ರಶ್ಮಿಕಾ ಮಂದಣ್ಣರ ಹೊಸ ಸಿನಿಮಾ ಹಿಂದಿ ಸಿನಿಮಾ ಟ್ರೈಲರ್ ರಿಲೀಸ್ – Kannada News

ರಶ್ಮಿಕಾ ಮಂದಣ್ಣ (Rashmika Mandanna), ಕೃತಿ ಸನೋನ್ ಮತ್ತು ಶಾಹಿದ್ ಕಪೂರ್ ನಟಿಸಿರುವ ತ್ರಿಕೋನ ಪ್ರೇಮಕತೆಯುಳ್ಳ ಹೊಸ ಸಿನಿಮಾ ‘ಕಾಕ್​​ಟೇಲ್ 2’ನ ಟ್ರೈಲರ್ ಇಂದು (ಜೂನ್ 2) ಬಿಡುಗಡೆ ಆಗಿದೆ. 14 ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ನಟನೆಯ ‘ಕಾಕ್​​ಟೇಲ್’ ಸಿನಿಮಾದ ಕತಾ ಮಾದರಿಯನ್ನೇ ಇರಿಸಿಕೊಂಡಿರುವ ‘ಕಾಕ್​​ಟೇಲ್ 2’ ಸಿನಿಮಾ ಹೊಸ ಪ್ರೇಕ್ಷಕರಿಗೆ ಮುದವಾಗುವ ರೀತಿಯಲ್ಲಿ ಪ್ರೇಮ ಹಾಗೂ ಗೆಳೆತನದ ಮಹತ್ವ ಸಾರುವ ಉದ್ದೇಶ ಇರಿಸಿಕೊಂಡು ಚಿತ್ರಮಂದಿರಗಳಿಗೆ ಬರುತ್ತಿದೆ.

2012 ರಲ್ಲಿ ಬಿಡುಗಡೆ ಆಗಿದ್ದ ‘ಕಾಕ್​​ಟೇಲ್’ ಸಿನಿಮಾನಲ್ಲಿ ಮಾಡರ್ನ್ ಯುವತಿ, ಸಾಂಪ್ರದಾಯಿಕ ಯುವತಿಯ ನಡುವೆ ಒಬ್ಬಾಕೆಯನ್ನು ನಾಯಕ ಸೈಫ್ ಅಲಿ ಖಾನ್ ಆಯ್ಕೆ ಮಾಡಬೇಕಿತ್ತು. ಈ ಹೊಸ ಕಾಕ್​​ಟೇಲ್​ ನಲ್ಲಿಯೂ ಕತೆ ತುಸು ಹಾಗೆಯೇ ಇದೆ. ಇಲ್ಲಿ ಕೃತಿ ಸನೋನ್ ಮಾಡರ್ನ್ ಹುಡುಗಿ ಅಲಿ ಆಗಿದ್ದರೆ ರಶ್ಮಿಕಾ ಮಂದಣ್ಣ ತುಸು ಸಾಂಪ್ರದಾಯಿಕ ಯುವತಿಯ ಪಾತ್ರದಲ್ಲಿ ನಟಿಸಿದ್ದಾರೆ. ಶಾಹಿದ್ ಕಪೂರ್ ಯಾರೊಟ್ಟಿಗೆ ಮದುವೆ ಆಗಬೇಕು ಎಂದು ಆಯ್ಕೆ ಕೊಳ್ಳಬೇಕಿದೆ.

ಇದನ್ನೂ ಓದಿ:‘ಪುಷ್ಪ’ ತೆರಳಿದ್ದ ಜಾಗಕ್ಕೆ ಹೋದ ನಟಿ ರಶ್ಮಿಕಾ ಮಂದಣ್ಣ

ಸಿನಿಮಾದ ಟ್ರೈಲರ್​​ನಲ್ಲಿ ತೋರಿಸಿರುವಂತೆ ‘ಕಾಕ್​​ಟೇಲ್ 2’ ಸಿನಿಮಾವು ಒಂದೊಳ್ಳೆ ಹಾಸ್ಯಭರಿತ ಪ್ರೇಮಕತೆಯಾಗಿದ್ದು, ಸಿನಿಮಾನಲ್ಲಿ ಹಾಸ್ಯದ ಜೊತೆಗೆ ಎಮೋಷನ್ಸ್ ಸಹ ಇದೆ. ಜೊತೆಗೆ ಒಂದು ಸುಂದರ ಪ್ರಯಾಣವೂ ಇದೆ. ಗೆಳೆತನ ಮತ್ತು ಪ್ರೀತಿಯ ಬಗ್ಗೆ ಸಂದೇಶವನ್ನು ‘ಕಾಕ್​​ಟೇಲ್ 2’ ಸಿನಿಮಾ ಹೊಂದಿದೆ. ಸಿನಿಮಾನಲ್ಲಿ ಕೃತಿ ಸನೋನ್ ಸಖತ್ ಗ್ಲಾಮರಸ್ ಆಗಿ ಮತ್ತು ಬೋಲ್ಡ್ ಆಗಿ ಕಾಣಿಸಿಕೊಂಡಿರುವುದು ಕಂಡು ಬರುತ್ತಿದೆ. ಹಾಗೆಯೇ ರಶ್ಮಿಕಾ ಸಹ ತುಸು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಎಮೋಷನಲ್ ದೃಶ್ಯಗಳು ಸಹ ರಶ್ಮಿಕಾ ಅವರಿಗೆ ಇದೆ.

2012ರ ‘ಕಾಕ್​​ಟೇಲ್’ ಸಿನಿಮಾನಲ್ಲಿದ್ದ ಬ್ಲಾಕ್ ಬಸ್ಟರ್ ಹಾಡಾದ ‘ತುಹು ದಿನ್ ಜಲೆ’ ಹಾಡು ‘ಕಾಕ್​​ಟೇಲ್ 2’ ಸಿನಿಮಾನಲ್ಲಿಯೂ ಉಳಿಸಿಕೊಳ್ಳಲಾಗಿದೆ. ಸಿನಿಮಾವನ್ನು ಹೋಮಿ ಅದಾಜಾನಿಯಾ ನಿರ್ದೇಶನ ಮಾಡಿದ್ದಾರೆ. ಲವ್ ರಂಜನ್ ಈ ಸಿನಿಮಾಕ್ಕೆ ಕತೆ ಮತ್ತು ಚಿತ್ರಕತೆ ಬರೆದಿದ್ದಾರೆ. ನಿರ್ಮಾಣ ಮಾಡಿರುವುದು ದಿನೇಶ್ ವಿಜನ್. ಸಿನಿಮಾ ಜೂನ್ 19ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಧಾರಾಕಾರ ಮಳೆಗೆ ಹೊಳೆಯಂತಾದ ಬೆಂಗಳೂರಿನ ರಸ್ತೆಗಳು: ಲ್ಯಾಂಡಿಂಗ್​​ ಸಾಧ್ಯವಾಗದೆ ಆಗಸದಲ್ಲೇ ಸುತ್ತಿದ ವಿಮಾನ! – Kannada News

ಮಳೆ ನೀರು ತುಂಬಿ ಹೊಳೆಯಂತಾದ ರಸ್ತೆಗಳುImage Credit source: BTP X Account

ಬೆಂಗಳೂರು, ಜೂನ್​​ 02: ನಗರದ ಹಲವೆಡೆ ಮಳೆ (Rain) ಸುರಿದಿದ್ದು, ಏಕಾಏಕಿ ವರುಣನ ಆಗಮನದಿಂದ ವಾಹನ ಸವಾರರು ತೊಂದರೆ ಅನುಭವಿಸಿದ್ದಾರೆ. ಕಚೇರಿಗಳಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರು ದಿಢೀರ್​​ ಸುರಿದ ಮಳೆಗೆ ಪರದಾಟ ನಡೆಸಿದ್ದು, ಬಸ್​​ ನಿಲ್ದಾಣಗಳು ಮತ್ತು ಅಂಗಡಿ ಮುಗಟ್ಟುಗಳ ಬಳಿ ನಿಂತ ದೃಶ್ಯಗಳು ಸರ್ವೇ ಸಾಮಾನ್ಯವಾಗಿ ಕಂಡುಬಂದಿವೆ. ಮೆಜೆಸ್ಟಿಕ್, ವಸಂತನಗರ, ಕೆ.ಆರ್.ಸರ್ಕಲ್, ಕೆ.ಆರ್​.ಮಾರ್ಕೆಟ್, ವಿಜಯನಗರ, ಜಯನಗರ, ಬನಶಂಕರಿ, ಕೆಂಗೇರಿ, ನಾಯಂಡಹಳ್ಳಿ, ಬಸವೇಶ್ವರ ನಗರ, ರಾಜಾಜಿನಗರ, ಶಿವಾಜಿನಗರ, ಮಲ್ಲೇಶ್ವರಂ, ಬಸವನಗುಡಿ, ಗಿರಿನಗರ, ಜ್ಞಾನಭಾರತಿ, ಆರ್.ಆರ್.ನಗರ, ಶಾಂತಿನಗರ, ಕೋರಮಂಗಲ, ಹೆಚ್​ಎಸ್​ಆರ್ ಲೇಔಟ್, ಆಡುಗೋಡಿ, ಮಡಿವಾಳ, ಬಿಟಿಎಂ ಲೇಔಟ್, ಹೆಬ್ಬಾಳ, ಕಾಮಾಕ್ಷಿಪಾಳ್ಯ, ಬ್ಯಾಟರಾಯನಪುರ, ಸಹಕಾರನಗರ, ಯಲಹಂಕ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ.

ಮುಖ್ಯಾಂಶಗಳು

  • ಬೆಂಗಳೂರು ನಗರದ ವಿವಿಧೆಡೆ ಗುಡುಗು-ಮಿಂಚು ಸಹಿತ ಅಬ್ಬರಿಸಿದ ವರುಣ
  • ಹಲವೆಡೆ ರಸ್ತೆಯಲ್ಲೇ ನೀರು ನಿಂತು ವಾಹನ ಸವಾರರ ತೀವ್ರ ಪರದಾಟ
  • ಏರ್​​ಪೋರ್ಟ್​​ನಲ್ಲಿ ಲ್ಯಾಂಡಿಂಗ್​​ ಸಾಧ್ಯವಾಗದೇ ಆಗಸದಲ್ಲೇ ಸುತ್ತಿದ ವಿಮಾನ

ಮಳೆ ನೀರು ತುಂಬಿ ಹೊಳೆಯಂತಾದ ರಸ್ತೆಗಳು

ನಗರದ ಕೆಲವು ಏರಿಯಾಗಳಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ರಸ್ತೆಯಲ್ಲೇ ನೀರು ನಿಂತು ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ. ಬಾಗ್ಮನೆ ಟೆಕ್​​ ಪಾರ್ಕ್​​, ಮಾರತಹಳ್ಳಿ ಸೇರಿ ಹಲವೆಡೆ ರಸ್ತೆಗಳು ಹೊಳೆಯಂತಾಗಿದ್ದು, ದೇವರಬೀಸನಹಳ್ಳಿ ಮೇಲ್ಸೇತುವೆ ರ್ಯಾಂಪ್‌ನಲ್ಲಿ ನೀರು ನಿಂತಿರುವ ಕಾರಣ ಕಡುಬೀಸನಹಳ್ಳಿಯಿಂದ ಬೆಳ್ಳಂದೂರು ಕಡೆಗೆ ವಾಹನಗಳ ಸಂಚಾರ ಕೂಡ ಅಸ್ತವ್ಯಸ್ತಗೊಂಡಿದೆ.

ಇದನ್ನೂ ಓದಿ: ಇಡೀ ರಾಜ್ಯದಲ್ಲಿಂದು ಭಾರೀ ಮಳೆ! 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಲ್ಯಾಂಡಿಂಗ್​​ ಸಾಧ್ಯವಾಗದೆ ಆಕಾಶದಲ್ಲೇ ಸುತ್ತಿದ ವಿಮಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​ಪೋರ್ಟ್​ನ ಸುತ್ತಮುತ್ತ ಧಾರಾಕಾರ ಮಳೆಯಾಗಿದೆ. ಗುಡುಗು ಸಹಿತ ವರುಣನ ಆರ್ಭಟದ ಹಿನ್ನೆಲೆ ನವದೆಹಲಿಯಿಂದ ಆಗಮಿಸಿದ್ದ ಇಂಡಿಗೋ ಫ್ಲೈಟ್ ಲ್ಯಾಂಡಿಂಗ್​​ ಸಾಧ್ಯವಾಗದೆ ಕೆಲ ಕಾಲ ಆಕಾಶದಲ್ಲೇ ಸುತ್ತಾಡಿದ ಪ್ರಸಂಗವೂ ನಡೆದಿದೆ. ವಿಮಾನ ನಿಲ್ದಾಣದಿಂದ ನಗರದ ಕಡೆ ಆಗಮಿಸಬೇಕಿದ್ದ ಪ್ರಯಾಣಿಕರು ಕೂಡ ಮಳೆಯಿಂದ ತೀವ್ರ ತೊಂದರೆ ಅನುಭವಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಮತಾ ಬ್ಯಾನರ್ಜಿಗೆ ಟಿಎಂಸಿ ನಾಯಕರಿಂದಲೇ ಮುಖಭಂಗ; ಪ್ರತಿಭಟನೆಯಲ್ಲಿ ಕೇವಲ 5 ಶಾಸಕರು, 3 ಸಂಸದರು ಭಾಗಿ! – Kannada News

ಕೊಲ್ಕತ್ತಾ, ಜೂನ್ 2: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆಯೊಂದು ನಡೆದಿದೆ. ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಇಂದು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. “ಹೋರಾಡುತ್ತೇವೆ ಇಲ್ಲವೇ ಸಾಯುತ್ತೇವೆ” ಎಂಬ ಘೋಷಣೆಯೊಂದಿಗೆ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಕೇವಲ 5 ಶಾಸಕರು ಮತ್ತು 3 ಸಂಸದರು ಮಾತ್ರ ಹಾಜರಾಗುವ ಮೂಲಕ ಮಮತಾ ಬ್ಯಾನರ್ಜಿಗೆ ಸ್ವಪಕ್ಷದವರಿಂದಲೇ ಭಾರಿ ಮುಖಭಂಗವಾಗಿದೆ.

ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳಕ್ಕೆ ನೀಡಬೇಕಾದ ಹಣ ಹಾಗೂ ವಿವಿಧ ಯೋಜನೆಗಳ ಅನುದಾನವನ್ನು ತಡೆಹಿಡಿದಿದೆ ಎಂದು ಆರೋಪಿಸಿ ಮಮತಾ ಬ್ಯಾನರ್ಜಿ ಕೊಲ್ಕತ್ತಾದಲ್ಲಿ ಈ ಪ್ರತಿಭಟನೆಯನ್ನು ಆಯೋಜಿಸಿದ್ದರು. ವೇದಿಕೆಯ ಮೇಲೆ ನಿಂತು “ಬಂಗಾಳದ ಹಕ್ಕುಗಳಿಗಾಗಿ ನಾವು ಸಾಯುವವರೆಗೂ ಹೋರಾಡಲು ಸಿದ್ಧ” ಎಂದು ಮಾಜಿ ಸಿಎಂ ಮಮತಾ ಗುಡುಗಿದ್ದಾರೆ. ಈ ಪ್ರತಿಭಟನೆಯಲ್ಲಿ ಟಿಎಂಸಿ ಪಕ್ಷದ ನೂರಾರು ಶಾಸಕರು ಮತ್ತು ಸಂಸದರ ಪೈಕಿ ಕೇವಲ 5 ಶಾಸಕರು, 3 ಸಂಸದರು ಮಾತ್ರ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರತಿಭಟನೆಯ ಇಡೀ ದಿನ ಮಮತಾ ಬ್ಯಾನರ್ಜಿ ಏಕಾಂಗಿಯಾಗಿಯೇ ವೇದಿಕೆಯನ್ನು ನಿಭಾಯಿಸಬೇಕಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರತಿಷ್ಠಿತ ‘ಫೋರ್ಬ್ಸ್ 30 ಅಂಡರ್ 30’ ಪಟ್ಟಿಯಲ್ಲಿ ಸ್ಥಾನ ಪಡೆದ ಬೆಂಗಳೂರಿನ 17 ವರ್ಷದ ದಿವಾ ಉತ್ಕರ್ಷ – Kannada News

ಡಯಾಬಿಟಿಸ್ ಪರೀಕ್ಷೆಯ ಚಿತ್ರImage Credit source: Getty Images

ಬೆಂಗಳೂರು, ಜೂನ್ 2: ಇಂದಿರಾನಗರದ ನ್ಯಾಷನಲ್ ಪಬ್ಲಿಕ್ ಸ್ಕೂಲ್ (NPS) ವಿದ್ಯಾರ್ಥಿನಿಯಾದ 17 ವರ್ಷದ ದಿವಾ ಉತ್ಕರ್ಷ (Divaa Uthkarsha) ಅವರು ಪ್ರತಿಷ್ಠಿತ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಮಾಡಿರುವ ಅಭೂತಪೂರ್ವ ಸಾಧನೆಗಾಗಿ ಫೋರ್ಬ್ಸ್ ಏಷ್ಯಾ ಪಟ್ಟಿಯ ‘ಫೋರ್ಬ್ಸ್ 30 ಅಂಡರ್ 30’ (Forbes 30 Under 30 Asia) ರಕ್ಷಣಾ ಮತ್ತು ವಿಜ್ಞಾನ ವಿಭಾಗದಲ್ಲಿ ದಿವಾ ಅವರು ಸ್ಥಾನ ಪಡೆದಿದ್ದಾರೆ.

ಹೈಸ್ಕೂಲ್ ಇದ್ದಾಗಲೇ ‘ಪ್ರಾಜೆಕ್ಟ್ ಅಮೃತ’ (Project Amrita) ಆರಂಭ

ದಿವಾ ಅವರು ಕೇವಲ 14 ವರ್ಷದವರಿದ್ದಾಗ ತಮ್ಮ ಆಪ್ತ ಸಂಬಂಧಿಯೊಬ್ಬರು ಮಧುಮೇಹ ಮತ್ತು ಮೂತ್ರಪಿಂಡದ (Kidney) ವೈಫಲ್ಯದಿಂದ ಬಳಲುತ್ತಿರುವುದನ್ನು ಕಂಡರು. ಇದು ಅವರ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿತು. ಇದರ ಫಲವಾಗಿ ಅವರು ‘ಪ್ರಾಜೆಕ್ಟ್ ಅಮೃತ’ ಎಂಬ ಲಾಭರಹಿತ ಸಂಸ್ಥೆಯನ್ನು (NGO) ಆರಂಭಿಸಿದರು.

ಈ ಸಂಸ್ಥೆಯ ಮೂಲಕ ದಿವಾ ಅವರು ಭಾರತದ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಟೈಪ್-1 ಮಧುಮೇಹ ಮತ್ತು ಮೂತ್ರಪಿಂಡದ ದೀರ್ಘಕಾಲದ ಕಾಯಿಲೆಗಳ (Chronic Kidney Disease) ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುತ್ತಿದ್ದಾರೆ.

ಇದನ್ನೂ ಓದಿ: ಅಗತ್ಯ ಸಂದರ್ಭದಲ್ಲೇ ಹೆಲ್ತ್ ಇನ್ಷೂರೆನ್ಸ್ ಕ್ಯಾಷ್​ಲೆಸ್ ಕೈಕೊಡಬಹುದು; ಇಲ್ಲಿವೆ ಪ್ರಮುಖ ಕಾರಣಗಳು

ಕಡುಬಡತನದಲ್ಲಿರುವ ಮೂತ್ರಪಿಂಡದ ರೋಗಿಗಳಿಗೆ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಡಯಾಲಿಸಿಸ್ (Dialysis) ಚಿಕಿತ್ಸೆ ಕೊಡಿಸಲು ಇವರ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ. ಇದಕ್ಕಾಗಿ ದಿವಾ ಅವರು ಯುವಕರ ತಂಡವನ್ನು ಕಟ್ಟಿಕೊಂಡು ದೊಡ್ಡ ಮಟ್ಟದಲ್ಲಿ ನಿಧಿ ಸಂಗ್ರಹಣೆ (Crowdfunding) ಮಾಡಿದ್ದಾರೆ.

ಫೋರ್ಬ್ಸ್ ಮೆಚ್ಚುಗೆ: ಕೇವಲ ಪಠ್ಯಪುಸ್ತಕದ ಓದಿಗೆ ಸೀಮಿತವಾಗದೆ, ಹದಿಹರೆಯದಲ್ಲೇ ಸಮಾಜದ ಅತ್ಯಂತ ಗಂಭೀರವಾದ ಆರೋಗ್ಯ ಸಮಸ್ಯೆಯೊಂದಕ್ಕೆ ಸ್ಪಂದಿಸಿ, ನೂರಾರು ರೋಗಿಗಳ ಜೀವ ಉಳಿಸಲು ಕಾರಣರಾಗಿರುವ ದಿವಾ ಅವರ ನಾಯಕತ್ವ ಮತ್ತು ಮಾನವೀಯ ಗುಣವನ್ನು ಫೋರ್ಬ್ಸ್ ಜಾಗತಿಕ ಮಟ್ಟದಲ್ಲಿ ಶ್ಲಾಘಿಸಿದೆ.

ಡಯಾಲಿಸಿಸ್ ಮಟ್ಟಕ್ಕೆ ಹೋಗುವುದನ್ನು ತಪ್ಪಿಸುವುದು ಉದ್ದೇಶ

“ನಮ್ಮ ದೇಶದಲ್ಲಿ ಬಡತನದ ಕಾರಣದಿಂದಾಗಿ ಅನೇಕರು ಡಯಾಲಿಸಿಸ್ ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸಿ ಜೀವ ಕಳೆದುಕೊಳ್ಳುತ್ತಾರೆ. ಇದನ್ನು ತಡೆಯುವುದೇ ನಮ್ಮ ಸಂಸ್ಥೆಯ ಮುಖ್ಯ ಗುರಿ. ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಸಿಕ್ಕಿರುವುದು ನನ್ನ ವೈಯಕ್ತಿಕ ಸಾಧನೆಗಿಂತ ಹೆಚ್ಚಾಗಿ, ನಾವು ಮಾಡುತ್ತಿರುವ ಕೆಲಸಕ್ಕೆ ಸಿಕ್ಕ ಜಾಗತಿಕ ಮಾನ್ಯತೆಯಾಗಿದೆ” ಎಂದು ದಿವಾ ಹೇಳುತ್ತಾರೆ.

ಇದನ್ನೂ ಓದಿ: ಭಾರತ ಈಗ ಗ್ಲೋಬಲ್ ಬ್ಯಾಕ್ ಆಫೀಸ್ ಮಾತ್ರವೇ ಅಲ್ಲ, ವಿಶ್ವದರ್ಜೆ ಪ್ರಾಡಕ್ಟ್ ನೀಡುವ ದೇಶವಾಗಿದೆ: ಪ್ರಸಾದ್ ಷಣ್ಮುಗಂ

ಕೇವಲ 17ನೇ ವಯಸ್ಸಿನಲ್ಲಿ ಇಡೀ ಏಷ್ಯಾ ಖಂಡದಲ್ಲೇ ಅತ್ಯಂತ ಪ್ರಭಾವಶಾಲಿ ಯುವ ಸಾಧಕಿಯರಲ್ಲಿ ಒಬ್ಬರಾಗಿ ಹೊರಹೊಮ್ಮಿರುವ ಬೆಂಗಳೂರಿನ ದಿವಾ ಉತ್ಕರ್ಷ ಅವರ ಈ ಪಯಣ ಇಂದಿನ ಯುವ ಪೀಳಿಗೆಗೆ ನಿಜಕ್ಕೂ ದೊಡ್ಡ ಪ್ರೇರಣೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಭಾರತ-ನೇಪಾಳ ಗಡಿ ವಿಷಯದಲ್ಲಿ ಮೂರನೇ ದೇಶದ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ; ಭಾರತದ ಖಡಕ್ ಸಂದೇಶ – Kannada News

ನವದೆಹಲಿ, ಜೂನ್ 2: ಭಾರತ ಮತ್ತು ನೇಪಾಳದ (Nepal Border) ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರವು ಅತ್ಯಂತ ಕಠಿಣ ನಿಲುವು ತಳೆದಿದೆ. ನೇಪಾಳದ ಪ್ರಧಾನಿಯವರ ಇತ್ತೀಚಿನ ಹೇಳಿಕೆಗೆ ತಿರುಗೇಟು ನೀಡಿರುವ ಭಾರತ, “ಎರಡು ದೇಶಗಳ ನಡುವಿನ ಶೇ. 98ರಷ್ಟು ಗಡಿ ಗುರುತಿಸುವಿಕೆ (Demarcation) ಈಗಾಗಲೇ ಯಶಸ್ವಿಯಾಗಿ ಮುಗಿದಿದೆ. ಉಳಿದ ವಿಷಯಗಳನ್ನು ದ್ವಿಪಕ್ಷೀಯ ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಲಾಗುವುದು. ಇದರಲ್ಲಿ ಯಾವುದೇ ಮೂರನೇ ವ್ಯಕ್ತಿ ಅಥವಾ ದೇಶದ ಹಸ್ತಕ್ಷೇಪದ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದೆ.

ಈ ಮೂಲಕ ಭಾರತ ಮತ್ತು ನೇಪಾಳ ನಡುವಿನ ಗಡಿ ಸಮಸ್ಯೆಯನ್ನು ಬಗೆಹರಿಸಲು ಯಾವುದೇ ಮೂರನೇ ದೇಶದ ಮಧ್ಯಸ್ಥಿಕೆಯನ್ನು ಭಾರತ ಸರ್ಕಾರವು ಸಂಪೂರ್ಣವಾಗಿ ತಿರಸ್ಕರಿಸಿದೆ. ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ಸಚಿವಾಲಯವು ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ನೆರೆಹೊರೆಯ ದೇಶಗಳ ನಡುವಿನ ಗಡಿ ವಿವಾದಗಳು ಕೇವಲ ದ್ವಿಪಕ್ಷೀಯ ಚರ್ಚೆಗಳ ಮೂಲಕವೇ ಇತ್ಯರ್ಥವಾಗಬೇಕು ಎಂಬ ತನ್ನ ದೃಢ ನಿಲುವನ್ನು ಪುನರುಚ್ಚರಿಸಿದೆ.

ಇದನ್ನೂ ಓದಿ: ಆರು ವರ್ಷ ಬಳಿಕ ಲಿಪುಲೇಖ ಪಾಸ್ ಮೂಲಕ ಭಾರತ-ಚೀನಾ ಟ್ರೇಡಿಂಗ್ ಪುನಾರಂಭ; ಆದರೆ, ನೇಪಾಳದಿಂದ ಆಕ್ಷೇಪ ಯಾಕೆ?

ಇತ್ತೀಚೆಗೆ ನೇಪಾಳದ ಪ್ರಧಾನಮಂತ್ರಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ, ಭಾರತ ಮತ್ತು ನೇಪಾಳ ನಡುವಿನ ಬಹುಕಾಲದ ಗಡಿ ವಿವಾದಗಳನ್ನು (ವಿಶೇಷವಾಗಿ ಕಾಲಾಪಾನಿ, ಲಿಂಪಿಯಾಧುರಾ ಮತ್ತು ಲಿಪುಲೇಖ್ ಪ್ರದೇಶಗಳು) ಇತ್ಯರ್ಥಪಡಿಸಲು ಅಂತಾರಾಷ್ಟ್ರೀಯ ಮಧ್ಯಸ್ಥಿಕೆ (ಇಂಗ್ಲೆಂಡ್ ಮತ್ತು ಚೀನಾ)ಯ ಅಗತ್ಯವಿದೆ ಎಂಬ ಹೇಳಿಕೆ ನೀಡಿದ್ದರು. ನೇಪಾಳದ ಈ ಹೇಳಿಕೆಯು ರಾಜತಾಂತ್ರಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.

ನೇಪಾಳದ ಪ್ರಧಾನಿಯವರ ಈ ಹೇಳಿಕೆಯನ್ನು ಭಾರತವು ನಿರಾಕರಿಸಿದೆ. ಭಾರತದ ವಿದೇಶಾಂಗ ಸಚಿವಾಲಯದ ಮೂಲಗಳ ಪ್ರಕಾರ, ಭಾರತ ಮತ್ತು ನೇಪಾಳ ನಡುವಿನ ಸುಮಾರು 1,751 ಕಿ.ಮೀ. ಉದ್ದದ ಗಡಿಯಲ್ಲಿ ಈಗಾಗಲೇ ಶೇ. 98ರಷ್ಟು ಭಾಗವನ್ನು ಪರಸ್ಪರ ಒಪ್ಪಿಗೆಯೊಂದಿಗೆ ಯಶಸ್ವಿಯಾಗಿ ಗುರುತಿಸಲಾಗಿದೆ ಮತ್ತು ನಕ್ಷೆ ತಯಾರಿಸಲಾಗಿದೆ. ಬಾಕಿ ಉಳಿದಿರುವ ಕೇವಲ ಶೇ. 2ರಷ್ಟು ಗಡಿ ಸಮಸ್ಯೆಯನ್ನು (ವಿವಾದಿತ ಪ್ರದೇಶಗಳು) ಉಭಯ ದೇಶಗಳು ಸ್ಥಾಪಿಸಿರುವ ಜಂಟಿ ತಾಂತ್ರಿಕ ಸಮಿತಿಗಳು ಮತ್ತು ರಾಜತಾಂತ್ರಿಕ ವೇದಿಕೆಗಳ ಮೂಲಕವೇ ಬಗೆಹರಿಸಲಾಗುವುದು.

ಇದನ್ನೂ ಓದಿ: Zojila Tunnel : ಲಡಾಖ್-ಕಾಶ್ಮೀರ ನಡುವೆ ಸರ್ವಋತು ಸಂಪರ್ಕ, ಜೂನ್ 9ರೊಳಗೆ ಝೋಜಿಲಾ ಸುರಂಗದ ಉತ್ಖನನ ಕಾರ್ಯ ಪೂರ್ಣ

ಕಾಶ್ಮೀರದ ವಿಷಯದಲ್ಲಿ ಭಾರತ ಹೇಗೆ ಅಂತಾರಾಷ್ಟ್ರೀಯ ಮಧ್ಯಸ್ಥಿಕೆಯನ್ನು ಒಪ್ಪುವುದಿಲ್ಲವೋ, ಅದೇ ರೀತಿ ನೇಪಾಳದೊಂದಿಗಿನ ಗಡಿ ವಿಷಯದಲ್ಲೂ ಯಾವುದೇ ಮೂರನೇ ದೇಶದ ಹಸ್ತಕ್ಷೇಪಕ್ಕೆ ಅವಕಾಶ ನೀಡುವುದಿಲ್ಲ ಎಂದು ಭಾರತ ಕಠಿಣ ಸಂದೇಶ ರವಾನಿಸಿದೆ.

ಏನಿದು ಗಡಿ ವಿವಾದ?:

ಭಾರತ ಮತ್ತು ನೇಪಾಳ ನಡುವಿನ ಗಡಿ ವಿವಾದವು 1816ರ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ನೇಪಾಳ ರಾಜರ ನಡುವೆ ನಡೆದ ‘ಸುಗೌಲಿ ಒಪ್ಪಂದ’ಕ್ಕೆ (Treaty of Sugauli) ಸಂಬಂಧಿಸಿದ್ದಾಗಿದೆ. ಮಹಾಕಾಳಿ ನದಿಯ ಉಗಮ ಸ್ಥಾನದ ಕುರಿತು ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯಗಳಿವೆ. ನೇಪಾಳವು ಇತ್ತೀಚಿನ ವರ್ಷಗಳಲ್ಲಿ ತನ್ನ ಹೊಸ ನಕ್ಷೆಯಲ್ಲಿ ಭಾರತದ ಉತ್ತರಾಖಂಡಕ್ಕೆ ಸೇರಿದ ಕಾಲಾಪಾನಿ, ಲಿಂಪುಯಾಧುರಾ ಮತ್ತು ಲಿಪುಲೇಖ್ ಪ್ರದೇಶಗಳನ್ನು ತನ್ನದೆಂದು ತೋರಿಸಿಕೊಂಡಿದ್ದರಿಂದ ಉಭಯ ದೇಶಗಳ ನಡುವಿನ ಬಾಂಧವ್ಯದಲ್ಲಿ ಕೊಂಚ ಬಿರುಕು ಮೂಡಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಕೆ ಶಿವಕುಮಾರ್ ಪ್ರಮಾಣ ವಚನ ಹಿನ್ನೆಲೆ 90 ಸಾವಿರ ಮನೆಗಳಿಗೆ ‘ಲಾಡು’ ಭಾಗ್ಯ; ಶಾಸಕ ಶ್ರೀನಿವಾಸ್ ಭರ್ಜರಿ ತಯಾರಿ! – Kannada News

ಡಿಕೆ ಶಿವಕುಮಾರ್ ಪ್ರಮಾಣ ವಚನ ಹಿನ್ನೆಲೆ 90 ಸಾವಿರ ಮನೆಗಳಿಗೆ ‘ಲಾಡು’ ಭಾಗ್ಯImage Credit source: Tv9 kannada

ನೆಲಮಂಗಲ, ಜೂ.2: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಪ್ರಮಾಣ ವಚನ ಸ್ವೀಕರಿಸಲಿರುವ ಐತಿಹಾಸಿಕ ಕ್ಷಣಕ್ಕೆ ಇಡೀ ನೆಲಮಂಗಲ ವಿಧಾನಸಭಾ ಕ್ಷೇತ್ರವೇ ವಧುವಿನಂತೆ ಸಿಂಗಾರಗೊಳ್ಳುತ್ತಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಕ್ಷೇತ್ರದ ಪ್ರತಿ ಹಳ್ಳಿಯ ಪ್ರತಿ ಮನೆಯಲ್ಲೂ ಸಂಭ್ರಮ ಮನೆ ಮಾಡಿದ್ದು, ಈ ಐತಿಹಾಸಿಕ ಸಂತಸವನ್ನು ಹಂಚಿಕೊಳ್ಳಲು ಸ್ಥಳೀಯ ಶಾಸಕರಾದ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಅಭೂತಪೂರ್ವ ಸಿದ್ಧತೆ ಕೈಗೊಳ್ಳಲಾಗಿದೆ.

ಡಿಕೆಶಿ ಅವರು ಮುಖ್ಯಮಂತ್ರಿಯಾಗುತ್ತಿರುವ ಈ ಅದ್ಭುತ ಕ್ಷಣ ನೆನಪಿನಲ್ಲಿರಬೇಕು ಎಂದು ನೆಲಮಂಗಲ ತಾಲೂಕಿನಾದ್ಯಂತ ಇರುವ ಸುಮಾರು 85 ಸಾವಿರದಿಂದ 90 ಸಾವಿರ ಮನೆಗಳಿಗೆ ತಲಾ ಮುಕ್ಕಾಲು ಕೆಜಿಯಷ್ಟು (750 ಗ್ರಾಂ) ಉನ್ನತ ಗುಣಮಟ್ಟದ ಲಾಡುಗಳ ಸಿಹಿ ಬಾಕ್ಸ್ ಅನ್ನು ಉಚಿತವಾಗಿ ವಿತರಿಸಲು ಶಾಸಕರು ನಿರ್ಧರಿಸಿದ್ದಾರೆ. ನಾಳೆ ಬೆಳಗ್ಗೆಯಿಂದಲೇ ಈ ಬೃಹತ್ ಸಿಹಿ ಹಂಚಿಕೆ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ಸಿಗಲಿದೆ.

ಇದನ್ನೂ ಓದಿ: ಶಾಸಕರ ಗಮನಕ್ಕೆ: ಟ್ಯಾಂಕ್ ಇದೆ, ಬೋರ್‌ವೆಲ್ ಇದೆ.. ಆದ್ರೆ ನೀರಿಲ್ಲ! ಬೆಳ್ತಂಗಡಿಯ ಬೆಳಾಲು ಗ್ರಾಮದ ಜನರಿಗೆ ಕಲುಷಿತ ಗುಂಡಿ ನೀರೇ ಗತಿ

300 ಬಾಣಸಿಗರಿಂದ ಹಗಲಿರುಳು ಸಿದ್ಧತೆ; 10 ಲಕ್ಷ ಲಾಡು ತಯಾರಿ!:

ಈ ಸಿಹಿ ವಿತರಣಾ ಕಾರ್ಯಕ್ಕಾಗಿ ನೆಲಮಂಗಲದಲ್ಲಿ ಬೃಹತ್ ಅಡುಗೆ ಶಾಲೆ ನಿರ್ಮಾಣವಾಗಿದ್ದು, ಸುಮಾರು 250 ರಿಂದ 300 ನುರಿತ ಬಾಣಸಿಗರು (Chefs) ಹಗಲಿರುಳು ಎನ್ನದೆ ಶ್ರಮಿಸುತ್ತಿದ್ದಾರೆ. ಇಡೀ ಕ್ಷೇತ್ರಕ್ಕೆ ವಿತರಿಸಲು ಒಟ್ಟಾರೆ 9 ರಿಂದ 10 ಲಕ್ಷ ಲಾಡುಗಳ ಅಗತ್ಯವಿದ್ದು, ಸದ್ಯ ಭರದಲ್ಲಿ ಲಾಡು ತಯಾರಿಕೆ ನಡೆಯುತ್ತಿದೆ.

ಇಲ್ಲಿದೆ ನೋಡಿ ವಿಡಿಯೋ:

ಶಾಸಕರ ಮಾರ್ಗದರ್ಶನದಲ್ಲಿ ಕ್ಷೇತ್ರದ ಪ್ರಮುಖ ಮುಖಂಡರು ಹಾಗೂ ನೂರಾರು ಸಂಖ್ಯೆಯ ಉತ್ಸಾಹಿ ಕಾರ್ಯಕರ್ತರು ಪ್ರತಿ ಗ್ರಾಮದ ಮನೆ ಮನೆಗೆ ತೆರಳಿ ಈ ಸಿಹಿ ಪೊಟ್ಟಣಗಳನ್ನು ಹಸ್ತಾಂತರಿಸಲಿದ್ದಾರೆ. ಕ್ಷೇತ್ರದ ಕೊನೆಯ ಮನೆಗೂ ಸಿಹಿ ತಲುಪುವವರೆಗೂ ಈ ವಿತರಣಾ ಕಾರ್ಯಕ್ರಮವು ನಿರಂತರವಾಗಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಒಟ್ಟಿನಲ್ಲಿ ಡಿ.ಕೆ. ಶಿವಕುಮಾರ್ ಅವರ ಸಿಎಂ ಪಟ್ಟಾಭಿಷೇಕದ ಖುಷಿ ನೆಲಮಂಗಲದ ಜನರಲ್ಲಿ ನೆನಪಾಗಿರಲಿ ಎಂದು ಈ ಕೆಲಸವನ್ನು ಮಾಡುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ವಿನ್ನರ್ ವಿನ್ನರ್, ಚಿಕನ್ ಡಿನ್ನರ್’ ಯಶ್ ದನಿಯಲ್ಲಿ ಬಿಜಿಎಂಐ – Kannada News

ಆನ್​​ಲೈನ್ ಗೇಮಿಂಗ್ ಲೋಕದಲ್ಲಿ ಬಿಜಿಎಂಐ ಗೊತ್ತಿಲ್ಲದವರು ಯಾರು. ಭಾರತದಲ್ಲಿ ಪಬ್ ಜಿ ಬ್ಯಾನ್ ಆದ ಬಳಿಕ ಆ ಸ್ಥಾನಕ್ಕೆ ಬಂದ ಬಿಜಿಎಂಐ, ಭಾರತದಲ್ಲಿ ಅತಿ ಹೆಚ್ಚು ಆಡಲಾಡುವ ಆನ್​​ಲೈನ್ ಆಕ್ಷನ್ ಗೇಮ್ ಆಗಿದೆ. ಭಾರತದಲ್ಲಿ ಸುಮಾರು 27 ಕೋಟಿಗೂ ಹೆಚ್ಚು ಡೌನ್​​ಲೋಡ್​​ಗಳನ್ನು ಹಾಗೂ ಸಕ್ರಿಯ ಆಟಗಾರರನ್ನು ಈ ಗೇಮ್ ಹೊಂದಿದೆ. ಇದೀಗ ಬಿಜಿಎಂಐಗೆ ರಾಕಿಭಾಯ್ ಯಶ್ (Yash) ಎಂಟ್ರಿ ಕೊಟ್ಟಿದ್ದಾರೆ. ‘ಟಾಕ್ಸಿಕ್’ ಮತ್ತು ಬಿಜಿಎಂಐ ಪರಸ್ಪರ ಕೊಲ್ಯಾಬರೇಟ್ ಆಗಿದ್ದು, ಬಿಜಿಎಂಐ ಹೊಸ ಆವೃತ್ತಿಗೆ ನಟ ಯಶ್ ತಮ್ಮ ಖಡಕ್ ಧ್ವನಿ ನೀಡಿದ್ದಾರೆ.

ಇದೀಗ ಯಶ್ ಧ್ವನಿ ಹೊಂದಿರುವ ಬಿಜಿಎಂಐ ಗೇಮಿನ ಟೀಸರ್ ಬಿಡುಗಡೆ ಆಗಿದ್ದು, ಕನ್ನಡದಲ್ಲೇ ನಟ ಯಶ್ ಧ್ವನಿ ನೀಡಿರುವುದು ವಿಶೇಷ. ಯಶ್ ಅವರು ರಾಯ ಪಾತ್ರವಾಗಿಯೇ ಗೇಮಿಗೆ ಧ್ವನಿ ನೀಡಿದ್ದಾರೆ. ‘ಪೋಚಿಂಕಿಯ ಆಳ ತಿಳೀದೆ ಆಳೋಕೆ ಸಾಧ್ಯ ಇಲ್ಲ’, ‘ನಾನು ಎಂಡ್ ಜೋನ್​​ನಲ್ಲಿ ಹೆಜ್ಜೆ ಇಟ್ಟಾಗಿದೆ, ಆಟದ ರೇಂಜ್ ಚೇಂಜ್ ಆಗಿದೆ’ ಸೇರಿದಂತೆ ಇನ್ನೂ ಹಲವು ಡೈಲಾಗ್​​ಗಳನ್ನು ಅವರು ಗೇಮಿಗಾಗಿ ರೆಕಾರ್ಡ್ ಮಾಡಿದ್ದು, ಯಶ್ ಧ್ವನಿಯಲ್ಲಿ ಗೇಮ್ ಕಮಾಂಡ್​​ಗಳು ಸಖತ್ ಆಗಿ ಕೇಳುತ್ತವೆ.

ಅದರಲ್ಲೂ ಗೇಮಿನ ಬಲು ಜನಪ್ರಿಯ ಡೈಲಾಗ್ ಆಗಿರುವ ‘ವಿನ್ನರ್ ವಿನ್ನರ್, ಚಿಕನ್ ಡಿನ್ನರ್’ ಡೈಲಾಗಂತೂ ಯಶ್ ಧ್ವನಿಯಲ್ಲಿ ಭೇರೆಯದ್ದೇ ಖಡಕ್ ತನ ಪಡೆದುಕೊಂಡಿದೆ. ಇದೀಗ ಬಿಡುಗಡೆ ಆಗಿರುವ ಗೇಮಿನ್ ಟ್ರೈಲರ್​​ನಲ್ಲಿ ‘ಟಾಕ್ಸಿಕ್’ ಸಿನಿಮಾ ಟೀಸರ್​​ನ ಹಿನ್ನೆಲೆ ಧ್ವನಿಯನ್ನೇ ಬಳಲಾಗಿದೆ. ಜೊತೆಗೆ ‘ಟಾಕ್ಸಿಕ್’ ಸಿನಿಮಾದ ಕೆಲ ದೃಶ್ಯಗಳನ್ನು ಸಹ ಬಳಸಲಾಗಿದೆ.

ಇದನ್ನೂ ಓದಿ:ಹಾಸನ ಸೈಟ್ ವಿವಾದ: ಬೆಂಗಳೂರಲ್ಲಿ ಡಿಜಿಪಿ ಭೇಟಿಯಾದ ಯಶ್ ತಾಯಿ ಪುಷ್ಪಾ

‘ಬಿಜಿಎಂಐ’ನ ಹೊಸ ಆವೃತ್ತಿಯಲ್ಲಿ ಟಾಕ್ಸಿಕ್​​ನ ವೆಪೆನ್​​ಗಳು, ಯಶ್ ಅವರ ಧ್ವನಿ, ಟಾಕ್ಸಿಕ್ ಕತೆ ಆಧರಿಸಿದ ನಗರಗಳು ಸಹ ಇರಲಿವೆ. ಯಶ್ ಅವರು ಭಾರತದ ಬಲು ಜನಪ್ರಿಯ ಗೇಮ್​ ಜೊತೆಗೆ ಸಹಯೋಗ ಮಾಡಿಕೊಳ್ಳುವ ಜೊತೆಗೆ ಸಿನಿಮಾ ಅನ್ನು ಹೊಸ ಜನರೇಷನ್​​ಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ.

‘ಟಾಕ್ಸಿಕ್’ ಸಿನಿಮಾವನ್ನು ಭಾರತದಲ್ಲಿ ಮಾತ್ರವಲ್ಲದೆ ಹಾಲಿವುಡ್​​ನಲ್ಲೂ ಭರ್ಜರಿಯಾಗಿ ಬಿಡುಗಡೆ ಮಾಡುವ ಯೋಜನೆಯಲ್ಲಿ ನಟ ಯಶ್ ಇದ್ದಾರೆ. ಸಿನಿಮಾವನ್ನು ಕನ್ನಡ ಮತ್ತು ಇಂಗ್ಲೀಷ್​​ನಲ್ಲಿ ಏಕಕಾಲಕ್ಕೆ ಶೂಟ್ ಮಾಡಲಾಗಿದ್ದು, ಇದೀಗ ಹಾಲಿವುಡ್​​ನಲ್ಲಿ ಸಿನಿಮಾವನ್ನು ಮಾರುಕಟ್ಟೆ ಮಾಡುವುದರಲ್ಲಿ ಯಶ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಿನಿಮಾ ಈಗಾಗಲೇ ಎರಡು ಬಾರಿ ಬಿಡುಗಡೆ ದಿನಾಂಕವನ್ನು ಬದಲಾಯಿಸಿದೆ. ಇದೇ ಆಗಸ್ಟ್​​ನಲ್ಲಿ ಸಿನಿಮಾ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಕೈಗೆ ಕೋಟಿ ರೂ ಸಿಗುತ್ತಿದ್ದಂತೆ ಭಾರತೀಯರು ಭಾರತಕ್ಕೆ ಮರಳುವುದು ಅಸಾಧ್ಯ; ಅನಿವಾಸಿ ಭಾರತೀಯ ಹೀಗೆಂದಿದ್ದೇಕೆ? – Kannada News

ಕೆಲವರಿಗೆ ವಿದೇಶ (foreign) ಅಂದ್ರೆ ಅದೇನೋ ವ್ಯಾಮೋಹ. ವಿದೇಶದಲ್ಲಿ ಜಾಬ್ ಸಿಕ್ಕರೆ ಲೈಫ್ ಸೆಟ್ಲ್ ಆದಂತೆ ಎನ್ನುವುದು ಹೆಚ್ಚಿನವರ ಭಾವನೆ. ಓದು ಮುಗಿಯುತ್ತಿದ್ದಂತೆ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ಅಮೆರಿಕದಲ್ಲಿ (America) ವಾಸಿಸುವ ಅನಿವಾಸಿ ಭಾರತೀಯರೊಬ್ಬರು, ಮನೆಗೆ ಮರಳುವ ಕನಸಿನೊಂದಿಗೆ ವಿದೇಶಕ್ಕೆ ತೆರಳುವ ಅನೇಕ ಭಾರತೀಯರು ವರ್ಷಗಳ ಕಾಲ ಅಲ್ಲಿಯೇ ಉಳಿಯುತ್ತಾರೆ ಎಂದಿದ್ದಾರೆ. ಈ ವಿಡಿಯೋ ಆನ್ಲೈನ್ ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ನಿತಿನ್ ಎಂಬ ಬಳಕೆದಾರರು desidad_in_america ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್‌ನಲ್ಲಿ ನಾನು 5–8 ಕೋಟಿ ಗಳಿಸುತ್ತೇನೆ, ಮತ್ತು ನಂತರ, ನಾನು ಭಾರತಕ್ಕೆ ಹಿಂತಿರುಗುತ್ತೇನೆ ಎಂದು ಹೇಳುವುದು ಬಹುತೇಕ ಅಸಾಧ್ಯ. ಇಂದಿಗೆ ನಾನು ಇಲ್ಲಿಗೆ ಬಂದು  15 ವರ್ಷಗಳಾಗಿವೆ, ಮತ್ತು ನಾನು 5-8 ಕೋಟಿ ಗಳಿಸಿ ಅದನ್ನು ಬ್ಯಾಂಕಿನಲ್ಲಿ ಇಟ್ಟ ಬಳಿಕ ನಾನು ಭಾರತಕ್ಕೆ ಹೊರಟು ಹೋಗುತ್ತೇನೆ ಎಂದು ನಾನು ಭಾವಿಸಿದಾಗಲೆಲ್ಲಾ, ಅದು ಬಹುತೇಕ ಅಸಾಧ್ಯವಾಗುತ್ತದೆ ಎಂದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದಕ್ಕೆ ಅತ್ಯಂತ ದೊಡ್ಡ ಕಾರಣವೆಂದರೆ ಅದುವೇ ಈ ಸಂಬಳ. ಅಮೆರಿಕದಲ್ಲಿ, ನಾವು ಅನಿವಾಸಿ ಭಾರತೀಯರು ಬಂದಾಗ ನಾವೆಲ್ಲರೂ ಹಣ ಸಂಪಾದಿಸುತ್ತೇವೆ, ಭಾರತಕ್ಕೆ ಕಳುಹಿಸುತ್ತೇವೆ ಸ್ವಲ್ಪ  ಸಮಯ ಬಿಟ್ಟು ಇಲ್ಲಿಂದ ಹೊರಡುತ್ತೇವೆ ಎಂಬ ಕನಸನ್ನು ಹೊತ್ತು ಬರುತ್ತೇವೆ. ಆದರೆ ಇಲ್ಲಿ ನಮಗೆ ಸಿಗುವ ಸಂಬಳ ತುಂಬಾ ಹೆಚ್ಚಾಗಿದೆ. ಮೆಕ್‌ಡೊನಾಲ್ಡ್ಸ್, ಡೋರ್‌ಡ್ಯಾಶ್ ಅಥವಾ ಉಬರ್‌ನಂತಹ ಉದ್ಯೋಗಗಳಲ್ಲಿ ಕೆಲಸ ಮಾಡುವ ಜನರು ಸಹ ತಿಂಗಳಿಗೆ ಸುಮಾರು $3,000 ರಿಂದ $3,500 ಗಳಿಸಬಹುದು. ಅಂದರೆ ಭಾರತದ ರೂಪಾಯಿಗೆ ಹೋಲಿಸಿದರೆ 3 ಲಕ್ಷದಿಂದ 3.5 ಲಕ್ಷದವರೆಗೆ ಇರುತ್ತದೆ ಎಂದು ಹೇಳಿದ್ದಾರೆ.

ಈಗ, ಅದೇ ವ್ಯಕ್ತಿ ಭಾರತದ ಮೆಕ್‌ಡೊನಾಲ್ಡ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರೆ ಅವರಿಗೆ 25,000 ಅಥವಾ 30,000 ರೂಪಾಯಿ ಸಂಬಳ ಸಿಗುತ್ತದೆ. ಒಬ್ಬ ವ್ಯಕ್ತಿಯು 30,000 ರೂಪಾಯಿಗಳಿಂದ ತಮ್ಮ ಖರ್ಚುಗಳನ್ನು ಹೇಗೆ ನಿರ್ವಹಿಸಬಹುದು?. ಬಾಡಿಗೆ, ವಿಮೆ, ಫೋನ್ ಬಿಲ್‌ಗಳು ಮತ್ತು ಇತರ ಖರ್ಚುಗಳನ್ನು ಪಾವತಿಸಿದ ನಂತರವೂ, ಅಮೆರಿಕದಲ್ಲಿ ಅನೇಕರು ತಿಂಗಳಿಗೆ ಸುಮಾರು 1 ಲಕ್ಷ ರೂಪಾಯಿಗಳನ್ನು ಉಳಿಸುತ್ತಾರೆ. ತಿಂಗಳಿಗೆ ಒಂದು ಲಕ್ಷ ಎಂದರೆ ವರ್ಷಕ್ಕೆ 12 ಲಕ್ಷ ರೂಪಾಯಿಗಳಾಗುತ್ತದೆ ಎಂದು ಹೇಳಿರುವುದನ್ನು ಕಾಣಬಹುದು.

ಒಬ್ಬ ವ್ಯಕ್ತಿ ಒಮ್ಮೆ ಈ ಜೀವನಶೈಲಿಗೆ ಒಗ್ಗಿಕೊಂಡರೆ, ಅವನಿಗೆ ಬೇರೆ ಏನನ್ನೂ ಮಾಡಲು ಸಾಧ್ಯವಿಲ್ಲ. ಅದು ಅಸಾಧ್ಯದ ಮಾತು. ಅದಕ್ಕಾಗಿಯೇ ಯಾರಾದರೂ ಅಮೆರಿಕ, ಆಸ್ಟ್ರೇಲಿಯಾ, ಕೆನಡಾ ಅಥವಾ ಪ್ರಪಂಚದ ಬೇರೆಲ್ಲಿಗೂ ಬಂದರೂ, ಅವರು ಭಾರತಕ್ಕೆ ಹಿಂತಿರುಗುವ ಬಗ್ಗೆ ಯೋಚಿಸಲು ಸಹ ಸಾಧ್ಯವಿಲ್ಲ ಎಂದು ವಿಡಿಯೋದಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ: ಅಮೆರಿಕದ ಲಕ್ಷಾಂತರ ಸಂಬಳದ ಕೆಲಸ ಬಿಟ್ಟು ಬೆಂಗಳೂರಲ್ಲಿ ಕೆಫೆ ತೆರೆದ ಸ್ನೇಹಿತರು!

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಹೋಲಿಕೆ ಒಳ್ಳೆಯದು. ಆದರೆ ಅಮೆರಿಕದಲ್ಲಿ ವೆಚ್ಚಗಳು ಸಹ ತುಂಬಾ ಹೆಚ್ಚು ಎಂದಿದ್ದಾರೆ. ಇನ್ನೊಬ್ಬರು, ಭಾರತೀಯರು ತಮ್ಮ ಹುಟ್ಟೂರನ್ನು ಭಾವನಾತ್ಮಕವಾಗಿ ಮಿಸ್ ಮಾಡಿಕೊಳ್ಳುತ್ತಾರೆ, ಆದರೆ ಪ್ರಾಯೋಗಿಕವಾಗಿ ಅಲ್ಲಿ ಬದುಕು ಕಟ್ಟಿಕೊಳ್ಳೋದು ಕಷ್ಟಕರವಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ದುಡ್ಡೇ ಮುಖ್ಯವಲ್ಲ, ಕುಟುಂಬದೊಂದಿಗೆ ಖುಷಿಯಿಂದ ಇದ್ದರೆ ಅದಕ್ಕಿಂತ ಅಮೂಲ್ಯವಾದದ್ದು ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊನೆಗೂ ತಂದೆಯ ಆ ಒಂದು ಆಸೆ ಈಡೇರಿಸಿದ ಡಿಕೆಶಿ: ಅಷ್ಟಕ್ಕೂ ಕೆಂಪೇಗೌಡರ ಬಯಕೆ ಏನಾಗಿತ್ತು? – Kannada News

ಡಿಕೆಶಿ ಕುರಿತು ಮಾಹಿತಿ ನೀಡಿದ ಶಿವಶಂಕರ್‌ ಶರ್ಮಾImage Credit source: Tv9 Kannada

ಬೆಂಗಳೂರು ದಕ್ಷಿಣ (ರಾಮನಗರ), ಜೂನ್​​ 02: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar)​​ ನಾಳೆ (ಜೂ.03) ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆ ಅವರ ಹುಟ್ಟೂರು ದೊಡ್ಡ ಆಲಹಳ್ಳಿಯಲ್ಲಿ ಸಂಭ್ರಮ ಮನೆಮಾಡಿದೆ. ಈ ಕುರಿತು ಟಿವಿ9 ಜೊತೆ ಮಾತನಾಡಿರುವ ಗ್ರಾಮದ ಹಿರಿಯ ಮುಖಂಡ ಶಿವಶಂಕರ್‌ ಶರ್ಮಾ, ಡಿಕೆಶಿ ಗುಣಗಾನ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ತಂದೆ ದೊಡ್ಡಲಹಳ್ಳಿ ಕೆಂಪೇಗೌಡರಿಗೆ ತಮ್ಮ ಮಗ ಒಂದು ದಿನ ಮುಖ್ಯಮಂತ್ರಿಯಾಗುವುದನ್ನು ನೋಡಬೇಕು ಎಂಬ ಆಸೆ ಇತ್ತು. ಅದನ್ನೀಗ ಡಿಕೆಶಿ ತಮ್ಮ ಪರಿಶ್ರಮದಿಂದ ನನಸಾಗಿಸಿಸುತ್ತಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

‘ಮುತ್ತಾತನಂತೆ ಡಿಕೆಶಿಗೂ ಧೈರ್ಯ’

ಡಿಕೆಶಿ ಅವರ ಮುತ್ತಾತ ಚಿ.ಕೆಂಪೇಗೌಡ ಅವರು ಅತ್ಯಂತ ಶಕ್ತಿಶಾಲಿ ವ್ಯಕ್ತಿ ಆಗಿದ್ದರು. ಅವರ ಧೈರ್ಯ,ಕೆಚ್ಚು, ಎದೆಗಾರಿಕೆ ಮತ್ತು ಸಂವಾದ ಕೌಶಲ್ಯಗಳು ಡಿ.ಕೆ. ಶಿವಕುಮಾರ್ ಅವರಿಗೂ ಬಂದಿವೆ. ಬದ್ಧತೆಗೆ ಮತ್ತೊಂದು ಹೆಸರು ಡಿ.ಕೆ. ಶಿವಕುಮಾರ್ ಆಗಿದ್ದು, ಹಿಡಿದ ಕೆಲಸವನ್ನು ಸಾಧಿಸುವ ಛಲ ಅವರಲ್ಲಿದೆ ಎಂದು ಶಿವಶಂಕರ್‌ ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ: ಸರ್ವ ಧರ್ಮ ಸ್ವಾಮೀಜಿಗಳ ಸಮ್ಮುಖದಲ್ಲಿ ಪೂರ್ವಾಭಿಮುಖವಾಗಿ ಪ್ರಮಾಣವಚನ ಸ್ವೀಕರಿಸಲಿರುವ ಡಿಕೆಶಿ

ಅವರು, ಡಿ.ಕೆ. ಶಿವಕುಮಾರ್ ಅವರ ಬಾಲ್ಯದಿಂದ ಸಿಎಂ ಹುದ್ದೆಯವರೆಗಿನ ರಾಜಕೀಯ ಪಯಣ, ಕುಟುಂಬದ ಇತಿಹಾಸ ಮತ್ತು ಅವರ ಬದ್ಧತೆಯ ಬಗ್ಗೆ ಹಂಚಿಕೊಂಡಿದ್ದಾರೆ. ಶರ್ಮಾ ಅವರು 1989ರಿಂದಲೂ ಡಿ.ಕೆ. ಶಿವಕುಮಾರ್ ಅವರ ಜೊತೆಗಿದ್ದು, ಅವರ ವೃತ್ತಿಜೀವನದ ಪ್ರತಿ ಹಂತವನ್ನೂ ಹತ್ತಿರದಿಂದ ಕಂಡಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯನಾಗಿ ಆರಂಭವಾದ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಜೀವನ ಶಾಸಕ, ಸಚಿವ, ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಹುದ್ದೆಗಳನ್ನು ದಾಟಿ ಇದೀಗ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದೆ. ಈ ಪಯಣದಲ್ಲಿ ಡಿಕೆಶಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆದಿರೋದಾಗಿ ಅವರು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಮಿತ್ ಶಾ ಜೊತೆ ಅಣ್ಣಾಮಲೈ ಮಾತುಕತೆ; ಮನವೊಲಿಕೆಗೆ ಬಿಜೆಪಿ ಹೈಕಮಾಂಡ್ ಕಸರತ್ತು – Kannada News

ನವದೆಹಲಿ, ಜೂನ್ 2: ಬಿಜೆಪಿಗೆ ರಾಜೀನಾಮೆ ನೀಡಿ ಸ್ವತಂತ್ರ ಹಾದಿ ಹಿಡಿಯಲು ನಿರ್ಧರಿಸಿರುವ ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ (K Annamalai) ಇಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಣ್ಣಾಮಲೈ ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎನ್ನಲಾಗಿದೆ. ಆದರೆ, ಅಣ್ಣಾಮಲೈ ಆಗಲಿ ಅಥವಾ ಬಿಜೆಪಿ ನಾಯಕರಾಗಲಿ ಇದುವರೆಗೂ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಇದರ ಬೆನ್ನಲ್ಲೇ ನಡೆದಿರುವ ಈ ಭೇಟಿ ತೀವ್ರ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಮೂಲಗಳ ಪ್ರಕಾರ, ಅಣ್ಣಾಮಲೈ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಕೊನೆಯ ಹಂತದ ಪ್ರಯತ್ನಗಳನ್ನು ನಡೆಸುತ್ತಿದೆ. ಹೀಗಾಗಿ, ಅಣ್ಣಾಮಲೈ ಅವರಿಗೆ ಕೆಲವು ದಿನಗಳ ಕಾಲ ದೆಹಲಿಯಲ್ಲೇ ಇರುವಂತೆ ಸೂಚಿಸಲಾಗಿದೆ. ಇಂದು ರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮತ್ತು ಅಣ್ಣಾಮಲೈ ನಡುವೆ ಈ ವಿಷಯದ ಕುರಿತು ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆಯಿದೆ. ನಾಳೆ ಅಥವಾ ನಾಡಿದ್ದು ತಮಿಳುನಾಡಿನಲ್ಲಿ ಅಣ್ಣಾಮಲೈ ಅವರು ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ತಾವು ಹೊಸ ಪಕ್ಷ ಕಟ್ಟುವ ವದಂತಿ ಬಗ್ಗೆ ಅಣ್ಣಾಮಲೈ ಹೇಳಿದ್ದೇನು?

ಸುದ್ದಿ ಸಂಸ್ಥೆ ANI ಮೂಲಗಳ ಪ್ರಕಾರ, ಅಣ್ಣಾಮಲೈ ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಮತ್ತು ಹಿರಿಯ ನಾಯಕ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಸಭೆಗಳಲ್ಲಿ ಅವರು ಪಕ್ಷಕ್ಕೆ ರಾಜೀನಾಮೆ ನೀಡುವ ಕುರಿತೇ ಪ್ರಮುಖವಾಗಿ ಮಾತುಕತೆ ನಡೆದಿದೆ ಎನ್ನಲಾಗಿದೆ. ರಾಜೀನಾಮೆ ನೀಡುವ ಕುರಿತು ಗಂಭೀರ ಚರ್ಚೆಗಳು ನಡೆದಿದ್ದರೂ ಸಹ, ಅಣ್ಣಾಮಲೈ ಅವರು ಇನ್ನೂ ಅಧಿಕೃತವಾಗಿ ತಮ್ಮ ರಾಜೀನಾಮೆ ಪತ್ರವನ್ನು ಪಕ್ಷಕ್ಕೆ ಸಲ್ಲಿಸಿಲ್ಲ ಎಂದು ಕೂಡ ಮೂಲಗಳು ಸ್ಪಷ್ಟಪಡಿಸಿವೆ.

ತಮಿಳುನಾಡಿನಲ್ಲಿ ಸ್ವತಂತ್ರವಾಗಿ ಪಕ್ಷ ಸಂಘಟಿಸಲು ಬಯಸಿದ್ದ ಅಣ್ಣಾಮಲೈ ಅವರಿಗೆ ಬಿಜೆಪಿ ಹೈಕಮಾಂಡ್ ಎಐಎಡಿಎಂಕೆ (AIADMK) ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಒತ್ತಡ ಹೇರಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಅವರನ್ನು ಈಗ ಸಮಾಧಾನ ಪಡಿಸಲು ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಜವಾಬ್ದಾರಿ ಅಥವಾ ಹುದ್ದೆ ನೀಡುವ ಭರವಸೆಯನ್ನು ಅಮಿತ್ ಶಾ ನೀಡಿದ್ದಾರೆ ಎನ್ನಲಾಗಿದೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಅವರಿಗೆ ರಾಜೀನಾಮೆ ನೀಡುವ ವೇಳೆ ಅಣ್ಣಾಮಲೈ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರದರ್ಶನದ ಕುರಿತು 5 ಪುಟಗಳ ಸುದೀರ್ಘ ವರದಿಯನ್ನು ಹಸ್ತಾಂತರಿಸಿದ್ದಾರೆ. ಮೈತ್ರಿ ರಾಜಕಾರಣದಿಂದ ಪಕ್ಷಕ್ಕೆ ಹೇಗೆ ಹಿನ್ನಡೆಯಾಯಿತು ಎಂಬುದನ್ನು ಅವರು ಅದರಲ್ಲಿ ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಣ್ಣಾಮಲೈ ಅವರ ಆಪ್ತ ವಲಯದಿಂದ ಬಂದ ಮಾಹಿತಿ ಪ್ರಕಾರ, ಅವರು ಬಿಜೆಪಿಯಿಂದ ಸೌಹಾರ್ದಯುತವಾಗಿ ಹೊರಬಂದು ತಮಿಳುನಾಡಿನಲ್ಲಿ ಹೊಸ ರಾಜಕೀಯ ಪಯಣ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಹೊಸ ಪಕ್ಷ ಕಟ್ಟಲು ಮುಂದಾದ್ರಾ ಬಿಜೆಪಿ ನಾಯಕ ಅಣ್ಣಾಮಲೈ?

ಅಣ್ಣಾಮಲೈ ಅವರು ಮುಂದಿನ 6 ರಿಂದ 8 ತಿಂಗಳಲ್ಲಿ ತಮಿಳುನಾಡಿನಲ್ಲಿ ಹೊಸ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಸಿಬಿಎಸ್‌ಇ 9ನೇ ತರಗತಿ ವಿದ್ಯಾರ್ಥಿಗಳಿಗೆ ತಂದ ‘ತ್ರಿಭಾಷಾ ಸೂತ್ರ’ವನ್ನು ಅಣ್ಣಾಮಲೈ ಬಹಿರಂಗವಾಗಿ ಟೀಕಿಸಿದ್ದರು. ಇದು ಅವರು ಈಗಾಗಲೇ ಬಿಜೆಪಿ ಸಿದ್ಧಾಂತದಿಂದ ದೂರ ಸರಿದು, ತಮಿಳುನಾಡಿನ ಜನರ ಪರವಾಗಿ ನಿಲ್ಲುವ ಮುನ್ಸೂಚನೆ ನೀಡುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಅಣ್ಣಾಮಲೈ ಅವರ ರಾಜೀನಾಮೆ ಸುದ್ದಿ ಬೆನ್ನಲ್ಲೇ ತಮಿಳುನಾಡು ಬಿಜೆಪಿಯಲ್ಲಿ ಆಂತರಿಕ ಬಿಕ್ಕಟ್ಟು ಸ್ಫೋಟಗೊಂಡಿದೆ. ಅಣ್ಣಾಮಲೈ ಅವರ ನಿರ್ಗಮನದಿಂದ ಬೇಸತ್ತು ತಮಿಳುನಾಡು ಬಿಜೆಪಿ ಮೀನುಗಾರರ ಘಟಕದ ಅಧ್ಯಕ್ಷ ಎಂ.ಸಿ. ಮುನುಸ್ವಾಮಿ ಅವರೂ ಸಹ ಇಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದು ತಮಿಳುನಾಡಿನಲ್ಲಿ ಬಿಜೆಪಿ ಸಂಪೂರ್ಣವಾಗಿ ನೆಲಕಚ್ಚುವ ಭೀತಿಯನ್ನು ಹುಟ್ಟುಹಾಕಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version