ಹೆಲ್ತ್ ಇನ್ಷೂರೆನ್ಸ್ ಖರೀದಿಸುವ ಮುನ್ನ, ಈ 5 ಅಂಶಗಳು ಗಮನದಲ್ಲಿರಲಿ… – Kannada News | Health Insurance, important things to observe before buying policy
ಆರೋಗ್ಯ ವಿಮೆ (Health Insurance) ಇವತ್ತು ಬಹಳ ಮುಖ್ಯ. ವೈದ್ಯಕೀಯ ವೆಚ್ಚಗಳು ಗಣನೀಯವಾಗಿ ಹೆಚ್ಚುತ್ತಿವೆ. ವೈದ್ಯಕೀಯ ಸೇವೆಗಳ ಹಣದುಬ್ಬರ ಶೇ. 10ಕ್ಕಿಂತ ಹೆಚ್ಚಿನ ದರದಲ್ಲಿ ಏರುತ್ತಿದೆ. ನಾವು ಕಷ್ಟಪಟ್ಟು ಉಳಿಸಿದ ಹಣವೆಲ್ಲವೂ ಒಂದೇ ಬಾರಿ ಆಸ್ಪತ್ರೆಗೆ ವ್ಯಯವಾಗಿ ಹೋಗಬಹುದು. ಹೀಗಾಗಿ, ಆರೋಗ್ಯ ವಿಮೆ ತುಂಬಾ ಮುಖ್ಯ. ಹಾಗೆಯೇ, ಸರಿಯಾದ ವಿಮೆ ಆಯ್ಕೆ ಮಾಡಿಕೊಳ್ಳುವುದೂ ಕೂಡ ಮುಖ್ಯ. ಇಲ್ಲದಿದ್ದರೆ ಅಧಿಕ ಪ್ರೀಮಿಯಮ್ನಲ್ಲಿ ಖರೀದಿಸಿದ ವಿಮೆಯು ಅಗತ್ಯ ಸಂದರ್ಭದಲ್ಲಿ ನಿರುಪಯುಕ್ತ ಎನಿಸಬಹುದು, ಅಥವಾ ಹೆಚ್ಚಿನ ಭಾಗದ ವೆಚ್ಚವನ್ನು ಭರಿಸದೇ ಹೋಗಬಹುದು….