ಗಂಡನನ್ನು ಕೋರ್ಟ್ ಕಟಕಟೆಯಲ್ಲಿ ನಿಲ್ಲಿಸಿದ ಪತ್ನಿ: ಜಡ್ಜ್ ಎದುರೇ ವಿಷಸೇವಿಸಿದ ಪತಿ; ಏನಿದು ಪ್ರಕರಣ? – Kannada News | Bagalkote: Man Attempts Suicide in Banahatti Court During Divorce Hearing
ಬಾಗಲಕೋಟೆ, ಫೆಬ್ರವರಿ 05: ದಂಪತಿ ವಿಚ್ಛೇದನ ವಿಚಾರಣೆ ವೇಳೆ ಜಡ್ಜ್ ಎದುರೇ ಗಂಡ ವಿಷಸೇವಿಸಿ ಆತ್ಮಹತ್ಯೆಗೆ (Suicide Attempt) ಯತ್ನಿಸಿದ ಘಟನೆ ಜಿಲ್ಲೆಯ ಬನಹಟ್ಟಿ ಕೋರ್ಟ್ನಲ್ಲಿ (Banahatti Court) ನಡೆದಿದೆ. ಜಗದಾಳ ಗ್ರಾಮದ ನಿವಾಸಿ ಯಾಕೂಬ್ ದೊಡ್ಡಮನಿ(35) ಆತ್ಮಹತ್ಯೆಗೆ ಯತ್ನಿಸಿದ ಪತಿ. ಸದ್ಯ ಯಾಕೂಬ್ ದೊಡ್ಡಮನಿಯನ್ನು ಜಮಖಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಡೆದಿದ್ದೇನು? ದಂಪತಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಹೀಗಾಗಿ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು….