Free AI Training: ಐಐಟಿ ಧಾರವಾಡದಲ್ಲಿ ಉಚಿತ AI ತರಬೇತಿ; ಉಚಿತ ವಸತಿ,ಊಟದ ಜೊತೆಗೆ ಮಾಸಿಕ 1,000 ರೂ. ಸ್ಟೈಫಂಡ್! – Kannada News | Free AI Training IIT Dharwad: PM VIKAS Residential Skill Dev Program

ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆ

ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ತಮ್ಮ ಕೌಶಲ್ಯಗಳನ್ನು ಸುಧಾರಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇದು ಒಂದು ಉತ್ತಮ ಅವಕಾಶವಾಗಿದೆ. ಕೇಂದ್ರ ಸರ್ಕಾರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ‘ಪ್ರಧಾನ ಮಂತ್ರಿ ವಿರಾಸತ್ ಕಾ ಸಂವರ್ಧನ್’ (PM VIKAS) ಯೋಜನೆ 2026-27 ರ ಅಡಿಯಲ್ಲಿ, ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (IIT) ಒಂದು ವರ್ಷದ ಉಚಿತ ವಸತಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಈ ಕಾರ್ಯಕ್ರಮದ ಭಾಗವಾಗಿ, ‘ಕೃತಕ ಬುದ್ಧಿಮತ್ತೆ ಟೆಕ್ನೋಕ್ರಾಟ್’ (ICE/ITS/Q0201) ಕೋರ್ಸ್‌ನಲ್ಲಿ ಉಚಿತ ತರಬೇತಿಯನ್ನು ನೀಡಲಾಗುತ್ತದೆ.

ಕೋರ್ಸ್ ವಿಶೇಷತೆಗಳು ಮತ್ತು ಸೌಲಭ್ಯಗಳು:

ಆಯ್ಕೆಯಾದ ಅಭ್ಯರ್ಥಿಗಳಿಗೆ ಧಾರವಾಡದ ಐಐಟಿಯಲ್ಲಿ ಒಂದು ವರ್ಷದವರೆಗೆ ಉಚಿತ AI ತರಬೇತಿಯನ್ನು ನೀಡಲಾಗುತ್ತದೆ. ಇದು ಸಂಪೂರ್ಣ ವಸತಿ ಕಾರ್ಯಕ್ರಮವಾಗಿರುವುದರಿಂದ, ಅರ್ಹತೆಗೆ ಅನುಗುಣವಾಗಿ ಉಚಿತ ಹಾಸ್ಟೆಲ್, ಊಟ ಮತ್ತು ವಸತಿ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಸೆಕ್ಟರ್ ಸ್ಕಿಲ್ ಕೌನ್ಸಿಲ್ (SSC) ನಿಂದ ಗುರುತಿಸಲ್ಪಟ್ಟ ಮೌಲ್ಯಯುತ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

ಸ್ಟೈಫಂಡ್ ಮತ್ತು ಉದ್ಯೋಗ ಬೆಂಬಲ:

ತರಬೇತಿಯ ಅವಧಿಯಲ್ಲಿ ಅಭ್ಯರ್ಥಿಗಳು ಪ್ರತಿ ತಿಂಗಳು 1,000ರೂ. ಸ್ಟೈಫಂಡ್ ಪಡೆಯುತ್ತಾರೆ. ಈ ಮೊತ್ತವನ್ನು ಕೇಂದ್ರ ಸಚಿವಾಲಯವು ನೇರ ಲಾಭ ವರ್ಗಾವಣೆ (DBT) ಮೂಲಕ ನೇರವಾಗಿ ಅಭ್ಯರ್ಥಿಗಳ ಬ್ಯಾಂಕ್ ಖಾತೆಗೆ ಪಾವತಿಸುತ್ತದೆ. ತರಬೇತಿ ಪೂರ್ಣಗೊಂಡ ನಂತರ ಉದ್ಯೋಗ ಪಡೆದುಕೊಳ್ಳಲು 2 ತಿಂಗಳ ಕಾಲ ಬೆಂಬಲ ನೀಡಲಾಗುವುದು. ಜೊತೆಗೆ, ಯಶಸ್ವಿಯಾಗಿ ಉದ್ಯೋಗ ಪಡೆಯುವ ಪ್ರತಿಯೊಬ್ಬ ಅಭ್ಯರ್ಥಿಗೆ 4,000ರೂ. ವರೆಗೆ ಆರ್ಥಿಕ ಸಹಾಯವನ್ನು ಸಹ ಒದಗಿಸಲಾಗುತ್ತದೆ.

ಸೀಟು ಕಾಯ್ದಿರಿಸುವಿಕೆ ಮತ್ತು ಅರ್ಹ ಸಮುದಾಯಗಳು:

ಈ ಕಾರ್ಯಕ್ರಮದಲ್ಲಿ ಒಟ್ಟು ಸೀಟುಗಳಲ್ಲಿ ಶೇಕಡಾ 33 ರಷ್ಟು ಸೀಟುಗಳನ್ನು ಮಹಿಳಾ ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ. ಹಾಗೆಯೇ ಗರಿಷ್ಠ ಶೇಕಡಾ 15 ರಷ್ಟು ಸೀಟುಗಳನ್ನು ಅಲ್ಪಸಂಖ್ಯಾತ ಸಮುದಾಯಗಳಿಗೆ, ಆರ್ಥಿಕವಾಗಿ ದುರ್ಬಲ ವರ್ಗಗಳ (EWS) ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಸರ್ಕಾರದಿಂದ ಸೂಚಿಸಲಾದ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಪಾರ್ಸಿ ಮತ್ತು ಜೈನ ಸಮುದಾಯಕ್ಕೆ ಸೇರಿದ 18 ರಿಂದ 45 ವರ್ಷ ವಯೋಮಿತಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ಶೈಕ್ಷಣಿಕ ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆ:

ಕೃತಕ ಬುದ್ಧಿಮತ್ತೆ ಅನ್ವಯಿಕೆಗಳ ಮೂಲಭೂತ ಜ್ಞಾನ ಹೊಂದಿರುವ ಪದವೀಧರರು, ITI ಅಭ್ಯರ್ಥಿಗಳು ಮತ್ತು ಅಂತಿಮ ವರ್ಷದ ಪದವಿಪೂರ್ವ (UG) ವಿದ್ಯಾರ್ಥಿಗಳು ಈ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರಲ್ಲಿ ಸೂಕ್ತ ಅಭ್ಯರ್ಥಿಗಳ ಅಂತಿಮ ಆಯ್ಕೆಯನ್ನು ಸ್ಕ್ರೀನಿಂಗ್ ಪ್ರಕ್ರಿಯೆಯ ಮೂಲಕ ಮಾಡಲಾಗುತ್ತದೆ.

ಇದನ್ನೂ ಓದಿ: ಕ್ಯಾಂಪಸ್ ಇಂಟರ್ವ್ಯೂಗೂ ಮುನ್ನವೇ ಒಲಿದ ಅದೃಷ್ಟ; ಭಾರತದ 21 ವರ್ಷದ ವಿದ್ಯಾರ್ಥಿಗೆ ನೆದರ್‌ಲ್ಯಾಂಡ್ಸ್ ಕಂಪನಿಯಿಂದ 2.5 ಕೋಟಿ ರೂ. ಜಾಬ್ ಆಫರ್!

ಅಗತ್ಯ ದಾಖಲೆಗಳು ಮತ್ತು ಅರ್ಜಿ ಸಲ್ಲಿಕೆ:

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಗಾತ್ರದ ಫೋಟೋ, ವಯಸ್ಸಿನ ಪರಿಶೀಲನೆಗಾಗಿ 10 ನೇ ತರಗತಿ ಪ್ರಮಾಣಪತ್ರ, ಪದವಿ ಪ್ರಮಾಣಪತ್ರ, ಬ್ಯಾಂಕ್ ಪಾಸ್‌ಬುಕ್, ಅಲ್ಪಸಂಖ್ಯಾತ ಸಮುದಾಯ ಪ್ರಮಾಣಪತ್ರ ಹಾಗೂ ಅನ್ವಯಿಸುವವರು EWS ಪ್ರಮಾಣಪತ್ರವನ್ನು ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕು.

ಪ್ರಮುಖ ಮಾಹಿತಿ:

ಐಐಟಿ ಧಾರವಾಡ ನೀಡುವ ಈ ಒಂದು ವರ್ಷದ ಉಚಿತ ವಸತಿ ತರಬೇತಿಯು AI ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸುವವರಿಗೆ ಅತ್ಯುತ್ತಮ ಅವಕಾಶವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ಪೋರ್ಟಲ್ ಮೂಲಕ ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 31. ಅಧಿಕೃತ ಪೋರ್ಟಲ್ pm-vikas.iitdh.ac.in

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:30 pm, Sat, 15 August 26

Source link

IND vs SL: ಗಾಲೆಯಲ್ಲಿ ಸ್ವಾತಂತ್ರ್ಯ ದಿನ ಆಚರಿಸಿದ ಟೀಂ ಇಂಡಿಯಾ – Kannada News | India’s 600th Test: Gill Leads Independence Day Celebrations in Galle

ಇಡೀ ಭಾರತ 80 ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದೆ. ಇತ್ತ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ (Team India) ಕೂಡ ಸಿಂಹಳೀಯರ ನಾಡಿನಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಿದೆ. ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಇಂದು ಅಂದರೆ ಆಗಸ್ಟ್ 15 ರಂದು ಗಾಲೆಯಲ್ಲಿ ಆರಂಭವಾಗಿದೆ. ಟೀಂ ಇಂಡಿಯಾ ಪಾಲಿಗೆ ಈ ಪಂದ್ಯ ಬಹಳ ವಿಶೇಷವಾಗಿದೆ. ಏಕೆಂದರೆ ಈ ಪಂದ್ಯ ಟೀಂ ಇಂಡಿಯಾಗೆ 600 ನೇ ಟೆಸ್ಟ್ ಪಂದ್ಯವಾಗಿದೆ. ಹೀಗಾಗಿ ಈ ಐತಿಹಾಸಿಕ ಪಂದ್ಯಕ್ಕಾಗಿ ಕಣಕ್ಕಿಳಿಯುವ ಮೊದಲು ಟೀಂ ಇಂಡಿಯಾ ಗಾಲೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿತು. ನಾಯಕ ಶುಭ್​ಮನ್ ಗಿಲ್ (Shubman Gill) ಧ್ವಜಾರೋಹಣ ನೆರವೇರಿಸಿದರು. ಈ ಸಮಯದಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಉಪಸ್ಥಿತರಿದ್ದರು.

ಗಾಲೆಯಲ್ಲಿ ಹಾರಿದ ತ್ರಿವರ್ಣ ಧ್ವಜ

ಟೀಂ ಇಂಡಿಯಾ ಗಾಲೆಯಲ್ಲಿ 80 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ ವೀಡಿಯೊವನ್ನು ಬಿಸಿಸಿಐ ಹಂಚಿಕೊಂಡಿದೆ. ಈ ವೀಡಿಯೊದಲ್ಲಿ, ಶುಭ್​ಮನ್ ಗಿಲ್ ಧ್ವಜಾರೋಹಣ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಗಾಲೆ ಟೆಸ್ಟ್ ಆರಂಭಕ್ಕೂ ಸ್ವಲ್ಪ ಮೊದಲು ಈ ಕಾರ್ಯಕ್ರಮ ಹಮ್ಮಿಕ್ಕೊಳ್ಳಲಾಗಿದೆ. ತ್ರಿವರ್ಣ ಧ್ವಜ ಹಾರಿಸಿದ ನಂತರ, ಟೀಂ ಇಂಡಿಯಾ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಒಟ್ಟಾಗಿ ರಾಷ್ಟ್ರಗೀತೆ ಹಾಡಿದ್ದಾರೆ.

ಭಾರತಕ್ಕೆ ಐತಿಹಾಸಿಕ ಟೆಸ್ಟ್ ಪಂದ್ಯ

ಗಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ ನಂತರ ಕಣಕ್ಕಿಳಿದಿರುವ ಟೀಂ ಇಂಡಿಯಾಕ್ಕೆ ಇದು ಐತಿಹಾಸಿಕ ಮಹತ್ವವನ್ನು ಹೊಂದಿರುವ ಪಂದ್ಯವಾಗಿದೆ. ಈ ಟೆಸ್ಟ್ ಪಂದ್ಯವು ಭಾರತೀಯ ತಂಡದ 600 ನೇ ಟೆಸ್ಟ್ ಪಂದ್ಯವಾಗಿದೆ. 600 ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸುವುದರ ಜೊತೆಗೆ, ಶುಭ್​ಮನ್ ಗಿಲ್ ಗ್ಯಾಲೆಯಲ್ಲಿ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ.

IND vs SL: 600ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ

ಈ ಸಾಧನೆ ಮಾಡಿದ ಮೂರನೇ ತಂಡ

ಕ್ರಿಕೆಟ್ ಇತಿಹಾಸದಲ್ಲಿ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮಾತ್ರ ಭಾರತಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿವೆ. ಇದರರ್ಥ ಭಾರತ 600 ಟೆಸ್ಟ್ ಪಂದ್ಯಗಳನ್ನು ಆಡಿದ ಮೂರನೇ ತಂಡವಾಗಿದೆ. ಈ ಹಿಂದೆ ಆಡಿದ 599 ಟೆಸ್ಟ್‌ಗಳಲ್ಲಿ ಭಾರತ 186 ಪಂದ್ಯಗಳನ್ನು ಗೆದ್ದು 188 ಪಂದ್ಯಗಳಲ್ಲಿ ಸೋತಿದೆ. ಉಳಿದಂತೆ 224 ಪಂದ್ಯಗಳು ಡ್ರಾ ಆಗಿವೆ. ಭಾರತ ತನ್ನ 300ನೇ, 400ನೇ ಮತ್ತು 500ನೇ ಟೆಸ್ಟ್‌ಗಳನ್ನು ಗೆದ್ದಿದೆ. ಆದ್ದರಿಂದ, ಟೀಂ ಇಂಡಿಯಾ ತನ್ನ 600ನೇ ಟೆಸ್ಟ್‌ನಲ್ಲಿಯೂ ಗೆಲುವು ಸಾಧಿಸುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:22 pm, Sat, 15 August 26

Source link

ಕದ್ದು ಮುಚ್ಚಿ ರಾತ್ರೋರಾತ್ರಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಸರ್ಕಾರ – Kannada News | Cauvery Water Dispute: Karnataka Government Accused of Releasing Cauvery Water to Tamil Nadu Overnight

ಮಂಡ್ಯ, ಆಗಸ್ಟ್​​ 15: ತಮಿಳುನಾಡಿಗೆ 15 ದಿನ ನಿತ್ಯ 12 ಟಿಎಂಸಿ ಕಾವೇರಿ ನೀರು ಹರಿಸುವಂತೆ ಇತ್ತೀಚೆಗೆ CWRC ಪ್ರಾಧಿಕಾರ ಆದೇಶಿಸಿತ್ತು. ಇದು ಕಾವೇರಿ (Cauvery Water Dispute) ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಅನ್ಯಾಯವಾಗಿತ್ತು. ಹೀಗಾಗಿ ಆಗಸ್ಟ್​ 13ರಂದು ಕರ್ನಾಟಕ ಬಂದ್​ ಕೂಡ ಮಾಡಲಾಗಿತ್ತು. ಇನ್ನು ಸಿಎಂ ಡಿಕೆ ಶಿವಕುಮಾರ್​ ಸರ್ವಪಕ್ಷಗಳ ಸಭೆ ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂದಿದ್ದರು. ಆದರೆ ಇದೆಲ್ಲದರ ಮಧ್ಯೆ ಇದೀಗ ರಾತ್ರೋರಾತ್ರಿ ಕೆಆರ್​ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಸಲಾಗಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ತಮಿಳುನಾಡಿಗೆ ಹರಿದ 3,000 ಕ್ಯೂಸೆಕ್ ಕಾವೇರಿ ನೀರು

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದಿಂದ ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸಲಾಗುತ್ತಿದೆ. ಇಷ್ಟು ದಿನ ಕಬಿನಿ ಜಲಾಶಯದಿಂದ ಮಾತ್ರ ತಮಿಳುನಾಡಿಗೆ ನೀರು ಬಿಡಲಾಗುತ್ತಿತ್ತು. ಆದರೆ, ಕಬಿನಿ ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ತಗ್ಗಿದ ಹಿನ್ನೆಲೆ ಸರ್ಕಾರದ ಸೂಚನೆಯಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕೆಆರ್‌ಎಸ್ ಡ್ಯಾಂನ 80ಕ್ಕೂ ಹೆಚ್ಚು ಗೇಟ್‌ಗಳ ಮೂಲಕ ಸುಮಾರು 3,000 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದೆ.

ಕದ್ದುಮುಚ್ಚಿ ನೀರು ಬಿಡುಗಡೆ: ಸರ್ಕಾರದ ವಿರುದ್ಧ ರೈತರು ಆಕ್ರೋಶ

ಸದ್ಯ ತಮಿಳುನಾಡಿಗೆ ಸುಮಾರು 3,000 ಕ್ಯೂಸೆಕ್ ಕಾವೇರಿ ನೀರು ಬಿಡುಗಡೆ ಮಾಡಿರುವುದನ್ನು ಖಂಡಿಸಿ ಮಂಡ್ಯ ನಗರದ ಸಂಜಯ ವೃತ್ತದಲ್ಲಿ ರೈತರು ತೀವ್ರ ಪ್ರತಿಭಟನೆ ನಡೆಸಿದರು. ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಹೇಳಿದ್ದ ರಾಜ್ಯ ಸರ್ಕಾರ, ಈಗ ಕದ್ದುಮುಚ್ಚಿ ನೀರು ಹರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅನ್ನದಾತರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಈ ನಡುವೆ ಜಿಲ್ಲಾಧಿಕಾರಿಗಳು ರೈತರಿಗೆ ಕರೆ ಮಾಡಿ ನೀರು ಬಿಟ್ಟಿಲ್ಲವೆಂದು ಸಮಜಾಯಿಷಿ ನೀಡಲು ಯತ್ನಿಸಿದರೂ, ರೈತರು ಆಕ್ರೋಶ ಹೊರಹಾಕಿದರು.

ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಿಷ್ಟು 

ಇನ್ನು ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎನ್. ಚಲುವರಾಯಸ್ವಾಮಿ, ‘ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಪ್ರತಿದಿನ 12,000 ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿದೆ. ನಿಯಮಗಳ ಪ್ರಕಾರ ಜೂನ್ ತಿಂಗಳಿನಿಂದಲೇ ನೀರು ಬಿಡಬೇಕಿದ್ದರೂ, ಜೂನ್ ಮತ್ತು ಜುಲೈ ತಿಂಗಳಲ್ಲಿ ನೀರು ಬಿಟ್ಟಿರಲಿಲ್ಲ. ಸದ್ಯ ಕಬಿನಿ ಜಲಾಶಯದಿಂದ 10,000 ಕ್ಯೂಸೆಕ್ ಜೊತೆಗೆ ಸೀಪೇಜ್ ನೀರು ತಮಿಳುನಾಡಿಗೆ ಸೇರುತ್ತಿದೆ’ ಎಂದರು.

ಇದನ್ನೂ ಓದಿ: ಸಿಎಂ ಡಿ.ಕೆ. ಶಿವಕುಮಾರ್​ ಭೇಟಿಯಾದ ಕನ್ನಡಪರ ಹೋರಾಟಗಾರರು: ಪ್ರಮುಖ ಬೇಡಿಕೆಗಳೇನು?

‘ಆಗಸ್ಟ್ ಅಂತ್ಯದವರೆಗೂ ಉತ್ತಮ ಮಳೆಯಾಗುವ ಮುನ್ಸೂಚನೆ ಇದ್ದು, ಸೆಪ್ಟೆಂಬರ್ ವೇಳೆಗೆ ಕೆಆರ್‌ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗುವ ವಿಶ್ವಾಸವಿದೆ. ಈಗಾಗಲೇ ಹೇಮಾವತಿ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲು ಸೂಚನೆ ನೀಡಲಾಗಿದ್ದು, ಕಳೆದ 20 ದಿನಗಳಿಂದ ಕೆಆರ್‌ಎಸ್‌ನಿಂದಲೂ ನಮ್ಮ ಭಾಗದ ಕೆರೆ-ಕಟ್ಟೆಗಳಿಗೆ ಹಾಗೂ ಬೆಳೆಗಳಿಗೆ ನೀರು ಒದಗಿಸಲಾಗುತ್ತಿದೆ. ಸಿಎಂ ಡಿ.ಕೆ. ಶಿವಕುಮಾರ್ ಅವರೂ ಕಾವೇರಿ ಅಚ್ಚುಕಟ್ಟು ಪ್ರದೇಶದವರಾಗಿದ್ದು, ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಹೀಗಾಗಿ ಯಾರೂ ಪ್ರತಿಭಟನೆಗೆ ಮುಂದಾಗದೆ, ಸಮಸ್ಯೆಗಳಿದ್ದರೆ ನೇರವಾಗಿ ಸಂಪರ್ಕಿಸಿ ಸಲಹೆಗಳನ್ನು ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಹರಿಸುತ್ತಿದೆ ನಾಡದ್ರೋಹಿ ಕಾಂಗ್ರೆಸ್ ಸರ್ಕಾರ: ಅಶೋಕ್ ವಾಗ್ದಾಳಿ

‘ಕಾವೇರಿ ನೀರು ಬಿಡೋದಿಲ್ಲ ಎಂದು ಹೇಳಿ ಮತ್ತೆ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಹರಿಸುತ್ತಿದೆ ನಾಡದ್ರೋಹಿ ಕಾಂಗ್ರೆಸ್ ಸರ್ಕಾರ’ ಎಂದು ವಿಪಕ್ಷ ನಾಯಕ ಆರ್​​. ಅಶೋಕ್​​ ವಾಗ್ದಾಳಿ ಮಾಡಿದ್ದಾರೆ. ಈ ಕುರಿತಾಗಿ ಟ್ವೀಟ್​ ಮಾಡಿರುವ ಅವರು, ‘ಒಂದೆಡೆ ರಾಜ್ಯದ ರೈತರಿಗೆ ಸಿಗದ ನೀರು, ಇನ್ನೊಂದೆಡೆ ಕುಡಿಯುವ ನೀರಿಗೂ ಪರದಾಡುತ್ತಿರುವ ನಮ್ಮ ಜನ! ಆದರೆ ಈ ಲಜ್ಜೆಗೆಟ್ಟ ಕಾಂಗ್ರೆಸ್​ ಸರ್ಕಾರ ಮಾತ್ರ ಕನ್ನಡಿಗರ ಕಣ್ಣಿಗೆ ಮಣ್ಣೆರಚಿ, ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿದೆ’ ಎಂದಿದ್ದಾರೆ.

ಆರ್​ ಅಶೋಕ್ ಟ್ವೀಟ್​

‘ಸಿಎಂ ಡಿಕೆ ಶಿವಕುಮಾರ್​ ಅವರೇ, ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರೇ, ನಿಮ್ಮ ಎರಡು ನಾಲಿಗೆ ನಾಡದ್ರೋಹಿ ಆಡಳಿತಕ್ಕೆ ಕೊನೆಯಿಲ್ಲವೇ? ಕನ್ನಡಿಗರಿಗೆ ದ್ರೋಹ: ಹೊರಗಡೆ “ಒಂದು ಹನಿ ನೀರು ಬಿಡುವುದಿಲ್ಲ” ಎಂದು ಭಾಷಣ ಬಿಗಿಯುತ್ತೀರಿ, ಆದರೆ ರಾತ್ರೋರಾತ್ರಿ KRS ಡ್ಯಾಂ ಬಾಗಿಲು ತೆರೆದು ತಮಿಳುನಾಡಿಗೆ ತೃಪ್ತಿಯಾಗುವಂತೆ ನೀರು ಹರಿಸುತ್ತೀರಿ’.

‘ರೈತರ ಹೊಟ್ಟೆಗೆ ಬರೆ: ಮಂಡ್ಯ, ಮೈಸೂರು, ಚಾಮರಾಜನಗರದ ನಮ್ಮ ರೈತರ ಬೆಳೆಗಳು ಒಣಗಿ ಹೋಗುತ್ತಿದ್ದರೂ ನಿಮಗೇನು ಚಿಂತೆಯಿಲ್ಲ. ನಿಮ್ಮ ದೆಹಲಿ ಹೈಕಮಾಂಡ್ ಮತ್ತು ತಮಿಳುನಾಡಿನ ಮೈತ್ರಿ ಪಕ್ಷಗಳನ್ನು ಓಲೈಸಲು ಕಾವೇರಿಯನ್ನೇ ಬಲಿಕೊಡುತ್ತಿದ್ದೀರಲ್ಲ, ನಿಮಗೇನು ನಾಚಿಕೆಯಾಗುವುದಿಲ್ಲವೇ? ಪೊಳ್ಳು ಆಶ್ವಾಸನೆಗಳು: ನಮ್ಮ ಕೆಆರ್‌ಎಸ್ ಜಲಾಶಯದಲ್ಲಿ ಕನ್ನಡಿಗರಿಗೇ ನೀರಿಲ್ಲದಿರುವಾಗ, ತಮಿಳುನಾಡಿಗೆ ನೀರು ಹರಿಸುವ ದುಂಬಾಲು ಯಾಕೆ’ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕಾವೇರಿ ಕಿಚ್ಚು: ಬಂದ್‌ಗೆ ಧುಮುಕಿದ್ದ ವಾಟಾಳ್ ನಾಗರಾಜ್ ವಶಕ್ಕೆ, ‘ಪೋಲಿಸರಿಗೆ ಧಿಕ್ಕಾರ’ ಕೂಗಿ ಪ್ರತಿಭಟನಾಕಾರರ ಅಕ್ರೋಶ

‘ತಕ್ಷಣವೇ KRS ನಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ! ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸಬೇಡಿ. ನಾಡಿನ ರೈತರ ಮತ್ತು ಸಾರ್ವಜನಿಕರ ಹಿತಾಸಕ್ತಿಯನ್ನು ಬಲಿ ಕೊಟ್ಟು ನೀವು ನಡೆಡಿಸುತ್ತಿರುವ ಈ ನಾಡದ್ರೋಹಿ ರಾಜಕೀಯವನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ. ನೀರು ಹರಿಸುವುದನ್ನು ಕೂಡಲೇ ತಡೆಯದಿದ್ದರೆ ಇಡೀ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸುವುದು ನಿಶ್ಚಿತ’ ಎಂದು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸ್ವಾತಂತ್ರ್ಯ ದಿನಾಚರಣೆಯಂದು ನೋಡಬೇಕಾದ ಕನ್ನಡ ಸಿನಿಮಾಗಳಿವು

Source link

3 ತಿಂಗಳಲ್ಲಿ 2 ಬ್ಲಾಕ್‌ಬಸ್ಟರ್: ನಟ ಸೂರ್ಯನ ದೊಡ್ಡ ಕಂಬ್ಯಾಕ್  – Kannada News | Suriya Scores 2 Blockbusters in 3 Months: A Phenomenal Box Office Comeback

ದಕ್ಷಿಣ ಭಾರತದ ಸೂಪರ್ ಸ್ಟಾರ್ ಸೂರ್ಯ ಅಪಾರ ಜನಪ್ರಿಯತೆ ಹೊಂದಿದ್ದಾರೆ. ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರಂತೆ ಸೂರ್ಯ ಕೂಡ ಬೇರೆ ಭಾಷೆಗಳಲ್ಲಿ ದೊಡ್ಡ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಅವರ ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಇದರಿಂದಾಗಿ ಅಭಿಮಾನಿಗಳು ಹಾಗೂ ವಿತರಕರಿಗೆ ತೀವ್ರ ನಿರಾಸೆಯಾಗಿತ್ತು. ಆದರೆ, ಈಗ ಬ್ಯಾಕ್​ ಟು ಬ್ಯಾಕ್ ಹಿಟ್ ಕೊಟ್ಟಿದ್ದಾರೆ.

ಸತತ ಮೂರು ಸಿನಿಮಾ ಸೋತರೆ ಕರಿಯರ್ ಮುಗಿಯಿತು ಎಂದು ಭಾವಿಸಲಾಗುತ್ತದೆ. ಸೂರ್ಯ ಅವರ ವೃತ್ತು ಜೀವನ ಕೂಡ ಮುಗಿಯಿತು ಎಂದೇ ವಿಶ್ಲೇಷಿಸಲಾಗಿತ್ತು. ಆದರೆ ಸೂರ್ಯ ಈಗ ಕೇವಲ ಮೂರು ತಿಂಗಳ ಅವಧಿಯಲ್ಲಿ ಎರಡು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿ ಅದ್ಭುತ ಕಂಬ್ಯಾಕ್ ಮಾಡಿದ್ದಾರೆ.

ಅವರ ನಟನೆಯ ‘ಕರುಪ್ಪು’ ಸಿನಿಮಾ ಎಲ್ಲರ ನಿರೀಕ್ಷೆ ಮೀರಿ ಬ್ಲಾಕ್‌ಬಸ್ಟರ್ ಹಿಟ್ ಆಯಿತು. ಈ ಗೆಲುವಿನ ಬೆನ್ನಲ್ಲೇ ತೆರೆಕಂಡ ‘ವಿಶ್ವನಾಥ್ ಆ್ಯಂಡ್ ಸನ್ಸ್’ ಸಿನಿಮಾ ಕೂಡ ಗೆಲುವಿನ ಹಾದಿಯಲ್ಲಿದೆ. ಈ ಚಿತ್ರಕ್ಕೆ ಎಲ್ಲೆಡೆ ಉತ್ತಮ ವಿಮರ್ಶೆ ಹಾಗೂ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಿನಿಮಾ ಮೊದಲ ದಿನವೇ 31.51 ಕೋಟಿ ರೂಪಾಯಿ ಗಳಿಸಿದೆ. ತಮಿಳು ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ‘ವಿಶ್ವನಾಥ್ ಆ್ಯಂಡ್ ಸನ್ಸ್’ ಅತ್ಯುತ್ತಮ ಓಪನಿಂಗ್ ಪಡೆದುಕೊಂಡಿದೆ. ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಾಣಲಿದೆ ಎಂಬುದು ತಜ್ಞರ ಅಭಿಪ್ರಾಯ.

ಇದನ್ನೂ ಓದಿ:;ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ ಕಾಕ್ರೋಚ್ ವಿವಾದಕ್ಕೆ ಸಿಜೆಐ ಸೂರ್ಯಕಾಂತ್ ಬೇಸರ

‘ವಿಶ್ವನಾಥ್ ಆ್ಯಂಡ್ ಸನ್ಸ್’ ಪ್ರಪಂಚದಾದ್ಯಂತ ಸುಮಾರು 200 ಕೋಟಿ ರೂಪಾಯಿ ಗಳಿಕೆಯ ಗುರಿ ಹೊಂದಿದೆ. ಪ್ರಸ್ತುತ ಚಿತ್ರಮಂದಿರಗಳಲ್ಲಿ ಈ ಸಿನಿಮಾಗೆ ಯಾವುದೇ ದೊಡ್ಡ ಪೈಪೋಟಿ ಇಲ್ಲ. ‘ಟಾಕ್ಸಿಕ್’ ಚಿತ್ರ ಬರುವವರೆಗೆ ಇದಕ್ಕೆ ಪೈಪೋಟಿ ಇಲ್ಲ. ಪ್ರೇಕ್ಷಕರ ಬೆಂಬಲ ಇದ್ದರೆ ಸಿನಿಮಾ ಸುಲಭವಾಗಿ ಈ ಮೈಲಿಗಲ್ಲು ತಲುಪಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಾನು ಮಾತಾಡಲ್ಲ ಅಂದ್ರೆ ಸೈಲೆಂಟ್ ಆಗಿದ್ದೀನಿ ಅಂತಾ ಅರ್ಥ ಅಲ್ಲ: ಏನಿದು ಸಿದ್ದು ಮಾರ್ಮಿಕ ಮಾತು

ಬೆಂಗಳೂರು, (ಆಗಸ್ಟ್ 15): ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಸಿದ್ದರಾಮಯ್ಯನವರು ಸೈಲೆಂಟ್​​​​​​​ ಆಗಿದ್ದಾರೆ. ಬಹಿರಂವಾಗಿ ಯಾವುದೇ ಹೇಳಿಕೆಗಳನ್ನು ನೀಡದೇ ಸೈಲೆಂಟ್ ಮೂಡ್​​​ಗೆ ಜಾರಿದ್ದಾರೆ. ಇಂದು (ಆಗಸ್ಟ್​ 15) ಮಾಧ್ಯಮದವರು ಸಿದ್ದರಾಮಯ್ಯನವರನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದಾರೆ. ಆದ್ರೆ, ಸಿದ್ದರಾಂಯ್ಯ ಮಾತ್ರ, ನಾನು ಎಲ್ಲಿ ಸೈಲೆಂಟ್ ಆಗಿದ್ದೇನೆ‌. ನಾನು ಹೆಚ್ಚು ಮಾತಾಡುತ್ತಿಲ್ಲ ಅಷ್ಟೇ . ನಾನು ಮುಖ್ಯಮಂತ್ರಿ ಅಲ್ಲ, ಹಾಗಾಗಿ ಜವಾಬ್ದಾರಿ ಇಲ್ಲ. ನಿನ್ನೆ ಅಧಿವೇಶನದಲ್ಲಿ ಭಾಗಿ ಆಗಿದ್ದೇನೆ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಎಂದಿದ್ದಾರೆ.

ಮಹಿಳಾ ಕೋಟಾ ಭರ್ತಿ ಆಗಿಲ್ಲ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ್ದು, ಬಿಜೆಪಿಯವರಿಗೆ ಯಾವ ನೈತಿಕತೆ ಇದೆ. ಅವರ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ಕೊಟ್ಟಿಲ್ಲ. ಮಹಿಳೆಯರಿಗೆ ಸ್ಥಾನ ಕೊಡಬೇಕೆಂದು ನಾನು ಹೇಳಿದ್ದೇನೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸ್ವಾತಂತ್ರ್ಯ ದಿನಾಚರಣೆ ವೇಳೆ ಅಸ್ವಸ್ಥಗೊಂಡ ಆಂಧ್ರ ಸಚಿವ – Kannada News | Tirupati: Swatantrya Dinacharane Bhashanada Vele Sachiva Anam Ramanarayana Reddyge

ತಿರುಪತಿ, ಆ.15: ಆಂಧ್ರಪ್ರದೇಶದ ಸಚಿವ ಆನಂ ರಾಮನಾರಾಯಣ ರೆಡ್ಡಿ ಅವರು 80ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಭಾಷಣ ಮಾಡುವಾಗ ದಿಢೀರ್ ಅಸ್ವಸ್ಥಗೊಂಡ ಘಟನೆ ತಿರುಪತಿಯ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದಿದೆ. ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ಸತತ ಒಂದು ಗಂಟೆಯಿಂದ ನಿಂತುಕೊಂಡೇ ಭಾಷಣ ಮಾಡುತ್ತಿದ್ದ ಸಚಿವರಿಗೆ ರಕ್ತದೊತ್ತಡ (BP) ದಿಢೀರ್ ಕುಸಿದಿದ್ದರೆ. ಭಾಷಣ ಮುಂದುವರಿಸಲಾಗದೆ ಸಚಿವರು ಅಸ್ವಸ್ಥತೆಯನ್ನು ಅನುಭವಿಸಿದ ತಕ್ಷಣವೇ ವೇದಿಕೆಯಲ್ಲಿದ್ದ ಅಧಿಕಾರಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಅವರ ನೆರವಿಗೆ ಧಾವಿಸಿದರು. ಸಚಿವರಿಗೆ ತಕ್ಷಣವೇ ಪ್ರಥಮ ಚಿಕಿತ್ಸೆ ಒದಗಿಸಲಾಗಿದ್ದು, ಸದ್ಯ ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TTD News: ತಿರುಮಲ ಶ್ರೀವಾರಿ ಭಕ್ತರೇ ಎಚ್ಚರ; 259 ನಕಲಿ ವೆಬ್‌ಸೈಟ್‌ಗಳು ಬಂದ್, ಸೈಬರ್ ಕ್ರೈಮ್ ತನಿಖೆ ಚುರುಕು! – Kannada News | TTD Warns Devotees of Tirumala Srivari Darshan Cyber Fraud: Book Only via Official Channels

ತಿರುಮಲ ಶ್ರೀವಾರಿ ದರ್ಶನImage Credit source: Getty Images

ತಿರುಮಲ ಶ್ರೀವಾರಿ ದರ್ಶನ, ಆರ್ಜಿತ ಸೇವೆಗಳು ಮತ್ತು ವಸತಿ ಬುಕಿಂಗ್ ಹೆಸರಿನಲ್ಲಿ ಸೈಬರ್ ವಂಚನೆಗಳು ಹೆಚ್ಚುತ್ತಿದ್ದು, ಭಕ್ತರು ಜಾಗರೂಕರಾಗಿರಬೇಕೆಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮನವಿ ಮಾಡಿದೆ. ನಕಲಿ ವೆಬ್‌ಸೈಟ್‌ಗಳು, ವಾಟ್ಸಾಪ್ ಗ್ರೂಪ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಭಕ್ತರನ್ನು ವಂಚಿಸಿ ಹಣ ಸಂಗ್ರಹಿಸುತ್ತಿರುವ ಕುರಿತು ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಟಿಟಿಡಿ ಈ ಎಚ್ಚರಿಕೆಯನ್ನು ನೀಡಿದೆ.

ಟಿಟಿಡಿ ಹೆಸರಿನಲ್ಲಿ ನಡೆಯುತ್ತಿರುವ ನಕಲಿ ಬುಕಿಂಗ್ ವಂಚನೆ:

ಕೆಲವು ವಂಚಕರು ಟಿಟಿಡಿಯ ಅಧಿಕೃತ ಹೆಸರು, ಲೋಗೋ, ಚಿತ್ರಗಳು ಹಾಗೂ ಟ್ರೇಡ್‌ಮಾರ್ಕ್‌ಗಳನ್ನು ಅಕ್ರಮವಾಗಿ ಬಳಸಿ ನಕಲಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ನಡೆಸುತ್ತಿದ್ದಾರೆ. ಶ್ರೀವಾರಿಯ ಶೀಘ್ರ ದರ್ಶನ, ಸೇವೆಗಳು ಮತ್ತು ವಸತಿ ಕೊಠಡಿಗಳನ್ನು ಕಾಯ್ದಿರಿಸಿಕೊಡುವುದಾಗಿ ನಂಬಿಸಿ ಭಕ್ತರಿಂದ ಬೃಹತ್ ಮೊತ್ತದ ಹಣ ವಸೂಲಿ ಮಾಡಲಾಗುತ್ತಿದೆ. ವಿಶೇಷವಾಗಿ ವಾಟ್ಸಾಪ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಅಪರಿಚಿತ ಬುಕಿಂಗ್ ಆಫರ್‌ಗಳು ಹಾಗೂ ಲಿಂಕ್‌ಗಳನ್ನು ನಂಬಿ ಹಣ ರವಾನಿಸಬಾರದು ಎಂದು ಟಿಟಿಡಿ ಸ್ಪಷ್ಟಪಡಿಸಿದೆ.

ವಂಚಕರ ವಿರುದ್ಧ ಸೂಕ್ತ ಕ್ರಮ: 259 ನಕಲಿ ವೆಬ್‌ಸೈಟ್‌ಗಳು ಬಂದ್:

ನಕಲಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೇಲೆ ಟಿಟಿಡಿ ಐಟಿ ವಿಭಾಗ, ವಿಜಿಲೆನ್ಸ್ ಹಾಗೂ ಸೈಬರ್ ಕ್ರೈಮ್ ಪೊಲೀಸ್ ಇಲಾಖೆಗಳು ಜಂಟಿಯಾಗಿ ಕಟ್ಟುನಿಟ್ಟಿನ ಕಣ್ಗಾವಲು ಇರಿಸಿವೆ. ಸೈಬರ್ ಅಪರಾಧಿಗಳನ್ನು ಗುರುತಿಸಿ ಅವರ ವಿರುದ್ಧ ಕಾನೂನು ತನಿಖೆ ನಡೆಸಲಾಗುತ್ತಿದ್ದು, ಕಳೆದ ಎರಡು ವರ್ಷಗಳಲ್ಲಿ ಭಕ್ತರನ್ನು ವಂಚಿಸುತ್ತಿದ್ದ 259 ನಕಲಿ ವೆಬ್‌ಸೈಟ್‌ಗಳನ್ನು ಗುರುತಿಸಿ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಈ ಅಕ್ರಮಗಳಲ್ಲಿ ಭಾಗಿಯಾಗಿದ್ದ ಹಲವು ವ್ಯಕ್ತಿಗಳ ವಿರುದ್ಧ ಈಗಾಗಲೇ ಪೊಲೀಸ್ ಪ್ರಕರಣಗಳನ್ನು ದಾಖಲಿಸಲಾಗಿದೆ.

ಇದನ್ನೂ ಓದಿ: ತಿರುಮಲ ಶ್ರೀವಾರಿ ಪವಿತ್ರೋತ್ಸವ: ಆಗಸ್ಟ್ 23ರಿಂದ 25ರವರೆಗೆ ವಿಶೇಷ ಪೂಜೆ; ಹಲವು ಸೇವೆಗಳು ರದ್ದು

ಅಧಿಕೃತ ಚಾನೆಲ್‌ಗಳ ಮೂಲಕ ಮಾತ್ರ ಬುಕಿಂಗ್ ಮಾಡಿ:

ಶ್ರೀವಾರಿ ದರ್ಶನ, ವಸತಿ ಅಥವಾ ಸೇವೆಗಳನ್ನು ಕೇವಲ ಟಿಟಿಡಿಯ ಅಧಿಕೃತ ವೆಬ್‌ಸೈಟ್ ಅಥವಾ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕವೇ ಬುಕ್ ಮಾಡಬೇಕು ಎಂದು ಟಿಟಿಡಿ ತಿಳಿಸಿದೆ. ಯಾವುದೇ ಪಾವತಿ ಮಾಡುವ ಮುನ್ನ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮ ಖಾತೆಯ ಅಧಿಕೃತತೆಯನ್ನು ಭಕ್ತರು ಕಡ್ಡಾಯವಾಗಿ ಪರಿಶೀಲಿಸಬೇಕು. ಟಿಟಿಡಿಯ ಬೌದ್ಧಿಕ ಆಸ್ತಿ, ಹೆಸರು ಮತ್ತು ಲೋಗೋಗಳನ್ನು ದುರುಪಯೋಗಪಡಿಸಿಕೊಳ್ಳುವ ಸಂಸ್ಥೆಗಳು ಹಾಗೂ ವ್ಯಕ್ತಿಗಳ ವಿರುದ್ಧ ಹಕ್ಕುಸ್ವಾಮ್ಯ (Copyright), ಟ್ರೇಡ್‌ಮಾರ್ಕ್ ಹಾಗೂ ಸೈಬರ್ ಕಾನೂನುಗಳ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 2:21 pm, Sat, 15 August 26

Source link

ಪಹಲ್ಗಾಮ್ ದಾಳಿ ಬಳಿಕ ಪ್ರಧಾನಿ ಮೋದಿ ಕೇಳಿದ ಮೊದಲ ಪ್ರಶ್ನೆಯನ್ನು ಬಹಿರಂಗಪಡಿಸಿದ ಅಜಿತ್ ದೋವಲ್ – Kannada News | ‘want it immediately’; NSA Ajit Doval reveals PM Modi’s first question after Pahalgam terror attack

ನವದೆಹಲಿ, ಆಗಸ್ಟ್ 15: 2025ರ ಪಹಲ್ಗಾಮ್ ದಾಳಿಯ (Pahalgam Attack) ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ 26 ನಾಗರಿಕರ ಸಾವಿಗೆ ಕಾರಣವಾದ ಈ ದಾಳಿಯ ಹಿಂದೆ ಯಾರಿದ್ದಾರೆ ಎಂಬುದನ್ನು ಕೂಡಲೇ ತಿಳಿದುಕೊಳ್ಳಿ ಎಂದು ಹೇಳಿದ್ದಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಈ ದಾಳಿಗೆ ತಕ್ಷಣದ ಪ್ರತಿಕ್ರಿಯೆಯನ್ನು ಪ್ರಧಾನಿ ಕೋರಿದ್ದರು ಎಂದು ಅವರು ಬಹಿರಂಗಪಡಿಸಿದ್ದಾರೆ. ಡಿಸ್ಕವರಿ ವಾಹಿನಿಯ “ಡಿಕ್ಲಾಸಿಫೈಡ್: ಆಪರೇಷನ್ ಸಿಂಧೂರ್” (Declassified: Operation Sindoor) ಸಾಕ್ಷ್ಯಚಿತ್ರ ಸರಣಿಯ ಸಂದರ್ಶನದಲ್ಲಿ ಮಾತನಾಡಿದ ಅಜಿತ್ ದೋವಲ್, ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಕಾರಣವಾದ ಘಟನೆಗಳನ್ನು ಸ್ಮರಿಸಿಕೊಂಡಿದ್ದಾರೆ.

ಮಾಜಿ ಗುಪ್ತಚರ ಅಧಿಕಾರಿಯೂ ಆಗಿರುವ ಅಜಿತ್ ದೋವಲ್, 88 ಗಂಟೆಗಳ ಕಾಲ ನಡೆದ ಈ ಮಿಲಿಟರಿ ಕಾರ್ಯಾಚರಣೆಯು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ (PoK) ಶತ್ರುಗಳ ಶಿಬಿರಗಳನ್ನು, ಅದರಲ್ಲೂ ವಿಶೇಷವಾಗಿ ಪಹಲ್ಗಾಮ್ ಉಗ್ರರ ದಾಳಿಯ ಜೊತೆ ನಂಟಿರುವ ತಾಣಗಳನ್ನು ಧ್ವಂಸಗೊಳಿಸುವ ಗುರಿಯನ್ನು ಹೊಂದಿತ್ತು ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಏಪ್ರಿಲ್ 22ರಂದು 26 ಜನರ ಪ್ರಾಣವನ್ನು ಬಲಿ ಪಡೆದ ದಶಕಗಳಲ್ಲೇ ಅತ್ಯಂತ ಭೀಕರವಾದ ಪಹಲ್ಗಾಮ್ ದಾಳಿಗೆ ತಿರುಗೇಟು ನೀಡಲು ಭಾರತೀಯ ಸಶಸ್ತ್ರ ಪಡೆಗಳು ಮೇ ತಿಂಗಳಲ್ಲಿ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯನ್ನು ನಡೆಸಿದ್ದವು.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಕುಳಿತು ಪಹಲ್ಗಾಮ್​ನಲ್ಲಿ ಲಷ್ಕರ್ ಉಗ್ರರು ಭಯೋತ್ಪಾದಕ ದಾಳಿ ನಡೆಸಿದ್ಹೇಗೆ? ಎನ್​ಐಎ ಚಾರ್ಜ್​ಶೀಟ್​​ನಲ್ಲೇನಿದೆ?

‘ಆಪರೇಷನ್ ಸಿಂಧೂರ್’ ನಡೆದು ಒಂದು ವರ್ಷಕ್ಕೂ ಹೆಚ್ಚು ಅವಧಿಯ ನಂತರ ನೀಡಿದ ತಮ್ಮ ಮೊದಲ ಸಂದರ್ಶನದಲ್ಲಿ ಅಜಿತ್ ದೋವಲ್, ಸೌದಿ ಅರೇಬಿಯಾ ಪ್ರವಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿ ಹಿಂತಿರುಗಿದ್ದ ಪ್ರಧಾನಿ ಮೋದಿಯನ್ನು ತಾವು ಭೇಟಿಯಾದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.

ಸೌದಿ ಪ್ರವಾಸದಲ್ಲಿದ್ದ ಮೋದಿ:

“ಪ್ರಧಾನಮಂತ್ರಿಯವರು ಸೌದಿಯ ಪ್ರವಾಸವನ್ನು ಅರ್ಧಕ್ಕೇ ಬಿಟ್ಟು ಹಿಂತಿರುಗಿದರು. ನಂತರ, ವಿಮಾನ ನಿಲ್ದಾಣದಲ್ಲೇ ಪ್ರಧಾನಿ ಮೋದಿ ಮತ್ತು ವಿದೇಶಾಂಗ ಕಾರ್ಯದರ್ಶಿ ಹಾಗೂ ನಾನು ಸಭೆ ನಡೆಸಿದೆವು. ಮೊದಲಿಗೆ, ಅವರು ಎಲ್ಲ ಸತ್ಯಾಸತ್ಯತೆಗಳನ್ನು ತಿಳಿಯಲು ಬಯಸಿದ್ದರು. ಈ ದಾಳಿಯ ಹಿಂದೆ ಯಾರಿದ್ದಾರೆ ಎಂಬುದನ್ನು ಪ್ರಧಾನಿ ಮೋದಿ ತಿಳಿಯಲು ಬಯಸಿದ್ದರು. ಆ ಬಗ್ಗೆ ತಕ್ಷಣವೇ ವಿವರಗಳನ್ನು ಕೋರಿದ್ದರು” ಎಂದು ಎನ್‌ಎಸ್‌ಎ ಅಜಿತ್ ದೋವಲ್ ಹೇಳಿದ್ದಾರೆ.

“ಆಗ ಅವರು ನನಗೆ ಕೇಳಿದ ಮೊದಲ ಪ್ರಶ್ನೆ ‘ಇದನ್ನು ಯಾರು ಮಾಡಿದ್ದಾರೆ? ಯಾರು ಇದಕ್ಕೆ ಹೊಣೆಗಾರರು? ದಾಳಿಕೋರರು ಯಾರು ಎಂಬುದರ ಬಗ್ಗೆ ನಾವು ಅತ್ಯಂತ ಸ್ಪಷ್ಟವಾಗಿರಬೇಕು. ನನಗೆ ಆ ವಿವರ ತಕ್ಷಣವೇ ಬೇಕು’ ಎಂದಾಗಿತ್ತು” ಎಂದು ಅಜಿತ್ ದೋವಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತದ ಸಹಿಷ್ಣುತೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ; ‘ಆಪರೇಷನ್ ಸಿಂಧೂರ್’ ಕುರಿತು ಅಜಿತ್ ದೋವಲ್ ಸಂದೇಶ

‘ಆಪರೇಷನ್ ಸಿಂಧೂರ್’ ಮಿಷನ್ ಕೇವಲ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಶಿಬಿರಗಳನ್ನು ಧ್ವಂಸಗೊಳಿಸುವುದರ ಮೇಲಷ್ಟೇ ಗಮನ ಹರಿಸಬೇಕು ಎಂದು ಭಾರತ ನಿರ್ಧರಿಸಿತ್ತು . “ಭಯೋತ್ಪಾದನೆಗೆ ನೀಡುವ ಬೆಂಬಲ ಅಥವಾ ಉಗ್ರರ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಸಾಧ್ಯವಾಗದಿರುವುದನ್ನು ನಾವು ಸಹಿಸಲು ಸಾಧ್ಯವಿಲ್ಲ ಎಂಬುದನ್ನು ಪಾಕಿಸ್ತಾನ ಸೇನೆ ಅರ್ಥಮಾಡಿಕೊಳ್ಳುವಂತೆ ಮಾಡುವುದು ಭಾರತದ ಉದ್ದೇಶವಾಗಿತ್ತು” ಎಂದು ಅವರು ತಿಳಿಸಿದರು.

‘ಆಪರೇಷನ್ ಸಿಂಧೂರ್’ ನಂತರ ಪಾಕಿಸ್ತಾನವು ಭಾರತದ ವಿರುದ್ಧ ದಾಳಿಗಳನ್ನು ನಡೆಸಿತು, ಇದಕ್ಕೆ ಪ್ರತಿಯಾಗಿ ಭಾರತವೂ ತೀವ್ರವಾಗಿ ತಿರುಗೇಟು ನೀಡಿತು. ಉಭಯ ದೇಶಗಳ ನಡುವೆ ಸಾವು-ನೋವುಗಳಿಗೆ ಕಾರಣವಾದ ಈ ಮೂರು ದಿನಗಳ ಗಡಿಯ ಸಂಘರ್ಷವು, ಎರಡೂ ನೆರೆಹೊರೆಯ ರಾಷ್ಟ್ರಗಳು ಕಟ್ಟುನಿಟ್ಟಿನ ಕದನ ವಿರಾಮ ಒಪ್ಪಂದಕ್ಕೆ ಬಂದ ನಂತರ ಅಂತ್ಯಗೊಂಡಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫೈಬರ್ ಅಂಶ ಕಡಿಮೆ ಸೇವನೆ ಮಾಡುತ್ತಿದ್ದೀರಾ? ಮಲಬದ್ಧತೆಯಿಂದ ತೂಕ ಹೆಚ್ಚಳದವರೆಗೆ ಆಗಬಹುದು ಈ ಸಮಸ್ಯೆಗಳು – Kannada News | Fiber for Better Digestion: How It Helps Constipation, Weight and Heart Health

ಆರೋಗ್ಯಕರ ಆಹಾರ ಎಂದರೆ ಕೇವಲ ಪ್ರೋಟೀನ್, ವಿಟಮಿನ್ ಮತ್ತು ಖನಿಜಾಂಶಗಳಿರುವ ಆಹಾರ ಸೇವಿಸುವುದು ಮಾತ್ರವಲ್ಲ. ಡಯಟ್‌ನಲ್ಲಿ ಸಾಕಷ್ಟು ಫೈಬರ್ ಇರುವುದೂ ಅಷ್ಟೇ ಮುಖ್ಯ. ಇಂದಿನ ಬದಲಾಗಿರುವ ಜೀವನಶೈಲಿ ಹಾಗೂ ಸಂಸ್ಕರಿತ ಆಹಾರಗಳ ಹೆಚ್ಚಿದ ಸೇವನೆಯಿಂದ ಹಲವರ ಆಹಾರದಲ್ಲಿ ಫೈಬರ್ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ಮಲಬದ್ಧತೆ, ಹೊಟ್ಟೆ ಉಬ್ಬರ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಫೈಬರ್ ಸಸ್ಯ ಮೂಲದ ಕಾರ್ಬೋಹೈಡ್ರೇಟ್ ಆಗಿದ್ದು, ದೇಹ ಇದನ್ನು ಸಂಪೂರ್ಣವಾಗಿ ಜೀರ್ಣಿಸಿಕೊಳ್ಳುವುದಿಲ್ಲ. ಆದರೆ ಜೀರ್ಣಾಂಗ ವ್ಯವಸ್ಥೆಯ ಸರಿಯಾದ ಕಾರ್ಯನಿರ್ವಹಣೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.

ದಿನಕ್ಕೆ ಎಷ್ಟು ಫೈಬರ್ ಬೇಕು?

Mayo Clinic ಪ್ರಕಾರ, 50 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೆ ದಿನಕ್ಕೆ ಸುಮಾರು 25 ಗ್ರಾಂ ಮತ್ತು ಪುರುಷರಿಗೆ 38 ಗ್ರಾಂ ಫೈಬರ್ ಅಗತ್ಯವಿರಬಹುದು. 50 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಿಗೆ ಸುಮಾರು 21 ಗ್ರಾಂ ಹಾಗೂ ಪುರುಷರಿಗೆ 30 ಗ್ರಾಂ ಫೈಬರ್ ಅಗತ್ಯವಿರಬಹುದು. ಆದರೆ ಪ್ರತಿಯೊಬ್ಬರ ಪೌಷ್ಟಿಕಾಂಶದ ಅಗತ್ಯ ಒಂದೇ ಆಗಿರುವುದಿಲ್ಲ. ವಯಸ್ಸು, ಆರೋಗ್ಯ ಸ್ಥಿತಿ ಮತ್ತು ಆಹಾರ ಪದ್ಧತಿಯ ಆಧಾರದ ಮೇಲೆ ಅಗತ್ಯ ಬದಲಾಗಬಹುದು.

ಫೈಬರ್ ಸೇವಿಸುವುದರಿಂದ ಏನೆಲ್ಲಾ ಪ್ರಯೋಜನ?

ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡಲು ಸಹಕಾರಿ: ಫೈಬರ್ ಮಲದ ಪ್ರಮಾಣ ಮತ್ತು ಮೃದುತ್ವವನ್ನು ಹೆಚ್ಚಿಸಲು ಸಹಾಯ ಮಾಡುವುದರಿಂದ ಮಲ ಸುಲಭವಾಗಿ ಹೊರಹೋಗಲು ನೆರವಾಗಬಹುದು. ಹೀಗಾಗಿ ಸಾಕಷ್ಟು ಫೈಬರ್ ಸೇವಿಸುವುದು ಮಲಬದ್ಧತೆಯನ್ನು ನಿಯಂತ್ರಿಸಲು ಸಹಾಯಕವಾಗಬಹುದು.

ತೂಕ ನಿರ್ವಹಣೆಗೆ ಸಹಕಾರಿ: ಫೈಬರ್ ಇರುವ ಆಹಾರ ಹೊಟ್ಟೆ ತುಂಬಿದ ಅನುಭವವನ್ನು ನೀಡುವುದರಿಂದ ಇದರಿಂದ ಪದೇಪದೇ ತಿನ್ನುವ ಬಯಕೆ ಕಡಿಮೆಯಾಗಲು ಮತ್ತು ಒಟ್ಟಾರೆ ಕ್ಯಾಲೊರಿ ಸೇವನೆಯನ್ನು ನಿಯಂತ್ರಿಸಲು ಸಹಾಯವಾಗಬಹುದು.

ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ನೆರವಾಗುತ್ತದೆ: ಕೆಲವು ವಿಧದ ಕರಗುವ ಫೈಬರ್ ನೀರಿನೊಂದಿಗೆ ಜೆಲ್‌ನಂತಹ ರಚನೆಯನ್ನು ರೂಪಿಸುತ್ತದೆ. ಇದರಿಂದ ಜೀರ್ಣಕ್ರಿಯೆ ನಿಧಾನವಾಗಬಹುದು ಮತ್ತು ಊಟದ ನಂತರ ರಕ್ತದಲ್ಲಿನ ಸಕ್ಕರೆ ಏರಿಕೆಯ ವೇಗ ಕಡಿಮೆಯಾಗಲು ಸಹಾಯವಾಗಬಹುದು.

ಹೃದಯದ ಆರೋಗ್ಯಕ್ಕೂ ಪ್ರಯೋಜನಕಾರಿ: ಕರಗುವ ಫೈಬರ್ ಕೆಲವು ಸಂದರ್ಭಗಳಲ್ಲಿ LDL ಅಥವಾ ‘ಕೆಟ್ಟ’ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಹೀಗಾಗಿ ಸಮತೋಲಿತ ಆಹಾರದ ಭಾಗವಾಗಿ ಫೈಬರ್ ಸೇವಿಸುವುದು ಹೃದಯದ ಆರೋಗ್ಯಕ್ಕೂ ಪ್ರಯೋಜನಕಾರಿ.

ಫೈಬರ್ ಯಾವ ಆಹಾರಗಳಲ್ಲಿ ಸಿಗುತ್ತದೆ?

ಮುಖ್ಯವಾಗಿ ಹಣ್ಣುಗಳು, ತರಕಾರಿಗಳು, ಬೇಳೆಕಾಳುಗಳು, ಬೀನ್ಸ್, ಬಟಾಣಿ, ಸಂಪೂರ್ಣ ಧಾನ್ಯಗಳು, ನಟ್ಸ್ ಮತ್ತು ಸೀಡ್ಸ್ಗಳಲ್ಲಿ ಕಂಡುಬರುತ್ತದೆ. ಸೇಬು, ಪೇರಳೆ, ರಾಸ್ಪ್‌ಬೆರಿ, ದಾಲ್, ಬೀನ್ಸ್, ಓಟ್ಸ್ ಹಾಗೂ ಇತರ ಸಂಪೂರ್ಣ ಧಾನ್ಯಗಳನ್ನು ಆಹಾರದಲ್ಲಿ ಸೇರಿಸಬಹುದು. ಸಾಧ್ಯವಾದಲ್ಲಿ ಹಣ್ಣುಗಳನ್ನು ಸಿಪ್ಪೆಯೊಂದಿಗೆ ಸೇವಿಸುವುದರಿಂದಲೂ ಹೆಚ್ಚಿನ ಫೈಬರ್ ಪಡೆಯಬಹುದು.

ಫೈಬರ್ ಹೆಚ್ಚಿಸುವಾಗ ಈ ತಪ್ಪು ಮಾಡಬೇಡಿ

ಡಯಟ್‌ನಲ್ಲಿ ಫೈಬರ್ ಪ್ರಮಾಣವನ್ನು ಏಕಾಏಕಿ ಹೆಚ್ಚಿಸಿದರೆ ಕೆಲವರಿಗೆ ಗ್ಯಾಸ್, ಹೊಟ್ಟೆ ಉಬ್ಬರ ಅಥವಾ ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು. ಆದ್ದರಿಂದ ಫೈಬರ್ ಇರುವ ಆಹಾರವನ್ನು ನಿಧಾನವಾಗಿ ಹೆಚ್ಚಿಸುವುದು ಉತ್ತಮ. ಫೈಬರ್ ಸೇವನೆ ಹೆಚ್ಚಿಸುವ ಜೊತೆಗೆ ಸಾಕಷ್ಟು ನೀರು ಕುಡಿಯುವುದು ಕೂಡ ಬಹಳ ಮುಖ್ಯ. ನೀರಿನ ಕೊರತೆಯಿದ್ದರೆ ಫೈಬರ್ ಸರಿಯಾಗಿ ಕೆಲಸ ಮಾಡಲು ತೊಂದರೆಯಾಗಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version