Headlines

ಕರ್ನಾಟಕದಲ್ಲೇ ಅತಿ ಎತ್ತರದ ಶ್ರೀಕೃಷ್ಣ ಮೂರ್ತಿ ಅಪಾಯದಲ್ಲಿ! ಐತಿಹಾಸಿಕ ಲಕ್ಕುಂಡಿ ಬಳಿಯೇ ಇದ್ದರೂ ನಿರ್ಲಕ್ಷ್ಯ – Kannada News | Karnataka’s Tallest Krishna Idol Near Lakkundi Faces Neglect: Why Jantli Shirur Temple Is Rarer Than Udupi Krishna

ಕರ್ನಾಟಕದಲ್ಲೇ ಅತಿ ಎತ್ತರದ ಶ್ರೀಕೃಷ್ಣ ಮೂರ್ತಿImage Credit source: tv9 ಗದಗ, ಫೆಬ್ರವರಿ 2: ಗದಗ (Gadag) ಜಿಲ್ಲೆ ಮುಂಡರಗಿ ತಾಲೂಕಿನ ಜಂತ್ಲಿಶಿರೂರ ಗ್ರಾಮದಲ್ಲಿರುವ ಐತಿಹಾಸಿಕ ಶ್ರೀಕೃಷ್ಣ ದೇವಾಲಯ ಅವ್ಯವಸ್ಥೆಯ ಆಗರವಾಗಿದ್ದು, ಆಡಳಿತದ ನಿರ್ಲಕ್ಷ್ಯದಿಂದ ನಲುಗಿ ಹೋಗಿದೆ. ಇದೀಗ ಗ್ರಾಮಸ್ಥರು ದೇಗುಲದ ಜೀರ್ಣೋದ್ಧಾರಕ್ಕೆ ಆಗ್ರಹಿಸಿದ್ದಾರೆ. ಇಡೀ ಕರ್ನಾಟಕದಲ್ಲೇ ಅತೀ ಎತ್ತರದ ಕೃಷ್ಣನ ಮೂರ್ತಿ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾದ ದೇವಸ್ಥಾನ ಇದಾಗಿದೆ. ಸುಮಾರು ಐದು ಅಡಿ ಎತ್ತರದ ಅಪರೂಪದ ಶ್ರೀ ಕೃಷ್ಣ ಮೂರ್ತಿಯನ್ನು ಹೊಂದಿರುವ ಈ ದೇವಾಲಯವನ್ನು ಕಲ್ಯಾಣ…

Read More

ಉಕ್ರೇನ್​ನಲ್ಲಿ ಬಸ್ ಮೇಲೆ ಇಸ್ರೇಲ್ ಡ್ರೋನ್ ದಾಳಿ, 15 ಮಂದಿ ಸಾವು, 7 ಜನರಿಗೆ ಗಾಯ – Kannada News | Fifteen Workers Killed in Russian Strike as Ukraine Sets Peace Talks Timeline

ಕೈವ್, ಫೆಬ್ರವರಿ 02: ರಷ್ಯಾ ಉಕ್ರೇನ್​(Ukraine) ಮೇಲೆ ಡ್ರೋನ್ ದಾಳಿ ನಡೆಸಿದ್ದು, ಘಟನೆಯಲ್ಲಿ 15 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗಣಿ ಕಾರ್ಮಿಕರನ್ನು ಸಾಗಿಸುತ್ತಿದ್ದ ಖಾಸಗಿ ಕಂಪನಿಯ ಬಸ್ ಅನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ನ ರಾಜ್ಯ ತುರ್ತು ಸೇವೆ ತಿಳಿಸಿದೆ. ಡ್ರೋನ್ ದಾಳಿಯ ನಂತರ ಬಸ್ ಬೆಂಕಿಗೆ ಹೊತ್ತಿಕೊಂಡಿತ್ತು, ಅಗ್ನಿಶಾಮಕ ದಳದ ಸಿಬ್ಬಂದಿ ಸಕಾಲದಲ್ಲಿ ಬೆಂಕಿ ನಂದಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆರಂಭದಲ್ಲಿ…

Read More

Horoscope Today 02 February​: ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 02 ಫೆಬ್ರುವರಿ​ 2026 ರ ದ್ವಾದಶ ರಾಶಿಗಳ ಫಲಾಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಸೋಮವಾರವಾಗಿದ್ದು, ವಿಶ್ವಾಸು ನಾಮ ಸಂವತ್ಸರ, ಆಶ್ಲೇಷ ನಕ್ಷತ್ರ ಮತ್ತು ಆಯುಷ್ಮಾನ್ ಯೋಗವಿರುತ್ತದೆ. ರವಿ ಮಕರ ರಾಶಿಯಲ್ಲೂ, ಚಂದ್ರ ಕಟಕ ರಾಶಿಯ ಆಶ್ಲೇಷ ನಕ್ಷತ್ರದಲ್ಲೂ ಸಂಚಾರ ಮಾಡಲಿದ್ದಾರೆ. ರಾಹುಕಾಲ ಬೆಳಿಗ್ಗೆ 8:11 ರಿಂದ 9:38 ರವರೆಗೆ ಇರುತ್ತದೆ. ಸರ್ವಸಿದ್ಧಿ, ಸಂಕಲ್ಪ ಹಾಗೂ ಶುಭಕಾಲ ಬೆಳಿಗ್ಗೆ 9:39 ರಿಂದ 11:06 ರವರೆಗೆ ಇರುತ್ತದೆ. ಮೇಷ ರಾಶಿಯವರಿಗೆ ಆರು…

Read More

IND vs PAK: ಪಾಕಿಸ್ತಾನದ ಬಹಿಷ್ಕಾರದಿಂದ ಭಾರತಕ್ಕೆ ಸಿಗುವ ಅಂಕ ಎಷ್ಟು? – Kannada News | Pakistan Boycott: How many points will India get?

ಟಿ20 ವಿಶ್ವಕಪ್​ನಲ್ಲಿನ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ. ಅದರಂತೆ ಫೆಬ್ರವರಿ 15 ರಂದು ನಡೆಯಬೇಕಿರುವ ಭಾರತ ಮತ್ತು ಪಾಕಿಸ್ತಾನ್ ಪಂದ್ಯವು ಜರುಗುವುದು ಅನುಮಾನ. ಒಂದು ವೇಳೆ ಪಂದ್ಯ ನಡೆಯದೇ ಇದ್ದರೆ ಭಾರತಕ್ಕೆ ಸಿಗುವ ಅಂಕ ಎಷ್ಟು ಎಂಬ ಪ್ರಶ್ನೆ ಮೂಡುವುದು ಸಹಜ. ಸಾಮಾನ್ಯವಾಗಿ ಪಂದ್ಯ ರದ್ದಾದರೆ ಉಭಯ ತಂಡಗಳು ತಲಾ 2 ಅಂಕಗಳನ್ನು ಹಂಚಿಕೊಳ್ಳುತ್ತವೆ. ಇದೀಗ ಪಾಕಿಸ್ತಾನ್ ಪಂದ್ಯವನ್ನು ಬಹಿಷ್ಕರಿಸುವುದರಿಂದ ಅಂಕಗಳನ್ನು ಹಂಚಿಕೊಳ್ಳಲಾಗುತ್ತದೆಯೇ ಎಂಬುದೇ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಇಲ್ಲ. ಪಾಕಿಸ್ತಾನ್…

Read More

Jammu and Kashmir Earthquake: ಜಮ್ಮು ಮತ್ತು ಕಾಶ್ಮೀರದಲ್ಲಿ 4.8 ತೀವ್ರತೆಯ ಭೂಕಂಪ – Kannada News | Moderate Earthquake 4.8 Shakes Jammu and Kashmir, Epicentre in Budgam

ಶ್ರೀನಗರ, ಫೆಬ್ರವರಿ 02: ಕಳೆದ ಕೆಲವು ದಿನಗಳಿಂದ ದೇಶದ ವಿವಿಧ ಭಾಗಗಳಲ್ಲಿ ಭೂಕಂಪ(Earthquake)ದ ಅನುಭವವಾಗುತ್ತಿದ್ದು, ಭೂಕಂಪದ ಭೀತಿ ಹೆಚ್ಚಾಗಿದೆ. ಸೋಮವಾರ ಬೆಳಗ್ಗೆ ಭೂಕಂಪನದ ಅನುಭವವಾಗಿದೆ, ಕಣಿವೆ ಪ್ರದೇಶದಲ್ಲಿ 4.8 ತೀವ್ರತೆಯ ಭೂಕಂಪ ಸಂಭವಿಸಿದೆ. ಇಂದು ಮುಂಜಾನೆ ಕಾಶ್ಮೀರ ಕಣಿವೆಯಲ್ಲಿ ಭೂಮಿ ಕಂಪಿಸಿದ ಅನುಭವವಾದ ಕಾರಣ ಬಾರಾಮುಲ್ಲಾದ ಜನರು ತಮ್ಮ ಮನೆಗಳಿಂದ ಹೊರಗೆ ಓಡಿಬಂದಿದ್ದರು. ಇಲ್ಲಿಯವರೆಗೆ ಯಾವುದೇ ಹಾನಿ ಸಂಭವಿಸಿದ ವರದಿಗಳು ಲಭ್ಯವಾಗಿಲ್ಲ. ಸೋಮವಾರ ಬೆಳಗಿನ ಜಾವ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ…

Read More

ಬೆಂಗಳೂರಿನಲ್ಲಿ 18 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ ನೇಪಾಳಿ ದಂಪತಿ! – Kannada News | Bengaluru’s Rs 18 Crore Gold Heist: Nepali Couple Used Fake IDs as Domestic Help

ಬೆಂಗಳೂರಿನಲ್ಲಿ 18 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ ನೇಪಾಳಿ ದಂಪತಿ! ಬೆಂಗಳೂರು, ಫೆಬ್ರುವರಿ 02: ಬೆಂಗಳೂರಿನಲ್ಲಿ (Bengaluru) ಇತ್ತೀಚಿಗೆ ಬರೋಬ್ಬರಿ 18 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳ್ಳತನದ ಪ್ರಕರಣದಲ್ಲಿ ಮಾರತ್ ಹಳ್ಳಿ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮನೆಕೆಲಸದ ಹೆಸರಿನಲ್ಲಿ ವಿಶ್ವಾಸ ಗಳಿಸಿ ಸುಮಾರು ಬಂಗಾರ ದೋಚುತ್ತಿದ್ದ ಆರೋಪಿಗಳು ನೇಪಾಳಿ ದಂಪತಿ ಎಂಬುದು ತನಿಖೆಯಿಂದ ದೃಢಪಟ್ಟಿದ್ದು, ಕದೀಮರನ್ನು ಹಿಡಿಯಲು ಬಲೆ ಬೀಸಿದ್ದಾರೆ. ಆರೋಪಿಗಳು ದಿನೇಶ್ ಹಾಗೂ ಕಮಲ ಅಥವಾ ಸಲೀನಾ ಎಂಬ ನಕಲಿ ಹೆಸರುಗಳನ್ನು…

Read More

ಸೋತು ಸುಣ್ಣವಾಗಿರೋ ನಿರ್ದೇಶಕನ ಜೊತೆ ಕೈ ಜೋಡಿಸಿದ ರಣವೀರ್ ಸಿಂಗ್? – Kannada News | Ranveer Singh Joins Shankar’s Velpari: Bollywood Star in Pan India Historical Epic with Vikram

ರಣವೀರ್ ಸಿಂಗ್ ನಟನೆಯ ‘ಧುರಂಧರ್’ (Dhurandhar) ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಮುರಿಯುತ್ತಲೇ ಇದೆ. ಸಾವಿರ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವ ಈ ಚಿತ್ರ ಪ್ರೇಕ್ಷಕರನ್ನು ಮೋಡಿ ಮಾಡಿದೆ. ಚಿತ್ರಮಂದಿರಗಳಲ್ಲಿ ಸಂಚಲನ ಮೂಡಿಸಿರುವ ಈ ಚಿತ್ರ ಶುಕ್ರವಾರದಿಂದ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಅಲ್ಲಿಯೂ ಸಿನಿಮಾ ಮೆಚ್ಚುಗೆ ಪಡೆದಿದೆ. ಈಗ ರಣವೀರ್ ಸಿಂಗ್ ಅವರು ದಕ್ಷಿಣದ ನಿರ್ದೇಶಕನ ಜೊತೆ ಕೈ ಜೋಡಿಸುತ್ತಿದ್ದಾರೆ ಎಂದು ವರದಿ ಆಗಿದೆ. ಅದು ಕೂಡ ಸತತ ಸೋಲು ಕಂಡ ನಿರ್ದೇಶಕ. ಐದು ವರ್ಷಗಳ…

Read More

ಆಡಿಯೋ ವೈರಲ್ ಪ್ರಕರಣ: ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡಗೆ ಕಾಂಗ್ರೆಸ್‌ನಿಂದಲೂ ಗೇಟ್​ಪಾಸ್ ಸಾಧ್ಯತೆ – Kannada News | Viral Audio Row: Mandya Congress Seeks Action Against Former MP LR Shivaramegowda

ಎಲ್ಆರ್ ಶಿವರಾಮೇಗೌಡ ಹಾಗೂ ಮಂಡ್ಯ ಕಾಂಗ್ರೆಸ್​ ಘಟಕದಿಂದ ಕೆಪಿಸಿಸಿಗೆ ಬರೆದ ಪತ್ರದ ಪ್ರತಿImage Credit source: tv9 ಮಂಡ್ಯ, ಫೆಬ್ರವರಿ 2: ಮಾಜಿ ಸಂಸದ, ಕಾಂಗ್ರೆಸ್ ನಾಯಕ, ಕೆಪಿಸಿಸಿ ವಕ್ತಾರರೂ ಆಗಿರುವ ಎಲ್ಆರ್ ಶಿವರಾಮೇಗೌಡಗೆ (LR Shivaramegowda)  ಆಡಿಯೋ ವೈರಲ್ ಪ್ರಕರಣ ತೀವ್ರ ಸಂಕಷ್ಟ ತಂದಿದೆ. ಇತ್ತೀಚೆಗೆ ವೈರಲ್ ಆಗಿರುವ ಆಡಿಯೋ ಒಂದರಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟಾಗಿದೆ. ಶಿವರಾಮೇಗೌಡ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರೇ ಒತ್ತಾಯಿಸಿದ್ದಾರೆ. ಕಾರ್ಯಕರ್ತನೊಬ್ಬನೊಂದಿಗೆ ಪೋನ್ ಕರೆ ವೇಳೆ ನಡೆದಿದ್ದ…

Read More

ಬಾಲಿವುಡ್​ಗೆ ಮತ್ತೆ ಭೀತಿ ಹುಟ್ಟಿಸಿದ ಬಿಷ್ಣೋಯ್ ಗ್ಯಾಂಗ್​​ನ ಶುಭಂ ಲೋಂಕರ್ ಯಾರು? – Kannada News | Rohit Shetty Firing: Bollywood Under Bishnoi Gang Threat, Who is Shubham Lonkar

ರೋಹಿತ್ ಹಾಗೂ ಲಾರೆನ್ಸ್ Image Credit source: Indian Express ಬಾಲಿವುಡ್ (Bollywood) ಮತ್ತೊಮ್ಮೆ ಭೂಗತ ಲೋಕ ಮತ್ತು ದರೋಡೆಕೋರರ ಭಯದಿಂದ ನಲುಗಿದೆ. ಸಲ್ಮಾನ್ ಖಾನ್ ಅವರ ಆಪ್ತ ಬಾಬಾ ಸಿದ್ದಿಕಿ ಅವರ ಹತ್ಯೆಯ ಬಳಿಕ ಜುಹುವಿನಲ್ಲಿರುವ ಪ್ರಸಿದ್ಧ ನಿರ್ದೇಶಕ ರೋಹಿತ್ ಶೆಟ್ಟಿ ನಿವಾಸದಲ್ಲಿ ನಡೆದ ಗುಂಡಿನ ದಾಳಿ ಘಟನೆ ಕೋಲಾಹಲ ಸೃಷ್ಟಿಸಿದೆ. ಈ ದಾಳಿಯ ಕೆಲವೇ ಗಂಟೆಗಳಲ್ಲಿ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿರುವ ಕುಖ್ಯಾತ ದರೋಡೆಕೋರ ಶುಭಂ ಲೋಂಕರ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಳ್ಳುವ…

Read More

ಫೈನಲ್​ನಲ್ಲಿ RCB ತಂಡದ ಎದುರಾಳಿ ಯಾರು?

WPL 2026: ವುಮೆನ್ಸ್ ಪ್ರೀಮಿಯರ್ ಲೀಗ್​ನ ಮೊದಲ ಸುತ್ತಿನ ಪಂದ್ಯಗಳು ಪೂರ್ಣಗೊಂಡಿದೆ. ಪ್ರಥಮ ಸುತ್ತಿನಲ್ಲಿ ಕಣಕ್ಕಿಳಿದ 5 ತಂಡಗಳಲ್ಲಿ ಮೂರು ತಂಡಗಳು ಪ್ಲೇಆಫ್​ಗೆ ಪ್ರವೇಶಿಸಿದರೆ, ಎರಡು ಟೀಮ್​ಗಳು ಹೊರಬಿದ್ದಿವೆ. ಪ್ಲೇಆಫ್​ಗೆ ಪ್ರವೇಶಿಸಿರುವ ಮೂರು ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನೇರವಾಗಿ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ನಾಕೌಟ್ ಹಂತಕ್ಕೇರಿದೆ. ಅಂದರೆ ಎಲಿಮಿನೇಟರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತುಗುಜರಾತ್ ಜೈಂಟ್ಸ್ ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್​ಗೆ…

Read More