FIFA World Cup 2026: 8,396 ಕೋಟಿಯಲ್ಲಿ ಚಾಂಪಿಯನ್ ತಂಡಕ್ಕೆ ಸಿಗುವುದೆಷ್ಟು? ಉಳಿದ ತಂಡಗಳಿಗೆಷ್ಟು? – Kannada News | 2026 FIFA World Cup Final: Argentina vs Spain Battle for Record Breaking Prize Money

2026 ರ ಫಿಫಾ ವಿಶ್ವಕಪ್ ಅಂತಿಮ ಹಂತಕ್ಕೆ ಬಂದು ನಿಂತಿದೆ. ಭಾನುವಾರ ಅಂದರೆ ಜುಲೈ 19 ರಂದು ನಡೆಯಲಿರುವ ಅರ್ಜೆಂಟೀನಾ ಹಾಗೂ ಸ್ಪೇನ್ ನಡುವಿನ ಫೈನಲ್ ಪಂದ್ಯದೊಂದಿಗೆ ಈ ಪಂದ್ಯಾವಳಿಗೆ ತೆರೆ ಬೀಳಲಿದೆ. ಒಂದೆಡೆ ಹಾಲಿ ಚಾಂಪಿಯನ್ ಅರ್ಜೆಂಟೀನಾ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು ಮಣಿಸಿ ಫೈನಲ್​ಗೇರಿದರೆ, ಇತ್ತ ಸ್ಪೇನ್ ಕಳೆದ ಬಾರಿಯ ರನ್ನರ್ ಅಪ್ ಫ್ರಾನ್ಸ್ ತಂಡವನ್ನು ಮಣಿಸಿ ಫೈನಲ್​ಗೆ ಟಿಕೆಟ್ ಪಡೆದುಕೊಂಡಿದೆ. 2010 ರ ನಂತರ ಸ್ಪೇನ್ ಫೈನಲ್ ತಲುಪಿರುವುದರಿಂದ ಈ ಬಾರಿ ಪ್ರಶಸ್ತಿ ಬರ ನೀಗಿಸಿಕೊಳ್ಳುತ್ತಾ ಎಂಬ ಕುತೂಹಲ ಮೂಡಿದೆ. ಅಂದಹಾಗೆ ಈ ಬಾರಿ ಫಿಫಾ ವಿಶ್ವಕಪ್​ಗೆ ಸರಿಸುಮಾರು 8,396 ಕೋಟಿ ರೂಗಳನ್ನು ಬಹುಮಾನದ ಮೊತ್ತವಾಗಿ ಮೀಸಲಿಡಲಾಗಿದೆ. ಇದರರ್ಥ ಈ ಬಾರಿಯ ಚಾಂಪಿಯನ್ ತಂಡದ ಮೇಲೆ ಹಣದ ಮಳೆಯೇ ಸುರಿಯಲಿದೆ. ಚಾಂಪಿಯನ್ ತಂಡದ ಜೊತೆಗೆ ರನ್ನರ್ ಅಪ್ ತಂಡ ಹಾಗೂ ಇತರ ತಂಡಗಳಿಗೂ 100 ಕೋಟಿ ಗೂ ಅಧಿಕ ಮೊತ್ತ ಬಹುಮಾನವಾಗಿ ಸಿಗಲಿದೆ.

2026 ರ ಫಿಫಾ ವಿಶ್ವಕಪ್‌ ಹಲವು ಕಾರಣಗಳಿಗೆ ವಿಶೇಷವಾಗಿತ್ತು. ಮೊದಲ ಬಾರಿಗೆ, ಪಂದ್ಯಾವಳಿಯಲ್ಲಿ ಗರಿಷ್ಠ 48 ತಂಡಗಳು ಆಡಿದವು, ಗರಿಷ್ಠ ಸಂಖ್ಯೆಯ ಪಂದ್ಯಗಳು ನಡೆದವು. ಹಾಗೆಯೇ ಇದರ ಜೊತೆಗೆ ಫಿಫಾ ವಿಶ್ವಕಪ್ ಇತಿಹಾಸದಲ್ಲಿಯೇ ಅತಿ ದೊಡ್ಡ ಬಹುಮಾನದ ಹಣವನ್ನು ಈ ಬಾರಿ ಘೋಷಿಸಲಾಗಿದೆ.

ಸುಮಾರು 8,396 ಕೋಟಿ ರೂ..!

ಮೇಲೆ ಹೇಳಿದಂತೆ ಈ ಬಾರಿ ಪಂದ್ಯಾವಳಿಗಾಗಿ ಒಟ್ಟು 871 ಮಿಲಿಯನ್ ಡಾಲರ್ (ಸುಮಾರು 8,396 ಕೋಟಿ ರೂ) ಅನ್ನು ಬಹುಮಾನಕ್ಕಾಗಿ ಮೀಸಲಿಡಲಾಗಿದೆ. ಅದರಲ್ಲಿ ಈಗಾಗಲೇ ಪ್ರದರ್ಶನದ ಆಧಾರದ ಮೇಲೆ 703 ಮಿಲಿಯನ್ (ಸುಮಾರು 6775.8 ಕೋಟಿ ರೂ.) ವಿತರಿಸಲಾಗಿದೆ. ಹಾಗೆಯೇ 168 ಮಿಲಿಯನ್ (ಸುಮಾರು 1619.2 ಕೋಟಿ ರೂ) ಭಾಗವಹಿಸುವಿಕೆ ಶುಲ್ಕ ಮತ್ತು ಪೂರ್ವಸಿದ್ಧತಾ ಅನುದಾನದ ರೂಪದಲ್ಲಿ ಎಲ್ಲಾ ಅರ್ಹತಾ ತಂಡಗಳಿಗೆ ಹೋಗುತ್ತದೆ.

ವಿಜೇತ ತಂಡಕ್ಕೆ 348 ಕೋಟಿ ರೂ

ಹಿಂದಿನ ಆವೃತ್ತಿಯಲ್ಲಿ, ವಿಜೇತ ತಂಡವು 348 ಕೋಟಿ ರೂಪಾಯಿಗಳನ್ನು (42 ಮಿಲಿಯನ್) ಬಹುಮಾನವನ್ನಾಗಿ ಪಡೆದುಕೊಂಡಿತ್ತು. ಇತ್ತ ಫೈನಲ್​ನಲ್ಲಿ ಸೋತ ತಂಡಕ್ಕೆ 248 ಕೋಟಿ ರೂಪಾಯಿಗಳನ್ನು ನೀಡಲಾಗಿತ್ತು. ಉಳಿದಂತೆ ಪಂದ್ಯಾವಳಿಯಲ್ಲಿ ಭಾಗವಹಿಸಿದ 32 ತಂಡಗಳಿಗೆ ವಿತರಿಸಲಾದ ಒಟ್ಟು ಬಹುಮಾನದ ಮೊತ್ತ 36 ಬಿಲಿಯನ್ ರೂಪಾಯಿಗಳಿಗಿಂತ ಹೆಚ್ಚಾಗಿತ್ತು.

ಈ ವರ್ಷ, ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆದ ಪ್ರತಿ ತಂಡವು ಸರಿಸುಮಾರು 12.5 ಮಿಲಿಯನ್ (ಸುಮಾರು ರೂ. 120.4 ಕೋಟಿ) ಪಡೆಯುತ್ತದೆ. ಹಾಗೆಯೇ ಫೈನಲ್ ಗೆದ್ದ ತಂಡದ ಎಲ್ಲಾ ಆಟಗಾರರಿಗೆ ವಿಶೇಷ ಚಿನ್ನದ ಉಂಗುರವನ್ನು ನೀಡಲಾಗುವುದು ಎಂದು ಫಿಫಾ ಘೋಷಿಸಿದೆ. ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ, ಚಾಂಪಿಯನ್ ತಂಡದ ಆಟಗಾರರು ಮತ್ತು ಎಲ್ಲಾ ಸಹಾಯಕ ಸಿಬ್ಬಂದಿ ಸದಸ್ಯರು ಟ್ರೋಫಿ ಮತ್ತು ಚಿನ್ನದ ಪದಕಗಳೊಂದಿಗೆ ಚಾಂಪಿಯನ್‌ಶಿಪ್ ಉಂಗುರಗಳನ್ನು ಸ್ವೀಕರಿಸುತ್ತಾರೆ.

ಬಹುಮಾನದ ಮೊತ್ತ ಹೀಗೆ ಹಂಚಿಕೆಯಾಗಲಿದೆ

  • ಚಾಂಪಿಯನ್ ತಂಡ: 490 ಕೋಟಿ ರೂ.
  • ರನ್ನರ್ ಅಪ್: 317 ಕೋಟಿ ರೂ.
  • ಮೂರನೇ ಸ್ಥಾನ: 279 ಕೋಟಿ ರೂ.
  • ನಾಲ್ಕನೇ ಸ್ಥಾನ: 259 ಕೋಟಿ ರೂ.
  • 5-8ನೇ ಸ್ಥಾನ: ಪ್ರತಿ ತಂಡಕ್ಕೆ 182 ಕೋಟಿ ರೂ.
  • 9-16ನೇ ಸ್ಥಾನ: ಪ್ರತಿ ತಂಡಕ್ಕೆ 144 ಕೋಟಿ ರೂ.
  • 17-32ನೇ ಸ್ಥಾನ: ಪ್ರತಿ ತಂಡಕ್ಕೆ 105 ಕೋಟಿ ರೂ.
  • 33-48ನೇ ಸ್ಥಾನ: ಪ್ರತಿ ತಂಡಕ್ಕೆ 86 ಕೋಟಿ ರೂ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತುಂಗಾ ತುಂಬಿ ಹರಿಯುತ್ತಿದ್ದರೂ ಶಿವಮೊಗ್ಗದಲ್ಲಿ ನೀರಿಗೆ ಹಾಹಾಕಾರ: ನೀರಿಗಾಗಿ ಜೀವದ ಹಂಗು ತೊರೆದ ಜನರು – Kannada News | No Drinking Water Despite Tunga Dam Overflowing: 57 Families Struggle for Basic Water Supply

ಕುಡಿಯುವ ನೀರಿಗಾಗಿ ಪರದಾಟImage Credit source: tv9 kannada

ಶಿವಮೊಗ್ಗ, ಜುಲೈ 18: ಮಲೆನಾಡಿದ ಜೀವನಾಡಿಯಾಗಿರುವ ತುಂಗಾ ಡ್ಯಾಂ (tungabhadra dam)  ಸಂಪೂರ್ಣ ಭರ್ತಿ ಆಗಿದೆ. ಈ ಬಾರಿಯ ಮಳೆಗೆ ರಾಜ್ಯದಲ್ಲಿ ಮೊದಲು ತುಂಬಿದ ಡ್ಯಾಂ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ನಡುವೆ ಶಿವಮೊಗ್ಗದ (shivamogga) ಹೊರವಲಯದ ಮಂಡ್ಲಿ ಕಲ್ಲೂರಿನ ಪಾಲಿಕೆ ವ್ಯಾಪ್ತಿಗೆ ಬರುವ ವಾರ್ಡ್​ಗಳಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಪ್ರಾಣವನ್ನು ಲೆಕ್ಕಿಸದೇ ತುಂಗಾ ಕಾಲುವೆಯಿಂದ ನೀರು ತರುತ್ತಿದ್ದಾರೆ.

ಕುಡಿಯುವ ನೀರಿಗಾಗಿ 57 ಕುಟುಂಬಗಳ ಪರದಾಟ

ಶಿವಮೊಗ್ಗ ನಗರದಲ್ಲಿ ತುಂಗಾ ಡ್ಯಾಂ ಇದೆ. ಇದೇ ತುಂಗಾ ಡ್ಯಾಂ ಮೂಲಕ ನಗರದ 35 ವಾರ್ಡ್​ಗಳಿಗೆ ಕುಡಿಯುವ ನೀರು ಪೂರೈಕೆ ಆಗುತ್ತದೆ. ಕಳೆದ ನಾಲ್ಕು ವರ್ಷಗಳ ಹಿಂದೆ ತುಂಗಾ ನೆರೆಯ ಸಂತ್ರಸ್ತರನ್ನ ಈ ಭಾಗದಲ್ಲಿ ಮನೆ ಕಟ್ಟಿಕೊಟ್ಟು ಸ್ಥಳಾಂತರ ಮಾಡಿದ್ದರು. ಒಟ್ಟು 57 ಕುಟುಂಬಗಳು ಇಲ್ಲಿ ವಾಸವಾಗಿವೆ. ಈ ಎಲ್ಲ ಬಡ ಕುಟುಂಬಗಳಿಗೆ ಕೇವಲ ಒಂದೇ ಒಂದು ಬೋರ್ ವೆಲ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಇನ್ನು ಆ ಬೋರ್ ವೆಲ್ ಪದೇ ಪದೇ ಕೆಟ್ಟು ಹೋಗುತ್ತಿದ್ದು, ಬಡಾವಣೆಯ ಜನರಿಗೆ ನೀರು ಸಾಕಾಗುತ್ತಿಲ್ಲ.

ಇದನ್ನೂ ಓದಿ: ಬರದ ನಡುವೆ ಮರುಬಿತ್ತನೆ ಮಾಡಿದ ವೃದ್ಧ ದಂಪತಿ!

ಪಾಲಿಕೆ ಮತ್ತು ವಾಟರ್ ಬೋರ್ಡ್ ಅಧಿಕಾರಿಗಳಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈಗ ಇರುವ ಬೋರ್ ವೆಲ್ ಕೆಟ್ಟು ಹೋಗಿದೆ. ಒತ್ತಾಯಕ್ಕೆ ಒಂದು ಟ್ಯಾಂಕರ್ ಇಲ್ಲಿಗೆ ಕಳುಹಿಸುತ್ತಾರೆ. ಈ ಟ್ಯಾಂಕರ್​ಗೆ 57 ಕುಟುಂಬಗಳು ಮುಗಿಬೀಳುತ್ತವೆ. ಮಹಿಳೆಯರು ಹೊಡೆದಾಡಿ ಕುಡಿಯುವ ನೀರು ಹಿಡಿಯಬೇಕು. ಇಂತಹ ಪರಿಸ್ಥಿತಿಯಲ್ಲಿ ಅನೇಕರಿಗೆ ನೀರು ಸಿಗುತ್ತಿಲ್ಲ.

ನೀರಿಗಾಗಿ ಜೀವದ ಹಂಗು ತೊರೆಯುವ ಜನರು 

ಇದು ಕುಡಿಯುವ ನೀರಿನ ಸಮಸ್ಯೆಯಾದರೆ ಇನ್ನೂ ನಿತ್ಯದ ಬಳಕೆಗೂ ನೀರಲ್ಲ. ಪಕ್ಕದಲ್ಲೇ ಹರಿದು ಹೋಗಿರುವ ತುಂಗಾ ಕಾಲುವೆಯ ಕಲುಷಿತ ನೀರನ್ನೇ ಜನರು ಬಳಕೆ ಮಾಡುತ್ತಿದ್ದಾರೆ. ಅದು ಕೂಡ ಹಗ್ಗ ಬಿಟ್ಟು ಕೊಡಗಳನ್ನು ತುಂಬಿಸುತ್ತಿದ್ದಾರೆ. ನಿತ್ಯ ಅಪಾಯದಲ್ಲೇ ನೀರು ತುಂಬಿಸುತ್ತಿದ್ದಾರೆ. ಹೆಚ್ಚು ಕಡಿಮೆ ಆದರೆ ತುಂಬಿ ಹರಿಯುತ್ತಿರುವ ತುಂಗಾ ಚಾನೆಲ್​ನಲ್ಲಿ ಜನರು ಕೊಚ್ಚಿಕೊಂಡು ಹೋಗುವ ಅಪಾಯವಿದೆ. ಹೀಗೆ ಜೀವದ ಹಂಗು ತೊರೆದು ಜನರು ನೀರಿಗಾಗಿ ಹೋರಾಟ ಮಾಡುತ್ತಿದ್ದಾರೆ. ನಿತ್ಯ ಈ ಪರಿಸ್ಥಿಗೆ ನೆರೆ ಸಂತ್ರಸ್ತರು ಕಣ್ಣೀರು ಹಾಕುವಂತಾಗಿದೆ.

ಇಷ್ಟೊಂದು ಸುಸಜ್ಜಿತ ಮನೆ ಮತ್ತು ರಸ್ತೆಗಳನ್ನು ಸರ್ಕಾರ ನಿರ್ಮಿಸಿಕೊಟ್ಟಿದೆ. ಆದರೆ ಅಗತ್ಯವಿರುವ ಕುಡಿಯುವ ಮತ್ತು ಬಳಕೆಗೆ ನೀರಿನ ಸೌಕರ್ಯಕ್ಕೆ ಯಾವುದೇ ಯೋಜನೆ ಮಾಡಿಲ್ಲ. ಹತ್ತಿರದ ಬಡಾವಣೆಯಲ್ಲಿ ತುಂಗಾ ನದಿಯ ಶುದ್ಧ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಇದೆ. ಅದನ್ನೇ ಈ ಮಂಡ್ಲಿ ಕಲ್ಲೂರು ಬಡಾವಣೆಗೆ ವಿಸ್ತರಿಸಬೇಕೆಂದು ಬಡಾವಣೆಯ ಜನರು ಒತ್ತಾಯಿಸಿದ್ದಾರೆ. ಅಧಿಕಾರಿಗಳಿಗೆ ಈ ಬಡ ಸಂತ್ರಸ್ತರ ಆರೋಗ್ಯದ ಬಗ್ಗೆ ಯಾವುದೆ ಕಾಳಜಿ ಇಲ್ಲ. ಮಳೆಯ ಕಲುಷಿತ ಮಿಶ್ರಿತ ತುಂಗಾ ನದಿಯ ನೀರನ್ನೇ ನಿತ್ಯ ಬಳಕೆಗೆ ಉಪಯೋಗಿಸಲಾಗುತ್ತಿದೆ. ಇದರಿಂದ ಜನರಿಗೆ ಕೆಮ್ಮು ಶೀತ ಜ್ವರ ಚರ್ಮ ರೋಗದಂತಹ ಕಾಯಿಲೆಗಳು ಶುರುವಾಗಿವೆ.

ಚುನಾವಣೆ ಬಹಿಷ್ಕಾರದ ಎಚ್ಚರಿಕೆ!

ಮೌಲ ಸೌಲಭ್ಯಗಳನ್ನು ನೀಡದೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ನಿತ್ಯ ಕುಡಿಯುವ ಮತ್ತು ಬಳಕೆಯ ನೀರಿಗಾಗಿ ಜನರು ಕೆಲಸ ಬಿಟ್ಟು ನೀರು ತುಂಬಿಸುವುದೇ ಒಂದು ದೊಡ್ಡ ಕೆಲಸವಾಗಿದೆ. ಕೆಟ್ಟ ಬೋರ್ ವೆಲ್, ಒಂದೇ ಒಂದು ಟ್ಯಾಂಕರ್ ನೀರು ಇದರಿಂದ 57 ಕುಟುಂಬಸ್ಥರು ನಲುಗಿ ಹೋಗಿವೆ. ಇದೇ ರೀತಿ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ನಾವು ವೋಟ್​ ಹಾಕುವುದಿಲ್ಲ. ಈ ಹಿಂದೆ ಕೈ ಕಾಲು ಬಿದ್ದು ಮತ ಹಾಕಿಸಿಕೊಂಡ ಜನಪ್ರತಿನಿಧಿಗಳು ತಮ್ಮ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಹೀಗಾಗಿ ಮುಂಬರುವ ಚುನಾವಣೆಗಳನ್ನು ಬಹಿಷ್ಕಾರ ಹಾಕುವುದಾಗಿ ಬಡಾವಣೆಯ ಜನರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Karnataka Dam Water Level: ಕಬಿನಿ, ಹೇಮಾವತಿ ಜಲಾಶಯಗಳು ಖಾಲಿ ಖಾಲಿ!

ಇಷ್ಟೊಂದು ಜಲಸಂಪನ್ಮೂಲ ಮತ್ತು ಆರ್ಥಿಕವಾಗಿ ಗಿಟ್ಟಿಯಾಗಿದ್ದರೂ ಈ ಬಡಾವಣೆಯ ಜನರಿಗೆ ಕುಡಿಯಲು ನೀರಿಲ್ಲ. ದೀಪದ ಕೆಳಗೆ ಕತ್ತಲು ಅಂದ ಹಾಗೆ ನದಿ ಪಕ್ಕದಲ್ಲೇ ಹರಿದರೂ ಜನರಿಗೆ ಶುದ್ಧ ಕುಡಿಯುವ ನೀರಿಲ್ಲದಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

KSMC Recruitment 2026: ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್‌ನಲ್ಲಿ ಉದ್ಯೋಗವಕಾಶ; ಲಿಖಿತ ಪರೀಕ್ಷೆಯಿಲ್ಲದೇ ನೇರ ನೇಮಕಾತಿ! – Kannada News | KSMC Recruitment 2026: Walk in Interview for 50 Posts in Karnataka

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್‌

ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಉದ್ಯಮವಾದ ‘ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್’ (KSMC) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಬಂಪರ್ ಅವಕಾಶ ನೀಡಿದೆ. ಕರ್ನಾಟಕದಾದ್ಯಂತ ಇರುವ ತನ್ನ ವಿವಿಧ ಗಣಿಗಳು ಮತ್ತು ಘಟಕಗಳಲ್ಲಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಉದ್ಯೋಗ ಆಕಾಂಕ್ಷಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ, ಬದಲಿಗೆ ನೇರ ಸಂದರ್ಶನದ (Walk-in Interview) ಮೂಲಕವೇ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

11 ತಿಂಗಳ ಗುತ್ತಿಗೆ ಆಧಾರದ ನೇಮಕಾತಿ ಮತ್ತು ಸಂಬಳ:

ಈ ನೇಮಕಾತಿಯು ಸಂಪೂರ್ಣವಾಗಿ 11 ತಿಂಗಳ ತಾತ್ಕಾಲಿಕ ಗುತ್ತಿಗೆ ಆಧಾರದ ನಡೆಯಲಿದೆ. ಒಟ್ಟು 50 ವಿವಿಧ ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ರೂ. 18,350 ರಿಂದ ಹಿಡಿದು ಗರಿಷ್ಠ ರೂ. 50,000 ವರೆಗೆ ಆಕರ್ಷಕ ಗೌರವಧನ (ಸಂಭಾವನೆ) ನೀಡಲಾಗುತ್ತದೆ.

ಜುಲೈ 29 ರಿಂದ ನೇರ ಸಂದರ್ಶನ ಆರಂಭ:

ವಿವಿಧ ಹುದ್ದೆಗಳಿಗೆ ಅನುಗುಣವಾಗಿ 2026ರ ಜುಲೈ 29 ರಿಂದ ಜುಲೈ 31ರ ವರೆಗೆ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ. ಎಲ್ಲಾ ದಿನಗಳ ಸಂದರ್ಶನಗಳು ನಿಖರವಾಗಿ ಬೆಳಿಗ್ಗೆ 10:30 ಗಂಟೆಗೆ ಪ್ರಾರಂಭವಾಗಲಿವೆ.

ಇದನ್ನೂ ಓದಿ: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಉದ್ಯೋಗವಕಾಶ; 253 ಪಿಎಸ್‌ಐ ಹುದ್ದೆಗೆ ನೇರ ನೇಮಕಾತಿ!

ಸಂದರ್ಶನಕ್ಕೆ ಹಾಜರಾಗುವುದು ಹೇಗೆ? ಮತ್ತು ಬೇಕಾಗುವ ದಾಖಲೆಗಳು:

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕ ಹಾಗೂ ಸಮಯಕ್ಕೆ ಸರಿಯಾಗಿ ಸಂದರ್ಶನಕ್ಕೆ ಹಾಜರಾಗಬೇಕು. ಅಭ್ಯರ್ಥಿಗಳು KSMC ಅಧಿಕೃತ ವೆಬ್‌ಸೈಟ್‌ನಿಂದ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು, ಅದನ್ನು ಸಂಪೂರ್ಣವಾಗಿ ಭರ್ತಿ ಮಾಡಿ ತರಬೇಕಿರುತ್ತದೆ. ಸಂದರ್ಶನದ ವೇಳೆ ತಮ್ಮ ಎಲ್ಲಾ ಸಂಬಂಧಿತ ಮೂಲ ಶೈಕ್ಷಣಿಕ ದಾಖಲೆಗಳು (Original Documents) ಹಾಗೂ ಅವುಗಳ ನಕಲು ಪ್ರತಿಗಳನ್ನು (Xerox Copies) ತರುವುದು ಕಡ್ಡಾಯವಾಗಿದೆ.

ಸಂದರ್ಶನ ನಡೆಯುವ ಸ್ಥಳ ಮತ್ತು ಅಧಿಕೃತ ವೆಬ್‌ಸೈಟ್ ಮಾಹಿತಿ:

ನೇರ ಸಂದರ್ಶನವು ಬೆಂಗಳೂರಿನ ಶಾಂತಿನಗರದಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ.

  • ವಿಳಾಸ: ಪ್ರಧಾನ ಕಚೇರಿ, ಟಿ.ಟಿ.ಎಂ.ಸಿ. ‘ಎ’ ಬ್ಲಾಕ್, 5ನೇ ಮಹಡಿ, ಬಿ.ಎಂ.ಟಿ.ಸಿ. ಬಿಲ್ಡಂಗ್, ಕೆ.ಹೆಚ್. ರಸ್ತೆ, ಶಾಂತಿನಗರ, ಬೆಂಗಳೂರು – 560 027.
  • ಅಭ್ಯರ್ಥಿಗಳಿಗೆ ಅಗತ್ಯವಿರುವ ಶೈಕ್ಷಣಿಕ ವಿದ್ಯಾರ್ಹತೆ, ನಿಖರ ವಯೋಮಿತಿ, ಕೆಲಸದ ಅನುಭವ ಹಾಗೂ ಅಧಿಕೃತ ಅರ್ಜಿ ನಮೂನೆಯನ್ನು ಪಡೆಯಲು ಇಲಾಖೆಯ ಅಧಿಕೃತ ವೆಬ್‌ಸೈಟ್ ಆದ ksmc.karnataka.gov.in ಗೆ ಭೇಟಿ ನೀಡಿ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

Video: ಲಿಫ್ಟ್​ ಒಳಗೆ ಯುವತಿಯರ ಮೇಲೆ ಸಾಕು ನಾಯಿ ದಾಳಿ – Kannada News | Mumbai Lift Dog Attack: Pet Safety Sparks Apartment Rules Debate

ಮುಂಬೈ, ಜುಲೈ 18:  ಮುಂಬೈನ ಅಪಾರ್ಟ್​ಮೆಂಟ್​​ನ ಲಿಫ್ಟ್‌ನಲ್ಲಿ ಸಾಕು ನಾಯಿ(Dog)ಯೊಂದು ಯುವತಿಯರ ಮೇಲೆ ತೀವ್ರ ಆಕ್ರಮಣಕಾರಿಯಾಗಿ ದಾಳಿ ನಡೆಸಿದ ಘಟನೆ ನಡೆದಿದೆ.ಲಿಫ್ಟ್‌ನ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ಪೊಲೀಸರ ಮಾಹಿತಿ ಪ್ರಕಾರ, ಮಲಾಡ್ ಪಶ್ಚಿಮ ಉಪನಗರದಲ್ಲಿರುವ ಪ್ರಸಿದ್ಧ ‘ಶೇತ್ ಐರೀನ್ ಟವರ್’ನಲ್ಲಿ ಈ ಘಟನೆ ನಡೆದಿದೆ.

ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಮೂವರು ಯುವತಿಯರು ಈಗಾಗಲೇ ಲಿಫ್ಟ್‌ನ ಒಳಗೆ ಇದ್ದಾಗ, ಮಹಿಳೆಯೊಬ್ಬರು ತಮ್ಮ ಸಾಕು ನಾಯಿಯೊಂದಿಗೆ ಲಿಫ್ಟ್ ಪ್ರವೇಶಿಸಿದ್ದಾರೆ. ನಾಯಿಯ ಬಾಯಿಗೆ ಸುರಕ್ಷತಾ ಕವಚ (Muzzle) ಹಾಕಲಾಗಿದ್ದರೂ, ಲಿಫ್ಟ್ ಬಾಗಿಲು ಮುಚ್ಚಿ ಕೆಳಗೆ ಚಲಿಸಲು ಆರಂಭಿಸಿದ ತಕ್ಷಣ, ಅದು ಯುವತಿಯರ ಮೇಲೆ ದಾಳಿ ಮಾಡಿದೆ.

ವಿಡಿಯೋ

ನಾಯಿ ತೀವ್ರವಾಗಿ ಆಕ್ರಮಣ ಮಾಡುತ್ತಿದ್ದಂತೆ ಹೆದರಿದ ಇಬ್ಬರು ಯುವತಿಯರು ತಕ್ಷಣವೇ ಲಿಫ್ಟ್‌ನಿಂದ ಹೊರಗೆ ಓಡಿಹೋಗುವಲ್ಲಿ ಯಶಸ್ವಿಯಾದರು. ಆದರೆ ಮತ್ತೊಬ್ಬ ಯುವತಿ ಲಿಫ್ಟ್‌ನ ಮೂಲೆಯಲ್ಲಿ ಸಿಲುಕಿಕೊಂಡಿದ್ದಾರೆ. ನಾಯಿಯ ಮಾಲೀಕ ಮಹಿಳೆ ಅದನ್ನು ತುಂಬಾ ಕಷ್ಟಪಟ್ಟಿದ್ದಾರೆ. ಅದೃಷ್ಟವಶಾತ್ ಲಿಫ್ಟ್ ಕೆಳಮಹಡಿ ತಲುಪುತ್ತಿದ್ದಂತೆ ಆ ಯುವತಿಯೂ ಹೊರಗೆ ಹೋಗಿದ್ದಾರೆ, ಮಾಲೀಕರು ನಾಯಿಯನ್ನು ಹಿಂದಕ್ಕೆ ಎಳೆದಿದ್ದರಿಂದ ಯಾವುದೇ ಗಂಭೀರ ಗಾಯಗಳಾಗಿಲ್ಲ.

ಮತ್ತಷ್ಟು ಓದಿ: ಪತ್ನಿಯನ್ನ ನೋಡಿ ಬೊಗಳಿದ್ದಕ್ಕೆ ಸ್ಕೂಬಿ ಮೇಲೆ ಕ್ರೌರ್ಯ ಮೆರೆದ ಪತಿ: ಪೊಲೀಸ್ ಮೆಟ್ಟಿಲೇರಿದ ನಾಯಿ ಗಲಾಟೆ

ಘಟನೆ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಪೊಲೀಸರು, “ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಮತ್ತು ಸದ್ಯಕ್ಕೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಆ ನಿವಾಸಿಯು ತನ್ನ ಸಾಕುಪ್ರಾಣಿಯನ್ನು ಲಿಫ್ಟ್‌ನಲ್ಲಿ ಕರೆದೊಯ್ಯಲು ಮುಂಚಿತವಾಗಿಯೇ ಅನುಮತಿ ಪಡೆದಿದ್ದರು” ಎಂದು ತಿಳಿಸಿದ್ದಾರೆ.

ಅಪಾರ್ಟ್‌ಮೆಂಟ್‌ಗಳಲ್ಲಿ ಸಾಕುಪ್ರಾಣಿಗಳ ನಿಯಮದ ಚರ್ಚೆ
ಯಾವುದೇ ಅನಾಹುತ ಸಂಭವಿಸದಿದ್ದರೂ, ಈ ವಿಡಿಯೋ ಅಪಾರ್ಟ್‌ಮೆಂಟ್ ನಿವಾಸಿಗಳಲ್ಲಿ ಭಾರಿ ಕಳವಳ ಮತ್ತು ಚರ್ಚೆಯನ್ನು ಹುಟ್ಟುಹಾಕಿದೆ.

ಇತ್ತೀಚಿನ ದಿನಗಳಲ್ಲಿ ಮೆಟ್ರೋ ನಗರಗಳ ಬಹುಮಹಡಿ ಕಟ್ಟಡಗಳ ಲಿಫ್ಟ್‌ಗಳಲ್ಲಿ ಸಾಕು ನಾಯಿಗಳು ಮಕ್ಕಳ ಮತ್ತು ಯುವಕರ ಮೇಲೆ ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಲಿಫ್ಟ್‌ನಂತಹ ಮುಚ್ಚಿದ ಜಾಗದಲ್ಲಿ ಅಪರಿಚಿತರನ್ನು ಕಂಡಾಗ ನಾಯಿಗಳು ಆತಂಕಗೊಂಡು ಆಕ್ರಮಣಕಾರಿಯಾಗುತ್ತವೆ ಎಂದು ಪ್ರಾಣಿ ತಜ್ಞರು ಹೇಳುತ್ತಾರೆ.

ಘಟನೆಯ ಬೆನ್ನಲ್ಲೇ, ಸೊಸೈಟಿಗಳಲ್ಲಿ ಸಾಕು ನಾಯಿಗಳನ್ನು ಕರೆದೊಯ್ಯಲು ಪ್ರತ್ಯೇಕ ‘ಸರ್ವಿಸ್ ಲಿಫ್ಟ್’ ಬಳಸಬೇಕು, ಮಾಲೀಕರು ನಾಯಿಯ ಸರಪಳಿಯನ್ನು ಕಟ್ಟುನಿಟ್ಟಾಗಿ ಹಿಡಿದುಕೊಳ್ಳಬೇಕು ಮತ್ತು ಜನನಿಬಿಡ ಅವಧಿಯಲ್ಲಿ ಸಾಕುಪ್ರಾಣಿಗಳನ್ನು ಲಿಫ್ಟ್‌ಗೆ ತರಬಾರದು ಎಂಬ ನಿಯಮಗಳನ್ನು ಜಾರಿಗೆ ತರುವಂತೆ ನಿವಾಸಿಗಳು ಒತ್ತಾಯಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 3:58 pm, Sat, 18 July 26

Source link

Auto Tips: ಆನ್‌ಲೈನ್‌ನಲ್ಲಿ ಹೆಲ್ಮೆಟ್ ಖರೀದಿಸುತ್ತಿದ್ದೀರಾ? ಈ 5 ವಿಷಯಗಳನ್ನು ಕಡ್ಡಾಯವಾಗಿ ಪರಿಶೀಲಿಸಿ

ಇತ್ತೀಚಿನ ದಿನಗಳಲ್ಲಿ ಬೈಕ್ ಸವಾರರು ಹೆಲ್ಮೆಟ್‌ಗಳನ್ನು ಅಮೆಜಾನ್ (Amazon), ಫ್ಲಿಪ್‌ಕಾರ್ಟ್ ಸೇರಿದಂತೆ ವಿವಿಧ ಇ-ಕಾಮರ್ಸ್ ತಾಣಗಳಿಂದ ಆನ್‌ಲೈನ್‌ನಲ್ಲಿ ಖರೀದಿಸುತ್ತಿದ್ದಾರೆ. ಆದರೆ ಕೇವಲ ಬೆಲೆ ಕಡಿಮೆ ಇದೆ ಅಥವಾ ಆಕರ್ಷಕ ವಿನ್ಯಾಸ ಇದೆ ಎಂಬ ಕಾರಣಕ್ಕೆ ಹೆಲ್ಮೆಟ್ ಖರೀದಿಸಿದರೆ ಅದು ನಿಮ್ಮ ಸುರಕ್ಷತೆಗೆ ಅಪಾಯವಾಗಬಹುದು. ಆದ್ದರಿಂದ ಆನ್‌ಲೈನ್‌ನಲ್ಲಿ ಹೆಲ್ಮೆಟ್ ಖರೀದಿಸುವ ಮೊದಲು ಕೆಲವು ಪ್ರಮುಖ ಅಂಶಗಳನ್ನು ಪರಿಶೀಲಿಸುವುದು ಅತ್ಯಗತ್ಯ.

ಸುರಕ್ಷತಾ ಪ್ರಮಾಣೀಕರಣವಿದೆಯೇ ಎಂದು ನೋಡಿ

ಯಾವುದೇ ಹೆಲ್ಮೆಟ್ ಖರೀದಿಸುವ ಮೊದಲು ಅದರ ಮೇಲೆ ಮಾನ್ಯ ಸುರಕ್ಷತಾ ಪ್ರಮಾಣೀಕರಣ (Certification) ಗುರುತುಗಳಿವೆಯೇ ಎಂದು ಪರಿಶೀಲಿಸಿ. ಸುರಕ್ಷತಾ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಿರುವ ಹೆಲ್ಮೆಟ್ ಮಾತ್ರ ಅಪಘಾತದ ಸಂದರ್ಭದಲ್ಲಿ ತಲೆಯನ್ನು ಪರಿಣಾಮಕಾರಿಯಾಗಿ ರಕ್ಷಿಸಬಲ್ಲದು.

ರಿಟರ್ನ್ ಮತ್ತು ಎಕ್ಸ್‌ಚೇಂಜ್ ಪಾಲಿಸಿ ಓದಿ

ಗಾತ್ರ ಸರಿಯಾಗಿರದಿದ್ದರೆ ಅಥವಾ ಉತ್ಪನ್ನದಲ್ಲಿ ದೋಷ ಕಂಡುಬಂದರೆ ಅದನ್ನು ಹಿಂದಿರುಗಿಸಲು ಅಥವಾ ಬದಲಾಯಿಸಲು ಸಾಧ್ಯವೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹಲವಾರು ಆನ್‌ಲೈನ್ ತಾಣಗಳು 30 ರಿಂದ 90 ದಿನಗಳವರೆಗೆ ರಿಟರ್ನ್ ಅಥವಾ ಎಕ್ಸ್‌ಚೇಂಜ್ ಸೌಲಭ್ಯವನ್ನು ನೀಡುತ್ತವೆ. ಖರೀದಿಸುವ ಮೊದಲು ಈ ನಿಯಮಗಳನ್ನು ಓದುವುದು ಉತ್ತಮ.

ಬಳಕೆದಾರರ ವಿಮರ್ಶೆಗಳು ಮತ್ತು ಫೋಟೋಗಳನ್ನು ಪರಿಶೀಲಿಸಿ

ಉತ್ಪನ್ನದ ವಿವರಣೆಯನ್ನು ಮಾತ್ರ ನಂಬಬೇಡಿ. ಈಗಾಗಲೇ ಆ ಹೆಲ್ಮೆಟ್ ಬಳಸಿರುವ ಗ್ರಾಹಕರು ನೀಡಿರುವ ವಿಮರ್ಶೆಗಳು, ರೇಟಿಂಗ್‌ಗಳು ಹಾಗೂ ಅವರು ಅಪ್‌ಲೋಡ್ ಮಾಡಿದ ನೈಜ ಫೋಟೋಗಳನ್ನು ನೋಡಿ. ಇದರಿಂದ ಹೆಲ್ಮೆಟ್‌ನ ಗುಣಮಟ್ಟ, ಫಿಟ್ ಹಾಗೂ ಸಮಸ್ಯೆಗಳ ಬಗ್ಗೆ ಸ್ಪಷ್ಟ ಮಾಹಿತಿ ಸಿಗುತ್ತದೆ.

Budget EV Car: ಮೈಲೇಜ್ ಬಗ್ಗೆ ಚಿಂತೆಯೇ? ಭಾರತದಲ್ಲಿ ಸಿಗುವ ಅಗ್ಗದ 5 ಎಲೆಕ್ಟ್ರಿಕ್ ಕಾರುಗಳು ಇಲ್ಲಿವೆ

ತಯಾರಾದ ದಿನಾಂಕ (Manufacturing Date) ಪರಿಶೀಲಿಸಿ

ಹೆಲ್ಮೆಟ್‌ಗೂ ಒಂದು ನಿರ್ದಿಷ್ಟ ಬಳಕೆ ಅವಧಿ ಇರುತ್ತದೆ. ಹಳೆಯ ಸ್ಟಾಕ್‌ಗಳಿಗೆ ಹೆಚ್ಚಿನ ರಿಯಾಯಿತಿ ಸಿಕ್ಕರೂ ಅವುಗಳ ಸುರಕ್ಷತಾ ಸಾಮರ್ಥ್ಯ ಕಡಿಮೆಯಾಗಿರಬಹುದು. ಆದ್ದರಿಂದ ಖರೀದಿಸುವ ಮೊದಲು ಹೆಲ್ಮೆಟ್‌ನ ತಯಾರಾದ ದಿನಾಂಕವನ್ನು ಪರಿಶೀಲಿಸಿ ಮತ್ತು ಸಾಧ್ಯವಾದಷ್ಟು ಹೊಸದಾಗಿ ತಯಾರಾದ ಉತ್ಪನ್ನವನ್ನೇ ಆಯ್ಕೆ ಮಾಡಿ.

ತಲೆಯ ಗಾತ್ರವನ್ನು ಸರಿಯಾಗಿ ಅಳೆಯಿರಿ

ಆನ್‌ಲೈನ್‌ನಲ್ಲಿ ಹೆಲ್ಮೆಟ್ ಖರೀದಿಸುವಾಗ ಅದನ್ನು ಧರಿಸಿ ಪರೀಕ್ಷಿಸುವ ಅವಕಾಶ ಇರುವುದಿಲ್ಲ. ಹೀಗಾಗಿ ಮೊದಲು ನಿಮ್ಮ ತಲೆಯ ಸುತ್ತಳತೆಯನ್ನು ನಿಖರವಾಗಿ ಅಳೆಯಿರಿ. ಕಂಪನಿಯ ಸೈಸ್ ಚಾರ್ಟ್‌ಗೆ ಹೊಂದುವ ಗಾತ್ರದ ಹೆಲ್ಮೆಟ್ ಆಯ್ಕೆ ಮಾಡಿದರೆ ಅದು ಸರಿಯಾಗಿ ಫಿಟ್ ಆಗುತ್ತದೆ ಮತ್ತು ಅಪಘಾತದ ವೇಳೆ ಉತ್ತಮ ರಕ್ಷಣೆ ನೀಡುತ್ತದೆ.

ಒಟ್ಟಾರೆ, ಆನ್‌ಲೈನ್‌ನಲ್ಲಿ ಹೆಲ್ಮೆಟ್ ಖರೀದಿಸುವಾಗ ಬೆಲೆ ಅಥವಾ ವಿನ್ಯಾಸಕ್ಕಿಂತ ನಿಮ್ಮ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ. ಸರಿಯಾದ ಗಾತ್ರ, ಮಾನ್ಯ ಸುರಕ್ಷತಾ ಪ್ರಮಾಣೀಕರಣ, ಉತ್ತಮ ಗ್ರಾಹಕ ವಿಮರ್ಶೆಗಳು, ರಿಟರ್ನ್ ಸೌಲಭ್ಯ ಹಾಗೂ ಹೊಸ ತಯಾರಿಕಾ ದಿನಾಂಕ ಇರುವ ಹೆಲ್ಮೆಟ್ ಆಯ್ಕೆ ಮಾಡಿದರೆ ನಿಮ್ಮ ಪ್ರಯಾಣ ಹೆಚ್ಚು ಸುರಕ್ಷಿತವಾಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಲಾರ್ಡ್ಸ್‌ನಲ್ಲಿ 22 ವರ್ಷಗಳ ಬರಗಾಲವನ್ನು ಕೊನೆಗೊಳಿಸುತ್ತಾ ಟೀಂ ಇಂಡಿಯಾ – Kannada News | India vs England 3rd ODI: Can India Break 22 Year Lord’s Jinx for Series Win?

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಪ್ರಸ್ತುತ 1-1 ಅಂತರದಲ್ಲಿ ಸಮಬಲಗೊಂಡಿದೆ. ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯವು ಕ್ರಿಕೆಟ್‌ನ ಮೆಕ್ಕಾ ಎಂದು ಕರೆಯಲ್ಪಡುವ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ (Lord’s Cricket Ground) ನಡೆಯಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ ಸರಣಿ ಕೈಸೇರಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದರೆ ಅದು ಇತಿಹಾಸವಾಗಲಿದೆ. ಮೊದಲಿಗೆ ಈ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳಲಿರುವ ಟೀಂ ಇಂಡಿಯಾ, ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳಲಿದೆ ಹಾಗೆಯೇ ಕಳೆದ ಎರಡು ದಶಕಗಳಿಂದ ಅಂದರೆ ಬರೋಬ್ಬರಿ 22 ವರ್ಷಗಳಲ್ಲಿ ಲಾರ್ಡ್ಸ್‌ನಲ್ಲಿ ಟೀಂ ಇಂಡಿಯಾದ ಗೆಲುವಿನ ಬರ ಕೊನೆಗೊಳ್ಳಲಿದೆ

22 ವರ್ಷಗಳಿಂದ ಗೆಲುವಿನ ಬರ

ವಾಸ್ತವವಾಗಿ ಟೀಂ ಇಂಡಿಯಾಗೆ ಲಾರ್ಡ್ಸ್ ಮೈದಾನವು 1983 ರ ವಿಶ್ವಕಪ್ ಪ್ರಶಸ್ತಿ ಗೆಲುವು ಮತ್ತು 2002 ರ ನ್ಯಾಟ್‌ವೆಸ್ಟ್ ಟ್ರೋಫಿ ಫೈನಲ್‌ನಂತಹ ಸ್ಮರಣೀಯ ನೆನಪುಗಳಿಗೆ ಹೆಸರುವಾಸಿಯಾಗಿದೆ. ಆದರೆ ಕಟು ವಾಸ್ತವವೆಂದರೆ 2004 ರಿಂದ ಟೀಂ ಇಂಡಿಯಾ ಈ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಒಂದೇ ಒಂದು ಏಕದಿನ ಪಂದ್ಯವನ್ನು ಗೆದ್ದಿಲ್ಲ. ಲಾರ್ಡ್ಸ್‌ನಲ್ಲಿ ಭಾರತದ ಕೊನೆಯ ಏಕದಿನ ಗೆಲುವು ಸೆಪ್ಟೆಂಬರ್ 5, 2004 ರಂದು ಬಂದಿತು, ಆ ಪಂದ್ಯದಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ ತಂಡವು ಇಂಗ್ಲೆಂಡ್ ತಂಡವನ್ನು 23 ರನ್‌ಗಳಿಂದ ಸೋಲಿಸಿತು. ಆ ಐತಿಹಾಸಿಕ ವಿಜಯದ ನಂತರ ಈಗ ಪೂರ್ಣ 22 ವರ್ಷಗಳು ಕಳೆದಿವೆ, ಆದರೆ ಟೀಂ ಇಂಡಿಯಾ ಇನ್ನೂ ಇಲ್ಲಿ ವಿಜಯವನ್ನು ಸವಿದಿಲ್ಲ.

ಕಳೆದ 4 ಪಂದ್ಯಗಳಲ್ಲಿ ಸೋಲು

ಲಾರ್ಡ್ಸ್‌ನಲ್ಲಿ ನಡೆದ ಕೊನೆಯ ನಾಲ್ಕು ಏಕದಿನ ಪಂದ್ಯಗಳಲ್ಲಿ ಭಾರತದ ಪ್ರದರ್ಶನವು ಸಾಕಷ್ಟು ನಿರಾಶಾದಾಯಕವಾಗಿದೆ. 2007 ರಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್, ಭಾರತವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಹಾಗೆಯೇ 2011 ರಲ್ಲಿ ನಡೆದಿದ್ದ ಉಭಯ ತಂಡಗಳ ನಡುವಿನ ಪಂದ್ಯವು ರೋಮಾಂಚಕ ಟೈನಲ್ಲಿ ಕೊನೆಗೊಂಡಿತು. ನಂತರ, 2018 ರಲ್ಲಿ ನಡೆದಿದ್ದ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಭಾರತೀಯ ಬ್ಯಾಟಿಂಗ್ ಲೈನ್‌ಅಪ್ ಅನ್ನು ಸೋಲಿಸಿ, ಪಂದ್ಯವನ್ನು 86 ರನ್‌ಗಳ ಭಾರಿ ಅಂತರದಿಂದ ಗೆದ್ದುಕೊಂಡಿತು. ಇತ್ತೀಚೆಗೆ ಅಂದರೆ 2022 ರಲ್ಲಿ ಈ ಮೈದಾನದಲ್ಲಿ ಆಡಿದ ಕೊನೆಯ ಪಂದ್ಯದಲ್ಲೂ ಭಾರತ ತಂಡವು 100 ರನ್‌ಗಳ ಅವಮಾನಕರ ಸೋಲನ್ನು ಅನುಭವಿಸಿತ್ತು.

IND vs ENG: ಲಾರ್ಡ್ಸ್‌ನಲ್ಲಿ ಶತಕ ಬಾರಿಸದಿದ್ದರೂ ಇತಿಹಾಸ ಸೃಷ್ಟಿಸಿದ ಸ್ಮೃತಿ ಮಂಧಾನ

ಇತಿಹಾಸ ಸೃಷ್ಟಿಸುತ್ತಾ ಗಿಲ್ ಬ್ರಿಗೇಡ್‌

ಲಾರ್ಡ್ಸ್‌ನಲ್ಲಿ ಭಾರತದ ಮೇಲೆ ಇಂಗ್ಲೆಂಡ್ ಪ್ರಾಬಲ್ಯ ಸಾಧಿಸಿರುವುದು ಅಂಕಿಅಂಶಗಳಿಂದ ಸ್ಪಷ್ಟವಾಗಿದೆ. ಆದ್ದರಿಂದ, ಜುಲೈ 18 ರಂದು ನಡೆಯಲಿರುವ ಅಂತಿಮ ಏಕದಿನ ಪಂದ್ಯದಲ್ಲಿ 22 ವರ್ಷಗಳ ಬರಗಾಲವನ್ನು ಕೊನೆಗೊಳಿಸುವುದು ನಾಯಕ ಶುಭಮನ್ ಗಿಲ್‌ಗೆ ಕಠಿಣ ಕೆಲಸವಾಗಿದೆ. ಭಾನುವಾರ ಭಾರತ ತಂಡ ಸರಣಿ ಟ್ರೋಫಿಯನ್ನು ಎತ್ತಿ ಹಿಡಿಯಬೇಕಾದರೆ, ಲಾರ್ಡ್ಸ್‌ನಲ್ಲಿರುವ ಈ ಅಜೇಯ ಕೋಟೆಯನ್ನು ಭೇದಿಸಲು ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ಇಬ್ಬರೂ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಬೇಕಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಳಗಾವಿಯಲ್ಲಿ ಬಸ್ ಸೌಕರ್ಯದ ಕೊರತೆ; ಜೀವದ ಹಂಗು ತೊರೆದು ಫುಟ್‌ಬೋರ್ಡ್ ಪ್ರಯಾಣ ಮಾಡುತ್ತಿರುವ ವಿದ್ಯಾರ್ಥಿಗಳು – Kannada News | Belagavi Bus Safety Crisis: KSRTC Neglect Endangers Student Commute

ಬೆಳಗಾವಿ, ಜು.18: ಕುಂದಾನಗರಿ ಬೆಳಗಾವಿಯಲ್ಲಿ ವಿದ್ಯಾರ್ಥಿಗಳ ಪಾಲಿಗೆ ಕೆಎಸ್‌ಆರ್‌ಟಿಸಿ (KSRTC) ಬಸ್ ಪ್ರಯಾಣವು ಪ್ರತಿನಿತ್ಯ ಯಮಲೋಕದ ದರ್ಶನ ಮಾಡಿಸುವಂತಾಗಿದೆ. ನಗರದಲ್ಲಿ ಸೂಕ್ತ ಬಸ್ ಸೌಕರ್ಯ ಇಲ್ಲದ ಕಾರಣ, ನಿತ್ಯ ನೂರಾರು ವಿದ್ಯಾರ್ಥಿಗಳು ಜೀವದ ಹಂಗು ತೊರೆದು ಬಸ್‌ನ ಫುಟ್‌ಬೋರ್ಡ್ (Footboard) ಮೇಲೆ ನೇತಾಡಿಕೊಂಡೇ ಸಂಚರಿಸುವ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲೇ ಈ ಭಯಾನಕ ದೃಶ್ಯಗಳು ಪ್ರತಿದಿನ ಕಂಡುಬರುತ್ತಿದ್ದರೂ ಸಾರಿಗೆ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ. ಶಾಲಾ-ಕಾಲೇಜು ಬಿಡುವ ಸಮಯದಲ್ಲಿ ಬೆಳಗಾವಿ ನಗರದ ಪ್ರಮುಖ ಮಾರ್ಗಗಳಿಗೆ ಸಂಚರಿಸುವ ಬಸ್‌ಗಳ ಸಂಖ್ಯೆ ತೀರಾ ವಿರಳವಾಗಿದೆ. ಹೀಗಾಗಿ, ಬಸ್ ನಿಲ್ದಾಣಕ್ಕೆ ಬಸ್ ಬರುತ್ತಿದ್ದಂತೆಯೇ ಸೀಟು ಹಿಡಿಯಲು ವಿದ್ಯಾರ್ಥಿಗಳು ಒಮ್ಮೆಗೇ ಮುಗಿಬೀಳುತ್ತಿದ್ದಾರೆ. ಬಸ್‌ನ ಒಳಭಾಗ ಸಂಪೂರ್ಣ ಭರ್ತಿಯಾದ ಮೇಲೆಯೂ ಜಾಗವಿಲ್ಲದೆ, ಬಸ್ ನಿಲ್ದಾಣದಿಂದ ಹೊರಡುವಾಗಲೇ ವಿದ್ಯಾರ್ಥಿಗಳು ಬಾಗಿಲಿನ ಮೆಟ್ಟಿಲುಗಳ ಮೇಲೆ ನಿಂತು ಸಾಗುತ್ತಿದ್ದಾರೆ. ಸಣ್ಣದೊಂದು ಆಯತಪ್ಪಿದರೂ ದೊಡ್ಡ ಅವಘಡ ಸಂಭವಿಸುವ ಸಾಧ್ಯತೆ ಇದೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲೇ ಇಷ್ಟೆಲ್ಲಾ ಜೀವವಿರೋಧಿ ದೃಶ್ಯಗಳು ಕಣ್ಣೆದುರೇ ನಡೆಯುತ್ತಿದ್ದರೂ, ಅಲ್ಲಿನ ಸಾರಿಗೆ ಸಂಸ್ಥೆಯ ಅಧಿಕಾರಿಗಳು ವಿದ್ಯಾರ್ಥಿಗಳನ್ನು ತಡೆಯುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಬಸ್‌ಗಳ ಸಂಖ್ಯೆ ಹೆಚ್ಚಿಸದ ಅಧಿಕಾರಿಗಳ ಬೇಜವಾಬ್ದಾರಿತನವೇ ಮಕ್ಕಳ ಈ ಅಪಾಯಕಾರಿ ಪ್ರಯಾಣಕ್ಕೆ ನೇರ ಕಾರಣ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಮತ್ತೆ ಬಂತು ಕೆಬಿಸಿ, 18ನೇ ಸೀಸನ್​​ಗಾಗಿ ಕಿರುತೆರೆಗೆ ಮರಳಿದ ಅಮಿತಾಬ್ ಬಚ್ಚನ್ – Kannada News | Amitabh Bachchan coming back to tv with KBC season 18

ಕೆಬಿಸಿ ಅಥವಾ ಕೌನ್ ಬನೇಗಾ ಕರೋಡ್​​ಪತಿ (Kaun Banega crorepati) ಭಾರತದ ಅತ್ಯಂತ ಹಳೆಯ ಟಿವಿ ರಿಯಾಲಿಟಿ ಶೋಗಳಲ್ಲಿ ಒಂದು. 26 ವರ್ಷಗಳ ಹಿಂದೆ ಕೌನ್ ಬನೇಗಾ ಕರೋಡ್​​ಪತಿ ಮೊದಲ ಬಾರಿ ಪ್ರಸಾರಾಗಿತ್ತು. ಒಂದೇ ಒಂದು ಸೀಸನ್ ಹೊರತುಪಡಿಸಿ ಆಗಿನಿಂದಲೂ ಅಮಿತಾಬ್ ಬಚ್ಚನ್ ಅವರೇ ಈ ಶೋ ಅನ್ನು ನಿರೂಪಣೆ ಮಾಡುತ್ತಿದ್ದಾರೆ. 17 ಸೀಸನ್​​ಗಳನ್ನು ಮುಗಿಸಿರುವ ಈ ಶೋ ಇದೀಗ 18ನೇ ಸೀಸನ್​ ಪ್ರಸಾರ ಆಗಲಿದ್ದು, ಅಮಿತಾಬ್ ಬಚ್ಚನ್ ಅವರು ಮತ್ತೊಮ್ಮೆ ನಿರೂಪಕರಾಗಿ ಕಿರುತೆರೆ ಮರಳಿದ್ದಾರೆ. 18ನೇ ಸೀಸನ್​​ನ ಪ್ರೊಮೊ ಅನ್ನು ಇದೀಗ ಬಿಡುಗಡೆ ಮಾಡಲಾಗಿದೆ.

ಕೌನ್ ಬನೇಗಾ ಕರೋಡ್​​ಪತಿಯ 18ನೇ ಸೀಸನ್​​ನ ಪ್ರಸಾರ ದಿನಾಂಕವನ್ನು ಘೋಷಣೆ ಮಾಡುವ ಜೊತೆಗೆ ಈ ಬಾರಿಯ ಸೀಸನ್​​ನಲ್ಲಿ ಮಾಡಲಾಗಿರುವ ಕೆಲ ಬಲಾವಣೆಗಳ ಮಾಹಿತಿಯನ್ನು ಸಹ ಪ್ರೋಮೊನಲ್ಲಿ ಹಂಚಿಕೊಳ್ಳಲಾಗಿದೆ. 18ನೇ ಸೀಸನ್​​ನಲ್ಲಿ ಕೆಲವು ತಾಜಾ ಬದಲಾವಣೆಗಳನ್ನು ಪರಿಚಯಿಸಲಾಗಿದೆ. ಪ್ರೋಮೊನಲ್ಲಿ ಅಮಿತಾಬ್ ಬಚ್ಚನ್ ಅವರು ಹೇಳಿರುವಂತೆ, ಈ ಬಾರಿ ಕೇವಲ ಪ್ರಶ್ನೋತ್ತರ ಮಾತ್ರ ಇರುವುದಿಲ್ಲ. ಕೇಳುವ ಪ್ರಶ್ನೆಗೆ ಸ್ಪರ್ಧಿ ಉತ್ತರ ಕೊಟ್ಟರೆ ಮಾತ್ರವೇ ಸಾಕಾಗುವುದಿಲ್ಲ, ಅದಕ್ಕಾಗಿ ಆ ಸ್ಪರ್ಧಿ ಯೋಚನೆಯನ್ನೂ ಮಾಡಬೇಕಿರುತ್ತದೆ’ ಎಂದು ಬಚ್ಚನ್ ಅವರು ಪ್ರೋಮೊನಲ್ಲಿ ಹೇಳಿದ್ದಾರೆ.

ಕೌನ್ ಬನೇಗಾ ಕರೋಡ್​​ಪತಿ ಸೀಸನ್ 18 ಆಗಸ್ಟ್ 10ರಿಂದ ಪ್ರಸಾರ ಆರಂಭಿಸಲಿದೆ. ಪ್ರತಿ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 9 ಗಂಟೆಗೆ ಸೋನಿ ಎಂಟರ್ಟೈನ್​​ಮೆಂಟ್​​ನಲ್ಲಿ ಶೋ ಪ್ರಸಾರ ಆಗಲಿದೆ. ಸೋನಿ ಲಿವ್ ಒಟಿಟಿಯಲ್ಲಿಯೂ ಸಹ ಶೋ ಅನ್ನು ಲೈವ್ ಆಗಿ ಹಾಗೂ ರೆಕಾರ್ಡೆಡ್ ಶೋಗಳನ್ನು ಸಹ ವೀಕ್ಷಣೆ ಮಾಡಬಹುದಾಗಿದೆ.

2000 ರಲ್ಲಿ ಪ್ರಾರಂಭವಾದ ಕೌನ್ ಬನೇಗಾ ಕರೋಡ್​​ಪತಿ ಸತತ ಈಗ 18ನೇ ಸೀಸನ್ ಚಾಲ್ತಿಯಲ್ಲಿದೆ. ಇಂಗ್ಲೀಷ್​​ನ ‘ಹೂ ವಾಂಟ್ಸ್ ಟು ಬಿ ಎ ಮಿಲೇನಿಯರ್’ ಶೋನಿಂದ ಸ್ಪೂರ್ತಿ ಪಡೆದು ಈ ಶೋ ಪ್ರಾರಂಭ ಮಾಡಲಾಗಿತ್ತು. ಈ ವರೆಗೆ ಕೇವಲ ಒಮ್ಮೆ ಮಾತ್ರ ಅಮಿತಾಬ್ ಬಚ್ಚನ್ ಬದಲಿಗೆ ಬೇರೊಬ್ಬರು ನಿರೂಪಣೆ ಮಾಡಿದ್ದಾರೆ. 2007 ರಲ್ಲಿ ಒಂದು ಸೀಸನ್ ಮಾತ್ರ ಅಮಿತಾಬ್ ಬಚ್ಚನ್ ಬದಲಿಗೆ ಶಾರುಖ್ ಖಾನ್ ಅವರು ಈ ಶೋ ಹೋಸ್ಟ್ ಮಾಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪ್ರಿಯಕರನ ಜತೆ ಸೇರಿ ಪತಿಗೆ ಹಾವು ಕಚ್ಚಿಸಿ ಕೊಂದ ಪತ್ನಿ, ತನಿಖೆ ವೇಳೆ ಬಯಲಾಯ್ತು ನಾಲ್ಕು ತಿಂಗಳ ಸ್ಕೆಚ್ – Kannada News | Wife, Lover Conspire: Husband Killed by Snake Bite in Meerut Shocking Plot Uncovered

ಮೀರತ್, ಜುಲೈ 18: ಮಹಿಳೆಯೊಬ್ಬಳು ಪ್ರಿಯಕರನ ಜತೆ ಸೇರಿ ಪತಿಯನ್ನು ಕೊಲೆ (Murder)ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್​ನ ಹಸ್ತಿನಾಪುರ ಪ್ರದೇಶದಲ್ಲಿ ನಡೆದಿದೆ. ಅತುಲ್ ಪವಾರ್ ಎಂಬ ಯುವಕನ ಸಾವಿನ ಹಿಂದೆ ಬೆಚ್ಚಿ ಬೀಳಿಸುವ ಪಿತೂರಿ ಕೂಡ ಇದೆ ಎಂದು ತಿಳಿದುಬಂದಿದೆ. ಆರಂಭದಲ್ಲಿ ಕೇವಲ ಹಾವಿನ ಕಡಿತದಿಂದ ಸಾವು ಸಂಭವಿಸಿದೆ ಎಂದು ಭಾವಿಸಲಾಗಿತ್ತು. ಆದರೆ ಪೊಲೀಸರು ನಡೆಸಿದ ತೀಕ್ಷ್ಣ ತನಿಖೆಯಲ್ಲಿ, ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ವಿಷಪೂರಿತ ಹಾವಿನಿಂದ ಕಚ್ಚಿಸಿ ಪತಿಯನ್ನು ಹತ್ಯೆ ಮಾಡಿರುವುದು ಪತ್ತೆಯಾಗಿದೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಪತ್ನಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸ್ಕೂಲ್ ವ್ಯಾನ್ ಡ್ರೈವರ್ ಜೊತೆ ಅಕ್ರಮ ಸಂಬಂಧ
ಪೊಲೀಸ್ ವಿಚಾರಣೆಯ ವೇಳೆ ಬಯಲಾದ ಮಾಹಿತಿ ಪ್ರಕಾರ, ಮೃತ ಅತುಲ್ ಪವಾರ್ ಅವರ ಪತ್ನಿ ದಾಮಿನಿ ಸುಮಾರು ಒಂದು ವರ್ಷದ ಹಿಂದೆ ತುಷಾರ್ (ನಿಕ್ಕಿ) ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ವಿಶೇಷವೆಂದರೆ, ಈ ಪ್ರಿಯಕರ ತುಷಾರ್ ಬೇರಾರೂ ಅಲ್ಲ, ಅತುಲ್ ನಡೆಸುತ್ತಿದ್ದ ಶಾಲಾ ವ್ಯಾನ್‌ನ ಚಾಲಕನಾಗಿದ್ದ. ಇವರಿಬ್ಬರ ಪ್ರೇಮ ಸಂಬಂಧಕ್ಕೆ ಅತುಲ್ ಅಡ್ಡಿಯಾಗಿದ್ದರಿಂದ ಮತ್ತು ಆತನ ಆಸ್ತಿಯನ್ನು ಲೂಟಿ ಮಾಡುವ ಉದ್ದೇಶದಿಂದ ಇಬ್ಬರೂ ಸೇರಿ ಅತುಲ್‌ನನ್ನು ಮುಗಿಸಲು ನಿರ್ಧರಿಸಿದ್ದರು.

4 ತಿಂಗಳಲ್ಲಿ 2 ಬಾರಿ ಫೇಲ್, 3ನೇ ಬಾರಿ ಹಾವಿನಿಂದ ಅಟ್ಯಾಕ್
ಕೊಲೆಯನ್ನು ಯಾರಿಗೂ ಅನುಮಾನ ಬಾರದಂತೆ ಸಹಜ ಸಾವಿನಂತೆ ತೋರಿಸಲು ಈ ಜೋಡಿ ಸ್ಕೆಚ್ ಹಾಕಿತ್ತು. ಇದಕ್ಕಾಗಿ ಕಳೆದ ನಾಲ್ಕು ತಿಂಗಳಿನಿಂದ ನಿರಂತರ ಪಿತೂರಿ ನಡೆದಿತ್ತು. ಅತುಲ್‌ನನ್ನು ಕೊಲ್ಲಲು ಆರೋಪಿಗಳು ಈ ಹಿಂದೆ ಎರಡು ಬಾರಿ ಪ್ರಯತ್ನಿಸಿದ್ದರು. ಆದರೆ ಅದೃಷ್ಟವಶಾತ್ ಅತುಲ್ ಎರಡೂ ಬಾರಿ ಬದುಕುಳಿದಿದ್ದ.

ಮತ್ತಷ್ಟು ಓದಿ: ಪತ್ನಿಯಿಂದಲೇ ವೈದ್ಯನ ಕೊಲೆ ಪ್ರಕರಣ: ಆರೋಪಿ ಡಾ. ಪ್ರಿಯಾಂಕಾ ಎರಡನೇ ಪತ್ನಿ!; ಬಗೆದಷ್ಟೂ ಬಯಲಾಗ್ತಿದೆ ಅಚ್ಚರಿಯ ಮಾಹಿತಿ

ಮೂರನೇ ಪ್ರಯತ್ನದಲ್ಲಿ ಆರೋಪಿಗಳು ಅತ್ಯಂತ ವಿಷಪೂರಿತವಾದ ಹಾವನ್ನು ತಂದು, ಅತುಲ್ ಮಲಗಿದ್ದಾಗ ಅದರಿಂದ ಕಚ್ಚಿಸಿದ್ದಾರೆ. ತೀವ್ರ ವಿಷದ ಪ್ರಭಾವದಿಂದ ಅತುಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕುಟುಂಬಸ್ಥರು ಆಘಾತ, ಎಸ್‌ಎಸ್‌ಪಿ ಖಡಕ್ ಭರವಸೆ
ಪತಿ ಸತ್ತ ತಕ್ಷಣವೇ ದಾಮಿನಿ ನಾಟಕವಾಡಿದ್ದಳಾದರೂ, ಅತುಲ್ ಕುಟುಂಬಸ್ಥರ ಅನುಮಾನದ ಮೇರೆಗೆ ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಇಡೀ ಜಾಲ ಪತ್ತೆಯಾಗಿದೆ. ಸದ್ಯ ಅತುಲ್ ಕುಟುಂಬಸ್ಥರು ತೀವ್ರ ಆಘಾತದಲ್ಲಿದ್ದಾರೆ.

ಈ ಅಪರಾಧದ ಕುರಿತು ಮಾತನಾಡಿರುವ ಮೀರತ್ ಎಸ್‌ಎಸ್‌ಪಿ (SSP) ಅವಿನಾಶ್ ಪಾಂಡೆ, “ಪೊಲೀಸರ ತ್ವರಿತ ಮತ್ತು ಚಾಣಾಕ್ಷ ಕ್ರಮದಿಂದಾಗಿ ಈ ಇಡೀ ಪಿತೂರಿ ಬಯಲಾಗಿದೆ. ಪ್ರಕರಣದಲ್ಲಿ ಈಗಾಗಲೇ ನಾಲ್ವರನ್ನು ಕರಾರುವಕ್ಕಾಗಿ ಬಂಧಿಸಲಾಗಿದೆ. ಇಂತಹ ಕ್ರೂರ ಕೃತ್ಯ ಎಸಗಿದ ಯಾವುದೇ ಒಬ್ಬ ಆರೋಪಿಯನ್ನೂ ಸುಮ್ಮನೆ ಬಿಡುವುದಿಲ್ಲ, ನ್ಯಾಯಾಲಯದ ಮೂಲಕ ಕಠಿಣ ಶಿಕ್ಷೆ ಕೊಡಿಸುತ್ತೇವೆ” ಎಂದು ಭರವಸೆ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನೆಲಮಂಗಲದಲ್ಲಿ ನೈತಿಕ ಪೊಲೀಸ್ ಗಿರಿ! ಹಿಂದೂ ಯುವಕನ ಮೇಲೆ ಹಲ್ಲೆ; ಆತ್ಮಹತ್ಯೆಗೆ ಯತ್ನಿಸಿದ ಮುಸ್ಲಿಂ ಯುವತಿ – Kannada News | Nelamangala Moral Policing: Hindu Youth Assaulted, Muslim Girl Attempts death

ನೆಲಮಂಗಲ, ಜುಲೈ 18: ಬೆಂಗಳೂರು ಗ್ರಾಮಾಂತರ (bengaluru rural) ಜಿಲ್ಲೆಯ ನೆಲಮಂಗಲ ತಾಲೂಕಿನ ಡಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಕೂರು ಗ್ರಾಮದಲ್ಲಿ ನೈತಿಕ ಪೊಲೀಸ್‌ಗಿರಿ (Moral Policing) ಪ್ರಕರಣವೊಂದು ಬೆಳಕಿಗೆ ಬಂದಿದೆ. ಮುಸ್ಲಿಂ ಯುವತಿಯೊಬ್ಬಳ ಜೊತೆಯಲ್ಲಿ ಓಡಾಡುತ್ತಿದ್ದನೆಂಬ ಕಾರಣಕ್ಕೆ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರ ಗುಂಪೊಂದು ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ. ಯಶವಂತ್​​ ಹಲ್ಲೆಗೊಳಗಾದ ಯುವಕ.

ನಡೆದಿದ್ದೇನು?

ಯಶವಂತ್​ ಹಾಗೂ ಯುವತಿ ಕೌಸರ್ ಬಾನು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಲಕ್ಕೂರು ಗ್ರಾಮದ ನಿವಾಸಿಗಳಾದ ತಹರೀಕ್ ಪಾಷಾ, ಸೋಹೇಲ್ ಪಾಷಾ ಮತ್ತು ಸಯ್ಯದ್ ಕರೀಂ ಎಂಬುವವರು ಯಶವಂತ್​ನನ್ನ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಹಲ್ಲೆ ಮಾಡಿದ್ದಾರೆ.

ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಯುವತಿ 

ಆರೋಪಿಗಳು ಯಶವಂತ್‌ನ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಬಳಿಕ ವಿವಿಧ ವಾಟ್ಸಾಪ್ ಗ್ರೂಪ್‌ಗಳಲ್ಲಿ ಹರಿಬಿಟ್ಟಿದ್ದಾರೆ. ತಮಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವುದನ್ನು ಕಂಡು ತೀವ್ರ ಮನನೊಂದ ಕೌಸರ್ ಬಾನು ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿರುವ ಘಟನೆ ಕೂಡ ನಡೆದಿದೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿ; ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಜಾತಿ ನಿಂದನೆ ಮಾಡಿದ ಅಪ್ಪ-ಮಗ

ಸದ್ಯ ಘಟನೆಗೆ ಸಂಬಂಧಿಸಿದಂತೆ ನೊಂದ ಯುವತಿಯೇ ಖುದ್ದಾಗಿ ಹಲ್ಲೆ ಮಾಡಿದವರ ವಿರುದ್ಧ ಡಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಈ ನೈತಿಕ ಪೊಲೀಸ್‌ಗಿರಿ ಪ್ರಕರಣದ ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ಯಾರಾ ಮೆಡಿಕಲ್​ ವಿದ್ಯಾರ್ಥಿ ಆತ್ಮಹತ್ಯೆ

ಪ್ಯಾರಾ ಮೆಡಿಕಲ್​ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿಯ ಮಾರಪ್ಪನಪಾಳ್ಯದಲ್ಲಿ ನಡೆದಿದೆ. ಮನೆಯ ಮೇಲಿನ ಕೊಠಡಿಯಲ್ಲಿ ಉದಯ್​(20) ನೇಣಿಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ಶರಣಾದ ಮೂರು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬಂಟ್ವಾಳ ಲಾವಣ್ಯ ಕೊಲೆ ಪ್ರಕರಣ: ಆರೋಪಿಯನ್ನು ಬಜರಂಗದಳ ಕಾರ್ಯಕರ್ತನೆಂದು ಬಿಂಬಿಸಿದವರ ವಿರುದ್ಧ ಕೇಸ್ ದಾಖಲು

ಸುರೇಶ್ ಹಾಗೂ ಪ್ರೇಮಲತಾ ದಂಪತಿಯ ಪುತ್ರ ಉದಯ್, ಆನ್​ಲೈನ್ ಗೇಮಿಂಗ್ ಚಟಕ್ಕೆ ಅಡಿಕ್ಟ್ ಆಗಿದ್ದ ಬಗ್ಗೆ ಮಾಹಿತಿ ಇದೆ. ಸದ್ಯ ಸ್ಥಳಕ್ಕೆ ಮಾದನಾಯಕಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ವರದಿ: ಮಂಜುನಾಥ್​​, ಟಿವಿ9 ನೆಲಮಂಗಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:05 pm, Sat, 18 July 26

Source link

Exit mobile version