Headlines

ನಿಶ್ಚಿತಾರ್ಥ ಮುಗಿದು ವಾರವಷ್ಟೇ ಕಳೆದಿತ್ತು, ರಷ್ಯಾದ ಕ್ಷಿಪಣಿ ದಾಳಿಗೆ ಉಕ್ರೇನ್ ಕರಾವಳಿಯಲ್ಲಿ ಕೇರಳದ ನಾವಿಕ ಬಲಿ – Kannada News | Kerala Sailor Killed by Russian Missile in Ukraine: Akhil Joyan’s Tragic End After Engagement

ಟೆಹ್ರಾನ್, ಜುಲೈ 21: ನಿಶ್ಚಿತಾರ್ಥ ಮುಗಿದು ಕೇವಲ ಒಂದು ವಾರವಷ್ಟೇ ಆಗಿತ್ತು, ಕೆಲವೇ ತಿಂಗಳುಗಳಲ್ಲಿ ಮದುವೆಯಾಗುವುದು ಕೂಡ ನಿಶ್ಚಯವಾಗಿತ್ತು. ಹೊಸ ಕನಸುಗಳು, ಹೊಸ ಕನಸುಗಳು, ಹೊಸ ಮನೆ ಮತ್ತು ಕುಟುಂಬಕ್ಕೆ ಉತ್ತಮ ಭವಿಷ್ಯ ಕಟ್ಟಿಕೊಡುವ ಹಂಬಲ. ಆದರೆ ವಿಧಿ ಆಟವೇ ಬೇರೆಯಾಗಿತ್ತು. ಸಾವಿರಾರು ಮೈಲಿಗಳ ದೂರದಲ್ಲಿ ನಡೆಯುತ್ತಿರುವ ರಷ್ಯಾ-ಉಕ್ರೇನ್(Ukraine) ಯುದ್ಧದ ಜ್ವಾಲೆಗೆ ಕೇರಳದ 26 ವರ್ಷದ ಅಮಾಯಕರೊಬ್ಬರು ಬಲಿಯಾಗಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯ ವೆಲ್ಲರಿಕ್ಕುಂಡು ನಿವಾಸಿ, ನಾವಿಕ ಅಖಿಲ್ ಜೋಯನ್ ಉಕ್ರೇನ್‌ನ ಒಡೆಸಾ ಬಂದರು ಕರಾವಳಿಯಲ್ಲಿ ರಷ್ಯಾದ…

Read More

ಒಂದೇ ಒಂದು ಗೋಲು… ಎಲ್ಲಾ ತಂಡಗಳಿಗೆ ಪೇನ್ ನೀಡಿದ ಸ್ಪೇನ್! – Kannada News | Just One Goal: Spain Inflicts Maximum Pain

ಒಂದೇ ಒಂದು ಗೋಲು… ಫಿಫಾ ವಿಶ್ವಕಪ್​ ಅನ್ನು ಹೀಗೂ ಗೆಲ್ಲಬಹುದಾ? ಅದು ಕೂಡ ಒಂದು ಗೋಲು ಬಾರಿಸಿ, ಒಂದು ಗೋಲು ಹೊಡೆಸಿಕೊಂಡು… ಅಚ್ಚರಿ ಎನಿಸಿದರೂ ಇದುವೇ ಸತ್ಯ. ಫುಟ್‌ಬಾಲ್ ಇತಿಹಾಸದ ಸಕಲ ದಾಖಲೆಗಳನ್ನು ಧೂಳೀಪಟ ಮಾಡಿ ಸ್ಪೇನ್ ಪಡೆ ವಿಶ್ವ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದೆ. ಅದು ಸಹ ಎದುರಾಳಿಗಳ ಆಕ್ರಮಣಕ್ಕೆ ಬಂಡೆಯಂತೆ ಎದುರಾಗಿ ನಿಂತು ಎಂಬುದು ವಿಶೇಷ. ಏಕೆಂದರೆ ಈ ಬಾರಿಯ ಟೂರ್ನಿಯಲ್ಲಿ ಸ್ಪೇನ್ ನೆಟ್ ಒಳಗೆ ನುಗ್ಗಿದ್ದು ಕೇವಲ ಒಂದೇ ಒಂದು ಗೋಲು ಎಂದರೆ ನೀವು…

Read More

TV9 Kannada News Live: ಮೈಸೂರಿನಲ್ಲಿ SIR ಸಿಬ್ಬಂದಿಗೆ ಬೆದರಿಕೆ, ರಾಯಚೂರಿನಲ್ಲಿ ಬೀದಿನಾಯಿ ದಾಳಿ; ಈ ಹೊತ್ತಿನ ಪ್ರಮುಖ ಸುದ್ದಿಗಳು – Kannada News | TV9 Kannada Live News 21 July 2026 | Karnataka Politics, Parliament Monsoon Session, Weather and Rain Updates

Breaking News Today Live Updates in Kannada: ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿದ್ದು, ಇದೇ ಹೊತ್ತಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಕಾರ್ಯಕರ್ತರು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತ ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆ ಕಸರತ್ತು ಜೋರಾಗಿದೆ. ಈ ವಿಚಾರವಾಗಿ ಹೈಕಮಾಂಡ್ ನಾಯಕರ ಜೊತೆ ಚರ್ಚಿಸುವ ಸಲುವಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಇಂದು ದೆಹಲಿಗೆ ತೆರಳಿದ್ದಾರೆ. ಮತ್ತೊಂದೆಡೆ, ಸಚಿವಾಕಾಂಕ್ಷಿ ಶಾಸಕರು ದೆಹಲಿಯಲ್ಲಿ…

Read More

Graha Maitri: ದಾಂಪತ್ಯ ಜೀವನದಲ್ಲಿ ‘ಗ್ರಹ ಮೈತ್ರಿ’ಯ ಪ್ರಾಮುಖ್ಯತೆ; ಜಾತಕ ಹೊಂದಾಣಿಕೆ ಏಕೆ ಮುಖ್ಯ? – Kannada News | Graha Maitri for Marriage: Astrological Importance and Impact on Relationships

ದಾಂಪತ್ಯ ಜೀವನದಲ್ಲಿ ‘ಗ್ರಹ ಮೈತ್ರಿ’ಯ ಪ್ರಾಮುಖ್ಯತೆ ಮದುವೆ ಎನ್ನುವುದು ಜೀವನಪರ್ಯಂತದ ಪವಿತ್ರ ಬಂಧ. ಹೀಗಾಗಿ, ವಿವಾಹದ ಸಿದ್ಧತೆಯಲ್ಲಿ ಎರಡು ಕುಟುಂಬಗಳ ಒಕ್ಕೂಟ ಮತ್ತು ಪರಸ್ಪರ ಸಾಮರಸ್ಯ ಎಷ್ಟಿದೆಯೋ, ಅಷ್ಟೇ ಪ್ರಾಮುಖ್ಯತೆಯನ್ನು ಜಾತಕ ಹೊಂದಾಣಿಕೆಗೂ ನೀಡಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸುಖಿ ದಾಂಪತ್ಯಕ್ಕೆ ಜಾತಕ ಹೊಂದಾಣಿಕೆ (ಅಷ್ಟ ಕೂಟ ಮಿಲನ) ಅತ್ಯಂತ ಮುಖ್ಯ. ಆದರೆ, ಇದರಲ್ಲಿ ‘ಗ್ರಹ ಮೈತ್ರಿ’ ವಹಿಸುವ ಪಾತ್ರವೇನು? ಇದು ದಾಂಪತ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ. 36 ಗುಣಗಳು ಮತ್ತು…

Read More

ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ವಿದ್ಯುತ್ ತಾಂತ್ರಿಕ ದೋಷ: ಯಶವಂತಪುರ – ಮಾದಾವರ ನಡುವೆ ರೈಲು ಸಂಚಾರ ವ್ಯತ್ಯಯ! – Kannada News | Namma Metro Green Line Disrupted: Trains Suspended Between Yeshwanthpur and Madavara

ಬೆಂಗಳೂರು, ಜುಲೈ 21: ಬೆಂಗಳೂರಿನ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ (Green Line) ಇಂದು ಬೆಳಿಗ್ಗೆ ವಿದ್ಯುತ್ ಪೂರೈಕೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಎದುರಾದ ಈ ವಿದ್ಯುತ್ ಸಮಸ್ಯೆಯಿಂದಾಗಿ ಪ್ರಯಾಣಿಕರು ತೀವ್ರ ಪರದಾಟ ನಡೆಸುವಂತಾಗಿತ್ತು. ಇದೀಗ 8.45ಕ್ಕೆ ಸಂಚಾರ ಆರಂಭವಾಗಿದೆ. ಶಾರ್ಟ್-ಲೂಪ್‌ನಲ್ಲಿ ಮಾತ್ರವೇ ರೈಲು ಸಂಚಾರ ವಿದ್ಯುತ್‌ ಸಮಸ್ಯೆಯ ಕಾರಣದಿಂದಾಗಿ ಹಸಿರು ಮಾರ್ಗದ ಸಿಲ್ಕ್ ಇನ್‌ಸ್ಟಿಟ್ಯೂಟ್‌ನಿಂದ ಯಶವಂತಪುರ ನಿಲ್ದಾಣಗಳ ನಡುವೆ ಮಾತ್ರ…

Read More

ಉತ್ತರ ಪ್ರದೇಶ: ರಾಹುಲ್, ಪ್ರಿಯಾಂಕಾ, ಅಖಿಲೇಶ್ ಸಭೆ, ಮುಂಬರುವ ಅಸೆಂಬ್ಲಿ ಚುನಾವಣೆಯ ಸೀಟು ಹಂಚಿಕೆ ಲೆಕ್ಕಾಚಾರ ಶುರು – Kannada News | UP Assembly Elections: Rahul Akhilesh Meet for Alliance Seat Sharing Strategy

ನವದೆಹಲಿ, ಜುಲೈ 21: ಸಂಸತ್ ಮುಂಗಾರು ಅಧಿವೇಶನದ ಮೊದಲ ದಿನವೇ ಪ್ರತಿಪಕ್ಷಗಳ ಅಂಗಳದಲ್ಲಿ ಭಾರಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಲೋಕಸಭೆ(Lok Sabha)ಯ ವಿರೋಧ ಪಕ್ಷದ ನಾಯಕಿಯ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಸಮಾಜವಾದಿ ಪಕ್ಷದ (SP) ಅಧ್ಯಕ್ಷ ಅಖಿಲೇಶ್ ಯಾದವ್ ಸುಮಾರು ಒಂದು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ದು, ಉತ್ತರ ಪ್ರದೇಶದ (UP) ಮುಂಬರುವ ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆಯ ಝಲಕ್ ಕಾಣಿಸಿಕೊಂಡಿದೆ. ಅಧಿವೇಶನದಲ್ಲಿ ‘ನೀಟ್ ಪೇಪರ್ ಸೋರಿಕೆ’ ಮತ್ತು…

Read More

‘ಸಂಜಿತ್ ಹೆಗಡೆಗಾಗಿ ಕಾಯ್ತಾ ಇದ್ದೆ’; ಕೊನೆಗೂ ಈಡೇರಿತು ವಿನಯ್ ರಾಜ್​​ಕುಮಾರ್ ಆಸೆ

‘ಸಿಟಿ ಲೈಟ್ಸ್’ ಚಿತ್ರದ ‘ಕಂದಮ್ಮ ಕಂದಮ್ಮ..’ ಹಾಡು ರಿಲೀಸ್ ಆಗಿದೆ. ಈ ಹಾಡು ಗಮನ ಸೆಳೆಯುತ್ತಿದೆ. ಸಂಜಿತ್ ಹೆಗಡೆ ಧ್ವನಿ ಹಾಡಿನ ಹೈಲೈಟ್. ಈಗ ವಿನಯ್ ರಾಜ್​​ಕುಮಾರ್ ಅವರು ಹಾಡಿನ ಬಗ್ಗೆ ಮಾತನಾಡಿದ್ದಾರೆ. ‘ನನ್ನ ಸಿನಿಮಾಗೆ ಸಂಜಿತ್ ಹೆಗಡೆ ಯಾವಾಗ ಹಾಡ್ತಾರೆ ಅಂತ ಕಾಯ್ತಾ ಇದ್ದೆ. ಕೊನೆಗೂ ಅವರು ನನ್ನ ಸಿನಿಮಾಗೆ ಹಾಡಿದ್ದಾರೆ’ ಎಂದು ಖುಷಿ ಹೊರಹಾಕಿದ್ದಾರೆ. ‘ಸಿಟಿ ಲೈಟ್ಸ್’ ಚಿತ್ರಕ್ಕೆ ದುನಿಯಾ ವಿಜಯ್ ಅವರ ನಿರ್ದೇಶನ ಇದೆ. ಈ ಸಿನಿಮಾದಲ್ಲಿ ಅವರ ಮಗಳು ಮೋನಿಷಾ ನಟಿಸಿದ್ದಾರೆ…

Read More

ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ದೊಡ್ಡ ಸೀಕ್ರೆಟ್ ರಿವೀಲ್ – Kannada News | Thalapathy Vijay Jan Nayagan Remake: H. Vinoth Reveals 50 Percent New Story

ದಳಪತಿ ವಿಜಯ್ ನಟನೆಯ ‘‘ಜನ ನಾಯಗನ್’ ಸಿನಿಮಾ (Jana Nayagan) ಈ ವಾರವೇ ಥಿಯೇಟರ್‌ಗೆ ಬರ್ತಿದೆ. ಈ ಸಿನಿಮಾ ತೆಲುಗಿನ ಸೂಪರ್ ಹಿಟ್ ‘ಭಗವಂತ್ ಕೇಸರಿ’ ಚಿತ್ರದ ತಮಿಳು ರಿಮೇಕ್ ಆಗಿದೆ. ಈ ಬಿಗ್ ಬಜೆಟ್ ಸಿನಿಮಾವನ್ನು ಹೆಚ್. ವಿನೋದ್ ನಿರ್ದೇಶನ ಮಾಡಿದ್ದಾರೆ. ಇತ್ತೀಚಿನ ಇಂಟರ್ವ್ಯೂ ಒಂದರಲ್ಲಿ ಅವರು ಒರಿಜಿನಲ್ ಸಿನಿಮಾದಿಂದ ಎಷ್ಟು ಭಾಗವನ್ನು ಕಾಪಿ ಮಾಡಲಾಗಿದೆ ಅಂತ ಬಿಚ್ಚಿಟ್ಟಿದ್ದಾರೆ. ‘ಜನ ನಾಯಕನ್’ ಸಿನಿಮಾದಲ್ಲಿ ಒರಿಜಿನಲ್ ಕಥೆಯ ಶೇಕಡಾ 50 ರಷ್ಟು ಭಾಗ ಮಾತ್ರ ಇರಲಿದೆ ಎಂದು…

Read More

ಓವರ್ ಇಲ್ಲ, ಸೂಪರ್ ಫೈವ್, 2 ಬೋನಸ್ ರನ್: ದಿ ಹಂಡ್ರೆಡ್ ಲೀಗ್ ಹೊಸ ನಿಯಮ – Kannada News | The Hundred Men’s Competition 2026: Competition Rules

ಇಂಗ್ಲೆಂಡ್‌ನ ಅತ್ಯಂತ ಜನಪ್ರಿಯ ಕ್ರಿಕೆಟ್ ಟೂರ್ನಮೆಂಟ್ ‘ದಿ ಹಂಡ್ರೆಡ್‘ ಇಂದಿನಿಂದ (ಜುಲೈ 21) ಶುರುವಾಗಲಿದೆ. 8 ತಂಡಗಳ ನಡುವಣ ಈ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಐಪಿಎಲ್ (IPL) ಫ್ರಾಂಚೈಸಿಗಳು ಹೂಡಿಕೆ ಮಾಡಿದ್ದು, ಇದರಿಂದ ತಂಡಗಳ ಹೆಸರು ಮತ್ತು ಜೆರ್ಸಿಗಳು ಸಂಪೂರ್ಣ ಬದಲಾಗಿವೆ. ಇನ್ನು ‘ದಿ ಹಂಡ್ರೆಡ್’ ಕ್ರಿಕೆಟ್ ಲೀಗ್ ಸಾಂಪ್ರದಾಯಿಕ ಟಿ20 ಕ್ರಿಕೆಟ್‌ಗಿಂತ ಸಂಪೂರ್ಣ ಭಿನ್ನವಾಗಿದ್ದು, ಪಂದ್ಯವನ್ನು ಕೇವಲ 2.5 ಗಂಟೆಗಳಲ್ಲಿ ಮುಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಲೀಗ್‌ನ ಪ್ರಮುಖ ನಿಯಮಗಳು ಇಲ್ಲಿವೆ. ಓವರ್‌ಗಳ ಬದಲು ಎಸೆತಗಳ ಲೆಕ್ಕಾಚಾರ:…

Read More

ಸಿಕ್ಕಿಂ: ಜಲವಿದ್ಯುತ್ ಯೋಜನೆ ಸುರಂಗದಲ್ಲಿ ಭೂಕುಸಿತ, ಅನಿಲ ಸೋರಿಕೆ, 7 ಶವಗಳು ಪತ್ತೆ, ಹಲವರು ಸಿಲುಕಿರುವ ಶಂಕೆ – Kannada News | Sikkim Tunnel Collapse: Methane Gas Leak Kills 7 Workers, Rescue Efforts Underway

ನಾಮ್ಚಿ, ಜುಲೈ 21: ದಕ್ಷಿಣ ಸಿಕ್ಕಿಂನ ಸಮರ್ದುಂಗ್ ಬಳಿ ಇರುವ ಜಲವಿದ್ಯುತ್ ಯೋಜನೆಯ ಸುರಂಗ ಮಾರ್ಗದಲ್ಲಿ ಭೀಕರ ಭೂಕುಸಿತ(Landslide) ಸಂಭವಿಸಿದೆ. ಇದರ ಬೆನ್ನಲ್ಲೇ ಸುರಂಗದೊಳಗೆ ಅಪಾಯಕಾರಿ ವಿಷಕಾರಿ ಅನಿಲ ಸೋರಿಕೆಯಾಗಿದ್ದು, ಕನಿಷ್ಠ 7 ಮಂದಿ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ದಕ್ಷಿಣ ಸಿಕ್ಕಿಂನ ಸಮರ್ದುಂಗ್‌ನಲ್ಲಿ ಸೋಮವಾರ ಮಧ್ಯಾಹ್ನ 3.09 ರ ಸುಮಾರಿಗೆ ‘ತೀಸ್ತಾ ಹಂತ VI ಜಲವಿದ್ಯುತ್ ಯೋಜನೆ’ಯ ಸುರಂಗ ಕಾಮಗಾರಿ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಪಟೇಲ್ ಎಂಜಿನಿಯರಿಂಗ್ ಸಂಸ್ಥೆಯು ಈ ಯೋಜನೆಯ ನಿರ್ಮಾಣ ಹೊಣೆ ಹೊತ್ತುಕೊಂಡಿದೆ….

Read More