ಸಾಲ ಮಾಡಿ ತೀರಿಸಲು ಕಷ್ಟ ಪಡ್ತಾ ಇದ್ರೆ ಇಲ್ಲಿವೆ ಸಿಂಪಲ್ ಟ್ರಿಕ್ಸ್‌ – Kannada News | Bank Loan: How to get debt free? simple tips here

ಹಣಕಾಸು ಸಮಸ್ಯೆ (financial problem), ಆರ್ಥಿಕ ಸ್ಥಿತಿ ಹದಗೆಟ್ಟಾಗ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುತ್ತೇವೆ. ಸಾಲ ಪಡೆಯುವಾಗ ಇರುವ ಖುಷಿ ಮರುಪಾವತಿಸುವಾಗ ಇರಲ್ಲ.  ಹೌದು, ಪಡೆದ ಸಾಲಕ್ಕಿಂತ, ಅದರ ಮೇಲಿನ ಬಡ್ಡಿಯೇ ಹೆಚ್ಚಾಗಿರುತ್ತದೆ. ಸಾಲ ಪಡೆದು ತೀರಿಸಲಾಗದೇ ಒದ್ದಾಡ್ತಾ ಇರಬಹುದು. ನೀವು ಈ ಸಾಲದಿಂದ (loan) ಮುಕ್ತರಾಗಲು ಈ ಕೆಲವು ಟ್ರಿಕ್ಸ್ ಬಳಸುವುದು ಉತ್ತಮ. ಕಡಿಮೆ ಬಡ್ಡಿದರದಲ್ಲಿ ಇರುವ ಸಾಲ ಪಡೆಯುವುದು, ಇಎಂಐ ಮೊತ್ತದಲ್ಲಿ ಹೆಚ್ಚಳ ಈ ಕೆಲವು ಅಂಶಗಳ ಮೇಲೆ ಗಮನ ಹರಿಸುವುದು ಸಾಲದಿಂದ ಬಹುಬೇಗನೇ ಮುಕ್ತರಾಗಲು ದಾರಿ ಮಾಡಿಕೊಡುತ್ತದೆ.

ಸಾಲದಿಂದ ಮುಕ್ತರಾಗುವುದು ಹೇಗೆ?

  • ಸಾಲವನ್ನು ಬೇಗ ತೀರಿಸಲು ಬಜೆಟ್ ರೂಪಿಸುವುದು ಬಹಳ ಮುಖ್ಯ.
  • ನಿಮ್ಮ ಸಂಪೂರ್ಣ ಖರ್ಚುಗಳನ್ನು ಬರೆದಿಟ್ಟು,  ಅನಗತ್ಯ ಖರ್ಚಿಗೆ ಲಗಾಮು ಹಾಕಿ ಸಾಲ ತೀರಿಸುವತ್ತ ಗಮನ ಕೊಡಿ.
  •  ತಿಂಗಳ ಆದಾಯದಲ್ಲಿ ಕನಿಷ್ಠ ಭಾಗವನ್ನು ಉಳಿಸಿ, ಅದನ್ನು ಸಾಲ ಮರುಪಾವತಿಗೆ ಬಳಸಿಕೊಳ್ಳಿ.
  •  ನೀವು ಪಡೆದ ಸಾಲದ ಬಡ್ಡಿದರ ತಿಳಿದುಕೊಳ್ಳಿ. ಮೊದಲು ಯಾವ ಸಾಲಕ್ಕೆ ಹೆಚ್ಚು ಬಡ್ಡಿ ಇದೆಯೋ ಅದನ್ನು ಮೊದಲು ತೀರಿಸಿ.
  • ಸಣ್ಣಪುಟ್ಟ ಸಾಲಗಳನ್ನು ಒಂದೊಂದಾಗಿ ಬೇಗ ಮುಗಿಸಿದ್ರೆ ಸಾಲದ ಹೊರೆ ಸ್ವಲ್ಪ ಕಡಿಮೆಯಾಗುತ್ತದೆ.
  • ಕೇವಲ ಕನಿಷ್ಠ ಇಎಂಐ ಕಟ್ಟದೆ, ಪ್ರತಿ ತಿಂಗಳು ಹೆಚ್ಚಿನ ಹಣವನ್ನು ಅಸಲಿಗೆ ಪಾವತಿಸಿ.
  • ಬೋನಸ್ ಅಥವಾ ಅನಿರೀಕ್ಷಿತ ಹಣ ಬಂದರೆ, ಆ ಹಣವನ್ನು ಸಾಲದ ಮುಂಗಡ ಪಾವತಿಗೆ ಬಳಸಿಕೊಳ್ಳಿ.
  • ಸಾಲ ಪಡೆಯುವ ಮುನ್ನ ನೂರು ಬಾರಿ ಯೋಚಿಸಿ, ಈಗಾಗಲೇ ಸಾಲದಲ್ಲಿ ಮುಳುಗಿ ಹೋಗಿದ್ದರೆ ಮತ್ತೆ ಸಾಲ ತೆಗೆಯುವ ಪ್ರಯತ್ನ ಬೇಡ.
  •  ಕಡಿಮೆ ಬಡ್ಡಿದರ ನೀಡುವ ಬೇರೆ ಬ್ಯಾಂಕಿಗೆ ನಿಮ್ಮ ಸಾಲವನ್ನು ವರ್ಗಾಯಿಸಿ. ಇದರಿಂದ ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಸಾಲವೆಂದರೆ ಮಾರುದೂರ ಹೋಗುತ್ತೀರಾ? ಕೆಟ್ಟಸಾಲ, ಒಳ್ಳೆಯ ಸಾಲದ ವ್ಯತ್ಯಾಸ ತಿಳಿದಿರಿ… ಇಲ್ಲಿವೆ ಕೆಲ ಟ್ರಿಕ್ಸ್

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಸಾಲದ ಹೊರೆ ಹೆಚ್ಚಾಗಲು ಕಾರಣವೇನು?

ಉತ್ತರ: ಅಸಲಿಗಿಂತ ಬಡ್ಡಿದರವೇ ಹೆಚ್ಚಾದರೆ ಸಾಲದ ಹೊರೆ ಹೆಚ್ಚಾಗುತ್ತದೆ.

ಪ್ರಶ್ನೆ: ಬ್ಯಾಂಕ್ ನಿಂದ ಸಾಲ ಪಡೆಯುವಾಗ ಯಾವ ಅಂಶವನ್ನು ಗಮನಿಸಬೇಕು?

ಉತ್ತರ: ಸಾಲದ ಪಡೆಯುವಾಗ ಮೊದಲು ಬಡ್ಡಿದರದ ಬಗ್ಗೆ ಗಮನವಿರಲಿ.

ಪ್ರಶ್ನೆ: ಸಾಲದಿಂದ ಮುಕ್ತರಾಗುವುದು ಹೇಗೆ?

ಉತ್ತರ: ಸಾಲದಿಂದ ಮುಕ್ತರಾಗಲು ಅನಗತ್ಯ ಖರ್ಚು ವೆಚ್ಚ ಕಡಿಮೆಯಿರಲಿ, ಇಎಂಐ ಪಾವತಿಯಲ್ಲಿ ಹೆಚ್ಚಿಸಿ, ಕಡಿಮೆ ಬಡ್ಡಿದರ ಇರುವ ಬ್ಯಾಂಕ್‌ಗೆ ಸಾಲ ವರ್ಗಾಯಿಸಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರಾಮಾಯಣ’ ಪ್ರಚಾರಕ್ಕೆ ನಮಿತ್ ಮಲ್ಹೋತ್ರಾ ಮಾಸ್ಟರ್ ಸ್ಟ್ರೋಕ್ – Kannada News | Ramayana movie trailer to be attached to SpiderMan Brand New Day movie

ರಾಮಾಯಣ’ (Ramayana) ಸಿನಿಮಾ ಬಿಡುಗಡೆಗೆ ಇನ್ನೂ ಮೂರು ತಿಂಗಳು ಇದೆ. ಈಗಿನಿಂದಲೂ ಸಿನಿಮಾದ ಪ್ರಚಾರವನ್ನು ಬಲು ಅದ್ಧೂರಿಯಾಗಿ ಚಿತ್ರತಂಡ ಮಾಡುತ್ತಿದೆ. ಸಿನಿಮಾದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅಂತೂ ಬಿಂದಾಸ್ ಆಗಿ ಪ್ರಚಾರಕ್ಕಾಗಿ ಹಣ ಸುರಿಯುತ್ತಿದ್ದಾರೆ. ‘ರಾಮಾಯಣ’ ಸಿನಿಮಾವನ್ನು ಭಾರತದ ಸಿನಿಮಾ ರೀತಿ ಅಲ್ಲದೆ, ಹಾಲಿವುಡ್ ಸಿನಿಮಾ ರೀತಿ ವಿಶ್ವದಾದ್ಯಂತ ಬಿಡುಗಡೆ ಮಾಡಬೇಕು ಎಂಬುದು ಅವರ ಯೋಜನೆ. ಇದೇ ಕಾರಣಕ್ಕೆ ಸಿನಿಮಾದ ಪ್ರಚಾರಕ್ಕಾಗಿ ಇದೀಗ ಮಾಸ್ಟರ್ ಸ್ಟ್ರೋಕ್ ಬಳಸಿದ್ದಾರೆ.

‘ರಾಮಾಯಣ’ ಸಿನಿಮಾದ ಪ್ರಚಾರಕ್ಕಾಗಿ ಇತ್ತೀಚೆಗಷ್ಟೆ ರಣ್​​ಬೀರ್ ಕಪೂರ್, ಯಶ್, ನಿತೀಶ್ ತಿವಾರಿ ಅವರುಗಳು ಸ್ಯಾನ್ ಡಿಯಾಗೋನಲ್ಲಿ ನಡೆದ ಕಾಮಿಕಾನ್​​​ನಲ್ಲಿ ಭಾಗವಹಿಸಿ ಬಂದಿದ್ದಾರೆ. ಅಲ್ಲಿ ಹಲವು ಹಾಲಿವುಡ್ ಮಾಧ್ಯಮಗಳ ಜೊತೆಗೆ ಸಂದರ್ಶನಗಳನ್ನು ನೀಡಿದ್ದಾರೆ. ಅಲ್ಲಿ ಸಿನಿಮಾದ ಟ್ರೈಲರ್ ಪ್ರದರ್ಶಿಸಿದ್ದು, ವಿದೇಶಿ ಸಿನಿಮಾಗಳ ಪ್ರೇಕ್ಷಕರಿಂದ ಟ್ರೈಲರ್​​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತದಿಂದ ಬರುತ್ತಿರುವ ಮತ್ತೊಂದು ದೊಡ್ಡ ಸಿನಿಮಾ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ ಸಿನಿಮಾ. ಇದೀಗ ಸಿನಿಮಾದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ‘ರಾಮಾಯಣ’ದ ಪ್ರಚಾರಕ್ಕೆ ಮತ್ತೊಂದು ಭಾರಿ ದೊಡ್ಡ ಮತ್ತಿ ದಿಟ್ಟ ಹೆಜ್ಜೆ ಇರಿಸಿದ್ದಾರೆ.

‘ರಾಮಾಯಣ’ ಸಿನಿಮಾದ ಟ್ರೈಲರ್ ನಾಳೆ (ಜುಲೈ 30) ಬ್ರಾಹ್ಮಿ ಮುಹೂರ್ತದಲ್ಲಿ ನೆರವೇರಲಿದೆ. ಈ ಸಿನಿಮಾದ ಟ್ರೈಲರ್ ಅನ್ನು ಹಾಲಿವುಡ್​​ನ ಬಹು ನಿರೀಕ್ಷಿತ ಸಿನಿಮಾ ಆಗಿರುವ ‘ಸ್ಪೈಡರ್​ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಜೊತೆಗೆ ಅಟ್ಯಾಚ್ ಮಾಡಿಸಿದ್ದಾರೆ. ಆ ಸಿನಿಮಾ ಸಹ ನಾಳೆ (ಜುಲೈ 30) ಬಿಡುಗಡೆ ಆಗಲಿದ್ದು, ಸಿನಿಮಾಕ್ಕೆ ವಿಶ್ವದಾದ್ಯಂತ ಅಭಿಮಾನಿಗಳಿದ್ದು, ಸಿನಿಮಾ ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ. ಇದೀಗ ‘ರಾಮಾಯಣ’ ಸಿನಿಮಾದ ಟ್ರೈಲರ್ ಅನ್ನು ‘ಸ್ಪೈಡರ್​ ಮ್ಯಾನ್’ ಜೊತೆಗೆ ಅಟ್ಯಾಚ್ ಮಾಡುವ ಮೂಲಕ, ವಿಶ್ವದಾದ್ಯಂತ ಇರುವ ಸಿನಿಮಾ ಪ್ರೇಮಿಗಳಿಗೆ ಒಂದೇ ಬಾರಿಗೆ ಟ್ರೈಲರ್ ಅನ್ನು ತಲುಪಿಸಲಾಗುತ್ತಿದೆ.
ಈಗಿನ ಇತ್ತೀಚಿನ ಬೆಳವಣಿಗೆಯ ಪ್ರಕಾರ, ನಿತೇಶ್ ತಿವಾರಿ ಅವರ ‘ರಾಮಾಯಣ’ ಮತ್ತು ಮಾರ್ವೆಲ್‌ನ ‘ಅವೆಂಜರ್ಸ್: ಡೂಮ್ಸ್‌ಡೇ’ ಟ್ರೈಲರ್‌ಗಳನ್ನು ‘ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಚಿತ್ರದೊಂದಿಗೆ ಪ್ರದರ್ಶಿಸಲಾಗುತ್ತದೆ.

ಇದನ್ನೂ ಓದಿ:ದಾಖಲೆಯ ಮೊತ್ತಕ್ಕೆ ಮಾರಾಟ ಆಗಲಿದೆ ‘ರಾಮಾಯಣ’ ಆಡಿಯೋ ಹಕ್ಕು

‘ಸಿನಿಮಾ ಮಂದಿರಗಳಲ್ಲಿ ‘ಸ್ಪೈಡರ್ ಮ್ಯಾನ್’ ವೀಕ್ಷಿಸುವ ಸಿನೆಮಾ ಪ್ರೇಮಿಗಳಿಗೆ ಮತ್ತೊಂದು ವಿಶೇಷ ಉಡುಗೊರೆ ಕಾಯುತ್ತಿದೆ. ಚಿತ್ರವು ಪ್ರಾರಂಭವಾಗುವ ಮೊದಲು ‘ಅವೇಂಜರ್ಸ್ ಡೂಮ್ಸ್​​ ಡೇ’ ಮತ್ತು ಹೆಚ್ಚು ನಿರೀಕ್ಷಿತ ‘ರಾಮಾಯಣ’ ಸಿನಿಮಾದ ಹೊಸ ಟ್ರೈಲರ್ ಪ್ರದರ್ಶಿಸಲ್ಪಡಲಿದೆ’ ಎಂದು ಮಾಹಿತಿ ನೀಡಲಾಗಿದೆ. ಭಾರತದಲ್ಲಿ ಮಾತ್ರವೇ ಅಲ್ಲದೆ, ‘ಸ್ಪೈಡರ್ ಮ್ಯಾನ್’ ಸಿನಿಮಾ ಪ್ರದರ್ಶನಗೊಳ್ಳುವ ಹಲವು ದೇಶಗಳಲ್ಲಿ ‘ರಾಮಾಯಣ’ ಸಿನಿಮಾದ ಟ್ರೈಲರ್ ಅನ್ನು ಅಟ್ಯಾಚ್ ಮಾಡಲಾಗಿದೆಯಂತೆ. ಆ ಮೂಲಕ ಒಂದೇ ಬಾರಿಗೆ ದೊಡ್ಡ ಸಂಖ್ಯೆಯ ಪ್ರೇಕ್ಷಕರನ್ನು ವಿಶೇಷವಾಗಿ ಸಿನಿಮಾ ಆಸಕ್ತರನ್ನು ಈ ಮೂಲಕ ‘ರಾಮಾಯಣ’ ಚಿತ್ರತಂಡ ತಲುಪುತ್ತಿದೆ.

ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಲ್ಲಿ ‘ರಾಮಾಯಣ’ ಟ್ರೈಲರ್ ಬಿಡುಗಡೆಯಾಗಲು ಕೆಲವೇ ಗಂಟೆಗಳ ಮೊದಲು, ಚಲನಚಿತ್ರದ ಅಂತರರಾಷ್ಟ್ರೀಯ ವಿತರಣೆಗಾಗಿ ತಯಾರಕರು ‘ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್’ ಜೊತೆ ಒಪ್ಪಂದ ಮಾಡಿಕೊಂಡ ‘ರಾಮಾಯಣ’ ನಿರ್ಮಾಪಕರು ಟ್ರೈಲರ್​ನ ಆನ್​​ಲೈನ್ ಬಿಡುಗಡೆಯನ್ನು ತಡೆದರು. ಇದನ್ನು ಘೋಷಿಸುತ್ತಾ ನಮಿತ್ ಮಲ್ಹೋತ್ರಾ ಇನ್‌ಸ್ಟಾಗ್ರಾಮ್‌ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ, “ಇವತ್ತು ನಮ್ಮ ರಾಮಾಯಣಕ್ಕೆ ಅತ್ಯಂತ ವಿಶೇಷವಾದ ಕ್ಷಣ. ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ ಜೊತೆಗಿನ ನಮ್ಮ ಪಾಲುದಾರಿಕೆಯಿಂದಾಗಿ ರಾಮಾಯಣವನ್ನು ಜಗತ್ತಿಗೆ ತಲುಪಿಸುವ ನನ್ನ ಕನಸು ಈಗ ನನಸಾಗಿದೆ. ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ನಾವು ನಮ್ಮ ಟ್ರೈಲರ್ ಅನ್ನು ಜಾಗತಿಕವಾಗಿ ನಂತರದ ದಿನಾಂಕದಲ್ಲಿ ಬಿಡುಗಡೆ ಮಾಡುತ್ತೇವೆ’ ಎಂದಿದ್ದರು. ಅದರಂತೆಯೇ ಈಗ ಜಾಗತಿಕವಾಗಿ ಸಿನಿಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಅಣೆಕಟ್ಟುಗಳಲ್ಲಿ ಸದ್ಯ ಇರುವ ನೀರೆಷ್ಟು? ಇಲ್ಲಿದೆ ಮಾಹಿತಿ – Kannada News | Cauvery Basin Crisis: A Reality Check of Water Storage Levels in KRS, Kabini, Hemavathi, and Harangi Dams

ಬೆಂಗಳೂರು, ಜುಲೈ 29: ಮುಂಗಾರು ಮಳೆಯ ಭಾರಿ ಕೊರತೆ ಹಿನ್ನೆಲೆ ಕರ್ನಾಟಕದಲ್ಲಿಯೇ ನೀರಿನ ಅಭಾವ ತಲೆದೋರಿದೆ. ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಅಣೆಕಟ್ಟುಗಳು ಭಣಗುಡುತ್ತಿರುವ ನಡುವೆ ನೆರೆ ರಾಜ್ಯ ತಮಿಳುನಾಡಿಗೆ ಮುಂದಿನ‌ 15 ದಿನ 3,500 ಕ್ಯೂಸೆಕ್ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶಿಸಿರೋದೀಗ ಕನ್ನಡಿಗರ ಆಕ್ರೋಶದ ಕಟ್ಟೆ ಒಡೆಯುವಂತೆ ಮಾಡಿದೆ. ಹೀಗಾಗಿ ಈ ಸಂಬಂಧ CWMAಗೆ ಮೇಲ್ಮನವಿ ಸಲ್ಲಿಸಲು ಕರ್ನಾಟಕ ಮುಂದಾಗಿದ್ದು, ರಾಜ್ಯದ ವಾಸ್ತವ ಸ್ಥಿತಿ ಮನದಟ್ಟು ಮಾಡಲು ತೀರ್ಮಾನಿಸಿದೆ.

ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಅಣೆಕಟ್ಟುಗಳ ಸದ್ಯದ ಸ್ಥಿತಿಗತಿ

ಕೆ.ಆರ್.ಎಸ್ ಜಲಾಶಯ

ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಅಣೆಕಟ್ಟುಗಳಲ್ಲಿ ಒಂದಾದ ಕೆ.ಆರ್.ಎಸ್ ಜಲಾಶಯದಲ್ಲಿ ಸದ್ಯ ಬಳಕೆಗೆ ಇರೋದು ಕೇವಲ 12 ಟಿಎಂಸಿ ನೀರು. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಡ್ಯಾಂನಲ್ಲಿ ಇಂದು 91.94 ಅಡಿ ಮಾತ್ರ ನೀರಿದ್ದು, 2,842 ಕ್ಯೂಸೆಕ್ ಒಳಹರಿವು ಮತ್ತು 1,747 ಕ್ಯೂಸೆಕ್ ಹೊರ ಹರಿವಿದೆ. 49.452 ಟಿಎಂಸಿ ಸಂಗ್ರಹ ಸಾಮರ್ಥ್ಯವಿರುವ ಈ ಜಲಾಶಯದಲ್ಲಿ ಸದ್ಯ 17.126 ಟಿಎಂಸಿ ಮಾತ್ರ ನೀರು ಲಭ್ಯವಿದ್ದು ಈ ಪೈಕಿ 5 ಟಿಎಂಸಿ ಡೆಡ್​​ ಸ್ಟೋರೇಜ್​​ ಆಗಿದೆ.

ಇದನ್ನೂ ಓದಿ: ಕಾವೇರಿ ಜಲ ವಿವಾದ: CWRC ಆದೇಶದ ವಿರುದ್ಧ CWMAಗೆ ಮೇಲ್ಮನವಿ ಸಲ್ಲಿಸಲು ಕರ್ನಾಟಕ ನಿರ್ಧಾರ

ಕಬಿನಿ ಡ್ಯಾಂ

ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಬೀರವಾಳು ಗ್ರಾಮದಲ್ಲಿರುವ ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ 75.79 ಅಡಿ ಇದ್ದು, ಕಳೆದ ವರ್ಷ ಇದೇ ದಿನ 81.66 ಅಡಿ ಸಂಗ್ರಹವಿತ್ತು. ಡ್ಯಾಂನಲ್ಲಿ 14.70 ಟಿಎಂಸಿ ನೀರಷ್ಟೇ ಲಭ್ಯವಿದ್ದು, 3,805 ಕ್ಯೂಸೆಕ್ ನೀರು ಒಳಹರಿವು ಮತ್ತು 500 ಕ್ಯೂಸೆಕ್ ಹೊರ ಹರಿವು ಸದ್ಯ ಜಲಾಶಯದಲ್ಲಿದೆ.

ಹೇಮಾವತಿ ಜಲಾಶಯ

ಹಾಸನ ತಾಲೂಕಿನ ಗೊರೂರು ಸಮೀಪದ ಹೇಮಾವತಿ ಜಲಾಶಯ 37 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಹಾಲಿ 24.195 ಟಿಎಂಸಿ ನೀರು ಲಭ್ಯವಿದೆ. 5690 ಕ್ಯೂಸೆಕ್ ಒಳಹರಿವು ಮತ್ತು 500 ಕ್ಯೂಸೆಕ್ ಹೊರ ಹರಿವನ್ನು ಡ್ಯಾಂ ಹೊಂದಿದೆ. ಕಳೆದ ವರ್ಷ ಇದೇ ದಿನ ಡ್ಯಾಂನಲ್ಲಿ 35.992 ಟಿಎಂಸಿ ನೀರಿತ್ತು.

ಹಾರಂಗಿ ಜಲಾಶಯ

ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನಲ್ಲಿರುವ ಹಾರಂಗಿ ಜಲಾಶಯ 2859 ಅಡಿ ಗರಿಷ್ಟ ಮಟ್ಟ ಹೊಂದಿದ್ದು, ಇಂದಿನ ನೀರಿನ ಮಟ್ಟ 2858.88 ಅಡಿಯಷ್ಟಿದೆ. 3221 ಕ್ಯೂಸೆಕ್ ಒಳಹರಿವು ಮತ್ತು 1895 ಕ್ಯೂಸೆಕ್ ಹೊರಹರಿವಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು – Kannada News | Karnataka cabinet expansion climax, Rahul Gandhi finalize New Minister List today night

ನವದೆಹಲಿ, (ಜುಲೈ 29): ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಕಸರತ್ತು ಕುತೂಹಲಕಾರಿ ಘಟ್ಟ ತಲುಪಿದೆ. ನಿನ್ನೆ(ಜುಲೈ 28) ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್​​​​​, ರಾಜ್ಯ ನಾಯಕರ ಜೊತೆ ಸಭೆ ನಡೆಸಿದರೂ ಸಹ ರಾಹುಲ್ ಗಾಂಧಿಯವರ ಅಂತಿಮ ಮುದ್ರೆ ಬೀಳುವುದೊಂದೆ ಬಾಕಿದೆ. ಹೌದು….ನೂತನ ಸಚಿವರ ಅಂತಿಮ ಪಟ್ಟಿಯೊಂದಿಗೆ ರಾಜ್ಯ ನಾಯಕರು ಇಂದು (ಜುಲೈ 29) ರಾತ್ರಿ ರಾಹುಲ್ ಗಾಂಧಿ ಜೊತೆ ಮಾತುಕತೆ ನಡೆಸಲಿದ್ದಾರೆ. ರಾಹುಲ್ ಗಾಂಧಿ ಅವರ ಸೂಚನೆಯಂತೆ ಅನುಭವಿ ಹಾಗೂ ಹೊಸ ಮುಖಗಳಿಗೆ ಮಣೆಹಾಕಿರುವ ಪಟ್ಟಿಗೆ ಮಂಗಳವಾರ ಹೈಕಮಾಂಡ್ ಅಂತಿಮ ಮುದ್ರೆ ಒತ್ತುವ ಸಾಧ್ಯತೆಯಿದ್ದು, ಗುರುವಾರ ಲೋಕಭವನದಲ್ಲಿ ಪ್ರಮಾಣವಚನ ಕಾರ್ಯಕ್ರಮ ಖಚಿತ ಎನ್ನಲಾಗಿದೆ. ಹೀಗಾಗಿ ಯಾರಿಗೆ ಸಚಿವ ಸ್ಥಾನ ಸಿಗುತ್ತೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ; ಪೊಲೀಸರು-ರೈತರ ನಡುವೆ ಘರ್ಷಣೆ – Kannada News | Farmers protest Turns Violent clash with Police in Bhopal

ಭೋಪಾಲ್, ಜುಲೈ 29: ಕನಿಷ್ಠ ಬೆಂಬಲ ಬೆಲೆಯಲ್ಲಿ (MSP) ಶೇ. 100ರಷ್ಟು ಹೆಸರು ಬೇಳೆ ಖರೀದಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನರ್ಮದಾಪುರಂನಲ್ಲಿ ಪ್ರತಿಭಟನೆ (Protest) ನಡೆಸುತ್ತಿದ್ದ ರೈತರು ಮತ್ತು ಪೊಲೀಸರ ನಡುವೆ ಭಾರಿ ಘರ್ಷಣೆ ಸಂಭವಿಸಿದೆ. ಪ್ರತಿಭಟನಾನಿರತ ರೈತರು ಬಸ್ ಮೇಲೇರಿ, ಪೊಲೀಸರು ಹಾಕಿದ್ದ ಬ್ಯಾರಿಕೇಡ್​​ಗಳನ್ನು ಮುರಿದು ಹಾಕಿದರು. ವಿವಿಧ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಿರುವ ರೈತರೊಂದಿಗೆ ಮಾತುಕತೆ ನಡೆಸಲು ಸಚಿವರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳುವ ವಿಶ್ವಾಸವಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿಕೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ರೈತರು ಮಂಗಳವಾರ ರಾಜ್ಯ ರಾಜಧಾನಿ ಭೋಪಾಲ್‌ನಲ್ಲಿ ಪ್ರತಿಭಟನೆ ಆರಂಭಿಸಿದ್ದು, ರಾತ್ರಿಯಿಡೀ ಧರಣಿ ಮುಂದುವರಿಸಿದ್ದರು. ಇದರಿಂದಾಗಿ ಅತ್ಯಂತ ದಟ್ಟಣೆಯಿಂದ ಕೂಡಿದ ನರ್ಮದಾಪುರಂ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದ ರೈತರು, ಸೋಮವಾರ ತಡಸಂಜೆ ಸೆಹೋರ್‌ನ ಬುಧ್ನಿಗೆ ತಲುಪಿ, ಮಂಗಳವಾರ ಭೋಪಾಲ್‌ಗೆ ಆಗಮಿಸಿದ್ದರು. ರಾಜ್ಯ ಸರ್ಕಾರವು ಈಗಾಗಲೇ ರೈತರೊಂದಿಗೆ ಮೊದಲ ಹಂತದ ಮಾತುಕತೆ ನಡೆಸಿದೆಯಾದರೂ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಲ್ಡೋಟಾ ಕಾರ್ಖಾನೆ ಕೆರೆ ವಿವಾದ: ರಾತ್ರೋರಾತ್ರಿ ಗೇಟ್ ಮರುನಿರ್ಮಾಣ; ಮತ್ತೆ ಸಿಡಿದೆದ್ದ ರೈತರು – Kannada News | Baldota Factory Lake Dispute: Farmers Threaten Fresh Demolition After Koppal Gate Rebuilt

ಕೊಪ್ಪಳ, ಜುಲೈ 29: ಬಲ್ಡೋಟಾ ಕಾರ್ಖಾನೆ (Baldota Factory) ಆವರಣದಲ್ಲಿರವ ಕೆರೆ (lake) ವಿವಾದ ಮತ್ತೆ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ರೈತ ಹುತಾತ್ಮ ದಿನಾಚರಣೆ ವೇಳೆ ಧ್ವಂಸಗೊಂಡಿದ್ದ ಕಾರ್ಖಾನೆಯ ಗೇಟ್ ಮತ್ತು ಕಾಂಪೌಂಡ್ ಅನ್ನು ಆಡಳಿತ ಮಂಡಳಿ ರಾತ್ರೋರಾತ್ರಿ ಮರುನಿರ್ಮಾಣ ಮಾಡಿರುವುದು ಇದೀಗ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕೆರೆಯನ್ನು ಸಾರ್ವಜನಿಕರಿಗೆ ನೀಡದಿದ್ದರೆ ಮತ್ತೆ ಗೇಟ್ ಒಡೆಯುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

ಬಲ್ಡೋಟಾ ಕಾರ್ಖಾನೆ ಆವರಣದಲ್ಲಿರವ ಕೆರೆ ವಿವಾದ: ಉದ್ವಿಗ್ನ ವಾತಾವರಣ 

ಕೊಪ್ಪಳ ತಾಲೂಕಿನ ಬಸಾಪೂರ ಬಳಿಯಿರುವ ಬಲ್ಡೋಟಾ ಕಾರ್ಖಾನೆ ಆವರಣದ ಕೆರೆ ವಿಚಾರಕ್ಕೆ ಮತ್ತೊಮ್ಮೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ರೈತ ಹುತಾತ್ಮ ದಿನಾಚರಣೆ ವೇಳೆ ಪ್ರತಿಭಟನಾಕಾರರು ಧ್ವಂಸಗೊಳಿಸಿದ್ದ ಕಾರ್ಖಾನೆಯ ಮುಖ್ಯ ಗೇಟ್ ಹಾಗೂ ಕಾಂಪೌಂಡ್ ಅನ್ನು ಆಡಳಿತ ಮಂಡಳಿ ರಾತ್ರೋರಾತ್ರಿ ಮರುನಿರ್ಮಾಣ ಮಾಡಿದೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ: ಬೃಹತ್​​ ಪ್ರತಿಭಟನೆ

ಈ ಬೆಳವಣಿಗೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ರೈತರು, ಕೆರೆಯನ್ನು ಸಾರ್ವಜನಿಕರ ಬಳಕೆಗೆ ಮರಳಿ ನೀಡದಿದ್ದರೆ ಮತ್ತೊಮ್ಮೆ ಗೇಟ್ ಧ್ವಂಸಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇನ್ನು ಕೆರೆ ಉಳಿವಿಗಾಗಿ ರೈತರ ಹೋರಾಟ ಮುಂದುವರಿದಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ನಿಗಾ ವಹಿಸಿದೆ.

ಕೆರೆಗಾಗಿ ಹೋರಾಟ 

ಸುಮಾರು 54 ಸಾವಿರ ಕೋಟಿ ರೂ ವೆಚ್ಚದಲ್ಲಿ ವಿಸ್ತರಣೆಯಾಗ್ತಿರೋ ಕಾರ್ಖಾನೆಗೆ ಹೆಚ್ಚು ಕಡಿಮೆ ಕಳೆದ ಎರಡು ವರ್ಷದಿಂದ ವಿರೋಧ ಇದೆ. ಇನ್ನು ಕಾರ್ಖಾನೆ ಆವರಣದಲ್ಲಿರುವ ಕೆರೆಗಾಗಿ ಕಳೆದ ಎರಡು ತಿಂಗಳಿಂದ ಹೋರಾಟ ನಡೆಯುತ್ತಿದೆ. ಈ ಬೆಳವಣಿಗೆ ರೈತರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದ್ದು, ಕಾರ್ಖಾನೆ ಆಡಳಿತ ತಮ್ಮ ಹೋರಾಟವನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದ್ದಾರೆ.

ರೈತ ಮುಖಂಡ ಭೀಮಸೇನ್ ಕಲಕೇರಿ ಹೇಳಿದ್ದಿಷ್ಟು 

‘‘ಕೆರೆ ಸಾರ್ವಜನಿಕ ಆಸ್ತಿಯಾಗಿದ್ದು, ರೈತರು ಮತ್ತು ಗ್ರಾಮಸ್ಥರ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂಬುದು ಪ್ರತಿಭಟನಾಕಾರರ ವಾದ. ಕೆರೆಯನ್ನು ಸಾರ್ವಜನಿಕರಿಗೆ ಮರಳಿ ನೀಡುವವರೆಗೆ ಹೋರಾಟ ನಿಲ್ಲುವುದಿಲ್ಲ’’ ಎಂದು ರೈತ ಮುಖಂಡ ಭೀಮಸೇನ್ ಕಲಕೇರಿ ಹೇಳಿದ್ದಾರೆ.

ಇದನ್ನೂ ಓದಿ: ತೀವ್ರ ಸ್ವರೂಪ ಪಡೆದ ಬಲ್ಡೋಟಾ ಹೋರಾಟದ ಕಿಚ್ಚು, ಕಬ್ಬಿಣದ ಬಾಗಿಲು ಮುರಿದು ಕಾರ್ಖಾನೆಗೆ ನುಗ್ಗಿದ ರೈತರು

ಬಲ್ಡೋಟಾ ಕಾರ್ಖಾನೆ ಆವರಣದಲ್ಲಿರುವ ಕೆರೆ ವಿಚಾರ ಇದೀಗ ಮತ್ತೆ ವಿವಾದಕ್ಕೆ ಕಾರಣವಾಗಿದೆ. ಒಂದೆಡೆ ಕಾರ್ಖಾನೆ ಆಡಳಿತ ಗೇಟ್ ಮತ್ತು ಕಾಂಪೌಂಡ್ ಮರುನಿರ್ಮಾಣ ಮಾಡಿದ್ದರೆ, ಮತ್ತೊಂದೆಡೆ ರೈತರು ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ. ಮುಂದೆ ರೈತರ ಹೋರಾಟ ಯಾವ ಹಂತಕ್ಕೆ ತಲುಪತ್ತೆ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ICC T20 Ranking: ಬರೋಬ್ಬರಿ 230 ಸ್ಥಾನ ಮೇಲೇರಿದ ವೈಭವ್ ಸೂರ್ಯವಂಶಿ

Source link

ಸಂಸತ್ತಿನ ಒಳಗೆ ವಿದ್ಯಾರ್ಥಿಗಳ ಭವಿಷ್ಯದ ಚರ್ಚೆ, ಹೊರಗೆ ಸಂಸದೆಯ ರೀಲ್ಸ್: “ಇದಕ್ಕಾ ವೋಟ್ ಹಾಕಿದ್ದು?” ಎಂದು ಸಿಡಿದೆದ್ದ ನೆಟ್ಟಿಗರು – Kannada News | TMC MP Saayoni Ghosh’s Viral Parliament Reels Draw Flak During NEET Debates

ದೆಹಲಿ, ಜು.29: ಒಂದೆಡೆ ‘ನೀಟ್’ (NEET) ಪಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಪ್ರತಿಪಕ್ಷಗಳ ಗದ್ದಲ, ಕಲಾಪ ಮುಂದೂಡಿಕೆ ಮತ್ತು ತೀವ್ರ ವಾಗ್ದಾಳಿಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಜಾದವ್‌ಪುರ ಲೋಕಸಭಾ ಕ್ಷೇತ್ರದ ಸಂಸದೆ ಸಾಯನಿ ಘೋಷ್ (Saayoni Ghosh) ಸಂಸತ್ ಭವನದ ಆವರಣದಲ್ಲಿ ರೀಲ್ಸ್ (Reels) ಮಾಡಿ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ತೃಣಮೂಲ ಕಾಂಗ್ರೆಸ್  ನಿಂದ ಬಂಡಾಯವೆದ್ದು ಬಂದಿರುವ NCPI ಸಂಸದರೂ ಸಹ ಮುಂಗಾರು ಕಲಾಪದಲ್ಲಿ ಭಾಗವಹಿಸುತ್ತಿದ್ದಾರೆ. ಈ ನಡುವೆ ನಟಿ ಹಾಗೂ ಸಂಸದೆಯಾಗಿರುವ ಸಾಯನಿ ಘೋಷ್ ಅವರು ಸಂಸತ್ತಿನ ಮಧ್ಯಾಹ್ನ ಭೋಜನದ ವಿರಾಮದ ವೇಳೆಯಲ್ಲಿ ಸಂಸತ್ ಭವನದ ಆವರಣದಲ್ಲಿ ಮಳೆಯನ್ನು ಆನಂದಿಸುತ್ತಾ ಮಾಡಿದ ವೀಡಿಯೊ ಈಗ ವೈರಲ್ ಆಗಿದೆ.

ಇಲ್ಲಿದೆ ನೋಡಿ ವಿಡಿಯೋ;

‘ತಾಲ್’  ಚಲನಚಿತ್ರದ ‘ನೆಹಿ ಸಮ್ನೆ ತು’ ಜನಪ್ರಿಯ ಹಾಡಿಗೆ ಸಾಯನಿ ಘೋಷ್ ಮಾಡಿರುವ 20 ಸೆಕೆಂಡ್‌ಗಳ ಈ ರೀಲ್ಸ್ ಮಂಗಳವಾರ ಪೋಸ್ಟ್ ಆಗಿದ್ದು, ಇಂಟರ್ನೆಟ್‌ನಲ್ಲಿ ತೀವ್ರ ವೈರಲ್ ಆಗಿದೆ. ಈ ವೀಡಿಯೊ ಈಗಾಗಲೇ 87 ಲಕ್ಷಕ್ಕಿಂತಲ್ಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, 5,000ಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.

ಇದನ್ನೂ ಓದಿ: ಇನ್ಮುಂದೆ ನೋಟುಗಳು ಹರಿಯಲ್ಲ, ನೀರಿಗೆ ನೆನೆಯಲ್ಲ: 200 ಕೋಟಿ ಪ್ಲಾಸ್ಟಿಕ್ ನೋಟು ಮುದ್ರಣ; ಕಾಗದದ ನೋಟುಗಳು ಬಂದ್ ಆಗುತ್ತಾ?

ಸಾಯನಿ ಘೋಷ್ ಅವರ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿತವಾದ ಟೀಕೆಗಳಿಗೆ ಕಾರಣವಾಗಿದೆ. ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ‘ನೀಟ್’ ಪರೀಕ್ಷೆಯ ಅಕ್ರಮದ ಕುರಿತು ಸಂಸತ್ತಿನ ಒಳಗೆ ತೀವ್ರ ಚರ್ಚೆ ಮತ್ತು ಆಕ್ರೋಶ ವ್ಯಕ್ತವಾಗುತ್ತಿರುವಾಗ, ಹೊರಗಡೆ ಸಂಸದೆಯೊಬ್ಬರು ಮಳೆಗೆ ರೀಲ್ಸ್ ಮಾಡುತ್ತಿರುವುದನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ. “ಜನರು ನಿಮ್ಮನ್ನು ದೇಶದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಸಂಸತ್ತಿಗೆ ಕಳುಹಿಸಿದ್ದಾರೆಯೇ ಹೊರತು ರೀಲ್ಸ್ ಮಾಡಲು ಅಲ್ಲ” ಎಂದು ಹಲವರು ಕಾಮೆಂಟ್ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ರಾಷ್ಟ್ರದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಜೆನ್ ಜಿ’ಗಳನ್ನು ‘ಜನರೇಷನ್ ಗಟಾರ್’ ಎಂದಿದ್ದಕ್ಕೆ ಸ್ಪಷ್ಟನೆ ನೀಡಿದ ಕಂಗನಾ ರಣಾವತ್ – Kannada News | BJP MP Kangana Ranaut clarifies Generation Gutter Remark on Instagram Reel

ಯುವ ಪೀಳಿಗೆಯನ್ನು ‘ಜನರೇಷನ್ ಗಟಾರ್’ (Generation Gutter) ಎಂದು ಕರೆದು ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್, ಇದೀಗ ತಮ್ಮ ಹೇಳಿಕೆಗೆ ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಯುವತಿಯರು ಜವಾಬ್ದಾರಿಯಿಲ್ಲದೆ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಕಂಗನಾ (Kangana Ranaut) ನೀಡಿದ್ದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಬೆನ್ನಲ್ಲೇ ತಮ್ಮ ಮಾಧ್ಯಮ ಮಿತ್ರರಿಗಾಗಿ ವೀಡಿಯೊ ಹಂಚಿಕೊಂಡಿರುವ ಅವರು, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ವೀಡಿಯೊದಲ್ಲಿ ಮಾತನಾಡಿದ ಕಂಗನಾ, ‘ನಮ್ಮ ಮನೆಯ ಮಕ್ಕಳು ಅಶ್ಲೀಲ ಮಾತುಗಳನ್ನು ಬಳಸಿ ಲೈಂಗಿಕವಾಗಿ ಬಿಂಬಿತವಾಗುವುದನ್ನು ನಾವು ಬಯಸುವುದಿಲ್ಲ. ಇದರಿಂದ ಮನೆಯ ಹಿರಿಯರ ಮುಂದೆ ಮುಜುಗರಪಡುವಂತಾಗುತ್ತದೆ. ಇಂತಹ ನಡವಳಿಕೆಯನ್ನು ನಾವು ಒಪ್ಪುವುದಿಲ್ಲ ಹಾಗೂ ಇದನ್ನು ಸಾಮಾನ್ಯೀಕರಿಸಲು ಬಿಡುವುದಿಲ್ಲ’ ಎಂದಿದ್ದಾರೆ.

ಮಾಧ್ಯಮಗಳ ವಿರುದ್ಧ ಕಿಡಿಕಾರಿದ ಕಂಗನಾ ಅವರು, ‘ನಾನು ಸ್ಕೈರೂಟ್ ಕಾರ್ಯಕ್ರಮವನ್ನು ಅಭಿನಂದಿಸಿದ್ದಾಗಲಿ ಅಥವಾ ನೀಟ್ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ್ದಾಗಲಿ ಮಾಧ್ಯಮಗಳು ತೋರಿಸಲಿಲ್ಲ. ಆದರೆ ಕೆಲವು ಲೈಕ್ಸ್ ಮತ್ತು ಫಾಲೋವರ್ಸ್‌ಗಾಗಿ ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸುತ್ತಿವೆ. ಕೆಲವು ಫೆಮಿನಿಸ್ಟ್‌ಗಳು ಮಹಿಳೆಯರಿಗೆ ಸಭ್ಯತೆಯ ಹೊಣೆ ಏಕೆ ಎಂದು ಪ್ರಶ್ನಿಸುತ್ತಿದ್ದಾರೆ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಶಿಸ್ತಿನಿಂದ ಇರುವುದು ಆಯ್ಕೆಯಲ್ಲ, ಅದು ಅನಿವಾರ್ಯ’:

ಫೆಮಿನಿಸ್ಟ್‌ಗಳ ಪ್ರಶ್ನೆಗೆ ತಿರುಗೇಟು ನೀಡಿದ ಕಂಗನಾ, ‘ಎಕ್ಸ್‌ಕ್ಯೂಸ್ ಮೀ.. ನೀವು ನಿಮ್ಮ ಹೆಣ್ಣುಮಕ್ಕಳಿಗೆ ಇದನ್ನೇ ಕಲಿಸುತ್ತೀರಾ? ಶಿಸ್ತಿನಲ್ಲಿರುವುದು ಒಂದು ಆಯ್ಕೆಯಲ್ಲ. ನೀವು ಸಮಾಜದಲ್ಲಿ ಇರಬೇಕೆಂದರೆ ಸಂವಿಧಾನದ ಪ್ರಕಾರವೇ ನಡೆದುಕೊಳ್ಳಬೇಕು’ ಎಂದು ಖಾರವಾಗಿ ಹೇಳಿದ್ದಾರೆ. ಅಲ್ಲದೆ, ಪ್ರಧಾನಮಂತ್ರಿಯವರನ್ನು ಗೌರವಿಸುವ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಹಿಂದೂ ಯುವತಿಯರ ಬಗ್ಗೆ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡ ಕಂಗನಾ ರಣಾವತ್

ಮೋದಿ ಪರ ಕಂಗನಾ ಮಾತು:

‘ಮಕ್ಕಳು ಪ್ರಧಾನಮಂತ್ರಿಯವರನ್ನು ಎಕ್ಸಾಮ್ ಬಡ್ಡಿ ಎನ್ನುತ್ತಾರೆ. ಕೆಲವರು ಅವರನ್ನು ನಾಯಕ, ಸ್ನೇಹಿತ, ಕುಟುಂಬದ ಸದಸ್ಯ ಅಥವಾ ದೇವರಂತೆ ಕಾಣುತ್ತಾರೆ. ಯಾರ ಭಾವನೆಗಳನ್ನೂ ಗಾಯಗೊಳಿಸಲು ಯಾರಿಗೂ ಹಕ್ಕಿಲ್ಲ. ಇದು ಕೂಲ್ ಆಗಿ ಕಾಣಿಸಿಕೊಳ್ಳುವುದಲ್ಲ, ಮೂಲಭೂತ ನಾಗರಿಕ ಪ್ರಜ್ಞೆ. ಅದು ನಿಮಗಿಲ್ಲದಿದ್ದರೆ ಕಲಿತುಕೊಳ್ಳಬೇಕು’ ಎಂದಿದ್ದಾರೆ.

‘ಫೆಮಿನಾಜಿ’ ಪ್ರಭಾವಕ್ಕೆ ಒಳಗಾಗಬೇಡಿ:

ಯುವಜನತೆ ಫೆಮಿನಾಜಿಗಳ ಪ್ರಭಾವಕ್ಕೆ ಒಳಗಾಗಿ ಜೀವನ ಹಾಳುಮಾಡಿಕೊಳ್ಳಬಾರದು ಎಂದು ಮನವಿ ಮಾಡಿದ ಕಂಗನಾ, ‘ಈ ರೀತಿಯ ಮುಜುಗರದ ನಡವಳಿಕೆಯನ್ನು ನಿಮ್ಮ ಕೊಠಡಿಯೊಳಗೆ ಮಾತ್ರ ಇಟ್ಟುಕೊಳ್ಳಿ. ಹೊರಗಡೆ ಬಂದಾಗ ಮರ್ಯಾದೆಯಿಂದ ಇರಲೇಬೇಕು, ಇಲ್ಲವಾದರೆ ನಿಮ್ಮ ಭವಿಷ್ಯ ಕತ್ತಲೆಯಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕದ ಜಲ ಪ್ರದೇಶಗಳನ್ನು ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ – Kannada News | CM DK Shivakumar Says Appeal Against CWRC Order on Cauvery Water Release to Tamil Nadu

ನವದೆಹಲಿ, (ಜುಲೈ 29): ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ಕುಡಿಯುವ ನೀರಿಗೂ ಬರ ಎದುರಾಗಿದೆ. ಇದರ ಮಧ್ಯೆ CWRC ತಮಿಳುನಾಡಿಗೆ 15 ದಿನಗಳ ಕಾಲ ನಿತ್ಯ 3500 ಕ್ಯೂಸೆಕ್​ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶಿಸಿದೆ. ಈ ಆದೇಶಕ್ಕೆ ಕರ್ನಾಟಕದಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗಿದ್ದು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಬಿಡಬಾರದು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಗಳು ವ್ಯಕ್ತವಾಗುತ್ತಿವೆ. ಇನ್ನು CWRC ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ನವದೆಹಲಿಯಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿಎಂ ಡಿಕೆ ಶಿವಕುಮಾರ್, ಜಲಸಂಪನ್ಮೂಲ ಸಚಿವರು, ಅಧಿಕಾರಿಗಳ ಜೊತೆ ಚರ್ಚಿಸಿದ್ದು, CWRC ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ. ಸುಪ್ರೀಂಕೋರ್ಟ್, CWMAಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ನಿರ್ಧಾರ ಮಾಡಿದ್ದು, ಈ ಬಗ್ಗೆ ಕಾನೂನು ತಜ್ಞರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ನಮಗೆ ವರುಣ ಕೃಪೆ ತೋರಿಸಿಲ್ಲ. 2 ಸಲ ತಮಿಳುನಾಡು ಮನವಿ ತಿರಸ್ಕರಿಸಿತ್ತು. ಈ ಸಲ ಆದೇಶ ನೀಡಿದೆ.
ನಾವು ಇದರ ವಿರುದ್ಧ ಮೇಲ್ಮನವಿ ಸಲ್ಲಿಸುವುದಕ್ಕೆ ತೀರ್ಮಾನಿಸಿದ್ದೇವೆ. ಈ ಬಗ್ಗೆ ವಿಪಕ್ಷಗಳ ನಾಯಕರ ಜೊತೆಗೆ ಚರ್ಚೆ ಮಾಡುತ್ತೇನೆ. ತಮಿಳುನಾಡು ಸಿಎಂ ಕೂಡಾ ಬಂದು ಮಾತನಾಡುತ್ತಾರೆ. ಫೋನ್‌ನಲ್ಲಿ ಮಾತನಾಡಿದ್ದಾರೆ, ನಾವು ಗೌರವದಿಂದ ಬನ್ನಿ ಅಂದಿದ್ದೇವೆ. ನಮ್ಮ ರಾಜ್ಯದ ಜಲ ಪ್ರದೇಶಗಳನ್ನು ನೋಡಲು ಮನವಿ ಮಾಡಿದ್ದು, ಹೆಲಿಕಾಪ್ಟರ್ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದೇನೆ. ಸೌಹಾರ್ದಯುತವಾಗಿ ಚರ್ಚೆ ಮಾಡಬೇಕಿದೆ, ಅವರ ಉದ್ದೇಶ ಗೊತ್ತಿಲ್ಲ. ಬರ್ತೀನಿ ಅಂದ್ರು, ಗೌರವದಿಂದ ಬರಮಾಡಿಕೊಳ್ಳುತ್ತೇವೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version