ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಫಲಪುಷ್ಪ ಪ್ರದರ್ಶನ: ಲಾಲ್‌ಬಾಗ್‌ನಲ್ಲಿ ಅರಳಲಿದೆ ‘ಗಂಗ’ರ ಭವ್ಯ ಇತಿಹಾಸ! – Kannada News | Independence Day 2026: Lalbagh Flower Show Highlights Ganga Dynasty’s Rich Legacy

ಬೆಂಗಳೂರು, ಜುಲೈ 22: ಬೆಂಗಳೂರಿನ (bangaluru) ವಿಶ್ವಪ್ರಸಿದ್ಧ ಲಾಲ್‌ಬಾಗ್‌ನಲ್ಲಿ (Lalbagh Flower Show) ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ  ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಭರದ ಸಿದ್ಧತೆಗಳು ಸಾಗಿವೆ. ಈ ಬಾರಿಯ ಪ್ರದರ್ಶನಕ್ಕೆ ಗಂಗರ ಇತಿಹಾಸದ ಮೆರುಗು ಸಿಗಲಿದ್ದು, ದಕ್ಷಿಣ ಕರ್ನಾಟಕವನ್ನು ದೀರ್ಘಕಾಲ ಆಳಿದ ಗಂಗ ರಾಜವಂಶದ ವೈಭವ ಕಣ್ಣುತುಂಬಿಕೊಳ್ಳಲಿದೆ.

ಲಕ್ಷಾಂತರ ಹೂವುಗಳಲ್ಲಿ ಅರಳಲಿದೆ ಗಂಗರ ರಾಜವಂಶ

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಆಗಸ್ಟ್ 6ರಿಂದ 17ರವರೆಗೆ ಒಟ್ಟು 12 ದಿನಗಳ ಕಾಲ 220ನೇ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿದೆ. ಈ ಬಾರಿಯ ಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆ ದಕ್ಷಿಣ ಕರ್ನಾಟಕವನ್ನು ಸುದೀರ್ಘ ಕಾಲ ಆಳಿದ ಗಂಗರ ರಾಜವಂಶ. ಗಂಗರ ಕಾಲದ ವಾಸ್ತುಶಿಲ್ಪ, ಶಿಕ್ಷಣ, ಸಂಸ್ಕೃತಿ ಮತ್ತು ನಾಡಿಗೆ ನೀಡಿದ ಕೊಡುಗೆಯನ್ನ ಲಕ್ಷಾಂತರ ಹೂವುಗಳಿಂದ ಅನಾವರಣಗೊಳಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.

ಇದನ್ನೂ ಓದಿ: ‘ಲಾಲ್‌ಬಾಗ್ ಮಾರಾಟಕ್ಕಿದೆ’: ಸುರಂಗ ಮಾರ್ಗ ಯೋಜನೆ ವಿರೋಧಿಸಿ ಕರಪತ್ರ ಹಂಚಿ ವಿಭಿನ್ನವಾಗಿ ಪ್ರತಿಭಟನೆ ಮಾಡಿದ ಸಂಸದ ತೇಜಸ್ವಿ ಸೂರ್ಯ

ಗಾಜಿನ ಮನೆಯ ಮುಖ್ಯ ವೇದಿಕೆಯಲ್ಲಿ, ಸುಮಾರು 1300 ವರ್ಷಗಳಷ್ಟು ಹಳೆಯದಾದ ಬೇಗೂರಿನ ನಾಗನಾಥೇಶ್ವರ ದೇವಸ್ಥಾನ ಹೂವುಗಳ ಶೃಂಗಾರದಲ್ಲಿ ಕಂಗೊಳಿಸಲಿದೆ. ಬೆಂಗಳೂರು ಎಂಬ ಹೆಸರಿನ ಮೊದಲ ಉಲ್ಲೇಖವಿರುವ ಕ್ರಿ.ಶ. 390ರ ಕನ್ನಡ ಶಾಸನವಿರುವ ಅಪರೂಪದ ಪಂಚಲಿಂಗ ದೇವಾಲಯವು ಫಲಪುಷ್ಪ ಪ್ರದರ್ಶನದ ಪ್ರಮುಖ ಕೇಂದ್ರಬಿಂದುವಾಗಲಿದೆ.

ಗಂಗ ರಾಜರ ಪ್ರತಿಮೆಗಳ ಅನಾವರಣ

ಇನ್ನು ಗಂಗರ ಮಂತ್ರಿ ಚಾವುಂಡರಾಯ ನಿರ್ಮಿಸಿದ ಶ್ರವಣಬೆಳಗೊಳದ ಪ್ರಸಿದ್ಧ ಜೈನ ಬಸದಿ, 22ನೇ ತೀರ್ಥಂಕರ ನೇಮಿನಾಥ ಸ್ವಾಮಿಯ ವಿಗ್ರಹ, ಗೋಮಟೇಶ್ವರನ ಪ್ರತಿಮೆ, ನಂದಿಬೆಟ್ಟದ ಯೋಗನಂದೀಶ್ವರ ದೇವಸ್ಥಾನ, ಗಂಗರ ಧ್ವಜಸ್ತಂಭ ಹಾಗೂ ದಡಿಗ, ಕೊಂಗುಣಿವರ್ಮ, ಶ್ರೀಪುರುಷ, ರಾಚಮಲ್ಲರಂತಹ ಪ್ರಮುಖ ಗಂಗ ರಾಜರ ಪ್ರತಿಮೆಗಳು ಹೂವುಗಳಲ್ಲಿ ಜೀವ ತಳೆಯಲಿವೆ.

ತೋಟಗಾರಿ ಇಲಾಖೆ ನಿರ್ದೇಶಕ  ಜಗದೀಶ್ ಹೇಳಿದ್ದಿಷ್ಟು 

‘ಗಂಗ ರಾಜವಂಶಸ್ಥರು ಕನ್ನಡ ಭಾಷೆ, ಸಾಹಿತ್ಯ, ನೀರಾವರಿ ಹಾಗೂ ವಾಸ್ತುಶಿಲ್ಪಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಈ ಭವ್ಯ ಇತಿಹಾಸವನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ಅವರಿಗೆ ಸಮರ್ಪಿಸಲಾಗುತ್ತಿದೆ’ ಎಂದು ತೋಟಗಾರಿ ಇಲಾಖೆ ನಿರ್ದೇಶಕ  ಜಗದೀಶ್​ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಾಣ:ಲಾಲ್ ಬಾಗ್ ನಲ್ಲಿ ಮರ ಕಡಿಯದಂತೆ ನೀಡಿದ್ದ ಮಧ್ಯಂತರ ಆದೇಶ ಮುಂದುವರಿಕೆ

12 ದಿನಗಳ ಕಾಲ ನಡೆಯಲಿರುವ ಈ ಪ್ರದರ್ಶನವು ಪ್ರಕೃತಿ ಪ್ರೇಮಿಗಳಿಗೆ ಮಾತ್ರವಲ್ಲದೆ, ಇತಿಹಾಸಾಸಕ್ತರಿಗೂ ಗಂಗರ ಕಾಲದ ಶ್ರೇಷ್ಠ ವೈಭವವನ್ನು ಕಣ್ತುಂಬಿಕೊಳ್ಳಲು ಸುವರ್ಣಾವಕಾಶ ಕಲ್ಪಿಸಲಾಗಿದೆ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಕ್ರಮವಾಗಿ ‘ಜನ ನಾಯಗನ್’ ಟಿಕೆಟ್ ದರ ಏರಿಕೆ: ಕ್ರಮ ತೆಗೆದುಕೊಳ್ಳಲು ವಿಜಯ್ ಅಭಿಮಾನಿಗಳ ಆಗ್ರಹ – Kannada News | CM Vijay starrer Jana Nayagan movie Ticket Prices illegally Hiked Fans demand action

ಖ್ಯಾತ ನಟ, ತಮಿಳುನಾಡು ಸಿಎಂ ವಿಜಯ್ (CM Vijay) ಅಭಿನಯದ ಬಹುನಿರೀಕ್ಷಿತ ‘ಜನ ನಾಯಗನ್’ (Jana Nayagan) ಸಿನಿಮಾ ಜುಲೈ 23ರಂದು ತೆರೆಕಾಣುತ್ತಿದೆ. ಆದರೆ, ತಮಿಳುನಾಡಿನಲ್ಲಿ ಸರ್ಕಾರಿ ನಿಯಮಾವಳಿಯಂತೆ ಟಿಕೆಟ್ ದರವನ್ನು 190 ರೂಪಾಯಿಗೆ ಮಿತಿಗೊಳಿಸಲಾಗಿದ್ದರೂ, ಕೆಲವು ಚಿತ್ರಮಂದಿರಗಳಲ್ಲಿ ಅಕ್ರಮವಾಗಿ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಮಾಡುತ್ತಿರುವುದು ತೀವ್ರ ಗೊಂದಲ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ಚಿತ್ರಮಂದಿರವೊಂದರ ಮುಂದೆ ಅಭಿಮಾನಿಗಳು ಹಾಗೂ ಚಿತ್ರಮಂದಿರದ ಮಾಲೀಕರ ನಡುವೆ ತೀವ್ರ ವಾಗ್ವಾದ ನಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 150 ರೂಪಾಯಿಯಿಂದ 190 ರೂಪಾಯಿ ಇರಬೇಕಾದ ಟಿಕೆಟ್‌ಗಳನ್ನು 300 ರೂಪಾಯಿಯಿಂದ 500 ರೂಪಾಯಿವರೆಗೆ ಹಾಗೂ ಕೆಲವು ಕಡೆ 700 ರೂಪಾಯಿವರೆಗೂ ಬ್ಲಾಕ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ.

ವೈರಲ್ ವಿಡಿಯೋದಲ್ಲಿ ಏನಿದೆ?

‘300 ರೂಪಾಯಿಗೆ ಟಿಕೆಟ್ ಮಾರಾಟ ಮಾಡಲು ನಿಮಗೆ ಯಾರು ಅನುಮತಿ ಕೊಟ್ಟಿದ್ದು? ಮುಖ್ಯಮಂತ್ರಿಗಳ ಕಚೇರಿಗೆ ಕರೆ ಮಾಡಿ ಕೇಳಿ’ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿರುವುದು ವೈರಲ್ ವಿಡಿಯೋದಲ್ಲಿ ಕಂಡುಬಂದಿದೆ. ಇದಕ್ಕೆ ಉತ್ತರಿಸಿದ ಚಿತ್ರಮಂದಿರದ ಆಡಳಿತ ಮಂಡಳಿ, ‘ವಿತರಿಕರೇ ಈ ದರವನ್ನು ನಿಗದಿಪಡಿಸಿದ್ದಾರೆ’ ಎಂದು ಸಮರ್ಥಿಸಿಕೊಂಡಿದೆ. ಜೊತೆಗೆ ಅಭಿಮಾನಿಗಳೇ ಟಿಕೆಟ್ ಪಡೆದು ಹೊರಗಡೆ 1000 ರೂಪಾಯಿಗೆ ಮಾರಿಕೊಳ್ಳುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದೆ.

ಕ್ರಮ ಕೈಗೊಳ್ಳಲು ಸಿಎಂ ವಿಜಯ್‌ಗೆ ಮನವಿ:

ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅಭಿಮಾನಿಗಳು ಹಾಗೂ ಪ್ರೇಕ್ಷಕರು, ಈ ದರ ಏರಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ‘ತಮ್ಮದೇ ಸಿನಿಮಾಗೆ ಈ ರೀತಿ ಅಕ್ರಮ ದರ ನಿಗದಿಪಡಿಸುತ್ತಿದ್ದರೆ, ಇನ್ನುಳಿದ ವಿಷಯಗಳಲ್ಲಿ ಹೇಗೆ ನಿಯಂತ್ರಣ ಸಾಧಿಸುತ್ತಾರೆ? ಈ ಭ್ರಷ್ಟಾಚಾರದ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಅಭಿಮಾನಿಗಳು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬಿಡುಗಡೆಗೂ ಮುನ್ನ ‘ಜನ ನಾಯಗನ್’ ಚಿತ್ರದಲ್ಲಿ ಬದಲಾವಣೆ: ಟೈಟಲ್ ಕಾರ್ಡ್‌ನಲ್ಲಿ ವಿಜಯ್ ಹೆಸರು ಹೇಗಿದೆ?

‘ಜನ ನಾಯಗನ್’ ಚಿತ್ರದಲ್ಲಿ ವಿಜಯ್ ಅವರಿಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸಿದ್ದು, ಮಮಿತಾ ಬೈಜು ಹಾಗೂ ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ತೆಲುಗಿನ ಹಿಟ್ ಸಿನಿಮಾ ‘ಭಗವಂತ್ ಕೇಸರಿ’ ರಿಮೇಕ್ ಆಗಿರುವ ಈ ಚಿತ್ರವು ವಿಜಯ್ ಅವರ ಕೊನೆಯ ಸಿನಿಮಾವಾಗಿರುವುದರಿಂದ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜಮ್ಮು-ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಉಗ್ರರ ಗುಂಡಿನ ದಾಳಿ; ಪೋಲೀಸ್ ಕಾನ್​ಸ್ಟೆಬಲ್ ಹುತಾತ್ಮ – Kannada News | Police personnel killed another injured in terrorist attack in Jammu Kashmir Anantnag

ಅನಂತ್‌ನಾಗ್, ಜುಲೈ 22: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಅನಂತ್‌ನಾಗ್ ಜಿಲ್ಲೆಯಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಪೋಲೀಸ್ ಸಿಬ್ಬಂದಿಯೊಬ್ಬರು ಹುತಾತ್ಮರಾಗಿದ್ದಾರೆ. ಅನಂತ್‌ನಾಗ್-ಕೋಕರ್‌ನಾಗ್ ರಸ್ತೆಯಲ್ಲಿ ಕರ್ತವ್ಯ ನಿರತರಾಗಿದ್ದಾಗ ಈ ದಾಳಿ ನಡೆದಿದೆ. ಅನಂತ್‌ನಾಗ್ ಜಿಲ್ಲೆಯ ಅನಂತ್‌ನಾಗ್-ಕೋಕರ್‌ನಾಗ್ ರಸ್ತೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗ ಉಗ್ರರು ಅವರ ಮೇಲೆ ದಿಢೀರ್ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದರು.

ಹುತಾತ್ಮರಾದ ಪೋಲೀಸ್ ಸಿಬ್ಬಂದಿ:

ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪೊಲೀಸ್ ಹೆಡ್ ಕಾನ್​ಸ್ಟೆಬಲ್ ಆಶಿಕ್ ಹುಸೇನ್ ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಗಾಯಗೊಂಡಿರುವ ಮತ್ತೊಬ್ಬ ಸಿಬ್ಬಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಡೊನಾಲ್ಡ್​ ಟ್ರಂಪ್ ಕೊಂದವರಿಗೆ 84 ಕೋಟಿ ರೂ. ಕೊಡುತ್ತೇವೆ ಎಂದು ಬಹುಮಾನ ಘೋಷಿಸಿದ ಇರಾಕಿ ಉಗ್ರ ಸಂಘಟನೆ

ಬೃಹತ್ ಶೋಧ ಕಾರ್ಯಾಚರಣೆ:

ಈ ಘಟನೆ ನಡೆದ ತಕ್ಷಣವೇ ಹೆಚ್ಚುವರಿ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಇಡೀ ಪ್ರದೇಶವನ್ನು ಸುತ್ತುವರೆದಿವೆ. ದಾಳಿ ನಡೆಸಿ ತಲೆಮರೆಸಿಕೊಂಡಿರುವ ಉಗ್ರರನ್ನು ಬಂಧಿಸಲು ದಟ್ಟವಾದ ಪ್ರದೇಶಗಳಲ್ಲಿ ತೀವ್ರ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ, ಭೂಕುಸಿತ; 11 ಜನ ಸಾವು, ಹಲವರು ನಾಪತ್ತೆ

ಅನಂತ್‌ನಾಗ್-ಕೋಕರ್‌ನಾಗ್ ರಸ್ತೆಯ ಸಂಪರ್ಕಗಳನ್ನು ಬಂದ್ ಮಾಡಲಾಗಿದ್ದು, ಪ್ರತಿಯೊಂದು ವಾಹನ ಮತ್ತು ಅನುಮಾನಾಸ್ಪದ ಚಲನವಲನಗಳ ಮೇಲೆ ಕಣ್ಣಿಡಲಾಗಿದೆ. ಈ ದಾಳಿಯ ಹೊಣೆಯನ್ನು ಪತ್ತೆಹಚ್ಚಲು ಮತ್ತು ಈ ಘಟನೆಯ ಹಿಂದಿರುವ ಉಗ್ರರ ಜಾಲವನ್ನು ಭೇದಿಸಲು ಪೋಲೀಸರು ಹಾಗೂ ಭದ್ರತಾ ಪಡೆಗಳು ಜಂಟಿ ತನಿಖೆ ಮುಂದುವರಿಸಿವೆ.

ಮೃತ ಆಶಿಕ್ ಹುಸೇನ್ ಖುರೇಷಿ ಅವರ ಮೃತದೇಹವನ್ನು ತರುತ್ತಿದ್ದಂತೆ ಕುಟುಂಬಸ್ಥರ ರೋದನ ಮುಗಿಲು ಮುಟ್ಟುವಂತಿತ್ತು. ಆಶಿಕ್ ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ZIM: ‘ವೈಭವ್ ಮಹಾನ್ ಆಟಗಾರನಾಗುತ್ತಾರೆ’; ಜಿಂಬಾಬ್ವೆ ನಾಯಕ ಸಿಕಂದರ್ ರಝಾ – Kannada News | Sikandar Raza Praises Vaibhav Sooryavanshi: India vs Zimbabwe T20 Star Potential

ಜುಲೈ 23 ರಿಂದ ಹರಾರೆಯಲ್ಲಿ ಪ್ರಾರಂಭವಾಗಲಿರುವ ಭಾರತ ಮತ್ತು ಜಿಂಬಾಬ್ವೆ ನಡುವಿನ ಟಿ 20 ಸರಣಿಗೆ ಮುಂಚಿತವಾಗಿ ಜಿಂಬಾಬ್ವೆ ನಾಯಕ ಸಿಕಂದರ್, 15 ವರ್ಷದ ಭಾರತೀಯ ಬ್ಯಾಟಿಂಗ್ ಸೆನ್ಸೇಶನ್ ವೈಭವ್ ಸೂರ್ಯವಂಶಿ ಅವರ ಆಟವನ್ನು ಶ್ಲಾಘಿಸಿದ್ದಾರೆ. ಹಾಗೆಯೇ ಸರಿಯಾಗಿ ಪ್ರೋತ್ಸಾಹಿಸಿದರೆ, ವೈಭವ್ ಒಂದು ಪೀಳಿಗೆಯವರೆಗೆ ನೆನಪಿನಲ್ಲಿ ಉಳಿಯುವ ಶ್ರೇಷ್ಠ ಆಟಗಾರನಾಗಿ ಬೆಳೆಯುತ್ತಾನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ(PC-PTI).

Source link

ಭತ್ತದ ಗದ್ದೆಯಲ್ಲಿ ಅರಳಿದ ಅದೃಷ್ಟದ ತಾವರೆ: ಕೃಷಿಯಲ್ಲಿ ಹೊಸ ಕ್ರಾಂತಿ ಮಾಡಿದ ಮನೋಹರ ಶೆಟ್ಟಿ – Kannada News | Commercial Lotus Farming in Udupi: Manohar Shetty’s Organic Success Story and High Income

ಉಡುಪಿ, ಜು.22: ಒಂದು ಕಾಲದಲ್ಲಿ ಭತ್ತದ ಹಸಿರು ಹೊದಿಕೆ ಹೊದ್ದಿದ್ದ ಗದ್ದೆ, ಇಂದು ಗುಲಾಬಿ ಮತ್ತು ಬಿಳಿ ಬಣ್ಣದ ತಾವರೆ ಹೂಗಳಿಂದ ಕಂಗೊಳಿಸುತ್ತಿದೆ. ಬೆಳಗಿನ ಜಾವ ನೀರಿನ ಮೇಲೆ ಅರಳಿದ ನೂರಾರು ತಾವರೆ ಹೂಗಳು ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತಿದ್ದರೆ, ಈ ಸಾಹಸಕ್ಕೆ ಕೈಹಾಕಿದ ರೈತನ ಮುಖದಲ್ಲಿನ ಮಂದಹಾಸ ನೂತನ ಯಶಸ್ಸಿನ ಕಥೆಯನ್ನು ಸಾರುತ್ತಿದೆ.

ಮಂಡ್ಯ, ಮೈಸೂರು ಹಾಗೂ ರಾಮನಗರ ಭಾಗಗಳಲ್ಲಿ ಮಾತ್ರ ಹೆಚ್ಚಾಗಿ ಕಾಣಸಿಗುತ್ತಿದ್ದ ‘ವಾಣಿಜ್ಯ ತಾವರೆ ಕೃಷಿ’ ಇದೀಗ ಕರಾವಳಿಯ ಕೃಷಿ ನೆಲದಲ್ಲೂ ಹೊಸ ನೆಲೆ ಕಂಡುಕೊಂಡಿದೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉಳಿಯಾರಗೋಳಿಯ ರೈತ ಹಾಗೂ ಸಾಯಿರಾಧಾ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಮನೋಹರ ಶೆಟ್ಟಿ ಅವರು ತಮ್ಮ ಭತ್ತದ ಗದ್ದೆಯನ್ನು ತಾವರೆ ಕೊಳವನ್ನಾಗಿ ಪರಿವರ್ತಿಸಿ, ಕರಾವಳಿಯಲ್ಲೂ ತಾವರೆ ಕೃಷಿ ಲಾಭದಾಯಕ ಎಂಬುದನ್ನು ಸಾಬೀತುಪಡಿಸಿದ್ದಾರೆ.

ವರ್ಷಗಳಿಂದ 15–20 ಎಕರೆ ಪ್ರದೇಶದಲ್ಲಿ ಭತ್ತದ ಕೃಷಿ ಮಾಡುತ್ತಿದ್ದರೂ ಮಳೆ ವೈಪರೀತ್ಯ, ಕಾರ್ಮಿಕರ ಕೊರತೆ ಹಾಗೂ ಹೆಚ್ಚುತ್ತಿರುವ ವೆಚ್ಚದಿಂದಾಗಿ ನಷ್ಟ ಅನುಭವಿಸುತ್ತಿದ್ದರು. ಮಾಧ್ಯಮಗಳಲ್ಲಿ ತಾವರೆ ಕೃಷಿಯ ಯಶೋಗಾಥೆಗಳನ್ನು ಕಂಡು, ಮೂರು ತಿಂಗಳ ಕಾಲ ಅಧ್ಯಯನ ನಡೆಸಿ ತಮ್ಮ ಗದ್ದೆಯಲ್ಲೇ ಸಣ್ಣ ಪ್ರಮಾಣದಲ್ಲಿ ಪ್ರಯೋಗ ಆರಂಭಿಸಿದರು. ಮೊದಲ ಪ್ರಯತ್ನದಲ್ಲೇ ಯಶಸ್ಸು ಸಿಕ್ಕ ಹಿನ್ನೆಲೆಯಲ್ಲಿ ಇಡೀ ಭತ್ತದ ಗದ್ದೆಯನ್ನು ತಾವರೆ ಕೊಳವಾಗಿ ರೂಪಾಂತರಿಸಿದರು.

3 ಎಕರೆಯಲ್ಲಿ ಅರಳಿದ ತಾವರೆ: ತಿಂಗಳಿಗೆ ಲಕ್ಷ ರೂ. ಆದಾಯ

ಪ್ರಸ್ತುತ 3 ಎಕರೆ ಪ್ರದೇಶದಲ್ಲಿ ಕರಾವಳಿಯ ಹವಾಮಾನಕ್ಕೆ ಹೊಂದುವ ಬುಚಾ, ಪಿಂಕ್ ಕ್ಲೌಡ್ ಹಾಗೂ ವೈಟ್ ಫಿಯೋನಿ ತಳಿಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಸಲಾಗಿದೆ. ಗದ್ದೆಯನ್ನು ಉಳುಮೆ ಮಾಡಿ, ಹಟ್ಟಿಗೊಬ್ಬರ ಹಾಕಿ, ಮೊಣಕಾಲಿನಷ್ಟು ನೀರು ಸಂಗ್ರಹಿಸಿ ಗಿಡಗಳನ್ನು ನೆಟ್ಟ ಬಳಿಕ ಸುಮಾರು 90 ದಿನಗಳಲ್ಲಿ ಮೊದಲ ಹೂ ಅರಳುತ್ತದೆ. ಕಳೆದ ಎರಡು ತಿಂಗಳಿಂದ ಪ್ರತಿದಿನ ಸರಾಸರಿ 400–500 ಹೂಗಳನ್ನು ಕೊಯ್ಲು ಮಾಡಲಾಗುತ್ತಿದ್ದು, ಒಂದು ಹೂವಿಗೆ 15 ರಂತೆ ತಿಂಗಳಿಗೆ 1 ಲಕ್ಷ ರೂ.ವರೆಗೆ ಆದಾಯ ಗಳಿಸುವ ನಿರೀಕ್ಷೆಯಿದೆ.

ದೇವಸ್ಥಾನಗಳಿಂದ ಭಾರಿ ಬೇಡಿಕೆ

ಇಲ್ಲಿ ಬೆಳೆಯುವ ತಾವರೆ ಹೂಗಳಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ, ಉಚ್ಚಿಲ ಹಾಗೂ ಕಾಪು ಭಾಗದ ಪ್ರಸಿದ್ಧ ದೇವಸ್ಥಾನಗಳಿಂದ ನಿರಂತರ ಬೇಡಿಕೆ ಬಂದಿದೆ. ಉಡುಪಿ ಹಾಗೂ ಕಾಪು ಭಾಗದ ಹೂವಿನ ವ್ಯಾಪಾರಿಗಳು ನೇರವಾಗಿ ತೋಟಕ್ಕೇ ಬಂದು ಹೂಗಳನ್ನು ಖರೀದಿಸುತ್ತಿದ್ದಾರೆ.

ಇದನ್ನೂ ಓದಿ: ಸಂಶೋಧಕರ ಹೆಜ್ಜೆಸದ್ದು ಕೇಳ್ಬೇಕಿದ್ದ ಜಾಗದಲ್ಲಿ ಅನೈತಿಕ ಚಟುವಟಿಕೆ: ಬೆಳಪು ಗ್ರಾಮೀಣ ವಿದ್ಯಾರ್ಥಿಗಳ ಕನಸು ಭಗ್ನ

ರಾಸಾಯನಿಕ ರಹಿತ ಸಾವಯವ ಪದ್ಧತಿ

ತೋಟದಲ್ಲಿ ಯಾವುದೇ ರಾಸಾಯನಿಕ ಕೀಟನಾಶಕ ಬಳಸದೆ ಕಹಿಬೇವಿನ ಹಿಂಡಿಯನ್ನು ಬಳಸಿ ಸಾವಯವ ಪದ್ಧತಿಯಲ್ಲಿ ಕೀಟ ನಿಯಂತ್ರಣ ಮಾಡಲಾಗುತ್ತಿದೆ. ತಾವರೆ ಹೂವಷ್ಟೇ ಅಲ್ಲದೆ, ಸುಗಂಧ ದ್ರವ್ಯ, ಅಲಂಕಾರಿಕ ವಸ್ತುಗಳು, ಕಾಂಡದ ನಾರಿನಿಂದ ಬಟ್ಟೆ, ಬೇರಿನಿಂದ ಉಪ್ಪಿನಕಾಯಿ ಹಾಗೂ ಬೀಜಗಳಿಂದ ಪೌಷ್ಟಿಕ ಆಹಾರ ತಯಾರಿಸಬಹುದಾಗಿದೆ. ಕಾಪು-ಉಳಿಯಾರಗೋಳಿ-ಪಾಂಗಾಳ ಭಾಗದಲ್ಲಿ ಸುಮಾರು 200 ಎಕರೆ ಕೃಷಿಭೂಮಿ ತಾವರೆಗೆ ಸೂಕ್ತವಾಗಿದ್ದು, ಆಸಕ್ತ ರೈತರಿಗೆ ತಾಂತ್ರಿಕ ಮಾರ್ಗದರ್ಶನ ಹಾಗೂ ಮಾರುಕಟ್ಟೆ ಸಂಪರ್ಕ ಕಲ್ಪಿಸಲು ಮನೋಹರ ಶೆಟ್ಟಿ ಮುನ್ನೆಡೆದಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸುಖ ನಿದ್ರೆಗಾಗಿ ಈ ಗಿಡಮೂಲಿಕೆಗಳು ಸಹಕಾರಿ ಎನ್ನುತ್ತಾರೆ ಡೈಸಿ ಬೋಪಣ್ಣ – Kannada News | Daisy Bopanna’s advice for better sleep

ಇಂದಿನ ಒತ್ತಡದ ಜೀವನ, ಅನಾರೋಗ್ಯಕರ ಜೀವನಶೈಲಿಯಿಂದಾಗಿ ಅನೇಕರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಣ್ಣು ಮುಚ್ಚಿ ಮಲಗಿದರೂ ತಡ ರಾತ್ರಿಯವರೆಗೂ ನಿದ್ರೆ ಆವರಿಸೋದೇ ಇಲ್ಲ ಎಂದು ದೂರುತ್ತಿರುತ್ತಾರೆ. ಈ ನಿದ್ರೆಯ ಕೊರತೆ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡುತ್ತವೆ. ಹಾಗಾಗಿ ಸುಖ ನಿದ್ರೆಗಾಗಿ ತಜ್ಞರು ಅನೇಕಾರು ಸಲಹೆಗಳನ್ನು ನೀಡುತ್ತಿರುತ್ತಾರೆ. ಅದೇ ರೀತಿ ಗಾಳಿಪಟ ಬೆಡಗಿ ಡೈಸಿ ಬೋಪಣ್ಣ (Daisy Bopanna) ಅವರು ಉತ್ತಮ ನಿದ್ರೆಗಾಗಿ ಒಂದಷ್ಟು ಸಲಹೆಗಳನ್ನು ನೀಡಿದ್ದು, ಈ ಕೆಲವು ಗಿಡಮೂಲಿಕೆಗಳ ಸೇವನೆಯಿಂದ ಮಗುವಿನಂತೆ ಆರಾಮದಾಯಕವಾಗಿ ನಿದ್ರಿಸಬಹುದು ಎಂದು ಹೇಳಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಉತ್ತಮ ನಿದ್ರೆಗೆ ಡೈಸಿ ಬೋಪಣ್ಣ ನೀಡಿದ ಸಲಹೆಗಳಿವು:

ಇತ್ತೀಚಿನ ದಿನಗಳಲ್ಲಿ ಅನೇಕರು ಉತ್ತಮ ನಿದ್ರೆ ಪಡೆಯಲು ಒದ್ದಾಡುತ್ತಿದ್ದಾರೆ. ಇನ್ನೂ ಕೆಲವರು ಒಳ್ಳೆಯ ನಿದ್ರೆ ಮಾಡಿದರೂ ಸುಸ್ತನ್ನು ಅನುಭವಿಸುತ್ತಾರೆ. ಈ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಒಂದಷ್ಟು ಗಿಡಮೂಲಿಕೆಗಳ ಬಗ್ಗೆ ಡೈಸಿ ಬೋಪಣ್ಣ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:‌

ಉತ್ತಮ ನಿದ್ರೆಯನ್ನು ಪಡೆಯಲು ಸಹಾಯ ಮಾಡುವ ಗಿಡಮೂಲಿಕೆಗಳು:

ಜಾಯಿಕಾಯಿ ಪುಡಿ: ಜಾಪತ್ರೆ ಅಥವಾ ಜಾಯಿಕಾಯಿ ಪುಡಿಯ ಸೇವನೆಯಿಂದ ಉತ್ತಮ ನಿದ್ರೆ ಪಡೆಯಬಹುದು ಎನ್ನುತ್ತಾರೆ ಡೈಸಿ ಬೋಪಣ್ಣ. ಜಾಯಿಕಾಯಿಯಲ್ಲಿ ಮೆಗ್ನೇಸಿಯಮ್‌ ಇದ್ದು, ಇದು ವಿಶ್ರಾಂತಿ ಮತ್ತು ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಒತ್ತಡ ಮತ್ತು ಆತಂಕವನ್ನು ಸಹ ನಿವಾರಿಸುತ್ತದೆ. ಹಾಗಾಗಿ ಮಲಗುವ ಮುನ್ನ ಒಂದು ಲೋಟ ಹಾಲಿಗೆ ಚಿಟಿಕೆ ಜಾಯಿಕಾಯಿ ಪುಡಿ ಮತ್ತು ಚಿಟಿಕೆ ಅರಶಿನ ಪುಡಿಯನ್ನು ಬೆರೆಸಿ ಸೇವನೆ ಮಾಡುವುದರಿಂದ ಉತ್ತಮ ನಿದ್ರೆಯನ್ನು ಪಡೆಯಬಹುದು.

ಅಶ್ವಗಂಧ ಪುಡಿ: ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುವ ಮೂಲಕ ಉತ್ತಮ ನಿದ್ರೆಯನ್ನು ಪಡೆಯಲು ಅಶ್ವಗಂಧದ ಪುಡಿ ಸಹಾಯ ಮಾಡುತ್ತದೆ ಎನ್ನುತ್ತಾರೆ ಡೈಸಿ ಬೋಪಣ್ಣ. ನಿಮಗೇನಾದರೂ ಒತ್ತಡ, ಆತಂಕ, ನಿದ್ರಾಹೀನತೆಯ ಸಮಸ್ಯೆ ಇದ್ದರೆ ಮಲಗುವ ಮುನ್ನ ಒಂದು ಲೋಟ ಹಾಲಿಗೆ ಚಿಟಿಕೆ ಅಶ್ವಗಂಧವನ್ನು ಬೆರೆಸಿ ಸೇವನೆ ಮಾಡಿದರೆ ಉತ್ತಮ.

ಇದನ್ನೂ ಓದಿ: ಸ್ನಾನ ಮಾಡುವ ಸಂದರ್ಭದಲ್ಲಿ ಮೊದಲು ದೇಹದ ಯಾವ ಭಾಗಕ್ಕೆ ನೀರು ಹಾಕಬೇಕು ಗೊತ್ತೇ?

ಒಂದೆಲಗ ಮತ್ತು ಜಟಮಾನ್ಸಿ ಟೀ: ಬ್ರಾಹ್ಮಿ ಶಾಂತ ನಿದ್ರೆಯನ್ನು ಉತ್ತೇಜಿಸುವುದು ಮಾತ್ರವಲ್ಲದೆ ಒತ್ತಡವನ್ನು ಕಡಿಮೆ ಮಾಡಿ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಇನ್ನೂ ಜಟಮಾನ್ಸಿ ಮೂಲಿಕೆ ಮನಸ್ಸು ಮತ್ತು ದೇಹವನ್ನು ಶಾಂತಗೊಳಿಸುವ ಮೂಲಕ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಹಾಗಾಗಿ ಉತ್ತಮ ನಿದ್ರೆಗಾಗಿ ಈ ಎರಡು  ಗಿಡಮೂಲಿಕೆಗಳ ಟೀ ಕುಡಿಯೋದು ಬೆಸ್ಟ್‌ ಎನ್ನುತ್ತಾರೆ ಡೈಸಿ ಬೋಪಣ್ಣ.

ತಗರ ಬೇರು: ತಗರ ಬೇರು ಒಂದು ಪ್ರಮುಖ ಆಯುರ್ವೇದ ಸಸ್ಯವಾಗಿದ್ದು, ಇದು ನಿದ್ರಾಹೀನತೆ, ಮಾನಸಿಕ ಒತ್ತಡ ಮತ್ತು ಆತಂಕವನ್ನು ನಿವಾರಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. ಇದು ಒತ್ತಡವನ್ನು ಕಡಿಮೆ ಮಾಡುವ ಮೂಲಕ ಆರಾಮದಾಯಕ ನಿದ್ರೆಗೆ ಸಹಾಯ ಮಾಡುತ್ತದೆ. ಈ ಬೇರಿನ ಪುಡಿಯನ್ನು ಬೆಚ್ಚಗಿನ ಹಾಲಿನೊಂದಿಗೆ ಬೆರೆಸಿ ಮಲಗುವ ಮುನ್ನ ಕುಡಿದರೆ ಮಗುವಿನಂತೆ ಆರಾಮದಾಯಕವಾಗಿ ನಿದ್ರಿಸಬಹುದು.

ಈ ಗಿಡಮೂಲಿಕೆಗಳ ಸೇವನೆಯಿಂದ ಮಗುವಿನಂತೆ ಆರಾಮದಾಯಕವಾಗಿ ನಿದ್ರಿಸಬಹುದು ಎಂದು ಹೇಳಿದ್ದಾರೆ, ಜೊತೆಗೆ ಯಾವುದೇ ಪೂರಕಗಳನ್ನು ಸೇವನೆ ಮಾಡುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ ಎಂದಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಾಡಕ್ಟ್ ಲೇಬಲ್ ಓದದೆಯೇ ಖರೀದಿಸುವ ಅಭ್ಯಾಸವಿದ್ದರೆ ಹಿಡನ್ ಶುಗರ್ ಹೆಚ್ಚಾಗಬಹುದು ಎಚ್ಚರ! – Kannada News | How to Identify Hidden Sugar on Food Labels: Expert Advice

ಇತ್ತೀಚಿನ ದಿನಗಳಲ್ಲಿ ಜನ ಶುಗರ್ ತಿನ್ನುವ ಪ್ರಮಾಣವನ್ನು ಬಹಳ ಕಡಿಮೆ ಮಾಡುತ್ತಿದ್ದಾರೆ. ಆದರೆ ನೀವು ಕಣ್ಣಿಗೆ ಕಾಣುವ ಸಕ್ಕರೆಯಿಂದ ದೂರವಿರಬಹುದು ಆದರೆ ಕಣ್ಣಿಗೆ ಕಾಣದ ಸಕ್ಕರೆ ಹೊಟ್ಟೆ ಸೇರುವುದರ ಬಗ್ಗೆ ಯೋಚಿಸಿದ್ದೀರಾ… ಸಾಮಾನ್ಯವಾಗಿ ಸಿಹಿತಿಂಡಿ, ಕ್ಯಾಂಡಿಗಳು ಮತ್ತು ತಂಪು ಪಾನೀಯಗಳನ್ನು ಪ್ರತಿದಿನ ಗಮನಿಸದೆ ಸಾಕಷ್ಟು ಪ್ರಮಾಣದ ಸೇವನೆ ಮಾಡುತ್ತಾರೆ ಇದರಲ್ಲಿರುವ ಹಿಡನ್ ಶುಗರ್ ಅರಿವಿಲ್ಲದಂತೆ ದೇಹಕ್ಕೆ ಪ್ರವೇಶ ಮಾಡುತ್ತದೆ. ಈ ರೀತಿ ಅರಿವಿಲ್ಲದಂತೆ ದಿನನಿತ್ಯ ಸೇವಿಸುವ ಆಹಾರ ಮತ್ತು ಪಾನೀಯಗಳಲ್ಲಿರುವ ಸಕ್ಕರೆ ಪ್ರಮಾಣ ಸಮತೋಲನಯುತ ಆಹಾರ ಪದ್ಧತಿಗೆ ಬ್ರೇಕ್ ಹಾಕುತ್ತದೆ. ಇದರಿಂದ ಶಿಫಾರಸು ಮಾಡಲಾದ ಪ್ರಮಾಣಕ್ಕಿಂತ ಹೆಚ್ಚು ಸಕ್ಕರೆಯನ್ನು ಸೇವಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಈ ಕುರಿತು ಮತ್ತಷ್ಟು ಮಾಹಿತಿಯನ್ನು ಬೆಂಗಳೂರು ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯ ಎಂಡೋಕ್ರಿನಾಲಜಿ ವಿಭಾಗದ ಮುಖ್ಯಸ್ಥೆ ಹಾಗೂ ಸಲಹೆಗಾರ್ತಿ ಡಾ. ಚಿತ್ರಾ ಎಸ್. ಅವರು ಟಿವಿ9 ಕನ್ನಡಕ್ಕೆ ನೀಡಿದ್ದು ಆಹಾರದಲ್ಲಿನ ಹಿಡನ್ ಶುಗರ್ ಗುರುತಿಸುವುದನ್ನು ಮತ್ತು ಅದರಿಂದ ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿ ಸಲಹೆಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ.

ಹಿಡನ್ ಶುಗರ್

ಪ್ಯಾಕೇಜ್ ಮಾಡಿದ ಮತ್ತು ಸಂಸ್ಕರಿತ ಆಹಾರಗಳಲ್ಲಿ ರುಚಿ ಹೆಚ್ಚಿಸಲು, ವಿನ್ಯಾಸವನ್ನು ಸುಧಾರಿಸಲು ಅಥವಾ ಉತ್ಪನ್ನ ಶೇಖರಣೆ ಮಾಡುವ ಅವಧಿಯನ್ನು ವಿಸ್ತರಿಸಲು ಸಕ್ಕರೆಯನ್ನು ಸೇರಿಸಲಾಗುತ್ತದೆ. ಬ್ರೇಕ್‌ಫಾಸ್ಟ್ ಸೀರಿಯಲ್ಸ್ (ಗೋಧಿ, ಜೋಳ, ಓಟ್ಸ್ ಮತ್ತು ಅಕ್ಕಿಯಂತಹ ಧಾನ್ಯಗಳಿಂದ ತಯಾರಿಸಿದ ಸಿದ್ಧ ಆಹಾರಗಳು), ಫ್ಲೇವರ್ ಯೋಗರ್ಟ್‌ಗಳು, ಗ್ರಾನೋಲಾ ಬಾರ್‌ಗಳು, ಪ್ಯಾಕೇಜ್ ಮಾಡಿದ ಹಣ್ಣಿನ ರಸಗಳು, ಸ್ಪೋರ್ಟ್ಸ್ ಡ್ರಿಂಕ್‌ಗಳು ಮತ್ತು ತಕ್ಷಣ ಸೇವಿಸಬಹುದಾದ ತಿಂಡಿಗಳು ಇದಕ್ಕೆ ಕೆಲವು ಸಾಮಾನ್ಯ ಉದಾಹರಣೆಗಳಾಗಿವೆ. ಬ್ರೆಡ್, ಸಲಾಡ್ ಡ್ರೆಸ್ಸಿಂಗ್‌ಗಳು, ಪಾಸ್ತಾ ಸಾಸ್‌ಗಳು, ಕೆಚಪ್ ಮತ್ತು ಸೂಪ್‌ಗಳಲ್ಲಿಯೂ ಸಹ ಹೆಚ್ಚುವರಿ ಸಕ್ಕರೆ ಇರಬಹುದು.

ಸಕ್ಕರೆಯ ಹಲವು ಹೆಸರುಗಳನ್ನು ತಿಳಿದುಕೊಳ್ಳಿ:

ಹಿಡನ್ ಶುಗರ್ ಗಮನಕ್ಕೆ ಬಾರದಿರುವ ಪ್ರಮುಖ ಕಾರಣವೆಂದರೆ ಅವು ಆಹಾರ ಪದಾರ್ಥಗಳ ಪಟ್ಟಿಯಲ್ಲಿ ವಿವಿಧ ಹೆಸರುಗಳ ಅಡಿಯಲ್ಲಿ ಕಾಣಿಸಿಕೊಳ್ಳುತ್ತವೆ. ಸುಕ್ರೋಸ್, ಗ್ಲೂಕೋಸ್, ಫ್ರಕ್ಟೋಸ್, ಡೆಕ್ಸ್‌ಟ್ರೋಸ್, ಮಾಲ್ಟೋಸ್, ಜೇನುತುಪ್ಪ, ಮೊಲಾಸಿಸ್ ಮತ್ತು ಕಾರ್ನ್ ಸಿರಪ್ ಇವೆಲ್ಲವೂ ಸಕ್ಕರೆಯ ವಿವಿಧ ರೂಪಗಳಾಗಿವೆ. ವಿಶೇಷವಾಗಿ ಪರಿಚಯವಿಲ್ಲದ ಹೆಸರುಗಳಾಗಿದ್ದರೆ, ಗ್ರಾಹಕರು ಈ ಅಂಶಗಳನ್ನು ಕಡೆಗಣಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ನೇರಳೆ ಹಣ್ಣು ತಿಂದರೆ ನಿಜವಾಗಿಯೂ ಡಯಾಬಿಟಿಸ್ ನಿಯಂತ್ರಿಸಬಹುದೇ?

ಆರೋಗ್ಯದ ಮೇಲೆ ಬೀರುವ ಪರಿಣಾಮ:

ಅತಿಯಾದ ಪ್ರಮಾಣದಲ್ಲಿ ಸಕ್ಕರೆಯನ್ನು ಸೇವಿಸುವುದು ತೂಕ ಹೆಚ್ಚಳ, ರಕ್ತದಲ್ಲಿನ ಸಕ್ಕರೆಯ ಮಟ್ಟ ಏರಿಕೆ, ಹೃದಯ ಸಂಬಂಧಿತ ಕಾಯಿಲೆಗಳ ಅಪಾಯ ಮತ್ತು ಹಲ್ಲುಗಳ ಸಮಸ್ಯೆಗಳಂತಹ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ದಿನವಿಡೀ ಸೇವಿಸುವ ವಿವಿಧ ಆಹಾರಗಳಲ್ಲಿ ಈ ಹಿಡನ್ ಶುಗರ್ ಇರುವುದರಿಂದ, ತಿಳಿಯದೆಯೇ ಸೇವನೆ ಮಾಡುವ ಪ್ರಮಾಣ ಹೆಚ್ಚಾಗಬಹುದು.

ಗೊತ್ತಿಲ್ಲದೆಯೇ ಸಕ್ಕರೆ ಸೇವನೆ ಮಾಡುವುದನ್ನು ತಡೆಯಲು ಸಲಹೆಗಳು:

ಹಿಡನ್ ಶುಗರ್ ಸೇವನೆಯನ್ನು ಕಡಿಮೆ ಮಾಡಲು, ಖರೀದಿ ಮಾಡುವ ಲೇಬಲ್‌ಗಳು ಮತ್ತು ಪದಾರ್ಥಗಳ ಪಟ್ಟಿಯನ್ನು ಎಚ್ಚರಿಕೆಯಿಂದ ಓದುವುದು ಬಹಳ ಮುಖ್ಯ. ಕಡಿಮೆ ಸಂಸ್ಕರಿತ ಆಹಾರಗಳನ್ನು ಆಯ್ಕೆ ಮಾಡುವುದು, ಸಕ್ಕರೆ ಸೇರಿಸದ ಹಾಲಿನ ಉತ್ಪನ್ನಗಳನ್ನು ಬಳಸುವುದು, ಸಕ್ಕರೆ ಹೆಚ್ಚಿರುವ ಪಾನೀಯಗಳ ಬದಲಿಗೆ ನೀರನ್ನು ಕುಡಿಯುವುದು ಮತ್ತು ಸಿಹಿ ತಿಂಡಿಗಳ ಬದಲಿಗೆ ಸಂಪೂರ್ಣ ಹಣ್ಣುಗಳನ್ನು ಸೇವಿಸುವುದು ಸಕ್ಕರೆ ಸೇವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹಿಡನ್ ಶುಗರ್ ಆಧುನಿಕ ಆಹಾರ ಪದ್ಧತಿಯ ಸಾಮಾನ್ಯ ಭಾಗವಾಗಿದ್ದರೂ, ವ್ಯಕ್ತಿಗಳಿಗೆ ಅವುಗಳ ಬಗ್ಗೆ ಹೆಚ್ಚಿನ ಅರಿವು ಇದ್ದಲ್ಲಿ ಉತ್ತಮ ಆಹಾರಗಳನ್ನು ಆಯ್ಕೆ ಮಾಡಲು ನೆರವಾಗುತ್ತದೆ. ಸಕ್ಕರೆ ಯಾವ ಆಹಾರಗಳಲ್ಲಿ ಇರಬಹುದು ಎಂಬುದನ್ನು ತಿಳಿದುಕೊಂಡು, ಆಹಾರ ಲೇಬಲ್‌ಗಳಿಗೆ ಹೆಚ್ಚಿನ ಗಮನ ನೀಡುವುದರಿಂದ, ಗ್ರಾಹಕರು ಸಕ್ಕರೆ ಸೇವನೆಯನ್ನು ನಿಯಂತ್ರಿಸಿ ಆರೋಗ್ಯ ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ZIM: ‘ವೈಫಲ್ಯದ ಭಯವಿದ್ದರೆ’; ತಂಡದ ಆಟಗಾರರಿಗೆ ಶ್ರೇಯಸ್ ಕಿವಿಮಾತು – Kannada News | Shreyas Iyer’s India T20 Captaincy: Addressing Winless Streak Ahead of Zimbabwe Series

ಶ್ರೇಯಸ್ ಅಯ್ಯರ್ (Shreyas Iyer) ಭಾರತ ಟಿ20 ತಂಡದ ನಾಯಕನಾದ ಬಳಿಕ ತಂಡ 7 ಪಂದ್ಯಗಳನ್ನಾಡಿದೆ. ಆದರೆ ಈ 7 ಪಂದ್ಯಗಳಲ್ಲೂ ತಂಡಕ್ಕೆ ಒಂದೇ ಒಂದು ಗೆಲುವು ಸಿಕ್ಕಿಲ್ಲ. ಶ್ರೇಯಸ್ ನಾಯಕನಿಗೆ ಮೊದಲಿಗೆ ಐರ್ಲೆಂಡ್ ವಿರುದ್ಧ ಕಣಕ್ಕಿಳಿದಿದ್ದರು. ಆದರೆ ಐರ್ಲೆಂಡ್, ಟೀಂ ಇಂಡಿಯಾಕ್ಕೆ ಮರ್ಮಾಘಾತ ನೀಡಿ ಸರಣಿಯ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿತು. ಈ ಆಘಾತದ ಜೊತೆಗೆ ಇಂಗ್ಲೆಂಡ್‌ ಪ್ರವಾಸ ಮಾಡಿದ ಟೀಂ ಇಂಡಿಯಾಕ್ಕೆ ಆಂಗ್ಲರು ಮತ್ತೊಂದು ಹೊಡೆತ ನೀಡಿದರು. ಇದೀಗ ಶ್ರೇಯಸ್ ಅಯ್ಯರ್ ಪಡೆ ಜಿಂಬಾಬ್ವೆ ವಿರುದ್ಧ ಮೂರು ಪಂದ್ಯಗಳ ಸರಣಿಯನ್ನು ಆಡಲು ಜಿಂಬಾಬ್ವೆಗೆ ತೆರಳಿದೆ. ಮೊದಲ ಟಿ20 ಪಂದ್ಯ ಈ ತಿಂಗಳ 23 ರಂದು ನಡೆಯಲಿದೆ. ಆದಾಗ್ಯೂ, ಈ ಮೊದಲ ಪಂದ್ಯಕ್ಕೂ ಮೊದಲು, ನಾಯಕ ಶ್ರೇಯಸ್ ಅಯ್ಯರ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

ಜಿಂಬಾಬ್ವೆಯ ಮೊದಲ ಪ್ರವಾಸವಾಗಿದೆ

ಇಂಗ್ಲೆಂಡ್‌ ಪ್ರವಾಸದಲ್ಲಿನ ಕಹಿ ಅನುಭವಗಳ ಮಾತನಾಡಿದ ಶ್ರೇಯಸ್, ‘ಇಂಗ್ಲೆಂಡ್ ವಿರುದ್ಧದ ತಮ್ಮ ಪ್ರದರ್ಶನ ಅಷ್ಟೊಂದು ಉತ್ತಮವಾಗಿಲ್ಲ, ಆದರೆ ಆ ಸೋಲುಗಳಿಂದ ನಾವು ಬಹಳಷ್ಟು ಸಕಾರಾತ್ಮಕ ವಿಷಯಗಳನ್ನು ಕಲಿತಿದ್ದೇವೆ. ತಂಡದ ಅನೇಕ ಆಟಗಾರರಿಗೆ ಇದು ಜಿಂಬಾಬ್ವೆಯ ಮೊದಲ ಪ್ರವಾಸವಾಗಿದೆ. ಸಾಧ್ಯವಾದಷ್ಟು ಬೇಗ ಅವರು ಇಲ್ಲಿನ ಪರಿಸ್ಥಿತಿಗೆ ಒಗ್ಗಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ಹೊರಗಿನ ಟೀಕೆಗಳನ್ನು ಲೆಕ್ಕಿಸದೆ ಯುವ ಆಟಗಾರರು ಆತ್ಮವಿಶ್ವಾಸದಿಂದ ಆಡುವಂತೆ ಶ್ರೇಯಸ್ ಅಯ್ಯರ್ ಸಲಹೆ ನೀಡಿದ್ದು, ‘ವೈಫಲ್ಯದ ಭಯವಿದ್ದರೆ, ಆಟಗಾರರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಆಡುತ್ತಾರೆ. ಭಯವಿಲ್ಲದಿದ್ದಾಗ ಮಾತ್ರ ನೀವು ನಿಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ. ಹೊರಗಿನ ಜನರು ಏನು ಹೇಳುತ್ತಿದ್ದಾರೆ ಎಂಬುದನ್ನು ನಾವು ಗಮನಿಸುವ ಅಗತ್ಯವಿಲ್ಲ. ನಾವು ವರ್ತಮಾನದಲ್ಲಿ ಬದುಕಬೇಕು ಮತ್ತು ತಂಡವಾಗಿ ಉತ್ತಮ ಕ್ರಿಕೆಟ್ ಆಡಬೇಕು ಎಂದಿದ್ದಾರೆ.

ತಂಡವು ಬಲಿಷ್ಠವಾಗುತ್ತದೆ

ನಿರಂತರ ವಿದೇಶಿ ಪ್ರವಾಸಗಳು ಆಟಗಾರರಿಗೆ ಸಾಕಷ್ಟು ಅನುಭವವನ್ನು ನೀಡಿವೆ ಎಂದಿರುವ ಅಯ್ಯರ್,‘ಫಲಿತಾಂಶಗಳು ನಮ್ಮ ರೀತಿಯಲ್ಲಿ ಹೋಗದಿದ್ದರೂ, ಅದು ತಂಡವನ್ನು ಎಂದಿಗಿಂತಲೂ ಹತ್ತಿರಕ್ಕೆ ತಂದಿದೆ. ಮುಂದೆ ಒಂದು ಘಟಕವಾಗಿ ಹೇಗೆ ಆಡಬೇಕೆಂದು ನಾವು ನಿರಂತರವಾಗಿ ಚರ್ಚಿಸುತ್ತಿದ್ದೇವೆ. ಈ ಸವಾಲಿನ ಅವಧಿಯನ್ನು ನಾವು ಬೇಗ ಜಯಿಸಿದಷ್ಟೂ ತಂಡವು ಬಲಿಷ್ಠವಾಗುತ್ತದೆ’ ಎಂದಿದ್ದಾರೆ. ಇದರ ಜೊತೆಗೆ ಜಿಂಬಾಬ್ವೆ ತಂಡವನ್ನು ಹೊಗಳಿದ ಅಯ್ಯರ್, ‘ತಂಡವು ಐಪಿಎಲ್ ಅನುಭವ ಹೊಂದಿರುವ ಹಲವಾರು ಆಟಗಾರರನ್ನು ಹೊಂದಿದ್ದು, ಪಂದ್ಯವನ್ನು ಕಷ್ಟಕರವಾಗಿಸಬಹುದು’ ಎಂದಿದ್ದಾರೆ.

ಇನ್ನು ಇಂಗ್ಲೆಂಡ್ ಪ್ರವಾಸದಲ್ಲಿ ನಿರೀಕ್ಷೆಯಂತೆ ಪ್ರದರ್ಶನ ನೀಡಲು ವಿಫಲರಾದ 15 ವರ್ಷದ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ ಅಯ್ಯರ್, ‘ಎಲ್ಲಾ ಯುವ ಆಟಗಾರರು ಅಭ್ಯಾಸ ಮಾಡಿದ್ದಾರೆ. ಟಿ20 ಸರಣಿಯ ನಂತರ ಅವರಿಗೆ ಒಳ್ಳೆಯ ಸಮಯ ಸಿಕ್ಕಿತು. ವೈಭವ್ ಕೂಡ ತನ್ನ ತಪ್ಪುಗಳ ಮೇಲೆ ಕೆಲಸ ಮಾಡಿರಬೇಕು, ಆದ್ದರಿಂದ ನಾನು ಅವರಿಗೆ ಹೆಚ್ಚಿನ ಸಲಹೆ ನೀಡುವ ಅಗತ್ಯವಿಲ್ಲ’ ಎಂದರು.

IND vs ENG: ‘ನಾನು ಸಂತೋಷವಾಗಿದ್ದೇನೆ’; ಹೀನಾಯ ಸೋಲಿನ ನಂತರ ಶ್ರೇಯಸ್ ಹೇಳಿದ್ದಿದು

ಮೂರು ಪಂದ್ಯಗಳ ಟಿ20 ಸರಣಿಯು ಈ ತಿಂಗಳ 23 ರಿಂದ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಪ್ರಾರಂಭವಾಗಲಿದೆ. ಈ ಸರಣಿಯ ಎಲ್ಲಾ ಮೂರು ಪಂದ್ಯಗಳು ಒಂದೇ ಸ್ಥಳದಲ್ಲಿ ನಡೆಯಲಿವೆ. ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದ ಯುವ ಭಾರತೀಯ ತಂಡವು ಈ ಸರಣಿಯಲ್ಲಿ ಜಯಗಳಿಸುವ ಮೂಲಕ ಆತ್ಮವಿಶ್ವಾಸವನ್ನು ಮರಳಿ ಪಡೆಯುವ ಗುರಿಯನ್ನು ಹೊಂದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:06 pm, Wed, 22 July 26

Source link

ಪಿಎಫ್ ಸದಸ್ಯರಿಗೆ ಪೆನ್ಷನ್; ಕನಿಷ್ಠ ಪಿಂಚಣಿಯನ್ನು 3,000 ಅಲ್ಲ, 7,500 ರೂಗೆ ಏರಿಸಬೇಕೆಂದು ಒತ್ತಾಯ; ಸರ್ಕಾರದ ಪ್ರತಿಕ್ರಿಯೆಯೇನು? – Kannada News | Demand for rising EPS minimum pension from Rs 1,000 to Rs 7,500, govt stand as of now

ನವದೆಹಲಿ, ಜುಲೈ 22: ಉದ್ಯೋಗಿಗಳ ಪಿಂಚಣಿ ಯೋಜನೆ (EPS-95) ಅಡಿಯಲ್ಲಿ ಪ್ರಸ್ತುತ ನೀಡಲಾಗುತ್ತಿರುವ ಕನಿಷ್ಠ ಮಾಸಿಕ ಪಿಂಚಣಿಯನ್ನು ₹1,000 ರಿಂದ ₹7,500 ಕ್ಕೆ ಏರಿಸಬೇಕು. ಜೊತೆಗೆ ತುಟ್ಟಿಭತ್ಯೆಯನ್ನೂ (DA) ನೀಡಬೇಕು ಎಂದು ದೇಶದ ವಿವಿಧ ಕಾರ್ಮಿಕ ಸಂಘಟನೆಗಳು ಒತ್ತಾಯ ಮಾಡುತ್ತಿವೆ. ಸರ್ಕಾರ ಕೂಡ ಕನಿಷ್ಠ ಇಪಿಎಸ್ ಪಿಂಚಣಿ ಕುರಿತು ಪ್ರಸ್ತಾಪಗಳು ಬಂದಿರುವುದನ್ನು ಒಪ್ಪಿಕೊಂಡಿದೆ. ಲೋಕಸಭೆಯಲ್ಲಿ ಸಂಸದರೊಬ್ಬರು ಕೇಳಿದ ಪ್ರಶ್ನೆಗೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಲಿಖಿತ ಉತ್ತರದಲ್ಲಿ ಈ ವಿಚಾರ ತಿಳಿಸಿದ್ದಾರೆ. ಆದರೆ, ಕನಿಷ್ಠ ಪಿಂಚಣಿ ಏರಿಸುವ ಸಂಬಂಧ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ಏನಿದು ಇಪಿಎಸ್ ಯೋಜನೆ?

ಇದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಾದ ಇಪಿಎಫ್​ಒ ನಡೆಸುತ್ತಿರುವ ಪೆನ್ಷನ್ ಸ್ಕೀಮ್. ಇಲ್ಲಿ ಇಪಿಎಫ್ ಮತ್ತು ಇಪಿಎಸ್ ಎರಡೂ ಒಟ್ಟೊಟ್ಟಿಗೆ ಚಾಲ್ತಿಯಲ್ಲಿರುತ್ತದೆ. ಉದ್ಯೋಗಿಗಳಿಗೆ ಇಪಿಎಫ್ ಅಕೌಂಟ್ ಜೊತೆಗೆ ಒಂದು ಇಪಿಎಸ್ ಅಕೌಂಟ್ ಕೂಡ ತೆರೆಯಲಾಗಿರುತ್ತದೆ. ಉದ್ಯೋಗಿಯ ಶೇ. 12ರಷ್ಟು ವೇತನವನ್ನು ಕಡಿತಗೊಳಿಸಿ, ಇಪಿಎಫ್ ಅಕೌಂಟ್​ಗೆ ಜಮೆ ಮಾಡಲಾಗುತ್ತದೆ. ಕಂಪನಿ ವತಿಯಿಂದ ನೀಡಲಾಗುವ ಶೇ. 12ರಷ್ಟು ಹಣದಲ್ಲಿ ಒಂದು ಭಾಗವು ಇಪಿಎಫ್​ ಅಕೌಂಟ್​ಗೆ ಹೋದರೆ, ಮತ್ತೊಂದು ಭಾಗವು ಇಪಿಎಸ್​ಗೆ ಸಂದಾಯವಾಗುತ್ತದೆ. ಶೇ. 12ರಲ್ಲಿ ಇಪಿಎಫ್​ಗೆ ಶೇ. 3.63, ಇಪಿಎಸ್​ಗೆ ಶೇ. 8.33 ಹಣ ಹೋಗುತ್ತದೆ. ಸರ್ಕಾರವು ಶೇ. 1.16ರಷ್ಟು ಕೊಡುಗೆ ನೀಡುತ್ತದೆ. ಜೊತೆಗೆ ಇಡೀ ಅಕೌಂಟ್​ನಲ್ಲಿರುವ ಹಣಕ್ಕೆ ಬಡ್ಡಿಯನ್ನೂ ತುಂಬಿಸುತ್ತದೆ.

ಇದನ್ನೂ ಓದಿ: ಪಿಎಲ್​ಐಗೆ ಮುಂದುವರಿದ ಭರ್ಜರಿ ಸ್ಪಂದನೆ; ಮಾರ್ಚ್ ವೇಳೆಗೆ 2.40 ಲಕ್ಷ ಕೋಟಿ ರೂ ಹೂಡಿಕೆ: ಸಚಿವ ಜಿತಿನ್ ಪ್ರಸಾದ

ಇಪಿಎಫ್ ಹಣವನ್ನು ಉದ್ಯೋಗಿಗಳು ಮಧ್ಯದಲ್ಲಿ ವಿತ್​ಡ್ರಾ ಮಾಡಿಕೊಳ್ಳಬಹುದು. ಆದರೆ, ಇಪಿಎಸ್ ಹಣವು ಪೆನ್ಷನ್​ಗೆಂದೇ ಇರುವುದು. ಉದ್ಯೋಗ ಕಳೆದುಕೊಂಡು ಎರಡು ತಿಂಗಳಿಗೂ ಹೆಚ್ಚು ಕಾಲ ನಿರುದ್ಯೋಗಿಯಾಗಿರುವ ವಿಶೇಷ ಸಂದರ್ಭದಲ್ಲಿ ಮಾತ್ರ ಇಪಿಎಸ್ ಹಣವನ್ನು ವಿತ್​ಡ್ರಾ ಮಾಡಿಕೊಳ್ಳಬಹುದು.

ಇಪಿಎಸ್ ಸ್ಕೀಮ್ ಅಡಿಯಲ್ಲಿ ಕನಿಷ್ಠ ಪಿಂಚಣಿ 1,000 ರೂ ಇದೆ. ಪಿಂಚಣಿ ಸಿಗಬೇಕಾದರೆ ಉದ್ಯೋಗಿಯ ಇಪಿಎಸ್ ಅಕೌಂಟ್ 10 ವರ್ಷ ಸಕ್ರಿಯವಾಗಿರಬೇಕು. ಅಂದರೆ, ಉದ್ಯೋಗಿ ಕನಿಷ್ಠ 10 ವರ್ಷ ಕೆಲಸ ಮಾಡಿರಬೇಕು. ಈ ಕನಿಷ್ಠ ಪಿಂಚಣಿಯನ್ನು 3,000 ರೂಗೆ ಏರಿಸಬೇಕು ಎಂದು ಇತ್ತೀಚಿನವರೆಗೂ ಕಾರ್ಮಿಕ ಸಂಘಟನೆಗಳು ಒತ್ತಾಯಿಸಿದ್ದವು. ಈಗ ಈ ಕನಿಷ್ಠ ಪೆನ್ಷನ್ ಅನ್ನು 7,500 ರೂಗೆ ಹೆಚ್ಚಿಸಬೇಕೆಂದು ಆಗ್ರಹಿಸುತ್ತಿವೆ.

ಇದನ್ನೂ ಓದಿ: ಭಾರತಕ್ಕೆ ಸರಾಗವಾಗಿ ಬರುತ್ತಿರುವ ವಿದೇಶೀ ನೇರ ಹೂಡಿಕೆ; ಕರ್ನಾಟಕಕ್ಕೆ ಭರ್ಜರಿ ಹೂಡಿಕೆ ಹೆಚ್ಚಳ; ಎರಡನೇ ಸ್ಥಾನಕ್ಕೆ ಜಿಗಿತ

ಪಿಂಚಣಿ ಏರಿಸುವ ಒತ್ತಾಯಕ್ಕೆ ಶೋಭಾ ಕರಂದ್ಲಾಜೆ ಹೇಳಿದ್ದೇನು?

ಕನಿಷ್ಠ ಪಿಂಚಣಿಯನ್ನು 7,500 ರೂಗೆ ಏರಿಸಲು ಮನವಿ ಸಲ್ಲಿಕೆಯಾಗಿದೆ ಎನ್ನುವ ವಿಚಾರವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಖಚಿತಪಡಿಸಿದ್ದಾರೆ. ಆದರೆ, ಪಿಂಚಣಿ ಏರಿಕೆಯ ಪ್ರಸ್ತಾಪವನ್ನು ಸರ್ಕಾರ ಪರಿಗಣಿಸುತ್ತಾ ಎಂಬುದನ್ನು ದೃಢಪಡಿಸಿಲ್ಲ. ಇಪಿಎಸ್ 1995 ಸ್ಕೀಮ್ ಅಡಿ ಸದ್ಯಕ್ಕೆ ಕನಿಷ್ಠ ಪಿಂಚಣಿ 1,000 ರೂ ಅನ್ನು ನೀಡಲಾಗುತ್ತಿದೆ ಎಂದು ಹೇಳುವ ಮೂಲಕ ಅವರು ಮುಂದಿನ ದಿನಗಳಲ್ಲಿ ಪಿಂಚಣಿ ಏರಿಸುವ ಸಾಧ್ಯತೆಯನ್ನು ತಳ್ಳಿ ಹಾಕಿಲ್ಲ. ಗಮನಿಸಬೇಕಾದ ಸಂಗತಿ ಎಂದರೆ, ಹೊಸ ಇಪಿಎಸ್ 2026 ಸ್ಕೀಮ್​ನಲ್ಲಿ ಹೆಚ್ಚಿನ ಪಿಂಚಣಿ ಅವಕಾಶವನ್ನು ಸೇರಿಸಲಾಗಿದೆ. ಅಂದರೆ, ಪಿಂಚಣಿ ಏರಿಸುವ ಇರಾದೆ ಸರ್ಕಾರಕ್ಕಿರುವುದು ಸ್ಪಷ್ಟವಿದೆ. ಆದರೆ, ಎಷ್ಟು ಏರಿಸುತ್ತದೆ ಎಂಬುದು ಗೊತ್ತಾಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 5:38 pm, Wed, 22 July 26

Source link

‘ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು’: ಬಿಕೆ ಹರಿಪ್ರಸಾದ್ – Kannada News | BJP Started the Egg Throwing Culture; Says BK Hariprasad

ಬೆಂಗಳೂರು, ಜುಲೈ 22: ಕೆಪಿಸಿಸಿ ಕಚೇರಿ ಬಳಿ ಶಾಸಕ ಬಿ.ಪಿ.ಹರೀಶ್​ ಮೇಲೆ ಮೊಟ್ಟೆ ಎಸೆತ ಪ್ರಕರಣ ಸದ್ಯ ಬಿಜೆಪಿ ಮತ್ತು ಕಾಂಗ್ರೆಸ್​​ ಮಧ್ಯೆ ಜಟಾಪಟಿಗೆ ಕಾರಣವಾಗಿದೆ. ‘ಕೆಪಿಸಿಸಿ ಕಚೇರಿ ಬಳಿ ಬಂದಾಗ ಬಿಜೆಪಿಯವರೇ ಮೊಟ್ಟೆ ಹೊಡೆದಿದ್ದಾರೆ. ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್​ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮೊದಲು ಅವರು ಹೊಡೆದಿದ್ದು, ಆನಂತರ ನಮ್ಮವರು ಹೊಡೆದಿದ್ದಾರೆ. ಬಿಜೆಪಿಯಲ್ಲೇ ರೌಡಿಗಳ ಮೋರ್ಚಾ ಇರೋದು. ಬಿಜೆಪಿ ಕಚೇರಿಗೆ ಪ್ರತಿಭಟನೆಗೆ ಹೋಗಿದ್ವಿ, ಆಗ ಮೊಟ್ಟೆ ಹೊಡೆದ್ರಾ? ಕಾಂಗ್ರೆಸ್ ಕಚೇರಿ ಅಂದರೆ ಒಂದು ದೇವಾಲಯ ಇದ್ದಂತೆ. ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು ಸೆಲ್ಪ್ ಡಿಫೆನ್ಸ್ ಮಾಡಿದ್ದಾರೆ’ ಎಂದು ಸಮರ್ಥನೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version