Headlines

ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಲಾರಿ ಪಲ್ಟಿ; ಕ್ಲೋರೈಡ್ ಸೋರಿಕೆಯಿಂದ ಆತಂಕ, ಭಾರೀ ಟ್ರಾಫಿಕ್ ಜಾಮ್ – Kannada News | Chemical Laden Lorry Overturns Near Nelamangala, Chloride Leak Triggers Traffic Jam on Tumakuru Bengaluru Highway

ಬೆಂಗಳೂರು ಗ್ರಾಮಾಂತರ, ಜುಲೈ 22: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕುಲುವನಹಳ್ಳಿ ಗ್ರಾಮದ ಬಳಿ ಕ್ಲೋರೈಡ್ ಕೆಮಿಕಲ್ ತುಂಬಿಕೊಂಡು ಸಾಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಕೆಮಿಕಲ್ ಸೋರಿಕೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಅಪಘಾತದಿಂದ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಒಂದು ಕಿಲೋಮೀಟರ್‌ವರೆಗೆ ವಾಹನ ಸಂಚಾರ ದಟ್ಟಣೆ ಉಂಟಾಯಿತು. ಮಾಹಿತಿ ತಿಳಿದು ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸುವ ಕಾರ್ಯಾಚರಣೆ ಕೈಗೊಂಡಿದ್ದಾರೆ. ವರದಿ:…

Read More

National Mango Day 2026: ರಾಷ್ಟ್ರೀಯ ಮಾವು ದಿನದ ಇತಿಹಾಸ, ಮಹತ್ವವನ್ನು ತಿಳಿದುಕೊಳ್ಳಿ – Kannada News | National Mango Day 2026: Why is National Mango Day celebrated? Here’s the information

ರಾಷ್ಟ್ರೀಯ ಮಾವು ದಿನImage Credit source: Getty Images ಭಾರತದಲ್ಲಿ ಮಾವು (Mango) ಕೇವಲ ಹಣ್ಣಲ್ಲ, ಬದಲಾಗಿ ಅದು ಹಣ್ಣುಗಳ ರಾಜ. ಅಷ್ಟೇ ಅಲ್ಲದೆ ಇದು ರಾಷ್ಟ್ರೀಯ ಹಣ್ಣು ಕೂಡ ಹೌದು. ಬೇಸಿಗೆಯ ಆಗಮನದೊಂದಿಗೆ ವಿವಿಧ ಪ್ರಭೇದದ ಮಾವಿನ ಹಣ್ಣುಗಳು ಕಾಣಿಸಿಕೊಳ್ಳುತ್ತವೆ. ಭಾರತದಲ್ಲಿನ ಈ ವಿವಿಧ ಪ್ರಭೇದ ಮಾವುಗಳಿಗೆ ವಿಶ್ವಾದ್ಯಂತ ಬೇಡಿಕೆಯಿದ್ದು, ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಮಾವು ಬೆಳೆಯುವ ಮತ್ತು ರಫ್ತು ಮಾಡುವ ರಾಷ್ಟ್ರವಾಗಿದೆ. ಈ ಹಣ್ಣಿನ ಜನಪ್ರಿಯತೆ, ಅವುಗಳ ಪ್ರಬೇಧ, ಸಾಂಸ್ಕೃತಿಕ ಮಹತ್ವದ ಬಗ್ಗೆ…

Read More

ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗುತ್ತಿದೆ ‘ಮಾಲ್ವಾಣ್’ ಯುದ್ಧನೌಕೆ: ಸ್ವದೇಶಿ ನಿರ್ಮಿತ ಹಡಗಿನ ವಿಶೇಷಗಳೇನು? ಇಲ್ಲಿದೆ ನೋಡಿ – Kannada News | INS Malvan to Join Indian Navy Today at Karwar: Indigenous Warship with Advanced Anti Submarine Capabilities

ಕಾರವಾರ, ಜುಲೈ 22: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಏಷ್ಯಾದ ಅತಿದೊಡ್ಡ ನೌಕಾನೆಲೆ ಐಎನ್‌ಎಸ್ ಕದಂಬದಲ್ಲಿ ಇಂದು ಭಾರತೀಯ ನೌಕಾಪಡೆಗೆ ಮತ್ತೊಂದು ಸ್ವದೇಶಿ ನಿರ್ಮಿತ ಯುದ್ಧನೌಕೆ ‘ಐಎನ್‌ಎಸ್ ಮಾಲ್ವಾಣ್’ ಸೇರ್ಪಡೆಯಾಗಲಿದೆ. ಕೇರಳದ ಕೊಚ್ಚಿ ಶಿಪ್‌ಯಾರ್ಡ್‌ನಲ್ಲಿ ಸುಮಾರು ಶೇ 80ರಷ್ಟು ಸ್ವದೇಶಿ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ಈ ನೌಕೆ, ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸಲಿದೆ. 78 ಮೀಟರ್ ಉದ್ದ, 11.26 ಮೀಟರ್ ಅಗಲ ಹಾಗೂ 2.7 ಮೀಟರ್ ಆಳ ಹೊಂದಿರುವ ಈ ಯುದ್ಧನೌಕೆ ಗಂಟೆಗೆ 25 ನಾಟಿಕಲ್…

Read More

ಪ್ರಶ್ನೆಪತ್ರಿಕೆ ಸೋರಿಕೆ ಇಡೀ ದೇಶದ ಸಮಸ್ಯೆ, ತಡೆಯಲು ಗೆಹ್ಲೋಟ್ ಯತ್ನಿಸಿದರೂ ಸಾಧ್ಯವಾಗಲಿಲ್ಲ, ಪ್ರಿಯಾಂಕಾ ಗಾಂಧಿ ಮುಕ್ತ ಮಾತು – Kannada News | Exam Paper Leaks: India’s Crisis and Priyanka Gandhi’s Candid Admission

ನವದೆಹಲಿ, ಜುಲೈ 22: ದೇಶದಲ್ಲಿ ಸಾಲು ಸಾಲು ಪರೀಕ್ಷಾ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ(Question Paper Leak) ಪ್ರಕರಣಗಳು ಯುವಕರನ್ನು ತೀವ್ರ ನಿರಾಶೆಗೆ ತಳ್ಳಿವೆ. ಸರ್ಕಾರಗಳು ಬದಲಾದರೂ, ರಾಜಕೀಯ ಪಕ್ಷಗಳು ಅಧಿಕಾರದಲ್ಲಿದ್ದಾಗ ಒಂದಲ್ಲ ಒಂದು ರೀತಿಯಲ್ಲಿ ಈ ‘ಸಾಂಸ್ಥಿಕ ಅಕ್ರಮ’ಗಳನ್ನು ತಡೆಯಲು ವಿಫಲವಾಗುತ್ತಿವೆ. ಅಧಿಕಾರದಲ್ಲಿದ್ದಾಗ ತಡೆಯಲಾಗದ ವಿಷಯಗಳನ್ನು, ವಿರೋಧ ಪಕ್ಷದಲ್ಲಿದ್ದಾಗ ಅದೇ ವಿಷಯವನ್ನು ಎತ್ತಿ ಹಿಡಿಯುವ ರಾಜಕೀಯ ಚಕ್ರ ನಿರಂತರವಾಗಿ ನಡೆಯುತ್ತಿದೆ. ಈ ಸತ್ಯವನ್ನು ಸ್ವತಃ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರೇ ಮುಕ್ತವಾಗಿ ಒಪ್ಪಿಕೊಂಡಿದ್ದು, ರಾಜಸ್ಥಾನದ…

Read More

ದುಲೀಪ್ ಟ್ರೋಫಿಗೆ ಪಶ್ಚಿಮ ವಲಯ ತಂಡ ಪ್ರಕಟ – Kannada News | Ruturaj Gaikwad to lead West Zone in Duleep Trophy

ದೇಶೀಯ ಟೆಸ್ಟ್ ಟೂರ್ನಿ ದುಲೀಪ್ ಟ್ರೋಫಿಗಾಗಿ ವೆಸ್ಟ್ ಝೋನ್ (ಪಶ್ಚಿಮ ವಲಯ) ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡವನ್ನು ರುತುರಾಜ್ ಗಾಯಕ್ವಾಡ್ ಮುನ್ನಡೆಸಲಿದ್ದು, ಉಪನಾಯಕನಾಗಿ ಮುಂಬೈನ ಎಡಗೈ ಸ್ಪಿನ್ ಆಲ್-ರೌಂಡರ್ ಶಮ್ಸ್ ಮುಲಾನಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ತಂಡದಲ್ಲಿ ಸರ್ಫರಾಝ್, ಪೃಥ್ವಿ ಶಾ, ಶಾರ್ದೂಲ್ ಠಾಕೂರ್ ಸೇರಿದಂತೆ ಸ್ಟಾರ್ ಆಟಗಾರರ ದಂಡೇ ಕಾಣಿಸಿಕೊಂಡಿದೆ. ಪೃಥ್ವಿ ಶಾ ಕಂಬ್ಯಾಕ್, ಆಯುಷ್ ಔಟ್: ಕಳೆದ ಸೀಸನ್‌ನಲ್ಲಿ ತಂಡದಿಂದ ಹೊರಗುಳಿದಿದ್ದ ಮುಂಬೈನ ಡ್ಯಾಶಿಂಗ್ ಓಪನರ್ ಪೃಥ್ವಿ ಶಾ, ರಣಜಿ ಟ್ರೋಫಿಯಲ್ಲಿ 537…

Read More

Kalasha Sthapana: ಯಾವುದೇ ಶುಭ ಕಾರ್ಯಗಳಲ್ಲಿ ಕಲಶ ಸ್ಥಾಪನೆ ಯಾಕೆ ಮುಖ್ಯ ಗೊತ್ತಾ? ಆಧ್ಯಾತ್ಮಿಕ ಮಹತ್ವ ಇಲ್ಲಿದೆ – Kannada News | Kalasha Sthapana: Significance and Rituals in Sanatana Dharma for Auspicious Events

ಸನಾತನ ಧರ್ಮದಲ್ಲಿ ಯಾವುದೇ ಪೂಜೆ, ಗೃಹಪ್ರವೇಶ, ಮದುವೆ, ಸತ್ಯನಾರಾಯಣ ವ್ರತ ಅಥವಾ ನವರಾತ್ರಿಯಂತಹ ಶುಭ ಕಾರ್ಯಕ್ರಮಗಳನ್ನು ಕೈಗೊಳ್ಳುವಾಗ ಕಲಶ ಸ್ಥಾಪನೆ ಮಾಡುವುದು ಅತ್ಯಂತ ಮುಖ್ಯವಾದ ಪದ್ಧತಿಯಾಗಿದೆ. ಕಲಶವಿಲ್ಲದೆ ಯಾವುದೇ ದೈವಿಕ ಕಾರ್ಯಗಳು ಪೂರ್ಣಗೊಳ್ಳುವುದಿಲ್ಲ ಎಂಬ ನಂಬಿಕೆಯಿದೆ. ಕಲಶವನ್ನು ಶುದ್ಧತೆ, ಮಂಗಳಕರತೆ, ಸಮೃದ್ಧಿ, ಸೃಷ್ಟಿ ಮತ್ತು ದೈವಿಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕಾಗಿ ಯಾವುದೇ ಪೂಜಾ ಸಮಾರಂಭಗಳಲ್ಲಿ ಪ್ರಥಮ ಆದ್ಯತೆಯನ್ನು ಕಲಶಕ್ಕೆ ನೀಡಲಾಗುತ್ತದೆ. ಹಿಂದೂ ಧರ್ಮದ ಪುರಾಣಗಳಲ್ಲಿ ಕಲಶಗಳ ಮಹತ್ವ: ಹಿಂದೂ ಧರ್ಮದ ಪುರಾಣಗಳ ಪ್ರಕಾರ, ಕಲಶವನ್ನು…

Read More

ನೀಟ್ ಪರೀಕ್ಷಾ ಅಕ್ರಮದ ತೀವ್ರ ಪ್ರತಿಭಟನೆ ನಡುವೆ ವೈರಲ್ ಆಯ್ತು ಅರವಿಂದ್ ಅವರ ಎರಡು ವರ್ಷಗಳ ಹಳೆಯ ಭವಿಷ್ಯವಾಣಿ – Kannada News | NEET Protests: Aravind’s Viral Prediction for Modi 3.0 Scams Comes True

ನವದೆಹಲಿ, ಜುಲೈ 22: ದೇಶಾದ್ಯಂತ ಈಗ ನೀಟ್ ಪರೀಕ್ಷೆ(NEET Exam) ಸೋರಿಕೆ, ವಿದ್ಯಾರ್ಥಿಗಳ ಆಕ್ರೋಶ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ಬರೋಬ್ಬರಿ ಎರಡು ವರ್ಷಗಳ ಹಿಂದೆ ಮಾಡಲಾಗಿದ್ದ ಪೋಸ್ಟ್​ ಈಗ ಭಾರಿ ವೈರಲ್ ಆಗುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. 2024ರ ಜೂನ್ 8ರಂದು, ಅಂದರೆ ನರೇಂದ್ರ ಮೋದಿ ಅವರ 3.0 ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಅರವಿಂದ್ ಎಂಬ ಎಕ್ಸ್​ ಬಳಕೆದಾರರು ಮೋದಿ ಆಡಳಿತಾವಧಿಯಲ್ಲಿ…

Read More

ಪೂರನ್-ಕರನ್ ಸಿಡಿಲಬ್ಬರ: MI ಲಂಡನ್ ಶುಭಾರಂಭ – Kannada News | MI London vs Sunrisers Leeds, 1st Match Highlights

ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಲೀಗ್ ಕ್ರಿಕೆಟ್ ಟೂರ್ನಿ ಶುರುವಾಗಿದೆ. ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಈ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಎಂಐ ಲಂಡನ್ ತಂಡವು ಭರ್ಜರಿ ಜಯದೊಂದಿಗೆ ಶುಭಾರಂಭ ಮಾಡಿದೆ. ಸನ್​ರೈಸರ್ಸ್ ಲೀಡ್ಸ್​ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಎಂಐ ಲಂಡನ್ ತಂಡದ ನಾಯಕ ಸ್ಯಾಮ್ ಕರನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಲೀಡ್ಸ್ ತಂಡಕ್ಕೆ ಆರಂಭಿಕ ದಾಂಡಿಗ ಮಿಚೆಲ್ ಮಾರ್ಷ್ (41 ರನ್, 27…

Read More

145 ವರ್ಷ ಹಳೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿಕೆಗೆ ನೆರವಾಗ್ತಿದೆ ಶಿಕ್ಷಕರೇ ಅಭಿವೃದ್ಧಿಪಡಿಸಿದ ಎಐ ವೆಬ್​ಸೈಟ್! – Kannada News | Karnataka’s 145 Year Old Government School Uses AI Website for Smart Learning, Teachers Develop Digital Education Platform

ಶಿಕ್ಷಕರೇ ರೂಪಿಸಿರುವ ಎಐ ವೆಬ್​ಸೈಟ್​ನ ಮುಖಪುಟ ಬೆಂಗಳೂರು, ಜುಲೈ 22: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರ ತಾಲೂಕಿನ ಚೆಂಡಿಯದಲ್ಲಿರುವ 145 ವರ್ಷಗಳ ಇತಿಹಾಸ ಹೊಂದಿರುವ ಸರ್ಕಾರಿ ಪ್ರಾಥಮಿಕ ಶಾಲೆಯೊಂದು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟಿದೆ. ಕೇವಲ 30ಕ್ಕೂ ಕಡಿಮೆ ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ಬೋಧನೆ ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳ ಕಲಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಶಿಕ್ಷಕರೇ ಎಐ ಆಧಾರಿತ ಶಿಕ್ಷಣ ವೆಬ್‌ಸೈಟ್ ಅಭಿವೃದ್ಧಿಪಡಿಸಿದ್ದಾರೆ. ಕರ್ನಾಟಕದ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ…

Read More

‘ದಿ ಒಡೆಸ್ಸಿ’ ಅಬ್ಬರ; ಈ ಐಕಾನಿಕ್ ಥಿಯೇಟರ್‌ನಲ್ಲಿ ಎರಡು ತಿಂಗಳ ಶೋಗಳು ಹೌಸ್​​ಫುಲ್ – Kannada News | Christopher Nolan The Odyssey Sparks Global Frenzy: BFI IMAX Sold Out Until September

ಹಾಲಿವುಡ್‌ನ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಸಿನಿಮಾಗಳು ವಿಶ್ವಾದ್ಯಂತ ಗಮನ ಸೆಳೆಯುತ್ತವೆ. ಅವರ ಸಿನಿಮಾಗೆ ಕಾಯುವಿಕೆ ದೊಡ್ಡದಾಗಿಯೇ ಇರುತ್ತದೆ. ಈಗ ಅವರ ನಿರ್ದೇಶನದ ‘ದಿ ಒಡೆಸ್ಸಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಬೇಟೆ ಮುಂದುವರಿಸಿದೆ. ಈ ಸಿನಿಮಾ ಭಾರತದಲ್ಲೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈಗ ಸಿನಿಮಾ ಒಂದು ಅಚ್ಚರಿಯ ಘಟನೆಗೆ ಸಾಕ್ಷಿಯಾಗಿದೆ. ಲಂಡನ್ ಥಿಯೇಟರ್ ಲಂಡನ್‌ನ ಪ್ರತಿಷ್ಠಿತ ಬಿಎಫ್‌ಐ ಐಮ್ಯಾಕ್ಸ್ (BFI IMAX – 70mm) ಚಿತ್ರಮಂದಿರದಲ್ಲಿ ‘ದಿ ಒಡೆಸ್ಸಿ’ ಸಿನಿಮಾದ ಕ್ರೇಜ್ ಹೊಸ ಇತಿಹಾಸ…

Read More