NTPC Recruitment 2026: ಕೇಂದ್ರ ಸರ್ಕಾರಿ ವಲಯದ ಸಂಸ್ಥೆಯಲ್ಲಿ ಉದ್ಯೋಗವಕಾಶ; ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | NTPC Deputy Manager Recruitment 2026: 135 Engineering Jobs for Experienced Professionals

ದೇಶದ ಪ್ರಮುಖ ಕೇಂದ್ರ ಸರ್ಕಾರಿ ವಲಯದ ಸಂಸ್ಥೆಯಾದ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NTPC), ಅನುಭವಿ ಎಂಜಿನಿಯರಿಂಗ್ ವೃತ್ತಿಪರರಿಗೆ ಅತ್ಯುತ್ತಮ ಉದ್ಯೋಗಾವಕಾಶವನ್ನು ತಂದಿದೆ. NTPC ಯಲ್ಲಿ ಖಾಲಿ ಇರುವ ಡೆಪ್ಯುಟಿ ಮ್ಯಾನೇಜರ್ (Deputy Manager) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿದೆ. ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ಹಾಗೂ ಕಂಟ್ರೋಲ್ ಮತ್ತು ಇನ್ಸ್ಟ್ರುಮೆಂಟೇಶನ್ (C&I) ವಿಭಾಗಗಳಲ್ಲಿ ಒಟ್ಟು 135 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು E4 ದರ್ಜೆಯಲ್ಲಿ ತಿಂಗಳಿಗೆ ರೂ. 70,000 ದಿಂದ ರೂ. 2,00,000 ವರೆಗಿನ ಆಕರ್ಷಕ ವೇತನವನ್ನು ಪಡೆಯಲಿದ್ದಾರೆ.

ಶೈಕ್ಷಣಿಕ ಅರ್ಹತೆಯ ವಿವರಗಳು:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಕನಿಷ್ಠ ಶೇ.60 ಅಂಕಗಳೊಂದಿಗೆ ಸಂಬಂಧಿತ ಎಂಜಿನಿಯರಿಂಗ್ ವಿಭಾಗದಲ್ಲಿ ಪೂರ್ಣಾವಧಿ BE/B.Tech ಪದವಿಯನ್ನು ಪೂರ್ಣಗೊಳಿಸಿರಬೇಕು. ಎಲೆಕ್ಟ್ರಿಕಲ್ ವಿಭಾಗಕ್ಕೆ ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ವಿಭಾಗಕ್ಕೆ ಮೆಕ್ಯಾನಿಕಲ್ ಅಥವಾ ಪ್ರೊಡಕ್ಷನ್, ಹಾಗೂ C&I ವಿಭಾಗಕ್ಕೆ ಇನ್ಸ್ಟ್ರುಮೆಂಟೇಶನ್, ಕಂಟ್ರೋಲ್ & ಇನ್ಸ್ಟ್ರುಮೆಂಟೇಶನ್ ಅಥವಾ ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: ಬೆಂಗಳೂರು ದಕ್ಷಿಣ ಜಿಲ್ಲೆ;102 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕಡ್ಡಾಯ ಕಾರ್ಯಾನುಭವ ಮತ್ತು ವಯೋಮಿತಿ:

ಈ ಹುದ್ದೆಗಳಿಗೆ ಕೇವಲ ಶೈಕ್ಷಣಿಕ ಅರ್ಹತೆ ಮಾತ್ರ ಸಾಕಾಗುವುದಿಲ್ಲ, ಬದಲಿಗೆ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 10 ವರ್ಷಗಳ ಕೆಲಸದ ಅನುಭವ ಕಡ್ಡಾಯವಾಗಿದೆ. ಅಭ್ಯರ್ಥಿಗಳು ವಿದ್ಯುತ್ ವಲಯ (Power Sector) ಅಥವಾ ಪ್ರಕ್ರಿಯೆ ಕೈಗಾರಿಕೆಗಳಲ್ಲಿ (Process Industry) ಎಕ್ಸಿಕ್ಯುಟಿವ್ ಕೇಡರ್‌ನಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು. ಇನ್ನು ವಯೋಮಿತಿಯ ವಿಷಯಕ್ಕೆ ಬಂದರೆ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ವಯಸ್ಸಾಗಿರಬೇಕು. ನಿಯಮಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಅರ್ಜಿ ಸಲ್ಲಿಕೆಯ ವಿಧಾನ ಮತ್ತು ಪ್ರಮುಖ ದಿನಾಂಕಗಳು:

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು NTPC ಯ ಅಧಿಕೃತ ವೆಬ್‌ಸೈಟ್‌ www.ntpc.co.in ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆಗಸ್ಟ್ 12, 2026 ರಿಂದ ಆರಂಭವಾಗಿದ್ದು, ಆನ್‌ಲೈನ್ ಅರ್ಜಿ ಸಲ್ಲಿಸಲು ಆಗಸ್ಟ್ 26 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯಲ್ಲಿರುವ ಎಲ್ಲಾ ನಿಯಮಗಳು ಮತ್ತು ಅರ್ಹತೆಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳಲು ಸೂಚಿಸಲಾಗಿದೆ, ಏಕೆಂದರೆ ನಿಯಮಗಳನ್ನು ಪೂರೈಸದ ಅರ್ಜಿಗಳನ್ನು ನೇರವಾಗಿ ತಿರಸ್ಕರಿಸಲಾಗುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

‘ಮುಂಗಾರು ಮಳೆ’ ಸಿನಿಮಾ ಆಗಲು ಕಾರಣನಾದೆ: ನಾಗತಿಹಳ್ಳಿ ಚಂದ್ರಶೇಖರ್ – Kannada News | Nagathihalli Chandrashekhar said he was the one of the reason Yogaraj Bhatt’s Mungaru Male

ನಾಗತಿಹಳ್ಳಿ ಚಂದ್ರಶೇಖರ್ (Nagathihalli Chandrashekhar) ಅವರು ಮತ್ತೊಮ್ಮೆ ‘ಅಮೆರಿಕ ಅಮೆರಿಕ’ (America America) ಸಿನಿಮಾ ಮಾಡಿದ್ದಾರೆ. ಸಿನಿಮಾಕ್ಕೆ ‘ಅಮೆರಿಕ ಅಮೆರಿಕ 2’ ಎಂದು ಹೆಸರಿಟ್ಟಿದ್ದು, ಸಿನಿಮಾಕ್ಕೆ ಮನೋಮೂರ್ತಿ ಅವರು ಸಂಗೀತ ನೀಡಿದ್ದಾರೆ. ಇತ್ತೀಚೆಗೆ ಆಯೋಜಿಸಿದ್ದ ‘ಅಮೆರಿಕ ಅಮೆರಿಕ 2’ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಾಗತಿಹಳ್ಳಿ ಚಂದ್ರಶೇಖರ್ ಅವರು, ‘ಮನೋಮೂರ್ತಿ ಅವರು ನನ್ನ ಸಿನಿಮಾಗಳಿಗೆ ಮಾತ್ರ ಕೆಲಸ ಮಾಡುತ್ತಾರೆ ಎಂಬ ಸುದ್ದಿ ಹಬ್ಬಿತ್ತು, ಆದರೆ ನಾನು ಮನೋಮೂರ್ತಿಯವರನ್ನು ಯೋಗರಾಜ್ ಭಟ್​​ಗೆ ಪರಿಚಯಿಸಿ ಆ ಮೂಲಕ ‘ಮುಂಗಾರು ಮಳೆ’ ಆಗಲು ಪರೋಕ್ಷ ಕಾರಣನಾದೆ’ ಎಂದಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದೇನು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಗುಟ್ಕಾ ನಿಷೇಧದ ಸುದ್ದಿ ಬೆನ್ನಲ್ಲೇ: ಚೀಲಗಳಲ್ಲಿ ತುಂಬಿಕೊಂಡು ಹೋದ ಜನ – Kannada News | Koppal Residents Rush to Stock Up on Gutka Amidst Karnataka Ban

ಕೊಪ್ಪಳ, ಆ.14: ಕರ್ನಾಟಕದಲ್ಲಿ ಗುಟ್ಕಾ ಮಾರಾಟದ ಮೇಲೆ ನಿಷೇಧ ಹೇರುವ ನಿರ್ಧಾರವು ಕೊಪ್ಪಳದಲ್ಲಿ ವ್ಯಾಪಕ ಖರೀದಿ ಭರಾಟೆಗೆ ಕಾರಣವಾಗಿದೆ. ನಿಷೇಧದ ಸುದ್ದಿ ಹೊರಬೀಳುತ್ತಿದ್ದಂತೆ, ವ್ಯಾಪಾರಿಗಳು ಮತ್ತು ಗ್ರಾಹಕರು ಗುಟ್ಕಾ ಖರೀದಿಗೆ ಅಂಗಡಿಗಳತ್ತ ಧಾವಿಸಿದ್ದು, ದೊಡ್ಡ ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳಲು ಮುಂದಾಗಿದ್ದಾರೆ. ಕೊಪ್ಪಳದಲ್ಲಿ ಈ ವಿದ್ಯಮಾನವು ಗುಟ್ಕಾ ಸೇವನೆಯ ಚಟದ ಪ್ರಮಾಣವನ್ನು ಸ್ಪಷ್ಟವಾಗಿ ಬಿಂಬಿಸಿದೆ. ನಿಷೇಧ ಜಾರಿಯಾಗುವ ಮುನ್ನವೇ ಗುಟ್ಕಾ ಸಿಗುವುದಿಲ್ಲ ಎಂಬ ಭಯದಿಂದ ಜನರು ಚೀಲಗಳಲ್ಲಿ ಹಾಗೂ ಜೇಬುಗಳಲ್ಲಿ ತುಂಬಿಕೊಂಡು ಹೋಗಿದ್ದಾರೆ. ತಮ್ಮ ಶಕ್ತ್ಯಾನುಸಾರ ಹಣ ಖರ್ಚು ಮಾಡಿ, ಮುಂದೆ ಸಿಗದಿರಬಹುದು ಎಂಬ ಆತಂಕದಿಂದ ಸಾಧ್ಯವಾದಷ್ಟು ಗುಟ್ಕಾವನ್ನು ಸಂಗ್ರಹಿಸಿದ್ದಾರೆ. ಸರಕಾರವು ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳ ಬಳಕೆಯನ್ನು ನಿಯಂತ್ರಿಸುವ ಮೂಲಕ ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರಕಾರದ ಈ ನಿರ್ಧಾರವು ಆರೋಗ್ಯ ಇಲಾಖೆಯ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ. ಆದಾಗ್ಯೂ, ಕೊಪ್ಪಳದಲ್ಲಿ ಕಂಡುಬಂದ ದೃಶ್ಯವು ಈ ಉತ್ಪನ್ನಗಳ ಮೇಲೆ ಜನರ ಅವಲಂಬನೆ ಎಷ್ಟು ಆಳವಾಗಿದೆ ಎಂಬುದನ್ನು ತೋರಿಸುತ್ತದೆ. ಗುಟ್ಕಾ ಹುಚ್ಚು ಒಮ್ಮೆ ಶುರುವಾದರೆ ಅದರಿಂದ ಹೊರಬರುವುದು ಬಹಳ ಕಷ್ಟ ಎಂಬುದು ಈ ಘಟನೆಯಿಂದ ಮತ್ತೆ ಸಾಬೀತಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದಲ್ಲೇ ‘ರೇರ್ ಅರ್ಥ್ ಮ್ಯಾಗ್ನೆಟ್ಸ್’ ತಯಾರಿಕೆಗೆ ಎಲ್‌&ಟಿ ಸಜ್ಜು; ಚೀನಾ ಪ್ರಾಬಲ್ಯಕ್ಕೆ ಸವಾಲು – Kannada News | L&T to bid for manufacturing rare earth magnets in India, as part of government’s incentive programme

ನವದೆಹಲಿ, ಆಗಸ್ಟ್ 14: ಲಾರ್ಸೆನ್ ಅಂಡ್ ಟೂಬ್ರೊ (L&T) ಭಾರತದಲ್ಲಿಯೇ ‘ರೇರ್ ಅರ್ಥ್ ಮ್ಯಾಗ್ನೆಟ್ಸ್’ (Rare-earth magnets) ತಯಾರಿಸಲು ಯೋಜನೆ ರೂಪಿಸುತ್ತಿದೆ. ಇದು ಈಡೇರಿದ್ದೇ ಆದಲ್ಲಿ, ಚೀನಾದ ಮೇಲಿನ ಭಾರತದ ಪ್ರಮುಖ ಅವಲಂಬನೆಯೊಂದು ಕಡಿಮೆ ಆಗಲಿದೆ. ಕೇಂದ್ರ ಸರ್ಕಾರವು ದೇಶೀಯವಾಗಿ ಲಭ್ಯ ಇರುವ ವಿರಳ ಭೂ ಖನಿಜಗಳನ್ನು ತಯಾರಿಸಲು ವಿವಿಧ ಯೋಜನೆಗಳನ್ನು ಹಾಕಿದೆ. ಈ ಹಿನ್ನೆಲೆಯಲ್ಲಿ, ಪ್ರಮುಖ ಎಂಜಿನಿಯರಿಂಗ್ ಕಂಪನಿಯಾದ ಎಲ್ ಅಂಡ್ ಟಿ ಈ ಕಾರ್ಯಕ್ಕೆ ಕೈಹಾಕಲು ಯೋಜಿಸುತ್ತಿದೆ.

ಜಾಗತಿಕವಾಗಿ ರೇರ್ ಅರ್ಥ್ ಮ್ಯಾಗ್ನೆಟ್ ಉತ್ಪಾದನೆಯಲ್ಲಿ ಚೀನಾ ಸುಮಾರು 90% ಹಿಡಿತ ಹೊಂದಿದೆ. ಈ ಅವಲಂಬನೆಯನ್ನು ತಪ್ಪಿಸಲು ಮತ್ತು ಭಾರತದಲ್ಲಿಯೇ ದೇಶಿಯ ಪೂರೈಕೆ ಸರಪಳಿಯನ್ನು (Domestic Supply Chain) ಬಲಪಡಿಸಲು ಎಲ್‌&ಟಿ ಮುಂದಾಗಿದೆ.

ಇದನ್ನೂ ಓದಿ: ಸರಕುಗಳ ಮೇಲೆ ಟ್ಯಾರಿಫ್ ತಪ್ಪಿಸಲು ಚೀನಾದ ಕಳ್ಳದಾರಿಗಳಲ್ಲಿ ಭಾರತವೂ ಒಂದು: ಅಮೆರಿಕ ಗಂಭೀರ ಆರೋಪ

ಈ ಉತ್ಪನ್ನಗಳ ತಯಾರಿಕೆಯನ್ನು ಉತ್ತೇಜಿಸಲು ಭಾರತ ಸರ್ಕಾರವು ಸುಮಾರು 7,280 ಕೋಟಿ ರೂಪಾಯಿಗಳ ಪ್ರೋತ್ಸಾಹಕ ಯೋಜನೆಯನ್ನು (Incentive Policy) ಘೋಷಿಸಿದೆ. ಎಲ್‌&ಟಿ ಈ ಯೋಜನೆಯಡಿ ಬಿಡ್ ಮಾಡಲು ತಯಾರಿ ನಡೆಸುತ್ತಿದೆ. ಎಲ್ ಅಂಡ್ ಟಿಯದ್ದು ಸೇರಿದಂತೆ ಒಟ್ಟು 15 ಬಿಡ್​ಗಳು ಸಲ್ಲಿಕೆಯಾಗಿರುವುದು ತಿಳಿದುಬಂದಿದೆ. ಜಪಾನ್​ನ ಪ್ರೋಟೆರಿಯಲ್ ಲಿಮಿಟೆಡ್ ಕಂಪನಿ ಒಳಗೊಂಡ ಒಂದು ಗುಂಪು ಹಾಗೂ ಒಂದೆರಡು ಭಾರತೀಯ ವಾಹನ ಕಂಪನಿಗಳೂ ಕೂಡ ಬಿಡ್ ಸಲ್ಲಿಸಿವೆ ಎನ್ನಲಾಗಿದೆ.

ಈ ವಿರಳ ಭೂ ಖನಿಜ ಅಯಸ್ಕಾಂತಗಳು ಯಾಕೆ ಮುಖ್ಯ?

ರೇರ್ ಅರ್ಥ್ ಮ್ಯಾಗ್ನೆಟ್‌ಗಳು ಎಲೆಕ್ಟ್ರಿಕ್ ವಾಹನಗಳ (EV) ಮೋಟಾರ್‌ಗಳು, ವಿಂಡ್ ಟರ್ಬೈನ್‌ಗಳು, ಕೈಗಾರಿಕಾ ರೋಬೋಟ್‌ಗಳು ಮತ್ತು ವಿವಿಧ ಎಲೆಕ್ಟ್ರಾನಿಕ್ಸ್ ಉಪಕರಣಗಳಲ್ಲಿ ಅತ್ಯಗತ್ಯವಾಗಿವೆ. ಎಲ್‌&ಟಿ ತನ್ನ ಎಲೆಕ್ಟ್ರಿಕ್ ವಾಹನ ಮೋಟಾರ್ ತಯಾರಿಕಾ ಯೋಜನೆಗೂ ಈ ಮ್ಯಾಗ್ನೆಟ್‌ಗಳನ್ನು ಬಳಸಿಕೊಳ್ಳಲು ಉದ್ದೇಶಿಸಿದೆ.

ಇದನ್ನೂ ಓದಿ: ಪ್ರಿ-ರೈಡ್ ಟಿಪ್ಸ್ ಬಂದ್‌: ಓಲಾ, ಉಬರ್, ರ‍್ಯಾಪಿಡೋ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಬಿಗ್ ರಿಲೀಫ್

ಈ ಕ್ಷೇತ್ರವು ಉನ್ನತ ಮಟ್ಟದ ನಿಖರ ಇಂಜಿನಿಯರಿಂಗ್ ಅನ್ನು ಬೇಡುವುದರಿಂದ, ಸೂಕ್ತ ತಾಂತ್ರಿಕ ಪರಿಣತಿಯನ್ನು ಹೊಂದಿರುವ ಪಾಲುದಾರರನ್ನು ಹುಡುಕುವ ಪ್ರಕ್ರಿಯೆಯಲ್ಲಿ ಎಲ್‌&ಟಿ ತೊಡಗಿದೆ.

ಒಟ್ಟಾರೆಯಾಗಿ, ಎಲ್‌&ಟಿಯ ಈ ಹೆಜ್ಜೆಯು ಭಾರತದ ಉತ್ಪಾದನಾ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಮತ್ತು ನಿರ್ಣಾಯಕ ತಂತ್ರಜ್ಞಾನಗಳಲ್ಲಿ ಚೀನಾದ ಮೇಲಿನ ಅವಲಂಬನೆಯನ್ನು ತಗ್ಗಿಸಲು ಸಹಕಾರಿಯಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹಾಸನದಲ್ಲಿ ಲೋಕಾಯುಕ್ತ ಬಿಗ್ ಆಪರೇಷನ್: 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹಳೇಬೀಡು ಪಿಎಸ್‌ಐ ಮಂಜುನಾಥ್ ರೆಡ್‌ಹ್ಯಾಂಡ್ ಅರೆಸ್ಟ್ – Kannada News | Lokayukta Arrests Halebeedu PSI for Accepting 1 Lakh Bribe for NCR Settlement.

ಹಾಸನ, ಆ,14: ಜಿಲ್ಲೆಯಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಲೋಕಾಯುಕ್ತ ಅಧಿಕಾರಿಗಳು ಬೃಹತ್ ಕಾರ್ಯಾಚರಣೆ ನಡೆಸಿ, ಹಳೇಬೀಡು ಪೊಲೀಸ್ ಠಾಣೆಯ ಪಿಎಸ್‌ಐ (ಪೊಲೀಸ್ ಸಬ್ ಇನ್ಸ್‌ಪೆಕ್ಟರ್) ಮಂಜುನಾಥ್ ಅವರನ್ನು ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಎನ್‌ಸಿಆರ್ (Non-Cognizable Report) ಪ್ರಕರಣವೊಂದನ್ನು ಇತ್ಯರ್ಥಪಡಿಸಲು ಪಿಎಸ್‌ಐ ಮಂಜುನಾಥ್ ಒಂದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚದ ಬೇಡಿಕೆಯ ಕುರಿತು ಮಾಹಿತಿ ಪಡೆದ ಲೋಕಾಯುಕ್ತ ತಂಡ ಕಾರ್ಯಾಚರಣೆಗೆ ಇಳಿದಿತ್ತು. ನಿನ್ನೆ ಒಂದು ಹೋಟೆಲ್‌ನಲ್ಲಿ ದೂರುದಾರರಿಂದ ಮುಂಗಡವಾಗಿ 20 ಸಾವಿರ ರೂಪಾಯಿ ಹಣವನ್ನು ಪಿಎಸ್‌ಐ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಅವರನ್ನು ವಶಕ್ಕೆ ಪಡೆದರು. ಲಂಚದ ಹಣ ಸಮೇತ ಪಿಎಸ್‌ಐ ಮಂಜುನಾಥ್‌ ಅವರನ್ನು ಬಂಧಿಸಲಾಗಿದ್ದು, ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಶಿಲ್ಪಾ ಮತ್ತು ಗವಿರಾಜು ಅವರ ನೇತೃತ್ವದಲ್ಲಿ ಈ ಯಶಸ್ವಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಭೇಟಿಯಾಗಿ ಮದುವೆಗೆ ಆಹ್ವಾನಿಸಿದ ನಟ ಚಿಕ್ಕಣ್ಣ: ವಿಡಿಯೋ – Kannada News | Chikkanna visited CM DK Shivakumar house invited him to his marriage

ಕನ್ನಡ ಚಿತ್ರರಂಗದ (Sandalwood) ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ (Chikkanna) ವಿವಾಹವಾಗುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅವರ ವಿವಾಹ ನಿಶ್ಚಯವಾಗಿದ್ದು, ಮದುವೆಯ ಆಮಂತ್ರಣ ಪತ್ರಿಕೆ ಹಂಚುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೆ ನಟ ಯಶ್ ಮತ್ತು ರಾಧಿಕಾ ಪಂಡಿತ್ ಅವರಿಗೆ ಕಾರ್ಡ್ ಕೊಟ್ಟು ಮದುವೆಗೆ ಆಹ್ವಾನಿಸಿದರು. ರವಿಚಂದ್ರನ್ ಸೇರಿ ಚಿತ್ರರಂಗದ ಹಲವರಿಗೆ ಕಾರ್ಡ್ ಕೊಟ್ಟು ಆಹ್ವಾನಿಸಿದ್ದಾರೆ. ಇದೀಗ ಸಿಎಂ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದ ನಟ ಚಿಕ್ಕಣ್ಣ ಸಿಎಂ ಅವರಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡಿ ಮದುವೆಗೆ ಆಹ್ವಾನಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

‘ಟಾಕ್ಸಿಕ್’ ಚಿತ್ರದಲ್ಲಿ ನಟಿಸೋ ಅವಕಾಶ ಸಿಕ್ಕಿದ್ದರೆ ಶಾನ್ವಿ ಶ್ರೀವಾಸ್ತವ ಮಾಡ್ತಿದ್ದ ಪಾತ್ರ ಯಾವುದು? – Kannada News | Shanvi Srivastava Speaks About Yash Starrer Toxic Movie Strong Female Characters!

‘ಟಾಕ್ಸಿಕ್’ ಸಿನಿಮಾದಲ್ಲಿ ಐವರು ನಾಯಕಿಯರಿದ್ದಾರೆ. ಎಲ್ಲಾ ಪಾತ್ರಗಳು ತುಂಬಾನೇ ಸ್ಟ್ರಾಂಗ್ ಆಗಿ ಕಾಣಿಸಿವೆ. ಯಶ್ ಜೊತೆ ನಟಿಸಿದ್ದ ಶಾನ್ವಿ ಶ್ರೀವಾಸ್ತವ ಈ ಬಗ್ಗೆ ಮಾತನಾಡಿದ್ದಾರೆ. ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸೋ ಅವಕಾಶ ಸಿಕ್ಕರೆ ಯಾವ ಪಾತ್ರ ಮಾಡ್ತೀರಾ ಎಂದು ಕೇಳಲಾಯಿತು. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ‘ಎಲ್ಲಾ ಪಾತ್ರಗಳು ಸ್ಟ್ರಾಂಗ್ ಆಗಿ ಕಾಣುತ್ತಿವೆ. ಯಾವ ಪಾತ್ರ ಸಿಕರೂ ಮಾಡ್ತಿದ್ದೆ’ ಎಂದಿದ್ದಾರೆ. ಆ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Railway Recruitment 2026: ರೈಲ್ವೆ ಗ್ರೂಪ್ ಡಿ ನೇಮಕಾತಿ; 30,000ರಕ್ಕೂ ಹೆಚ್ಚು ಹುದ್ದೆಗಳು, 10ನೇ ತರಗತಿ ಪಾಸಾಗಿದ್ರೆ ಸಾಕು! – Kannada News | RRB Group D 2026 Notification: Over 30,000 Vacancies Expected for 10th or ITI Pass

ರೈಲ್ವೆ ಗ್ರೂಪ್ ಡಿ ನೇಮಕಾತಿImage Credit source: Getty Images

ರೈಲ್ವೆ ಮಂಡಳಿಯು 2026 ನೇ ಸಾಲಿನ ಗ್ರೂಪ್ ಡಿ (ಲೆವೆಲ್-1) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ದೇಶಾದ್ಯಂತ ಎಲ್ಲಾ ರೈಲ್ವೆ ವಲಯಗಳು ಮತ್ತು ಉತ್ಪಾದನಾ ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳ ಮೌಲ್ಯಮಾಪನ ನಡೆಸಲು ನಿರ್ದೇಶನ ನೀಡಲಾಗಿದೆ. ಈ ಮೌಲ್ಯಮಾಪನದಿಂದ 30,000 ಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡುವ ನಿರೀಕ್ಷೆಯಿದೆ.

ಆಗಸ್ಟ್ 20 ರೊಳಗೆ ಪ್ರತಿ ವಲಯವು ತಮ್ಮ ಖಾಲಿ ಹುದ್ದೆಗಳ ವಿವರಗಳನ್ನು ಸಲ್ಲಿಸಬೇಕಿದ್ದು, ಸೆಪ್ಟೆಂಬರ್-ಅಕ್ಟೋಬರ್ 2026 ರಲ್ಲಿ ಅಧಿಕೃತ ನೇಮಕಾತಿ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆಯಿದೆ. ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಡಿಸೆಂಬರ್​​​ಗಿಂತ ಮೊದಲು ಪ್ರಾರಂಭವಾಗಲಿದೆ. ಈ ನೇಮಕಾತಿಯು 10ನೇ ತರಗತಿ ಅಥವಾ ITI ಪಾಸಾದ ಅಭ್ಯರ್ಥಿಗಳಿಗೆ ಲಭ್ಯವಿರುತ್ತದೆ.

ಇದನ್ನೂ ಓದಿ: ಬೆಂಗಳೂರು ದಕ್ಷಿಣ ಜಿಲ್ಲೆ;102 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಭ್ಯರ್ಥಿಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ (PET) ಗಾಗಿ ಈಗಿನಿಂದಲೇ ಸಿದ್ಧತೆಗಳನ್ನು ಪ್ರಾರಂಭಿಸುವಂತೆ ಸೂಚಿಸಲಾಗಿದೆ. ವಿಶೇಷವಾಗಿ ಗಣಿತ, ರೀಸನಿಂಗ್, ಸಾಮಾನ್ಯ ವಿಜ್ಞಾನ ಮತ್ತು ಪ್ರಚಲಿತ ಘಟನೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಹಿಂದಿನ ಪರೀಕ್ಷೆಗಳ ಅನುಭವದ ಪ್ರಕಾರ, ಹೆಚ್ಚಿನ ಅಂಕಗಳನ್ನು ಗಳಿಸಲು ಪ್ರಚಲಿತ ಘಟನೆಗಳು ಪ್ರಮುಖ ಪಾತ್ರವಹಿಸುತ್ತವೆ. ಇದು ಆಕಾಂಕ್ಷಿಗಳಿಗೆ ಉತ್ತಮ ಅವಕಾಶವಾಗಿದ್ದು, ಮುಂಚಿತವಾಗಿಯೇ ಸಿದ್ಧತೆ ನಡೆಸುವ ಮೂಲಕ ಯಶಸ್ಸು ಗಳಿಸಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ಅಭಿಮಾನಿಯ ಅಂತ್ಯಕ್ರಿಯೆಗೆ ಹೋಗಲಿಲ್ಲ ಏಕೆ? ಯಶ್ ಕೊಟ್ಟರು ಕಾರಣ – Kannada News | Yash clarified why he did not attend his fan’s funeral

ಯಶ್ (Yash), ಪ್ಯಾನ್ ಇಂಡಿಯಾ ಸ್ಟಾರ್ ನಟ. ಕೋಟ್ಯಂತರ ಅಭಿಮಾನಿಗಳನ್ನು ಯಶ್ ಹೊಂದಿದ್ದಾರೆ. ಕರ್ನಾಟಕದಲ್ಲಿ ಮಾತ್ರವೇ ಅಲ್ಲದೆ ದೇಶದ ಉದ್ದಗಲಕ್ಕೂ ಅವರಿಗೆ ಅಭಿಮಾನಿಗಳಿದ್ದಾರೆ. ಅಭಿಮಾನಿಗಳ ಬಗ್ಗೆ ಖುದ್ದು ಯಶ್ ಅವರಿಗೆ ಸಾಕಷ್ಟು ಕಾಳಜಿ ಮತ್ತು ಪ್ರೀತಿ ಇದೆ. ಆದರೆ ಕೆಲ ವರ್ಷಗಳ ಹಿಂದೆ ಯಶ್ ಅವರ ಅಭಿಮಾನಿಯೊಬ್ಬ, ತನ್ನ ಅಂತ್ಯಸಂಸ್ಕಾರಕ್ಕೆ ಯಶ್ ಮತ್ತು ಆಗ ವಿಪಕ್ಷ ನಾಯಕ ಆಗಿದ್ದ ಸಿದ್ದರಾಮಯ್ಯ ಬರಬೇಕೆಂದು ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದ. ಆದರೆ ಯಶ್ ಆ ಅಭಿಮಾನಿಯ ಅಂತ್ಯಸಂಸ್ಕಾರಕ್ಕೆ ಹೋಗಲಿಲ್ಲ.

2021 ರಲ್ಲಿ ಮಂಡ್ಯ ತಾಲ್ಲೂಕು ಕೆರೆಗೋಡು ಹೋಬಳಿ ಕೊಡಿದೊಡ್ಡಿ ಗ್ರಾಮದ ಯುವಕ ಕೃಷ್ಣ ಎಂಬಾತ ಯಶ್ ಹಾಗೂ ಸಿದ್ದರಾಮಯ್ಯ ಅಂತ್ಯಸಂಸ್ಕಾರಕ್ಕೆ ಬರಬೇಕೆಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದ. ಸಿದ್ದರಾಮಯ್ಯ ಅವರು ಖುದ್ದು ಅಂತ್ಯಸಂಸ್ಕಾರದಲ್ಲಿ ಭಾಗಿ ಆಗಿದ್ದರು. ಆದರೆ ಯಶ್ ಭಾಗಿ ಆಗಿರಲಿಲ್ಲ. ಈ ಬಗ್ಗೆ ಇದೀಗ ‘ಆಪ್​​ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಯಶ್ ಅವರನ್ನು ಪತ್ರಕರ್ತ ರಜತ್ ಶರ್ಮಾ ಪ್ರಶ್ನೆ ಮಾಡಿದ್ದು, ತಾವೇಕೆ ಅಂದು ಆ ಯುವಕನ ಅಂತ್ಯ ಸಂಸ್ಕಾರದಲ್ಲಿ ಭಾಗಿ ಆಗಲಿಲ್ಲ ಎಂದು ಯಶ್ ಉತ್ತರ ನೀಡಿದ್ದಾರೆ.

‘ನನಗೆ ಬಹಳ ದುಃಖವಾಗಿತ್ತು, ಆದರೆ ನಾನು ಉದ್ದೇಶಪೂರ್ವಕವಾಗಿ ಆ ಯುವಕನ ಅಂತ್ಯ ಸಂಸ್ಕಾರದಲ್ಲಿ ಭಾಗಿ ಆಗಲಿಲ್ಲ. ನಾನು ಅಂದು ಆ ಯುವಕನ ಅಂತ್ಯಸಂಸ್ಕಾರದಲ್ಲಿ ಭಾಗಿ ಆಗಿದ್ದರೆ, ಬೇರೆ ಅಭಿಮಾನಿಗಳಿಗೆ ಒಂದು ಋಣಾತ್ಮಕ ಸಂದೇಶ ನೀಡಿದಂತಾಗುತ್ತಿತ್ತು. ಒಂದೊಮ್ಮೆ ನಾವು ಹೀಗೆ ಮಾಡಿದರೆ ಯಶ್ ಅನ್ನು ಕರೆಸಬಹುದು ಎಂಬ ಯೋಚನೆ ಅವರ ತಲೆಗೆ ಬರುವ ಸಾಧ್ಯತೆ ಇತ್ತು. ಅದು ನನಗೆ ಬೇಕಿರಲಿಲ್ಲ. ಹಾಗಾಗಿ ನಾನು ಆ ಯುವಕನ ಅಂತ್ಯಸಂಸ್ಕಾರಕ್ಕೆ ಹೋಗಲಿಲ್ಲ’ ಎಂದರು ಯಶ್.

ಇದನ್ನೂ ಓದಿ:ಯಶ್ ‘ಟಾಕ್ಸಿಕ್’ ಚಿತ್ರದ ಅವಧಿ ಇಷ್ಟೊಂದು ದೀರ್ಘವೇ? ಫ್ಯಾನ್ಸ್​​ಗೆ ಹಬ್ಬ

‘ನೀವು ಸಾಧನೆ ಮಾಡಿ, ಸಾಧನೆ ಮಾಡಿ ನನ್ನನ್ನು ಕರೆಯಿರಿ, ಖಂಡಿತ ನಾನು ಬರುತ್ತೇನೆ. ನಿಮ್ಮ ಬಗ್ಗೆ ಹೆಮ್ಮೆ ಪಡುತ್ತೇನೆ ಆದರೆ ಈ ರೀತಿ ಮಾಡಿ ಕರೆದರೆ ಬರುವ ಮನಸ್ಸಾಗುವುದಿಲ್ಲ. ನಾನು ಬಂದರೆ ಸಹ ಅದು ತಪ್ಪು ಸಂದೇಶವನ್ನು ನೀಡಿದಂತೆ ಆಗುತ್ತದೆ. ನಾನು ಹೋಗಿದ್ದರೆ ಬೇರೆ ಕೆಲವರಿಗೂ ಅದು ಸ್ಪೂರ್ತಿ ನೀಡಿ, ಯಶ್ ಅನ್ನು ಕರೆಸಬೇಕೆಂದರೆ ಹೀಗೆ ಮಾಡಬಹುದು (ಆತ್ಮಹತ್ಯೆ) ಎಂದು ಅನಿಸುವ ಸಾಧ್ಯತೆ ಇದೆ, ಹಾಗಾಗಿ ನಾನು ಅಂದು ಕಠಿಣ ನಿರ್ಧಾರ ಮಾಡಿ ಆ ಯುವಕನ ಅಂತ್ಯ ಸಂಸ್ಕಾರಕ್ಕೆ ಹೋಗಲಿಲ್ಲ’ ಎಂದಿದ್ದಾರೆ ನಟ ಯಶ್.

ಅದೇ ಸಂದರ್ಶನದಲ್ಲಿ ತಮಗೆ ಅಭಿಮಾನಿಗಳ ಬಗ್ಗೆ ಇರುವ ಪ್ರೀತಿಯ ಬಗ್ಗೆ ಮಾತನಾಡಿರುವ ಯಶ್, ‘ನಾನು ಅಭಿಮಾನಿಗಳ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತೇನೆ. ಅವರನ್ನು ಭೇಟಿ ಆಗಬೇಕೆಂದರೆ ಸಮಯ ಮಾಡಿಕೊಂಡು ಭೇಟಿ ಮಾಡುತ್ತೇನೆ. ಪ್ರತಿಯೊಬ್ಬರೊಟ್ಟಿಗೆ ಖುದ್ದು ನಿಂತು ಫೋಟೊಗಳನ್ನು ತೆಗೆಸಿಕೊಳ್ಳುತ್ತೇನೆ’ ಎಂದು ಯಶ್ ಹೇಳಿದ್ದಾರೆ. ಯಶ್ ಸಾಮಾನ್ಯವಾಗಿ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಎಲ್ಲರೊಟ್ಟಿಗೆ ಪ್ರತ್ಯೇಕವಾಗಿ ಫೋಟೊಗಳನ್ನು ತೆಗೆಸಿಕೊಳ್ಳುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

1921ರಲ್ಲಿ ಏಲೂರುನಲ್ಲಿ ಗಾಂಧೀಜಿ ನೆಟ್ಟಿದ್ದ ಗಿಡ ಈಗ ಹೇಗಿದೆ ಗೊತ್ತಾ? 100 ವರ್ಷಗಳ ಐತಿಹಾಸಿಕ ನೆನಪು – Kannada News | Mahatma Gandhi Planted Tree in Eluru: 100 Years History and Present Status

ಏಲೂರುನಲ್ಲಿ ಗಾಂಧೀಜಿ ನೆಟ್ಟಿದ್ದ ಗಿಡ ಈಗ ಹೇಗಿದೆ ಗೊತ್ತಾ?

ಆಂಧ್ರಪ್ರದೇಶ, ಆಗಸ್ಟ್ 14: ಶಾಂತಿ ಮತ್ತು ಅಹಿಂಸೆಯ ಮಾರ್ಗದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮವನ್ನು ಮುನ್ನಡೆಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹೆಜ್ಜೆ ಇಟ್ಟ ಪ್ರತಿಯೊಂದು ಸ್ಥಳಕ್ಕೂ ತನ್ನದೇ ಆದ ವಿಶೇಷತೆಯಿದೆ. ಶತಮಾನದ ಹಿಂದೆ ಆಂಧ್ರಪ್ರದೇಶದಲ್ಲಿ ಅವರು ನಡೆಸಿದ ಪ್ರವಾಸವು ಚಾರಿತ್ರಿಕ ಘಟ್ಟವಾಗಿ ಮಾರ್ಪಟ್ಟಿದೆ. ಅದರಲ್ಲಿಯೂ ಪಶ್ಚಿಮ ಗೋದಾವರಿ ಜಿಲ್ಲೆಯ ಏಲೂರು ನಗರವು ಗಾಂಧೀಜಿಯವರ ಭೇಟಿಯಿಂದ ಹೊಸ ಚೈತನ್ಯವನ್ನು ಪಡೆದುಕೊಂಡಿತ್ತು.

ಏಲೂರು ಭೇಟಿ ಮತ್ತು ಅಕ್ಷರಾಭ್ಯಾಸ

1921 ಏಪ್ರಿಲ್ 3 ರಂದು ಮಹಾತ್ಮ ಗಾಂಧೀಜಿ ಹಾಗೂ ಕಸ್ತೂರ್ಬಾ ಗಾಂಧೀಜಿ ಏಲೂರಿಗೆ ಭೇಟಿ ನೀಡಿದ್ದರು. ಈ ಪ್ರವಾಸದ ವೇಳೆ ಗಾಂಧೀಜಿಯವರು ಸ್ವದೇಶಿ ಶಿಕ್ಷಣವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಏಲೂರಿನ ಅಗ್ರಹಾರ ಪ್ರದೇಶದಲ್ಲಿದ್ದ ಮಾರ್ಕಂಡೇಯ ಸ್ವಾಮಿ ದೇವಾಲಯದ ಬಳಿ ‘ಆಂಧ್ರ ಜಾತೀಯ ಮಹಾ ವಿದ್ಯಾಲಯ’ಕ್ಕೆ (ಶ್ರೀ ಗಾಂಧಿ ಜಾತೀಯ ವಿದ್ಯಾಲಯ) ಶಂಕುಸ್ಥಾಪನೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಕಸ್ತೂರ್ಬಾ ಗಾಂಧೀಜಿಯವರು ಸ್ಥಳೀಯ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರೆ, ಈ ಐತಿಹಾಸಿಕ ಘಟನೆಯ ನೆನಪಿಗಾಗಿ ಗಾಂಧೀಜಿಯವರು ತಮ್ಮ ಕೈಯಾರ ಒಂದು ಮೇಡಿ (ಅತ್ತಿ) ಗಿಡವನ್ನು ನೆಟ್ಟಿದ್ದರು.

ಶತಮಾನದ ಶಾಂತಿ ವೃಕ್ಷ

ಗಾಂಧೀಜಿ ನೆಟ್ಟಿದ್ದ ಆ ಅತ್ತಿ ಗಿಡವು ಕಾಲಕ್ರಮೇಣ ಬೃಹತ್ ವೃಕ್ಷವಾಗಿ ಬೆಳೆದು, ಸುಮಾರು 100 ವರ್ಷಗಳ ಕಾಲ ಪೀಳಿಗೆಯ ವಿದ್ಯಾರ್ಥಿಗಳಿಗೆ ತಂಪಾದ ನೆರಳನ್ನು ನೀಡಿತು. ಗಾಂಧೀಜಿಯವರ ಸ್ಪರ್ಶದ ನೆನಪನ್ನು ಹೊತ್ತ ಆ ಮರದಡಿ ಕುಳಿತು ಓದುವುದನ್ನು ಸ್ಥಳೀಯ ವಿದ್ಯಾರ್ಥಿಗಳು ಹೆಮ್ಮೆಯಿಂದ ಭಾವಿಸುತ್ತಿದ್ದರು. ಆದರೆ, ವಯೋಸಹಜ ಕಾರಣಗಳಿಂದ ಮತ್ತು ಪ್ರಕೃತಿಯ ವೈಪರೀತ್ಯಗಳಿಂದಾಗಿ 2022 ರ ವೇಳೆಗೆ ಈ ಐತಿಹಾಸಿಕ ವೃಕ್ಷವು ಒಣಗಿಹೋಯಿತು.

ಮರ ಒಣಗಿದರೂ ಜೀವಂತವಾಗಿದೆ ನೆನಪು

ಅತ್ತಿ ಮರ ಒಣಗಿಹೋದರೂ ಅದೇ ಸ್ಥಳದಲ್ಲಿ, ಒಣಗಿದ ಮರದ ಪಕ್ಕದಲ್ಲೇ ಸ್ವಾಭಾವಿಕವಾಗಿ ಬೆಳೆದ ಬೇವಿನ ಮರವು ಇಂದು ದಟ್ಟವಾಗಿ ಬೆಳೆದು ನಿಂತಿದೆ. ಪ್ರಸ್ತುತ ಆ ಬೇವಿನ ಮರದ ಕೆಳಗೆ ಸಿಮೆಂಟ್ ಪೀಠವನ್ನು ನಿರ್ಮಿಸಲಾಗಿದ್ದು, ಸಾಯಂಕಾಲದ ವೇಳೆ ವಿದ್ಯಾರ್ಥಿಗಳು ಸಾಲಾಗಿ ಕುಳಿತು ವ್ಯಾಸಂಗ ಮಾಡುತ್ತಿದ್ದಾರೆ. ಗಾಂಧೀಜಿ ನೆಟ್ಟ ಮರದ ಜಾಗದಲ್ಲಿ ಬೆಳೆದು ನಿಂತಿರುವ ಈ ಬೇವಿನ ಮರವು ಇಂದು ರಾಷ್ಟ್ರೀಯ ವಿದ್ಯಾಲಯದ ಆವರಣದಲ್ಲಿ ಗಾಂಧೀಜಿಯವರ ನೆನಪನ್ನು ಸಜೀವವಾಗಿರಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version