ಮೋಡ ಬಿತ್ತನೆಗೆ ಚಾಲನೆ ಬೆನ್ನಲ್ಲೇ ಸುರಿದ ಮಳೆ: ಪ್ರಯತ್ನ ಫಲ ನೀಡಿದೆ ಎಂದ ಶಾಸಕ; ರೈತರೂ ಖುಷ್​ – Kannada News | Rain falls after cloud seeding begins; MLA says the effort has paid off; farmers also happy

ಹುಬ್ಬಳ್ಳಿ, ಜುಲೈ 06: ಎಲ್ ನಿನೋ ಪರಿಣಾಮದಿಂದ ಈ ಬಾರಿ ರಾಜ್ಯದ ಬಹುತೇಕ ಕಡೆ ಮುಂಗಾರು ಮಳೆ ಕೊರತೆಯಾಗಿದೆ. ಕಳೆದ ಎರಡು ದಿನಗಳಿಂದ ರಾಜ್ಯದ ಹಲವಡೆ ಮಳೆಯಾಗುತ್ತಿದ್ದರೂ ಜನರ ಸಂತಸವನ್ನು ಇಮ್ಮಡಿಗೊಳಿಸಿದೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ನಿರೀಕ್ಷಿತ ಮಳೆ ಆಗದಿರುವುದರಿಂದ ಮೋಡ ಬಿತ್ತನೆ (Cloud Seeding) ಕೂಡ ಆರಂಭವಾಗಿದೆ. ಹಾವೇರಿ (haveri) ಜಿಲ್ಲೆಯ ಶಾಸಕರು ತಮ್ಮ ಸ್ವಂತ ಹಣದಿಂದ ಜಿಲ್ಲೆಯಾದ್ಯಂತ ಮೋಡ ಬಿತ್ತನೆ ಮಾಡಿಸುತ್ತಿದ್ದು, ಇಂದು ಹುಬ್ಬಳ್ಳಿಯಲ್ಲಿ ಚಾಲನೆ ನೀಡಲಾಗಿದೆ.

ರೈತರ ನೆರವಿಗೆ ಮುಂದಾದ ಹಾವೇರಿ ಜಿಲ್ಲೆಯ ಶಾಸಕರು

ರಾಜ್ಯದ ಹಲವಡೆ ಇದೀಗ ತಕ್ಕಮಟ್ಟಿಗೆ ಮಳೆಯಾಗುತ್ತಿದೆ. ಕರವಾಳಿ ಸೇರಿದಂತೆ ಮಲೆನಾಡಿನ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದರು ಕೂಡ ಉತ್ತರ ಕರ್ನಾಟಕದ ಬಹುತೇಕ ಕಡೆ ನಿರೀಕ್ಷಿತ ಮಳೆಯಾಗುತ್ತಿಲ್ಲ. ಕೆಲವಡೆ ಮಳೆ ಬಂದರೂ ಅದು ಯಾವುದಕ್ಕೂ ಸಾಲದಂತಾಗಿದೆ. ಇದು ರೈತರ ಆತಂಕವನ್ನು ಹೆಚ್ಚಿಸುತ್ತಿದೆ. ಈಗಾಗಲೇ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಹತ್ತಿ ಮಣಸಿನಕಾಯಿ ಬಿತ್ತನೆ ಮಾಡಿದ್ದ ರೈತರು, ಮಳೆ ನೋಡುತ್ತಾ ಕೂತಿದ್ದಾರೆ. ಆದರೆ ಇಂತಹ ಸಮಯದಲ್ಲಿ ರೈತರ ನೆರವಿಗೆ ಹಾವೇರಿ ಜಿಲ್ಲೆಯ ಶಾಸಕರು ಮುಂದಾಗಿದ್ದಾರೆ.

ಇದನ್ನೂ ಓದಿ: ಹಾವೇರಿಯಲ್ಲಿ ಮೋಡ ಬಿತ್ತನೆಗೆ ತೀರ್ಮಾನ: 1 ಗಂಟೆ ಮೋಡ ಬಿತ್ತನೆಗೆ ಎಷ್ಟು ಖರ್ಚು? ವಿವರಿಸಿದ ಶಾಸಕ ಪ್ರಕಾಶ್ ಕೋಳಿವಾಡ

ಹಾವೇರಿ ಜಿಲ್ಲೆಯ ಎಲ್ಲಾ ಶಾಸಕರು ಸೇರಿ ಮೋಡ ಬಿತ್ತನೆಗೆ ನಿರ್ಧಾರಿಸಿದ್ದಾರೆ. ಅದರಂತೆ ಇಂದು ಹುಬ್ಬಳ್ಳಿಯಲ್ಲಿ ಮೋಡ ಬಿತ್ತನೆಗೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ ನೀಡಿದರು. ಮೋಡ ಬಿತ್ತನೆ ಮಾಡುವ ವಿಮಾನಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಿದರು. ಹುಬ್ಬಳ್ಳಿಯಿಂದ ಟೇಕ್ ಆಫ್ ಆದ ವಿಮಾನ, ಹಾವೇರಿ ಜಿಲ್ಲೆಯ ಶಿಗ್ಗಾಂವಿ, ಹಾನಗಲ್, ರಾಣೆಬೆನ್ನೂರು, ಸವಣೂರು, ಹಾವೇರಿ ಸೇರಿದಂತೆ ಅನೇಕ ಕಡೆ ಮೋಡ ಬಿತ್ತನೆ ಮಾಡಲಾಯಿತು.

15 ಲಕ್ಷ ರೂ ಖರ್ಚು

ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ವಿಶೇಷ ಆಸಕ್ತಿ ವಹಿಸಿ ಮೋಡ ಬಿತ್ತನೆ ನೇತೃತ್ವ ವಹಿಸಿಕೊಂಡಿದ್ದಾರೆ. ತಮ್ಮದೇ ಪಾಲುದಾರಿಕೆಯ ಒಡೆತನದ ಸಂಸ್ಥೆಯ ವಿಮಾನದ ಮೂಲಕ ಮೋಡ ಬಿತ್ತನೆ ಮಾಡಿಸುತ್ತಿದ್ದಾರೆ. ಇನ್ನು ಎಲ್ಲೆಲ್ಲಿ ತೇವಾಂಶವಿರುವ ಮೋಡಗಳು ಇರುತ್ತವೋ ಅಲ್ಲಿ ಸಿಲ್ವರ್ ಅಯೋಡೈಡ್ ಕೆಮಿಕಲ್ ಸೇರಿದಂತೆ ಇನ್ನಿತರ ರಾಸಾಯನಿಕಗಳನ್ನು ಸಿಂಪಡಣೆ ಮಾಡಲಾಯ್ತು. ಒಂದು ಗಂಟೆ ಮೋಡ ಬಿತ್ತನೆಗೆ ಬರೋಬ್ಬರಿ 15 ಲಕ್ಷ ರೂ ವೆಚ್ಚ ತಗುಲುತ್ತದೆ.

ಹಾವೇರಿ ಜಿಲ್ಲೆಯ ಹಲವಡೆ ಮಳೆಯಾಗಿದೆ: ಮೋಡ ಬಿತ್ತನೆ ಪ್ರಯತ್ನ ಫಲ ನೀಡಿದೆ ಎಂದ ಶಾಸಕ ಪ್ರಕಾಶ್ ಕೋಳಿವಾಡ

ಮೂರು ದಿನಗಳ ಕಾಲ ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಮಾಡಲು ನಿರ್ಧರಿಸಲಾಗಿದೆಯಂತೆ. ಈ ಬಗ್ಗೆ ಮಾತನಾಡಿರುವ ಶಾಸಕ ಪ್ರಕಾಶ್ ಕೋಳಿವಾಡ, ಒಂದು ತಿಂಗಳ ಕಾಲ ಮೋಡ ಬಿತ್ತನೆ ಮಾಡುವ ವಿಮಾನ ಹುಬ್ಬಳ್ಳಿಯಲ್ಲಿಯೇ ಇರಲಿದೆ. ಆರಂಭದಲ್ಲಿ ಮೂರು ದಿನಗಳ ಕಾಲ ಮೋಡ ಬಿತ್ತನೆ ಮಾಡಲಾಗುತ್ತದೆ. ನಂತರ ಪರಿಸ್ಥಿತಿ ಮತ್ತು ಅವಶ್ಯಕತೆ ನೋಡಿಕೊಂಡು ಮೋಡ ಬಿತ್ತನೆ ಮಾಡಲಾಗುವುದು. ಇಂದು ಮೋಡ ಬಿತ್ತನೆಯಿಂದ ಹಾವೇರಿ ಜಿಲ್ಲೆಯ ಹಲವಡೆ ಮಳೆಯಾಗಿದ್ದು, ಪ್ರಯತ್ನ ಫಲ ನೀಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಣಾಮ ಭೀಕರ: ಮಾಯವಾಯ್ತು ಮುಂಗಾರು, ಹೇಳತೀರದಾಯ್ತು ಅನ್ನದಾತರ ಸ್ಥಿತಿ

ಉತ್ತರ ಕರ್ನಾಟಕ ಭಾಗದ ರೈತರು ಮಳೆಯಾಗದಿರುವುದರಿಂದ ಸಂಕಷ್ಟದಲ್ಲಿದ್ದರು. ಆದರೆ ಈ ಸಮಯದಲ್ಲಿ ನೆರವಿಗೆ ಬರಬೇಕಾದ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಇದೀಗ ಹಾವೇರಿ ಜಿಲ್ಲೆಯ ಜನಪ್ರತಿನಿಧಿಗಳೇ ತಮ್ಮ ಸ್ವಂತ ಹಣದಿಂದ ಮೋಡ ಬಿತ್ತನೆ ಮಾಡಿಸುತ್ತಿದ್ದಾರೆ. ಹಲವಡೆ ಮಳೆ ಕೂಡ ಆಗಿದ್ದು, ಸಂತಸ ತಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸ್ಮೋಕಿಂಗ್‌ ದುಶ್ಚಟವನ್ನು ಬಿಡಲು ಬಯಸಿದರೆ ಈ ಸರಳ ಸಲಹೆಗಳನ್ನು ಪಾಲಿಸಿ – Kannada News | How to stop smoking effectively; here are some tips

ಧೂಮಪಾನವು (smoking) ಅರೋಗ್ಯದ ಮೇಲೆ ಗಂಭೀರವಾದ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಧೂಮಪಾನ  ಮೆದುಳಿನಲ್ಲಿ ಡೋಪಮೈನ್ ಅನ್ನು ಬಿಡುಗಡೆ ಮಾಡಿ, ತ್ವರಿತ ಸಂತೋಷವನ್ನು ನೀಡಿದರೂ ಇದು ದೀರ್ಘಾವಧಿಯಲ್ಲಿ ಅನೇಕ ಗಂಭೀರ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹೌದು ಈ ದುಷ್ಚಟ ಕ್ಯಾನ್ಸರ್‌, ಶ್ವಾಸಕೋಶದ ಕಾಯಿಲೆ, ಹೃದ್ರೋಗ, ಕ್ಯಾನ್ಸರ್‌ನಂತಹ ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಧೂಮಪಾನದ ನಕಾರಾತ್ಮಕ ಪರಿಣಾಮಗಳ ಬಗ್ಗೆ ಗೊತ್ತಿದ್ದರೂ ಸಹ ಅನೇಕರು ಈ ದುಷ್ಚಟಕ್ಕೆ ದಾಸರಾಗಿದ್ದಾರೆ. ಒಮ್ಮೆ ಈ ಅಭ್ಯಾಸಕ್ಕೆ ಅಡಿಕ್ಟ್‌ ಆದ್ರೆ ಅದನ್ನು ಬಿಡುವುದು ಅಷ್ಟು ಸುಲಭವಲ್ಲ ಜೊತೆಗೆ ಧೂಮಪಾನ ಬಿಡುವುದು ಅಷ್ಟು ಕಷ್ಟವೂ ಅಲ್ಲ, ದೃಢ ಸಂಕಲ್ಪ ಮಾಡಿ ಪ್ರತಿನಿತ್ಯ ಈ ಕೆಲವೊಂದು ಅಭ್ಯಾಸಗಳನ್ನು ಪಾಲಿಸುವ ಹಾಗೂ ದಿನಚರಿಯಲ್ಲಿ ಈ ಕೆಲವೊಂದು ಬದಲಾವಣೆಗಳನ್ನು ಮಾಡುವ ಮೂಲಕ ಕ್ರಮೇಕ ಧೂಮಪಾನವನ್ನು ಬಿಡಬಹುದು. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಸಿಗರೇಟ್ ತ್ಯಜಿಸಲು ಉತ್ತಮ ಮಾರ್ಗಗಳಿವು:

ನಿಮ್ಮ ಉದ್ದೇಶಗಳನ್ನು ಬಲಪಡಿಸಿಕೊಳ್ಳಿ: ನೀವು ಧೂಮಪಾನ ಬಿಡಲು ಬಯಸಿದರೆ, ಮೊದಲು ನಿಮ್ಮ ಸಂಕಲ್ಪವನ್ನು ಬಲಪಡಿಸಿಕೊಳ್ಳಿ. ಬಲವಾದ ಸಂಕಲ್ಪ ಇಲ್ಲದಿದ್ದರೆ ಧೂಮಪಾನ ಬಿಡುವುದು ಕಷ್ಟ. ಆದ್ದರಿಂದ ನಿಮ್ಮ ದೃಢ ಸಂಕಲ್ಪವನ್ನು ಬಲಪಡಿಸಿಕೊಳ್ಳಿ.

ಪ್ರಚೋದಕಗಳನ್ನು ತಪ್ಪಿಸಲು ಪ್ರಯತ್ನಿಸಿ: ನೀವು ಮದ್ಯಪಾನ ಮಾಡುತ್ತಿದ್ದರೆ, ನಿಮಗೆ ಸಿಗರೇಟ್ ಹಂಬಲ ಬರಬಹುದು. ಈ ಹಂಬಲಗಳನ್ನು ತಪ್ಪಿಸಲು ಪ್ರಯತ್ನಿಸಿ. ನೀವು ತಕ್ಷಣ ಧೂಮಪಾನ ಬಿಡಲು ಸಾಧ್ಯವಾಗದಿದ್ದರೆ, ಕ್ರಮೇಣ ಬಿಡಲು ಪ್ರಯತ್ನಿಸಿ. ನೀವು ದಿನಕ್ಕೆ ಸೇದುವ ಸಿಗರೇಟ್ ಸಂಖ್ಯೆಯನ್ನು ಕಡಿಮೆ ಮಾಡುತ್ತಾ ಬನ್ನಿ.

ಧೂಮಪಾನಕ್ಕೆ ಪರ್ಯಾಯಗಳನ್ನು ಆರಿಸಿ: ಸಿಗರೇಟ್ ಸೇದಲು ಹಂಬಲವಾದಾಗಲೆಲ್ಲಾ ಏಲಕ್ಕಿ ಅಥವಾ ಸೋಂಪು ಅಗಿಯಿರಿ. ಇದಲ್ಲದೆ ಕಡುಬಯಕೆಗಳನ್ನು ಕಡಿಮೆ ಮಾಡಲು ಸಕ್ಕರೆ ರಹಿತ ಗಮ್ ಅಥವಾ ಗಟ್ಟಿಯಾದ ಕ್ಯಾಂಡಿ ತಿನ್ನಿ. ಸಿಗರೇಟ್ ಸೇದುವ ಬದಲು ಬಾದಾಮಿ ಮತ್ತು ವಾಲ್ನಟ್ ನಂತಹ ಬೀಜಗಳನ್ನು ಸೇವಿಸಿ. ಇದು ನಿಮ್ಮ ಗಮನವನ್ನು ಸಿಗರೇಟ್ ಅಥವಾ ಇತರ ಧೂಮಪಾನದ ಅಭ್ಯಾಸಗಳ ಕಡೆಗೆ ತಿರುಗದಂತೆ ತಡೆಯಲು ಸಹಾಯ ಮಾಡುತ್ತದೆ. ಒಣ ಕ್ಯಾರೆಟ್ ಕೂಡ ಧೂಮಪಾನ ವ್ಯಸನವನ್ನು ಬಿಡಲು ಸಹಾಯ ಮಾಡುತ್ತದೆ.

ವ್ಯಾಯಾಮ ಮತ್ತು ಯೋಗ ಮಾಡಿ: ದೈಹಿಕ ವ್ಯಾಯಾಮ ಮತ್ತು ಯೋಗವು ನಮ್ಮ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ದೈಹಿಕ ಆರೋಗ್ಯದ ಮೇಲೆ ಗಮನವನ್ನು ಕೇಂದ್ರೀಕರಿಸುವುದರಿಂದ ಧೂಮಪಾನ ಮಾಡುವ ಬಯಕೆಯನ್ನು ಕಡಿಮೆ ಮಾಡಬಹುದು. ಇದು ಧೂಮಪಾನ ಮಾಡುವ ಬಯಕೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ನಿಯಮಿತ ವ್ಯಾಯಾಮವು ಎಂಡಾರ್ಫಿನ್‌ಗಳ ಬಿಡುಗಡೆಯನ್ನು ಹೆಚ್ಚಿಸುತ್ತದೆ, ಇದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು  ಕ್ರಮೇಣ ಧೂಮಪಾನ ವ್ಯಸನವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಬೆಳಗ್ಗೆ ಎದ್ದ ತಕ್ಷಣ ಫೋನ್‌ ನೋಡುವ ಅಭ್ಯಾಸದಿಂದಾಗುವ ಪರಿಣಾಮಗಳೇನು?

ಕುಟುಂಬ ಮತ್ತು ಸ್ನೇಹಿತರಿಂದ ಬೆಂಬಲ ಪಡೆಯಿರಿ: ನೀವು ಧೂಮಪಾನ ಬಿಡಲು ಪ್ರಯತ್ನಿಸುತ್ತಿದ್ದರೆ, ನಿಮ್ಮ ಸ್ನೇಹಿತರು ಮತ್ತು ಸ್ನೇಹಿತರ ಸಹಾಯವನ್ನು ನೀವು ಪಡೆಯಬಹುದು. ನಿಮ್ಮ ಕುಟುಂಬ ಮತ್ತು ಸ್ನೇಹಿತರ ಬೆಂಬಲವು ಪ್ರೇರಣೆ ಮತ್ತು ಪ್ರೋತ್ಸಾಹವನ್ನು ನೀಡುತ್ತದೆ, ನಿಮ್ಮ ಗುರಿಯನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ.

ಹವ್ಯಾಸಗಳನ್ನು ಬೆಳೆಸಿಕೊಳ್ಳಿ: ಧೂಮಪಾನ ಬಿಡುವುದು ಸ್ವಲ್ಪ ಸವಾಲಿನ ಕೆಲಸ. ಆದ್ದರಿಂದ, ಸ್ವೆಟರ್ ಹೆಣೆಯುವಂತಹ, ಡ್ರಾಯಿಂಗ್‌, ಕ್ರಾಫ್ಟ್‌ ಇತ್ಯಾದಿ ಹವ್ಯಾಸವನ್ನು ಬೆಳೆಸಿಕೊಳ್ಳಿ. ಈ ಎಲ್ಲಾ ಹವ್ಯಾಸಗಳು ನಿಮ್ಮ ಗಮನವನ್ನು ಬೇರೆಡೆ ಸೆಳೆಯಲು ಸಹಾಯ ಮಾಡುತ್ತದೆ. ಇವು ನಿಮ್ಮ ಮನಸ್ಥಿತಿಯನ್ನು ಸುಧಾರಿಸುವುದಲ್ಲದೆ ಮನಸ್ಥಿತಿಯನ್ನು ಸುಧಾರಿಸುವುದಲ್ಲದೆ, ಧೂಮಪಾನವನ್ನು ತ್ಯಜಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗುಂಪು ಸೇರಿಸಿ SIR ಮಾಡ್ತಿರುವ ಸ್ಥಳಕ್ಕೆ ಮಾಜಿ ಸಂಸದರ ಸಪ್ರೈಸ್​​ ಎಂಟ್ರಿ: ಭಗವತ್ ಖೂಬಾ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕಾಲ್ಕಿತ್ತ BLO – Kannada News | Bhagwant Khuba Confronts BLO Over Alleged Voter List Irregularities in Bidar; Officer Leaves on Scooter

ಬೀದರ್​​, ಜುಲೈ 06: ಮನೆ ಮನೆಗೆ ತೆರಳಿ ಮತದಾರರ ಪಟ್ಟಿ ಪರಿಷ್ಕರಣೆ ಕರ್ನಾಟಕದಲ್ಲಿ ನಡೆಯುತ್ತಿಲ್ಲ ಎಂಬ ವಿಪಕ್ಷಗಳ ಆರೋಪದ ನಡುವೆ ಬೀದರ್‌ನ ಭೀಮನಗರದ 109ರ ಬೂತ್​​​ನ NGO ಕಚೇರಿಯಲ್ಲಿ SIR ಮಾಡ್ತಿರುವ ಘಟನೆ ಬೆಳಕಿಗೆ ಬಂದಿದೆ. ಖಚಿತ ಮಾಹಿತಿ ಮೇರೆಗೆ ಮಾಜಿ ಸಂಸದ ಭಗವಂತ ಖೂಬಾ ಬೆಟರ್ ಮೆಂಟ್ ಫೌಂಡೇಷನ್ ಕಚೇರಿಗೆ ಭೇಟಿ ನೀಡಿದ್ದು, NGO ಕಚೇರಿಯಲ್ಲಿ SIR ಯಾಕೆ ಎಂದು ಪ್ರಶ್ನಿಸಿದ್ದಾರೆ. ಮಾಜಿ ಸಂಸದರ ಪ್ರಶ್ನೆಗಳ ಸುರಿಮಳೆಗೆ ಉತ್ತರಿಸಲಾಗದೆ BLO ಅನಿಲ್​​ ಕುಮಾರ್‌ ಸ್ಕೂಟಿ ಹತ್ತಿ ತೆರಳಿರುವ ಪ್ರಸಂಗವೂ ಇದೇ ವೇಳೆ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪುರುಷರಿಗಿಂತ ಮಹಿಳೆಯರಲ್ಲೇ ಥೈರಾಯ್ಡ್ ಸಮಸ್ಯೆ ಹೆಚ್ಚಾಗಿ ಕಂಡುಬರುವುದಕ್ಕೆ ಕಾರಣ ಏನ್ ಗೊತ್ತಾ? – Kannada News | Thyroid Disorders in Females: Reasons Every Woman Should Know

ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆ (Thyroid Disorders) ಸಾಮಾನ್ಯವಾಗುತ್ತಿದೆ. ಅದರಲ್ಲಿಯೂ ಪುರುಷರಿಗಿಂತ ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆ 5 ರಿಂದ 8 ಪಟ್ಟು ಹೆಚ್ಚು ಕಂಡುಬರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಠಾತ್ ತೂಕ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು, ತೀವ್ರ ಆಯಾಸ, ಕೂದಲು ಉದುರುವುದು ಹಾಗೂ ಮಾಸಿಕ ಚಕ್ರದಲ್ಲಿ ಅಸಮತೋಲನ ಕಂಡುಬಂದರೆ ಥೈರಾಯ್ಡ್ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ. ಹಾಗಾದರೆ ಮಹಿಳೆಯರಲ್ಲಿ ಹೆಚ್ಚಾಗಿ ಥೈರಾಯ್ಡ್ ಸಮಸ್ಯೆ ಕಂಡುಬರುವುದಕ್ಕೆ ಕಾರಣವೇನು, ಇಂತಹ ಆರೋಗ್ಯ ಸಮಸ್ಯೆಯನ್ನು ಆರಂಭದಲ್ಲಿಯೇ ಪತ್ತೆಹಚ್ಚಿ ಅದನ್ನು ತಡೆಗಟ್ಟುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆ ಹೆಚ್ಚಾಗಿ ಕಂಡುಬರುವುದಕ್ಕೆ ಕಾರಣವೇನು?

ಕತ್ತಿನ ಭಾಗದಲ್ಲಿರುವ ಚಿಟ್ಟೆ ಆಕಾರದ ಥೈರಾಯ್ಡ್ ಗ್ರಂಥಿ ದೇಹದ ಚಯಾಪಚಯ ಕ್ರಿಯೆ ಹಾಗೂ ಶಕ್ತಿಯನ್ನು ನಿಯಂತ್ರಿಸುವ ಹಾರ್ಮೋನ್‌ಗಳನ್ನು ಉತ್ಪಾದಿಸುತ್ತದೆ. ಮಹಿಳೆಯರಲ್ಲಿ ರೋಗನಿರೋಧಕ ವ್ಯವಸ್ಥೆಯ ವೈಶಿಷ್ಟ್ಯದಿಂದ ಹಶಿಮೋಟೋಸ್ ಥೈರಾಯಿಡಿಟಿಸ್ ಮತ್ತು ಗ್ರೇವ್ಸ್ ರೋಗದಂತಹ ಆಟೋಇಮ್ಯೂನ್ ಸಮಸ್ಯೆಗಳು ಹೆಚ್ಚಾಗಿ ಕಾಣಿಸಬಹುದು. ಇದರ ಜೊತೆಗೆ ಗರ್ಭಧಾರಣೆ, ಹೆರಿಗೆಯ ನಂತರದ ಅವಧಿ ಹಾಗೂ ಮೆನೋಪಾಸ್ ಸಮಯದಲ್ಲಿ ಉಂಟಾಗುವ ಹಾರ್ಮೋನ್ ಬದಲಾವಣೆಗಳು ಥೈರಾಯ್ಡ್ ಕಾರ್ಯದ ಮೇಲೆ ಪರಿಣಾಮ ಬೀರುತ್ತವೆ.

ಇದನ್ನೂ ಓದಿ: ಸ್ವೀಟ್ ಸೇವನೆ ಮಾಡುವುದಕ್ಕೆ ಸರಿಯಾದ ಸಮಯ ಯಾವುದು ಗೊತ್ತಾ?

ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ:

  • ನಿರಂತರ ಆಯಾಸ ಮತ್ತು ದೌರ್ಬಲ್ಯ
  • ಹಠಾತ್ ತೂಕ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು
  • ಕೂದಲು ಉದುರುವುದು, ಚರ್ಮ ಒಣಗುವುದು
  • ಮಾಸಿಕ ಚಕ್ರದಲ್ಲಿ ಅಸಮತೋಲನ
  • ಗರ್ಭಧಾರಣೆಯಲ್ಲಿ ತೊಂದರೆ
  • ಮನಸ್ಥಿತಿಯಲ್ಲಿ ಆಗಾಗ ಬದಲಾವಣೆ
  • ಕುತ್ತಿಗೆಯಲ್ಲಿ ಊತ ಕಾಣಿಸಿಕೊಳ್ಳುವುದು

ವಯಸ್ಸಾದ ಮಹಿಳೆಯರಲ್ಲಿ ಈ ಲಕ್ಷಣಗಳನ್ನು ಮೆನೋಪಾಸ್ ಸಮಸ್ಯೆ ಎಂದು ತಪ್ಪಾಗಿ ತಿಳಿಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಂತಹ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ.

ತಡೆಗಟ್ಟಲು ಏನು ಮಾಡಬೇಕು?

ಥೈರಾಯ್ಡ್ ಸಮಸ್ಯೆಯನ್ನು ಆರಂಭದಲ್ಲೇ ಪತ್ತೆಹಚ್ಚಿದರೆ ಔಷಧಿ ಹಾಗೂ ನಿಯಮಿತ ತಪಾಸಣೆಯ ಮೂಲಕ ಸುಲಭವಾಗಿ ನಿಯಂತ್ರಿಸಬಹುದು. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಹಾಗೂ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುವುದು ಉತ್ತಮ. ಥೈರಾಯ್ಡ್ ಲಕ್ಷಣಗಳನ್ನು ನಿರ್ಲಕ್ಷಿಸದೆ ಸಮಯಕ್ಕೆ ಸರಿಯಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಹಲ್ಗಾಮ್ ದಾಳಿ ಹಿಂದೆ ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಕೈವಾಡ; ಕೊನೆಗೂ ಎನ್​ಐಎಯಿಂದ ಚಾರ್ಜ್‌ಶೀಟ್ ಸಲ್ಲಿಕೆ – Kannada News | LeT chief Hafiz Saeed named in NIA supplementary chargesheet in Pahalgam terror attack case

ನವದೆಹಲಿ, ಜುಲೈ 6: ಭಾರತದಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದನಾ ದಾಳಿ (Pahalgam Terror Attack) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಂದು (ಜುಲೈ 6), ಪಾಕಿಸ್ತಾನ ಮೂಲದ ಉಗ್ರ ಹಾಗೂ ಲಷ್ಕರ್-ಎ-ತೊಯ್ಬಾ (LeT) ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ತನ್ನ ಪೂರಕ ದೋಷಾರೋಪ ಪಟ್ಟಿಯಲ್ಲಿ ಆರೋಪಿಯನ್ನಾಗಿ ಹೆಸರಿಸಿದೆ. ಜಮ್ಮುವಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾದ ಈ ಪೂರಕ ದೋಷಾರೋಪ ಪಟ್ಟಿಯಲ್ಲಿ, ನಿಷೇಧಿತ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಎನ್‌ಐಎ ದೋಷಾರೋಪ ಪಟ್ಟಿ ಸಲ್ಲಿಸಿದೆ. ಪಹಲ್ಗಾಮ್​ ದಾಳಿ ಪ್ರಕರಣದಲ್ಲಿ ನಡೆದ ಮಹತ್ವದ ಬೆಳವಣಿಗೆ ಇದಾಗಿದೆ.

ಪಹಲ್ಗಾಮ್ ಭಯೋತ್ಪಾದನಾ ದಾಳಿ ಪ್ರಕರಣ:

ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣವಾದ ಪಹಲ್ಗಾಮ್‌ನಲ್ಲಿ ಭದ್ರತಾ ಪಡೆಗಳು ಮತ್ತು ನಾಗರಿಕರನ್ನು ಗುರಿಯಾಗಿಸಿಕೊಂಡು ಲಷ್ಕರ್-ಎ-ತೊಯ್ಬಾ ಉಗ್ರರು ಈ ದಾಳಿಯನ್ನು ನಡೆಸಿದ್ದರು. ಈ ದಾಳಿಯಲ್ಲಿ 25 ಪ್ರವಾಸಿಗರು ಹಾಗೂ ಓರ್ವ ಸ್ಥಳೀಯ ಸಾವನ್ನಪ್ಪಿದ್ದರು. ಜಮ್ಮು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ಮತ್ತು ಪ್ರವಾಸೋದ್ಯಮಕ್ಕೆ ಧಕ್ಕೆ ತರಲು ಪಾಕಿಸ್ತಾನದಿಂದಲೇ ಈ ದಾಳಿಯ ಸಂಪೂರ್ಣ ಸಂಚು ರೂಪಿಸಲಾಗಿತ್ತು ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಎನ್‌ಐಎ, ಈಗಾಗಲೇ ಹಲವು ಉಗ್ರರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತ್ತು.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಕುಳಿತು ಪಹಲ್ಗಾಮ್​ನಲ್ಲಿ ಲಷ್ಕರ್ ಉಗ್ರರು ಭಯೋತ್ಪಾದಕ ದಾಳಿ ನಡೆಸಿದ್ಹೇಗೆ? ಎನ್​ಐಎ ಚಾರ್ಜ್​ಶೀಟ್​​ನಲ್ಲೇನಿದೆ?

ತನಿಖೆಯಲ್ಲಿ ಬಯಲಾಯ್ತು ಹಫೀಜ್ ಸಯೀದ್ ಪಾತ್ರ:

ಎನ್‌ಐಎ ಅಧಿಕಾರಿಗಳು ನೀಡಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಪಹಲ್ಗಾಮ್ ದಾಳಿಗೆ ಧನಸಹಾಯ ಮಾಡುವುದು, ಭಾರತದೊಳಗೆ ನುಸುಳಿರುವ ಉಗ್ರರಿಗೆ ಸೂಚನೆಗಳನ್ನು ನೀಡುವುದು ಮತ್ತು ಸ್ಥಳೀಯ ಯುವಕರನ್ನು ದಿಕ್ಕು ತಪ್ಪಿಸಿ ಸಂಘಟನೆಗೆ ಸೇರಿಸಿಕೊಳ್ಳುವಲ್ಲಿ ಹಫೀಜ್ ಸಯೀದ್ ಪ್ರಮುಖ ಪಾತ್ರ ವಹಿಸಿದ್ದಾನೆ. ಡಿಜಿಟಲ್ ಪುರಾವೆಗಳು, ಹಣಕಾಸಿನ ವಹಿವಾಟುಗಳು ಮತ್ತು ಇತ್ತೀಚೆಗೆ ಬಂಧಿತರಾದ ಉಗ್ರರ ವಿಚಾರಣೆಯ ಆಧಾರದ ಮೇಲೆ ಎನ್‌ಐಎ ಈ ಪೂರಕ ದೋಷಾರೋಪ ಪಟ್ಟಿಯನ್ನು ಸಿದ್ಧಪಡಿಸಿದೆ.

ಪಾಕಿಸ್ತಾನದ ಜೈಲಿನಿಂದಲೇ ಭಯೋತ್ಪಾದಕ ಸಂಚು:

ಲಷ್ಕರ್ ಮುಖ್ಯಸ್ಥ ಹಾಗೂ ಮುಂಬೈ 26/11 ದಾಳಿಯ ಮಾಸ್ಟರ್‌ಮೈಂಡ್ ಆಗಿರುವ ಹಫೀಜ್ ಸಯೀದ್ ಸದ್ಯ ಪಾಕಿಸ್ತಾನದ ಜೈಲಿನಲ್ಲಿದ್ದಾನೆ. ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣಗಳಲ್ಲಿ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಅವನಿಗೆ ಈಗಾಗಲೇ ಜೈಲು ಶಿಕ್ಷೆ ವಿಧಿಸಿದೆ. ಆದರೆ, ಜೈಲಿನಲ್ಲಿದ್ದೂ ಆತ ತನ್ನ ಕಮಾಂಡರ್‌ಗಳ ಮೂಲಕ ಭಾರತದ ವಿರುದ್ಧ ವಿಧ್ವಂಸಕ ಕೃತ್ಯಗಳನ್ನು ಮುಂದುವರಿಸುತ್ತಿದ್ದಾನೆ ಎಂಬುದಕ್ಕೆ ಎನ್‌ಐಎ ಹೊಸ ಚಾರ್ಜ್‌ಶೀಟ್‌ನಲ್ಲಿ ಸಾಕ್ಷ್ಯಗಳನ್ನು ಒದಗಿಸಿದೆ.

ಇದನ್ನೂ ಓದಿ: Pahalgam Attack: ಪಹಲ್ಗಾಮ್​ನ​ ಭೀಕರ ದಾಳಿಯ ದಿನ ಏನೇನಾಯ್ತು? ಉಗ್ರರ ಸಿದ್ಧತೆ ಹೇಗಿತ್ತು?  

ಅಂತರರಾಷ್ಟ್ರೀಯ ಮಟ್ಟದಲ್ಲಿ ಘೋಷಿತ ಭಯೋತ್ಪಾದಕನಾಗಿರುವ ಹಫೀಜ್ ಸಯೀದ್‌ನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಭಾರತ ಈಗಾಗಲೇ ಪಾಕಿಸ್ತಾನಕ್ಕೆ ಅಧಿಕೃತ ಮನವಿ ಮಾಡಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು (UNSC) ಈತನನ್ನು ಜಾಗತಿಕ ಉಗ್ರ ಎಂದು ಘೋಷಿಸಿದ್ದು, ಇತ್ತೀಚಿನ ಈ ಎನ್‌ಐಎ ಚಾರ್ಜ್‌ಶೀಟ್ ಪಾಕಿಸ್ತಾನದ ಭಯೋತ್ಪಾದನಾ ಪೋಷಣೆಯನ್ನು ಜಾಗತಿಕ ವೇದಿಕೆಯಲ್ಲಿ ಮತ್ತೊಮ್ಮೆ ಬಯಲಿಗೆಳೆದಿದೆ. ಎನ್‌ಐಎ ಸಲ್ಲಿಸಿರುವ ಈ ಹೊಸ ದೋಷಾರೋಪ ಪಟ್ಟಿಯ ಆಧಾರದ ಮೇಲೆ ವಿಶೇಷ ನ್ಯಾಯಾಲಯವು ಹಫೀಜ್ ಸಯೀದ್ ವಿರುದ್ಧ ಕಾನೂನು ಪ್ರಕ್ರಿಯೆಗಳನ್ನು ಚುರುಕುಗೊಳಿಸಲಿದೆ.

ಹಫೀಜ್ ಸಯೀದ್ ಮೇಲಿರುವ ಕೇಸುಗಳು:

ಕೇಂದ್ರ ಗೃಹ ಸಚಿವಾಲಯದ 2019ರ ಅಧಿಸೂಚನೆಯ ಪ್ರಕಾರ, ಹಫೀಜ್ ಸಯೀದ್ ಭಾರತದ ಹಲವು ರಕ್ತಸಿಕ್ತ ದಾಳಿಗಳ ಮಾಸ್ಟರ್‌ಮೈಂಡ್ ಆಗಿದ್ದಾನೆ. ಅವುಗಳೆಂದರೆ,

ಡಿಸೆಂಬರ್ 22, 2000: ದೆಹಲಿಯ ಕೆಂಪುಕೋಟೆ ದಾಳಿ (ಇಬ್ಬರು ಸೈನಿಕರು ಸೇರಿ ಮೂವರ ಸಾವು).

ಜನವರಿ 1, 2008: ರಾಂಪುರ ದಾಳಿ (7 ಸಿಆರ್‌ಪಿಎಫ್ ಸಿಬ್ಬಂದಿ ಹಾಗೂ ಒಬ್ಬ ನಾಗರಿಕನ ಸಾವು).

ನವೆಂಬರ್ 26-28, 2008: ಮುಂಬೈ 26/11 ದಾಳಿ (25 ವಿದೇಶಿಗರು ಸೇರಿದಂತೆ 166 ಜನರ ಸಾವು, 235 ಜನರಿಗೆ ಗಾಯ).

ಆಗಸ್ಟ್ 5, 2015: ಉಧಂಪುರದಲ್ಲಿ ಬಿಎಸ್‌ಎಫ್ (BSF) ಬೆಂಗಾವಲು ಪಡೆಯ ಮೇಲೆ ದಾಳಿ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:55 pm, Mon, 6 July 26

Source link

ಇದು ಜನರೇಷನ್ ಝೆಡ್ ಡೇಟಿಂಗ್ ಎಫೆಕ್ಟ್; ಪ್ರೀತಿ ಹೆಸರಿನಲ್ಲಿ ರಿಲೇಷನ್ಶಿಪ್‌ಗೆ ನಾನಾ ಅರ್ಥ ನೀಡಿದ್ದಾರೆ ಯುವಜನತೆ – Kannada News | Gen Z dating have various meanings; Find out what kind of relationship yours is.

ಯುವಜನತೆ ಡಿಜಿಟಲ್ ಮಾಧ್ಯಮಗಳಿಗೆ (Digital platform) ತೆರೆದುಕೊಳ್ಳುತ್ತಿದ್ದಂತೆ ಸಂಬಂಧಗಳನ್ನು ಹೊಸ ರೀತಿಯಲ್ಲಿ ನೋಡುತ್ತಿದ್ದಾರೆ. ಜೆನ್ ಝೆಡ್ ಡೇಟಿಂಗ್‌ನಲ್ಲಿ (Gen Z Dating) ನಾನಾ ಹೆಸರುಗಳನ್ನು ನೀಡುತ್ತಿದ್ದಾರೆ. ಆದರೆ 1990 ಹಾಗೂ 2000 ರ ದಶಕದ ಆರಂಭದಲ್ಲಿ ಡೇಟಿಂಗ್ ಅನ್ನೋದು ತುಂಬಾ ವಿಭಿನ್ನವಾಗಿತ್ತು. ಯಾರನ್ನಾದರೂ ಇಷ್ಟಪಟ್ಟರೆ ಮೊಬೈಲ್ ನಂಬರ್ ಎಕ್ಸ್ ಚೇಂಜ್ ಆಗುತ್ತಿತ್ತು. ಅಲ್ಲೇ ಪ್ರೀತಿ ಚಿಗುರೊಡೆಯುತ್ತಿತ್ತು. ಆದರೆ, ಈಗ ಡೇಟಿಂಗ್ ನಲ್ಲಿ ಸಂಬಂಧಗಳ ವ್ಯಾಖ್ಯಾನಗಳು ಬದಲಾಗುತ್ತಿದೆ. ಸಿಚುವೇಶನ್ ಶಿಪ್, ಬ್ರೆಡ್ ಕ್ರಂಬಿಂಗ್ ಹೀಗೆ ಯುವಜನತೆ ನಾನಾ ರೀತಿಯ ಹೆಸರನ್ನು ನೀಡುತ್ತಿದ್ದಾರೆ. ಇಂದಿನ ಯುವಜನರು ಬಳಸುವ ಅತ್ಯಂತ ಜನಪ್ರಿಯ ಹಾಗೂ ಟ್ರೆಂಡಿಂಗ್ ಡೇಟಿಂಗ್ ಪದಗಳು ಸಾಕಷ್ಟು ಇವೆ. ನೀವೇನಾದ್ರೂ ರಿಲೇಷನ್ಶಿಪ್‌ನಲ್ಲಿದ್ದರೆ ನಿಮ್ಮ ಸಂಬಂಧಕ್ಕೆ ಯಾವ ಅರ್ಥ ಎಂದು ತಿಳಿದುಕೊಳ್ಳಿ.

ಯುವಜನತೆ ಸಂಬಂಧಕ್ಕೆ ನೀಡಿರುವ ನಾನಾ ಅರ್ಥಗಳೇನು?

ಸಿಚುವೇಶನ್‌ಶಿಪ್: ಈ ಹೆಸರೇ ಹೇಳುವಂತೆ ಸಂದರ್ಭಕ್ಕೆ ಹುಟ್ಟಿಕೊಂಡ ಸಂಬಂಧ. ಈ ರಿಲೇಷನ್ಶಿಪ್ ಸ್ಪಷ್ಟವಾದ ಹೆಸರಿಲ್ಲ, ಇಲ್ಲಿ ಯಾವುದೇ ಬದ್ಧತೆಯಿರಲ್ಲ. ಈ ರೀತಿ ಸಂಬಂಧಗಳು ಪ್ರೀತಿಯ ರೂಪ ತಾಳಿರುವುದಿಲ್ಲ.

ಬೀಜ್ ಫ್ಲ್ಯಾಗ್: ಸಂಗಾತಿಯ ಅಥವಾ ಪಾರ್ಟ್ನರ್ ನಡವಳಿಕೆಯಲ್ಲಿ ಸದಾ ಬೇಸರವಿರುತ್ತದೆ. ಇಲ್ಲವಾದರೆ ಯಾವುದೇ ವಿಶೇಷತೆಯಿಲ್ಲದ ಅಭ್ಯಾಸಗಳಿರುತ್ತದೆ. ಇದು ರೆಡ್ ಫ್ಲ್ಯಾಗ್ ಚಿಹ್ನೆ ಅಲ್ಲದಿದ್ದರೂ ಬೋರ್ ಎನಿಸುವ ವಿಷಯವಾಗಿರುತ್ತದೆ. ಇದು ಸಂಬಂಧದಲ್ಲಿ ಆಪ್ತತೆ ಕಡಿಮೆಯಾಗಲು ಕಾರಣವಾಗಬಹುದು.

ಘೋಸ್ಟಿಂಗ್: ಇಂದಿನ ಯುವಜನತೆ ಮನಸ್ಸು ಚಂಚಲ. ಈ ರೀತಿ ಸಂಬಂಧಗಳಲ್ಲಿ ಯಾವುದೇ ಮುನ್ಸೂಚನೆ ಸ್ಪಷ್ಟನೆ ನೀಡದೆ, ಇದ್ದಕ್ಕಿದ್ದಂತೆ ಆನ್‌ಲೈನ್‌ನಲ್ಲಿ ಹುಡುಗ ಅಥವಾ ಹುಡುಗಿ ಸಂಪರ್ಕ ಕಡಿತಗೊಳಿಸಿ ದೂರ ಉಳಿಯುವುದು. ಇಂತಹ ಸಂಬಂಧಗಳು ಹಾಗೂ ವ್ಯಕ್ತಿಗಳು ನಂಬಿಕೆಗೆ ಅರ್ಹರಾಗಿರುವುದಿಲ್ಲ.

ಸಾಫ್ಟ್ ಲಾಂಚಿಂಗ್: ಸೋಶಿಯಲ್ ಮೀಡಿಯಾದಲ್ಲಿ ರಿಲೇಷನ್ ಶಿಪ್ ನಲ್ಲಿ ಇರುವ ಬಗ್ಗೆ ಸಣ್ಣಪುಟ್ಟ ಸುಳಿವನ್ನು ನೀಡುವುದು. ಹುಡುಗ ಅಥವಾ ಹುಡುಗಿ ಹೊಸ ಸಂಗಾತಿಯ ಮುಖವನ್ನು ತೋರಿಸದೆ, ಅವರ ಕೈ, ಗಡಿಯಾರ ಅಥವಾ ಜೊತೆಯಾಗಿ ಊಟ ಮಾಡುತ್ತಿರುವ ಫೋಟೋವನ್ನು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿಕೊಳ್ಳುತ್ತಾರೆ.

ಪಿಂಕ್ ಫ್ಲಾಗ್: ಸಂಬಂಧಗಳಲ್ಲಿ ಸಮಸ್ಯೆಗಳ ಆರಂಭದ ಸೂಚನೆಯೇ ಪಿಂಕ್ ಫ್ಲಾಗ ಆಗಿರುತ್ತದೆ. ಪ್ರಾರಂಭದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಆಗಿದ್ರೂ ಮುಂದೆ ದೊಡ್ಡದಾಗುತ್ತದೆ. ಇಂತಹ ಸಂಬಂಧಗಳು ಸೇಫ್ ಅಲ್ಲ, ಯಾವಾಗ ಬೇಕಾದ್ರೂ ಮುರಿದು ಬೀಳಬಹುದು.

ರಿಜ್: ತನ್ನ ಚಾಕಚಕ್ಯತೆ ಅಥವಾ ಮಾತಿನ ಶೈಲಿಯಿಂದ ಯಾರನ್ನಾದರೂ ಆಕರ್ಷಿಸುವುದು. ಇದು ಮರಳು ಮಾಡಲು ಸಾಮರ್ಥ್ಯವಾಗಿದೆ.

ಸಾಫ್ಟ್ ಬ್ರೇಕ್: ಸಂಬಂಧದಲ್ಲಿ ಇಬ್ಬರೂ ವ್ಯಕ್ತಿಗಳ ನಡುವೆ ನಂಬಿಕೆ, ಬದ್ಧತೆ ಕಡಿಮೆ ಇರುತ್ತದೆ. ನಿಧಾನವಾಗಿ ಬ್ರೇಕಪ್ ಮಾಡಿಕೊಳ್ಳುತ್ತಾರೆ.

ಲವ್ ಬಾಂಬಿಂಗ್: ಸಂಬಂಧದಲ್ಲಿ ಹುಡುಗ ಅಥವಾ ಹುಡುಗಿ ಅತಿಯಾದ ಪ್ರೀತಿ ತೋರುವುದು. ಆದರೆ ಈ ಪ್ರೀತಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು. ತಮ್ಮ ಕೆಲಸ ಆಗುವ ತನಕ ಮಾತ್ರ ಈ ಸಂಬಂಧಗಳು ಉಳಿಯುತ್ತದೆ.

ಬ್ರೆಡ್ ಕ್ರಂಬಿಂಗ್: ಸಂಬಂಧಗಳಲ್ಲಿ ಪಾರ್ಟ್ನರ್ ಗಳು ಇಷ್ಟವಿದ್ದಂತೆ ನಟಿಸುವುದು. ಹೀಗಾಗಿ ಸಣ್ಣಪುಟ್ಟ ಸಂದೇಶ ಕಳುಹಿಸುವುದು. ಸ್ವಲ್ಪ ಗಮನ ನೀಡುವುದು. ಭೇಟಿ ಅಂತಹ ಸಂದರ್ಭದಲ್ಲಿ ಕುಂಟು ನೆಪಗಳನ್ನು ಹೇಳುವುದು. ಇಂತಹ ವ್ಯಕ್ತಿಗಳು ಸಂಬಂಧದಲ್ಲಿ ಬದ್ಧತೆ ಹೊಂದಿರುವುದಿಲ್ಲ.

ಡೆಲ್ಲುಲು: ಇಲ್ಲಿ ಸಂಬಂಧವು ಖಂಡಿತ ಯಶಸ್ವಿಯಾಗುತ್ತದೆ ಎಂದು ಅತಿಯಾದ ಆಶಾಭಾವನೆಯಿರುತ್ತದೆ. ಆದರೆ ಈ ಭಾವನೆ ಸತ್ಯಗಳಿಗೆ ವಿರುದ್ಧವಾಗಿರುತ್ತದೆ.

ಇದನ್ನೂ ಓದಿ: ಬೇಸಿಗೆ ರಜೆ ಮುಗಿಸಿ ಅಜ್ಜಿ ಮನೆಯಿಂದ ಹೊರಟ ಮೊಮ್ಮಗನನ್ನು ಕಂಡು ಭಾವುಕರಾದ ಅಜ್ಜಿ 

ಆರ್ಬಿಟಿಂಗ್: ಈ ಸಂಬಂಧಗಳಲ್ಲಿ ಇಬ್ಬರೂ ವ್ಯಕ್ತಿಗಳು ಮೆಸೇಜ್ ಗಳಿಗೆ ಯಾವುದೇ ಉತ್ತರ ನೀಡಲ್ಲ. ಆದರೆ ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೋರಿಗಳನ್ನು ನೋಡುತ್ತಿರುತ್ತಾರೆ ಹಾಗೂ ಲೈಕ್ ಮಾಡುತ್ತಿರುತ್ತಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:47 pm, Mon, 6 July 26

Source link

ಬೆಂಗಳೂರಿನಲ್ಲಿ ಸೈರನ್ ಹಾಕಿದ್ರೂ ಆಂಬ್ಯುಲೆನ್ಸ್‌ಗೆ ದಾರಿ ಬಿಡದೆ ವೀಲಿಂಗ್ ಮಾಡಿ ಪುಂಡಾಟಿಕೆ – Kannada News | Ambulance Blocked: Bengaluru Bikers’ Reckless Wheelies Spark Public Outrage

ಬೆಂಗಳೂರು, ಜು. 6: “ಮಾನವನ ಜೀವ ರಸ್ತೆ ಬದಿಯ ಸ್ಟಂಟ್‌ಗಳಿಗಿಂತಲೂ ಅಗ್ಗವಾಗಿಬಿಟ್ಟಿದೆಯೇ?” – ಇಂತಹದ್ದೊಂದು ಗಂಭೀರ ಹಾಗೂ ಆತಂಕಕಾರಿ ಪ್ರಶ್ನೆ ಮೂಡುವಂತೆ ಮಾಡಿದೆ ಸಿಲಿಕಾನ್ ಸಿಟಿಯಲ್ಲಿ ನಡೆದಿರುವ ಪುಂಡರ ವೀಲಿಂಗ್ ಘಟನೆ. ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್‌ನ ಸೈರನ್ ಧ್ವನಿ ಜೋರಾಗಿ ಕೇಳಿಸುತ್ತಿದ್ದರೂ, ಅದಕ್ಕೆ ದಾರಿ ಬಿಡದೆ ರಸ್ತೆಯಲ್ಲೇ ಅಪಾಯಕಾರಿ ವೀಲಿಂಗ್ (Wheelies) ಪ್ರದರ್ಶನ ಮಾಡಿದ ಬೈಕ್ ಸವಾರರ ಅಮಾನವೀಯ ಕೃತ್ಯ ಸದ್ಯ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋವನ್ನು @Karnataka Portfolio ಎಂಬ ಎಕ್ಸ್​​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಮಾಹಿತಿಯ ಪ್ರಕಾರ, ಈ ಘಟನೆಯು ಜುಲೈ 4 ರಂದು ನಡುರಾತ್ರಿ ಸುಮಾರು 2:30 ರ ಸುಮಾರಿಗೆ ಬೆಂಗಳೂರಿನ ಗೊರಗುಂಟೆಪಾಳ್ಯ ಮತ್ತು ಯಶವಂತಪುರ ನಡುವಿನ ಹೆದ್ದಾರಿ ರಸ್ತೆಯಲ್ಲಿ ಸಂಭವಿಸಿದೆ. ತುರ್ತು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ರೋಗಿಯೊಬ್ಬರನ್ನು ಹೊತ್ತು ವೇಗವಾಗಿ ಸಾಗುತ್ತಿತ್ತು. ಈ ವೇಳೆ ರಸ್ತೆಯಲ್ಲಿದ್ದ ಬೈಕ್ ಸವಾರರ ಗುಂಪೊಂದು, ತುರ್ತು ವಾಹನಕ್ಕೆ ಸೈಡ್ ಕೊಡುವುದನ್ನು ಬಿಟ್ಟು, ಅದರ ಮುಂಭಾಗದಲ್ಲೇ ಅಪಾಯಕಾರಿ ಸ್ಟಂಟ್‌ಗಳನ್ನು ಮುಂದುವರಿಸಿದೆ. ಇದು ಆಂಬ್ಯುಲೆನ್ಸ್ ಒಳಗಿದ್ದ ರೋಗಿಯ ಜೀವದ ಜೊತೆ ಮಾತ್ರವಲ್ಲದೆ, ಸ್ವತಃ ಆ ಪುಂಡರ ಜೀವಕ್ಕೂ ಆಪತ್ತು ತರುವಂತಿತ್ತು.

ವಿಡಿಯೋ ಇಲ್ಲಿದೆ ನೋಡಿ:

ಇಂತಹ ಬೇಜವಾಬ್ದಾರಿ ವರ್ತನೆ ಕೇವಲ ರಸ್ತೆ ನಿಯಮದ ಉಲ್ಲಂಘನೆಯಷ್ಟೇ ಅಲ್ಲ, ಕೊಲೆ ಯತ್ನಕ್ಕೆ ಸಮಾನವಾಗಿದೆ. ಆಂಬ್ಯುಲೆನ್ಸ್‌ನಂತಹ ತುರ್ತು ವಾಹನಗಳನ್ನು ತಡೆಯುವುದರಿಂದ ಜೀವ ಉಳಿಸುವ ಚಿಕಿತ್ಸೆ ವಿಳಂಬವಾಗಿ ರೋಗಿ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಸಾರ್ವಜನಿಕ ರಸ್ತೆಗಳು ಇಂತಹ ಸ್ಟಂಟ್‌ಗಳಿಗೆ ಇರುವ ಅಖಾಡಗಳಲ್ಲ. ಇಲ್ಲಿ ವೀಲಿಂಗ್ ಮಾಡುವುದರಿಂದ ರಸ್ತೆಯಲ್ಲಿ ಸಂಚರಿಸುವ ಇತರ ವಾಹನ ಸವಾರರು ಹಾಗೂ ಪಾದಚಾರಿಗಳ ಜೀವಕ್ಕೂ ಗಂಡಾಂತರ ಎದುರಾಗುತ್ತದೆ ಎಂದು ನೆಟ್ಟಿಗರು ಗರಂ ಆಗಿದ್ದಾರೆ.

ಇದನ್ನೂ ಓದಿ: ಆಷಾಢ ಆರಂಭದಲ್ಲೇ ಮಾಂಸಪ್ರಿಯರಿಗೆ ಶಾಕ್: ಚಿಕನ್, ಮೊಟ್ಟೆ ಬೆಲೆಯಲ್ಲಿ ದಾಖಲೆಯ ಏರಿಕೆ

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಬೆಂಗಳೂರು ಸಂಚಾರಿ ಪೊಲೀಸರು, ವೀಲಿಂಗ್ ಪುಂಡರನ್ನು ಪತ್ತೆಹಚ್ಚಲು ಆ ರಸ್ತೆಯ ಸಿಸಿಟಿವಿ ದೃಶ್ಯಾವಳಿಗಳನ್ನು ತೀವ್ರವಾಗಿ ಜಾಲಾಡುತ್ತಿದ್ದಾರೆ. ಸಿಸಿಟಿವಿ ಆಧಾರದ ಮೇಲೆ ಬೈಕ್ ಸಂಖ್ಯೆಗಳನ್ನು ಪತ್ತೆಹಚ್ಚಿ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಎಫ್‌ಐಆರ್ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಯಾವುದೇ ಸಾಮಾಜಿಕ ಜಾಲತಾಣಗಳ ರೀಲ್ಸ್ ಹಪಾಹಪಿತನ ಅಥವಾ ಸಾಹಸದ ಮೋಜು ಮತ್ತೊಬ್ಬರ ಜೀವಕ್ಕಿಂತ ದೊಡ್ಡದಲ್ಲ ಎಂದು ಕಠಿಣ ಶಿಕ್ಷೆ ವಿಧಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದಲ್ಲಿ ‘ಸತ್ಲುಜ್’ ಸಿನಿಮಾ ನಿಷೇಧ; ಡೌನ್‌ಲೋಡ್ ಕಾಪಿ ಹಂಚಿಕೊಳ್ಳಿ ಎಂದ ನಟ ದಿಲ್ಜಿತ್ ದೋಸಾಂಜ್ – Kannada News | Diljit Dosanjh talks about Satluj movie Banned Zee5 India Download Copies

ಖ್ಯಾತ ನಟ ಹಾಗೂ ಗಾಯಕ ದಿಲ್ಜಿತ್ ದೋಸಾಂಜ್ (Diljit Dosanjh) ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಹನಿ ಟ್ರೆಹನ್ ನಿರ್ದೇಶನದ ಬಹುನಿರೀಕ್ಷಿತ ‘ಸತ್ಲುಜ್’ (Satluj) ಚಿತ್ರವು ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ ‘ಝೀ5’ (ZEE5) ಒಟಿಟಿಯಿಂದ ದಿಢೀರ್ ಡಿಲೀಟ್ ಆಗಿದೆ. ಭಾರತದಲ್ಲಿ ಈ ಚಿತ್ರದ ಪ್ರಸಾರವನ್ನು ಸ್ಥಗಿತಗೊಳಿಸಿರುವ ಬೆನ್ನಲ್ಲೇ ಲೈವ್ ಸೆಷನ್ ಮೂಲಕ ಅಭಿಮಾನಿಗಳೊಂದಿಗೆ ದಿಲ್ಜಿತ್ ದೋಸಾಂಜ್ ಮಾತನಾಡಿದ್ದಾರೆ. ಸಿನಿಮಾ ಡೌನ್‌ಲೋಡ್ ಮಾಡಿಕೊಂಡಿರುವವರು ಅದನ್ನು ಇತರರೊಂದಿಗೆ ಹಂಚಿಕೊಳ್ಳುವಂತೆ ದಿಲ್ಜಿತ್ ಮನವಿ ಮಾಡಿದ್ದಾರೆ.

ಚಿತ್ರವನ್ನು ದಿಢೀರ್ ಆಗಿ ತೆಗೆದುಹಾಕಿರುವ ನಡೆ ಅನೇಕ ವೀಕ್ಷಕರಿಗೆ ಆಘಾತ ತಂದಿದ್ದರೂ, ದಿಲ್ಜಿತ್ ದೋಸಾಂಜ್‌ಗೆ ಇದು ಮೊದಲೇ ತಿಳಿದಿತ್ತಂತೆ. ‘ಈ ಘಟನೆ 1995ರಲ್ಲಿ ನಡೆದಿತ್ತು, ಆಗಲೂ ಜನರ ಬಾಯಿ ಮುಚ್ಚಿಸಲಾಗಿತ್ತು. ಇಂದು 2026ರಲ್ಲೂ ಅದೇ ಆಗುತ್ತಿದೆ, ಹದ್ದು ಮೀರಿದೆ. ನನಗೆ ಸ್ವಲ್ಪ ಬೇಸರವಾಗಿದೆ. ನಾವು ಇಂದಿಗೂ ಅಲ್ಲೇ ನಿಂತಿದ್ದೇವೆ’ ಎಂದು ದಿಲ್ಜಿತ್ ಬೇಸರ ವ್ಯಕ್ತಪಡಿಸಿದ್ದಾರೆ.

‘ಸಾಯುವವರೆಗೂ ನಾನು ಪಂಜಾಬ್ ಪರ’

ಚಿತ್ರದ ಬಿಡುಗಡೆಗೂ ಮುನ್ನ ಯಾವುದೇ ಪ್ರಚಾರ ಮಾಡದಿರಲು ಇದೇ ಕಾರಣವಾಗಿತ್ತು ಎಂದು ದಿಲ್ಜಿತ್ ದೋಸಾಂಜ್ ಅವರು ಬಹಿರಂಗಪಡಿಸಿದ್ದಾರೆ. ‘ನಾವು ಎರಡು ದಿನ ಮುಂಚಿತವಾಗಿ ಪ್ರಚಾರ ಮಾಡಿದ್ದರೆ, ಸಿನಿಮಾ ಬಿಡುಗಡೆಯೇ ಆಗುತ್ತಿರಲಿಲ್ಲ. ಆದರೆ ಈಗ ಸಿನಿಮಾ ಪ್ರತಿಯೊಬ್ಬರ ಮನೆ ತಲುಪಿದೆ, ಜನರು ಇದನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಮತ್ತು ಹೊಸ ಪೀಳಿಗೆ ಇದರ ಬಗ್ಗೆ ಮಾತನಾಡುತ್ತಿದೆ ಎಂಬ ನೆಮ್ಮದಿ ನನಗಿದೆ. ನೀವು ನನ್ನನ್ನು ಎಷ್ಟು ಬೇಕಾದರೂ ಕಾಡಬಹುದು, ಆದರೆ ಸಾಯುವವರೆಗೂ ನಾನು ಪಂಜಾಬ್ ಪರವಾಗಿ ನಿಲ್ಲುತ್ತೇನೆ’ ಎಂದು ಅವರು ಹೇಳಿದ್ದಾರೆ.

4 ವರ್ಷಗಳ ಸೆನ್ಸಾರ್ ಹೋರಾಟ

ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಾಲ್ರಾ ಅವರ ಜೀವನ ಆಧಾರಿತ ಈ ಚಿತ್ರವು ಮೊದಲು ‘ಪಂಜಾಬ್ 95’ ಎಂಬ ಹೆಸರಿನಲ್ಲಿ ಸೆನ್ಸಾರ್ ಮಂಡಳಿಯ ಕತ್ತರಿ ಪ್ರಯೋಗಕ್ಕೆ ಸಿಲುಕಿತ್ತು. ಸೆನ್ಸಾರ್ ಮಂಡಳಿಯು ಈ ಚಿತ್ರಕ್ಕೆ ಬರೋಬ್ಬರಿ 127 ಕಟ್‌ಗಳನ್ನು ಸೂಚಿಸಿತ್ತು. ಸುಮಾರು ನಾಲ್ಕು ವರ್ಷಗಳ ಕಾನೂನು ಹೋರಾಟದ ನಂತರ, ಜುಲೈ 3ರಂದು ‘ಸತ್ಲುಜ್’ ಎಂಬ ಹೊಸ ಹೆಸರಿನೊಂದಿಗೆ ಝೀ5 ಒಟಿಟಿಯಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಆದರೆ ಜುಲೈ 5ರ ಭಾನುವಾರ ಸಂಜೆಯ ವೇಳೆಗೆ ಭಾರತದಲ್ಲಿ ಚಿತ್ರವನ್ನು ತೆಗೆದುಹಾಕಲಾಗಿದೆ.

ಇದನ್ನೂ ಓದಿ: ದಿಲ್ಜಿತ್ ದೋಸಾಂಜ್ ಸತ್ಲುಜ್ ಸಿನಿಮಾ ಒಟಿಟಿಯಿಂದ ಡಿಲೀಟ್ ಆಗಿದ್ದಕ್ಕೆ ಸಿಕ್ತು ಕಾರಣ

ಇಂಟರ್ನೆಟ್‌ನಿಂದ ಅಳಿಸಲು ಸಾಧ್ಯವಿಲ್ಲ!

ಸಿನಿಮಾ ಈಗಾಗಲೇ ಇಂಟರ್ನೆಟ್‌ನಲ್ಲಿ ಲಭ್ಯವಿರುವುದರಿಂದ ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ದಿಲ್ಜಿತ್ ಅಭಿಪ್ರಾಯಪಟ್ಟಿದ್ದಾರೆ. ‘ಒಮ್ಮೆ ಯಾವುದಾದರೂ ವಸ್ತು ಆನ್‌ಲೈನ್‌ಗೆ ಬಂದರೆ ಅದನ್ನು ಅಳಿಸಲು ಸಾಧ್ಯವಿಲ್ಲ ಎಂದು ಯೋಚಿಸದವರು ಮುಗ್ಧರು ಅಥವಾ ಅವಿದ್ಯಾವಂತರು. ಇದು ಈಗ ಜನರ ಸಿನಿಮಾ. ರಾಜಸ್ಥಾನದ ಹಳ್ಳಿಯೊಂದರಲ್ಲಿ ಮತ್ತು ಗುರುದ್ವಾರದ ಒಳಗೆ ಈ ಸಿನಿಮಾವನ್ನು ವೀಕ್ಷಿಸುತ್ತಿರುವ ವಿಡಿಯೋಗಳನ್ನು ನಾನು ನೋಡಿದೆ. ನನ್ನ ಶ್ರಮ ಜನರನ್ನು ತಲುಪಿದೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಂಸದ ಸುಧಾಕರ್, ಶಾಸಕ ವಿಶ್ವನಾಥ್ ಸಂಧಾನ: ಇಬ್ಬರಿಗೆ ಕೊಟ್ಟ ಖಡಕ್ ಸೂಚನೆಗಳೇನು? – Kannada News | What instructions to Dr Sudhakar And SR Vishwanath, Here Is Details of negotiation Meeting

ಬೆಂಗಳೂರು, (ಜುಲೈ 06): ಕರ್ನಾಟಕ ಬಿಜೆಪಿಯಲ್ಲಿನ (Karnataka BJP) ಇತ್ತೀಚಿನ ವಿದ್ಯಮಾನಗಳ ಬಗ್ಗೆ ಆರ್​​​ಎಸ್​​​ಎಸ್ (RSS)​​ ಅಸಮಾಧಾನ ಹೊರಹಾಕಿದೆ. ಮೊನ್ನೇ ನಡೆದ ಬಿಜೆಪಿ ನಾಯಕರೊಂದಿಗೆ ಸಭೆಯಲ್ಲಿ ಆರ್​​ಎಸ್​​ಎಸ್ ಕೆಲ ವಿಚಾರಳನ್ನು ಪ್ರಸ್ತಾಪಿಸಿ ಕಿಡಿಕಾರಿದೆ. ನಾಯಕರ ನಡವಳಿಕೆ ಬದಲಿಸಿಕೊಳ್ಳಲು ಸಂಘದ ಪ್ರಮುಖರು ಖಡಕ್ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಹಿರಿಯ ನಾಯಕರು ಸೇರಿಕೊಂಡು ಸಂಸದ ಡಾ ಕೆ ಸುಧಾಕರ್ (D K Sudhakar) ಹಾಗೂ ಶಾಸಕ ಎಸ್​​ಆರ್​ ವಿಶ್ವನಾಥ್ (SR VIshwanath) ಬಹಿರಂಗ ಕಿತ್ತಾಟಕ್ಕೆ ಬ್ರೇಕ್ ಹಾಕಿದ್ದಾರೆ. ಆರ್​ಎಸ್​ಎಸ್​ ಸೂಚನೆ ಮೇರೆಗೆ ಸುಧಾಕರ್ ಮತ್ತು ವಿಶ್ವನಾಥ್ ನಡುವೆ ಸಂಧಾನ ಸಭೆ ಮಾಡಿದ್ದು, ಇಬ್ಬರಿಗೆ ಕೆಲ ಖಡಕ್ ಸೂಚನೆಗಳನ್ನು ನೀಡಲಾಗಿದೆ.

ಲೆಫ್ಟ್ ರೈಟ್ ತೆಗೆದುಕೊಂಡ ಆರ್​​ಎಸ್​​​ಎಸ್​​​

ಬಿಜೆಪಿಯಲ್ಲಿ ಅಡ್ಡ ಮತ ಪ್ರಕರಣ ಬಳಿಕ ಸಾಕಷ್ಟು ಆಂತರಿಕ ಬೆಳವಣಿಗೆಗಳು ನಡೆಯುತ್ತಿವೆ. ಹೀಗಾಗಿ ಬೆಂಗಳೂರಿನಲ್ಲಿ ನಡೆದ ಆರ್‌ ಎಸ್ ಎಸ್ ಬೈಠಕ್‌ನಲ್ಲಿ ಬಿಜೆಪಿ ನಾಯಕರಿಗೆ ಕ್ಲಾಸ್ ತೆಗೆದುಕೊಳ್ಳಲಾಗಿದೆ. ಇತ್ತೀಚಿನ ಕೆಲ ಮುಜುಗರದ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕೇಸರಿ ನಾಯಕರಿಗೆ ಸಂಘ ಲೆಫ್ಟ್‌ ರೈಟ್ ತೆಗೆದಕೊಂಡಿದೆ. ಹೊಂದಾಣಿಕೆ ಸಮಸ್ಯೆ ಇನ್ನೂ ಪಕ್ಷದಲ್ಲಿ ಎದ್ದು ಕಾಣುತ್ತಿದೆ. ಇದನ್ನು ಸರಿಪಡಿಸಿಕೊಳ್ಳುವಂತೆ ಒಗ್ಗಟ್ಟಿನ ಶಕ್ತಿ ಬಗ್ಗೆಯೂ ಬೋಧನೆ ಮಾಡಲಾಗಿದೆ. ಹೀಗಾಗಿ ಬಿಜೆಪಿಯ ಹಿರಿಯ ನಾಯಕರಾ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ರಾಜ್ಯ ಬಿಜೆಪಿ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಸಮ್ಮುಖದಲ್ಲಿ ಸುಧಾಕರ್ ಹಾಗೂ ವಿಶ್ವನಾಥ್ ನಡುವೆ ಸಂಧಾನ ಸಭೆ ನಡೆದಿದ್ದು, ಸಭೆ ಸಕ್ಸಸ್ ಕಂಡಿದೆ. ಹಿರಿಯ ನಾಯಕರಿಗೆ ಸಲಹೆ ಸೂಚನೆಗಳಿಗೆ ಬೆಲೆ ಕೊಡುವುದಗಿ ಇಬ್ಬರೂ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: RSS ತರಾಟೆ ಬೆನ್ನಲ್ಲೇ ಎಚ್ಚೆತ್ತ ಬಿಜೆಪಿ: ಸುಧಾಕರ್-SR ವಿಶ್ವನಾಥ್ ಸಂಧಾನ ಸಕ್ಸಸ್

ನನ್ನನ್ನು ಕಾರ್ಯಕ್ರಮಗಳಿಗೆ ಕರೆಯುತ್ತಿರಲಿಲ್ಲ ಎಂದಿದ್ದ ಸುಧಾಕರ್ ಹೇಳಿಕೆಯನ್ನು ಸಭೆಯಲ್ಲಿ ಪ್ರಸ್ತಾಪಿಸಿದ ವಿಶ್ವನಾಥ್,  ಮಾಹಿತಿ ಇಲ್ಲದೆ ನನ್ನ ಕ್ಷೇತ್ರದಲ್ಲಿ ಕಾರ್ಯಕ್ರಮ ಮಾಡೋದು ಸರಿಯಲ್ಲ. ಇನ್ನು ಮುಂದೆ ನಾನು ಎಲ್ಲಾ ಕಾರ್ಯಕ್ರಮಗಳಿಗೆ ಆಹ್ವಾನ ನೀಡುತ್ತೇನೆ. ಎಂಪಿ ಚುನಾವಣೆಯಲ್ಲಿ ಸುಧಾಕರ್​ ಸ್ಪರ್ಧಿಸಿದರೆ ಯಲಹಂಕದಿಂದ ಒಂದು ಒಂದು ಲಕ್ಷ ಮತಗಳ ಲೀಡ್​ ಕೊಡಿಸುತ್ತೇನೆ ಎಂದಿದ್ದಾರೆ.

ಸಭೆಯಲ್ಲಿ ನೀಡಿದ ಖಡಕ್ ಸೂಚನೆಗಳೇನು?

ಇನ್ನು ಭಾನುವಾರ (ಜುಲೈ 05) ನಡೆದ ಸಧಾನ ಸಭೆಯಲ್ಲಿ ಸಂಸದ ಸುಧಾಕರ್, ಶಾಸಕ ವಿಶ್ವನಾಥ್ ಗೆ ಹಿರಿಯ ನಾಯಕರು ಏನೆಲ್ಲಾ ಸೂಚನೆಗಳನ್ನು ನೀಡಲಾಗಿದೆ ಎನ್ನುವುದನ್ನು ನೋಡವುದಾದರೆ, ಹಳೆಯದ್ದನ್ನು ಮರೆತು ಒಟ್ಟಾಗಿ ಹೋಗಬೇಕು, ಕಾರ್ಯಕ್ರಮಗಳ ಫ್ಲೆಕ್ಸ್​ಗಳಲ್ಲಿ ಪರಸ್ಪರರ ಫೋಟೋ ಹಾಕಿಕೊಳ್ಳಬೇಕು. ಹಾಗೇ ಕಾರ್ಯಕ್ರಮಗಳಿಗೆ ಪರಸ್ಪರರ ಆಹ್ವಾನಿಸಬೇಕು ಎಂದು ಇಬ್ಬರಿಗೂ ಸಲಹೆ ನೀಡಲಾಗಿದೆ.

ಸಂಸದರು ಶಾಸಕರನ್ನು ವಿಶ್ವಾಸದಲ್ಲಿಟ್ಟುಕೊಂಡೇ ಕೆಲಸ ಮಾಡಬೇಕು, ಶಾಸಕರೇ ಹೆಚ್ಚು ಕ್ಷೇತ್ರದಲ್ಲಿ ಜನಸಂಪರ್ಕ ಹೊಂದಿರುತ್ತಾರೆ . ಶೀಘ್ರದಲ್ಲೇ ವಿಶ್ವನಾಥ್ ಮನೆಗೆ ಸುಧಾಕರ್ ಭೇಟಿ ನೀಡಬೇಕು, ಶೀಘ್ರದಲ್ಲೇ ವಿಶ್ವನಾಥ್ ಮನೆಗೆ ಸುಧಾಕರ್ ಭೇಟಿ ನೀಡಬೇಕು, ಸುಧಾಕರ್ ಮನೆಗೆ ವಿಶ್ವನಾಥ್ ಭೇಟಿ ನೀಡಬೇಕೆಂದು ಎಂದು ನಿರ್ದೇಶನ ನೀಡಲಾಗಿದೆ. ಇದಕ್ಕೆ ವಿಶ್ವನಾಥ್ ಹಾಗೂ ಸುಧಕರ್ ಸಹ ಒಪ್ಪಿಕೊಂಡಿದ್ದಾರೆ. ಆದ್ರೆ, ಇದು ಎಷ್ಟರ ಮಟ್ಟಿಗೆ ಸರಿಯಾಗುತ್ತೆ? ಈ ಇಬ್ಬರು ನಾಯಕರ ಕಾರ್ಯಕರ್ತರು, ಮುಖಂಡರು ಹೇಗೆ ಇರುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜೂನ್​ನಲ್ಲಿ ಆಟೊಮೊಬೈಲ್ ಕ್ಷೇತ್ರಕ್ಕೆ ಸುಗ್ಗಿ; 25 ಲಕ್ಷಕ್ಕೂ ಅಧಿಕ ವಾಹನಗಳ ದಾಖಲೆ ಮಾರಾಟ – Kannada News | Automobile sales in India see big rise on June 2026, as EV registrations at record high

ಕಾರುಗಳ ಸಾಂದರ್ಭಿಕ ಚಿತ್ರImage Credit source: AP

ನವದೆಹಲಿ, ಜುಲೈ 6: ಭಾರತದ ಆಟೋಮೊಬೈಲ್ ಕ್ಷೇತ್ರ ಜೂನ್ 2026 ರಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ದೇಶದ ಆಟೋ ರಿಟೇಲ್ ಇತಿಹಾಸದಲ್ಲೇ ಇದು ಅತ್ಯಂತ ಯಶಸ್ವಿ ಜೂನ್ ತಿಂಗಳಾಗಿದ್ದು, ಒಟ್ಟಾರೆ ವಾಹನಗಳ ನೋಂದಣಿ (Registrations) ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 21.83 ರಷ್ಟು ದಾಖಲೆಯ ಪ್ರಗತಿ ಕಂಡಿದೆ. ಗ್ರಾಹಕರು ಸಾಂಪ್ರದಾಯಿಕ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗಿಂತ ಎಲೆಕ್ಟ್ರಿಕ್ (EV), ಸಿಎನ್‌ಜಿ (CNG) ಮತ್ತು ಹೈಬ್ರಿಡ್ ವಾಹನಗಳತ್ತ ಭಾರಿ ಪ್ರಮಾಣದಲ್ಲಿ ಆಕರ್ಷಿತರಾಗುತ್ತಿರುವುದು ಈ ಮಾರಾಟದ ಜಿಗಿತಕ್ಕೆ ಪ್ರಮುಖ ಕಾರಣವಾಗಿದೆ.

FADA ವರದಿಯ ಪ್ರಕಾರ, ಜೂನ್ 2026 ರಲ್ಲಿ ದೇಶಾದ್ಯಂತ ಒಟ್ಟು 25,57,234 (25.57 ಲಕ್ಷ) ವಾಹನಗಳು ಮಾರಾಟವಾಗಿವೆ. ದ್ವಿಚಕ್ರ, ತ್ರಿಚಕ್ರ, ವಾಣಿಜ್ಯ (Commercial) ಮತ್ತು ಪ್ರಯಾಣಿಕರ ಕಾರುಗಳ (Passenger Vehicles) ವಿಭಾಗಗಳು ತಮ್ಮ ಸಾರ್ವಕಾಲಿಕ ಗರಿಷ್ಠ ಜೂನ್ ತಿಂಗಳ ಮಾರಾಟವನ್ನು ದಾಖಲಿಸಿವೆ.

ಪ್ಯಾಸೆಂಜರ್ ಕಾರುಗಳ ವಿಭಾಗದಲ್ಲಿ ದಾಖಲೆಯ ಮುನ್ನಡೆ

ಪ್ರಯಾಣಿಕರ ಕಾರುಗಳ ವಿಭಾಗವು ವಾರ್ಷಿಕವಾಗಿ ಶೇ. 28.63 ರಷ್ಟು ಭರ್ಜರಿ ಬೆಳವಣಿಗೆ ಕಂಡಿದ್ದು, ಒಟ್ಟು 4,10,853 ಕಾರುಗಳು ನೋಂದಣಿಯಾಗಿವೆ. ಇಂಧನ ಬೆಲೆಗಳ ಏರಿಕೆಯ ಪರಿಣಾಮವಾಗಿ ಪರ್ಯಾಯ ಇಂಧನ (Alternative Fuels) ಕಾರುಗಳ ಮಾರುಕಟ್ಟೆ ಪಾಲು ಮೊದಲ ಬಾರಿಗೆ ಶೇ. 40 ರ ಗಡಿಯನ್ನು ದಾಟಿದೆ.

ಇದನ್ನೂ ಓದಿ: ಪಿಎಂ ಕೃಷಿ ಸಿಂಚಯಿ ಯೋಜನೆ: ನೀರಾವರಿ ಸಿಸ್ಟಮ್ಸ್ ಅಳವಡಿಸಲು ಭರ್ಜರಿ ರಿಯಾಯಿತಿ; ಇಲ್ಲಿದೆ ಸಬ್ಸಿಡಿ ಮತ್ತಿತರ ಸೌಲಭ್ಯಗಳ ವಿವರ

  • ಪರ್ಯಾಯ ಇಂಧನದ ಪಾಲು: ಒಟ್ಟು ಕಾರು ಮಾರಾಟದಲ್ಲಿ ಇವಿ, ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳ ಪಾಲು ಶೇ. 40.35 ಕ್ಕೆ ತಲುಪಿದೆ.
  • ಇಂಧನವಾರು ವಿಂಗಡಣೆ: ಸಿಎನ್‌ಜಿ (CNG) ಕಾರುಗಳು ಶೇ. 24.33, ಹೈಬ್ರಿಡ್ ಕಾರುಗಳು ಶೇ. 8.27 ಮತ್ತು ಎಲೆಕ್ಟ್ರಿಕ್ ಕಾರುಗಳು (EV) ಶೇ. 7.75 ರಷ್ಟು ಮಾರುಕಟ್ಟೆ ಪಾಲನ್ನು ಪಡೆದುಕೊಂಡಿವೆ. ಜೂನ್ ತಿಂಗಳೊಂದರಲ್ಲೇ ದಾಖಲೆಯ 31,823 ಎಲೆಕ್ಟ್ರಿಕ್ ಕಾರುಗಳು ಮಾರಾಟವಾಗಿವೆ.
  • ಗ್ರಾಮೀಣ ಮಾರುಕಟ್ಟೆ: ವಿಶೇಷವೆಂದರೆ, ನಗರ ಪ್ರದೇಶಗಳಿಗಿಂತ (ಶೇ. 24.67) ಗ್ರಾಮೀಣ ಭಾಗದಲ್ಲಿ ಕಾರುಗಳ ಮಾರಾಟ ಶೇ. 35.09 ರಷ್ಟು ವೇಗವಾಗಿ ವೃದ್ಧಿಸಿದೆ.

ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಮಾರುಕಟ್ಟೆ

  • ದ್ವಿಚಕ್ರ ವಾಹನಗಳು (Two-Wheelers): ಜೂನ್‌ನಲ್ಲಿ ಒಟ್ಟು 18,28,458 ಟೂ-ವೀಲರ್‌ಗಳು ಮಾರಾಟವಾಗಿದ್ದು, ಶೇ. 21.22 ರಷ್ಟು ವಾರ್ಷಿಕ ಪ್ರಗತಿ ಕಂಡಿದೆ. ಇದೇ ಮೊದಲ ಬಾರಿಗೆ ಇವಿ ಟೂ-ವೀಲರ್‌ಗಳ ಪಾಲು ಶೇ. 10 ರ ಗಡಿ ದಾಟಿ ಶೇ. 10.60 ಕ್ಕೆ ತಲುಪಿದೆ. ಹೀಗಿದ್ದರೂ, ಮಾನ್ಸೂನ್ ಮಳೆಯ ವಿಳಂಬದ ಕಾರಣ ಗ್ರಾಮೀಣ ಭಾಗದಲ್ಲಿ ಮೇ ತಿಂಗಳಿಗೆ ಹೋಲಿಸಿದರೆ ಮಾರಾಟದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.
  • ತ್ರಿಚಕ್ರ ವಾಹನಗಳು (Three-Wheelers): ಒಟ್ಟು 1,20,889 ಆಟೋಗಳು ಮಾರಾಟವಾಗಿದ್ದು (ಶೇ. 16.20 ಏರಿಕೆ), ಈ ವಿಭಾಗದಲ್ಲಿ ಎಲೆಕ್ಟ್ರಿಕ್ ಆಟೋಗಳ ಆರ್ಭಟ ಮುಂದುವರಿದಿದೆ. ಮಾರಾಟವಾದ ಆಟೋಗಳಲ್ಲಿ ಶೇ. 64.08 ರಷ್ಟು ಇವಿ ಆಟೋಗಳೇ ಆಗಿವೆ.

ಇದನ್ನೂ ಓದಿ: ಒಂದು ಫೋನ್​ನಿಂದ ಮತ್ತೊಂದು ಫೋನ್​ಗೆ ಚಾರ್ಜ್ ಮಾಡುವುದು ಹೇಗೆ? ಇಲ್ಲಿದೆ ಕೆಲ ವಿಧಾನಗಳು

ಕಮರ್ಷಿಯಲ್ ವಾಹನಗಳು ಮತ್ತು ಟ್ರ್ಯಾಕ್ಟರ್‌ಗಳು

  • ವಾಣಿಜ್ಯ ವಾಹನಗಳು (Commercial Vehicles): ಸರಕು ಸಾಗಣೆ ಮತ್ತು ಇ-ಕಾಮರ್ಸ್ ಉದ್ಯಮದ ಬೇಡಿಕೆಯಿಂದಾಗಿ ಕಮರ್ಷಿಯಲ್ ವಾಹನಗಳ ಮಾರಾಟ ಶೇ. 16.88 ರಷ್ಟು ಹೆಚ್ಚಳವಾಗಿ 90,972 ಯುನಿಟ್‌ಗಳನ್ನು ತಲುಪಿದೆ. ಇವಿ ವಾಣಿಜ್ಯ ವಾಹನಗಳ ಪಾಲು ಕೂಡ ಶೇ. 3.53 ರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದೆ.
  • ಟ್ರ್ಯಾಕ್ಟರ್‌ಗಳು: ಮುಂಗಾರು ಪೂರ್ವ ಕೃಷಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಮಾರಾಟ ಶೇ. 25.31 ರಷ್ಟು ವೃದ್ಧಿಸಿ 1,00,818 ಯುನಿಟ್‌ಗಳಾಗಿವೆ. ಇದು ಇತಿಹಾಸದಲ್ಲೇ ಎರಡನೇ ಅತ್ಯುತ್ತಮ ಜೂನ್ ಮಾರಾಟವಾಗಿದೆ.

ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದ್ದರೂ, ಡೀಲರ್‌ಗಳ ಬಳಿ ಕಾರುಗಳ ದಾಸ್ತಾನು (Inventory) 32 ರಿಂದ 34 ದಿನಗಳಿಗೆ ಏರಿಕೆಯಾಗಿದೆ. ಮುಂಬರುವ ಹಬ್ಬದ ದಿನಗಳಲ್ಲಿ (ಗಣೇಶ ಚತುರ್ಥಿ, ಓಣಂ) ಮತ್ತಷ್ಟು ಪ್ರಗತಿಯನ್ನು ಉದ್ಯಮ ನಿರೀಕ್ಷಿಸುತ್ತಿದ್ದು, ಶೇ. 66 ಕ್ಕೂ ಹೆಚ್ಚು ಡೀಲರ್‌ಗಳು ಮುಂದಿನ ಮೂರು ತಿಂಗಳುಗಳಲ್ಲಿ ಸಕಾರಾತ್ಮಕ ಬೆಳವಣಿಗೆಯ ಭರವಸೆ ಹೊಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version