Gold Rate: ಚಿನ್ನ, ಬೆಳ್ಳಿ ಬೆಲೆಗಳು ಏರಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ – Kannada News | Gold rate 20 july 2026 gold silver prices rise on monday news in kannada

ನವದೆಹಲಿ, ಜುಲೈ 20: ಚಿನ್ನದ ಬೆಲೆ ಸತತ ಎರಡನೇ ಬಾರಿ ಹೆಚ್ಚಳವಾಗಿದೆ. ವಾರಾಂತ್ಯದಲ್ಲಿ 70 ರೂ ಹೆಚ್ಚಿದ್ದ ಬಂಗಾರದ ದರ (Gold Price) ಇವತ್ತು ಸೋಮವಾರ 15 ರೂಗಳಷ್ಟು ಅಲ್ಪ ಏರಿಕೆ ಪಡೆದಿದೆ. ವಿದೇಶಗಳಲ್ಲೂ ಕೆಲವೆಡೆ ಅಲ್ಪಸ್ವಲ್ಪ ವ್ಯತ್ಯಯಗಳಾಗಿವೆ. ಇನ್ನು, ಬೆಳ್ಳಿ ಬೆಲೆಯೂ ಇಂದು ಏರಿಕೆಗೊಂಡಿದೆ. ಇದರ ಬೆಲೆಯಲ್ಲಿ ಗ್ರಾಮ್​ಗೆ 5 ರೂ ಹೆಚ್ಚಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,31,500 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,43,460 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,31,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜುಲೈ 20ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,346 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,150 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,759 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,346 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,150 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,150 ರೂ
  • ಚೆನ್ನೈ: 13,150 ರೂ
  • ಮುಂಬೈ: 13,150 ರೂ
  • ದೆಹಲಿ: 13,165 ರೂ
  • ಕೋಲ್ಕತಾ: 13,150 ರೂ
  • ಕೇರಳ: 13,150 ರೂ
  • ಅಹ್ಮದಾಬಾದ್: 13,155 ರೂ
  • ಜೈಪುರ್: 13,165 ರೂ
  • ಲಕ್ನೋ: 13,165 ರೂ
  • ಭುವನೇಶ್ವರ್: 13,150 ರೂ

ಇದನ್ನೂ ಓದಿ: ಕಷ್ಟಕಾಲಕ್ಕೆ ಚಿನ್ನ ಎನ್ನುತ್ತಾರೆ; ಬಿಕ್ಕಟ್ಟಿನಲ್ಲಿ ಬಂಗಾರದ ದರ ಏರುವ ಬದಲು ಇಳಿಯುತ್ತಿರುವುದು ಯಾಕೆ? ಇಲ್ಲಿದೆ ಸಂಭಾವ್ಯ ಕಾರಣಗಳು

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 540 ರಿಂಗಿಟ್ (12,734 ರುಪಾಯಿ)
  • ದುಬೈ: 484.25 ಡಿರಾಮ್ (12,716 ರುಪಾಯಿ)
  • ಅಮೆರಿಕ: 132.50 ಡಾಲರ್ (12,780 ರುಪಾಯಿ)
  • ಸಿಂಗಾಪುರ: 176.60 ಸಿಂಗಾಪುರ್ ಡಾಲರ್ (13,200 ರುಪಾಯಿ)
  • ಕತಾರ್: 485.50 ಕತಾರಿ ರಿಯಾಲ್ (12,847 ರೂ)
  • ಸೌದಿ ಅರೇಬಿಯಾ: 499 ಸೌದಿ ರಿಯಾಲ್ (12,817 ರುಪಾಯಿ)
  • ಓಮನ್: 51.40 ಒಮಾನಿ ರಿಯಾಲ್ (12,878 ರುಪಾಯಿ)
  • ಕುವೇತ್: 40.49 ಕುವೇತಿ ದಿನಾರ್ (12,696 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 235 ರೂ
  • ಚೆನ್ನೈ: 240 ರೂ
  • ಮುಂಬೈ: 235 ರೂ
  • ದೆಹಲಿ: 235 ರೂ
  • ಕೋಲ್ಕತಾ: 235 ರೂ
  • ಕೇರಳ: 240 ರೂ
  • ಅಹ್ಮದಾಬಾದ್: 235 ರೂ
  • ಜೈಪುರ್: 235 ರೂ
  • ಲಕ್ನೋ: 235 ರೂ
  • ಭುವನೇಶ್ವರ್: 240 ರೂ
  • ಪುಣೆ: 235

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಫುಟ್‌ಬಾಲ್ ಫೈನಲ್ ವೀಕ್ಷಿಸಿ ಯುವ ಜನತೆಗೆ ಸಿಎಂ ಡಿ.ಕೆ.ಶಿವಕುಮಾರ್ ಬಂಪರ್ ಕೊಡುಗೆ – Kannada News | Karnataka’s ‘Jodo Yuwakara Sangha’ to Empower 10,000 Youth in Sports and Culture

ಬೆಂಗಳೂರು, ಜು.20: 2026ರ ಫಿಫಾ ವಿಶ್ವಕಪ್‌ನ ಜಾಗತಿಕ ಫುಟ್‌ಬಾಲ್ ಫೈನಲ್ ಪಂದ್ಯವನ್ನು ಯುವಕರೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವೀಕ್ಷಿಸಿದ್ದರು. ಈ ಬಗ್ಗೆ ತಮ್ಮ ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿದ್ದರೆ. ರಾಜ್ಯದ ಯುವ ಜನಾಂಗವನ್ನು ಕ್ರೀಡೆ ಮತ್ತು ಸಂಸ್ಕೃತಿಯಲ್ಲಿ ಮುಂಚೂಣಿಗೆ ತರಲು ಸರ್ಕಾರ ಬೃಹತ್ ಯೋಜನೆಯೊಂದನ್ನು ಹಮ್ಮಿಕೊಂಡಿದೆ ಎಂದು ಹೇಳಿದ್ದಾರೆ. “ನಮ್ಮ ಪಕ್ಷದ ಶಾಸಕರು, ಕರ್ನಾಟಕ ರಾಜ್ಯ ಫುಟ್‌ಬಾಲ್ ಅಸೋಸಿಯೇಷನ್ (KSFA) ಹಾಗೂ ಬಿಡಿಎ (BDA) ಅಧ್ಯಕ್ಷರೂ ಆಗಿರುವ ಎನ್.ಎ. ಹ್ಯಾರಿಸ್ ಅವರು ಯುವಕರಿಗಾಗಿ ಈ ಫುಟ್‌ಬಾಲ್ ಫೈನಲ್ ಪಂದ್ಯ ವೀಕ್ಷಣೆಯ ವಿಶೇಷ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ. ಕ್ರೀಡಾಂಗಣಕ್ಕೆ ಸಾವಿರಾರು ಸಂಖ್ಯೆಯಲ್ಲಿ ಫುಟ್‌ಬಾಲ್ ಪ್ರಿಯರು ಹಾಗೂ ಯುವಕರು ಆಗಮಿಸಿ ಪಂದ್ಯವನ್ನು ನೋಡಿದ್ದಾರೆ. ಇದೇ ವೇಳೆ ಯುವಕರ ಶಿಸ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, “ನಮ್ಮ ಯುವಕರೆಲ್ಲರೂ ತುಂಬಾ ಒಳ್ಳೆಯವರಾಗಿದ್ದಾರೆ. ಕ್ರೀಡಾ ಸ್ಫೂರ್ತಿಯನ್ನು ಮೆರೆಯುವ ಅವರು ಯಾರೂ ಕೂಡ ಕಾನೂನನ್ನು ಕೈಗೆ ತೆಗೆದುಕೊಳ್ಳುವುದಿಲ್ಲ ಎನ್ನುವ ಸಂಪೂರ್ಣ ನಂಬಿಕೆ ನನಗಿದೆ. ಇಂದು ಇಡೀ ಪ್ರಪಂಚದಾದ್ಯಂತ ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಒಂದಾಗಿ ಫುಟ್‌ಬಾಲ್ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕ್ರೀಡೆಗೆ ಉತ್ತೇಜನ ನೀಡುವ ಕುರಿತು ಮಾತನಾಡಿದ ಡಿಸಿಎಂ, “ನಮ್ಮ ಸರ್ಕಾರವು ಕ್ರೀಡಾ ಕ್ಷೇತ್ರಕ್ಕೆ ಮತ್ತು ಕ್ರೀಡಾಪಟುಗಳಿಗೆ ಸದಾ ಬೆಂಬಲ ಹಾಗೂ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡುತ್ತದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ಜೋಡೋ ಯುವಕರ ಸಂಘ’ವನ್ನು ಸ್ಥಾಪನೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು. ಈ ಯೋಜನೆಯ ಮೂಲಕ ರಾಜ್ಯಾದ್ಯಂತ ಸುಮಾರು 10,000 ಯುವಕರನ್ನು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಿದ್ಧಪಡಿಸಲಾಗುತ್ತಿದೆ. ಯುವಕರ ಈ ಕ್ರೀಡಾ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಪೂರಕವಾಗಿ ಸರ್ಕಾರವು ಸಾವಿರಾರು ಕೋಟಿ ರೂಪಾಯಿಗಳ ಬೃಹತ್ ಅನುದಾನವನ್ನು ಮೀಸಲಿಟ್ಟಿದೆ ಎಂದು ಹೇಳಿದ್ದರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಸಂಸತ್ ಮುಂಗಾರು ಅಧಿವೇಶನ: ಯುವಶಕ್ತಿ, ಬಾಹ್ಯಾಕಾಶ ಸಾಧನೆ, ದೇಶದ ಆರ್ಥಿಕ ಪ್ರಗತಿ ಶ್ಲಾಘಿಸಿದ ಪ್ರಧಾನಿ ಮೋದಿ – Kannada News | PM Modi Urges MPs to Ensure Meaningful and Productive Parliament Session

ನವದೆಹಲಿ, ಜುಲೈ 20: ಸಂಸತ್ತಿನ ಮುಂಗಾರು ಅಧಿವೇಶನ ಶಾಸನಬದ್ಧವಾಗಿ ಆರಂಭವಾಗುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ಭವನದ ಆವರಣದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ದೇಶದ ಭದ್ರತೆ, ಖಾಸಗಿ ಬಾಹ್ಯಾಕಾಶ ವಲಯದ ಯಶಸ್ಸು ಮತ್ತು ಜಾಗತಿಕ ಸವಾಲುಗಳ ನಡುವೆಯೂ ಭಾರತ ಸಾಧಿಸಿರುವ ಆರ್ಥಿಕ ಪ್ರಗತಿಯನ್ನು ಪ್ರಧಾನಿ ಮುಕ್ತಕಂಠದಿಂದ ಶ್ಲಾಘಿಸಿದರು. ಇಡೀ ಜಗತ್ತು ಹಾಗೂ ವಿಶೇಷವಾಗಿ ಪಶ್ಚಿಮ ಏಷ್ಯಾದಲ್ಲಿ ಯುದ್ಧ ಮತ್ತು ಸಂಘರ್ಷದ ಪರಿಸ್ಥಿತಿ ಎದುರಾಗಿದ್ದರೂ ಭಾರತದ ಆರ್ಥಿಕತೆ ಶಕ್ತಿಯುತವಾಗಿ ಬೆಳೆದಿದೆ ಎಂದು ಪ್ರಧಾನಿ ಹೇಳಿದರು.

ಜಾಗತಿಕ ಮಟ್ಟದಲ್ಲಿ ತೀವ್ರ ಸವಾಲುಗಳು ಮತ್ತು ಪಶ್ಚಿಮ ಏಷ್ಯಾದ ಸಂಘರ್ಷದಿಂದ ಬಿಕ್ಕಟ್ಟು ಸೃಷ್ಟಿಯಾಗಿದ್ದರೂ ಸಹ, ಭಾರತವು ಶೇಕಡಾ 7.7 ರಷ್ಟು ಭಾರಿ ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿದೆ. ಇದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವ ವಿಷಯ ಎಂದು ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದರು.ಭಾರತದ ಖಾಸಗಿ ಬಾಹ್ಯಾಕಾಶ ಸಂಸ್ಥೆ ‘ಸ್ಕೈರೂಟ್’ ಇತ್ತೀಚೆಗೆ ಸಾಧಿಸಿದ ರಾಕೆಟ್ ಉಡಾವಣೆಯ ಐತಿಹಾಸಿಕ ಯಶಸ್ಸನ್ನು ಪ್ರಧಾನಿ ವಿಶದವಾಗಿ ಸ್ಮರಿಸಿದರು.

ಕಳೆದ ವರ್ಷ ನಮ್ಮ ಭಾರತೀಯ ನಾಗರಿಕನೊಬ್ಬ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ್ದರು. ಈಗ ನಮ್ಮ ಯುವಕರು ಬಾಹ್ಯಾಕಾಶಕ್ಕೆ ಹೊಸ ಖಾಸಗಿ ಪ್ರಯಾಣ ಆರಂಭಿಸಿದ್ದಾರೆ.ಭಾರತದ ಯುವಕರ ಸಾಮರ್ಥ್ಯ ಮತ್ತು ಆಕಾಂಕ್ಷೆಗಳು ಬಾಹ್ಯಾಕಾಶದಷ್ಟೇ ಅಪರಿಮಿತವಾಗಿವೆ ಎಂದರು. ಸಂಸತ್ತಿನ ಕಲಾಪಗಳ ಕುರಿತು ಮಾತನಾಡಿದ ಪ್ರಧಾನಿ, ಅಧಿವೇಶನವು ಅತ್ಯಂತ ಫಲಪ್ರದವಾಗಿ ಮತ್ತು ಪ್ರಗತಿದಾಯಕವಾಗಿ ನಡೆಯಲಿ ಎಂದು ಆಶಿಸಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಟೀಮ್ ಇಂಡಿಯಾದ ಮುಂದಿನ ಸರಣಿ ವೇಳಾಪಟ್ಟಿ ಇಲ್ಲಿದೆ – Kannada News | India vs Zimbabwe T20 series schedule 2026

ಭಾರತ ಮತ್ತು ಇಂಗ್ಲೆಂಡ್ ನಡುವಣ ಟಿ20 ಹಾಗೂ ಏಕದಿನ ಸರಣಿ ಮುಗಿದಿದೆ. ಟಿ20 ಸರಣಿಯನ್ನು 4-0 ಅಂತರದಿಂದ ಸೋತಿದ್ದ ಟೀಮ್ ಇಂಡಿಯಾ ಏಕದಿನ ಸರಣಿಯನ್ನು 2-1 ಅಂತರದಿಂದ ಕಳೆದುಕೊಂಡಿದೆ. ಈ ಎರಡು ಸರಣಿ ಸೋಲುಗಳ ಬೆನ್ನಲ್ಲೇ ಟೀಮ್ ಇಂಡಿಯಾ ಮತ್ತೊಂದು ಸರಣಿಗಾಗಿ ಸಜ್ಜಾಗಬೇಕಿದೆ. ಅಂದರೆ ಜುಲೈ 23 ರಿಂದ ಭಾರತ ಮತ್ತು ಝಿಂಬಾಬ್ವೆ ನಡುವಣ ಟಿ20 ಸರಣಿ ಶುರುವಾಗಲಿದ್ದು, ಈ ಸಿರೀಸ್​ನಲ್ಲಿ ಉಭಯ ತಂಡಗಳು 3 ಪಂದ್ಯಗಳನ್ನಾಡಲಿದೆ. ಈ ಸರಣಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…

ಭಾರತ ಮತ್ತು ಝಿಂಬಾಬ್ವೆ ಟಿ20 ಸರಣಿ ವೇಳಾಪಟ್ಟಿ (2026):

  • ಜುಲೈ 23, 2026 (ಗುರುವಾರ): 1ನೇ ಟಿ20 ಪಂದ್ಯ – ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
  • ಜುಲೈ 25, 2026 (ಶನಿವಾರ): 2ನೇ ಟಿ20 ಪಂದ್ಯ – ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
  • ಜುಲೈ 26, 2026 (ಭಾನುವಾರ): 3ನೇ ಟಿ20 ಪಂದ್ಯ – ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ

ಈ ಎಲ್ಲಾ ಮೂರು ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 4:30 ಕ್ಕೆ (ಸ್ಥಳೀಯ ಸಮಯ ಮಧ್ಯಾಹ್ನ 1:00 ಗಂಟೆಗೆ) ಆರಂಭವಾಗಲಿವೆ.

ಟೀಮ್ ಇಂಡಿಯಾದ ಮುಂಬರುವ ಸರಣಿ ಮತ್ತು ಟೂರ್ನಿ:

ಝಿಂಬಾಬ್ವೆ ಪ್ರವಾಸ (ಜುಲೈ 23 – ಜುಲೈ 26, 2026): ಟೀಮ್ ಇಂಡಿಯಾ ಜುಲೈ ಕೊನೆಯ ವಾರದಲ್ಲಿ ಜಿಂಬಾಬ್ವೆ ವಿರುದ್ಧ ಚುಟುಕು ಟಿ20 ಸರಣಿಯನ್ನು ಆಡಲಿದೆ.

ಶ್ರೀಲಂಕಾ ಪ್ರವಾಸ (ಆಗಸ್ಟ್ 14 – ಆಗಸ್ಟ್ 27, 2026): ಭಾರತ ತಂಡವು ಲಂಕಾ ನೆಲದಲ್ಲಿ 2 ಪಂದ್ಯಗಳ ಪ್ರಮುಖ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದೆ.

ವೆಸ್ಟ್ ಇಂಡೀಸ್ ಭಾರತ ಪ್ರವಾಸ (ಸೆಪ್ಟೆಂಬರ್ 26 – ಅಕ್ಟೋಬರ್ 17, 2026): ವೆಸ್ಟ್ ಇಂಡೀಸ್ ತಂಡ ಭಾರತಕ್ಕೆ ಬರಲಿದ್ದು, 3 ಏಕದಿನ ಹಾಗೂ 5 ಟಿ20 ಪಂದ್ಯಗಳ ಸುದೀರ್ಘ ಸರಣಿ ನಡೆಯಲಿದೆ.

ಏಷ್ಯನ್ ಗೇಮ್ಸ್ (ಸೆಪ್ಟೆಂಬರ್ 19 – ಅಕ್ಟೋಬರ್ 4, 2026): ಜಪಾನ್ನ ಐಚಿ-ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲೂ ಭಾರತ ತಂಡ ಸ್ಪರ್ಧಿಸಲಿದೆ.

ನ್ಯೂಝಿಲೆಂಡ್ ಪ್ರವಾಸ (ಅಕ್ಟೋಬರ್ 22 – ಡಿಸೆಂಬರ್ 1, 2026): ಕಿವೀಸ್ ನಾಡಿನಲ್ಲಿ ಭಾರತ 2 ಟೆಸ್ಟ್, 3 ಏಕದಿನ ಮತ್ತು 5 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ.

ಇದನ್ನೂ ಓದಿ: ಮ್ಯಾಚ್ ಫಿಕ್ಸಿಂಗ್​ಗೆ ಯತ್ನ: ಟೀಮ್ ಇಂಡಿಯಾದ ಮಾಜಿ ಆಟಗಾರ ಬಂಧನ!

ಶ್ರೀಲಂಕಾ ಭಾರತ ಪ್ರವಾಸ (ಡಿಸೆಂಬರ್ 13 – ಡಿಸೆಂಬರ್ 27, 2026): ವರ್ಷದ ಕೊನೆಯಲ್ಲಿ ಶ್ರೀಲಂಕಾ ತಂಡ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದು, 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಿದೆ.

Source link

ಸಿನಿಮಾ ಲೀಕ್ ಆದ ಹೊರತಾಗಿಯೂ ದಾಖಲೆ ಬರೆಯಲು ಸಜ್ಜಾದ ‘ಜನ ನಾಯಗನ್’ – Kannada News | CM Thalapathy Vijay Jana Nayagan Set For Massive Box Office Opening; 15K Tickets Sold in One Hour

ತಮಿಳುನಾಡು ಮುಖ್ಯಮಂತ್ರಿ ಹಾಗೂ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಜುಲೈ 23ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ವ್ಯಕ್ತವಾಗಿದೆ. ಇದು ವಿಜಯ್ ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ರಾಜಕೀಯ ಪಿತೂರಿ, ಸೆನ್ಸಾರ್ ಮಂಡಳಿ ವಿಳಂಬ ಮತ್ತು ಸಿನಿಮಾ ಲೀಕ್ ನಡುವೆಯೂ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಭರ್ಜರಿಯಾಗಿ ಆರಂಭವಾಗಿದೆ. ಬುಕ್ ಮೈ ಶೋ ಆಪ್‌ನಲ್ಲಿ ಕೇವಲ ಒಂದು ಗಂಟೆಯಲ್ಲಿ 15 ಸಾವಿರಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ.

ಸಿನಿಮಾ ಬಿಡುಗಡೆಗೆ ಇನ್ನೂ ಮೂರು ದಿನ ಬಾಕಿ ಇರುವಾಗಲೇ ಈ ಮಟ್ಟದ ರೆಕಾರ್ಡ್ ಸೃಷ್ಟಿಯಾಗಿದೆ. ವಿಜಯ್ ಅವರು ಈ ಚಿತ್ರಕ್ಕೆ ಯಾವುದೇ ಪ್ರಚಾರ ಮಾಡಿಲ್ಲ. ಆದರೂ ಮುಂಗಡ ಬುಕಿಂಗ್ ಟ್ರೆಂಡ್ ಕಂಡು ಬಾಕ್ಸ್ ಆಫೀಸ್ ತಜ್ಞರೇ ಆಶ್ಚರ್ಯಪಟ್ಟಿದ್ದಾರೆ.

ಮುಂದಿನ ಮೂರು ದಿನಗಳ ಕಾಲ ಇದೇ ವೇಗ ಮುಂದುವರಿದರೆ ಸಿನಿಮಾ ಭರ್ಜರಿ ಓಪನಿಂಗ್ ಪಡೆಯುವುದು ಗ್ಯಾರಂಟಿ. ತಮಿಳುನಾಡಿನಲ್ಲಿ ಮೊದಲ ದಿನವೇ ಈ ಚಿತ್ರ ದಾಖಲೆ ಮಟ್ಟದ ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿದೆ.

ವಿಜಯ್ ಅವರ ಕ್ರೇಜ್ ಕೇವಲ ತಮಿಳುನಾಡಿಗೆ ಮಾತ್ರ ಸೀಮಿತವಾಗಿಲ್ಲ. ಕರ್ನಾಟಕ, ಆಂಧ್ರ, ತೆಲಂಗಾಣದಲ್ಲೂ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಹೀಗಾಗಿ ಈ ಭಾಗದಲ್ಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಬೆಂಗಳೂರಿನಲ್ಲಿ ಸಾವಿರ ರೂಪಾಯಿ ಟಿಕೆಟ್ ಇಟ್ಟರೂ ಅದು ಮಾರಾಟ ಆಗಿ ದಾಖಲೆ ಬರೆದಿದೆ.

ಇದನ್ನೂ ಓದಿ: ಸಿಎಂ ವಿಜಯ್ ಬಗ್ಗೆ ಮೊದಲ ಬಾರಿ ಮಾತನಾಡಿದ ಪುತ್ರ ಸಂಜಯ್

ಯಾವುದೇ ಪ್ರಚಾರವಿಲ್ಲದಿದ್ದರೂ ಕೇವಲ ವಿಜಯ್ ಅವರ ಸ್ಟಾರ್ ಪವರ್ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತಿದೆ. ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ‘ಜನ ನಾಯಗನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಆರಂಭ ಪಡೆಯಲು ಸಜ್ಜಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನೀಟ್ ಪಾಸಾದವರಿಗೆ ಗುಡ್​​​ ನ್ಯೂಸ್: ಯುಜಿಸಿಇಟಿ ಅರ್ಜಿ ಸಲ್ಲಿಕೆಗೆ ಕೆಇಎಯಿಂದ ಹೊಸ ಲಿಂಕ್ ಪ್ರಕಟ – Kannada News | Karnataka NEET Medical Admissions 2026: KEA Reopens UGCET Applications, Deadline July 24

ಬೆಂಗಳೂರು, ಜು.20: ನೀಟ್ (NEET) ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದರೂ, ಇದುವರೆಗೆ ಪದವಿಪೂರ್ವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (UGCET) ಅರ್ಜಿ ಸಲ್ಲಿಸದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮತ್ತೊಂದು ಸುವರ್ಣ ಅವಕಾಶ ನೀಡಿದೆ. ಇಂತಹ ಅಭ್ಯರ್ಥಿಗಳಿಗಾಗಿ ಕೆಇಎ ಹೊಸ ಅಪ್ಲಿಕೇಶನ್ ಲಿಂಕ್ ಅನ್ನು ಬಿಡುಗಡೆ ಮಾಡಿದ್ದು, ಜುಲೈ 24 ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.

ಇದುವರೆಗೆ ಯುಜಿಸಿಇಟಿ ಅರ್ಜಿ ಸಲ್ಲಿಸದ ಹೊಸ ಅಭ್ಯರ್ಥಿಗಳು ಈ ಹೊಸ ಲಿಂಕ್ ಮೂಲಕ ತಕ್ಷಣವೇ ಅರ್ಜಿ ಸಲ್ಲಿಸಬಹುದಾಗಿದೆ. ಇದರೊಂದಿಗೆ, ಈಗಾಗಲೇ ಯುಜಿಸಿಇಟಿ ಅಪ್ಲಿಕೇಶನ್ ಸಲ್ಲಿಸಿದ್ದು, ನೀಟ್ ಮೂಲಕ ವೈದ್ಯಕೀಯ ಪ್ರವೇಶಾತಿಗೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ತಮ್ಮ ನೀಟ್ ರೋಲ್ ನಂಬರ್ ಅನ್ನು ಯುಜಿಸಿಇಟಿ ಅರ್ಜಿಯೊಂದಿಗೆ ಲಿಂಕ್ ಮಾಡಲು ಶೀಘ್ರದಲ್ಲೇ ಪ್ರತ್ಯೇಕ ಲಿಂಕ್ ಒದಗಿಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

ವೈದ್ಯಕೀಯ (MBBS), ದಂತವೈದ್ಯಕೀಯ (BDS), ಆಯುರ್ವೇದ (BAMS), ಯುನಾನಿ (BUMS) ಮತ್ತು ಹೋಮಿಯೋಪತಿ (BHMS) ಕೋರ್ಸ್‌ಗಳ ಪ್ರವೇಶಾತಿಯು ಸಂಪೂರ್ಣವಾಗಿ ನೀಟ್ ರಾಂಕ್ ಆಧಾರದ ಮೇಲೆ ನಡೆಯಲಿದೆ. ಹೊಸದಾಗಿ ನೋಂದಾಯಿಸಿಕೊಂಡ ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆಗೆ (Document Verification) ಹಾಜರಾಗುವ ಕುರಿತಾದ ಸಂಪೂರ್ಣ ವಿವರಗಳನ್ನು ಕೆಇಎ ಶೀಘ್ರದಲ್ಲೇ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ.

ಹೊರರಾಜ್ಯದ ಅಭ್ಯರ್ಥಿಗಳಿಗೆ ನಿಯಮಗಳೇನು?

ಕರ್ನಾಟಕೇತರ (ಹೊರರಾಜ್ಯದ) ಅಭ್ಯರ್ಥಿಗಳು ಕೂಡ ಕೆಇಎ ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಂಡು, ನಿಗದಿತ ಅರ್ಜಿ ಶುಲ್ಕ ಪಾವತಿಸಿ, ತಮ್ಮ ದ್ವಿತೀಯ ಪಿಯುಸಿ/ಹೈಯರ್ ಸೆಕೆಂಡರಿ ಅಂಕಗಳನ್ನು ನಮೂದಿಸಬೇಕಾಗುತ್ತದೆ. ಅವರು ತಮ್ಮ ಅಂಕಪಟ್ಟಿಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬಹುದಾಗಿದ್ದು, ಇಂತಹ ಅಭ್ಯರ್ಥಿಗಳು ನೇರವಾಗಿ ದಾಖಲಾತಿ ಪರಿಶೀಲನೆಗೆ ಹಾಜರಾಗುವ ಅಗತ್ಯವಿರುವುದಿಲ್ಲ.

ಆದರೆ ಭಾರತದ ಸಾಗರೋತ್ತರ ನಾಗರಿಕ (OCI), ಭಾರತೀಯ ಮೂಲದ ವ್ಯಕ್ತಿ (PIO), ಅನಿವಾಸಿ ಭಾರತೀಯರು (NRI), ವಿದೇಶಿ ನಾಗರಿಕರು ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಸೀಟುಗಳು, ಎನ್‌ಆರ್‌ಐ ವಾರ್ಡ್ ಸೌಲಭ್ಯ ಅಥವಾ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನಲ್ಲಿನ ನಿರ್ದಿಷ್ಟ ಸೀಟುಗಳಿಗೆ ಅರ್ಹತೆ ಹೊಂದಿರುವ ಹೊರರಾಜ್ಯದ ಅಭ್ಯರ್ಥಿಗಳು ಕಡ್ಡಾಯವಾಗಿ ಸ್ಲಾಟ್ ಕಾಯ್ದಿರಿಸಿ, ನಿಗದಿತ ದಿನಾಂಕದಂದು ದಾಖಲೆ ಪರಿಶೀಲನೆಗೆ ಹಾಜರಾಗಬೇಕಾಗುತ್ತದೆ. ಈ ದಿನಾಂಕಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು.

ಇದನ್ನೂ ಓದಿ: ಕುರಿ ಕಾಯುತ್ತಲೇ ನೀಟ್‌ನಲ್ಲಿ ಅಪ್ರತಿಮ ಸಾಧನೆ; ದೇಶಕ್ಕೇ 694ನೇ ರ‍್ಯಾಂಕ್ ಪಡೆದ ಕೊಪ್ಪಳದ ಹಳ್ಳಿ ಹೈದ

ಡಿಸಿಇಟಿ ಮೊದಲ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟ!

ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆ ಅಭ್ಯರ್ಥಿಗಳಿಗೆ ಜುಲೈ 21 ರಿಂದ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗಲಿದೆ. ಜುಲೈ 21 ರಿಂದ ಜುಲೈ 24 ರವರೆಗೆ ಅಭ್ಯರ್ಥಿಗಳು ತಮ್ಮ ಆದ್ಯತೆಯ ಕಾಲೇಜುಗಳ ಆಯ್ಕೆಯನ್ನು ದಾಖಲಿಸಬಹುದು. ಹಾಗೂ ಜುಲೈ 24 ರ ಸಂಜೆ 6 ಗಂಟೆಗೆ ಅಣಕು ಸೀಟು ಹಂಚಿಕೆಯ ಫಲಿತಾಂಶ ಪ್ರಕಟವಾಗಲಿದೆ. ಇದರ ನಂತರ ಅಭ್ಯರ್ಥಿಗಳು ಜುಲೈ 27 ರವರೆಗೆ ತಮ್ಮ ಆಯ್ಕೆಗಳನ್ನು ಸೇರಿಸಲು, ಮಾರ್ಪಡಿಸಲು ಅಥವಾ ಡಿಲೀಟ್ ಮಾಡಲು ಅವಕಾಶವಿರುತ್ತದೆ. ಮೊದಲ ಸುತ್ತಿನ ಅಂತಿಮ ಸೀಟು ಹಂಚಿಕೆ ಫಲಿತಾಂಶವು ಜುಲೈ 27 ರ ಸಂಜೆ 6 ಗಂಟೆಗೆ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಆರ್ಕಿಟೆಕ್ಚರ್ ಕೋರ್ಸ್‌ಗಳ ಪ್ರವೇಶಾತಿ ಬಯಸುವ ಅಭ್ಯರ್ಥಿಗಳು ತಮ್ಮ ನಾಟಾ ಅಂಕಪಟ್ಟಿಯನ್ನು ಜುಲೈ 20 ರ ಒಳಗಾಗಿ ಕೆಇಎ ಕಚೇರಿಗೆ ಸಲ್ಲಿಸುವುದನ್ನು ಕಡ್ಡಾಯ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

6,322 ಕೋಟಿ ರೂ. ಬಹುಮಾನ: ಯಾರಿಗೆ ಎಷ್ಟು ಕೋಟಿ? ಇಲ್ಲಿದೆ ಸಂಪೂರ್ಣ ಮಾಹಿತಿ – Kannada News | FIFA World Cup 2026: Full Awards winners list, prize money

FIFA World Cup 2026: ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸುಮಾರು ₹6,322+ ಕೋಟಿ ರೂ. ಬಹುಮಾನ ಮೊತ್ತವನ್ನು ನೀಡಲಾಗಿದೆ. ಈ ಬಹುಮಾನ ಮೊತ್ತವನ್ನು 48 ತಂಡಗಳಿಗೆ ಹಂಚಲಾಗಿದ್ದು, ಚಾಂಪಿಯನ್ ಸ್ಪೇನ್ ತಂಡವು ಗರಿಷ್ಠ ಮೊತ್ತ ಪಡೆದರೆ, 15 ತಂಡಗಳು ಕನಿಷ್ಠ ಮೊತ್ತವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಗಾದರೆ ಯಾರಿಗೆ ಎಷ್ಟು ಕೋಟಿ ರೂ. ಸಿಕ್ಕಿದೆ? ವಿಜೇತ ಮತ್ತು ರನ್ನರ್-ಅಪ್ ತಂಡಗಳ ಪಾಲಾದ ಒಟ್ಟು ಮೊತ್ತ ಎಷ್ಟು? ಎಂಬುದರ ಸಂಪೂರ್ಣ ವಿವರ ಈ ಕೆಳಗಿನಂತಿದೆ…

ಟೂರ್ನಿಯ ಸ್ಥಾನ / ಹಂತ ಬಹುಮಾನ ಮೊತ್ತ (USD) ಭಾರತೀಯ ರೂಪಾಯಿಗಳಲ್ಲಿ (ಅಂದಾಜು)
ವಿಶ್ವ ಚಾಂಪಿಯನ್- ಸ್ಪೇನ್ $50 ಮಿಲಿಯನ್ ₹482 ಕೋಟಿ
ರನ್ನರ್ಸ್-ಅಪ್- ಅರ್ಜೆಂಟೀನಾ $33 ಮಿಲಿಯನ್ ₹317 ಕೋಟಿ
ಮೂರನೇ ಸ್ಥಾನ- ಇಂಗ್ಲೆಂಡ್ $29 ಮಿಲಿಯನ್ ₹279 ಕೋಟಿ
ನಾಲ್ಕನೇ ಸ್ಥಾನ- ಫ್ರಾನ್ಸ್ $27 ಮಿಲಿಯನ್ ₹259 ಕೋಟಿ
ಕ್ವಾರ್ಟರ್ ಫೈನಲಿಸ್ಟ್ಸ್ (5 ರಿಂದ 8 ನೇ ಸ್ಥಾನ) ತಲಾ $19 ಮಿಲಿಯನ್ ತಲಾ ₹159 ಕೋಟಿ
ರೌಂಡ್ ಆಫ್ 16 (9 ರಿಂದ 16 ನೇ ಸ್ಥಾನ) ತಲಾ $15 ಮಿಲಿಯನ್ ತಲಾ ₹125 ಕೋಟಿ
ರೌಂಡ್ ಆಫ್ 32 (17 ರಿಂದ 32 ನೇ ಸ್ಥಾನ) ತಲಾ $11 ಮಿಲಿಯನ್ ತಲಾ ₹92 ಕೋಟಿ
ಗ್ರೂಪ್ ಹಂತದ ತಂಡಗಳು (33 ರಿಂದ 48 ನೇ ಸ್ಥಾನ) ತಲಾ $9 ಮಿಲಿಯನ್ ತಲಾ ₹75 ಕೋಟಿ

ಈ ಪ್ರದರ್ಶನ ಆಧಾರಿತ ಬಹುಮಾನದ ಹಣದ ಜೊತೆಗೆ, ಟೂರ್ನಿಗೆ ಅರ್ಹತೆ ಪಡೆದ ಎಲ್ಲಾ 48 ದೇಶಗಳಿಗೂ ಸಿದ್ಧತಾ ವೆಚ್ಚಕ್ಕಾಗಿ ತಲಾ $1.5 ಮಿಲಿಯನ್ (ಸುಮಾರು ₹12.5 ಕೋಟಿ) ಹಣವನ್ನು ಫಿಫಾ ಮೊದಲೇ ನೀಡಿತ್ತು. ಈ ಮೂಲಕ ಫಿಫಾ ಇದೇ ಮೊದಲ ಬಾರಿಗೆ ಬಹುಮಾನ ಮೊತ್ತವಾಗಿ ₹6,322+ ಕೋಟಿ ರೂ. ಅನ್ನು ವ್ಯಯಿಸಿದೆ.

ಫಿಫಾ ವಿಶ್ವಕಪ್ 2026ರ ವೈಯಕ್ತಿಕ ಪ್ರಶಸ್ತಿಗಳ ಪಟ್ಟಿ:

ಈ ಬಾರಿಯ ವಿಶ್ವಕಪ್​ನಲ್ಲಿ  ಅಪ್ರತಿಮ ಪ್ರದರ್ಶನ ನೀಡಿದ ಆಟಗಾರರಿಗೆ ಫೈನಲ್ ಪಂದ್ಯದ ನಂತರ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು:

  • ಗೋಲ್ಡನ್ ಬಾಲ್: ರೋಡ್ರಿ (ಸ್ಪೇನ್)
  • ಸಿಲ್ವರ್ ಬಾಲ್: ಲಿಯೋನೆಲ್ ಮೆಸ್ಸಿ (ಅರ್ಜೆಂಟೀನಾ)
  • ಬ್ರಾಂಝ್ ಬಾಲ್: ಕಿಲಿಯನ್ ಎಂಬಾಪೆ (ಫ್ರಾನ್ಸ್)
  • ಗೋಲ್ಡನ್ ಬೂಟ್: ಕಿಲಿಯನ್ ಎಂಬಾಪೆ (ಫ್ರಾನ್ಸ್)
  • ಸಿಲ್ವರ್ ಬೂಟ್: ಲಿಯೋನೆಲ್ ಮೆಸ್ಸಿ (ಅರ್ಜೆಂಟೀನಾ)
  • ಬ್ರಾಂಝ್ ಬೂಟ್: ಜೂಡ್ ಬೆಲ್ಲಿಂಗ್‌ಹ್ಯಾಮ್ (ಇಂಗ್ಲೆಂಡ್)
  • ಗೋಲ್ಡನ್ ಗ್ಲೌಸ್: ಉನ್ನಯ್ ಸಿಮನ್ (ಸ್ಪೇನ್)
  • ಫಿಫಾ ಬೆಸ್ಟ್ ಯಂಗ್ ಪ್ಲೇಯರ್: ಪಾವ್ ಕುಬಾರ್ಸಿ (ಸ್ಪೇನ್)
  • ಫಿಫಾ ಫೇರ್ ಪ್ಲೇ ಟ್ರೋಫಿ: ನೆದರ್ಲ್ಯಾಂಡ್ಸ್ ತಂಡ

ಇದನ್ನೂ ಓದಿ: ರೋಹಿತ್ ಶರ್ಮಾ ಸೆಂಚುರಿಗೆ ಸಚಿನ್ ಸಾರ್ವಕಾಲಿಕ ದಾಖಲೆ ಉಡೀಸ್

ಒಟ್ಟಾರೆಯಾಗಿ, ಕೋಟಿ ಕಂಠಗಳ ಜಯಘೋಷ, ಮೈದಾನದಲ್ಲಿ ಚಿಮ್ಮಿದ ಭಾವನೆಗಳ ಮಹಾಪೂರ ಮತ್ತು ಜಗತ್ತನ್ನೇ ಮಂತ್ರಮುಗ್ಧಗೊಳಿಸಿದ ಫುಟ್‌ಬಾಲ್ ಕ್ರಾಂತಿ ಸದ್ಯಕ್ಕೆ ಮುಕ್ತಾಯಗೊಂಡಿದೆ. ಗೆದ್ದವರ ಸಂಭ್ರಮ, ಸೋತವರ ಹೋರಾಟದ ಹಠ ಎರಡೂ ಕ್ರೀಡಾಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿವೆ.

Published On – 10:22 am, Mon, 20 July 26

Source link

82 ಸಾವಿರ ಜನರ ಮಧ್ಯೆ ಕುಳಿತು ಫಿಫಾ ವರ್ಲ್ಡ್​​​ಕಪ್ ಫೈನಲ್ ವೀಕ್ಷಿಸಿದ ಮೋಹನ್​ಲಾಲ್

ಅಮೆರಿಕದ ಮೆಟ್​​ಲೈಫ್ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್‌ನ ಫೈನಲ್ ಪಂದ್ಯಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಿತ್ತು. ಈ ಐತಿಹಾಸಿಕ ಪಂದ್ಯವನ್ನು ವೀಕ್ಷಿಸಲು ಭಾರತೀಯ ಚಿತ್ರರಂಗದ ದಿಗ್ಗಜ ನಟ ಮೋಹನ್‌ಲಾಲ್ ಕ್ರೀಡಾಂಗಣಕ್ಕೆ ತೆರಳಿದ್ದರು. ಸ್ಟೇಡಿಯಂನಲ್ಲಿ ನೆರೆದಿದ್ದ 82 ಸಾವಿರಕ್ಕೂ ಅಧಿಕ ಫುಟ್‌ಬಾಲ್ ಅಭಿಮಾನಿಗಳ ಮಧ್ಯೆ ಕುಳಿತು ಅವರು ಪಂದ್ಯದ ಪ್ರತಿ ಕ್ಷಣವನ್ನು ಎಂಜಾಯ್ ಮಾಡಿದ್ದಾರೆ.

ಫಿಫಾ ಲೋಗೋ ಇರುವ ವಿಶೇಷ ಕ್ಯಾಪ್ ಧರಿಸಿ ಪಂದ್ಯ ವೀಕ್ಷಿಸುತ್ತಿರುವ ವಿಡಿಯೋವನ್ನು ಮೋಹನ್‌ಲಾಲ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಶ್ವಕಪ್‌ನ ಭವ್ಯ ವಾತಾವರಣ ಮತ್ತು ಅಭಿಮಾನಿಗಳ ಜೋಶ್ ಕಂಡು ಅವರು ರೋಮಾಂಚನಗೊಂಡಿದ್ದಾರೆ. ಕೇರಳದವರು ಫುಟ್​​ಬಾಲ್​​ನ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುತ್ತಾರೆ. ಅದೇ ರೀತಿ ಮೋಹನ್​ಲಾಲ್ ಕೂಡ ಫುಟ್​ಬಾಲ್ ಅಭಿಮಾನಿ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಲಾಲ್‌ಬಾಗ್ ಮಾರಾಟಕ್ಕಿದೆ’: ಸುರಂಗ ಮಾರ್ಗ ಯೋಜನೆ ವಿರೋಧಿಸಿ ಕರಪತ್ರ ಹಂಚಿ ವಿಭಿನ್ನವಾಗಿ ಪ್ರತಿಭಟನೆ ಮಾಡಿದ ಸಂಸದ ತೇಜಸ್ವಿ ಸೂರ್ಯ – Kannada News | Save Lalbagh: Bengaluru Tunnel Road Project Sparks Outcry Over 5 Acre Land Use

ಬೆಂಗಳೂರು, ಜು.20: ಹೆಬ್ಬಾಳ ಮತ್ತು ಸಿಲ್ಕ್ ಬೋರ್ಡ್ ಅನ್ನು ಸಂಪರ್ಕಿಸುವ ಉದ್ದೇಶಿತ ಉತ್ತರ-ದಕ್ಷಿಣ ಸುರಂಗ ರಸ್ತೆ (Tunnel Road) ಯೋಜನೆಗಾಗಿ ಐತಿಹಾಸಿಕ ಲಾಲ್‌ಬಾಗ್ ಸಸ್ಯಶಾಸ್ತ್ರೀಯ ಉದ್ಯಾನವನದ 5 ಎಕರೆ ಜಾಗವನ್ನು ಬಳಸಿಕೊಳ್ಳುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಭಾನುವಾರ ಲಾಲ್‌ಬಾಗ್‌ನಲ್ಲಿ ‘ಲಾಲ್‌ಬಾಗ್ ಮಾರಾಟಕ್ಕಿದೆ’ (Lalbagh for Sale) ಎಂಬ ಸಂದೇಶವಿರುವ ಕರಪತ್ರಗಳನ್ನು ವಿತರಿಸುವ ಮೂಲಕ ಸರ್ಕಾರದ ವಿರುದ್ಧ ಭಿನ್ನ ಶೈಲಿಯ ಪ್ರತಿಭಟನೆ ನಡೆಸಿದ್ದಾರೆ.

ಭಾನುವಾರ ಬೆಳಗ್ಗೆ ಲಾಲ್‌ಬಾಗ್‌ಗೆ ಭೇಟಿ ನೀಡಿ ನೂರಾರು ಸಾರ್ವಜನಿಕರು ಹಾಗೂ ವಾಸಿಗಳನ್ನು ಭೇಟಿ ಮಾಡಿದ ತೇಜಸ್ವಿ ಸೂರ್ಯ, ಸರ್ಕಾರದ ಈ ಪ್ರಸ್ತಾವನೆಯ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಆತಂಕವಿದೆ ಎಂದು ತಿಳಿಸಿದರು. “ನಾವು ನಮ್ಮ ಧ್ವನಿಯನ್ನು ಎತ್ತಬೇಕಾಗಿದೆ ಮತ್ತು ಇದೊಂದು ಬೃಹತ್ ಜನ ಆಂದೋಲನವಾಗಿ ರೂಪಗೊಳ್ಳಬೇಕಿದೆ. ಯಾವುದೇ ಕಾರಣಕ್ಕೂ ಲಾಲ್‌ಬಾಗ್ ಆವರಣದಲ್ಲಿ ಈ ಯೋಜನೆ ಜಾರಿಯಾಗದಂತೆ ನಾವು ನೋಡಿಕೊಳ್ಳುತ್ತೇವೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಲಾಲ್‌ಬಾಗ್ ಬೆಂಗಳೂರಿನ ಹೆಮ್ಮೆ ಮತ್ತು ನಗರದ ದೊಡ್ಡ ಹಸಿರು ವಲಯಗಳಲ್ಲಿ ಒಂದಾಗಿದೆ. ಇದು ಅಂತರ್ಜಲ ಮರುಪೂರಣಕ್ಕೆ ಸಹಾಯ ಮಾಡುವುದಲ್ಲದೆ, ಲಾಲ್‌ಬಾಗ್ ಕೆರೆಯ ಪರಿಸರ ವ್ಯವಸ್ಥೆಯನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.

ಎಕ್ಸ್​​​ ಪೋಸ್ಟ್​​ ಇಲ್ಲಿದೆ ನೋಡಿ:

ಹೈಕೋರ್ಟ್ ಅಫಿಡವಿಟ್‌ನಲ್ಲಿ ಏನಿದೆ?:

ಸಂಸದರು ವಿತರಿಸಿದ ಕರಪತ್ರದಲ್ಲಿ ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನ ಮುಖ್ಯಾಂಶಗಳನ್ನು ಉಲ್ಲೇಖಿಸಲಾಗಿತ್ತು. ಲಾಲ್‌ಬಾಗ್ ಒಟ್ಟು ಸುಮಾರು 97 ಹೆಕ್ಟೇರ್ ಪ್ರದೇಶವನ್ನು ಹೊಂದಿದ್ದು, ಅದರಲ್ಲಿ ತಾತ್ಕಾಲಿಕ ನಿರ್ಮಾಣ ಪ್ರದೇಶ ಸೇರಿದಂತೆ ಸುಮಾರು 2.37 ಹೆಕ್ಟೇರ್ (ಶೇ. 2.47) ಜಾಗವನ್ನು ಮಾತ್ರ ಯೋಜನೆಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಶಾಶ್ವತವಾಗಿ ಕೇವಲ 1.92 ಹೆಕ್ಟೇರ್ (ಉದ್ಯಾನವನದ ಸುಮಾರು ಶೇ. 1.9 ರಷ್ಟು) ಜಾಗ ಮಾತ್ರ ಅಗತ್ಯವಿದ್ದು, ಕಾಮಗಾರಿ ಮುಗಿದ ನಂತರ ಆ ಜಾಗವನ್ನು ಯಥಾಸ್ಥಿತಿಗೆ ತರಲಾಗುವುದು ಎಂದು ಸರ್ಕಾರ ಕೋರ್ಟ್‌ಗೆ ತಿಳಿಸಿದೆ.

ಇದನ್ನೂ ಓದಿ:ಬೆಂಗಳೂರಿನ ಪೌರ ಕಾರ್ಮಿಕರಿಗೆ ಪ್ರವಾಸ ಭಾಗ್ಯ! ಕರ್ನಾಟಕದ 6 ನಗರಗಳಿಗೆ ಸ್ಟಡಿ ಟೂರ್

ರಿಯಲ್ ಎಸ್ಟೇಟ್ ಸುಲಿಗೆಗೆ ಅವಕಾಶ?

ಸರ್ಕಾರದ ವಾದವನ್ನು ತಳ್ಳಿಹಾಕಿದ ತೇಜಸ್ವಿ ಸೂರ್ಯ, “ಈ ಯೋಜನೆಯ ಟೆಂಡರ್ ಮತ್ತು ಸಿದ್ಧಪಡಿಸಲಾಗಿರುವ ವಿಸ್ತೃತ ಯೋಜನಾ ವರದಿ ಪ್ರಕಾರ, ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಐದು ಮಹಡಿಗಳ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲು ಗುತ್ತಿಗೆದಾರರಿಗೆ ಅನುಮತಿ ನೀಡಲಾಗಿದೆ” ಎಂದು ಗಂಭೀರ ಆರೋಪ ಮಾಡಿದರು. “ನಮ್ಮ ಹೋರಾಟವು ಅಭಿವೃದ್ಧಿ ಅಥವಾ ಮೂಲಸೌಕರ್ಯ ಯೋಜನೆಗಳ ವಿರುದ್ಧ ಅಲ್ಲ. ಆದರೆ ಮೂಲಸೌಕರ್ಯದ ಹೆಸರಿನಲ್ಲಿ ಬೆಂಗಳೂರಿನ ಉಳಿದಿರುವ ಹಸಿರು ಪರಂಪರೆಯನ್ನು ರಿಯಲ್ ಎಸ್ಟೇಟ್ ಯೋಜನೆಗಳಿಗಾಗಿ ಹಾಳುಮಾಡುವುದನ್ನು ನಾವು ಒಪ್ಪುವುದಿಲ್ಲ” ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬರದ ನಡುವೆಯೂ ಊಟಿಯ ಅನುಭವ ನೀಡುತ್ತಿದೆ ಚಿತ್ರದುರ್ಗದ ಜೋಗಿಮಟ್ಟಿ! ಪ್ರಕೃತಿ ಸೌಂದರ್ಯ ಸವಿಯಲು ಹರಿದು ಬರುತ್ತಿರುವ ಪ್ರವಾಸಿಗರು – Kannada News | Jogimatti Chitradurga Turns Into Ooty of Bayaluseeme Despite Drought; Tourists Flock to Misty Hill Station

ಸಮುದ್ರಮಟ್ಟದಿಂದ ಸುಮಾರು 3,803 ಅಡಿ ಎತ್ತರದಲ್ಲಿರುವ ಜೋಗಿಮಟ್ಟಿ, ಏಷ್ಯಾದಲ್ಲೇ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಕುರುಚಲು ಅರಣ್ಯ, ಅಪರೂಪದ ಜೀವ ವೈವಿಧ್ಯ ಮತ್ತು ತಂಪಾದ ವಾತಾವರಣ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಜಿಲ್ಲೆಯಾದ್ಯಂತ ಮಳೆ ಕೊರತೆ ಕಾಡುತ್ತಿದ್ದರೂ, ಜೋಗಿಮಟ್ಟಿಯಲ್ಲಿ ಮಂಜು ಆವರಿಸಿದ ವಾತಾವರಣ ಪ್ರಕೃತಿ ಪ್ರಿಯರಿಗೆ ವಿಶೇಷ ಅನುಭವ ನೀಡುತ್ತಿದೆ.

Source link

Exit mobile version