SSC Recruitment 2026: 3,000ರಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ; ಪರೀಕ್ಷಾ ಮಾದರಿಯಲ್ಲಿ ಮಹತ್ವದ ಬದಲಾವಣೆ! – Kannada News | SSC Phase 14 Recruitment 2026: 3003 Vacancies, New Exam Pattern and Dates

ಸಿಬ್ಬಂದಿ ಆಯ್ಕೆ ಆಯೋಗವು (SSC) ತನ್ನ ಸೆಲೆಕ್ಷನ್ ಪೋಸ್ಟ್ ಹಂತ-14 ರ ಅಡಿಯಲ್ಲಿ ವಿವಿಧ ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 3,003 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯು 10ನೇ ತರಗತಿ, 12ನೇ ತರಗತಿ ಹಾಗೂ ಪದವಿ ಪಡೆದ ಅಭ್ಯರ್ಥಿಗಳಿಗೆ ಸಮಾನವಾದ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದು, ಅವರ ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 4 ಕೊನೆಯ ದಿನಾಂಕವಾಗಿದ್ದು, ಅರ್ಜಿ ಶುಲ್ಕ ಪಾವತಿಸಲು ಮೇ 5 ರವರೆಗೆ ಕಾಲಾವಕಾಶ ನೀಡಲಾಗಿದೆ. ಅರ್ಜಿಯಲ್ಲಿ ತಪ್ಪುಗಳಿದ್ದಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳಲು ಮೇ 11 ರಿಂದ 13 ರವರೆಗೆ ತಿದ್ದುಪಡಿ ವಿಂಡೋ ತೆರೆದಿರುತ್ತದೆ.

ಒಟ್ಟು ಹುದ್ದೆಗಳಲ್ಲಿ ವಿವಿಧ ವರ್ಗಗಳಿಗೆ ಮೀಸಲಾತಿಯನ್ನು ಒದಗಿಸಲಾಗಿದ್ದು, ಸಾಮಾನ್ಯ ವರ್ಗಕ್ಕೆ 1,534, ಒಬಿಸಿ ವರ್ಗಕ್ಕೆ 667, ಎಸ್‌ಸಿ ವರ್ಗಕ್ಕೆ 346, ಇಡಬ್ಲ್ಯೂಎಸ್ ವರ್ಗಕ್ಕೆ 271 ಮತ್ತು ಎಸ್‌ಟಿ ವರ್ಗಕ್ಕೆ 185 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 18 ವರ್ಷಗಳಾಗಿದ್ದು, ಹುದ್ದೆಗಳ ಸ್ವರೂಪಕ್ಕೆ ಅನುಗುಣವಾಗಿ ಗರಿಷ್ಠ ವಯೋಮಿತಿ 25 ರಿಂದ 30 ವರ್ಷಗಳವರೆಗೆ ಇರುತ್ತದೆ. ಕಂಪ್ಯೂಟರ್ ಆಧಾರಿತ ಈ ಪರೀಕ್ಷೆಯು ಜೂನ್ ತಿಂಗಳಿನಲ್ಲಿ ನಡೆಯುವ ನಿರೀಕ್ಷೆಯಿದೆ ಎಂದು ಆಯೋಗವು ತಿಳಿಸಿದೆ.

ಈ ಬಾರಿ ಪರೀಕ್ಷಾ ಮಾದರಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದ್ದು, ಪರೀಕ್ಷೆಯನ್ನು ಹೆಚ್ಚು ವ್ಯವಸ್ಥಿತಗೊಳಿಸಲು ‘ವಿಭಾಗೀಯ ಸಮಯ’ವನ್ನು (Sectional Timing) ಪರಿಚಯಿಸಲಾಗಿದೆ. ಒಟ್ಟು 200 ಅಂಕಗಳ ಪರೀಕ್ಷೆಯು 100 ಪ್ರಶ್ನೆಗಳನ್ನು ಒಳಗೊಂಡಿರಲಿದ್ದು, ಅಭ್ಯರ್ಥಿಗಳಿಗೆ 60 ನಿಮಿಷಗಳ ಕಾಲಾವಕಾಶವಿರುತ್ತದೆ. ಇದರಲ್ಲಿ ತಾರ್ಕಿಕತೆ, ಸಾಮಾನ್ಯ ಜ್ಞಾನ, ಗಣಿತ ಮತ್ತು ಇಂಗ್ಲಿಷ್ ಎಂಬ ನಾಲ್ಕು ವಿಭಾಗಗಳಿದ್ದು, ಪ್ರತಿ ವಿಭಾಗಕ್ಕೆ ತಲಾ 15 ನಿಮಿಷಗಳನ್ನು ಕಡ್ಡಾಯವಾಗಿ ಮೀಸಲಿಡಲಾಗಿದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ನೇಮಕಾತಿ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಎಸ್‌ಎಸ್‌ಸಿ ‘ಸ್ಲೈಡಿಂಗ್ ವ್ಯವಸ್ಥೆ’ಯನ್ನು ಜಾರಿಗೆ ತಂದಿದೆ. ಇದು ಅಭ್ಯರ್ಥಿಗಳಿಗೆ ತಮ್ಮ ಮೆರಿಟ್ ಆಧಾರದ ಮೇಲೆ ಉತ್ತಮ ಆಯ್ಕೆಯನ್ನು ಆರಿಸಿಕೊಳ್ಳಲು ಪೂರಕವಾಗಿದೆ. ಇತ್ತೀಚಿನ ಗುರುತಿನ ಪರಿಶೀಲನಾ ಪ್ರಕ್ರಿಯೆಯ ಸಮಯದಲ್ಲಿ ಸುಮಾರು 300 ಅಭ್ಯರ್ಥಿಗಳ ಪೈಕಿ 220 ಮಂದಿ ತಮ್ಮ ಹುದ್ದೆಗಳನ್ನು ಅಂತಿಮಗೊಳಿಸಿದ್ದಾರೆ. ಉಳಿದ 80 ಅಭ್ಯರ್ಥಿಗಳು ಉತ್ತಮ ಅವಕಾಶಗಳಿಗಾಗಿ ಕಾಯುವ ಆಯ್ಕೆಯನ್ನು ಮಾಡಿಕೊಂಡಿದ್ದು, ಇಡೀ ಪ್ರಕ್ರಿಯೆಯು ಹೆಚ್ಚು ಪಾರದರ್ಶಕವಾಗಿ ನಡೆಯುತ್ತಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು – Kannada News | Calendar Kannada movie actress talks about movie

‘ಕ್ಯಾಲೆಂಡರ್’ (Calender) ಹೆಸರಿನ ಕನ್ನಡ ಸಿನಿಮಾ ಬರುತ್ತಿದೆ. ಸಿನಿಮಾದ ಹೆಸರಿನಂತೆಯೇ ಸಿನಿಮಾದ ಕತೆಯೂ ಸಹ ಬಹಳ ಭಿನ್ನವಾಗಿದೆ. ಸಿನಿಮಾನಲ್ಲಿ ಸುಷ್ಮಿತಾ ಮತ್ತು ನಿವಿಷ್ಕಾ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಟಿವಿ9 ಜೊತೆಗೆ ಮಾತನಾಡಿರುವ ಇಬ್ಬರೂ ನಟಿಯರು ಸಿನಿಮಾದ ಬಗ್ಗೆ, ತಮ್ಮ-ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದ್ದಾರೆ. ಸಿನಿಮಾದ ಕತೆಯ ಬಗ್ಗೆಯೂ ಸಣ್ಣ ಸುಳಿವುಗಳನ್ನು ಬಿಟ್ಟುಕೊಟ್ಟಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

CSK vs KKR IPL 2026 Live Score: ಸೂಪರ್ ಕಿಂಗ್ಸ್​ಗೆ ನೈಟ್ ರೈಡರ್ಸ್ ಸವಾಲು

ಇಂಡಿಯನ್ ಪ್ರೀಮಿಯರ್ ಲೀಗ್​ನ 21ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಉಭಯ ತಂಡಗಳು ಆರಂಭಿಕ ಪಂದ್ಯಗಳಲ್ಲಿ ಹೀನಾಯ ಪ್ರದರ್ಶನ ನೀಡಿದೆ. ಇತ್ತ ಸಿಎಸ್​ಕೆ ತಂಡವು ಈವರೆಗೆ ಆಡಿದ 4 ಮ್ಯಾಚ್​ಗಳಲ್ಲಿ ಗೆದ್ದಿರುವುದು ಒಂದು ಪಂದ್ಯ ಮಾತ್ರ. ಅತ್ತ ಕೆಕೆಆರ್ ತಂಡವು ಇನ್ನೂ ಸಹ ಗೆಲುವಿನ ಖಾತೆ ತೆರೆದಿಲ್ಲ. ಹೀಗಾಗಿ ಸಿಎಸ್​ಕೆ ತಂಡವು ಗೆಲುವಿನ ಲಯ ಮುಂದುವರೆಸಬೇಕಿದ್ದರೆ ಇಂದಿನ ಪಂದ್ಯದಲ್ಲಿ ಜಯ ಸಾಧಿಸಬೇಕು. ಅತ್ತ ಕೆಕೆಆರ್​ ತಂಡವು ಈ ಪಂದ್ಯದ ಮೂಲಕ ಗೆಲುವಿನ ಖಾತೆ ತೆರೆಯುವ ಇರಾದೆಯಲ್ಲಿದೆ.

ಇನ್ನು ಉಭಯ ತಂಡಗಳು ಐಪಿಎಲ್​ನಲ್ಲಿ ಈವರೆಗೆ 32 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಗೆದ್ದಿರುವುದು ಕೇವಲ 11 ಮ್ಯಾಚ್​ಗಳಲ್ಲಿ ಮಾತ್ರ. ಇನ್ನು ಒಂದು ಪಂದ್ಯವು ಕಾರಣಾಂತರಗಳಿಂದ ರದ್ದಾಗಿದ್ದವು. ಇದೀಗ ಬಲಿಷ್ಠತೆಯಲ್ಲಿ ಸಮಬಲ ಹೊಂದಿರುವುದರಿಂದ ಇಂದಿನ ಮ್ಯಾಚ್​ನಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಅಜಿಂಕ್ಯ ರಹಾನೆ (ನಾಯಕ), ಅಂಗ್​ಕ್ರಿಶ್ ರಘುವಂಶಿ, ಅನುಕುಲ್ ರಾಯ್, ಮನೀಶ್ ಪಾಂಡೆ, ರಮಣದೀಪ್ ಸಿಂಗ್, ರಿಂಕು ಸಿಂಗ್, ರೋವ್​ಮನ್ ಪೊವೆಲ್, ಸುನಿಲ್ ನರೈನ್, ಉಮ್ರಾನ್ ಮಲಿಕ್, ವೈಭವ್ ಅರೋರಾ, ವರುಣ್ ಚಕ್ರವರ್ತಿ, ಕ್ಯಾಮೆರೋನ್ ಗ್ರೀನ್, ಫಿನ್ ಅಲೆನ್, ಮಥೀಶ ಪತಿರಾಣ, ತೇಜಸ್ವಿ ಸಿಂಗ್, ಕಾರ್ತಿಕ್ ತ್ಯಾಗಿ, ಪ್ರಶಾಂತ್ ಸೋಲಂಕಿ, ರಾಹುಲ್ ತ್ರಿಪಾಠಿ, ಟಿಮ್ ಸೈಫರ್ಟ್, ಬ್ಲೆಸ್ಸಿಂಗ್ ಮುಝರಬಾನಿ, ಸಾರ್ಥಕ್ ರಂಜನ್, ದಕ್ಷ್ ಕಮ್ರಾ, ರಚಿನ್ ರವೀಂದ್ರ, ಆಕಾಶ್ ದೀಪ್.

ಚೆನ್ನೈ ಸೂಪರ್ ಕಿಂಗ್ಸ್ ತಂಡ: ರುತುರಾಜ್ ಗಾಯಕ್‌ವಾಡ್ (ನಾಯಕ), ಆಯುಷ್ ಮ್ಹಾತ್ರೆ, ಎಂಎಸ್ ಧೋನಿ, ಸಂಜು ಸ್ಯಾಮ್ಸನ್, ಡೆವಾಲ್ಡ್ ಬ್ರೆವಿಸ್, ಉರ್ವಿಲ್ ಪಟೇಲ್, ಶಿವಂ ದುಬೆ, ಜೇಮಿ ಓವರ್‌ಟನ್, ರಾಮಕೃಷ್ಣ ಘೋಷ್, ನೂರ್ ಅಹ್ಮದ್, ಖಲೀಲ್ ಅಹ್ಮದ್, ಅನ್ಶುಲ್ ಕಂಬೋಜ್, ಗುರ್ಜಪ್ನೀತ್ ಸಿಂಗ್, ಶ್ರೇಯಸ್ ಗೋಪಾಲ್, ಮುಖೇಶ್ ಚೌಧರಿ, ನಾಥನ್ ಎಲ್ಲಿಸ್, ಅಕೇಲ್ ಹೊಸೈನ್, ಪ್ರಶಾಂತ್ ವೀರ್, ಕಾರ್ತಿಕ್ ಶರ್ಮಾ, ಮ್ಯಾಥ್ಯೂ ಶಾರ್ಟ್, ಅಮನ್ ಖಾನ್, ಸರ್ಫರಾಝ್ ಖಾನ್, ಮ್ಯಾಟ್ ಹೆನ್ರಿ, ರಾಹುಲ್ ಚಹರ್, ಝಾಕ್ ಫೌಲ್ಕ್ಸ್.

 

Source link

ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು: 6 ಸುತ್ತು ಫೈರಿಂಗ್ ಮಾಡಿ ಗ್ರಾ.ಪಂ ಸದಸ್ಯನ ಹತ್ಯೆ – Kannada News | Vijayapura: Gram Panchayat Member Brutally Murdered with 6 Rounds Fired and Stones

ವಿಜಯಪುರ, ಏಪ್ರಿಲ್​ 14: ನಗರದಲ್ಲಿ ಮತ್ತೆ ಗುಂಡಿನ ಸದ್ದು (Gun Fire) ಕೇಳಿ ಬಂದಿದೆ. 6 ಸುತ್ತು ಗುಂಡು ಹಾರಿಸಿದ್ದಲ್ಲದೆ ಕಲ್ಲು ಎತ್ತಿಹಾಕಿ ಗ್ರಾಮ ಪಂಚಾಯಿತಿ ಸದಸ್ಯನನ್ನು ದುರುಳರು ಭೀಕರವಾಗಿ ಹತ್ಯೆ ಮಾಡಿರುವಂತಹ ಘಟನೆ ವಿಜಯಪುರದ ಹೊರಭಾಗದ ಅಲಿಯಾಬಾದ್ ಬಳಿ ನಡೆದಿದೆ. ತಾಂಗರುನ ದೊಡ್ಡಿ ನಿವಾಸಿ ರಾಜು ಹತ್ಯೆಗೊಳಗಾದ ವ್ಯಕ್ತಿ. ಸದ್ಯ ಸ್ಥಳಕ್ಕೆ ವಿಜಯಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ಮಾಹಿತಿ ಅಪ್​ಡೇಟ್​ ಆಗಲಿದೆ.

Source link

TTD New Darshan Rules: ಬೇಸಿಗೆಯಲ್ಲಿ ತಿರುಪತಿಗೆ ಹೋಗುವ ಪ್ಲಾನ್ ಇದ್ಯಾ? ಹಾಗಿದ್ರೆ ಈ ಹೊಸ ನಿಯಮ ತಿಳಿದುಕೊಳ್ಳಿ – Kannada News | TTD New Darshan Rules for Summer: Prioritizing Ordinary Devotees at Tirumala

ತಿರುಮಲ: ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಶ್ರೀವಾರಿ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡಲು ತಿರುಮಲ ತಿರುಪತಿ ದೇವಸ್ಥಾನಂ (TTD) ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಇರುವುದರಿಂದ ಪೋಷಕರು ಮಕ್ಕಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಜನದಟ್ಟಣೆಯನ್ನು ನಿಯಂತ್ರಿಸಲು ದರ್ಶನ ನೀತಿಯಲ್ಲಿ ಬದಲಾವಣೆ ತರಲಾಗುತ್ತಿದೆ.

ಮೇ 1 ರಿಂದ ಎಸ್‌ಎಸ್‌ಡಿ (SSD) ಟೋಕನ್‌ ಸ್ಥಗಿತ?

ಪ್ರಸ್ತುತ ಜಾರಿಯಲ್ಲಿರುವ ಸ್ಲಾಟೆಡ್ ಸರ್ವ ದರ್ಶನ (SSD) ಟೋಕನ್‌ಗಳ ಮೂಲಕ ದರ್ಶನ ಪಡೆಯಲು ಭಕ್ತರು ಸುಮಾರು 23 ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು, ಮೇ 1 ರಿಂದ ಎಸ್‌ಎಸ್‌ಡಿ ಟೋಕನ್‌ಗಳು ಹಾಗೂ ವಿಐಪಿ ಬ್ರೇಕ್ ದರ್ಶನಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲು ಟಿಟಿಡಿ ಯೋಜಿಸುತ್ತಿದೆ. ಇದರಿಂದಾಗಿ ಸಾಮಾನ್ಯ ಭಕ್ತರು 8 ರಿಂದ 12 ಗಂಟೆಗಳ ಒಳಗೆ ದರ್ಶನ ಪಡೆಯಲು ಸಾಧ್ಯವಾಗಲಿದೆ.

ವೈಕುಂಠ ಏಕಾದಶಿ ಮಾದರಿಯ ಹೊಸ ನೀತಿ:

ಸಾಮಾನ್ಯವಾಗಿ ಪ್ರತಿದಿನ ವಿಐಪಿ ಬ್ರೇಕ್ ದರ್ಶನಗಳಿಗಾಗಿಯೇ 2 ರಿಂದ 3 ಗಂಟೆಗಳ ಸಮಯ ವ್ಯಯವಾಗುತ್ತಿದೆ. ಒಂದು ವೇಳೆ ಈ ವಿಐಪಿ ದರ್ಶನಗಳನ್ನು ರದ್ದುಗೊಳಿಸಿದರೆ, ಆ ಸಮಯದಲ್ಲಿ ಹೆಚ್ಚುವರಿಯಾಗಿ 15 ಸಾವಿರ ಸಾಮಾನ್ಯ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಬಹುದು ಎಂಬುದು ಅಧಿಕಾರಿಗಳ ಲೆಕ್ಕಾಚಾರ. ವೈಕುಂಠ ಏಕಾದಶಿಯ ಸಂದರ್ಭದಲ್ಲಿ ಅನುಸರಿಸುವ ‘ಏಕ ಮಾದರಿ ದರ್ಶನ’ ವ್ಯವಸ್ಥೆಯನ್ನು ಮೇ, ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಜಾರಿಗೆ ತರಲು ಸಿದ್ಧತೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ದರ್ಶನದ ವೇಗ ಹೆಚ್ಚಿಸಲು ಟಿಟಿಡಿ ಕ್ರಮಗಳು:

ಕಳೆದ ಮೂರು ವರ್ಷಗಳ ಅಂಕಿಅಂಶಗಳ ಪ್ರಕಾರ, ಬೇಸಿಗೆಯ ಪ್ರತಿ ತಿಂಗಳು ಸುಮಾರು 23 ಲಕ್ಷ ಭಕ್ತರು ತಿರುಮಲಕ್ಕೆ ಭೇಟಿ ನೀಡುತ್ತಾರೆ. ಈ ಭಾರೀ ದಟ್ಟಣೆಯನ್ನು ನಿರ್ವಹಿಸಲು ಟಿಟಿಡಿ ಈ ಕೆಳಗಿನ ಕ್ರಮಗಳನ್ನು ಪರಿಗಣಿಸುತ್ತಿದೆ. ವಿವಿಧ ವರ್ಗದ ದರ್ಶನಗಳನ್ನು ಬದಿಗಿಟ್ಟು ಎಲ್ಲರಿಗೂ ಒಂದೇ ಮಾದರಿಯ ದರ್ಶನ ವ್ಯವಸ್ಥೆ ಕಲ್ಪಿಸುವುದು. ವಿಐಪಿ ಪ್ರೋಟೋಕಾಲ್ ದರ್ಶನಗಳನ್ನು ಕಡಿತಗೊಳಿಸುವ ಮೂಲಕ ದರ್ಶನದ ವೇಗವನ್ನು ಹೆಚ್ಚಿಸುವುದು. ಹೊಸ ನೀತಿಯಿಂದ ದಿನಕ್ಕೆ ಸರಿಸುಮಾರು 80 ಸಾವಿರ ಜನರಿಗೆ ಸುಲಭವಾಗಿ ದರ್ಶನ ಒದಗಿಸಬಹುದು ಎಂದು ಅಂದಾಜಿಸಲಾಗಿದೆ.

ತಿರುಮಲದಲ್ಲಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಸುಸ್ತಾಗುವ ಸಾಮಾನ್ಯ ಭಕ್ತರಿಗೆ ನೆಮ್ಮದಿ ನೀಡಲು ಟಿಟಿಡಿ ಈ ಕ್ರಾಂತಿಕಾರಿ ಹೆಜ್ಜೆ ಇಡುತ್ತಿದೆ. ಬೇಸಿಗೆಯಲ್ಲಿ ತಿರುಪತಿಗೆ ಹೋಗುವ ಪ್ಲಾನ್ ಇದ್ದರೆ, ಹೊರಡುವ ಮುನ್ನ ಟಿಟಿಡಿಯ ಅಧಿಕೃತ ಪ್ರಕಟಣೆಗಳನ್ನು ಗಮನಿಸುವುದು ಸೂಕ್ತ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆರೂವರೆ ವರ್ಷದಲ್ಲಿ 4 ಪಟ್ಟು ಲಾಭ ಕೊಟ್ಟ ಗೋಲ್ಡ್ ಬಾಂಡ್; ಒಂದು ಲಕ್ಷಕ್ಕೆ 4 ಲಕ್ಷ ರಿಟರ್ನ್ಸ್ – Kannada News | SGB, Sovereign Gold Bond 2019 April 15th bonds premature redemption, investors to get huge profit

ಸಾವರಿನ್ ಗೋಲ್ಡ್ ಬಾಂಡ್Image Credit source: Shutterstock

ನವದೆಹಲಿ, ಏಪ್ರಿಲ್ 14: ಬಹಳ ಜನಪ್ರಿಯವಾಗುತ್ತಿದ್ದ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್​ನ 2019-20ರ ಸರಣಿ-5ರ ಗೋಲ್ಡ್ ಬಾಂಡ್​ಗಳನ್ನು (SGB Series-V) ನಾಳೆ (2026ರ ಏಪ್ರಿಲ್ 15) ಪ್ರೀಮೆಚ್ಯೂರ್ ಆಗಿ ರಿಡೀಮ್ ಮಾಡಿಕೊಳ್ಳಲು ಅವಕಾಶ ಕೊಡಲಾಗಿದೆ. ಆರ್​ಬಿಐ (RBI) ಈ ಬಾಂಡ್​ಗಳನ್ನು 2019ರ ಏಪ್ರಿಲ್ 15ರಂದು ವಿತರಣೆ ಮಾಡಿತ್ತು. ಎಂಟು ವರ್ಷಕ್ಕೆ, ಅಂದರೆ 2027ರ ಏಪ್ರಿಲ್ 15ಕ್ಕೆ ಇದರ ಮೆಚ್ಯೂರಿಟಿ ಡೇಟ್ ಇರುವುದು. ಈಗ ಪ್ರೀಮೆಚ್ಯೂರ್ ಆಗಿ ರಿಡೀಮ್ ಮಾಡಿಕೊಳ್ಳಬೇಕೆನ್ನುವವರಿಗೆ ಆಫರ್ ಕೊಡಲಾಗಿದೆ.

ಎಸ್​ಜಿಬಿ ಬಾಂಡ್ ಮೌಲ್ಯ 3,738 ರೂನಿಂದ 15,009 ರೂಗೆ

2019ರ ಏಪ್ರಿಲ್ 15ರಂದು ವಿತರಣೆ ಮಾಡಲಾದ ಸೀರೀಸ್-5ರ ಎಸ್​ಜಿಬಿ ಬಾಂಡ್​ನ ಮೌಲ್ಯ ಒಂದು ಗ್ರಾಮ್​ಗೆ 3,738 ರೂ ಇತ್ತು. ಈಗ 2026ರ ಏಪ್ರಿಲ್ 15ರಂದಿನ ಪ್ರೀಮೆಚ್ಯೂರ್ ರಿಡೆಂಪ್ಷನ್ ಆಫರ್​ನಲ್ಲಿ ಒಂದು ಗ್ರಾಮ್ ಮೌಲ್ಯ 15,009 ರೂ ಎಂದು ನಿಗದಿ ಮಾಡಲಾಗಿದೆ. ಈ ಆರೂವರೆ ವರ್ಷದಲ್ಲಿ ಬಾಂಡ್ ಮೌಲ್ಯ ಶೇ. 302ರಷ್ಟು ಹೆಚ್ಚಿದೆ.

ಒಂದು ಲಕ್ಷ ರೂ ಹೂಡಿಕೆಗೆ 4 ಲಕ್ಷ ರಿಟರ್ನ್ಸ್

2019ರಿಂದ 2026ರ ನಡುವೆ ಎಸ್​ಜಿಬಿ ಬಾಂಡ್ ಒಂದು ಯುನಿಟ್​ಗೆ 3,738 ರೂನಿಂದ 15,009 ರೂ ಆಗಿದೆ. ಅಂದರೆ ಸುಮಾರು 11,271 ರೂಗಳಷ್ಟು ಏರಿದೆ. ಈ ಸರಣಿಯ ಬಾಂಡ್​ನಲ್ಲಿ ನೀವು 1 ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಪ್ರೀಮೆಚ್ಯೂರ್ ರಿಡೆಂಪ್ಷನ್​ನಲ್ಲಿ ಅದರ ಮೌಲ್ಯ 4.02 ಲಕ್ಷ ರೂ ಆಗಿರುತ್ತಿತ್ತು. ಹತ್ತು ಲಕ್ಷ ರೂ ಹೂಡಿಕೆ ಮಾಡಿದ್ದರೆ 40 ಲಕ್ಷ ರೂ ನಿಮ್ಮದಾಗಿರುತ್ತಿತ್ತು.

ಇದನ್ನೂ ಓದಿ: ಕಿಸಾನ್ ವಿಕಾಸ್ ಪತ್ರ; ಹಣ ಡಬಲ್ ಮಾಡುವ ಪೋಸ್ಟ್ ಆಫೀಸ್ ಸ್ಕೀಮ್

ಬಡ್ಡಿಯನ್ನೂ ಪರಿಗಣಿಸಿದರೆ ಇನ್ನೂ ಹೆಚ್ಚು ಲಾಭ

ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್​ನ ಇನ್ನೊಂದು ವಿಶೇಷತೆ ಎಂದರೆ, ಅದು ನೀಡುವ ಬಡ್ಡಿ ಆದಾಯ. ಈ ಸ್ಕೀಮ್​ನಲ್ಲಿ ನೀವು ಮಾಡಿದ ಹೂಡಿಕೆಗೆ ಶೇ. 2.5ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ. ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ ವರ್ಷಕ್ಕೆ 2,500 ರೂ ಹಣವು ಹೆಚ್ಚುವರಿಯಾಗಿ ಸಿಗುತ್ತಿರುತ್ತದೆ. ಇದು ನಿಮ್ಮ ಬ್ಯಾಂಕ್ ಅಕೌಂಟ್​ಗೆ ನೇರವಾಗಿ ಜಮೆಯಾಗುತ್ತದೆ.

ಏನಿದು ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್?

ಭೌತಿಕ ಚಿನ್ನ ಖರೀದಿಸುವುದು ಬೇಡ, ಆದರೆ, ಚಿನ್ನದ ಮೇಲೆ ಹೂಡಿಕೆ ಮಾಡಬೇಕೆನ್ನುವವರಿಗೆ ಗೋಲ್ಡ್ ಇಟಿಎಫ್, ಗೋಲ್ಡ್ ಮ್ಯೂಚುವಲ್ ಫಂಡ್, ಡಿಜಿಟಲ್ ಗೋಲ್ಡ್, ಸಾವರಿನ್ ಗೋಲ್ಡ್ ಬಾಂಡ್ ಇತ್ಯಾದಿ ಮಾರ್ಗಗಳಿವೆ. ಇದರಲ್ಲಿ ಎಸ್​ಜಿಬಿ ಅಥವಾ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ ಬಹಳ ಜನಪ್ರಿಯವಾದುದು. ಎಂಟು ವರ್ಷದ ಈ ಸ್ಕೀಮ್​ನಲ್ಲಿ ಒಬ್ಬ ವ್ಯಕ್ತಿ ಒಂದು ಗ್ರಾಮ್​ನಿಂದ ಹಿಡಿದು 4 ಕಿಲೋ ಚಿನ್ನದವರೆಗೂ ಹೂಡಿಕೆ ಮಾಡಬಹುದು.

ಇದನ್ನೂ ಓದಿ: ಕೇವಲ 2,000 ರೂ ಹೂಡಿಕೆಯಲ್ಲಿ ಕೋಟಿ ರೂ ಗಳಿಸಬೇಕಾ? ಎಸ್​ಐಪಿ ಜೊತೆ ಸ್ಟೆಪಪ್ ತಂತ್ರ ಅನುಸರಿಸಿ

ಬಾಂಡ್ ಬಿಡುಗಡೆಗೆ ಕೆಲ ದಿನಗಳ ಹಿಂದಿನ ಸರಾಸರಿ ಮಾರುಕಟ್ಟೆ ಬೆಲೆಯಾಧರಿಸಿ ಎಸ್​ಜಿಬಿಯ ಒಂದು ಯೂನಿಟ್ ಚಿನ್ನ ಬೆಲೆ ನಿಗದಿ ಮಾಡಲಾಗುತ್ತದೆ. ಮೆಚ್ಯೂರ್ ಆಗುವಾಗಲೂ ಹೀಗೆ ಸರಾಸರಿಯಾಗಿ ದರ ನಿಗದಿ ಮಾಡಲಾಗುತ್ತದೆ. ಅಷ್ಟೂ ಲಾಭವು ಹೂಡಿಕೆದಾರರ ಜೇಬು ಸೇರುತ್ತದೆ.

ಸದ್ಯ ಈ ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಚಾಲ್ತಿಯಲ್ಲಿ ಇಲ್ಲ. ಅಂದರೆ, ಕಳೆದ ಕೆಲ ತಿಂಗಳುಗಳಿಂದ ಆರ್​ಬಿಐ ಯಾವುದೇ ಹೊಸ ಬಾಂಡ್ ಸರಣಿಗಳನ್ನು ಬಿಡುಗಡೆ ಮಾಡಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ – Kannada News | Action on zameer ahmed khan Like naseer ahmed And Jabbar Says BJP Leader MP Renukacharya

ದಾವಣಗೆರೆ, (ಏಪ್ರಿಲ್ 14): ದಾವಣಗೆರೆ ದಂಗಲ್ ತೀವ್ರ ಸ್ವರೂಪ ಪಡೆದುಕೊಂಡಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡದ ಕಾಂಗ್ರೆಸ್ ಮುಸ್ಲಿಂ ನಾಯಕರಿಗೆ ಹೈಕಮಾಂಡ್ ಬಿಸಿ ಮುಟ್ಟಿಸಿದೆ. ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಪರಿಷತ್ ಸದಸ್ಯ ಜಬ್ಬರ್ ಅವರಿಂದ ರಾಜೀನಾಮೆ ಪಡೆದುಕೊಂಡಿದೆ. ಇನ್ನು ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದ ನಸೀರ್ ಅಹ್ಮದ್​ ಅವರನ್ನ ಸಹ ತಲೆದಂಡ ಮಾಡಲಾಗಿದೆ. ಇದೀಗ ಜಮೀರ್ ಅಹಮ್ಮದ್ ಖಾನ್ ಸಚಿವ ಸ್ಥಾನಕ್ಕೆ ಕುತ್ತು ಬಂದಿದ್ದು, ಈ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಜಮೀರ್ ರಹಸ್ಯ ಮಾತುಕತೆ ನಡೆಸಿದ್ದು, ಯಾವಾಗ ತಲೆದಂಡವಾಗುತ್ತೋ ಗೊತ್ತಿಲ್ಲ.

ಈ ಬೆಳವಣಿಗೆಗಳ ನಡುವೆ ಬಿಜೆಪಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಮಾತನಾಡಿ, ಜಮೀರ್‌ ಗೂ ಇದೇ ಪರಿಸ್ಥಿತಿ. ಇವತ್ತು ರಾತ್ರಿಯೇ ತಲೆದಂಡವಾಗುತ್ತೆ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ. ಇನ್ನು ಇದೇ ವೇಳೆ ದಾವಣಗೆರೆ ದಕ್ಷಿಣ ಕ್ಷೇತ್ರದ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Source link

Optical Illusion: ನಿಮ್ಮ ಕಣ್ಣಿಗೊಂದು ಸವಾಲ್; ಈ ಚಿತ್ರದಲ್ಲಿ ಅಡಗಿರುವ ಪಕ್ಷಿಯನ್ನು ಕಂಡುಹಿಡಿಯಬಲ್ಲಿರಾ – Kannada News | Optical Illusion: Find the hidden bird in this picture within the 15 seconds

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಇತ್ತೀಚೆಗಿನ ದಿನಗಳಲ್ಲಿ ದೃಷ್ಟಿ ಸಾಮರ್ಥ್ಯ ಮತ್ತು ಮೆದುಳನ್ನು ಚುರುಕುಗೊಳಿಸುವ ಆಪ್ಟಿಕಲ್ ಇಲ್ಯೂಷನ್ (Optical Illusion) ಫೋಟೋಗಳು ವೈರಲ್​ ಆಗುತ್ತಿರುತ್ತವೆ. ಕೆಲವು ಚಿತ್ರಗಳು ನಮ್ಮ ಕಣ್ಣಿನ ಸೂಕ್ಷ್ಮತೆ ಮತ್ತು ಯೋಚನಾ ಸಾಮರ್ಥ್ಯವನ್ನು ಪರೀಕ್ಷಿಸಲು ಸಹಕಾರಿಯಾಗಿದೆ. ಆದರೆ ಇದೀಗ ನಿಮ್ಮ ಬುದ್ಧಿವಂತಿಕೆಗೆ ಸವಾಲೊಡ್ದುವ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದೆ. ಈ ಚಿತ್ರದಲ್ಲಿರುವ ಪಕ್ಷಿಯನ್ನು ಪತ್ತೆ ಹಚ್ಚುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಲು ನೀವು ರೆಡಿ ಇದ್ದೀರಾ.

ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವು ಗೊಂದಲಕ್ಕೀಡು ಮಾಡುವುದು ಸಹಜ. ಮೊದಲಿಗೆ, ಈ ಒಗಟು ಭೇದಿಸುವುದು ಸುಲಭ ಎಂದು ನಿಮಗೆ ಅನಿಸಬಹುದು. ಆದರೆ ಈ ಚಿತ್ರ ನೋಡಿದಾಗ ನಿಮ್ಮ ಕಣ್ಣಿಗೆ ಬೀಳುವುದೇ ಎಲೆಗಳ ನಡುವೆ ಇರುವ ಬೆಕ್ಕು. ಇಲ್ಲಿ ಹೂವು ಹಾಗೂ ಹಚ್ಚ ಹಸಿರಿನ ಎಲೆಗಳು ಹಾಗೂ ಹಲ್ಲು ಇದೆ. ಇದೆಲ್ಲದರ ನಡುವೆ ಪಕ್ಷಿಯೂ ಅಡಗಿದೆ. ಇಲ್ಲಿರುವ ಸವಾಲು ಪಕ್ಷಿ ಎಲ್ಲಿದೆ ಎಂಬುದನ್ನು ಕಂಡುಹಿಡಿಯುವುದು. ನೀವು 15 ಸೆಕೆಂಡುಗಳಲ್ಲಿ ಪಕ್ಷಿಯನ್ನು ಹುಡುಕಲು ಸಾಧ್ಯವೇ ಎಂದು ನೋಡಿ. ನೀವು ಈ ಒಗಟು ಸಿದ್ದವಿದ್ದೀರಾ ಅಂತಾದ್ರೆ ಈ ಚಿತ್ರದತ್ತ ಒಮ್ಮೆ ಕಣ್ಣಾಯಿಸಿ.

ಇದನ್ನೂ ಓದಿ: ನಿಮ್ಮ ಕಣ್ಣು ಶಾರ್ಪ್ ಇದ್ರೆ ಈ ಚಿತ್ರದಲ್ಲಿರುವ ಹುಡುಗಿ ಮುಖವನ್ನು ಗುರುತಿಸಬಲ್ಲಿರಾ

ನಿಮ್ಮ ಕಣ್ಣಿಗೆ ಪಕ್ಷಿ ಕಂಡಿತೇ?

ಈ ಒಗಟನ್ನು ಬಿಡಿಸುವುದು ನಿಮಗೆ ಕಷ್ಟವಾಗಿರಬಹುದು. ಆದರೆ ನೀವು ಏಕಾಗ್ರತೆಯಿಂದ ಈ ಚಿತ್ರ ನೋಡಿದರೆ ಮಾತ್ರ ಇಲ್ಲಿರುವ ಪಕ್ಷಿ ಕಂಡು ಹಿಡಿಯಲು ಸಾಧ್ಯ. ಎಷ್ಟೇ ತಲೆ ಕೆಡಿಸಿಕೊಂಡರೂ ಈ ಒಗಟಿನ ಉತ್ತರವನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲವೇ. ಈ ಕೆಳಗಿನ ಚಿತ್ರ ನೋಡಿ ಪಕ್ಷಿ ಎಲ್ಲಿದೆ ಎಂದು ನಿಮ್ಮ ಕಣ್ಣಿಗೆ ಕಾಣಿಸುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೋಲಾರದಲ್ಲೊಂದು ವಿಚಿತ್ರ ಘಟನೆ: ಮನುಷ್ಯರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಣಿಗಳ ರಕ್ತ ಪರೀಕ್ಷೆ – Kannada News | Animal Blood Testing In kolar District Hospital, Doctor recommend Action Against Staff

ಕೋಲಾರ, (ಏಪ್ರಿಲ್ 14): ಜನರ ಜೀವ ರಕ್ಷಣೆಗೆಂದು ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಣಿಗಳ ರಕ್ತ ಪರೀಕ್ಷೆ (blood check) ನಡೆಸಿರುವ ಘಟನೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ (Kolar District Hospital) ನಡೆದಿದೆ. ಹೌದು…ಅಚ್ಚರಿ ಅನ್ನಿಸಿರೂ ಸತ್ಯ. ಹೌದು…ಕಳೆದ ಏಳೆಂಟು ತಿಂಗಳಿಂದ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಣಿಗಳ ರಕ್ತ ಪರೀಕ್ಷೆ ನಡೆಸಿರುವುದು ಬೆಳಕಿಗೆ ಬಂದಿದೆ. ಕಳೆದ ಏಳೆಂಟು ತಿಂಗಳಿಂದ ಕೋಲಾರ ಜಿಲ್ಲಾಸ್ಪತ್ರೆಯ ರಕ್ತ ಪರೀಕ್ಷಾ ಘಟಕದಲ್ಲಿ ನಾಯಿ ಹಾಗೂ ಬೆಕ್ಕಿನ ರಕ್ತ ಪರೀಕ್ಷೆ ನಡೆಸಿರುವುದು ಕಂಡುಬಂದಿದ್ದು, ರಾಷ್ಟ್ರೀಯ ಆರೋಗ್ಯ ಅಭಿಯಾನ ಎನ್​.ಹೆಚ್​.ಎಂ ಸಿಬ್ಬಂದಿ ರಾಘವೇಂದ್ರ ಎಂಬುವರು ಇಂಥ ಕೃತ್ಯ ಎಸಗಿರುವುದು ತಿಳಿದು ಬಂದಿದೆ. ಹೀಗಾಗಿ ರಾಘವೇಂದ್ರ ವಿರುದ್ದ ಕ್ರಮಕ್ಕೆ ಜಿಲ್ಲಾಶಸ್ತ್ರಚಿಕಿತ್ಸಕ ಡಾ.ಜಗದೀಶ್​ ಶಿಫಾರಸ್ಸು ಮಾಡಿದ್ದಾರೆ.

ಜಿಲ್ಲಾಸ್ಪತ್ರೆಯ ರಕ್ತ ಪರೀಕ್ಷಾ ಪ್ರಯೋಗಾಲಯದಲ್ಲಿನ ಯಂತ್ರಗಳಲ್ಲಿ ಪ್ರಾಣಿಗಳ ರಕ್ತವನ್ನು ಪರೀಕ್ಷೆಗೆ ಒಳಪಡಿಸಿರುವ ಕುರಿತು ಕೆಲವರು ಅನುಮಾನ ವ್ಯಕ್ತಪಡಿಸಿದ್ದರು. ಇಲ್ಲಿನ ಸಿಬ್ಬಂದಿ ಹಾಗೂ ಪ್ರಯೋಗಾಲಯದಲ್ಲಿ ಯಂತ್ರಗಳ ನಿರ್ವಹಣೆ ಮಾಡುವ ಕಂಪನಿಯವರಿಗೆ ಅನುಮಾನ ವ್ಯಕ್ತವಾಗಿತ್ತು. ಈ ಸಂಬಂಧ ರಕ್ತ ಪರೀಕ್ಷಾ ಪ್ರಯೋಗಾಲಯದಲ್ಲಿ ಕೆಲಸ ಮಾಡುವ ಕೆಲವು ಸಿಬ್ಬಂದಿ ಮೇಲಧಿಕಾರಿಗಳಿಗೆ ದೂರು ನಿಡಿದ್ದರು. ಈ ಬಗ್ಗೆ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಜಗದೀಶ್,​ ತನಿಖಾ ತಂಡವನ್ನು ರಚಿಸಿ ಪರಿಶೀಲನೆ ಮಾಡಿಸಿದಾಗ ಕಳೆದ ಏಳೆಂಟು ತಿಂಗಳಿಂದ ಇಲ್ಲಿನ ರಕ್ತ ಪರೀಕ್ಷಾ ಘಟಕದಲ್ಲಿ ನಾಯಿ ಹಾಗೂ ಬೆಕ್ಕಿನ ರಕ್ತಗಳ ಪರೀಕ್ಷೆ ನಡೆಸಿ ವರದಿ ಪಡೆದಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಕೋಲಾರದಲ್ಲಿ ಕಲಬೆರಕೆ ಹಾಲು: ವರದಿಯಲ್ಲಿ ಆಘಾತಕಾರಿ ಅಂಶ; ಬೆಚ್ಚಿಬಿದ್ದ ಜನ

ಇನ್ನು ರಕ್ತ ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಪ್ರಾಣಿಗಳ ರಕ್ತ ಪರೀಕ್ಷೆ ಹಾಗೂ ಮನುಷ್ಯರ ರಕ್ತ ಪರೀಕ್ಷೆಗೆ ಒಂದೇ ರೀತಿಯ ಯಂತ್ರಗಳನ್ನು ಬಳಸಲಾಗುತ್ತದೆ. ಆದರೆ ಒಂದೇ ಯಂತ್ರದಲ್ಲಿ ಪ್ರಾಣಿ ಹಾಗೂ ಮನುಷ್ಯನ ರಕ್ತ ಪರೀಕ್ಷೆ ಮಾಡಲಾಗುವುದಿಲ್ಲ. ಅದನ್ನು ಪ್ರತ್ಯೇಕವಾಗಿಯೇ ಮಾಡಬೇಕಾಗುತ್ತದೆ. ಹಾಗೆ ಮಾಡಿದರೆ ಯಂತ್ರಗಳಲ್ಲಿನ ಕೆಲವು ದೋಷಗಳು ಕಂಡು ಬರುತ್ತವೆ. ಜೊತೆಗೆ ಯಂತ್ರಗಳು ತಮ್ಮ ಗುಣಮಟ್ಟ ಕಳೆದುಕೊಂಡು ಸರಿಯಾದ ಪರೀಕ್ಷಾ ವರದಿಯನ್ನ ಪಡೆಯಲು ಕಷ್ಟವಾಗುತ್ತದೆ. ಅದಕ್ಕಾಗಿಯೇ ಪ್ರಾಣಿಗಳಿಗೆಂದೇ ಪಶು ಆರೋಗ್ಯ ಕೇಂದ್ರದಲ್ಲಿ ಪ್ರತ್ಯೇಕ ರಕ್ತ ಪರೀಕ್ಷಾ ಘಟಕಗಳಿರುತ್ತವೆ. ಆದರೆ ಇಲ್ಲಿನ ಸಿಬ್ಬಂದಿಗಳು ರಾತ್ರಿ ಪಾಳಯದಲ್ಲಿ ಹೀಗೆ ಪ್ರಾಣಿಗಳ ರಕ್ತ ತಂದು ಪರೀಕ್ಷೆ ನಡೆಸಿರುವ ಮೂಲಕ ಅಕ್ರಮ ಎಸಗಿದ್ದಾರೆ.

ಇನ್ನು ಆರೋಪ ಹೊತ್ತಿರುವ ರಾಘವೇಂದ್ರ ಅವರನ್ನು ಮಾತನಾಡಿಸಿದಾಗ ಕೆಲವೊಂದು ವರದಿಗಳನ್ನು ಪಡೆದಿದ್ದೇನೆ. ಆದರೆ ಇಲ್ಲಿ ರಕ್ತ ಪರೀಕ್ಷೆ ಮಾಡಿಲ್ಲ. ಬದಲಾಗಿ ಇಲ್ಲಿನ ಕೆಲವು ಸಿಬ್ಬಂದಿ ಒಳಜಗಳದಿಂದ ನನ್ನ ಮೇಲೆ ಆರೋಪ ಮಾಡಲಾಗಿದೆ. ತನ್ನನ್ನು ಕೆಲಸದಿಂದ ತೆಗೆದುಹಾಕಲು ಇಂಥ ಆರೋಪ ಮಾಡಿದ್ದಾರೆ ಎಂದು ತಮ್ಮ ಮೇಲಿನ ಆರೋಪವನ್ನ ತಳ್ಳಿ ಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 5:16 pm, Tue, 14 April 26

Source link

RCB vs LSG ಪಂದ್ಯದಿಂದ ವಿರಾಟ್ ಕೊಹ್ಲಿ ಔಟ್?

Source link

Exit mobile version