ಜಿಬಿಎ ಸ್ಟಿಕ್ಕರ್ ಭೀತಿಗೆ ಗಲ್ಲಿ ಸೇರಿದ ಕಾರುಗಳು: ಕುಮಾರಸ್ವಾಮಿ ಲೇಔಟ್‌ನಲ್ಲಿ ಅಕ್ರಮ ಪಾರ್ಕಿಂಗ್ ಹಾವಳಿ – Kannada News | Residential Parking Crisis: Bangalore GBA Drive Pushes Abandoned Vehicles to Lanes

ಬೆಂಗಳೂರು, ಜು.15: ಸಿಲಿಕಾನ್ ಸಿಟಿಯಲ್ಲಿ ಅನಾಥ ವಾಹನಗಳು ಹಾಗೂ ದೀರ್ಘಕಾಲದಿಂದ ರಸ್ತೆ ಬದಿಯಲ್ಲಿ ನಿಲ್ಲಿಸಿರುವ ವಾಹನಗಳ ವಿರುದ್ಧ ಜಿಬಿಎ ಸಮರ ಸಾರಿದೆ. ಪ್ರಮುಖ ರಸ್ತೆಗಳಲ್ಲಿ ಇಂತಹ ವಾಹನಗಳಿಗೆ ಸ್ಟಿಕ್ಕರ್ ಅಂಟಿಸಿ, ಟೋಯಿಂಗ್ ಮಾಡುವ ಮೂಲಕ ತೆರವು ಕಾರ್ಯಾಚರಣೆಯ ಕಠಿಣ ಎಚ್ಚರಿಕೆ ನೀಡುತ್ತಿದೆ. ಆದರೆ, ಜಿಬಿಎ ಕೈಗೊಂಡಿರುವ ಈ ಕ್ರಮದ ಬೆನ್ನಲ್ಲೇ ನಗರದಲ್ಲಿ ಹೊಸದೊಂದು ತಲೆನೋವು ಶುರುವಾಗಿದೆ. ಮುಖ್ಯ ರಸ್ತೆಗಳಲ್ಲಿ ಜಿಬಿಎ ಕಣ್ಣು ತಪ್ಪಿಸಲು ವಾಹನ ಮಾಲೀಕರು ಈಗ ವಸತಿ ಪ್ರದೇಶಗಳ ಗಲ್ಲಿ-ಗಲ್ಲಿಗಳನ್ನೇ ತಮ್ಮ ಹೊಸ ಪಾರ್ಕಿಂಗ್ ತಾಣಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಮೊದಲ ಹಂತದಲ್ಲಿರುವ ಲವಕುಶ ಪಾರ್ಕ್ ಪಕ್ಕದ ರಸ್ತೆ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಇಲ್ಲಿನ ರಸ್ತೆಯ ಎರಡೂ ಬದಿಗಳಲ್ಲೂ ಸಾಲು ಸಾಲು ಕಾರುಗಳು ನಿಂತಿದ್ದು, ಇಡೀ ರಸ್ತೆಯೇ ಪಾರ್ಕಿಂಗ್ ಲಾಟ್‌ನಂತೆ ಮಾರ್ಪಟ್ಟಿದೆ. ಆಶ್ಚರ್ಯದ ಸಂಗತಿ ಎಂದರೆ, ಈ ವಾಹನಗಳಲ್ಲಿ ಬಹುತೇಕವು ಸ್ಥಳೀಯ ನಿವಾಸಿಗಳದ್ದಲ್ಲ, ಬೇರೆ ಪ್ರದೇಶದ ವಾಹನ ಮಾಲೀಕರು ಜಿಬಿಎಗೆ ಹೆದರಿ ತಮ್ಮ ಕಾರುಗಳನ್ನು ಇಲ್ಲಿ ದಿನಗಟ್ಟಲೆ, ವಾರಗಟ್ಟಲೆ ನಿಲ್ಲಿಸಿ ಹೋಗುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಗಲ್ಲಿಗಳ ರಸ್ತೆಯಲ್ಲಿ ಅನಿಯಂತ್ರಿತವಾಗಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಸಾರ್ವಜನಿಕರಿಗೆ ಓಡಾಡುವುದೇ ಕಷ್ಟಕರವಾಗಿದೆ. ಕಿರಿದಾದ ಗಲ್ಲಿಗಳಲ್ಲಿ ಎರಡು ವಾಹನಗಳು ಎದುರು ಬಂದರೆ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುತ್ತಿದೆ. ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಹಾಗೂ ಅಗ್ನಿಶಾಮಕ ವಾಹನಗಳು ಕೂಡ ಸಾಗಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ರಸ್ತೆ ಸ್ವಚ್ಛಗೊಳಿಸಲು ಬರುವ ಜಿಬಿಎ ಸಿಬ್ಬಂದಿಗೂ ಈ ಸಾಲು ಸಾಲು ವಾಹನಗಳ ಕಾರಣದಿಂದ ಸ್ವಚ್ಛತಾ ಕಾರ್ಯ ನಡೆಸಲು ಸಾಧ್ಯವಾಗುತ್ತಿಲ್ಲ. ವಾಹನಗಳ ಕೆಳಗೆ ಹಾಗೂ ಮಧ್ಯೆ ಕಸದ ರಾಶಿ ಬೀಳುತ್ತಿದ್ದು, ಇಡೀ ಪ್ರದೇಶ ದುರ್ವಾಸನೆಯಿಂದ ನರಳುತ್ತಿದೆ. ಈ ಅಕ್ರಮ ಪಾರ್ಕಿಂಗ್ ಸಮಸ್ಯೆ ಕೇವಲ ಸಂಚಾರ ಮತ್ತು ಸ್ವಚ್ಛತೆಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಸ್ಥಳೀಯರ ಭದ್ರತೆಗೂ ಕಂಟಕ ತಂದಿದೆ. ರಾತ್ರಿ ವೇಳೆ ಕತ್ತಲಾಗುತ್ತಿದ್ದಂತೆ ಕೆಲವರು ಈ ವಾಹನಗಳ ಮರೆಯಲ್ಲಿ ನಿಂತು ಮದ್ಯಪಾನ ಮಾಡುತ್ತಿದ್ದು, ಖಾಲಿ ಬಾಟಲಿಗಳನ್ನು ಅಲ್ಲಿಯೇ ಬಿಸಾಡಿ ಹೋಗುತ್ತಿದ್ದಾರೆ. ಇದರಿಂದಾಗಿ ಮಹಿಳೆಯರು ಹಾಗೂ ಮಕ್ಕಳು ರಾತ್ರಿ ವೇಳೆ ಈ ರಸ್ತೆಗಳಲ್ಲಿ ಓಡಾಡಲು ಭಯಪಡುವಂತಾಗಿದೆ.

ಇದನ್ನೂ ಓದಿ: ಫುಟ್​ಪಾತ್ ಒತ್ತುವರಿ, ಅನಾಥ ವಾಹನಗಳ ತೆರವು ಬೆನ್ನಲ್ಲೇ ಮತ್ತೊಂದು ಅಭಿಯಾನಕ್ಕೆ ಬೆಂಗಳೂರು ಸಿದ್ಧ! ಆಗಸ್ಟ್​ 1ರಿಂದ ಕ್ಲೀನಿಂಗ್

ಈ ಗಂಭೀರ ಸಮಸ್ಯೆಯ ಕುರಿತು ಸ್ಥಳೀಯ ನಿವಾಸಿಗಳು ಹಲವು ಬಾರಿ ಜಿಬಿಎ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎನ್ನುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮುಖ್ಯ ರಸ್ತೆಗಳಲ್ಲಿ ಮಾತ್ರ ಕಾರ್ಯಾಚರಣೆ ನಡೆಸಿದರೆ ಸಾಲದು, ವಸತಿ ಪ್ರದೇಶಗಳ ಗಲ್ಲಿಗಳಲ್ಲಿ ಶಾಶ್ವತವಾಗಿ ನಿಲ್ಲಿಸಿರುವ ಇಂತಹ ವಾಹನಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಕಡಕ್ಕಾಗಿ ಒತ್ತಾಯಿಸಿದ್ದಾರೆ. ಮುಖ್ಯ ರಸ್ತೆಯಿಂದ ಗಲ್ಲಿಗೆ ಶಿಫ್ಟ್ ಆದ ಈ ಹೊಸ ಪಾರ್ಕಿಂಗ್ ಟ್ರೆಂಡ್‌ಗೆ ಜಿಬಿಎ ಬ್ರೇಕ್ ಹಾಕುತ್ತಾ? ಅಥವಾ ಲೇಔಟ್‌ಗಳು ಹೀಗೆಯೇ ಅಕ್ರಮ ಪಾರ್ಕಿಂಗ್ ಅಡ್ಡೆಗಳಾಗಿ ಉಳಿಯುತ್ತವಾ? ಎಂಬುದನ್ನು ಅಧಿಕಾರಿಗಳೇ ಉತ್ತರಿಸಬೇಕಿದೆ.

ವರದಿ: ನಟರಾಜ್ ಬೆಂಗಳೂರು

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

12 ವರ್ಷಗಳ ಅಜೇಯ ನಾಗಾಲೋಟಕ್ಕೆ ಟೀಮ್ ಇಂಡಿಯಾ ಬ್ರೇಕ್! – Kannada News | India Shatters England’s 12 Year Edgbaston Streak

ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಮ್ಯಾಚ್​ನಲ್ಲೇ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್ ಸ್ಡೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 258 ರನ್ ಕಲೆಹಾಕಿತು. ಈ ಗುರಿಯನ್ನು ಟೀಮ್ ಇಂಡಿಯಾ 45.2 ಓವರ್​ಗಳಲ್ಲಿ ಚೇಸ್ ಮಾಡಿ 6 ವಿಕೆಟ್​ಗಳ ಗೆಲುವು ದಾಖಲಿಸಿದೆ.

  • ಇಂಗ್ಲೆಂಡ್: 258/10 (47.5 ಓವರ್‌ಗಳು) – ಜೋ ರೂಟ್ 76*, ಲಿಯಾಮ್ ಡಾಸನ್ 68; ಅಕ್ಷರ್ ಪಟೇಲ್ 4/62.
  •  ಭಾರತ: 262/4 (45.2 ಓವರ್‌ಗಳು) – ಶುಬ್ಮನ್ ಗಿಲ್ 80, ಅಕ್ಷರ್ ಪಟೇಲ್ 57*, ವಾಷಿಂಗ್ಟನ್ ಸುಂದರ್ 52*.

ಅಜೇಯ ನಾಗಾಲೋಟಕ್ಕೆ ಬ್ರೇಕ್!

ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಇಂಗ್ಲೆಂಡ್ ತಂಡ ಕೊನೆಯ ಬಾರಿಗೆ ಏಕದಿನ ಪಂದ್ಯದಲ್ಲಿ ಸೋತಿದ್ದು 2014 ರ ಸೆಪ್ಟೆಂಬರ್ 2 ರಂದು. ಅಂದು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡವೇ ಇಂಗ್ಲೆಂಡ್ ತಂಡವನ್ನು ಮಣಿಸಿತ್ತು. ಆ ಬಳಿಕ ಕಳೆದ 12 ವರ್ಷಗಳಲ್ಲಿ ಇಲ್ಲಿ ನಡೆದ ಸತತ 7 ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ಸೋಲಿಲ್ಲದ ಸರದಾರರಾಗಿ ಮುಂದುವರೆದಿದ್ದರು.

ಆದರೆ, ಇಂಗ್ಲೆಂಡ್‌ನ ಈ ಸುದೀರ್ಘ ವಿಜಯಯಾತ್ರೆಗೆ ಮತ್ತೆ ಬ್ರೇಕ್ ಹಾಕಲು ಮತ್ತೆ ಟೀಮ್ ಇಂಡಿಯಾವೇ ಬರಬೇಕಾಯಿತು. ಎಡ್ಜ್​ಬಾಸ್ಟನ್​ನಲ್ಲಿ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸುವ ಮೂಲಕ ಭಾರತ ಆಂಗ್ಲರ 12 ವರ್ಷಗಳ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದೆ.

ಸತತ 6ನೇ ಗೆಲುವು:

ಈ ಐತಿಹಾಸಿಕ ಜಯದೊಂದಿಗೆ ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡವು ಸತತ 6ನೇ ಗೆಲುವು ದಾಖಲಿಸಿದಂತಾಗಿದೆ.

  • 1ನೇ ಗೆಲುವು (ಜುಲೈ 12, 2022 – ಓವಲ್): ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ.
  • 2ನೇ ಗೆಲುವು (ಜುಲೈ 17, 2022 – ಮ್ಯಾಂಚೆಸ್ಟರ್): ರಿಷಭ್ ಪಂತ್ ಶತಕದ ನೆರವಿನಿಂದ ಭಾರತಕ್ಕೆ 5 ವಿಕೆಟ್‌ಗಳ ಜಯ.
  • 3ನೇ ಗೆಲುವು (ಅಕ್ಟೋಬರ್ 29, 2023 – ಲಕ್ನೋ): ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತಕ್ಕೆ 100 ರನ್‌ಗಳ ಬೃಹತ್ ಜಯ.
  • 4ನೇ ಗೆಲುವು (ಫೆಬ್ರವರಿ 2025 – ಇಂದೋರ್): ಚಾಂಪಿಯನ್ಸ್ ಟ್ರೋಫಿ ಸಿದ್ಧತಾ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ.
  • 5ನೇ ಗೆಲುವು (ಮಾರ್ಚ್ 2, 2025 – ರಾವಲ್ಪಿಂಡಿ): ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಗ್ರೂಪ್ ಹಂತದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಗೆಲುವು.
  • 6ನೇ ಗೆಲುವು (ಜುಲೈ 14, 2026 – ಎಡ್ಜ್‌ಬಾಸ್ಟನ್): ಪ್ರಸ್ತುತ ಸರಣಿಯ ಮೊದಲ ಪಂದ್ಯದಲ್ಲಿ ಶುಭ್​ಮನ್  ಗಿಲ್ ನಾಯಕತ್ವದಲ್ಲಿ ಭಾರತ ತಂಡ 6 ವಿಕೆಟ್‌ಗಳ ಐತಿಹಾಸಿಕ ಜಯ ಸಾಧಿಸಿದೆ.

ಭಾರತ ಪ್ಲೇಯಿಂಗ್ 11: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಸ್​ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್.

ಇದನ್ನೂ ಓದಿ: ಸಚಿನ್ ದಾಖಲೆ ಧೂಳೀಪಟ: ಕಿಂಗ್ ಕೊಹ್ಲಿ ಹೆಸರಿಗೆ ವಿಶ್ವ ದಾಖಲೆ

ಇಂಗ್ಲೆಂಡ್‌ ಪ್ಲೇಯಿಂಗ್ 11: ಜೇಕಬ್ ಬೆಥೆಲ್, ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಜೋಫ್ರಾ ಆರ್ಚರ್, ಲಿಯಾಮ್ ಡಾಸನ್, ಜೋಶ್ ಟಂಗ್, ಆದಿಲ್ ರಶೀದ್.

Source link

ಸಿಸಿಬಿ ಪೊಲೀಸರ ಸೋಗಿನಲ್ಲಿ ಜಿಮ್ ಟ್ರೈನರ್ ಅಪಹರಣ: 5 ಲಕ್ಷಕ್ಕೆ ಬೇಡಿಕೆ, ರೌಡಿಶೀಟರ್ ಸೇರಿ ಐವರ ಬಂಧನ – Kannada News | Fake CCB Police Kidnap Gym Trainer in Bengaluru, Demand Rs 5 Lakh; Rowdy Sheeter Among Five Arrested

ರೌಡಿಶೀಟರ್ ಸೇರಿ ಐವರ ಬಂಧನImage Credit source: tv9

ಬೆಂಗಳೂರು, ಜುಲೈ 15: ಬೆಂಗಳೂರು (Bengaluru) ನಗರದಲ್ಲಿ ಸಿಸಿಬಿ ಪೊಲೀಸರ (CCB Police) ಸೋಗಿನಲ್ಲಿ ಜಿಮ್ ಟ್ರೈನರ್‌ನನ್ನು ಅಪಹರಿಸಿ ಹಣ ವಸೂಲಿ ಮಾಡಲು ಯತ್ನಿಸಿದ್ದ ಗ್ಯಾಂಗ್‌ವೊಂದನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ರೌಡಿಶೀಟರ್ ತ್ರಿವೇಣ್ ಕುಮಾರ್ ಅಲಿಯಾಸ್ ತಿರುಮಲ ಸೇರಿದಂತೆ ಐವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಜಿಮ್ ಟ್ರೈನರ್ ಮಿಥುಲ್ ಆಟೋದಲ್ಲಿ ತೆರಳುತ್ತಿದ್ದ ವೇಳೆ, ‘ನಾವು ಸಿಸಿಬಿ ಪೊಲೀಸರು’ ಎಂದು ಪರಿಚಯಿಸಿಕೊಂಡ ಆರೋಪಿಗಳು ಅವರನ್ನು ಬಲವಂತವಾಗಿ ಕಾರಿಗೆ ಎಳೆದುಕೊಂಡು ಹೋಗಿದ್ದರು. ಬಳಿಕ, ‘500 ಕೆಜಿ ಗಾಂಜಾ ತರಿಸಿದ್ದೀಯಾ’ ಎಂದು ಬೆದರಿಸಿ, ಅವರ ಮೊಬೈಲ್ ಹಾಗೂ ಬ್ಯಾಗ್ ಕಸಿದುಕೊಂಡಿದ್ದರು.

ಪೊಲೀಸ್ ಠಾಣೆಯೊಳಕ್ಕೇ ಹೋಗಿ ಬಂದಿದ್ದ ಆರೋಪಿಗಳು!

ಇದಾದ ಬಳಿಕ, ಎಲ್‌ಎಸ್‌ಡಿ ಸ್ಟ್ರಿಪ್ಸ್ ಇಟ್ಟು ಫೋಟೋ ತೆಗೆದು, ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ನಾಟಕೀಯವಾಗಿ ಜೆ.ಪಿ.ನಗರ ಪೊಲೀಸ್ ಠಾಣೆ ಬಳಿ ಕಾರು ನಿಲ್ಲಿಸಿ, ಇಬ್ಬರು ಆರೋಪಿಗಳು ಠಾಣೆಯೊಳಗೆ ಹೋಗಿ ಬಂದು, ‘ಸಾಹೇಬರು ಬ್ಯುಸಿಯಾಗಿದ್ದಾರೆ’ ಎಂದು ಹೇಳುವ ಮೂಲಕ ತಮ್ಮನ್ನು ನಿಜವಾದ ಪೊಲೀಸ್ ಅಧಿಕಾರಿಗಳೆಂದು ನಂಬಿಸುವ ಪ್ರಯತ್ನ ಮಾಡಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ಸಂತ್ರಸ್ತನನ್ನು 4 ಗಂಟೆ ಕಾರಿನಲ್ಲಿ ಬೆಂಗಳೂರಿನ ವಿವಿಧೆಡೆ ಸುತ್ತಾಡಿಸಿದ್ದ ಆರೋಪಿಗಳು

ಆರೋಪಿಗಳು ಸುಮಾರು ನಾಲ್ಕು ಗಂಟೆಗಳ ಕಾಲ ಮಿಥುಲ್ ಅವರನ್ನು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಕಾರಿನಲ್ಲಿ ಸುತ್ತಾಡಿಸಿ, 5 ಲಕ್ಷ ರೂಪಾಯಿ ನೀಡದಿದ್ದರೆ ಡ್ರಗ್ಸ್ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಸಂಬಂಧ ಜೂನ್ 22ರಂದು ಶಂಕರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ವರ್ಗಾಯಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಪ್ರಕರಣ: ಐಪಿಎಸ್ ಅಧಿಕಾರಿ ಬಿ. ದಯಾನಂದ ವಿರುದ್ಧದ ಇಲಾಖಾ ತನಿಖೆ ಕೈಬಿಟ್ಟ ಸರ್ಕಾರ

ಬಂಧಿತರನ್ನು ರೌಡಿಶೀಟರ್ ತ್ರಿವೇಣ್ ಕುಮಾರ್ ಅಲಿಯಾಸ್ ತಿರುಮಲ, ರಂಜಿತ್ ರಾವ್, ನಮಿತ್, ಪ್ರೇಮ್ ಸಾಯಿ ಹಾಗೂ ಶಾಂತಕುಮಾರ್ ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಈ ಹಿಂದೆಯೂ ಕೊಲೆ, ಕೊಲೆಯತ್ನ, ದರೋಡೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡೇಟಿಂಗ್ ಆ್ಯಪ್ ಬಿಡಿ, ಸೂಪರ್ ಮಾರ್ಕೆಟ್‌ಗೆ ಹೋಗಿ, ಪಿಂಕ್ ಬಾಸ್ಕೆಟ್ ಹಿಡಿದರೆ ಸಾಕು ಸಿಗಲಿದ್ದಾರೆ ಲೈಫ್ ಪಾರ್ಟ್ನರ್ – Kannada News | Finland’s Pink Basket Dating: Find Love in Supermarkets, Ditch Apps

ಹೆಲ್ಸಿಂಕಿ, ಜುಲೈ 15: ಇಂದಿನ ರೀಲ್ಸ್ ಜಗತ್ತಿನಲ್ಲಿ ಬೇರೆ ಜೋಡಿಗಳನ್ನು ನೋಡಿ “ಇನ್ನೂ ನಮಗ್ಯಾರು ಸಂಗಾತಿ ಸಿಕ್ಕಿಲ್ವಲ್ಲಾ” ಎಂದು ಕೊರಗುವ ಸಿಂಗಲ್ಸ್‌ಗೆ ಫಿನ್‌ಲ್ಯಾಂಡ್ ದೇಶದ ದಿನಸಿ ಅಂಗಡಿಗಳು ಭರ್ಜರಿ ಆಫರ್ ನೀಡಿವೆ. ನೀವು ಪ್ರೀತಿ(Love)ಯನ್ನು ಹುಡುಕಲು ಯಾವುದೇ ಪಬ್, ಕ್ಲಬ್‌ಗಳಿಗೆ ಹೋಗಬೇಕಾಗಿಲ್ಲ ಅಥವಾ ಡೇಟಿಂಗ್ ಆ್ಯಪ್‌ಗಳಿಗೆ ಹಣ ಸುರಿಯಬೇಕಾಗಿಲ್ಲ, ಬದಲಿಗೆ ಹತ್ತಿರದ ಸೂಪರ್ ಮಾರ್ಕೆಟ್‌ಗೆ ಹೋಗಿ ಒಂದು ‘ಗುಲಾಬಿ ಬಣ್ಣದ ಬಾಸ್ಕೆಟ್’ ಹಿಡಿದು ಶಾಪಿಂಗ್ ಮಾಡಿದರೆ ಸಾಕು, ನಿಮ್ಮ ಒಂಟಿತನಕ್ಕೆ ಬ್ರೇಕ್ ಬೀಳುವುದು ಪಕ್ಕಾ. ಫಿನ್‌ಲ್ಯಾಂಡ್‌ನ ಅತಿ ದೊಡ್ಡ ಸೂಪರ್ ಮಾರ್ಕೆಟ್ ‘ಕೆ. ಸೂಪರ್ ಮಾರ್ಕೆಟ್’ ಮತ್ತು ‘ಎಸ್ ಸೂಪರ್ ಮಾರ್ಕೆಟ್’ ತಮ್ಮ ಮಳಿಗೆಗಳಲ್ಲಿ ಈ ವಿಶಿಷ್ಟ ಸೌಲಭ್ಯವನ್ನು ಪರಿಚಯಿಸಿವೆ.

ಏನಿದು ‘ಪಿಂಕ್ ಬಾಸ್ಕೆಟ್’ ರಹಸ್ಯ?
ಸಾಮಾನ್ಯವಾಗಿ ಸೂಪರ್ ಮಾರ್ಕೆಟ್‌ಗಳಲ್ಲಿ ಕಪ್ಪು, ನೀಲಿ ಅಥವಾ ಬೂದು ಬಣ್ಣದ ಶಾಪಿಂಗ್ ಬುಟ್ಟಿಗಳಿರುತ್ತವೆ. ಆದರೆ ಅವುಗಳ ಪಕ್ಕದಲ್ಲೇ ಈಗ ಪ್ರಕಾಶಮಾನವಾದ ‘ಗುಲಾಬಿ ಬಣ್ಣದ ಬುಟ್ಟಿಗಳನ್ನು’ ಇಡಲಾಗಿದೆ.

ಮಿಂಗಲ್ ಆಗಲು ಗ್ರೀನ್ ಸಿಗ್ನಲ್: ಯಾರೆಲ್ಲಾ ಸದ್ಯ ಸಿಂಗಲ್ ಆಗಿದ್ದು, ಹೊಸ ಸಂಗಾತಿಯನ್ನು ಭೇಟಿಯಾಗಲು ಮುಕ್ತವಾಗಿದ್ದಾರೋ ಅವರು ಮಾತ್ರ ಅಂಗಡಿಯೊಳಗಿರುವ ಈ ಪಿಂಕ್ ಬಾಸ್ಕೆಟ್ ಅನ್ನು ಆಯ್ದುಕೊಳ್ಳುತ್ತಾರೆ.

ಸೈಲೆಂಟ್ ಇಂಡಿಕೇಟರ್: ಈ ಗುಲಾಬಿ ಬಣ್ಣವು ಕಿರಾಣಿ ಅಂಗಡಿಯ ಕಾರಿಡಾರ್‌ಗಳಲ್ಲಿ ಚಲಿಸುವ ಇತರ ಸಿಂಗಲ್ಸ್‌ಗೆ “ನಾನು ನಿಮ್ಮೊಂದಿಗೆ ಮಾತನಾಡಲು ಸಿದ್ಧನಿದ್ದೇನೆ” ಎಂದು ನೀಡುವ ಸೂಕ್ಷ್ಮ ಸಂಕೇತವಾಗಿದೆ.

ಅಂಗಡಿಯಲ್ಲಿ ತರಕಾರಿ ಅಥವಾ ದಿನಸಿ ಖರೀದಿಸುತ್ತಾ ಇಬ್ಬರು ಪಿಂಕ್ ಬಾಸ್ಕೆಟ್ ಹೊಂದಿರುವವರು ಎದುರಾದಾಗ, ಯಾವುದೇ ಮುಜುಗರವಿಲ್ಲದೆ ಮಾತುಕತೆ ಆರಂಭಿಸಬಹುದು. ಪರಸ್ಪರ ಇಷ್ಟವಾದರೆ ಫೋನ್ ನಂಬರ್ ವಿನಿಮಯ ಮಾಡಿಕೊಂಡು ಪ್ರೇಮಕಥೆ ಮುಂದುವರಿಸಬಹುದು. ಈಗಾಗಲೇ ಹತ್ತಾರು ಜನ ಈ ಮೂಲಕ ತಮ್ಮ ‘ಸೋಲ್ ಮೇಟ್’ ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತಷ್ಟು ಓದಿ: Video: ಇದೇ ನೋಡಿ ತಾಯಿ ಪ್ರೀತಿ; ತನ್ನ ಕರುವನ್ನು ತೋರಿಸಲು ಮಾಲೀಕನನ್ನು ಕರೆದೊಯ್ದ ಹಸು

ಸೋಶಿಯಲ್ ಮೀಡಿಯಾದಲ್ಲಿ 1.5 ಕೋಟಿಗೂ ಹೆಚ್ಚು ವ್ಯೂಸ್
ರೋಯಾ ಫಾಕ್ಸ್ ಎಂಬ ಸೋಷಿಯಲ್ ಮೀಡಿಯಾ ಬಳಕೆದಾರರು ಫಿನ್‌ಲ್ಯಾಂಡ್‌ನ ದಿನಸಿ ಅಂಗಡಿಯೊಂದರಲ್ಲಿ ಪಿಂಕ್ ಬಾಸ್ಕೆಟ್ ಹಿಡಿದು ಮಾಡಿರುವ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಕ್ಲಿಪ್ ಬರೋಬ್ಬರಿ 15.5 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಹಾಗೂ 7 ಲಕ್ಷಕ್ಕೂ ಅಧಿಕ ಲೈಕ್‌ಗಳನ್ನು ಬಾಚಿಕೊಂಡಿದೆ.

ಇದನ್ನು ನೋಡಿದ ನೆಟ್ಟಿಗರು ಸಖತ್ ಮಜಾವಾಗಿ ಕಾಮೆಂಟ್ ಮಾಡುತ್ತಿದ್ದಾರೆ. “ನನ್ನ ನೆಚ್ಚಿನ ಬಣ್ಣ ಗುಲಾಬಿ, ಈ ನಿಯಮ ತಿಳಿಯದೆ ನಾನು ಈ ಬುಟ್ಟಿ ಹಿಡಿದಿದ್ದರೆ ಕಥೆ ಮುಗಿಯುತ್ತಿತ್ತು” ಎಂದು ಒಬ್ಬರು ಬರೆದರೆ, ಮತ್ತೊಬ್ಬ ಯುವತಿ ನಾನು ಅಮೆರಿಕದ ಹೂಸ್ಟನ್‌ನಲ್ಲೇ ನನ್ನ ಬುಟ್ಟಿಗೆ ಪಿಂಕ್ ಪೇಂಟ್ ಮಾಡಿಕೊಂಡು ತಿರುಗಾಡುತ್ತೇನೆ, ನನ್ನ ಭಾವಿ ಪತಿ ಫಿನ್‌ಲ್ಯಾಂಡ್‌ನಿಂದಲಾದರೂ ಬಂದು ಹಾಯ್ ಅನ್ನಲಿ ಎಂದು ತಮಾಷೆ ಮಾಡಿದ್ದಾರೆ.

ಫೀಚರಿಸ್ಟಿಕ್ ಮಾಹಿತಿ: ಕಮರ್ಷಿಯಲ್ ಗೆಲುವಿನ ಜೊತೆಗೆ ಹೊಸ ಟ್ರೆಂಡ್
ಈ ‘ಪಿಂಕ್ ಬಾಸ್ಕೆಟ್’ ಪರಿಕಲ್ಪನೆಯು ಕೇವಲ ಒಂಟಿ ಹೃದಯಗಳನ್ನು ಒಟ್ಟುಗೂಡಿಸುತ್ತಿಲ್ಲ, ಬದಲಾಗಿ ಸೂಪರ್ ಮಾರ್ಕೆಟ್‌ಗಳ ಪಾಲಿಗೆ ಬಿಜಿನೆಸ್ ಬೂಸ್ಟರ್ ಆಗಿ ಬದಲಾಗಿದೆ.

ವ್ಯಾಪಾರದಲ್ಲಿ ಭಾರಿ ವೃದ್ಧಿ: ತಮಗೆ ಇಷ್ಟವಾದ ಸಂಗಾತಿಯನ್ನು ನೋಡಲು ಅಥವಾ ಯಾರಾದರೂ ಬಂದು ಮಾತನಾಡಿಸಲಿ ಎಂಬ ಆಸೆಯಿಂದ ಯುವಕ-ಯುವತಿಯರು ಹೆಚ್ಚಿನ ಸಮಯ ಅಂಗಡಿಯಲ್ಲೇ ಕಳೆಯುತ್ತಿದ್ದಾರೆ. ಈ ನೆಪದಲ್ಲಿ ಸೂಪರ್ ಮಾರ್ಕೆಟ್‌ಗಳ ದಿನನಿತ್ಯದ ವ್ಯಾಪಾರ ದುಪ್ಪಟ್ಟಾಗಿದೆ.

ಯುರೋಪ್‌ನಾದ್ಯಂತ ಹೊಸ ಕ್ರೇಜ್: ಕೇವಲ ಫಿನ್‌ಲ್ಯಾಂಡ್ ಮಾತ್ರವಲ್ಲದೆ, ಜರ್ಮನಿ, ಸ್ಪೇನ್ ಮತ್ತು ನೆದರ್ಲ್ಯಾಂಡ್ಸ್‌ನಂತಹ ಹಲವು ಯುರೋಪಿಯನ್ ದೇಶಗಳ ದಿನಸಿ ಅಂಗಡಿಗಳೂ ಈಗ ಅನಿರೀಕ್ಷಿತ ಡೇಟಿಂಗ್ ತಾಣಗಳಾಗಿ ಮಾರ್ಪಡುತ್ತಿವೆ. ಕೃತಕವಾದ ಆನ್‌ಲೈನ್ ಜಗತ್ತನ್ನು ಬಿಟ್ಟು, ನೈಜ ಜಗತ್ತಿನಲ್ಲಿ ಮುಖಾಮುಖಿ ಭೇಟಿಯಾಗಲು ಬಯಸುವ ಇಂದಿನ ತಲೆಮಾರಿಗೆ ಈ ಸೂಪರ್ ಮಾರ್ಕೆಟ್ ಡೇಟಿಂಗ್ ಅತ್ಯಂತ ಸುರಕ್ಷಿತವಾಗಿ ಕಾಣಿಸುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ರಾಜಕುಮಾರ್ ನನ್ನ ವಸ್ತು, ನನ್ನವರಾಗೇ ಉಳಿದರು’; ಅಣ್ಣಾವ್ರ ಬಗ್ಗೆ ಪಾರ್ವತಮ್ಮ ಆಡಿದ್ದ ಮಾತಿದು – Kannada News | Rajkumar is my treasure, no one can take him away: Parvathamma Rajkumar emotional throwback video wins hearts

ಕನ್ನಡ ಚಿತ್ರರಂಗದ ಧ್ರುವತಾರೆ ಡಾ. ರಾಜ್‌ಕುಮಾರ್ ಮತ್ತು ಅವರ ಧರ್ಮಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ಅವರ ದಾಂಪತ್ಯ ಇಡೀ ಚಿತ್ರರಂಗಕ್ಕೇ ಒಂದು ಮಾದರಿ. ಅಣ್ಣಾವ್ರ ಪ್ರತಿಯೊಂದು ಯಶಸ್ಸಿನ ಹಿಂದೆಯೂ ಪಾರ್ವತಮ್ಮ ಅವರ ಬೆಂಬಲ ಮತ್ತು ಅಪ್ರತಿಮ ಶ್ರಮವಿತ್ತು. ಚಿತ್ರ ನಿರ್ಮಾಣದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಲೇ ರಾಜ್ ಕುಟುಂಬವನ್ನು ಮುನ್ನಡೆಸಿದ್ದ ಪಾರ್ವತಮ್ಮ ಅವರು, ತಮ್ಮ ಪತಿಯ ಬಗ್ಗೆ ಆಡಿದ್ದ ಅಪರೂಪದ ಹಾಗೂ ಭಾವುಕ ಮಾತುಗಳ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ.

53 ವರ್ಷಗಳ ಅಪರೂಪದ ದಾಂಪತ್ಯ ಬದುಕು

ಆ ಸಂದರ್ಶನದಲ್ಲಿ ಪಾರ್ವತಮ್ಮ ಅವರು ಅಣ್ಣಾವ್ರೊಂದಿಗಿನ ತಮ್ಮ ಸುದೀರ್ಘ ಬಾಂಧವ್ಯವನ್ನು ನೆನಪಿಸಿಕೊಂಡು ಅತ್ಯಂತ ಭಾವುಕರಾಗಿ ಮಾತನಾಡಿದ್ದರು. ‘ನಾನು ಮದುವೆಯಾಗಿ ಬಂದ ದಿನದಿಂದ ಹಿಡಿದು ಅವರು ಸಾಯುವವರೆಗೂ ಅವರ ನಡವಳಿಕೆಯಲ್ಲಿ ನಾನು ಯಾವುದೇ ರೀತಿಯ ಬದಲಾವಣೆಯನ್ನು ಕಾಣಲಿಲ್ಲ. ನನ್ನ ಮೇಲೆ ಅವರಿಗೆ ಅಪಾರವಾದ ಪ್ರೀತಿ ಇತ್ತು. ಹಾಗೆಯೇ ನನಗೂ ಅವರ ಮೇಲೆ ಅಷ್ಟೇ ಅಗಾಧವಾದ ಪ್ರೇಮವಿತ್ತು. ಅದೇ ನಂಬಿಕೆಯಲ್ಲಿ ನಾನು 53 ವರ್ಷಗಳ ಕಾಲ ಅವರ ಜೊತೆ ಹಾಗೇ ಬದುಕಿಬಿಟ್ಟೆ’ ಎಂದು ದಾಂಪತ್ಯದ ಸುಂದರ ದಿನಗಳನ್ನು ನೆನದಿದ್ದಾರೆ.

‘ಅವರನ್ನು ಯಾರೂ ಕಿತ್ಕೊಳ್ಳೋಕೆ ಆಗಲ್ಲ’

ಮಾತು ಮುಂದುವರಿಸಿದ ಪಾರ್ವತಮ್ಮ ಅವರು, ಅಣ್ಣಾವ್ರು ತಮಗೆ ಎಷ್ಟು ಮುಖ್ಯ ಎಂಬುದನ್ನು ಮಾರ್ಮಿಕವಾಗಿ ವಿವರಿಸಿದ್ದಾರೆ. ‘ರಾಜಕುಮಾರ್ ನನ್ನ ವಸ್ತು. ಅದನ್ನು ನನ್ನಿಂದ ಯಾರೂ ಕಿತ್ತುಕೊಳ್ಳಲು ಆಗಲ್ಲ. ನನ್ನದು ಕೊನೆವರೆಗೂ ನನ್ನದಾಗಿಯೇ ಉಳಿದುಕೊಂಡಿತ್ತು’ ಎಂದು ಅತ್ಯಂತ ಹೆಮ್ಮೆಯಿಂದ ನುಡಿದಿದ್ದಾರೆ.

ಇದನ್ನೂ ಓದಿ: ರಾಜ್​​ಕುಮಾರ್ ಹಾಗೂ ಪಾರ್ವತಮ್ಮಗೆ ಇಷ್ಟ ಆಗಿತ್ತು ಆ ಒಂದು ಸಿನಿಮಾ

ಈ ಅಪರೂಪದ ವಿಡಿಯೋ ಅಣ್ಣಾವ್ರ ಅಭಿಮಾನಿಗಳ ಕಣ್ಣಾಲಿಗಳನ್ನು ತುಂಬಿ ಬರುವಂತೆ ಮಾಡಿದ್ದು, ಆದರ್ಶ ದಂಪತಿಗಳಿಗೆ ಇವರಿಗಿಂತ ದೊಡ್ಡ ಉದಾಹರಣೆ ಸಿಗಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 10:45 am, Wed, 15 July 26

Source link

ಸ್ಮಶಾನವಿಲ್ಲದೆ ನಡುರಸ್ತೆಯಲ್ಲೇ ಶವಸಂಸ್ಕಾರಕ್ಕೆ ಮುಂದಾದ ಗ್ರಾಮಸ್ಥರು!

ಗದಗ, ಜುಲೈ 15: ಜಿಲ್ಲೆಯ ಗದಗ ತಾಲೂಕಿನ ಕಣವಿ ಹೊಸೂರು ಗ್ರಾಮದಲ್ಲಿ ಸ್ಮಶಾನವಿಲ್ಲದ ಕಾರಣ, ಮೃತ ಮಹಿಳೆಯ ಅಂತ್ಯಸಂಸ್ಕಾರವನ್ನು ನಡುರಸ್ತೆಯಲ್ಲೇ ಮಾಡಲು ಗ್ರಾಮಸ್ಥರು ಸಿದ್ಧತೆ ನಡೆಸಿ ಆಕ್ರೋಶ ಹೊರಹಾಕಿದ ಘಟನೆ ನಡೆದಿದೆ. ಅನಾರೋಗ್ಯದಿಂದ ಮೃತಪಟ್ಟ ಬಸವಣ್ಣೆಮ್ಮ (46) ಎಂಬುವವರ ಶವಸಂಸ್ಕಾರಕ್ಕೆ ಜಾಗವಿಲ್ಲದೆ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯವರೆಗೆ ರೈತರೊಬ್ಬರ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತಿತ್ತು. ಆದರೆ, ಈಗ ಜಮೀನಿನ ಮಾಲೀಕರು ಅದಕ್ಕೆ ನಿರಾಕರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಮದ ಮಧ್ಯಭಾಗದ ರಸ್ತೆಯಲ್ಲೇ ಕಟ್ಟಿಗೆ ಜೋಡಿಸಿ ಅಂತ್ಯಕ್ರಿಯೆಗೆ ಮುಂದಾಗಿದ್ದಾರೆ.

ಕ್ಷೇತ್ರದ ಶಾಸಕ ಎಚ್.ಕೆ. ಪಾಟೀಲ್ ಹಾಗೂ ತಹಶೀಲ್ದಾರರಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದ ಜನ, ಜಿಲ್ಲಾಡಳಿತ ತಕ್ಷಣವೇ ಸ್ಮಶಾನಕ್ಕೆ ಜಾಗ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

India UK Trade Deal: ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ ಇಂದಿನಿಂದ ಜಾರಿ: ಸಾಮಾನ್ಯ ಜನರಿಗೆ ಹಬ್ಬ, ಕಾರು, ವಿಸ್ಕಿ, ಚಾಕೊಲೇಟ್ ಭಾರಿ ಅಗ್ಗ – Kannada News | India UK FTA Live: Cars, Whisky, Chocolates Cheaper Now, Big Savings for Consumers

ನವದೆಹಲಿ, ಜುಲೈ 15: ಭಾರತ ಮತ್ತು ಯುನೈಟೆಡ್ ಕಿಂಗ್​ಡಮ್(ಯುಕೆ) ನಡುವಿನ ಐತಿಹಾಸಿಕ ‘ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ’ ಇಂದಿನಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. 2030ರ ವೇಳೆಗೆ ಉಭಯ ದೇಶಗಳ ನಡುವಿನ ವಾಣಿಜ್ಯ ವಹಿವಾಟನ್ನು ಬರೋಬ್ಬರಿ 100 ಬಿಲಿಯನ್ ಡಾಲರ್​ಗೆ ಹೆಚ್ಚಿಸುವ ಬೃಹತ್ ಗುರಿಯನ್ನು ಈ ಒಪ್ಪಂದ ಹೊಂದಿದೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ(Narendra Modi) ಲಂಡನ್​​ಗೆ ಭೇಟಿ ನೀಡಿದ್ದಾಗ ಈ ಮಹತ್ವದ ಒಪ್ಪಂದಕ್ಕೆ ಅಂತಿಮ ಮುದ್ರೆ ಬಿದ್ದಿತ್ತು. ಈ ಒಪ್ಪಂದದ ಅನ್ವಯ, ಬ್ರಿಟನ್​ನಿಂದ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುವ ಪ್ರೀಮಿಯಂ ಕಾರುಗಳು, ಐಷಾರಾಮಿ ಚಾಕೊಲೇಟ್​ಗಳು ಹಾಗೂ ಸ್ಕಾಚ್ ವಿಸ್ಕಿಗಳ ಮೇಲಿನ ಆಮದು ಸುಂಕವನ್ನು ಗಣನೀಯವಾಗಿ ಕಡಿತಗೊಳಿಸಲಾಗುತ್ತಿದ್ದು, ಇವುಗಳ ಬೆಲೆ ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಾಣಲಿವೆ.

ತೆರಿಗೆಯಲ್ಲಿ ಭಾರಿ ಕಡಿತ: ಗ್ರಾಹಕರ ಜೇಬಿಗೆ ಭಾರಿ ಉಳಿತಾಯ

ಸಾಮಾನ್ಯವಾಗಿ ವಿದೇಶಿ ಬ್ರಾಂಡ್‌ಗಳ ಕಾರು ಅಥವಾ ಬಿಸ್ಕತ್ತು, ಚಾಕೊಲೇಟ್‌ಗಳನ್ನು ಖರೀದಿಸುವಾಗ ಭಾರತೀಯರು ದುಬಾರಿ ತೆರಿಗೆಯನ್ನು ಪಾವತಿಸಬೇಕಾಗಿತ್ತು. ಆದರೆ ಇಂದಿನಿಂದ ಈ ಹೊರೆ ಕ್ರಮೇಣ ಕಡಿಮೆಯಾಗಲಿದೆ:

ಬ್ರಿಟಿಷ್ ಐಷಾರಾಮಿ ಕಾರುಗಳು: ಇದುವರೆಗೆ ಬ್ರಿಟನ್‌ನಿಂದ ಆಮದು ಮಾಡಿಕೊಳ್ಳುವ ಪ್ರೀಮಿಯಂ ಕಾರುಗಳ ಮೇಲೆ ಬರೋಬ್ಬರಿ ಶೇ. 110ತೆರಿಗೆ ಇತ್ತು. ಅದನ್ನು ಈಗ ಹಂತ-ಹಂತವಾಗಿ ಕೇವಲ ಶೇ.10 ಕ್ಕೆ ಇಳಿಸಲಾಗುತ್ತಿದೆ, ಇದರ ನೇರ ಲಾಭ ಎಲೆಕ್ಟ್ರಿಕ್ (EV) ಮತ್ತು ಹೈಬ್ರಿಡ್ ಕಾರುಗಳಿಗೂ ಸಿಗಲಿದೆ.

ಸ್ಕಾಚ್ ವಿಸ್ಕಿ ಮತ್ತು ಜಿನ್: ಭಾರತದಲ್ಲಿ ಸ್ಕಾಚ್ ವಿಸ್ಕಿ ಮೇಲಿದ್ದ ಶೇ.150 ನಷ್ಟು ಬೃಹತ್ ಸುಂಕವನ್ನು ತಕ್ಷಣವೇ  ಶೇ.75 ಕ್ಕೆ ಇಳಿಸಲಾಗಿದ್ದು, ಮುಂದಿನ 10 ವರ್ಷಗಳಲ್ಲಿ ಇದು ಶೇ.40 ಕ್ಕೆ ಕುಸಿಯಲಿದೆ.

ಚಾಕೊಲೇಟ್ ಮತ್ತು ಬಿಸ್ಕತ್ತುಗಳು: ಬ್ರಿಟನ್‌ನ ಪ್ರಸಿದ್ಧ ಪ್ರೀಮಿಯಂ ಚಾಕೊಲೇಟ್, ಬಿಸ್ಕತ್ತು ಹಾಗೂ ಸೌಂದರ್ಯವರ್ಧಕಗಳ ಮೇಲಿನ ಆಮದು ತೆರಿಗೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತಿದ್ದು, ಮಧ್ಯಮ ವರ್ಗದ ಗ್ರಾಹಕರಿಗೆ ಬ್ರಾಂಡೆಡ್ ವಸ್ತುಗಳು ಅಗ್ಗದ ದರದಲ್ಲಿ ಸಿಗಲಿವೆ.

ಭಾರತದ ಶೇ. 99 ಉತ್ಪನ್ನಗಳಿಗೆ ಯುಕೆ ಮಾರುಕಟ್ಟೆಯಲ್ಲಿ ಶೂನ್ಯ ಸುಂಕ

ಈ ಒಪ್ಪಂದದಿಂದ ಭಾರತದ ರಫ್ತುದಾರರಿಗೆ ಅಕ್ಷರಶಃ ಲಾಟರಿ ಹೊಡೆದಂತಾಗಿದೆ. ಭಾರತ ತಯಾರಿಸುವ ಸುಮಾರು ಶೇ. 99ಉತ್ಪನ್ನಗಳನ್ನು ಇನ್ಮುಂದೆ ಯಾವುದೇ ಆಮದು ತೆರಿಗೆ ಇಲ್ಲದೆ ನೇರವಾಗಿ ಬ್ರಿಟನ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು.

ಮತ್ತಷ್ಟು ಓದಿ: ಭಾರತ-ನ್ಯೂಜಿಲೆಂಡ್ ಹೊಸ ಪಯಣಕ್ಕೆ ಸಿದ್ಧವಾಗಿದೆ; ಆಕ್ಲೆಂಡ್‌ನಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಪ್ರಧಾನಿ ಮೋದಿ ಐತಿಹಾಸಿಕ ಭಾಷಣ

ಸ್ಕಾಚ್ ವಿಸ್ಕಿ: ಇದರ ಮೇಲಿದ್ದ ಶೇ.150 ಬೃಹತ್ ಸುಂಕವನ್ನು ತಕ್ಷಣವೇ ಶೇ, 75 ಕ್ಕೆ ಇಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇದು ಶೇ.40 ಕ್ಕೆ ಕುಸಿಯಲಿದೆ.

ದೈನಂದಿನ ವಸ್ತುಗಳು: ಬ್ರಿಟನ್‌ನ ಪ್ರಸಿದ್ಧ ಬ್ರಾಂಡೆಡ್ ಚಾಕೊಲೇಟ್‌ಗಳು, ಬಿಸ್ಕತ್ತುಗಳು ಮತ್ತು ಸೌಂದರ್ಯವರ್ಧಕಗಳ ಮೇಲಿನ ಆಮದು ತೆರಿಗೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತಿದೆ.

ಲಾಭ ಪಡೆಯಲಿರುವ ಪ್ರಮುಖ ಭಾರತೀಯ ವಲಯಗಳು

  • ಜವಳಿ ಮತ್ತು ಸಿದ್ಧ ಉಡುಪುಗಳು
  • ಚರ್ಮದ ಸರಕುಗಳು ಮತ್ತು ಪಾದರಕ್ಷೆಗಳು
  • ರತ್ನಗಳು ಮತ್ತು ಆಭರಣಗಳು
  • ಸಮುದ್ರ ಉತ್ಪನ್ನಗಳು ಮತ್ತು ಸೀಫುಡ್ಆ
  • ಆಟೋ ಬಿಡಿಭಾಗಗಳು ಮತ್ತು ರಾಸಾಯನಿಕಗಳು

ಭಾರತೀಯ ರೈತರು ಮತ್ತು ಡೈರಿ ಉದ್ಯಮಕ್ಕೆ ಸಂಪೂರ್ಣ ರಕ್ಷಣೆ

ವಿದೇಶಿ ಉತ್ಪನ್ನಗಳು ಭಾರತದ ಮಾರುಕಟ್ಟೆಗೆ ಲಗ್ಗೆ ಇಡುವುದರಿಂದ ನಮ್ಮ ದೇಶದ ರೈತರಿಗೆ ತೊಂದರೆಯಾಗಬಹುದು ಎಂಬ ಆತಂಕವಿತ್ತು. ಆದರೆ ಕೇಂದ್ರ ಸರ್ಕಾರವು ದೇಶೀಯ ಕೃಷಿ ವಲಯವನ್ನು ಅತ್ಯಂತ ಚಾಣಾಕ್ಷತನದಿಂದ ರಕ್ಷಿಸಿದೆ.

ಬ್ರಿಟನ್‌ನ ಅಗ್ಗದ ಉತ್ಪನ್ನಗಳಿಂದ ಭಾರತೀಯ ರೈತರು ಮತ್ತು ಹೈನುಗಾರರಿಗೆ ನಷ್ಟವಾಗದಂತೆ ತಡೆಯಲು ಡೈರಿ ಉತ್ಪನ್ನಗಳು, ಚೀಸ್, ಸಕ್ಕರೆ, ಅಕ್ಕಿ, ಸೇಬು, ಕೋಳಿ ಮತ್ತು ಮೊಟ್ಟೆಗಳನ್ನು ಈ ಮುಕ್ತ ವ್ಯಾಪಾರ ಒಪ್ಪಂದದಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ. ಅಂದರೆ, ಬ್ರಿಟನ್‌ನ ಹಾಲಿನ ಉತ್ಪನ್ನಗಳು ಭಾರತಕ್ಕೆ ಬಂದು ಇಲ್ಲಿನ ಹೈನುಗಾರರ ಹೊಟ್ಟೆಯ ಮೇಲೆ ಹೊಡೆಯಲು ಸಾಧ್ಯವಿಲ್ಲ.

ಭಾರತೀಯ ಯುವಕರಿಗೆ ಬ್ರಿಟನ್‌ನಲ್ಲಿ ಉದ್ಯೋಗದ ಮಹಾದ್ವಾರ

ಈ ಒಪ್ಪಂದವು ಕೇವಲ ಸರಕುಗಳ ಮಾರಾಟಕ್ಕಷ್ಟೇ ಸೀಮಿತವಾಗಿಲ್ಲ, ಇದು ಭಾರತೀಯ ಉದ್ಯೋಗಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಭಾರಿ ವರವಾಗಲಿದೆ.

ಯಂಗ್ ಪ್ರೊಫೆಷನಲ್ಸ್ ಸ್ಕೀಮ್: ಒಪ್ಪಂದದ ಭಾಗವಾಗಿ ಭಾರತದ ಐಟಿ (IT) ತಜ್ಞರು, ಇಂಜಿನಿಯರ್‌ಗಳು, ಆರೋಗ್ಯ ಕಾರ್ಯಕರ್ತರು ಮತ್ತು ನಾವೀನ್ಯಕಾರರಿಗೆ ಬ್ರಿಟನ್‌ನಲ್ಲಿ ಸುಲಭವಾಗಿ ವೀಸಾ ಮತ್ತು ಉದ್ಯೋಗಾವಕಾಶಗಳು ಸಿಗಲಿವೆ.

ಆರ್ಥಿಕ ಪ್ರಗತಿ: ಈ ಒಪ್ಪಂದದಿಂದಾಗಿ 2040 ರ ವೇಳೆಗೆ ಉಭಯ ದೇಶಗಳ ನಡುವಿನ ಒಟ್ಟು ವ್ಯಾಪಾರವು ಸುಮಾರು ಶೇ.39 ರಷ್ಟು ವೃದ್ಧಿಯಾಗಲಿದ್ದು, ಭಾರತದಲ್ಲಿ ಲಕ್ಷಾಂತರ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಪ್ರಧಾನಿ ಮೋದಿ ಅವರ ‘ವಿಕಸಿತ ಭಾರತ 2047’ ಕನಸಿಗೆ ಈ ಒಪ್ಪಂದವು ಜಾಗತಿಕ ಮಟ್ಟದಲ್ಲಿ ಭಾರಿ ದೊಡ್ಡ ಇಂಧನ ನೀಡಿದೆ.

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದದ (CETA) ಮುಖ್ಯ ಗುರಿ ಏನು ಮತ್ತು ಇದು ಯಾವಾಗ ಜಾರಿಗೆ ಬಂದಿದೆ?
ಉತ್ತರ: ಈ ಐತಿಹಾಸಿಕ ಒಪ್ಪಂದವು ಜುಲೈ 15, 2026 ರಂದು ಅಧಿಕೃತವಾಗಿ ಜಾರಿಗೆ ಬಂದಿದೆ. ಸದ್ಯ ಉಭಯ ದೇಶಗಳ ನಡುವೆ ಇರುವ 55-60 ಬಿಲಿಯನ್ ಡಾಲರ್ ವಾಣಿಜ್ಯ ವಹಿವಾಟನ್ನು 2030 ರ ವೇಳೆಗೆ ಬರೋಬ್ಬರಿ 100 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವುದು ಈ ಒಪ್ಪಂದದ ಮುಖ್ಯ ಗುರಿಯಾಗಿದೆ.

ಪ್ರಶ್ನೆ: ಈ ಒಪ್ಪಂದದಿಂದಾಗಿ ಭಾರತದ ಸಾಮಾನ್ಯ ಗ್ರಾಹಕರಿಗೆ ಯಾವೆಲ್ಲಾ ವಿದೇಶಿ ವಸ್ತುಗಳು ಅಗ್ಗದ ದರದಲ್ಲಿ ಸಿಗಲಿವೆ?
ಉತ್ತರ: ಬ್ರಿಟನ್‌ನಿಂದ ಆಮದು ಮಾಡಿಕೊಳ್ಳಲಾಗುವ ಪ್ರೀಮಿಯಂ ವಸ್ತುಗಳ ಮೇಲಿನ ತೆರಿಗೆ ಕಡಿತದಿಂದಾಗಿ ಈ ಕೆಳಗಿನ ಉತ್ಪನ್ನಗಳು ಭಾರಿ ಅಗ್ಗವಾಗಲಿವೆ.

ಐಷಾರಾಮಿ ಕಾರುಗಳು: ಇದುವರೆಗೆ ಇದ್ದ ಶೇ.110 ಆಮದು ಸುಂಕವನ್ನು ಹಂತ-ಹಂತವಾಗಿ ಶೇ.10 ಕ್ಕೆ ಇಳಿಸಲಾಗುತ್ತಿದೆ (ಇದು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಕಾರುಗಳಿಗೂ ಅನ್ವಯಿಸುತ್ತದೆ).

ಸ್ಕಾಚ್ ವಿಸ್ಕಿ: ಇದರ ಮೇಲಿದ್ದ ಶೇ.150 ಬೃಹತ್ ಸುಂಕವನ್ನು ತಕ್ಷಣವೇ ಶೇ, 75 ಕ್ಕೆ ಇಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇದು ಶೇ.40 ಕ್ಕೆ ಕುಸಿಯಲಿದೆ.

ದೈನಂದಿನ ವಸ್ತುಗಳು: ಬ್ರಿಟನ್‌ನ ಪ್ರಸಿದ್ಧ ಬ್ರಾಂಡೆಡ್ ಚಾಕೊಲೇಟ್‌ಗಳು, ಬಿಸ್ಕತ್ತುಗಳು ಮತ್ತು ಸೌಂದರ್ಯವರ್ಧಕಗಳ ಮೇಲಿನ ಆಮದು ತೆರಿಗೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತಿದೆ.

ಪ್ರಶ್ನೆ: ಭಾರತೀಯ ರಫ್ತುದಾರರಿಗೆ ಈ ಒಪ್ಪಂದದಿಂದ ಸಿಗಲಿರುವ ಬಂಪರ್ ಕೊಡುಗೆ ಏನು?
ಉತ್ತರ: ಈ ಒಪ್ಪಂದದ ಅಡಿಯಲ್ಲಿ ಭಾರತ ತಯಾರಿಸುವ ಸುಮಾರು ಶೇಕಡಾ 99 ರಷ್ಟು ಉತ್ಪನ್ನಗಳನ್ನು ಯಾವುದೇ ಆಮದು ತೆರಿಗೆ ಇಲ್ಲದೆ ನೇರವಾಗಿ ಬ್ರಿಟನ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು. ಇದರಿಂದಾಗಿ ಭಾರತದ ಜವಳಿ , ಚರ್ಮದ ಸರಕುಗಳು, ಪಾದರಕ್ಷೆಗಳು, ರತ್ನಗಳು-ಆಭರಣಗಳು ಹಾಗೂ ಸಮುದ್ರ ಉತ್ಪನ್ನಗಳ ರಫ್ತುದಾರರಿಗೆ ಜಾಗತಿಕ ಮಟ್ಟದಲ್ಲಿ ಭಾರಿ ದೊಡ್ಡ ಮಾರುಕಟ್ಟೆ ಸಿಗಲಿದೆ.

ಪ್ರಶ್ನೆ: ಬ್ರಿಟನ್‌ನ ಅಗ್ಗದ ಉತ್ಪನ್ನಗಳಿಂದ ಭಾರತೀಯ ರೈತರು ಮತ್ತು ಹೈನುಗಾರರಿಗೆ ನಷ್ಟವಾಗದಂತೆ ಸರ್ಕಾರ ಹೇಗೆ ರಕ್ಷಿಸಿದೆ?
ಉತ್ತರ: ಭಾರತೀಯ ರೈತರ ಮತ್ತು ಡೈರಿ ಉದ್ಯಮದ ಹಿತರಕ್ಷಣೆಗಾಗಿ ಕೇಂದ್ರ ಸರ್ಕಾರವು ಅತ್ಯಂತ ಚಾಣಾಕ್ಷ ಹೆಜ್ಜೆಯನ್ನಿಟ್ಟಿದೆ. ಬ್ರಿಟನ್‌ನ ಸ್ಪರ್ಧೆಯಿಂದ ದೇಶೀಯ ಮಾರುಕಟ್ಟೆಯನ್ನು ರಕ್ಷಿಸಲು ಡೈರಿ ಉತ್ಪನ್ನಗಳು, ಚೀಸ್, ಸಕ್ಕರೆ, ಅಕ್ಕಿ, ಸೇಬು, ಕೋಳಿ ಮತ್ತು ಮೊಟ್ಟೆಗಳನ್ನು ಈ ಮುಕ್ತ ವ್ಯಾಪಾರ ಒಪ್ಪಂದದಿಂದ (FTA) ಸಂಪೂರ್ಣವಾಗಿ ಹೊರಗಿಡಲಾಗಿದೆ. ಹೀಗಾಗಿ ನಮ್ಮ ದೇಶದ ಕೃಷಿ ವಲಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ.

ಪ್ರಶ್ನೆ: ಈ ಒಪ್ಪಂದವು ಭಾರತೀಯ ಯುವಕರಿಗೆ ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಹೇಗೆ ನೆರವಾಗಲಿದೆ?
ಉತ್ತರ: ಈ ಒಪ್ಪಂದವು ಕೇವಲ ವ್ಯಾಪಾರಕ್ಕಷ್ಟೇ ಸೀಮಿತವಾಗಿಲ್ಲ. ಇದರ ಭಾಗವಾಗಿ ಜಾರಿಯಾಗುತ್ತಿರುವ ‘ಯಂಗ್ ಪ್ರೊಫೆಷನಲ್ಸ್ ಸ್ಕೀಮ್’ ಮೂಲಕ ಭಾರತದ ಐಟಿ (IT) ತಜ್ಞರು, ಇಂಜಿನಿಯರ್‌ಗಳು, ಆರೋಗ್ಯ ಕಾರ್ಯಕರ್ತರು ಮತ್ತು ನಾವೀನ್ಯಕಾರರಿಗೆ ಬ್ರಿಟನ್‌ನಲ್ಲಿ ಸುಲಭವಾಗಿ ವೀಸಾ ಮತ್ತು ಉದ್ಯೋಗಾವಕಾಶಗಳು ಸಿಗಲಿವೆ. ಅಷ್ಟೇ ಅಲ್ಲದೆ, 2040 ರ ವೇಳೆಗೆ ಉಭಯ ದೇಶಗಳ ವ್ಯಾಪಾರ ಶೇ.39ರಷ್ಟು ವೃದ್ಧಿಯಾಗುವುದರಿಂದ ಭಾರತದಲ್ಲೇ ಲಕ್ಷಾಂತರ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಗಾಣದ ಎಣ್ಣೆ Vs ರಿಫೈನ್ಡ್ ಎಣ್ಣೆ: ಆರೋಗ್ಯಕ್ಕೆ ಯಾವುದು ಒಳ್ಳೆಯದು ತಿಳಿದುಕೊಳ್ಳಿ – Kannada News | Ganuga Oil Benefits: Nutrition, Cooking Uses And Storage Tips

ಗಾಣದ ಎಣ್ಣೆ Vs ರಿಫೈನ್ಡ್ ಎಣ್ಣೆImage Credit source: Getty Images

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗಾಣದಲ್ಲಿ (Cold-Pressed/Wood Pressed) ತಯಾರಿಸಿದ ಎಣ್ಣೆಗಳ ಬಳಕೆ ಮತ್ತೆ ಹೆಚ್ಚುತ್ತಿದೆ. ಒಂದು ಕಾಲದಲ್ಲಿ ಮನೆಮನೆಗಳಲ್ಲಿ ಸಾಮಾನ್ಯವಾಗಿದ್ದ ಈ ಎಣ್ಣೆಗಳು ಈಗ ಸಾಂಪ್ರದಾಯಿಕ ಆಹಾರ ಪದ್ಧತಿ ಎಂಬ ಹೆಸರಿನಲ್ಲಿ ಮತ್ತೆ ಜನಪ್ರಿಯವಾಗುತ್ತಿವೆ. ಆದರೆ ಗಾಣದ ಎಣ್ಣೆ ನಿಜವಾಗಿಯೂ ಆರೋಗ್ಯಕ್ಕೆ ಉತ್ತಮವೇ, ಇದನ್ನು ಪ್ರತಿದಿನದ ಅಡುಗೆಯಲ್ಲಿ ಬಳಸಬಹುದೇ ಎಂಬ ಪ್ರಶ್ನೆ ಹಲವರಲ್ಲಿದೆ. ಆಹಾರ ತಜ್ಞರ ಪ್ರಕಾರ, ಗಾಣದ ಎಣ್ಣೆಯನ್ನು ಕಡಿಮೆ ಉಷ್ಣಾಂಶದಲ್ಲಿ ಮರದ ಗಾಣದ ಮೂಲಕ ತಯಾರಿಸಲಾಗುತ್ತದೆ. ಈ ವಿಧಾನದಲ್ಲಿ ಎಣ್ಣೆಯಲ್ಲಿರುವ ನೈಸರ್ಗಿಕ ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್ ಇ ಮತ್ತು ಕೆಲವು ಆರೋಗ್ಯಕರ ಕೊಬ್ಬಿನಾಂಶಗಳು ಉಳಿಯುವ ಸಾಧ್ಯತೆ ಇದೆ. ಇದರಿಂದ ಎಣ್ಣೆಯ ಸುವಾಸನೆ ಮತ್ತು ಮೂಲ ರುಚಿಯೂ ಕಾಪಾಡಲ್ಪಡುತ್ತದೆ.

ಗಾಣದ ಎಣ್ಣೆಯ ಆರೋಗ್ಯ ಪ್ರಯೋಜನಗಳು

ಕಡಲೆಕಾಯಿ, ಎಳ್ಳು, ತೆಂಗು ಅಥವಾ ಸೂರ್ಯಕಾಂತಿ ಬೀಜಗಳಿಂದ ತಯಾರಿಸಲಾದ ಗಾಣದ ಎಣ್ಣೆಯಲ್ಲಿ ದೇಹಕ್ಕೆ ಅಗತ್ಯವಿರುವ ಉತ್ತಮ ಕೊಬ್ಬಿನಾಂಶಗಳಿರುತ್ತವೆ. ಮಿತ ಪ್ರಮಾಣದಲ್ಲಿ ಬಳಸಿದರೆ ಹೃದಯದ ಆರೋಗ್ಯ, ಚರ್ಮದ ಆರೈಕೆ ಹಾಗೂ ದೇಹದ ಉರಿಯೂತವನ್ನು ನಿಯಂತ್ರಿಸಲು ಸಹಕಾರಿಯಾಗಬಹುದು. ಎಳ್ಳಿನ ಎಣ್ಣೆಯಲ್ಲಿ ಕ್ಯಾಲ್ಸಿಯಂ ಹಾಗೂ ಸೆಸಮೋಲ್‌ನಂತಹ ಆಂಟಿಆಕ್ಸಿಡೆಂಟ್‌ಗಳು ದೊರೆಯುತ್ತವೆ. ಕಡಲೆಕಾಯಿ ಎಣ್ಣೆಯಲ್ಲಿ ಉತ್ತಮ ಕೊಬ್ಬಿನಾಂಶಗಳಿದ್ದು, ತೆಂಗಿನ ಎಣ್ಣೆಯಲ್ಲಿ ಕೊಬ್ಬಿನಾಮ್ಲಗಳು (MCTs) ಇರುತ್ತವೆ.

ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಅರಿಶಿನ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಮಾತ್ರವಲ್ಲ ಚರ್ಮದ ಕಾಂತಿಯೂ ಹೆಚ್ಚಾಗುತ್ತದೆ

ರಿಫೈನ್ಡ್ ಎಣ್ಣೆಗಿಂತ ಹೇಗೆ ಭಿನ್ನ?

ಸಾಮಾನ್ಯವಾಗಿ ರಿಫೈನ್ಡ್ ಎಣ್ಣೆ ತಯಾರಿಕೆಯಲ್ಲಿ ಹೆಚ್ಚಿನ ಉಷ್ಣಾಂಶ ಹಾಗೂ ವಿವಿಧ ಸಂಸ್ಕರಣಾ ವಿಧಾನಗಳನ್ನು ಬಳಸಲಾಗುತ್ತದೆ. ಇದರಿಂದ ಎಣ್ಣೆಯ ಶೇಖರಣಾ ಅವಧಿ ಹೆಚ್ಚಾದರೂ, ಕೆಲವು ನೈಸರ್ಗಿಕ ಪೋಷಕಾಂಶಗಳು ಕಡಿಮೆಯಾಗುವ ಸಾಧ್ಯತೆ ಇದೆ. ಗಾಣದ ಎಣ್ಣೆ ಕಡಿಮೆ ಸಂಸ್ಕರಣೆಗೆ ಒಳಗಾಗುವುದರಿಂದ ಅದರ ನೈಸರ್ಗಿಕ ಗುಣಗಳು ಹೆಚ್ಚು ಉಳಿಯುತ್ತವೆ. ಆದರೆ ಇದನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸದಿದ್ದರೆ ಬೇಗ ಹಾಳಾಗುವ ಸಾಧ್ಯತೆಯೂ ಇದೆ.

ಗಮನಿಸಬೇಕಾದ ವಿಷಯಗಳು

ಗಾಣದ ಎಣ್ಣೆ ಆರೋಗ್ಯಕರ ಆಯ್ಕೆಯಾಗಿದ್ದರೂ, ಯಾವುದೇ ಎಣ್ಣೆಯನ್ನು ಮಿತ ಪ್ರಮಾಣದಲ್ಲೇ ಬಳಸಬೇಕು. ಒಂದೇ ವಿಧದ ಎಣ್ಣೆಯನ್ನು ನಿರಂತರವಾಗಿ ಬಳಸುವ ಬದಲು ಕಡಲೆಕಾಯಿ, ಎಳ್ಳು, ಸಾಸಿವೆ ಅಥವಾ ಸೂರ್ಯಕಾಂತಿ ಎಣ್ಣೆಗಳನ್ನು ಅಗತ್ಯಕ್ಕೆ ಅನುಗುಣವಾಗಿ ಬದಲಾಯಿಸಿಕೊಂಡು ಬಳಸುವುದು ಉತ್ತಮ. ಎಣ್ಣೆಯನ್ನು ಪದೇ ಪದೇ ಬಿಸಿ ಮಾಡುವುದನ್ನು ತಪ್ಪಿಸಬೇಕು. ಇದರಿಂದ ಹಾನಿಕಾರಕ ಸಂಯುಕ್ತಗಳು ರೂಪುಗೊಳ್ಳುವ ಸಾಧ್ಯತೆ ಹೆಚ್ಚುತ್ತದೆ.

ಗಾಣದ ಎಣ್ಣೆ ಖರೀದಿಸುವಾಗ ಶುದ್ಧ, ವಿಶ್ವಾಸಾರ್ಹ ಬ್ರ್ಯಾಂಡ್ ಅಥವಾ ನೇರ ಗಾಣ ಕೇಂದ್ರಗಳಿಂದ ಖರೀದಿಸುವುದು ಉತ್ತಮ. ಎಣ್ಣೆಯಲ್ಲಿ ಕೃತಕ ಬಣ್ಣ, ಸುಗಂಧ ಅಥವಾ ಕಲಬೆರಕೆ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಿ. ಹೃದಯರೋಗ, ಕೊಲೆಸ್ಟ್ರಾಲ್ ಅಥವಾ ಇತರ ಆರೋಗ್ಯ ಸಮಸ್ಯೆಗಳಿರುವವರು ತಮ್ಮ ಆಹಾರದಲ್ಲಿ ಯಾವ ಎಣ್ಣೆ ಬಳಸಬೇಕು ಎಂಬುದರ ಬಗ್ಗೆ ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯುವುದು ಸೂಕ್ತ. ಆರೋಗ್ಯದ ಗುಟ್ಟು ಕೇವಲ ಎಣ್ಣೆಯಲ್ಲಿ ಅಲ್ಲ; ಸಮತೋಲನ ಆಹಾರ, ನಿಯಮಿತ ವ್ಯಾಯಾಮ ಮತ್ತು ಮಿತ ಪ್ರಮಾಣದ ಎಣ್ಣೆ ಬಳಕೆಯಲ್ಲಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Raksha Bandhan 2026: ರಕ್ಷಾ ಬಂಧನದಂದು ‘ಭದ್ರ ಕಾಲ’ದಲ್ಲಿ ಏಕೆ ರಾಖಿ ಕಟ್ಟಬಾರದು? ಇಲ್ಲಿದೆ ಪುರಾಣ ಕಥೆ – Kannada News | Raksha Bandhan 2026: Why Avoid Bhadra Kaal? Auspicious Rakhi Tying Muhurat and Story

ಭಾರತೀಯ ಸಂಸ್ಕೃತಿಯಲ್ಲಿ ಸಹೋದರ-ಸಹೋದರಿಯರ ಪವಿತ್ರ ಪ್ರೀತಿಯ ಸಂಕೇತವಾದ ರಕ್ಷಾ ಬಂಧನ ಹಬ್ಬವನ್ನು ಪ್ರತಿ ವರ್ಷ ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಈ ದಿನ ಸಹೋದರಿಯರು ತಮ್ಮ ಅಣ್ಣ-ತಮ್ಮಂದಿರಿಗೆ ತಿಲಕವಿಟ್ಟು, ಆರತಿ ಬೆಳಗಿ, ಕೈಗೆ ರಕ್ಷಾಸೂತ್ರವನ್ನು (ರಾಖಿ) ಕಟ್ಟುತ್ತಾರೆ. ಆದರೆ, ರಾಖಿ ಕಟ್ಟುವಾಗ ‘ಭದ್ರ ಕಾಲ’ಕ್ಕೆ ವಿಶೇಷ ಗಮನ ನೀಡಬೇಕಾದುದು ಅತ್ಯಗತ್ಯ. ಸನಾತನ ಧರ್ಮದಲ್ಲಿ ಭದ್ರ ಕಾಲವನ್ನು ಅಶುಭವೆಂದು ಪರಿಗಣಿಸಲಾಗಿದ್ದು, ಈ ಅವಧಿಯಲ್ಲಿ ಯಾವುದೇ ಮಂಗಳ ಕಾರ್ಯಗಳನ್ನು ಮಾಡುವುದಿಲ್ಲ. ಅಷ್ಟಕ್ಕೂ ಭದ್ರ ಕಾಲದಲ್ಲಿ ರಾಖಿ ಕಟ್ಟಬಾರದು ಏಕೆ? ಇದರ ಹಿಂದಿರುವ ಪುರಾಣ ಹಿನ್ನೆಲೆ ಮತ್ತು ಈ ವರ್ಷದ ಶುಭ ಮುಹೂರ್ತದ ಸಂಪೂರ್ಣ ವಿವರ ಇಲ್ಲಿದೆ.

ಶೂರ್ಪನಖಿ ಮತ್ತು ರಾವಣನ ಪುರಾಣ ಕಥೆ:

ಧಾರ್ಮಿಕ ನಂಬಿಕೆಗಳ ಪ್ರಕಾರ, ತ್ರೇತಾಯುಗದಲ್ಲಿ ಲಂಕಾಧಿಪತಿ ರಾವಣನ ಸಹೋದರಿ ಶೂರ್ಪನಖಿ ತನಗಿದ್ದ ಅಜ್ಞಾನದಿಂದಾಗಿ ‘ಭದ್ರ ಕಾಲ’ದಲ್ಲಿ ರಾವಣನಿಗೆ ರಾಖಿ ಕಟ್ಟಿದ್ದಳು. ಈ ಅಶುಭ ಕಾಲದ ಪ್ರಭಾವದಿಂದಾಗಿ ಲಂಕಾಧಿಪತಿಯ ಬುದ್ಧಿ ಭ್ರಮಣೆಯಾಗಿ, ಕೆಲವೇ ದಿನಗಳಲ್ಲಿ ಅವನ ಇಡೀ ಸಾಮ್ರಾಜ್ಯ ಹಾಗೂ ವಂಶವೇ ಸರ್ವನಾಶವಾಯಿತು. ಇದೇ ಕಾರಣಕ್ಕಾಗಿ ಅಂದಿನಿಂದ ಇಂದಿನವರೆಗೂ ಭದ್ರ ಕಾಲದಲ್ಲಿ ರಕ್ಷಾ ಬಂಧನ ಆಚರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಯಾರು ಈ ‘ಭದ್ರ’?

ಪುರಾಣಗಳ ಪ್ರಕಾರ, ಭದ್ರಳು ಸೂರ್ಯದೇವನ ಮಗಳು ಮತ್ತು ನ್ಯಾಯದ ದೇವನಾದ ಶನಿಮಹಾತ್ಮನ ಸಹೋದರಿ. ಈಕೆ ಅತ್ಯಂತ ಉಗ್ರ ಸ್ವಭಾವದವಳು ಎನ್ನಲಾಗುತ್ತದೆ. ರಾಕ್ಷಸರ ಸಂಹಾರಕ್ಕಾಗಿ ಮತ್ತು ಅವರ ವಿನಾಶಕ್ಕಾಗಿಯೇ ಭದ್ರಳ ಜನನವಾಯಿತು. ಭದ್ರಳ ದೃಷ್ಟಿ ಬಿದ್ದ ತಕ್ಷಣವೇ ಶುಭ ಕಾರ್ಯಗಳು ಭಂಗಗೊಳ್ಳುತ್ತವೆ ಎಂಬ ಬಲವಾದ ನಂಬಿಕೆ ಇರುವುದರಿಂದ, ಈ ಅವಧಿಯಲ್ಲಿ ಯಾವುದೇ ಶುಭ ಕೆಲಸಗಳಿಗೆ ಚಾಲನೆ ನೀಡುವುದಿಲ್ಲ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

2026 ರ ರಕ್ಷಾ ಬಂಧನ ಯಾವಾಗ?

ವೈದಿಕ ಪಂಚಾಂಗದ ಪ್ರಕಾರ, ಈ ವರ್ಷ ಶ್ರಾವಣ ಮಾಸದ ಪೂರ್ಣಿಮೆ ತಿಥಿಯು ಆಗಸ್ಟ್ 27 ರಂದು ಬೆಳಿಗ್ಗೆ 9:08 ಕ್ಕೆ ಪ್ರಾರಂಭವಾಗಿ, ಆಗಸ್ಟ್ 28 ರಂದು ಬೆಳಿಗ್ಗೆ 9:48 ಕ್ಕೆ ಮುಕ್ತಾಯಗೊಳ್ಳುತ್ತದೆ. ಉದಯ ತಿಥಿಯ ನಿಯಮವನ್ನು ಅನುಸರಿಸಿ, ಈ ವರ್ಷ ರಕ್ಷಾ ಬಂಧನ ಹಬ್ಬವನ್ನು ಆಗಸ್ಟ್ 28 ರ ಶುಕ್ರವಾರ ಆಚರಿಸಲಾಗುತ್ತದೆ.

ಈ ಬಾರಿ ರಕ್ಷಾ ಬಂಧನದ ಮೇಲೆ ಭದ್ರನ ನೆರಳಿದೆಯೇ?

ಈ ವರ್ಷ ಸಹೋದರಿಯರಿಗೆ ಒಂದು ಅತ್ಯಂತ ಸಂತಸದ ಸುಸುದ್ದಿ ಇದೆ. ಈ ಬಾರಿ ರಕ್ಷಾ ಬಂಧನದ ದಿನ ಯಾವುದೇ ‘ಭದ್ರ ಕಾಲ’ದ ನೆರಳು ಇರುವುದಿಲ್ಲ. ಇದು ಅತ್ಯಂತ ಅಪರೂಪದ ಹಾಗೂ ಶುಭ ಕಾಕತಾಳೀಯವಾಗಿದೆ. ರಾಖಿ ಕಟ್ಟಲು ಅತ್ಯಂತ ಶುಭ ಸಮಯ ಆಗಸ್ಟ್ 28 ರ ಬೆಳಿಗ್ಗೆ 5:57 ರಿಂದ ಬೆಳಿಗ್ಗೆ 9:48 ರವರೆಗೆ ಇರಲಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಚಿನ್ ದಾಖಲೆ ಧೂಳೀಪಟ: ಕಿಂಗ್ ಕೊಹ್ಲಿ ಹೆಸರಿಗೆ ವಿಶ್ವ ದಾಖಲೆ

Source link

Exit mobile version