Video: ಗುಜರಾತ್‌ನಲ್ಲಿ ಕೇವಲ 16 ಗಂಟೆಗಳಲ್ಲಿ 1100 ಮಿ.ಮೀ ಮಳೆ, ಗೊಂಬೆಗಳಂತೆ ನೀರಿನಲ್ಲಿ ತೇಲಿದ ಕಾರುಗಳು – Kannada News | Gujarat Deluge: 1,100 mm Rain in 16 Hours Leaves Valsad Under Water
ವಲ್ಸಾದ್, ಜುಲೈ 24: ದಕ್ಷಿಣ ಗುಜರಾತ್‌ನಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಜಲಪ್ರಳಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ವಲ್ಸಾದ್ ಜಿಲ್ಲೆಯ ಉಂಬರ್‌ಗಮ್ ಪ್ರದೇಶದಲ್ಲಿ ಗುರುವಾರ ಬೆಳಗ್ಗೆಯವರೆಗೆ ಕೇವಲ 16 ಗಂಟೆಗಳಲ್ಲಿ ಭಾರಿ 1100 ಮಿ.ಮೀ ಮಳೆ(Rain) ಸುರಿದಿದ್ದು, ಇಡೀ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಮಳೆಯ ಭೀಕರತೆಗೆ ಸಂಬಂಧಿಸಿದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ಪಾರ್ಕಿಂಗ್‌ನಲ್ಲಿದ್ದ ಕಾರುಗಳು ಮುಳುಗಡೆ ವಲ್ಸಾದ್ ಜಿಲ್ಲೆಯ ವಾಪಿ ಪ್ರದೇಶದ ಬಹುಮಹಡಿ ಕಟ್ಟಡ ಒಂದರ ಪಾರ್ಕಿಂಗ್‌ನಲ್ಲಿ ನಿಲ್ಲಿಸಲಾಗಿದ್ದ ಕಾರುಗಳು ಸಂಪೂರ್ಣವಾಗಿ…