Headlines

ಬಾಡಿಗೆ ಮನೆಯಲ್ಲಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆ – Kannada News | Raipur Family Tragedy: Five Found Dead in Rented Home, Investigation Underway

ರಾಯ್‌ಪುರ,ಜುಲೈ 18:ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದ ಸಂಜಯ್ ನಗರ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಒಂದೇ ಕುಟುಂಬದ ಐದು ಜನ ಸದಸ್ಯರು ಬಾಡಿಗೆ ಮನೆಯೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಇದು ತಂದೆಯೇ ಇಡೀ ಕುಟುಂಬಕ್ಕೆ ವಿಷ(Poison) ಉಣಿಸಿ ಕೊಲೆ ಮಾಡಿ, ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಬಲವಾಗಿ ಶಂಕಿಸಿದ್ದಾರೆ. ಬೀಗ ಹಾಕಲಾಗಿದ್ದ ಮನೆಯಿಂದ ವಿಪರೀತ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಶುಕ್ರವಾರ ತಡರಾತ್ರಿ ಈ…

Read More

ದೇವೇಗೌಡರ ಪತ್ನಿ ಚೆನ್ನಮ್ಮ ಆರೋಗ್ಯ ಸ್ಥಿತಿ ಈಗ ಹೇಗಿದೆ? ಮಣಿಪಾಲ್ ಆಸ್ಪತ್ರೆಯ ವೈದ್ಯರು ಕೊಟ್ಟ ಮಾಹಿತಿ ಇಲ್ಲಿದೆ – Kannada News | HD Deve Gowda’s Wife Chennamma Health Improves, Breathing Condition Better Says Manipal Hospital Doctor

ಬೆಂಗಳೂರು, ಜುಲೈ 18: ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಪತ್ನಿ ಚೆನ್ನಮ್ಮ ಅವರ ಆರೋಗ್ಯದಲ್ಲಿ ಶುಕ್ರವಾರಕ್ಕಿಂತ ಇಂದು ಸುಧಾರಣೆ ಕಂಡುಬಂದಿದೆ ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ವೈದ್ಯ ಡಾ. ಸತ್ಯನಾರಾಯಣ ಶನಿವಾರ ಬೆಳಗ್ಗೆ ತಿಳಿಸಿದ್ದಾರೆ. ಉಸಿರಾಟದ ತೊಂದರೆ ಶೇ 20ರಿಂದ 30ರಷ್ಟು ಹತೋಟಿಗೆ ಬಂದಿದ್ದು, ರಕ್ತದೊತ್ತಡ ಸೇರಿದಂತೆ ಇತರ ಆರೋಗ್ಯದ ಮಾನದಂಡಗಳು ಸ್ಥಿರವಾಗಿವೆ ಎಂದು ಅವರು ಹೇಳಿದ್ದಾರೆ. ಸದ್ಯ ವೆಂಟಿಲೇಟರ್ ಅಗತ್ಯವಿಲ್ಲದೆ ಸಹಜ ಉಸಿರಾಟ ನಡೆಯುತ್ತಿದೆ. ಆದರೆ ಸಂಪೂರ್ಣ ಚೇತರಿಕೆಗೆ ಇನ್ನೂ ಸಮಯ ಬೇಕಾಗಲಿದ್ದು, ಮುಂದಿನ ದಿನಗಳಲ್ಲೂ…

Read More

ಬೆಂಗಳೂರಿಗರ ನಿದ್ದೆ ಕಸಿಯುತ್ತಿದೆ ಈ ತಾಪಮಾನ! ಹೇಗೆ ಗೊತ್ತಾ? – Kannada News | Climate Change Stealing Bangaloreans Sleep as city Hits Highest Footprint in New Study

ಬೆಂಗಳೂರು, ಜುಲೈ 18: ನಗರದ ಜನರಿಗೆ ಟ್ರಾಫಿಕ್ ಕಿರಿಕಿರಿ, ವಾಯು ಮಾಲಿನ್ಯ ಸೇರಿದಂತೆ ಹಲವು ಸಮಸ್ಯೆಗಳು ದಿನಚರಿಯ ಭಾಗವಾಗಿಹೋಗಿವೆ. ಇದರ ನಡುವೆ ಹೊಸ ತಲೆನೋವೊಂದು ಉಲ್ಬಣಿಸಿದ್ದು, ಬೆಂಗಳೂರು ಜನರ ನಿದ್ದೆಗೆ ಕನ್ನ ಹಾಕುತ್ತಿದೆ. ಮುಂಗಾರಿನ ಮುನಿಸಿಂದ ಬೆಂಗಳೂರಿಗರು ತತ್ತರಿಸುತ್ತಿರುವಾಗಲೇ ತಾಪಮಾನ ಏರಿಕೆಯಿಂದಾಗಿ ನಗರದ ಜನರು ನಿದ್ದೆ ಕಳೆದುಕೊಳ್ಳುತ್ತಿದ್ದಾರೆ. ಹೌದು, ಅಮೆರಿಕ ಮೂಲದ ‘ಕ್ಲೈಮೇಟ್ ಸೆಂಟ್ರಲ್’ ಸಂಸ್ಥೆ ನಡೆಸಿರುವ ಜಾಗತಿಕ ಮಟ್ಟದ ಸಂಶೋಧನಾ ವರದಿಯೊಂದರಲ್ಲಿ ಈ ಆತಂಕಕಾರಿ ವಿಷಯ ಬಹಿರಂಗವಾಗಿದೆ. ನಗರದ ಜನರು ವರ್ಷಕ್ಕೆ ಎಷ್ಟು ತಾಸು ನಿದ್ದೆ…

Read More

Hair Wash During Periods: ಪಿರಿಯಡ್ಸ್ ಸಮಯದಲ್ಲಿ ತಲೆಸ್ನಾನ ಮಾಡಿದರೆ ರಕ್ತಸ್ರಾವ ಹೆಚ್ಚಾಗುತ್ತದೆಯೇ? – Kannada News | Periods hair wash myth does head bath increase menstrual bleeding doctors explain

ಪಿರಿಯಡ್ಸ್ (ಮುಟ್ಟಿನ ದಿನಗಳು) ಸಮಯದಲ್ಲಿ ತಲೆಸ್ನಾನ ಮಾಡಬಾರದು, ಮಾಡಿದರೆ ರಕ್ತಸ್ರಾವ ಹೆಚ್ಚಾಗುತ್ತದೆ ಅಥವಾ ಹೊಟ್ಟೆನೋವು ಜಾಸ್ತಿಯಾಗುತ್ತದೆ ಎಂಬ ನಂಬಿಕೆ ನಮ್ಮ ಸಮಾಜದಲ್ಲಿ ಬಹಳ ವರ್ಷಗಳಿಂದ ಇದೆ. ಆದರೆ ವೈದ್ಯರ ಪ್ರಕಾರ ಇದು ವೈಜ್ಞಾನಿಕ ಆಧಾರವಿಲ್ಲದ ಒಂದು ತಪ್ಪು ಕಲ್ಪನೆ. ಪಿರಿಯಡ್ಸ್ (Periods) ಸಮಯದಲ್ಲಿ ತಲೆಸ್ನಾನ ಮಾಡುವುದರಿಂದ ರಕ್ತಸ್ರಾವ ಹೆಚ್ಚಾಗುವುದಿಲ್ಲ ಮತ್ತು ಮುಟ್ಟಿನ ಚಕ್ರದ ಮೇಲೂ ಯಾವುದೇ ನೇರ ಪರಿಣಾಮ ಬೀರುವುದಿಲ್ಲ. ವೈದ್ಯರು ಹೇಳುವಂತೆ, ಪಿರಿಯಡ್ಸ್ ಸಮಯದಲ್ಲಿ ದೇಹದಲ್ಲಿನ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟೆರೋನ್ ಹಾರ್ಮೋನ್‌ಗಳ ಮಟ್ಟದಲ್ಲಿ ಬದಲಾವಣೆ ಆಗುತ್ತದೆ….

Read More

“ಬಟ್ಟೆ ಗಂಟು ಬಿಚ್ಚಿದರೆ ರಕ್ತ ವಾಂತಿ ಮಾಡಿ ಸಾಯ್ತೀಯಾ” ಎಂದು ಹೆದರಿಸಿ ಬಂಗಾರ, ನಗದು ದೋಚಿದ ಬೆಂಗಳೂರಿನ ನಕಲಿ ಸ್ವಾಮೀಜಿ – Kannada News | Bengaluru Fraud: Woman Robbed of Rs 1.3 Lakh and Gold by Fake Swamiji for Daughter’s Problem

ಬೆಂಗಳೂರು, ಜು.18: ಮಗಳ ವೈವಾಹಿಕ ಜೀವನದಲ್ಲಿನ ಸಮಸ್ಯೆಗಳನ್ನು ವಿಶೇಷ ಪೂಜೆ ಹಾಗೂ ಮಂತ್ರ-ತಂತ್ರಗಳ ಮೂಲಕ ಪರಿಹರಿಸಿಕೊಡುವುದಾಗಿ ನಂಬಿಸಿ 37 ವರ್ಷದ ಮಹಿಳೆಯೊಬ್ಬರಿಂದ 43 ಗ್ರಾಂ ಚಿನ್ನಾಭರಣ ಹಾಗೂ 1.3 ಲಕ್ಷ ರೂ. ನಗದನ್ನು ನಕಲಿ ಸ್ವಾಮೀಜಿಯೊಬ್ಬ ದೋಚಿ ಪರಾರಿಯಾಗಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ವಂಚನೆಗೊಳಗಾದ ಗೀತಾ ಎಂಬುವರು ನೀಡಿದ ದೂರಿನ ಮೇರೆಗೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಸಂತ್ರಸ್ತೆ ಗೀತಾ ಅವರ ಕಿರಿಯ ಮಗಳು ಕೌಟುಂಬಿಕ ಸಮಸ್ಯೆಗಳನ್ನು…

Read More

Karavali Controversy: ‘ಕರಾವಳಿ’ ವಿವಾದ, ಬಹಿರಂಗ ಕ್ಷಮೆ ಕೇಳಿದ ರಾಜ್ ಬಿ ಶೆಟ್ಟಿ – Kannada News | Karavali movie controversy Raj B Shetty asks for apology

ಪ್ರಜ್ವಲ್ ದೇವರಾಜ್ (Prajwal Devaraj), ರಾಜ್ ಬಿ ಶೆಟ್ಟಿ (Raj B Shetty) ಸೇರಿದಂತೆ ಹಲವು ಪ್ರತಿಭಾವಂತ ನಟ, ನಟಿಯರು ನಟಿಸಿ ಗುರುದತ್ ಗಾಣಿಗಾ ನಿರ್ದೇಶನ ಮಾಡಿರುವ ‘ಕರಾವಳಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಶೂಟಿಂಗ್ ಆರಂಭವಾದಾಗಿನಿಂದಲೂ ಈ ಸಿನಿಮಾ ಒಂದಲ್ಲ ಒಂದು ಕಾರಣಕ್ಕೆ ಗಮನ ಸೆಳೆಯುತ್ತಲೇ ಇತ್ತು. ಆದರೆ ಬಿಡುಗಡೆ ಸನಿಹ ಬರುತ್ತಿದ್ದಂತೆ ವಿವಾದದಿಂದ ಸುದ್ದಿ ಆಗಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಬಂದು ಗಲಾಟೆ ಮಾಡಿದ್ದರು. ನಿರ್ದೇಶಕ…

Read More

ಹಾರ್ಮೋಜ್ಗನ್ ಪ್ರಾಂತ್ಯದಲ್ಲಿ ಒಟ್ಟು 5-6 ಸೇತುವೆಗಳು ಧ್ವಂಸ

ಟೆಹ್ರಾನ್, ಜುಲೈ 18: ಇರಾಕ್‌ನ ಕುರ್ದಿಸ್ತಾನ ಹಾಗೂ ಕುವೈತ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳು ಇರಾನ್‌ನ ತೀವ್ರ ದಾಳಿಗೆ ತುತ್ತಾಗಿವೆ. ಅಮೆರಿಕ-ಇರಾನ್ ಯುದ್ಧ ತೀವ್ರಗೊಂಡಿದ್ದು, ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಹೈಪರ್ಸಾನಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ದಾಳಿಗಳನ್ನು ಮುಂದುವರೆಸಿದೆ. ಇರಾನ್‌ನ ಈ ದಾಳಿಗಳಿಂದ ಅಮೆರಿಕಾದ ಸಂವಹನ ವ್ಯವಸ್ಥೆಗಳು, ಇಂಧನ ಡಿಪೋಗಳು, ಶಸ್ತ್ರಾಸ್ತ್ರಗಳ ಸಂಗ್ರಹಣೆ ಘಟಕಗಳು ಮತ್ತು ಯಂತ್ರೋಪಕರಣಗಳ ಘಟಕಗಳು ಧ್ವಂಸವಾಗಿವೆ ಎಂದು ವರದಿಯಾಗಿದೆ. ಇರಾಕ್‌ನ ಕುರ್ದಿಸ್ತಾನ ಪ್ರದೇಶದ ಮೇಲೆ ಇರಾನ್ ಭಾರಿ ದಾಳಿ ನಡೆಸಿದೆ. ಇರಾಕ್‌ನಲ್ಲಿರುವ ಅಮೆರಿಕಾದ…

Read More

ಮೈಸೂರು ಉದ್ಯಮಿಯಿಂದ 1 ಕೋಟಿ ರೂ. ಲಂಚ ಪಡೆದ ಜಿಎಸ್‌ಟಿ ಗುಪ್ತಚರ ಅಧಿಕಾರಿ! – Kannada News | CBI Registers Case Against Bengaluru GST Officer for Rs 1 Crore Bribe

ಮೈಸೂರು ಉದ್ಯಮಿಯಿಂದ 1 ಕೋಟಿ ರೂ. ಲಂಚ ಪಡೆದ ಜಿಎಸ್‌ಟಿ ಗುಪ್ತಚರ ಅಧಿಕಾರಿ ಮೈಸೂರು, ಜುಲೈ 18: ಡೈರೆಕ್ಟರೇಟ್ ಜನರಲ್ ಆಫ್ ಜಿಎಸ್‌ಟಿ ಇಂಟೆಲಿಜೆನ್ಸ್ (DGGI) ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಕೇಂದ್ರೀಯ ತನಿಖಾ ದಳ (CBI) ಭ್ರಷ್ಟಾಚಾರದ ಪ್ರಕರಣ ದಾಖಲಿಸಿದೆ. ಈ ಅಧಿಕಾರಿ 21 ಕೋಟಿ ರೂಪಾಯಿ ಮೌಲ್ಯದ ಜಿಎಸ್‌ಟಿ ವಂಚನೆ ಪ್ರಕರಣವನ್ನು ಮುಚ್ಚಿಹಾಕಲು ಮೈಸೂರಿನ ಉದ್ಯಮಿಯೊಬ್ಬರಿಂದ ಬರೋಬ್ಬರಿ 1 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ನಡೆದಿದ್ದೇನು? ಬೆಂಗಳೂರಿನ ಕೇಂದ್ರ ಜಿಎಸ್‌ಟಿ ಘಟಕದ ಸೀನಿಯರ್…

Read More

ಟೀಮ್ ಇಂಡಿಯಾ ಆಯ್ಕೆಗಾರರ ವರ್ತನೆಗೆ ಬಿಸಿಸಿಐ ತೀವ್ರ ಅಸಮಾಧಾನ! – Kannada News | BCCI unhappy with selectors over Rohit Sharma retirement buzz

ಭಾರತ ತಂಡದ ಅನುಭವಿ ಆಟಗಾರ ರೋಹಿತ್ ಶರ್ಮಾ ಅವರ ಏಕದಿನ ಕ್ರಿಕೆಟ್ ನಿವೃತ್ತಿಯ ಕುರಿತು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವರದಿಗಳ ಬೆನ್ನಲ್ಲೇ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿ ನಡುವಿನ ಭಿನ್ನಾಭಿಪ್ರಾಯ ಬಹಿರಂಗಗೊಂಡಿದೆ. ರೋಹಿತ್ ಶರ್ಮಾ ಅವರ ಭವಿಷ್ಯದ ಕುರಿತು ಅನಗತ್ಯ ಗೊಂದಲ ಮೂಡಿಸಿರುವ ಆಯ್ಕೆಗಾರರ ಧೋರಣೆಗೆ ಬಿಸಿಸಿಐ ಹಿರಿಯ ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಆಯ್ಕೆಗಾರರ ವಿರುದ್ಧ ಬಿಸಿಸಿಐ ಗರಂ ಆಗಿದ್ದೇಕೆ? ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನೇತೃತ್ವದ…

Read More

ವಾಟರ್ ಪಾರ್ಕ್​ನಲ್ಲಿ ಎಂಜಾಯ್ ಮಾಡುವ ಮುನ್ನ ಈ ತಪ್ಪು ಮಾಡಬೇಡಿ; ಚರ್ಮ ಮತ್ತು ಕೂದಲಿಗೆ ಹಾನಿ ಆಗಬಹುದು – Kannada News | Water park skin hair care tips before after swimming pool

ಬೇಸಿಗೆಯಲ್ಲಿ (Summer) ಅಥವಾ ವಿಶ್ರಾಂತಿಗಾಗಿ ಹಲವರು ಸ್ವಿಮ್ಮಿಂಗ್ ಪೂಲ್‌, ವಾಟರ್ ಪಾರ್ಕ್​ನಲ್ಲಿ ಆನಂದಿಸಲು ಮಾಡಲು ಇಷ್ಟಪಡುತ್ತಾರೆ. ಈಜುವುದು ಆರೋಗ್ಯಕ್ಕೆ ಉತ್ತಮ ವ್ಯಾಯಾಮವಾಗಿದ್ದರೂ, ಪೂಲ್‌ನಲ್ಲಿರುವ ಕ್ಲೋರಿನ್ ಮತ್ತು ಇತರ ರಾಸಾಯನಿಕಗಳು ಚರ್ಮ ಹಾಗೂ ಕೂದಲಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಸರಿಯಾದ ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ ಚರ್ಮ ಒಣಗುವುದು, ತುರಿಕೆ, ಅಲರ್ಜಿ, ಕೂದಲು ಒಡೆಯುವುದು ಮತ್ತು ಕೂದಲು ಉದುರುವ ಸಮಸ್ಯೆಗಳು ಕಾಣಿಸಬಹುದು ಎಂದು ಚರ್ಮರೋಗ ತಜ್ಞರು ಎಚ್ಚರಿಸುತ್ತಾರೆ. ತಜ್ಞರ ಪ್ರಕಾರ, ಸ್ವಿಮ್ಮಿಂಗ್ ಪೂಲ್‌ ಅಥವಾ ವಾಟರ್ ಪಾರ್ಕ್​ಗೆ…

Read More