ಮಕ್ಕಳಲ್ಲಿ ಹೆಚ್ಚುತ್ತಿರುವ ಕೈ, ಕಾಲು, ಬಾಯಿ ಸೋಂಕಿನ ಲಕ್ಷಣಗಳು ಹೇಗಿರುತ್ತವೆ, ಇದನ್ನು ತಡೆಗಟ್ಟಲು ಏನು ಮಾಡಬೇಕು ತಿಳಿದುಕೊಳ್ಳಿ – Kannada News | How to Protect Children from Hand, Foot and Mouth Disease: Doctors Explain

ರಾಜ್ಯದಲ್ಲಿ ಹವಾಮಾನ ವೈಪರೀತ್ಯದ ಪರಿಣಾಮ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತಿದೆ. ಅದರಲ್ಲಿಯೂ ಮಕ್ಕಳಲ್ಲಿ ತೀವ್ರವಾಗಿ ಹರಡುತ್ತಿರುವ ಕೈ, ಕಾಲು ಮತ್ತು ಬಾಯಿ ರೋಗದ ಬಗ್ಗೆ (Hand, Foot and Mouth Disease) ಪಾಲಕರು ಸರಿಯಾಗಿ ತಿಳಿದುಕೊಂಡು ಮಕ್ಕಳ ಆರೋಗ್ಯ ಕಾಪಾಡುವುದು ಬಹಳ ಮುಖ್ಯವಾಗಿದೆ. ಇದು ಕಾಕ್ಸಾಕಿ ವೈರಸ್ (Coxsackie virus) ಅಥವಾ ಇತರ ಎಂಟರೋವೈರಸ್‌ಗಳಿಂದ ಉಂಟಾಗುವ ಸಾಂಕ್ರಾಮಿಕ ರೋಗವಾಗಿದ್ದು, ಸಾಮಾನ್ಯವಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ, ಆದರೆ ಕೆಲವೊಮ್ಮೆ ದೊಡ್ಡ ಮಕ್ಕಳಲ್ಲೂ ಹಾಗೂ ವಯಸ್ಕರಲ್ಲೂ ಕಾಣಿಸಬಹುದು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಬೆಂಗಳೂರು ಎಸ್.ಡಿ.ಎಂ. ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಮತ್ತು ಆಸ್ಪತ್ರೆಯ ಪ್ರಾಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರಾದ ಡಾ. ರೀನಾ ಕುಲಕರ್ಣಿ ಮತ್ತು ಸಹ ಪ್ರಾಧ್ಯಾಪಕರಾಗಿರುವ ಡಾ. ಶ್ರೀಲಕ್ಷ್ಮಿ ಅವರು ಟಿವಿ9 ಕನ್ನಡಕ್ಕೆ ನೀಡಿದ್ದು ಈ ರೋಗ ಹೇಗೆ ಹರಡುತ್ತದೆ, ಇದರ ಲಕ್ಷಣಗಳೇನು, ತಡೆಗಟ್ಟಲು ಏನು ಮಾಡಬೇಕು ಎಂಬುದರ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ.

ರೋಗ ಹೇಗೆ ಹರಡುತ್ತದೆ?

ಡಾ. ರೀನಾ ಕುಲಕರ್ಣಿ ಮತ್ತು ಡಾ. ಶ್ರೀಲಕ್ಷ್ಮಿ ಅವರು ಹೇಳುವ ಪ್ರಕಾರ, ಈ ರೋಗವು ಸೋಂಕಿತ ಮಗುವಿನ ಉಗುಳು, ಮೂಗಿನ ಸ್ರಾವ, ಕೆಮ್ಮು-ಸೀನುವ ಹನಿಗಳು, ಬಾಯಿಯ ಅಥವಾ ಚರ್ಮದ ಗುಳ್ಳೆಗಳಲ್ಲಿರುವ ದ್ರವ ಹಾಗೂ ಮಲದ ಸಂಪರ್ಕದಿಂದ ಮತ್ತೊಬ್ಬರಿಗೆ ಹರಡುತ್ತದೆ. ಮಕ್ಕಳ ಆಟಿಕೆಗಳು, ಪಾತ್ರೆಗಳು ಹಾಗೂ ಆಗಾಗ ಸ್ಪರ್ಶಿಸುವ ವಸ್ತುಗಳ ಮೂಲಕವೂ ಸೋಂಕು ಹರಡಬಹುದು. ಇದು ಸಾಮಾನ್ಯವಾಗಿ ಗಂಭೀರವಾದ ಕಾಯಿಲೆಯಲ್ಲದಿದ್ದರೂ ಅತ್ಯಂತ ಸಾಂಕ್ರಾಮಿಕವಾಗಿದ್ದು, ಶಾಲೆ, ಅಂಗನವಾಡಿಗಳು, ಡೇ-ಕೇರ್ ಕೇಂದ್ರಗಳು ಹಾಗೂ ಆಟದ ಮೈದಾನಗಳಂತಹ ಮಕ್ಕಳ ಗುಂಪು ಸೇರುವ ಸ್ಥಳಗಳಲ್ಲಿ ವೇಗವಾಗಿ ಹರಡುತ್ತದೆ.

ಕೈ-ಕಾಲು-ಬಾಯಿ ರೋಗದ ಲಕ್ಷಣಗಳು:

  • ಜ್ವರ (ಸಾಮಾನ್ಯವಾಗಿ ಆರಂಭಿಕ ಲಕ್ಷಣ)
  • ಗಂಟಲು ನೋವು
  • ಹಸಿವು ಕಡಿಮೆಯಾಗುವುದು
  • ಆಯಾಸ ಮತ್ತು ಅಸ್ವಸ್ಥತೆ
  • ಬಾಯಿಯ ಒಳಭಾಗ, ನಾಲಿಗೆ, ಒಸಡು ಮತ್ತು ಕೆನ್ನೆಯ ಒಳಭಾಗದಲ್ಲಿ ನೋವಿನ ಸಣ್ಣ ಗುಳ್ಳೆಗಳು ಅಥವಾ ಹುಣ್ಣುಗಳು
  • ಕೈಗಳ ಅಂಗೈ, ಕಾಲಿನ ಅಡಿಭಾಗ ಹಾಗೂ ಕೆಲವೊಮ್ಮೆ ಸೊಂಟ, ಮೊಣಕಾಲು ಅಥವಾ ಬೆನ್ನು ಭಾಗದಲ್ಲಿ ಕೆಂಪು ಗುಳ್ಳೆಗಳು ಅಥವಾ ನೀರಿನ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.
  • ಚಿಕ್ಕ ಮಕ್ಕಳಲ್ಲಿ ಕಿರಿಕಿರಿ, ಅಳುವುದು ಮತ್ತು ಬಾಯಿನ ನೋವಿನಿಂದ ಆಹಾರ ಅಥವಾ ನೀರು ಕುಡಿಯಲು ನಿರಾಕರಿಸುವುದು
    ಕೆಲವೊಮ್ಮೆ ವಾಂತಿ ಅಥವಾ ಭೇದಿ

ಇದನ್ನೂ ಓದಿ: ಪಾಲಕರೇ ಗಮನಿಸಿ: ಮಕ್ಕಳಲ್ಲಿ ಹೆಚ್ಚುತ್ತಿದೆ ‘ಕೈ, ಕಾಲು, ಬಾಯಿ’ ಸೋಂಕು!

ಈ ರೋಗಕ್ಕೆ ವಿಶೇಷ ವೈರಸ್ ವಿರೋಧಿ ಔಷಧಿ ಇಲ್ಲ. ಹೆಚ್ಚಿನ ಮಕ್ಕಳು 7 ರಿಂದ 10 ದಿನಗಳಲ್ಲಿ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ. ಜ್ವರ ಮತ್ತು ನೋವನ್ನು ಕಡಿಮೆ ಮಾಡುವ ಔಷಧಿಗಳನ್ನು ವೈದ್ಯರ ಸಲಹೆಯಂತೆ ನೀಡಬೇಕು. ಸಾಕಷ್ಟು ದ್ರವ ಆಹಾರ, ನೀರು, ತಂಪಾದ ಮೃದುವಾದ ಆಹಾರವನ್ನು ನೀಡುವುದು ಮುಖ್ಯ. ಮಗು ಸಂಪೂರ್ಣ ಗುಣಮುಖವಾಗುವವರೆಗೆ ಖಾರ, ಹುಳಿ ಹಾಗೂ ಮಸಾಲೆಯುಕ್ತ ಆಹಾರವನ್ನು ನೀಡಬಾರದು.

ತಡೆಗಟ್ಟುವ ಕ್ರಮಗಳು

  • ಮಕ್ಕಳ ಕೈಗಳನ್ನು ಆಗಾಗ ಸಾಬೂನಿನಿಂದ ತೊಳೆಯಬೇಕು.
  • ಆಟಿಕೆಗಳು ಮತ್ತು ಪದೇ ಪದೇ ಮುಟ್ಟುವ ವಸ್ತುಗಳನ್ನು ಸ್ವಚ್ಛವಾಗಿಡಬೇಕು.
  • ಸೋಂಕಿತ ಮಗುವನ್ನು ಸಂಪೂರ್ಣ ಗುಣಮುಖವಾಗುವವರೆಗೆ ಇತರ ಮಕ್ಕಳಿಂದ ದೂರವಿಡಬೇಕು.
  • ಆಹಾರ ಸೇವಿಸುವ ಮೊದಲು ಮತ್ತು ಶೌಚಾಲಯದ ನಂತರ ಕೈ ತೊಳೆಯುವ ಅಭ್ಯಾಸ ಬೆಳೆಸಬೇಕು.
  • ವೈಯಕ್ತಿಕ ಬಟ್ಟೆ ಮತ್ತು ಟವೆಲ್‌ಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಬೇಕು.

ಗಮನಿಸಿ: ಹೆಚ್ಚಿನ ಮಕ್ಕಳಲ್ಲಿ ಈ ರೋಗವು 7–10 ದಿನಗಳಲ್ಲಿ ವೈದ್ಯರು ನೀಡುವ ಔಷಧಿಗಳ ಮೂಲಕ ತಾನಾಗಿಯೇ ಗುಣವಾಗುತ್ತದೆ. ಆದರೆ ತೀವ್ರ ಜ್ವರ, ಅತಿಯಾದ ನಿದ್ರೆ, ತೀವ್ರ ಆಯಾಸ, ಉಸಿರಾಟದ ತೊಂದರೆ ಕಂಡುಬಂದರೆ ತಡಮಾಡದೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:48 pm, Thu, 16 July 26

Source link

ಕೋಲಾರ: ಬಂಗಾರ ತಿರುಪತಿ ದೇವಾಲಯದ ಹುಂಡಿ ಹಣ ಕದ್ದು ಸಿಕ್ಕಿಬಿದ್ದ ನೌಕರ – Kannada News | Temple Employee Caught Stealing Money from Bangara Tirupati Temple Donation Box

ಹುಂಡಿ ಹಣ ಎಗರಿಸಿದ ನೌಕರImage Credit source: tv9 kannada

ಕೋಲಾರ, ಜುಲೈ 16: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಬಂಗಾರಪೇಟೆ ತಾಲ್ಲೂಕಿನ ಬಂಗಾರ ತಿರುಪತಿ ಶ್ರೀ ನೇತ್ರ ವೆಂಕಟರಮಣ ಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯದ ವೇಳೆ, ದೇವಸ್ಥಾನದ ನೌಕರನೊಬ್ಬ ಹಣ ಕದ್ದು (temple Hundi theft) ಸಿಕ್ಕಿಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ. ಹೆಚ್​ಆರ್​ ಮಂಜುನಾಥ್​ ಹಣ ಎಗರಿಸಿದ ಸಿಬ್ಬಂದಿ. ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸಿಸಿಟಿವಿ ಕ್ಯಾಮೆರಾದಲ್ಲಿ ಕೃತ್ಯ ಸೆರೆ

ಮುಜರಾಯಿ ತಹಶೀಲ್ದಾರ್ ಶ್ರೀನಿವಾಸರೆಡ್ಡಿ ಹಾಗೂ ಕಂದಾಯ ಮತ್ತು ಮುಜರಾಯಿ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿತ್ತು. ಈ ವೇಳೆ ಕರ್ತವ್ಯದಲ್ಲಿದ್ದ ದೇವಾಲಯದ ಸಿಬ್ಬಂದಿ ಹೆಚ್.ಆರ್. ಮಂಜುನಾಥ್ ಎಂಬಾತ ಯಾರಿಗೂ ತಿಳಿಯದಂತೆ 3,100 ರೂ ಹಣವನ್ನು ಎಗರಿಸಿದ್ದಾನೆ. ಹಣ ಕದ್ದು ಅದನ್ನು ಪರಿಶೀಲಿಸುತ್ತಿದ್ದ ದೃಶ್ಯವು ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಬಿಎಂಟಿಸಿ ಪ್ರಯಾಣಿಕರೇ ಎಚ್ಚರ: ಪ್ರಯಾಣಿಕರ ಸೋಗಿನಲ್ಲಿ ಬಂದು ಕಂಡಕ್ಟರ್ ಬ್ಯಾಗನ್ನೇ ಎಗಿರಿಸಿದ ಮಹಿಳೆ, ವಿಡಿಯೋ ವೈರಲ್

ಇನ್ನು ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಮುಜರಾಯಿ ಅಧಿಕಾರಿಗಳು ಸದ್ಯ ಆರೋಪಿ ಮಂಜುನಾಥ್‌ನಿಂದ ಕದ್ದ ಹಣವನ್ನು ವಶಪಡಿಸಿಕೊಂಡಿದ್ದು, ಆತನ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಹುಂಡಿಯಲ್ಲಿ 13.5 ಲಕ್ಷಕ್ಕೂ ಅಧಿಕ ಹಣ ಸಂಗ್ರಹ

ಇತ್ತ ದೇವಾಲಯದ ಹುಂಡಿ ಎಣಿಕೆ ಕಾರ್ಯ ಕೂಡ ಮುಕ್ತಾಯಗೊಂಡಿದ್ದು, ಭಕ್ತರು ದೊಡ್ಡ ಪ್ರಮಾಣದಲ್ಲಿ ಕಾಣಿಕೆ ಅರ್ಪಿಸಿದ್ದಾರೆ. ದೇವಾಲಯದ ಪ್ರಮುಖ ಹುಂಡಿಯಲ್ಲಿ ಒಟ್ಟು 13 ಲಕ್ಷ ರೂ ಹಾಗೂ ಅನ್ನದಾಸೋಹ ಹುಂಡಿಯಲ್ಲಿ 53 ಸಾವಿರ ರೂ ನಗದು ಸಂಗ್ರಹವಾಗಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್ ಮಾಹಿತಿ ನೀಡಿದ್ದಾರೆ.

ಸಂಬಂಧಿಯಿಂದಲೇ 5 ಲಕ್ಷ ರೂ ಮೌಲ್ಯದ ಚಿನ್ನದ ಸರ ಕಳ್ಳತನ 

ಇನ್ನು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಯಲ್ಲೂರು ಗ್ರಾಮದಲ್ಲಿ‌ ಮತ್ತೊಂದು ಕಳ್ಳತನ ಘಟನೆ ನಡೆದಿದೆ. ಮನೆಗೆ ಬಂದಿದ್ದ ಸಂಬಂಧಿಯಿಂದಲೇ ಚಿನ್ನದ ಸರ ಕಳ್ಳತನ ಮಾಡಲಾಗಿದೆ. ಸುಶೀಲಮ್ಮ ಎಂಬುವವರಿಂದ ಕೃತ್ಯವೆಸಗಲಾಗಿದೆ. ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮೈಸೂರು: ಮಹಾಬಲೇಶ್ವರ ದೇವಸ್ಥಾನದ ಹುಂಡಿ ಹಣ, ಬೆಳ್ಳಿ ವಿಗ್ರಹಗಳು, ಕಂಚಿನ ಆಭರಣ ದೋಚಿದ ಕಳ್ಳರು

ಮನೆಗೆ ಆಗಮಿಸಿದ್ದ ಸುಶೀಲಮ್ಮ, ಮುನಿಲಕ್ಷ್ಮಮ್ಮ ಕುತ್ತಿಗೆಯಲ್ಲಿದ್ದ 5 ಲಕ್ಷ ರೂ ಮೌಲ್ಯದ 45 ಗ್ರಾಂ ಚಿನ್ನದ ಸರ ದೋಚಿದ್ದಾರೆ. ಹಳೆ ದ್ವೇಷ ಹಿನ್ನೆಲೆ ಸಂಚು ಮಾಡಿ ಬಾಲಕನೊಂದಿಗೆ ಸರ ಕಳ್ಳತನ ಮಾಡಲಾಗಿದೆ. ಸದ್ಯ ಘಟನೆ ನಡೆದು 36 ಗಂಟೆಯೊಳಗೆ‌ ಶ್ರೀನಿವಾಸಪುರ ಪೊಲೀಸರು ಆರೋಪಿನ್ನು ಬಂಧಿಸಿ, ಚಿನ್ನದ ಸರ ವಶಕ್ಕೆ ಪಡೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

9ನೇ ತರಗತಿಯಿಂದ ಬೇಡ; ಸಿಬಿಎಸ್​ಇ ತ್ರಿಭಾಷಾ ನೀತಿಗೆ ಸುಪ್ರೀಂ ಕೋರ್ಟ್ ಆಕ್ಷೇಪ – Kannada News | Supreme Court Urges Centre To Review CBSE 3 Language Policy From Class 9 flags stress on students

ನವದೆಹಲಿ, ಜುಲೈ 16: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (CBSE) 9ನೇ ತರಗತಿಯಿಂದ ಜಾರಿಗೆ ತರಲು ಉದ್ದೇಶಿಸಿರುವ ಮೂರು ಭಾಷಾ ನೀತಿಯನ್ನು (ತ್ರಿಭಾಷಾ ನೀತಿ) ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಇದು ವಿದ್ಯಾರ್ಥಿಗಳ ಮೇಲಿನ ಮಾನಸಿಕ ಒತ್ತಡಕ್ಕೆ ಕಾರಣವಾಗಲಿದೆ ಎಂದಿರುವ ಸುಪ್ರೀಂ ಕೋರ್ಟ್ ಈ ನೀತಿಯನ್ನು ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. 9ನೇ ತರಗತಿಯಲ್ಲಿ ವಿದ್ಯಾರ್ಥಿಗಳು ಈಗಾಗಲೇ ಬೋರ್ಡ್ ಪರೀಕ್ಷೆಗಳ (ಎಸ್​ಎಸ್​ಎಲ್​ಸಿ) ಸಿದ್ಧತೆಯಲ್ಲಿರುತ್ತಾರೆ. ಗಣಿತ, ವಿಜ್ಞಾನದಂತಹ ಕಠಿಣ ವಿಷಯಗಳ ಒತ್ತಡದಲ್ಲಿರುತ್ತಾರೆ. ಇಂತಹ ಹಂತದಲ್ಲಿ ದಿಢೀರನೆ ಸಿಬಿಎಸ್​ಇ ಮೂರನೇ ಭಾಷೆಯನ್ನು ಕಡ್ಡಾಯವಾಗಿ ಕಲಿಯುವಂತೆ ಮಾಡುವುದು ಎಷ್ಟು ಸಮಂಜಸ? ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಈ ನೀತಿ ವಿದ್ಯಾರ್ಥಿಗಳ ಮೇಲೆ ಅನಗತ್ಯ ಮಾನಸಿಕ ಒತ್ತಡವನ್ನು ಉಂಟುಮಾಡುತ್ತದೆ ಎಂದು ಕಳವಳ ವ್ಯಕ್ತಪಡಿಸಿರುವ ನ್ಯಾಯಾಲಯ, ಮೂರನೇ ಭಾಷೆಯನ್ನು 9ನೇ ತರಗತಿಯ ಬದಲಿಗೆ 6ನೇ ತರಗತಿಯಿಂದಲೇ ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬಿ. ವಿ. ನಾಗರತ್ನ ಸಿಬಿಎಸ್‌ಇಯ ನಿರ್ಧಾರವನ್ನು ಪ್ರಶ್ನಿಸಿದ್ದು, “10ನೇ ತರಗತಿಯ ಬೋರ್ಡ್ ಪರೀಕ್ಷೆಗಳ ಹಿನ್ನೆಲೆಯಲ್ಲಿ 8ನೇ ತರಗತಿಯ ಮುಕ್ತಾಯದಿಂದಲೇ ವಿದ್ಯಾರ್ಥಿಗಳ ಮೇಲೆ ಒತ್ತಡ ಆರಂಭವಾಗಿರುತ್ತದೆ. ಇಂತಹ ಸಂದರ್ಭದಲ್ಲಿ 9ನೇ ತರಗತಿಯಲ್ಲಿ ಹೊಸ ಭಾಷೆಯನ್ನು ಹೇರುವುದು ಸರಿಯಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಿಬಿಎಸ್‌ಇ ನೂತನ ಅಧ್ಯಕ್ಷರಾಗಿ ಐಎಎಸ್​ ಅಧಿಕಾರಿ ಲೋಖಂಡೆ ಸೀತಾರಾಮ್ ನೇಮಕ

“ವಿದ್ಯಾರ್ಥಿಗಳು 3 ಭಾಷೆಗಳನ್ನು ಕಲಿಯುವುದು ಒಳ್ಳೆಯದೇ. ಆದರೆ ಅದನ್ನು 9ನೇ ತರಗತಿಯಿಂದಲೇ ಏಕೆ ಆರಂಭಿಸಬೇಕು? ಪ್ರಾಥಮಿಕ ಅಥವಾ ಪೂರ್ವ ಪ್ರಾಥಮಿಕ ಹಂತದಲ್ಲೇ ಮಕ್ಕಳು ಹೊಸ ಭಾಷೆಗಳನ್ನು ಸುಲಭವಾಗಿ ಕಲಿಯಬಲ್ಲರು. 9ನೇ ತರಗತಿಯಲ್ಲಿ 3ನೇ ಭಾಷೆಯನ್ನು ಹೇರಿದರೆ ವಿದ್ಯಾರ್ಥಿಗಳಿಗೆ ಇದು ಅತಿಯಾದ ಒತ್ತಡ ಉಂಟುಮಾಡುತ್ತದೆ” ಎಂದಿದ್ದಾರೆ.

ಏನಿದು ಸಿಬಿಎಸ್‌ಇಯ ತ್ರಿಭಾಷಾ ನೀತಿ?:

ರಾಷ್ಟ್ರೀಯ ಶಿಕ್ಷಣ ನೀತಿ (NEP) ಅಡಿಯಲ್ಲಿ ಸಿಬಿಎಸ್‌ಇ ಹೊಸ ಬದಲಾವಣೆಯನ್ನು ತರಲು ಮುಂದಾಗಿತ್ತು. ಇದರ ಪ್ರಕಾರ, 9ನೇ ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಒಟ್ಟು 3 ಭಾಷೆಗಳನ್ನು ಕಲಿಯಬೇಕಾಗುತ್ತದೆ. ಈ ಮೂರು ಭಾಷೆಗಳಲ್ಲಿ ಕನಿಷ್ಠ ಎರಡು ಭಾಷೆಗಳು ಭಾರತೀಯ ಮೂಲದ ಭಾಷೆಗಳಾಗಿರಬೇಕು. (ಉದಾಹರಣೆಗೆ: ಹಿಂದಿ, ಸಂಸ್ಕೃತ, ಕನ್ನಡ, ತಮಿಳು ಇತ್ಯಾದಿ).

2026-27ನೇ ಶೈಕ್ಷಣಿಕ ಸಾಲಿನ 10ನೇ ತರಗತಿ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಹಳೆಯ ನಿಯಮವೇ ಮುಂದುವರಿಯಲಿದ್ದು, ಕೇವಲ ಎರಡು ಭಾಷೆಗಳನ್ನು ಮಾತ್ರ ಓದುತ್ತಾರೆ. ಇವರಿಗೆ ಮೂರನೇ ಭಾಷೆಯ ನಿಯಮ ಅನ್ವಯಿಸುವುದಿಲ್ಲ. ಆದರೆ, 9ನೇ ತರಗತಿ ವಿದ್ಯಾರ್ಥಿಗಳು ಮೂರು ಭಾಷೆಗಳನ್ನು ಕಲಿಯಬೇಕಾಗುತ್ತದೆ. ಇವರು ಮುಂದಿನ ವರ್ಷ (೨೦೨೭-೨೮ರಲ್ಲಿ) 10ನೇ ತರಗತಿಗೆ ಹೋದಾಗ ಈ ಮೂರನೇ ಭಾಷೆಗೆ ಯಾವುದೇ ಸಿಬಿಎಸ್‌ಇ ಬೋರ್ಡ್ ಪರೀಕ್ಷೆ ಇರುವುದಿಲ್ಲ, ಕೇವಲ ಶಾಲಾ ಮಟ್ಟದ ಮೌಲ್ಯಮಾಪನವಿರುತ್ತದೆ.

ಇದನ್ನೂ ಓದಿ: ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಹೊಸ ರೂಲ್ಸ್: 9ನೇ ತರಗತಿಯಿಂದ 3 ಭಾಷೆಗಳ ಅಧ್ಯಯನ ಕಡ್ಡಾಯ; ಕನಿಷ್ಠ 2 ಭಾರತೀಯ ಭಾಷೆಗಳಿರಬೇಕು!

ಈಗಾಗಲೇ ಗಣಿತ, ಸಮಾಜ ವಿಜ್ಞಾನ, ಮತ್ತು ವಿಜ್ಞಾನ ವಿಷಯಗಳ ಹೊರೆ ಇರುವಾಗ, ಮತ್ತೊಂದು ಭಾಷೆಯನ್ನು ಹೆಚ್ಚುವರಿಯಾಗಿ ಕಲಿಯುವುದು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದಿಢೀರನೆ ಹೊಸ ಭಾಷೆಯನ್ನು ಕಲಿಯುವುದು ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕಷ್ಟವಾಗಬಹುದು ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ಸುಪ್ರೀಂ ಕೋರ್ಟ್ ನೀಡಿದ ಸೂಚನೆ ಏನು?:

ಈ ತ್ರಿಭಾಷಾ ನೀತಿಯು ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ತಡೆಯಲು, ಇದರ ಪ್ರಾಯೋಗಿಕತೆ ಮತ್ತು ಸಮಯದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಹಾಗೂ ಶಿಕ್ಷಣ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ. ಭಾಷಾ ಕಲಿಕೆಯನ್ನು ಪ್ರಾಥಮಿಕ ಹಂತದಿಂದಲೇ ಹಂತಹಂತವಾಗಿ ಜಾರಿಗೆ ತರುವುದು ಹೆಚ್ಚು ಸೂಕ್ತ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಮಾಲೀಕನ ತೊಡೆ ಮೇಲೆ ತಲೆಯಿಟ್ಟು ಮಲಗಿದ ಮರಿಯಾನೆ – Kannada News | The owner sang a song and put the baby elephant to sleep

ಮರಿಯಾನೆಗಳ (baby elephant) ಆಟ ತುಂಟಾಟಗಳನ್ನು ನೋಡುವ ಖುಷಿಯೇ ಬೇರೆ. ಮನೆ ಮಾಲೀಕನ ಜತೆಗೆ ತುಂಟಾಟ ಮಾಡುತ್ತ ಪುಟಾಣಿ ಮಗುವಿನಂತೆ ವರ್ತಿಸುತ್ತದೆ. ಆದರೆ ಇದೀಗ ಮರಿಯಾನೆ ಮುಗ್ಧತೆ ನೀವು ಕಳೆದೇ ಹೋಗುತ್ತೀರಿ. ಮಾಲೀಕನ ತೊಡೆ ಮೇಲೆ ತಲೆಯಿಟ್ಟು ಮರಿಯಾನೆಯೊಂದು ನಿದ್ರೆಗೆ ಜಾರಿದೆ. ಈ ಮುದ್ದಾದ ದೃಶ್ಯವನ್ನು ನೆಟ್ಟಿಗರು ಕಣ್ತುಂಬಿಸಿಕೊಂಡಿದ್ದಾರೆ.

ಎಲಿಫೆಂಟ್ ರಿಸೆಕ್ಯೂರ್ (elephantresures) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಮಾಲೀಕನು ಲಾಲಿ ಹಾಡಿ ಮರಿಯಾನೆಯನ್ನು ಮಲಗಿಸಿಕೊಂಡಿದ್ದಾನೆ. ಮಾಲೀಕನ ಮಡಿಲಿನಲ್ಲಿ ಮರಿಯಾನೆ ಹಾಯಾಗಿ ನಿದ್ರಿಸುತ್ತಿರುವುದನ್ನು ಕಾಣಬಹುದು.

ವೈರಲ್‌ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ರೈಲು ಹಳಿ ದಾಟಲು ಕಷ್ಟ ಪಡುತ್ತಿದ್ದ ಮರಿಯಾನೆಗೆ ತಾಯಾನೆ ಸಾಥ್‌, ವೈರಲ್‌ ಆಯ್ತು ದೃಶ್ಯ

ಈ ವಿಡಿಯೋ ಇಪ್ಪತ್ತೇಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತುಂಬಾ ಮುದ್ದಾಗಿದೆ ಎಂದಿದ್ದಾರೆ. ಇನ್ನೊಬ್ಬರು, ನಿಷ್ಕಲ್ಮಶ ಪ್ರೀತಿಗಿಂತ ಮತ್ತೇನು ಬೇಕಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ನನ್ನ ಹೃದಯ ತುಂಬಿ ಬಂತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬ: ಬಿಗ್ ಅಪ್ಡೇಟ್ ಕೊಟ್ಟ KPCC ಅಧ್ಯಕ್ಷ ಹರಿಪ್ರಸಾದ್ – Kannada News | Karnataka cabinet expansion Meeting postponed Over AICC President mallikarjun kharge Bengaluru Tour

ನವದೆಹಲಿ, (ಜುಲೈ 16): ತೀವ್ರ ಕುತೂಹಲ ಮೂಡಿಸಿರುವ ಸಂಪುಟ ವಿಸ್ತರಣೆ ಮತ್ತೆ ವಿಳಂಬವಾಗಲಿದೆ. ಸಂಪುಟ ವಿಸ್ತರಣೆ ಸಂಬಂಧ ಹೈಕಮಾಂಡ್ ನಾಯಕರ ಜೊತೆ ಮಾತುಕತೆಗಾಗಿ ಈಗಾಗಲೇ ಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ದೆಹಲಿ ತೆರಳಿದ್ದಾರೆ. ಸುರ್ಜೆವಾಲಾ, ವೇಣುಗೋಪಾಲ್ ಹಾಗೂ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಆದ್ರೆ, ಪ್ರಮುಖವಾಗಿ ಎಐಸಿಸಿಅ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಗೆ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆ ಸಂಬಂಧ ನಡೆಯುವ ಸಭೆ ಎರಡ್ಮೂರು ದಿನಗಳ ಕಾಲ ಮುಂದೆ ಹೋಗಿದೆ. ಈ ಬಗ್ಗೆ ಸ್ವತಃ ಕೆಪಿಸಿಸಿಅ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರೇ ಮಾಹಿತಿ ನೀಡಿದ್ದಾರೆ.

ರಾಹುಲ್ ಗಾಂಧಿ ಜೊತೆಗೆ ಪ್ರಾಥಮಿಕ ಹಂತದ ಚರ್ಚೆ ಮಾಡಿದ್ದು, ಖರ್ಗೆ ಬಂದ ಬಳಿಕ ವಿಸ್ತೃತ ಚರ್ಚೆ ಮಾಡುವುದಾಗಿ ರಾಹುಲ್ ಗಾಂಧಿ ಅವರು ರಾಜ್ಯ ನಾಯಕರಿಗೆ ತಿಳಿಸಿದ್ದಾರೆ. ಅಲ್ಲದೇ ಅಗತ್ಯ ಬಿದ್ದರೆ ವಾಪಸ್ ಕರೆಯುವುದಾಗಿಯೂ ಹೇಳಿದ್ದಾರೆ ಎಂದು ತಿಳಿದುಬಂದಿದೆ.   ಇದರಿಂದ ಸಂಪುಟ ವಿಸ್ತರಣೆ ಮತ್ತೆ ಕಗ್ಗಾಂಟಾಗಿಯೇ ಉಳಿದಿದ್ದು,ಇನ್ನೊಂದೆಡೆ ಸಚಿವಾಕ್ಷಾಂಕ್ಷಿಗಳಿಗೆ ಕೊಂಚ ನಿರಾಸೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಬಂತು ಮತ್ತೊಂದು ಹೊಸ ಟ್ರೇನ್: ಹೆಬ್ಬಗೋಡಿ ಡಿಪೋ ತಲುಪಿದ 14ನೇ ಡ್ರೈವರ್ ಲೆಸ್ ರೈಲು – Kannada News | Namma Metro Yellow Line Boost: 14th Driverless Train Arrives at Hebbagodi Depot

ನಮ್ಮ ಮೆಟ್ರೋದ ಹಳದಿ ಮಾರ್ಗದ ರೈಲುಗಳ ಸಂಖ್ಯೆ ಹೆಚ್ಚಾಗಿದ್ದು, ಮತ್ತೊಂದು ಹೊಸ ಟ್ರೇನ್​​ ಬೆಂಗಳೂರು ತಲುಪಿದೆ. 14ನೇ ಡ್ರೈವರ್ ಲೆಸ್ ಟ್ರೈನ್ ಈಗಾಗಲೇ ಹೆಬ್ಬಗೋಡಿ ಡಿಪೋಗೆ ಬಂದಿದ್ದು, ಆರ್ ವಿ ರಸ್ತೆಯಿಂದ- ಬೊಮ್ಮಸಂದ್ರದವರೆಗಿನ‌ ಹಳದಿ ಮಾರ್ಗಕ್ಕೆ ಒಟ್ಟು 15 ಡ್ರೈವರ್ ಲೆಸ್ ರೈಲುಗಳನ್ನು ಆರ್ಡರ್​ ನೀಡಲಾಗಿದೆ.

Source link

ಹೆಚ್ಎಂಟಿ ಕಾರ್ಖಾನೆ ಜಾಗ ವಿವಾದ: ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಗಂಭೀರ ಆರೋಪ – Kannada News | HMT Factory Land Dispute: HD Kumaraswamy Levels Serious Allegations Against Karnataka Government

ಹೆಚ್.ಡಿ.ಕುಮಾರಸ್ವಾಮಿImage Credit source: tv9 kannada

ಬೆಂಗಳೂರು, ಜುಲೈ 16: ‘‘ಹೆಚ್ಎಂಟಿ (HMT) ಕಾರ್ಖಾನೆಗೆ ಹೊಸ ರೂಪ ನೀಡಿ, ಅದನ್ನು ಪುನರಾರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ, ರಾಜ್ಯ ಸರ್ಕಾರ ನಿರಂತರವಾಗಿ ಕಾರ್ಖಾನೆಯ ಮೇಲೆ ದಾಳಿ ಮಾಡುತ್ತಿದ್ದು, ಭೂಮಿಯನ್ನು ಕಬಳಿಸುವ ಹುನ್ನಾರ ನಡೆಸಿದೆ’’ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಗಂಭೀರ ಆರೋಪ ಮಾಡಿದ್ದಾರೆ.

ಹೆಚ್​ಎಂಟಿ ಕಾರ್ಖಾನೆ ಕ್ಯಾಂಪಸ್​​ಗೆ ಹೆಚ್​ಡಿ ಕುಮಾರಸ್ವಾಮಿ ದಿಢೀರ್​ ಭೇಟಿ

ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಹೆಚ್​ಎಂಟಿ ಕಾರ್ಖಾನೆ ಕ್ಯಾಂಪಸ್​​​ಗೆ ಇಂದು ದಿಢೀರ್​ ಭೇಟಿ ನೀಡಿ ಹೆಚ್​ಡಿ ಕುಮಾರಸ್ವಾಮಿ, ಕಾರ್ಖಾನೆ ಪರಿಶೀಲಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘‘ಹೆಚ್ಎಂಟಿ ವಿಷಯದಲ್ಲಿ ಯಾಕೆ ಇಷ್ಟು ಚರ್ಚೆಯಾಗುತ್ತಿದೆ. ಮೋದಿ ನಾಯಕಯತ್ವದಲ್ಲಿ ನಾನು ಸಚಿವನಾಗಲು ಅವಕಾಶ ಕೊಟ್ಟಿದ್ದಾರೆ. ನನಗೆ ಬೃಹತ್ ಕೈಗಾರಿಕೆ, ಉಕ್ಕು ಖಾತೆ ಜವಾಬ್ದಾರಿ ನೀಡಿದ್ದಾರೆ. 2-3 ನಿರ್ಧಾರ ಮಾಡಿ 2 ವರ್ಷದಿಂದ ಪ್ರಯತ್ನ ಮಾಡುತ್ತಿದ್ದೇನೆ. ಕಾರ್ಖಾನೆ ಪುನಾರಂಭಿಸಲು ನಾವು ತೀರ್ಮಾನ ಮಾಡಿದ್ದೇವೆ’’ ಎಂದರು.

ಇದನ್ನೂ ಓದಿ: ‘ನಾನು ತಪ್ಪು ಮಾಡಿದ್ದರೆ ಪೊರಕೆಯಿಂದ ನನಗೆ ಹೊಡೆಯಿರಿ’: ಸಿಎಂ ಡಿಕೆ ಶಿವಕುಮಾರ್​​

‘‘ಇನ್ನು ಹೆಚ್ಎಂಟಿ ಕಾರ್ಖಾನೆ ಶುರುವಾದಾಗ ನಾವು ಸಣ್ಣಮಕ್ಕಳು. ಬೆಳಗ್ಗೆ 7 ಗಂಟೆಗೆ ಹೆಚ್ಎಂಟಿ ಕಂಪನಿ ಬಸ್​ಗಳು ಓಡಾಡುತ್ತಿದ್ದವು. ಇಂದು ಹೆಚ್ಎಂಟಿ ಸಂಪೂರ್ಣ ಚಿತ್ರಣವನ್ನು ನೀವು ನೋಡಿದ್ದೀರಿ, ಒಂದು ಕಾಲದಲ್ಲಿ ಹೆಚ್ಎಂಟಿ ಉತ್ತಮ ಕಾರ್ಖಾನೆಯಾಗಿತ್ತು. ಕಾರ್ಮಿಕರ ದುಡಿಮೆಯಿಂದ 6 ಕಡೆ ದೊಡ್ಡ ಕಾರ್ಖಾನೆ ನಿರ್ಮಿಸಿದ್ದರು. ಹೆಚ್​ಎಂಟಿ ಕಾರ್ಖಾನೆ ಅದ್ಭುತವಾಗಿ ನಡೆಯುತ್ತಿತ್ತು. ಕಾರ್ಖಾನೆಯಲ್ಲಿ ಸಣ್ಣಪುಟ್ಟ ಕಾರ್ಮಿಕರು ಇದ್ದಾರೆ. ಮುಖ್ಯ ಕಾರ್ಖಾನೆ ಈಗ ಶೂಟಿಂಗ್​ಗೆ ಬಳಕೆಯಾಗುತ್ತಿದೆ’’ ಎಂದು ಮಾಹಿತಿ ನೀಡಿದರು.

ಸಚಿವ ಈಶ್ವರ ಖಂಡ್ರೆಗೆ ಕುಮಾರಸ್ವಾಮಿ ತಿರುಗೇಟು

“ಹೆಚ್ಎಂಟಿ ಕಾರ್ಖಾನೆ ಇರುವ ಜಾಗವನ್ನು 1967-68ರ ಅವಧಿಯಲ್ಲಿ ಮೈಸೂರು ಮಹಾರಾಜರು ಕಾನೂನುಬದ್ಧವಾಗಿ ಉಡುಗೊರೆಯಾಗಿ ನೀಡಿದ್ದರು. ನ್ಯಾಯಬದ್ಧವಾಗಿ ಸಿಕ್ಕಿರುವ ಈ ಜಾಗದ ವಿಷಯದಲ್ಲಿ ಈಗಿನ ರಾಜ್ಯ ಸರ್ಕಾರ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ನಿತ್ಯವೂ ಒಂದಿಲ್ಲೊಂದು ರೀತಿಯಲ್ಲಿ ತೊಂದರೆ ಕೊಡುತ್ತಿದೆ. ಹೆಚ್ಎಂಟಿ ಜಾಗವನ್ನು ಮಾರಾಟ ಮಾಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಆರೋಪಿಸುತ್ತಿದ್ದಾರೆ. ಇದನ್ನು ನಿಮ್ಮ ಅರಣ್ಯ ಇಲಾಖೆಯವರೇನಾದರೂ ಉಳಿಸಿದ್ದಾರಾ? ಕೋಲಾರದಲ್ಲಿ ಏನಾಗಿದೆ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ” ಎಂದು ತಿರುಗೇಟು ನೀಡಿದರು.

ಮತ್ತೊಬ್ಬರನ್ನು ತೆಗೆಳಲು ಟೌನ್​ಶಿಪ್ ಬಗ್ಗೆ ಮಾತನಾಡುತ್ತಿಲ್ಲ: ಹೆಚ್​ಡಿ ಕುಮಾರಸ್ವಾಮಿ

ಬಿಡದಿ ಟೌನ್​ಶಿಪ್ ವಿರೋಧಿಸಿ ರೈತರ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ‘‘ಆಡಳಿತ ನಡೆಸುವವರ ಕಣ್ಣು ತೆರೆಸಲು ಸಹಾಯ ಆಗುತ್ತದೆ. ನಾನು ಸ್ಪಷ್ಟವಾಗಿ ಹೇಳುತ್ತೇನೆ ಪ್ರಚಾರಕ್ಕಾಗಿ ಮಾತನಾಡುತ್ತಿಲ್ಲ. ಮತ್ತೊಬ್ಬರನ್ನು ತೆಗೆಳಲು ಟೌನ್​ಶಿಪ್ ಬಗ್ಗೆ ಮಾತನಾಡುತ್ತಿಲ್ಲ. ನಿನ್ನೆ ಸಿಎಂ ಡಿಕೆ ಶಿವಕುಮಾರ್​​ ತುಂಬಾ ನೋವಿನಲ್ಲಿ ಮಾತನಾಡಿದ್ದಾರೆ. ನಮಗೂ ನೋವು ಕೊಟ್ಕೋ ಬೇಡಿ ಎಂದು ಸಿಎಂ ಹೇಳಿದ್ದಾರೆ. ರಾಜ್ಯದಲ್ಲಿ ಇಂತಹ ಘಟನೆಯಿಂದ ನೋವಾಗುವುದು ಸಹಜ. ಕಠಿಣ ಹೃದಯ ಇದ್ದವರಿಗೆ ಯಾವುದೇ ರೀತಿಯ ನೋವಾಗಲ್ಲ ಎಂದು ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.

ವರದಿ: ಈರಣ್ಣ ಬಸವ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸೋನಂ ವಾಂಗ್‌ಚುಕ್ ಉಪವಾಸ ಸತ್ಯಾಗ್ರಹಕ್ಕೆ ದೀಪಿಕಾ ಪಡುಕೋಣೆ ಬೆಂಬಲ? ಅಸಲಿ ಕಥೆ ಇಲ್ಲಿದೆ – Kannada News | Fact Check: Did Deepika Padukone Support Sonam Wangchuk Hunger Strike? The Real Story

ನಟಿ ದೀಪಿಕಾ ಪಡುಕೋಣೆ ಅವರ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಸ್ಟೋರಿಯೊಂದು ವೈರಲ್ ಆಗಿದೆ. ಸಾಮಾಜಿಕ ಹೋರಾಟಗಾರ ಸೋನಂ ವಾಂಗ್‌ಚುಕ್ ಅವರಿಗೆ ದೀಪಿಕಾ ಬೆಂಬಲ ನೀಡಿದ್ದಾರೆ ಎಂದು ಇದರಲ್ಲಿ ಬಿಂಬಿಸಲಾಗಿದೆ. ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಅದನ್ನು ಡಿಲೀಟ್ ಮಾಡಿದ್ದಾರೆ ಎಂದೂ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಆದರೆ, ದೀಪಿಕಾ ಪಡುಕೋಣೆ ಈ ರೀತಿಯ ಯಾವುದೇ ಪೋಸ್ಟ್ ಹಾಕಿಲ್ಲ. ಕಳೆದ ಆರು ತಿಂಗಳಲ್ಲಿ ಅವರ ಹೆಸರಿನಲ್ಲಿ ಹರಿದಾಡುತ್ತಿರುವ ಎರಡನೇ ನಕಲಿ ಸ್ಕ್ರೀನ್‌ಶಾಟ್ ಇದಾಗಿದೆ.

ವೈರಲ್ ಪೋಸ್ಟ್‌ನಲ್ಲೇನಿದೆ?

ವೈರಲ್ ಆಗಿರುವ ನಕಲಿ ಫೋಟೋದಲ್ಲಿ ಸೋನಂ ವಾಂಗ್‌ಚುಕ್ ಅವರ ಚಿತ್ರವಿದೆ. ‘ಅವರು ಉಪವಾಸ ಮಾಡುತ್ತಿದ್ದಾರೆ, ನಾವು ಸ್ಕ್ರಾಲ್ ಮಾಡುತ್ತಿದ್ದೇವೆ’ ಎಂಬ ಬರಹ ಇಲ್ಲಿದೆ. ‘ಪ್ರಜಾಪ್ರಭುತ್ವದ ಕರಾಳ ದಿನಗಳಲ್ಲಿ ನಾವಿದ್ದೇವೆ. ಸೋತ ನಾಯಕನನ್ನು ವೈಭವೀಕರಿಸಲು ಎಷ್ಟು ಸಿನಿಮಾಗಳನ್ನು ಮಾಡಿದರೂ ಸತ್ಯ ಬದಲಾಗುವುದಿಲ್ಲ’ ಎಂದು ದೀಪಿಕಾ ಬರೆದುಕೊಂಡಿದ್ದಾರೆ ಎಂದು ಸುಳ್ಳು ಬಿಂಬಿಸಲಾಗಿದೆ.

ಅಸಲಿಯತ್ತೇನು?

ದೀಪಿಕಾ ಅವರ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಯಾವುದೇ ಪೋಸ್ಟ್ ಇಲ್ಲ. ವೈರಲ್ ಆಗಿರುವ ಸ್ಕ್ರೀನ್‌ಶಾಟ್ ಅನ್ನು ಎಐ ಬಳಸಿ ಎಡಿಟ್ ಮಾಡಲಾಗಿದೆ. ಈ ರೀತಿಯ ಯಾವುದೇ ಪೋಸ್ಟ್ ಕ್ರಿಯೇಟ್ ಆಗಿಯೇ ಇಲ್ಲ ಎಂದು ವರದಿಗಳು ಖಚಿತಪಡಿಸಿವೆ. ಸದ್ಯಕ್ಕೆ ದೀಪಿಕಾ ಪಡುಕೋಣೆ ಸೇರಿದಂತೆ ಆಲಿಯಾ ಭಟ್, ಅಮೀರ್ ಖಾನ್ ಅಥವಾ ಶಾರುಖ್ ಖಾನ್ ಯಾರೂ ಕೂಡ ಸೋನಂ ವಾಂಗ್‌ಚುಕ್ ಹೋರಾಟದ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ.

ಈ ಹಿಂದೆ ಮಾರ್ಚ್ ತಿಂಗಳಿನಲ್ಲೂ ದೀಪಿಕಾ ಹೆಸರಿನಲ್ಲಿ ಇಂತಹುದೇ ನಕಲಿ ಸ್ಕ್ರೀನ್‌ಶಾಟ್ ವೈರಲ್ ಆಗಿತ್ತು. ರಣವೀರ್ ಸಿಂಗ್ ಅವರ ‘ಧುರಂಧರ್’ ಚಿತ್ರದ ಬಗ್ಗೆ ದೀಪಿಕಾ ನೆಗೆಟಿವ್ ರಿವ್ಯೂ ಕೊಟ್ಟಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು.

ಸೆಲೆಬ್ರಿಟಿಗಳ ಪಾಲಿಗೆ ಎಐ (AI) ಎಷ್ಟು ಡೇಂಜರ್?

ಈ ಇಡೀ ಘಟನೆ ಡಿಜಿಟಲ್ ಲೋಕದ ಕರಾಳ ಮುಖವನ್ನು ಪರಿಚಯಿಸಿದೆ. ಮುಂದಿನ ದಿನಗಳಲ್ಲಿ ಎಐ (ಕೃತಕ ಬುದ್ಧಿಮತ್ತೆ) ಮತ್ತು ಎಡಿಟಿಂಗ್ ತಂತ್ರಜ್ಞಾನ ಎಷ್ಟು ಅಪಾಯಕಾರಿಯಾಗಬಹುದು ಎಂಬುದಕ್ಕೆ ಇದು ಸಾಕ್ಷಿ. ತಂತ್ರಜ್ಞಾನ ಬೆಳೆದಂತೆ ಇಂತಹ ಸೈಬರ್ ವಂಚನೆಗಳು ಮತ್ತು ನಕಲಿ ಸುದ್ದಿಗಳು ಸೆಲೆಬ್ರಿಟಿಗಳ ನೆಮ್ಮದಿ ಕೆಡಿಸುತ್ತಿರುವುದು ಮಾತ್ರ ಸುಳ್ಳಲ್ಲ.

ಇದನ್ನೂ ಓದಿ: ಅಪರೂಪಕ್ಕೆ ದೀಪಿಕಾ ಪಡುಕೋಣೆಯನ್ನು ಕೊಂಡಾಡಿದ ಕಂಗನಾ ರನೌತ್

ಸುಲಭವಾಗಿ ಸೃಷ್ಟಿಯಾಗುವ ಸುಳ್ಳು: ಸೆಲೆಬ್ರಿಟಿಗಳ ಹೆಸರಿನಲ್ಲಿ ನಕಲಿ ಪ್ರೊಫೈಲ್ ಮತ್ತು ಸ್ಕ್ರೀನ್‌ಶಾಟ್‌ಗಳನ್ನು ಸೃಷ್ಟಿಸುವುದು ಈಗ ತುಂಬಾ ಸುಲಭವಾಗಿದೆ.

ಕ್ಷಣಾರ್ಧದಲ್ಲಿ ಹಾಳಾಗುವ ಇಮೇಜ್: ಸೆಲೆಬ್ರಿಟಿಗಳು ಆಡದ ಮಾತುಗಳನ್ನು ಅವರದ್ದೇ ಎಂದು ಬಿಂಬಿಸಿ ಇಮೇಜ್ ಹಾಳು ಮಾಡುವ ಹುನ್ನಾರ ನಡೆಯುತ್ತಿದೆ.

ರಾಜಕೀಯ ದುರ್ಬಳಕೆ: ಸೆಲೆಬ್ರಿಟಿಗಳನ್ನು ತಮಗೆ ಬೇಕಾದ ರಾಜಕೀಯ ವಿವಾದಗಳಿಗೆ ಎಳೆದು ತರಲು ಇಂತಹ ತಂತ್ರಜ್ಞಾನ ಬಳಕೆಯಾಗುತ್ತಿದೆ.

ನಿಜ ಯಾವುದು, ಸುಳ್ಳು ಯಾವುದು ತಿಳಿಯುವುದಿಲ್ಲ: ಸಾಮಾನ್ಯ ಜನರಿಗೆ ಎಡಿಟೆಡ್ ಫೋಟೋ ಮತ್ತು ಅಸಲಿ ಫೋಟೋಗಳ ವ್ಯತ್ಯಾಸ ಕಂಡುಹಿಡಿಯುವುದು ಕಷ್ಟವಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IOB Recruitment 2026: ಇಂಡಿಯನ್ ಓವರ್ಸೀಸ್ ಬ್ಯಾಂಕ್‌ನಲ್ಲಿ 750 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | IOB Apprentice Recruitment 2026: 750 Vacancies Apply Online Before July 20! Banking Jobs

ಇಂಡಿಯನ್ ಓವರ್ಸೀಸ್ ಬ್ಯಾಂಕ್ (ಐಒಬಿ) ದೇಶಾದ್ಯಂತ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗಾವಕಾಶಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದ್ದು, ಈ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಈಗಾಗಲೇ ಭರದಿಂದ ಸಾಗುತ್ತಿದೆ. ಇನ್ನೂ ಅರ್ಜಿ ಸಲ್ಲಿಸದ ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೇವಲ ಐದು ದಿನಗಳು ಮಾತ್ರ ಬಾಕಿ ಉಳಿದಿವೆ.

ಪ್ರಮುಖ ದಿನಾಂಕಗಳು ಮತ್ತು ಪರೀಕ್ಷೆಯ ವೇಳಾಪಟ್ಟಿ:

ಇಂಡಿಯನ್ ಓವರ್ಸೀಸ್ ಬ್ಯಾಂಕ್‌ನ ಈ ಅಪ್ರೆಂಟಿಸ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಜುಲೈ 20 ಕೊನೆಯ ದಿನಾಂಕವಾಗಿ ನಿಗದಿಪಡಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಲು ಜುಲೈ 22 ರವರೆಗೆ ಕಾಲಾವಕಾಶ ನೀಡಲಾಗಿದೆ. ಇನ್ನು ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆನ್‌ಲೈನ್ ಲಿಖಿತ ಪರೀಕ್ಷೆಯನ್ನು ಆಗಸ್ಟ್ 2 ರಂದು ದೇಶಾದ್ಯಂತ ನಡೆಸಲು ಇಲಾಖೆ ತೀರ್ಮಾನಿಸಿದೆ.

ಹುದ್ದೆಗಳ ಹಂಚಿಕೆ ಮತ್ತು ರಾಜ್ಯವಾರು ವಿವರ:

ಬ್ಯಾಂಕ್ ಬಿಡುಗಡೆ ಮಾಡಿರುವ ಈ ಬೃಹತ್ ನೇಮಕಾತಿ ಪ್ರಕ್ರಿಯೆಯಡಿಯಲ್ಲಿ ದೇಶಾದ್ಯಂತ ಒಟ್ಟು 750 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಒಟ್ಟು ಖಾಲಿ ಹುದ್ದೆಗಳಲ್ಲಿ ವಿವಿಧ ರಾಜ್ಯಗಳಿಗೆ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಪ್ರಕಟಣೆಯಲ್ಲಿ ತಮ್ಮ ವ್ಯಾಪ್ತಿಯ ಹುದ್ದೆಗಳ ವಿವರವನ್ನು ಪರಿಶೀಲಿಸಬಹುದು.

ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿ ಸಡಿಲಿಕೆ:

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ (Graduation) ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳ ವಯಸ್ಸು ಕನಿಷ್ಠ 20 ವರ್ಷದಿಂದ ಗರಿಷ್ಠ 28 ವರ್ಷಗಳ ನಡುವೆ ಇರಬೇಕು. ಸರ್ಕಾರದ ನಿಯಮಾವಳಿಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇದ್ದು, SC/ST ಅಭ್ಯರ್ಥಿಗಳಿಗೆ ಏಳು ವರ್ಷಗಳು, OBC ಅಭ್ಯರ್ಥಿಗಳಿಗೆ ಮೂರು ವರ್ಷಗಳು ಮತ್ತು ದಿವ್ಯಾಂಗ ಅಭ್ಯರ್ಥಿಗಳಿಗೆ ಹತ್ತು ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ನೋಂದಣಿ ಪ್ರಕ್ರಿಯೆ ಮತ್ತು ಅರ್ಜಿ ಶುಲ್ಕದ ವಿವರ:

ಅರ್ಹತೆ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸುವ ಮುನ್ನ ಕಡ್ಡಾಯವಾಗಿ NAT ಅಥವಾ NAP ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ನಂತರ ಜುಲೈ 20 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಉದ್ಯೋಗ 2026: 10ನೇ ತರಗತಿ ಪಾಸಾದವರಿಗೆ ಸರ್ಕಾರಿ ಉದ್ಯೋಗದ ಅವಕಾಶ

ವರ್ಗವಾರು ಅರ್ಜಿ ಶುಲ್ಕದ ವಿವರ ಹೀಗಿದೆ:

  • ಸಾಮಾನ್ಯ / OBC / EWS ಅಭ್ಯರ್ಥಿಗಳಿಗೆ: ರೂ. 800
  • SC / ST / ಮಹಿಳಾ ಅಭ್ಯರ್ಥಿಗಳಿಗೆ: ರೂ. 600
  • ದಿವ್ಯಾಂಗ ಅಭ್ಯರ್ಥಿಗಳಿಗೆ: ರೂ. 200

ಆಯ್ಕೆ ವಿಧಾನ ಮತ್ತು ಆಕರ್ಷಕ ಸ್ಟೈಫಂಡ್:

ಅಭ್ಯರ್ಥಿಗಳ ಅಂತಿಮ ಆಯ್ಕೆಯನ್ನು ಆನ್‌ಲೈನ್ ವಸ್ತುನಿಷ್ಠ (Objective) ಪರೀಕ್ಷೆ, ಸ್ಥಳೀಯ ಭಾಷಾ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರು ಕೆಲಸ ಮಾಡುವ ಪ್ರದೇಶಕ್ಕೆ ಅನುಗುಣವಾಗಿ ಪ್ರತೀ ತಿಂಗಳು ಆಕರ್ಷಕ ಸ್ಟೈಫಂಡ್ ನೀಡಲಾಗುತ್ತದೆ. ಮೆಟ್ರೋ ಪ್ರದೇಶಗಳಿಗೆ ತಿಂಗಳಿಗೆ ರೂ. 15,500, ನಗರ ಪ್ರದೇಶಗಳಿಗೆ ರೂ. 14,500 ಮತ್ತು ಅರೆ-ನಗರ ಅಥವಾ ಗ್ರಾಮೀಣ ಪ್ರದೇಶದ ಶಾಖೆಗಳಿಗೆ ತಿಂಗಳಿಗೆ ರೂ. 14,000 ಸ್ಟೈಫಂಡ್ ನಿಗದಿಪಡಿಸಲಾಗಿದೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಒಂದು ವರ್ಷದ ತರಬೇತಿ ಹಾಗೂ ಪ್ರಾಯೋಗಿಕ ಜ್ಞಾನ ಪಡೆಯಲು ಇದು ಅತ್ಯುತ್ತಮ ಅವಕಾಶವಾಗಿದೆ. ಕೊನೆಯ ದಿನದ ವರೆಗೆ ಕಾಯದೇ ಆಸಕ್ತರು ತಕ್ಷಣವೇ ಇಂಡಿಯನ್ ಓವರ್ಸೀಸ್ ಬ್ಯಾಂಕ್‌ನ ಅಧಿಕೃತ ಪೋರ್ಟಲ್ ಭೇಟಿ ನೀಡಿ ಅರ್ಜಿ ಸಲ್ಲಿಸಿ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ಸಂಪುಟ ವಿಸ್ತರಣೆ: ದೆಹಲಿಯಲ್ಲಿ ಮಹತ್ವದ ಸಭೆ, ಯಾರಿಗೆಲ್ಲಾ ಮಂತ್ರಿ ಸ್ಥಾನ? – Kannada News | High Level Meeting In Delhi for Karnataka Cabinet expansion And KPCC bearers Appointment

ನವದೆಹಲಿ, (ಜುಲೈ 16): ಸಂಪುಟ ವಿಸ್ತರಣೆ ಸರ್ಕಸ್ ತೀವ್ರಗೊಂಡಿದ್ದು, ಈ ಸಂಬಂಧ ದೆಹಲಿಯಲ್ಲಿ ಸುರ್ಜೆವಾಲಾ ನಿವಾಸದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ವರಿಷ್ಠರ ಜೊತೆಗೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಮಂತ್ರಿ ಸ್ಥಾನ ಪಡೆದುಕೊಳ್ಳಲು ಅನೇಕ ಮಂದಿ ಪ್ರಯತ್ನ ನಡೆಸುತ್ತಿದ್ದಾರೆ. ಇಪ್ಪತ್ತು ಸ್ಥಾನಗಳ ಪೈಕಿ ಐವತ್ತು ಮಂದಿ ಲಾಬಿ ನಡೆಸುತ್ತಿದ್ದಾರೆ. ಆದರೆ ಎಷ್ಟು ಜನರಿಗೆ ಈ ಬಾರಿ ಅವಕಾಶ ಸಿಗುತ್ತದೆ? ಯಾರಿಗೆಲ್ಲಾ ಮಂತ್ರಿ ಸ್ಥಾನ? ಸಿಗಲಿದೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿ ವರಿಷ್ಠರ ಜೊತೆಗೆ ಚರ್ಚೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಪಕ್ಷ ಸಂಘಟನೆಗಾಗಿ ಕೆಪಿಸಿಸಿಗೆ ಪದಾಧಿಕಾರಿಗಳ ಆಯ್ಮೆ ಬಗ್ಗೆಯೂ ಮಾತುಕತೆಗಳು ನಡೆದಿವೆ ಎಂದು ತಿಳಿದುಬಂದಿದೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಕೆಪಿಸಿಸಿ ಮಹಿಳಾ ಕಾರ್ಯಧ್ಯಕ್ಷೆ ಹಾಗೂ ನೂತನ ಡಿಸಿಸಿ ಅಧ್ಯಕ್ಷರ ನೇಮಕದ ಬಗ್ಗೆಯೂ ಸಭೆಯಲ್ಲಿ ಚರ್ಚೆಗಳು ನಡೆದಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version