ಆಸ್ಟ್ರೇಲಿಯಾದಲ್ಲಿ ಭಾರತೀಯರಿಂದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ; ವಂದೇ ಮಾತರಂ ಜೈಕಾರ – Kannada News | PM Narendra Modi receives warm welcome from Indian community in Melbourne

ಮೆಲ್ಬೋರ್ನ್, ಜುಲೈ 8: 3 ರಾಷ್ಟ್ರಗಳ ಪ್ರವಾಸದ ಎರಡನೇ ಹಂತವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ತಮ್ಮ 3 ದಿನಗಳ ಅಧಿಕೃತ ಭೇಟಿಗಾಗಿ ಆಸ್ಟ್ರೇಲಿಯಾಗೆ ಆಗಮಿಸಿದ್ದಾರೆ. ಈ ವೇಳೆ ಆಸ್ಟ್ರೆಲಿಯಾದ ಅನಿವಾಸಿ ಭಾರತೀಯರು ಅವರಿಗೆ ಅತ್ಯಂತ ಅದ್ಧೂರಿ ಸ್ವಾಗತ ಕೋರಿದ್ದಾರೆ. ಪ್ರಧಾನಿ ಮೋದಿ (PM Modi in Australia) ಮೆಲ್ಬೋರ್ನ್ ತಲುಪುತ್ತಿದ್ದಂತೆ, ಭಾರತೀಯ ಸಮುದಾಯದ ನೂರಾರು ಸದಸ್ಯರು ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಅವರನ್ನು ಬರಮಾಡಿಕೊಂಡರು. ಇದೇ ವೇಳೆ ‘ಆಸ್ಟ್ರೇಲಿಯನ್ ಇಂಡಿಯನ್ ಆರ್ಕೆಸ್ಟ್ರಾ’ ತಂಡವು ಪ್ರಸ್ತುತಪಡಿಸಿದ “ವಂದೇ ಮಾತರಂ” ಗೀತೆಯ ಗಾಯನ ಎಲ್ಲರ ಗಮನ ಸೆಳೆಯಿತು. ಅಲ್ಲಿ ನೆರೆದಿದ್ದ ಜಗತ್ತಿನಾದ್ಯಂತದ ಭಾರತೀಯರು “ಭಾರತ್ ಮಾತಾ ಕೀ ಜೈ” ಮತ್ತು “ಮೋದಿ, ಮೋದಿ” ಎಂಬ ಘೋಷಣೆಗಳನ್ನು ಕೂಗುತ್ತಾ ತಾಯ್ನಾಡಿನ ನಾಯಕನನ್ನು ಬರಮಾಡಿಕೊಂಡರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

‘ಅಯೋಗ್ಯ 2’ ಸಿನಿಮಾದ ಹೊಸ ಹಾಡಿನಲ್ಲಿ ಸತೀಶ್ ನೀನಾಸಂ ಮಾಸ್ ಅವತಾರ – Kannada News | Bharjari Chethan Kumar talks about Ayogya 2 movie Anna Bandre song ft Sathish Ninasam

ಸತೀಶ್ ನೀನಾಸಂ ನಟನೆಯ ‘ಅಯೋಗ್ಯ 2’ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ‘ಅಯೋಗ್ಯ’ ರೀತಿಯೇ ‘ಅಯೋಗ್ಯ 2’ ಚಿತ್ರದ ಹಾಡುಗಳು ಕೂಡ ಗಮನ ಸೆಳೆಯುತ್ತಿವೆ. ಮಹೇಶ್ ಕುಮಾರ್ ನಿರ್ದೇಶನದ ಈ ಸಿನಿಮಾಗೆ ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದಾರೆ. ‘ಅಣ್ಣ ಬಂದ್ರೆ..’ ಹಾಡನ್ನು ಈಗ ರಿಲೀಸ್ ಮಾಡಲಾಗಿದೆ. ಈ ಹಾಡಿಗೆ ಆ್ಯಂಟನಿ ದಾಸನ್ ಅವರು ಧ್ವನಿ ನೀಡಿದ್ದಾರೆ. ಚೇತನ್ ಕುಮಾರ್ ಅವರು ಸಾಹಿತ್ಯ ಬರೆದಿದ್ದಾರೆ. ಈ ಹಾಡಿನಲ್ಲಿ ಸತೀಶ್ ನೀನಾಸಂ (Sathish Ninasam) ಅವರು ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಚೇತನ್ ಕುಮಾರ್ ಅವರು ಮಾತನಾಡಿದ್ದಾರೆ. ಸತೀಶ್ ಅವರನ್ನು ಈ ರೀತಿ ಮಾಸ್ ಅವತಾರದಲ್ಲಿ ನೋಡಬೇಕು ಎಂಬುದು ಅಭಿಮಾನಿಗಳ ಆಸೆ ಆಗಿತ್ತು. ಅದು ‘ಅಯೋಗ್ಯ 2’ ಸಿನಿಮಾದ ಈ ಹಾಡಿನ ಮೂಲಕ ಈಡೇರಿದೆ ಎಂದು ಚೇತನ್ ಕುಮಾರ್ ಅವರು ಹೇಳಿದ್ದಾರೆ. ಆಗಸ್ಟ್ 7ರಂದು ಈ ಸಿನಿಮಾ ತೆರೆಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಗನ ಬರ್ತಡೇ ಪ್ರಯುಕ್ತ ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ ಬಣ್ಣ ಹಚ್ಚಿಸಿದ ಮುಖ್ಯಶಿಕ್ಷಕಿ – Kannada News | Government School Headmistress Paints School with Her Own Money to Celebrate Son’s Birthday

ಮುಖ್ಯಶಿಕ್ಷಕಿ ಉಮೈ ಸಲ್ಮಾ ಕಡೂರುImage Credit source: tv9 kannada

ಹಾವೇರಿ, ಜುಲೈ 08: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳೆಂದರೆ (government school) ಮೂಗು ಮುರಿಯುವವರೇ ಹೆಚ್ಚಾಗಿದ್ದಾರೆ. ಮೂಲಸೌಕರ್ಯಗಳ ಕೊರತೆ ಎಂಬ ಕಾರಣಕ್ಕೆ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ, ಇಲ್ಲೊಬ್ಬರು ಮುಖ್ಯಶಿಕ್ಷಕಿ ತಮ್ಮ ಸ್ವಂತ ಮಗನ ಜನ್ಮದಿನದ ಆಚರಣೆಯ ದುಂದುವೆಚ್ಚಕ್ಕೆ ಬ್ರೇಕ್ ಹಾಕಿ, ಆ ಹಣದಲ್ಲಿ ತಾವು ಸೇವೆ ಸಲ್ಲಿಸುತ್ತಿರುವ ಶಾಲೆಗೆ ಬಣ್ಣ ಬಳಿಯುವ ಮೂಲಕ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ಶಾಲೆಯ ಗೋಡೆಗಳಿಗೆ ರೈಲ್ವೆ ಡಬ್ಬಿಯ (ಕೋಚ್) ರೂಪ ನೀಡಿ ಸರ್ಕಾರಿ ಶಾಲೆಗೆ ಹೊಸ ಕಳೆ ತಂದಿದ್ದಾರೆ.

ಬಣ್ಣವಿಲ್ಲದೇ ಕಳೆಗುಂದಿದ್ದ ಶಾಲೆ

ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಹಂಸಭಾವಿ ಗ್ರಾಮದ ಸರ್ಕಾರಿ ಉರ್ದು ಶಾಲೆಗೆ ಇದೀಗ ಹೊಸ ಕಳೆ ಬಂದಿದೆ. ಶಾಲೆಯ ಮುಖ್ಯಶಿಕ್ಷಕಿ ಉಮೈ ಸಲ್ಮಾ ಕಡೂರು ತಮ್ಮ ಮಗ ಮಲ್ಲೀಕ್ ರೆಹನ್ (26) ಜನ್ಮದಿನ ಪ್ರಯುಕ್ತ ಶಾಲೆಗೆ ಬಣ್ಣ ಮಾಡಿಸಿದ್ದಾರೆ. ಮುಖ್ಯಶಿಕ್ಷಕಿ ಉಮೈ ಸಲ್ಮಾ ಕಡೂರು ಕಳೆದ ನಾಲ್ಕು ವರ್ಷಗಳಿಂದ ಇದೇ ಶಾಲೆಯಲ್ಲಿ ಮುಖ್ಯಶಿಕ್ಷಕಿ ಆಗಿದ್ದಾರೆ. ಈ ಶಾಲೆಯ ಕೊಠಡಿಗಳಿಗೆ ಸರಿಯಾಗಿ ಬಣ್ಣ ಬಳಿಯದ ಕಾರಣ ಶಾಲಾ ಆವರಣ ಕಳೆಗುಂದಿತ್ತು. ಇದರ ಬಗ್ಗೆ ಪೋಷಕರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ‘ಚಡ್ಡಿ’ ಮುಜುಗರ! 7ನೇ ತರಗತಿ ಬಾಲಕರಿಗೂ ಹಾಫ್ ಪ್ಯಾಂಟ್ ಬಟ್ಟೆ ವಿತರಣೆ, ಪೋಷಕರಿಗೆ ಇಕ್ಕಟ್ಟು

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾದ ಮುಖ್ಯಶಿಕ್ಷಕಿ ಉಮೈ ಸಲ್ಮಾ, ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. “ನೀವು ಶಾಲೆಯ ವಾರ್ಷಿಕೋತ್ಸವದ ಖರ್ಚು-ವೆಚ್ಚಗಳನ್ನು ನೋಡಿಕೊಳ್ಳಿ, ನಾನು ನನ್ನ 26 ವರ್ಷದ ಮಗ ಮಲ್ಲಿಕ್ ರೆಹನ್ ಹುಟ್ಟಹಬ್ಬದ ನೆನಪಿಗಾಗಿ ಶಾಲೆಗೆ ಸಂಪೂರ್ಣ ಬಣ್ಣ ಹಚ್ಚಿಸುವ ಜವಾಬ್ದಾರಿ ಹೊರುತ್ತೇನೆ” ಎಂದು ತಿಳಿಸಿದ್ದರು. ಅದರಂತೆ ತಮ್ಮ ಸ್ವಂತ ಉಳಿತಾಯದ ಸುಮಾರು 2 ಲಕ್ಷ ರೂ ಹಣವನ್ನು ಖರ್ಚು ಮಾಡಿ ಇಡೀ ಶಾಲೆಗೆ ಹೊಸ ರೂಪ ನೀಡಿದ್ದಾರೆ.

  90ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ

ಈ ಸರ್ಕಾರಿ ಉರ್ದು ಶಾಲೆಯಲ್ಲಿ 1 ರಿಂದ 7ನೇ ತರಗತಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 90ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇದೀಗ ಶಾಲೆಗೆ ಬಣ್ಣ ಹಚ್ಚಿದಕ್ಕೆ ಮಕ್ಕಳೂ ಖುಷಿಯಾಗಿದ್ದಾರೆ. ಶಾಲೆಗೆ ಆಗಮಿಸುತ್ತಿದ್ದಂತೆ ರೈಲ್ವೆ ಡಬ್ಬಿಯಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದೇವೆ ಎನ್ನುವ ಮನೋಭಾವ ಮಕ್ಕಳಲ್ಲಿ ಉಂಟಾಗಿದೆ.‌ ಆ ಮೂಲಕ ಸರ್ಕಾರಿ ಶಾಲೆಗೆ ಮಕ್ಕಳು ಬರುವಂತೆ ಮಾಡಿದ್ದಾರೆ.

ಇದನ್ನೂ ಓದಿ: ಮೋಡ ಬಿತ್ತನೆಗೆ ಚಾಲನೆ ಬೆನ್ನಲ್ಲೇ ಸುರಿದ ಮಳೆ: ಪ್ರಯತ್ನ ಫಲ ನೀಡಿದೆ ಎಂದ ಶಾಸಕ; ರೈತರೂ ಖುಷ್​

ಒಟ್ಟಿನಲ್ಲಿ ಮಗನ ಹುಟ್ಟಹಬ್ಬದ ಹೆಸರಿನಲ್ಲಿ ಅನಗತ್ಯ ಹಣ ಪೋಲು ಮಾಡದೆ, ತಾವು ಕರ್ತವ್ಯ ನಿರ್ವಹಿಸುವ ಶಾಲೆಯನ್ನೇ ಸೃಜನಾತ್ಮಕವಾಗಿ ಸಕಲ ಸೌಂದರ್ಯದೊಂದಿಗೆ ಕಂಗೊಳಿಸುವಂತೆ ಮಾಡಿದ ಮುಖ್ಯಶಿಕ್ಷಕಿ ಉಮೈ ಸಲ್ಮಾ ಅವರ ಕಾರ್ಯಕ್ಕೆ ಹಂಸಭಾವಿ ಗ್ರಾಮಸ್ಥರು ಹಾಗೂ ಸಾರ್ವಜನಿಕ ವಲಯದಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs ENG: ಸಂಜುಗೆ ಸಿಗುತ್ತಾ ಅವಕಾಶ? 4ನೇ ಪಂದ್ಯಕ್ಕೆ ಹೇಗಿರಲಿದೆ ಪ್ಲೇಯಿಂಗ್ 11? – Kannada News | India vs England 4th T20: Can Shreyas Iyer’s team bounce back? Possible XI changes!

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಭಾರತ (India vs England) ತಂಡವು 125 ರನ್‌ಗಳ ಹೀನಾಯ ಸೋಲು ಅನುಭವಿಸಿತು. ಈ ಸೋಲಿನೊಂದಿಗೆ ಸರಣಿಯಲ್ಲಿ 2-0 ಅಂತರದ ಹಿನ್ನಡೆಯನ್ನು ಅನುಭವಿಸಿತು. ಇದೀಗ ಟೀಂ ಇಂಡಿಯಾ ಸರಣಿ ಗೆಲ್ಲಲು ಸಾಧ್ಯವಿಲ್ಲ. ಕಡೆಯ ಪಕ್ಷ ಸರಣಿಯನ್ನು 2-2 ರ ಸಮಬಲದೊಂದಿಗೆ ಅಂತ್ಯಗೊಳಿಸಲು ಟೀಂ ಇಂಡಿಯಾ ಪ್ರಯತ್ನಿಸಬೇಕಿದೆ. ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ದರೂ ಅವರ್ಯಾರು ತಂಡಕ್ಕೆ ಗೆಲುವು ತಂದುಕೊಡುವಂತಹ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ಶ್ರೇಯಸ್ ಅಯ್ಯರ್ (Shreyas Iyer) ಪಡೆಗೆ ಗೆಲುವು ಎಂಬುದು ಮರಿಚಿಕೆಯಾಗಿ ಉಳಿದಿದೆ. ಹೀಗಾಗಿ 4ನೇ ಟಿ20 ಪಂದ್ಯವನ್ನು ಗೆಲ್ಲಬೇಕಾದರೆ, ಟೀಂ ಇಂಡಿಯಾ ವಿಶೇಷ ತಂತ್ರದೊಂದಿಗೆ ಹಾಗೂ ಬಲಿಷ್ಠ ಪ್ಲೇಯಿಂಗ್ 11ನೊಂದಿಗೆ ಕಣಕ್ಕಿಳಿಯಬೇಕಿದೆ.

ಬ್ಯಾಟಿಂಗ್ ವಿಭಾಗದಲ್ಲಿ 1 ಬದಲಾವಣೆ

ಟೀಂ ಇಂಡಿಯಾದ ಬ್ಯಾಟಿಂಗ್‌ ವಿಭಾಗ ಸಂಪೂರ್ಣ ಹಳಿ ತಪ್ಪಿದೆ ಎಂಬುದರಲ್ಲಿ ಸುಳಿಲ್ಲ. ಟಿ20 ಸ್ಪೆಷಲಿಸ್ಟ್​ಗಳೇ ತಂಡದಲ್ಲಿದ್ದರೂ ಅವರ ಕಳಪೆ ಫಾರ್ಮ್​ ತಂಡಕ್ಕೆ ದೊಡ್ಡ ಹೊರೆಯಾಗಿದೆ. ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ತಂಡಕ್ಕೆ ಆರಂಭ ಒದಗಿಸಿಕೊಡುವಲ್ಲಿ ಎಡವುತ್ತಿದ್ದಾರೆ. ಇದು ತಂಡವನ್ನು ಒತ್ತಡಕ್ಕೆ ಸಿಲುಕಿಸುತ್ತಿದೆ. ಆದಾಗ್ಯೂ 4ನೇ ಟಿ20 ಪಂದ್ಯಕ್ಕೆ ಆರಂಭಿಕರು ಬದಲಾಗುವ ಸಾಧ್ಯತೆಗಳಿವೆ. ಆದರೆ ಮೂರನೇ ಕ್ರಮಾಂಕದಲ್ಲಿ ಬರುವ ಇಶಾನ್ ಕಿಶನ್ ಬದಲಿಗೆ ಸಂಜು ಸ್ಯಾಮ್ಸನ್ ಅವರನ್ನು ಕಣಕ್ಕಿಳಿಸಬಹುದಾಗಿದೆ. ಏಕೆಂದರೆ ಇಶಾನ್ ಕಿಶನ್ ಕಳೆದ ಐದು ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ.

ಮಧ್ಯಮ ಕ್ರಮಾಂಕ ಹೇಗಿರಲಿದೆ?

4ನೇ ಕ್ರಮಾಂಕದಲ್ಲಿ ಬರುವ ಶ್ರೇಯಸ್ ಅಯ್ಯರ್ ಕೂಡ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ. ಆದರೆ ಅಯ್ಯರ್​ಗೆ ನಾಯಕನ ಪಟ್ಟ ಕಟ್ಟಿರುವ ಕಾರಣ ಅವರು ಈ ಪಂದ್ಯದಲ್ಲಿ ಆಡುವುದು ಖಚಿತ. ಕಳಪೆ ಸ್ಟ್ರೈಕ್ ರೇಟ್​ನಿಂದ ತಂಡಕ್ಕೆ ಹೊರೆ ಎನಿಸಿರುವ ತಿಲಕ್ ವರ್ಮಾ ಅವರನ್ನು ತಂಡದಿಂದ ಕೈಬಿಡಬೇಕು ಎಂದು ಒತ್ತಾಯಿಸಲಾಗುತ್ತಿದೆ. ಆದರೆ ಉಪನಾಯಕತ್ವವಹಿಸಿಕೊಂಡಿರುವ ಕಾರಣ ತಿಲಕ್​ಗೆ ಈ ಸರಣಿಯಲ್ಲಿ ಕೊನೆಯ ಅವಕಾಶ ಸಿಗುವುದು ಖಚಿತವಾಗಿದೆ. ಉಳಿದಿರುವ ಎರಡು ಪಂದ್ಯಗಳಲ್ಲಿ ತಿಲಕ್ ಮಿಂಚದಿದ್ದರೆ ಅವರಿಗೆ ಗೇಟ್​ಪಾಸ್ ಖಚಿತ.

IND vs ENG: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಿಂದ ಹೊರಬಿದ್ದ ಟೀಂ ಇಂಡಿಯಾದ ಸ್ಟಾರ್ ಓಪನರ್

ಬೌಲಿಂಗ್ ವಿಭಾಗದಲ್ಲಿ ಯಾರ್ಯಾರು?

ಇನ್ನು ಆಲ್‌ರೌಂಡರ್​ಗಳ ಖೋಟಾದಲ್ಲಿ ಎಂದಿನಂತೆ ಶಿವಂ ದುಬೆ ಹಾಗೂ ಅಕ್ಷರ್ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ. ಹರ್ಷಿತ್ ರಾಣಾ ಕೂಡ ಬೌಲಿಂಗ್ ಜೊತೆಗೆ ಬ್ಯಾಟಿಂಗ್​ನಲ್ಲೂ ಬಲ ತುಂಬಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಅರ್ಷದೀಪ್ ಸಿಂಗ್ ಹಾಗೂ ಪ್ರಿನ್ಸ್ ಯಾದವ್ ಕಾಣಿಸಿಕೊಂಡರೆ, ವರುಣ್ ಚಕ್ರವರ್ತಿ ಸ್ಪಿನ್ನರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

4ನೇ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ 11: ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್/ ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ, ಅಕ್ಷರ್ ಪಟೇಲ್, ಶಿವಂ ದುಬೆ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ ಮತ್ತು ಪ್ರಿನ್ಸ್ ಯಾದವ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶೂಟ್ ಮಾಡ್ಬೇಕಾ?; ಭೀಕರ ದಾಳಿಯ ಎಚ್ಚರಿಕೆ ನೀಡಿದ ಟ್ರಂಪ್​ಗೆ ಇರಾನ್ ತಿರುಗೇಟು – Kannada News | Iran hits back to Donald Trump with finger on the trigger warning

ಟೆಹ್ರಾನ್, ಜುಲೈ 8: ಕೊಂಚ ತಣ್ಣಗಾಗಿದ್ದ ಅಮೆರಿಕ ಮತ್ತು ಇರಾನ್ (Iran War) ನಡುವಿನ ಯುದ್ಧ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಕದನವಿರಾಮ ಅಂತ್ಯವಾಗಿದೆ ಎಂದು ಘೋಷಿಸಿರುವ ಟ್ರಂಪ್ ಇರಾನ್ ಮೇಲೆ ದಂಡೆತ್ತಿ ಹೋಗುವ ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವಿನ ಜಾಗತಿಕ ಯುದ್ಧ ಇದೀಗ ಮತ್ತಷ್ಟು ಭೀಕರವಾಗುತ್ತಿದೆ. ಇಂದು ರಾತ್ರಿಯೇ ಇರಾನ್ ಮೇಲೆ ಮತ್ತೊಂದು ಸುತ್ತಿನ ಭೀಕರ ಮಿಲಿಟರಿ ದಾಳಿ ನಡೆಸಲು ಅಮೆರಿಕ ಸಜ್ಜಾಗುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಒಂದುವೇಳೆ ಇರಾನ್ ತನ್ನ ಉದ್ಧಟತನವನ್ನು ಮುಂದುವರಿಸಿದರೆ ಇರಾನ್​ನ ಮೂಲಸೌಕರ್ಯಗಳನ್ನೂ ಧ್ವಂಸಗೊಳಿಸುವುದಾಗಿ ಎಚ್ಚರಿಸಿದ್ದಾರೆ. ಇದಕ್ಕೆ ಇರಾನ್ ಕೂಡ ತಿರುಗೇಟು ನೀಡಿದೆ.

ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ಮತ್ತು ಗಲ್ಫ್ ವಲಯದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಇರಾನ್ ಸರಣಿ ದಾಳಿ ನಡೆಸಿದ ಬೆನ್ನಲ್ಲೇ, ಟ್ರಂಪ್ ಕದನ ವಿರಾಮ ಒಪ್ಪಂದವನ್ನು ಕೊನೆಗೊಳಿಸಿದ್ದಾರೆ. ಇಂದು ಟರ್ಕಿಯ ಅಂಕಾರಾದಲ್ಲಿ ನಡೆಯುತ್ತಿರುವ ನ್ಯಾಟೋ (NATO) ಶೃಂಗಸಭೆಯ ಸಂದರ್ಭದಲ್ಲಿ ಮಾತನಾಡಿದ ಟ್ರಂಪ್, “ನಾವು ನಿನ್ನೆ ರಾತ್ರಿ ಇರಾನ್ ಮೇಲೆ ಅತ್ಯಂತ ಭೀಕರವಾಗಿ ದಾಳಿ ಮಾಡಿದ್ದೇವೆ. ಬಹುಶಃ ಇಂದು ರಾತ್ರಿ ಕೂಡ ಅವರ ಮೇಲೆ ಅಷ್ಟೇ ಭೀಕರವಾಗಿ ದಾಳಿ ನಡೆಸಲಿದ್ದೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಕದನ ವಿರಾಮ ಅಂತ್ಯವೆಂದು ಘೋಷಿಸಿದ ಟ್ರಂಪ್; ಇರಾನ್ ಮೇಲೆ ಅಮೆರಿಕದಿಂದ ಭೀಕರ ವೈಮಾನಿಕ ದಾಳಿ

ಒಂದು ವೇಳೆ ಸಂಘರ್ಷ ಉಲ್ಬಣಿಸಿದರೆ, ಇರಾನ್‌ನ ವಿದ್ಯುತ್ ಉತ್ಪಾದನಾ ಘಟಕಗಳು ಮತ್ತು ಕುಡಿಯುವ ನೀರಿನ ಶುದ್ಧೀಕರಣ ಸ್ಥಾವರಗಳನ್ನು ಅಮೆರಿಕ ನಾಶ ಮಾಡಲಿದೆ ಎಂದು ಟ್ರಂಪ್ ಬೆದರಿಕೆ ಹಾಕಿದ್ದಾರೆ. ಇರಾನ್‌ನ ಒಟ್ಟು ತೈಲ ರಫ್ತಿನ ಶೇ. 90ರಷ್ಟು ಭಾಗವನ್ನು ನಿರ್ವಹಿಸುವ ‘ಖಾರ್ಗ್ ದ್ವೀಪ’ವನ್ನು ಅಮೆರಿಕ ತನ್ನ ವಶಕ್ಕೆ ತೆಗೆದುಕೊಳ್ಳಲಿದೆ ಎಂದು ಕೂಡ ಟ್ರಂಪ್ ಹೇಳಿದ್ದಾರೆ.

ಇರಾನ್ ಹೇಳಿದ್ದೇನು?:

ಅಮೆರಿಕದ ಬೆದರಿಕೆಗಳಿಗೆ ಇರಾನ್ ಕೂಡ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಇರಾನ್‌ನ ಸುಪ್ರೀಂ ನಾಯಕರ ಹಿರಿಯ ಸಲಹೆಗಾರರಾದ ಅಲಿ ಅಕ್ಬರ್ ವೇಲಾಯತಿ ಪ್ರತಿಕ್ರಿಯೆ ನೀಡಿದ್ದು, ಗಲ್ಫ್ ವಲಯದಲ್ಲಿ ಮತ್ತೆ ಯುದ್ಧದ ವಾತಾವರಣ ಸೃಷ್ಟಿಯಾಗಲು ಅಮೆರಿಕವೇ ಕಾರಣ ಎಂದು ನೇರವಾಗಿ ಆರೋಪ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಒಪ್ಪಂದದ ರದ್ದತಿ ಘೋಷಣೆಯು ಇಡೀ ಪ್ರದೇಶವನ್ನು ಮತ್ತೆ ಬೆಂಕಿಯ ಜ್ವಾಲೆಗೆ ತಳ್ಳಿದೆ ಎಂದು ಅವರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಅಮೆರಿಕ- ಇರಾನ್ ನಡುವಿನ ಕದನ ವಿರಾಮ ಅಂತ್ಯ; ಭಾರತದ ತಲೆಬಿಸಿಗೆ ಕಾರಣಗಳಿವು 

ನಮ್ಮ ಬೆರಳು ಟ್ರಿಗರ್ ಮೇಲಿದೆ:

ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ವೇಲಾಯತಿ, “ಈ ಗಲ್ಫ್ ಪ್ರದೇಶವು ಸಣ್ಣ ದೇಶಗಳ ರಾಜಕೀಯ ಜೂಜಾಟದ ಮೈದಾನವಲ್ಲ ಎಂದು ನಾವು ಈ ಹಿಂದೆಯೇ ಎಚ್ಚರಿಸಿದ್ದೆವು. ಯಾವುದೇ ಆಕ್ರಮಣ ನಡೆದರೂ ನಾವು ತಕ್ಷಣವೇ ಅದಕ್ಕೆ ಪ್ರತ್ಯುತ್ತರ ನೀಡಲಿದ್ದೇವೆ ಎಂಬುದನ್ನು ಪದೇ ಪದೇ ಸಾಬೀತುಪಡಿಸಿದ್ದೇವೆ. ಈ ಬಾರಿಯೂ ಹಾಗೆಯೇ ಆಗಲಿದೆ. ನಮ್ಮ ಬೆರಳುಗಳು ಕೂಡ ಗನ್​ನ ಟ್ರಿಗರ್ ಮೇಲೆಯೇ ಇದೆ” ಎಂದಿದ್ದಾರೆ.

ಕಚ್ಚಾ ತೈಲದ ಬೆಲೆ ಏರಿಕೆ:

ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಅಂತ್ಯಗೊಂಡಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ದಿಢೀರನೆ ಏರಿಕೆ ಕಂಡಿವೆ. ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿದ್ದಾಗಲೂ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆದಿರುವುದು ಇರಾನ್ ನಾಯಕತ್ವದೊಳಗಿನ ಆಂತರಿಕ ಭಿನ್ನಾಭಿಪ್ರಾಯವನ್ನು ತೋರಿಸುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇಸ್ರೇಲ್-ಇರಾನ್-ಅಮೆರಿಕದ ಯುದ್ಧದ ಆರಂಭದಲ್ಲೇ ಹತ್ಯೆಯಾಗಿದ್ದ ಇರಾನ್‌ನ ಸುಪ್ರೀಂ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆ ಗುರುವಾರ ಮುಕ್ತಾಯಗೊಳ್ಳಲಿದ್ದು, ಅದರ ನಂತರ ದೀರ್ಘಾವಧಿಯ ಶಾಂತಿ ಮಾತುಕತೆಗಳು ಆರಂಭವಾಗಬೇಕಿತ್ತು. ಆದರೆ ಅಂತ್ಯಕ್ರಿಯೆಯ ಅವಧಿಯಲ್ಲೇ ಕದನ ವಿರಾಮ ಮುರಿದುಬಿದ್ದಿರುವುದರಿಂದ ಗಲ್ಫ್ ರಾಷ್ಟ್ರಗಳಲ್ಲಿ ಮತ್ತೆ ಯುದ್ಧದ ಭೀತಿ ಆವರಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 10:34 pm, Wed, 8 July 26

Source link

ಶಾಸಕಿ ನಯನಾ ಮೋಟಮ್ಮ ವಿರುದ್ಧ ಅಸಮಾಧಾನ ಸ್ಫೋಟ: ಸ್ವಪಕ್ಷದವರಿಂದಲೇ ಬಿಕೆ ಹರಿಪ್ರಸಾದ್​​ಗೆ ದೂರು – Kannada News | Congress MLA Nayana Motamma Faces Internal Revolt: Party Workers Lodge Complaint with BK Hariprasad

ಶಾಸಕಿ ನಯನಾ ಮೋಟಮ್ಮ ವಿರುದ್ಧ ದೂರುImage Credit source: tv9 kannada

ಚಿಕ್ಕಮಗಳೂರು, ಜುಲೈ 08: ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನಲ್ಲಿ (Congress) ಆಂತರಿಕ ಭಿನ್ನಮತ ಹಾಗೂ ಅಸಮಾಧಾನ ಸ್ಫೋಟಗೊಂಡಿದೆ. ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ (Nayana Motamma) ಅವರ ಕಾರ್ಯವೈಖರಿ ವಿರುದ್ಧ ಸ್ವತಃ ತಮ್ಮದೇ ಪಕ್ಷದ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್​​ರನ್ನು ಭೇಟಿ ಮಾಡಿ ಲಿಖಿತ ದೂರು ಸಲ್ಲಿಸಿದ್ದಾರೆ. ಮಾಜಿ ಸಚಿವ ಬಿ.ಬಿ. ನಿಂಗಯ್ಯ ಹಾಗೂ ಮಾಜಿ ಶಾಸಕ ಕುಮಾರಸ್ವಾಮಿ ಸೇರಿದಂತೆ 45ಕ್ಕೂ ಹೆಚ್ಚು ಪ್ರಮುಖ ಮುಖಂಡರು ಸಹಿ ಹಾಕಿರುವ 16 ಪ್ರಮುಖ ಅಂಶಗಳನ್ನೊಳಗೊಂಡ ದೂರಿನ ಪತ್ರವನ್ನು ಹಸ್ತಾಂತರಿಸಲಾಗಿದೆ.

ದೂರಿನಲ್ಲೇನಿದೆ? 

ಶಾಸಕಿ ನಯನಾ ಮೋಟಮ್ಮ ಹಲವು ವರ್ಷಗಳಿಂದ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಮೂಲ ಕಾಂಗ್ರೆಸ್ ಕಾರ್ಯಕರ್ತರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದ್ದಾರೆ ಎಂದು ಮೂಡಿಗೆರೆ ಕಾಂಗ್ರೆಸ್ ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ. 2023ರ ಚುನಾವಣೆಯ ನಂತರ ಪಕ್ಷಕ್ಕೆ ಸೇರಿದ ಆರ್‌ಎಸ್‌ಎಸ್ ಹಾಗೂ ಬಜರಂಗದಳದ ಹಿನ್ನೆಲೆಯುಳ್ಳವರೊಂದಿಗೆ ಶಾಸಕಿ ತಮ್ಮದೇ ಆದ ಪಟಾಲಂ ಕಟ್ಟಿಕೊಂಡು ಅತ್ಯಾಪ್ತತೆ ಹೊಂದಿದ್ದಾರೆ. ಅಷ್ಟೇ ಅಲ್ಲದೆ, ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್​ರನ್ನ ಆರ್‌ಎಸ್‌ಎಸ್ ಮತ್ತು ಬಜರಂಗದಳದ ಕಾರ್ಯಕರ್ತರೊಂದಿಗೆ ಸೇರಿ ಶಾಸಕಿ ಸ್ವಾಗತಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಭ್ರಷ್ಟಾಚಾರ ಆರೋಪ: ಲೋಕಾಯುಕ್ತಕ್ಕೆ ಸ್ವಯಂ ಪ್ರೇರಿತವಾಗಿ ದಾಖಲೆ ಸಮೇತ ಉತ್ತರ ಸಲ್ಲಿಸಿದ ಶಾಸಕ ಸುರೇಶ್ ಕುಮಾರ್

ಮೂಲ ಕಾಂಗ್ರೆಸಿಗರಿಗೆ ಕ್ಷೇತ್ರದಲ್ಲಿ ಯಾವುದೇ ಅವಕಾಶ ನೀಡದ ಕಾರಣ, ನಿಷ್ಠಾವಂತ ಕಾರ್ಯಕರ್ತರು ಪಕ್ಷದ ಚಟುವಟಿಕೆಗಳಿಂದ ದೂರ ಉಳಿಯುತ್ತಿದ್ದು, ಇದು ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಭಾರೀ ಹಿನ್ನಡೆಗೆ ಕಾರಣವಾಗಲಿದೆ ಎಂದು ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.

ಪಕ್ಷದ ಸಾಂಸ್ಥಿಕ ನಿಯಮಗಳ ಉಲ್ಲಂಘನೆ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಯನಾ ಮೋಟಮ್ಮ ಶಾಸಕರಾದ ದಿನದಿಂದ ಇಂದಿನವರೆಗೂ ಮೂಡಿಗೆರೆಯ ಅಧಿಕೃತ ಕಾಂಗ್ರೆಸ್ ಕಚೇರಿಗೆ ಕಾಲಿಟ್ಟಿಲ್ಲ ಹಾಗೂ ಯಾವುದೇ ಸಮನ್ವಯ ಸಭೆಗಳನ್ನು ನಡೆಸಿಲ್ಲ. ಕೆಪಿಸಿಸಿ ನೀಡುವ ಸೂಚನೆಗಳನ್ನು ಮತ್ತು ಸಭೆಗಳನ್ನು ಅವರು ನಿರ್ಲಕ್ಷಿಸುತ್ತಿದ್ದಾರೆ.

ಶಾಸಕಿ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹ

ಇನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಯಾವುದೇ ಅನುಮೋದನೆ ಪಡೆಯದೆ, ಚುನಾವಣಾ ಆಯೋಗಕ್ಕೆ ನೀಡಬೇಕಾದ BLA2 (ಬೂತ್ ಮಟ್ಟದ ಏಜೆಂಟ್) ನೇಮಕಾತಿ ಪಟ್ಟಿಯನ್ನು ಏಕಪಕ್ಷೀಯವಾಗಿ ಸಿದ್ಧಪಡಿಸಿ ಸಲ್ಲಿಸಿದ್ದಾರೆ. ಅಲ್ಲದೆ, ಸ್ಥಳೀಯ ಸಂಘಟನೆಗಳನ್ನು ಬದಿಗೊತ್ತಿ ತಮ್ಮ ಹಿಂಬಾಲಕರನ್ನೇ ಹೋಬಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ ಎಂದು ಹಿರಿಯ ನಾಯಕರು ದೂರಿನ ಪಟ್ಟಿಯಲ್ಲಿ ವಿವರಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಕ್ಷೇತ್ರದಲ್ಲಿ ಪಕ್ಷದ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದ್ದು, ಕೆಪಿಸಿಸಿ ಅಧ್ಯಕ್ಷರು ತಕ್ಷಣವೇ ಮಧ್ಯಪ್ರವೇಶಿಸಿ ಶಿಸ್ತುಕ್ರಮ ಕೈಗೊಳ್ಳುವಂತೆ ಮೂಡಿಗೆರೆ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದೆಹಲಿಯಲ್ಲಿ ಭಾರಿ ಮಳೆಯಿಂದ ಕಟ್ಟಡ ಕುಸಿತ; ಓರ್ವ ಸಾವು, ಅವಶೇಷಗಳಡಿ ಸಿಲುಕಿದ ನಾಲ್ವರಿಗಾಗಿ ಹುಡುಕಾಟ – Kannada News | One killed and 4 people trapped after building collapses in Rohini Delhi rains

ನವದೆಹಲಿ, ಜುಲೈ 8: ದೆಹಲಿಯಲ್ಲಿ (Delhi Rains) ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಇಂದು ಮಧ್ಯಾಹ್ನ ದೆಹಲಿಯ ರೋಹಿಣಿ ಸೆಕ್ಟರ್ 16 ರಲ್ಲಿ ನಿರ್ಮಾಣ ಹಂತದಲ್ಲಿದ್ದ 4 ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿದೆ. ಈ ಭೀಕರ ದುರಂತದಲ್ಲಿ 41 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಕಟ್ಟಡದ ಮಾಲೀಕ ಸೇರಿದಂತೆ 4 ಜನರು ಇನ್ನೂ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ರಾಮ್ ಎಂಬ 41 ವರ್ಷದ ವ್ಯಕ್ತಿ ಕಟ್ಟಡದ ಪಕ್ಕದಲ್ಲೇ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಟ್ಟಡದ ಅವಶೇಷಗಳು ಅವರ ಮೇಲೆ ಬಿದ್ದಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

(Video Source: PTI)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

10 ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ಅಂತ್ಯ: ಸಂಪತ್ತಿನ ಖಜಾನೆ ಕಂಡು ಅಧಿಕಾರಿಗಳಿಗೇ ಶಾಕ್​​! – Kannada News | Lokayukta Raids End at Homes of 10 Officials; Massive Illegal Assets Unearthed

ಲೋಕಾಯುಕ್ತ ದಾಳಿ ವೇಳೆ ಪತ್ತೆಯಾದ ವಸ್ತುಗಳುImage Credit source: Tv9 Kannada

ಬೆಂಗಳೂರು, ಜುಲೈ 08: ರಾಜ್ಯದ ವಿವಿಧೆಡೆ 10 ಅಧಿಕಾರಿಗಳ ಮನೆಗಳ ಮೇಲೆ ರೇಡ್​​ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ಅಂತ್ಯಗೊಂಡಿದೆ. 7 ಜಿಲ್ಲೆಗಳಲ್ಲಿ ಅಧಿಕಾರಿಗಳಿಗೆ ಸೇರಿದ 54 ಕಡೆ ದಾಳಿ ನಡೆದಿತ್ತು. ರೇಡ್​​ ವೇಳೆ ಕೋಟಿ ಕೋಟಿ ಮೌಲ್ಯದ ಆಸ್ತಿ ಪಾಸ್ತಿ ಪತ್ತೆಯಾಗಿದ್ದು, ಆದಾಯ ಮೀರಿದ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಯಾವ್ಯಾವ ಅಧಿಕಾರಿಗಳ ಮನೆಯಲ್ಲಿ ಏನೇನು ಪತ್ತೆ?

1. ನರೇಂದ್ರ ಕುಮಾರ್ ಎಂ., ಸಹಾಯಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ವಿಭಾಗ-1, ಕೆ.ಆರ್. ಸರ್ಕಲ್, ಬೆಂಗಳೂರು

  • ಒಟ್ಟು ಆಸ್ತಿ: ₹8.51 ಕೋಟಿ (ಸ್ಥಿರ ಆಸ್ತಿ ₹5.95 ಕೋಟಿ + ಚರ ಆಸ್ತಿ ₹2.56 ಕೋಟಿ)
  • ಅಸಮತೋಲನ ಆಸ್ತಿ: ₹5.75 ಕೋಟಿ
  • ಚಿನ್ನ: ₹1.20 ಕೋಟಿ ಮೌಲ್ಯ
  • ನಗದು: ₹3.10 ಲಕ್ಷ
  • ಕೃಷಿ ಜಮೀನು: 4 ಎಕರೆ
  • ವಾಹನಗಳು: ₹16.60 ಲಕ್ಷ ಮೌಲ್ಯ
  • ಮನೆಗಳು: 3
  • ಬ್ಯಾಂಕ್ ಠೇವಣಿ: ₹89.16 ಲಕ್ಷ
  • ಇತರೆ ವಸ್ತುಗಳು: ₹27.46 ಲಕ್ಷ

2. ಪ್ರವೀಣ್ ಶ್ರೀಹರಿ ಬಿ., ಅಧೀಕ್ಷಕ ಅಭಿಯಂತರರು, ಕೆ.ಆರ್.ಐ.ಡಿ.ಎಲ್., ಬೆಂಗಳೂರು

  • ಒಟ್ಟು ಆಸ್ತಿ: ₹5.88 ಕೋಟಿ (ಸ್ಥಿರ ಆಸ್ತಿ ₹4.60 ಕೋಟಿ + ಚರ ಆಸ್ತಿ ₹1.28 ಕೋಟಿ)
  • ಅಸಮತೋಲನ ಆಸ್ತಿ: ₹4.33 ಕೋಟಿ
  • ಚಿನ್ನ: ₹11.08 ಲಕ್ಷ ಮೌಲ್ಯ
  • ನಗದು: ₹2.35 ಲಕ್ಷ
  • ಸೈಟ್: 2 ನಿವೇಶನಗಳು
  • ವಾಣಿಜ್ಯ ಕಟ್ಟಡ: ಇಲ್ಲ
  • ಕೃಷಿ ಜಮೀನು: 11.7 ಎಕರೆ
  • ವಾಹನಗಳು: ₹1.15 ಕೋಟಿ ಮೌಲ್ಯ
  • ಮನೆಗಳು: 2

ಇದನ್ನೂ ಓದಿ: ಕರ್ನಾಟಕದ 7 ಜಿಲ್ಲೆಯ 10 ಅಧಿಕಾರಿಗಳ ಮನೆ-ಕಚೇರಿ ಮೇಲೆ ಲೋಕಾಯುಕ್ತ ದಾಳಿ; ಕೋಟಿ ಕೋಟಿ ಆಸ್ತಿ, ಚಿನ್ನಾಭರಣ ಪತ್ತೆ

3. ಪುಷ್ಪಾ ಡಿ.ಆರ್., ಹೆಚ್ಚುವರಿ ನಿರ್ದೇಶಕರು (ಆಡಳಿತ), ಕೃಷಿ ಮಾರಾಟ ಮಹಾಮಂಡಳಿ, ಕೇಂದ್ರ ಕಚೇರಿ, ಬೆಂಗಳೂರು.

  • ಒಟ್ಟು ಆಸ್ತಿ: ₹8.16 ಕೋಟಿ (ಸ್ಥಿರ ಆಸ್ತಿ ₹7.38 ಕೋಟಿ + ಚರ ಆಸ್ತಿ ₹78.22 ಲಕ್ಷ)
  • ಅಸಮತೋಲನ ಆಸ್ತಿ: ₹5.93 ಕೋಟಿ
  • ಚಿನ್ನ: ₹35 ಲಕ್ಷ ಮೌಲ್ಯ
  • ನಗದು: ₹72,000
  • ಸೈಟ್: 1 ನಿವೇಶನ
  • ವಾಣಿಜ್ಯ ಕಟ್ಟಡ: 1 ವಾಣಿಜ್ಯ ಸಂಕೀರ್ಣ
  • ಕೃಷಿ ಜಮೀನು: 20 ಗುಂಟೆ
  • ವಾಹನಗಳು: ₹42.50 ಲಕ್ಷ ಮೌಲ್ಯ
  • ಮನೆಗಳು: 3

4. ದುಗ್ಗಪ್ಪ ಬಿ.ಎಚ್., ವಲಯ ಅರಣ್ಯಾಧಿಕಾರಿ, ಜಲಾನಯನ ಅಭಿವೃದ್ಧಿ ಇಲಾಖೆ, ಚಿತ್ರದುರ್ಗ

  • ಒಟ್ಟು ಆಸ್ತಿ: ₹1.95 ಕೋಟಿ (ಸ್ಥಿರ ಆಸ್ತಿ ₹1.52 ಕೋಟಿ + ಚರ ಆಸ್ತಿ ₹43.51 ಲಕ್ಷ)
  • ಅಸಮತೋಲನ ಆಸ್ತಿ: ₹1.95 ಕೋಟಿ
  • ಚಿನ್ನ: ₹18.92 ಲಕ್ಷ ಮೌಲ್ಯ
  • ನಗದು: ₹1.84 ಲಕ್ಷ
  • ಸೈಟ್: 3 ನಿವೇಶನಗಳು
  • ವಾಣಿಜ್ಯ ಕಟ್ಟಡ: ಇಲ್ಲ
  • ಕೃಷಿ ಜಮೀನು: 3 ಎಕರೆ 30 ಗುಂಟೆ
  • ವಾಹನಗಳು: ₹22 ಲಕ್ಷ ಮೌಲ್ಯ
  • ಮನೆ: 1

5. ಶಂಕರ ಎಂ., ಸಹ ಪ್ರಾಧ್ಯಾಪಕರು ತೋಟಗಾರಿಕೆ ಇಲಾಖೆ, ಚಿತ್ರದುರ್ಗ

  • ಒಟ್ಟು ಆಸ್ತಿ: ₹3.28 ಕೋಟಿ (ಸ್ಥಿರ ಆಸ್ತಿ ₹1.71 ಕೋಟಿ + ಚರ ಆಸ್ತಿ ₹1.56 ಕೋಟಿ)
  • ಅಸಮತೋಲನ ಆಸ್ತಿ: ₹1.88 ಕೋಟಿ
  • ಚಿನ್ನ: ₹1.26 ಕೋಟಿ ಮೌಲ್ಯ
  • ನಗದು: ₹9,000
  • ಸೈಟ್: 1 ನಿವೇಶನ
  • ವಾಣಿಜ್ಯ ಕಟ್ಟಡ: ಇಲ್ಲ
  • ಕೃಷಿ ಜಮೀನು: 8 ಎಕರೆ 26 ಗುಂಟೆ
  • ವಾಹನಗಳು: ₹27.80 ಲಕ್ಷ ಮೌಲ್ಯ
  • ಮನೆಗಳು: 2

6. ಅಮೃತರಾವ್, ಸಹಾಯಕ ಕಾರ್ಯಪಾಲಕ ಅಭಿಯಂತರರು (ವಿ), ಜೆಎಸ್‌ಎಲ್‌ಎಂ, ಕಲಬುರಗಿ

  • ಒಟ್ಟು ಆಸ್ತಿ: ₹3.98 ಕೋಟಿ (ಸ್ಥಿರ ಆಸ್ತಿ ₹2.84 ಕೋಟಿ + ಚರ ಆಸ್ತಿ ₹1.15 ಕೋಟಿ)
  • ಅಸಮತೋಲನ ಆಸ್ತಿ: ₹2.65 ಕೋಟಿ
  • ಚಿನ್ನ: ₹38.53 ಲಕ್ಷ ಮೌಲ್ಯ
  • ನಗದು: ₹68,027
  • ಸೈಟ್: 3 ನಿವೇಶನಗಳು
  • ವಾಣಿಜ್ಯ ಕಟ್ಟಡ: 12 ವಾಣಿಜ್ಯ ಮಳಿಗೆ
  • ಕೃಷಿ ಜಮೀನು: ₹35.80 ಲಕ್ಷ ಮೌಲ್ಯದ ಕೃಷಿ ಜಮೀನು
  • ವಾಹನಗಳು: ₹10.52 ಲಕ್ಷ ಮೌಲ್ಯ
  • ಮನೆಗಳು: 2
  • ಫ್ಲ್ಯಾಟ್: 1

7. ತಿಮ್ಮಯ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕುಂಬಳಗೂಡು ಗ್ರಾಮ ಪಂಚಾಯಿತಿ, ಬೆಂಗಳೂರು ದಕ್ಷಿಣ

  • ಒಟ್ಟು ಆಸ್ತಿ: ₹3.72 ಕೋಟಿ (ಸ್ಥಿರ ಆಸ್ತಿ ₹2.53 ಕೋಟಿ + ಚರ ಆಸ್ತಿ ₹1.19 ಕೋಟಿ)
  • ಅಸಮತೋಲನ ಆಸ್ತಿ: ₹3.51 ಕೋಟಿ
  • ಚಿನ್ನ: ₹84 ಲಕ್ಷ ಮೌಲ್ಯ
  • ಸೈಟ್: 2 ನಿವೇಶನಗಳು
  • ವಾಣಿಜ್ಯ ಕಟ್ಟಡ: ಇಲ್ಲ
  • ಕೃಷಿ ಜಮೀನು: 2 ಎಕರೆ 15 ಗುಂಟೆ
  • ವಾಹನಗಳು: ₹35.70 ಲಕ್ಷ ಮೌಲ್ಯ
  • ಮನೆಗಳು: 4

8. ಕಿರಣ್ ಅಂಗಡಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸಂಶೋಧನಾ ಕೇಂದ್ರ, ಅರಣ್ಯ ಇಲಾಖೆ, ಶಿವಮೊಗ್ಗ

  • ಒಟ್ಟು ಆಸ್ತಿ: ₹1.95 ಕೋಟಿ (ಸ್ಥಿರ ಆಸ್ತಿ ₹1.53 ಕೋಟಿ + ಚರ ಆಸ್ತಿ ₹42.36 ಲಕ್ಷ)
  • ಅಸಮತೋಲನ ಆಸ್ತಿ: ₹1.95 ಕೋಟಿ
  • ಚಿನ್ನ: ₹15.45 ಲಕ್ಷ ಮೌಲ್ಯ
  • ನಗದು: ₹13,044
  • ಕೃಷಿ ಜಮೀನು: 1 ಎಕರೆ
  • ವಾಹನಗಳು: ₹2.84 ಲಕ್ಷ ಮೌಲ್ಯ
  • ಮನೆ: 1

9. ಬಸನಗೌಡ ಪಾಟೀಲ್, ಕಾರ್ಯಪಾಲಕ ಅಭಿಯಂತರರು, ಕೆ.ಬಿ.ಜೆ.ಎನ್.ಎಲ್., ಎನ್.ಆರ್.ಬಿ.ಸಿ. ಉಪ ವಿಭಾಗ-4, ದೇವದುರ್ಗ, ರಾಯಚೂರು

  • ಒಟ್ಟು ಆಸ್ತಿ: ₹9.44 ಕೋಟಿ (ಸ್ಥಿರ ಆಸ್ತಿ ₹8.28 ಕೋಟಿ + ಚರ ಆಸ್ತಿ ₹1.16 ಕೋಟಿ)
  • ಅಸಮತೋಲನ ಆಸ್ತಿ: ₹6.12 ಕೋಟಿ
  • ಚಿನ್ನ: ₹1.29 ಕೋಟಿ ಮೌಲ್ಯ
  • ನಗದು: ₹1.15 ಲಕ್ಷ
  • ಸೈಟ್: 5 ನಿವೇಶನಗಳು
  • ಕೃಷಿ ಜಮೀನು: 1 ಎಕರೆ
  • ವಾಹನಗಳು: ₹10.50 ಲಕ್ಷ ಮೌಲ್ಯ
  • ಮನೆಗಳು: 4

10. ಮಧುಸೂದನ್ ಎನ್., ಸಹಾಯಕ ಅಭಿಯಂತರರು, ಸಣ್ಣ ನೀರಾವರಿ ಇಲಾಖೆ, ತಿಪಟೂರು ಉಪ ವಿಭಾಗ, ತುಮಕೂರು

  • ಒಟ್ಟು ಆಸ್ತಿ: ₹2.95 ಕೋಟಿ (ಸ್ಥಿರ ಆಸ್ತಿ ₹1.63 ಕೋಟಿ + ಚರ ಆಸ್ತಿ ₹1.33 ಕೋಟಿ)
  • ಅಸಮತೋಲನ ಆಸ್ತಿ: ₹2.10 ಕೋಟಿ
  • ಚಿನ್ನ: ₹1.94 ಕೋಟಿ ಮೌಲ್ಯ
  • ನಗದು: ₹11.94 ಲಕ್ಷ
  • ಸೈಟ್: 3 ನಿವೇಶನಗಳು
  • ವಾಹನಗಳು: ₹27 ಲಕ್ಷ ಮೌಲ್ಯ
  • ಮನೆ: 1

ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಈ ಅಧಿಕಾರಿಗಳಿಗೆ ಸಂಬಂಧಿಸಿದ ಜಾಗಗಳ ಮೇಲೆ ದಾಳಿ ಮಾಡಿ ಜಾಲಾಡಿದ್ದರು. ದಾಳಿ ವೇಳೆ ಕೋಟಿ ಕೋಟಿ ಬೆಲೆ ಬಾಳುವ ಆಸ್ತಿ, ಚಿನ್ನಾಭರಣ, ನಗದು ಪತ್ತೆಯಾಗಿದ್ದು, ಕೆಲವರ ಸಂಬಳ ತಿಂಗಳಿಗೆ ಲಕ್ಷದ ಗಡಿ ದಾಟದಿದ್ದರೂ ಅಪಾರ ಮೌಲ್ಯದ ಆಸ್ತಿ ಗಳಿಸಿರುವುದನ್ನು ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 10:09 pm, Wed, 8 July 26

Source link

ಜುಲೈ 18ರಂದೇ ಬಿಡುಗಡೆ ಆಗುತ್ತಾ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಟ್ರೇಲರ್? – Kannada News | Yash Ranbir Kapoor Sai Pallavi starrer Ramayana Trailer likely to be released on this date

ಬಾಲಿವುಡ್‌ನ ಬಹುನಿರೀಕ್ಷಿತ ಹಾಗೂ ಬಿಗ್ ಬಜೆಟ್ ಸಿನಿಮಾ ಎಂದೇ ಗುರುತಿಸಿಕೊಂಡಿರುವ ನಮಿತ್ ಮಲ್ಹೋತ್ರಾ ನಿರ್ಮಾಣದ ‘ರಾಮಾಯಣ’ (Ramayana) ಚಿತ್ರದ ಬಿಡುಗಡೆಗೆ ಇನ್ನು ನಾಲ್ಕು ತಿಂಗಳಿಗಿಂತ ಕಡಿಮೆ ಸಮಯ ಬಾಕಿಯಿದೆ. ಈ ಚಿತ್ರದ ಮೇಲಿನ ಕ್ರೇಜ್ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈಗ ಸಿನಿಮಾ ತಂಡದಿಂದ ಒಂದು ಎಕ್ಸ್‌ಕ್ಲೂಸಿವ್ ಅಪ್‌ಡೇಟ್ ಸಿಕ್ಕಿದ್ದು, ಚಿತ್ರದ ಬಹುನಿರೀಕ್ಷಿತ ಟ್ರೇಲರ್ (Ramayana Trailer) ಇನ್ನು ಕೆಲವೇ ದಿನಗಳಲ್ಲಿ ಅಂದರೆ, ಜುಲೈ 18ರಂದು ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.

3 ತಿಂಗಳು ಮುಂಚಿತವಾಗಿಯೇ ಟ್ರೇಲರ್ ರಿಲೀಸ್:

‘ಬಾಲಿವುಡ್ ಹಂಗಾಮಾ’ ಈ ಬಗ್ಗೆ ವರದಿ ಮಾಡಿದೆ. ಜಾಗತಿಕ ಸಿನಿಮಾಗಳ ಪ್ರಚಾರದ ಮಾದರಿಯನ್ನು ಅನುಸರಿಸಿ ‘ರಾಮಾಯಣ’ ಚಿತ್ರತಂಡ ಸಾಗುತ್ತಿದೆ. ದೀಪಾವಳಿ ಹಬ್ಬಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದ್ದರೂ, ಸುಮಾರು ಮೂರೂವರೆ ತಿಂಗಳು ಮುಂಚಿತವಾಗಿಯೇ ಅಂದರೆ ಜುಲೈ 18ರಂದೇ ಅಧಿಕೃತ ಥಿಯೇಟ್ರಿಕಲ್ ಟ್ರೇಲರ್ ಅನಾವರಣಗೊಳಿಸಲು ನಿರ್ಧರಿಸಿದೆ. ಸಾಮಾನ್ಯವಾಗಿ ಕೊವಿಡ್ ನಂತರದ ದಿನಗಳಲ್ಲಿ ಸಿನಿಮಾಗಳ ಟ್ರೇಲರ್ ಕೇವಲ ಎರಡು ವಾರಗಳ ಮುಂಚೆ ಬಿಡುಗಡೆಯಾಗುತ್ತಿತ್ತು. ಆದರೆ ‘ರಾಮಾಯಣ’ ಚಿತ್ರತಂಡ ಹೊಸ ಟ್ರೆಂಡ್ ಸೃಷ್ಟಿಸಲು ಹೊರಟಿದೆ.

ಟೀಸರ್ ಬಳಿಕ ಟ್ರೇಲರ್ ಮೇಲೆ ನಿರೀಕ್ಷೆ:

ಕಳೆದ ವರ್ಷ ಜುಲೈ 3ರಂದೇ ಈ ಚಿತ್ರದ ಮೊದಲ ಝಲಕ್ ಬಿಡುಗಡೆ ಮಾಡಲಾಗಿತ್ತು. ನಂತರ ಈ ವರ್ಷದ ಹನುಮಾನ್ ಜಯಂತಿಯ ಶುಭ ಸಂದರ್ಭದಲ್ಲಿ ‘ರಾಮ’ ಹೆಸರಿನ ಟೀಸರ್ ರಿಲೀಸ್ ಮಾಡಿ ರಣಬೀರ್ ಕಪೂರ್ ಅವರ ಲುಕ್ ಪರಿಚಯಿಸಲಾಗಿತ್ತು. ಈ ಟೀಸರ್ ಈಗಾಗಲೇ ಭಾರಿ ಕೌತುಕ ಸೃಷ್ಟಿಸಿದ್ದು, ಈಗ ಬಿಡುಗಡೆಯಾಗಲಿರುವ ಟ್ರೇಲರ್ ಚಿತ್ರದ ಹೈಪ್ ಅನ್ನು ಮತ್ತಷ್ಟು ದುಪ್ಪಟ್ಟು ಮಾಡಲಿದೆ.

ಘಟಾನುಘಟಿ ಕಲಾವಿದರ ಪಾತ್ರವರ್ಗ:

‘ದಂಗಲ್’ ಖ್ಯಾತಿಯ ನಿತೇಶ್ ತಿವಾರಿ ನಿರ್ದೇಶನದ ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಅವರು ಶ್ರೀರಾಮನಾಗಿ, ಸೌತ್ ಸುಂದರಿ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನುಳಿದಂತೆ, ರಾಕಿಂಗ್ ಸ್ಟಾರ್ ಯಶ್ ಅವರು ರಾವಣನ ಪಾತ್ರದಲ್ಲಿ, ಸನ್ನಿ ಡಿಯೋಲ್ ಹನುಮಂತನಾಗಿ ಹಾಗೂ ರವಿ ದುಬೆ ಲಕ್ಷ್ಮಣನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ: ‘ಬಿಟ್ಟಿ ಪ್ರಚಾರಕ್ಕಾಗಿ ರಾಮಾಯಣ ಚಿತ್ರದಲ್ಲಿ ಕಳಪೆ ವಿಎಫ್‌ಎಕ್ಸ್’: ಸೆಟ್‌ಗೆ ಭೇಟಿ ನೀಡಿದ ಕ್ರಿಯೇಟರ್ ಆರೋಪ

ಈ ದೃಶ್ಯ ವೈಭವಕ್ಕೆ ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಹಾಗೂ ಹಾಲಿವುಡ್‌ನ ಪ್ರಸಿದ್ಧ ಸಂಗೀತ ನಿರ್ದೇಶಕ ಹ್ಯಾನ್ಸ್ ಜಿಮ್ಮರ್ ಒಟ್ಟಾಗಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ಬರಲಿದ್ದು, ಮೊದಲ ಭಾಗವು ದೀಪಾವಳಿ ಹಬ್ಬಕ್ಕೆ ಪ್ರಪಂಚದಾದ್ಯಂತ ತೆರೆಕಾಣಲಿದೆ. ಎರಡನೇ ಭಾಗವು ಮುಂದಿನ ವರ್ಷ (2027) ದೀಪಾವಳಿಗೆ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs ENG: 4ನೇ ಟಿ20 ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡದಿಂದ ಇಬ್ಬರು ಆಟಗಾರರು ಔಟ್

Source link

Exit mobile version