Gruha Jyothi De-linking: ಗೃಹ ಜ್ಯೋತಿ ಸ್ಕೀಮ್​ನಲ್ಲಿ ಆರ್​ಆರ್ ನಂಬರ್​ಗೆ ನಿಮ್ಮ ಆಧಾರ್ ಡಿ-ಲಿಂಕ್ ಮಾಡುವುದು ಹೇಗೆ? – Kannada News | Know how to de link Aadhaar in Karnataka’s Gruha Jyothi scheme for free electricity

ಗೃಹ ಜ್ಯೋತಿ ಯೋಜನೆImage Credit source: Seva Sindhu Portal

ಬೆಂಗಳೂರು, ಜುಲೈ 8: ಕರ್ನಾಟಕ ಸರ್ಕಾರ ಗೃಹ ಜ್ಯೋತಿ ಸ್ಕೀಮ್ (Gruha Jyothi Scheme) ಅಡಿಯಲ್ಲಿ ಪ್ರತೀ ಅರ್ಹ ಮನೆಗೆ ಒಂದು ತಿಂಗಳಿಗೆ 200 ಯುನಿಟ್​ಗಳವರೆಗೆ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತಿದೆ. ಹಿಂದಿನ 12 ತಿಂಗಳ ಸರಾಸರಿ ವಿದ್ಯುತ್ ಬಳಕೆಯ ಆಧಾರದ ಮೇಲೆ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುತ್ತಿದೆ. ಆಧಾರ್ ನಂಬರ್ ಲಿಂಕ್ ಆದ ಪ್ರತೀ ಆರ್​ಆರ್ ನಂಬರ್​ಗೂ ಉಚಿತ ವಿದ್ಯುತ್ ಪೂರೈಕೆಯ ಅವಕಾಶ ಇರುತ್ತದೆ. ಒಂದು ವೇಳೆ ಬಾಡಿಗೆ ಮನೆ ಖಾಲಿ ಮಾಡಿ ಬೇರೆಡೆ ವರ್ಗಾವಣೆ ಆಗುತ್ತಿದ್ದರೆ ಅಥವಾ ಆಗಿದ್ದರೆ ಏನು ಮಾಡಬೇಕು? ಆಧಾರ್ ಡಿ-ಲಿಂಕ್ ಮಾಡಲು ಸಾಧ್ಯವೇ? ಆಧಾರ್ ಡಿ-ಲಿಂಕ್ (De-linking from Gruha Jyothi scheme) ಮಾಡಲು ಎಸ್ಕಾಂಗಳು ಅವಕಾಶ ನೀಡಿವೆ.

ಗೃಹಜ್ಯೋತಿ ಸ್ಕೀಮ್​ನಲ್ಲಿ ಆಧಾರ್ ಡಿ-ಲಿಂಕ್ ಮಾಡುವುದು ಹೇಗೆ?

ಕರ್ನಾಟಕ ರಾಜ್ಯದ ಗೃಹ ಜ್ಯೋತಿ ಸ್ಕೀಮ್​ನಲ್ಲಿ ಮನೆಯ ವಿದ್ಯುತ್ ಮೀಟರ್​ಗೆ ನಿಮ್ಮ ಆಧಾರ್ ಅನ್ನು ಲಿಂಕ್ ಮಾಡಿದ್ದು, ಅದನ್ನು ಡಿ-ಲಿಂಕ್ ಮಾಡಲು ವಿವಿಧ ಮಾರ್ಗಗಳಿವೆ. ಆನ್​ಲೈನ್ ಮತ್ತು ಆಫ್​ಲೈನ್ ಎರಡೂ ಕ್ರಮಗಳಲ್ಲೂ ಮಾಡಬಹುದು.

ಇದನ್ನೂ ಓದಿ: ಮನೆ ಮಾಲೀಕರು, ಬಾಡಿಗೆದಾರರು ಆತಂಕ ಪಡಬೇಕಾಗಿಲ್ಲ: ಗೃಹ ಜ್ಯೋತಿ ಬಗ್ಗೆ ಬೆಸ್ಕಾಂ ನೀಡಿದ ಮಾಹಿತಿ ಹೀಗಿದೆ

ಆನ್​ಲೈನ್​ನಲ್ಲಿ ಆಧಾರ್ ಡಿ-ಲಿಂಕ್ ಮಾಡುವುದು ಹೀಗೆ

  • ಮೊದಲಿಗೆ ಸೇವಾ ಸಿಂಧು ಪೋರ್ಟಲ್​ಗೆ ಭೇಟಿ ನೀಡಿ: sevasindhugs.karnataka.gov.in/
  • ಇಲ್ಲಿ ಮುಖ್ಯಪುಟದಲ್ಲಿ ಕಾಣುವ ಗೃಹ ಜ್ಯೋತಿ ಟ್ಯಾಬ್ ಕ್ಲಿಕ್ ಮಾಡಿದರೆ ಎರಡು ಆಯ್ಕೆ ತೆರೆದುಕೊಳ್ಳುತ್ತದೆ.
  • ಗೃಹ ಜ್ಯೋತಿ ಯೋಜನೆಗೆ ನೊಂದಣಿ ಮಾಡುವುದು ಮತ್ತು ಗೃಹ ಜ್ಯೋತಿ ಯೋಜನೆಯಿಂದ ಡಿ-ಲಿಂಕ್ ಮಾಡುವ ಆಯ್ಕೆಗಳಿರುತ್ತವೆ.
  • ಡಿ-ಲಿಂಕ್ ಮಾಡುವ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಅದರ ಪುಟ ತೆರೆಯುತ್ತದೆ.
  • ಲಿಂಕ್ ಮಾಡಲು ನೀಡಿದ್ದ ಆಧಾರ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
  • ಆಧಾರ್ ನಂಬರ್​ಗೆ ಲಿಂಕ್ ಆದ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಿ ದೃಢಪಡಿಸಿ.
  • ನೀವು ಡಿ-ಲಿಂಕ್ ಮಾಡಲು ಏನು ಕಾರಣ ಎಂಬುದನ್ನು ಆಯ್ದುಕೊಳ್ಳಿ.
  • ಅಂತಿಮವಾಗಿ ಸಬ್ಮಿಟ್ ಕ್ಲಿಕ್ ಮಾಡಿದರೆ ಆಧಾರ್ ಡಿ-ಲಿಂಕ್ ಆಗುತ್ತದೆ.

ಗಮನಿಸಬೇಕಾದ ಸಂಗತಿ ಎಂದರೆ, ಸದ್ಯ ಗೃಹ ಜ್ಯೋತಿ ಸ್ಕೀಮ್​ಗೆ ನೊಂದಣಿ ಮಾಡುವ ಮತ್ತು ಡಿ-ಲಿಂಕ್ ಮಾಡುವ ಆಯ್ಕೆಗಳು ಆನ್​ಲೈನ್​ನಲ್ಲಿ ಕಾರ್ಯವಹಿಸುತ್ತಿಲ್ಲ. ತಾಂತ್ರಿಕ ಸಮಸ್ಯೆ ಇರಬಹುದು. ಮುಂದಿನ ದಿನಗಳಲ್ಲಿ ಅದು ಸರಿ ಹೋಗಬಹುದು. ಒಂದು ವೇಳೆ ತುರ್ತಾಗಿ ಡಿ-ಲಿಂಕ್ ಮಾಡುವುದಿದ್ದರೆ ಆಫ್​ಲೈನ್ ಆಯ್ಕೆಯೂ ಇದೆ.

ಇದನ್ನೂ ಓದಿ: ಗೃಹ ಜ್ಯೋತಿ ಯೋಜನೆ: ಮೊಬೈಲ್ ಆಪ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? 5 ಹಂತಗಳು ಇಲ್ಲಿದೆ ನೋಡಿ

ಗೃಹ ಜ್ಯೋತಿ ಸ್ಕೀಮ್​ನಲ್ಲಿ ಆಧಾರ್ ಡಿ-ಲಿಂಕ್ ಮಾಡಲು ಆಫ್​ಲೈನ್ ಮಾರ್ಗ

ನಿಮ್ಮ ಮನೆಯ ವ್ಯಾಪ್ತಿಯ ಬೆಸ್ಕಾಂ ಕಚೇರಿಗೆ ಹೋಗಿ ನೀವು ಗೃಹ ಜ್ಯೋತಿ ಸ್ಕೀಮ್​ಗೆ ನೊಂದಣಿ ಮಾಡಬಹುದು. ಆಧಾರ್ ಡಿ-ಲಿಂಕ್ ಕೂಡ ಮಾಡಬಹುದು. ಅಲ್ಲಿ ನಿಮ್ಮ ಮನೆಯ ವಿದ್ಯುತ್ ಬಿಲ್ ಅಥವಾ ಆರ್​ಆರ್ ನಂಬರ್ ಮತ್ತು ನಿಮ್ಮ ಆಧಾರ್ ನಂಬರ್ ಕೊಟ್ಟರೆ, ಅಲ್ಲಿರುವ ಸಿಬ್ಬಂದಿಯೇ ಡಿ-ಲಿಂಕ್ ಮಾಡುತ್ತಾರೆ.

ಇನ್ನು, ನೀವು ಮನೆ ಖಾಲಿ ಮಾಡಿದ್ದು ಹಳೆಯ ಮನೆಯಲ್ಲಿ ನಿಮ್ಮ ಆಧಾರ್ ಡಿ-ಲಿಂಕ್ ಮಾಡಲು ಮರೆತಿದ್ದರೆ ಚಿಂತೆ ಬೇಕಿಲ್ಲ. ನಿಮ್ಮ ಹೊಸ ವಾಸ ಇರುವ ಮನೆಗೆ ಸಿಬ್ಬಂದಿ ಬಂದು ಮಾಹಿತಿ ಕಲೆ ಹಾಕುತ್ತಾರೆ. ಆಗ ಆಧಾರ್ ನಂಬರ್ ಕೊಟ್ಟು ಲಿಂಕ್ ಅಥವಾ ಡಿ-ಲಿಂಕ್ ಮಾಡಿಸಬಹುದು.

ಗೃಹ ಜ್ಯೋತಿ ಯೋಜನೆ, FAQs

ಪ್ರಶ್ನೆ: ಗೃಹ ಜ್ಯೋತಿ ಸ್ಕೀಮ್​ನಲ್ಲಿ ನಿಮ್ಮ ಆಧಾರ್ ಡಿ-ಲಿಂಕ್ ಮಾಡುವುದು ಹೇಗೆ?

ಉತ್ತರ: ಸೇವಾ ಸಿಂಧು ಪೋರ್ಟಲ್ ಅಥವಾ ಎಸ್ಕಾಮ್ ಕಚೇರಿಗೆ ಹೋಗಿ ಗೃಹ ಜ್ಯೋತಿ ಸ್ಕೀಮ್​ನಲ್ಲಿ ನಿಮ್ಮ ಆಧಾರ್ ಡಿ-ಲಿಂಕ್ ಮಾಡಬಹುದು.

ಪ್ರಶ್ನೆ: ಗೃಹ ಜ್ಯೋತಿ ಸ್ಕೀಮ್​ನಲ್ಲಿ ಆನ್​ಲೈನ್​ನಲ್ಲಿ ಡಿ-ಲಿಂಕ್ ಮಾಡುವುದು ಹೇಗೆ?

ಉತ್ತರ: ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in/ ಇಲ್ಲಿಗೆ ಹೋಗಿ ಆಧಾರ್ ಡಿ-ಲಿಂಕ್ ಮಾಡಬಹುದು.

ಪ್ರಶ್ನೆ: ಹೊಸ ಬಾಡಿಗೆ ಮನೆಗೆ ವರ್ಗವಾದರೆ ಏನು ಮಾಡಬೇಕು?

ಉತ್ತರ: ನೀವಿರುವ ಮನೆಗೆ ಬೆಸ್ಕಾಂನಿಂದ ಸಿಬ್ಬಂದಿ ಬಂದು ಮಾಹಿತಿ ಪಡೆಯುತ್ತಾರೆ. ಆಗ ಆಧಾರ್ ವಿವರ ನೀಡಿ ನೊಂದಾಯಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಕ್ಕಳ ಸಾವು ಬಯಸಿದ ಟ್ರೋಲರ್ಸ್; ಆಕ್ರೋಶ ಹೊರಹಾಕಿದ ಗಾಯಕಿ ಚಿನ್ಮಯಿ ಶ್ರೀಪಾದ – Kannada News | Singer Chinmayi Sripaada slams Trolls wishing death of Kids after Ketan Agarwal case

ಖ್ಯಾತ ಹಿನ್ನೆಲೆ ಗಾಯಕಿ ಚಿನ್ಮಯಿ ಶ್ರೀಪಾದ (Chinmayi Sripaada) ಹಾಗೂ ಅವರ ಪತಿ, ನಟ-ನಿರ್ದೇಶಕ ರಾಹುಲ್ ರವೀಂದ್ರನ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭೀಕರ ಆನ್‌ಲೈನ್ ದ್ವೇಷಕ್ಕೆ ಒಳಗಾಗಿದ್ದಾರೆ. ಇತ್ತೀಚೆಗೆ ನಡೆದ ಕೇತನ್ ಅಗರ್ವಾಲ್‌ (Ketan Agarwal) ಕೊಲೆ ಪ್ರಕರಣದ ಬಗ್ಗೆ ರಾಹುಲ್ ರವೀಂದ್ರನ್ ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಸಿಟ್ಟಾದ ಟ್ರೋಲರ್‌ಗಳು, ಅವರ 3 ವರ್ಷದ ಅವಳಿ ಮಕ್ಕಳ ಸಾವನ್ನು ಬಯಸುವ ಮಟ್ಟಿಗೆ ಕ್ರೌರ್ಯ ಮೆರೆದಿದ್ದಾರೆ. ಇದರಿಂದ ಬೇಸತ್ತು ರಾಹುಲ್ ಎಕ್ಸ್ (ಟ್ವಿಟರ್) ಖಾತೆಯನ್ನೇ ಡಿಲೀಟ್ ಮಾಡಿದ್ದರೆ, ಗಾಯಕಿ ಚಿನ್ಮಯಿ ಮಾತ್ರ ಟ್ರೋಲರ್‌ಗಳಿಗೆ ತಕ್ಕ ಉತ್ತರ ನೀಡುತ್ತಿದ್ದಾರೆ.

ವಿಡಿಯೋ ಮೂಲಕ ಕಿಡಿಕಾರಿದ ಚಿನ್ಮಯಿ

ತಮ್ಮ ಇಡೀ ಕುಟುಂಬ ಎದುರಿಸುತ್ತಿರುವ ನಿಂದನೆಗಳ ಬಗ್ಗೆ ಚಿನ್ಮಯಿ ಶ್ರೀಪಾದ ಅವರು ಎಕ್ಸ್ ಖಾತೆಯಲ್ಲಿ 7 ನಿಮಿಷಗಳ ಸುದೀರ್ಘ ವಿಡಿಯೋ ಹಂಚಿಕೊಂಡಿದ್ದಾರೆ. ‘ನನ್ನ ಮಗ ಸಾಯಲಿ ಎಂದು ಪ್ರಾರ್ಥಿಸುವುದಾಗಿ ಒಬ್ಬ ಟ್ವೀಟ್ ಮಾಡಿದ್ದ. ಅಷ್ಟೇ ಅಲ್ಲದೆ, ತನ್ನ ಭಜನಾ ಮಂಡಳಿಯನ್ನು ಕರೆದು ನನ್ನ ಮಗನ ಸಾವಿಗೆ ಒಟ್ಟಾಗಿ ಪ್ರಾರ್ಥಿಸುವಂತೆ ಕೋರಿದ್ದ. ಇದನ್ನು ನೋಡಿದ ತಕ್ಷಣ ರಾಹುಲ್ ಸಹನೆ ಕಳೆದುಕೊಂಡರು’ ಎಂದು ಚಿನ್ಮಯಿ ಹೇಳಿದ್ದಾರೆ.

‘ಅತ್ಯಂತ ಭಯಾನಕವಾದ ಜೀವನ ಸಿಗಲಿ’

ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚುತ್ತಿರುವ ಮಹಿಳಾದ್ವೇಷ, ಅತ್ಯಾಚಾರದ ಸಂಸ್ಕೃತಿ ಮತ್ತು ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ ಅವರು, ‘ಆನ್‌ಲೈನ್‌ನಲ್ಲಿ ನಿಂದಿಸುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ ಅಮಾಯಕ ಮಕ್ಕಳನ್ನು ಮಧ್ಯೆ ತರುವುದು ಎಲ್ಲಾ ಮಿತಿಗಳನ್ನು ಮೀರಿದಂತಾಗಿದೆ’ ಎಂದು ಆಕ್ರೋಶ ಹೊರಹಾಕಿದ್ದಾರೆ. ‘ನನ್ನ ಮಕ್ಕಳಾದ ಶ್ರವಸ್ ಮತ್ತು ದೃಪ್ತಾರನ್ನು ಗುರಿಯಾಗಿಸಿಕೊಂಡು ನಿಂದಿಸುವವರಿಗೆ ನಾನು ಒಂದೇ ಹೇಳಲು ಬಯಸುತ್ತೇನೆ. ನೀವು ನನ್ನ ಮಕ್ಕಳನ್ನು ನಿಂದಿಸಿದರೆ, ನಿಮಗೆ ಸುದೀರ್ಘವಾದ ಆದರೆ ಅತ್ಯಂತ ಭಯಾನಕವಾದ ಜೀವನ ಸಿಗಲಿ ಎಂದು ನಾನು ಹಾರೈಸುತ್ತೇನೆ’ ಎಂದು ಚಿನ್ಮಯಿ ಎಚ್ಚರಿಕೆ ನೀಡಿದ್ದಾರೆ.

ಸ್ಕ್ರೀನ್‌ಶಾಟ್ ಹಂಚಿಕೊಂಡ ಗಾಯಕಿ

ಬುಧವಾರ (ಜುಲೈ 8) ತಮ್ಮ ಎಕ್ಸ್ ಖಾತೆಯಲ್ಲಿ ಕೆಲವು ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿರುವ ಚಿನ್ಮಯಿ, ‘ಕೆಲವು ತೆಲುಗು ಸೋಷಿಯಲ್ ಮೀಡಿಯಾ ಬಳಕೆದಾರರು ನನ್ನ ಮಕ್ಕಳ ಸಾವನ್ನು ಬಯಸುತ್ತಿದ್ದಾರೆ. ನಾನು ಮಹಿಳಾ ಹಕ್ಕುಗಳ ಪರವಾಗಿ ಧ್ವನಿ ಎತ್ತುವುದರಿಂದ ಅವರು ನನ್ನನ್ನು ಆ್ಯಂಟಿ-ಫೆಮಿನಿಸ್ಟ್ ಎಂದು ಕರೆಯುತ್ತಾ ದ್ವೇಷಿಸುತ್ತಿದ್ದಾರೆ. ಇಂತಹ ಸೈಕೋಪಾತ್‌ಗಳಿಗೆ ನಾನು ಅದೇ ಧಾಟಿಯಲ್ಲಿ ಉತ್ತರ ನೀಡುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಖ್ಯಾತ ನಾಮನ ಕಿರುಕುಳದ ಬಗ್ಗೆ ಹೇಳಿದ್ದೇ ತಪ್ಪಾಯ್ತು; ಗಾಯಕಿಯ ಬೆತ್ತಲೆ ಫೋಟೋ ಹರಿಬಿಟ್ಟ ಕಿಡಿಗೇಡಿಗಳು

ಇದಕ್ಕೂ ಮುನ್ನ ರಾಹುಲ್ ರವೀಂದ್ರನ್ ಟ್ವಿಟರ್ ತೊರೆಯುವಾಗ, ‘ಬಹುಶಃ ನಾನು ಅತಿಯಾಗಿ ಪ್ರತಿಕ್ರಿಯಿಸುತ್ತಿರಬಹುದು, ಅಥವಾ ನನ್ನದೇ ತಪ್ಪಿರಬಹುದು. ಆದರೆ ಈ ದ್ವೇಷವನ್ನು ಸಹಿಸಲು ಸಾಧ್ಯವಿಲ್ಲ. ಆ ಟ್ವೀಟ್ ಓದಿದ ಅರ್ಧ ಗಂಟೆಯ ನಂತರ ನನಗಾದ ಮಾನಸಿಕ ಆಘಾತದಿಂದಾಗಿ ಈ ಆ್ಯಪ್ ಅನ್ನು ಡಿಲೀಟ್ ಮಾಡುತ್ತಿದ್ದೇನೆ’ ಎಂದು ಬರೆದುಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರಹ್ಲಾದ್​​ ಜೋಶಿ ಭೇಟಿಯಾದ ಕೆ.ಹೆಚ್​. ಮುನಿಯಪ್ಪ: ಎಂಎಸ್​​ಪಿ ಅನುದಾನದ ಬಾಕಿ ಮೊತ್ತ ಬಿಡುಗಡೆಗೆ ಕೇಂದ್ರ ಸಚಿವರಿಗೆ ಮನವಿ – Kannada News | Karnataka Minister KH Muniyappa Meets Pralhad Joshi in Delhi, Demands Release of Pending MSP Funds

ಎಂಎಸ್​​ಪಿ ಅನುದಾನದ ಬಾಕಿ ಮೊತ್ತ ಬಿಡುಗಡೆಗೆ ಕೇಂದ್ರ ಸಚಿವರಿಗೆ ಮನವಿ

ನವದೆಹಲಿ, ಜುಲೈ 08: ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಅವರನ್ನು ಕರ್ನಾಟಕದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಸಚಿವ ಕೆ.ಹೆಚ್​. ಮುನಿಯಪ್ಪ ಭೇಟಿಯಾಗಿ ಆಹಾರ ಇಲಾಖೆಗೆ ಸಂಬಂಧಿಸಿ ಮನವಿ ಸಲ್ಲಿಸಿದ್ದಾರೆ. ರಾಜ್ಯಕ್ಕೆ ಬರಬೇಕಿದ್ದ ಕನಿಷ್ಠ ಬೆಂಬಲ ಬೆಲೆ ಯೋಜನೆಯ(MSP) ಅನುದಾನ ಬಾಕಿ ಮರುಪಾವತಿ ಮೊತ್ತಗಳ ಬಿಡುಗಡೆ ಕುರಿತು ಜೋಶಿ ಜೊತೆ ಅವರು ಚರ್ಚೆ ನಡೆಸಿದ್ದಾರೆ.

1,902.58 ಕೋಟಿ ರೂ. MSP ಬಾಕಿ ಮರುಪಾವತಿ ಮೊತ್ತ ಬಿಡುಗಡೆಗೆ ಮನವಿ

ಕೆಎಂಎಸ್ 2025-26ರಲ್ಲಿ ರಾಜ್ಯವು 5.69 ಲಕ್ಷ ಮೆಟ್ರಿಕ್ ಟನ್ ರಾಗಿ, 2.21 ಲಕ್ಷ ಮೆಟ್ರಿಕ್ ಟನ್ ಜೋಳ ಹಾಗೂ 0.0567 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ಖರೀದಿಸಿದೆ. ಇದರ ಒಟ್ಟು ಮೌಲ್ಯ 4,422.17 ಕೋಟಿ ರೂಪಾಯಿ ಆಗಿದೆ. ಈ ಪೈಕಿ ಕೇಂದ್ರ ಸರ್ಕಾರ ಈವರೆಗೆ 190.10 ಕೋಟಿ ರೂ. ಬಿಡುಗಡೆ ಮಾಡಿದೆ. ಉಳಿದ 4,232.07 ಕೋಟಿ ಮರುಪಾವತಿ ಬಿಡುಗಡೆ ಮಾಡುವಂತೆ ಮುನಿಯಪ್ಪ ಮನವಿ ಮಾಡಿದ್ದಾರೆ. ಅಲ್ಲದೆ ಕೆಎಂಎಸ್ 2022-23ಕ್ಕೆ ಸಂಬಂಧಿಸಿದ 375.99 ಕೋಟಿ ರೂ. ತಾತ್ಕಾಲಿಕ ಸಬ್ಸಿಡಿ ಹಕ್ಕುಪತ್ರವು ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದ್ದು, ಅದನ್ನೂ ಶೀಘ್ರ ಮಂಜೂರು ಮಾಡುವಂತೆ ಆಗ್ರಹಿಸಿದ್ದಾರೆ. ಕೆಎಂಎಸ್ 2009-10ರಿಂದ 2024-25ರವರೆಗಿನ ಅವಧಿಗೆ ಸಂಬಂಧಿಸಿದ 1,902.58 ಕೋಟಿ ರೂ. MSP ಬಾಕಿ ಮರುಪಾವತಿ ಮೊತ್ತ ಬಿಡುಗಡೆಗೂ ಕೇಂದ್ರ ಸಚಿವರನ್ನ ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಕರ್ನಾಟಕದಲ್ಲಿ ಅಕ್ರಮವಾಗಿ ಎಸ್​ಐಆರ್; ಪ್ರಲ್ಹಾದ್ ಜೋಶಿ ಆರೋಪ

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ 1902 ಕೋಟಿ ಬಾಕಿ ಹಣ ಕೇಳ್ತಿದ್ದೇವೆ ಎಂದು ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ನಂತರ ನವದೆಹಲಿಯಲ್ಲಿ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಲೆಕ್ಕಪರಿಶೋಧನೆ ವರದಿ ಸಲ್ಲಿಸಿದ್ದೇವೆ. ಆ ಬಾಕಿ ಮೊತ್ತ ಬಿಡುಗಡೆ ಮಾಡಿದರೆ ರೈತರಿಗೆ ನೀಡ್ತೇವೆ. ಶೇ.10ರಷ್ಟು ಬಾಕಿ ಮೊತ್ತ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದು, ಸದ್ಯದಲ್ಲೇ ಕೇಂದ್ರದಿಂದ ರಾಜ್ಯಕ್ಕೆ 375 ಕೋಟಿ ಬಿಡುಗಡೆ ಆಗಲಿದೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:45 pm, Wed, 8 July 26

Source link

Viral: ಓವರ್ ಟೈಮ್ ಡ್ಯೂಟಿ ಮಾಡಿದ್ರೂ ಸಂಬಳ ಹೆಚ್ಚು ಕೊಡಲ್ಲ; ಮ್ಯಾನೇಜರ್ ವರ್ತನೆಗೆ ಬೇಸತ್ತು ಜಾಬ್ ರಿಸೈನ್ ಮಾಡಿದ ಉದ್ಯೋಗಿ – Kannada News | An employee asked if it was right for the manager to act this way, even after working overtime.

ಕೈಯಲ್ಲಿ ಒಂದು ಉದ್ಯೋಗವಿದ್ರೆ (Job) ಮರ್ಯಾದೆ. ಕೆಲವು ಸಲ ಈ ಮ್ಯಾನೇಜರ್  ಉದ್ಯೋಗಿಗಳ ಮೇಲೆ ಹೆಚ್ಚು ಒತ್ತಡ ಹಾಕೋದಿದೆ. ಆದರೆ ಮ್ಯಾನೇಜರ್‌ ವರ್ತನೆಯೇ ಮಿತಿ ಮೀರಿ ಹೋದ್ರೆ ಪರಿಸ್ಥಿತಿ ಹೇಗಿರಬೇಡ. ಹೌದು ಆಫೀಸ್ ಟೈಮಿಂಗ್ಸ್ ಮೀರಿ ವೇತನವಿಲ್ಲದೆ ಹೆಚ್ಚುವರಿ ಸಮಯ ಕೆಲಸ ಮಾಡಲು ಹೇಳಿದ್ದಕ್ಕೆ ಉದ್ಯೋಗಿಯೊಬ್ಬ ಜಾಬ್ ರಿಸೈನ್ (job resign) ಮಾಡಿದ್ದಾನೆ. ಈ ವ್ಯಕ್ತಿ ಮಾಡಿದ ರೆಡ್ಡಿಟ್ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ನಾಂದಿ ಹಾಡಿದೆ.

ಆರ್/ ಇಂಡಿಯನ್ ವರ್ಕ್ ಪ್ಲೇಸ್ (r/Indian Workplace) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ವ್ಯಕ್ತಿಯೊಬ್ಬ ತನ್ನ ವೃತ್ತಿ ಜೀವನದ ಬಗ್ಗೆ ತೆಗೆದುಕೊಂಡ ನಿರ್ಧಾರದ ಬಗ್ಗೆ ಪೋಸ್ಟ್ ನಲ್ಲಿ ತಿಳಿಸಿದ್ದಾನೆ. ನಾನು ನನ್ನ ಮ್ಯಾನೇಜರ್ ನ್ನು ದ್ವೇಷಿಸುತ್ತೇನೆ ಎಂಬ ಶೀರ್ಷಿಕೆ ನೀಡಿ ತನ್ನ ವೈಯುಕ್ತಿಕ ಅನುಭವ ಹಂಚಿಕೊಂಡಿದ್ದಾನೆ.

ವೈರಲ್ ಪೋಸ್ಟ್ ಇಲ್ಲಿದೆ

I hate my manager
by
u/watevershit in
IndianWorkplace

ನನ್ನ ಕೆಲಸದ ಸಮಯ ಬೆಳಿಗ್ಗೆ 9:00 ರಿಂದ ಸಂಜೆ 6:30 ಗಂಟೆವರೆಗೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೆ. ಆದರೆ ಮ್ಯಾನೇಜರ್ ನನ್ನ ಶಿಫ್ಟ್ ಅನ್ನು ಹೆಚ್ಚುವರಿಯಾಗಿ ಒಂದು ಗಂಟೆ ವಿಸ್ತರಿಸಲು ಹೇಳಿದರು. ನಾನು ಅದಕ್ಕೆ ತಲೆ ಅಲ್ಲಾಡಿಸಿದೆ. ಹೀಗಾಗಿ ಕಳೆದ ವಾರ ನಾನು ರಾತ್ರಿ 8:00 ಗಂಟೆಗೆ ಆಫೀಸಿನಿಂದ ಹೊರಟೆ. ಇದೇ ವೇಳೆಗೆ ಮ್ಯಾನೇಜರ್ ನಿಂದ ನನಗೆ ಮೆಸೇಜ್ ಬಂತು. ರಾತ್ರಿಯೊಳಗೆ ಬಾಕಿ ಇರುವ ದಾಖಲೆಗಳನ್ನು ಕಳುಹಿಸುವಂತೆ ಹೇಳಿದರು. ಅದಕ್ಕೆ ನಾನು ಸೋಮವಾರ ಕೆಲಸವನ್ನು ಪೂರ್ಣಗೊಳಿಸುವುದಾಗಿ ತಿಳಿಸಿದೆ. ಆದರೆ ಅವರು ಶನಿವಾರ ಬೆಳಗ್ಗೆ ಕಳುಹಿಸುವಂತೆ ಒತ್ತಾಯಿಸಿದರು. ನನ್ನ ಪರಿಸ್ಥಿತಿಯನ್ನು ವಿವರಿಸುತ್ತಾ ನನ್ನ ಬಳಿ ಲ್ಯಾಪ್‌ಟಾಪ್ ಇಲ್ಲ ಎಂದು ಹೇಳಿದೆ.

ಆದರೆ ಮ್ಯಾನೇಜರ್ ಮಾತ್ರ ಪದೇ ಪದೇ ಕಾಲ್ ಮಾಡುತ್ತಿದ್ದರು. ನನಗೆ ಏಕೆ ಕರೆ ಮಾಡುತ್ತಿದ್ದಾರೆಂದು ನನಗೆ ತಿಳಿದಿಲ್ಲ. ನಾನು ನನ್ನ ಫೋನ್ ಅನ್ನು ಏರ್‌ಪ್ಲೇನ್ ಮೋಡ್‌ನಲ್ಲಿ ಇರಿಸಿದೆ. ಇದರ ಬಗ್ಗೆ ಏನು ಮಾಡಬೇಕೆಂದು ನನಗೆ ತಿಳಿದಿಲ್ಲ. ನಾನು ನನ್ನ ಕೆಲಸವನ್ನು ಕಳೆದುಕೊಳ್ಳುತ್ತೇನೆ ಎಂದು ನಾನು ಯೋಚಿಸುತ್ತಿದ್ದೇನೆ. ಅವರು ನನಗೆ ಫ್ರೀ ಟೈಮ್ ನೀಡದೆ ರೋಬೋಟ್‌ನಂತೆ ಕೆಲಸ ಮಾಡಬೇಕೆಂದು ನಿರೀಕ್ಷಿಸುತ್ತಿದ್ದಾರೆ ಎಂದು ಮ್ಯಾನೇಜರ್ ನಡವಳಿಕೆಯನ್ನು ಟೀಕಿಸಿದ್ದಾನೆ.

ಇದನ್ನೂ ಓದಿ: ಸಂಬಳ ಹೆಚ್ಚಳಕ್ಕಾಗಿ ಕೆಲಸ ಬದಲಾವಣೆ; ಕೆಲಸಕ್ಕೆ ಸೇರಿದ ಮೂರೇ ತಿಂಗಳಿಗೆ ಜಾಬ್‌ ಕಳೆದುಕೊಂಡ ಉದ್ಯೋಗಿ

ಈ ರೆಡ್ಡಿಟ್ ಪೋಸ್ಟ್ ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಒಬ್ಬ ಬಳಕೆದಾರ ಕೆಲಸ ಬಿಟ್ಟದ್ದು ಒಳ್ಳೆಯದೇ ಆಯ್ತು ಎಂದಿದ್ದಾರೆ. ಮತ್ತೊಬ್ಬರು, ಇಂತಹ ಮ್ಯಾನೇಜರ್ ಗೆ ಉದ್ಯೋಗಿಗಳಿಗೂ ಪರ್ಸನಲ್ ಲೈಫ್ ಇದೆ ಎಂದು ತಿಳಿದಿರುವುದಿಲ್ಲ ಎಂದಿದ್ದಾರೆ. ಇನ್ನೊಬ್ಬರು, ದುಡಿಮೆ ಬೇಕು ನಿಜ, ಆದರೆ ವೈಯುಕ್ತಿಕ ನೆಮ್ಮದಿ ಹಾಳಾಗದಿರಲಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:46 pm, Wed, 8 July 26

Source link

IND vs ENG: ‘ಇದು ಐಪಿಎಲ್ ಅಲ್ಲ’; ಟೀಂ ಇಂಡಿಯಾ ಆಟಗಾರರನ್ನು ಎಚ್ಚರಿಸಿದ ಆರ್ಚರ್ – Kannada News | Team India’s Struggle: Jofra Archer Blames IPL Mindset for Overseas Cricket Failures

ಐಪಿಎಲ್‌ನಲ್ಲಿ (IPL) ಅಬ್ಬರಿ ಬೊಬ್ಬಿರಿದಿದ್ದ ಟೀಂ ಇಂಡಿಯಾ ಆಟಗಾರರು ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಪೆವಿಲಿಯನ್ ಪರೇಡ್ ನಡೆಸುತ್ತಿದ್ದಾರೆ. ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಪ್ರತಿ ಎಸೆತವನ್ನು ಸಿಕ್ಸರ್​ಗಟ್ಟಲು ಯತ್ನಿಸುತ್ತಿದ್ದ ಭಾರತದ ಬ್ಯಾಟ್ಸ್‌ಮನ್​ಗಳು ವಿದೇಶಿ ಪಿಚ್​ಗಳಲ್ಲಿ ರನ್ ಬರ ಎದುರಿಸುತ್ತಿದ್ದಾರೆ. ಮೊದಲಿಗೆ ಐರ್ಲೆಂಡ್ ವಿರುದ್ಧ ಟಿ20 ಸರಣಿ ಸೋತಿದ್ದ ಟೀಂ ಇಂಡಿಯಾ ಇದೀಗ ಇಂಗ್ಲೆಂಡ್‌ (India vs England) ವಿರುದ್ಧವೂ ಸರಣಿ ಸೋಲಿನ ಆತಂಕದಲ್ಲಿದೆ. ಇದಕ್ಕೆ ಕಾರಣ ತಂಡದಲ್ಲಿನ ಸಾಂಘಿಕ ಹೋರಾಟದ ಕೊರತೆ. ಬ್ಯಾಟಿಂಗ್‌ ವಿಭಾಗದಲ್ಲಿ ಯಾರೂ ಪರಿಸ್ಥಿತಿಗೆ ಅನುಗುಣವಾಗಿ ಆಡುತ್ತಿಲ್ಲ. ಹಾಗೆಯೇ ಅನಾನುಭವಿ ಬೌಲಿಂಗ್ ವಿಭಾಗಕ್ಕೂ ರನ್​ಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಇದು ತಂಡದ ಸೋಲಿಗೆ ಕಾರಣವಾಗುತ್ತಿದೆ. ಇದರ ನಡುವೆ ಇಂಗ್ಲೆಂಡ್‌ ತಂಡದ ಸ್ಟಾರ್ ವೇಗದ ಬೌಲರ್ ಜೋಫ್ರಾ ಆರ್ಚರ್, ಟೀಂ ಇಂಡಿಯಾ ಆಟಗಾರರು ಐಪಿಎಲ್ ಗುಂಗಿನಿಂದ ಹೊರಬಂದು ನಿಜವಾದ ಕ್ರಿಕೆಟ್​ಗೆ ಒತ್ತು ನೀಡಲಿ ಎಂಬ ಎಚ್ಚರಿಕೆ ನೀಡಿದ್ದಾರೆ.

ಮೂರನೇ ಟಿ20 ಪಂದ್ಯ ಮುಗಿದ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಆರ್ಚರ್ ಟೀಂ ಇಂಡಿಯಾ ಆಟಗಾರರು ಎಲ್ಲಿ ಎಡವುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ವಿವರಿಸಿದರು. ಅದರಲ್ಲೂ ಬಹುಮುಖ್ಯವಾಗಿ ಟೀಂ ಇಂಡಿಯಾ ಆಟಗಾರರು ಐಪಿಎಲ್​ ಗುಂಗಿನಿಂದ ಹೊರಬಂದು, ಇಂಗ್ಲೆಂಡ್‌ ಪರಿಸ್ಥಿತಿಗೆ ತಕ್ಕನಾಗಿ ಆಡಬೇಕು ಎಂಬುದನ್ನು ಒತ್ತಿ ಹೇಳಿದರು.

ಐಪಿಎಲ್‌ನಲ್ಲಿ ಬ್ಯಾಟಿಂಗ್‌ ಸ್ನೇಹಿ ಪಿಚ್

ಭಾರತೀಯ ಬ್ಯಾಟ್ಸ್‌ಮನ್‌ಗಳ ವಿರುದ್ಧದ ನಿಮ್ಮ ತಂತ್ರವು ಐಪಿಎಲ್ ತಂತ್ರಕ್ಕಿಂತ ಹೇಗೆ ಭಿನ್ನವಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಆರ್ಚರ್, ‘ಇಂಗ್ಲಿಷ್ ಪರಿಸ್ಥಿತಿಗಳಲ್ಲಿ ಬೌಲರ್‌ಗಳು ಸಣ್ಣ ವಿವರಗಳ ಬಗ್ಗೆ ನಿರಂತರವಾಗಿ ಚಿಂತಿಸುವ ಬದಲು ಸಾಂಪ್ರದಾಯಿಕ ವಿಧಾನಗಳಿಗೆ ಒಗ್ಗಿಕ್ಕೊಳ್ಳುವುದು ಉತ್ತಮ. ಐಪಿಎಲ್‌ನಲ್ಲಿ ಬ್ಯಾಟಿಂಗ್‌ ಸ್ನೇಹಿ ಪಿಚ್ ಹಾಗೂ ಚಿಕ್ಕ ಬೌಂಡರಿಗಳನ್ನು ಇಡುವುದರಿಂದ ಅಲ್ಲಿ ನೀವು ತುಂಬಾ ಜಾಗರೂಕರಾಗಿ ಬೌಲ್ ಮಾಡಬೇಕು. ಆದರೆ ಇಲ್ಲಿ ಬೌಲರ್​ಗಳಿಗೆ ಕೆಲವು ತಪ್ಪುಗಳನ್ನು ಮಾಡಲು ಅವಕಾಶವಿದೆ ಎಂದು ನಾನು ಭಾವಿಸುತ್ತೇನೆ.

IND vs SL: ಟಿ20 ಸರಣಿ ರದ್ದು; ಭಾರತ- ಲಂಕಾ ನಡುವಿನ ಟೆಸ್ಟ್ ಸರಣಿ ವೇಳಾಪಟ್ಟಿ ಪ್ರಕಟ

ವಿಶೇಷ ಇನ್ನಿಂಗ್ಸ್​ನ ಅಗತ್ಯವಿರುತ್ತದೆ

ಹೀಗಾಗಿ ಇಂಗ್ಲೆಂಡ್​ನಲ್ಲಿ ಗೆಲುವಿಗೆ 200+ ಟಾರ್ಗೆಟ್ ಸಾಕು ಎಂದು ನಾನು ಭಾವಿಸುತ್ತೇನೆ. ಆದರೆ ಐಪಿಎಲ್‌ನಲ್ಲಿ 200 ಕ್ಕಿಂತ ಹೆಚ್ಚು ಸ್ಕೋರ್‌ಗಳನ್ನು ಸುಲಭವಾಗಿ ಬೆನ್ನಟ್ಟಲಾಗುತ್ತದೆ. ಹಾಗಂತ ಇಂಗ್ಲೆಂಡ್ ಪಿಚ್‌ಗಳಲ್ಲಿ 200 ರನ್ ಗಳಿಸಿದರೆ ಗೆಲುವು ಖಚಿತ ಎಂದು ಹೇಳಲಾಗದು. ಆದರೆ ಈ 200+ ರನ್​ಗಳ ಗುರಿಯನ್ನು ಬೆನ್ನಟ್ಟಲು ಎದುರಾಳಿ ತಂಡದಿಂದ ವಿಶೇಷ ಇನ್ನಿಂಗ್ಸ್​ನ ಅಗತ್ಯವಿರುತ್ತದೆ. ಇನ್ನು ಈ ಪಂದ್ಯದಲ್ಲಿ ನಮ್ಮ ತಂಡದ ಎಲ್ಲಾ ಬೌಲರ್​ಗಳು ಅತ್ಯುತ್ತಮವಾಗಿ ಬೌಲಿಂಗ್‌ ಮಾಡಿದರು. ಹೀಗಾಗಿ ಅವರೆಲ್ಲರಿಗೂ ವಿಕೆಟ್​ಗಳು ಸಿಕ್ಕವು. ಎಲ್ಲರೂ ತಂಡದ ಗೆಲುವಿಗೆ ಕೊಡುಗೆ ನೀಡಿದ್ದಕ್ಕೆ ನನಗೆ ಸಂತೋಷವಾಗಿದೆ’ ಎಂದು ಆರ್ಚರ್ ಹೇಳಿಕೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ – Kannada News | Bollywood actress Huma Qureshi talks about Karnataka and Kannadigas

ಬಾಲಿವುಡ್ (Bollywood) ನಟಿ ಹುಮಾ ಖುರೇಷಿ ನಿನ್ನೆಯಷ್ಟೆ (ಜುಲೈ 8) ಬೆಂಗಳೂರಿಗೆ ಬಂದಿದ್ದರು. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾನಲ್ಲಿ ಸಹ ನಟಿಸಿರುವ ಹುಮಾ ಖುರೇಷಿ, ತಾವು ನಟಿಸಿ ಸಹ ನಿರ್ಮಾಣ ಮಾಡಿರುವ ‘ಬೇಬಿ ಡು ಡೈ ಡು’ ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಟಿವಿ9 ಜೊತೆಗೆ ಮಾತನಾಡಿದ ನಟಿ ಹುಮಾ ಖುರೇಷಿ, ತಮ್ಮ ಸಿನಿಮಾದ ಬಗ್ಗೆ ಮಾತನಾಡುವ ಜೊತೆಗೆ, ಕನ್ನಡಿಗರ ಬಗ್ಗೆಯೂ ಬಲು ಪ್ರೀತಿ, ಗೌರವಗಳಿಂದ ಮಾತನಾಡಿದ್ದಾರೆ. ಹುಮಾ ಖುರೇಷಿ ಹೇಳಿರುವುದೇನು? ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ – Kannada News | Another Stone Quarry Tragedy in Karnataka: Massive Boulder Falls on JCB

ಕೊಪ್ಪಳ, ಜುಲೈ 08: ಇತ್ತೀಚೆಗೆ ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣ ಬಳಿ ಕಲ್ಲು ಕ್ವಾರಿಯಲ್ಲಿ ಬಂಡೆ ಉರುಳಿ 7 ಜನ ಸಾವನ್ನಪ್ಪಿದ್ದರು. ಈ ಬೆನ್ನಲ್ಲೇ ಮತ್ತೊಂದು ದುರಂತ ಸಂಭವಿಸಿದ್ದು, ಭಾರೀ ಅನಾಹುತವೊಂದು ತಪ್ಪಿದೆ. ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದ ಜೆಸಿಬಿ ಮೇಲೆ ಬೃಹತ್ ಬಂಡೆ ಬಿದ್ದಿರುವಂತಹ ಘಟನೆ ಕೊಪ್ಪಳ ತಾಲೂಕಿನ ಶಿವಪುರ ಕೆರೆ ಬಳಿ ನಡೆದಿದೆ. ಕೆರೆ ಮೂಲೆಯಲ್ಲಿ ಕಲ್ಲು ಗಣಿಗಾರಿಕೆ ಮಾಡಲಾಗುತಿತ್ತು. ಈ ವೇಳೆ ಮಣ್ಣು ಕುಸಿತವಾಗಿ ಜೆಸಿಬಿ ಮೇಲೆ ಬೃಹತ್ ಬಂಡೆ ಬಿದ್ದಿದೆ. ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಯಾವುದೇ ಮುಂಜಾಗ್ರತಾ ಕ್ರಮವಹಿಸದೆ ಜೆಸಿಬಿ ಬಳಕೆ ಮಾಡಿರುವ ಆರೋಪ ಕೇಳಿಬಂದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಚಹಾ ತಯಾರಿಸುವಾಗ, ಸೇವಿಸುವಾಗ ಮಾಡುವ ಈ ತಪ್ಪುಗಳು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು – Kannada News | Do not make these mistakes while making and drinking tea

ಚಹಾ (tea) ಬಹುತೇಕ ಎಲ್ಲರ ಅಚ್ಚುಮೆಚ್ಚಿನ ಪಾನೀಯವಾಗಿದೆ. ಹೆಚ್ಚಿನವರ ಮನೆಯಲ್ಲಿ ಚಹಾ ಇಲ್ಲದೆ ದಿನ ಪ್ರಾರಂಭವಾಗೋದೇ ಇಲ್ಲ. ಈ ಒಂದು ಪಾನೀಯ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಒಂದು ಕಪ್‌ ಟೀ ಕುಡಿಯೋದರಿಂದ ದೇಹ ಮತ್ತು ಮನಸ್ಸಿಗೆ ಅದೇನೋ ಎನರ್ಜಿ ಬಂದಂತಾಗುತ್ತದೆ. ಹೀಗೆ ಚಹಾಗೆ ಮನಸ್ಸನ್ನು ರಿಫ್ರೆಶ್‌ ಮಾಡುವ ಶಕ್ತಿಯಿದೆ. ಅದೇ ಚಹಾ ತಯಾರಿಸುವಾಗ ಮತ್ತು ಚಹಾ ಸೇವನೆ ಮಾಡುವಾಗ ಮಾಡುವ ಒಂದಷ್ಟು ತಪ್ಪುಗಳು ಆರೋಗ್ಯ ಸಮಸ್ಯೆಗಳನ್ನು ಸಹ ತಂದೊಡ್ಡುತ್ತವೆ. ಹೌದು ಚಹಾಗೆ ಸಂಬಂಧಿಸಿದ ಈ ಕೆಲವೊಂದಿಷ್ಟು ತಪ್ಪುಗಳು ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಹಾಗಾಗಿ ಇನ್ನು ಮುಂದೆ ಆ ತಪ್ಪುಗಳಾಗದಂತೆ ನೋಡಿಕೊಳ್ಳಿ.

ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರುವ ಚಹಾಗೆ ಸಂಬಂಧಿಸಿದ ತಪ್ಪುಗಳು:

ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು: ಅನೇಕ ಜನರು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಿಸಿ ಚಹಾ ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಈ ಅಭ್ಯಾಸ ಒಳ್ಳೆಯದಲ್ಲ ಏಕೆಂದರೆ ನೀವು ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದಾಗ, ಅದರಲ್ಲಿರುವ ಆಮ್ಲೀಯತೆಯು ಹೊಟ್ಟೆಯ ಒಳಪದರದ ಮೇಲೆ ಪರಿಣಾಮ ಬೀರುತ್ತದೆ. ಇದು ಎದೆಯುರಿ, ಅಜೀರ್ಣ ಮತ್ತು ಹಸಿವಿನ ಕೊರತೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ನೀರು ಅಥವಾ ಜೀರಿಗೆ ಬೆರೆಸಿದ ಬಿಸಿನೀರನ್ನು ಕುಡಿಯುವುದು ಉತ್ತಮ. ಮತ್ತು ಉಪಹಾರ ಸೇವಿಸಿದ ಬಳಿಕವೇ ಚಹಾ ಸೇವನೆ ಮಾಡಬೇಕು.

ಚಹಾ ಪುಡಿಯನ್ನು ಹೆಚ್ಚು ಹೊತ್ತು ಕುದಿಸುವುದು: ಅನೇಕ ಜನರು ಚಹಾ ಪುಡಿಯನ್ನು ರುಚಿ ಹೆಚ್ಚಿಸಲು ನೀರಿನಲ್ಲಿ ದೀರ್ಘಕಾಲ ಕುದಿಸುತ್ತಾರೆ. ಆದರೆ ಚಹಾ ಪುಡಿಯನ್ನು ಹೆಚ್ಚು ಹೊತ್ತು ಕುದಿಸಿದಾಗ, ಅದರಲ್ಲಿರುವ ‘ಟ್ಯಾನಿನ್’ ಎಂಬ ರಾಸಾಯನಿಕವು ಅಧಿಕವಾಗಿ ಬಿಡುಗಡೆಯಾಗುತ್ತದೆ ಮತ್ತು ಇದರಿಂದ  ಚಹಾ ಕಹಿಯಾಗುತ್ತದೆ. ಇದು ಹೊಟ್ಟೆ ಉಬ್ಬರ ಮತ್ತು ಅಜೀರ್ಣಕ್ಕೆ ಕಾರಣವಾಗಬಹುದು.

ಪ್ಲಾಸ್ಟಿಕ್ ಸ್ಟ್ರೈನರ್‌ಗಳನ್ನು ಬಳಸುವುದು: ಜನರು ಹೆಚ್ಚಾಗಿ ಚಹಾವನ್ನು ಸೋಸಲು ಪ್ಲಾಸ್ಟಿಕ್ ಸ್ಟ್ರೈನರ್‌ಗಳನ್ನು ಬಳಸುತ್ತಾರೆ, ಈ ರೀತಿ ಪ್ಲಾಸ್ಟಿಕ್ ಸ್ಟ್ರೈನರ್ ಮೂಲಕ ಚಹಾವನ್ನು ಸೋಸುವುದರಿಂದ ಪ್ಲಾಸ್ಟಿಕ್ ಸಂಯುಕ್ತಗಳು ಚಹಾದೊಂದಿಗೆ ಸೇರಿ ದೇಹವನ್ನು ಪ್ರವೇಶಿಸಬಹುದು, ಇದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಪ್ಲಾಸ್ಟಿಕ್ ಸ್ಟ್ರೈನರ್‌ಗಳ ಬದಲಿಗೆ ಸ್ಟೀಲ್ ಸ್ಟ್ರೈನರ್‌ಗಳನ್ನು ಬಳಸಬೇಕು.

ಚಹಾವನ್ನು ಪದೇ ಪದೇ ಬಿಸಿ ಮಾಡುವುದು: ಚಹಾವನ್ನು ಪದೇ ಪದೇ ಬಿಸಿ ಮಾಡುವುದು ಒಂದು ದೊಡ್ಡ ತಪ್ಪು. ಪದೇ ಪದೇ ಬಿಸಿ ಮಾಡುವುದರಿಂದ ಚಹಾದ ಆಮ್ಲದ ಅಂಶ ಹೆಚ್ಚಾಗಬಹುದು, ಇದು ಹೊಟ್ಟೆಯ ಸಮಸ್ಯೆಗಳಿಗೆ, ವಿಶೇಷವಾಗಿ ಆಮ್ಲೀಯತೆಗೆ ಕಾರಣವಾಗಬಹುದು. ಆದ್ದರಿಂದ, ಚಹಾವನ್ನು ಪದೇ ಪದೇ ಬಿಸಿ ಮಾಡಿ ಕುಡಿಯಬೇಡಿ.

ಇದನ್ನೂ ಓದಿ: ಬೆಳಿಗ್ಗೆ 30 ನಿಮಿಷಗಳ ಕಾಲ ವಾಕಿಂಗ್‌ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಗೊತ್ತಾ?

ಮಧ್ಯಾಹ್ನ, ರಾತ್ರಿ ಚಹಾ ಸೇವಿಸುವುದು: ಅನೇಕ ಜನರು ಮಧ್ಯಾಹ್ನ ಅಥವಾ ರಾತ್ರಿ ಊಟ ಮಾಡಿದ ತಕ್ಷಣ ಒಂದು ಕಪ್ ಚಹಾ ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಚಹಾದಲ್ಲಿರುವ ಕೆಫೀನ್ ಮತ್ತು ಟ್ಯಾನಿನ್‌ಗಳು ನಾವು ಸೇವಿಸುವ ಆಹಾರದಲ್ಲಿರುವ ಕಬ್ಬಿಣವನ್ನು ನಮ್ಮ ದೇಹವು ಹೀರಿಕೊಳ್ಳುವುದನ್ನು ತಡೆಯುತ್ತದೆ. ಇದು ದೇಹದಲ್ಲಿ ರಕ್ತಹೀನತೆಗೆ ಕಾರಣವಾಗಬಹುದು. ಅಲ್ಲದೆ ರಾತ್ರಿ ಚಹಾ ಸೇವನೆ ಮಾಡುವುದರಿಂದ ನಿದ್ರೆಗೆ ಅಡ್ಡಿಯಾಗುತ್ತದೆ.

ಮೊದಲು ಹಾಲು ಸೇರಿಸುವುದು: ಅನೇಕ ಜನರು ಚಹಾ ತಯಾರಿಸುವಾಗ  ಮೊದಲು ಪಾತ್ರೆಗೆ ಹಾಲನ್ನು ಹಾಕುತ್ತಾರೆ. ಇದು ಸರಿಯಾದ ವಿಧಾನವಲ್ಲ. ಏಕೆಂದರೆ ಹಾಲಿನಲ್ಲಿ ಉತ್ಕರ್ಷಣ ನಿರೋಧಕಗಳನ್ನು ಬಂಧಿಸುವ ಪ್ರೋಟೀನ್‌ಗಳಿವೆ. ಆದ್ದರಿಂದ ಮೊದಲು ಚಹಾ ಪುಡಿಯನ್ನು ನೀರಿನಲ್ಲಿ ಕುದಿಸಿ, ನಂತರ ಇತರ ಎಲ್ಲಾ ಪದಾರ್ಥಗಳನ್ನು ಸೇರಿಸಿ, ಕೊನೆಯಲ್ಲಿ ಹಾಲನ್ನು ಹಾಕಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​​; ಮಡಿಕೇರಿಯ ಬೆಂಗೂರಿನಲ್ಲಿ ದಾಖಲೆಯ ಮಳೆ – Kannada News | Karnataka Weather Forecast: Yellow Alert Issued for 7 Districts; Madikeri Records Heaviest Rainfall

ಬೆಂಗಳೂರು, ಜುಲೈ 08: ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಅಬ್ಬರಿಸುತ್ತಿದ್ದ ವರುಣನ ಆರ್ಭಟ ಕಡಿಮೆಯಾಗುವ ಮುನ್ಸೂಚನೆ ಸಿಕ್ಕಿದೆ. ಜೂನ್​​ ತಿಂಗಳಿನಲ್ಲಿ ರಾಜ್ಯದಲ್ಲಿ ನಿರೀಕ್ಷಿತ ಮಳೆಯಾಗಿಲ್ಲವಾಗಿತ್ತಾದರೂ ಜುಲೈ ಆರಂಭದಿಂದ ಹಲವೆಡೆ ಉತ್ತಮ ಮಳೆಯಾಗಿತ್ತು. ಆದರೆ ಜುಲೈ 2ನೇ ವಾರದಿಂದ ಮತ್ತೆ ಮುಂಗಾರು ಮಳೆಯ ಚಟುವಟಿಕೆಗಳು ಕ್ಷೀಣಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ ಕೇವಲ ಬೆರಳೆಣಿಕೆಯ ಜಿಲ್ಲೆಗಳಲ್ಲಿ ಮಾತ್ರ ನಾಳೆ (ಜುಲೈ 9)ರಂದು ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​​

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಹಾಸನ, ಕೊಡಗು ಮತ್ತು ಚಿಕ್ಕಮಗಳೂರಿನ ಕೆಲವೆಡೆ ಭಾರಿ ಮಳೆಯನ್ನು ನಿರಿಕ್ಷಿಸಲಾಗಿದ್ದು, ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​​ ಘೋಷಿಸಲಾಗಿದೆ. ಕರಾವಳಿ ಭಾಗದಲ್ಲಿ ಗಂಟೆಗೆ 50-60 ಕಿಲೋ ಮೀಟರ್​​ ವೇಗದ ಗಾಳಿಯ ಜೊತೆಗೆ ವರ್ಷಧಾರೆಯ ಎಚ್ಚರಿಕೆ ನೀಡಲಾಗಿದೆ. ಉಳಿದಂತೆ ಮೈಸೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ತುಂರುರು ಮಳೆಯ ಸಾಧ್ಯತೆ ಬಗ್ಗೆ ಇಲಾಖೆ ಎಚ್ಚರಿಸಿದೆ.

ಇದನ್ನೂ ಓದಿ: ಕರ್ನಾಟಕದ ಪ್ರಮುಖ ಡ್ಯಾಂಗಳ ಜುಲೈ 8ರ ನೀರಿನ ಮಟ್ಟದ ವಿವರ

ಕೊಡಗು ಜಿಲ್ಲೆಯ ಬೆಂಗೂರಲ್ಲಿ ದಾಖಲೆ ಮಳೆ

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬೆಂಗೂರಿನಲ್ಲಿ ನಿನ್ನೆ ದಾಖಲೆಯ ಅಂದರೆ, 211.5 ಮಿ.ಮೀ. ಮಳೆ ಸುರಿದಿದೆ. ನಂತರ ಸ್ಥಾನಗಳಲ್ಲಿ ಶಿವಮೊಗ್ಗದ ತೀರ್ಥಹಳ್ಳಿಯ ಹೊನ್ನೆತಾಳುವಿನಲ್ಲಿ 199.5 ಮಿ.ಮೀ., ಚಿಕ್ಕಮಗಳೂರಿನ ಕೊಪ್ಪದ ಕಮ್ಮರಡಿಯಲ್ಲಿ 194 ಮಿ.ಮೀ., ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನ ಹಲಗೇರಿಯಲ್ಲಿ 179.5 ಮಿ.ಮೀ., ದಕ್ಷಿಣ ಕನ್ನಡದ ಬೆಳ್ತಂಗಡಿಯ ಮಲವಂತಿಗೆಯಲ್ಲಿ 165.5 ಮಿ.ಮೀ., ಸಕಲೇಶಪುರದ ಹೊಗಲಹಳ್ಳ ಅಥವಾ ಹೊಂಗಡಹಳ್ಳದಲ್ಲಿ 163.5 ಮಿ.ಮೀ. ಮತ್ತು ಉಡುಪಿಯ ಕುಂದಾಪುರದ ಮಡಾಮಕ್ಕಿಯಲ್ಲಿ 124.5 ಮಿ.ಮೀ. ಮಳೆ ಸುರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕರೆಯಲ್ಲಿ ಸಿಲುಕಿದ್ದ ಕಾಡಾನೆ ಬಚಾವ್, 2 ದಿನ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ – Kannada News | Wild Elephant comes out from Lake after Days at kodagu

ಕೊಡಗು, (ಜುಲೈ.8): ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕನ್ನಂಬಾಡಿ ಗ್ರಾಮದಲ್ಲಿ ಕಾಡಾನೆಯೊಂದು ಕಳೆದ ಎರಡು ದಿನಳಿಂದ ಕೆರೆ ಕೆಸರಿನಲ್ಲಿ ಸಿಲುಕಿ ಕಾಲ ನರಳಾಡಿದ್ದು, ಯಾರೂ ಸಹಾಯಕ್ಕೆ ಬಂದಿಲ್ಲ. ಕೊನೆಗೆ ಆನೆ ತಾನಾಗಿಯೇ ಕರೆಯಿಂದ ಹೊರಬಂದಿದೆ. ಹೌದು…ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ದೇವರಪುರ ಗ್ರಾಮದ ಕೆರೆಯ ಕೆಸರಿನಲ್ಲಿ ಕಾಡಾನೆ ಕಳೆದ ಎರಡು ದಿನಗಳಿಂದ ಸಿಲುಕಿ ಒದ್ದಾಡಿದ್ದು, ನೀರು, ಆಹಾರವಿಲ್ಲದೇ ಕೆಸರಿನಿಂದ ಆಚೆ ಬರಲು ಇನ್ನಿಲ್ಲದ ಕಸರತ್ತು ಮಾಡಿತ್ತು. ಅಂತಿಮವಾಗಿ ಎರಡನೇ ದಿನಕ್ಕೆ ಅಂದರೆ ಇಂದು (ಜುಲೈ 08) ತಾನಾಗಿಯೇ ಕರೆಯಿಂದ ಆಚೆ ಬಂದು ನಿಟ್ಟುಸಿರುಬಿಟ್ಟಿದೆ.

ಇದನ್ನೂ ನೋಡಿ: ಕೊಡಗು: 24 ಗಂಟೆಗಳಿಂದ ಕೆಸರಿನಲ್ಲಿ ಸಿಲುಕಿ ನರಳಾಡುತ್ತಿರುವ ಕಾಡಾನೆ; ಅರಣ್ಯ ಇಲಾಖೆ ವಿರುದ್ಧ ಜನರ ಆಕ್ರೋಶ

Source link

Exit mobile version