ಮಿಶ್ರ ಪ್ರತಿಕ್ರಿಯೆ ನಡುವೆಯೂ ಒಟಿಟಿಯಲ್ಲಿ ಟ್ರೆಂಡ್ ಆಗುತ್ತಿರುವ ‘ಪೆದ್ದಿ’ ಸಿನಿಮಾ – Kannada News | Ram Charan starrer Peddi Movie Streaming on Netflix Trending at Number 3 Spot

ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಅಭಿನಯದ ‘ಪೆದ್ದಿ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸಾಧಾರಣ ಯಶಸ್ಸು ಕಂಡಿತು. ಅಂದುಕೊಂಡ ಮಟ್ಟಕ್ಕೆ ಈ ಸಿನಿಮಾಗೆ ಕಲೆಕ್ಷನ್ ಆಗಲಿಲ್ಲ. ಸಿನಿಮಾದ ಅನೇಕ ದೃಶ್ಯಗಳ ಬಗ್ಗೆ ಪ್ರೇಕ್ಷಕರಿಂದ ಟೀಕೆ ವ್ಯಕ್ತವಾಗಿತ್ತು. ಈಗ ‘ಪೆದ್ದಿ’ (Peddi) ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ನೆಟ್​ಫ್ಲಿಕ್ಸ್ ಟ್ರೆಂಡಿಂಗ್​ನಲ್ಲಿ ಈ ಚಿತ್ರ ಈಗ 3ನೇ ಸ್ಥಾನದಲ್ಲಿದೆ.

ರಾಮ್ ಚರಣ್ ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ಹಾಗಿದ್ದರೂ ಕೂಡ ‘ಪೆದ್ದಿ’ ಸಿನಿಮಾಗೆ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಗೆಲುವು ಸಿಗಲಿಲ್ಲ. ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ಮಿಸ್ ಮಾಡಿಕೊಂಡವರು ಈಗ ಒಟಿಟಿಯಲ್ಲಿ ನೋಡುತ್ತಿದ್ದಾರೆ. ಆ ಕಾರಣದಿಂದಲೇ ಭಾರತದಲ್ಲಿ ಅತ್ಯಂತ ಹೆಚ್ಚು ವೀಕ್ಷಣೆ ಪಡೆದ ನೆಟ್‌ಫ್ಲಿಕ್ಸ್‌ ಸಿನಿಮಾಗಳ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದೆ.

ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ:

ಬುಚ್ಚಿ ಬಾಬು ಸನಾ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಸ್ಪೋರ್ಟ್ಸ್ ಆ್ಯಕ್ಷನ್ ಕಥಾಹಂದರದ ಈ ಪ್ಯಾನ್-ಇಂಡಿಯಾ ಚಿತ್ರವು ಹಿಂದಿ ಹೊರತುಪಡಿಸಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಜುಲೈ 9ರಿಂದ ಸ್ಟ್ರೀಮಿಂಗ್ ಆರಂಭಿಸಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆದಾಗ ಸಿನಿಮಾ ಬಗ್ಗೆ ಒಂದಷ್ಟು ಚರ್ಚೆ ಆಗಿತ್ತು. ಅದು ಒಟಿಟಿ ಬಿಡುಗಡೆ ನಂತರವೂ ಮುಂದುವರಿದಿದೆ.

ಟ್ರೋಲ್ ನಡುವೆಯೂ ವೀಕ್ಷಿಸಿದ ಜನ:

ಸೋಶಿಯಲ್ ಮೀಡಿಯಾದಲ್ಲಿ ‘ಪೆದ್ದಿ’ ಸಿನಿಮಾ ಬಗ್ಗೆ ಅನೇಕ ಬಗೆಯ ಮೀಮ್ಸ್ ಮಾಡಲಾಗಿದೆ. ‘ಇಂಗ್ಲೆಂಡ್​ನಲ್ಲಿ ಕ್ರಿಕೆಟ್ ಹುಟ್ಟಿತು. ತೆಲುಗು ಸಿನಿಮಾದಲ್ಲಿ ಅದು ಸತ್ತುಹೋಯಿತು’ ಎಂದು ಟ್ರೋಲ್ ಮಾಡಲಾಗುತ್ತಿದೆ. ಈ ರೀತಿಯ ಟೀಕೆಯ ನಡುವೆಯೂ ಜನರು ಒಟಿಟಿಯಲ್ಲಿ ‘ಪೆದ್ದಿ’ ಸಿನಿಮಾವನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ: ಪೆದ್ದಿ ಸಿನಿಮಾ ಬಗೆಗಿನ ಟ್ರೋಲ್‌ ಬಗ್ಗೆ ಕೊನೆಗೂ ಮೌನ ಮುರಿದ ರಾಮ್ ಚರಣ್

ಪೆದ್ದಿ ಸಿನಿಮಾದ ಪಾತ್ರವರ್ಗ, ತಾಂತ್ರಿಕ ಬಳಗ:

ಭಾರಿ ಬಜೆಟ್​ನಲ್ಲಿ ‘ಪೆದ್ದಿ’ ಸಿನಿಮಾ ನಿರ್ಮಾಣ ಆಯಿತು. ಗ್ರಾಮೀಣ ಹಿನ್ನೆಲೆಯ ಕ್ರೀಡಾ ಜಗತ್ತಿನ ಕಥೆಯನ್ನು ಈ ಚಿತ್ರ ಹೊಂದಿದೆ. ತಾಂತ್ರಿಕವಾಗಿಯೂ ಈ ಸಿನಿಮಾ ಶ್ರೀಮಂತವಾಗಿದೆ. ಎ.ಆರ್. ರೆಹಮಾನ್ ಅವರು ಸಂಗೀತ ನೀಡಿದ್ದಾರೆ. ಆರ್. ರತ್ನವೇಲು ಅವರ ಛಾಯಾಗ್ರಹಣ ಮಾಡಿದ್ದಾರೆ. ರಾಮ್ ಚರಣ್ ಅವರಿಗೆ ಜೋಡಿಯಾಗಿ ಜಾನ್ವಿ ಕಪೂರ್ ನಟಿಸಿದ್ದು, ಶಿವರಾಜ್‌ಕುಮಾರ್, ದಿವ್ಯೇಂದು ಶರ್ಮಾ, ಜಗಪತಿ ಬಾಬು ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಲ್ಲಿ ಟ್ರಾಫಿಕ್​​ ಸಮಸ್ಯೆ ನಿವಾರಣೆಗೆ ಕ್ರಮ: ಸಿಗ್ನಲ್​​ ಸಮೀಪವಿರುವ ಬಸ್​​ ನಿಲ್ದಾಣಗಳ ತೆರವಿಗೆ ಸಚಿವ ಕೃಷ್ಣ ಭೈರೇಗೌಡ ಸೂಚನೆ – Kannada News | Bengaluru Traffic: BMTC Bus Stops Within 75 Meters of Signals to be Shifted to Ease Congestion

ಬೆಂಗಳೂರು, ಜುಲೈ 15: ಕೃಷ್ಣ ಭೈರೇಗೌಡ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರವಹಿಸಿಕೊಂಡ ಬಳಿಕ ನಗರದಲ್ಲಿನ ಪ್ರಮುಖ ಸಮಸ್ಯೆಗಳ ನಿವಾರಣೆಗೆ ಕ್ರಮಕ್ಕೆ ಮುಂದಾಗಿದ್ದು, ಈಗಾಗಲೇ ಫುಟ್​​​ಪಾತ್​​ ಒತ್ತುವರಿ ತೆರವು, ಬಿಡಾಡಿ ವಾಹನಗಳ ಎತ್ತಂಗಡಿ ಸೇರಿ ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಇವುಗಳ ಜೊತೆಗೀಗ ನಗರದಲ್ಲಿನ ಟ್ರಾಫಿಕ್​​ ಸಮಸ್ಯೆ ನಿವಾರಣೆ ನಿಟ್ಟಿನಲ್ಲೂ ಸಚಿವರು ಕಾರ್ಯಪ್ರವತ್ತರಾಗಿದ್ದು, ಸಿಗ್ನಲ್​​ಗಳಿಂದ 75 ಮೀಟರ್ ಒಳಗಿರುವ ಬಸ್ ನಿಲ್ದಾಣಗಳ ಸ್ಥಳಾಂತರಕ್ಕೆ ಸೂಚನೆ ನೀಡಿದ್ದಾರೆ.

ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರ

ಇತ್ತೀಚೆಗೆ ಸಚಿವ ಕೃಷ್ಣಭೈರೇಗೌಡ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನಗರದ ಟ್ರಾಫಿಕ್ ಸಮಸ್ಯೆಗೆ ಪ್ರಮುಖ ಪರಿಹಾರವಾಗಿ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ನಗರದ ಸಂಚಾರದಟ್ಟಣೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಟ್ರಾಫಿಕ್​​ ಸಿಗ್ನಲ್​​ಗಳಿಂದ 75 ಮೀಟರ್ ಒಳಗಿರುವ ಬಿಎಂಟಿಸಿಯ ಬಸ್ ನಿಲ್ದಾಣಗಳನ್ನು ಶಿಫ್ಟ್ ಮಾಡಲು ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಬೆಂಗಳೂರು ಟ್ರಾಫಿಕ್ ಪೋಲಿಸರು ಅಲರ್ಟ್ ಆಗಿದ್ದು, ಅಂತಹ ನಿಲ್ದಾಣಗಳ ತೆರವಿಗೆ ಮುಂದಾಗಿದ್ದಾರೆ.

ಇದನ್ನೂ ಓದಿ: ಜಿಬಿಎ ಸ್ಟಿಕ್ಕರ್ ಭೀತಿಗೆ ಗಲ್ಲಿ ಸೇರಿದ ಕಾರುಗಳು; ಕುಮಾರಸ್ವಾಮಿ ಲೇಔಟ್‌ನಲ್ಲಿ ಅಕ್ರಮ ಪಾರ್ಕಿಂಗ್ ಹಾವಳಿ

ಅದಾಗಲೇ 27 ಬಸ್ ಸ್ಟ್ಯಾಂಡ್​​ಗಳ ಸ್ಥಳಾಂತರ

ಈ ಹಿಂದೆ 103 ಬಸ್‌ ನಿಲ್ದಾಣಗಳನ್ನು ಶಿಫ್ಟ್ ಮಾಡಲು ಬಿಎಂಟಿಸಿ ಮತ್ತು ಬೆಂಗಳೂರು ಟ್ರಾಫಿಕ್ ಪೋಲಿಸರು ಗುರುತಿಸಿದ್ದರು. ಈಗ ಅವುಗಳ ಸ್ಥಳಾಂತರ ವಿಚಾರಕ್ಕೆ ಮರುಜೀವ ಬಂದಿದ್ದು, ಅದಾಗಲೇ 27 ಬಸ್ ಸ್ಟ್ಯಾಂಡ್​​ಗಳ ಸ್ಥಳ ಬದಲಾಯಿಸಲಾಗಿದೆ. ಆದರೆ 76 ಬಸ್ ನಿಲ್ದಾಣಗಳ ಸ್ಥಳಾಂತರ ಇನ್ನೂ ಆಗಬೇಕಿರುವ ಕಾರಣ ಈ ಸಂಬಂಧ ಜಿಬಿಎಗೆ ಬೆಂಗಳೂರು ಟ್ರಾಫಿಕ್ ಪೋಲಿಸರು ಮತ್ತೊಮ್ಮೆ ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಜಿಬಿಎ ಅಧಿಕಾರಿಗಳು ಮೂರು ತಿಂಗಳ ಕಾಲಾವಕಾಶ ಕೇಳಿದ್ದಾರೆ ಎನ್ನಲಾಗಿದೆ. ಇನ್ನು ಜಿಬಿಎ ವ್ಯಾಪ್ತಿಗೆ ಬರದೇ ಇರುವ ಬಸ್ ಸ್ಟಾಂಡ್​​ಗಳನ್ನು ಸಹ ಗುರುತಿಸಲಾಗಿದ್ದು, ಅವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರಲಿವೆ. ಹೀಗಾಗಿ ಈ ಸಂಬಂಧ ಅವರಿಗೂ ಪತ್ರ ಬರೆಯಲು ಬೆಂಗಳೂರು ಟ್ರಾಫಿಕ್ ಪೋಲಿಸರು ನಿರ್ಧರಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಐಬಿಎಂ ಮಹಾಪತನ; ಆರು ದಶಕದಲ್ಲೇ ಹೀನಾಯ ಪ್ರದರ್ಶನ; 6.7 ಲಕ್ಷ ಕೋಟಿ ರೂ ಮೌಲ್ಯನಷ್ಟ; ಈ ಕುಸಿತಕ್ಕೆ ಏನು ಕಾರಣ? – Kannada News | IBM share price crash 25pc, biggest since 1967, reasons behind this fall

ವಾಷಿಂಗ್ಟನ್, ಜುಲೈ 15: ಜಾಗತಿಕ ತಂತ್ರಜ್ಞಾನ ದೈತ್ಯ IBM (ಇಂಟರ್ನ್ಯಾಷನಲ್ ಬಿಸಿನೆಸ್ ಮಷೀನ್ಸ್) ಕಂಪನಿಯ ಷೇರುಗಳು ಒಂದೇ ದಿನದಲ್ಲಿ ಬರೋಬ್ಬರಿ ಶೇ. 25.2 ರಷ್ಟು ಕುಸಿದಿವೆ. ಇದು ಕಂಪನಿಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಏಕದಿನ ಪತನವಾಗಿದ್ದು, 1987ರ ಪ್ರಸಿದ್ಧ “ಬ್ಲ್ಯಾಕ್ ಮಂಡೇ” ಮಾರುಕಟ್ಟೆ ಕುಸಿತದ ಸಂದರ್ಭದಲ್ಲೂ ಐಬಿಎಂ ಇಷ್ಟು ದೊಡ್ಡ ಹೊಡೆತ ತಿಂದಿರಲಿಲ್ಲ. ಈ ಒಂದೇ ದಿನದ ಪತನದಿಂದಾಗಿ ಕಂಪನಿಯ ಸುಮಾರು 70 ಬಿಲಿಯನ್ ಡಾಲರ್ (ಅಂದಾಜು 6.7 ಲಕ್ಷ ಕೋಟಿ ರೂ) ಮಾರುಕಟ್ಟೆ ಮೌಲ್ಯ ಧೂಳೀಪಟವಾಗಿದೆ.

ಕಂಪನಿಯ ಸಿಇಒ ಅರವಿಂದ್ ಕೃಷ್ಣ ಅವರು ನಿಗದಿಗಿಂತ ಮೊದಲೇ ಹೂಡಿಕೆದಾರರಿಗೆ ಪತ್ರ ಬರೆದು, ಎರಡನೇ ತ್ರೈಮಾಸಿಕದ (Q2) ಆದಾಯ ನಿರೀಕ್ಷೆಗಿಂತ ಕಡಿಮೆಯಾಗಲಿದೆ ಎಂದು ಒಪ್ಪಿಕೊಂಡ ಬೆನ್ನಲ್ಲೇ ಈ ಸೆಲ್ ಆಫ್ (Sell-off) ನಡೆದಿದೆ. ಈ ಐತಿಹಾಸಿಕ ಐಬಿಎಂ ಷೇರು ಪತನಕ್ಕೆ ಕಾರಣವಾದ ಪ್ರಮುಖ ಅಂಶಗಳು ಈ ಕೆಳಕಂಡಂತಿವೆ:

ಇದನ್ನೂ ಓದಿ: ಇವಿ ಬ್ಯಾಟರಿ ಸ್ಫೋಟಗೊಳ್ಳುವುದು ಯಾಕೆ? ಸುರಕ್ಷಿತವಾಗಿ ಚಾರ್ಜಿಂಗ್ ಮಾಡುವುದು ಹೇಗೆ?

AI ಹಾರ್ಡ್‌ವೇರ್‌ನತ್ತ ಹೋಯ್ತು ಹೆಚ್ಚಿನ ಹಣ

ಪ್ರಸ್ತುತ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅಲೆ ಜೋರಾಗಿದೆ. ಜೂನ್ ತಿಂಗಳ ಕೊನೆಯ ವಾರಗಳಲ್ಲಿ ಜಾಗತಿಕ ಕಾರ್ಪೊರೇಟ್ ಕಂಪನಿಗಳು ತಮಗೆ ಬೇಕಾದ AI ಸರ್ವರ್‌ಗಳು, ಸ್ಟೋರೇಜ್ ಮತ್ತು ಮೆಮೊರಿ ಚಿಪ್‌ಗಳ ಬೆಲೆ ಹೆಚ್ಚಾಗಬಹುದು ಎಂಬ ಭೀತಿಯಿಂದ ಅವುಗಳನ್ನು ಮುಂಚಿತವಾಗಿಯೇ ಖರೀದಿಸಲು ಮುಗಿಬಿದ್ದವು. ಇದರಿಂದಾಗಿ, ಕಂಪನಿಗಳು ತಮ್ಮ ಐಟಿ (IT) ಬಜೆಟ್‌ನ ಬಹುಪಾಲು ಹಣವನ್ನು ಹಾರ್ಡ್‌ವೇರ್‌ಗೆ ಮೀಸಲಿಟ್ಟವು. ಇದರ ನೇರ ಪರಿಣಾಮವಾಗಿದ್ದು ಐಬಿಎಂನ ಸಾಫ್ಟ್‌ವೇರ್ ಮತ್ತು ಮೇನ್‌ಫ್ರೇಮ್ ಬಿಸಿನೆಸ್ ಮೇಲೆ. ಗ್ರಾಹಕರು ಸಾಫ್ಟ್‌ವೇರ್ ಖರೀದಿಯನ್ನು ಮುಂದೂಡಿದ್ದರಿಂದ ಐಬಿಎಂ ಆದಾಯಕ್ಕೆ ಭಾರಿ ಹೊಡೆತ ಬಿತ್ತು.

ಕಂಪನಿಯ ಪ್ರಮುಖ ‘ಮೇನ್‌ಫ್ರೇಮ್’ ಮತ್ತು ಸಾಫ್ಟ್‌ವೇರ್ ವ್ಯವಹಾರ ಕುಸಿತ

ಬ್ಯಾಂಕುಗಳು ಮತ್ತು ವಿಮಾನಯಾನ ಸಂಸ್ಥೆಗಳಂತಹ ದೊಡ್ಡ ಉದ್ಯಮಗಳ ಕೋಟ್ಯಂತರ ವಹಿವಾಟುಗಳನ್ನು ನಿರ್ವಹಿಸುವ ಐಬಿಎಂನ ಪ್ರಮುಖ ‘z17 ಮೇನ್‌ಫ್ರೇಮ್ ಕಂಪ್ಯೂಟರ್’ ಪ್ರೋಗ್ರಾಂ ಮತ್ತು ಅದಕ್ಕೆ ಸಂಬಂಧಿಸಿದ ಸಾಫ್ಟ್‌ವೇರ್ ವ್ಯವಹಾರಗಳು ಈ ತ್ರೈಮಾಸಿಕದಲ್ಲಿ ತೀವ್ರ ಹಿನ್ನಡೆ ಅನುಭವಿಸಿವೆ. ಕಂಪನಿಯ ಮೂಲಸೌಕರ್ಯ (Infrastructure) ವಿಭಾಗದ ಆದಾಯವು ಶೇ. 7 ರಷ್ಟು ಕುಸಿದಿದೆ. ತಂತ್ರಜ್ಞಾನದ ಬದಲಾವಣೆಗೆ ತಕ್ಕಂತೆ ವೇಗವಾಗಿ ಹೊಂದಿಕೊಳ್ಳಲು ನಾವು ವಿಫಲವಾಗಿದ್ದೇವೆ ಎಂದು ಸಿಇಒ ಅರವಿಂದ್ ಕೃಷ್ಣ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ವಿವಿಧ ರೀತಿಯ ಹೈಬ್ರಿಡ್ ಕಾರುಗಳು ಯಾವುವು?, ಅವು ಹೇಗೆ ಕಾರ್ಯನಿರ್ವಹಿಸುತ್ತವೆ?

ಸೈಬರ್ ಭದ್ರತೆಗೆ ಹೆಚ್ಚಿದ ಆದ್ಯತೆ

ಇತ್ತೀಚಿನ ದಿನಗಳಲ್ಲಿ AI ಆಧಾರಿತ ಹ್ಯಾಕಿಂಗ್ ತಂತ್ರಜ್ಞಾನಗಳು ಹೆಚ್ಚುತ್ತಿರುವುದರಿಂದ, ಜಗತ್ತಿನಾದ್ಯಂತ ಉದ್ಯಮಗಳು ತಮ್ಮ ಸಾಫ್ಟ್‌ವೇರ್ ನವೀಕರಣಗಳನ್ನು ಬದಿಗಿಟ್ಟು, ಸೈಬರ್ ಭದ್ರತೆಗೆ (Cybersecurity) ಹೆಚ್ಚಿನ ಹಣ ವ್ಯಯಿಸುತ್ತಿವೆ. ಆಂಥ್ರೋಪಿಕ್​‌ನಂತಹ ಸುಧಾರಿತ AI ಮಾಡಲ್​ಗಳು ಕಂಪ್ಯೂಟರ್ ನೆಟ್‌ವರ್ಕ್‌ಗಳ ಲೋಪದೋಷಗಳನ್ನು ಪತ್ತೆಹಚ್ಚಲು ಶುರುಮಾಡಿದ ನಂತರ ಕಂಪನಿಗಳು ಡಿಫೆನ್ಸ್ ಮೋಡ್‌ಗೆ ಜಾರಿವೆ. ಈ ಕಾರಣದಿಂದಾಗಿ ಐಬಿಎಂ ಒಪ್ಪಂದ ಮಾಡಿಕೊಳ್ಳಬೇಕಾಗಿದ್ದ ನೂರಾರು ದೊಡ್ಡ ಸಾಫ್ಟ್‌ವೇರ್ ಡೀಲ್‌ಗಳು ಅಂತಿಮ ಕ್ಷಣದಲ್ಲಿ ರದ್ದಾಗಿವೆ ಅಥವಾ ಮುಂದೂಡಲ್ಪಟ್ಟಿವೆ.

ಐಬಿಎಂ ಅನುಭವಿಸಿದ ಈ ದಿಢೀರ್ ಪತನದ ಬಿಸಿ ಜಾಗತಿಕ ಸಾಫ್ಟ್‌ವೇರ್ ವಲಯಕ್ಕೂ ತಟ್ಟಿದೆ. ಅಮೆರಿಕದ ಮೈಕ್ರೋಸಾಫ್ಟ್, ಸೇಲ್ಸ್‌ಫೋರ್ಸ್ ಷೇರುಗಳು ಕುಸಿದಿರುವುದರ ಜೊತೆಗೆ ಭಾರತೀಯ ಐಟಿ ಕಂಪನಿಗಳಾದ TCS, ಇನ್ಫೋಸಿಸ್ ಮತ್ತು ವಿಪ್ರೋ ಷೇರುಗಳೂ ಸಹ ಇಳಿಕೆ ಕಂಡಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಚಿಕ್ಕಮಗಳೂರು: 60 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಕಾರ್ಮಿಕನ ರಕ್ಷಣೆ – Kannada News | Chikkamagaluru: Worker Rescued from 60 Foot Borewell in Koppa

ಚಿಕ್ಕಮಗಳೂರು, ಜುಲೈ 15: ಜಿಲ್ಲೆಯ ಕೊಪ್ಪ ತಾಲೂಕಿನ ಕವಡೆಕಟ್ಟೆ ಗ್ರಾಮದ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ಒಂದು ದುರಂತ ಸಂಭವಿಸಿದೆ. ಶಾಲೆಯ ಆವರಣದ ಕೊಳವೆ ಬಾವಿಯ ಮೇಲ್ಭಾಗವನ್ನು ಸ್ವಚ್ಛಗೊಳಿಸುವ ವೇಳೆ ವಿಶ್ವನಾಥ್ ಎಂಬ ಕಾರ್ಮಿಕ ಆಕಸ್ಮಿಕವಾಗಿ ಸುಮಾರು 60 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿರುವ ಘಟನೆ ನಡೆದಿದೆ. ಸ್ಥಳಕ್ಕೆ ತಕ್ಷಣವೇ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಕಾರ್ಯಾಚರಣೆ ನಡೆಸಿ ವಿಶ್ವನಾಥ್​ರನ್ನ ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಬಾವಿಗೆ ಬಿದ್ದ ರಭಸಕ್ಕೆ ವಿಶ್ವನಾಥ್​ಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಚಿಕಿತ್ಸೆಗಾಗಿ ಕೊಪ್ಪ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಕರ್ನಾಟಕ ಕಂದಾಯ ಇಲಾಖೆಯಲ್ಲಿ 572 ವಿಎಒ ಹುದ್ದೆಗಳ ನೇಮಕಾತಿ: ಪಿಯುಸಿ ಪಾಸಾದವರಿಗೆ ಸರ್ಕಾರಿ ಉದ್ಯೋಗದ ಅವಕಾಶ – Kannada News | Karnataka Village Administrative Officer Recruitment 2026: Complete Application Guide

ಕಂದಾಯ ಇಲಾಖೆಯ 572 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿ ಆರಂಭImage Credit source: Getty Images

ಕರ್ನಾಟಕ ಕಂದಾಯ ಇಲಾಖೆಯು (Karnataka Revenue Department) 2026ನೇ ಸಾಲಿನ 572 ಗ್ರಾಮ ಆಡಳಿತಾಧಿಕಾರಿ (Village Administrative Officer – VAO) ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ ಈ ನೇಮಕಾತಿ ನಡೆಯಲಿದ್ದು, ಪಿಯುಸಿ /12ನೇ ತರಗತಿ ಉತ್ತೀರ್ಣ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರಿಗೆ ಇದು ಉತ್ತಮ ಅವಕಾಶವಾಗಿದೆ.

ಜಿಲ್ಲಾವಾರು ಹುದ್ದೆಗಳ ಹಂಚಿಕೆ

ತುಮಕೂರು -50
ಮಂಡ್ಯ -50
ಬೆಳಗಾವಿ -48
ಮೈಸೂರು -45
ದಕ್ಷಿಣ ಕನ್ನಡ- 37
ಹಾಸನ -35
ಕಲಬುರಗಿ -35
ಚಾಮರಾಜನಗರ -31
ಬೆಂಗಳೂರು ದಕ್ಷಿಣ (ರಾಮನಗರ) -30
ಬೆಂಗಳೂರು ಗ್ರಾಮಾಂತರ – 29
ಕೋಲಾರ -22
ಚಿಕ್ಕಬಳ್ಳಾಪುರ -21
ಬೆಂಗಳೂರು ನಗರ -20
ಶಿವಮೊಗ್ಗ -18
ಬಾಗಲಕೋಟೆ -16
ಬೀದರ್ – 16
ಚಿತ್ರದುರ್ಗ- 15
ಹಾವೇರಿ – 15
ಗದಗ್ -14
ಉಡುಪಿ – 10
ಚಿಕ್ಕಮಗಳೂರು – 10
ರಾಯಚೂರು – 5

ವಯೋಮಿತಿ

ಕನಿಷ್ಠ ವಯಸ್ಸು: 18 ವರ್ಷ
ಗರಿಷ್ಠ ವಯಸ್ಸು: 40 ವರ್ಷ

ವಯೋಸಡಿಲಿಕೆ
SC/ST ಅಭ್ಯರ್ಥಿಗಳು – 5 ವರ್ಷ
2A, 2B, 3A, 3B ಅಭ್ಯರ್ಥಿಗಳು – 3 ವರ್ಷ

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್‌ನಲ್ಲಿ 73 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳ ನೇಮಕಾತಿ; ಪದವೀಧರರಿಗೆ ಉತ್ತಮ ಅವಕಾಶ

ಆಯ್ಕೆ ಪ್ರಕ್ರಿಯೆ

ನೇಮಕಾತಿ ಪ್ರಕ್ರಿಯೆ ಎರಡು ಪ್ರಮುಖ ಹಂತಗಳಲ್ಲಿ ನಡೆಯಲಿದೆ.

ಹಂತ 1: ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ

ಪೇಪರ್-1
ಸಾಮಾನ್ಯ ಜ್ಞಾನ
ಅಂಕಗಳು: 100
ಅವಧಿ: 2 ಗಂಟೆ

ಪೇಪರ್-2

ಸಾಮಾನ್ಯ ಕನ್ನಡ
ಸಾಮಾನ್ಯ ಇಂಗ್ಲಿಷ್
ಕಂಪ್ಯೂಟರ್ ಜ್ಞಾನ
ಅಂಕಗಳು: 100
ಅವಧಿ: 2 ಗಂಟೆ

ಹಂತ 2
ದಾಖಲಾತಿ ಪರಿಶೀಲನೆ (Document Verification)

ಅರ್ಜಿ ಸಲ್ಲಿಸುವ ವಿಧಾನ

ಹಂತ 1: ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.

ಹಂತ 2: ವಿದ್ಯಾರ್ಹತೆ, ವಯಸ್ಸು ಹಾಗೂ ಇತರೆ ಅರ್ಹತೆಗಳನ್ನು ಪರಿಶೀಲಿಸಿ.

ಹಂತ 3: ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಅರ್ಜಿ ಭರ್ತಿ ಮಾಡಿ.

ಹಂತ 4: ಅಗತ್ಯ ದಾಖಲೆಗಳು, ಪಾಸ್‌ಪೋರ್ಟ್ ಗಾತ್ರದ ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.

ಹಂತ 5: ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಿ.

ಹಂತ 6: ಅರ್ಜಿ ಸಂಖ್ಯೆ/ಪ್ರಿಂಟ್ ಪ್ರತಿಯನ್ನು ಉಳಿಸಿಕೊಳ್ಳಿ.

ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ಮಾಹಿತಿ

  • ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ, ಕನ್ನಡ, ಇಂಗ್ಲಿಷ್ ಹಾಗೂ ಕಂಪ್ಯೂಟರ್ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
  • ಜಿಲ್ಲಾವಾರು ಹುದ್ದೆಗಳಿರುವುದರಿಂದ ಅರ್ಜಿ ಸಲ್ಲಿಸುವ ಮೊದಲು ಜಿಲ್ಲೆಯ ಆಯ್ಕೆಯನ್ನು ಎಚ್ಚರಿಕೆಯಿಂದ ಮಾಡಬೇಕು.
  • ಎಲ್ಲಾ ದಾಖಲೆಗಳು ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.
  • ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಉತ್ತಮ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

ಒಟ್ಟು ಎಷ್ಟು ಗ್ರಾಮ ಆಡಳಿತಾಧಿಕಾರಿ ಹುದ್ದೆಗಳು ಭರ್ತಿಯಾಗುತ್ತಿವೆ?

ಉತ್ತರ: ಒಟ್ಟು 572 ಹುದ್ದೆಗಳು ಭರ್ತಿಯಾಗಲಿವೆ.

ಅರ್ಜಿ ಸಲ್ಲಿಸಲು ಕನಿಷ್ಠ ವಿದ್ಯಾರ್ಹತೆ ಏನು?

ಉತ್ತರ: ಪಿಯುಸಿ ಅಥವಾ 12ನೇ ತರಗತಿ ಉತ್ತೀರ್ಣರಾಗಿರಬೇಕು.

ಆಯ್ಕೆ ಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆ ಇದೆಯೇ?

ಉತ್ತರ: ಹೌದು. ಎರಡು ಪೇಪರ್‌ಗಳ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ಹಾಗೂ ನಂತರ ದಾಖಲಾತಿ ಪರಿಶೀಲನೆ ನಡೆಯಲಿದೆ.

ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸು ಎಷ್ಟು?

ಉತ್ತರ: ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ. ಮೀಸಲಾತಿಯ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಸಡಿಲಿಕೆ ಲಭ್ಯ.

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು?

ಉತ್ತರ: 30 ಜುಲೈ 2026 ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, 31 ಜುಲೈ 2026 ಅರ್ಜಿ ಶುಲ್ಕ ಪಾವತಿಸಲು ಅಂತಿಮ ದಿನವಾಗಿದೆ.

Source link

Loan Account: ಲೋನ್ ಅಕೌಂಟ್‌ನಲ್ಲಿನ ನಾಮಿನಿ ಹೆಸರನ್ನು ಬದಲಾಯಿಸಲು ಹೀಗೆ ಮಾಡಿ – Kannada News | Loan Account: How to add a new nominee’s name to a loan account

ಎಷ್ಟೇ ಪರಿಚಯಸ್ಥರೇ ಆಗಲಿ, ಸಾಲ (loan) ಪಡೆಯುತ್ತಿದ್ದರೆ ಆ ಸಾಲಕ್ಕೆ ನಾಮಿನಿಯಾಗಿ ತಮ್ಮ ಹೆಸರನ್ನು ಹಾಕಲು ಹಿಂದೇಟು ಹಾಕುತ್ತೇವೆ. ಒಂದು ವೇಳೆ ಸಾಲ ಪಡೆದ ವ್ಯಕ್ತಿ ಮೃತ ಪಟ್ಟರೆ ಆ ಸಾಲದ ಹೊರೆ ನಮ್ಮ ಮೇಲೆ ಬರುತ್ತದೆ ಎಂಬ ಭಯ ಕಾಡುವುದು ಸಹಜ. ಆದರೆ ಈ ಸಾಲದ ಅವಧಿಯಲ್ಲಿ ಯಾವುದೇ ಅನಿರೀಕ್ಷಿತ ಘಟನೆಗಳು ಸಂಭವಿಸಿದರೆ, ಕಾನೂನು ಪ್ರಕ್ರಿಯೆಗಳನ್ನು ಸುಲಭಗೊಳಿಸುವುದೇ ಈ ನಾಮಿನಿ ಹೆಸರು (nominee name). ಸಾಲಗಾರನು ಈ ನಾಮಿನಿ ಹೆಸರನ್ನು ಬದಲಾಯಿಸಲು ಅವಕಾಶವಿದೆ. ಸಾಲದ ಖಾತೆಯಲ್ಲಿರುವ ಹೆಸರನ್ನು ಬದಲಾಯಿಸಲು ಸಾಲ ಪಡೆದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯ ಶಾಖೆಗೆ ಭೇಟಿ ನೀಡಬೇಕಾಗುತ್ತದೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಲದ ಖಾತೆಯಲ್ಲಿ ನಾಮಿನಿ ಹೆಸರನ್ನು ಬದಲಾಯಿಸುವುದು ಹೇಗೆ?

ಹಂತ 1: ನಿಮ್ಮ ಸಾಲವಿರುವ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ನಾಮಿನೇಷನ್ ಬದಲಾವಣೆ ಫಾರ್ಮ್ ಪಡೆಯಿರಿ. ಆದರೆ ಬ್ಯಾಂಕ್‌ಗಳ ಅಧಿಕೃತ ವೆಬ್‌ಸೈಟ್‌ನ ಡೌನ್‌ಲೋಡ್ ವಿಭಾಗದಲ್ಲಿ ಈ ಫಾರ್ಮ್‌ಗಳು ಲಭ್ಯವಿರುತ್ತದೆ.

ಹಂತ 2: ಈ ಫಾರ್ಮ್‌ನಲ್ಲಿ ನಿಮ್ಮ ಸಾಲದ ಖಾತೆ ಸಂಖ್ಯೆ, ಹೊಸದಾಗಿ ನಾಮಿನಿ ಮಾಡಲು ಬಯಸುವ ವ್ಯಕ್ತಿಯ ಹೆಸರು, ಆ ವ್ಯಕ್ತಿಯ ಜನ್ಮದಿನಾಂಕ ಹಾಗೂ ನಿಮ್ಮೊಂದಿಗಿರುವ ಸಂಬಂಧ ಈ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.

ಹಂತ 3: ಹೊಸ ನಾಮಿನಿಯ ಪಾನ್ ಕಾರ್ಡ್, ಆಧಾರ್ ಕಾರ್ಡ್, ಅಥವಾ ಪಾಸ್‌ಪೋರ್ಟ್‌ನಂತಹ ದಾಖಲೆಗಳು, ವಿಳಾಸದ ಪುರಾವೆಯ ಜೆರಾಕ್ಸ್ ಪ್ರತಿಯನ್ನು ಫಾರ್ಮ್‌ನೊಂದಿಗೆ ಲಗತ್ತಿಸಿ.

ಹಂತ 4: ಸಾಲದ ಖಾತೆದಾರರು ನಾಮಿನೇಷನ್ ಬದಲಾವಣೆ ಫಾರ್ಮ್‌ನಲ್ಲಿ ಸಹಿ ಮಾಡಿ.

ಹಂತ 5: ಭರ್ತಿ ಮಾಡಿದ ಫಾರ್ಮ್ ಹಾಗೂ ಗುರುತಿನ ಚೀಟಿ ಸೇರಿದಂತೆ ಇನ್ನಿತ್ತರ ದಾಖಲೆಗಳನ್ನು ಬ್ಯಾಂಕ್ ಅಧಿಕಾರಿಗೆ ನೀಡಿ.

ಹಂತ 6: ಬ್ಯಾಂಕ್ ಸಿಬ್ಬಂದಿ ಈ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನಿಮ್ಮ ಸಾಲದ ಖಾತೆಯಲ್ಲಿ ಹೊಸ ನಾಮಿನಿ ಹೆಸರನ್ನು ಸೇರಿಸುತ್ತಾರೆ.

ಇದನ್ನೂ ಓದಿ: ಸಾಲ ಮರುಪಾವತಿ ಮಾಡಿದ ಕೂಡ್ಲೇ ಬ್ಯಾಂಕ್‌ನಿಂದ ಈ ದಾಖಲೆಗಳನ್ನು ತಪ್ಪದೇ ಪಡೆಯಿರಿ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ನಾಮಿನಿ ಎಂದರೆ ಯಾರು?

ಉತ್ತರ: ಸಾಲಗಾರರು ಮೃತಪಟ್ಟರೆ ಆ ಸಾಲದ ಹೊಣೆಗಾರಿಕೆಯನ್ನು ಅಥವಾ ಸಾಲದ ಆಸ್ತಿಯನ್ನು ನಿರ್ವಹಿಸುವವರೇ ಈ ನಾಮಿನಿಗಳು.

ಪ್ರಶ್ನೆ: ಸಾಲಗಾರರಿಗೆ ತಮ್ಮ ಲೋನ್ ಅಕೌಂಟ್ ನಲ್ಲಿರುವ ನಾಮಿನಿ ಹೆಸರನ್ನು ಬದಲಾಯಿಸಲು ಅವಕಾಶವಿದೆಯೇ?

ಉತ್ತರ: ತಮ್ಮ ಲೋನ್ ಅಕೌಂಟ್ ನಲ್ಲಿರುವ ನಾಮಿನಿ ಹೆಸರನ್ನು ಬದಲಾಯಿಸಲು ಅವಕಾಶವಿದೆ.

ಪ್ರಶ್ನೆ: ಸಾಲದ ಖಾತೆಯಲ್ಲಿರುವ ನಾಮಿನಿ ಹೆಸರನ್ನು ಬದಲಾಯಿಸುವುದು ಹೇಗೆ?

ಉತ್ತರ: ನಾಮಿನಿ ಹೆಸರನ್ನು ಬದಲಾಯಿಸಲು  ಸಾಲ ಪಡೆದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯ ಶಾಖೆಗೆ ಭೇಟಿ ನೀಡಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೆಹಲಿ ಪ್ರಯಾಣಕ್ಕೂ ಮುನ್ನ ಸಿದ್ದರಾಮಯ್ಯರನ್ನು ಭೇಟಿಯಾದ ಸಿಎಂ ಡಿ.ಕೆ. ಶಿವಕುಮಾರ್: ಸಂಪುಟ ವಿಸ್ತರಣೆ ಬಗ್ಗೆ ಸುದೀರ್ಘ ಚರ್ಚೆ – Kannada News | Karnataka Cabinet Expansion: CM Shivakumar Meets Siddaramaiah before Travel to Delhi

ಬೆಂಗಳೂರು, ಜುಲೈ 15: ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದ ಚಟುವಟಿಕೆಗಳು ತೀವ್ರಗೊಂಡಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ಪ್ರಯಾಣ ಬೆಳೆಸುವ ಮುನ್ನ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ನಡೆದ ಈ ಭೇಟಿಯಲ್ಲಿ ಸಂಪುಟ ವಿಸ್ತರಣೆ ಕುರಿತು ಪ್ರಾಥಮಿಕ ಸಮಾಲೋಚನೆ ನಡೆಸಲಾಗಿದೆ. ಉಭಯ ನಾಯಕರು 40 ನಿಮಿಷಕ್ಕೂ ಹೆಚ್ಚು ಕಾಲ ಒನ್ ಟು ಒನ್ ಮಾತುಕತೆ ನಡೆಸಿದ್ದು, ಕಾವೇರಿ ನಿವಾಸದಲ್ಲಿ ಸುದೀರ್ಘ ಚರ್ಚೆ ನಡೆದಿದೆ. ಇಂದು ಸಂಜೆ ಒಂದೇ ವಿಮಾನದಲ್ಲಿ ಹಾಲಿ ಮತ್ತು ಮಾಜಿ ಸಿಎಂ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಸಂಬಂಧ ನಾಳೆ ಮೊದಲ ಹಂತದ ಮಾತುಕತೆ ದೆಹಲಿಯಲ್ಲಿ ನಡೆಯುವ ನಿರೀಕ್ಷೆಯಿದೆ. ಈ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್, ರಣದೀಪ್ ಸುರ್ಜೇವಾಲಾ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಮತ್ತು ಬಿ.ಕೆ. ಹರಿಪ್ರಸಾದ್ ಭಾಗವಹಿಸಲಿದ್ದಾರೆ. ರಾಹುಲ್ ಗಾಂಧಿ ಅವರ ಅನುಪಸ್ಥಿತಿಯಲ್ಲಿ ಮೊದಲ ಹಂತದ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಇವಿ ಬ್ಯಾಟರಿ ಸ್ಫೋಟಗೊಳ್ಳುವುದು ಯಾಕೆ? ಸುರಕ್ಷಿತವಾಗಿ ಚಾರ್ಜಿಂಗ್ ಮಾಡುವುದು ಹೇಗೆ? – Kannada News | Fire accident during scooter battery charging at Noida, Things to remember when charging EVs

ಎವಿ ಚಾರ್ಜರ್Image Credit source: Marcin Golba/NurPhoto via Getty Images)

ನವದೆಹಲಿ, ಜುಲೈ 15: ನೋಯ್ಡಾದ ಬಹುಮಹಡಿ ಕಟ್ಟಡವೊಂದರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಚಾರ್ಜ್ ಮಾಡುವಾಗ ಸಂಭವಿಸಿದ ಭೀಕರ ಶಾರ್ಟ್ ಸರ್ಕ್ಯೂಟ್ ಮತ್ತು ಅಗ್ನಿ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ನಿಜಕ್ಕೂ ಆತಂಕಕಾರಿ. ಇತ್ತೀಚಿನ ದಿನಗಳಲ್ಲಿ ಇವಿ (EV – Electric Vehicle) ಬ್ಯಾಟರಿಗಳು ಚಾರ್ಜ್ ಆಗುವಾಗ ಅಥವಾ ಬಳಕೆಯಲ್ಲಿರುವಾಗ ದಿಢೀರನೆ ಬೆಂಕಿ ಹೊತ್ತಿಕೊಳ್ಳುವ ಘಟನೆಗಳು ಹೆಚ್ಚಾಗುತ್ತಿವೆ. ಹಾಗಾದರೆ, ಈ ಬ್ಯಾಟರಿಗಳಲ್ಲಿ ಇಂತಹ ಅಪಾಯಗಳು ಏಕೆ ಸಂಭವಿಸುತ್ತವೆ? ಬ್ಯಾಟರಿ ಚಾರ್ಜ್ ಮಾಡುವಾಗ ಆಗುವ ತಾಂತ್ರಿಕ ತೊಂದರೆಗಳು ಯಾವುವು? ಇವಿ ವಾಹನಗಳ ಸುರಕ್ಷತೆಗೆ ಏನು ಮಾಡಬೇಕು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಬ್ಯಾಟರಿ ಹೇಗೆ ಕೆಲಸ ಮಾಡುತ್ತದೆ ಮತ್ತು ಅಪಾಯ ಹೇಗೆ ಶುರುವಾಗುತ್ತದೆ?

ಹೆಚ್ಚಿನ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಲಿಥಿಯಂ-ಐಯಾನ್ (Lithium-ion) ಬ್ಯಾಟರಿಗಳನ್ನು ಬಳಸಲಾಗುತ್ತದೆ. ಇವುಗಳಲ್ಲಿ ಅತಿ ಹೆಚ್ಚು ಶಕ್ತಿಯನ್ನು ಸಂಗ್ರಹಿಸಿಡಬಹುದು. ಆದರೆ, ಇವುಗಳಲ್ಲಿ ಅತ್ಯಂತ ಸೂಕ್ಷ್ಮವಾದ ರಾಸಾಯನಿಕ ಪ್ರಕ್ರಿಯೆ ನಡೆಯುತ್ತಿರುತ್ತದೆ.

ನೋಯ್ಡಾ ಘಟನೆಯ ವಿಡಿಯೋ

ಬ್ಯಾಟರಿಯ ಒಳಗೆ ಪ್ಲಸ್ (ಆನೋಡ್) ಮತ್ತು ಮೈನಸ್ (ಕ್ಯಾಥೋಡ್) ಧ್ರುವಗಳಿರುತ್ತವೆ. ಇವೆರಡರ ನಡುವೆ ವಿದ್ಯುತ್ ಹರಿಯುವಾಗ ಲಿಥಿಯಂ ಅಯಾನುಗಳು ಚಲಿಸುತ್ತವೆ. ಇವೆರಡರ ಮಧ್ಯೆ ಯಾವುದೇ ಸಂಪರ್ಕ ಬರದಂತೆ ತಡೆಯಲು ಒಂದು ಅತ್ಯಂತ ತೆಳುವಾದ ‘ಸೆಪರೇಟರ್’ (Separator) ಎಂಬ ಪೊರೆ ಇರುತ್ತದೆ. ಒಂದು ವೇಳೆ ಈ ಪೊರೆಗೆ ಹಾನಿಯಾದರೆ ಬ್ಯಾಟರಿ ಒಳಗೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಳ್ಳುತ್ತದೆ.

ಇದನ್ನೂ ಓದಿ: ವಿವಿಧ ರೀತಿಯ ಹೈಬ್ರಿಡ್ ಕಾರುಗಳು ಯಾವುವು?, ಅವು ಹೇಗೆ ಕಾರ್ಯನಿರ್ವಹಿಸುತ್ತವೆ?

ಇವಿ ಬ್ಯಾಟರಿ ಚಾರ್ಜ್ ಮಾಡುವಾಗ ಎದುರಾಗುವ ಪ್ರಮುಖ 5 ಸಮಸ್ಯೆಗಳು

ಲಿಥಿಯಂ-ಐಯಾನ್ ಬ್ಯಾಟರಿಗಳು ಚಾರ್ಜ್ ಆಗುವಾಗ ಸ್ವಲ್ಪ ಮಟ್ಟಿಗೆ ಬಿಸಿಯಾಗುವುದು ಸಹಜ. ಆದರೆ ಕೆಳಗಿನ ಕಾರಣಗಳಿಂದಾಗಿ ಅದು ನಿಯಂತ್ರಣ ಮೀರಿ ಬೆಂಕಿ ಅವಘಡಕ್ಕೆ ಕಾರಣವಾಗುತ್ತದೆ:

  • ಥರ್ಮಲ್ ರನ್‌ಅವೇ – ಅತಿಯಾದ ಶಾಖ ಉತ್ಪತ್ತಿ: ಬ್ಯಾಟರಿ ಚಾರ್ಜ್ ಆಗುವಾಗ ಒಳಗಿನ ತಾಪಮಾನವು ಒಂದು ಮಿತಿಗಿಂತ ಹೆಚ್ಚಾದಾಗ (ಸುಮಾರು 60-80 ಡಿಗ್ರಿ ಸೆಲ್ಸಿಯಸ್ ದಾಟಿದಾಗ), ಬ್ಯಾಟರಿಯೊಳಗಿನ ರಾಸಾಯನಿಕಗಳು ಸ್ವಯಂಚಾಲಿತವಾಗಿ ಮತ್ತಷ್ಟು ಶಾಖವನ್ನು ಬಿಡುಗಡೆ ಮಾಡಲು ಶುರುಮಾಡುತ್ತವೆ. ಇದನ್ನು ‘ಥರ್ಮಲ್ ರನ್‌ಅವೇ’ (Thermal Runaway) ಎನ್ನುತ್ತಾರೆ. ಒಮ್ಮೆ ಈ ಪ್ರಕ್ರಿಯೆ ಶುರುವಾದರೆ, ಬ್ಯಾಟರಿ ತಾನಾಗಿಯೇ ಅತ್ಯಂತ ವೇಗವಾಗಿ ಬಿಸಿಯಾಗಿ, ಕೊನೆಗೆ ಸ್ಫೋಟಗೊಳ್ಳುತ್ತದೆ ಅಥವಾ ವಿಷಕಾರಿ ಅನಿಲಗಳೊಂದಿಗೆ ಭಾರಿ ಬೆಂಕಿ ಹೊರಸೂಸುತ್ತದೆ.
  • ಬ್ಯಾಟರಿಯ ಓವರ್ ಚಾರ್ಜಿಂಗ್: ಬ್ಯಾಟರಿ ಶೇ. 100 ರಷ್ಟು ಚಾರ್ಜ್ ಆದ ಮೇಲೂ ಚಾರ್ಜರ್ ಆಫ್ ಆಗದಿದ್ದರೆ ಅಥವಾ ರಾತ್ರಿಯಿಡೀ ಚಾರ್ಜ್ ಮಾಡಲು ಬಿಟ್ಟರೆ (Overcharging)ಬ್ಯಾಟರಿ ಮೇಲೆ ಒತ್ತಡ ಹೆಚ್ಚಾಗುತ್ತದೆ. ಸರಿಯಾದ ಬ್ಯಾಟರಿ ಮ್ಯಾನೇಜ್‌ಮೆಂಟ್ ಸಿಸ್ಟಮ್ (BMS) ಇಲ್ಲದ ವಾಹನಗಳಲ್ಲಿ, ಇದು ಬ್ಯಾಟರಿ ಒಳಗೆ ಅಸ್ಥಿರತೆಯನ್ನು ಉಂಟುಮಾಡಿ ಶಾರ್ಟ್ ಸರ್ಕ್ಯೂಟ್‌ಗೆ ದಾರಿ ಮಾಡಿಕೊಡುತ್ತದೆ.
  • ಕಳಪೆ ಗುಣಮಟ್ಟದ ಬ್ಯಾಟರಿ ಮತ್ತು ಬಿಎಂಎಸ್: ಪ್ರತಿಯೊಂದು ಇವಿ ಬ್ಯಾಟರಿಯಲ್ಲೂ BMS (Battery Management System) ಎಂಬ ಸಣ್ಣ ಕಂಪ್ಯೂಟರ್ ಮಾದರಿಯ ಸರ್ಕ್ಯೂಟ್ ಇರುತ್ತದೆ. ಇದರ ಕೆಲಸ ಬ್ಯಾಟರಿಯ ತಾಪಮಾನ ಮತ್ತು ವೋಲ್ಟೇಜ್ ಅನ್ನು ನಿಯಂತ್ರಿಸುವುದು. ಕಳಪೆ ಗುಣಮಟ್ಟದ ಬಿಎಂಎಸ್ ಬಳಸಿದ್ದರೆ, ಬ್ಯಾಟರಿ ಬಿಸಿಯಾದಾಗ ಅಥವಾ ಓವರ್ ಚಾರ್ಜ್ ಆದಾಗ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಅದು ವಿಫಲವಾಗುತ್ತದೆ.
  • ಕಳಪೆ ವೈರಿಂಗ್ ಮತ್ತು ಸ್ಥಳೀಯ ಚಾರ್ಜರ್‌ಗಳ ಬಳಕೆ: ಕಂಪನಿಯ ಮೂಲ ಚಾರ್ಜರ್ ಬಿಟ್ಟು, ಸ್ಥಳೀಯ ಮಾರುಕಟ್ಟೆಯಲ್ಲಿ ಸಿಗುವ ಅಗ್ಗದ ಚಾರ್ಜರ್‌ಗಳನ್ನು ಬಳಸುವುದರಿಂದ ವೋಲ್ಟೇಜ್ ಏರುಪೇರಾಗಿ ಶಾರ್ಟ್ ಸರ್ಕ್ಯೂಟ್ ಉಂಟಾಗುತ್ತದೆ. ಅಲ್ಲದೆ, ಮನೆಯ ಸಾಕೆಟ್‌ಗಳು ಮತ್ತು ವೈರಿಂಗ್‌ಗಳು ಇವಿ ಚಾರ್ಜಿಂಗ್‌ಗೆ ಬೇಕಾದ ಹೆಚ್ಚಿನ ವಿದ್ಯುತ್ ಪ್ರವಾಹವನ್ನು (Current Load) ತಡೆದುಕೊಳ್ಳುವ ಸಾಮರ್ಥ್ಯ ಹೊಂದಿಲ್ಲದಿದ್ದರೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ವೈರ್‌ಗಳು ಕರಗುತ್ತವೆ.
  • ವಾಹನಕ್ಕೆ ಭೌತಿಕವಾಗಿ ಹಾನಿಯಾಗಿದ್ದರೆ ಬ್ಯಾಟರಿ ಸ್ಫೋಟಕ್ಕೆ ಅವಕಾಶ: ರಸ್ತೆ ಗುಂಡಿಗಳಿಂದಾಗಿ ಅಥವಾ ಅಪಘಾತಗಳಿಂದಾಗಿ ಸ್ಕೂಟರ್‌ನ ಕೆಳಭಾಗಕ್ಕೆ ಬಲವಾದ ಪೆಟ್ಟು ಬಿದ್ದರೆ (Physical Damage) ಬ್ಯಾಟರಿಯ ಒಳಗಿನ ಕೋಶಗಳು ಹಾನಿಗೊಳಗಾಗಬಹುದು. ಅಂತಹ ಹಾನಿಗೊಳಗಾದ ಬ್ಯಾಟರಿಯನ್ನು ಚಾರ್ಜ್‌ಗೆ ಹಾಕಿದಾಗ ತಕ್ಷಣವೇ ಸ್ಪಾರ್ಕ್ ಉಂಟಾಗುತ್ತದೆ. ಇದರ ಜೊತೆಗೆ ಮಳೆಗಾಲದಲ್ಲಿ ಬ್ಯಾಟರಿ ಒಳಗೆ ನೀರು ಅಥವಾ ತೇವಾಂಶ ಹೋದರೂ (Water Ingress) ಶಾರ್ಟ್ ಸರ್ಕ್ಯೂಟ್ ಸಂಭವಿಸುತ್ತದೆ.

ಇದನ್ನೂ ಓದಿ: ಈಗಿನ ಮೊಬೈಲ್‌ಗಳಲ್ಲಿ ತೆಗೆದು ಬದಲಾಯಿಸಬಹುದಾದ ಬ್ಯಾಟರಿ ಏಕೆ ಇಲ್ಲ? ಇಲ್ಲಿದೆ ಅಚ್ಚರಿಯ ಕಾರಣ

ಸುರಕ್ಷಿತವಾಗಿ ಚಾರ್ಜ್ ಮಾಡಲು ತಪ್ಪದೇ ಪಾಲಿಸಬೇಕಾದ ನಿಯಮಗಳು

  • ಗಾಳಿಯಾಡುವ ಮತ್ತು ಡ್ರೈ ಆಗಿರುವ ಜಾಗದಲ್ಲಿ ಚಾರ್ಜ್ ಮಾಡಿ: ಯಾವಾಗಲೂ ಬ್ಯಾಟರಿಯನ್ನು ತಂಪಾದ, ನೇರ ಸೂರ್ಯನ ಬಿಸಿಲು ಬೀಳದ ಮತ್ತು ಗಾಳಿಯಾಡುವ ಜಾಗದಲ್ಲಿ ಚಾರ್ಜ್ ಮಾಡಿ. ಮುಚ್ಚಿದ ಕೋಣೆಯಲ್ಲಿ ಅಥವಾ ಹಾಸಿಗೆ, ಸೋಫಾಗಳ ಬಳಿ ಚಾರ್ಜ್ ಮಾಡಬೇಡಿ.
  • ಬಿಸಿ ಇರುವಾಗ ತಕ್ಷಣ ಚಾರ್ಜ್ ಮಾಡಬೇಡಿ: ಸ್ಕೂಟರ್ ಅನ್ನು ದೀರ್ಘಕಾಲ ಚಲಾಯಿಸಿ ತಂದ ತಕ್ಷಣ ಬ್ಯಾಟರಿ ಬಿಸಿಯಾಗಿರುತ್ತದೆ. ಕನಿಷ್ಠ 30 ರಿಂದ 45 ನಿಮಿಷಗಳ ಕಾಲ ಬ್ಯಾಟರಿ ತಣ್ಣಗಾಗಲು ಬಿಟ್ಟು, ಆಮೇಲೆ ಚಾರ್ಜ್ ಮಾಡಲು ಪ್ರಾರಂಭಿಸಿ.
  • ರಾತ್ರಿಯಿಡೀ ಚಾರ್ಜ್ ಬೇಡ: ಬ್ಯಾಟರಿಯನ್ನು ಎಂದಿಗೂ ರಾತ್ರಿಯಿಡೀ ಚಾರ್ಜಿಂಗ್‌ಗೆ ಇಟ್ಟು ಮಲಗಬೇಡಿ. ಚಾರ್ಜ್ ಪೂರ್ಣಗೊಂಡ ತಕ್ಷಣ ಸ್ವಿಚ್ ಆಫ್ ಮಾಡಿ ಪ್ಲಗ್ ತೆಗೆಯಿರಿ.
  • ಮೂಲ ಚಾರ್ಜರ್ ಮಾತ್ರ ಬಳಸಿ: ನಿಮ್ಮ ಸ್ಕೂಟರ್ ತಯಾರಕ ಕಂಪನಿ ನೀಡಿದ ಅಧಿಕೃತ ಚಾರ್ಜರ್ ಮತ್ತು ವೈರಿಂಗ್ ಅನ್ನು ಮಾತ್ರ ಬಳಸಿ. ಕಳಪೆ ಗುಣಮಟ್ಟದ ಚಾರ್ಜರ್‌ಗಳಿಂದ ಸಂಪೂರ್ಣವಾಗಿ ದೂರವಿರಿ.

ಈ ಅಂಶಗಳು ಗಮನದಲ್ಲಿರಲಿ: ಬ್ಯಾಟರಿಯಿಂದ ಯಾವುದೇ ಅಸಹಜ ವಾಸನೆ (ರಾಸಾಯನಿಕದ ವಾಸನೆ), ಅತಿಯಾದ ಬಿಸಿ, ವಿಚಿತ್ರವಾದ ಶಬ್ದ ಅಥವಾ ಬ್ಯಾಟರಿ ಉಬ್ಬಿಕೊಂಡಿರುವುದು ಕಂಡುಬಂದರೆ ತಕ್ಷಣವೇ ಚಾರ್ಜಿಂಗ್ ನಿಲ್ಲಿಸಿ, ವಾಹನವನ್ನು ಮನೆಯಿಂದ ಹೊರಗೆ ಸುರಕ್ಷಿತ ಜಾಗದಲ್ಲಿರಿಸಿ ಸರ್ವೀಸ್ ಸೆಂಟರ್‌ಗೆ ಸಂಪರ್ಕಿಸಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕಲಬುರಗಿ ಸೆಂಟ್ರಲ್ ಜೈಲಿನಿಂದ ಕೈದಿಗಳು ಪರಾರಿ ಕೇಸ್: 8 ಜೈಲಧಿಕಾರಿಗಳ ಅಮಾನತು – Kannada News | 8 Jail Officials Suspended After Prisoners Escape from Central Jail

ಜೈಲಿನಿಂದ ಕೈದಿಗಳು ಪರಾರಿ ಕೇಸ್​Image Credit source: tv9 kannada

ಕಲಬುರಗಿ,  ಜುಲೈ 15: ನಗರದ ಸೆಂಟ್ರಲ್ ಜೈಲಿನಿಂದ ಮೂವರು ಕೈದಿಗಳು ಪರಾರಿ (Jail Escape) ಆಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯ ಹಿನ್ನೆಲೆ 8 ಜೈಲಧಿಕಾರಿಗಳನ್ನು ಅಮಾನತುಗೊಳಿಸಿ (Suspension) ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಜೈಲಾಧಿಕಾರಿಗಳ ಈ ಬೇಜವಾಬ್ದಾರಿತನದ ಕುರಿತು ಟಿವಿ9 ಕನ್ನಡ ವಾಹಿನಿ ಸಾಕ್ಷಿ ಸಮೇತ ವರದಿ ಮಾಡಿತ್ತು. ಈ ಬೆನ್ನಲ್ಲೇ ಇದೀಗ ಅಮಾನತುಗೊಳಿಸಲಾಗಿದೆ.

ಯಾರೆಲ್ಲಾ ಅಮಾನತು?

ಕಲಬುರಗಿ ಸೆಂಟ್ರಲ್ ಜೈಲಿನ ಅಧೀಕ್ಷಕ ರಾಕೇಶ್ ಕಾಂಬ್ಳೆ, ಸಹಾಯಕ ಅಧೀಕ್ಷಕ ಬಿ. ಸುರೇಶ್ ಹಾಗೂ ಜೈಲರ್ ಶ್ರೀಮಂತಗೌಡ ಪಾಟೀಲ್ ಸೇರಿದಂತೆ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ವಾರ್ಡರ್‌ಗಳಾದ ನಿಂಗಣ್ಣ, ಯಮನಪ್ಪ ಕುರುಬರ, ಬಸವರಾಜ್ ಮೇತ್ರಿ, ಸಾವಿತ್ರಿ ತಳಕೇರಿ ಹಾಗೂ ಅಜೀಮ್​​ರನ್ನು ಸಹ ಕರ್ತವ್ಯಲೋಪದ ಆರೋಪದ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ.

ಎಸ್ಕೇಪ್ ಆಗಿದ್ದ ಮೂವರಲ್ಲಿ ಓರ್ವ ಸೆರೆ!

ಮೂವರು ಕೈದಿಗಳ ಪೈಕಿ ಓರ್ವ ನನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಎಸ್ಕೇಪ್ ಆಗಿರುವ ಮಾಸ್ಟರ್ ಮೈಂಡ್ ಮಸ್ತಾನ್ ಹಾಗೂ ಸಾಗರ್‌ನ ಸೆರೆಗಾಗಿ ಪೊಲೀಸರು ಕಾರ್ಯಚರಣೆ ಮುಂದುವರೆಸಿದ್ದಾರೆ. ಇದಕ್ಕೆಂದು ಡ್ರೋನ್ ಕ್ಯಾಮರಾ ಬಳಕೆ ಮಾಡಲಾಗುತ್ತಿದೆ. ಬೀದರ್ ಜಿಲ್ಲೆಯ ಹುಮ್ನಾಬಾದ್​ನ ಕೆಲ ರೈತರ ಜಮೀನುಗಳಲ್ಲಿ ಡ್ರೋನ್ ಬಳಸಿ ಕೈದಿಗಳ ತಲಾಶ್ ಮಾಡಲಾಗಿದೆ.

ಈ ಘಟನೆ ನೋಡಿ ನನಗೆ ದೊಡ್ಡ ಶಾಕ್ ಆಗಿದೆ ಎಂದ ಆರಗ ಜ್ಞಾನೇಂದ್ರ

ಇನ್ನು ಪ್ರಕರಣ ಕುರಿತಾಗಿ ಶಿವಮೊಗ್ಗದಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮದವರೊಂದಿಗೆ ಮಾತನಾಡಿದ್ದು, ‘‘ಈ ಘಟನೆ ನೋಡಿ ನನಗೆ ದೊಡ್ಡ ಶಾಕ್ ಆಗಿದೆ. ರಾಜ್ಯದಲ್ಲಿ ಕಾರಾಗೃಹಗಳ ಅವ್ಯವಸ್ಥೆ ಸರಿಪಡಿಸುವ ಅಗತ್ಯವಿದೆ. ನಾನು ಗೃಹ ಸಚಿವ ಇದ್ದಾಗ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಪಾರ್ಟಿ ಮಾಡಿದ್ದರು. ಈ ಘಟನೆ ಬೆನ್ನಲ್ಲೇ ಅಧಿಕಾರಿಗಳನ್ನು ಅಮಾನತು ಮಾಡಿ ಶಿಕ್ಷೆ ಕೊಟ್ಟಿದ್ದೆ. ಕಾಂಗ್ರೆಸ್ ಸರ್ಕಾರದ ಮೂರೂವರೆ ವರ್ಷದ ಅವಧಿಯಲ್ಲಿ ಯಾರು ಹೇಳೋರು ಕೇಳೋರು ಇಲ್ಲದಂತಾಗಿದೆ. ಗೃಹ ಇಲಾಖೆಯ ಸಂಪೂರ್ಣ ವಿಫಲ ಆಗಿದೆ’’ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಕಲಬುರಗಿ ಸೆಂಟ್ರಲ್ ಜೈಲಿನಿಂದ ಸಜಾ ಕೈದಿಗಳ ಸಿನಿಮೀಯ ಎಸ್ಕೇಪ್: ಇಲ್ಲಿದೆ ನೋಡಿ ಸಿಸಿಟಿವಿ ದೃಶ್ಯ!

ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದ ಆರಗ ಜ್ಞಾನೇಂದ್ರ, ‘‘ಕಾರಾಗೃಹ ಸುಧಾರಣೆಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ತಮ್ಮ ಇಲಾಖೆ ವಿಷಯ ಬಿಟ್ಟು ಬೇರೆಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ. ಗೃಹ ಇಲಾಖೆಯನ್ನು ಬೇರೆ ಯಾರಿಗಾದರೂ ವಹಿಸಿಕೊಡಬೇಕು, ಇಲ್ಲದಿದ್ದರೆ ಸಮರ್ಥವಾಗಿ ಗೃಹ ಇಲಾಖೆ ಸಚಿವರು ನಿಭಾಯಿಸಬೇಕು. ರಾಜ್ಯದ ಶಾಂತಿ ಸುವ್ಯವಸ್ಥೆ ಸಂಪೂರ್ಣ ಹದಗೆಡುತ್ತದೆ. ಕಾರಾಗೃಹಗಳಲ್ಲಿ ಕೈದಿಗಳು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಜೈಲಿನಲ್ಲಿ ಡ್ರಗ್ಸ್​, ಮಾರಕಾಸ್ತ್ರ ಹಾಗೂ ಪಿಸ್ತೂಲುಗಳು ಪತ್ತೆಯಾಗುತ್ತಿವೆ. ಇದು ಕರ್ನಾಟಕಕ್ಕೆ ದೊಡ್ಡ ಕಳಂಕ, ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಸಚಿವ ಪ್ರಿಯಾಂಕ್ ಖರ್ಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು, ಇಲ್ಲದಿದ್ದರೆ ಸಚಿವ ಸ್ಥಾನಕ್ಕೆ ಪ್ರಿಯಾಂಕ್ ರಾಜೀನಾಮೆ ನೀಡಬೇಕು’’ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮೇಕಪ್ ಇಲ್ಲದೇ ಬಂದ ಮೌನಿ ರಾಯ್; ಫೋಟೋ ತೆಗೆಯಲು ಬಂದವರ ಮೇಲೆ ಗರಂ – Kannada News | Actress Mouni Roy loses cool at Paparazzi in Mumbai See Viral Video

ಬಾಲಿವುಡ್‌ನ ಗ್ಲಾಮರಸ್ ನಟಿ ಮೌನಿ ರಾಯ್ ಅವರು ಇತ್ತೀಚೆಗೆ ಮುಂಬೈನಲ್ಲಿ ಪಾಪರಾಜಿಗಳ (Paparazzi) ವರ್ತನೆಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕಾರಿನೊಳಗೆ ಕುಳಿತಿದ್ದರೂ ಬಿಡದೇ ಕ್ಯಾಮೆರಾ ಹಿಡಿದು ಬೆನ್ನತ್ತಿದ ಫೋಟೋಗ್ರಾಫರ್‌ಗಳ ವಿರುದ್ಧ ನಟಿ ತೀವ್ರವಾಗಿ ಕಿಡಿಕಾರಿದ್ದು, ‘ವಿಡಿಯೋ ಮಾಡುವುದನ್ನು ನಿಲ್ಲಿಸಿ’ ಎಂದು ರೊಚ್ಚಿಗೆದ್ದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಮಂಗಳವಾರ (ಜುಲೈ 14) ರಾತ್ರಿ ಮುಂಬೈನ ಬಾಂದ್ರಾದಲ್ಲಿರುವ ರೆಸ್ಟೋರೆಂಟ್‌ ಒಂದರಿಂದ ನಟಿ ಮೌನಿ ರಾಯ್ (Mouni Roy) ಅವರು ತಮ್ಮ ಆಪ್ತ ಗೆಳತಿ, ನಟಿ ಅನುಷಾ ದಾಂಡೇಕರ್ ಅವರೊಂದಿಗೆ ಹೊರಬಂದಾಗ ಈ ಘಟನೆ ನಡೆದಿದೆ.

ಮೌನಿ ರಾಯ್ ಕೋಪಕ್ಕೆ ಕಾರಣ ಏನು?

ರೆಸ್ಟೋರೆಂಟ್‌ನಿಂದ ಹೊರಬರುತ್ತಿದ್ದಂತೆ ಪಾಪರಾಜಿಗಳು ಮೌನಿ ರಾಯ್ ಅವರನ್ನು ಮುತ್ತಿಕೊಂಡಿದ್ದಾರೆ. ಆರಂಭದಲ್ಲಿ ನಟಿ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನೆ ತಮ್ಮ ಕಾರಿನತ್ತ ಹೆಜ್ಜೆ ಹಾಕಿದ್ದಾರೆ. ಆದರೆ, ಮೌನಿ ಕಾರಿನೊಳಗೆ ಹೋಗಿ ಕುಳಿತ ಮೇಲೂ ಫೋಟೋಗ್ರಾಫರ್‌ಗಳು ವಿಡಿಯೋ ಮಾಡುವುದನ್ನು ಮತ್ತು ಫೋಟೋ ಕ್ಲಿಕ್ಕಿಸುವುದನ್ನು ನಿಲ್ಲಿಸಿಲ್ಲ. ಕಾರಿನ ಗಾಜಿನ ಹತ್ತಿರವೇ ಕ್ಯಾಮೆರಾಗಳನ್ನು ತಂದು ತೀರಾ ಮುಜುಗರ ಉಂಟುಮಾಡಿದ್ದಾರೆ.

‘ಬಂದ್ ಕರೋ.. ಬಂದ್ ಕರೋ’

ಇದರಿಂದ ತೀವ್ರ ಅಸಮಾಧಾನಗೊಂಡ ಮೌನಿ ರಾಯ್, ಕಾರಿನೊಳಗಿನಿಂದಲೇ ಸಿಟ್ಟಿನಿಂದ ‘ಬಂದ್ ಕರೋ.. ಬಂದ್ ಕರೋ’ (ನಿಲ್ಲಿಸಿ) ಎಂದು ಪದೇ ಪದೇ ಗದರಿದ್ದಾರೆ. ಅವರು ಎಷ್ಟು ವಿನಂತಿಸಿದರೂ ಪಾಪರಾಜಿಗಳು ವಿಡಿಯೋ ಮಾಡುವುದನ್ನು ಮುಂದುವರಿಸಿದ್ದಾರೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಅವರ ಗೆಳತಿ ಅನುಷಾ ದಾಂಡೇಕರ್, ಕ್ಯಾಮೆರಾ ಆಫ್ ಮಾಡುವಂತೆ ಕೈ ಸನ್ನೆಯ ಮೂಲಕ ಫೋಟೋಗ್ರಾಫರ್‌ಗಳಿಗೆ ವಿನಂತಿಸಿ, ಮೌನಿ ಅವರನ್ನು ಸಮಾಧಾನಪಡಿಸಿದ್ದಾರೆ. ಆ ನಂತರ ಕಾರು ಅಲ್ಲಿಂದ ಹೊರಟುಹೋಗಿದೆ.

ಇದನ್ನೂ ಓದಿ: ‘ನಾನು ಸಲಿಂಗಿ ಅಲ್ಲ’: ದಿಶಾ ಪಟಾನಿ ಜೊತೆಗಿನ ಸಂಬಂಧಕ್ಕೆ ಮೌನಿ ರಾಯ್ ಸ್ಪಷ್ಟನೆ

ಮೌನಿ ರಾಯ್ ಸಿನಿಮಾ ಅಪ್​ಡೇಟ್:

ಮೌನಿ ರಾಯ್ ಇತ್ತೀಚೆಗೆ ವರುಣ್ ಧವನ್ ಅಭಿನಯದ, ಡೇವಿಡ್ ಧವನ್ ನಿರ್ದೇಶನದ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಚಿತ್ರದ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪೂಜಾ ಹೆಗ್ಡೆ ಮತ್ತು ಮೃಣಾಲ್ ಠಾಕೂರ್ ಕೂಡ ನಟಿಸಿದ್ದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಇದರ ಹೊರತಾಗಿ ಅಮೆಜಾನ್ ಎಂಎಕ್ಸ್ ಪ್ಲೇಯರ್‌ನ ‘ಅಬ್ ಹೋಗಾ ಹಿಸಾಬ್’ ವೆಬ್ ಸರಣಿ ಹಾಗೂ ಸಂಜಯ್ ದತ್ ಜೊತೆಗಿನ ‘ದಿ ಭೂತ್ನಿ’ ಚಿತ್ರದಲ್ಲೂ ಮೌನಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version