ಫೇಕ್ ನ್ಯೂಸ್, ದ್ವೇಷ ಹರಡುವ ಕಂಟೆಂಟ್ ತಡೆಗೆ ಬರಲಿದೆ ಎಐ ಸಾಫ್ಟ್‌ವೇರ್: 67 ಕೋಟಿ ರೂ. ಯೋಜನೆಗೆ ಸಚಿವ ಸಂಪುಟ ಗ್ರೀನ್ ಸಿಗ್ನಲ್ – Kannada News | Karnataka Cabinet Approves Rs 67 Cr AI Software to Track Fake News and Hate Content on Social Media
ಬೆಂಗಳೂರು, ಫೆಬ್ರವರಿ 6: ನಕಲಿ ಸುದ್ದಿ ಮತ್ತು ಸಮಾಜ ವಿರೋಧಿ ಅಂಶಗಳುಳ್ಳ ಡಿಜಿಟಲ್ ಕಂಟೆಂಟ್ಗಳನ್ನು ತಡೆಗಟ್ಟಲು ಕೃತಕ ಬುದ್ಧಿಮತ್ತೆ (AI) ಆಧಾರಿತ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿ ಬಳಕೆ ಮಾಡುವ ಬಗ್ಗೆ ಕರ್ನಾಟಕ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ. ಸುಮಾರು 67.26 ಕೋಟಿ ರೂ. ವೆಚ್ಚದಲ್ಲಿ ‘ಸೋಶಿಯಲ್ ಮೀಡಿಯಾ ಅನಾಲಿಟಿಕ್ಸ್ ಸೊಲ್ಯೂಷನ್ಸ್ (Social media analytics solutions)’ ಎಂಬ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿ ಯೋಜನೆ ಜಾರಿಗೊಳಿಸುವ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ…