ಜಿಬಿಎ ಸ್ಟಿಕ್ಕರ್ ಭೀತಿಗೆ ಗಲ್ಲಿ ಸೇರಿದ ಕಾರುಗಳು: ಕುಮಾರಸ್ವಾಮಿ ಲೇಔಟ್ನಲ್ಲಿ ಅಕ್ರಮ ಪಾರ್ಕಿಂಗ್ ಹಾವಳಿ – Kannada News | Residential Parking Crisis: Bangalore GBA Drive Pushes Abandoned Vehicles to Lanes
ಬೆಂಗಳೂರು, ಜು.15: ಸಿಲಿಕಾನ್ ಸಿಟಿಯಲ್ಲಿ ಅನಾಥ ವಾಹನಗಳು ಹಾಗೂ ದೀರ್ಘಕಾಲದಿಂದ ರಸ್ತೆ ಬದಿಯಲ್ಲಿ ನಿಲ್ಲಿಸಿರುವ ವಾಹನಗಳ ವಿರುದ್ಧ ಜಿಬಿಎ ಸಮರ ಸಾರಿದೆ. ಪ್ರಮುಖ ರಸ್ತೆಗಳಲ್ಲಿ ಇಂತಹ ವಾಹನಗಳಿಗೆ ಸ್ಟಿಕ್ಕರ್ ಅಂಟಿಸಿ, ಟೋಯಿಂಗ್ ಮಾಡುವ ಮೂಲಕ ತೆರವು ಕಾರ್ಯಾಚರಣೆಯ ಕಠಿಣ ಎಚ್ಚರಿಕೆ ನೀಡುತ್ತಿದೆ. ಆದರೆ, ಜಿಬಿಎ ಕೈಗೊಂಡಿರುವ ಈ ಕ್ರಮದ ಬೆನ್ನಲ್ಲೇ ನಗರದಲ್ಲಿ ಹೊಸದೊಂದು ತಲೆನೋವು ಶುರುವಾಗಿದೆ. ಮುಖ್ಯ ರಸ್ತೆಗಳಲ್ಲಿ ಜಿಬಿಎ ಕಣ್ಣು ತಪ್ಪಿಸಲು ವಾಹನ ಮಾಲೀಕರು ಈಗ ವಸತಿ ಪ್ರದೇಶಗಳ ಗಲ್ಲಿ-ಗಲ್ಲಿಗಳನ್ನೇ ತಮ್ಮ ಹೊಸ ಪಾರ್ಕಿಂಗ್ ತಾಣಗಳನ್ನಾಗಿ…