ಸೋಲರಿಯದ ಸರದಾರರು: 37 ಪಂದ್ಯಗಳ ‘ಸ್ಪೇನ್’ ಸಾಮ್ರಾಜ್ಯ! – Kannada News | Spain’s Unstoppable 37 Match Invincible Strea
ಫುಟ್ಬಾಲ್ ಕೇವಲ ಒಂದು ಆಟವಲ್ಲ, ಅದೊಂದು ನಿರಂತರ ಹೋರಾಟ. ಅಲ್ಲಿ ದಾಖಲೆಗಳು ಹುಟ್ಟುವುದೇ ಮುರಿಯುವುದಕ್ಕೆ. ಆದರೆ, ಕೆಲವು ದಾಖಲೆಗಳು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿಯುತ್ತವೆ. ಅಂತಹದೊಂದು ಅಪರೂಪದ ಇತಿಹಾಸಕ್ಕೆ ಈಗ ಸ್ಪೇನ್ ಫುಟ್ಬಾಲ್ ತಂಡ ಸಾಕ್ಷಿಯಾಗಿದೆ. ಕೋಚ್ ಲುಯಿಸ್ ಡಿ ಲಾ ಫ್ಯುಯೆಂಟೆ ಅವರ ಸಾರಥ್ಯದಲ್ಲಿ ಕಲಾತ್ಮಕ ಫುಟ್ಬಾಲ್ ಆಡುತ್ತಿರುವ ಸ್ಪೇನ್, ಸತತ 37 ಪಂದ್ಯಗಳಲ್ಲಿ ಸೋಲನ್ನೇ ಕಾಣದೆ ಜಾಗತಿಕ ಫುಟ್ಬಾಲ್ ಜಗತ್ತನ್ನು ತನ್ನ ಅಂಗೈಯಲ್ಲಿಟ್ಟುಕೊಂಡಿದೆ. ಅಂದರೆ ಸ್ಪೇನ್ ತಂಡವು ಕಳೆದ 37 ಪಂದ್ಯಗಳಲ್ಲಿ ಸೋಲನ್ನೇ ಕಂಡಿಲ್ಲ!…