ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ: ಬೃಹತ್​​ ಪ್ರತಿಭಟನೆ – Kannada News | Koppala Farmers Intensify Protest Against Baldota Factory Amidst Environmental Concerns

ಕೊಪ್ಪಳ, ಜುಲೈ 21: ಬಲ್ಡೋಟಾ ಕಾರ್ಖಾನೆಯ ವಿರುದ್ಧ ರೈತರು, ಪರಿಸರ ಹೋರಾಟಗಾರರು ಮತ್ತು ವಿವಿಧ ರಾಜಕೀಯ ಹಾಗೂ ಸಾಮಾಜಿಕ ಸಂಘಟನೆಗಳು ಒಗ್ಗೂಡಿ ಬೃಹತ್ ಪ್ರತಿಭಟನೆ ನಡೆಸಿವೆ. ಬಲ್ಡೋಟಾ ಕಾರ್ಖಾನೆ ಎದುರು ಪ್ರತಿಭಟನಾ ಸಮಾವೇಶ ನಡೆಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿ 63ರಲ್ಲಿಯೇ ರೈತರು ಕುರ್ಚಿಗಳನ್ನು ಹಾಕಿದ ಪರಿಣಾಮ, ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ. ಹೆದ್ದಾರಿಯಲ್ಲಿ ಚೇರ್​​ಗಳನ್ನು ಹಾಕದಂತೆ ಪ್ರತಿಭಟನಾಕಾರರಿಗೆ ಪೊಲೀಸರು ಮನವಿ ಮಾಡಿದರೂ ಹೋರಾಟಗಾರರು ಮಾತ್ರ ಡೋಂಟ್​​ಕೇರ್​​ ಎಂದಿದ್ದಾರೆ. ಹೀಗಾಗಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ರೈತರ ‘ಕಿಸಾನ್ ಘಾಟ್’ ಚಲೋ: ಶಂಭು, ಸಿಂಘು ಗಡಿಗಳು ಬಂದ್, ನೂರಾರು ರೈತರು ಪೊಲೀಸ್ ವಶಕ್ಕೆ – Kannada News | Farmers Delhi March: India US Trade Deal Protest Shuts Shambhu, Singhu Borders

ಚಂಡೀಗಢ, ಜುಲೈ 21: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ಪಂಜಾಬ್, ಹರಿಯಾಣ ಮತ್ತು ಇತರ ರಾಜ್ಯಗಳ ರೈತರು(Farmers) ದೆಹಲಿಯ ಕಿಸಾನ್ ಘಾಟ್‌ನತ್ತ ಬೃಹತ್ ಮೆರವಣಿಗೆ ಆರಂಭಿಸಿದ್ದಾರೆ. ರೈತರ ಸಂಚಾರವನ್ನು ತಡೆಯಲು ಹರಿಯಾಣ ಮತ್ತು ದೆಹಲಿ ಪೊಲೀಸರು ಗಡಿ ಪ್ರದೇಶಗಳಲ್ಲಿ ಭಾರಿ ಬ್ಯಾರಿಕೇಡ್‌ಗಳನ್ನು ಹಾಕಿ ಕಟ್ಟೆಚ್ಚರ ವಹಿಸಿದ್ದಾರೆ.

ರೈತರು ಬೆಳಗಿನ ಜಾವವೇ ದೆಹಲಿಯತ್ತ ಹೊರಟ ಹಿನ್ನೆಲೆಯಲ್ಲಿ, ಅಂಬಾಲಾದ ಶಂಭು ಗಡಿ ಹಾಗೂ ಸೋನಿಪತ್‌ನ ಸಿಂಘು ಗಡಿಗಳನ್ನು ಪೊಲೀಸರು ಸಂಪೂರ್ಣವಾಗಿ ಮುಚ್ಚಿದ್ದಾರೆ. ಶಂಭು ಗಡಿಯಲ್ಲಿ ರಾತ್ರೋರಾತ್ರಿ ದೊಡ್ಡ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರಿಂದ ದೆಹಲಿ-ಅಮೃತಸರ-ಚಂಡೀಗಢ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಸಾರ್ವಜನಿಕರು ತೀವ್ರ ಪರದಾಡುವಂತಾಗಿದೆ.

ಕುರುಕ್ಷೇತ್ರದ ಶಹಾಬಾದ್ ಮತ್ತು ಜ್ಯೋತಿಸರ್ ಚೆಕ್‌ಪೋಸ್ಟ್‌ಗಳಲ್ಲಿ ದೆಹಲಿಯತ್ತ ಸಾಗುತ್ತಿದ್ದ ರೈತರ ಬಸ್‌ಗಳನ್ನು ತಡೆದು, ನೂರಾರು ರೈತರನ್ನು ಪೊಲೀಸರು ವಶಕ್ಕೆ ಪಡೆದು ಪೊಲೀಸ್ ಲೈನ್‌ಗಳಿಗೆ ಕರೆದೊಯ್ದಿದ್ದಾರೆ. ಬಿಕೆಯು (BKU) ಪೆಹೋವಾ ವಕ್ತಾರ ಪ್ರಿನ್ಸ್ ವಾರೈಚ್ ಮಾತನಾಡಿ, “ಜೂನ್ 30 ರಂದು ‘ದೇಶ್ ಬಚಾವೋ ಮೋರ್ಚಾ’ ರಚಿಸಲಾಗಿದ್ದು, ಭಾರತ-ಯುಎಸ್ ವ್ಯಾಪಾರ ಒಪ್ಪಂದದ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸಲು ರೈತರು ದೆಹಲಿಗೆ ತೆರಳುತ್ತಿದ್ದರು. ಆದರೆ ಸರ್ಕಾರ ಚಳವಳಿಯನ್ನು ಹತ್ತಿಕ್ಕಲು ಯತ್ನಿಸುತ್ತಿದೆ” ಎಂದು ಆರೋಪಿಸಿದ್ದಾರೆ.

ಮತ್ತಷ್ಟು ಓದಿ: ಕರ್ನಾಟಕದ ರೈತರು ಹಾಗೂ ಉದ್ಯಮಿಗಳಿಗೆ ಯುಕೆ ಗಿಫ್ಟ್: ಬ್ರಿಟನ್ ಮಾರುಕಟ್ಟೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ, ಕಾಫಿಗೆ ಸಿಗಲಿದೆ ಭಾರಿ ಡಿಮ್ಯಾಂಡ್

ಈಗಾಗಲೇ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಗುರ್ನಾಮ್ ಸಿಂಗ್ ಚದುನಿ ಹಾಗೂ ವಕ್ತಾರ ರಾಕೇಶ್ ಬೈನ್ಸ್ ಸೇರಿದಂತೆ ಹಲವಾರು ಪ್ರಮುಖ ರೈತ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ.

ವಿಡಿಯೋ

ಶಾಂತಿ ಕಾಪಾಡಲು ಪೊಲೀಸ್ ಮನವಿ
ಕರ್ನಾಲ್ ಡಿಎಸ್‌ಪಿ ಮನೋಜ್ ಕುಮಾರ್ ಮಾತನಾಡಿ, ಭದ್ರತಾ ಕಾರಣಗಳಿಗಾಗಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಗಡಿಗಳಲ್ಲಿ ಕಟ್ಟುನಿಟ್ಟಿನ ಭದ್ರತೆ ಒದಗಿಸಲಾಗಿದೆ. ಸಾರ್ವಜನಿಕರು ಹಾಗೂ ರೈತರು ಶಾಂತಿ ಕಾಪಾಡಬೇಕು ಮತ್ತು ಪೊಲೀಸರೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:51 am, Tue, 21 July 26

Source link

ಮತ್ತೆ ಹಾಡಲಿರುವ ಅರಿಜಿತ್ ಸಿಂಗ್, ನಿವೃತ್ತಿ ನಿರ್ಧಾರ ಮುರಿದಿದ್ದೇಕೆ? – Kannada News | Arijit Singh breaks his retirement for Awarapan 2 movie song

ಅರಿಜಿತ್ ಸಿಂಗ್ (Arijit Singh) ಭಾರತದ ಸೂಪರ್ ಸ್ಟಾರ್ ಗಾಯಕ. ಅವರಷ್ಟು ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಗಾಯಕ ಪ್ರಸ್ತುತ ಭಾರತದಲ್ಲಿಲ್ಲ. ಹಲವಾರು ಅದ್ಭುತ ಹಾಡುಗಳಿಗೆ ಧ್ವನಿ ನೀಡಿರುವ ಅರಿಜಿತ್, ಸಾವಿರಾರು ಹಿಟ್​​ ಹಾಡುಗಳನ್ನು ಹಾಡಿದ್ದಾರೆ. ಆದರೆ ಕೆಲ ತಿಂಗಳ ಹಿಂದೆ ಅರಿಜಿತ್ ಸಿಂಗ್ ಅವರು ಅಚಾನಕ್ಕಾಗಿ ಗಾಯನಕ್ಕೆ ನಿವೃತ್ತಿ ಘೋಷಣೆ ಮಾಡಿದರು. ತಾವು ಇನ್ನು ಮುಂದೆ ಸಿನಿಮಾಗಳಲ್ಲಿ ಹಾಡುವುದಿಲ್ಲ ಎಂದಿದ್ದರು. ಸ್ಟಾರ್ ನಟ ಆಮಿರ್ ಖಾನ್ ಸೇರಿ ಇನ್ನೂ ಹಲವರು ಅವರ ಮನವೊಲಿಸಲು ಯತ್ನಿಸಿದರಾದರೂ ಸಫಲರಾಗಿರಲಿಲ್ಲ. ಆದರೆ ಇದೀಗ ಅರಿಜಿತ್ ಸಿಂಗ್ ತಮ್ಮ ನಿವೃತ್ತಿಯ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ.

‘ಆವಾರಾಪನ್ 2’ ಸಿನಿಮಾಕ್ಕಾಗಿ ಅರಿಜಿತ್ ಸಿಂಗ್ ತಮ್ಮ ನಿವೃತ್ತಿ ಮುರಿದಿದ್ದಾರೆ ಎನ್ನಲಾಗುತ್ತಿದೆ. 2007 ರಲ್ಲಿ ಬಿಡುಗಡೆ ಆಗಿದ್ದ ಇಮ್ರಾನ್ ಹಶ್ಮಿ ನಟನೆಯ ‘ಆವಾರಾಪನ್’ ಸಿನಿಮಾದ ಎರಡನೇ ಭಾಗ ಇದೀಗ ನಿರ್ಮಾಣವಾಗಿದೆ. 2007ರ ‘ಆವಾರಾಪನ್’ ಸಿನಿಮಾದ ಹಾಡುಗಳು ದೊಡ್ಡ ಹಿಟ್ ಆಗಿದ್ದವು. ಇದೀಗ ‘ಆವಾರಾಪನ್ 2’ ಸಿನಿಮಾದ ಹಾಡುಗಳ ಮೇಲೆ ವಿಶೇಷ ಕಾಳಜಿಯನ್ನು ವಹಿಸಲಾಗಿದ್ದು, ಇದೇ ಕಾರಣಕ್ಕೆ ಅರಿಜಿತ್ ಸಿಂಗ್ ಅವರಿಂದಲೇ ಹಾಡು ಹಾಡಿಸಲಾಗಿದೆ.

ಇದನ್ನೂ ಓದಿ:ಅರಿಜಿತ್ ಸಿಂಗ್ ನಿವೃತ್ತಿ ಬೆನ್ನಲ್ಲೇ ಶಾಕಿಂಗ್ ಹೇಳಿಕೆ ನೀಡಿದ ಶ್ರೇಯಾ ಘೋಷಾಲ್

ಅರಿಜಿತ್ ಸಿಂಗ್ ಹಾಡಿರುವ ‘ಆವಾರಾಪನ್ 2’ ಸಿನಿಮಾದ ಹಾಡು ಇಂದು ಬಿಡುಗಡೆ ಆಗಲಿದೆ. ಆದರೆ ಬಿಡುಗಡೆಗೆ ಮುಂಚೆಯೇ ಹಾಡು ಸೂಪರ್ ಹಿಟ್ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಸಿನಿಮಾಕ್ಕೆ ಅಮಾಲ್ ಮಲ್ಲಿಕ್ ಸಂಗೀತ ನೀಡಿದ್ದು, ಕೆಲವು ಮಧುರವಾದ ಹಾಡುಗಳನ್ನು ಸಿನಿಮಾಕ್ಕಾಗಿ ಮಾಡಿದ್ದಾರೆ. ಅದರಲ್ಲಿ ಒಂದು ಹಾಡನ್ನು ಅರಿಜಿತ್ ಸಿಂಗ್ ಹಾಡಿದ್ದಾರೆ.

‘ಆವಾರಾಪನ್ 2’ ಸಿನಿಮಾನಲ್ಲಿ ಇಮ್ರಾನ್ ಹಶ್ಮಿ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 2007 ರ ‘ಆವಾರಾಪನ್’ ಸಿನಿಮಾದ ಮ್ಯಾಜಿಕ್ ಅನ್ನೇ ಪುನರ್ಸೃಷ್ಟಿಸಲು ಚಿತ್ರತಂಡ ಯತ್ನಿಸುತ್ತಿದೆ. ‘ಆವಾರಾಪನ್’ ಸಿನಿಮಾದ ಹಾಡುಗಳಿಗೆ ದೊಡ್ಡ ಅಭಿಮಾನಿ ವರ್ಗವೇ ಇದೆ. ಇದೀಗ ಅದೇ ಮ್ಯಾಜಿಕ್ ಅನ್ನು ‘ಆವಾರಾಪನ್ 2’ ಸಿನಿಮಾ ಮಾಡುತ್ತದೆಯೋ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಡಿ.ಕೆ.ಶಿವಕುಮಾರ್‌ ಬೆಳಗಾವಿ ಪ್ರವಾಸದ ವೇಳೆ ಕರ್ತವ್ಯಲೋಪ: ಡಿಹೆಚ್‌ಒಗೆ ಶೋಕಾಸ್​​ ನೋಟಿಸ್​​ – Kannada News | Belagavi DHO Issued Show Cause Notice for Failing to Arrange Advanced Life Support Ambulance During CM’s Visit

ಬೆಳಗಾವಿ ಡಿಹೆಚ್‌ಒಗೆ ಶೋಕಾಸ್​​ ನೋಟಿಸ್​​Image Credit source: Tv9 Kannada

ಬೆಂಗಳೂರು, ಜುಲೈ 21: ಸಿಎಂ ಡಿ.ಕೆ. ಶಿವಕುಮಾರ್‌ ಬೆಳಗಾವಿ ಪ್ರವಾಸದ ವೇಳೆ ಡಿಹೆಚ್‌ಒ ಯಡವಟ್ಟು ಮಾಡಿದ್ದು, ಅಡ್ವಾನ್ಸ್ ಲೈಫ್‌ ಸಪೋರ್ಟ್ ಆ್ಯಂಬುಲೆನ್ಸ್ ಮತ್ತು ತಜ್ಞ ವೈದ್ಯರ ನೇಮಿಸದೇ ಬೇಜವಾಬ್ದಾರಿ ತೋರಿರುವ ಆರೋಪ ಕೇಳಿಬಂದಿದೆ. ಸರ್ಕಾರ ನಿರ್ದೇಶನವಿದ್ದರೂ ಲೈಫ್‌ ಸಪೋರ್ಟ್ ಆ್ಯಂಬುಲೆನ್ಸ್ ನೀಡದೆ ಸಾಮಾನ್ಯ ಆ್ಯಂಬುಲೆನ್ಸ್ ನಿಯೋಜಿಸದ ಜೊತೆಗೆ ವೈದ್ಯಕೀಯ ತಂಡದೊಂದಿಗೆ ನಿರಂತರ ಸಂಪರ್ಕ ಸಾಧಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಅಲ್ಲದೆ, ಸಿಎಂ ವಾಸ್ತವ್ಯ ಸ್ಥಳದಲ್ಲಿ ತಜ್ಞ ವೈದ್ಯರ ಬದಲು ಪಿಜಿ ವೈದ್ಯರ ನಿಯೋಜನೆ ಮಾಡುವ ಮೂಲಕ ಕರ್ತವ್ಯಲೋಪ ಎಸಗಿರುವ ಹಿನ್ನೆಲೆ ಶಿಷ್ಟಾಚಾರ ಉಲ್ಲಂಘಿಸಿದ ಡಿಹೆಚ್‌ಒ ಈಶ್ವರ ಗಡಾದಗೆ ಶೋಕಾಸ್ ನೋಟಿಸ್ ನೀಡಲಾಗಿದೆ.

ಶೋಕಾಸ್​​ ನೋಟಿಸ್​​​ನಲ್ಲಿ ಏನಿದೆ?

ಮುಖ್ಯಮಂತ್ರಿಗಳ ಪ್ರವಾಸದ ವೇಳೆ ಅವರ ಭದ್ರತೆಗೆ ಅಗತ್ಯವಾಗಿದ್ದ ಅಡ್ವಾನ್ಸ್ ಲೈಫ್‌ ಸಪೋರ್ಟ್ ಆ್ಯಂಬುಲೆನ್ಸ್ ಮತ್ತು ತಜ್ಞ ವೈದ್ಯರ ನೇಮಿಸದೇ ಇರುವುದು ಪರಿಶೀಲನೆ ವೇಳೆ ದೃಢಪಟ್ಟಿದೆ. ಅಲ್ಲದೆ ಆ ವೇಳೆ ತಾವು ಕೂಡ ಹಾಜರಿಲ್ಲದೆ ಇರುವುದು ಗಮನಕ್ಕೆ ಬಂದಿದ್ದು, ಕನಿಷ್ಠ ಸೌಲಭ್ಯಗಳಾದ ಗ್ಲುಕೋಮೀಟರ್ ಮತ್ತು ಬಿಪಿ ಅಪಾರ್ಚರ್ಸ್ ಸಹ ಇಲ್ಲದಿರೋದು ಗೊತ್ತಾಗಿದೆ. ವಿಐಪಿ/ವಿವಿಐಪಿ ಪ್ರೋಟೋಕಾಲ್​​ಗೆ ಅನುಗುಣವಾಗಿ ಸುಸಜ್ಜಿತ ಜೀವ ರಕ್ಷಕ ವಾಹನ ಹಾಗೂ ಅಗತ್ಯ ಉಪಕರಣಗಳನ್ನು ಒದಗಿಸದೆ ಕರ್ತವ್ಯಲೋಪ ಎಸಗಲಾಗಿದೆ ಎಂದು ಶೋಕಾಸ್​​ ನೋಟಿಸ್​​ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ವಿಮೆ ಆಸೆಗೆ ತನ್ನದೇ ಅಂಗಡಿಯಲ್ಲಿ ಕಳ್ಳತನ ಮಾಡಿದ ಚಿನ್ನದಂಗಡಿ ಮಾಲೀಕ! ಕೊನೆಗೂ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?

ನಿಮ್ಮ ವಿರುದ್ಧ ಯಾಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂಬುದರ ಕುರಿತು ಈ ನೋಟಿಸ್​​ ಸ್ವೀಕರಿಸಿದ ದಿನಾಂಕದಿಂದ ಏಳು ದಿನಗಳ ಒಳಗಾಗಿ ಲಿಖಿತ ಸಮಜಾಯಿಷಿಯನ್ನು ಸಲ್ಲಿಸುವಂತೆಯೂ ಸೂಚಿಸಲಾಗಿದೆ. ಕಾಲಮಿತಿಯೊಳಗೆ ಸಮರ್ಪಕ ಉತ್ತರ ಸಲ್ಲಿಸದಿದ್ದಲ್ಲಿ ಅಥವಾ ಉತ್ತರ ತೃಪ್ತಿಕರವಾಗಿರದಿದ್ದಲ್ಲಿ ಅನ್ವಯಿಸುವ ನಿಯಮಗಳಡಿ ನಿಮ್ಮ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಸೂಚಿಸೋದಾಗಿ ಬೆಳಗಾವಿ ಜಿಲ್ಲಾ ಪಂಚಾಯತ್​​​ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೋಟಿಸ್​​​ನಲ್ಲಿ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಶಿವಾಜಿನಗರದಲ್ಲಿ ಫುಟ್​ಪಾತ್ ತೆರವು ಕಾರ್ಯಾಚರಣೆ ವೇಳೆ ಜಿಬಿಎ ಸಿಬ್ಬಂದಿ ಮೇಲೆ ಪೆಪ್ಪರ್ ಸ್ಪ್ರೇ, ಹಲ್ಲೆ ಆರೋಪ – Kannada News | Shivajinagar Footpath Clearance Turns Tense: BBMP Staff Allege Pepper Spray Attack During Anti Encroachment Drive

ಬೆಂಗಳೂರು, ಜುಲೈ 21: ಬೆಂಗಳೂರಿನ ಶಿವಾಜಿನಗರದಲ್ಲಿ ಜಿಬಿಎ ವತಿಯಿಂದ ನಡೆದ ಫುಟ್​ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಮಂಗಳವಾರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಸ್ಥಳೀಯ ಸಂಘಟನೆಗಳ ಸದಸ್ಯರು ಪಾಲಿಕೆ ಸಿಬ್ಬಂದಿ ಮತ್ತು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಜೆಸಿಬಿ ಬಳಸಿ ಫುಟ್​ಪಾತ್ ಅತಿಕ್ರಮಣಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಸಿಬ್ಬಂದಿ ಮುಂದಾದಾಗ, ಸ್ಥಳೀಯ ಸಂಘಟನೆಗಳ ಕಾರ್ಯಕರ್ತರು ಅಡ್ಡಿಪಡಿಸಿದರು. ಈ ವೇಳೆ, ಪಾಲಿಕೆಯ ಇಂಜಿನಿಯರ್‌ಗಳು ಮತ್ತು ಜೆಸಿಬಿ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಗಳು ಕೇಳಿಬಂದಿವೆ. ಒಬ್ಬ ಪಾಲಿಕೆ ಸಿಬ್ಬಂದಿಯ ಮೇಲೆ ಹೆಲ್ಮೆಟ್‌ನಿಂದ ಹಲ್ಲೆ ಮಾಡಲು ಪ್ರಯತ್ನಿಸಲಾಯಿತು ಎಂದು ಪಾಲಿಕೆ ಸಿಬ್ಬಂದಿ ತಿಳಿಸಿದ್ದಾರೆ. ಅಲ್ಲದೆ, ಜೆಸಿಬಿ ಚಾಲಕನ ಮೇಲೆ ಪೆಪ್ಪರ್ ಸ್ಪ್ರೇ ಮಾಡಲಾಯಿತು ಎಂದೂ ಅವರು ಆರೋಪಿಸಿದ್ದಾರೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿದರು. ಹಲ್ಲೆ ಯತ್ನದ ಆರೋಪದ ಮೇಲೆ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಉದ್ವಿಗ್ನ ಪರಿಸ್ಥಿತಿಯಿಂದಾಗಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಪಾಲಿಕೆ ಸಿಬ್ಬಂದಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಾಕ್ ಡೌನ್ ಲವ್, 5 ವರ್ಷ ಪ್ರಿಯಕರನನ್ನು ಸಾಕಿದ್ದ ಪ್ರಿಯತಮೆ: ಮದುವೆಯಾದ ವರ್ಷದಲ್ಲೇ ಗಂಡ ಪರಸ್ತ್ರೀಯೊಂದಿಗೆ ಪರಾರಿ! – Kannada News | Mangaluru Love Story Turns Bitter: Woman Alleges Husband Eloped with Another Woman Leaving 10 Month Old Baby

ಮಂಗಳೂರು, ಜುಲೈ 21: ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿ ಜೋಡಿಯೊಂದು ಮದುವೆಯಾದ ಪ್ರಕರಣವೊಂದು, ಇದೀಗ ಗಂಡ ಪರಸ್ತ್ರೀಯೊಂದಿಗೆ ಪರಾರಿಯಾಗುವುದರೊಂದಿಗೆ ಕಲಹಕ್ಕೆ ಕಾರಣವಾಗಿದೆ. ಈ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಕಾವೂರು ನಿವಾಸಿ ಲೋಲಾಕ್ಷಿ ಅವರ ಪತಿ ಪ್ರಜ್ವಲ್, 10 ತಿಂಗಳ ಮಗು ಇರುವಾಗಲೇ ಬೇರೊಬ್ಬ ಮಹಿಳೆಯೊಂದಿಗೆ ಪರಾರಿಯಾಗಿದ್ದಾರೆ. ಕೋವಿಡ್ ಅವಧಿಯಲ್ಲಿ ಅಪಘಾತಕ್ಕೀಡಾಗಿದ್ದ ಪ್ರಜ್ವಲ್‌ಗೆ ಲೋಲಾಕ್ಷಿ ಐದು ವರ್ಷಗಳ ಕಾಲ ಚಿಕಿತ್ಸೆ ಕೊಡಿಸಿ, ತಮ್ಮ ಮನೆಯಲ್ಲೇ ಸಾಕಿ ನಂತರ 2025ರಲ್ಲಿ ಮದುವೆಯಾಗಿದ್ದರು.

ಆದರೆ, ಮದುವೆಯಾಗಿ ಸುಮಾರು ಒಂದೂವರೆ ವರ್ಷದಲ್ಲಿ, 10 ತಿಂಗಳ ಮಗು ಇರುವಾಗಲೇ ಪ್ರಜ್ವಲ್ ಬೇರೊಬ್ಬ ಮಹಿಳೆ ಶರ್ಮಿಳಾ ಜೊತೆ ಜೂನ್ 30ರಂದು ಪರಾರಿಯಾಗಿದ್ದಾರೆ. ಶರ್ಮಿಳಾ, ಪ್ರಜ್ವಲ್‌ಗೆ 2 ಲಕ್ಷ ರೂಪಾಯಿ ಹಣ ನೀಡಿದ್ದ ಬಗ್ಗೆಯೂ ಮಾಹಿತಿ ಇದೆ. ಲೋಲಾಕ್ಷಿ ಅವರು ತಮ್ಮ ಪತಿ ಪ್ರಜ್ವಲ್‌ನನ್ನು ಶರ್ಮಿಳಾ ಕರೆದುಕೊಂಡು ಹೋಗಿದ್ದಾರೆ ಎಂದು ಬಜಪೆ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಪೋಲಿಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಲೋಲಾಕ್ಷಿ ಆರೋಪಿಸಿದ್ದಾರೆ. ತಮಗೆ ಮತ್ತು ತಮ್ಮ ಮಗುವಿಗೆ ನ್ಯಾಯ ಒದಗಿಸಬೇಕು ಎಂದು ಲೋಲಾಕ್ಷಿ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮದ್ಯದಂಗಡಿಗೆ ನುಗ್ಗಿದ ಚಿರತೆ, ಮೂವರ ಮೇಲೆ ಭೀಕರ ದಾಳಿ, 5 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ – Kannada News | Leopard attacks 3, enters liquor shop, 5 hour rescue ends terrifying ordeal

ಟೋಂಕ್, ಜುಲೈ 21: ಜನನಿಬಿಡ ಮಾರುಕಟ್ಟೆ ಪ್ರದೇಶಕ್ಕೆ ನುಗ್ಗಿದ ಚಿರತೆ(Leopard)ಯೊಂದು ಮೂವರ ಮೇಲೆ ದಾಳಿ ನಡೆಸಿ, ಮದ್ಯದಂಗಡಿಯೊಂದರ ಒಳಗಡೆ ಆಶ್ರಯ ಪಡೆದ ಆತಂಕಕಾರಿ ಘಟನೆ ರಾಜಸ್ಥಾನದ ಟೋಂಕ್ ಜಿಲ್ಲೆಯ ತೋಡರೈಸಿಂಗ್ ಪಟ್ಟಣದಲ್ಲಿ ನಡೆದಿದೆ. ಸುಮಾರು 5 ಗಂಟೆಗಳ ಕಾಲ ನಡೆದ ಸುದೀರ್ಘ ಕಾರ್ಯಾಚರಣೆಯ ನಂತರ ಅರಣ್ಯಾಧಿಕಾರಿಗಳು ಚಿರತೆಯನ್ನು ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ.

ಸೋಮವಾರ ಬೆಳಗ್ಗೆ 8.45 ರ ಸುಮಾರಿಗೆ ತೋಡರೈಸಿಂಗ್ ಪಟ್ಟಣದ ಸಮೀಪದ ಪೊದೆಗಳಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ವಿಷಯ ತಿಳಿದು ಸ್ಥಳವನ್ನು ಪರಿಶೀಲಿಸಲು ಬಂದ ಅರಣ್ಯ ಇಲಾಖೆಯ ಸ್ವಯಂಸೇವಕ ರಾಕೇಶ್ ಮಾಲಿ ಅವರ ಮೇಲೆ ಚಿರತೆ ತಕ್ಷಣವೇ ಎರಗಿ ಆತನ ಕಾಲಿಗೆ ಗಾಯಗೊಳಿಸಿತು. ಬಯಬೀತಗೊಂಡ ಚಿರತೆ ಅಲ್ಲಿಂದ ಸುಮಾರು 400 ಮೀಟರ್ ದೂರದಲ್ಲಿದ್ದ ಜನನಿಬಿಡ ಮಾರುಕಟ್ಟೆಗೆ ಓಡಿ ಬಂದಿದೆ.

ಮಾರುಕಟ್ಟೆಯಲ್ಲಿದ್ದ ‘ವೈನ್ ಶಾಪ್’ ಹೊರಗೆ ಕುಳಿತಿದ್ದ ಫತೇಹ್ ಲಾಲ್ ಕೋಲಿ ಅವರ ಮೇಲೆ ದಾಳಿ ಮಾಡಿದ ಚಿರತೆ, ನೇರವಾಗಿ ಮದ್ಯದಂಗಡಿಯೊಳಗೆ ನುಗ್ಗಿತು. ಅಂಗಡಿಯೊಳಗಿದ್ದ 25 ವರ್ಷದ ಮಾರಾಟಗಾರ ಸಂಜಯ್ ಗುರ್ಜರ್ ಅವರ ಮೂಗು ಮತ್ತು ಬೆನ್ನಿನ ಭಾಗಕ್ಕೆ ತೀವ್ರವಾಗಿ ಗಾಯಗೊಳಿಸಿತು. ಸಂಜಯ್ ಹೇಗೋ ಅಂಗಡಿಯಿಂದ ಹೊರಗೆ ಓಡಿಬಂದು ಪ್ರಾಣ ಉಳಿಸಿಕೊಂಡರು.

ಮತ್ತಷ್ಟು ಓದಿ: Leopard In Bengaluru: 5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು

ಚಿರತೆ ಅಂಗಡಿಯೊಳಗೆ ನುಗ್ಗುತ್ತಿದ್ದಂತೆ ಸಮಯಪ್ರಜ್ಞೆ ಮೆರೆದ ಸ್ಥಳೀಯ ನಿವಾಸಿಗಳು ಹೊರಗಿನಿಂದ ಶಟರ್ ಅನ್ನು ತಕ್ಷಣವೇ ಕೆಳಗೆ ಎಳೆದು, ಪ್ರಾಣಿ ಹೊರಬರದಂತೆ ಬಂದ್ ಮಾಡಿದ್ದರು. ಸುದ್ದಿ ತಿಳಿದ ತಕ್ಷಣ ಟೋಂಕ್ ಅರಣ್ಯಾಧಿಕಾರಿಗಳು ಹಾಗೂ ಜೈಪುರ ಮೃಗಾಲಯದ ವಿಶೇಷ ವೈದ್ಯಕೀಯ ತಂಡ ಸ್ಥಳಕ್ಕೆ ಧಾವಿಸಿತು.

ಗಾಯಗೊಂಡ ಮೂವರನ್ನೂ ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತು. ತೀವ್ರವಾಗಿ ಗಾಯಗೊಂಡಿದ್ದ ಸಂಜಯ್ ಮತ್ತು ಫತೇಹ್ ಅವರನ್ನು ಉನ್ನತ ವೈದ್ಯಕೀಯ ಕೇಂದ್ರಕ್ಕೆ ರವಾನಿಸಲಾಗಿದೆ. ವೈದ್ಯರ ತಂಡವು ಮದ್ಯದಂಗಡಿಯ ಶಟರ್ ಅಲ್ಪಪ್ರಮಾಣದಲ್ಲಿ ತೆರೆದು ಚಿರತೆಗೆ ನಿದ್ರಾಜನಕ ಮದ್ದು ನೀಡುವಲ್ಲಿ ಯಶಸ್ವಿಯಾಯಿತು. ಸುಮಾರು 5 ಗಂಟೆಗಳ ಸುದೀರ್ಘ ಪ್ರಯತ್ನದ ನಂತರ ಪ್ರಜ್ಞೆ ತಪ್ಪಿದ ಗಂಡು ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಯಿತು.

ವಿಡಿಯೋ

ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಹಿರಿಯ ಪಶುವೈದ್ಯಾಧಿಕಾರಿ ಡಾ.ಅಶೋಕ್ ತನ್ವರ್ ಮಾತನಾಡಿ, ನನ್ನ ವೃತ್ತಿಜೀವನದಲ್ಲಿ 60 ಕ್ಕೂ ಹೆಚ್ಚು ವನ್ಯಜೀವಿ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿದ್ದೇನೆ. ಆದರೆ, ಮದ್ಯದಂಗಡಿಯೊಳಗಿನಿಂದ ಚಿರತೆಯನ್ನು ರಕ್ಷಿಸಿದ್ದು ಇದೇ ಮೊದಲು ಎಂದು ವಿವರಿಸಿದ್ದಾರೆ.

ತೋಡರೈಸಿಂಗ್ ಸುತ್ತಮುತ್ತ ದಟ್ಟ ಅರಣ್ಯವಿದ್ದು, ಆಹಾರ ಅರಸಿ ಅಥವಾ ದಾರಿ ತಪ್ಪಿ ಚಿರತೆ ನಗರ ಪ್ರದೇಶಕ್ಕೆ ಬಂದಿರಬಹುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆ ಮುಗಿಯುವವರೆಗೆ ಪೊಲೀಸರು ಸ್ಥಳದಲ್ಲಿ ಭಾರಿ ಜನಸಮೂಹವನ್ನು ನಿಯಂತ್ರಿಸಿ ಭದ್ರತೆ ಒದಗಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಚೆನ್ನಮ್ಮ ಸಮಾಧಿ ಬಳಿ ವಿಷ್ಣು ಸಹಸ್ರನಾಮ ಪಠಿಸುತ್ತಿದ್ದಂತೆಯೇ ಪ್ರತ್ಯಕ್ಷವಾದ ಗರುಡ! – Kannada News | Garuda Circles Chennamma’s Memorial During Vishnu Sahasranama Chanting, Devotees Call It a Divine Sign

ಹಾಸನ, ಜುಲೈ 21: ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅಂತ್ಯಸಂಸ್ಕಾರ ಹಾಸನದ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬೆಟ್ಟದ ತಪ್ಪಲಿನ ಜಮೀನಿನಲ್ಲಿ ಸೋಮವಾರ ನಡೆದಿದೆ. ಅದಾದ ನಂತರ ಸಮಾಧಿ ಇರುವ ಜಾಗದಲ್ಲಿ ರುದ್ರ, ಚಮಕ, ಗಾಯಿತ್ರಿ ಮಂತ್ರ ಹಾಗೂ ವಿಷ್ಣು ಸಹಸ್ರನಾಮ ಪಠಣ ಮಾಡಲಾಗಿದೆ. ವಿಷ್ಣು ಸಹಸ್ರನಾಮ ಪಠಿಸುತ್ತಿರುವಾಗ ಗರುಡ ಕಾಣಿಸಿದ್ದು, ಸಮಾಧಿ ಮೇಲೆ ಪ್ರದಕ್ಷಿಣೆ ಹಾಕಿ ಹೋಗಿರುವುದು ಅಚ್ಚರಿ ಮೂಡಿಸಿದೆ. ಚೆನ್ನಮ್ಮ ಅಪಾರ ದೈವ ಭಕ್ತೆಯಾಗಿದ್ದರು. ಪ್ರತಿನಿತ್ಯ ದೇವರ ಪೂಜೆ ವೇಳೇ ಶ್ಲೋಕಗಳನ್ನು ಪಠಿಸುತ್ತಿದ್ದರು. ಹೀಗಾಗಿ ಅವರ ಸಮಾಧಿ ಬಳಿ ಅರ್ಚಕರಿಂದ ರುದ್ರ, ಚಮಕ, ಗಾಯಿತ್ರಿ ಮಂತ್ರ ಹಾಗೂ ವಿಷ್ಣು ಸಹಸ್ರನಾಮ ಪಠಣ ಮಾಡಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TTD News: ತಿರುಪತಿಯಲ್ಲಿ ಭಕ್ತರಿಗೆ ಹೈಟೆಕ್ ‘ಕನ್ವೇಯರ್’ ಪ್ರಸಾದ ವಿತರಣೆ; TTDಯಿಂದ ಹೊಸ ಪ್ರಯೋಗ! – Kannada News | TTD’s New Tirumala Food Conveyor System: Faster Prasadam for Devotees

ಹೈಟೆಕ್ ‘ಕನ್ವೇಯರ್’ ಪ್ರಸಾದ ವಿತರಣೆ

ತಿರುಮಲ: ತಿರುಮಲಕ್ಕೆ ಆಗಮಿಸುವ ಲಕ್ಷಾಂತರ ಭಕ್ತಾದಿಗಳಿಗೆ ಶೀಘ್ರ ಹಾಗೂ ಸುಲಭವಾಗಿ ಆಹಾರ-ಪಾನೀಯ ತಲುಪಿಸಲು ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (TTD) ಒಂದು ಹೊಸ ತಂತ್ರಜ್ಞಾನಾಧಾರಿತ ಹೆಜ್ಜೆಯನ್ನಿಟ್ಟಿದೆ. ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುವ ಭಕ್ತರಿಗೆ ‘ಆಹಾರ ಪೂರೈಸುವ ಕನ್ವೇಯರ್ ವ್ಯವಸ್ಥೆ’ಯನ್ನು (Food Serving Conveyor System) ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಸಾಮಾನ್ಯ ದಿನಗಳಲ್ಲಿ ಹಾಗೂ ವಿಶೇಷ ಸಂದರ್ಭಗಳಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಪ್ರತಿದಿನ ಲಕ್ಷಕ್ಕೂ ಹೆಚ್ಚು ಭಕ್ತರು ಕಿಲೋಮೀಟರ್‌ಗಟ್ಟಲೆ ಸಾಲಿನಲ್ಲಿ ನಿಲ್ಲುತ್ತಾರೆ. ಇಂತಹ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸರಳವಾಗಿ ಪ್ರಸಾದ ತಲುಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ದಿನಕ್ಕೆ 1 ಲಕ್ಷ ಭಕ್ತರಿಗೆ ನಿರಂತರ ಅನ್ನಪ್ರಸಾದ:

ಪ್ರಸ್ತುತ TTDಯ ಆಕ್ಟೋಪಸ್ ಕಟ್ಟಡದಿಂದ ಕೃಷ್ಣ ತೇಜ ಅತಿಥಿ ಗೃಹದವರೆಗೆ ಸುಮಾರು 3.5 ಕಿಲೋಮೀಟರ್ ಉದ್ದದ ಸರತಿ ಸಾಲಿನಲ್ಲಿ ಪ್ರತಿದಿನ ಬೆಳಿಗ್ಗೆ 6:00 ರಿಂದ ರಾತ್ರಿ 11:00 ರವರೆಗೆ ನಿರಂತರವಾಗಿ ಅನ್ನಪ್ರಸಾದ ವಿತರಿಸಲಾಗುತ್ತಿದೆ. ಸುಮಾರು 100 ಶ್ರೀವಾರಿ ಸೇವಕರು ಪ್ರತಿದಿನ ಭಕ್ತರಿಗೆ ಹಾಲು, ಮಜ್ಜಿಗೆ ಹಾಗೂ ಕುಡಿಯುವ ನೀರು, ಉಪ್ಮಾ, ಸಾಂಬಾರ್ ಅನ್ನ ಹಾಗೂ ಟೊಮೆಟೊ ಭಾತ್‌ಗಳನ್ನು ವಿತರಿಸುತ್ತಿದ್ದಾರೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಗೇಟ್ 45ರಲ್ಲಿ ಹೈಟೆಕ್ ‘ಕನ್ವೇಯರ್’ ಪ್ರಯೋಗ:

ಮಾನವ ಶ್ರಮವನ್ನು ಕಡಿಮೆ ಮಾಡಿ, ಯಂತ್ರಗಳ ಸಹಾಯದಿಂದ ಪ್ರಸಾದ ವಿತರಣೆಯನ್ನು ಇನ್ನಷ್ಟು ವೇಗಗೊಳಿಸಲು ದಾನಿಗಳ ನೆರವಿನಿಂದ ಈ ‘ಚಲಿಸುವ ಊಟದ’ (Food Conveyor) ವ್ಯವಸ್ಥೆಯನ್ನು ರೂಪಿಸಲಾಗಿದೆ. ಪ್ರಸ್ತುತ, ಶಿಲಾ ತೋರಣಂ ಬಳಿಯ ಗೇಟ್ 45ರಲ್ಲಿ ಈ ಕನ್ವೇಯರ್ ಯಂತ್ರದ ಕಾರ್ಯನಿರ್ವಹಣೆಯನ್ನು TTD ಅಧಿಕಾರಿಗಳು ಪ್ರಾಯೋಗಿಕವಾಗಿ ಪರಿಶೀಲಿಸುತ್ತಿದ್ದಾರೆ. ಶ್ರೀವಾರಿ ಸೇವಕರು ಈ ಯಂತ್ರದ ಸಹಾಯದಿಂದ ಭಕ್ತರಿಗೆ ಸಲೀಸಾಗಿ ಪ್ರಸಾದವನ್ನು ತಲುಪಿಸುತ್ತಿದ್ದಾರೆ.

3.50 ಲಕ್ಷ ರೂ. ವೆಚ್ಚದ ಯೋಜನೆ:

ಸುಮಾರು 3.50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಈ ಆಹಾರ ಸರ್ವಿಂಗ್ ಕನ್ವೇಯರ್‌ನ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾದರೆ, ಸರತಿ ಸಾಲಿನ ಉಳಿದ ಪ್ರಮುಖ ಪ್ರದೇಶಗಳಿಗೂ ಇದನ್ನು ವಿಸ್ತರಿಸಲು TTD ಯೋಜಿಸಿದೆ. ಈ ತಂತ್ರಜ್ಞಾನದ ಬಳಕೆಯಿಂದ ಭಕ್ತರಿಗೆ ತಡವಿಲ್ಲದೆ, ಅತ್ಯಂತ ತ್ವರಿತವಾಗಿ ಆಹಾರ ಪದಾರ್ಥಗಳನ್ನು ತಲುಪಿಸಬಹುದು ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟೀಮ್ ಇಂಡಿಯಾಗೆ ವಿವಿಎಸ್​ ಲಕ್ಷ್ಮಣ್ ಹೆಡ್ ಕೋಚ್! – Kannada News | VVS Laxman to coach India on Zimbabwe

ಭಾರತ ಹಾಗೂ ಝಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಜುಲೈ 23, 2026 ರಿಂದ ಹರಾರೆಯಲ್ಲಿ ಆರಂಭವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಕೋಚ್ ಆಗಿ ಕಾಣಿಸಿಕೊಳ್ಳುತ್ತಿರುವುದು ವಿವಿಎಸ್​ ಲಕ್ಷ್ಮಣ್. ಇಂಗ್ಲೆಂಡ್ ಪ್ರವಾಸದ ಸರಣಿ ಮುಗಿದ ಬೆನ್ನಲ್ಲೇ ಈ ಸರಣಿ ಆರಂಭವಾಗುತ್ತಿರುವುದರಿಂದ, ಬಿಸಿಸಿಐ ವಿಭಜಿತ-ಕೋಚಿಂಗ್ ಮಾದರಿಯನ್ನು ಅಳವಡಿಸಿಕೊಂಡಿದೆ.

ಇದರ ಅಡಿಯಲ್ಲಿ ನಿಯಮಿತ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮುಖ್ಯಸ್ಥರಾದ ವಿವಿಎಸ್ ಲಕ್ಷ್ಮಣ್ ಅವರು ಮತ್ತೊಮ್ಮೆ ಟೀಮ್ ಇಂಡಿಯಾದ ಹಂಗಾಮಿ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಲಕ್ಷ್ಮಣ್ ಕೋಚಿಂಗ್ ಸಾಧನೆಗಳು:

ವಿವಿಎಸ್ ಲಕ್ಷ್ಮಣ್ ಭಾರತ ತಂಡದ ಹಂಗಾಮಿ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದಾಗಲೆಲ್ಲಾ ಟೀಮ್ ಇಂಡಿಯಾ ಗೆಲುವು ದಾಖಲಿಸಿದೆ.

  • ಐರ್ಲೆಂಡ್ ಸರಣಿ (2022): ಲಕ್ಷ್ಮಣ್ ಮಾರ್ಗದರ್ಶನದಲ್ಲಿ ಭಾರತ ತಂಡವು ಐರ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು 2-0 ಅಂತರದಿಂದ ಜಯಿಸಿತ್ತು.
  • ಝಿಂಬಾಬ್ವೆ ಸರಣಿ (2022): ಝಿಂಬಾಬ್ವೆ ವಿರುದ್ಧ 2022 ರಲ್ಲಿ ನಡೆದ ಏಕದಿನ ಸರಣಿಯನ್ನು ಭಾರತ 3-0 ರಿಂದ ಕ್ಲೀನ್ ಸ್ವೀಪ್ ಮಾಡಿತ್ತು.
  • ನ್ಯೂಝಿಲೆಂಡ್ ಸರಣಿ (2022): ನ್ಯೂಝಿಲೆಂಡ್ 2022 ರಲ್ಲಿ ಆಡಲಾದ ಟಿ20 ಸರಣಿಯನ್ನು ಭಾರತ 1-0 ರಿಂದ ಗೆದ್ದುಕೊಂಡಿತ್ತು.
  • ಆಸ್ಟ್ರೇಲಿಯಾ ಸರಣಿ (2023): ಏಕದಿನ ವಿಶ್ವಕಪ್ ಮುಗಿದ ತಕ್ಷಣ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಲಕ್ಷ್ಮಣ್ ಮಾರ್ಗದರ್ಶನದ ಭಾರತ ತಂಡ 4-1 ಅಂತರದ ಭರ್ಜರಿ ಜಯ ಸಾಧಿಸಿತ್ತು.
  • ಏಷ್ಯನ್ ಗೇಮ್ಸ್ (2023): ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಲಕ್ಷ್ಮಣ್ ಕೋಚಿಂಗ್ ಅಡಿಯಲ್ಲಿ ಯುವ ಭಾರತ ತಂಡ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿತ್ತು.
  • ಝಿಂಬಾಬ್ವೆ ಸರಣಿ (2024): ಶುಭ್​ಮನ್ ಗಿಲ್ ನಾಯಕತ್ವದ ಯುವ ತಂಡವು 2024ರಲ್ಲಿ ಲಕ್ಷ್ಮಣ್ ಅವರ ಉಸ್ತುವಾರಿಯಲ್ಲೇ ಝಿಂಬಾಬ್ವೆ ವಿರುದ್ಧ 4-1 ರಿಂದ ಟಿ20 ಸರಣಿ ಗೆದ್ದಿತ್ತು.

ಇದೀಗ ಮತ್ತೊಮ್ಮೆ ವಿವಿಎಸ್​ ಲಕ್ಷ್ಮಣ್ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಝಿಂಬಾಬ್ವೆ ಪ್ರವಾಸ ಕೈಗೊಂಡಿದೆ. ಈ ಸರಣಿಯಲ್ಲೂ ಭಾರತ ತಂಡದಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು.

ಭಾರತ ಮತ್ತು ಝಿಂಬಾಬ್ವೆ ಸರಣಿ ವೇಳಾಪಟ್ಟಿ:

  • ಮೊದಲ ಟಿ20 ಪಂದ್ಯ: ಜುಲೈ 23, 2026 (ಭಾರತೀಯ ಕಾಲಮಾನ ಸಂಜೆ 4:30)
  • ಎರಡನೇ ಟಿ20 ಪಂದ್ಯ: ಜುಲೈ 25, 2026 (ಭಾರತೀಯ ಕಾಲಮಾನ ಸಂಜೆ 4:30)
  • ಮೂರನೇ ಟಿ20 ಪಂದ್ಯ: ಜುಲೈ 26, 2026 (ಭಾರತೀಯ ಕಾಲಮಾನ ಸಂಜೆ 4:30)

ಇದನ್ನೂ ಓದಿ: ದಿ ಹಂಡ್ರೆಡ್ ಲೀಗ್​ನಲ್ಲಿ ಕಣಕ್ಕಿಳಿಯುವ 8 ತಂಡಗಳು ಹೀಗಿವೆ

ಝಿಂಬಾಬ್ವೆ ವಿರುದ್ಧದ ಸರಣಿಯ ಬಳಿಕ ಟೀಮ್ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ 2 ಮ್ಯಾಚ್​ಗಳ ಟೆಸ್ಟ್ ಸರಣಿಯನ್ನು ಆಡಲಿದೆ.

Source link

Exit mobile version