ಸಭೆ ಬಳಿಕ ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು – Kannada News | Congress High command Leaders Reacts about Karnataka Cabinet Expansion after Rahul Gandhi Meeting In delhi

ನವದೆಹಲಿ, (ಜುಲೈ 30): ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಅಂತಿಮ ಘಟ್ಟ ತಲುಪಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಇಂದು (ಜುಲೈ 30) ರಾಹುಲ್ ಗಾಂಧಿ ರಾಜ್ಯ ನಾಯಕರ ಜೊತೆ ಸಭೆ ನಡೆಸಿ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಸಿದ್ದಾರೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಬಿಕೆ ಹರಿಪ್ರಸಾದ್, ಕೆಸಿ ವೇಣುಗೋಪಾಲ್, ಸುರ್ಜೆವಾಲ ಹಾಗೂ ಮಲ್ಲಿಕಾರ್ಜುನ ಖರ್ಗೆ ಸಭೆಯಲ್ಲಿ ಭಾಗಿಯಾಗಿದ್ದು, ನೂತನ ಸಚಿವರ ಪಟ್ಟಿ ಬಗ್ಗೆ ಚರ್ಚಿಸಿದ್ದು, ಇದೀಗ ರಾಜ್ಯ ನಾಯಕರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಇನ್ನು ಸಭೆ ಬಳಿಕ ವೇಣುಗೋಪಾಲ್ ಹಾಗೂ ಸುರ್ಜೆವಾಲ ಏನು ಹೇಳಿದ್ದಾರೆ ಎನ್ನುವುದನ್ನು ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶಿವನ ದೇವಾಲಯದಲ್ಲಿ ಸನ್‌ಗ್ಲಾಸ್ ಧರಿಸಿ ಪೂಜೆ: ನಟಿ ಭೂಮಿ ಪೆಡ್ನೇಕರ್ ವಿರುದ್ಧ ನೆಟ್ಟಿಗರ ಆಕ್ರೋಶ – Kannada News | Actress Bhumi Pednekar Trolled for wearing Sunglasses Inside Shiv Temple

ಖ್ಯಾತ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ (Bhumi Pednekar) ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಹೊಸ ಫೋಟೋ ಹಾಗೂ ವಿಡಿಯೋಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿವೆ. ಶಿವನ ದೇವಾಲಯದ ಒಳಗೆ ಕಪ್ಪು ಕೂಲಿಂಗ್ ಗ್ಲಾಸ್ (Sunglasses) ಧರಿಸಿ ಪೂಜೆ ಸಲ್ಲಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಹಾಗೂ ಟೀಕೆಗೆ ಕಾರಣವಾಗಿದೆ. ಶ್ರಾವಣ ಮಾಸದ ಆರಂಭದ ಅಂಗವಾಗಿ ಭೂಮಿ ಪೆಡ್ನೇಕರ್ ಅವರು ಶಿವಲಿಂಗಕ್ಕೆ ಅಭಿಷೇಕ ಮಾಡುವ ಫೋಟೋ ಮತ್ತು ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಅವು ವೈರಲ್ ಆಗಿದ್ದು, ಜನರು ಕಮೆಂಟ್ ಮಾಡುತ್ತಿದ್ದಾರೆ.

ಬ್ಲ್ಯಾಕ್ ಟಾಪ್ ಮತ್ತು ನೀಲಿ ಡೆನಿಮ್ ಜೀನ್ಸ್ ಧರಿಸಿದ್ದ ಭೂಮಿ ಪೆಡ್ನೇಕರ್ ಅವರು ಕಣ್ಣಿಗೆ ಕಪ್ಪು ಸನ್‌ಗ್ಲಾಸ್ ಧರಿಸಿ ಶಿವಲಿಂಗದ ಮುಂದೆ ಕೈಮುಗಿದು ನಿಂತಿರುವುದು ಕಂಡುಬಂದಿದೆ. ಈ ಫೋಟೋಗಳ ಜೊತೆಗೆ, ‘ಶ್ರಾವಣ ಮಾಸ ಪ್ರಾರಂಭವಾಗುತ್ತಿದ್ದಂತೆ, ನಾನು ಸರಳ ಜೀವನಕ್ಕಾಗಿ ಪ್ರಾರ್ಥಿಸುವುದಿಲ್ಲ. ಬದಲಿಗೆ ಅದನ್ನು ಗೌರವ ಮತ್ತು ಶಕ್ತಿಯಿಂದ ಎದುರಿಸುವ ಸಾಮರ್ಥ್ಯ ನೀಡುವಂತೆ ಕೋರುತ್ತೇನೆ. ಹರ ಹರ ಮಹಾದೇವ್’ ಎಂದು ಶೀರ್ಷಿಕೆ ಬರೆದುಕೊಂಡಿದ್ದರು.

ತರಾಟೆಗೆ ತೆಗೆದುಕೊಂಡ ನೆಟ್ಟಿಗರು:

ಆದರೆ, ದೇವಾಲಯದ ಆವರಣದಲ್ಲಿ ನಟಿಯ ಈ ರೀತಿಯ ಆಧುನಿಕ ಉಡುಪು ಮತ್ತು ಸನ್‌ಗ್ಲಾಸ್ ಧರಿಸಿ ಪೂಜೆ ಸಲ್ಲಿಸಿದ್ದಕ್ಕೆ ಅನೇಕ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಪೂಜೆ ಮಾಡುವಾಗ ಆ ಸನ್‌ಗ್ಲಾಸ್ ತೆಗೆಯಬಹುದಿತ್ತು ಅಲ್ಲವೇ?’ ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ. ‘ಸನ್‌ಗ್ಲಾಸ್ ಹಾಕಿಕೊಂಡು ಪೂಜೆ ಮಾಡುವುದನ್ನು ನಾನು ಎಲ್ಲೂ ನೋಡಿಲ್ಲ’ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಟೀಕೆಗೆ ಉತ್ತರ ನೀಡದ ನಟಿ:

ಕಮೆಂಟ್ ಮಾಡಿರುವ ಇನ್ನು ಕೆಲವರು ‘ಇದು ದೇವಸ್ಥಾನದಲ್ಲಿ ದೇವರ ಭಕ್ತಿಯೋ ಅಥವಾ ಫೋಟೋಶೂಟ್‌ ಮಾಡುವ ಜಾಗವೋ?’ ಎಂದು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಯಾವುದೇ ಟೀಕೆಗಳಿಗೆ ಭೂಮಿ ಪೆಡ್ನೇಕರ್ ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಅವರು ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ರಿಷಬ್ ಶೆಟ್ಟಿ ಸಿನಿಮಾಗೆ ಬಾಲಿವುಡ್ ನಟಿ ಎಂಟ್ರಿ: ಬೆಳವಡಿ ಮಲ್ಲಮ್ಮ ಪಾತ್ರದಲ್ಲಿ ಭೂಮಿ ಪೆಡ್ನೇಕರ್

ಬೆಳವಡಿ ಮಲ್ಲಮ್ಮನಾಗಿ ಭೂಮಿ:

ಸಿನಿಮಾ ಬಗ್ಗೆ ಹೇಳುವುದಾದರೆ, ಭೂಮಿ ಪೆಡ್ನೇಕರ್ ಅವರು ಶೀಘ್ರದಲ್ಲೇ ಬಹುನಿರೀಕ್ಷಿತ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡಲಿದ್ದಾರೆ. ರಿಷಬ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಈ ಬಿಗ್ ಬಜೆಟ್ ಚಿತ್ರದಲ್ಲಿ ಭೂಮಿ ಪೆಡ್ನೇಕರ್ ಅವರು ಕರ್ನಾಟಕದ ವೀರರಾಣಿ ಬೆಳವಡಿ ಮಲ್ಲಮ್ಮನ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಸಂದೀಪ್ ಸಿಂಗ್ ನಿರ್ಮಿಸುತ್ತಿರುವ ಈ ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತುಂಗಭದ್ರಾ ಜಲಾಶಯದ ಮಣ್ಣು ಲೂಟಿ: ಟಿಪ್ಪರ್ ತಡೆದ ಬಿಜೆಪಿ MLCಗೆ ‘ನಾನೇ ದಂಡ ಕಟ್ಟುತ್ತೇನೆಂದ’ ಸಿಪಿಐ – Kannada News | Tungabhadra Reservoir Soil Loot: CPI Tells BJP MLC Who Stopped Tipper, I’ll Pay the Fine Myself

ಕೊಪ್ಪಳ, ಜುಲೈ 30: ತೀವ್ರ ಬರಗಾಲದ ನಡುವೆ ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ (Illegal soil transportation) ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕೊಪ್ಪಳ (koppal) ತಾಲೂಕಿನ ಕರ್ಕಿಹಳ್ಳಿ ಸಮೀಪ ತಡರಾತ್ರಿ ಸ್ವತಃ ಸ್ಥಳಕ್ಕೆ ತೆರಳಿದ ಬಿಜೆಪಿ ಎಂಎಲ್​​ಸಿ ಹೇಮಲತಾ ನಾಯಕ್, ಮಣ್ಣು ಸಾಗಿಸುತ್ತಿದ್ದ ಟಿಪ್ಪರ್‌ಗಳನ್ನು ತಡೆಹಿಡಿದಿದ್ದಾರೆ. ಅಷ್ಟೇ ಅಲ್ಲದೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಆದರೆ ‘ಮಣ್ಣು ನಮ್ಮ ಜಮೀನಿಗೆ ಬೇಕು ಹಾಗೂ ದಂಡವನ್ನು ನಾನು ಕಟ್ಟುತ್ತೇನೆ’ ಎಂದಿರುವ ಪೊಲೀಸ್ ಅಧಿಕಾರಿಯ ಅದೊಂದು ಹೇಳಿಕೆ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸುವಂತೆ ಗೃಹ ಸಚಿವರಿಗೆ ಒತ್ತಾಯಿಸಲಾಗಿದೆ.

ತಡರಾತ್ರಿ ದಾಳಿ: ಮಣ್ಣು ತುಂಬಿಕೊಂಡು ಸಾಗುತ್ತಿದ್ದ ಟಿಪ್ಪರ್​​ಗಳನ್ನ ತಡೆದ ಬಿಜೆಪಿ ಎಂಎಲ್​​ಸಿ

ಸದ್ಯ ರಾಜ್ಯದಲ್ಲಿ ತೀವ್ರ ಬರಗಾಲ ಹಿನ್ನೆಲೆ ಜನರು ನೀರಿಗಾಗಿ ಪರದಾಡು ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಅಕ್ರಮ ಮಣ್ಣು ಸಾಗಾಟ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಕೊಪ್ಪಳ ತಾಲೂಕಿನ ಕರ್ಕಿಹಳ್ಳಿ ಸಮೀಪ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ತಡರಾತ್ರಿ ದಾಳಿ ನಡೆಸುವ ಮೂಲಕ ಮಣ್ಣು ತುಂಬಿಕೊಂಡು ಸಾಗುತ್ತಿದ್ದ ಹಲವು ಟಿಪ್ಪರ್‌ಗಳನ್ನು ತಡೆದಿದ್ದಾರೆ.

ಮಣ್ಣು ನಮ್ಮ ಜಮೀನಿಗೆ ಬೇಕು ಎಂದ ಸಿಪಿಐ 

‘ಮಣ್ಣು ಎಲ್ಲಿಂದ ಸಾಗಿಸಲಾಗುತ್ತಿದೆ’ ಎಂದು ಚಾಲಕರನ್ನು ಪ್ರಶ್ನಿಸಿದ್ದಾರೆ. ಬಳಿಕ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ ಹೇಮಲತಾ ನಾಯಕ್, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳನ್ನು ಕಳುಹಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ಜಯಪ್ರಕಾಶ್​​ರೊಂದಿಗೆ ಫೋನ್​​ನಲ್ಲಿ ಮಾತನಾಡಿದ್ದಾರೆ. ಮಾತುಕತೆ ವೇಳೆ ‘ಮಣ್ಣು ನಮ್ಮ ಜಮೀನಿಗೆ ಬೇಕು ಹಾಗೂ ದಂಡವನ್ನು ನಾನು ಕಟ್ಟುತ್ತೇನೆ’ ಎಂದು ಅವರು ಹೇಳಿದ್ದಾರೆ. ಈ ಹೇಳಿಕೆ ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೂಡಲೇ ಗೃಹ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಮಲತಾ ನಾಯಕ್ ಒತ್ತಾಯಿಸಿದ್ದಾರೆ.

ಊಟ ಮಾಡುವುದಕ್ಕೂ ಕಷ್ಟವಾಗುತ್ತಿದೆ: ಸಾರ್ವಜನಿಕರು ಬೇಸರು

ಇನ್ನು ಇದೇ ವೇಳೆ ಸಾರ್ವಜನಿಕರು ಕೂಡ ಅಕ್ರಮ ಮಣ್ಣು ಸಾಗಾಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾತ್ರಿಯಿಡೀ ಟಿಪ್ಪರ್‌ಗಳು ಓಡಾಡುತ್ತವೆ. ‘ನೆಮ್ಮದಿಯಾಗಿ ಬದುಕುವುದಲ್ಲ, ಊಟ ಮಾಡುವುದಕ್ಕೂ ಕಷ್ಟವಾಗುತ್ತಿದೆ. ಅಷ್ಟೊಂದು ವಾಹನಗಳು ಸಂಚರಿಸುತ್ತವೆ’ ಎಂದು ಅಳಲು ತೋಡಿಕೊಂಡರು.

ಸಿಪಿಐ ವಿರುದ್ಧ ಎಸ್​ಪಿ ತನಿಖೆಗೆ ಸೂಚನೆ

ಅಕ್ರಮ ಮಣ್ಣು ಸಾಗಾಟ ನಡೆಯುತ್ತಿದೆ ಎಂದು ಆರೋಪಿಸಿರುವ ಹೇಮಲತಾ ನಾಯಕ್, ‘ತುಂಗಭದ್ರಾ ಹಿನ್ನೀರಿನ ಪ್ರದೇಶದ ಸಂಪತ್ತನ್ನು ರಕ್ಷಿಸಲು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ. ಇತ್ತ ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ವಿರುದ್ಧ ಎಸ್​ಪಿ ತನಿಖೆಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಬಲ್ಡೋಟಾ ಕಾರ್ಖಾನೆ ಕೆರೆ ವಿವಾದ: ರಾತ್ರೋರಾತ್ರಿ ಗೇಟ್ ಮರುನಿರ್ಮಾಣ; ಮತ್ತೆ ಸಿಡಿದೆದ್ದ ರೈತರು

ಇನ್ನು ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಅಕ್ರಮ ಮಣ್ಣು ಸಾಗಾಟ ಗೊತ್ತಿದ್ದರು ಅಧಿಕಾರಿಗಳು ಇಷ್ಟು ದಿನ ಸುಮ್ಮನಿದ್ದರಾ ಎನ್ನುವುದು ಅನುಮಾನಕ್ಕೆ ಕಾರಣವಾಗಿದೆ. ಗಣಿ ಇಲಾಖೆ ಅಧಿಕಾರಿಗಳು ಸುಮ್ಮನೆ ಕೂಳಿತಿದ್ದು ಏಕೆ? ಪೊಲೀಸ್ ಅಧಿಕಾರಿ ಜಯಪ್ರಕಾಶ್​​ಗೂ ದಂಧೆಕೋರರಿಗೂ ಏನು ಸಂಬಂಧ ಎನ್ನುವುದು ತಿನಿಖೆಯಿಂದ ಬಯಲಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹಾಕಿ ತಂಡದ ಜೆರ್ಸಿ ಬಣ್ಣ ನೀಲಿಯಿಂದ ಕೇಸರಿಗೆ ಬದಲು; ಹೊಸ ವಿವಾದ ಸೃಷ್ಟಿ – Kannada News | Indian Hockey Jersey Color Change: Orange Sparks Controversy; Rasquinha vs Hockey India

2026 ರ ಹಾಕಿ ವಿಶ್ವಕಪ್‌ಗೆ (2026 Hockey World Cup) ಮುಂಚಿತವಾಗಿ, ಭಾರತೀಯ ಹಾಕಿ ತಂಡದ (Indian Hockey) ಜೆರ್ಸಿ ಬಣ್ಣವನ್ನು ನೀಲಿ ಬಣ್ಣದಿಂದ ಕಿತ್ತಳೆ ಬಣ್ಣಕ್ಕೆ ಬದಲಾಯಿಸಲಾಗಿದೆ. ಹಾಕಿ ಇಂಡಿಯಾ ಜುಲೈ 27 ರಂದು ಪುರುಷ ಮತ್ತು ಮಹಿಳಾ ತಂಡಗಳ ಹೊಸ ಜೆರ್ಸಿಗಳನ್ನು ಬಿಡುಗಡೆ ಮಾಡಿದ್ದು, ಜೆರ್ಸಿ ಬಣ್ಣವನ್ನು ಬದಲಾಯಿಸಿರುವುದು ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ತಂಡದ ಜೆರ್ಸಿ ಬಣ್ಣವನ್ನು ಬದಲಿಸಿರುವುದಕ್ಕೆ ಅಸಮಾಧಾನ ಹೊರಹಾಕಿರುವ ತಂಡದ ಮಾಜಿ ನಾಯಕ ವೀರೆನ್ ರಸ್ಕ್ವಿನ್ಹಾ, ನೀಲಿ ಜೆರ್ಸಿ ನಮ್ಮ ಗುರುತು ಅದನ್ನು ಬದಲಿಸಿರುವುದು ಸರಿಯಲ್ಲ ಎಂದಿದ್ದಾರೆ. ಮತ್ತೊಬ್ಬ ಮಾಜಿ ನಾಯಕ ಪಟ್ಗಟ್ ಸಿಂಗ್ ಕೂಡ ಜೆರ್ಸಿ ಬಣ್ಣ ಬದಲಾವಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ನಡೆ ನಾಚಿಕೆಗೇಡಿನ ಸಂಗತಿ

ಹಾಕಿ ತಂಡದ ಜೆರ್ಸಿ ಬಣ್ಣವನ್ನು ಬದಲಿಸಿರುವ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಸರಣಿ ಪೋಸ್ಟ್​ಗಳನ್ನು ಮಾಡಿರುವ ವೀರೆನ್, ‘ಹಾಕಿ ಇಂಡಿಯಾ ಖಂಡಿತವಾಗಿಯೂ ಬಹಳಷ್ಟು ಒಳ್ಳೆಯ ಕೆಲಸ ಮಾಡಿದೆ. ಆದರೆ ಜೆರ್ಸಿ ಬಣ್ಣವನ್ನು ಬದಲಿಸುವ ಈ ನಡೆ ನಾಚಿಕೆಗೇಡಿನ ಸಂಗತಿ. ನೀಲಿ ಬಣ್ಣವು ಯಾವಾಗಲೂ ಭಾರತೀಯ ತಂಡದ ಗುರುತು ಮತ್ತು ಪರಂಪರೆಯಾಗಿದೆ. ನಾನು ಹಲವು ವರ್ಷಗಳಿಂದ ನೀಲಿ ಜೆರ್ಸಿಯನ್ನು ಹೆಮ್ಮೆಯಿಂದ ಧರಿಸಿದ್ದೇನೆ. ಅಭಿಮಾನಿಗಳು ನಮ್ಮ ಭಾರತೀಯ ತಂಡವನ್ನು ನೀಲಿ ಬಣ್ಣದಲ್ಲಿ ನೋಡಲು ಬಯಸುತ್ತಾರೆ. ಹಾಗಾದರೆ ಕೇಸರಿ ಬಣ್ಣದ ಹಿಂದಿನ ತರ್ಕವೇನು?’ ಎಂದು ಬರೆದುಕೊಂಡಿದ್ದಾರೆ.

ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಮತ್ತೊಂದು ಪೋಸ್ಟ್‌ ಮಾಡಿರುವ ವೀರೆನ್, ‘ತಮ್ಮ ಪೋಸ್ಟ್‌ನಲ್ಲಿ ಅನೇಕ ಅನಗತ್ಯ ರಾಜಕೀಯ ಕಾಮೆಂಟ್‌ಗಳನ್ನು ಮಾಡಲಾಗುತ್ತಿದೆ. ಆದರೆ ನಾನು ಸ್ಪಷ್ಟಪಡಿಸುತ್ತೇನೆ, ನನ್ನ ಪ್ರಶ್ನೆಯು ತಂಡದ ಹೆಮ್ಮೆ, ಗುರುತು ಮತ್ತು ಪರಂಪರೆಯ ಬಗ್ಗೆ ಮಾತ್ರ ಎಂದಿದ್ದಾರೆ.

ಈ ಬದಲಾವಣೆಯಲ್ಲಿ ಆಶ್ಚರ್ಯವೇನಿಲ್ಲ

ವೀರೆನ್ ರಸ್ಕ್ವಿನ್ಹಾ ಅವರ ಪ್ರಶ್ನೆಗೆ ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಪ್ರತಿಕ್ರಿಯೆ ನೀಡಿದ್ದು, ‘ಟೀಮ್ ಇಂಡಿಯಾ ನೀಲಿ ಜೆರ್ಸಿ ಧರಿಸುವ ದೀರ್ಘಕಾಲದ ಸಂಪ್ರದಾಯವನ್ನು ಹೊಂದಿದೆ . ಆದರೆ ಈ ಬದಲಾವಣೆಯಲ್ಲಿ ಆಶ್ಚರ್ಯವೇನಿಲ್ಲ. 2014 ರಲ್ಲಿ ತಂಡವು ಹಳದಿ ಬಣ್ಣವನ್ನು ಧರಿಸಿ 2018 ರಲ್ಲಿ ತಿಳಿ ನೀಲಿ ಬಣ್ಣವನ್ನು ಅಳವಡಿಸಿಕೊಂಡಿದ್ದು ನನಗೆ ನೆನಪಿದೆ. ಈ ಬಾರಿ ತಂಡದ ಜೆರ್ಸಿ ಬಣ್ಣವನ್ನು ಬದಲಾಯಿಸುವ ಸಲಹೆಯು ತರಬೇತುದಾರರು, ಸಹಾಯಕ ಸಿಬ್ಬಂದಿ, ನಾಯಕ ಮತ್ತು ಆಟಗಾರರಿಂದ ಬಂದಿದೆ.

ಹಾಕಿ ಟರ್ಫ್ ನೀಲಿ ಬಣ್ಣದ್ದಾಗಿರುವುದರಿಂದ ಮತ್ತು ಆಟಗಾರರ ಕಿಟ್‌ಗಳು ಸಹ ನೀಲಿ ಬಣ್ಣದ್ದಾಗಿರುವುದರಿಂದ, ಪಂದ್ಯಗಳ ಸಮಯದಲ್ಲಿ ಗೊಂದಲ ಉಂಟಾಗುತ್ತಿತ್ತು. ಆದ್ದರಿಂದ, ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳು ಹಳದಿ ಮತ್ತು ಕಿತ್ತಳೆ ಬಣ್ಣಗಳನ್ನು ಸೂಚಿಸಿದ್ದರು. ಅಂತಿಮವಾಗಿ, ನಾವು ಕಿತ್ತಳೆ ಬಣ್ಣವನ್ನು ಆರಿಸಿಕೊಂಡಿದ್ದೇವೆ ಏಕೆಂದರೆ ಅದು ನಮ್ಮ ರಾಷ್ಟ್ರೀಯ ಧ್ವಜದ ಮೂರು ಬಣ್ಣಗಳಲ್ಲಿ ಒಂದಾಗಿದೆ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಶ್ಚಿಮ ಏಷ್ಯಾ ಬಿಕ್ಕಟ್ಟು; ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸಿಸಿಎಸ್ ಸಭೆ, ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರತೆಗೆ ಒತ್ತು – Kannada News | PM Narendra Modi chairs CCS meeting on West Asia crisis in Delhi

ನವದೆಹಲಿ, ಜುಲೈ 30: ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷದ ಹಿನ್ನೆಲೆಯಲ್ಲಿ ಉದ್ಭವಿಸಿರುವ ಪರಿಸ್ಥಿತಿ ಮತ್ತು ಭಾರತದ ಮೇಲಾಗುವ ಪ್ರಭಾವವನ್ನು ತಗ್ಗಿಸಲು ವಿವಿಧ ಸಚಿವಾಲಯಗಳು ಮಾಡಿಕೊಂಡಿರುವ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಭದ್ರತಾ ಸಂಪುಟ ಸಮಿತಿಯ (CCS) ನಾಲ್ಕನೇ ವಿಶೇಷ ಸಭೆ ನಡೆಸಿದ್ದಾರೆ. ಪಶ್ಚಿಮ ಏಷ್ಯಾ ಉದ್ವಿಗ್ನತೆಗೆ ಸಂಬಂಧಿಸಿದಂತೆ ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲೂ ಇದೇ ರೀತಿಯ ಸಿಸಿಎಸ್ ಸಭೆಗಳು ನಡೆದಿದ್ದವು.

ಇಂದಿನ ಸಭೆಯಲ್ಲಿ ಪ್ರಚಲಿತ ಭೂ ರಾಜಕೀಯ ಪರಿಸ್ಥಿತಿಯ ಕುರಿತು ಕ್ಯಾಬಿನೆಟ್ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಸಮಿತಿಗೆ ವಿವರಣೆ ನೀಡಿದರು. ದೇಶದ ಇಂಧನ ಭದ್ರತೆಯನ್ನು ಕಾಯ್ದುಕೊಳ್ಳಲು ಹಾಗೂ ದ್ರವೀಕೃತ ನೈಸರ್ಗಿಕ ಅನಿಲ (LNG), ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಮತ್ತು ರಸಗೊಬ್ಬರಗಳು ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳ ಅಡಚಣೆಯಿಲ್ಲದ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಂಡಿರುವ ಕ್ರಮಗಳನ್ನು ಅವರು ವಿವರಿಸಿದರು.

ಈ ಸಭೆಯ ವೇಳೆ ಭಾರತೀಯ ನಾಗರಿಕರ ಹಿತಾಸಕ್ತಿಗಳನ್ನು ರಕ್ಷಿಸಲು ಎಲ್ಲಾ ಬೆಳವಣಿಗೆಗಳನ್ನು ಮೇಲ್ವಿಚಾರಣೆ ಮಾಡಬೇಕೆಂದು ಪ್ರಧಾನಿ ಮೋದಿ ಕರೆ ನೀಡಿದರು. ಅಲ್ಲದೆ, ಭಾರತೀಯ ನಾವಿಕರ ಕುಟುಂಬಗಳಿಗೆ ಅವರ ಕುರಿತು ಸೂಕ್ತ ಮಾಹಿತಿ, ತುರ್ತು ನೆರವು ಮತ್ತು ಆಪ್ತಸಮಾಲೋಚನೆ ಒದಗಿಸಲು ವಿಶೇಷ ವ್ಯವಸ್ಥೆಯನ್ನು ಮಾಡಬೇಕು ಎಂದು ಅವರು ಪುನರುಚ್ಚರಿಸಿದರು.

ಇದನ್ನೂ ಓದಿ: ‘ಪ್ರಧಾನಿ ಸರ್ ನೀವು ತಕ್ಷಣವೇ ಹಸ್ತಕ್ಷೇಪ ಮಾಡಿ’: ಮೇಕೆದಾಟು ಯೋಜನೆ ವಿರೋಧಿಸಿ ವಿಜಯ್ ಮೋದಿಗೆ ಪತ್ರ

ಸಭೆಯಲ್ಲಿ ಚರ್ಚೆಯಾದ ವಿಷಯಗಳು:

ಸಾಕಷ್ಟು ತೈಲ ಲಭ್ಯತೆ ಮತ್ತು ದಾಸ್ತಾನು:

ಎಲ್‌ಪಿಜಿ ಆಮದಿಗಾಗಿ ಭಾರತವು ವಿವಿಧ ಮೂಲಗಳನ್ನು ಬಳಸಿಕೊಳ್ಳುತ್ತಿದ್ದು, ಪ್ರಮುಖ ಪೆಟ್ರೋಲಿಯಂ ಉತ್ಪನ್ನಗಳ ದಾಸ್ತಾನು ಮತ್ತು ಪೂರೈಕೆ ಪರ್ಯಾಪ್ತವಾಗಿದೆ. ಸಾಕಷ್ಟು ಪ್ರಮಾಣದ ಕಚ್ಚಾ ತೈಲ ಲಭ್ಯವಿರುವುದರಿಂದ ಸರ್ಕಾರಿ ಸ್ವಾಮ್ಯದ ಸಂಸ್ಕರಣಾಗಾರಗಳು ಶೇಕಡಾ 100ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪೆಟ್ರೋಲ್, ಡೀಸೆಲ್ ಮುಂತಾದ ಅತ್ಯಗತ್ಯ ಇಂಧನಗಳ ಉತ್ಪಾದನೆ ನಿರಂತರವಾಗಿ ನಡೆಯುತ್ತಿದೆ.

ಪಿಎನ್‌ಜಿ (PNG) ಜಾಲದ ವಿಸ್ತರಣೆ:

ಎಲ್‌ಪಿಜಿ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಮೂಲಸೌಕರ್ಯವನ್ನು ವಿಸ್ತರಿಸಲಾಗುತ್ತಿದೆ. ನ್ಯಾಷನಲ್ ಗ್ಯಾಸ್ ಗ್ರಿಡ್ ವಿಸ್ತರಣೆ, ಎಲ್‌ಎನ್‌ಜಿ ಆಮದು ಸಾಮರ್ಥ್ಯ ಹೆಚ್ಚಳ, ‘ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್’ ಜಾಲ ವಿಸ್ತರಣೆ ಹಾಗೂ ಪೈಪ್‌ಲೈನ್ ಮೂಲಸೌಕರ್ಯ ಆದೇಶ, 2026ರ ಅಡಿಯಲ್ಲಿ ಕೊನೆಯ ಹಂತದ ಸಂಪರ್ಕಗಳಿಗೆ ತ್ವರಿತ ಅನುಮೋದನೆ ನೀಡಲಾಗುತ್ತಿದ್ದು, ದೇಶಾದ್ಯಂತ ಪಿಎನ್‌ಜಿ ಸಂಪರ್ಕಗಳು ಗಮನಾರ್ಹವಾಗಿ ಹೆಚ್ಚಾಗಿವೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ದಾಳಿ: ವಿಶ್ವಸಂಸ್ಥೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ ಭಾರತ

ರಸಗೊಬ್ಬರ ಪೂರೈಕೆ:

ಮುಂಬರುವ ರಬಿ ಕೃಷಿ ಹಂಗಾಮಿಗೆ ಅಗತ್ಯವಿರುವ ರಸಗೊಬ್ಬರ ಲಭ್ಯತೆಯ ಕುರಿತು ಸಭೆಯಲ್ಲಿ ಪರಿಶೀಲನೆ ನಡೆಸಲಾಯಿತು. ನಿರೀಕ್ಷಿತ ಬೇಡಿಕೆಯನ್ನು ಈಡೇರಿಸಲು ಹಾಗೂ ಪರ್ಯಾಯ ಮೂಲಗಳಿಂದ ರಸಗೊಬ್ಬರ ಆಮದು ಮಾಡಿಕೊಳ್ಳುವ ಕುರಿತು ಚರ್ಚಿಸಲಾಯಿತು.

ಸಚಿವಾಲಯಗಳ ನಡುವೆ ಸಂಘಟನೆ:

ಸಂಘರ್ಷದ ಪ್ರಭಾವದಿಂದ ದೇಶದ ನಾಗರಿಕರನ್ನು ಹಾಗೂ ಅನಿವಾಸಿ ಭಾರತೀಯರನ್ನು ರಕ್ಷಿಸುವ ಅಗತ್ಯವನ್ನು ಒತ್ತಿಹೇಳಿದ ಪ್ರಧಾನಿ ಮೋದಿ, ಎಲ್ಲಾ ಸಚಿವಾಲಯಗಳು ಮತ್ತು ಏಜೆನ್ಸಿಗಳ ನಡುವೆ ನಿರಂತರ ಸಂಯೋಜನೆ ಮತ್ತು ಸಹಕಾರ ಇರಬೇಕೆಂದು ಕರೆ ನೀಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಕ್ಕಳಲ್ಲಿ ನಿದ್ರೆಯ ಕೊರತೆ ಆರೋಗ್ಯಕ್ಕೆ ಅಪಾಯ! ಉತ್ತಮ ನಿದ್ರೆಗೆ ಪೋಷಕರು ಪಾಲಿಸಬೇಕಾದ ಸಲಹೆಗಳು – Kannada News | Poor Sleep in Kids: Warning Signs Every Parent Should Know

ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳ ಜೀವನಶೈಲಿ ವೇಗವಾಗಿ ಬದಲಾಗುತ್ತಿದೆ. ಮೊಬೈಲ್, ಟಿವಿ, ಟ್ಯಾಬ್ಲೆಟ್‌ಗಳ ಅತಿಯಾದ ಬಳಕೆ, ಆನ್‌ಲೈನ್ ತರಗತಿಗಳು, ಓದಿನ ಒತ್ತಡ ಹಾಗೂ ಮಲಗುವ ಸಮಯದಲ್ಲಿ ಬದಲಾವಣೆಯಿಂದ ಮಕ್ಕಳು ಸರಿಯಾಗಿ ಮಾಡುವುದಿಲ್ಲ. ಆರಂಭದಲ್ಲಿ ಇದು ಸಾಮಾನ್ಯ ಸಮಸ್ಯೆಯಂತೆ ಕಂಡರೂ, ದೀರ್ಘಕಾಲ ನಿದ್ರೆಯ ಕೊರತೆ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಮಕ್ಕಳ ಸಮರ್ಪಕ ಬೆಳವಣಿಗೆಗೆ ಪೌಷ್ಟಿಕ ಆಹಾರ ಮತ್ತು ದೈಹಿಕ ಚಟುವಟಿಕೆ ಎಷ್ಟು ಮುಖ್ಯವೋ, ಉತ್ತಮ ಗುಣಮಟ್ಟದ ನಿದ್ರೆಯೂ ಅಷ್ಟೇ ಅಗತ್ಯ. ಸಮರ್ಪಕ ನಿದ್ರೆ ದೇಹಕ್ಕೆ ವಿಶ್ರಾಂತಿ ನೀಡುವುದಲ್ಲದೆ, ಮೆದುಳಿನ ಕಾರ್ಯಕ್ಷಮತೆ, ನೆನಪಿನ ಶಕ್ತಿ, ಕಲಿಕೆಯ ಸಾಮರ್ಥ್ಯ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ವಯಸ್ಸಿಗೆ ಅನುಗುಣವಾಗಿ ಮಕ್ಕಳಿಗೆ ಎಷ್ಟು ನಿದ್ರೆ ಬೇಕು?

ಅಮೆರಿಕದ Centers for Disease Control and Prevention (CDC) ಮಾರ್ಗಸೂಚಿಗಳ ಪ್ರಕಾರ:

  • 0–3 ತಿಂಗಳು: 14–17 ಗಂಟೆಗಳು
  • 4–12 ತಿಂಗಳು: 12–16 ಗಂಟೆಗಳು
  • 1–2 ವರ್ಷ: 11–14 ಗಂಟೆಗಳು
  • 3–5 ವರ್ಷ: 10–13 ಗಂಟೆಗಳು
  • 6–12 ವರ್ಷ: 9–12 ಗಂಟೆಗಳು
  • 13–18 ವರ್ಷ: 8–10 ಗಂಟೆಗಳು

ವಯಸ್ಸಿಗೆ ಅನುಗುಣವಾಗಿ ಅಗತ್ಯವಿರುವಷ್ಟು ನಿದ್ರೆ ಪಡೆಯದಿದ್ದರೆ ಮಕ್ಕಳ ಆರೋಗ್ಯ, ಓದು, ಆಟ ಹಾಗೂ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀಳಬಹುದು.

ನಿದ್ರೆಯ ಕೊರತೆಯಿಂದ ಉಂಟಾಗುವ ಸಮಸ್ಯೆಗಳು

  • ಮಕ್ಕಳಲ್ಲಿ ನಿದ್ರೆ ಕಡಿಮೆಯಾದರೆ ದಣಿವು ಮತ್ತು ಆಲಸ್ಯ
  • ಕಿರಿಕಿರಿ ಮತ್ತು ಕೋಪ ಹೆಚ್ಚಾಗುವುದು
  • ಓದಿನಲ್ಲಿ ಏಕಾಗ್ರತೆ ಕಡಿಮೆಯಾಗುವುದು
  • ನೆನಪಿನ ಶಕ್ತಿ ಕುಗ್ಗುವುದು
  • ರೋಗನಿರೋಧಕ ಶಕ್ತಿ ದುರ್ಬಲವಾಗುವುದು
  • ಬೊಜ್ಜಿನ ಅಪಾಯ ಹೆಚ್ಚಾಗುವುದು
  • ದೈಹಿಕ ಬೆಳವಣಿಗೆಯ ಮೇಲೆ ಪರಿಣಾಮ

ಇದನ್ನೂ ಓದಿ: ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರೇ ಎಚ್ಚರ! ಈ ಒಂದು ತಪ್ಪು ಕಣ್ಣಿನ ದೃಷ್ಟಿಯನ್ನೇ ಕಸಿದುಕೊಳ್ಳಬಹುದು

ಮಕ್ಕಳ ಸ್ಲೀಪ್ ರೂಟೀನ್ ಉತ್ತಮವಾಗಿಸಲು ಈ ಕ್ರಮಗಳನ್ನು ಅನುಸರಿಸಿ

  • ಪ್ರತಿದಿನ ಒಂದೇ ಸಮಯಕ್ಕೆ ಮಲಗಿ, ಏಳುವ ಅಭ್ಯಾಸವನ್ನು ಬೆಳೆಸಿರಿ.
  • ಮಲಗುವ ಕನಿಷ್ಠ ಒಂದು ಗಂಟೆ ಮೊದಲು ಮೊಬೈಲ್, ಟಿವಿ ಹಾಗೂ ಟ್ಯಾಬ್ಲೆಟ್ ಬಳಕೆ ನಿಲ್ಲಿಸಿ.
  • ಮಲಗುವ ಕೋಣೆ ಶಾಂತವಾಗಿ, ತಂಪಾಗಿರಲಿ.
  • ಪ್ರತಿದಿನ ಹೊರಾಂಗಣ ಆಟ ಹಾಗೂ ದೈಹಿಕ ಚಟುವಟಿಕೆಗಳಿಗೆ ಸಮಯ ನೀಡಿ.
  • ರಾತ್ರಿ ಹೆಚ್ಚು ಸಕ್ಕರೆ ಅಥವಾ ಹೊಟ್ಟೆ ಬಿರಿಯುವಷ್ಟು ಆಹಾರ ನೀಡುವುದನ್ನು ತಪ್ಪಿಸಿ.
  • ಮಲಗುವ ಮೊದಲು ಕಥೆ ಹೇಳುವುದು ಅಥವಾ ಮೃದುವಾದ ಸಂಗೀತ ಕೇಳಿಸುವುದು ಮಕ್ಕಳಿಗೆ ವಿಶ್ರಾಂತಿ ನೀಡುತ್ತದೆ.
  • ಸಂಜೆ ವೇಳೆಯ ನಂತರ ಚಾಕೊಲೇಟ್, ಕೋಲ್ಡ್ ಡ್ರಿಂಕ್ಸ್ ಹಾಗೂ ಕ್ಯಾಫಿನ್ ಇರುವ ಆಹಾರಗಳನ್ನು ಕಡಿಮೆ ಮಾಡಿ.

ಮಲಗುವ ಮೊದಲು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ:

  • ಬಿಸಿ ನೀರಿನಲ್ಲಿ ಸ್ನಾನ
  • ಪುಸ್ತಕ ಓದುವುದು
  • ಆಳವಾದ ಉಸಿರಾಟದ ಅಭ್ಯಾಸ
  • ಕುಟುಂಬದೊಂದಿಗೆ ಸಮಯ ಕಳೆಯುವುದು

ಈ ಅಭ್ಯಾಸಗಳನ್ನು ತಪ್ಪಿಸಿ:

  • ಹಾಸಿಗೆಯಲ್ಲೇ ಮೊಬೈಲ್ ಬಳಸುವುದು
  • ತಡರಾತ್ರಿವರೆಗೆ ವಿಡಿಯೋ ಗೇಮ್ ಆಡುವುದು
  • ರಾತ್ರಿ ತಡವಾಗಿ ಊಟ ಮಾಡುವುದು
  • ವಾರಾಂತ್ಯದಲ್ಲೂ ತಡವಾಗಿ ಮಲಗುವುದು

ಸೂಚನೆ: ಈ ಲೇಖನವು ಸಾಮಾನ್ಯ ಆರೋಗ್ಯ ಮಾಹಿತಿಗಾಗಿ ಮಾತ್ರ. ನಿಮ್ಮ ಮಗುವಿಗೆ ದೀರ್ಘಕಾಲದ ನಿದ್ರೆಯ ಸಮಸ್ಯೆ, ಉಸಿರಾಟದ ತೊಂದರೆ ಅಥವಾ ಇತರ ಆರೋಗ್ಯ ಸಮಸ್ಯೆಗಳಿದ್ದರೆ ಮಕ್ಕಳ ತಜ್ಞರನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹರಿಹರ ಪಂಚಮಸಾಲಿ ಮಠದಲ್ಲಿ ಮತ್ತೆ ಭಜನೆ, ಪೂಜೆ ಶುರು: ಟ್ರಸ್ಟ್​ ವಿರುದ್ಧ ಹೋರಾಟಕ್ಕೆ ಸಜ್ಜಾದ ವಚನಾನಂದ ಸ್ವಾಮೀಜಿ – Kannada News | Bhajans and Prayers Resume at Harihara Panchamasali Math; Vachanananda Swamiji Prepares to Fight Trust

ದಾವಣಗೆರೆ, ಜುಲೈ 30: ಪಂಚಮಸಾಲಿ ಮಠದಲ್ಲಿ ಈಗ ಹೊಸ ಗಾಳಿ ಬೀಸುತ್ತಿದೆ. ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮೀಜಿಗೆ (Vachanananda Swamiji) ಜಾಮೀನು ಸಿಕ್ಕಿದೆ. ಇನ್ನೇನು ಸ್ವಾಮೀಜಿ ಜೈಲು ಸೇರುತ್ತಾರೆ ಎನ್ನುವಷ್ಟರಲ್ಲಿಯೇ ಕೋರ್ಟ್​ ನಿರೀಕ್ಷಣಾ ಜಾಮೀನು ನೀಡಿತ್ತು. ಒಂದು ಅರ್ಥದಲ್ಲಿ ಸ್ವಾಮೀಜಿ ನಿರಾಳರಾಗಿದ್ದಾರೆ. ಇದೀಗ  ಅಧಿಕೃತವಾಗಿ ಸ್ವಾಮೀಜಿ ಟ್ರಸ್ಟ್​ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ.

ಭಜನೆ, ಪೂಜೆ ಬದಲು ಪೊಲೀಸರ ಬೂಟಿನ ಸದ್ದು

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಪಂಚಮಸಾಲಿ ಮಠ ರಾಜ್ಯದ ಗಮನ ಸೆಳೆದಿತ್ತು. ಕಳೆದ ಮೂರು ನಾಲ್ಕು ತಿಂಗಳಿಂದ ಈ ಮಠದಲ್ಲಿ ಮೌನ ಆವರಿಸಿತ್ತು. ಕಾರಣ ಇಲ್ಲಿನ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಇನ್ನೊಂದು ಕಡೆ ಮಠದ ಟ್ರಸ್ಟಿನವರು ಸ್ವಾಮೀಜಿಯನ್ನ ಮಠದಿಂದ ಉಚ್ಛಾಟನೆ ಮಾಡಿದ್ದರು. ಹೀಗಾಗಿ ಮಠದ ಆವರಣದಲ್ಲಿ ಭಜನೆ, ಪೂಜೆ ಬದಲು ಪೊಲೀಸರ ಬೂಟಿನ ಸದ್ದು ಹೆಚ್ಚಾಗಿತ್ತು.

ಸಹಜ ಸ್ಥಿತಿಯತ್ತ ಮಠ: ಮಹಾಂತ ಗುರುಗಳ ಗದ್ದುಗೆ ವಿಶೇಷ ಪೂಜೆ

ಮಠದಲ್ಲಿ ಕೋಟ್ಯಂತರ ರೂ ಅವ್ಯವಹಾರ ಆಗಿದೆ ಎಂದು ‘ಲೆಕ್ಕ ಕೊಡಿ ಚಳುವಳಿ’ ಆರಂಭವಾಗಿತ್ತು. ಹೀಗೆ ಈ ಚಳುವಳಿ ಆರಂಭವಾಗುತ್ತಿದ್ದಂತೆ ವಚನಾನಂದ ಸ್ವಾಮೀಜಿಯನ್ನ ಮಠದಿಂದ ಉಚ್ಛಾಟನೆ ಮಾಡಲಾಗಿತ್ತು. ಆದರೆ ಸ್ವಾಮೀಜಿ ಮಠ ಬಿಟ್ಟು ಹೋಗಲಿಲ್ಲ. ಈ ಮಧ್ಯೆ ಪೋಕ್ಸೋ ಪ್ರಕರಣ ಕೂಡ ದಾಖಲಾಗಿತ್ತು. ಏಳು  ಬಾಲಕರು ಸಲ್ಲಿಸಿದ್ದ ಪೋಕ್ಸೋ ಪ್ರಕರಣದಲ್ಲಿ ಸ್ವಾಮೀಜಿಗೆ ಜಾಮೀನು ಸಿಕ್ಕಿದೆ. ಹೀಗಾಗಿ ಮತ್ತೆ ಮಠ ಸಹಜ ಸ್ಥಿತಿಗೆ ಬರುತ್ತಿದೆ. ಜೊತೆಗೆ ಮಠದಲ್ಲಿದ್ದ ಮಹಾಂತ ಗುರುಗಳ ಗದ್ದುಗೆ ವಿಶೇಷ ಪೂಜೆ ಮಾಡಲಾಗುತ್ತಿದೆ. ಇದೀಗ ಸ್ವಾಮೀಜಿ ಮತ್ತು ಭಕ್ತರಿಂದ ಮತ್ತೆ ‘ಲೆಕ್ಕ ಕೊಡಿ ಚಳುವಳಿ’ ಶುರುವಾಗಿದೆ.

ಟ್ರಸ್ಟ್​ ವಿರುದ್ಧ ಭಕ್ತರಲ್ಲಿ ಕಡಿಮೆಯಾಗದ ಆಕ್ರೋಶ 

ಪಂಚಮಸಾಲಿ ಮಠದಲ್ಲಿ ಕೋಟ್ಯಂತರ ರೂ ಹಣ ಅವ್ಯವಹಾರ ಆರೋಪ ಕೇಳಿಬಂದಿತ್ತು. ಅದಕ್ಕೆ ಸೂಕ್ತ ಲೆಕ್ಕ ಕೊಡಿ ಎಂದು ವಚನಾನಂದ ಸ್ವಾಮೀಜಿ ಮತ್ತು ಅವರ ಭಕ್ತರು ಪ್ರಶ್ನೆ ಮಾಡಿದ್ದರು. ಪಂಚಮಸಾಲಿ ಮಠದ ಟ್ರಸ್ಟ್​ ಸಭೆಯ ಕೆಲ ವಿಡಿಯೋ ವೈರಲ್ ಆಗಿದ್ದವು. ಕೋಟ್ಯಂತರ ರೂ ಅವ್ಯವಹಾರ ಆಗಿದೆ ಎಂದು ಟ್ರಸ್ಟಿಗಳೇ ಒಪ್ಪಿಕೊಂಡಿದ್ದರು. ಹೀಗಾಗಿ ಈ ಜಗಳ ತೀವ್ರ ಆಗುತ್ತಿದ್ದಂತೆ ಸ್ವಾಮೀಜಿಯನ್ನ ಉಚ್ಚಾಟನೆ ಮಾಡಲಾಗಿತ್ತು. ಹೀಗಾಗಿ ಒಂದು ಗುಂಪು ಸ್ವಾಮೀಜಿ ಪರ ಗಟ್ಟಿಯಾಗಿ ನಿಂತಿತ್ತು. ಇದರಿಂದ ಎರಡು ಗುಂಪುಗಳಾಗಿ ಸಂಘರ್ಷ ಶುರುವಾಗಿತ್ತು. ಇದೀಗ ಆ ಸಂಘರ್ಷ ಶಮನ ಆಗುತ್ತಿದೆ. ಆದರೆ ಸ್ವಾಮೀಜಿ ಪರ ಭಕ್ತರಲ್ಲಿ ಟ್ರಸ್ಟ್​ ವಿರುದ್ಧ ಆಕ್ರೋಶ ಮಾತ್ರ ಕಡಿಮೆ ಆಗಿಲ್ಲ.

ಇದನ್ನೂ ಓದಿ: ಪೋಕ್ಸೋ ಕೇಸ್​​: ದಾವಣಗೆರೆ ಜಿಲ್ಲಾ ವಿಶೇಷ ಕೋರ್ಟ್​​ನಿಂದ ವಚನಾನಂದ ಶ್ರೀಗೆ ಜಾಮೀನು ಮಂಜೂರು

ಹೀಗೆ ನಿರಂತರವಾಗಿ ಸಂಘರ್ಷದ ನೆಲವಾಗಿದ್ದ ಪಂಚಮಸಾಲಿ ಮಠದಲ್ಲಿ ಈಗ ಸಹಜ ವಾತಾವರಣ ಕಂಡು ಬರುತ್ತಿದೆ. ಆದರೆ ಟ್ರಸ್ಟಿನವರು ಮಾತ್ರ ಮಠ ಪ್ರವೇಶ ಮಾಡುತ್ತಿಲ್ಲ. ಸ್ವಾಮೀಜಿ ಪರ ಭಕ್ತರು ಮಠವನ್ನ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಇಷ್ಟರಲ್ಲಿಯೇ ಒಂದು ದೊಡ್ಡ ಸಮಾರಂಭಕ್ಕೆ ಸಿದ್ಧತೆ ನಡೆಯಲಿದೆ ಎಂಬುವುದು ಸ್ವಾಮೀಜಿ ಪರ ಭಕ್ತರಿಂದ ಬಂದ ಮಾಹಿತಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮೋದಿ ಕಾಲು ತೊಳೆದು ನೀರು ಕುಡಿಯುತ್ತೇನೆ: ಪ್ರಧಾನಿಯನ್ನು ವಿಷ್ಣು ಅವತಾರ ಎಂದ ನಟ ಸುದೇಶ್ ಬೇರಿ – Kannada News | Border movie Actor Sudesh Berry calls PM Narendra Modi Vishnu Avatar wants to wash his feet

‘ಬಾರ್ಡರ್’ ಸಿನಿಮಾ ಖ್ಯಾತಿಯ ಬಾಲಿವುಡ್ ನಟ ಸುದೇಶ್ ಬೇರಿ (Sudesh Berry) ಅವರು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ನೀಡಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ಮೋದಿ (Narendra Modi) ಅವರನ್ನು ‘ಭಗವಾನ್ ವಿಷ್ಣುವಿನ ಅವತಾರ’ ಎಂದು ಬಣ್ಣಿಸಿರುವ ಅವರು, ಅವಕಾಶ ಸಿಕ್ಕರೆ ಅವರ ಪಾದಗಳನ್ನು ತೊಳೆದು ಆ ನೀರನ್ನು ಕುಡಿಯುವುದಾಗಿ ತಿಳಿಸಿದ್ದಾರೆ. ‘ಅಕಂಪನಿ ಅಕ್ಕಿ’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಸುದೇಶ್ ಬೆರಿ, ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಹಾಗೂ ಇತರ ಸಂಘಟನೆಗಳ ವಿರುದ್ಧ ಹರಿದಾಯ್ದಿದ್ದಾರೆ.

ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಸುದೇಶ್ ಬೇರಿ, ತಮಗೆ ಇಂತಹ ಸಂಘಟನೆಗಳ ಪರಿಚಯವಿಲ್ಲ ಎಂದಿದ್ದಾರೆ. ‘ನನಗೆ ಇಂತಹ ಯಾವುದೇ ಪಕ್ಷಗಳ ಅರಿವಿಲ್ಲ. ಇಂತಹ ಜನರು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಬದಲು ಹಿನ್ನಡೆಗೆ ತಳ್ಳುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ. ಧರಣಿ ನಡೆಸುವ ಬದಲು ಸಮಾಜಮುಖಿ ಕೆಲಸಗಳನ್ನು ಮಾಡುವಂತೆ ಯುವಜನರಿಗೆ ಅವರು ಸಲಹೆ ನೀಡಿದ್ದಾರೆ.

‘ಪ್ರತಿಭಟನೆ ಮಾಡುವುದು ಸಾಧನೆ ಅಲ್ಲ’ ಎಂದ ನಟ

‘ಪ್ರತಿಭಟನೆ ನಡೆಸುವುದು ಬಿಟ್ಟು ಸಮಾಜ ಸೇವೆ ಮಾಡುವ ಉದ್ದೇಶವಿದ್ದರೆ ಮಕ್ಕಳಿಗೆ ಉದ್ಯಾನವನಗಳನ್ನು ನಿರ್ಮಿಸಿ, ಹಿರಿಯ ನಾಗರಿಕರಿಗೆ ವೃದ್ಧಾಶ್ರಮಗಳನ್ನು ಕಟ್ಟಿ ಹಾಗೂ ಬಡವರಿಗೆ ವೈದ್ಯಕೀಯ ಚಿಕಿತ್ಸೆ ನೀಡಿ. ಸುಮ್ಮನೆ ಜಂತರ್ ಮಂತರ್‌ನಲ್ಲಿ ಕುಳಿತು ಪ್ರತಿಭಟನೆ ಮಾಡುವುದರಿಂದ ಏನೂ ಸಾಧನೆಯಾಗುವುದಿಲ್ಲ’ ಎಂದಿದ್ದಾರೆ ಸುದೇಶ್ ಬೇರಿ.

‘ಮೋದಿ ಜಿ ವಿಷ್ಣುವಿನ ಅವತಾರ’

ಪ್ರಧಾನಿ ಮೋದಿ ಪರ ವಹಿಸಿ ಮಾತನಾಡಿದ ಸುದೇಶ್ ಬೇರಿ ಅವರು, ‘ನರೇಂದ್ರ ಮೋದಿ ಅವರು ಏನು ತಪ್ಪು ಮಾಡಿದ್ದಾರೆ? ಅವರು ಚಹಾ ಮಾರಾಟ ಮಾಡುತ್ತಿದ್ದರು ಎಂದು ಕೆಲವರು ಹೇಳುತ್ತಾರೆ. ಚಹಾ ಮಾರಾಟ ಮಾಡುತ್ತಲೇ ಅವರು ಇಡೀ ಪ್ರಪಂಚವನ್ನು ಸುತ್ತಿದ್ದಾರೆ. ಈಗ ನನಗೆ ಮೋದಿ ಜಿ ಅವರ ಪಾದಗಳನ್ನು ತೊಳೆದು ಆ ನೀರನ್ನು ಕುಡಿಯುವ ಆಸೆಯಿದೆ. ಯಾರಾದರೂ ಅವರೊಂದಿಗೆ ಭೇಟಿಗೆ ವ್ಯವಸ್ಥೆ ಮಾಡಿದರೆ ಸಾಕು. ನಾನು ಅವರನ್ನು ಎಂದೂ ವೈಯಕ್ತಿಕವಾಗಿ ಭೇಟಿಯಾಗಿಲ್ಲ. ನಾವು ದೇವರನ್ನು ಕಣ್ಣಾರೆ ನೋಡದಿದ್ದರೂ ಪೂಜಿಸುತ್ತೇವೆ. ಅದೇ ರೀತಿ ನಾನು ಮೋದಿ ಜಿ ಅವರನ್ನು ಗೌರವಿಸುತ್ತೇನೆ’ ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿಗಳ ಹೋರಾಟಕ್ಕೆ ನಟಿ ಜ್ಯೋತಿಕಾ ಬೆಂಬಲ: ಟ್ರೋಲ್‌ ಮಾಡಿದವರಿಗೆ ತಿರುಗೇಟು

‘ಈಗಾಗಲೇ ರಾಮರಾಜ್ಯ ಬಂದದೆ’

‘ಇದು ರಾಜಕೀಯ ಅಥವಾ ಪಕ್ಷಕ್ಕೆ ಸೀಮಿತವಾದ ಅಭಿಮಾನವಲ್ಲ. ಒಬ್ಬ ಮಾನವೀಯ ಮೌಲ್ಯವುಳ್ಳ ವ್ಯಕ್ತಿಯಾಗಿ ನಾನು ಅವರನ್ನು ಪ್ರೀತಿಸುತ್ತೇನೆ. ಭಾರತದಲ್ಲಿ ಈಗಾಗಲೇ ರಾಮರಾಜ್ಯ ಬಂದಿದೆ. ಇದನ್ನು ಅನುಭವಿಸಬೇಕೇ ಹೊರತು ವಿವರಿಸಲು ಸಾಧ್ಯವಿಲ್ಲ’ ಎಂದು ಸುದೇಶ್ ಬೇರಿ ಹೇಳಿದ್ದಾರೆ. ಇದರ ಜೊತೆಗೆ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಡಳಿತ ವೈಖರಿಯನ್ನೂ ಸುದೇಶ್ ಬೇರಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

U19 World Cup 2027: 1 ರನ್​ನ್ನಿಂದ ಗೆದ್ದು ವಿಶ್ವಕಪ್​ಗೆ ಅರ್ಹತೆ ಪಡೆದ ಯುಎಇ – Kannada News | UAE Women U19 Qualify for World Cup 2027: Thrilling 1 Run Win vs Malaysia

ಐಸಿಸಿ ಮಹಿಳಾ ಅಂಡರ್-19 ವಿಶ್ವಕಪ್ 2027 (ICC U19 Women’s World Cup 2027) ಏಷ್ಯಾ ಕ್ವಾಲಿಫೈಯರ್‌ನಲ್ಲಿ ಇಂದು ಯುಎಇ ಮತ್ತು ಮಲೇಷ್ಯಾ (UAE vs Malaysia) ತಂಡಗಳು ಮುಖಾಮುಖಿಯಾಗಿದ್ದವು. ಉಭಯ ತಂಡಗಳ ನಡುವಿನ ಈ ರೋಮಾಂಚಕ ಪಂದ್ಯದಲ್ಲಿ ಯುಎಇ ಕೇವಲ 1 ರನ್​ಗಳಿಂದ ಮಲೇಷ್ಯಾ ತಂಡವನ್ನು ಮಣಿಸುವ ಮೂಲಕ ಮೊದಲ ಬಾರಿಗೆ ಅಂಡರ್-19 ವಿಶ್ವಕಪ್​ಗೆ ಅರ್ಹತೆ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಯುಎಇ ಮಹಿಳಾ ತಂಡವು ಮೊದಲು ಬ್ಯಾಟ್ ಮಾಡಿ 19.3 ಓವರ್‌ಗಳಲ್ಲಿ ಕೇವಲ 95 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಮಲೇಷ್ಯಾ ಪೂರ್ಣ 20 ಓವರ್‌ಗಳನ್ನು ಆಡಿ ಕೇವಲ ಆರು ವಿಕೆಟ್‌ಗಳನ್ನು ಕಳೆದುಕೊಂಡಿತ್ತಾದರೂ 94 ರನ್‌ಗಳಿಸಲಷ್ಟೇ ಶಕ್ತವಾಯಿತು.

100 ರನ್​ಗಳ ಗಡಿ ದಾಟಲಿಲ್ಲ

ಮಲೇಷ್ಯಾದ ರಾಜಧಾನಿ ಕೌಲಾಲಂಪುರದಲ್ಲಿ ನಡೆದ ಈ ಏಷ್ಯಾ ಕ್ವಾಲಿಫೈಯರ್‌ನ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಯುಎಇ ಕೇವಲ ಎರಡಂಕಿ ಮೊತ್ತ ದಾಖಲಿಸಲಷ್ಟೇ ಶಕ್ತವಾಯಿತು. ಯುಎಇ ತಂಡ 19.3 ಓವರ್‌ಗಳಲ್ಲಿ ಕೇವಲ 95 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಆರಂಭಿಕ ಆಟಗಾರ್ತಿ ಅಲ್ ಮಸಿರಾ ಜಹಾಂಗೀರ್ 31 ರನ್‌ ಗಳಿಸಿದರೆ, ತಂಡದ ನಾಲ್ವರು ಬ್ಯಾಟರ್​ಗಳು ರನೌಟ್ ಆದರು. ಹೀಗಾಗಿ ಯುಎಇ ತಂಡಕ್ಕೆ 100 ರನ್​ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ.

1 ರನ್ ಸೋಲು

ಈ ಗುರಿ ಬೆನ್ನಟ್ಟಿದ ಮಲೇಷ್ಯಾ ಪೂರ್ಣ 20 ಓವರ್‌ಗಳನ್ನು ಆಡಿ ಕೇವಲ ಆರು ವಿಕೆಟ್‌ಗಳನ್ನು ಕಳೆದುಕೊಂಡಿತ್ತಾದರೂ ಗುರಿ ಬೆನ್ನಟ್ಟಲು ಸಾಧ್ಯವಾಗಲಿಲ್ಲ. ತಂಡವು ಕೇವಲ 94 ರನ್‌ಗಳಿಸಲಷ್ಟೇ ಶಕ್ತವಾಗಿ 1 ರನ್ನಿಂದ ಪಂದ್ಯವನ್ನು ಸೋತಿದ್ದು ಮಾತ್ರವಲ್ಲದೆ ವಿಶ್ವಕಪ್​ಗೆ ಅರ್ಹತೆ ಪಡೆಯುವುದರಿಂದಲೂ ವಂಚಿತವಾಯಿತು. ತಂಡದ ಪರ ನುರಿನ್ ಇಮಾನಿನಾ 36 ರನ್‌ ಬಾರಿಸಿದರೆ, ಆರಂಭಿಕ ಆಟಗಾರ್ತಿ ನೂರ್ ಆಲಿಯಾ ಅವರ 25 ಎಸೆತಗಳಲ್ಲಿ 12 ರನ್‌ಗಳ ನಿಧಾನಗತಿಯ ಇನ್ನಿಂಗ್ಸ್ ತಂಡಕ್ಕೆ ದುಬಾರಿ ಎನಿಸಿತು.

IND vs ZIM: ವಿಶ್ವಕಪ್ ಫೈನಲ್‌ನಲ್ಲಿ 175 ರನ್! ಮತ್ತೆ ಅಬ್ಬರಿಸ್ತಾರಾ ವೈಭವ್?

ವಿಶ್ವಕಪ್​ಗೆ ಅರ್ಹತೆ ಪಡೆದ ಯುಎಇ

ಮಹಾಕ್ ಠಾಕೂರ್ ನಾಯಕತ್ವದ ಯುಎಇ, ಇಡೀ ಅರ್ಹತಾ ಪಂದ್ಯಾವಳಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಎಂಟು ತಂಡಗಳ ಈ ಟೂರ್ನಮೆಂಟ್‌ನಲ್ಲಿ, ಯುಎಇ ಫೈನಲ್ ಸೇರಿದಂತೆ ತನ್ನ ಎಲ್ಲಾ ಐದು ಪಂದ್ಯಗಳನ್ನು ಗೆದ್ದು ವಿಶ್ವಕಪ್‌ಗೆ ಅರ್ಹತೆ ಗಳಿಸಿತು. ತಂಡವು ಈಗ 2027 ರಲ್ಲಿ ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ನಡೆಯಲಿರುವ ಟೂರ್ನಮೆಂಟ್‌ನಲ್ಲಿ ಭಾಗವಹಿಸಲಿದ್ದು, ಒಟ್ಟು 16 ತಂಡಗಳು ಪ್ರಶಸ್ತಿಗಾಗಿ ಸ್ಪರ್ಧಿಸಲಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:00 pm, Thu, 30 July 26

Source link

ರಾಹುಲ್ ಸಭೆ ಅಂತ್ಯ, ಬೆಂಗಳೂರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು? – Kannada News | Karnataka Cabinet Expansion: Meeting Ends At Kharge’s Residence, Final List In 2 Days Says High Command

ನವದೆಹಲಿ, (ಜುಲೈ 30): ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ (Karnataka Cabinet Expansion) ಅಂತಿಮ ಘಟ್ಟ ತಲುಪಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಇಂದು (ಜುಲೈ 30) ರಾಹುಲ್ ಗಾಂಧಿ (Rahul Gandhi) ರಾಜ್ಯ ನಾಯಕರ ಜೊತೆ ಸಭೆ ಮಾಡಿದರು. ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಬಿಕೆ ಹರಿಪ್ರಸಾದ್, ಕೆಸಿ ವೇಣುಗೋಪಾಲ್, ಸುರ್ಜೆವಾಲ ಹಾಗೂ ಮಲ್ಲಿಕಾರ್ಜುನ ಖರ್ಗೆ ಸಭೆಯಲ್ಲಿ ಭಾಗಿಯಾಗಿದ್ದು, ನೂತನ ಸಚಿವರ ಪಟ್ಟಿ ಬಗ್ಗೆ ಮಾತುಕತೆ ನಡೆಸಿದ್ದಾರೆ. ಇದೀಗ ಸಭೆ ಅಂತ್ಯವಾಗಿದ್ದು, ಡಿಕೆ ಶಿವಕುಮಾರ್ ನಾಲ್ಕು ದಿನಗಳ ಬಳಿಕ ಇವತ್ತು ರಾತ್ರಿಯೇ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಆದ್ರೆ, ನೂತನ ಸಚಿವ ಪಟ್ಟಿ ಮಾತ್ರ ಇನ್ನೂ ನಿಗೂಢವಾಗಿದೆ.

ಯಾಕಂದ್ರೆ ರಾಹುಲ್ ಗಾಂಧಿ ಅವರು ರಾಜ್ಯ ನಾಯಕರೊಂದಿಗಿನ ಸಭೆ ಬಳಿಕ ಖರ್ಗೆ, ಸುರ್ಜೆವಾಲ, ವೇಣುಗೋಪಾಲ್ ಜೊತೆ ಚರ್ಚೆ ಮುಂದುವರೆಸಿದ್ದು, ಪಟ್ಟಿ ಫೈನಲ್ ಮಾಡಿ ಭಾನುವಾರ ರಾತ್ರಿ ರವಾನಿಸುವ ಸಾಧ್ಯತೆಗಳಿವೆ. ಹೀಗಾಗಿ  ಸಂಪುಟ ವಿಸ್ತರಣೆ ಸಂಬಂಧ ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲೇ ಬೀಡು ಬಿಟ್ಟಿದ್ದ ಸಿಎಂ ಡಿಕೆ ಶಿವಕುಮಾರ್ ಇಂದು ರಾತ್ರಿಯೇ ಬೆಂಗಳೂರಿಗೆ ವಾಪಸ್ ಆಗಲಿದ್ದು, ಆಗಸ್ಟ್ 3ರಂದು ಸೋಮವಾರ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯುವ ಸಾಧ್ಯತೆಗಳಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version