‘ಸ್ವಾರ್ಥ ಬಿಡಿ, ವಿಧ್ಯಾರ್ಥಿಗಳಿಗಾಗಿ ಮುಂದೆ ಬನ್ನಿ’: ಚಿತ್ರರಂಗದವರ ಬಗ್ಗೆ ಸಾಧುಕೋಕಿಲ ಬೇಸರ – Kannada News | Sadhu Kokila upset about sandalwood celebrities for being silent on social issues

ನೀಟ್ (NEET) ಪರೀಕ್ಷಾ ಅಕ್ರಮ ವಿರೋಧಿಸಿ ದೇಶದಾದ್ಯಂತ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಬಾಲಿವುಡ್ ಸಿನಿಮಾ ಸೆಲೆಬ್ರಿಟಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ನೆರೆಯ ತಮಿಳುನಾಡಿನಲ್ಲಿ ಸಹ ಹಲವು ನಿರ್ದೇಶಕರು, ನಟರು ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ಆದರೆ ಕನ್ನಡದ ಸೆಲೆಬ್ರಿಟಿಗಳು ಬಹುತೇಕರು ಮೌನಕ್ಕೆ ಶರಣಾಗಿದ್ದಾರೆ. ಈ ಬಗ್ಗೆ ನಟ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ಮಾತನಾಡಿ, ‘ಈ ಹಿಂದೆ ಬೆಂಗಳೂರಿನ ಕುಡಿಯುವ ನೀರಿಗೆ ಒತ್ತಾಯಿಸಿ ಮೇಕೆದಾಟು ಪ್ರತಿಭಟನೆ ಮಾಡಿದಾಗಲೂ ಸಹ ಚಿತ್ರರಂಗದವರು ಬಂದಿರಲಿಲ್ಲ. ದಯವಿಟ್ಟು ಸ್ವಾರ್ಥ ಬಿಡಿ, ಮಾನವೀಯತೆ ಬೆಳೆಸಿಕೊಳ್ಳಿ, ದಯವಿಟ್ಟು ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ದನಿ ಎತ್ತಿ’ ಎಂದಿದ್ದಾರೆ. ಸಾಧು ಕೋಕಿಲ ಹೇಳಿದ್ದೇನು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

s3FLMuuzIFk

Source link

ಸಾರಿಗೆ ಸಚಿವರ ಕ್ಷೇತ್ರದಲ್ಲೇ ಶೌಚಾಲಯ, ಗೋದಾಮಾಗಿ ಮಾರ್ಪಟ್ಟಿರುವ ಬಸ್​​ ನಿಲ್ದಾಣ! – Kannada News | R.T. Nagar Bus Stop: From Public Utility to Neglected Godown and Drunkards Den

ಬೆಂಗಳೂರು, ಜುಲೈ 24: ಆರ್.ಟಿ. ನಗರದ ದೇವಗೌಡ ರಸ್ತೆಯಲ್ಲಿರುವ ಬಿಎಂಟಿಸಿ ಬಸ್ ನಿಲ್ದಾಣ ಪ್ರಯಾಣಿಕರಿಗೆ ಸೇವೆ ನೀಡುವ ಬದಲು ಸಮಸ್ಯೆಗಳ ಆಗರವಾಗಿ ಮಾರ್ಪಟ್ಟಿದೆ. ಬಸ್​​ ಸ್ಟ್ಯಾಂಡ್​​​ ಶೌಚಾಲಯ, ಗೋದಾಮಾಗಿ ಮಾರ್ಪಟ್ಟಿದ್ದು, ರಾತ್ರಿ ಕುಡುಕರ ಅಡ್ಡೆಯಾಗಿದೆ. ನಿರ್ವಹಣೆ ಇಲ್ಲದ ಕಾರಣ ನಿಲ್ದಾಣದ ಆಸನಗಳು, ಚಾವಣಿಗಳು ಸಂಪೂರ್ಣವಾಗಿ ಮುರಿದು ಬಿದ್ದಿವೆ. ಇದರಿಂದ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗಿದ್ದು, ದುರದೃಷ್ಟವಶಾತ್ ಈ ಬಸ್ ನಿಲ್ದಾಣ ಸಾರಿಗೆ ಸಚಿವರ ಕ್ಷೇತ್ರದಲ್ಲೇ ಇದ್ದರೂ ಇದರ ದುಸ್ಥಿತಿ ಅವರ ಗಮನಕ್ಕೆ ಬಂದಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕಾಕ್ರೋಚ್ ಹೋರಾಟಗಾರರಿಗೆ ಮುಲ್ಲಾಗಳು ಬಿರಿಯಾನಿ ತಿನ್ನಿಸ್ತಾವಸ್ರೆ, ಇದು ದೇಶವನ್ನು ಅಸ್ಥಿರಗೊಳಿಸುವ ಪಿತೂರಿ: ಪ್ರತಾಪ್ ಸಿಂಹ – Kannada News | Pratap Simha Alleges NEET Protest Conspiracy, Targets Congress and ‘Deep State’ in Mysuru

ಮೈಸೂರು, ಜುಲೈ 24: ನೀಟ್ ಪರೀಕ್ಷೆಗೆ ಸಂಬಂಧಿಸಿದ ಪ್ರತಿಭಟನೆಗಳು ಭಾರತವನ್ನು ಅಸ್ಥಿರಗೊಳಿಸುವ ವ್ಯವಸ್ಥಿತ ಪಿತೂರಿಯ ಭಾಗವಾಗಿವೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ರಾಜ್ಯ ಮತ್ತು ದೆಹಲಿಯ ಕಾಂಗ್ರೆಸ್‌ನೊಂದಿಗೆ ಸೇರಿಕೊಂಡು ಪ್ರತಿಭಟನೆಗಳನ್ನು ನಡೆಸುತ್ತಿದೆ ಎಂದರು. ಮೈಸೂರಿನಲ್ಲಿ ಮಾತನಾಡಿದ ಅವರು, ನೀಟ್ ಮರುಪರೀಕ್ಷೆ ನಡೆದು, ಫಲಿತಾಂಶ ಪ್ರಕಟಗೊಂಡು ಹಲವು ದಿನಗಳ ನಂತರ ಪ್ರತಿಭಟನೆಗಳು ಆರಂಭವಾಗಿವೆ. ಇದು ಪೂರ್ವಯೋಜಿತ ಹುನ್ನಾರ ಎಂದು ಅಭಿಪ್ರಾಯಪಟ್ಟರು. ಹಿಂದೆ ಸಿಎಎ ಮತ್ತು ಕೃಷಿ ಮಸೂದೆಗಳ ವಿರುದ್ಧ ನಡೆದ ಪ್ರತಿಭಟನೆಗಳಂತೆಯೇ ಇದು ಮೋದಿ ಸರ್ಕಾರವನ್ನು ಅಲ್ಲಾಡಿಸುವ ಪ್ರಯತ್ನವಾಗಿದೆ.

ಇಂತಹ ಪ್ರಯತ್ನಗಳಿಗೆ ಅಮೆರಿಕನ್ ಡೀಪ್ ಸ್ಟೇಟ್ ನಿಂದ ಧನಸಹಾಯ ದೊರೆಯುತ್ತಿದೆ ಎಂದು ಪ್ರತಾಪ್ ಸಿಂಹ ಆರೋಪಿಸಿದ್ದಾರೆ. ಬಾಂಗ್ಲಾದೇಶ, ಶ್ರೀಲಂಕಾ ಮತ್ತು ನೇಪಾಳದಲ್ಲಿ ಸರ್ಕಾರಗಳನ್ನು ಬದಲಾಯಿಸಲು ಇದೇ ರೀತಿಯ ತಂತ್ರಗಳನ್ನು ಬಳಸಲಾಗಿದೆ. ಈಗ ಭಾರತವನ್ನು ಗುರಿಯಾಗಿಸಿಕೊಂಡು ಮೋದಿ ಸರ್ಕಾರವನ್ನು ದುರ್ಬಲಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು. ದೇಶದ ಹಿತಾಸಕ್ತಿಯನ್ನು ಕಾಪಾಡುವ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸಲು ಇದು ನಡೆಯುತ್ತಿದೆ ಎಂದು ಸಿಂಹ ಪ್ರತಿಪಾದಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯುಪಿಐ ಬಳಕೆದಾರರ ಆ್ಯಪ್ ಆಯ್ಕೆಗಳ ಮೇಲೆ ಪ್ರಭಾವ ಬೀರುತ್ತಿವೆಯಾ ರಿವಾರ್ಡ್ಸ್, ಕ್ಯಾಷ್​​ಬ್ಯಾಕ್ ಆಫರ್​ಗಳು? – Kannada News | UPI platforms face challenge of retention, as 83pc users switching apps for rewards, says research report

ಬೆಂಗಳೂರು, ಜುಲೈ 24: ಪ್ರತೀ ನಿತ್ಯ ಹಲವು ಕೋಟಿ ಪಾವತಿ ವಹಿವಾಟುಗಳನ್ನು ನಿರ್ವಹಿಸುತ್ತಿರುವ ಭಾರತದ ಯುಪಿಐ ಸಿಸ್ಟಂನಲ್ಲಿ ಗ್ರಾಹಕರ ವರ್ತನೆ ವಿಚಾರವಾಗಿ ಗಮನಾರ್ಹ ಸಂಗತಿಯೊಂದು ವೇದ್ಯವಾಗಿದೆ. ‘ಎಂಪವರ್ ಇಂಡಿಯಾ’ ಸಂಸ್ಥೆ ಬಿಡುಗಡೆ ಮಾಡಿದ ವರದಿಯೊಂದರ ಪ್ರಕಾರ ಯುಪಿಐ ಆ್ಯಪ್​ಗಳು ನೀಡುವ ಕ್ಯಾಷ್​ಬ್ಯಾಕ್, ರಿವಾರ್ಡ್ಸ್ ಇತ್ಯಾದಿ ಆಫರ್​ಗಳಿಗೆ ಬಳಕೆದಾರರು ಒಲವು ತೋರಿಸುತ್ತಿದ್ದಾರೆನ್ನಲಾಗಿದೆ. ಶೇ. 89 ರಷ್ಟು ಯುಪಿಐ ಬಳಕೆದಾರರು ಪಾವತಿ ಆ್ಯಪ್‌ ಅನ್ನು ಆಯ್ಕೆ ಮಾಡುವಾಗ ರಿವಾರ್ಡ್‌ಗಳು ಮತ್ತು ಕ್ಯಾಶ್‌ಬ್ಯಾಕ್‌ಗಳನ್ನು ಪ್ರಮುಖವಾಗಿ ಪರಿಗಣಿಸುತ್ತಾರೆ. ಅಷ್ಟೇ ಅಲ್ಲದೆ, ಶೇಕಡಾ 83 ರಷ್ಟು ಬಳಕೆದಾರರು ಉತ್ತಮ ರಿವಾರ್ಡ್‌ಗಳಿಗಾಗಿ ತಮ್ಮ ಹಾಲಿ ಆ್ಯಪ್‌ ಅನ್ನು ಬದಲಾಯಿಸಲು ಸಿದ್ಧರಾಗಿದ್ದಾರೆ. ಶೇ 94 ರಷ್ಟು ಜನರು ಒಂದು ಯುಪಿಐ ಆ್ಯಪ್‌ನಿಂದ ಮತ್ತೊಂದು ಆ್ಯಪ್‌ಗೆ ಬದಲಾಗುವಾಗ ರಿವಾರ್ಡ್‌ಗಳಿಗೇ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಶೇ. 88 ರಷ್ಟು ಬಳಕೆದಾರರು ಉತ್ತಮ ಆಫರ್‌ಗಳನ್ನು ಹುಡುಕಲು ವಿವಿಧ ಯುಪಿಐ ಆ್ಯಪ್‌ಗಳನ್ನು ಸಕ್ರಿಯವಾಗಿ ಹೋಲಿಸುತ್ತಾರೆ.

ಈ ಎಲ್ಲಾ ಅಂಕಿ-ಅಂಶಗಳು, ರಿವಾರ್ಡ್‌ಗಳು ಇನ್ನು ಮುಂದೆ ಕೇವಲ ತಾತ್ಕಾಲಿಕ ಪ್ರಚಾರದ ಕೊಡುಗೆಗಳಾಗಿ ಉಳಿದಿಲ್ಲ; ಬದಲಿಗೆ ಅವು ಗ್ರಾಹಕರು ಪಾವತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪ್ರಭಾವ ಬೀರುವ ಅತ್ಯಂತ ಪ್ರಮುಖ ಅಂಶವಾಗಿವೆ ಎಂಬುದನ್ನು ಎತ್ತಿ ತೋರಿಸುತ್ತವೆ. ಎಂಪವರ್ ಇಂಡಿಯಾ ಸಂಸ್ಥೆ ಪ್ರಾಥಮಿಕ ಮತ್ತು ದ್ವಿತೀಯಕ ಹಂತದ ಸಂಶೋಧನೆಗಳ ಆಧಾರದ ಮೇಲೆ ಸಿದ್ಧಪಡಿಸಿದ ಈ ವರದಿಯಲ್ಲಿ ಈ ವಿಚಾರಗಳಿವೆ.

ಬೇರೆ ಆ್ಯಪ್‌ಗಳಿಗೆ ಬದಲಾಯಿಸಿಕೊಂಡ ಬಳಕೆದಾರರ ಪೈಕಿ, ಶೇ. 59 ರಷ್ಟು ಜನರು ತಾವು ಹಿಂದಿನ ಪ್ಲಾಟ್‌ಫಾರ್ಮ್ ಅನ್ನು ತೊರೆಯಲು ‘ಕಳಪೆ ರಿವಾರ್ಡ್‌ಗಳು ಮತ್ತು ಬೆನಿಫಿಟ್ಸ್​ಗಳು’ ಪ್ರಮುಖ ಕಾರಣ ಎಂದು ಉಲ್ಲೇಖಿಸಿದ್ದಾರೆ. ಇದಕ್ಕೆ ಹೋಲಿಸಿದರೆ, ಬಳಕೆಯ ಸುಲಭತೆ (64%), ವಿಶ್ವಾಸ ಮತ್ತು ಕಸ್ಟಮರ್ ಸಪೋರ್ಟ್ ಅಂಶ (61%) ಹಾಗೂ ಪಾವತಿಯ ಸುಲಭತೆಗಾಗಿ (28%) ಆ್ಯಪ್‌ ಅನ್ನು ಬದಲಾಯಿಸಿದವರ ಸಂಖ್ಯೆಗಿಂತ ಇದು ಗಮನಾರ್ಹವಾಗಿದೆ. ಈ ಅಂಕಿ-ಅಂಶಗಳು, ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್‌ಗಳಿಗೆ ರಿವಾರ್ಡ್‌ಗಳು ಕೇವಲ ಹೊಸ ಗ್ರಾಹಕರನ್ನು ಸೆಳೆಯುವ ಸಾಧನವಾಗಿ ಉಳಿದಿಲ್ಲ; ಬದಲಿಗೆ ಅವು ಗ್ರಾಹಕರನ್ನು ತಮ್ಮಲ್ಲೇ ದೀರ್ಘಕಾಲದವರೆಗೆ ಉಳಿಸಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಅಂಶವಾಗಿ ಮಾರ್ಪಟ್ಟಿವೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.

ಈ ಸಂಶೋಧನೆಗಳ ಕುರಿತು ಪ್ರತಿಕ್ರಿಯಿಸಿದ ಎಂಪವರ್ ಇಂಡಿಯಾದ ಮಹಾನಿರ್ದೇಶಕರಾದ ಕೆ. ಗಿರಿ ಅವರು “ವಿಶ್ವದಲ್ಲೇ ಅತ್ಯುತ್ತಮ ರಿಯಲ್ ಟೈಮ್ ಪೇಮೆಂಟ್ ಇನ್​ಫ್ರಾಸ್ಟ್ರಕ್ಚರ್​ಗಳಲ್ಲಿ ಒಂದನ್ನು ಭಾರತ ನಿರ್ಮಿಸಿದೆ. ಆದರೆ, ಯುಪಿಐ ಬೆಳವಣಿಗೆಯ ಮುಂದಿನ ಹಂತವು ಹೊಸ ಗ್ರಾಹಕರ ಸೇರ್ಪಡೆಯಿಂದಲ್ಲ, ಬದಲಿಗೆ ಗ್ರಾಹಕರ ನಿರಂತರ ಒಳಗೊಳ್ಳುವಿಕೆಯಿಂದ (Inclusivity) ನಿರ್ಧರಿಸಲ್ಪಡುತ್ತದೆ. ನಮ್ಮ ಸಂಶೋಧನೆಯು ಗ್ರಾಹಕರು ಪ್ರತಿ ವಹಿವಾಟಿನಿಂದಲೂ ನೇರವಾದ ಅಥವಾ ಕಣ್ಣಿಗೆ ಕಾಣುವ ಮೌಲ್ಯವನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಇದು ರಿವಾರ್ಡ್‌ಗಳನ್ನು ಕೇವಲ ಒಂದು ಮಾರ್ಕೆಟಿಂಗ್ ಕೊಡುಗೆಯಾಗಿ ಉಳಿಸದೆ, ಡಿಜಿಟಲ್ ಪಾವತಿ ಅನುಭವದ ಒಂದು ಅವಿಭಾಜ್ಯ ಅಂಗವನ್ನಾಗಿಸಿದೆ. ಮಾರುಕಟ್ಟೆಯಲ್ಲಿ ಪೈಪೋಟಿ ತೀವ್ರಗೊಳ್ಳುತ್ತಿರುವಂತೆ, ನಂಬಿಕಸ್ಥ ಪಾವತಿ ಅನುಭವದೊಂದಿಗೆ ಅರ್ಥಪೂರ್ಣವಾದ ದೈನಂದಿನ ಮೌಲ್ಯವನ್ನು ಒದಗಿಸುವ ಪ್ಲಾಟ್‌ಫಾರ್ಮ್‌ಗಳು ಮಾತ್ರ ಗ್ರಾಹಕರನ್ನು ತಮ್ಮಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿವೆ”ಎಂದು ಹೇಳಿದರು.

ಇದನ್ನೂ ಓದಿ: ಇಸ್ರೇಲ್​ಗೆ ಶೇ 12.5, ಭಾರತಕ್ಕೆ ಶೇ. 10 ಸುಂಕ; ಅಮೆರಿಕದ ಪರಮಮಿತ್ರ ದೇಶಕ್ಕೆ ಹೆಚ್ಚಿನ ಟ್ಯಾರಿಫ್ ಯಾಕೆ?

ಅಮೆಜಾನ್ ಪೇಗೆ ಅತ್ಯುನ್ನತ ರೇಟಿಂಗ್

ಪ್ರಮುಖ ಯುಪಿಐ ಪ್ಲಾಟ್‌ಫಾರ್ಮ್‌ಗಳು ನೀಡುವ ರಿವಾರ್ಡ್‌ಗಳ ಕುರಿತು ಗ್ರಾಹಕರು ಹೊಂದಿರುವ ತೃಪ್ತಿಯ ಮಟ್ಟವನ್ನು ಈ ಸಂಶೋಧನಾ ಫಲಿತಾಂಶಗಳು ತೋರ್ಪಡಿಸಿವೆ. ಕೆಲ ಪ್ರಮುಖ ಅಂಶಗಳು ಈ ಕೆಳಕಂಡಂತಿವೆ:

  • ಅಮೆಜಾನ್ ಪೇ ಅತ್ಯುನ್ನತ ರೇಟಿಂಗ್ ಪಡೆದ ಪ್ಲಾಟ್‌ಫಾರ್ಮ್ ಆಗಿ ಹೊರಹೊಮ್ಮಿದೆ; ಇದರ ಶೇಕಡಾ 74 ರಷ್ಟು ಬಳಕೆದಾರರು ತಾವು ಪಡೆಯುವ ರಿವಾರ್ಡ್‌ಗಳ ಬಗ್ಗೆ ‘ಬಹಳ ತೃಪ್ತಿ’ ಹೊಂದಿದ್ದೇವೆ ಎಂದು ಹೇಳಿದ್ದಾರೆ
  • ಫೋನ್‌ಪೇ ಮತ್ತು ಗೂಗಲ್ ಪೇ ಸಂಸ್ಥೆಗಳು ವಿಶ್ವಾಸಾರ್ಹತೆ ಹಾಗೂ ಭದ್ರತೆಗೆ ಸಂಬಂಧಿಸಿದಂತೆ ಉತ್ತಮವಾಗಿ ಕಾರ್ಯನಿರ್ವಹಿಸಿವೆ.
  • ಬಳಕೆಯ ಸುಲಭತೆಯ ವಿಷಯದಲ್ಲಿ ಪೇಟಿಎಂ ಉತ್ತಮ ಅಂಕಗಳನ್ನು ಪಡೆದುಕೊಂಡಿದೆ.
  • ಅಮೆಜಾನ್ ಪೇ ಬಳಕೆದಾರರ ಪೈಕಿ ಶೇ. 87 ರಷ್ಟು ಜನರು ತಾವು ಪಡೆಯುವ ರಿವಾರ್ಡ್‌ಗಳು ಮತ್ತು ಕ್ಯಾಶ್‌ಬ್ಯಾಕ್‌ಗಳ ಮೂಲಕ ಸಿಗುವ ದೈನಂದಿನ ಮೌಲ್ಯಕ್ಕಾಗಿ ಈ ಪ್ಲಾಟ್‌ಫಾರ್ಮ್ ಅನ್ನು ಆಯ್ದುಕೊಂಡಿದ್ದೇವೆ ಎಂದು ಹೇಳಿದ್ದಾರೆ;
  • ರಿವಾರ್ಡ್ಸ್, ಕ್ಯಾಷ್​ಬ್ಯಾಕ್​ಗಳಿಗಾಗಿ ಗೂಗಲ್ ಪೇ ಬಳಸುವ ಗ್ರಾಹಕರ ಪ್ರಮಾಣವು ಶೇ. 73 ರಷ್ಟಿದೆ.
  • ಅಮೆಜಾನ್ ಪೇ ಬಳಕೆದಾರರ ಪೈಕಿ ಶೇ. 50 ರಷ್ಟು ಜನರು ದೈನಂದಿನ ಪಾವತಿಗಳ ಮೇಲಿನ ಕ್ಯಾಶ್‌ಬ್ಯಾಕ್ ಅನ್ನು ಈ ಆ್ಯಪ್‌ ಬಳಸಲು ಪ್ರಮುಖ ಕಾರಣ ಎಂದು ಉಲ್ಲೇಖಿಸಿದ್ದಾರೆ; ಫೋನ್‌ಪೇ (38%) ಮತ್ತು ಗೂಗಲ್ ಪೇ (35%) ಬಳಕೆದಾರರಿಗೆ ಹೋಲಿಸಿದರೆ ಇದು ಗಮನಾರ್ಹವಾಗಿದೆ.
  • ರಿವಾರ್ಡ್‌ಗಳನ್ನು ರಿಡೀಮ್ ಮಾಡಿಕೊಳ್ಳುವ ಸುಲಭತೆಯ ವಿಷಯದಲ್ಲಿ ಗೂಗಲ್ ಪೇ ಶೇ. 70 ಬಳಕೆದಾರರಿಂದ ಸೈ ಎನಿಸಿಕೊಂಡಿದೆ. ಫೋನ್‌ಪೇ ಮತ್ತು ಅಮೆಜಾನ್ ಪೇ (68%) ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ.

ಪರಿಪಕ್ವತೆಯ ಹಂತಕ್ಕೆ ಬಂದಿರುವ ಯುಪಿಐ ಇಕೋಸಿಸ್ಟಂ

ಕೇವಲ ವಿವಿಧ ಪ್ಲಾಟ್‌ಫಾರ್ಮ್‌ಗಳ ಹೋಲಿಕೆಯನ್ನೂ ಮೀರಿ, ಭಾರತದ ಯುಪಿಐ ವ್ಯವಸ್ಥೆಯು ಈಗ ಪರಿಪಕ್ವತೆಯ ಒಂದು ಹೊಸ ಹಂತವನ್ನು ತಲುಪಿದೆ ಎಂದು ಈ ಸಂಶೋಧನಾ ಫಲಿತಾಂಶಗಳು ತೀರ್ಮಾನಿಸಿವೆ. ವಹಿವಾಟಿನ ವೇಗ, ವಿಶ್ವಾಸಾರ್ಹತೆ, ಭದ್ರತೆ ಮತ್ತು ವ್ಯಾಪಾರಿಗಳಿಂದ ಕ್ಯೂಆರ್ ಕೋಡ್ ಸ್ವೀಕೃತಿಯಂತಹ ಮೂಲಭೂತ ಸೌಲಭ್ಯಗಳು ಈಗ ಕಂಪನಿಗಳಿಗೆ ಸ್ಪರ್ಧಾತ್ಮಕ ಲಾಭಗಳನ್ನು ನೀಡುವ ವಿಶೇಷ ಮೂಲಗಳಾಗಿ ಉಳಿದಿಲ್ಲ; ಬದಲಿಗೆ ಅವು ಗ್ರಾಹಕರ ಕನಿಷ್ಠ ನಿರೀಕ್ಷೆಗಳಾಗಿ ಬದಲಾಗಿವೆ. ಆ್ಯಪ್‌ಗಳ ನಡುವಿನ ಇಂತಹ ತಾಂತ್ರಿಕ ವ್ಯತ್ಯಾಸಗಳು ಕಡಿಮೆಯಾಗುತ್ತಿರುವಂತೆ, ನಿರಂತರವಾದ, ಅರ್ಥಪೂರ್ಣವಾದ ಮತ್ತು ಬಳಸಲು ಸುಲಭವಾದ ರಿವಾರ್ಡ್‌ಗಳನ್ನು ಒದಗಿಸುವ ಮೂಲಕ ಗ್ರಾಹಕರಿಗೆ ನಿಖರವಾದ ದೈನಂದಿನ ಆರ್ಥಿಕ ಮೌಲ್ಯವನ್ನು ತಲುಪಿಸುವ ಪ್ಲಾಟ್‌ಫಾರ್ಮ್‌ಗಳ ಸಾಮರ್ಥ್ಯದ ಆಧಾರದ ಮೇಲೆಯೇ ಗ್ರಾಹಕರ ಒಲವು ಮತ್ತು ಆಯ್ಕೆಗಳು ನಿರ್ಧರಿತವಾಗುತ್ತಿವೆ.

ಇದನ್ನೂ ಓದಿ: ಏನಿದು ‘ಸೆಕ್ಷನ್ 301’? ಡೊನಾಲ್ಡ್ ಟ್ರಂಪ್ ಇದನ್ನು ಅಸ್ತ್ರವಾಗಿಸಿಕೊಂಡಿದ್ದೇಕೆ? ಒಂದೇ ತಕ್ಕಡಿಯಲ್ಲಿ ಭಾರತ, ಪಾಕಿಸ್ತಾನ

ಬಳಕೆದಾರರನ್ನು ಉಳಿಸಿಕೊಳ್ಳುವುದು ಈಗ ಸವಾಲಿನ ಕೆಲಸ

ಯುಪಿಐ ಬೆಳವಣಿಗೆಯ ಮುಂದಿನ ಹಂತವು ಹೊಸ ಗ್ರಾಹಕರ ಸೇರ್ಪಡೆಯಿಂದಲ್ಲ, ಬದಲಿಗೆ ಪ್ರಸ್ತುತ ಇರುವ ಗ್ರಾಹಕರನ್ನು ಉಳಿಸಿಕೊಳ್ಳುವ ಸಾಮರ್ಥ್ಯದಿಂದ ಮುನ್ನಡೆಯಲಿದೆ ಎಂದು ಈ ಸಂಶೋಧನೆಯು ಸೂಚಿಸುತ್ತದೆ. ಇದು ಒಂದು ಪರಿಪಕ್ವ ಹಾಗೂ ಒಳಗೊಳ್ಳುವಿಕೆಯ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ನಿರ್ಮಿಸಬೇಕೆಂಬ ಭಾರತೀಯ ರಿಸರ್ವ್ ಬ್ಯಾಂಕ್‌ನ ದೂರದೃಷ್ಟಿಯನ್ನು ಮತ್ತಷ್ಟು ಬಲಪಡಿಸುತ್ತದೆ. ಮಾರುಕಟ್ಟೆಯಲ್ಲಿ ಪೈಪೋಟಿ ತೀವ್ರಗೊಳ್ಳುತ್ತಿರುವಂತೆ, ಪ್ಲಾಟ್‌ಫಾರ್ಮ್‌ಗಳು ಕೇವಲ ಪಾವತಿಯ ತಾಂತ್ರಿಕ ಸೌಲಭ್ಯಗಳ ಆಧಾರದ ಮೇಲೆ ಮಾತ್ರವಲ್ಲದೆ, ಅರ್ಥಪೂರ್ಣವಾದ ರಿವಾರ್ಡ್‌ಗಳು ಮತ್ತು ಅತ್ಯುತ್ತಮ ಬಳಕೆದಾರ ಅನುಭವದ ಮೂಲಕ ಗ್ರಾಹಕರೊಂದಿಗೆ ಸಧೃಡ ಸಂಬಂಧವನ್ನು ನಿರ್ಮಿಸುವ ಮೂಲಕ ತಮ್ಮ ವಿಶಿಷ್ಟತೆಯನ್ನು ಪ್ರದರ್ಶಿಸಬೇಕಾಗುತ್ತದೆ. ಒಂದು ಆ್ಯಪ್‌ನಿಂದ ಮತ್ತೊಂದು ಆ್ಯಪ್‌ಗೆ ಬದಲಾಗಲು ಗ್ರಾಹಕರಿಗೆ ಯಾವುದೇ ಹೆಚ್ಚುವರಿ ವೆಚ್ಚ ಅಥವಾ ಶ್ರಮ ಇಲ್ಲದ ಇಂದಿನ ವ್ಯವಸ್ಥೆಯಲ್ಲಿ, ಕೇವಲ ವಹಿವಾಟನ್ನು ಮೀರಿ ನಿರಂತರವಾಗಿ ಹೆಚ್ಚುವರಿ ಆರ್ಥಿಕ ಪ್ರಯೋಜನ ಅಥವಾ ಮೌಲ್ಯವನ್ನು ಒದಗಿಸುವ ಪ್ಲಾಟ್‌ಫಾರ್ಮ್‌ಗಳು ಮಾತ್ರ ಗ್ರಾಹಕರ ದೀರ್ಘಕಾಲದ ನಿಷ್ಠೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Gold Rate: ಸತತ ಏರಿಕೆ ಬಳಿಕ ಶುಕ್ರವಾರ ಭರ್ಜರಿ ಕುಸಿತ ಕಂಡ ಚಿನ್ನದ ಬೆಲೆ – Kannada News | Gold Price Today on 24th July 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜುಲೈ 24: ಕಳೆದ ಕೆಲ ದಿನಗಳಿಂದ ನಿರಂತರವಾಗಿ ಏರುತ್ತಾ ಬಂದಿದ್ದ ಚಿನ್ನದ ಬೆಲೆ (Gold Price) ಇವತ್ತು ಶುಕ್ರವಾರ ಒಮ್ಮೆಲೇ ಕುಸಿದಿದೆ. ಇಂದು ಇದರ ದರ ಗ್ರಾಮ್​ಗೆ 270 ರೂನಷ್ಟು ಇಳಿದಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆ ಭರ್ಜರಿ ಇಳಿಕೆ ಕಂಡಿದೆ. ಬೆಳ್ಳಿ ಬೆಲೆಯೂ ಇವತ್ತು ಐದು ರೂನಷ್ಟು ಕಡಿಮೆಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,32,300 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,44,330 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,32,300 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜುಲೈ 24ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,433 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,230 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,825 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,433 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,230 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,230 ರೂ
  • ಚೆನ್ನೈ: 13,230 ರೂ
  • ಮುಂಬೈ: 13,230 ರೂ
  • ದೆಹಲಿ: 13,245 ರೂ
  • ಕೋಲ್ಕತಾ: 13,230 ರೂ
  • ಕೇರಳ: 13,230 ರೂ
  • ಅಹ್ಮದಾಬಾದ್: 13,235 ರೂ
  • ಜೈಪುರ್: 13,245 ರೂ
  • ಲಕ್ನೋ: 13,245 ರೂ
  • ಭುವನೇಶ್ವರ್: 13,230 ರೂ

ಇದನ್ನೂ ಓದಿ: ಮುಂಗಾರು ಕಾಲದಲ್ಲಿ ಎಸಿಯಿಂದ ಮೈ ಜಿಗುಟು ಅನಿಸುತ್ತಾ? ವಿದ್ಯುತ್ ಉಳಿಸಲು, ಕೂಲಿಂಗ್ ಪಡೆಯಲು ಡ್ರೈ ಮೋಡ್ ಟ್ರಿಕ್ಸ್ ಬಳಸಿ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 556 ರಿಂಗಿಟ್ (13,110 ರುಪಾಯಿ)
  • ದುಬೈ: 487.50 ಡಿರಾಮ್ (12,814 ರುಪಾಯಿ)
  • ಅಮೆರಿಕ: 133.50 ಡಾಲರ್ (12,887 ರುಪಾಯಿ)
  • ಸಿಂಗಾಪುರ: 179.90 ಸಿಂಗಾಪುರ್ ಡಾಲರ್ (13,441 ರುಪಾಯಿ)
  • ಕತಾರ್: 490.50 ಕತಾರಿ ರಿಯಾಲ್ (12,988 ರೂ)
  • ಸೌದಿ ಅರೇಬಿಯಾ: 503 ಸೌದಿ ರಿಯಾಲ್ (12,935 ರುಪಾಯಿ)
  • ಓಮನ್: 51.80 ಒಮಾನಿ ರಿಯಾಲ್ (12,986 ರುಪಾಯಿ)
  • ಕುವೇತ್: 40.90 ಕುವೇತಿ ದಿನಾರ್ (12,827 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 235 ರೂ
  • ಚೆನ್ನೈ: 240 ರೂ
  • ಮುಂಬೈ: 235 ರೂ
  • ದೆಹಲಿ: 235 ರೂ
  • ಕೋಲ್ಕತಾ: 235 ರೂ
  • ಕೇರಳ: 240 ರೂ
  • ಅಹ್ಮದಾಬಾದ್: 235 ರೂ
  • ಜೈಪುರ್: 235 ರೂ
  • ಲಕ್ನೋ: 235 ರೂ
  • ಭುವನೇಶ್ವರ್: 240 ರೂ
  • ಪುಣೆ: 235

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 11:06 am, Fri, 24 July 26

Source link

ಹೊಸ ರೀತಿಯಲ್ಲಿ ರಾವಣನ ಪಾತ್ರ ತೋರಿಸಲು ಹೊರಟ ಯಶ್ – Kannada News | Yash Speaks at San Diego Comic Con Praises Ranbir Kapoor Lord Rama and Explains His Ravana Preparation

ಮಹತ್ವಾಕಾಂಕ್ಷೆಯ ‘ರಾಮಾಯಣ’ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಬಗ್ಗೆ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕಾಮಿಕ್ ಕಾನ್‌ ಈವೆಂಟ್ ಅಲ್ಲಿ ಯಶ್ ಮಾತನಾಡಿದ್ದಾರೆ. ಈ ವೇಳೆ ಹಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ರಾಮನಾಗಿ ನಟಿಸುತ್ತಿರುವ ರಣಬೀರ್ ಕಪೂರ್ ಅವರನ್ನು ಯಶ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ರಾವಣನ ಪಾತ್ರದ ಬಗ್ಗೆಯೂ ವಿವರಿಸಿದ್ದಾರೆ.

ರಣಬೀರ್ ನಟನೆಗೆ ಯಶ್ ಮೆಚ್ಚುಗೆ

‘ಈ ಜಗತ್ತಿನಲ್ಲಿ ಯಾರೂ ಕೂಡ ತಮಗೆ ಶ್ರೀರಾಮನ ಪಾತ್ರ ಮಾಡಲು ಎಲ್ಲಾ ಅರ್ಹತೆಗಳಿವೆ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ರಣಬೀರ್ ಕೂಡ ಇದೇ ಮಾತನ್ನು ಹೇಳಿದ್ದಾರೆ. ಅವರು ಅದ್ಭುತ ನಟ. ಶ್ರೀರಾಮನ ಪಾತ್ರ ಮಾಡುವುದು ಸುಲಭವಲ್ಲ. ಈ ಪಾತ್ರಕ್ಕಾಗಿ ರಣಬೀರ್ ಪಟ್ಟಿರುವ ಶ್ರಮಕ್ಕೆ ನನ್ನ ಗೌರವವಿದೆ’ ಎಂದು ಯಶ್ ತಿಳಿಸಿದ್ದಾರೆ.

ರಾವಣನ ಪಾತ್ರದ ಬಗ್ಗೆ ಯಶ್ ಮಾತು

ರಾವಣನ ಪಾತ್ರದ ಸಿದ್ಧತೆಯ ಬಗ್ಗೆ ಯಶ್ ವಿಶೇಷವಾಗಿ ಮಾತನಾಡಿದ್ದಾರೆ. ‘ರಾವಣನ ಪಾತ್ರ ಜಗತ್ತಿನಲ್ಲಿ ತುಂಬಾ ಪ್ರಸಿದ್ಧಿಯಾಗಿದೆ. ಸಾವಿರಾರು ವರ್ಷಗಳ ನಂತರವೂ ಇಂದಿಗೂ ಪ್ರತಿ ವರ್ಷ ಆತನ ಪ್ರತಿಕೃತಿಯನ್ನು ದಹಿಸಲಾಗುತ್ತದೆ ಎಂದರೆ ನೀವೇ ಊಹಿಸಿಕೊಳ್ಳಿ. ನನ್ನ ತಾತ ಬಾಲ್ಯದಲ್ಲಿ ಈ ಕಥೆಗಳನ್ನು ಹೇಳುತ್ತಿದ್ದರು ಜಗತ್ತಿನ ಶ್ರೇಷ್ಠ ವಿಲನ್‌ಗಳು ತಾವು ಮಾಡುತ್ತಿರುವುದು ಸರಿ ಎಂದು ಬಲವಾಗಿ ನಂಬಿರುತ್ತಾರೆ. ಅವರು ತುಂಬಾ ಬುದ್ಧಿವಂತರು ಮತ್ತು ಪ್ರತಿಭಾವಂತರಾಗಿರುತ್ತಾರೆ. ಇದೇ ಅಂಶ ರಾವಣನ ಪಾತ್ರವನ್ನು ಹೆಚ್ಚು ಆಕರ್ಷಕವಾಗಿಸಿದೆ’ ಎಂದು ಯಶ್ ಹೊಗಳಿದರು.

‘ರಾವಣನನ್ನು ಕೇವಲ ಒಂದು ಕಾಲ್ಪನಿಕ ಪಾತ್ರದಂತೆ ತೋರಿಸಲು ನನಗೆ ಇಷ್ಟವಿರಲಿಲ್ಲ. ಆ ಪರಿಸ್ಥಿತಿಯಲ್ಲಿ ನಾನಿದ್ದರೂ ಹೀಗೆಯೇ ಮಾಡುತ್ತಿದ್ದೆ ಎಂದು ಪ್ರೇಕ್ಷಕರಿಗೆ ಅನಿಸಬೇಕು. ಆ ರೀತಿಯಲ್ಲಿ ಪಾತ್ರವನ್ನು ಕನೆಕ್ಟ್ ಮಾಡುವುದು ದೊಡ್ಡ ಸವಾಲಾಗಿತ್ತು’ ಎಂದಿದ್ದಾರೆ ಯಶ್.

‘ನಾವೆಲ್ಲರೂ ನಮ್ಮದೇ ಕಥೆಯಲ್ಲಿ ಹೀರೋಗಳಾಗಿರುತ್ತೇವೆ. ಮೂರು ಲೋಕಗಳನ್ನು ಆಳಿದ ವ್ಯಕ್ತಿಗೆ ಎಂತಹ ಅಹಂಕಾರ ಇರಬೇಡ. ಆತನ ಮಾನಸಿಕ ಸ್ಥಿತಿಯನ್ನು ಅರಿತು ನಟಿಸುವುದು ತುಂಬಾ ಆಸಕ್ತಿದಾಯಕವಾಗಿತ್ತು. ಈ ಪಾತ್ರಕ್ಕಾಗಿ ನನ್ನ ಸ್ವಂತ ಸಿದ್ದಾಂತಗಳನ್ನು ಬದಿಗಿಟ್ಟು ರಾವಣನ ಜಾಗದಲ್ಲಿ ನಿಂತು ಯೋಚಿಸಬೇಕಾಯಿತು’ ಎಂದು ಯಶ್ ಹೇಳಿದ್ದಾರೆ.

ದೀಪಾವಳಿಗೆ ‘ರಾಮಾಯಣ’ ಧಮಾಕಾ

ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರವನ್ನು ವಾಲ್ಮೀಕಿ ರಾಮಾಯಣದ ಆಧಾರದ ಮೇಲೆ ಎರಡು ಭಾಗಗಳಾಗಿ ತೆರೆಗೆ ತರಲಾಗುತ್ತಿದೆ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ ನಟಿಸುತ್ತಿದ್ದಾರೆ. ಹನುಮಂತನಾಗಿ ಸನ್ನಿ ಡಿಯೋಲ್ ಮತ್ತು ದಶರಥನಾಗಿ ಅರುಣ್ ಗೋವಿಲ್ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ಚಿತ್ರಕ್ಕೆ ಎದುರಾಗಿದೆ ದೊಡ್ಡ ಸವಾಲು; ವಿವರಿಸಿದ ಯಶ್

ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ. ಬರೋಬ್ಬರಿ 4,000 ಕೋಟಿ ರೂಪಾಯಿ ಬಜೆಟ್‌ನಲ್ಲಿ ಐಮ್ಯಾಕ್ಸ್ ತಂತ್ರಜ್ಞಾನದಲ್ಲಿ ಸಿನಿಮಾ ಮೂಡಿಬರುತ್ತಿದೆ. ಆಸ್ಕರ್ ವಿಜೇತರಾದ ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಮೊದಲ ಬಾರಿಗೆ ಜೊತೆಯಾಗಿ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಚಿತ್ರದ ಮೊದಲ ಭಾಗ 2026ರ ದೀಪಾವಳಿ ಹಬ್ಬಕ್ಕೆ ಜಾಗತಿಕವಾಗಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಮರಿ ಹಕ್ಕಿಗಳಿಗೆ ಕೈ ತುತ್ತು ನೀಡಿ ಹಸಿವು ನೀಗಿಸಿದ ಮಹಿಳೆ – Kannada News | A woman who fed baby birds with her own hands.

ತಾಯಿಯ (mother) ಹೃದಯವೇ ಹಾಗೆ, ತನ್ನ ಮಕ್ಕಳು ಹಸಿವು ಎಂದಾಗ ತನ್ನ ಕರುಳು ಚುರ್ ಎನ್ನುತ್ತೆ. ಹೌದು,  ತನ್ನ ಕಂದಮ್ಮಗಳ ಹಸಿವು ಮಾತ್ರ ಮನೆಯಲ್ಲಿರುವ ಮೂಕ ಪ್ರಾಣಿಗಳ ಹಸಿವನ್ನು ಅರ್ಥ ಮಾಡಿಕೊಳ್ಳುವ ತಾಕತ್ತು ಹೆಂಗರುಳಿಗಿದೆ. ಇದೀಗ ಮಹಿಳೆಯೊಬ್ಬಳು ಮಾಡಿದ ಕೆಲಸ ನೆಟ್ಟಿಗರ ಮೆಚ್ಚುಗೆ ವ್ಯಕ್ತವಾಗಿದೆ. ಹಸಿವಿನಿಂದ ಒದ್ದಾಡುತ್ತಿದ್ದ ಮರಿಹಕ್ಕಿಗಳಿಗೆ ಕೈ ತುತ್ತು ನೀಡಿದ ಮಹಿಳೆಯ ವಿಡಿಯೋ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಇಂಡಿಯನ್ ವಿಬ್ರಾನ್ಸ್ (indian vibrance) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಮಹಿಳೆಯೊಬ್ಬಳು ಮರದ ಮೇಲೆ ಕುಳಿತಿರುವ ಹಕ್ಕಿ ಮರಿಗಳಿಗೆ ಹಸಿವು ನೀಗಿಸಿದ್ದಾಳೆ. ಮರಿ ಹಕ್ಕಿಗಳು ಬಾಯಿ ತೆರೆಯುತ್ತಿದ್ದಂತೆ ಮಹಿಳೆ ಕೈ ತುತ್ತು ನೀಡಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮೊಮ್ಮಗನನ್ನು ಮಡಿಲಿನಲ್ಲಿ ಹೊತ್ತುಕೊಂಡು ಮದುವೆ ಶೂಟ್‌ ಮಾಡಿದ ಫೋಟೋಗ್ರಾಫರ್

ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತಾಯಿ ಅಂದ್ರೆ ಪ್ರಪಂಚ ಎಂದಿದ್ದಾರೆ. ಇನ್ನೊಬ್ಬರು, ಶುದ್ಧ ತಾಯ್ತತನ ಸುಂದರವಾದ ರೀಲ್ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅತ್ಯದ್ಭುತ ತಾಯಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕರಾವಳಿ’ ಸಿನಿಮಾ ವಿವಾದಕ್ಕೆ ಹಣ ಕಾರಣವಾ? ಪ್ರಜ್ವಲ್ ಹೇಳಿದ್ದೇನು? – Kannada News | Prajwal Devaraj explains Karavali movie controversy

ಕರಾವಳಿ’ (Karavali) ಸಿನಿಮಾ ಇಂದು (ಜುಲೈ 24) ರಾಜ್ಯದಾದ್ಯಂತ ಬಿಡುಗಡೆ ಆಗಿದೆ. ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ, ಸಂಪದಾ ಇನ್ನಿತರರು ನಟಿಸಿರುವ ಈ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಸಿನಿಮಾ ಬಿಡುಗಡೆಗೆ ಮುಂಚೆಯೇ ವಿವಾದದ ಕಾರಣಕ್ಕಾಗಿ ಈ ಸಿನಿಮಾ ಸುದ್ದಿಯಾಗಿತ್ತು. ಸಿನಿಮಾದ ನಾಯಕ ಪ್ರಜ್ವಲ್ ದೇವರಾಜ್ ಅವರಿಂದಿ ನಿರ್ದೇಶಕ ಗುರುದತ್ ಗಾಣಿಗಾ ಡಬ್ಬಿಂಗ್ ಮಾಡಿಸಿರಲಿಲ್ಲ. ಇದಕ್ಕೆ ಸಂಭಾವನೆ ಸಮಸ್ಯೆ ಕಾರಣ ಎನ್ನಲಾಗಿತ್ತು. ಇದೀಗ ಪ್ರಜ್ವಲ್ ದೇವರಾಜ್ ಅವರು ವಿವಾದದ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.

ವಿವಾದಕ್ಕೆ ಸಂಭಾವನೆ ಕಾರಣವಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ಪ್ರಜ್ವಲ್ ದೇವರಾಜ್, ‘ವಿವಾದಕ್ಕೆ ಸಂಭಾವನೆ ಸಹಿತ ಬೇರೆ ಹಲವು ವಿಷಯಗಳು ಕಾರಣ’ ಎಂದಿದ್ದಾರೆ. ನನಗೆ ಸಂಭಾವನೆ ಅಥವಾ ಹಣವೇ ಮುಖ್ಯ ಆಗಿದ್ದಿದ್ದರೆ ನಾನು ಒಂದೂವರೆ ಕೋಟಿ ಹಣವನ್ನು ಒಂದು ವರ್ಷ ಅವರ ಬಳಿ ಬಿಡುತ್ತಿರಲಿಲ್ಲ, ಕಳೆದ ವರ್ಷವೇ ಅದನ್ನು ಪಡೆದುಕೊಂಡು ಬಿಡುತ್ತಿದ್ದೆ. ಚಿತ್ರರಂಗದಲ್ಲಿರುವ ಎಲ್ಲರೂ ಫ್ಯಾಷನ್​​ಗಾಗಿ ಈ ರಂಗವನ್ನು ಆಯ್ಕೆ ಮಾಡಿಕೊಂಡಿದ್ದೇವೆ, ಆದರೆ ಹಣವೂ ಸಹ ಅಷ್ಟೇ ಮುಖ್ಯ’ ಎಂದು ಪ್ರಜ್ವಲ್ ಹೇಳಿದ್ದಾರೆ.

‘ನಮ್ಮಿಬ್ಬರ (ನಿರ್ದೇಶಕ ಗುರುದತ್ ಗಾಣಿಗಾ) ಸಂಬಂಧ, ಕೆಲ ತಿಂಗಳ ಹಿಂದೆಯೇ ಹದಗೆಟ್ಟಿತ್ತು. ಇಂಥಹರದ್ದೇ ತಪ್ಪು ಎಂದು ನಾನು ಹೇಳಲಾರೆ. ಆದರೆ ಇಬ್ಬರ ನಡುವೆ ಮಾತುಕತೆ ಇಲ್ಲದಂತಾಗಿತ್ತು. ನಾನು ನನ್ನ ಮ್ಯಾನೇಜರ್ ಅನ್ನು ಅವರೊಟ್ಟಿಗೆ ವ್ಯವಹರಿಸಲು ಬಿಟ್ಟಿದ್ದೆ. ನನ್ನ ಹಣ ಕೊಟ್ಟರೆ ನಾನು ಡಬ್ಬಿಂಗ್ ಮುಗಿಸುತ್ತೇನೆ ಎಂದಿದ್ದೆ. ಆದರೆ ನಾನು ಟ್ರೈಲರ್​​ಗೆ ಡಬ್ಬಿಂಗ್ ಮಾಡಲು ರೆಡಿ ಇದ್ದೆ. ಟ್ರೈಲರ್ ಡಬ್ಬಿಂಗ್ ಮುಗಿಸಿ ಆ ಮೇಲೆ ಉಳಿದಿದ್ದು ನೋಡೋಣ ಎಂದರೆ ನಾನು ಒಪ್ಪಿಕೊಳ್ಳುತ್ತಿದ್ದೆ. ನಾನೂ ಸಹ ಟ್ರೈಲರ್​​ಗಾಗಿ ಕಾತರದಿಂದ ಕಾಯುತ್ತಿದ್ದೆ’ ಎಂದಿದ್ದಾರೆ ಪ್ರಜ್ವಲ್.

ಇದನ್ನೂ ಓದಿ:‘ಕರಾವಳಿ’ ಸಿನಿಮಾದಲ್ಲಿ ಪಶುವೈದ್ಯೆಯ ಪಾತ್ರ ಮಾಡಿದ ಸಂಪದಾ

‘ನಾನು ಸಿನಿಮಾಗಳಿಗೆ ಒಪ್ಪಂದ ಮಾಡಿಕೊಳ್ಳುವುದು ಕಡಿಮೆ. ನೀವು ಕೊಟ್ಟಿರುವ ಮಾತು ನೀವು ಉಳಿಸಿಕೊಳ್ಳಿ, ನಾನು ಕೊಟ್ಟಿರುವ ಮಾತು ನಾನು ಉಳಿಸಿಕೊಳ್ಳುತ್ತೀನಿ ಎಂಬುದಷ್ಟೆ ಆಗಿತ್ತು. ಆದರೆ ಈ ಸಿನಿಮಾದ ಬಳಿಕ ಅನಿಸುತ್ತಿದೆ ಒಪ್ಪಂದ ಬಹಳ ಮುಖ್ಯ ಅಂತ. ನನಗೆ ಚಿತ್ರರಂಗದ ಹಲವರು ಕರೆ ಮಾಡಿ ಮಾತನಾಡಿದರು. ರಿಷಬ್ ಶೆಟ್ಟಿ, ಧ್ರುವ ಸರ್ಜಾ, ರಮ್ಯಾ, ರಕ್ಷಿತಾ, ನೆನಪಿರಲಿ ಪ್ರೇಮ್, ರಾಕ್​ಲೈನ್ ವೆಂಕಟೇಶ್ ಇನ್ನೂ ಹಲವರು ಕರೆ ಮಾಡಿ ವಿಚಾರಿಸಿದರು. ಈಗಲೂ ನ್ಯಾಯ, ನಿಯಮ ನನ್ನ ಪರವಾಗಿದೆ, ಆದರೆ ನಾನು ಸಿನಿಮಾಕ್ಕೆ ಸಮಸ್ಯೆ ಕೊಡಬೇಕು ಎಂದುಕೊಳ್ಳುವ ವ್ಯಕ್ತಿಯಲ್ಲ. ಸಿನಿಮಾ ಚೆನ್ನಾಗಿ ಆಗಲಿ ಎಂಬುದಷ್ಟೆ ನನ್ನ ಹಾರೈಕೆ’ ಎಂದಿದ್ದಾರೆ ಪ್ರಜ್ವಲ್ ದೇವರಾಜ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಿಯರ್ ಬಾಟಲಿಗಳನ್ನು ಒಯ್ಯಲು ಮುಗಿಬಿದ್ದ ಸ್ಥಳೀಯರು: ಚಾಲಕನ ಜೀವಕ್ಕಿಂತ ಬಾಟಲಿಯೇ ಮುಖ್ಯವಾಯಿತೇ? – Kannada News | Tyre Burst Causes Massive Beer Truck Accident Near Hassan, Leading to Significant Loss

ಹಾಸನ, ಜು.24: ಜಿಲ್ಲೆಯ ಹೊರ ವಲಯದ ದೊಡ್ಡಪುರ ಗ್ರಾಮದ ಬಳಿ, ತಡರಾತ್ರಿ 1 ಗಂಟೆ ಸುಮಾರಿಗೆ ಭೀಕರ ಅಪಘಾತವೊಂದು ಸಂಭವಿಸಿದೆ. ಹಾಸನದ ವುಡ್ ಪಿಕರ್ ಡಿಸ್ಟಿಲರೀಸ್‌ನಿಂದ ಕೊಪ್ಪಳಕ್ಕೆ ಸುಮಾರು 1100 ಕೇಸ್ ಬಿಯರ್ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ಭಾರಿ ನಷ್ಟಕ್ಕೀಡಾಗಿದೆ. ಈ ಘಟನೆ ದೊಡ್ಡಪುರ ಗ್ರಾಮದಿಂದ ಮುಂದೆ ಚೀರನಹಳ್ಳಿ ಹಳ್ಳ ಎಂಬ ಗ್ರಾಮದ ಬಳಿ ನಡೆದಿದೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಲಾರಿಯ ಹಿಂಬದಿಯ ಟಯರ್ ಬ್ಲಾಸ್ಟ್ ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿದೆ. ಅಷ್ಟೇ ಅಲ್ಲದೆ, ಅಂದು ಮಳೆಯೂ ಬರುತ್ತಿದ್ದರಿಂದ ಚಾಲಕನಿಗೆ ರಸ್ತೆ ಸರಿಯಾಗಿ ಕಾಣದಿರುವುದು ಕೂಡ ನಿಯಂತ್ರಣ ತಪ್ಪಲು ಕಾರಣವಾಗಿರಬಹುದು ಎಂದು ಊಹಿಸಲಾಗಿದೆ. ಟಯರ್ ಬ್ಲಾಸ್ಟ್ ಆದ ನಂತರ ವಾಹನವು ರಸ್ತೆಯಲ್ಲಿದ್ದ ಡಿವೈಡರ್‌ಗೆ ಅಪ್ಪಳಿಸಿ, ಒಂದು ಪಥದಿಂದ ಮತ್ತೊಂದು ಪಥಕ್ಕೆ ಮಗುಚಿ ಬಿದ್ದಿದೆ. ಇದರ ಪರಿಣಾಮವಾಗಿ, ಲಾರಿಯಲ್ಲಿದ್ದ ಮೂರು ಪ್ರಮುಖ ಬ್ರ್ಯಾಂಡ್‌ಗಳಾದ ಪವರ್ ಕೂಲ್, ಸನ್ನಿ ಬೀಚಸ್, ಮತ್ತು ಲೆಜೆಂಡ್ ಸೇರಿದಂತೆ ಲಕ್ಷಾಂತರ ಮೌಲ್ಯದ ಬಿಯರ್ ಬಾಟಲಿಗಳು ರಸ್ತೆ ಪಾಲಾಗಿವೆ. ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕ ಹಲವು ವರ್ಷಗಳಿಂದ ಈ ಕ್ಷೇತ್ರದಲ್ಲಿ ಅನುಭವ ಹೊಂದಿದ್ದು, ಈ ದುರ್ಘಟನೆಯಲ್ಲಿ ಪ್ರಾಣ ಉಳಿದಿರುವುದು ಸಂತಸ ತಂದಿದೆ ಎಂದು ಲಾರಿ ಮಾಲೀಕರು ಹೇಳಿದ್ದಾರೆ. ಅಪಘಾತದ ನಂತರ ಸ್ಥಳಕ್ಕೆ ಧಾವಿಸಿದ ಕೆಲವು ಸ್ಥಳೀಯ ಗ್ರಾಮಸ್ಥರು ರಸ್ತೆ ಪಾಲಾದ ಬಿಯರ್ ಬಾಟಲಿಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಲಾರಿ ಕಂಪನಿಯ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಆಗಮಿಸಿ ತೆರವು ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

ಅಂದಾಜು 17 ರಿಂದ 20 ಲಕ್ಷ ರೂಪಾಯಿ ಮೌಲ್ಯದ ಬಿಯರ್ ಈ ಅಪಘಾತದಲ್ಲಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅಪಘಾತದಲ್ಲಿ ಹಾಳಾದ ಬಾಟಲಿಗಳನ್ನು ಮರುಪ್ಯಾಕ್ ಮಾಡುವ ಕಾರ್ಯ ಭರದಿಂದ ಸಾಗುತ್ತಿದೆ. ಇದು ಪೂರ್ಣಗೊಂಡ ನಂತರವೇ ನಿಖರ ನಷ್ಟದ ಅಂದಾಜು ಸಿಗಲಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ರಾತ್ರಿಯಿಡೀ ಸುರಿದ ಮಳೆಯ ನಡುವೆಯೂ ತೆರವು ಕಾರ್ಯಾಚರಣೆ ಮುಂದುವರೆದಿದ್ದು, ರಸ್ತೆಯನ್ನು ತೆರವುಗೊಳಿಸಲು ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಲಾರಿ ಪಲ್ಟಿಯಾದ ಪರಿಣಾಮವಾಗಿ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯಾಗಿದ್ದು, ಆದಷ್ಟು ಬೇಗ ರಸ್ತೆ ಕ್ಲಿಯರ್ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಈ ಅಪಘಾತಕ್ಕೆ ಸಂಬಂಧಿಸಿದಂತೆ ಮಾಲೀಕರು ಟಿವಿ9 ಜತೆಗೆ ಮಾತನಾಡಿದ್ದಾರೆ.”ಒಂದು ಜೀವಕ್ಕೆ ಬೆಲೆ ಕೊಡಬೇಕು. ಗಾಡಿಯನ್ನು ಬೇಕಾದರೆ ನಾಳೆ ಇನ್ನೊಂದು ಶೋ ರೂಂನಿಂದ ಬಿಡಿಸಬಹುದು, ಆದರೆ ಜೀವ ಮುಖ್ಯ” ಎಂದು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕ್ಯಾಲಿಫೋರ್ನಿಯಾದಲ್ಲಿ ಯಶ್ ನೋಡಿ ‘ಡ್ಯಾಡಿಸ್ ಹೋಂ’ ಎಂದ ಫ್ಯಾನ್ಸ್ – Kannada News | Rocking Star Yash Rules San Diego Comic Con; Fans Go Crazy Over His Presence and Toxic Dialogue

ಕನ್ನಡ ಚಿತ್ರರಂಗದ ಹೆಮ್ಮೆಯ ನಟ, ರಾಕಿಂಗ್ ಸ್ಟಾರ್ ಯಶ್ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಅಂತರರಾಷ್ಟ್ರೀಯ ಪ್ರಚಾರಕ್ಕಾಗಿ ಅಮೆರಿಕಕ್ಕೆ ತೆರಳಿರುವ ಯಶ್, ಕ್ಯಾಲಿಫೋರ್ನಿಯಾದಲ್ಲಿ ನಡೆಯುತ್ತಿರುವ ವಿಶ್ವಪ್ರಸಿದ್ಧ ‘ಸ್ಯಾನ್ ಡಿಯಾಗೋ ಕಾಮಿಕ್ ಕಾನ್’ (San Diego Comic-Con) ಈವೆಂಟ್‌ನಲ್ಲಿ ಭಾಗಿಯಾಗಿದ್ದಾರೆ. ಈ ವೇದಿಕೆಯಲ್ಲಿ ಯಶ್ ಅವರು ಕಾಣಿಸಿಕೊಳ್ಳುತ್ತಿದ್ದಂತೆ ಅಲ್ಲಿದ್ದ ನೂರಾರು ಭಾರತೀಯ ಮತ್ತು ಜಾಗತಿಕ ಅಭಿಮಾನಿಗಳಲ್ಲಿ ಭಾರಿ ಹರ್ಷೋದ್ಗಾರ ಮುಗಿಲು ಮುಟ್ಟಿದೆ.

ವೇದಿಕೆಯ ಮುಂಭಾಗದಲ್ಲಿ ನೆರೆದಿದ್ದ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಹತ್ತಿರದಿಂದ ಕಂಡು ಸಂಭ್ರಮಿಸಿದ್ದಲ್ಲದೆ, ಅವರೊಂದಿಗೆ ಸೆಲ್ಫಿ ಪಡೆದುಕೊಳ್ಳಲು ಮುಗಿಬಿದ್ದ ದೃಶ್ಯಗಳು ವೀಡಿಯೊದಲ್ಲಿ ಸೆರೆಯಾಗಿವೆ. ಅಲ್ಲಿದ್ದವರೆಲ್ಲರೂ ತಮ್ಮ ಮೊಬೈಲ್ ಕ್ಯಾಮೆರಾಗಳನ್ನು ಆನ್ ಮಾಡಿ ಯಶ್ ಅವರ ಫೋಟೋ ಮತ್ತು ವೀಡಿಯೊಗಳನ್ನು ಸೆರೆಹಿಡಿಯಲು ತೀವ್ರ ಉತ್ಸಾಹ ತೋರಿದ್ದಾರೆ.

ಸದ್ದು ಮಾಡಿದ ‘ಡ್ಯಾಡಿಸ್ ಹೋಂ’ ಡೈಲಾಗ್

ಈ ಜಾಗತಿಕ ವೇದಿಕೆಯಲ್ಲಿ ಯಶ್ ಭಾಗವಹಿಸಿರುವುದು ಕೇವಲ ‘ರಾಮಾಯಣ’ ಚಿತ್ರದ ಪ್ರಚಾರಕ್ಕಾಗಿ. ಆದರೆ, ಈ ವೇದಿಕೆ ಮೇಲೆ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್’ ಚಿತ್ರ ಹೈಪ್ ಸೃಷ್ಟಿಸಿದೆ.

ಈ ಕಾರ್ಯಕ್ರಮದ ಸಂದರ್ಭದಲ್ಲಿ ಯಶ್ ಅವರ ‘ಟಾಕ್ಸಿಕ್’ ಸಿನಿಮಾದ ಸೂಪರ್ ಹಿಟ್ ಡೈಲಾಗ್ ಆದ ‘ಡ್ಯಾಡಿಸ್ ಹೋಂ’ 2ಎಂಬ ಒನ್-ಲೈನರ್ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಅಭಿಮಾನಿಗಳ ವಲಯದಲ್ಲಿ ಮತ್ತೆ ಜೋರಾಗಿ ಸದ್ದು ಮಾಡುತ್ತಿದೆ. ರಾಕಿ ಭಾಯ್ ಅವರ ಜಾಗತಿಕ ಮಟ್ಟದ ಈ ಕ್ರೇಜ್ ನೋಡಿ ಕನ್ನಡ ಚಿತ್ರರಂಗ ಹಾಗೂ ಅವರ ಅಭಿಮಾನಿಗಳು ಮತ್ತೊಮ್ಮೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾ ಬಗ್ಗೆ ನಿರ್ಮಾಪಕ ಕೆವಿಎನ್ ಹೇಳಿದ್ದೇನು?

‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಯಶ್ ನಿರ್ಮಾಪಕ ಕೂಡ ಹೌದು. ಗೀತು ಮೋಹನ್​ದಾಸ್ ಅವರ ನಿರ್ಮಾಣ ಚಿತ್ರಕ್ಕೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version