82 ಸಾವಿರ ಜನರ ಮಧ್ಯೆ ಕುಳಿತು ಫಿಫಾ ವರ್ಲ್ಡ್​​​ಕಪ್ ಫೈನಲ್ ವೀಕ್ಷಿಸಿದ ಮೋಹನ್​ಲಾಲ್

ಅಮೆರಿಕದ ಮೆಟ್​​ಲೈಫ್ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್‌ನ ಫೈನಲ್ ಪಂದ್ಯಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಿತ್ತು. ಈ ಐತಿಹಾಸಿಕ ಪಂದ್ಯವನ್ನು ವೀಕ್ಷಿಸಲು ಭಾರತೀಯ ಚಿತ್ರರಂಗದ ದಿಗ್ಗಜ ನಟ ಮೋಹನ್‌ಲಾಲ್ ಕ್ರೀಡಾಂಗಣಕ್ಕೆ ತೆರಳಿದ್ದರು. ಸ್ಟೇಡಿಯಂನಲ್ಲಿ ನೆರೆದಿದ್ದ 82 ಸಾವಿರಕ್ಕೂ ಅಧಿಕ ಫುಟ್‌ಬಾಲ್ ಅಭಿಮಾನಿಗಳ ಮಧ್ಯೆ ಕುಳಿತು ಅವರು ಪಂದ್ಯದ ಪ್ರತಿ ಕ್ಷಣವನ್ನು ಎಂಜಾಯ್ ಮಾಡಿದ್ದಾರೆ.

ಫಿಫಾ ಲೋಗೋ ಇರುವ ವಿಶೇಷ ಕ್ಯಾಪ್ ಧರಿಸಿ ಪಂದ್ಯ ವೀಕ್ಷಿಸುತ್ತಿರುವ ವಿಡಿಯೋವನ್ನು ಮೋಹನ್‌ಲಾಲ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಶ್ವಕಪ್‌ನ ಭವ್ಯ ವಾತಾವರಣ ಮತ್ತು ಅಭಿಮಾನಿಗಳ ಜೋಶ್ ಕಂಡು ಅವರು ರೋಮಾಂಚನಗೊಂಡಿದ್ದಾರೆ. ಕೇರಳದವರು ಫುಟ್​​ಬಾಲ್​​ನ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುತ್ತಾರೆ. ಅದೇ ರೀತಿ ಮೋಹನ್​ಲಾಲ್ ಕೂಡ ಫುಟ್​ಬಾಲ್ ಅಭಿಮಾನಿ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಲಾಲ್‌ಬಾಗ್ ಮಾರಾಟಕ್ಕಿದೆ’: ಸುರಂಗ ಮಾರ್ಗ ಯೋಜನೆ ವಿರೋಧಿಸಿ ಕರಪತ್ರ ಹಂಚಿ ವಿಭಿನ್ನವಾಗಿ ಪ್ರತಿಭಟನೆ ಮಾಡಿದ ಸಂಸದ ತೇಜಸ್ವಿ ಸೂರ್ಯ – Kannada News | Save Lalbagh: Bengaluru Tunnel Road Project Sparks Outcry Over 5 Acre Land Use

ಬೆಂಗಳೂರು, ಜು.20: ಹೆಬ್ಬಾಳ ಮತ್ತು ಸಿಲ್ಕ್ ಬೋರ್ಡ್ ಅನ್ನು ಸಂಪರ್ಕಿಸುವ ಉದ್ದೇಶಿತ ಉತ್ತರ-ದಕ್ಷಿಣ ಸುರಂಗ ರಸ್ತೆ (Tunnel Road) ಯೋಜನೆಗಾಗಿ ಐತಿಹಾಸಿಕ ಲಾಲ್‌ಬಾಗ್ ಸಸ್ಯಶಾಸ್ತ್ರೀಯ ಉದ್ಯಾನವನದ 5 ಎಕರೆ ಜಾಗವನ್ನು ಬಳಸಿಕೊಳ್ಳುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಭಾನುವಾರ ಲಾಲ್‌ಬಾಗ್‌ನಲ್ಲಿ ‘ಲಾಲ್‌ಬಾಗ್ ಮಾರಾಟಕ್ಕಿದೆ’ (Lalbagh for Sale) ಎಂಬ ಸಂದೇಶವಿರುವ ಕರಪತ್ರಗಳನ್ನು ವಿತರಿಸುವ ಮೂಲಕ ಸರ್ಕಾರದ ವಿರುದ್ಧ ಭಿನ್ನ ಶೈಲಿಯ ಪ್ರತಿಭಟನೆ ನಡೆಸಿದ್ದಾರೆ.

ಭಾನುವಾರ ಬೆಳಗ್ಗೆ ಲಾಲ್‌ಬಾಗ್‌ಗೆ ಭೇಟಿ ನೀಡಿ ನೂರಾರು ಸಾರ್ವಜನಿಕರು ಹಾಗೂ ವಾಸಿಗಳನ್ನು ಭೇಟಿ ಮಾಡಿದ ತೇಜಸ್ವಿ ಸೂರ್ಯ, ಸರ್ಕಾರದ ಈ ಪ್ರಸ್ತಾವನೆಯ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಆತಂಕವಿದೆ ಎಂದು ತಿಳಿಸಿದರು. “ನಾವು ನಮ್ಮ ಧ್ವನಿಯನ್ನು ಎತ್ತಬೇಕಾಗಿದೆ ಮತ್ತು ಇದೊಂದು ಬೃಹತ್ ಜನ ಆಂದೋಲನವಾಗಿ ರೂಪಗೊಳ್ಳಬೇಕಿದೆ. ಯಾವುದೇ ಕಾರಣಕ್ಕೂ ಲಾಲ್‌ಬಾಗ್ ಆವರಣದಲ್ಲಿ ಈ ಯೋಜನೆ ಜಾರಿಯಾಗದಂತೆ ನಾವು ನೋಡಿಕೊಳ್ಳುತ್ತೇವೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಲಾಲ್‌ಬಾಗ್ ಬೆಂಗಳೂರಿನ ಹೆಮ್ಮೆ ಮತ್ತು ನಗರದ ದೊಡ್ಡ ಹಸಿರು ವಲಯಗಳಲ್ಲಿ ಒಂದಾಗಿದೆ. ಇದು ಅಂತರ್ಜಲ ಮರುಪೂರಣಕ್ಕೆ ಸಹಾಯ ಮಾಡುವುದಲ್ಲದೆ, ಲಾಲ್‌ಬಾಗ್ ಕೆರೆಯ ಪರಿಸರ ವ್ಯವಸ್ಥೆಯನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.

ಎಕ್ಸ್​​​ ಪೋಸ್ಟ್​​ ಇಲ್ಲಿದೆ ನೋಡಿ:

ಹೈಕೋರ್ಟ್ ಅಫಿಡವಿಟ್‌ನಲ್ಲಿ ಏನಿದೆ?:

ಸಂಸದರು ವಿತರಿಸಿದ ಕರಪತ್ರದಲ್ಲಿ ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನ ಮುಖ್ಯಾಂಶಗಳನ್ನು ಉಲ್ಲೇಖಿಸಲಾಗಿತ್ತು. ಲಾಲ್‌ಬಾಗ್ ಒಟ್ಟು ಸುಮಾರು 97 ಹೆಕ್ಟೇರ್ ಪ್ರದೇಶವನ್ನು ಹೊಂದಿದ್ದು, ಅದರಲ್ಲಿ ತಾತ್ಕಾಲಿಕ ನಿರ್ಮಾಣ ಪ್ರದೇಶ ಸೇರಿದಂತೆ ಸುಮಾರು 2.37 ಹೆಕ್ಟೇರ್ (ಶೇ. 2.47) ಜಾಗವನ್ನು ಮಾತ್ರ ಯೋಜನೆಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಶಾಶ್ವತವಾಗಿ ಕೇವಲ 1.92 ಹೆಕ್ಟೇರ್ (ಉದ್ಯಾನವನದ ಸುಮಾರು ಶೇ. 1.9 ರಷ್ಟು) ಜಾಗ ಮಾತ್ರ ಅಗತ್ಯವಿದ್ದು, ಕಾಮಗಾರಿ ಮುಗಿದ ನಂತರ ಆ ಜಾಗವನ್ನು ಯಥಾಸ್ಥಿತಿಗೆ ತರಲಾಗುವುದು ಎಂದು ಸರ್ಕಾರ ಕೋರ್ಟ್‌ಗೆ ತಿಳಿಸಿದೆ.

ಇದನ್ನೂ ಓದಿ:ಬೆಂಗಳೂರಿನ ಪೌರ ಕಾರ್ಮಿಕರಿಗೆ ಪ್ರವಾಸ ಭಾಗ್ಯ! ಕರ್ನಾಟಕದ 6 ನಗರಗಳಿಗೆ ಸ್ಟಡಿ ಟೂರ್

ರಿಯಲ್ ಎಸ್ಟೇಟ್ ಸುಲಿಗೆಗೆ ಅವಕಾಶ?

ಸರ್ಕಾರದ ವಾದವನ್ನು ತಳ್ಳಿಹಾಕಿದ ತೇಜಸ್ವಿ ಸೂರ್ಯ, “ಈ ಯೋಜನೆಯ ಟೆಂಡರ್ ಮತ್ತು ಸಿದ್ಧಪಡಿಸಲಾಗಿರುವ ವಿಸ್ತೃತ ಯೋಜನಾ ವರದಿ ಪ್ರಕಾರ, ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಐದು ಮಹಡಿಗಳ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲು ಗುತ್ತಿಗೆದಾರರಿಗೆ ಅನುಮತಿ ನೀಡಲಾಗಿದೆ” ಎಂದು ಗಂಭೀರ ಆರೋಪ ಮಾಡಿದರು. “ನಮ್ಮ ಹೋರಾಟವು ಅಭಿವೃದ್ಧಿ ಅಥವಾ ಮೂಲಸೌಕರ್ಯ ಯೋಜನೆಗಳ ವಿರುದ್ಧ ಅಲ್ಲ. ಆದರೆ ಮೂಲಸೌಕರ್ಯದ ಹೆಸರಿನಲ್ಲಿ ಬೆಂಗಳೂರಿನ ಉಳಿದಿರುವ ಹಸಿರು ಪರಂಪರೆಯನ್ನು ರಿಯಲ್ ಎಸ್ಟೇಟ್ ಯೋಜನೆಗಳಿಗಾಗಿ ಹಾಳುಮಾಡುವುದನ್ನು ನಾವು ಒಪ್ಪುವುದಿಲ್ಲ” ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬರದ ನಡುವೆಯೂ ಊಟಿಯ ಅನುಭವ ನೀಡುತ್ತಿದೆ ಚಿತ್ರದುರ್ಗದ ಜೋಗಿಮಟ್ಟಿ! ಪ್ರಕೃತಿ ಸೌಂದರ್ಯ ಸವಿಯಲು ಹರಿದು ಬರುತ್ತಿರುವ ಪ್ರವಾಸಿಗರು – Kannada News | Jogimatti Chitradurga Turns Into Ooty of Bayaluseeme Despite Drought; Tourists Flock to Misty Hill Station

ಸಮುದ್ರಮಟ್ಟದಿಂದ ಸುಮಾರು 3,803 ಅಡಿ ಎತ್ತರದಲ್ಲಿರುವ ಜೋಗಿಮಟ್ಟಿ, ಏಷ್ಯಾದಲ್ಲೇ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಕುರುಚಲು ಅರಣ್ಯ, ಅಪರೂಪದ ಜೀವ ವೈವಿಧ್ಯ ಮತ್ತು ತಂಪಾದ ವಾತಾವರಣ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಜಿಲ್ಲೆಯಾದ್ಯಂತ ಮಳೆ ಕೊರತೆ ಕಾಡುತ್ತಿದ್ದರೂ, ಜೋಗಿಮಟ್ಟಿಯಲ್ಲಿ ಮಂಜು ಆವರಿಸಿದ ವಾತಾವರಣ ಪ್ರಕೃತಿ ಪ್ರಿಯರಿಗೆ ವಿಶೇಷ ಅನುಭವ ನೀಡುತ್ತಿದೆ.

Source link

International Chess Day 2026: ಅಂತಾರಾಷ್ಟ್ರೀಯ ಚೆಸ್ ದಿನದ ಇತಿಹಾಸ, ಮಹತ್ವ ತಿಳಿಯಿರಿ – Kannada News | International Chess Day 2026: What are the history and significance of International Chess Day

ಅಂತಾರಾಷ್ಟರೀಯ ಚೆಸ್‌ ದಿನImage Credit source: freemixer/E+/Getty Images

ಚೆಸ್ ಗೆ ದೈಹಿಕ ಶ್ರಮದ ಅಗತ್ಯವಿಲ್ಲ, ಬುದ್ದಿಯನ್ನು ಉಪಯೋಗಿಸಿ ಆಡಬೇಕು. ಚೆಸ್ ಆಟ ಆಡುವುದರಿಂದ ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ಈ ಆಟದಲ್ಲಿ ಆಟಗಾರನು ಪ್ರತಿಯೊಂದು ಕಾಯಿಯನ್ನು ಜಾಣ್ಮೆಯಿಂದಲೇ ಮುನ್ನಡೆಸಬೇಕು. ಇದು ಯೋಚಿಸುವ ಸಾಮರ್ಥ್ಯವನ್ನು ಹೆಚ್ಚಿಸಿ ಸರಿಯಾದ ಸಮಯಕ್ಕೆ ಹೇಗೆ ನಿರ್ಧಾರ ಕೈಗೊಳ್ಳಬೇಕು ಎನ್ನುವುದನ್ನು ತಿಳಿಸುತ್ತದೆ. ಈ ಆಟದ ಬಗ್ಗೆ ಅರಿವು ಮೂಡಿಸಿ, ಹೆಚ್ಚಿನವರ ಈ ಆಟದಲ್ಲಿ ಆಸಕ್ತಿ ವಹಿಸುವಂತೆ ಪ್ರೋತ್ಸಾಹಿಸಲು ಪ್ರತಿ ವರ್ಷ ಜುಲೈ 20 ರಂದು ಅಂತಾರಾಷ್ಟ್ರೀಯ ಚೆಸ್ ದಿನವನ್ನು (International Chess Day) ಆಚರಿಸಲಾಗುತ್ತಿದೆ.

ಅಂತಾರಾಷ್ಟ್ರೀಯ ಚೆಸ್ ದಿನದ ಇತಿಹಾಸವೇನು?

1924 ಜುಲೈ 20 ರಂದು ಫ್ರಾನ್ಸ್​​ನ ಪ್ಯಾರಿಸ್ ನಗರದಲ್ಲಿ ನಡೆದ ಎಂಟನೇ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ‘ವಿಶ್ವ ಚೆಸ್ ಫೌಂಡೇಷನನ್ನು ಸ್ಥಾಪಿಸಲಾಯಿತು. ಇದರ ಸ್ಥಾಪನೆಯ ಗೌರವಾರ್ಥವಾಗಿ ಜುಲೈ 20 ರಂದು ವಿಶ್ವ ಚೆಸ್ ದಿನವನ್ನು ಆಚರಿಸಲು ನಿರ್ಧರಿಸಿತು. ಜುಲೈ 20, 1966 ರಂದು ಮೊದಲ ಬಾರಿಗೆ ವಿಶ್ವ ಚೆಸ್ ದಿನವನ್ನು ಆಚರಿಸಲಾಯಿತು. ಇದಾದ ಸುಮಾರು ವರ್ಷಗಳ ಬಳಿಕ ಅಂದರೆ 2019ರ ಡಿಸೆಂಬರ್ 12ನೇ ತಾರೀಕಿನಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಜುಲೈ 20 ರಂದು ವಿಶ್ವ ಚೆಸ್ ದಿನವೆಂದು ಅಧೀಕೃತವಾಗಿ ಘೋಷಿಸಿತು. ಅಂದಿನಿಂದ ಅಂತಾರಾಷ್ಟ್ರೀಯ ಚೆಸ್ ದಿನದ ಆಚರಣೆ ಚಾಲ್ತಿಯಲ್ಲಿದೆ.

ಇದನ್ನೂ ಓದಿ: ಇಂದು ಎಮೋಜಿ ದಿನ; ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ

ಅಂತಾರಾಷ್ಟ್ರೀಯ ಚೆಸ್ ದಿನದ ಮಹತ್ವ ಹಾಗೂ ಆಚರಣೆ ಹೇಗೆ?

ಚೆಸ್ ಬುದ್ಧಿವಂತಿಕೆಯ ಆಟವಾಗಿದ್ದು, ಮಕ್ಕಳನ್ನು ಚೆಸ್ ಆಟ ಆಡುವತ್ತ ಪ್ರೇರೆಪಿಸುವುದಾಗಿದೆ. ಈ ದಿನವು ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್​​​ನ್ನು ಉತ್ತೇಜಿಸುವುದು ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್ ಹಾಗೂ ಚೆಸ್ ಆಟದ ಬಗ್ಗೆ ಜನರಿಗೆ ಅರಿವು ಮೂಡಿಸುವುದಾಗಿದೆ. ಈ ದಿನವನ್ನು ಚೆಸ್ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಆಚರಿಸುಲಾಗುತ್ತದೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತೆಲಂಗಾಣದಲ್ಲೊಂದು ವಿಶಿಷ್ಟ ಗ್ರಾಮ, ಸಂಜೆ ಇಲ್ಲ, ಇಲ್ಲಿ ರಾತ್ರಿ ಮಾತ್ರ, ಸಂಜೆ 4 ಗಂಟೆಗೆಲ್ಲಾ ಕಗ್ಗತ್ತಲು – Kannada News | Kodurupaka: India’s Unique Village Where Evening Never Comes, Dark by 4 PM

ಹೈದರಾಬಾದ್, ಜುಲೈ 20: ನಮ್ಮ ದೈನಿಂದಿನ ಜೀವನದಲ್ಲಿ ಬೆಳಗ್ಗೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ಎಂಬ ನಾಲ್ಕು ಹಂತಗಳಿರುವುದು ಸಾಮಾನ್ಯ. ಆದರೆ ಸಂಜೆಯನ್ನೇ ಕಾಣದ ಹಳ್ಳಿ ಭಾರತದಲ್ಲಿದೆ. ಅಲ್ಲಿನ ಜನರು ಶತಮಾನಗಳಿಂದ ಸಂಜೆಯನ್ನೇ ಕಂಡಿಲ್ಲ. ಮಧ್ಯಾಹ್ನದ ಬಳಿಕ ಸೂರ್ಯ ಮುಳುಗಳು ಶುರುವಾಗುತ್ತಿದ್ದಂತೆ ಅಲ್ಲಿ ಮುಸ್ಸಂಜೆ ಎಂಬುದೇ ಇಲ್ಲದೆ ನೇರವಾಗಿ ಕತ್ತಲಾಗಿಬಿಡುತ್ತದೆ. ತೆಲಂಗಾಣ ರಾಜ್ಯದ ಪೆದ್ದಪಲ್ಲಿ ಜಿಲ್ಲೆಯ ಸುಲ್ತಾನಾಬಾದ್ ಮಂಡಲದಲ್ಲಿರುವ ‘ಕೊಡುರುಪಾಕ’ಎಂಬ ಸುಂದರ ಹಳ್ಳಿಯೇ ಈ ಭೌಗೋಳಿಕ ವಿಸ್ಮಯದ ತಾಣ.

ಸಂಜೆ ನಾಲ್ಕು ಗಂಟೆಗೆ ಜನರು ಮನೆಯ ದೀಪ ಬೆಳಗಿಸುತ್ತಾರೆ

ಸಾಮಾನ್ಯವಾಗಿ ಎಲ್ಲೆಡೆ ಜನರು ಸಂಜೆ 6 ಅಥವಾ 7 ಗಂಟೆಯ ಸುಮಾರಿಗೆ ಸೂರ್ಯಾಸ್ತವನ್ನು ಆನಂದಿಸುತ್ತಾ ಟೀ ಕುಡಿಯುತ್ತಾರೆ. ಆದರೆ, ಕೊಡುರುಪಾಕ ಗ್ರಾಮದಲ್ಲಿ ಸಂಜೆ 4 ಗಂಟೆಯಾಗುತ್ತಿದ್ದಂತೆ ಇಡೀ ಊರು ಕತ್ತಲೆಯಲ್ಲಿ ಮುಳುಗಿಹೋಗುತ್ತದೆ. ಹೀಗಾಗಿ, ಗ್ರಾಮಸ್ಥರು ನಾಲ್ಕು ಗಂಟೆಗೆಲ್ಲಾ ತಮ್ಮ ಮನೆಗಳಲ್ಲಿ ದೀಪಗಳನ್ನು ಬೆಳಗಿಸಲು ಆರಂಭಿಸುತ್ತಾರೆ. ಈ ಹಳ್ಳಿಗೆ ಯಾವುದೇ ಶಾಪವಾಗಲಿ ಅಥವಾ ಮಾಂತ್ರಿಕ ಕಾರಣವಲ್ಲ. ಬದಲಿಗೆ ಪ್ರಕೃತಿಯ ಕೌತುಕಮಯ ಭೌಗೋಳಿಕ ರಚನೆಯೇ ಇದಕ್ಕೆ ಮೂಲ ಕಾರಣ.

ಈ ವಿಸ್ಮಯಕ್ಕೆ ನಿಜವಾದ ಕಾರಣವೇನು?

ಕೊಡುರುಪಾಕ ಗ್ರಾಮವು ಎಲ್ಲಾ ದಿಕ್ಕುಗಳಲ್ಲೂ ಬೃಹತ್ ಎತ್ತರದ ಬೆಟ್ಟಗಳಿಂದ ಆವೃತವಾಗಿದೆ. ಗ್ರಾಮದ ಪಶ್ಚಿಮ ದಿಕ್ಕಿನಲ್ಲಿ ‘ರಂಗನಾಯಕುಲ ಗುಟ್ಟ’ ಮತ್ತು ‘ಗೋರ್ಲಾ ಗುಟ್ಟ’ ಎಂಬ ಬೃಹತ್ ಎತ್ತರದ ಬೆಟ್ಟಗಳಿವೆ. ಮಧ್ಯಾಹ್ನ 3.30 ರಿಂದ 4ರ ಅವಧಿಯಲ್ಲಿ ಸೂರ್ಯ ಪಶ್ಚಿಮಕ್ಕೆ ವಾಲುತ್ತಿದ್ದಂತೆ, ಈ ಎತ್ತರದ ಬೆಟ್ಟಗಳು ಗೋಡೆಯಂತೆ ನಿಂತು ಸೂರ್ಯನ ಬೆಳಕನ್ನು ತಡೆಯುತ್ತವೆ.

ಮತ್ತಷ್ಟು ಓದಿ: Video: ಮಾಲೀಕನ ತೊಡೆ ಮೇಲೆ ತಲೆಯಿಟ್ಟು ಮಲಗಿದ ಮರಿಯಾನೆ

ಭಾರತೀಯ ಸಾಂಪ್ರದಾಯಿಕ ಕಾಲಮಾನದ ಪ್ರಕಾರ, ಸಾಮಾನ್ಯವಾಗಿ ದಿನವೊಂದಕ್ಕೆ 12 ಗಂಟೆಗಳ ಕಾಲ ನೇರ ಸೂರ್ಯನ ಬೆಳಕು ಸಿಗುತ್ತದೆ. ಆದರೆ ಈ ಬೆಟ್ಟಗಳ ನೆರಳಿನಿಂದಾಗಿ ಕೊಡುರುಪಾಕ ಗ್ರಾಮಕ್ಕೆ ಕೇವಲ 9 ಗಂಟೆಗಳ ಕಾಲ ಮಾತ್ರ ಸೂರ್ಯನ ಬೆಳಕು ಲಭ್ಯವಾಗುತ್ತದೆ.

ವಿಭಿನ್ನ ದೈನಂದಿನ ಜೀವನ ಶೈಲಿ

ಈ ವಿಶಿಷ್ಟ ಪ್ರಕೃತಿಯ ನಿಯಮದಿಂದಾಗಿ, ಇಲ್ಲಿನ ಗ್ರಾಮಸ್ಥರ ದಿನಚರಿಯೂ ತೀರಾ ಭಿನ್ನವಾಗಿದೆ. ಬೆಟ್ಟಗಳ ಕಾರಣದಿಂದಾಗಿ ಬೆಳಗಿನ ಸೂರ್ಯ ಕೂಡ ಈ ಹಳ್ಳಿಯಲ್ಲಿ ಅರ್ಧ ಗಂಟೆ ತಡವಾಗಿಯೇ ಉದಯಿಸುತ್ತಾನೆ. ಮಧ್ಯಾಹ್ನ 3.30 ಕಳೆಯುತ್ತಿದ್ದಂತೆ ಕತ್ತಲೆ ಆವರಿಸುವುದರಿಂದ, ರೈತರು ಮತ್ತು ಕಾರ್ಮಿಕರು ತಮ್ಮ ಕೆಲಸಗಳನ್ನು ಮಧ್ಯಾಹ್ನದ ಒಳಗೇ ಮುಗಿಸಿಕೊಂಡು ಮನೆಗೆ ಮರಳುತ್ತಾರೆ.

ಬೇಗನೆ ರಾತ್ರಿ ಊಟ: ಸಂಜೆ 4 ಗಂಟೆಗೆಲ್ಲಾ ಕತ್ತಲೆಯಾಗುವುದರಿಂದ ಗ್ರಾಮಸ್ಥರು ರಾತ್ರಿಯ ಊಟವನ್ನು ಬೇಗನೇ ಮುಗಿಸಿ, ಬೇಗ ಮಲಗುವ ಅಭ್ಯಾಸ ಮಾಡಿಕೊಂಡಿದ್ದಾರೆಪ್ರಕೃತಿಯ ಈ ಅಪರೂಪದ ಆಟವನ್ನು ಕಣ್ಣುಂಬಿಕೊಳ್ಳಲು ಸುತ್ತಮುತ್ತಲಿನ ಪ್ರದೇಶಗಳಿಂದ ನೂರಾರು ಪ್ರವಾಸಿಗರು ಈ ಹಳ್ಳಿಗೆ ಭೇಟಿ ನೀಡುತ್ತಿರುತ್ತಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:54 am, Mon, 20 July 26

Source link

ಗೋಲ್ಡನ್ ಗ್ಲೌಸ್, ಬೂಟ್, ಬಾಲ್ ಸಿಕ್ಕಿದ್ದು ಯಾರಿಗೆ ಗೊತ್ತಾ? – Kannada News | World Cup 2026 Awards: Who Won The Golden Boot, Ball, and Glove?

FIFA World Cup 2026: ಫಿಫಾ ವಿಶ್ವಕಪ್​​ ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಈ ಬಾರಿಯ ಫೈನಲ್​ನಲ್ಲಿ ಅರ್ಜೆಂಟೀನಾ ತಂಡವನ್ನು 1-0 ಅಂತರದಿಂದ ಮಣಿಸಿ ಸ್ಪೇನ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದೊಂದಿಗೆ ಸ್ಪೇನ್ ತಂಡದ ಆಟಗಾರರಿಗೆ ಗೋಲ್ಡನ್ ಬೂಟ್ ಹಾಗೂ ಗೋಲ್ಡನ್ ಗ್ಲೌಸ್ ಒಲಿದಿದೆ. ಆದರೆ ಗೋಲ್ಡನ್ ಬೂಟ್ ದಕ್ಕಿರುವುದು ಫ್ರಾನ್ಸ್​​ನ ವೇಗದ ಸರದಾರ ಕಿಲಿಯನ್ ಎಂಬಾಪೆಗೆ ಎಂಬುದು ವಿಶೇಷ.

ಗೋಲ್ಡನ್ ಬೂಟ್:

ಫುಟ್‌ಬಾಲ್ ಇತಿಹಾಸದಲ್ಲೇ ಪುರುಷರ ವಿಶ್ವಕಪ್ ಟೂರ್ನಿಯಲ್ಲಿ ಸತತ ಎರಡು ಬಾರಿ ಗೋಲ್ಡನ್ ಬೂಟ್ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕಿಲಿಯನ್ ಎಂಬಾಪೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ 2022ರ ಖತಾರ್ ವಿಶ್ವಕಪ್‌ನಲ್ಲೂ ಅವರು ಈ ಪ್ರಶಸ್ತಿ ಜಯಿಸಿದ್ದರು.

2026ರಲ್ಲಿ ಎಂಬಾಪೆ ಮಿಂಚಿನಾಟ:

  • ಒಟ್ಟು ಗೋಲುಗಳು: 10 ಗೋಲುಗಳು
  • ಒಟ್ಟು ಪಂದ್ಯಗಳು: 8 ಪಂದ್ಯಗಳು
  • ಅಸಿಸ್ಟ್ (ನೆರವು): 4

ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಸ್ಥಾನದ ರೋಚಕ ಪಂದ್ಯದಲ್ಲಿ ಫ್ರಾನ್ಸ್ 4-6 ಅಂತರದಿಂದ ಸೋತರೂ, ಎಂಬಾಪೆ ಬಾರಿಸಿದ 2 ಗೋಲುಗಳು ಅವರನ್ನು ಅಗ್ರ ಸ್ಥಾನಕ್ಕೇರಿಸಿತು. ಈ ಮೂಲಕ ಅವರು ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಅವರನ್ನು ಹಿಂದಿಕ್ಕಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಗೋಲ್ಡನ್ ಬಾಲ್:

ಸ್ಪೇನ್ ತಂಡದ ನಾಯಕ ಮತ್ತು ಮಿಡ್‌ಫೀಲ್ಡರ್ ಆಗಿರುವ ರೊಡ್ರಿ, ಇಡೀ ಟೂರ್ನಿಯಲ್ಲಿ ಅತ್ಯುತ್ತಮವಾಗಿ ಆಟವನ್ನು ನಿಯಂತ್ರಿಸಿದರು. ಅವರು ಟೂರ್ನಿಯಲ್ಲೇ ಅತಿ ಹೆಚ್ಚು ಪಾಸ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಸ್ಪೇನ್ ಪ್ರಶಸ್ತಿ ಗೆಲ್ಲಲು ಪ್ರಮುಖ ಕಾರಣರಾದರು. ಈ ಮೂಲಕ ಈ ಬಾರಿಯ ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ರೊಡ್ರಿ ತಮ್ಮದಾಗಿಸಿಕೊಂಡಿದ್ದಾರೆ.

ಗೋಲ್ಡನ್ ಗ್ಲೌಸ್:

ಗೋಲ್ ಕೀಪರ್​ಗೆ ನೀಡಲಾಗುವ ಗೋಲ್ಡನ್ ಗ್ಲೌಸ್ ಪ್ರಶಸ್ತಿಯು ಈ ಬಾರಿ ಸ್ಪೇನ್ ತಂಡದ ಗೋಲಿ ಉನಾಯ್ ಸಿಮನ್​ಗೆ ಲಭಿಸಿದೆ. ಇಡೀ ಟೂರ್ನಿಯಲ್ಲಿ ಕೇವಲ ಒಂದು ಗೋಲನ್ನು ಮಾತ್ರ ಬಿಟ್ಟುಕೊಟ್ಟ ಸಿಮನ್, ಬರೋಬ್ಬರಿ 7 ಪಂದ್ಯಗಳಲ್ಲಿ ‘ಕ್ಲೀನ್ ಶೀಟ್’ (ಒಂದು ಗೋಲೂ ಹೊಡೆಯಲು ಬಿಡದೇ) ಸಾಧನೆ ಮಾಡಿದ್ದಾರೆ. ಈ ಐತಿಹಾಸಿಕ ಸಾಧನೆಯೊಂದಿಗೆ ಉನಾಯ್ ಸಿಮನ್ ಈ ಬಾರಿಯ ಫಿಫಾ ವಿಶ್ವಕಪ್​ನಲ್ಲಿ ಗೋಲ್ಡನ್ ಗ್ಲೌಸ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇತರೆ ಪ್ರಮುಖ ಪ್ರಶಸ್ತಿಗಳು:

  • ಅತ್ಯುತ್ತಮ ಯುವ ಆಟಗಾರ: ಪಾವ್ ಕುಬಾರ್ಸಿ (ಸ್ಪೇನ್ – 19 ವರ್ಷ).
  • ಫೇರ್ ಪ್ಲೇ ಪ್ರಶಸ್ತಿ: ನೆದರ್ಲ್ಯಾಂಡ್ಸ್ ತಂಡ

ಇದನ್ನೂ ಓದಿ: ನಮ್ಮ ಸೋಲಿಗೆ ಇದುವೇ ಪ್ರಮುಖ ಕಾರಣ: ಶುಭ್​​ಮನ್ ಗಿಲ್ ಬೇಸರ

ಒಟ್ಟಾರೆಯಾಗಿ ಹೇಳುವುದಾದರೆ, 2026ರ ಫಿಫಾ ವಿಶ್ವಕಪ್ ಕೇವಲ ದಾಖಲೆಗಳ ಟೂರ್ನಿಯಾಗಿ ಮಾತ್ರವಲ್ಲದೆ, ಹೊಸ ಯುಗದ ಆರಂಭಕ್ಕೂ ಸಾಕ್ಷಿಯಾಯಿತು. ಒಂದೆಡೆ ಕಿಲಿಯನ್ ಎಂಬಾಪೆ ತಮ್ಮ ಅದ್ಭುತ ಗೋಲುಗಳ ಮೂಲಕ ಫುಟ್‌ಬಾಲ್ ಜಗತ್ತಿನ ಹೊಸ ಸುಲ್ತಾನನಾಗಿ ಹೊರಹೊಮ್ಮಿದರೆ, ಮತ್ತೊಂದೆಡೆ ಸ್ಪೇನ್ ತಂಡವು ರೊಡ್ರಿ ಮತ್ತು ಉನಾಯ್ ಸಿಮನ್ ಅವರ ಸಾಂಘಿಕ ಬಲದಿಂದ ವಿಶ್ವ ಫುಟ್‌ಬಾಲ್‌ನಲ್ಲಿ ತನ್ನದೇ ಆದ ಹೊಸ ಸಾಮ್ರಾಜ್ಯವನ್ನು ಸೃಷ್ಟಿಸಿದೆ. ಈ ರೋಮಾಂಚಕ ನೆನಪುಗಳು ಮತ್ತು ಐತಿಹಾಸಿಕ ದಾಖಲೆಗಳು ಮುಂದಿನ ದಶಕಗಳ ಕಾಲ ಫುಟ್‌ಬಾಲ್ ಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಲಿವೆ.

Source link

ಬೆಂಗಳೂರಿನ ಪೌರ ಕಾರ್ಮಿಕರಿಗೆ ಪ್ರವಾಸ ಭಾಗ್ಯ! ಕರ್ನಾಟಕದ 6 ನಗರಗಳಿಗೆ ಸ್ಟಡಿ ಟೂರ್ – Kannada News | Tour Bhagya for 18000 Bengaluru Pourakarmikas: To Visit Karnataka Cities to Learn Solid Waste Management Best Practices

ಪೌರ ಕಾರ್ಮಿಕರು (ಸಾಂದರ್ಭಿಕ ಚಿತ್ರ)Image Credit source: Karnataka Govt

ಬೆಂಗಳೂರು, ಜುಲೈ 20: ಬೆಂಗಳೂರು (Bengaluru) ನಗರದ ಸ್ವಚ್ಛತಾ ನಿರ್ವಹಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ಉದ್ದೇಶದಿಂದ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಮಹತ್ವದ ಯೋಜನೆ ರೂಪಿಸಿದೆ. ಇದರಡಿ ಬೆಂಗಳೂರಿನ ಸುಮಾರು 18 ಸಾವಿರ ಪೌರಕಾರ್ಮಿಕರನ್ನು ಕರ್ನಾಟಕದ ಆರು ನಗರಗಳಿಗೆ ಅಧ್ಯಯನ ಪ್ರವಾಸಕ್ಕೆ ಕರೆದೊಯ್ಯಲು ನಿರ್ಧರಿಸಲಾಗಿದೆ. ‘ಸ್ವಚ್ಛ ಭಾರತ್ ಮಿಷನ್ (ನಗರ) 2.0’ ಯೋಜನೆಯಡಿ ಹಂತ ಹಂತವಾಗಿ ಈ ಕಾರ್ಯಕ್ರಮ ಜಾರಿಯಾಗಲಿದ್ದು, ಇದೇ ತಿಂಗಳಿಂದ ಪ್ರವಾಸ ಆರಂಭವಾಗುವ ನಿರೀಕ್ಷೆಯಿದೆ.

ಪೌರ ಕಾರ್ಮಿಕರಿಗೇಕೆ ಪ್ರವಾಸ?

ಮೊದಲ ಹಂತದಲ್ಲಿ ಮೈಸೂರು, ದಾವಣಗೆರೆ ಮತ್ತು ಹೊಸಪೇಟೆ ಸೇರಿದಂತೆ ಘನತ್ಯಾಜ್ಯದ ಉತ್ತಮ ನಿರ್ವಹಣೆಗೆ ಹೆಸರಾಗಿರುವ ನಗರಗಳಿಗೆ ಪೌರಕಾರ್ಮಿಕರನ್ನು ಕರೆದುಕೊಂಡು ಹೋಗಲಾಗುತ್ತದೆ. ಬಳಿಕ ಉಳಿದ ನಗರಗಳಿಗೂ ಅಧ್ಯಯನ ಪ್ರವಾಸ ಆಯೋಜಿಸಲಾಗುತ್ತದೆ. ಸ್ವಚ್ಛ ಸರ್ವೇಕ್ಷಣೆಯಲ್ಲಿ ಉತ್ತಮ ಸಾಧನೆ ಮಾಡಿದ ನಗರಗಳ ತ್ಯಾಜ್ಯ ವಿಂಗಡಣೆ, ಮರುಬಳಕೆ, ಸ್ವಚ್ಛತೆ ನಿರ್ವಹಣೆ, ಸುರಕ್ಷತಾ ಕ್ರಮಗಳು ಹಾಗೂ ನಾಗರಿಕರ ಸಹಭಾಗಿತ್ವದ ಮಾದರಿಗಳನ್ನು ಪರಿಚಯಿಸುವುದು ಯೋಜನೆಯ ಉದ್ದೇಶವಾಗಿದೆ.

1.96 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಟೆಂಡರ್

ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಸುಮಾರು 1.96 ಕೋಟಿ ರೂ. ಅಂದಾಜು ವೆಚ್ಚದ ಟೆಂಡರ್ ಆಹ್ವಾನಿಸಿದ್ದು, ಆಯ್ಕೆಯಾಗುವ ಸಂಸ್ಥೆ ಪ್ರವಾಸದ ಸಂಪೂರ್ಣ ಯೋಜನೆ, ಸಾರಿಗೆ ಹಾಗೂ ಇತರೆ ವ್ಯವಸ್ಥೆಗಳನ್ನು ನಿರ್ವಹಿಸಲಿದೆ. ಮೊದಲ ಹಂತದ ಕಾರ್ಯಕ್ರಮವು ಸುಮಾರು ಆರು ತಿಂಗಳ ಅವಧಿಯಲ್ಲಿ ನಡೆಯಲಿದೆ.

‘ಪ್ರವಾಸಕ್ಕಿಂತ ಸಿಬ್ಬಂದಿ ಹೆಚ್ಚಿಸಿ’: ಪೌರಕಾರ್ಮಿಕರ ಆಗ್ರಹ

ಆದರೆ, ಈ ಯೋಜನೆಗೆ ಪೌರಕಾರ್ಮಿಕರ ಸಂಘದ ಒಂದು ವಲಯ ಆಕ್ಷೇಪ ವ್ಯಕ್ತಪಡಿಸಿದೆ. ‘ಬೆಂಗಳೂರಿನಷ್ಟು ದೊಡ್ಡ ನಗರಕ್ಕೆ ಅಧ್ಯಯನ ಪ್ರವಾಸಕ್ಕಿಂತ ಹೆಚ್ಚುವರಿ ಸಿಬ್ಬಂದಿಯ ಅಗತ್ಯವಿದೆ. ಪ್ರತಿದಿನ 5,000 ಟನ್‌ಗಿಂತ ಹೆಚ್ಚು ತ್ಯಾಜ್ಯ ಉತ್ಪತ್ತಿಯಾಗುವ ನಗರದಲ್ಲಿ ಎಲ್ಲರನ್ನೂ ಪ್ರವಾಸಕ್ಕೆ ಕಳುಹಿಸುವ ಬದಲು, ಪ್ರತಿ ವಾರ್ಡ್‌ನಿಂದ ಕೆಲವರನ್ನು ಮಾತ್ರ ಕಳುಹಿಸಿ ಅವರು ಕಲಿತ ವಿಷಯವನ್ನು ಇತರರೊಂದಿಗೆ ಹಂಚಿಕೊಳ್ಳುವ ವ್ಯವಸ್ಥೆ ಮಾಡಿದರೆ ಸಾಕು’ ಎಂದು ಗ್ರೇಟರ್ ಬೆಂಗಳೂರು ಪೌರಕಾರ್ಮಿಕರ ಸಂಘದ ಅಧ್ಯಕ್ಷ ಪಿ.ಎನ್. ಮುತ್ತ್ಯಾಲಪ್ಪ ಅಭಿಪ್ರಾಯಪಟ್ಟಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್’ ವರದಿ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜುಲೈ ಉದ್ಯೋಗ ಭವಿಷ್ಯ: ಮೇಲಧಿಕಾರಿಗಳಿಂದ ಬೇಸರ, ಉದ್ಯೋಗದಿಂದ ತೆಗದುಹಾಕುವ ಭೀತಿ ಇವೆಲ್ಲ ಈ ವಾರದ ಉದ್ಯೋಗ ಭವಿಷ್ಯ – Kannada News | July 19 to 24 Career Horoscope prediction by Pandit Lohit Hebbar in Kannada

ಜುಲೈ 19ರಿಂದ 24ರವರೆಗೆ ನಾಲ್ಕನೇ ವಾರವಾಗಿದ್ದು ನಿರ್ಧಾರಗಳನ್ನು ಒಬ್ಬರೇ ಮಾಡುವುದು, ಆದಾಯದ ಹೂಡಿಕೆ, ಭವಿಷ್ಯಕ್ಕೆ ಆಸ್ತಿ, ಮೇಲಧಿಕಾರಿಗಳಿಂದ ಬೇಸರ, ಉದ್ಯೋಗದಿಂದ ತೆಗದುಹಾಕುವ ಭೀತಿ ಇವೆಲ್ಲ ಈ ವಾರದ ಉದ್ಯೋಗ ಭವಿಷ್ಯ.


ಮೇಷ ರಾಶಿ:
ಮಂಗಳನ ಬಲದಿಂದಾಗಿ ಕಚೇರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಹೊಸ ಜವಾಬ್ದಾರಿಗಳು ಸಿಗುತ್ತವೆ ನಿಜ, ಆದರೆ ಸಹೋದ್ಯೋಗಿಗಳ ಮೇಲೆ ಅತಿಯಾದ ಅಧಿಕಾರ ಚಲಾಯಿಸಲು ಹೋಗಬೇಡಿ. ಮಾತಿನಲ್ಲಿ ವಿನಮ್ರತೆ ಇರಲಿ.

ವೃಷಭ ರಾಶಿ:
ನಿಮ್ಮದೇ ರಾಶಿಯಲ್ಲಿ ಮಂಗಳ ಇರುವುದರಿಂದ ಕೆಲಸದಲ್ಲಿ ವಿಪರೀತ ಆತುರ ಇರುತ್ತದೆ. ಶುಕ್ರ-ಕೇತುವಿನ ಪ್ರಭಾವದಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಯಾವುದೇ ಹೊಸ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಯೋಚಿಸಿ.

ಮಿಥುನ ರಾಶಿ:
ಬುಧನು ನಿಮ್ಮ ರಾಶಿಯಲ್ಲೇ ಇರುವುದರಿಂದ ನಿಮ್ಮ ಬುದ್ಧಿವಂತಿಕೆ ಮತ್ತು ಸಂವಹನ ಕಲೆ ಉತ್ತುಂಗದಲ್ಲಿರುತ್ತದೆ. ಐಟಿ, ಬ್ಯಾಂಕಿಂಗ್ ಮತ್ತು ಮಾರಾಟ ವಿಭಾಗದವರಿಗೆ ಬಡ್ತಿ ಅಥವಾ ಹೊಸ ಆಫರ್ ಸಿಗುವ ಲಕ್ಷಣಗಳಿವೆ. ನಿಮ್ಮ ಐಡಿಯಾಗಳನ್ನು ಧೈರ್ಯವಾಗಿ ಪ್ರಸ್ತುತಿ ಮಾಡಿ.

ಕರ್ಕಾಟಕ ರಾಶಿ:
ಸೂರ್ಯ ನಿಮ್ಮ ರಾಶಿಯಲ್ಲಿದ್ದರೂ, ಗುರು ಅಸ್ತಂಗತನಾಗಿದ್ದಾನೆ. ನೀವು ಕಷ್ಟಪಟ್ಟು ಮಾಡಿದ ಕೆಲಸದ ಕ್ರೆಡಿಟ್ ಬೇರೆಯವರ ಪಾಲಾಗಬಹುದು ಅಥವಾ ತಡವಾಗಿ ಸಿಗಬಹುದು. ಬಾಸ್ ಜೊತೆ ವಾದಕ್ಕೆ ಇಳಿಯಬೇಡಿ, ಸಮ್ಮನೆ ಆಗಿರಿ.

ಸಿಂಹ ರಾಶಿ:
ರಾಶಿಯಲ್ಲಿ ಶುಕ್ರ ಮತ್ತು ಕೇತು ಒಟ್ಟಿಗಿರುವುದರಿಂದ ಕ್ರಿಯೇಟಿವಿಟಿ ಹೆಚ್ಚಿರುತ್ತದೆ. ಕಚೇರಿಯ ರಾಜಕೀಯ ಅಥವಾ ಭ್ರಮೆಗಳಿಗೆ ಒಳಗಾಗಿ ಹಾದಿ ತಪ್ಪಬೇಡಿ. ಕಣ್ಣಾರೆ ಕಂಡರೂ ಪ್ರಮಾಣಿಸಿ ನೋಡಿ.

ಕನ್ಯಾ ರಾಶಿ:
ಬುಧನ ಅನುಕೂಲಕರ ಸ್ಥಿತಿಯಿಂದಾಗಿ ವೃತ್ತಿಯಲ್ಲಿ ಭಾರಿ ಮುನ್ನಡೆ ಸಿಗಲಿದೆ. ಉದ್ಯೋಗ ಬದಲಾವಣೆ ಅಥವಾ ಹೊಸ ಬಿಸಿನೆಸ್ ಆರಂಭ ಮಾಡಲು ನಿಮಗೆ ಇದು ಸೂಕ್ತ ಸಮಯ. ಸಿಕ್ಕ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಳ್ಳಿ.

ತುಲಾ ರಾಶಿ:
ಶುಕ್ರನ ಸ್ಥಾನ ಬದಲಾವಣೆಯಿಂದ ಹಳೆಯ ಸ್ನೇಹಿತರು ಅಥವಾ ವೃತ್ತಿಪರ ಸಂಪರ್ಕಗಳು ಸಹಾಯಕ್ಕೆ ಬರುತ್ತವೆ. ಶನಿಯ ದೃಷ್ಟಿ ಇರುವುದರಿಂದ ತಕ್ಷಣದ ಲಾಭ ನಿರೀಕ್ಷಿಸಬೇಡಿ. ಸಾರ್ವಜನಿಕ ಸಂಪರ್ಕವನ್ನು ವೃದ್ಧಿಸಿಕೊಳ್ಳಿ.

ವೃಶ್ಚಿಕ ರಾಶಿ:
​ಮಂಗಳನ ದೃಷ್ಟಿಯಿಂದಾಗಿ ಕಠಿಣವಾದ ಪ್ರಾಜೆಕ್ಟ್‌ಗಳನ್ನೂ ಸುಲಭವಾಗಿ ಮುಗಿಸುತ್ತೀರಿ. ಭೂ ವ್ಯವಹಾರ ಮತ್ತು ಇಂಜಿನಿಯರಿಂಗ್ ಕ್ಷೇತ್ರದವರಿಗೆ ಅತ್ಯುತ್ತಮ ದಿನಗಳು. ಉದ್ವೇಗಕ್ಕೆ ಒಳಗಾಗದೆ ಕೆಲಸ ಮಾಡಿ.

ಧನು ರಾಶಿ:
ರಾಶ್ಯಾಧಿಪತಿ ಗುರು ಅಸ್ತಂಗತನಾಗಿರುವುದರಿಂದ ಉದ್ಯೋಗದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಬೇಡಿ. ಸದ್ಯಕ್ಕೆ ಹೊಸ ಕೆಲಸಕ್ಕೆ ಜಂಪ್ ಆಗುವ ಆಲೋಚನೆ ಕೈಬಿಡುವುದು ಒಳಿತು. ಕೊಟ್ಟಿರುವ ಕೆಲಸವನ್ನು ಶ್ರದ್ಧೆಯಿಂದ ಮಾಡಿ.

ಮಕರ ರಾಶಿ:
​ಶನಿಯ ಪ್ರಭಾವದಿಂದಾಗಿ ನಿಮ್ಮ ಹೆಗಲ ಮೇಲೆ ಕಚೇರಿಯ ಕೆಲಸದ ಹೊರೆ ದಿಢೀರ್ ಹೆಚ್ಚಾಗಲಿದೆ. ಆರಂಭದಲ್ಲಿ ಬೇಸರವಾದರೂ, ವಾರದ ಕೊನೆಯಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗುತ್ತದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ.

​ಕುಂಭ ರಾಶಿ:
​ರಾಶಿಯಲ್ಲಿ ರಾಹು ಇರುವುದರಿಂದ ಅಸಾಧ್ಯವಾದದ್ದನ್ನು ಸಾಧ್ಯವಾಗಿಸುವ ಐಡಿಯಾಗಳು ಹೊಳೆಯುತ್ತವೆ. ಶಾರ್ಟ್‌ಕಟ್‌ಗಳ ಮೂಲಕ ಯಶಸ್ಸು ಗಳಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಬೇಡಿ. ನಿಯಮಗಳನ್ನು ಮೀರಿ ನಡೆಯಬೇಡಿ.

ಮೀನ ರಾಶಿ:
ಶನಿ ದೇವನು ನಿಮ್ಮ ರಾಶಿಯಲ್ಲೇ ಇರುವುದರಿಂದ ವೃತ್ತಿಜೀವನದಲ್ಲಿ ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಸಣ್ಣ ತಪ್ಪುಗಳೂ ದೊಡ್ಡದಾಗಿ ಬಿಂಬಿತವಾಗಬಹುದು. ಶಿಸ್ತು ಅತಿ ಮುಖ್ಯ. ತಾಳ್ಮೆಯೇ ನಿಮ್ಮ ಪರಮ ಆಯುಧವಾಗಲಿ.


– ಲೋಹಿತ್ ಹೆಬ್ಬಾರ್

Published On – 9:20 am, Mon, 20 July 26

Source link

ಕುವೈತ್‌ನ ಪ್ರಮುಖ ವಿದ್ಯುತ್ ಸ್ಥಾವರದ ಮೇಲೆ ಇರಾನ್ ದಾಳಿ: ದಟ್ಟ ಹೊಗೆ, ಭಾರಿ ಬೆಂಕಿ – Kannada News | Iran Strikes Kuwait Power Plant: Al Subiya Facility Attacked, Sparks Water Crisis Fears

ಕುವೈತ್, ಜುಲೈ 20: ಅಮೆರಿಕ ಮತ್ತು ಇರಾನ್(Iran) ನಡುವಿನ ಸಶಸ್ತ್ರ ಸಂಘರ್ಷ ದಿನದಿಂದ ದಿನಕ್ಕೆ ಅತ್ಯಂತ ಭೀಕರ ರೂಪ ಪಡೆದುಕೊಳ್ಳುತ್ತಿದೆ. ಇರಾನ್ ಪಡೆಗಳು ಕುವೈತ್‌ನ ಪ್ರಮುಖ ಅಲ್-ಸುಬಿಯಾ ವಿದ್ಯುತ್ ಉತ್ಪಾದನಾ ಕೇಂದ್ರ ಹಾಗೂ ಉಪ್ಪು ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸುವ ಘಟಕವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ. ಈ ದಾಳಿಯ ಪರಿಣಾಮವಾಗಿ ಉಂಟಾದ ಭಾರಿ ಸ್ಫೋಟದಿಂದಾಗಿ ಸ್ಥಾವರದಲ್ಲಿ ದಟ್ಟವಾದ ಕಪ್ಪು ಹೊಗೆ ಹಾಗೂ ಜ್ವಾಲೆಗಳು ಆವರಿಸಿದ್ದು, ಕುವೈತ್‌ನ ಮೂಲಸೌಕರ್ಯಕ್ಕೆ ತೀವ್ರ ಹಾನಿಯಾಗಿದೆ.

ವಾಯುಪ್ರದೇಶದಲ್ಲಿ ಕುವೈತ್ ಕಟ್ಟುನಿಟ್ಟಿನ ಕಾವಲು

ಕುವೈತ್ ರಕ್ಷಣಾ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಸೌದ್ ಅಬ್ದುಲಜೀಜ್ ಅಲ್-ಒಟೈಬಿ ಮಾತನಾಡಿ, “ಇರಾನ್‌ನ ಪಡೆಗಳು ಕುವೈತ್‌ನ ಪ್ರಮುಖ ಸೌಲಭ್ಯಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿವೆ. ಇಂದು ಬೆಳಗಿನ ಜಾವದಿಂದಲೇ ದೇಶದ ವಾಯುಪ್ರದೇಶದತ್ತ ಬಂದ ಇರಾನಿನ ಹಲವಾರು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ನಮ್ಮ ವಾಯುಪಡೆ ಯಶಸ್ವಿಯಾಗಿ ತಡೆದು ಹೊಡೆದುರುಳಿಸಿದೆ” ಎಂದು ತಿಳಿಸಿದ್ದಾರೆ.ಆದಾಗ್ಯೂ, ಈ ದಾಳಿಗಳಿಂದ ವಿದ್ಯುತ್ ಮತ್ತು ನೀರು ಪೂರೈಕೆ ಇಲಾಖೆಯ ಉಸ್ತುವಾರಿಯಲ್ಲಿದ್ದ ಸೌಲಭ್ಯಗಳಿಗೆ ಹಾನಿಯಾಗಿದ್ದು, ವಿದ್ಯುತ್ ಮತ್ತು ನೀರಿನ ಅಭಾವ ಉಂಟಾಗುವ ಆತಂಕ ಎದುರಾಗಿದೆ.

ಅಧ್ಯಕ್ಷ ಟ್ರಂಪ್  ಇರಾನ್‌ ದಾಳಿಗೆ ಪ್ರತಿಯಾಗಿ ಅಮೆರಿಕದ ಮಿಲಿಟರಿ ಕಮಾಂಡ್ ಇರಾನ್ ಮೇಲಿನ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಅಮೆರಿಕ ಸೇನೆಯ ಸೆಂಟ್ಕಾಮ್ ಇರಾನ್ ಮಿಲಿಟರಿ ನೆಲೆಯನ್ನು ಗುರಿಯಾಗಿಸಿಕೊಂಡು ಸತತ ಒಂಬತ್ತನೇ ರಾತ್ರಿಯೂ ಭಾರಿ ಪ್ರಮಾಣದ ವೈಮಾನಿಕ ದಾಳಿಗಳನ್ನು ಮುಂದುವರೆಸಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಪ್ರಯಾಣಿಸುವ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಲು ಇರಾನ್ ಬಳಸುತ್ತಿದ್ದ ಡ್ರೋನ್ ಮತ್ತು ಕ್ಷಿಪಣಿ ತಾಂತ್ರಿಕ ಸಾಮರ್ಥ್ಯಗಳನ್ನು ಹಾನಿಗೊಳಿಸಲು ಈ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಸೆಂಟ್ಕಾಮ್ ಸ್ಪಷ್ಟಪಡಿಸಿದೆ.

ಮತ್ತಷ್ಟು ಓದಿ: ನಾವು ಯಾವುದೇ ಒಪ್ಪಂದ, ಮಾತುಕತೆಗೆ ಸಿದ್ಧವಿಲ್ಲ, ಯುಎಸ್ ಜೊತೆಗಿನ ಶಾಂತಿ ಒಪ್ಪಂದ ರದ್ದು ಎಂದ ಇರಾನ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿ,”ಇತ್ತೀಚೆಗೆ ಮಧ್ಯಪ್ರಾಚ್ಯದ ಸಂಘರ್ಷದಲ್ಲಿ ಮೃತಪಟ್ಟ ಮೂವರು ಅಮೆರಿಕ ಸೈನಿಕರ ಗೌರವಾರ್ಥವಾಗಿ ನಾವು ಇರಾನ್ ಮೇಲೆ ಅತ್ಯಂತ ತೀವ್ರವಾದ ಮತ್ತು ಬಲವಾದ ದಾಳಿಗಳನ್ನು ನಡೆಸಿದ್ದೇವೆ” ಎಂದು ಬಹಿರಂಗಪಡಿಸಿದ್ದಾರೆ

ಕುವೈತ್ ಜಲ ಮತ್ತು ಇಂಧನ ಬಿಕ್ಕಟ್ಟು ಕುಡಿಯುವ ನೀರಿಗೆ ಆಪತ್ತು

ಕುವೈತ್ ದೇಶವು ತನ್ನ ಶೇ. 90 ಕ್ಕೂ ಹೆಚ್ಚು ಕುಡಿಯುವ ನೀರಿಗಾಗಿ ಸಮುದ್ರದ ಉಪ್ಪು ನೀರನ್ನು ಶುದ್ಧೀಕರಿಸುವ ‘ಡೆಸಾಲಿನೇಷನ್’ ಸ್ಥಾವರಗಳನ್ನೇ ಅವಲಂಬಿಸಿದೆ. ಇರಾನ್ ಸತತವಾಗಿ ಇಂತಹ ಘಟಕಗಳನ್ನು ಗುರಿಯಾಗಿಸುತ್ತಿರುವುದು ದೇಶದಲ್ಲಿ ಕುಡಿಯುವ ನೀರಿನ ಭಾರಿ ಅಭಾವಕ್ಕೆ ದಾರಿ ಮಾಡಿಕೊಡುವ ಆತಂಕ ಮೂಡಿಸಿದೆ.

ವಿಡಿಯೋ

ತಾತ್ಕಾಲಿಕ ಕದನ ವಿರಾಮ ಅಂತ್ಯ: ಈ ಹಿಂದೆ ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿದ್ದ ತಾತ್ಕಾಲಿಕ ಕದನ ವಿರಾಮದ ಒಪ್ಪಂದ ಮುರಿದುಬಿದ್ದಿದ್ದು, ಗಲ್ಫ್ ಪ್ರದೇಶದಲ್ಲಿರುವ ಅಮೆರಿಕದ ಸೇನಾ ನೆಲೆಗಳು ಹಾಗೂ ಹಡಗುಗಳಿಗೆ ಕುವೈತ್ ಬೆಂಬಲ ನೀಡುತ್ತಿದೆ ಎಂಬ ಕಾರಣಕ್ಕೆ ಇರಾನ್ ಕುವೈತ್ ಮೇಲಿನ ದಾಳಿಯನ್ನು ತೀವ್ರಗೊಳಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹೊಸ ಎಲೆಕ್ಟ್ರಿಕ್ ಕಾರು ಖರೀದಿ ಮಾಡಿದ ಸುದೀಪ್​; ಇಲ್ಲಿದೆ ವಿಡಿಯೋ – Kannada News | Kiccha Sudeep Buys Brand New Mahindra BE 6 Electric Car Viral Delivery Video Inside

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಕಾರುಗಳ ಮೇಲೆ ಸಾಕಷ್ಟು ಪ್ರೀತಿ ಇದೆ. ಇದು ಇಡೀ ಗಾಂಧಿನಗರಕ್ಕೆ ತಿಳಿದಿರುವ ವಿಚಾರ. ಸದಾ ಒಂದಿಲ್ಲೊಂದು ಅತ್ಯಾಧುನಿಕ ಹಾಗೂ ರಾಯಲ್ ಕಾರುಗಳಲ್ಲಿ ಓಡಾಡುವ ಸುದೀಪ್ ಅವರ ಗ್ಯಾರೇಜ್‌ನಲ್ಲಿ ಈಗಾಗಲೇ ಹಲವು ಐಷಾರಾಮಿ ಕಾರುಗಳಿವೆ. ಆದರೆ, ಈ ಬಾರಿ ಅವರು ಎಂದಿನ ತಮ್ಮ ಶೈಲಿಗಿಂತ ಭಿನ್ನವಾಗಿ ಯೋಚಿಸಿದ್ದು, ಪರಿಸರ ಸ್ನೇಹಿಯಾಗಿರುವ ಹೊಸ ಎಲೆಕ್ಟ್ರಿಕ್ ಕಾರೊಂದನ್ನು ಖರೀದಿ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಸುದೀಪ್ ಅವರು ಮಹಿಂದ್ರಾ ಕಂಪನಿಯ ಬಿಇ6 ಕಾರು ಖರೀದಿ ಮಾಡಿದ್ದಾರೆ. ಹೊಸ ಕಾರಿಗೆ ಮುಚ್ಚಲಾದ ಬಟ್ಟೆಯನ್ನು ಸರಿಸಿ ಕಾರನ್ನು ಅನ್‌ವೀಲ್ ಮಾಡಿದ್ದಾರೆ. ಈ ವೇಳೆ ಹೂಗುಚ್ಛಗಳನ್ನು ನೀಡಿ ಮಹೀಂದ್ರಾ ಕಂಪನಿಯ ಸಿಬ್ಬಂದಿ ಸುದೀಪ್ ಅವರ ಹೊಸ ಕಾರಿನ ಜರ್ನಿಗೆ ಶುಭ ಕೋರಿದರು. ಈ ಸಂದರ್ಭದ ವಿಡಿಯೋ ಹಾಗೂ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಕಿಚ್ಚ ಸುದೀಪ್ ಖರೀದಿಸಿರುವ ಈ ಕಾರು ಮಹೀಂದ್ರಾ ಕಂಪನಿಯ ಮಹೀಂದ್ರಾ ಬಿಇ 6. ಅತ್ಯಂತ ವಿಶಿಷ್ಟ ಹಾಗೂ ಸ್ಪೋರ್ಟಿ ಲುಕ್ ಹೊಂದಿರುವ ಈ ಕಾರು ಆಕರ್ಷಕವಾಗಿದೆ. ಅತ್ಯಧಿಕ ಮೈಲೇಜ್ ಕೂಡ ಇದು ಹೊಂದಿದೆ. ವಿವಿಧ ಬಣ್ಣಗಳಲ್ಲಿ ಈ ಕಾರು ಲಭ್ಯವಿದೆ.

ಇದನ್ನೂ ಓದಿ: ಈಗ ಚಿತ್ರಕ್ಕೆ ಸುದೀಪ್ ಅವರೇ ಫಸ್ಟ್ ಆ್ಯಂಡ್ ಲಾಸ್ಟ್ ಚಾಯ್ಸ್ ಆಗಿತ್ತು; ರಾಜಮೌಳಿ

ಇನ್ನು ಸುದೀಪ್ ಅವರ ಸಿನಿಮಾಗಳ ವಿಷಯಕ್ಕೆ ಬಂದರೆ, ಅವರು ತಮ್ಮ ಬಹುನಿರೀಕ್ಷಿತ ಚಿತ್ರವಾದ ‘ಬಿಲ್ಲ ರಂಗ ಭಾಷ’ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಒಂದು ರೋಮ್ ಕಾಮ್ ಸಿನಿಮಾ ಕೂಡ ಅವರ ಕೈಯಲ್ಲಿದೆ. ಇದರ ಜೊತೆಗೆ, ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಆದ ‘ಬಿಗ್ ಬಾಸ್’ ಹೊಸ ಸೀಸನ್‌ನ ನಿರೂಪಣೆಯಲ್ಲೂ ಕಿಚ್ಚ ಸುದೀಪ್ ಅವರು ಮುಂದಿನ ದಿನಗಳಲ್ಲಿ ಬ್ಯುಸಿ ಆಗಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version