕೆ ಹೀಗಾಯಿತು. ಈ ವಾರ ಇಮ್ತಿಯಾಜ್ ಅಲಿ ಅವರ ‘ಮೈ ವಾಪಸ್ ಆವುಂಗಾ’, ‘ಸಿಂಗ್ ಗೀತಂ’ ಮತ್ತು ‘ಗವರ್ನರ್’ ಚಿತ್ರಗಳಿಗೆ ಇದೇ ಪರಿಸ್ಥಿತಿ ಎದುರಾಗಿದೆ. ಬೆಂಗಳೂರಿನಲ್ಲಿ ‘ಮೈ ವಾಪಸ್ ಆವುಂಗಾ’ ಮತ್ತು ‘ಗವರ್ನರ್’ ಚಿತ್ರಗಳಿಗೆ ಕೇವಲ ಒಂದು ಬೆಳಗಿನ ಪ್ರದರ್ಶನ ಸಿಕ್ಕಿದೆ. ಇನ್ನು ‘ಸಿಂಗ್ ಗೀತಂ’ ಚಿತ್ರಕ್ಕೆ ಒಂದೂ ಶೋ ಸಿಕ್ಕಿಲ್ಲ. ಆದರೆ ‘ಅಬ್ಸೆಷನ್’ ಚಿತ್ರಕ್ಕೆ ದಿನಕ್ಕೆ 6 ರಿಂದ 7 ಶೋಗಳನ್ನು ನೀಡಲಾಗುತ್ತಿದೆ’ ಎಂದು ಅನುರಾಗ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಭಾರೀ ಗಳಿಕೆ ಮಾಡಿದ ಹಾಲಿವುಡ್ ಚಿತ್ರ; ಕನ್ನಡ ಸಿನಿಮಾಗಳಿಗೇ ಇಲ್ಲ ಬೇಡಿಕೆ

ಇತ್ತೀಚೆಗಷ್ಟೇ ಬಿಡುಗಡೆಯಾದ ‘ಮೈ ವಾಪಸ್ ಆವುಂಗಾ’, ‘ಭಾರತ್ ಭಾಗ್ಯ ವಿಧಾತ’, ‘ಹಾಂಟೆಡ್ 3ಡಿ’, ‘ಹೀರ್ ಸಾರಾ’, ‘ಡಿಸ್ಕ್ಲೋಸರ್ ಡೇ’ ಸೇರಿದಂತೆ ಹಲವು ಚಿತ್ರಗಳು ಚಿತ್ರಮಂದಿರದಲ್ಲಿವೆ. ಇದರೊಂದಿಗೆ ಕಳೆದ ವಾರ ಬಿಡುಗಡೆಯಾಗಿದ್ದ ಅನುರಾಗ್ ಕಶ್ಯಪ್ ನಿರ್ದೇಶನದ ‘ಬಂದರ್’ ಚಿತ್ರಕ್ಕೆ ಉತ್ತಮ ವಿಮರ್ಶೆ ಸಿಕ್ಕಿದ್ದರೂ, ಶೋಗಳ ಕೊರತೆಯ ನಡುವೆ ಇದುವರೆಗೆ ಕೇವಲ 4 ಕೋಟಿ ರೂ. ಗಳಿಸಲಷ್ಟೇ ಶಕ್ತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Horoscope Today: ಇಂದು ಈ ರಾಶಿಯವರು ಕೆಲಸಗಳಲ್ಲಿ ಅವಸರ ಮಾಡಬೇಡಿ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 14, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ಪರಾಭವ ನಾಮ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷ, ಚತುರ್ದಶಿ, ರೋಹಿಣಿ ನಕ್ಷತ್ರ, ಧೃತಿ ಯೋಗ, ಶಕುನಿ ಕರಣ ಇರತಕ್ಕಂತಹ ಈ ಶುಭ ದಿನದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿಶ್ಲೇಷಿಸಿದ್ದಾರೆ. ಈ ದಿನ ರಾಹುಕಾಲ ಸಂಜೆ 5:07 ರಿಂದ 6:44 ರವರೆಗೆ ಇದ್ದು, ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಹಾಗೂ ಶುಭಕಾಲ ಬೆಳಗ್ಗೆ 10:43 ರಿಂದ ಮಧ್ಯಾಹ್ನ 12:19 ರವರೆಗೆ ಇರುತ್ತದೆ. ಇಂದು ವಿಶ್ವ ರಕ್ತದಾನಿಗಳ ದಿನವಾಗಿದ್ದು, ರಕ್ತದಾನ ಮಾಡುವ ಎಲ್ಲರಿಗೂ ಶುಭವಾಗಲಿ ಎಂದು ಗುರೂಜಿ ಹಾರೈಸಿದ್ದಾರೆ. ರವಿ ಮತ್ತು ಚಂದ್ರ ಗ್ರಹಗಳು ವೃಷಭ ರಾಶಿಯಲ್ಲಿ ರೋಹಿಣಿ ನಕ್ಷತ್ರದಲ್ಲಿ ಸಂಚಾರ ಮಾಡುತ್ತಿರುವುದು ಇಂದಿನ ವಿಶೇಷ ಎಂದು ಬಸವರಾಜ ಗುರೂಜಿ ತಿಳಿಸಿದ್ದಾರೆ.

 

Source link

ಕರ್ನಾಟಕಕ್ಕೆ ಅಗತ್ಯಕ್ಕಿಂತ ಹೆಚ್ಚಿನ ರಸಗೊಬ್ಬರ ಪೂರೈಕೆ: ಅಭಾವ ಆರೋಪಕ್ಕೆ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಸ್ಪಷ್ಟನೆ – Kannada News | More Than Required Fertilizer Supplied to Karnataka: Union Minister Pralhad Joshi Refutes Shortage Allegations

ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಸ್ಪಷ್ಟನೆImage Credit source: PTI

ಬೆಂಗಳೂರು, ಜೂನ್​​ 14: ಕರ್ನಾಟಕದಲ್ಲಿ ಮುಂಗಾರು ಚಟುವಟಿಕೆ ಆರಂಭವಾಗುತ್ತಿದ್ದಂತೆ ರಸಗೊಬ್ಬರ ಕೊರತೆಯಾಗಿದೆ ಎಂದು ಬಿಂಬಿಸಿ, ಸುಖಾಸುಮ್ಮನೆ ಕೇಂದ್ರ ಸರ್ಕಾರದ ವಿರುದ್ಧ ಆರೋಪಗಳನ್ನು ಸುರಿಸುವುದು ರಾಜ್ಯ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿ. ರಾಜ್ಯಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಪ್ರಮಾಣ ರಸಗೊಬ್ಬರ ಪೂರೈಸಿದೆ. ಆದರೆ ಕರ್ನಾಟಕ ಸರ್ಕಾರವೇ ಸರಿಯಾಗಿ ರಸಗೊಬ್ಬರ ವಿತರಣೆ ಮಾಡಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್​​ ಜೋಶಿ ಆರೋಪಿಸಿದ್ದಾರೆ.

‘ರಾಜ್ಯ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿ’

ರಾಜ್ಯದ ಹಲವೆಡೆ ರಸಗೊಬ್ಬರಕ್ಕಾಗಿ ರೈತರ ಪರದಾಟ ವಿಚಾರ ಸಂಬಂಧ ಸ್ಪಷ್ಟನೆ ನೀಡಿರುವ ಅವರು, ಜಾಗತಿಕ ಬಿಕ್ಕಟ್ಟಿನ ನಡುವೆಯೂ ಕೇಂದ್ರ ಸರ್ಕಾರ ರೈತರ ಹಿತಕ್ಕಾಗಿ ಮುಂಗಾರಿಗೆ ಮೊದಲೇ ಅಗತ್ಯ ರಸಗೊಬ್ಬರ ಪೂರೈಕೆ ಮಾಡಿದೆ. ಆದರೂ ಕೇಂದ್ರದ ಮೇಲೆ ರಾಜ್ಯ ಸರ್ಕಾರ ಗೂಬೆ ಕೂರಿಸಲು ಯತ್ನ ನಡೆಸುತ್ತಿದೆ. ವಾಸ್ತವವಾಗಿ ಕರ್ನಾಟಕದಲ್ಲಿ ಸಮರ್ಪಕ ರಸಗೊಬ್ಬರ ಲಭ್ಯತೆಯಿದ್ದು, ಅದನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ರೈತರಿಗೆ ತಲುಪಿಸದೆ ಬೇಜವಾಬ್ದಾರಿಯಾಗಿ ವರ್ತಿಸುತ್ತಿದೆ. ಮುಂಗಡ ದಾಸ್ತಾನು ಪ್ರಕ್ರಿಯೆಯನ್ನು ಸುಲಭಗೊಳಿಸಲು 2026ರ ಜನವರಿ ಮತ್ತು ಮಾರ್ಚ್ ನಡುವಿನ ಅವಧಿಯಲ್ಲೇ, ರಾಜ್ಯವು ಅಂದಾಜು ಅಗತ್ಯತೆಗಿಂತ ಹೆಚ್ಚುವರಿಯಾಗಿ 0.33 ಲಕ್ಷ ಮೆಟ್ರಿಕ್ ಟನ್ ಯೂರಿಯಾ, 1.29 ಲಕ್ಷ ಮೆಟ್ರಿಕ್ ಟನ್ ಡಿಎಪಿ ಮತ್ತು 1.58 ಲಕ್ಷ ಮೆಟ್ರಿಕ್ ಟನ್ ಎನ್‌ಪಿಕೆಎಸ್ ಅನ್ನು ಪಡೆದುಕೊಂಡಿದೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿಯಲ್ಲಿ ನಕಲಿ ಡಿಎಪಿ ರಸಗೊಬ್ಬರ ಮಾರಾಟ; ರೈತರ ತೀವ್ರ ಆಕ್ರೋಶ

ಜೂನ್ 10 ರವರೆಗೆ 3.13 ಲಕ್ಷ ಮೆಟ್ರಿಕ್ ಟನ್ ಅನುಪಾತದ ಅಗತ್ಯತೆಯ ಮಧ್ಯೆ, 5.59 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಲಭ್ಯತೆಯನ್ನು ಖಾತರಿಪಡಿಸಲಾಗಿದೆ. 2.47 ಲಕ್ಷ ಮೆಟ್ರಿಕ್ ಟನ್ ಮಾರಾಟದ ನಂತರವೂ, 3.12 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಬಾಕಿ ಉಳಿದಿದೆ ಹಾಗೂ ಇನ್ನೂ 17,190 ಮೆಟ್ರಿಕ್ ಟನ್ ಸಾಗಣೆಯಲ್ಲಿದೆ. 1.89 ಲಕ್ಷ ಮೆಟ್ರಿಕ್ ಟನ್ ಡಿಎಪಿ ಅಗತ್ಯತೆಯ ನಡುವೆ, 2.57 ಲಕ್ಷ ಮೆಟ್ರಿಕ್ ಟನ್ ಲಭ್ಯತೆಯನ್ನು ಖಚಿತಪಡಿಸಲಾಗಿದೆ. ಪ್ರಸ್ತುತ ದಾಸ್ತಾನು 1.09 ಲಕ್ಷ ಮೆಟ್ರಿಕ್ ಟನ್ ಇದ್ದು, ಹೆಚ್ಚುವರಿ ಪೂರೈಕೆ ನಡೆಯುತ್ತಿದೆ. 4.36 ಲಕ್ಷ ಮೆಟ್ರಿಕ್ ಟನ್ ಅಗತ್ಯ ವಿರುವ ಎನ್‌ಪಿಕೆಎಸ್​​ನ 9.28 ಲಕ್ಷ ಮೆಟ್ರಿಕ್ ಟನ್ ಲಭ್ಯತೆಯನ್ನು ಖಾತರಿಪಡಿಸಲಾಗಿದೆ. ಗಣನೀಯ ಪ್ರಮಾಣದ ಮಾರಾಟದ ನಂತರವೂ, ಸಾಗಣೆಯಲ್ಲಿರುವ ದಾಸ್ತಾನು ಸೇರಿದಂತೆ 5.6 ಲಕ್ಷ ಮೆಟ್ರಿಕ್ ಟನ್‌ಗಿಂತಲೂ ಹೆಚ್ಚು ರಸಗೊಬ್ಬರ ಲಭ್ಯವಿದೆ. ರೈತರ ಹಿತರಕ್ಷಣೆಯನ್ನು ಕಾಯಲು ಭಾರತ ಸರ್ಕಾರವು ಸಂಪೂರ್ಣವಾಗಿ ಬದ್ಧವಾಗಿದೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Daily Devotional: ಮನೆಗೆ ಹಾವು ಬಂದ್ರೆ ಕೊಲ್ಲಬಾರದು ಯಾಕೆ? – Kannada News | Why You Should Not Kill Snakes If They Enter Your Home

ಟಿವಿ9 ಕನ್ನಡ ಡಿಜಿಟಲ್​ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮನೆಗೆ ಹಾವು ಬಂದ್ರೆ ಕೊಲ್ಲಬಾರದು ಯಾಕೆ ಎಂದು ಡಾ.ಬಸವರಾಜ ಗುರೂಜಿ ತಿಳಿಸಿದ್ದಾರೆ. ಹಾವು ಮನೆಗೆ ಪ್ರವೇಶಿಸಿದಾಗ ಅದನ್ನು ಕೊಲ್ಲುವುದು ಶಾಸ್ತ್ರಗಳ ಪ್ರಕಾರ ಅಶುಭಕರ. ಹಾವು ದೈವಾಂಶ ಸಂಭೂತವಾಗಿದ್ದು, ಶಿವನ ಕುತ್ತಿಗೆಯಲ್ಲಿ, ವಿಷ್ಣುವಿನ ಹಾಸಿಗೆಯಾಗಿ, ಗಣಪತಿಯ ಹೊಟ್ಟೆಯ ಸುತ್ತ ಕಾಣಿಸಿಕೊಳ್ಳುತ್ತದೆ. ಇಡೀ ಬ್ರಹ್ಮಾಂಡವೇ ಹಾವಿನ ಮೇಲೆ ನಿಂತಿದೆ ಎಂದು ಪುರಾಣಗಳು ಹೇಳುತ್ತವೆ.

ಇಂದು ಕಾಡುಗಳ ನಾಶದಿಂದಾಗಿ ಹಾವಿನ ಸಂತತಿ ಕಡಿಮೆಯಾಗುತ್ತಿದ್ದು, ಹಾವುಗಳು ಮಾನವ ವಾಸದ ಪ್ರದೇಶಗಳಿಗೆ ಬರುವುದು ಅನಿವಾರ್ಯವಾಗಿದೆ. ಮನೆಗೆ ಹಾವು ಬಂದಾಗ ತಕ್ಷಣ ಅದನ್ನು ಕೊಲ್ಲುವ ಬದಲು, ಹಾವಾಡಿಗರು ಅಥವಾ ಅರಣ್ಯ ಇಲಾಖೆಯವರನ್ನು ಕರೆದು ಅದನ್ನು ಸುರಕ್ಷಿತವಾಗಿ ಸ್ಥಳಾಂತರಿಸಬೇಕು ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

 

Source link

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗೆ ಮರು ಅರ್ಜಿ ಆಹ್ವಾನ: ಸಿಎಂ ಡಿಕೆಶಿ ಮಾಹಿತಿ

ಬೆಂಗಳೂರು, ಜೂನ್​​ 14: ಕರ್ನಾಟಕದ ಮಹತ್ವಾಕಾಂಕ್ಷಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳಿಗೆ ಮತ್ತೆ ಅರ್ಜಿ ಸಲ್ಲಿಸಬೇಕು ಎಂದು ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಫಲಾನುಭವಿಗಳಿಗೆ ಸೂಚಿಸಿದ್ದಾರೆ. ನಿಜವಾದ ಫಲಾನುಭವಿಗಳನ್ನು ಗುರುತಿಸುವ ಹಾಗೂ ಯೋಜನೆಯ ದುರ್ಬಳಕೆ ತಡೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣ ನೂರಾರು ಕೋಟಿ ರೂಪಾಯಿ ಈಗಾಗಲೇ ಮೃತಪಟ್ಟವರ ಖಾತೆಗಳಿಗೆ ಹೋಗಿರುವುದು ಪತ್ತೆಯಾಗಿದ್ದು, ಫಲಾನುಭವಿಗಳ ಬ್ಯಾಂಕ್ ಮಾಹಿತಿ ಸ್ಪಷ್ಟವಾಗಿ ಲಭ್ಯವಾಗಬೇಕಿದೆ ಎಂದು ಅವರು ಹೇಳಿದ್ದಾರೆ. ಅದೇ ರೀತಿ, ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವ 1.64 ಲಕ್ಷ ಜನರೂ ಸಹ ಮರು ಅರ್ಜಿ ಸಲ್ಲಿಸಬೇಕು ಎಂದೂ ಅವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ದಿನ ಭವಿಷ್ಯ: ಇಂದು ಈ ರಾಶಿಯವರ ಅನೇಕರಿಂದ ಪ್ರಶಂಸೆ, ಆತ್ಮಾವಲೋಕನ – Kannada News | Panchamrutha in Vishnu Puja: Importance, Preparation and Mistakes to Avoid for Blessings

ಮೇಷ ರಾಶಿ :

ಇಂದು ಬರಬೇಕಾದ ಸಂಪತ್ತು ನಿಮ್ಮ ಕೈಸೇರುವ ನಿರೀಕ್ಷೆ ತಾನಾಗಿ ಬರಲಿದೆ. ನಿಮ್ಮ ಕಾರ್ಯಕೌಶಲಕ್ಕೆ ನಿಬ್ಬೆರಗಾಗುವರು. ಒಂದೇ ವಿಚಾರವನ್ನು ಕೇಳಿ ಮನಸ್ಸು ಭಾರವಾಗಲಿದೆ. ನಿಯಮಗಳನ್ನು ಮುರಿದು ವರ್ತಿಸುವುದು ಬೇಡ. ಸ್ವಂತ ಉದ್ಯೋಗವನ್ನು ನಡೆಸಲು ಕಷ್ಟವೆಂದು ಅನ್ನಿಸಬಹುದು. ನಿಜ ಸಂಗತಿಗಳನ್ನು ಯಾರಿಗೂ ಹೇಳದೇ ಮುಚ್ಚಿಡುವಿರಿ. ನಿಮ್ಮಿಂದ ಹಣದ ಸಹಾಯವನ್ನು ಬಯಸುವವರು ವಂಚಿಸಲೂ ಸಾಧ್ಯವಿದೆ.

ವೃಷಭ ರಾಶಿ :

ಅನಾರೋಗ್ಯದಿಂದ ಬಹಳ ಮಾನಸಿಕ ಹಿಂಸೆಯಾಗಲಿದೆ. ರಾಜಕಾರಣಿಗಳ ಭೇಟಿಯಾಗಿ ಜೀವನದಲ್ಲಿ ಹೊಸ ಮಾರ್ಗವನ್ನು ತುಳಿಯುವ ಅವಕಾಶ ನಿಮಗೆ ಸಿಗಲಿದೆ. ನಿಮ್ಮ ಇಂದಿನ ಕೆಲಸದಿಂದ ಅಧಿಕಾರಿಗಳು ಸಂತೋಷಪಡುವಿರಿ. ನಿಮಗೆ ಹೆಚ್ಚಿನ ಸ್ಥಾನವೂ ಸಿಗಬಹುದು. ಅಧ್ಯಾತ್ಮವು ನಿಮಗೆ ಇಷ್ಟವಾಗುವುದು. ಫಲಾಪೇಕ್ಷೆಯಿಲ್ಲದೇ ಕರ್ತವ್ಯಗಳನ್ನು ಮಾಡಿರಿ. ಹೆಚ್ಚು ಸಮಯವನ್ನು ಕುಟುಂಬದೊಂದಿಗೆ ಕಳೆಯುವಿರಿ.

ಮಿಥುನ ರಾಶಿ:

ನಕಾರಾತ್ಮಕ ಆಲೋಚನೆಯನ್ನು ಬಲವಂತವಾಗಿ ಕಡಿಮೆ ಮಾಡುವುದು ಉತ್ತಮ. ಇಲ್ಲವಾದರೆ ನಿಮಗೆ ಸಂತೋಷವೇ ಇರದಾಗುತ್ತದೆ. ಭಕ್ತಿಯ ಕೊರತೆ ಕಾಡಬಹುದು. ನಿಮ್ಮ ಉದ್ಯೋಗಕ್ಕೆ ಬಂಧುಗಳ ಬೆಂಬಲವನ್ನು ಇರಬಹುದು. ಆರ್ಥಿಕ ಸಂಕಷ್ಟವೆಂದು ಚಿಂತೆಗೆ ಒಳಗಾದರೆ ತೊಂದರೆಯಾದೀತು. ನೀವು ಹಳೆಯ ಸ್ನೇಹವು ಪುನಃ ನವೀಕರಣವಾಗದು. ಮನೆಯಲ್ಲಿ ಸಂತೋಷಕೂಟವು ನಿರ್ಮಾಣವಾಗುವುದು.

ಕರ್ಕಾಟಕ ರಾಶಿ:

ಬೇರೆಯವರಿಗೆ ಅಪಕೀರ್ತಿ ತರಲು ಹೋಗಿ ನಿಮ್ಮ ಯಶಸ್ಸೇರ ಹಾಳಾಗಬಹುದು. ಯಾವುದನ್ನೂ ಕಷ್ಟ ಎಂದುಕೊಂಡರೆ ಯಾವಾಗಲೂ ಕಷ್ಟವೇ. ಅದನ್ನು ಸರಳವಾಗಿಸುವ ವಿಧಾನವನ್ನು ಕಂಡುಕೊಳ್ಳಿ. ಮಳೆ ಬಂದ ಅನಂತರದ ವಾತಾವರಣದಂತೆ ಏಕಾಂತ ಹಿತವಾಗುವುದು. ಹಣಕಾಸಿನ ವಿಚಾರದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ. ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯಬಹುದು. ಆಕಸ್ಮಿಕ ವಿಚಾರಕ್ಕೆ ಗಲಿಬಿಲಿಯಾಗುವಿರಿ.

ಸಿಂಹ ರಾಶಿ:

ಹೊಸ ಉತ್ಸಾಹದ ದಿನವಾಗಿ ಇರಲಿದೆ. ಮಕ್ಕಳಿಂದ ನಿಮಗೆ ಶುಭವಾರ್ತಯು ಇರಬಹುದು. ನಿಮಗೆ ಸಿಗುವ ಸಲಹೆ ನಿಮ್ಮವರಿಗೂ ಹಿತವಾಗುವಂತೆ ಇರಲಿ. ಮುಸುಕಿನ ಗುದ್ದಾಟ ನಿಮ್ಮ ಮತ್ತು ಪತಿಯ ನಡುವೆ ನಡೆಯತ್ತದೆ. ಹಿತಶತ್ರುಗಳು ಅರಿತುಕೊಳ್ಳಿ‌ ನಿಮಗೆ ಹೆಚ್ಚು ಸಮಯಬೇಕಾಗದು. ಕೃಷಿಯನ್ನು ನೀವು ಇಷ್ಟಪಡುವುದಿಲ್ಲ. ಎಲ್ಲವನ್ನೂ ನೀವು ಲಾಭದಾಯಕವನ್ನಾಗಿ ಮಾಡಿಕೊಳ್ಳುವಿರಿ. ಅನ್ನಿಸಿದ್ದನ್ನು ಹೇಳುವ ರೀತಿಯಲ್ಲಿ ಹೇಳಿ. ಇಂದು ನಿಮ್ಮವರ ಬಗ್ಗೆಯೇ ಯೋಚಿಸಲು ಸಮಯ ಸಿಗದು.

ಕನ್ಯಾ ರಾಶಿ:

ಇಂದು ಅಚಾತುರ್ಯದಿಂದ ವ್ಯಾಪಾರದಲ್ಲಿ ನಷ್ಟವಾಗುವ ಸಾಧ್ಯತೆ ಇದೆ. ಅವಮಾನದವನ್ನು ನೀವು ಅನುಭವಿಸುವ ಪ್ರಸಂಗವೂ ಬರಬಹುದು. ಸಂಗಾತಿಯ ಮುನಿಸಿಗೆ ನೀವು ಸೊಪ್ಪು ಹಾಕುವುದು ಬೇಡ. ಅಲ್ಲಿಯೇ ಶಾಂತವಾಗಲಿ. ದುಃಸ್ವಪ್ನವು ನಿಮಗೆ ಚಿಂತನೆಯನ್ನು ಕೊಡುವುದು‌ ಸಂಬಂಧಗಳ ಬೆಲೆಯನ್ನು ಅರಿಯಲಿದ್ದೀರಿ. ಕುತೂಹಲಕ್ಕೆ ಏನನ್ನಾದರೂ ಮಾಡಲು ಹೋಗಿ ತೊಂದರೆಗೆ ಸಿಕ್ಕಿಕೊಳ್ಳುವಿರಿ. ನಷ್ಟವಾದುದರ ಅನುಭವವು ನಿಮಗಾಗುವುದು.

ತುಲಾ ರಾಶಿ:

ಅತಿಯಾದ ಶಿಸ್ತಿನಿಂದ ಸಮಯಕ್ಕೆ ಕೆಲಸವನ್ನು ಮುಗಿಸಲಾಗದು. ನಿಮ್ಮವರು ನಿಮಗೆ ಅಪಮಾನವನ್ನು ಮಾಡಬಹುದು. ಅದರಿಂದ ಬೇಸರವೂ ಆಗಬಹುದು. ಏಕಾಗ್ರತೆಯ ಕೊರತೆ ಕಾಣಬಹುದು. ಮನೆಯಲ್ಲಿ ಜಗಳವಾಡಿ ದೂರ ಹೋಗುವಿರಿ. ನಿಮ್ಮವರೇ ನಿಮಗೆ ಶತ್ರುಗಳಂತೆ ಕಾಣುವರು. ಭೂಮಿಯ ಖರೀದಿಗೆ ಕುಟುಂಬದವರ ಸಲಹೆಯನ್ನು ಪಡೆಯುವಿರಿ. ಉದ್ಯೋಗದಲ್ಲಿ ಅಕಸ್ಮಾತ್ ಬದಲಾವಣೆಗಳು ಆಗಬಹುದು. ನಿಮ್ಮ ವಾಹನದಿಂದ ನಿಮಗೆ ಅಲ್ಪ ಲಾಭವಾಗುವುದು.

ವೃಶ್ಚಿಕ ರಾಶಿ:

ಆಲಸ್ಯದ ಕಾರಣ ನೀವು ಎಲ್ಲಿಗೂ ಹೋಗಲು ಇಷ್ಟಪಡುವುದಿಲ್ಲ. ಇಂದು ಪ್ರಯಾಣ ಮಾಡದೇ ಇರುವುದು ಒಳ್ಳೆಯದೇ ಆಗಿದೆ. ನೀವು ಅದನ್ನು ಬದಲಾಯಿಸಲು ಹೋಗಿ ಇನ್ನೊಂದು ಸಂಕಷ್ಟವನ್ನು ತಂದುಕೊಳ್ಳುವಿರಿ. ಹೊಸ ಆವಿಷ್ಕಾರಗಳ ಕಡೆ ಗಮನವು ಅಧಿಕವಾಗಿರುವುದು. ನಿಮ್ಮ ಕಾರ್ಯವನ್ನು ಕೆಲವರು ಆಡಿಕೊಳ್ಳಬಹುದು. ಸಂಗಾತಿಯ ಮಾತುಗಳಿಂದ ಸಿಟ್ಟಾಗುವ ಸಾಧ್ಯತೆ ಇದೆ. ಇನ್ನೊಬ್ಬರ ವ್ಯಕ್ತಿತ್ವವನ್ನು ಅನುಕರಣೆ ಮಾಡುವಿರಿ. ನೌಕರರ ವಿಚಾರಕ್ಕೆ ನೀವು ಸಿಟ್ಟುಗೊಳ್ಳುವಿರಿ.

ಇದನ್ನೂ ಓದಿ: ಶನಿಯ ಮನೆಯಲ್ಲಿ ರಾಹುವಿನ ನಕ್ಷತ್ರದಲ್ಲಿಯೇ ರಾಹುವಿನ ಸಂಚಾರ .. ಆಗಲಿದೆ ಅನೇಕ ಚಮತ್ಕಾರ…

ಧನು ರಾಶಿ:

ಇಂದು ಯಾರಾದರೂ ನಿಮ್ಮನ್ನು ಉದ್ವೇಗಕ್ಕೆ ತಳ್ಳಬಹುದು. ಕೆಟ್ಟ ಅಭ್ಯಾಸವನ್ನು ಸ್ನೇಹಿತರಿಂದ ಕಲಿತಿದ್ದು ಬಿಡಲಾರಿರಿ. ಮನೆಯಲ್ಲಿ ಇದು ತಿಳಿಯುತ್ತದೋ ಎಂಬ ಆತಂಕವೂ ಇರುವುದು. ಪ್ರಶಂಸೆಯಿಂದ ಮುಜುಗರವಾಗಲಿದೆ. ಸ್ವಂತ ಉದ್ಯೋಗವನ್ನು ಮಾಡುತ್ತಿರಮದ್ದರೆ ಶುಭವಾರ್ತೆಯ ಬರಬಹುದು. ಹಠಾತ್ ಕ್ರೋಧವು ಒಳ್ಳೆಯದಲ್ಲ. ತಾಳ್ಮೆಯನ್ನು ಬೆಳೆಸಿಕೊಳ್ಳುವುದು ಉತ್ತಮ. ಯಂತ್ರೋಪಕರ ಅಥವಾ ವಾಹನದಿಂದ ಧನವು ನಷ್ಟವಾಗಿ ಬೇಸರವೂ ಆಗಲಿದೆ.

ಮಕರ ರಾಶಿ:

ಸಾಲವನ್ನು ಮಾಡಿ ವಾಹನವನ್ನೋ, ಭೂಮಿಯನ್ನೋ, ಮನೆಯನ್ನೋ ಖರೀದಿಸಲು ಹೋಗಬೇಡಿ. ನಿಮ್ಮವರಿಗೆ ನಿಮ್ಮನ್ನು ನೋಡಿ ಮಾತನಾಡಬೇಕು ಎನ್ನಿಸಬಹುದು. ನಿಮ್ಮ ದೂರನ್ನು ಯಾರೂ ಆಲಿಸದೇ ಇರಬಹುದು.‌ ತಾಯಿಯ ಬಳಿ ನಿಮ್ಮ ನೋವನ್ನು ಹೇಳಿಕೊಳ್ಳುವಿರಿ. ಧನಲಾಭವಿದ್ದರೂ ತಪ್ಪಿಸುವವರ‌ ಕಾರಣ ಅದು ಸಿಗದೇ ಹೋಗಬಹುದು. ಕುಟುಂಬಕ್ಕೆ ನಿಮ್ಮಿಂದ ಆಗಬೇಕಾದ ಕಾರ್ಯಗಳ ಬಗ್ಗೆ ತಿಳಿದುಕೊಳ್ಳುವಿರಿ.

ಕುಂಭ ರಾಶಿ:

ಹಿರಿಯರ ಮಧ್ಯಸ್ಥಿಕೆಯಲ್ಲಿ ಕಾರ್ಯಗಳು ಮುನ್ನಡೆದರೆ ಒಳ್ಳೆಯದು. ನ್ಯಾಯಾಲಯದಲ್ಲಿ ಹಿನ್ನಡೆಯಾಗಲಿದೆ. ನಿಮಗೆ ಆಗದ್ದನ್ನು ಅನ್ಯರ ಮೂಲಕ ಮಾಡಿಸುವಿರಿ. ಕೈಬಿಡಬೇಕಂದು ನಿರ್ಧರಿಸಿರುವ ನಿಮಗೆ ಕೆಲಸ ಮಾಡುವ ಸಂಸ್ಥೆಯು ಮತ್ತೆ ನಿಮ್ಮನ್ನು ಸೇರಿಸಿಕೊಳ್ಳಲಿದೆ. ಸಂಗಾತಿಯನ್ನು ಬೆಂಬಲಿಸುವಂತೆ ಹೇಳುವಿರಿ. ಬೆಳಗಿನ ಜಾವದಲ್ಲಿ ನಿಮಗೆ ಬೀಳುವ ಕನಸು ಭವಿಷ್ಯವನ್ನೂ ಸೂಚಿಸಲಿದೆ. ಸಂಗಾತಿಯ ಬಗ್ಗೆ ಪೂರ್ವಾಗ್ರಹವು ಇರುವ ಕಾರಣ ಯಾವ ಇಷ್ಟವಾಗದು.

ಮೀನ ರಾಶಿ:

ಗೊತ್ತಿಲ್ಲ ವಿಚಾರಗಳನ್ನು ಅನುಭವಿಗಳಿಂದ, ಹಿರಿಯರಿಂದ ತಿಳಿದುಕೊಳ್ಳಲು ಪ್ರಯತ್ನಿಸಿ. ಮಹಿಳಾ ಅಧಿಕಾರಿಯಿಂದ ಅಪಮಾನವಾಗಲಿದ್ದು ಸಮಾಧನಾದಿಂದ ಉತ್ತರಿಸಿ. ದೂರದ ಊರಿಗೆ ಪ್ರಯಾಣ ಮಾಡುವಿರಿ. ದಾಂಪತ್ಯದಲ್ಲಿ ಜಗಳಗಳು ಆಗಲಿದ್ದು, ನೀವದನ್ನು ಮುಂದುವರಿಸಲು ಹೋಗಬೇಡಿ. ಕೋಪವು ಅಧಿಕವಾಗಿ ಇದ್ದರೂ ಸಹನೆಯನ್ನು ತಂದುಕೊಳ್ಳಿ. ಅಲ್ಪಾವಧಿಯಲ್ಲಿ ಹೆಚ್ಚು ಪಡೆಯಬೇಕು ಎನ್ನುವ ಅತಿಯಾದ ಆಸೆ ಬೇಡ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಮೃಗಶಿರಾ, ವಾರ : ಭಾನು, ಪಕ್ಷ : ಕೃಷ್ಣ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ರೋಹಿಣೀ, ಯೋಗ : ಅತಿಗಂಡ, ಕರಣ : ಬವ, ಸೂರ್ಯೋದಯ – 05 – 54 am, ಸೂರ್ಯಾಸ್ತ – 06 – 45 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:09 – 18:45, ಯಮಗಂಡ ಕಾಲ 12:20 – 13:56, ಗುಳಿಕ ಕಾಲ 15:33 – 17:09

-ಲೋಹಿತ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಳೆಯೇ ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ; ತಕ್ಷಣವೇ ಹಾರ್ಮುಜ್ ತೆರೆಯಲಾಗುವುದು ಎಂದ ಟ್ರಂಪ್ – Kannada News | Donald Trump announced US Iran peace deal to be signed on June 14 Strait of Hormuz will reopen immediately

ವಾಷಿಂಗ್ಟನ್, ಜೂನ್ 13: ಜಾಗತಿಕ ಆರ್ಥಿಕತೆ ಮತ್ತು ಮಧ್ಯಪ್ರಾಚ್ಯದ ಭದ್ರತೆಯ ಮೇಲೆ ತೀವ್ರ ಪರಿಣಾಮ ಬೀರಿದ್ದ ಅಮೆರಿಕ-ಇರಾನ್ ಸಂಘರ್ಷಕ್ಕೆ ದೊಡ್ಡ ತಿರುವು ಸಿಕ್ಕಿದೆ. ಇರಾನ್‌ನೊಂದಿಗಿನ ಯುದ್ಧವನ್ನು ಕೊನೆಗೊಳಿಸುವ ಶಾಂತಿ ಒಪ್ಪಂದಕ್ಕೆ ಭಾನುವಾರವೇ ಸಹಿ ಹಾಕಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇಂದು (ಶನಿವಾರ) ರಾತ್ರಿ ಪ್ರಕಟಿಸಿದ್ದಾರೆ. “ಶಾಂತಿ ಒಪ್ಪಂದದ ಮಾತುಕತೆಗಳು ಅಂತಿಮ ಹಂತ ತಲುಪಿದ್ದು, ಮುಂದಿನ 24 ಗಂಟೆಗಳಲ್ಲಿ ಒಪ್ಪಂದಕ್ಕೆ ಸಹಿ ಬೀಳಲಿದೆ” ಎಂದು ಅಮೆರಿಕ-ಇರಾನ್ ನಡುವೆ ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನ ಸರ್ಕಾರ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಟ್ರಂಪ್ ಅವರಿಂದ ಈ ಅಧಿಕೃತ ಪ್ರಕಟಣೆ ಹೊರಬಿದ್ದಿದೆ.

“ನಾಳೆ (ಭಾನುವಾರ) ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲು ನಿರ್ಧರಿಸಲಾಗಿದೆ. ಒಪ್ಪಂದಕ್ಕೆ ಸಹಿ ಬಿದ್ದ ತಕ್ಷಣವೇ, ಹಾರ್ಮುಜ್ ಜಲಸಂಧಿಯು ಜಗತ್ತಿನ ಎಲ್ಲಾ ದೇಶಗಳ ಹಡಗು ಸಂಚಾರಕ್ಕೆ ತಕ್ಷಣದಿಂದಲೇ ಮುಕ್ತವಾಗಲಿದೆ” ಎಂದು ಡೊನಾಲ್ಡ್ ಟ್ರಂಪ್ ತಮ್ಮ ‘ಟ್ರುತ್ ಸೋಶಿಯಲ್’ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಇರಾನ್ ಮೇಲಿನ ದಾಳಿ ರದ್ದುಗೊಳಿಸಿದ ಟ್ರಂಪ್, ಶೀಘ್ರದಲ್ಲೇ ಶಾಂತಿ ಒಪ್ಪಂದ

ಟ್ರಂಪ್ ಅವರ ಈ ಘೋಷಣೆಯು ಇರಾನ್ ವಿದೇಶಾಂಗ ಸಚಿವಾಲಯದ ಹೇಳಿಕೆಗೆ ತದ್ವಿರುದ್ಧವಾಗಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ’24 ಗಂಟೆಗಳ ಒಳಗೆ ಒಪ್ಪಂದದ ಮಾಹಿತಿ ಹೊರಬೀಳಲಿದೆ’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಕಾಯಿ, “ಒಪ್ಪಂದದ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ. ಆದರೆ ಅದು ನಾಳೆಯಂತೂ ಖಂಡಿತ ಅಲ್ಲ” ಎಂದು ಸ್ಪಷ್ಟಪಡಿಸಿದ್ದರು.

ಹೀಗಿದ್ದರೂ ಟ್ರಂಪ್ ಈ ರೀತಿಯ ಹೇಳಿಕೆ ನೀಡಿರುವುದು ಕುತೂಹಲ ಮೂಡಿಸಿದೆ. ಈ ಹಿಂದೆ ಕೂಡ ಡೊನಾಲ್ಡ್ ಟ್ರಂಪ್ ನೀಡಿದ್ದ ಹೇಳಿಕೆಗಳನ್ನು ಇರಾನ್ ಅಲ್ಲಗಳೆದಿತ್ತು. ಇದರಿಂದ ಟ್ರಂಪ್​ಗೆ ಜಾಗತಿಕ ಮಟ್ಟದಲ್ಲಿ ಮುಜುಗರ ಉಂಟಾಗಿತ್ತು. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಸಹ ಮುಂಬರುವ ದಿನಗಳಲ್ಲಿ ಸಹಿ ಆಗಬಹುದು ಎಂದಷ್ಟೇ ಹೇಳಿದ್ದರು.

ಇದನ್ನೂ ಓದಿ: ಹಾರ್ಮುಜ್‌ನಿಂದ ಹೊರಟ ಭಾರತೀಯ ಹಡಗುಗಳ ಮೇಲೆ ಇರಾನ್​ನಿಂದ ಡ್ರೋನ್ ದಾಳಿ; ಟ್ರಂಪ್ ಆರೋಪ

ತಮ್ಮ ಟ್ರುತ್ ಪೋಸ್ಟ್​ನಲ್ಲಿ ಶಾಂತಿ ಒಪ್ಪಂದದ ಬಗ್ಗೆ ಕೆಲವು ಸಂಗತಿಗಳನ್ನು ಕೂಡ ಟ್ರಂಪ್ ಹಂಚಿಕೊಂಡಿದ್ದಾರೆ. ಈ ಒಪ್ಪಂದದ ಮೂಲಕ ಇರಾನ್ ಯಾವುದೇ ಪರಮಾಣು ಅಸ್ತ್ರಗಳನ್ನು ಹೊಂದದಂತೆ ಕಠಿಣ ನಿಯಮ ವಿಧಿಸಲಾಗುವುದು. ಇರಾನ್ ಇನ್ನು ಮುಂದೆ ಯಾವುದೇ ಪರಮಾಣು ಆಸ್ತ್ರವನ್ನು ಹೊಂದುವುದಿಲ್ಲ ಮತ್ತು ಖರೀದಿಸುವ, ಅಭಿವೃದ್ಧಿಪಡಿಸುವ ಯತ್ನವನ್ನೂ ಮಾಡುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಈ ಒಪ್ಪಂದದಲ್ಲಿ ಯಾವುದೇ ರೀತಿಯ ನಗದು ಹಸ್ತಾಂತರ ಇರುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. 2015ರ ಒಬಾಮಾ ಆಡಳಿತದ ಇರಾನ್ ಪರಮಾಣು ಒಪ್ಪಂದವನ್ನು ಟೀಕಿಸಿದ ಅವರು, “ಅಂದು ಒಬಾಮಾ ಬಿಲಿಯನ್‌ಗಟ್ಟಲೆ ಡಾಲರ್ ನಗದನ್ನು ಇರಾನ್‌ಗೆ ನೀಡಿದ್ದರು. ಆದರೆ ಈ ಬಾರಿ ಯಾವುದೇ ಹಣದ ವ್ಯವಹಾರ ನಡೆಯುವುದಿಲ್ಲ” ಎಂದಿದ್ದಾರೆ.

ಒಂದು ವೇಳೆ ಈ ಶಾಂತಿ ಪ್ರಕ್ರಿಯೆ ವಿಫಲವಾದರೆ, ಇರಾನ್‌ನ ಭೂಗತ ಪರಮಾಣು ನೆಲೆಗಳನ್ನು ಧ್ವಂಸಗೊಳಿಸಲು ಅತ್ಯಾಧುನಿಕ ಮಿಲಿಟರಿ ತಂತ್ರಜ್ಞಾನವನ್ನು ಒಳಗೊಂಡ ಅಂತಿಮ ಪರ್ಯಾಯ ಮಾರ್ಗವನ್ನು ಬಳಸಬೇಕಾಗುತ್ತದೆ ಎಂದು ಟ್ರಂಪ್ ಪರೋಕ್ಷ ಎಚ್ಚರಿಕೆಯನ್ನೂ ನೀಡಿದ್ದಾರೆ.

ಕಳೆದ ಏಪ್ರಿಲ್ 8ರಂದು ಅಮೆರಿಕ ಮತ್ತು ಇರಾನ್ ತಾತ್ಕಾಲಿಕ ಕದನ ವಿರಾಮ ಘೋಷಿಸಿದ್ದವು. ಅದಾದ ನಂತರ ದೀರ್ಘಕಾಲೀನ ಶಾಂತಿ ಒಪ್ಪಂದಕ್ಕಾಗಿ ವಾರಗಟ್ಟಲೆ ಮಾತುಕತೆಗಳು ನಡೆದರೂ ಯಾವುದೇ ಫಲ ಸಿಕ್ಕಿರಲಿಲ್ಲ. ಇತ್ತೀಚೆಗೆ ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ನಾವಿಕರಿದ್ದ ಹಡಗುಗಳ ಮೇಲೆಯೂ ದಾಳಿ ನಡೆದು ಜಾಗತಿಕ ಆರ್ಥಿಕತೆ ಉದ್ವಿಗ್ನಗೊಂಡಿತ್ತು. ಸದ್ಯ ಜಾಗತಿಕ ತೈಲ ಮಾರುಕಟ್ಟೆ ಮತ್ತು ಕಡಲ ಸಂಚಾರದ ಸುರಕ್ಷತೆಯ ದೃಷ್ಟಿಯಿಂದ ಈ ಒಪ್ಪಂದದ ಮೇಲೆ ಇಡೀ ಜಗತ್ತು ಕಣ್ಣಿಟ್ಟಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಪಿಎನ್‌ಬಿ ವಂಚನೆ ಪ್ರಕರಣ; ನೀರವ್ ಮೋದಿ ಪ್ರಕರಣಕ್ಕೆ ಹೊಸ ತಿರುವು – Kannada News | PNB Fraud Case; New Turn in Nirav Modi Case Chargesheet Filed in Magistrate Court

ನವದೆಹಲಿ, ಜೂನ್ 13: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್ ಮೋದಿ (Nirav Modi) ವಿರುದ್ಧದ 321.88 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಮಹತ್ವದ ಕಾನೂನು ಬೆಳವಣಿಗೆ ಕಂಡುಬಂದಿದೆ. ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು ಎಫ್‌ಐಆರ್ ಮತ್ತು ಸಂಬಂಧಿತ ದಾಖಲೆಗಳನ್ನು ಎಸ್ಪ್ಲನೇಡ್‌ನಲ್ಲಿರುವ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಸಿಎಂಎಂ) ನ್ಯಾಯಾಲಯಕ್ಕೆ ವರ್ಗಾಯಿಸಲು ಆದೇಶಿಸಿದೆ. ತನಿಖೆಯಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಯಾವುದೇ ಪಿಎನ್‌ಬಿ ಅಧಿಕಾರಿಯ ವಿರುದ್ಧ ಯಾವುದೇ ದೃಢವಾದ ಪುರಾವೆಗಳು ಕಂಡುಬಂದಿಲ್ಲ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. ಇದರ ಪರಿಣಾಮವಾಗಿ, ಸಂಸ್ಥೆ ಈಗ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿಭಾಗಗಳ ಅಡಿಯಲ್ಲಿ ಖಾಸಗಿ ವ್ಯಕ್ತಿಗಳ ವಿರುದ್ಧ ಮಾತ್ರ ಆರೋಪಪಟ್ಟಿ ಸಲ್ಲಿಸುತ್ತದೆ.

ವಿಶೇಷ ಸಿಬಿಐ ನ್ಯಾಯಾಧೀಶ ಡಾ. ಜೆ.ಪಿ. ದಾರೇಕರ್ ಅರ್ಜಿಯನ್ನು ಸ್ವೀಕರಿಸಿ, ಎಫ್‌ಐಆರ್ ಮತ್ತು ಸಂಬಂಧಿತ ದಾಖಲೆಗಳನ್ನು ಎಸ್ಪ್ಲನೇಡ್ ನ್ಯಾಯಾಲಯಕ್ಕೆ ಕಳುಹಿಸಲು ನಿರ್ದೇಶಿಸಿದರು. ನೀರವ್ ಮೋದಿ, ರವಿಶಂಕರ್ ಗುಪ್ತಾ, ವಿಪುಲ್ ಅಂಬಾನಿ ಮತ್ತು ಫೈರ್‌ಸ್ಟಾರ್ ಗ್ರೂಪ್ ಕಂಪನಿಗಳೊಂದಿಗೆ ಸಂಬಂಧ ಹೊಂದಿರುವ ಇತರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬ್ಯಾಂಕಿನ ತನಿಖೆಯು ಸೋಲಾರ್ ಎಕ್ಸ್‌ಪೋರ್ಟ್ಸ್, ಸ್ಟೆಲ್ಲರ್ ಡೈಮಂಡ್ಸ್, ಡೈಮಂಡ್ ಆರ್ ಯುಎಸ್, ಫೈರ್‌ಸ್ಟಾರ್ ಇಂಟರ್​​ನ್ಯಾಷನಲ್ ಮತ್ತು ಫೈರ್‌ಸ್ಟಾರ್ ಡೈಮಂಡ್ಸ್ ನಡುವಿನ ಅನುಮಾನಾಸ್ಪದ ವಹಿವಾಟುಗಳನ್ನು ಬಹಿರಂಗಪಡಿಸಿದೆ.

ಇದನ್ನೂ ಓದಿ: PNB Scam: ಮೆಹುಲ್ ಚೋಕ್ಸಿ, ನೀರವ್ ಮೋದಿ 13,000 ಕೋಟಿ ರೂ ಪಂಗನಾಮ ಹಾಕಿ ದೇಶ ಬಿಟ್ಟುಹೋದ ಕಥೆ

ಭ್ರಷ್ಟಾಚಾರದ ಆರೋಪಗಳನ್ನು ಕೈಬಿಡಲಾಗಿದ್ದು, ವಂಚನೆ ಮತ್ತು ಪಿತೂರಿಯ ಆರೋಪಗಳು ಮಾತ್ರ ಉಳಿದಿವೆ. ಸಿಬಿಐ ಪ್ರಕಾರ, ಹೆಚ್ಚಿನ ವಿಚಾರಣೆಗಳು ಮತ್ತು ಚಾರ್ಜ್‌ಶೀಟ್‌ನ ಅರಿವನ್ನು ಈಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ತೆಗೆದುಕೊಳ್ಳಲಾಗುವುದು. ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಸಿಬಿಐ ನ್ಯಾಯಾಲಯದಲ್ಲಿ ಹೇಳಿದೆ.

ಗುರುವಾರ ಭ್ರಷ್ಟಾಚಾರ ತಡೆ ಕಾಯ್ದೆಯಡಿ ನಡೆಸಿದ ವಿವರವಾದ ತನಿಖೆಯಲ್ಲಿ ಪಿಎನ್‌ಬಿ ಅಧಿಕಾರಿಗಳು ಅಥವಾ ಖಾಸಗಿ ವ್ಯಕ್ತಿಗಳ ವಿರುದ್ಧ ಯಾವುದೇ ದೋಷಾರೋಪಣೆಗೆ ಕಾರಣವಾಗುವ ಪುರಾವೆಗಳು ಕಂಡುಬಂದಿಲ್ಲ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿತು. ಸಿಬಿಐ ಪರವಾಗಿ ಪ್ರತಿನಿಧಿಸುವ ಪಬ್ಲಿಕ್ ಪ್ರಾಸಿಕ್ಯೂಟರ್ ವಿಕ್ರಮ್ ಸಿಂಗ್, ಖಾಸಗಿ ವ್ಯಕ್ತಿಗಳ ವಿರುದ್ಧ ಮಾತ್ರ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ವಾದಿಸಿದರು. ಆದ್ದರಿಂದ, ಪ್ರಕರಣವು ವಿಶೇಷ ಸಿಬಿಐ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗಿದೆ ಮತ್ತು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರ್ಗಾಯಿಸಬೇಕು. ವಿಶೇಷ ನ್ಯಾಯಾಧೀಶ ಜೆ.ಪಿ. ದಾರೇಕರ್ ಅವರು ತನಿಖಾ ಸಂಸ್ಥೆಯ ವಾದವನ್ನು ಒಪ್ಪಿಕೊಂಡರು.

ಇದನ್ನೂ ಓದಿ: ಬ್ಯಾಂಕ್ ವಂಚನೆ ಪ್ರಕರಣ; ಅಮೆರಿಕದಲ್ಲಿ ನೀರವ್ ಮೋದಿಯ ಸಹೋದರ ನೇಹಲ್ ಮೋದಿ ಬಂಧನ

ಪರಾರಿಯಾಗಿರುವ ವಜ್ರ ವ್ಯಾಪಾರಿ ನೀರವ್ ಮೋದಿ ಮತ್ತು ಅವರ ಚಿಕ್ಕಪ್ಪ ಮೆಹುಲ್ ಚೋಕ್ಸಿ ಅವರನ್ನು ಸಾವಿರಾರು ಕೋಟಿ ರೂ.ಗಳ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳೆಂದು ಪರಿಗಣಿಸಲಾಗಿದೆ. ಈ ಪ್ರಕರಣವನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ED) ಎರಡೂ ತನಿಖೆ ನಡೆಸುತ್ತಿವೆ. ಆರೋಪಿಗಳ ಮೇಲೆ 13,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಸರ್ಕಾರಿ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪವಿದೆ. ಮೆಹುಲ್ ಚೋಕ್ಸಿಯ ಹಸ್ತಾಂತರ ಪ್ರಕ್ರಿಯೆಗಳು ಬೆಲ್ಜಿಯಂ ನ್ಯಾಯಾಲಯದಲ್ಲಿ ನಡೆಯುತ್ತಿದ್ದರೆ, ನೀರವ್ ಮೋದಿ ಇನ್ನೂ ಲಂಡನ್ ಜೈಲಿನಲ್ಲಿದ್ದಾರೆ.

ಬ್ರಿಟನ್‌ನ ಉಚ್ಚ ನ್ಯಾಯಾಲಯ ಮತ್ತು ಅಲ್ಲಿನ ಗೃಹ ಸಚಿವಾಲಯ ಈಗಾಗಲೇ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಕಾನೂನುಬದ್ಧವಾಗಿ ಅನುಮೋದನೆ ನೀಡಿವೆ. ಆದರೆ, ನೀರವ್ ಮೋದಿ ತನ್ನ ಮಾನಸಿಕ ಆರೋಗ್ಯದ ಸ್ಥಿತಿ ಸರಿ ಇಲ್ಲ. ಭಾರತದ ಜೈಲುಗಳ ಸ್ಥಿತಿ ಉತ್ತಮವಾಗಿಲ್ಲ ಎಂಬ ಕಾರಣಗಳನ್ನು ನೀಡಿ ಹಸ್ತಾಂತರ ಪ್ರಕ್ರಿಯೆಯ ವಿರುದ್ಧ ಬ್ರಿಟನ್‌ನ ಸುಪ್ರೀಂ ಕೋರ್ಟ್ ಹಾಗೂ ಯುರೋಪಿಯನ್ ಮಾನವ ಹಕ್ಕುಗಳ ನ್ಯಾಯಾಲಯದಲ್ಲಿ (ECHR) ಕಾನೂನು ಹೋರಾಟ ಮತ್ತು ಮೇಲ್ಮನವಿಗಳನ್ನು ಮುಂದುವರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version