‘ರಾಮಾಯಣ’ ಟ್ರೇಲರ್​​ನಲ್ಲಿ ಪ್ರಮುಖ ಪಾತ್ರವೇ ಮಿಸ್; ಅಭಿಮಾನಿಗಳ ಬೇಸರ – Kannada News | Ramayana Trailer Out: Fans Disappointed Over Sunny Deol’s Missing Hanuman Glimpse

ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ (Ramayana) ಭವ್ಯ ಟ್ರೇಲರ್ ಇಂದು ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಚಿತ್ರದ ವಿಶ್ಯುಯಲ್ ವೈಭವ ಹಾಗೂ ಪಾತ್ರಧಾರಿಗಳ ಲುಕ್ ಪ್ರೇಕ್ಷಕರಲ್ಲಿ ರೋಮಾಂಚನ ಉಂಟುಮಾಡಿದೆ. ಟ್ರೇಲರ್‌ನಲ್ಲಿ ಒಂದು ಪ್ರಮುಖ ಪಾತ್ರದ ಅನುಪಸ್ಥಿತಿ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ. ರಾಮಾಯಣ ಮಹಾಕಾವ್ಯದ ಅತಿ ದೊಡ್ಡ ಶಕ್ತಿಯಾಗಿರುವ ಆಂಜನೇಯನ ದರ್ಶನ ಮೊದಲ ಝಲಕ್‌ನಲ್ಲಿ ಸಿಗದಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಟ್ರೇಲರ್‌ನಲ್ಲಿ ಮಿಸ್ ಆದ ಹನುಮಂತ

ಚಿತ್ರದಲ್ಲಿ ಬಾಲಿವುಡ್‌ನ ಹಿರಿಯ ನಟ ಸನ್ನಿ ಡಿಯೋಲ್ ಅವರು ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ಈಗಾಗಲೇ ಅಧಿಕೃತವಾಗಿದೆ. ಆದರೆ, ಇಂದು ಬಿಡುಗಡೆಯಾದ ಟ್ರೇಲರ್‌ನಲ್ಲಿ ಎಲ್ಲೂ ಅವರ ಪಾತ್ರದ ಝಲಕ್ ಕಾಣಿಸಿಕೊಂಡಿಲ್ಲ. ರಾಮ, ಸೀತೆ, ಲಕ್ಷ್ಮಣ ಹಾಗೂ ರಾವಣನ ಅಬ್ಬರಕ್ಕೆ ಆದ್ಯತೆ ನೀಡಿರುವ ಚಿತ್ರತಂಡ, ಬಜರಂಗಬಲಿಯ ಲುಕ್ ಅನ್ನು ಸದ್ಯಕ್ಕೆ ಸಸ್ಪೆನ್ಸ್ ಆಗಿ ಇಟ್ಟಿರುವುದು ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ.

ಅಭಿಮಾನಿಗಳ ಬೇಸರ ಹಾಗೂ ಪ್ರಶ್ನೆ

ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಸಿನಿಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ‘ನಮ್ಮ ಹನುಮಂತ ಎಲ್ಲಿದ್ದಾನೆ?’ಎಂದು ಪ್ರಶ್ನಿಸಲು ಶುರು ಮಾಡಿದ್ದಾರೆ. ರಾಮಾಯಣದ ಕಥೆಯಲ್ಲಿ ಹನುಮಂತನ ಪಾತ್ರ ಅತ್ಯಂತ ಹೈಲೈಟ್ ಆಗಿರುತ್ತದೆ. ಅಂತಹದ್ದರಲ್ಲಿ ಟ್ರೇಲರ್‌ನಲ್ಲಿ ಒಂದು ಪುಟ್ಟ ದೃಶ್ಯದಲ್ಲೂ ಆಂಜನೇಯನನ್ನು ತೋರಿಸದೇ ಇರುವುದು ಅಭಿಮಾನಿಗಳಿಗೆ ತೀವ್ರ ನಿರಾಶೆ ಉಂಟುಮಾಡಿದೆ.

ಬ್ರಹ್ಮೀ ಮುಹೂರ್ತದಲ್ಲಿ ಬಿಡುಗಡೆ

ಭಾರತೀಯ ಕಾಲಮಾನ ಮುಂಜಾನೆ 4:15ರ ಬ್ರಾಹ್ಮೀ ಮುಹೂರ್ತದಲ್ಲಿ ಈ ಟ್ರೇಲರ್ ಅನ್ನು ಡಿಜಿಟಲ್ ಪರದೆಯ ಮೇಲೆ ಅನಾವರಣಗೊಳಿಸಲಾಗಿದೆ. ಚಿತ್ರಮಂದಿರಗಳಲ್ಲಿ ಇದು ಹಾಲಿವುಡ್‌ನ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾದ ಜೊತೆಗೆ ಪ್ರದರ್ಶನಗೊಳ್ಳಲಿದೆ. ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ವೇದಿಕೆಯಲ್ಲಿ ಜಾಗತಿಕ ಪ್ರೇಕ್ಷಕರ ಮುಂದೆ ಈ ಟ್ರೇಲರ್ ಅನ್ನು ಮೊದಲು ಪರಿಚಯಿಸಲಾಗಿತ್ತು.

ದೃಶ್ಯ ವೈಭವದ ಹೈಲೈಟ್ಸ್

ಹಾಲಿವುಡ್‌ನ ಡಿಎನ್‌ಇಜಿ ಸ್ಟುಡಿಯೋಸ್ ರೂಪಿಸಿರುವ ಈ ಚಿತ್ರದ ವಿಶ್ಯುಯಲ್ಸ್ ಕಣ್ಣು ಕೋರೈಸುವಂತಿವೆ. ರಾಮನ ಅಯೋಧ್ಯೆ, ಸೀತೆಯ ಸ್ವಯಂವರ, ಲಕ್ಷ್ಮಣನಿಂದ ಶೂರ್ಪನಖಿಯ ಮೂಗು ಕೊಯ್ಯುವ ದೃಶ್ಯ ಹಾಗೂ ಲಕ್ಷ್ಮಣ ರೇಖೆ ಎಳೆಯುವ ದೃಶ್ಯ ಮೂಡಿಬಂದಿವೆ. ರಾಮನಾಗಿ ರಣಬೀರ್ ಕಪೂರ್ ಶಾಂತ ಸ್ವಭಾವದಲ್ಲಿ ಮಿಂಚಿದ್ದರೆ, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ತಮ್ಮ ರೌದ್ರಾವತಾರದಿಂದ ಇಡೀ ಟ್ರೇಲರ್ ಅನ್ನು ಆವರಿಸಿಕೊಂಡಿದ್ದಾರೆ.

ಇದನ್ನೂ ಓದಿ: ರಾಮಾಯಣ ಟ್ರೇಲರ್​ನಲ್ಲಿ ರಾವಣನ ಪಾತ್ರದ ಮೂಲಕ ಅಬ್ಬರಿಸಿ ಬೊಬ್ಬಿರಿದ ಯಶ್

ಅತಿ ದೊಡ್ಡ ಬಜೆಟ್‌ನ ಸಿನಿಮಾ

ನಿತೇಶ್ ತಿವಾರಿ ನಿರ್ದೇಶನದ ಈ ದೃಶ್ಯಕಾವ್ಯವನ್ನು ಸುಮಾರು 4,000 ಕೋಟಿ ರೂಪಾಯಿ ಭಾರಿ ವೆಚ್ಚದಲ್ಲಿ ಎರಡು ಭಾಗಗಳಾಗಿ ನಿರ್ಮಿಸಲಾಗುತ್ತಿದೆ. ಆಸ್ಕರ್ ಪ್ರಶಸ್ತಿ ವಿಜೇತರಾದ ಹನ್ಸ್ ಜಿಮ್ಮರ್ ಹಾಗೂ ಎ.ಆರ್. ರೆಹಮಾನ್ ಮೊದಲ ಬಾರಿಗೆ ಜೊತೆಯಾಗಿ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಹನುಮಂತನ ಪಾತ್ರವನ್ನು ಸಸ್ಪೆನ್ಸ್ ಆಗಿ ಇಟ್ಟಿರುವ ಈ ಚಿತ್ರದ ಮೊದಲ ಭಾಗವು 2026ರ ದೀಪಾವಳಿ ಹಬ್ಬಕ್ಕೆ ವಿಶ್ವಾದ್ಯಂತ ಐಮ್ಯಾಕ್ಸ್ ಪರದೆಯ ಮೇಲೆ ಅಪ್ಪಳಿಸಲಿದೆ.

ಪ್ರಶ್ನೆ: ರಾಮಾಯಣ ರಿಲೀಸ್ ಯಾವಾಗ? 
ಉತ್ತರ:
ದೀಪಾವಳಿ

ಪ್ರಶ್ನೆ: ರಾಮಾಯಣದಲ್ಲಿ ಹನುಮಂತನ ಪಾತ್ರಧಾರಿ ಯಾರು?
ಉತ್ತರ: ಸನ್ನಿ ಡಿಯೋಲ್

ಪ್ರಶ್ನೆ: ರಾಮಾಯಣ ಸಿನಿಮಾ ನಿರ್ದೇಶನ ಯಾರದ್ದು?
ಉತ್ತರ: ನಿತೇಶ್ ತಿವಾರಿ

Published On – 9:38 am, Thu, 30 July 26

Source link

ಯಾವ ಬೌಲರ್ ಕಂಡರೆ ಭಯ? ವೈಭವ್ ಸೂರ್ಯವಂಶಿ ಖಡಕ್ ಉತ್ತರ – Kannada News | Fearless Vaibhav Sooryavanshi’s 4 Word Viral Reply Stuns Cricket World!

ಟಿ20 ಕ್ರಿಕೆಟ್‌ನ ಸಿಡಿಲಬ್ಬರದ ಸಿಡಿಲಮರಿ ವೈಭವ್ ಸೂರ್ಯವಂಶಿ ಜಗತ್ತಿನ ಯಾವುದಾದರೂ ಬೌಲರ್‌ಗೆ ಹೆದರುತ್ತಾರಾ? ಇಂತಹದ್ದೊಂದು ಆಸಕ್ತಿದಾಯಕ ಪ್ರಶ್ನೆಯನ್ನು ಈ ಯುವ ದಾಂಡಿಗನ ಮುಂದಿಡಲಾಗಿತ್ತು. ಇದಕ್ಕೆ ವೈಭವ್ ನೀಡಿದ ಕೇವಲ ನಾಲ್ಕು ಪದಗಳ ಉತ್ತರ ಇಡೀ ಕ್ರಿಕೆಟ್ ಲೋಕವೇ ಬೆರಗಾಗುವಂತೆ ಮಾಡಿದೆ.

ರಾಜಸ್ಥಾನ್ ರಾಯಲ್ಸ್ ಹಂಚಿಕೊಂಡಿರುವ ಆ ಲಘು ಧಾಟಿಯ ಸಂಭಾಷಣೆಯ ವಿಡಿಯೋದಲ್ಲಿ, ನಿರೂಪಕರು ವೈಭವ್‌ಗೆ ಒಂದು ಆಸಕ್ತಿದಾಯಕ ಪ್ರಶ್ನೆ ಕೇಳುತ್ತಾರೆ, “ನೀವು ಎದುರಿಸಲು ಇಷ್ಟಪಡದ ಅಥವಾ ನಿಮಗೆ ಭಯ ಹುಟ್ಟಿಸುವ ಒಬ್ಬ ಬೌಲರ್ ಹೆಸರನ್ನು ಹೇಳಿ?”

ಇದಕ್ಕೆ ಕಿಂಚಿತ್ತೂ ತಡಕಾಡದೆ, ಮುಖದಲ್ಲಿ ಸಣ್ಣ ನಗೆಯೊಂದಿಗೆ ವೈಭವ್ ನೀಡಿದ ನೇರ ಉತ್ತರ: “ಕೋಯಿ ನಹೀ ಹೈ ಅಭಿ” (No one till now – ಇದುವರೆಗೆ ಯಾರೂ ಇಲ್ಲ!). ಯುವ ದಾಂಡಿಗನ ಈ ಛಲದ ಮಾತು, ಈ ಹದಿಹರೆಯದ ಆಟಗಾರನಿಗೆ ಜಾಗತಿಕ ವೇದಿಕೆಯಲ್ಲಿರುವ ಬೌಲರ್‌ಗಳ ಬಗ್ಗೆ ಯಾವುದೇ ಭಯವಿಲ್ಲ ಎಂಬುದನ್ನು ಸಾಬೀತುಪಡಿಸಿದೆ.

ಮೈದಾನದಲ್ಲೂ ಅಬ್ಬರ, ಮಾತಿನಲ್ಲೂ ಗತ್ತು!

ವೈಭವ್ ಅವರ ಈ ಮಾತು ಕೇವಲ ಅಹಂಕಾರವಲ್ಲ, ಬದಲಿಗೆ ಅವರು ಮೈದಾನದಲ್ಲಿ ತೋರಿಸುತ್ತಿರುವ ಅಪ್ರತಿಮ ಫಾರ್ಮ್‌ನ ಪ್ರತಿಬಿಂಬವಾಗಿದೆ. ಜಸ್​ಪ್ರೀತ್ ಬುಮ್ರಾ, ಜೋಶ್ ಹೇಝಲ್​ವುಡ್, ಮತ್ತು ಪ್ಯಾಟ್ ಕಮಿನ್ಸ್ ಅವರಂತಹ ವಿಶ್ವದ ನಂ.1 ವೇಗಿಗಳ ಎಸೆತಗಳಲ್ಲೇ ಅತ್ಯಂತ ಸುಲಭವಾಗಿ ಬೌಂಡರಿ ಬಾರಿಸುವ ಮೂಲಕ ವೈಭವ್ ಈಗಾಗಲೇ ತಮ್ಮ ದಕ್ಷತೆಯನ್ನು ಸಾಬೀತುಪಡಿಸಿದ್ದಾರೆ.

ಯುವ ದಾಂಡಿಗನ ದಾಖಲೆಗಳ ಸರಮಾಲೆ:

“ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಬೆನ್ನಲ್ಲೇ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಸಾಗುತ್ತಿರುವ ವೈಭವ್ ಸೂರ್ಯವಂಶಿ, ಇದೀಗ ಅದೇ ಅಬ್ಬರವನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಮುಂದುವರಿಸಿದ್ದಾರೆ. ಇದಕ್ಕೆ ಸಾಕ್ಷಿ ಇತ್ತೀಚಿನ ದಾಖಲೆಗಳು.

  • ಐಪಿಎಲ್ ಕಿಂಗ್:‌ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ 2026 ಟೂರ್ನಿಯಲ್ಲಿ ಬರೋಬ್ಬರಿ 776 ರನ್ ಸಿಡಿಸುವ ಮೂಲಕ ಅತ್ಯಧಿಕ ರನ್ ಗಳಿಸಿದ ಆಟಗಾರನಿಗೆ ಕೊಡುವ ‘ಆರೆಂಜ್ ಕ್ಯಾಪ್’ ಮತ್ತು ಟೂರ್ನಿಯ ‘ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್’ (MVP) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
  • ಅತೀ ಕಿರಿಯ ಆಟಗಾರ: ಇಂಗ್ಲೆಂಡ್ ವಿರುದ್ಧ ಓಲ್ಡ್ ಟ್ರಾಫರ್ಡ್‌ನಲ್ಲಿ ಕಣಕ್ಕಿಳಿಯುವ ಮೂಲಕ ಭಾರತದ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಐತಿಹಾಸಿಕ ದಾಖಲೆ ಬರೆದಿದ್ದಾರೆ.
  • ವಿಶ್ವ ದಾಖಲೆಯ ಅರ್ಧಶತಕ: ಜುಲೈ 23, 2026 ರಂದು ಝಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಕೇವಲ 19 ಎಸೆತಗಳಲ್ಲಿ 50 ರನ್ ಚಚ್ಚುವ ಮೂಲಕ, ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: IPL 2027: ಐಪಿಎಲ್ ಹರಾಜಿಗೂ ಮುನ್ನ CSK ‘ಮಾಸ್ಟರ್​ ಪ್ಲ್ಯಾನ್’

ಒಟ್ಟಾರೆಯಾಗಿ ಹೇಳುವುದಾದರೆ, ವೈಭವ್ ಸೂರ್ಯವಂಶಿ ಕೇವಲ ರನ್ ಗಳಿಸುತ್ತಿಲ್ಲ, ಬದಲಿಗೆ ಭಾರತೀಯ ಕ್ರಿಕೆಟ್‌ನ ಭವಿಷ್ಯದ ಸೂಪರ್‌ಸ್ಟಾರ್ ತಾನೇ ಎಂಬುದನ್ನು ಜಗತ್ತಿಗೆ ಸಾರುತ್ತಿದ್ದಾರೆ. ಕ್ರೀಡಾಂಗಣದಲ್ಲಿ ಬೌಲರ್‌ಗಳನ್ನು ಬೆಂಡೆತ್ತುವ ಈ 15ರ ಹರೆಯದ ಸಿಡಿಲಮರಿ, ಮಾತಿನಲ್ಲೂ ಅಷ್ಟೇ ಖಡಕ್ ಆಗಿ ಉತ್ತರಿಸಿರುವುದು ಅಭಿಮಾನಿಗಳ ಮನ ಗೆದ್ದಿದೆ. ಬೌಲರ್‌ಗಳ ಪಾಲಿಗೆ ಸಿಂಹಸ್ವಪ್ನವಾಗಿರುವ ಈ ಯುವ ಪ್ರತಿಭೆ ಮುಂದಿನ ದಿನಗಳಲ್ಲಿ ಭಾರತ ತಂಡವನ್ನು ಯಾವ ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Published On – 8:57 am, Thu, 30 July 26

Source link

ಪಾಕಿಸ್ತಾನಿ ಕಾಶ್ಮೀರವಿಲ್ಲ, ಅದು ಪಾಕ್ ಆಕ್ರಮಿತ ಕಾಶ್ಮೀರವಷ್ಟೇ, ನ್ಯೂಯಾರ್ಕ್ ಟೈಮ್ಸ್‌ನ ದಾರಿತಪ್ಪಿಸುವ ವರದಿಗೆ ಭಾರತ ತೀವ್ರ ಆಕ್ಷೇಪ – Kannada News | India Slams NYT Over Pakistani Kashmir Term: PoK is Integral Indian Territory

ನವದೆಹಲಿ, ಜುಲೈ 30: ಪಾಕಿಸ್ತಾನ ಆಕ್ರಮಿತ ಕಾಶ್ಮೀರ(POK)ವನ್ನು ಪಾಕಿಸ್ತಾನಿ ಕಾಶ್ಮೀರ ಎಂದು ಬಣ್ಣಿಸಿ ವರದಿ ಪ್ರಕಟಿಸಿದ್ದ ಅಮೆರಿಕದ ಪ್ರಸಿದ್ಧ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ ಶೀರ್ಷಿಕೆಗೆ ಭಾರತ ಸರ್ಕಾರ ಮತ್ತು ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿ ಅತ್ಯಂತ ಕಠಿಣ ಶಬ್ದಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ.

ಪತ್ರಿಕೆಯ ಶೀರ್ಷಿಕೆಯು ‘ಸಂಪೂರ್ಣ ತಪ್ಪಾದ ಮತ್ತು ಜನರನ್ನು ದಾರಿತಪ್ಪಿಸುವಂತಹದ್ದು’ ಎಂದು ಬಣ್ಣಿಸಿರುವ ಅಮೆರಿಕದಲ್ಲಿನ ಭಾರತೀಯ ರಾಯಭಾರ ಕಚೇರಿ, ಪ್ರಪಂಚದಲ್ಲಿ ಪಾಕಿಸ್ತಾನಿ ಕಾಶ್ಮೀರ ಎಂಬುದು ಯಾವುದೂ ಇಲ್ಲ, ಅದು ಪಾಕಿಸ್ತಾನದಿಂದ ಅಕ್ರಮವಾಗಿ ಆಕ್ರಮಿಸಲ್ಪಟ್ಟ ಭಾರತದ ಪಾಕ್ ಆಕ್ರಮಿತ ಕಾಶ್ಮೀರ (PoK) ಮಾತ್ರ ಎಂದು ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಸ್ಪಷ್ಟಪಡಿಸಿದೆ. ಜಮ್ಮು-ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಭಾರತದ ಸಂಪೂರ್ಣ ಅವಿಭಾಜ್ಯ ಹಾಗೂ ಬೇರ್ಪಡಿಸಲಾಗದ ಭಾಗಗಳಾಗಿವೆ ಮತ್ತು ಎಂದೆಂದಿಗೂ ಹಾಗೆಯೇ ಇರಲಿವೆ.

ಈ ಪ್ರದೇಶಗಳ ಕೆಲವು ಭಾಗಗಳನ್ನು ಪಾಕಿಸ್ತಾನ ಬಲವಂತವಾಗಿ ಅಕ್ರಮವಾಗಿ ಆಕ್ರಮಿಸಿಕೊಂಡಿದೆ. ಅಷ್ಟೇ ಅಲ್ಲದೆ, ಅಲ್ಲಿನ ಸ್ಥಳೀಯ ನಾಗರಿಕರ ಮೇಲೆ ಪಾಕ್ ಪಡೆಗಳು ನಿರಂತರವಾಗಿ ದೌರ್ಜನ್ಯ ಎಸಗುತ್ತಿವೆ ಎಂದು ರಾಜತಾಂತ್ರಿಕ ಕಾರ್ಯಾಚರಣೆ ಪುನರುಚ್ಚರಿಸಿದೆ.

ಪಿಒಕೆ (PoK) ಹಿಂಸಾಚಾರ ಮತ್ತು 30ಕ್ಕೂ ಹೆಚ್ಚು ನಾಗರಿಕರ ಸಾವು
ನ್ಯೂಯಾರ್ಕ್ ಟೈಮ್ಸ್ ವರದಿಯ ಹಿನ್ನೆಲೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪರಿಸ್ಥಿತಿ ಅತ್ಯಂತ ಭೀಕರವಾಗಿದೆ ಎಂಬ ಸತ್ಯ ಹೊರಬಿದ್ದಿದೆ. ಪಿಒಕೆಯಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಬೆಲೆ ಏರಿಕೆಯ ವಿರುದ್ಧ ‘ಜಂಟಿ ಅವಾಮಿ ಕ್ರಿಯಾ ಸಮಿತಿ’ನೇತೃತ್ವದಲ್ಲಿ ನಾಗರಿಕರು ರಾವಲಕೋಟೆಯಿಂದ ಮುಜಫರಾಬಾದ್‌ಗೆ ‘ಲಾಂಗ್ ಮಾರ್ಚ್’ ಕೈಗೊಂಡಿದ್ದರು.

ಮತ್ತಷ್ಟು ಓದಿ: ಪಿಒಕೆ ಪ್ರಧಾನಿಯಾಗಬೇಕೆಂಬ ನವಾಜ್ ಶರೀಫ್ ಆಸೆಗೆ ಅಲ್ಲಿನ ಕಾನೂನೇ ಅವರಿಗೆ ತೊಡಕು!

ಈ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನಿ ಭದ್ರತಾ ಪಡೆಗಳು ನಡೆಸಿದ ಭೀಕರ ಗುಂಡಿನ ದಾಳಿ ಮತ್ತು ದಮನ ಕಾರ್ಯಾಚರಣೆಯಲ್ಲಿ 30ಕ್ಕೂ ಹೆಚ್ಚು ಅಮಾಯಕ ನಾಗರಿಕರು ಸತ್ತು, 33ಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಪಿಒಕೆಯಲ್ಲಿ ಪಾಕಿಸ್ತಾನ ನಡೆಸುತ್ತಿರುವ ಚುನಾವಣೆಗಳು ತನ್ನ ಅಕ್ರಮ ಆಕ್ರಮಣ ಮತ್ತು ಭೀಕರ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮುಚ್ಚಿಹಾಕಲು ಆಡುತ್ತಿರುವ ನಾಟಕ ಎಂದು ನವದೆಹಲಿ ಬಣ್ಣಿಸಿದೆ.

ಭಾರತದ ಸಂಸತ್ತು 1994 ರಲ್ಲಿ ಸರ್ವಾನುಮತದಿಂದ ಅಂಗೀಕರಿಸಿದ ಐತಿಹಾಸಿಕ ನಿರ್ಣಯದ ಪ್ರಕಾರ, ಇಡೀ ಜಮ್ಮು-ಕಾಶ್ಮೀರ ಹಾಗೂ ಪಿಒಕೆ ಭಾರತದ ಭೌಗೋಳಿಕ ಗಡಿಯ ಒಳಗಿನ ಭಾಗವಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕ್ ಸೇನೆ ನಡೆಸುತ್ತಿರುವ ಮಾನವ ಹಕ್ಕುಗಳ ದೌರ್ಜನ್ಯವನ್ನು ಮರೆಮಾಚಿ, ‘ಪಾಕಿಸ್ತಾನಿ ಕಾಶ್ಮೀರ’ ಎಂದು ತಪ್ಪು ಶೀರ್ಷಿಕೆ ನೀಡುವ ಅಂತಾರಾಷ್ಟ್ರೀಯ ಪಾಶ್ಚಿಮಾತ್ಯ ಮಾಧ್ಯಮಗಳ ನಿಲುವನ್ನು ಭಾರತೀಯ ರಾಜತಾಂತ್ರಿಕರು ಜಾಗತಿಕ ವೇದಿಕೆಗಳಲ್ಲಿ ನಿರಂತರವಾಗಿ ಬಯಲು ಮಾಡುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

TV9 Kannada News Live: ದೆಹಲಿಯಲ್ಲಿಂದು ಸಿಡಬ್ಲ್ಯುಎಂಎ ತುರ್ತು ಸಭೆ, ‘ರಾಮಾಯಣ’ ಚಿತ್ರದ ಭವ್ಯ ಟ್ರೇಲರ್ ಬಿಡುಗಡೆ – Kannada News | TV9 Kannada Live Breaking News 30 July 2026 Parliament Monsoon Session, August Rule Changes Cauvery Water issues Karnataka News Latest Updates Online

Breaking News Today Live Updates in Kannada: ಕಾವೇರಿ ನದಿ ನೀರು ಹಂಚಿಕೆ ವಿವಾದ ಮತ್ತೊಮ್ಮೆ ತಾರಕಕ್ಕೇರಿದ್ದು, ತಮಿಳುನಾಡಿಗೆ ದಿನಂಪ್ರತಿ 3,500 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಇಂದು ನವದೆಹಲಿಯಲ್ಲಿ ನಡೆಯಲಿದೆ. ಇಂದು ಮಧ್ಯಾಹ್ನ 2:30ಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸಭೆ ನಿಗದಿಯಾಗಿದ್ದು, ಕಾವೇರಿ ಕೊಳ್ಳದ ರೈತರು ಹಾಗೂ ಸಾರ್ವಜನಿಕರ ಚಿತ್ತ ದೆಹಲಿ ಸಭೆಯತ್ತ ನೆಟ್ಟಿದೆ. ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ವೆಚ್ಚದಾಯಕ ಹಾಗೂ ಬಹುನಿರೀಕ್ಷಿತ ಚಿತ್ರವೆನಿಸಿಕೊಂಡಿರುವ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ (Ramayana) ಸಿನಿಮಾದ ಭವ್ಯ ಟ್ರೇಲರ್ ಬಿಡುಗಡೆಯಾಗಿದೆ. ಕಾಮನ್‌ವೆಲ್ತ್ ಗೇಮ್ಸ್ 2026ರ 6ನೇ ದಿನದ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್‌ಗಳು ತಮ್ಮ ಕಠಿಣ ಪರಿಶ್ರಮ ಮತ್ತು ಛಲದಿಂದ ಒಟ್ಟು 3 ಪದಕಗಳನ್ನು ಭಾರತದ ಮಡಿಲಿಗೆ ಹಾಕಿದ್ದಾರೆ. ಇದರ ಜತೆಗೆ ಸಚಿವ ಸಂಪುಟ ರಚನೆ ಹಾಗೂ ಸಚಿವ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ.

Source link

ಇಂದು ಚೆನ್ನಮ್ಮ 11ನೇ ದಿನದ ಕಾರ್ಯ: ಸಮಾಧಿ ಮುಂದೆಯೇ ಕುಳಿತು ದೇವೇಗೌಡರ ಕಣ್ಣೀರು – Kannada News | HD Deve Gowda Remembers Wife Chennamma with tears on Her 11th Day Rituals in Hassan

ಹಾಸನ, ಜುಲೈ 30: ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು ಧರ್ಮಪತ್ನಿ ಚೆನ್ನಮ್ಮ ಅವರ ನಿಧನದ ದುಃಖದಿಂದ ಹೊರಬರಲಾಗದೆ, ಅವರ ನೆನಪಲ್ಲಿ ಕಣ್ಣೀರಿಡುತ್ತಿದ್ದಾರೆ. ಪತ್ನಿಯ ಅಗಲಿಕೆಯ ನೋವಿನಿಂದ ಹೊರಬರಲು ಸಾಧ್ಯವಾಗದೆ, ಚೆನ್ನಮ್ಮ ಸಮಾಧಿ ಬಳಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಕುಟುಂಬ ಸದಸ್ಯರು ಮತ್ತು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಗೌಡರಿಗೆ ಪ್ರತಿದಿನ ಧೈರ್ಯ ತುಂಬುತ್ತಿದ್ದಾರೆ. ಇಂದು (ಜುಲೈ 30) ಚೆನ್ನಮ್ಮ ಅವರ 11ನೇ ದಿನದ ಉತ್ತರ ಕ್ರಿಯಾದಿ ಕಾರ್ಯವನ್ನು ಆಚರಿಸಲಾಗುತ್ತಿದೆ. ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ಬೆಟ್ಟದ ರಂಗನಾಥಸ್ವಾಮಿ ದೇಗುಲದ ತಪ್ಪಲಿನಲ್ಲಿರುವ ಸಮಾಧಿ ಬಳಿ ಈ ಕಾರ್ಯಕ್ರಮಕ್ಕೆ ಭಾರಿ ಸಿದ್ಧತೆಗಳನ್ನು ಮಾಡಲಾಗಿದೆ. ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆಯಿದೆ. ಜನರಿಗೆ ಪ್ರಸಾದ ವಿತರಣೆಗೆ 16 ಕೌಂಟರ್‌ಗಳನ್ನು ಸ್ಥಾಪಿಸಲಾಗಿದ್ದು, ಮಹಿಳೆಯರು ಮತ್ತು ವಿಐಪಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಯಾವುದೇ ನೂಕುನುಗ್ಗಲು ಆಗದಂತೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಕುಮಾರಸ್ವಾಮಿ ಅವರು ಸ್ವತಃ ಎಲ್ಲಾ ಸಿದ್ಧತೆಗಳನ್ನು ಪರಿಶೀಲಿಸಿದ್ದು, ಸಾವಿರಾರು ಸಿಬ್ಬಂದಿಗಳು ಆಹಾರ ತಯಾರಿಕೆಯಲ್ಲಿ ನಿರತರಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vastu Shastra: ಮನೆಯಲ್ಲಿ ಗುಲಾಬಿ ಗಿಡ ನೆಡುವುದು ಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು? – Kannada News | Is It Lucky to Keep a Rose Plant at Home? What Vastu Shastra Says

ಗುಲಾಬಿ ಗಿಡ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದರಲ್ಲೂ ಹೆಣ್ಣು ಮಕ್ಕಳಿರುವ ಪ್ರತಿ ಮನೆಯಲ್ಲೂ ಗುಲಾಬಿ ಗಿಡ ಇರಲೇಬೇಕು ಎನ್ನುವುದು ಹಲವರ ಆಸೆ. ಅದಕ್ಕಾಗಿಯೇ ಅನೇಕರು ತಮ್ಮ ಮನೆಗಳ ಮುಂದೆ ಅಥವಾ ಬಾಲ್ಕನಿಯಲ್ಲಿ ಗುಲಾಬಿ ಗಿಡಗಳನ್ನು ನೆಡುತ್ತಾರೆ. ಆದರೆ, “ಮನೆಯಲ್ಲಿ ಗುಲಾಬಿ ಗಿಡವನ್ನು ನೆಡಬಹುದೇ? ಇದು ವಾಸ್ತು ಪ್ರಕಾರ ಸರಿಯೇ?” ಎಂಬ ಅನುಮಾನ ಹಲವರಲ್ಲಿದೆ. ವಾಸ್ತು ಶಾಸ್ತ್ರದ ಪ್ರಕಾರ ಗುಲಾಬಿ ಗಿಡದ ಮಹತ್ವವೇನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಮನೆಯಲ್ಲಿ ಗುಲಾಬಿ ಗಿಡ ನೆಡುವುದರ ವಾಸ್ತು ಮಹತ್ವ:

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಗುಲಾಬಿ ಗಿಡವನ್ನು ನೆಡುವುದು ಅತ್ಯಂತ ಶುಭ ತರಲಿದೆ. ಇದು ಮನೆಗೆ ಅದೃಷ್ಟವನ್ನು ತರುವುದಲ್ಲದೆ, ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ, ಮನೆಯಲ್ಲಿ ಗುಲಾಬಿ ಗಿಡವಿದ್ದರೆ ಕುಟುಂಬದ ಸದಸ್ಯರ ನಡುವೆ ಪ್ರೀತಿ, ಆಪ್ಯಾಯತೆ ಹಾಗೂ ಸಾಮರಸ್ಯ ಬೆಳೆಯುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಸಕಾರಾತ್ಮಕ ಶಕ್ತಿ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ:

ಮನೆಯ ಆವರಣದಲ್ಲಿ ಗುಲಾಬಿ ಗಿಡವನ್ನು ಬೆಳೆಸುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗಿ, ಸಕಾರಾತ್ಮಕ ವಾತಾವರಣ ಹೆಚ್ಚಾಗುತ್ತದೆ. ಇದು ಮನೆಗೆ ಧನ-ಸಂಪತ್ತನ್ನು ಆಕರ್ಷಿಸಲು ನೆರವಾಗುತ್ತದೆ. ಗುಲಾಬಿಯು ಲಕ್ಷ್ಮಿ ದೇವಿಯ ನೆಚ್ಚಿನ ಹೂವುಗಳಲ್ಲಿ ಒಂದಾಗಿದೆ. ಹಾಗಾಗಿ ಮನೆಯಲ್ಲಿ ಇದನ್ನು ಇಡುವುದರಿಂದ ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದ ಸದಾ ಕಾಲ ದೊರೆಯುತ್ತದೆ ಎಂದು ವಾಸ್ತು ತಜ್ಞರು ತಿಳಿಸುತ್ತಾರೆ.

ಗುಲಾಬಿ ಗಿಡ ನೆಡಲು ಸೂಕ್ತವಾದ ದಿಕ್ಕು ಯಾವುದು?

ವಾಸ್ತು ಶಾಸ್ತ್ರ ನೀಡುವ ಉತ್ತಮ ಫಲಿತಾಂಶಗಳು ಸಿಗಬೇಕೆಂದರೆ ಗಿಡಗಳನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದು ಬಹಳ ಮುಖ್ಯ.

  • ಪೂರ್ವ ದಿಕ್ಕು: ಮನೆಯ ಹೊರಭಾಗದ ಪೂರ್ವ ದಿಕ್ಕಿನಲ್ಲಿ ನೆಡುವುದು ಅತ್ಯಂತ ಶ್ರೇಷ್ಠ.
  • ಉತ್ತರ ದಿಕ್ಕು: ಉತ್ತರ ದಿಕ್ಕಿನಲ್ಲಿಯೂ ಗುಲಾಬಿ ಗಿಡವನ್ನು ನೆಡಬಹುದು.

ಈ ಸೂಕ್ತ ದಿಕ್ಕುಗಳಲ್ಲಿ ಗುಲಾಬಿ ಗಿಡವನ್ನು ನೆಡುವುದರಿಂದ ಮನೆಗೆ ಉತ್ತಮ ಫಲಿತಾಂಶಗಳು ಹಾಗೂ ವಾಸ್ತು ಪ್ರಯೋಜನಗಳು ದೊರೆಯುತ್ತವೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಗಲ್ಫ್ ರಾಷ್ಟ್ರಗಳಿಗೂ ಲಗ್ಗೆ ಇಡಲು ಸಜ್ಜಾದ ‘ಕರಾವಳಿ; ಆರು ದಿನಗಳ ಗಳಿಕೆ ಎಷ್ಟು? – Kannada News | Prajwal Devaraj and Raj B Shetty Starrer ‘Karavali’ Headed to Gulf After Blockbuster Opening

ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿಬಂದಿರುವ, ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ನಟನೆಯ ‘ಕರಾವಳಿ’ ಸಿನಿಮಾ (Karavali Movie) ಬಾಕ್ಸ್ ಆಫೀಸ್‌ನಲ್ಲಿ ಧೂಳೀಪಟ ಮಾಡುತ್ತಿದೆ. ಕರಾವಳಿಯ ಹೆಮ್ಮೆಯ ಕಂಬಳದ ಅದ್ಭುತ ಪ್ರಪಂಚವನ್ನು ಬೆಳ್ಳಿಪರದೆಯ ಮೇಲೆ ಅದ್ಧೂರಿಯಾಗಿ ಅನಾವರಣಗೊಳಿಸಿರುವ ಈ ಚಿತ್ರಕ್ಕೆ ಕನ್ನಡಿಗರು ಫಿದಾ ಆಗಿದ್ದಾರೆ. ಹಲವು ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ, ಬಿಡುಗಡೆಯಾದ ಕೇವಲ ಒಂದೇ ವಾರದಲ್ಲಿ ಈಗ ಗಲ್ಫ್ ರಾಷ್ಟ್ರಗಳಿಗೂ ಲಗ್ಗೆ ಇಡಲು ಸಜ್ಜಾಗಿದೆ. ಈ ಮುಂಬರುವ ಶುಕ್ರವಾರದಿಂದ ದುಬೈ ಹಾಗೂ ಅಬುಧಾಬಿಯಲ್ಲೂ ‘ಕರಾವಳಿ’ ಅಬ್ಬರ ಶುರುವಾಗಲಿದ್ದು, ಅನಿವಾಸಿ ಭಾರತೀಯರನ್ನು ರಂಜಿಸಲಿದೆ.

ದಕ್ಷಿಣ ಭಾರತದ ಸೂಪರ್ ಹಿಟ್ ಚಿತ್ರಗಳಾದ ‘ಸರ್ವಂಮಯ’, ‘ಜನನಾಯಗನ್’, ‘ಬಾಲನ್’, ‘ಕರಪ್ಪು’, ‘ಪೆದ್ದಿ’ ಸೇರಿದಂತೆ ಹಲವು ಸಿನಿಮಾಗಳನ್ನು ಯಶಸ್ವಿಯಾಗಿ ವಿತರಣೆ ಮಾಡಿದ್ದ ಪ್ರಖ್ಯಾತ ‘ಫಾರಾಸ್ ಸಿನಿಮಾಸ್’ ಸಂಸ್ಥೆ ಈಗ ‘ಕರಾವಳಿ’ ಚಿತ್ರದ ಓವರ್‌ಸೀಸ್ ಹಕ್ಕುಗಳನ್ನು ಖರೀದಿಸಿ ಜಾಗತಿಕ ಮಟ್ಟದಲ್ಲಿ ರಿಲೀಸ್ ಮಾಡುತ್ತಿರುವುದು ವಿಶೇಷ.

ಜುಲೈ 24 ರಂದು ರಾಜ್ಯಾದ್ಯಂತ ಸುಮಾರು 175ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ದೊಡ್ಡ ಓಪನಿಂಗ್ ಪಡೆದುಕೊಂಡಿದ್ದ ‘ಕರಾವಳಿ’ ಚಿತ್ರಕ್ಕೆ, ಈಗ ಸಾರ್ವಜನಿಕರಿಂದ ಸಿಗುತ್ತಿರುವ ಪ್ರತಿಕ್ರಿಯೆ ನೋಡಿ ಚಿತ್ರಮಂದಿರಗಳ ಸಂಖ್ಯೆ ಹಾಗೂ ಶೋಗಳ ಲಿಸ್ಟ್ ಅನ್ನು ಮತ್ತಷ್ಟು ಹೆಚ್ಚಿಸಲಾಗಿದೆ ಎಂದು ವರದಿ ಆಗಿದೆ.

ಕಲೆಕ್ಷನ್ ವಿಚಾರದಲ್ಲೂ ‘ಕರಾವಳಿ’ ಹೊಸ ದಾಖಲೆ ಬರೆಯುತ್ತಿದೆ. ಬಿಡುಗಡೆಯಾದ ಮೊದಲ ದಿನವೇ ಗಾಂಧಿನಗರದಲ್ಲಿ 1 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಪ್ರಸ್ತುತ ಚಿತ್ರದ ಒಟ್ಟು ಗಳಿಕೆ ಭರ್ಜರಿ 6 ಕೋಟಿ ರೂಪಾಯಿಗಳ ಗಡಿ ದಾಟಿದೆ ಎಂದು ವರದಿ ಆಗಿದೆ. ಸ್ಯಾಂಡಲ್‌ವುಡ್‌ನ ಇಂದಿನ ಮಾರುಕಟ್ಟೆ ಪರಿಸ್ಥಿತಿಗೆ ಇದು ಅತ್ಯಂತ ದೊಡ್ಡ ಬಿಸಿನೆಸ್.

ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ ‘ಕರಾವಳಿ’ ಅಬ್ಬರ; ಸಿನಿಮಾದ ಯಶಸ್ಸಿಗೆ ರಾಜ್ ಬಿ ಶೆಟ್ಟಿ ಖುಷ್

ಈ ವರ್ಷ ಅತ್ಯುತ್ತಮ ಓಪನಿಂಗ್ ಪಡೆದುಕೊಂಡ ಕನ್ನಡದ ಟಾಪ್ ಸಿನಿಮಾಗಳ ಸಾಲಿಗೆ ‘ಕರಾವಳಿ’ ಸೇರ್ಪಡೆಯಾಗಿದೆ. ಕೇವಲ ಆರೇ ದಿನಗಳಲ್ಲಿ 5 ಲಕ್ಷಕ್ಕೂ ಅಧಿಕ ಸಿನಿಪ್ರಿಯರು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿರುವುದು ಚಿತ್ರದ ಯಶಸ್ಸಿಗೆ ಸಾಕ್ಷಿಯಾಗಿದೆ. ಕರ್ನಾಟಕದಲ್ಲಿ ಸೃಷ್ಟಿಯಾಗಿರುವ ಈ ಕ್ರೇಜ್ ನೋಡಿ ಪರಭಾಷೆಗಳಲ್ಲೂ ಭಾರಿ ಬೇಡಿಕೆ ವ್ಯಕ್ತವಾಗುತ್ತಿದ್ದು, ಮುಂದಿನ ವಾರದಲ್ಲೇ ಮಲಯಾಳಂ, ತೆಲುಗು ಹಾಗೂ ತಮಿಳು ಭಾಷೆಗಳಿಗೂ ಚಿತ್ರ ಡಬ್ ಆಗಿ ರಿಲೀಸ್ ಆಗುವ ಸಾಧ್ಯತೆ ದಟ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೆಚ್‌ಎಂಟಿ ಜಮೀನು ತೆರವುಗೊಳಿಸದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಡೆ: ಮರ ಕತ್ತರಿಸದಂತೆ ಹೆಚ್‌ಎಂಟಿಗೂ ಸೂಚನೆ – Kannada News | Bengaluru HMT Land: High Court Bars Govt Acquisition, HMT Not to Cut Trees

ಬೆಂಗಳೂರು, ಜು.30: ರಾಜಧಾನಿ ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಹೆಚ್‌ಎಂಟಿ ಲಿಮಿಟೆಡ್‌ಗೆ (HMT Limited) ಸೇರಿದ ಜಮೀನನ್ನು ಸ್ವಾಧೀನಪಡಿಸಿಕೊಳ್ಳದಂತೆ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಕರ್ನಾಟಕ ಹೈಕೋರ್ಟ್ ಬುಧವಾರ ಮಧ್ಯಂತರ ತಡೆ ನೀಡಿದೆ. ಅದೇ ಸಮಯದಲ್ಲಿ, ಈ ಜಮೀನಿನಲ್ಲಿ ಈಗಾಗಲೇ ಮೂರನೇ ವ್ಯಕ್ತಿಗಳಿಗೆ ಮಾರಾಟವಾದ ಜಾಗವನ್ನು ಹೊರತುಪಡಿಸಿ, ಉಳಿದ ಜಾಗದಲ್ಲಿ ಯಾವುದೇ ಮರಗಳನ್ನು ಕತ್ತರಿಸಬಾರದು ಎಂದು ಹೆಚ್‌ಎಂಟಿ ಸಂಸ್ಥೆಗೂ ನ್ಯಾಯಾಲಯ ನಿರ್ದೇಶಿಸಿದೆ.

ಬೆಂಗಳೂರು ನಗರದ ಅರಣ್ಯ ಉಪ ಸಂರಕ್ಷಣಾಧಿಕಾರಿ (DCF) ಅವರು ಜೂನ್ 16 ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಹೆಚ್‌ಎಂಟಿ ಲಿಮಿಟೆಡ್ ಮತ್ತು ಹೆಚ್‌ಎಂಟಿ ಮೆಷಿನ್ ಟೂಲ್ಸ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುರಾಜ್ ಗೋವಿಂದರಾಜ್ ಅವರಿದ್ದ ಪೀಠವು ಈ ಮಧ್ಯಂತರ ಆದೇಶ ನೀಡಿದೆ.

ನಗರದ ಹೆಚ್‌ಎಂಟಿ ಒಡೆತನದಲ್ಲಿರುವ 430 ಎಕರೆ 21.853 ಗುಂಟೆ ಜಮೀನನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವಂತೆ ಅರಣ್ಯ ಉಪ ಸಂರಕ್ಷಣಾಧಿಕಾರಿಗಳು ಜೂನ್ 16 ರಂದು ನೀಡಿದ್ದ ಆದೇಶವನ್ನು ಹೆಚ್‌ಎಂಟಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಸಂಸ್ಥೆಯ ಅಧ್ಯಕ್ಷರ ಸೂಚನೆಯಂತೆ ನ್ಯಾಯಾಲಯಕ್ಕೆ ಮುಚ್ಚಳಿಕೆ ನೀಡಿರುವ ಹೆಚ್‌ಎಂಟಿ ಪರ ವಕೀಲರು, “ತಮ್ಮ ವಶದಲ್ಲಿರುವ ಉಳಿದ ಜಮೀನನ್ನು ಮಾರಾಟ, ಗುತ್ತಿಗೆ, ಪರವಾನಗಿ ಸೇರಿದಂತೆ ಯಾವುದೇ ರೀತಿಯಲ್ಲೂ ಬೇರೆಯವರಿಗೆ ಹಸ್ತಾಂತರಿಸುವುದಿಲ್ಲ ಹಾಗೂ ಆಸ್ತಿಯ ಸ್ವರೂಪವನ್ನು ಬದಲಾಯಿಸುವುದಿಲ್ಲ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಪೋಸ್ಟ್: ಬೆಂಗಳೂರಿನಲ್ಲಿ 3 ಇನ್‌ಸ್ಟಾಗ್ರಾಮ್ ಖಾತೆಗಳ ವಿರುದ್ಧ ಎಫ್‌ಐಆರ್

ಕರ್ನಾಟಕ ಅರಣ್ಯ ಕಾಯ್ದೆಯ ಸೆಕ್ಷನ್ 64(ಎ) ಅಡಿಯಲ್ಲಿ ಜೂನ್ 15 ರಂದು ಈ ಆದೇಶ ಹೊರಡಿಸಲಾಗಿದ್ದು, ಜುಲೈ 2 ರಂದು ತಮಗೆ ತಲುಪಿಸಲಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ. ಇದೇ ವರ್ಷದ ಜನವರಿ 6 ರಂದೇ ಕಾಯ್ದಿರಿಸಲಾಗಿದ್ದ ಆದೇಶವನ್ನು ಅತ್ಯಂತ ವಿಳಂಬವಾಗಿ ಹೊರಡಿಸಲಾಗಿದ್ದು, ಇದು ದುರುದ್ದೇಶಪೂರಿತವಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ನ್ಯಾಯಾಲಯದ ಮುಂದಿನ ವಿಚಾರಣೆ ಅಥವಾ ಮುಂದಿನ ಆದೇಶದವರೆಗೆ ಈ ಮಧ್ಯಂತರ ಆದೇಶ ಜಾರಿಯಲ್ಲಿರಲಿದೆ.

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾವೇರಿ ನೀರು ಪೂರೈಕೆ ಮೇಲ್ವಿಚಾರಣೆಗೆ ಬರಲಿದೆ ಎಐ, ರೋಬೋಟ್​ಗಳು! – Kannada News | Bengaluru Water Supply: BWSSB to Use AI and Robotics for Pipeline Leak Detection

ಇತ್ತೀಚೆಗೆ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ಪೂರೈಕೆಯಾಗಿದ್ದ ಕಲುಷಿತ ನೀರುImage Credit source: tv9

ಬೆಂಗಳೂರು, ಜುಲೈ 30: ಬೆಂಗಳೂರಿನ (Bengaluru) ಕೆಲವು ಪ್ರದೇಶಗಳಲ್ಲಿ ಕಾವೇರಿ ನೀರು ಕಲುಷಿತಗೊಂಡ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಕತ್ರಿಗುಪ್ಪೆ ಮತ್ತು ಯಲಹಂಕದ ಕೆಲವು ಪ್ರದೇಶಗಳಲ್ಲಿ ಕಾವೇರಿ ನೀರಿನಲ್ಲಿ ಕೊಳಚೆ ನೀರು ಸೇರಿಕೊಂಡು ಜನರು ತೊಂದರೆ ಅನುಭವಿಸುವಂತಾಗಿತ್ತು. ಇದೀಗ ಇಂತಹ ಸಮಸ್ಯೆಗಳಿಗೆಲ್ಲ ಬ್ರೇಕ್ ಹಾಕಲು ಬೆಂಗಳೂರು ಜಲ ಮಂಡಳಿ (BWSSB) ಹೊಸದೊಂದು ಪ್ರಯೋಗಕ್ಕೆ ಮುಂದಾಗಿದೆ. ನಗರದ ನೀರು ಪೂರೈಕೆ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಹೊಸ ತಂತ್ರಜ್ಞಾನ ಪ್ರಯೋಗಕ್ಕೆ ಮುಂದಾಗಿದೆ. ನೀರಿನ ಪೈಪ್‌ಲೈನ್‌ಗಳ ಸೋರಿಕೆ, ಹಾನಿ ಹಾಗೂ ನೀರು ಕಲುಷಿತಗೊಳ್ಳುವ ಸಾಧ್ಯತೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ (AI) ಮತ್ತು ರೋಬೋಟಿಕ್ಸ್ ತಂತ್ರಜ್ಞಾನವನ್ನು ಬಳಸುವ ಪ್ರಾಯೋಗಿಕ ಯೋಜನೆ ಆರಂಭವಾಗಲಿದೆ.

18 ತಿಂಗಳ ಈ ಪ್ರಾಯೋಗಿಕ ಯೋಜನೆಯನ್ನು ಬೆಂಗಳೂರಿನ ದಕ್ಷಿಣ ವಿಭಾಗದಲ್ಲಿ ಜಾರಿಗೊಳಿಸಲಾಗುತ್ತಿದೆ. ಅಂಡರ್​ಗ್ರೌಂಡ್ ನೀರು ಪೂರೈಕೆ ಪೈಪ್‌ಲೈನ್‌ಗಳನ್ನು ಪರಿಶೀಲಿಸಲು ಸುಧಾರಿತ ರೋಬೋಟಿಕ್ ಉಪಕರಣಗಳನ್ನು ಬಳಸಲಾಗುತ್ತದೆ.

ಹೇಗೆ ಕೆಲಸ ಮಾಡಲಿದೆ ರೋಬೋಟಿಕ್ ತಂತ್ರಜ್ಞಾನ?

ಪೈಪ್‌ಲೈನ್‌ನಲ್ಲಿ ಸೋರಿಕೆ, ಹಾನಿ ಅಥವಾ ನೀರು ಕಲುಷಿತಗೊಂಡಿರುವುದನ್ನು ರೋಬೋಟಿಕ್ ತಂತ್ರಜ್ಞಾನ ಪತ್ತೆಹಚ್ಚಲಿದೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ತಂತ್ರಜ್ಞಾನದ ಮೂಲಕ ಎಚ್ಚರಿಕೆ ರವಾನಿಸಲಿದೆ. ಇದರಿಂದ ಸಮಸ್ಯೆಯನ್ನು ಆರಂಭದಲ್ಲೇ ಗುರುತಿಸಿ ತ್ವರಿತ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ. ನೀರು ಪೋಲಾಗುವುದು ಹಾಗೂ ಆದಾಯದ ಮೇಲೆ ಉಂಟಾಗುವ ನಕಾರಾತ್ಮಕ ಪರಿಣಾಮವನ್ನು ಕಡಿಮೆ ಮಾಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಹೊಸ ಕ್ರಮದ ಬಗ್ಗೆ ಜಲಮಂಡಳಿ ಹೇಳುವುದೇನು?

ಹೊಸ ತಂತ್ರಜ್ಞಾನದಿಂದ ನೀರು ಸೋರಿಕೆ, ಪೈಪ್‌ಲೈನ್ ದೋಷ, ನೀರಿನ ಕಲುಷಿತಗೊಳ್ಳುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸಾಧ್ಯವಾಗಲಿದೆ ಎಂದು ಜಲಮಂಡಳಿ ಅಧ್ಯಕ್ಷೆ ಮಂಜುಳಾ ಎನ್. ಹೇಳಿದ್ದಾರೆ.

ಇದನ್ನೂ ಓದಿ: ಕಾವೇರಿ ನದಿಗೆ ಸೇರ್ತಿದೆ ಮೈಸೂರಿನ ಕೊಳಚೆ ನೀರು; ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಜೀವನದಿ ಕಲುಷಿತ

ಈ ಯೋಜನೆಯನ್ನು ಖಾಸಗಿ ಕಂಪನಿಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ. ಟೈಟಾನ್ ಕಂಪನಿ ಲಿಮಿಟೆಡ್​ನ ‘Design Impact Award’ ಅನುದಾನ ಕಾರ್ಯಕ್ರಮದಡಿ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಇದಕ್ಕಾಗಿ ಜಲಮಂಡಳಿ ಮೇಲೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆ ಬೀಳುವುದಿಲ್ಲ ಎಂದು ಮಂಡಳಿ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2027: ಐಪಿಎಲ್ ಹರಾಜಿಗೂ ಮುನ್ನ CSK ‘ಮಾಸ್ಟರ್​ ಪ್ಲ್ಯಾನ್’ – Kannada News | CSK’s Mega Move: Mandatory Fitness Test for Players Ahead of IPL 2027!

ಐದು ಬಾರಿಯ ಐಪಿಎಲ್ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (CSK) ಫ್ರಾಂಚೈಸಿ, ಮುಂಬರುವ ಐಪಿಎಲ್ 2027ರ ಮೆಗಾ ಹರಾಜಿಗೂ ಮುನ್ನ ಅತ್ಯಂತ ಮಹತ್ವದ ಹಾಗೂ ಕಠಿಣ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಈ ನಿರ್ಧಾರದ ಅನ್ವಯ, ಸಿಎಸ್‌ಕೆ ತಂಡದ ಎಲ್ಲಾ ಆಟಗಾರರು ತಮ್ಮ ಲಭ್ಯತೆಗೆ ಅನುಗುಣವಾಗಿ 2 ರಿಂದ 3 ದಿನಗಳ ಕಡ್ಡಾಯ ಫಿಟ್‌ನೆಸ್ ಕ್ಯಾಂಪ್‌ಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಐಪಿಎಲ್ 2026ರ ಆವೃತ್ತಿಯಲ್ಲಿ ಕೇವಲ 6 ಪಂದ್ಯಗಳನ್ನು ಗೆದ್ದು, ಪ್ಲೇ-ಆಫ್ ತಲುಪಲು ವಿಫಲವಾಗಿದ್ದ ಸಿಎಸ್‌ಕೆ ತಂಡಕ್ಕೆ ಈ ಬಾರಿ ಕೇವಲ “ಖ್ಯಾತಿ” ಮುಖ್ಯವಲ್ಲ. ಬದಲಿಗೆ ಮೈದಾನದಲ್ಲಿ ಶ್ರಮಿಸುವ “ಫಿಟ್‌ನೆಸ್” ಮಾತ್ರವೇ ಮುಖ್ಯ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸಿದೆ.

ಆಟಗಾರರ ಲಭ್ಯತೆಗೆ ತಕ್ಕಂತೆ ಸ್ಲಾಟ್‌ಗಳು:

ಈ ವಿಶೇಷ ಫಿಟ್‌ನೆಸ್ ಶಿಬಿರವು ಆಟಗಾರರ ವೈಯಕ್ತಿಕ ಲಭ್ಯತೆಯ ಆಧಾರದ ಮೇಲೆ ನಡೆಯಲಿದೆ. ಅಂದರೆ ಆಟಗಾರರು ತಮಗೆ ಅನುಕೂಲಕರವಾದ 3 ದಿನಗಳ ಸಮಯವನ್ನು ಆಯ್ದುಕೊಂಡು ಈ ದೈಹಿಕ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ಆದರೆ, ಈ ಶಿಬಿರದಲ್ಲಿ ಯಾವುದೇ ವಿದೇಶಿ ಆಟಗಾರರು ಭಾಗವಹಿಸುತ್ತಿಲ್ಲ. ಕೇವಲ ಭಾರತೀಯ ಆಟಗಾರರ ದೈಹಿಕ ಸಾಮರ್ಥ್ಯವನ್ನು ಮಾತ್ರ ಇಲ್ಲಿ ಪ್ರಮುಖವಾಗಿ ಪರೀಕ್ಷಿಸಲಾಗುತ್ತಿದೆ.

ಫಿಟ್‌ನೆಸ್ ಟೆಸ್ಟ್​ಗೆ ಕಾರಣಗಳೇನು?

ಸಿಎಸ್‌ಕೆ ತಂಡವು ಕೇವಲ ಹಳೆಯ ದಾಖಲೆಗಳು ಮತ್ತು ಆಟಗಾರರ ‘ಸ್ಟಾರ್ ಗಿರಿ’ ನೋಡಿ ಈ ಬಾರಿ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಆಟಗಾರರು ಮುಂಬರುವ ಕಠಿಣ ಟೂರ್ನಿಗೆ ದೈಹಿಕವಾಗಿ ಎಷ್ಟು ಸಶಕ್ತರಾಗಿದ್ದಾರೆ ಎಂಬುದನ್ನು ವೈಜ್ಞಾನಿಕ ದತ್ತಾಂಶಗಳ ಮೂಲಕ ಪರಿಶೀಲಿಸಲು ಈ ಟೆಸ್ಟ್ ನಡೆಸಲಾಗುತ್ತಿದೆ.

ಹಾಗೆಯೇ ಮುಂಬರುವ ಮೆಗಾ ಹರಾಜಿಗೂ ಮುನ್ನ ಯಾವ ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಬೇಕು ಮತ್ತು ಯಾರನ್ನು ಬಿಡುಗಡೆ ಮಾಡಬೇಕು ಎಂಬುದನ್ನು ನಿರ್ಧರಿಸಲು ಈ ಫಿಟ್‌ನೆಸ್ ವರದಿಯೇ ಮೊದಲ ಫಿಲ್ಟರ್ ಆಗಲಿದೆ.

ಕಳೆದ 2-3 ಸೀಸನ್‌ಗಳಲ್ಲಿ ಸಿಎಸ್‌ಕೆ ಆಟಗಾರರು ಗಾಯದ ಸಮಸ್ಯೆಯಿಂದ ಹೆಚ್ಚು ಬಳಲಿದ್ದರು. ಸ್ವತಃ ಎಂ.ಎಸ್. ಧೋನಿ ಅವರೂ ಸಹ 2026ರ ಸೀಸನ್‌ನಲ್ಲಿ ಕಾಫ್ ಇಂಜುರಿಯಿಂದಾಗಿ ಮೈದಾನಕ್ಕಿಳಿದಿರಲಿಲ್ಲ. ಹೀಗಾಗಿ ಭವಿಷ್ಯದಲ್ಲಿ ಇಂತಹ ಹಿನ್ನಡೆಯಾಗದಂತೆ ಮ್ಯಾನೇಜ್‌ಮೆಂಟ್ ಮುನ್ನೆಚ್ಚರಿಕೆ ವಹಿಸುತ್ತಿದೆ. ಇದಕ್ಕಾಗಿ ಫಿಟ್​ನೆಸ್ ಟೆಸ್ಟ್ ನಡೆಸಲು ನಿರ್ಧರಿಸಲಾಗಿದೆ.

ಸಿಎಸ್​ಕೆ ಲಿಸ್ಟ್​ನಲ್ಲಿ ಪಾಂಡ್ಯ?

ಮುಂಬೈ ಇಂಡಿಯನ್ಸ್ ತಂಡದಿಂದ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಸಿಎಸ್‌ಕೆಗೆ ಟ್ರೇಡ್ ಮಾಡಿಕೊಳ್ಳುವ (ಆಟಗಾರರ ಅದಲು-ಬದಲು) ಕುರಿತು ಭಾರಿ ಚರ್ಚೆಗಳು ನಡೆಯುತ್ತಿವೆ. ಇದಕ್ಕಾಗಿ ಶಿವಂ ದುಬೆ ಅವರಂತಹ ಪ್ರಮುಖ ಆಟಗಾರರ ದೈಹಿಕ ಫಿಟ್‌ನೆಸ್ ಹೇಗಿದೆ ಎಂಬುದನ್ನು ಮ್ಯಾನೇಜ್‌ಮೆಂಟ್ ಸೂಕ್ಷ್ಮವಾಗಿ ಗಮನಿಸುತ್ತಿದೆ.

ಬದಲಾವಣೆಯ ಹಾದಿಯಲ್ಲಿ ಸಿಎಸ್‌ಕೆ:

ಮುಖ್ಯ ತರಬೇತುದಾರ ಸ್ಟೀಫನ್ ಫ್ಲೆಮಿಂಗ್ ಅವರ ನಿರ್ಗಮನದ ವದಂತಿಗಳ ಬೆನ್ನಲ್ಲೇ ಈ ಫಿಟ್‌ನೆಸ್ ಕ್ಯಾಂಪ್ ಆಯೋಜಿಸಿರುವುದು ಸಿಎಸ್‌ಕೆ ಪಾಳಯದಲ್ಲಿ ದೊಡ್ಡ ಬದಲಾವಣೆಯ ಮುನ್ಸೂಚನೆಯನ್ನು ನೀಡಿದೆ. ಹಳೆಯ ಆಟಗಾರರ ಮೇಲಿನ ಅತಿಯಾದ ನಿಷ್ಠೆಯನ್ನು ಬದಿಗಿಟ್ಟು, ಸಂಪೂರ್ಣ ವೈಜ್ಞಾನಿಕ ಮತ್ತು ದೈಹಿಕ ದತ್ತಾಂಶಗಳ ಆಧಾರದ ಮೇಲೆ ಹೊಸ ಬಲಿಷ್ಠ ತಂಡವನ್ನು ಕಟ್ಟಲು ಸಿಎಸ್‌ಕೆ ಈಗಿನಿಂದಲೇ ತಳಹದಿ ಸಿದ್ಧಪಡಿಸುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಚೆನ್ನೈ ಸೂಪರ್ ಕಿಂಗ್ಸ್ ಹಠಾತ್ತನೆ ಹಮ್ಮಿಕೊಂಡಿರುವ ಈ ಫಿಟ್‌ನೆಸ್ ಟೆಸ್ಟ್ ಕೇವಲ ಒಂದು ಸಾಮಾನ್ಯ ತರಬೇತಿ ಶಿಬಿರವಲ್ಲ. ಇದು ಮುಂಬರುವ ಐಪಿಎಲ್ 2027ರ ಮೆಗಾ ಹರಾಜಿಗೆ ಫ್ರಾಂಚೈಸಿ ರೂಪಿಸುತ್ತಿರುವ ದೀರ್ಘಕಾಲದ ಮಾಸ್ಟರ್ ಪ್ಲಾನ್‌ನ ಮೊದಲ ಹೆಜ್ಜೆಯಾಗಿದೆ.

ಇದನ್ನೂ ಓದಿ: ಮೊಹಮ್ಮದ್ ಶಮಿ ಖೇಲ್ ಖತಂ?

ಕಳೆದ ಸೀಸನ್‌ನ ವೈಫಲ್ಯ ಹಾಗೂ ಆಟಗಾರರ ಗಾಯದ ಸಮಸ್ಯೆಗಳಿಂದ ಪಾಠ ಕಲಿತಿರುವ ಮ್ಯಾನೇಜ್‌ಮೆಂಟ್, ಈ ಬಾರಿ ಆಟಗಾರರ ಭಾವನೆಗಳಿಗಿಂತ ದೈಹಿಕ ಸಾಮರ್ಥ್ಯಕ್ಕೆ ಮೊದಲ ಆದ್ಯತೆ ನೀಡಿದೆ. ಈ ಮೂಲಕ ಐಪಿಎಲ್ ಸೀಸನ್ 20 ಕ್ಕಾಗಿ ಬಲಿಷ್ಠ ಪಡೆಯನ್ನು ಕಟ್ಟಲು ಸಿಎಸ್‌ಕೆ ಈಗಿನಿಂದಲೇ ಕಹಳೆ ಊದಿರುವುದಂತೂ ನಿಜ.

Source link

Exit mobile version