ಶುಕ್ರವಾರದ ಚಂದ್ರ ದರ್ಶನ ಹಾಗೂ ಮಹಾಲಕ್ಷ್ಮಿ ಯೋಗ: ಯಾರಿಗೆ ಧನಲಾಭ? – Kannada News | Zodiac Sign Effects: Dr. Basavaraj Guruji Presents Daily Horoscope for 14 08 2026

ಬೆಂಗಳೂರು, ಆ.14: ಪ್ರಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ಆಗಸ್ಟ್ 14, 2026ರ ಶುಕ್ರವಾರದ ದ್ವಾದಶ ರಾಶಿಗಳ ದೈನಂದಿನ ಫಲಾಫಲಗಳ ಬಗ್ಗೆ ಹೇಳಿದ್ದಾರೆ. ಈ ದಿನವು ಶುಕ್ರವಾರವಾಗಿದ್ದು, ಸಾಕ್ಷಾತ್ ಮಹಾಲಕ್ಷ್ಮಿ ಮತ್ತು ಅಷ್ಟ ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಲು ಸೂಕ್ತವಾದ ಶುಭ ದಿನವಾಗಿದೆ. ಚಂದ್ರ ದರ್ಶನವೂ ಸಹ ಬಹಳ ಶುಭಕರವಾದದ್ದು. ಇಂದು ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ಸಿಂಹ ರಾಶಿಯ ಮಖಾ ನಕ್ಷತ್ರದಲ್ಲಿ ಸಂಚರಿಸುತ್ತಾನೆ. ಡಾ. ಗುರೂಜಿ ಅವರು ಪ್ರತಿ ರಾಶಿಯವರಿಗೂ ಆರ್ಥಿಕ, ಕೌಟುಂಬಿಕ, ವೃತ್ತಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ. ಕೆಲವು ರಾಶಿಗಳಿಗೆ ಆದಾಯದಲ್ಲಿ ಏರಿಕೆ, ಹೊಸ ಅವಕಾಶಗಳು ಮತ್ತು ಸುಧಾರಿತ ಆರೋಗ್ಯದಂತಹ ಶುಭಫಲಗಳು ಕಾದಿವೆ. ಇನ್ನು ಕೆಲವು ರಾಶಿಗಳಿಗೆ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ, ಅನಗತ್ಯ ಕಲಹಗಳು ಮತ್ತು ಪ್ರಯಾಣದಲ್ಲಿ ತೊಂದರೆಗಳ ಸಾಧ್ಯತೆ ಇರುತ್ತದೆ. ಪ್ರತಿ ರಾಶಿಯವರಿಗೂ ಅದೃಷ್ಟದ ಬಣ್ಣ, ಅದೃಷ್ಟದ ಸಂಖ್ಯೆ ಮತ್ತು ಪಠಿಸಬೇಕಾದ ಮಂತ್ರಗಳನ್ನು ಸೂಚಿಸಲಾಗಿದ್ದು, ಸವಾಲುಗಳನ್ನು ನಿವಾರಿಸಿ ಶುಭ ಫಲಗಳನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ. ಕುಂಕುಮ, ಹೂವು ಅಥವಾ ದೀಪಕ್ಕೆ ಎಣ್ಣೆಯನ್ನು ದೇವರಿಗೆ ಅರ್ಪಿಸುವ ಮೂಲಕ ಸಂಕಲ್ಪಗಳು ಈಡೇರಬಹುದು ಎಂದು ಗುರೂಜಿ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪರಪ್ಪನ ಅಗ್ರಹಾರದಲ್ಲಿ ಅಕ್ರಮ: ಕಾರಾಗೃಹ ಅಧಿಕಾರಿಗಳ ದೂರಿನಂತೆ ಮತ್ತೊಂದು ಎಫ್‌ಐಆರ್ ದಾಖಲು – Kannada News | Contraband Discovery in Bengaluru Prison: Second FIR Lodged Following CCB and Jail Authority Operations

ಬೆಂಗಳೂರು, ಆ.14: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಫೋನ್‌ಗಳು ಮತ್ತು ಪೆನ್ ಡ್ರೈವ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಆಗಸ್ಟ್ 11ರ ರಾತ್ರಿ ಸಿಸಿಬಿ ಪೊಲೀಸರು ಜೈಲಿನ ಮೇಲೆ ದಾಳಿ ನಡೆಸಿದ್ದರು. ಸಿಸಿಬಿ ದಾಳಿಯ ನಂತರ ಜೈಲು ಅಧಿಕಾರಿಗಳು ಕೂಡ ಮತ್ತೊಂದು ದಾಳಿ ನಡೆಸಿದ್ದರು. ಈ ಎರಡು ದಾಳಿಗಳ ವೇಳೆ ಜೈಲಿನ ಆವರಣದಲ್ಲಿ ಎರಡು ಮೊಬೈಲ್ ಫೋನ್‌ಗಳು ಮತ್ತು 32 GB ಸಾಮರ್ಥ್ಯದ ಒಂದು ಪೆನ್ ಡ್ರೈವ್ ಪತ್ತೆಯಾಗಿವೆ. ಜೈಲಿನ ಆವರಣದಲ್ಲಿ ಅಕ್ರಮ ವಸ್ತುಗಳು ಪತ್ತೆಯಾದ ಬಗ್ಗೆ ಕಾರಾಗೃಹದ ಪ್ರಭಾರ ಅಧೀಕ್ಷಕರು ನೀಡಿದ ದೂರಿನ ಅನ್ವಯ ಹೊಸ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಎಫ್‌ಐಆರ್ ದಾಖಲಾಗಿದ್ದು, ಇದು ಎರಡನೇ ಎಫ್‌ಐಆರ್ ಆಗಿದೆ. ಈ ಘಟನೆ ಜೈಲುಗಳಲ್ಲಿನ ಭದ್ರತಾ ಲೋಪಗಳು ಮತ್ತು ಅಕ್ರಮ ಚಟುವಟಿಕೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನಭವಿಷ್ಯ: ಇಂದು ಈ ರಾಶಿಯವರಿಹೆ ಸ್ವಯಂಕೃತ ಅಪರಾಧದಿಂದ ಶಿಕ್ಷೆ.‌‌.. – Kannada News | Daily Horoscope for August 14, 2026: Dakshinayana Greeshma season, Shravana Masa shukla Paksha Friday astrology

ಮೇಷ ರಾಶಿ:

ಮನಸ್ಸಿನ ಚಾಂಚಲ್ಯವನ್ನು ಕಡಿಮೆ‌ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಇಂದು ನೀವು ಕೆಲವು ಸಂದರ್ಭದಲ್ಲಿ ಮೌನ ವಹಿಸುವುದು ಉತ್ತಮ. ಬಳಕೆಯಲ್ಲಿ ಇಲ್ಲದೇ ನಿಮ್ಮ ಸಂಬಂಧಗಳು ಸಡಿಲಾಗಬಹುದು. ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಯಾಮಾರುವ ಸನ್ನಿವೇಶ ಬರಬಹುದು. ತಾವಾಡಬೇಕಾದ ಮಾತನ್ನು ನಿಮ್ಮಿಂದ ಆಡಿಸುವರು. ನಿಮ್ಮ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿ ಅನುಕೂಲತೆಯು ಕೆಲವು ಸಂದರ್ಭಗಳಲ್ಲಿ ಸಿಕ್ಕಿ ಸಂತೋಷವಾಗುವುದು.

ವೃಷಭ ರಾಶಿ:

ನೀವು ಸಮಸ್ಯೆಗೆ ಪರಿಹಾರ ಹುಡುಕಲು ಹೋಗಿ ಇನ್ನಷ್ಟು ಸಮಸ್ಯೆಯನ್ನು ಮಾಡಿಕೊಳ್ಳುವಿರಿ. ಆದರೆ ನಿಮ್ಮ ನಿರ್ಧಾರವು ಅಚಲವಾಗಿರಲಿ. ಎಂದೋ ಆರಂಭವಾದ ಕಾರ್ಯವು ಕುಂಟುತ್ತಾ ಸಾಗವುದು. ವಿರುದ್ಧ ಪ್ರಯತ್ನದಿಂದ ನಿಮಗೆ ಶ್ರಮವೇ ಅಧಿಕ. ಆದರೂ ಅದರಲ್ಲಿಯೇ ಆಸಕ್ತಿ ಹೆಚ್ಚು. ಜಾಡ್ಯವನ್ನು ದೂರ ಮಾಡಿಕೊಳ್ಳುವತ್ತ ಗಮನವಿರಲಿದೆ. ಹೆಚ್ಚು ಸಮಯವನ್ನು ಕುಟುಂಬದೊಂದಿಗೆ ಕಳೆಯುವಿರಿ.

ಮಿಥುನ ರಾಶಿ:

ಗುರುವಿನ ಅಥವಾ ಗುರುಸದೃಶರ ಸನ್ನಿಧಿಯನ್ನು ನೀವು ಇಂದು ಬಯಸುವಿರಿ. ದೇವರಿಗೆ ಸಂಬಂಧಿಸಿದ ವಿಚಾರದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಬಹುದು. ಕೃಷಿಕರೆ ಆತಂಕ ಬರುವ ಸಂಭವ ಇದೆ. ಸ್ನೇಹಿತರು ಜಗಳವಾಡಿ ನಿಮ್ಮನ್ನು ಬಿಟ್ಟುಹೋಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತೊಡಗಲು ಕಷ್ಟಪಡುವರು. ಮನೆಯಲ್ಲಿ ಸಂತೋಷಕೂಟವು ನಿರ್ಮಾಣವಾಗುವುದು. ಶ್ರಮಕ್ಕೆ ಯೋಗ್ಯವಾದ ಫಲವು ಲಭಿಸುವುದು. ಅಪರೂಪದ ವಸ್ತುವು ನಿಮಗೆ ಲಾಭವಾಗಲಿದೆ.

ಕರ್ಕಾಟಕ ರಾಶಿ:

ಬೇರೆಯವರಿಗೆ ಅಪಕೀರ್ತಿ ತರಲು ಹೋಗಿ ನಿಮ್ಮ ಯಶಸ್ಸನ್ನೇ ಹಾಳುಮಾಡಿಕೊಳ್ಳಬೇಕಾಗುವುದು. ಇಂದ್ರಿಯ ಸಂಯಮವನ್ನು ಸಾಧಿಸುವುದು ಕಷ್ಟವಾದೀತು. ಒತ್ತಾಯಕ್ಕೆ ಮಣಿದು ನಿಮ್ಮ ಪೂರ್ವಯೋಜನೆಯನ್ನು ಬದಲಿಸುವಿರಿ. ಏನನ್ನೋ ಸಾಧಿಸಿದವರಂತೆ ಬೀಗುವುದು ಬೇಡ. ದೊಡ್ಡವರ ವಿಚಾರದಲ್ಲಿ ಮೂಗುತೂರಿಸುವಿರಿ. ಆತ್ಮವಿಶ್ವಾಸದ ಕೊರತೆ ಎದ್ದು ಕಾಣುವುದು. ಆಕಸ್ಮಿಕ ವಿಚಾರಕ್ಕೆ ಗಲಿಬಿಲಿಯಾಗುವಿರಿ.

ಸಿಂಹ ರಾಶಿ:

ಮಕ್ಕಳಿಂದ ನಿಮಗೆ ಶುಭವಾರ್ತಯನ್ನು ನಿರೀಕ್ಷಿಸಿ. ಸರ್ಕಾರದಿಂದ ಆಗಬೇಕಾದ ಕೆಲಸವನ್ನು ನೀವು ಮಾಡಿಸಿಕೊಳ್ಳಲು ನೀವು ಶ್ರಮಪಡಬೇಕಾದೀತು. ಪ್ರಭಾವಿ ವ್ಯಕ್ತಿಗಳ ಸಂಪರ್ಕವಾಗಲಿದೆ. ವ್ಯಕ್ತಿಗತ ಕೋಪವನ್ನು ಬಿಟ್ಟು ವಿಷಯಕ್ಕೆ ಬೇಕಾದ ಮಹತ್ತ್ವವನ್ನು ನೀಡುವಿರಿ. ನಿಮ್ಮದಲ್ಲದ ವಸ್ತುವನ್ನು ಬಯಸಿ ಪಡೆದುಕೊಳ್ಳಲು ಕಷ್ಟಪಡುವಿರಿ. ಅನ್ನಿಸಿದ್ದನ್ನು ಹೇಳುವ ರೀತಿಯಲ್ಲಿ ಹೇಳಿ. ಇಂದು ನಿಮ್ಮವರ ಬಗ್ಗೆಯೇ ಯೋಚಿಸಲು ಸಮಯ ಸಿಗದು.

ಕನ್ಯಾ ರಾಶಿ:

ಅವಮಾನದವನ್ನು ನೀವು ಅನುಭವಿಸುವ ಪ್ರಸಂಗವೂ ಬರಬಹುದು. ಪ್ರತ್ಯೇಕವಾಗಿ ನಿಮ್ಮನ್ನು ಗುರುತಿಸಿಕೊಳ್ಳಲು ಬಯಸುವಿರಿ. ನಿಮ್ಮ ಮಾತುಗಳು ನಿಮಗೆ ತಿರುಗುಬಾಣವಾಗಿ ಬರಬಹುದು.‌ ಸಂಗಾತಿಯು ಉದ್ಯಮದಲ್ಲಿ ಪ್ರವೇಶ ಮಾಡಬಹುದು. ಆಪತ್ಕಾಲದ ಸಂಪತ್ತನ್ನು ಇಂದು ಬಳಸಿಕೊಳ್ಳುವಿರಿ. ನಷ್ಟವಾದುದರ ಅನುಭವವು ನಿಮಗಾಗುವುದು. ಈ ಕಾರಣಕ್ಕೆ ನಿಮಗೆ ಕೆಲಸದ ಪ್ರದೇಶದಲ್ಲಿ ಅಸ್ಥಿರತೆ ಇರುತ್ತದೆ. ಕಷ್ಟದ ಫಲವು ನಿಮಗೆ ಇಂದು ಗೊತ್ತಾಗಲಿದೆ.

ತುಲಾ ರಾಶಿ:

ನಿಮ್ಮ ಚಂಚಲವಾದ ಮನಸ್ಸನ್ನು ನಿಗ್ರಹಿಸಲು ನಿಮಗೆ ಕಷ್ಟವಾದೀತು. ಕೃಷಿಕರಿಗೆ ಹೆಚ್ಚಿನ ಆದಾಯವು ಬರಬಹುದು. ಭೂಮಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಕಲಾವಿದರಿಗೆ ಪ್ರೋತ್ಸಾಹ ಸಿಗದೇ ಬೇಸರ ಮಾಡಿಕೊಳ್ಳಬೇಕಾಗಬಹುದು. ಸುಪ್ತಪ್ರಜ್ಞೆ ನಿಮ್ಮನ್ನು ಒಳಿತಿನ ಕಡೆಗೆ ಒಯ್ಯುವುದು. ಏಕಾಂತದಲ್ಲಿ ಸಮಯವನ್ನು ಕಳೆಯುವಿರಿ. ಉದ್ಯೋಗದಲ್ಲಿ ಅಕಸ್ಮಾತ್ ಬದಲಾವಣೆಗಳು ಆಗಬಹುದು. ನಿಮ್ಮ ವಾಹನದಿಂದ ನಿಮಗೆ ಅಲ್ಪ ಲಾಭವಾಗುವುದು. ಆಪ್ತರ ಭೇಟಿಯು ಬಹಳ ದಿನಗಳ ಅನಂತರ ಆಗಬಹುದು.

ವೃಶ್ಚಿಕ ರಾಶಿ:

ನೀವು ಎಲ್ಲರ ವಿರೋಧದ ನಡುವೆಯೂ ನೀವು ಮಾಡಬೇಕಾದುದನ್ನು ಮಾಡುವಿರಿ. ಹೊಸ ಪ್ರೇಮಾಂಕುರವು ಹುಟ್ಟಿಕೊಳ್ಳಲಿದೆ. ಮನ ಬಂದಂತೆ ಮಾತನಾಡುವುದಕ್ಕೆ ಕಡಿವಾಣ ಬೀಳಲಿದೆ. ಇಂದಿನ ಕೆಲಸವನ್ನು ಬಹಳ ಶ್ರಮದಿಂದ ಮಾಡುವಿರಿ. ಸಹಿಸಿಕೊಳ್ಳಲಾಗದ ನೋವನ್ನು ನೀವು ಅನುಭವಿಸುವಿರಿ. ತಂದೆಯ ಮಾತನ್ನು ಗೌರವಿಸುವಿರಿ. ನಿಜ ಸಂಗತಿಗಳನ್ನು ಯಾರಿಗೂ ಹೇಳದೇ ಮುಚ್ಚಿಡುವಿರಿ. ಭೂ ವ್ಯವಹಾರದಲ್ಲಿ ಯಶಸ್ಸು ಸಿಗುವುದು.

ಧನು ರಾಶಿ:

ನಿರುದ್ಯೋಗವು ನಿಮ್ಮನ್ನು ಉದ್ವೇಗಕ್ಕೆ ತಳ್ಳಬಹುದು. ಇಂದು ಸಭೆ ಸಮಾರಂಭಗಳಿಗೆ ಹೋಗುವ ಸಾಧ್ಯತೆ ಇದೆ. ಅನ್ಯರ ಮೂಲಕ ಇಂದು ಮಾಡಿಸಿದ ಎಲ್ಲ ಕೆಲಸಗಳು ಹಾಳಾಗಬಹುದು. ಪರರ ಸುಖದಿಂದ ಅಸೂಯೆಯಾಗಲಿದೆ. ಸ್ತ್ರೀಯರು ನೋವನ್ನು ಅನುಭವಿಸಬೇಕಾದೀತು. ಸಹೋದ್ಯೋಗಿಗಳು ನಿಮ್ಮ ಸಹಾಯಕ್ಕೆಂದು ಬರಬಹುದು. ನಿಮಗೆ ಆಗಬೇಕಾದ ಕಾರ್ಯಕ್ಕೆ ಹಣವೂ ಓಡಾಟವೂ ಅತಿಯಾಯಿತು ಎಂದು ಅನ್ನಿಸುವುದು. ವಿದ್ಯಾಭ್ಯಾಸದಲ್ಲಾದ ಪ್ರಗತಿಯು ಖುಷಿ ಕೊಡುವುದು.

ಮಕರ ರಾಶಿ:

ಉದ್ಯಮದಲ್ಲಿ ಇರುವ ದೌರ್ಬಲ್ಯವನ್ನು ಸರಿ ಮಾಡಿಕೊಳ್ಳಿ. ಅದಕ್ಕಾಗಿ ದೇಹವನ್ನು ದೃಢವಾಗಿಸಿಕೊಳ್ಳುವ ಕುರಿತು ಪ್ರಯತ್ನಿಸುವಿರಿ. ಬೇಡದ ಕಡೆ ಹಣವನ್ನು ವ್ಯಯಿಸುವುದು ಮನೆಯವರಿಗೆ ಇಷ್ಟವಾಗದು. ದಿನದಿಂದ ದಿನಕ್ಕೆ ಸಾಮರ್ಥ್ಯ ಬೆಳೆಯುವತ್ತ ಗಮನವಿರಲಿ. ಉಳಿತಾಯ ಮಾಡದೇ ಖರ್ಚು ಮಾಡಿದ್ದಕ್ಕೆ ಇಂದು ಪಶ್ಚಾತ್ತಾಪ ಪಡಬೇಕಾದೀತು. ವಿದ್ಯಾರ್ಥಿಗಳಿಂದ ಸಮ್ಮಾನ ದೊರೆಯುವುದು. ಏನನ್ನಾದರೂ ಮಾತನಾಡಿ ಸಿಕ್ಕಿಬೀಳುವಿರಿ.

ಕುಂಭ ರಾಶಿ:

ನಿಮ್ಮ ಶತ್ರುಗಳು ರಾಜಿಯಾಗಲು ಇಂದು ಬರಬಹುದು. ಹಿರಿಯರ ಮಧ್ಯಸ್ಥಿಕೆಯಲ್ಲಿ ಕಾರ್ಯಗಳು ಮುನ್ನಡೆದರೆ ಒಳ್ಳೆಯದು. ದೂರದಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ವೃತ್ತಿಯು ಸಾಕೆನಿಸಬಹುದು. ಅಸಧುನಿಕ ಉಪಕರಣಗಳ ಬಳಕೆ ಹೆಚ್ಚಾಗುವುದು. ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ನೀವು ಇಂದು ಉದ್ಯಮಿಗಳ ಜೊತೆ ಮುಖಾಖಿಯಾಗಲಿದ್ದೀರಿ. ಬಂಧುಗಳ ವಿಚಾರಕ್ಕೆ ಆರ್ಥಿಕನಷ್ಟವಾಗುವುದು. ಸಂಗಾತಿಯ ಬಗ್ಗೆ ಪೂರ್ವಾಗ್ರಹವು ಇರುವ ಕಾರಣ ಯಾವ ಇಷ್ಟವಾಗದು.

ಮೀನ ರಾಶಿ:

ನೀವು ದಿನದ ಆರಂಭದಿಂದ ಕೊನೆಯ ತನಕ ಉತ್ಸಾಹವಿರುವುದು. ಗೊತ್ತಿಲ್ಲ ವಿಚಾರಗಳನ್ನು ಅನುಭವಿಗಳಿಂದ, ಹಿರಿಯರಿಂದ ತಿಳಿದುಕೊಳ್ಳಲು ಪ್ರಯತ್ನಿಸಿ. ನಿಮ್ಮನ್ನು ನೀವು ಬುದ್ಧಿವಂತರೆಂದು ತಿಳಿದುಕೊಂಡಿದ್ದರೆ ಅದು ಸುಳ್ಳಾಗಬಹುದು. ಉದ್ಯಮವನ್ನು ವಿಸ್ತರಿಸುವ ಬಗ್ಗೆ ಸ್ಥಳ ಪರಿಶೀಲನೆ ಮಾಡುವಿರಿ. ಇನ್ನೊಬ್ಬರ ಹಿತಚಿಂತನೆಯಲ್ಲಿ ನೀವು ಭಾಗಿಯಾಗುವಿರಿ. ಕಳೆದ ಸಮಯದ ಮೆಲುಕನ್ನು ನೀವು ಹಾಕುವಿರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಆಶ್ಲೇಷಾ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ : ಪರಿಘ, ಕರಣ : ವಣಿಜ, ಸೂರ್ಯೋದಯ – 06 – 08 am, ಸೂರ್ಯಾಸ್ತ – 06 – 40 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:50 – 12:24, ಯಮಗಂಡ ಕಾಲ 15:32 – 17:06, ಗುಳಿಕ ಕಾಲ 07:42 – 09:16

-ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:03 am, Fri, 14 August 26

Source link

IND vs SL: ಟೆಸ್ಟ್ ಸರಣಿಯಲ್ಲಿ ಶುಭ್​ಮನ್ ಗಿಲ್ ನಿರ್ಮಿಸಲಿರುವ ದಾಖಲೆಗಳಿವು – Kannada News | Shubman Gill’s Historic Chance: First Indian Captain to Score 1000 WTC Runs and 3000 Overall

ಗಿಲ್ ಪ್ರಸ್ತುತ ಡಬ್ಲ್ಯೂಟಿಸಿಯಲ್ಲಿ (2025-2027) 950 ರನ್ ಗಳಿಸಿದ್ದಾರೆ. ಅವರು ಇನ್ನೂ 40 ರನ್ ಗಳಿಸಿದರೆ, ಒಂದೇ ಡಬ್ಲ್ಯೂಟಿಸಿ ಆವೃತ್ತಿಯಲ್ಲಿ ನಾಯಕನಾಗಿ 1,000 ರನ್ ಗಳಿಸಿದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಕೊಹ್ಲಿ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, 2019-2021ರ ಮೊದಲ ಸೈಕಲ್‌ನಲ್ಲಿ ಕೊಹ್ಲಿ 934 ರನ್ ಕಲೆಹಾಕಿದ್ದರು. ಇದೀಗ ಗಿಲ್​ಗೆ 1000 ರನ್​ಗಳ ಗಡಿ ದಾಟುವ ಅವಕಾಶವಿದೆ(PC-PTI).

Source link

ಶ್ರೀನಗರ-ಲೇಹ್ ಹೈವೇಯಲ್ಲಿ ಭಾರಿ ಮೇಘಸ್ಫೋಟ; ಭೂಕುಸಿತದ ಭೀಕರತೆ ಹೀಗಿತ್ತು – Kannada News | Massive cloudburst in Srinagar Leh highway landslide Video Viral

ಶ್ರೀನಗರ, ಆಗಸ್ಟ್ 13: ಜಮ್ಮು ಕಾಶ್ಮೀರದ ಸೋನಮಾರ್ಗ ಸಮೀಪದ ಝೋಜಿಲಾ ಪಾಸ್ ಬಳಿಯ ರಂಗಾ ಮೋಡ್ ಪ್ರದೇಶದಲ್ಲಿ ಇಂದು ಭಾರಿ ಮೇಘಸ್ಫೋಟ (Cloudburst) ಸಂಭವಿಸಿದ್ದು, ತಕ್ಷಣವೇ ಭೂಕುಸಿತ, ಪ್ರವಾಹ ಉಂಟಾಗಿ ಸ್ಥಳೀಯ ನದಿಗಳಲ್ಲಿ ನೀರಿನ ಮಟ್ಟ ದಿಢೀರ್ ಏರಿಕೆಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನದಿ ತಟಗಳು ಹಾಗೂ ನೀರಿನ ಕಾಲುವೆಗಳ ಬಳಿ ತೆರಳದಂತೆ ಸ್ಥಳೀಯರಿಗೆ ಆಡಳಿತ ಸೂಚಿಸಿದೆ. ಈ ಮೇಘಸ್ಫೋಟದಿಂದಾಗಿ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯ ಝೋಜಿಲಾ ಪಾಸ್‌ನ ರಂಗಾ ಮೋರ್ ವಿಭಾಗದ ಬಳಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದ್ದು, ಎರಡೂ ಪ್ರದೇಶಗಳ ನಡುವಿನ ವಾಹನ ಸಂಚಾರ ಸಂಪೂರ್ಣವಾಗಿ ಕಡಿತಗೊಂಡಿದೆ.

ಝೋಜಿಲಾ ಪ್ರದೇಶದ ಎತ್ತರದ ಪ್ರದೇಶಗಳಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ ರಂಗಾ ಮೋಡ್ ಬಳಿ ಭಾರಿ ಪ್ರಮಾಣದ ಕೆಸರು ಮತ್ತು ಮಣ್ಣು ಸಂಗ್ರಹಗೊಂಡಿದ್ದು, ಲಡಾಖ್ ಮತ್ತು ಕಾಶ್ಮೀರವನ್ನು ಸಂಪರ್ಕಿಸುವ ಈ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಕಡಿತಗೊಂಡಿದೆ. ರಸ್ತೆಯನ್ನು ತೆರವುಗೊಳಿಸಿ ಆದಷ್ಟು ಬೇಗ ಸಂಚಾರವನ್ನು ಯಥಾಸ್ಥಿತಿಗೆ ತರಲು ಗಡಿ ರಸ್ತೆಗಳ ಸಂಸ್ಥೆಯ ಸಿಬ್ಬಂದಿ ಮತ್ತು ಯಂತ್ರೋಪಕರಣಗಳನ್ನು ತಕ್ಷಣವೇ ಸ್ಥಳಕ್ಕೆ ರವಾನಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭುಜದ ಶಸ್ತ್ರಚಿಕಿತ್ಸೆ ಮುಕ್ತಾಯ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಟ ಜೂನಿಯರ್ ಎನ್‌ಟಿಆರ್ – Kannada News | Jr NTR Discharged from KIMS Hospital after Successful Shoulder Surgery

ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಸಿನಿಮಾದ ಶೂಟಿಂಗ್ ವೇಳೆ ಭುಜಕ್ಕೆ ಗಾಯ ಮಾಡಿಕೊಂಡಿದ್ದ ಟಾಲಿವುಡ್ ನಟ ಜೂನಿಯರ್ ಎನ್‌ಟಿಆರ್ (Jr NTR) ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಗುರುವಾರ (ಆಗಸ್ಟ್ 13) ಆಸ್ಪತ್ರೆಯಿಂದ ಅವರು ಡಿಸ್ಚಾರ್ಜ್ ಆಗಿದ್ದಾರೆ. ವೇಗವಾಗಿ ಚೇತರಿಸಿಕೊಳ್ಳಲು ಅವರು ಇನ್ನು ಕೆಲವು ದಿನಗಳ ಕಾಲ ಪುನಶ್ಚೇತನ (Rehabilitation) ಪ್ರಕ್ರಿಯೆಗೆ ಒಳಗಾಗಲಿದ್ದಾರೆ. ಆಸ್ಪತ್ರೆಯಿಂದ ಹೊರ ಬರುವ ವೇಳೆ ಅವರು ನಗುತ್ತಾ ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಕಿಮ್ಸ್ ಆಸ್ಪತ್ರೆಯಲ್ಲಿ ಜೂನಿಯರ್ ಎನ್‌ಟಿಆರ್ ಅವರಿಗೆ ಆರ್ಥ್ರೋಸ್ಕೊಪಿಕ್ ಶೋಲ್ಡರ್ ಸರ್ಜರಿ ಮಾಡಲಾಗಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾದ ನಂತರ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯೊಂದಿಗೆ ಎನ್‌ಟಿಆರ್ ಫೋಟೋಗೆ ಪೋಸ್ ನೀಡಿದ್ದಾರೆ. ಬಲಗೈಗೆ ಬೆಂಬಲಕ್ಕಾಗಿ ಬ್ಯಾಂಡೇಜ್ ಧರಿಸಿದ್ದ ಅವರು, ಎಡಗೈಯಲ್ಲಿ ಥಂಬ್ಸ್ ಅಪ್ ತೋರಿಸುತ್ತಾ ಮುಗುಳುನಗುತ್ತಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಫೋಟೋ ಹಂಚಿಕೊಂಡಿರುವ ಕಿಮ್ಸ್ ಆಸ್ಪತ್ರೆ, ‘ನಟ ಎನ್‌ಟಿಆರ್ ಅವರಿಗೆ ಡಾ. ಆರ್.ಎ. ಪೂರ್ಣಚಂದ್ರ ತೇಜಸ್ವಿ ಹಾಗೂ ಡಾ. ನಿತಿನ್ ಬೆಜ್ಜಂಕಿ ಅವರ ನೇತೃತ್ವದಲ್ಲಿ ಯಶಸ್ವಿ ಆರ್ಥ್ರೋಸ್ಕೊಪಿಕ್ ಶಸ್ತ್ರಚಿಕಿತ್ಸೆ ನೆರವೇರಿದ್ದು, ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ತಿಳಿಸಲು ಸಂತೋಷವಾಗುತ್ತದೆ’ ಎಂದು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದೆ.

ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಬಿ. ಭಾಸ್ಕರ ರಾವ್ ಅವರು ಎನ್‌ಟಿಆರ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಎನ್‌ಟಿಆರ್ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸುಮಾರು 2ರಿಂದ 3 ತಿಂಗಳು ಸಮಯ ಹಿಡಿಯಲಿದೆ ಎಂದು ಆಸ್ಪತ್ರೆಯ ಹೆಲ್ತ್ ಬುಲೆಟಿನ್ ತಿಳಿಸಿದೆ. ಹಾಗಾಗಿ ಅವರು ಸಿನಿಮಾಗಳ ಶೂಟಿಂಗ್​ನಲ್ಲಿ ಸದ್ಯಕ್ಕೆ ಪಾಲ್ಗೊಳ್ಳಲು ಸಾಧ್ಯವಿಲ್ಲ.

ಇದನ್ನೂ ಓದಿ: ಜೂ ಎನ್​ಟಿಆರ್ ಸಿನಿಮಾ: ಬಿಡುಗಡೆ ತಡೆಯುವುದಾಗಿ ಎಚ್ಚರಿಸಿದ ರಾಜಕಾರಣಿ

ಬುಧವಾರ (ಆಗಸ್ಟ್ 12) ಶಸ್ತ್ರಚಿಕಿತ್ಸೆ ಮುಗಿದ ಬಳಿಕ ತಮಗೆ ಬೆಂಬಲವಾಗಿ ನಿಂತ ಅಭಿಮಾನಿಗಳಿಗೆ ಎನ್‌ಟಿಆರ್ ಧನ್ಯವಾದ ತಿಳಿಸಿದ್ದರು. ‘ನಿಮ್ಮೆಲ್ಲರ ಪ್ರೀತಿ ಮತ್ತು ಪ್ರಾರ್ಥನೆಗಳಿಗೆ ನಾನು ಚಿರಋಣಿ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ನಾನು ಚೇತರಿಸಿಕೊಳ್ಳುತ್ತಿದ್ದೇನೆ. ಕಿಮ್ಸ್ ಆಸ್ಪತ್ರೆಯ ಅದ್ಭುತ ವೈದ್ಯರ ತಂಡಕ್ಕೆ ಧನ್ಯವಾದಗಳು. ನನ್ನ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳ ಬೆಂಬಲ ನನಗೆ ಪ್ರತಿದಿನ ಶಕ್ತಿ ನೀಡುತ್ತದೆ. ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗುತ್ತೇನೆ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕದಲ್ಲಿ ಗುಟ್ಕಾ ಬ್ಯಾನ್ ಬಗ್ಗೆ ಸಚಿವ ಯುಟಿ ಖಾದರ್ ಹೇಳಿದ್ದಿಷ್ಟು – Kannada News | Minister UT Khader Reacts On areca growers Opposed to Gutka Ban In Karnataka

ಬೆಂಗಳೂರು, (ಆಗಸ್ಟ್ 13): ಕರ್ನಾಟಕ ಸರ್ಕಾರವು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯಾದ್ಯಂತ ಗುಟ್ಕಾ ಮತ್ತು ಪಾನ್ ಮಸಾಲಾ ಸೇರಿದಂತೆ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಉತ್ಪನ್ನಗಳ ಮಾರಾಟ ಹಾಗೂ ಬಳಕೆಯನ್ನು ಒಂದು ವರ್ಷದ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಿದೆ. ಗುಟ್ಕಾ ಸೇವನೆಯು ಜೀವಕ್ಕೆ ಅಪಾಯಕಾರಿ. ಹೀಗಾಗಿ ತಂಬಾಕು ಮತ್ತು ನಿಕೋಟಿನ್ ಮಿಶ್ರಿತ ಗುಟ್ಕಾ ಹಾಗೂ ಪಾನ್ ಮಸಾಲಾಗಳ ತಯಾರಿಕೆ, ಸಂಗ್ರಹಣೆ, ಸಾಗಾಟ ಮತ್ತು ಮಾರಾಟವನ್ನು ಸಂಪೂರ್ಣವಾಗಿ ತಡೆಹಿಡಿಯಲಾಗಿದೆ. ಆದ್ರೆ, ಇದಕ್ಕೆ ಅಡಿಕೆ ಬೆಳೆಗಾರರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಸಂಬಂಧ ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ನಿಯೋಗ ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರ ಮೇಲಾಗುವ ಪರಿಣಾಮಗಳನ್ನು ಗಮನಕ್ಕೆ ತಂದಿದ್ದಾರೆ.

ಇನ್ನು ಈ ಬಗ್ಗೆ ಆರೋಗ್ಯ ಸಚಿವ ಯುಟಿ ಖಾದರ್ ಪ್ರತಿಕ್ರಿಯಿಸಿದ್ದು, ಮಸಾಲಾ ಜೊತೆಯಲ್ಲಿ ನಿಕೋಟಿನ್ ಇರಬಾರದು. ಆದರೂ ಮಸಾಲಾ ಜೊತೆ ಮಿಕ್ಸ್‌ ಮಾಡಿ ನಿಕೋಟಿನ್ ಮಾರಾಟ ಮಾಡಲಾಗುತ್ತಿದೆ. ಇದು ನಮ್ಮ ಗಮನಕ್ಕೆ ಬಂದಿದೆ, ಹೀಗಾಗಿ ನಿಷೇಧಕ್ಕೆ ಆದೇಶ ನೀಡಿದ್ದು, ಮುಂದೆ ಯಾವ ರೀತಿ ನಿಯಮ ರೂಪಿಸಬೇಕೆಂದು ನಿರ್ಧರಿಸ್ತೇವೆ. ಇನ್ನು ಅಡಕೆ ಮಾರಾಟಗಾರರಿಗೆ ತೊಂದರೆ ಆಗದ ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ನೋಡಿ: ಕರ್ನಾಟಕದಲ್ಲಿ ಗುಟ್ಕಾ-ತಂಬಾಕು ಬ್ಯಾನ್ ಗೆ ವಿರೋಧ: ಸಿಎಂ ಭೇಟಿಯಾದ ಆರಗ ಜ್ಞಾನೇಂದ್ರ ನೇತೃತ್ವದ ನಿಯೋಗ

Source link

ಸಾರ್ವಜನಿಕ ಸ್ಥಳದಲ್ಲಿ ಅನುಮತಿ ಪಡೆದೇ ಕಾರ್ಯಕ್ರಮ ಮಾಡ್ಬೇಕು: ಕಾಯ್ದೆ ಬಗ್ಗೆ ಸಿಎಂ ಸ್ಪಷ್ಟನೆ – Kannada News | Events in Public Places Require Prior Permission, CM DK Shivakumar Clarifies

ಬೆಂಗಳೂರು, ಆಗಸ್ಟ್​​ 13: ‘ಯಾವುದೇ ರಸ್ತೆಯಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕಾದರೆ ಕಡ್ಡಾಯವಾಗಿ ಪೂರ್ವಾನುಮತಿ ಮತ್ತು ಸೂಕ್ತ ದಾಖಲೆಗಳನ್ನು ಹೊಂದಿರಬೇಕು’ ಎಂದು ಸಿಎಂ ಡಿಕೆ ಶಿವಕುಮಾರ್​ ಹೇಳಿದ್ದಾರೆ. ಸಾರ್ವಜನಿಕ ಪ್ರದೇಶ, ಪ್ರವೇಶ ನಿಯಂತ್ರಣ ವಿಧೇಯಕ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಯಾರೇ ಆಗಲಿ ಅನುಮತಿ ತೆಗೆದುಕೊಂಡು ಕಾರ್ಯಕ್ರಮ ಮಾಡಬೇಕು. ಬೆಂಗಳೂರು ಅಥವಾ ಎಲ್ಲೇ ಆಗಲಿ, ಎಲ್ಲಾದರೂ ಕಾರ್ಯಕ್ರಮ ಮಾಡಬೇಕಾದರೆ ಅನುಮತಿ ತೆಗೆದುಕೊಳ್ಳಬೇಕು. ವಿಧಾನಸೌಧದಲ್ಲೂ ಕೃಷ್ಣಬೈರೇಗೌಡರು ಕಾರ್ಯಕ್ರಮ ಮಾಡುತ್ತಿದ್ದಾರೆ, ಅವರೂ ಪರ್ಮಿಷನ್ ತೆಗೆದುಕೊಂಡೇ ಮಾಡುತ್ತಿದ್ದಾರೆ ಅಲ್ವಾ, ಹಾಗೆಯೇ ಎಲ್ಲರೂ ಅನುಮತಿ ತೆಗೆದುಕೊಳ್ಳಬೇಕು’ ಎಂದು ಹೇಳಿದ್ದಾರೆ.

ವರದಿ: ಈರಣ್ಣ ಬಸವ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಉತ್ತರಾಖಂಡದ ಚಮೋಲಿಯಲ್ಲಿ ಟನಲ್ ಕುಸಿತ; 16 ಕಾರ್ಮಿಕರ ರಕ್ಷಣೆ, ನಾಲ್ವರಿಗಾಗಿ ಶೋಧ ಕಾರ್ಯಾಚರಣೆ – Kannada News | 4 workers trapped 16 rescued as tunnel collapses in Uttarakhand’s Chamoli

ಚಮೋಲಿ, ಆಗಸ್ಟ್ 13: ಉತ್ತರಾಖಂಡದ ಚಮೋಲಿ (Chamoli) ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಮಾರ್ಗವೊಂದರೊಳಗೆ ಇಂದು ಇದ್ದಕ್ಕಿದ್ದಂತೆ ಹೂಳು ಮತ್ತು ನೀರು ನುಗ್ಗಿದ ಪರಿಣಾಮವಾಗಿ ಭಾರಿ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ 20ಕ್ಕೂ ಹೆಚ್ಚು ಕಾರ್ಮಿಕರು ಸುರಂಗದೊಳಗೆ ಸಿಲುಕಿಕೊಂಡಿದ್ದಾರೆ. ‘ತೆಹ್ರಿ ಹೈಡ್ರೋ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್’ (THDC)ನ ಅಂಗಸಂಸ್ಥೆಯಾದ ‘ಹಿಂದೂಸ್ಥಾನ್ ಕನ್‌ಸ್ಟ್ರಕ್ಷನ್ ಕಂಪನಿ’ (HCC) ಕಾಮಗಾರಿ ನಡೆಸುತ್ತಿದ್ದ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರಕ್ಷಣಾ ತಂಡಗಳು ಇದುವರೆಗೆ ಸುರಂಗದಿಂದ 16 ಮಂದಿ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತೆಗೆದಿದ್ದು, ಒಳಗೆ ಸಿಲುಕಿರುವ ಉಳಿದವರ ಬಳಿಗೆ ತಲುಪಿ ಅವರನ್ನು ರಕ್ಷಿಸುವ ಪ್ರಯತ್ನಗಳು ನಿರಂತರವಾಗಿ ಸಾಗಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯ ಸರ್ಕಾರಿ ಪಿಂಚಣಿದಾರರಿಗೆ ಸಿಹಿ ಸುದ್ದಿ:‘ಸಂಧ್ಯಾ ಕಿರಣ’ ಯೋಜನೆಗೆ ಸಂಪುಟ ಒಪ್ಪಿಗೆ, ಏನಿದು ಸ್ಕೀಮ್? – Kannada News | Karnataka Cabinet approves Karnataka government retired employees sandhya kiran health scheme, here Is scheme Details

ಬೆಂಗಳೂರು, (ಆಗಸ್ಟ್ 13): “ಸಂಧ್ಯಾ ಕಿರಣ” ವಂತಿಕೆ ಆಧಾರಿತ ನಗದುರಹಿತ ಆರೋಗ್ಯ ಯೋಜನೆಗೆ (sandhya kiran health scheme) ಕರ್ನಾಟಕ ಸಚಿವ ಸಂಪುಟ (karnataka Cabinet) ಅನುಮೋದನೆ. ರಾಜ್ಯ ಸರ್ಕಾರಿ ಪಿಂಚಣಿದಾರರು ಹಾಗೂ ಅವರ ಅರ್ಹ ಅವಲಂಬಿತರಿಗೆ (Retired Government Worker) ಸಮಗ್ರ ಆರೋಗ್ಯ ಭದ್ರತೆ ಒದಗಿಸುವ ಉದ್ದೇಶದಿಂದ, AB-ArK ಯೋಜನೆಯ ನಿಯಮಾವಳಿಗಳನ್ವಯ “ಸಂಧ್ಯಾ ಕಿರಣ” ವಂತಿಕೆ ನಗದುರಹಿತ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲು ಡಿಕೆ ಶಿವಕುಮಾರ್ (DK Shivakumar) ಸಂಪುಟ ಇಂದು (ಆಗಸ್ಟ್ 13) ಒಪ್ಪಿಗೆ ನೀಡಿದೆ.

ಯಾರಿಗೆ ಅನ್ವಯ

70 ವರ್ಷಕ್ಕಿಂತ ಕಡಿಮೆ ವಯಸ್ಸಿನ ರಾಜ್ಯ ಸರ್ಕಾರಿ ಪಿಂಚಣಿದಾರರು, ಕುಟುಂಬ ಪಿಂಚಣಿದಾರರು ಹಾಗೂ ಅರ್ಹ ಅವಲಂಬಿತ ದಿವ್ಯಾಂಗ ಮಕ್ಕಳಿಗಾಗಿ “ಸಂಧ್ಯಾ ಕಿರಣ” ವಂತಿಕೆ ಆಧಾರಿತ ನಗದುರಹಿತ ಆರೋಗ್ಯ ಯೋಜನೆ ಅನ್ವಯವಾಗಲಿದೆ. ಇನ್ನು ಈ ಯೋಜನೆಯು ರಾಜ್ಯ ಸರ್ಕಾರಿ ಪಿಂಚಣಿದಾರರು ಮತ್ತು ಅವರ ಕುಟುಂಬಗಳಿಗೆ ಗುಣಮಟ್ಟದ, ಕೈಗೆಟುಕುವ ಹಾಗೂ ನಗದುರಹಿತ ಆರೋಗ್ಯ ಸೇವೆಯನ್ನು ಖಚಿತಪಡಿಸುವ ಮಹತ್ವದ ಸಾಮಾಜಿಕ ಭದ್ರತಾ ಕ್ರಮವಾಗಿದ್ದು, ಆರೋಗ್ಯ ವೆಚ್ಚದಿಂದ ಉಂಟಾಗಬಹುದಾದ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ.

ಇದನ್ನೂ ಓದಿ: ಹೊಸ ಕಾಯ್ದೆಯೊಂದಿಗೆ ಕರ್ನಾಟಕದಲ್ಲಿ RSS ಚಟುವಟಿಕೆಗೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದ್ಯಾ?

ಯೋಜನೆಯ ಪ್ರಮುಖ ಅಂಶಗಳು

  • ಪ್ರಾರಂಭಿಕ ಹಂತದಲ್ಲಿ 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 3.11 ಲಕ್ಷ ರಾಜ್ಯ ಸರ್ಕಾರಿ ಪಿಂಚಣಿದಾರರು ಹಾಗೂ ಅವರ ಅರ್ಹ ಅವಲಂಬಿತರನ್ನು ಒಳಗೊಂಡಂತೆ ಒಟ್ಟು ಸುಮಾರು 4.93 ಲಕ್ಷ ಫಲಾನುಭವಿಗಳು ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ.
  • ಯೋಜನೆಯು ಸ್ವಯಂಪ್ರೇರಿತ ವಂತಿಕೆ ಆಧಾರಿತ ನಗದುರಹಿತ ಆರೋಗ್ಯ ಯೋಜನೆಯಾಗಿದ್ದು, ಅರ್ಹ ಕುಟುಂಬಕ್ಕೆ ವರ್ಷಕ್ಕೆ ಗರಿಷ್ಠ 25.00 ಲಕ್ಷದವರೆಗೆ ಫ್ಲೋಟರ್ ಆಧಾರದ ಮೇಲೆ ದ್ವಿತೀಯ, ತೃತೀಯ ಹಾಗೂ ತುರ್ತು ಚಿಕಿತ್ಸಾ ಸೌಲಭ್ಯಗಳನ್ನು ನಗದುರಹಿತವಾಗಿ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ.
  • ಯೋಜನೆಯಡಿ AB-ArK ಅಡಿಯಲ್ಲಿ ಅನ್ವಯವಾಗುವ ಆರೋಗ್ಯ ಪ್ರಯೋಜನ ಪ್ಯಾಕೇಜ್‌ಗಳು ಮತ್ತು ಪರಿಷ್ಕೃತ ಪ್ಯಾಕೇಜ್ ದರಗಳು ಅನ್ವಯವಾಗಲಿವೆ. ಯೋಜನೆಯಡಿ ಫಲಾನುಭವಿಗಳು ನೋಂದಾಯಿತ/ಅನುಮೋದಿತ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸಾ ಸೌಲಭ್ಯ ಪಡೆಯಬಹುದಾಗಿದೆ.
  • ನಿಯಮಿತ ಪಿಂಚಣಿದಾರರು ಮೂಲ ಪಿಂಚಣಿಯ ಶೇ.1.25ರಷ್ಟು ಹಾಗೂ ಕುಟುಂಬ ಪಿಂಚಣಿದಾರರು ಮೂಲ ಕುಟುಂಬ ಪಿಂಚಣಿಯ ಶೇ.0.75ರಷ್ಟು ವಂತಿಕೆಯನ್ನು ಪಾವತಿಸಬೇಕಾಗುತ್ತದೆ.

ಆರ್ಥಿಕ ಪರಿಣಾಮ (ಚಿಕಿತ್ಸಾ ವೆಚ್ಚ):

ಯೋಜನೆಯಡಿ ವಾರ್ಷಿಕವಾಗಿ ಅಂದಾಜು 117 ಕೋಟಿ ರೂ. ವಂತಿಕೆ ಸಂಗ್ರಹವಾಗುವ ನಿರೀಕ್ಷೆಯಿದ್ದು, ವಾರ್ಷಿಕ ಚಿಕಿತ್ಸಾ ವೆಚ್ಚವು ಸುಮಾರು 81.75 ಕೋಟಿ ರೂ. ಎಂದು ಅಂದಾಜಿಸಲಾಗಿದೆ. AB-ArK ನೀತಿಯನ್ವಯ, ಚಿಕಿತ್ಸಾ ವೆಚ್ಚದ 70% ಫಲಾನುಭವಿಗಳ ವಂತಿಕೆಯಿಂದ ಮತ್ತು 30% ರಾಜ್ಯ ಸರ್ಕಾರದ ಪಾಲಿನಿಂದ ಭರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ವಾರ್ಷಿಕವಾಗಿ ಸುಮಾರು 57.22 ಕೋಟಿ ರೂ. ಫಲಾನುಭವಿಗಳ ಪಾಲು ಹಾಗೂ 24.53 ಕೋಟಿ ರೂ. ರಾಜ್ಯ ಸರ್ಕಾರದ ಪಾಲು ಇರಲಿದೆ.

ಯೋಜನೆಯ ದೀರ್ಘಕಾಲೀನ ಆರ್ಥಿಕ ಸ್ಥಿರತೆ ಮತ್ತು ನಿಧಿಯ ಸಮರ್ಪಕ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು, corpus ಬಳಕೆ ಪ್ರಮಾಣವು ಶೇ.85ಕ್ಕಿಂತ ಹೆಚ್ಚಾದಲ್ಲಿ ವಂತಿಕೆ ದರವನ್ನು 0.05% (5 basis points) ರಷ್ಟು ಸ್ವಯಂಚಾಲಿತವಾಗಿ ಹೆಚ್ಚಿಸುವ ವ್ಯವಸ್ಥೆಯನ್ನು ಅಳವಡಿಸಲು ಪ್ರಸ್ತಾಪಿಸಲಾಗಿದೆ.

“ಸಂಧ್ಯಾ ಕಿರಣ” ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮೂಲಕ ಯೋಜನಾ ಅನುಷ್ಠಾನ ಸಂಸ್ಥೆಯಾಗಿ ಜಾರಿಗೊಳಿಸಲಾಗುವುದು. ಫಲಾನುಭವಿಗಳ ನೋಂದಣಿ, ವಂತಿಕೆ ಸಂಗ್ರಹ, ಆಸ್ಪತ್ರೆಗಳ ಜಾಲ, ನಗದುರಹಿತ ಚಿಕಿತ್ಸಾ ಸೌಲಭ್ಯ, ಕ್ಷೇಮ್ ನಿರ್ವಹಣೆ ಹಾಗೂ ಯೋಜನೆಯ ಮೇಲ್ವಿಚಾರಣೆಯನ್ನು AB-ArK ವ್ಯವಸ್ಥೆಯೊಂದಿಗೆ ಸಮನ್ವಯಗೊಳಿಸಿ ಕೈಗೊಳ್ಳಲಾಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version