Headlines

ಮತ್ತೆ ಬರುತ್ತಿದೆ ‘ಅಗ್ನಿಸಾಕ್ಷಿ’ ಧಾರಾವಾಹಿ: ಶಮಂತ್ ಗೌಡ ಹೇಳಿದ್ದೇನು?

ಈ ಹಿಂದೆ ‘ಲಕ್ಷ್ಮಿ ಬಾರಮ್ಮ’ ಧಾರಾವಾಹಿಯಲ್ಲಿ (Serial) ನಟಿಸಿದ್ದ ಮಾಜಿ ಬಿಗ್​​ಬಾಸ್ ಸ್ಪರ್ಧಿ ಶಮಂತ್ ಇದೀಗ ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಪ್ರಸಾರವಾಗಿದ್ದ ‘ಅಗ್ನಿಸಾಕ್ಷಿ’ ಧಾರಾವಾಹಿ ಸಖತ್ ಹಿಟ್ ಆಗಿತ್ತು, ಲಕ್ಷಾಂತರ ಮನೆ ಮಂದಿಯ ಮನ ಗೆದ್ದಿತ್ತು. ಇದೀಗ ಅದೇ ಹೆಸರಿನಲ್ಲೇ ಧಾರಾವಾಹಿ ಮತ್ತೆ ಬರುತ್ತಿದೆ. ಈ ಬಾರಿ ಒಬ್ಬ ಅಹಂಕಾರಿ ನಾಯಕ ಹಾಗೂ ಸ್ವಾಭಿಮಾನಿ ನಾಯಕಿಯ ನಡುವೆ ನಡೆಯುವ ಕತೆಯನ್ನು ಒಳಗೊಂಡಿದೆ. ಶಮಂತ್, ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಧಾರಾವಾಹಿ ಬಗ್ಗೆ ಅವರೇನು ಹೇಳಿದರು?…

Read More

ಬಿಜೆಪಿಗೆ ರಾಜೀನಾಮೆ ನೀಡಿ ಬಂದ ಅಣ್ಣಾಮಲೈಗೆ ಭರ್ಜರಿ ಸ್ವಾಗತ, ಫ್ಯಾನ್ಸ್ ಹರ್ಷೋದ್ಘಾರ ಹೇಗಿದೆ ನೋಡಿ – Kannada News

ಚೆನ್ನೈ, (ಜೂನ್ 05): ಕಡೆಗೂ ಸಿಂಗಂ ಖ್ಯಾತಿಯ ಅಣ್ಣಾಮಲೈ ಬಿಜೆಪಿ ಪಕ್ಷಕ್ಕೆ ಗುಡ್‌ಬೈ ಹೇಳಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಅಣ್ಣಾಮಲೈ ನೀಡಿರುವ ರಾಜೀನಾಮೆಯನ್ನು ಬಿಜೆಪಿ ಅಂಗೀಕರಿಸಿದೆ. ಈ ಮೂಲಕ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಹಗ್ಗ-ಜಗ್ಗಾಟ ಅಂತ್ಯಗೊಂಡಿದೆ. ಆದರೆ ಅಣ್ಣಾಮಲೈ ಪಕ್ಷ ತೊರೆಯುತ್ತಿದ್ದಂತೇ, ಬಿಜೆಪಿ ನಾಯಕರು ಭಿನ್ನ ಹೇಳಿಕೆಗಳನ್ನು ನೀಡಲಾರಂಭಿಸಿದ್ದಾರೆ. “ಅಣ್ಣಾಮಲೈ ಹೊರಹೋಗುವುದರಿಂದ ಪಕ್ಷಕ್ಕೆ ಯಾವ ನಷ್ಟವೂ ಇಲ್ಲ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್‌ ನಾಗೇಂದ್ರನ್‌ ಹೇಳಿಕೆ ನೀಡಿದ್ದಾರೆ. ಇನ್ನೊಂದೆಡೆ ರಾಜೀನಾಮೆ ಅಂಗೀಕರಿಸುತ್ತಿದ್ದಂತೆಯೇ ದೆಹಲಿಯಿಂದ ಚೆನ್ನೈಗೆ…

Read More

ಬಿಎಂಟಿಸಿ ಪ್ರಯಾಣಿಕರಿಗೆ ಗುಡ್​ನ್ಯೂಸ್​​: ಮೆಟ್ರೋ ಮಾದರಿಯಲ್ಲಿ ಆನ್‌ಲೈನ್ ಟಿಕೆಟ್ ವ್ಯವಸ್ಥೆ ಜಾರಿಗೆ ಪ್ಲ್ಯಾನ್​​ – Kannada News

ಬೆಂಗಳೂರು, ಜೂನ್​​ 05: ಶಕ್ತಿ ಯೋಜನೆಯ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್ ಪಡೆಯಲು ಪಡುತ್ತಿರುವ ಪ್ರಯಾಣಿಕರ ಕಷ್ಟಕ್ಕೆ ಮುಕ್ತಿ ಹಾಡಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ನಮ್ಮ ಮೆಟ್ರೋ ಮಾದರಿಯಲ್ಲೇ ಆನ್‌ಲೈನ್ ಕ್ಯೂಆರ್ (QR) ಟಿಕೆಟ್ ಖರೀದಿಸುವ ಹೊಸ ಪ್ಲ್ಯಾನ್​ ಜಾರಿಗೆ ಮುಂದಾಗಿದೆ.​ ಇದಕ್ಕೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯಾಂಶಗಳು ನಮ್ಮ ಮೆಟ್ರೋ ಮಾದರಿಯಲ್ಲೇ ಬಿಎಂಟಿಸಿಯಲ್ಲೂ ಆನ್‌ಲೈನ್ ಟಿಕೆಟ್ ಖರೀದಿಸಲು ಅವಕಾಶ ಬಿಎಂಟಿಸಿ ಬಸ್ ಹತ್ತುವ ಮುನ್ನವೇ ಮೊಬೈಲ್ ಮೂಲಕ ಕ್ಯೂಆರ್ ಟಿಕೆಟ್…

Read More

ಹೆಚ್ಚು ಆಂಟಿಬಯೋಟಿಕ್ ಸೇವನೆಯಿಂದ ಕರುಳಿನ ಆರೋಗ್ಯ ಹದಗೆಡಬಹುದೇ? ತಜ್ಞರು ಹೇಳುವುದೇನು? – Kannada News

ಇತ್ತೀಚಿನ ದಿನಗಳಲ್ಲಿ ಆಂಟಿಬಯೋಟಿಕ್ ಔಷಧಿಗಳ ಬಳಕೆ ಬಹಳ ಹೆಚ್ಚಾಗಿದೆ. ಜ್ವರ, ಗಂಟಲು ನೋವು, ಸೋಂಕುಗಳಂತಹ ಸಣ್ಣ ಸಮಸ್ಯೆಗಳಿಗೂ ಕೆಲವರು ವೈದ್ಯರ ಸಲಹೆಯಿಲ್ಲದೆ ಆಂಟಿಬಯೋಟಿಕ್ (Antibiotics) ತೆಗೆದುಕೊಳ್ಳುತ್ತಾರೆ. ಆದರೆ, ಈ ಔಷಧಿಗಳನ್ನು ಅತಿಯಾಗಿ ಅಥವಾ ಸರಿಯಾದ ರೀತಿಯಲ್ಲಿ ಬಳಸದಿರುವುದು ಕರುಳಿನ ಆರೋಗ್ಯದ (Gut Health) ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆಂಟಿಬಯೋಟಿಕ್‌ಗಳು ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕುಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಸರಿಯಾದ ರೀತಿಯಲ್ಲಿ ವೈದ್ಯರ ಸಲಹೆಯಂತೆ ಬಳಸಿದರೆ ಅವು ಪರಿಣಾಮಕಾರಿ ಔಷಧಿಗಳಾಗಿವೆ….

Read More

ಮಳೆಗಾಲದಲ್ಲಿ ಸೊಳ್ಳೆಗಳನ್ನು ನಿಯಂತ್ರಿಸೋದು ಹೇಗೆ? ಇಲ್ಲಿವೆ ಸುಲಭ ಮಾರ್ಗಗಳು

ನವದೆಹಲಿ, ಜೂನ್ 5: ಈಗಾಗಲೇ ಮಳೆಗಾಲ (Monsoon) ಶುರುವಾಗಿದೆ. ಕರ್ನಾಟಕದಲ್ಲೂ ಮೂರ್ನಾಲ್ಕು ದಿನಗಳಿಂದ ಮಳೆ ಸುರಿಯುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ನಮ್ಮ ಆರೋಗ್ಯದ ಕಡೆ ವಿಶೇಷವಾದ ಗಮನಹರಿಸುವುದು ಅತ್ಯಗತ್ಯ. ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಡೆಂಗ್ಯೂ, ಮಲೇರಿಯಾ ಮತ್ತು ಚಿಕನ್‌ಗುನ್ಯಾದಂತಹ ರೋಗಗಳು ಹರಡುವ ಅಪಾಯ ಹೆಚ್ಚು. ಮಳೆಗಾಲದಲ್ಲಿ ಸೊಳ್ಳೆಗಳನ್ನು ನಿಯಂತ್ರಿಸಲು ಮತ್ತು ಅವುಗಳಿಂದ ರಕ್ಷಣೆ ಪಡೆಯಲು ಕೆಲವು ಪ್ರಮುಖ ಹಾಗೂ ಸುಲಭವಾದ ಮಾರ್ಗಗಳು ಇಲ್ಲಿವೆ. ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿಡಿ: ಮಳೆಗಾಲ ಆರಂಭವಾದ…

Read More

ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದು; ಸೂರತ್​​ನಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಸೂರತ್, ಜೂನ್ 5: ಸೂರತ್​ನಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ (PM Modi) ಇಂದು ಚಾಲನೆ ನೀಡಿದ್ದಾರೆ. ಈ ವೇಳೆ ಕರ್ನಾಟಕದ ರಾಜಕಾರಣವನ್ನು ಕೂಡ ಪ್ರಸ್ತಾಪಿಸಿದ ಅವರು, “ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಲ್ಲಿನ ಜನರಲ್ಲಿ ತೀವ್ರ ಅಸಮಾಧಾನವಿದೆ. ಇದೇ ಕಾರಣಕ್ಕೆ ಆ ಪಕ್ಷಕ್ಕೆ ಅಲ್ಲಿ ತನ್ನ ಮುಖ್ಯಮಂತ್ರಿಯನ್ನೇ ಬದಲಾಯಿಸಬೇಕಾಗಿ ಬಂತು” ಎಂದು ಲೇವಡಿ ಮಾಡಿದ್ದಾರೆ. ಪ್ರಸ್ತುತ ಜಗತ್ತು ಕೋವಿಡ್ ಮಹಾಮಾರಿ, ವಿವಿಧ ದೇಶಗಳ ನಡುವಿನ ಯುದ್ಧಗಳು ಮತ್ತು ತೀವ್ರ ಇಂಧನ ಬಿಕ್ಕಟ್ಟಿನಿಂದಾಗಿ ತತ್ತರಿಸಿದೆ….

Read More

ಕಾನೂನು ಎಲ್ಲರಿಗೂ ಒಂದೇ, ಮೀರಿದರೆ ಕ್ರಮ: ಸಭೆ ಬಳಿಕೆ ಎಚ್ಚರಿಕೆ ಕೊಟ್ಟ ಗೃಹ ಸಚಿವ ಖರ್ಗೆ – Kannada News

ಬೆಂಗಳೂರು, (ಜೂನ್ 05): ಗೃಹ ಸಚಿವರಾದ ಬಳಿಕ ಪ್ರಿಯಾಂಕ್ ಖರ್ಗೆ (Priyank Kharge) ಅವರು ಇಂದು (ಜೂನ್ 05) ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆ ಮೊದಲ ಸಭೆ ನಡೆಸಿದರು. ಈ ವೇಳೆ ಬೆಂಗಳೂರು ಟ್ರಾಫಿಕ್​ ಸಮಸ್ಯೆ, ಮಹಿಳೆಯರ ಸುರಕ್ಷತೆ ಹಾಗೂ ಡ್ರಗ್ಸ್​ ಮಾಫಿಯಾ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಜೊತೆಗೆ ಕಾನೂನು ಸುವ್ಯವಸ್ಥೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ.  ಇನ್ನು ಸಭೆ ಬಳಿಕ ಮಾತನಾಡಿದ ಖರ್ಗೆ, ಕಾನೂನು ಎಲ್ಲರಿಗೂ ಒಂದೆ. ಯಾರೇ ಇದ್ರೂ…

Read More

ಆತ್ಮನಿರ್ಭರ ಭಾರತವನ್ನು ಲೇವಡಿ ಮಾಡಿದ್ದಕ್ಕೆ ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ – Kannada News

ಸೂರತ್, ಜೂನ್ 5: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಗುಜರಾತ್‌ನ ಸೂರತ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೇಶದಲ್ಲಿರುವ ಕೆಲವು ನಿರಾಶಾವಾದಿಗಳು ಸದಾ ‘ಆತ್ಮನಿರ್ಭರ ಭಾರತ’ ಅಭಿಯಾನವನ್ನು ಲೇವಡಿ ಮಾಡುತ್ತಿದ್ದಾರೆ ಮತ್ತು ದೇಶದ ಸಂಕಲ್ಪವನ್ನು ಕೀಳಾಗಿ ಕಾಣುತ್ತಿದ್ದಾರೆ ಎಂದು ಪ್ರಧಾನಿ ಕಿಡಿಕಾರಿದರು. ಇತರರ ಮೇಲೆ ಅವಲಂಬಿತವಾಗಿರುವ ದೇಶವು ಎಂದಿಗೂ ತನಗೆ ಅರ್ಹವಾದ ಅಭಿವೃದ್ಧಿಯ ಎತ್ತರವನ್ನು ತಲುಪಲು…

Read More

ನಾಯಕಿಯ ‘ಅಂಗಾಂಗ’ಗಳ ಮೇಲೆ ‘ಕಣ್ಣು’, ‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ – Kannada News

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ನಿನ್ನೆ (ಜೂನ್ 04) ಬಿಡುಗಡೆ ಆಗಿದೆ. ಸಿನಿಮಾನಲ್ಲಿ ಬಹಳ ಒಳ್ಳೆಯ ಸಂದೇಶವಿದೆ. ಹಲವು ಉತ್ತಮ ವಿಷಯಗಳನ್ನು ಸಿನಿಮಾ ಹೇಳುತ್ತಿದೆ. ಕ್ರೀಡೆಯ ಮಹತ್ವ, ಛಲ ಬಿಡದೆ ಹೋರಾಡುವ ಸ್ಪೂರ್ತಿ, ಗ್ರಾಮೀಣ ವಿಕಾಸ, ಮೂಲ ಸೌಕರ್ಯಗಳ ಅಗತ್ಯತೆ, ಅಂಗವೈಕಲ್ಯ ಶಾಪವಲ್ಲ ಎಂಬಿತ್ಯಾದಿ ಉತ್ತಮ ಸಂದೇಶಗಳನ್ನು ಈ ಸಿನಿಮಾ ಒಳಗೊಂಡಿದೆ. ಇಷ್ಟೆಲ್ಲ ಇದ್ದಾಗಿಯೂ ಸಹ ಸಿನಿಮಾನಲ್ಲಿ ನಾಯಕಿಯನ್ನು ತೋರಿಸುವ ವಿಧಾನದಿಂದಾಗಿ ಸಿನಿಮಾದ ವಿರುದ್ಧ ಟೀಕೆ ವ್ಯಕ್ತವಾಗುತ್ತಿದೆ. ನಿರ್ದೇಶಕನ ಒಂದು ಕೆಟ್ಟ ನಿರ್ಧಾರದಿಂದ…

Read More

ಅಣ್ಣನ ಕಣ್ಣೆದುರೇ ತಮ್ಮ ಸಿಡಿಲಿಗೆ ಬಲಿ: ಮೃತದೇಹವನ್ನ ಹೆಗಲ ಮೇಲೆ ಹೊತ್ತು ತಂದ ಸಹೋದರ – Kannada News

ಗದಗ, ಜೂನ್​​ 05: ಅಣ್ಣನ ಕಣ್ಣೆದುರೇ ಸಿಡಿಲು (lightning) ಬಡಿದು ತಮ್ಮ ಸಾವನ್ನಪ್ಪಿದ (death) ದಾರುಣ ಘಟನೆಯೊಂದು ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರಾಜೂರು ಗ್ರಾಮದಲ್ಲಿ ನಡೆದಿದೆ. ಪ್ರಶಾಂತ್ ಹುಡೇದ(19) ಮೃತ ಯುವಕ. ಜಾನುವಾರು ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ದುರಂತ ಸಂಭವಿಸಿದ್ದು, ತಮ್ಮನ ಶವವನ್ನು ಹೊತ್ತು ಅಣ್ಣ ಊರಿಗೆ ಬಂದಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗದಗ ಜಿಲ್ಲೆಯ ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮುಖ್ಯಾಂಶಗಳು ಗದಗ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಭಾರಿ ಮಳೆ…

Read More