ಸೆನ್ಸಾರ್ ಕುರಿತ ಸಂವಾದದಲ್ಲಿ ‘ಕೆಜಿಎಫ್’, ‘ಅನಿಮಲ್’ ಬಗ್ಗೆ ಟೀಕೆ – Kannada News | KGF Movie criticized for its elevation scenes

ಕೆಜಿಎಫ್’ (KGF) ಮತ್ತು ‘ಕೆಜಿಎಫ್ 2’ ಸಿನಿಮಾಗಳು ಕನ್ನಡದ ಅತಿ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳು. ಈ ಸಿನಿಮಾಗಳಿಗೆ ಗ್ಲೋಬಲ್ ಲೆವೆಲ್​​ನಲ್ಲಿ ಅಭಿಮಾನಿಗಳಿದ್ದಾರೆ. ಈ ಸಿನಿಮಾಗಳ ತಾಂತ್ರಿಕ ನಿಪುಣತೆ, ನಿರೂಪಣೆ ಶೈಲಿ ಹೊಸದಾಗಿಯೂ, ಭಿನ್ನವಾಗಿಯೂ ಇತ್ತು. ಈಗ ಹಲವು ಕಮರ್ಶಿಯಲ್ ಸಿನಿಮಾಗಳು ‘ಕೆಜಿಎಫ್’ ಸಿನಿಮಾಗಳ ನಿರೂಪಣಾ ಮಾದರಿಯನ್ನು ಬಳಸುತ್ತಿವೆ. ಆದರೆ ಈ ಸಿನಿಮಾ ಬಿಡುಗಡೆ ಆದಾಗಿಂದಲೂ ಒಂದು ವರ್ಗದ ಜನರಿಂದ ಸಿನಿಮಾದ ಬಗ್ಗೆ ವಿಮರ್ಶೆ, ಟೀಕೆಗಳು ಕೇಳಿ ಬರುತ್ತಲೇ ಇವೆ. ಇತ್ತೀಚೆಗೆ ಆನ್​​ಲೈನ್​​ನಲ್ಲಿ ಆಯೋಜಿಸಿದ್ದ ಸೆನ್ಸಾರ್ ಕುರಿತ ಚರ್ಚೆಯೊಂದರಲ್ಲಿ ‘ಕೆಜಿಎಫ್’ ಸಿನಿಮಾದ ಬಗ್ಗೆ ಟೀಕೆ ಕೇಳಿ ಬಂದಿದೆ. ಜೊತೆಗೆ ‘ಅನಿಮಲ್’ ಸಿನಿಮಾ ಬಗ್ಗೆಯೂ ಸಹ.

ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರು ಅತಿಥಿಯಾಗಿ ಪಾಲ್ಗೊಂಡಿದ್ದ ಈ ಯೂಟ್ಯೂಬ್ ಚರ್ಚೆಯನ್ನು ಖ್ಯಾತ ಕಮಿಡಿಯನ್ ಕುನಾಲ್ ಕಾಮ್ರಾ ಆಯೋಜಿಸಿದ್ದರು. ಅವರದ್ದೇ ಯೂಟ್ಯೂಬ್ ಚಾನೆಲ್​​ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ದಿಲ್ಜೀತ್ ದೊಸ್ಸಾಂಜ್ ಅವರ ‘ಸಟ್ಲೆಜ್’ ಸಿನಿಮಾಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡಲು ನಿರಾಕರಿಸಿರುವುದು, ಸಿನಿಮಾ ಅನ್ನು ಒಟಿಟಿಯಿಂದ ತೆಗೆದಿರುವ ಬಗ್ಗೆ ಚರ್ಚೆಯನ್ನು ಆಯೋಜಿಸಲಾಗಿತ್ತು. ಅನುರಾಗ್ ಕಶ್ಯಪ್ ಅವರು ದಶಕಗಳಿಂದಲೂ ಸೆನ್ಸಾರ್ ಮಂಡಳಿ ಜೊತೆಗೆ ಜಗಳ ಮಾಡುತ್ತಲೇ ಬಂದಿದ್ದರಿಂದ, ಸೆನ್ಸಾರ್ ಮಂಡಳಿಯ ಸಮಸ್ಯೆಗಳು ಉದಾಹರಣೆಗಳೊಂದಿಗೆ ವಿವರಿಸಿದರು.

ಅದೇ ಚರ್ಚೆಯಲ್ಲಿ ಹಾಜರಿದ್ದ ಸಾಮಾಜಿಕ ಕಾರ್ಯಕರ್ತೆ ಮತ್ತು ಯೂನಿವರ್ಸಿಟಿ ಪ್ರೊಫೆಸರ್ ಸಹ ಆಗಿರುವ ಮಾದ್ರಿ ಕಟೋಕಿ ಅಲಿಯಾಸ್ ಡಾ ಮೆಡ್ಯೂಸಾ ಅವರು ಸಿನಿಮಾಗಳಲ್ಲಿ ಹಿಂಸಾತ್ಮಕತೆ ಹೆಚ್ಚಾಗಿರುವ ಬಗ್ಗೆ ಮಾತನಾಡಿ, ‘ಅನಿಮಲ್’ ಮತ್ತು ‘ಕೆಜಿಎಫ್’ ಸಿನಿಮಾಗಳನ್ನು ಟೀಕೆ ಮಾಡಿದರು. ಇತ್ತೀಚೆಗೆ ಸಿನಿಮಾಗಳಲ್ಲಿ ಹೀರೋ ವರ್ಷಿಪ್ ಹೆಚ್ಚಾಗಿರುವ ಬಗ್ಗೆ ಮಾತನಾಡಿದ ಅನುರಾಗ್ ಕಶ್ಯಪ್, ಇತ್ತೀಚೆಗೆ ತಾವು ನಟಿಸಿದ ಸಿನಿಮಾನಲ್ಲಿ ತಮ್ಮದೇ ಎಂಟ್ರಿ ಸೀನ್ ಅನ್ನು ಎರಡು ಮೂರು ಬಾರಿ ಬೇರೆ ಬೇರೆ ದೃಶ್ಯಗಳಿಗಾಗಿ ಶೂಟ್ ಮಾಡಿಕೊಂಡರು ಎಂದರು.

ಇದನ್ನೂ ಓದಿ:ಈ ಪ್ಯಾನ್ ಇಂಡಿಯಾ ಸ್ಟಾರ್ ನಟನಿಗೆ ಶಿವಣ್ಣನ ಆ ಸಿನಿಮಾ ಬಲು ಇಷ್ಟ

ಅವರ ಮಾತಿಗೆ ಮಾತು ಜೋಡಿಸಿದ ಪ್ರೊಫೆಸರ್ ಮಾದ್ರಿ ಕಟೋಕಿ, ‘ಕೆಜಿಎಫ್’ ಸಿನಿಮಾ ಅಂತೂ ಬರೀ ಎಂಟ್ರಿ ಸೀನ್​​ಗಳ ಮೇಲೆಯೇ ಸಿನಿಮಾ ಮಾಡಿದ್ದಾರೆ. ಅದರದ್ದು ಒಂದರ ಹಿಂದೆ ಒಂದು ಎಂಟ್ರಿ ಸೀನ್​​ಗಳು ಮಾತ್ರ, ಇನ್ನೇನೂ ಇಲ್ಲ’ ಎಂದರು. ಅವರ ಮಾತಿಗೆ ಅನುರಾಗ್ ಒಪ್ಪಿಗೆ ನೀಡಲಿಲ್ಲ, ಆದರೆ ವಿರೋಧಿಸಲೂ ಸಹ ಇಲ್ಲ. ಮಾದ್ರಿ ಅವರು ‘ಅನಿಮಲ್’ ಅಂಥಹಾ ಪೀಡಕ ಸಿನಿಮಾಗಳು ಹೆಚ್ಚಾಗುತ್ತಿರುವ ಬಗ್ಗೆ ಅನುರಾಗ್ ಅವರನ್ನು ಪ್ರಶ್ನೆ ಮಾಡಿದಾಗ, ‘ಸೆನ್ಸಾರ್ ದೃಷ್ಟಿಕೋನದಿಂದ ಹೇಳುವುದಾದರೆ ಎಲ್ಲ ಸಿನಿಮಾಗಳಿಗೂ ಅವಕಾಶ ಸಿಗಲೇ ಬೇಕು, ಅನಿಮಲ್ ಆಗಲಿ, ‘ಕಶ್ಮೀರ್ ಫೈಲ್ಸ್’ ಆಗಲಿ ಈಗ ನಿಷೇಧವಾಗಿರುವ ‘ಸಟ್ಲೆಜ್’ ಆಗಲಿ ಎಲ್ಲದಕ್ಕೂ ಅವಕಾಶ ಸಿಗಬೇಕು, ಸಿನಿಮಾ ನೋಡುವ ನೋಡದೆ ಇರದೇ ಇರುವ ಆಯ್ಕೆ ಪ್ರೇಕ್ಷಕನ ಕೈಯಲ್ಲಿರುತ್ತದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

World Youth Skills Day 2026: ವಿಶ್ವ ಯುವ ಕೌಶಲ್ಯ ದಿನದ ಇತಿಹಾಸ, ಮಹತ್ವ ತಿಳಿಯಿರಿ – Kannada News | World Youth Skills Day 2026: What are the history and significance of World Youth Skills Day

ಇಂದಿನ ಯುವಜನತೆ ತಮ್ಮ ಜೀವನ ಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಾರೆ. ಸೇವಿಸುವ ಆಹಾರ, ಉಡುಗೆ ತೊಡುಗೆ ಸೇರಿದಂತೆ ಎಲ್ಲದರಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ಶಿಕ್ಷಣದ ಜತೆಗೆ ವಿವಿಧ ಕೌಶಲ್ಯಗಳತ್ತ ಗಮನ ಹರಿಸುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ಉದ್ಯೋಗ ಅನುಭವದ ಜತೆಗೆ ಕೌಶಲ್ಯಗಳು ಬಹಳ ಮುಖ್ಯ. ಹೀಗಾಗಿ ಯುವ ಜನತೆಯಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸಲು ವಿಶ್ವ ಯುವ ಕೌಶಲ್ಯ ದಿನ (World Youth Skills Day) ಮೀಸಲಿಡಲಾಗಿದೆ. ಪ್ರತಿ ವರ್ಷ ಜುಲೈ 15 ರಂದು ವಿಶ್ವ ಯುವ ಕೌಶಲ್ಯ ದಿನದ ಆಚರಣೆ ಚಾಲ್ತಿಯಲ್ಲಿದೆ.

ವಿಶ್ವ ಯುವ ಕೌಶಲ್ಯ ದಿನದ ಇತಿಹಾಸವೇನು?

ಶ್ರೀಲಂಕಾದ ಉಪಕ್ರಮದ ಮೇರೆಗೆ, ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 2014 ರಂದು ವಿಶ್ವ ಯುವ ಕೌಶಲ್ಯ ದಿನದ ಆಚರಣೆಯನ್ನು ಅಂಗೀಕರಿಸಿತು. ಹೀಗಾಗಿ 2015 ರ ಜುಲೈ 15 ರಂದು ಮೊದಲ ಬಾರಿಗೆ ವಿಶ್ವ ಕೌಶಲ್ಯ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಜುಲೈ 15 ರಂದು ಈ ದಿನದ ಆಚರಣೆ ಚಾಲ್ತಿಯಲ್ಲಿದೆ.

ಇದನ್ನೂ ಓದಿ: ವಿಶ್ವ ಪೇಪರ್‌ ಬ್ಯಾಗ್‌ ದಿನದ ಆಚರಣೆಯ ಇತಿಹಾಸ, ಮಹತ್ವದ ಸಂಪೂರ್ಣ ವಿವರ ಇಲ್ಲಿದೆ

ವಿಶ್ವ ಯುವ ಕೌಶಲ್ಯ ದಿನದ ಮಹತ್ವ, ಆಚರಣೆ ಹೇಗೆ?

ಯುವಕರಿಗೆ ಕೆಲಸ, ಉದ್ಯಮಶೀಲತೆ ಹಾಗೂ ಅಗತ್ಯವಾದ ಅಗತ್ಯವಾದ ಕೌಶಲ್ಯವನ್ನು ಒದಗಿಸಲು ಹಾಗೂ ಯುವಕರನ್ನು ಪ್ರೇರೆಪಿಸುವ ಉದ್ದೇಶದಿಂದ ಈ ದಿನವು ಮಹತ್ವದ್ದಾಗಿದೆ. ಯುವಕರಲ್ಲಿ ಕೌಶಲ್ಯ ಅಭಿವೃದ್ಧಿ ಪಡಿಸಲು ಜಾಗೃತಿ ಕಾರ್ಯಕ್ರಮಗಳು, ಕಾರ್ಯಾಗಾರಗಳು, ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಇನ್ನಷ್ಟು ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಖಾಲಿ ಹೊಟ್ಟೆಯಲ್ಲಿ ಅರಿಶಿನ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಮಾತ್ರವಲ್ಲ ಚರ್ಮದ ಕಾಂತಿಯೂ ಹೆಚ್ಚಾಗುತ್ತದೆ – Kannada News | Why Drinking Turmeric Water on an Empty Stomach Is Trending

ಅರಿಶಿನ ಅಡುಗೆಮನೆಯ ಅವಿಭಾಜ್ಯ ಅಂಗ. ಶತಮಾನಗಳಿಂದಲೂ ಇದನ್ನು ಕೇವಲ ಮಸಾಲೆಯಾಗಿ ಮಾತ್ರವಲ್ಲ, ಸಾಂಪ್ರದಾಯಿಕ ಔಷಧೀಯ ಪದಾರ್ಥವಾಗಿಯೂ ಬಳಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅದರಲ್ಲಿಯೂ ಮಳೆಗಾಲದಲ್ಲಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅರಿಶಿನ ನೀರು ಕುಡಿಯುವ ಅಭ್ಯಾಸವೂ ಹೆಚ್ಚುತ್ತಿದೆ. ಇದರಲ್ಲಿ ಇರುವ ಕರ್ಕ್ಯೂಮಿನ್ (Curcumin) ಎಂಬ ನೈಸರ್ಗಿಕ ಸಂಯುಕ್ತವು ಉರಿಯೂತ ನಿವಾರಕ, ಆಂಟಿಆಕ್ಸಿಡೆಂಟ್ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಆದರೆ ಇದನ್ನು ಮಿತ ಪ್ರಮಾಣದಲ್ಲಿ ಹಾಗೂ ಸರಿಯಾದ ರೀತಿಯಲ್ಲಿ ಸೇವಿಸುವುದು ಮುಖ್ಯ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಅರಿಶಿನ ನೀರು ಕುಡಿಯುವುದರಿಂದ ಸಿಗಬಹುದಾದ ಆರೋಗ್ಯ ಲಾಭಗಳು:

ಜೀರ್ಣಕ್ರಿಯೆಗೆ ನೆರವು: ಬೆಳಗ್ಗೆ ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಅರಿಶಿನ ಬೆರೆಸಿ ಕುಡಿಯುವುದರಿಂದ ಜೀರ್ಣಕ್ರಿಯೆ ಸುಗಮವಾಗಲು ನೆರವಾಗಬಹುದು. ಹೊಟ್ಟೆ ಉಬ್ಬರ, ಗ್ಯಾಸ್ ಹಾಗೂ ಮಲಬದ್ಧತೆ ಸಮಸ್ಯೆ ಕಡಿಮೆಯಾಗಲು ಸಹಕಾರಿ.

ರೋಗನಿರೋಧಕ ಶಕ್ತಿ ಹೆಚ್ಚಳ: ಅರಿಶಿನದಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ಸೋಂಕಿನ ಅಪಾಯ ಕಡಿಮೆ ಮಾಡಲು ಸಹಾಯ ಮಾಡಬಹುದು.

ಉರಿಯೂತ ಮತ್ತು ಕೀಲು ನೋವು ಕಡಿಮೆ ಮಾಡಲು ಸಹಕಾರಿ: ಕರ್ಕ್ಯೂಮಿನ್ ದೇಹದಲ್ಲಿನ ಉರಿಯೂತವನ್ನು ತಗ್ಗಿಸುವ ಗುಣ ಹೊಂದಿರುವುದರಿಂದ ಕೀಲು ನೋವು ಅಥವಾ ಸಂಧಿವಾತ ಇರುವವರಿಗೆ ಕೆಲವು ಮಟ್ಟಿಗೆ ಪ್ರಯೋಜನವಾಗಬಹುದು.

ಹೃದಯದ ಆರೋಗ್ಯ ಕಾಪಾಡುತ್ತದೆ: ಕೆಲವು ಅಧ್ಯಯನಗಳ ಪ್ರಕಾರ ಕರ್ಕ್ಯೂಮಿನ್ ರಕ್ತನಾಳಗಳ ಆರೋಗ್ಯ ಕಾಪಾಡಲು ಸಹಾಯ ಮಾಡಬಹುದು. ಸಮತೋಲನ ಆಹಾರ ಮತ್ತು ವ್ಯಾಯಾಮದ ಜೊತೆಗೆ ಇದು ಹೃದಯ ಆರೋಗ್ಯಕ್ಕೂ ಪೂರಕವಾಗಬಹುದು.

ಚರ್ಮದ ಕಾಂತಿ ಹೆಚ್ಚಿಸಲು ನೆರವಾಗುತ್ತದೆ: ಆಂಟಿಆಕ್ಸಿಡೆಂಟ್ ಗುಣಗಳಿಂದ ಚರ್ಮದ ಕೋಶಗಳನ್ನು ರಕ್ಷಿಸಲು ಸಹಾಯವಾಗಬಹುದು. ಇದರಿಂದ ಚರ್ಮ ಆರೋಗ್ಯಕರವಾಗಿ ಕಾಣಲು ನೆರವಾಗುತ್ತದೆ.

ಮೆದುಳಿನ ಆರೋಗ್ಯಕ್ಕೆ ಸಹಕಾರಿ: ಕೆಲವು ಸಂಶೋಧನೆಗಳು ಕರ್ಕ್ಯೂಮಿನ್ ಮೆದುಳಿನ ಕೋಶಗಳ ಕಾರ್ಯಕ್ಷಮತೆಯನ್ನು ಬೆಂಬಲಿಸಬಹುದು ಎಂದು ಸೂಚಿಸಿವೆ. ಆದರೆ ಅಲ್ಜೈಮರ್ಸ್‌ನಂತಹ ಕಾಯಿಲೆಗಳನ್ನು ತಡೆಯುತ್ತದೆ ಎಂಬುದಕ್ಕೆ ಇನ್ನಷ್ಟು ವೈಜ್ಞಾನಿಕ ಅಧ್ಯಯನಗಳು ಅಗತ್ಯವಿದೆ.

ಇದನ್ನೂ ಓದಿ: ಪದೇ ಪದೇ ತುಟಿ ಒಡೆಯುವುದು ಕೇವಲ ಹವಾಮಾನದಿಂದಲ್ಲ ಇದಕ್ಕೆ ಈ ವಿಟಮಿನ್ ಕೊರತೆಯೂ ಕಾರಣವಾಗಿರಬಹುದು

ಅರಿಶಿನದಲ್ಲಿರುವ ಕರ್ಕ್ಯೂಮಿನ್ ದೇಹದಲ್ಲಿ ಸುಲಭವಾಗಿ ಹೀರಿಕೊಳ್ಳುವುದಿಲ್ಲ. ಆದ್ದರಿಂದ ಚಿಟಿಕೆ ಕರಿಮೆಣಸು (Black Pepper) ಸೇರಿಸಿ ಕುಡಿಯುವುದರಿಂದ ಅದರ ಹೀರಿಕೊಳ್ಳುವಿಕೆ ಹೆಚ್ಚಾಗಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸಿವೆ. ಆದರೆ ಕರಿಮೆಣಸನ್ನೂ ಮಿತ ಪ್ರಮಾಣದಲ್ಲೇ ಬಳಸಬೇಕು.

ಯಾರು ಎಚ್ಚರಿಕೆ ವಹಿಸಬೇಕು?

ಪಿತ್ತಕೋಶದಲ್ಲಿ ಕಲ್ಲು ಇರುವವರು, ರಕ್ತ ತೆಳುವಾಗಿಸುವ ಔಷಧಿ ಸೇವಿಸುವವರು, ಗರ್ಭಿಣಿಯರು ಅಥವಾ ಗ್ಯಾಸ್ಟ್ರಿಕ್ ಅಲ್ಸರ್ ಇರುವವರು ಅರಿಶಿನ ನೀರು ಕುಡಿಯುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ. ಅತಿಯಾಗಿ ಸೇವಿಸಿದರೆ ಕೆಲವರಲ್ಲಿ ಹೊಟ್ಟೆ ಉರಿ, ಅಜೀರ್ಣ ಅಥವಾ ಅತಿಸಾರ ಉಂಟಾಗಬಹುದು.

ಅರಿಶಿನ ನೀರು ತಯಾರಿಸುವ ವಿಧಾನ:

ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ಅರ್ಧ ಟೀ ಸ್ಪೂನ್ ಶುದ್ಧ ಅರಿಶಿನ ಪುಡಿ ಅಥವಾ ತಾಜಾ ಅರಿಶಿನದ ಸಣ್ಣ ತುಂಡು ಸೇರಿಸಿ ಕುಡಿಯಬಹುದು. ಬೇಕಾದರೆ ಚಿಟಿಕೆ ಕರಿಮೆಣಸು ಸೇರಿಸಬಹುದು. ಸಕ್ಕರೆ ಸೇರಿಸುವುದನ್ನು ತಪ್ಪಿಸಿ.

ಗಮನಿಸಿ: ಅರಿಶಿನ ನೀರು ಆರೋಗ್ಯಕ್ಕೆ ಪೂರಕವಾದ ಪಾನೀಯವಾಗಿದ್ದರೂ, ಅದು ಯಾವುದೇ ಕಾಯಿಲೆಗೆ ಔಷಧಿಯ ಪರ್ಯಾಯವಲ್ಲ. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಹಾಗೂ ಉತ್ತಮ ಜೀವನಶೈಲಿಯ ಜೊತೆಗೆ ಇದನ್ನು ಮಿತ ಪ್ರಮಾಣದಲ್ಲಿ ಸೇವಿಸಿದರೆ ಹೆಚ್ಚಿನ ಪ್ರಯೋಜನ ದೊರೆಯಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫುಟ್​ಪಾತ್ ಒತ್ತುವರಿ, ಅನಾಥ ವಾಹನಗಳ ತೆರವು ಬೆನ್ನಲ್ಲೇ ಮತ್ತೊಂದು ಅಭಿಯಾನಕ್ಕೆ ಬೆಂಗಳೂರು ಸಿದ್ಧ! ಆಗಸ್ಟ್​ 1ರಿಂದ ಕ್ಲೀನಿಂಗ್ – Kannada News | Bengaluru Cleaning Drive from August 1: Vacant Site Owners Face Property Tax Penalty for Garbage

ಬೆಂಗಳೂರು, ಜುಲೈ 15: ಫುಟ್​ಪಾತ್ ಒತ್ತುವರಿ ತೆರವು, ಅನಾಥ ವಾಹನಗಳ ತೆರವು ಕಾರ್ಯಾಚರಣೆ ಬೆನ್ನಲ್ಲೇ ಮತ್ತೊಂದು ಮಹತ್ವದ ಕಾರ್ಯಾಚರಣೆಗೆ ಬೆಂಗಳೂರು ಸಿದ್ಧವಾಗುತ್ತಿದೆ. ಬೆಂಗಳೂರಿನಲ್ಲಿ ಆಗಸ್ಟ್ 1ರಿಂದ ಮಹತ್ವದ ಸ್ವಚ್ಛತಾ ಅಭಿಯಾನ ಆರಂಭಗೊಳ್ಳಲಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ನಗರದಾದ್ಯಂತ ಸ್ವಚ್ಛತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. ವಿಶೇಷವಾಗಿ, ಕಸದಿಂದ ಕೂಡಿದ ಖಾಲಿ ನಿವೇಶನಗಳ ಮಾಲೀಕರಿಗೆ ಈ ಅಭಿಯಾನವು ನೇರವಾಗಿ ಅನ್ವಯಿಸುತ್ತದೆ. ಆಗಸ್ಟ್ 15ರೊಳಗೆ ತಮ್ಮ ಖಾಲಿ ಸೈಟ್‌ಗಳನ್ನು ಸ್ವಚ್ಛಗೊಳಿಸಲು ಮಾಲೀಕರಿಗೆ ಕಾಲಾವಕಾಶ ನೀಡಲಾಗಿದೆ. ಈ ಅವಧಿಯೊಳಗೆ ಸ್ವಚ್ಛಗೊಳಿಸದಿದ್ದರೆ, ಆಗಸ್ಟ್ 15ರ ನಂತರ ನಗರಾಡಳಿತವೇ ಆ ಜಾಗಗಳನ್ನು ಸ್ವಚ್ಛಗೊಳಿಸಲಿದೆ. ಇಂತಹ ಸಂದರ್ಭಗಳಲ್ಲಿ, ಸ್ವಚ್ಛತಾ ಕಾರ್ಯಕ್ಕೆ ತಗುಲಿದ ವೆಚ್ಚವನ್ನು ಆಯಾ ನಿವೇಶನಗಳ ಮಾಲೀಕರ ಆಸ್ತಿ ತೆರಿಗೆಯೊಂದಿಗೆ ಸೇರಿಸಿ ವಸೂಲಿ ಮಾಡಲಾಗುತ್ತದೆ ಎಂದು ಕೃಷ್ಣಭೈರೇಗೌಡ ಹೇಳಿದ್ದಾರೆ.

ನಗರದ ಸ್ವಚ್ಛತೆಯನ್ನು ಹಂತ ಹಂತವಾಗಿ ಸುಧಾರಿಸುವತ್ತ ಗಮನ ಹರಿಸಲಾಗಿದೆ. ಈಗಾಗಲೇ ಫುಟ್‌ಪಾತ್‌ಗಳ ಸ್ವಚ್ಛತೆ ಬಗ್ಗೆ ಕ್ರಮ ಕೈಗೊಂಡಿದ್ದು, ಈಗ ಕಸ ನಿರ್ಮೂಲನೆಗೆ ಒತ್ತು ನೀಡಲಾಗಿದೆ. ಕಸ ತೆಗೆಯದ ಜಾಗದ ಮಾಲೀಕರಿಗೆ ಬಿಸಿ ಮುಟ್ಟಿಸುವ ಮೂಲಕ ನಗರವನ್ನು ಸ್ವಚ್ಛವಾಗಿಡಲು ಇದು ಹೊಸ ಪ್ರಯತ್ನವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Traditional Beliefs: ಕೈಯಿಂದ ಕೈಗೆ ಮೆಣಸಿನಕಾಯಿ ನೀಡಬಾರದು ಏಕೆ? ಅಸಲಿ ಸತ್ಯ ಇಲ್ಲಿದೆ! – Kannada News | Chilli Handover: Why Never Hand Chilies Directly? Tradition and Science Explained

ಕೈಯಿಂದ ಕೈಗೆ ಮೆಣಸಿನಕಾಯಿ ನೀಡಬಾರದು ಏಕೆ?Image Credit source: vecteezy.com

ಭಾರತೀಯ ಸಂಸ್ಕೃತಿಯಲ್ಲಿ ಇಂದಿಗೂ ಅನೇಕ ಸಾಂಪ್ರದಾಯಿಕ ನಂಬಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಅಂತಹ ನಂಬಿಕೆಗಳಲ್ಲಿ “ಯಾರ ಕೈಗೂ ನೇರವಾಗಿ ಮೆಣಸಿನಕಾಯಿಯನ್ನು ಕೊಡಬಾರದು” ಎಂಬುದು ಕೂಡ ಒಂದು. ಇಂದಿಗೂ ಅನೇಕ ಮನೆಗಳಲ್ಲಿ ಮೆಣಸಿನಕಾಯಿ ನೀಡುವಾಗ ಅದನ್ನು ನೇರವಾಗಿ ಕೈಗೆ ಕೊಡದೆ, ತಟ್ಟೆಯಲ್ಲೋ ಅಥವಾ ನೆಲದ ಮೇಲೋ ಇಟ್ಟು ಕೊಡುತ್ತಾರೆ. ಹೀಗೆ ನೇರವಾಗಿ ಕೈಗೆ ನೀಡಿದರೆ ಇಬ್ಬರ ನಡುವೆ ಜಗಳವಾಗುತ್ತದೆ ಎಂಬ ಬಲವಾದ ನಂಬಿಕೆ ಜನ ಜನಿತವಾಗಿದೆ.

ಆದರೆ, ಈ ನಂಬಿಕೆಯ ಹಿಂದೆ ಕೇವಲ ಜಗಳದ ಭಯ ಮಾತ್ರವಿಲ್ಲ, ಬದಲಿಗೆ ಅತ್ಯಂತ ತಾರ್ಕಿಕ ಮತ್ತು ವೈಜ್ಞಾನಿಕ ಕಾರಣಗಳಿವೆ ಎಂದು ಜ್ಯೋತಿಷಿ ಚಂದ್ರೇಶ್ ಶರ್ಮಾ ವಿವರಿಸಿದ್ದಾರೆ. ಆ ಆಸಕ್ತಿದಾಯಕ ಕಾರಣಗಳ ವಿವರ ಇಲ್ಲಿದೆ:

ಸಂಬಂಧಗಳ ಮೇಲಿನ ಪರಿಣಾಮ:

ಲೋಕರೂಢಿಯಲ್ಲಿರುವ ನಂಬಿಕೆಯ ಪ್ರಕಾರ, ಮೆಣಸಿನಕಾಯಿಯ ಖಾರ ಗುಣವು ಕೇವಲ ನಾಲಿಗೆಗೆ ಮಾತ್ರವಲ್ಲ, ಮನುಷ್ಯರ ಸಂಬಂಧಗಳಿಗೂ ತಟ್ಟುತ್ತದೆ ಎಂದು ಭಾವಿಸಲಾಗಿದೆ. ಮೆಣಸಿನಕಾಯಿಯನ್ನು ನೇರವಾಗಿ ಕೈಯಿಂದ ಕೈಗೆ ವರ್ಗಾಯಿಸುವುದರಿಂದ ಆ ಇಬ್ಬರು ವ್ಯಕ್ತಿಗಳ ನಡುವೆ ಭಿನ್ನಾಭಿಪ್ರಾಯಗಳು ಮೂಡಿ, ಜಗಳಗಳು ಸಂಭವಿಸಬಹುದು ಎಂಬುದು ಸಮಾಜದಲ್ಲಿ ಆಳವಾಗಿ ಬೇರೂರಿರುವ ಒಂದು ಸಾಂಪ್ರದಾಯಿಕ ನಂಬಿಕೆಯಾಗಿದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಸುರಕ್ಷತೆ ಮತ್ತು ಆರೋಗ್ಯದ ಕಾರಣ (ವೈಜ್ಞಾನಿಕ ಹಿನ್ನೆಲೆ):

ಈ ನಿಯಮದ ಹಿಂದೆ ಅತ್ಯಂತ ಸರಳ ಹಾಗೂ ಪ್ರಾಯೋಗಿಕವಾದ ಆರೋಗ್ಯದ ಕಾರಣವಿದೆ. ಮೆಣಸಿನಕಾಯಿಯಲ್ಲಿ ಚರ್ಮ ಮತ್ತು ಕಣ್ಣುಗಳಿಗೆ ತೀವ್ರ ಕಿರಿಕಿರಿಯನ್ನು ಉಂಟುಮಾಡುವ ಸಂಯುಕ್ತಗಳು (Capsaicin) ಇರುತ್ತವೆ. ಹಸಿ ಅಥವಾ ಒಣ ಮೆಣಸಿನಕಾಯಿಯನ್ನು ಕೈಯಿಂದ ಕೈಗೆ ರವಾನಿಸುವಾಗ, ಅದರ ಖಾರದ ಅಂಶ ಅಥವಾ ಸಣ್ಣ ರೇಣುಗಳು ಕೈಗೆ ತಗುಲಬಹುದು.

ಆಕಸ್ಮಿಕ ಅಸ್ವಸ್ಥತೆಯಿಂದ ರಕ್ಷಣೆ:

ಕೈಯಿಂದ ಕೈಗೆ ನೀಡುವಾಗ ಆಕಸ್ಮಿಕವಾಗಿ ಮೆಣಸಿನಕಾಯಿ ಕೆಳಗೆ ಬಿದ್ದರೆ ಅಥವಾ ಅದರ ಖಾರದ ಧೂಳು ಕೈಗೆ ಅಂಟಿಕೊಂಡರೆ, ಜನರು ಅದೇ ಕೈಯಿಂದ ಅರಿವಿಲ್ಲದೇ ಕಣ್ಣು, ಮೂಗು ಅಥವಾ ಮುಖವನ್ನು ಮುಟ್ಟಿಕೊಳ್ಳುವ ಸಾಧ್ಯತೆ ಇರುತ್ತದೆ. ಇದು ತೀವ್ರ ಉರಿ ಹಾಗೂ ಗಂಭೀರ ಅಸ್ವಸ್ಥತೆಗೆ ಕಾರಣವಾಗಬಹುದು. ಈ ರೀತಿಯ ದೈಹಿಕ ಕಿರಿಕಿರಿಯನ್ನು ತಪ್ಪಿಸಲು, ಮೆಣಸಿನಕಾಯಿಯನ್ನು ನೇರವಾಗಿ ಕೈಗಿಡುವ ಬದಲು ತಟ್ಟೆಯಲ್ಲಿ ಅಥವಾ ಯಾವುದಾದರೂ ಪಾತ್ರೆಯಲ್ಲಿಟ್ಟು ಕೊಡುವ ಉತ್ತಮ ಸಂಪ್ರದಾಯವನ್ನು ನಮ್ಮ ಹಿರಿಯರು ಜಾರಿಗೆ ತಂದರು ಎಂದು ಹೇಳಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:38 am, Wed, 15 July 26

Source link

ಹೈಕೋರ್ಟ್ ಮಹತ್ವದ ತೀರ್ಪು: ಪತ್ನಿಗೆ ಪತಿಯ ಒಟ್ಟು ಸಂಬಳದ ಶೇ. 25 ರಷ್ಟು ಜೀವನಾಂಶ ನೀಡುವುದು ಕಡ್ಡಾಯವಲ್ಲ – Kannada News | Alimony: Allahabad HC Says 25 percent Not Mandatory, Net Income for Divorce Maintenance

ಪ್ರಯಾಗ್‌ರಾಜ್, ಜುಲೈ 15: ವಿಚ್ಛೇದನ(Divorce) ಪಡೆದ ಪತ್ನಿಯ ಜೀವನ ನಿರ್ವಹಣೆಗೆ ಪತಿಯ ಆದಾಯದ ಶೇಕಡಾ 25 ರಷ್ಟು ಹಣವನ್ನು ಜೀವನಾಂಶವಾಗಿ ನೀಡಬೇಕು ಎಂಬ ರೂಢಿ ಕೇವಲ ಒಂದು ಸಾಮಾನ್ಯ ಮಾರ್ಗಸೂಚಿಯಷ್ಟೇ ಹೊರತು, ಅದು ಕಡ್ಡಾಯವಾಗಿ ಪಾಲಿಸಲೇಬೇಕಾದ ನಿಯಮವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ಸ್ಪಷ್ಟನೆ ನೀಡಿದೆ. ಪ್ರತಿ ಪ್ರಕರಣದ ಸನ್ನಿವೇಶ, ಸಾಕ್ಷ್ಯಗಳನ್ನು ಆಧರಿಸಿ ಜೀವನಾಂಶದ ಮೊತ್ತವನ್ನು ಹೆಚ್ಚು ಅಥವಾ ಕಡಿಮೆ ಮಾಡುವ ಸಂಪೂರ್ಣ ವಿವೇಚನಾ ಅಧಿಕಾರ ನ್ಯಾಯಾಲಯಗಳಿಗಿದೆ ಎಂದು ಹೈಕೋರ್ಟ್ ಹೇಳಿದೆ.

ಕಾನ್ಪುರ ದೇಹತ್‌ನ ಕೌಟುಂಬಿಕ ನ್ಯಾಯಾಲಯವು ತನಗೆ ನೀಡಿದ್ದ 12,000 ರೂ. ಜೀವನಾಂಶವನ್ನು ಹೆಚ್ಚಿಸುವಂತೆ ಕೋರಿ ವಿಚ್ಛೇದಿತ ಮಹಿಳೆ ಸಲ್ಲಿಸಿದ್ದ ಅರ್ಜಿ ಹಾಗೂ ಇದನ್ನು ವಿರೋಧಿಸಿ ಆಕೆಯ ಮಾಜಿ ಪತಿ ಜೈ ಪ್ರಕಾಶ್ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಚಲ್ ಸಚ್‌ದೇವ್ ಅವರ ಪೀಠವು ಜುಲೈ 10 ರಂದು ಈ ಮಹತ್ವದ ಆದೇಶ ಹೊರಡಿಸಿದೆ. ಅಲ್ಲದೆ, ಮಹಿಳೆಯ ಜೀವನಾಂಶವನ್ನು 12,000 ರೂ.ನಿಂದ 20,000 ರೂ. ಕ್ಕೆ ಹೆಚ್ಚಿಸಿ ಆದೇಶಿಸಿದೆ.

‘ನಿವ್ವಳ ಆದಾಯ’ ಎಂದರೆ ಒಟ್ಟು ಸಂಬಳವಲ್ಲ

ಜೀವನಾಂಶವನ್ನು ಲೆಕ್ಕ ಹಾಕುವಾಗ ಕೆಳ ನ್ಯಾಯಾಲಯಗಳು ಮಾಡುವ ಸಾಮಾನ್ಯ ತಪ್ಪುಗಳನ್ನು ಹೈಕೋರ್ಟ್ ಸೂಕ್ಷ್ಮವಾಗಿ ಎತ್ತಿ ತೋರಿಸಿದೆ.

ಕಡ್ಡಾಯ ಕಡಿತಗಳ ನಂತರದ ಗಳಿಕೆ: ಜೀವನಾಂಶ ನಿಗದಿಪಡಿಸಲು ಪರಿಗಣಿಸುವ ಪತಿಯ ‘ನಿವ್ವಳ ಆದಾಯ’ ಎಂದರೆ ಆತನ ಒಟ್ಟು ಸಂಬಳವಲ್ಲ . ಅದರಲ್ಲಿ ಸರ್ಕಾರದ ಕಡ್ಡಾಯ ಕಡಿತಗಳು, ಪಿಎಫ್ ಮತ್ತು ಆದಾಯ ತೆರಿಗೆಯನ್ನು ಕಳೆದ ನಂತರ ಕೈಗೆ ಸಿಗುವ ವಾಸ್ತವಿಕ ಸಂಬಳವನ್ನು ಮಾತ್ರ ನ್ಯಾಯಾಲಯಗಳು ಲೆಕ್ಕಕ್ಕೆ ತೆಗೆದುಕೊಳ್ಳಬೇಕು.

ಅಫಿಡವಿಟ್ ಸಲ್ಲಿಕೆ ಕಡ್ಡಾಯ:ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ, ಪತಿಯಾದವನು ತನ್ನ ನಿಜವಾದ ಆಸ್ತಿ ಮತ್ತು ಸಾಲದ ಹೊಣೆಗಾರಿಕೆಗಳನ್ನು ಮುಚ್ಚಿಡದೆ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸುವುದು ಕಡ್ಡಾಯವಾಗಿದೆ. ಈ ಪ್ರಕರಣದಲ್ಲಿ ಪತಿ ಜೈ ಪ್ರಕಾಶ್ ಇದನ್ನು ಸಲ್ಲಿಸಲು ವಿಫಲರಾಗಿದ್ದನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.

ಮತ್ತಷ್ಟು ಓದಿ: ಕೋರ್ಟ್ ಮೆಟ್ಟಿಲೇರಿದ್ದ 15 ದಂಪತಿ ಮತ್ತೆ ಒಂದಾದ ಕ್ಷಣ: ಅಪರೂಪದ ಘಟನೆಗೆ ಸಾಕ್ಷಿಯಾದ ಧಾರವಾಡ ಕೋರ್ಟ್

ಜೀವನಾಂಶ ಪಡೆಯಲು ಪತ್ನಿಗೆ ಇರಬೇಕಾದ ಷರತ್ತುಗಳು ಕಾನೂನುಬದ್ಧವಾಗಿ ವಿವಾಹವಾದ ಪತ್ನಿ ವಿಚ್ಛೇದನದ ನಂತರ ಜೀವನಾಂಶ ಪಡೆಯಲು ಇರುವ ಅರ್ಹತೆಗಳನ್ನು ಹೈಕೋರ್ಟ್ ಪುನರುಚ್ಚರಿಸಿದೆ.

-ಪತ್ನಿಯು ಸ್ವತಃ ಜೀವನ ನಿರ್ವಹಣೆ ಮಾಡಲು ಅಸಮರ್ಥಳಾಗಿರಬೇಕು.

-ಆಕೆ ವಿಚ್ಛೇದನದ ನಂತರ ಮತ್ತೊಂದು ಮದುವೆಯಾಗಿರಬಾರದು

-ಆಕೆ  ಬೇರೊಬ್ಬ ವ್ಯಕ್ತಿಯ ಜತೆ ಸಂಬಂಧದಲ್ಲಿರಬಾರದು

2017ರ  ‘ಕಲ್ಯಾಣ್ ಡೇ ಚೌಧರಿ ಹಾಗೂ ರೀಟಾ ಡೇ ಚೌಧರಿ’ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ ಹೈಕೋರ್ಟ್, ಶೇ. 25 ರಷ್ಟು ಹಣ ನೀಡುವ ರೂಢಿ ಕೇವಲ ಒಂದು ತತ್ವವಷ್ಟೇ ಎಂದು ಸ್ಪಷ್ಟಪಡಿಸುವ ಮೂಲಕ ಕೆಳ ನ್ಯಾಯಾಲಯಗಳ ಗೊಂದಲಕ್ಕೆ ತೆರೆ ಎಳೆದಿದೆ.

ಕೌಟುಂಬಿಕ ನ್ಯಾಯಾಲಯದ ದೋಷ ಸರಿಪಡಿಸಿದ ಹೈಕೋರ್ಟ್

ಸಾಮಾನ್ಯವಾಗಿ ಕೆಳ ನ್ಯಾಯಾಲಯಗಳು ನೀಡುವ ಜೀವನಾಂಶದ ಮೊತ್ತದಲ್ಲಿ ಹೈಕೋರ್ಟ್‌ಗಳು ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಈ ಪ್ರಕರಣದಲ್ಲಿ ಕೌಟುಂಬಿಕ ನ್ಯಾಯಾಲಯವು ಪತಿಯ ನಿಜವಾದ ಆದಾಯ ಹಾಗೂ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹಣದುಬ್ಬರವನ್ನು ಲೆಕ್ಕಿಸದೆ, ಯಾವುದೇ ಆಧಾರವಿಲ್ಲದೆ 12,000 ರೂ. ನಿಗದಿಪಡಿಸಿ ತಪ್ಪು ಮಾಡಿತ್ತು.

ಈ ವಸ್ತುಸ್ಥಿತಿಯ ಸಾಕ್ಷ್ಯಗಳನ್ನು ಗಮನಿಸಿದ ಹೈಕೋರ್ಟ್, ಮಹಿಳೆಯ ನ್ಯಾಯಸಮ್ಮತ ಜೀವನಕ್ಕಾಗಿ ಆಕೆಯ ಜೀವನಾಂಶವನ್ನು 20,000 ರೂ.ಗೆ ಏರಿಸಿ, ಆಕೆ ಅರ್ಜಿ ಸಲ್ಲಿಸಿದ ಮೊದಲ ದಿನಾಂಕದಿಂದಲೇ ಅನ್ವಯವಾಗುವಂತೆ ಬಾಕಿ ಹಣವನ್ನೂ ಪಾವತಿಸಲು ಪತಿಗೆ ಆದೇಶಿಸಿದೆ. ಇದು ದೇಶದ ಕೌಟುಂಬಿಕ ಕಾನೂನು ವಲಯದಲ್ಲಿ ಪತಿ ಹಾಗೂ ಪತ್ನಿಯರಿಬ್ಬರ ಆರ್ಥಿಕ ಹಕ್ಕುಗಳನ್ನು ಸಮತೋಲನಗೊಳಿಸುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ ತೀರ್ಪಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸರ್ವೈಕಲ್ ಕ್ಯಾನ್ಸರ್ ವಿರುದ್ಧ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ: 14 ವರ್ಷದ ಹೆಣ್ಣುಮಕ್ಕಳಿಗೆ ಉಚಿತ HPV ಲಸಿಕೆ ಅಭಿಯಾನ ಪ್ರಾರಂಭ – Kannada News | Karnataka Government Launches Free HPV Cervical Cancer Vaccine Drive for 14 Year Old Girls

ಬೆಂಗಳೂರು, ಜುಲೈ 15: ಕೊರೊನಾ ಜಾಗತಿಕ ಹಾವಳಿಯ ನಡುವೆ ಕೊಂಚ ಮರೆಯಾಗಿದ್ದ ಮಹಾಮಾರಿ ಕ್ಯಾನ್ಸರ್, ಈಗ ಮತ್ತೆ ಕರ್ನಾಟಕ ರಾಜ್ಯದಲ್ಲಿ ಮಹಿಳೆಯರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸುತ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಯುವತಿಯರಿಂದ ಹಿಡಿದು ಮಧ್ಯವಯಸ್ಕ ಮಹಿಳೆಯರವರೆಗೆ ತೀವ್ರವಾಗಿ ಕಾಡುತ್ತಿರುವ ‘ಗರ್ಭಕಂಠ ಕ್ಯಾನ್ಸರ್’ (Cervical Cancer) ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಈಗ ಮಹತ್ವದ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. 14 ವರ್ಷದ ಹೆಣ್ಣುಮಕ್ಕಳಿಗೆ ಉಚಿತವಾಗಿ ಎಚ್‌ಪಿವಿ (HPV) ಲಸಿಕೆ ನೀಡುವ ಬೃಹತ್ ಅಭಿಯಾನಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ.

ಕರ್ನಾಟಕದಲ್ಲಿ 2026ರಲ್ಲಿ ಲಸಿಕೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಆಗಮನ

ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಲಸಿಕೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಲಸಿಕೆ ಪಡೆಯಲು ಮುಂದೆ ಬರುವ ಮಹಿಳೆಯರ ಸಂಖ್ಯೆಯಲ್ಲಿ ಶೇ 50ರಷ್ಟು ಹೆಚ್ಚಳ ಕಂಡುಬಂದಿದೆ. ಈ ಹಿಂದೆ ಖಾಸಗಿ ಆಸ್ಪತ್ರೆಗಳಲ್ಲಿ ಈ ಲಸಿಕೆಗೆ 3 ರಿಂದ 5 ಸಾವಿರ ರೂಪಾಯಿಗಳವರೆಗೆ ದುಬಾರಿ ವೆಚ್ಚ ತಗಲುತ್ತಿತ್ತು.

ಇದರಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಹೆಣ್ಣುಮಕ್ಕಳಿಗೆ ಲಸಿಕೆ ಲಭ್ಯವಾಗದೆ, ಹಲವರು ಪ್ರಾಣ ಕಳೆದುಕೊಳ್ಳುವ ಭೀಕರ ಪರಿಸ್ಥಿತಿ ಇತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಸ್ತ್ರೀರೋಗ ತಜ್ಞರ ಬೇಡಿಕೆಗೆ ಸ್ಪಂದಿಸಿರುವ ಸರ್ಕಾರ, ಉಚಿತ ವ್ಯಾಕ್ಸಿನ್ ಡ್ರೈವ್ ಆರಂಭಿಸಿದ್ದು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಆರೋಗ್ಯ ಇಲಾಖೆಯ ಆಯುಕ್ತರಾದ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಇದನ್ನೂ ಓದಿ Cervical cancer; ಗರ್ಭಕಂಠದ ಕ್ಯಾನ್ಸರ್ ಲಕ್ಷಣ, ಕಾರಣ, ಪರಿಣಾಮ ಮತ್ತು ನಿರ್ವಹಣೆ ಮಾಹಿತಿ ಇಲ್ಲಿದೆ

ಗರ್ಭಕಂಠ ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳು

  • ಮಹಿಳೆಯರಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿರುವ ಧೂಮಪಾನ ಹಾಗೂ ಮದ್ಯಪಾನದ ಹವ್ಯಾಸ.
  • ಬದಲಾದ ಪಾಶ್ಚಾತ್ಯ ಹಾಗೂ ಮಾಡರ್ನ್ ಜೀವನಶೈಲಿ.
  • ಅತಿಯಾದ ಲೈಂಗಿಕತೆ ಮತ್ತು ಗರ್ಭನಿರೋಧಕಗಳ ಅಸಮರ್ಪಕ ಬಳಕೆ.
  • ಅತಿ ಬೇಗನೇ ಋತುಸ್ರಾವವಾಗುವುದು ಅಥವಾ ತಡವಾಗಿ ಋತುಬಂಧ (Menopause) ತಲುಪುವುದು.
  • ದೇಹದಲ್ಲಿ ಉಂಟಾಗುವ ಹಾರ್ಮೋನು ಬದಲಾವಣೆಗಳ ಚಿಕಿತ್ಸೆಗಳು ಹಾಗೂ ಸಂತಾನೋತ್ಪತ್ತಿಯ ನಾನಾ ಅಂಶಗಳು.

ಈ ಮಾರಕ ರೋಗದಿಂದ ರಕ್ಷಣೆ ಪಡೆಯಲು ಲಸಿಕೆಯೊಂದೇ ಸೂಕ್ತ ಮಾರ್ಗವಾಗಿದ್ದು, ಅರ್ಹ ಹೆಣ್ಣುಮಕ್ಕಳ ಪೋಷಕರು ಸರ್ಕಾರದ ಈ ಉಚಿತ ಲಸಿಕಾ ಅಭಿಯಾನದ ಸದುಪಯೋಗ ಪಡೆದುಕೊಂಡು ಎಚ್ಚರಿಕೆ ವಹಿಸಬೇಕಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:14 am, Wed, 15 July 26

Source link

ಈ ಪ್ಯಾನ್ ಇಂಡಿಯಾ ಸ್ಟಾರ್ ನಟನಿಗೆ ಶಿವಣ್ಣನ ಆ ಸಿನಿಮಾ ಬಲು ಇಷ್ಟ – Kannada News | Prithviraj Sukumaran says his all time favourite movie is Kannada’s OM

ಕಳೆದ ಕೆಲ ವರ್ಷಗಳಿಂದ ಮಲಯಾಳಂ ಸಿನಿಮಾಗಳು (Cinema) ತಮ್ಮ ಕಂಟೆಂಟ್ ಇಂದ ದೇಶದಾದ್ಯಂತ ಮಾತ್ರವಲ್ಲ ವಿಶ್ವ ಮಟ್ಟದಲ್ಲಿ ಸಿನಿಮಾ ಪ್ರೇಮಿಗಳನ್ನು ತನ್ನತ್ತೆ ಸೆಳೆದಿದೆ. ಯಾವ ಸಿನಿಮಾ ವಿಮರ್ಶಕರು, ಸಿನಿಮಾ ಪ್ರೇಮಿಗಳ ಬಾಯಲ್ಲೂ ಮಲಯಾಳಂ ಸಿನಿಮಾಗಳ ಗುಣಗಾನ ಕೇಳಿ ಬರುತ್ತಿದೆ. ಆದರೆ ಇದೀಗ ಮಲಯಾಳಂನ ಸ್ಟಾರ್ ನಟ ಮತ್ತು ನಿರ್ದೇಶಕ ಒಬ್ಬರು ಕನ್ನಡ ಸಿನಿಮಾ ಒಂದು ತಮ್ಮ ಆಲ್​​ಟೈಮ್ ಫೇವರೇಟ್ ಎಂದಿದ್ದಾರೆ.

ಪೃಥ್ವಿರಾಜ್ ಸುಕುಮಾರ್, ಮಲಯಾಳಂನ ಸ್ಟಾರ್ ನಟ ಮತ್ತು ನಿರ್ದೇಶಕ. ಹಿಂದಿ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿಯೂ ನಟಿಸಿರುವ ಪೃಥ್ವಿರಾಜ್ ಸುಕುಮಾರ್, ಅತ್ಯುತ್ತಮ ಪ್ಯಾನ್ ಇಂಡಿಯಾ ನಟರಲ್ಲೊಬ್ಬರು. ಇದೀಗ ಅವರು ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾನಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದು, ಖುದ್ದು ರಾಜಮೌಳಿ ಅವರು, ನಾನು ಪೃಥ್ವಿರಾಜ್ ಅಂಥಹಾ ನಟನ ನೋಡಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಪ್ಪಟ ಸಿನಿಮಾ ಪ್ರೇಮಿ, ಸಿನಿಮಾ ವಿಧ್ಯಾರ್ಥಿ ಆಗಿರುವ ಪೃಥ್ವಿರಾಜ್ ಸುಕುಮಾರ್ ಅವರು ಹಲವು ಭಾಷೆಗಳ, ಹಲವಾರು ಸಿನಿಮಾಗಳನ್ನು ವೀಕ್ಷಿಸಿದ್ದಾರೆ, ಅಭ್ಯಾಸ ಮಾಡಿದ್ದಾರೆ. ಇತ್ತೀಚೆಗೆ ತಮ್ಮ ನಟನೆಯ ‘ಐ ನೋಬಡಿ’ ಸಿನಿಮಾದ ಪ್ರಚಾರಾರ್ಥ ಹಲವು ಕಡೆ ಸಂದರ್ಶನಗಳನ್ನು ನೀಡಿದ್ದರು. ಅಂತೆಯೇ ಹಾಲಿವುಡ್ ರಿಪೋರ್ಟರ್​​ಗೂ ಸಹ ಸಂದರ್ಶನ ನೀಡಿದ್ದರು. ಈ ವೇಳೆ ತಮಗೆ ಇಷ್ಟವಾದ ಸಿನಿಮಾಗಳ ಬಗ್ಗೆ ಪೃಥ್ವಿರಾಜ್ ಕುಮಾರ್ ಸುಕುಮಾರನ್ ಮಾತನಾಡಿ, ಪ್ರತಿಭಾಷೆಯಲ್ಲೂ ತಮಗೆ ಇಷ್ಟವಾದ ಸಿನಿಮಾಗಳನ್ನು ಹೆಸರಿಸಿದರು.

ಇದನ್ನೂ ಓದಿ:ಗಮನ ಸೆಳೆದ ‘ಮ್ಯಾರೇಜ್ ಪಾರ್ಟಿ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್

ಹಿಂದಿಯಲ್ಲಿ ತಮಗೆ ‘ದೀವಾರ್’ ಸಿನಿಮಾ ಬಹಳ ಇಷ್ಟ ಎಂದ ಪೃಥ್ವಿರಾಜ್, ತೆಲುಗಿನಲ್ಲಿ ‘ಬಾಹುಬಲಿ’ ಬಲು ಇಷ್ಟ. ಕನ್ನಡದಲ್ಲಿ ‘ಓಂ’ ಸಿನಿಮಾ ನನಗೆ ಬಹಳ ಇಷ್ಟ. ಉಪೇಂದ್ರ ಅವರು ಅದನ್ನು ಬರೆದಿರುವ ರೀತಿ, ನಿರ್ದೇಶನ ಮಾಡಿರುವ ಅದ್ಭುತ. ಒನ್ ಆಂಡ್ ಓನ್ಲಿ ಶಿವರಾಜ್ ಕುಮಾರ್ ನಟಿಸಿರುವ ಆ ಸಿನಿಮಾ ನನ್ನ ಆಲ್​​ಟೈಂ ಫೇವರೇಟ್ ಸಿನಿಮಾಗಳಲ್ಲಿ ಅದೂ ಸಹ ಒಂದು’ ಎಂದಿದ್ದಾರೆ. ಪೃಥ್ವಿರಾಜ್ ಸುಕುಮಾರ್ ಯಾವುದೇ ಕನ್ನಡ ಸಿನಿಮಾಗಳಲ್ಲಿ ನಟಿಸಿಲ್ಲ. ‘ಕೆಜಿಎಫ್’ ಸಿನಿಮಾವನ್ನು ಕೇರಳದಲ್ಲಿ ವಿತರಣೆಯಷ್ಟೆ ಮಾಡಿದ್ದರು. ಆದರೆ ಕನ್ನಡ ಸಿನಿಮಾಗಳ ಬಗ್ಗೆ ಆಸಕ್ತಿ ಮತ್ತು ಕುತೂಹಲವನ್ನು ಹೊಂದಿದ್ದಾರೆ.

ಇನ್ನು ಅದೇ ಸಂದರ್ಶನದಲ್ಲಿ, ತಮಿಳಿನಲ್ಲಿ ತಮಗೆ ಕಮಲ್ ಹಾಸನ್, ಶಿವಾಜಿ ಗಣೇಶನ್ ನಟನೆಯ ‘ತೇವರ್ ಮಗನ್’ ಸಿನಿಮಾ ಬಲು ಇಷ್ಟ, ಈಗ ಬಿಡುಗಡೆ ಆಗುತ್ತಿರುವ ಹಲವು ಸಿನಿಮಾಗಳಿಗಿಂತಲೂ ಆ ಸಿನಿಮಾ ಚೆನ್ನಾಗಿದೆ ಎಂದಿದ್ದಾರೆ. ಇನ್ನು ಮಲಯಾಳಂನಲ್ಲಿ ತಮಗೆ ಸಾಕಷ್ಟು ಫೇವರೇಟ್​ ಇವೆ ಆದರೆ ಈ ಬಾರಿ ನಾನು ಮಮ್ಮುಟಿ ನಟನೆಯ ‘ಭೂತಗನ್ನಡಿ’ ಸಿನಿಮಾ ಪಿಕ್ ಮಾಡುತ್ತೇನೆ ಎಂದು ತಮ್ಮ ಆಪ್ಷನ್​​ಗಳನ್ನು ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ ಮಳೆ ಕೊರತೆ ಪರಿಣಾಮ: ದಿನಸಿ ಬೆಲೆ ಗಗನಕ್ಕೇರಿಕೆ, ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ – Kannada News | Karnataka Monsoon Deficit Pushes Grocery Prices Higher: Rice, Pulses and Essentials Turn Costlier

ಬೆಂಗಳೂರು, ಜುಲೈ 15: ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಮಳೆ (Monsoon Rain) ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದಿರುವುದು ಕೃಷಿ ಚಟುವಟಿಕೆಗಳಿಗೆ ದೊಡ್ಡ ಹೊಡೆತ ನೀಡಿದೆ. ಮಳೆ ಅಭಾವದಿಂದ ಭತ್ತ, ಕಬ್ಬು, ಉದ್ದು ಸೇರಿದಂತೆ ಹಲವು ಪ್ರಮುಖ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿದ್ದು, ಉತ್ಪಾದನೆ ಇಳಿಕೆಯಾಗುವ ಆತಂಕ ಎದುರಾಗಿದೆ. ಬೆಳೆ ಪ್ರಮಾಣ ಕಡಿಮೆಯಾದಂತೆ ಮಾರುಕಟ್ಟೆಯಲ್ಲಿ ಪೂರೈಕೆಯ ಮೇಲೂ ಪರಿಣಾಮ ಬೀಳುತ್ತಿದ್ದು, ದಿನಸಿ ವಸ್ತುಗಳ ಬೆಲೆ ಹಂತ ಹಂತವಾಗಿ ಏರಿಕೆಯಾಗುತ್ತಿದೆ.

ವ್ಯಾಪಾರಿಗಳ ಪ್ರಕಾರ, ಈಗಾಗಲೇ ಹಲವಾರು ಆಹಾರ ಧಾನ್ಯಗಳ ಬೆಲೆ ಏರಿಕೆಯಾಗಿದೆ. ಮಳೆ ಇದೇ ರೀತಿ ಕೊರತೆಯಾಗಿದ್ದರೆ ಮುಂದಿನ ದಿನಗಳಲ್ಲಿ ಅಕ್ಕಿ, ಬೇಳೆ ಹಾಗೂ ಇತರ ಅಗತ್ಯ ವಸ್ತುಗಳ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಉತ್ಪಾದನೆ ಕುಸಿದಂತೆ ಮಾರುಕಟ್ಟೆಯಲ್ಲಿ ಲಭ್ಯತೆ ಕಡಿಮೆಯಾಗುವುದು ಸಹಜವಾಗಿದ್ದು, ಅದರ ನೇರ ಪರಿಣಾಮ ಗ್ರಾಹಕರ ಖರೀದಿ ವೆಚ್ಚದ ಮೇಲೆ ಬೀಳಲಿದೆ.

ಏರಿಕೆಯಾಗಿರುವ ದಿನಸಿ ದರ (ಪ್ರತಿ ಕೆ.ಜಿ.ಗೆ ರೂಪಾಯಿಗಳಲ್ಲಿ)

ವ್ಯಾಪಾರಿಗಳು ತಿಳಿಸಿರುವಂತೆ, ಕೃಷಿ ಉತ್ಪಾದನೆ ಕುಸಿತದ ಭೀತಿ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದ್ದು, ಬೆಲೆ ಏರಿಕೆಯ ಪ್ರವೃತ್ತಿ ಮುಂದುವರಿಯುತ್ತಿದೆ. ಉತ್ಪಾದನೆ ಹೆಚ್ಚಾದರೆ ಮಾತ್ರ ಬೆಲೆ ನಿಯಂತ್ರಣ ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಆಷಾಢ ಆರಂಭದಲ್ಲೇ ಮಾಂಸಪ್ರಿಯರಿಗೆ ಶಾಕ್: ಚಿಕನ್, ಮೊಟ್ಟೆ ಬೆಲೆಯಲ್ಲಿ ದಾಖಲೆಯ ಏರಿಕೆ

ಮಳೆ ಕೊರತೆಯಿಂದ ರೈತರು ಬೆಳೆ ನಷ್ಟದ ಆತಂಕ ಎದುರಿಸುತ್ತಿದ್ದರೆ, ಮತ್ತೊಂದೆಡೆ ಗ್ರಾಹಕರು ದಿನೇ ದಿನೇ ಏರುತ್ತಿರುವ ಆಹಾರ ಧಾನ್ಯಗಳ ಬೆಲೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮನೆಯ ಅಡುಗೆ ಬಜೆಟ್ ಮೇಲಿನ ಒತ್ತಡ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕೃಷಿ ಮತ್ತು ಮಾರುಕಟ್ಟೆ ಎರಡರ ಮೇಲೂ ಮುಂಗಾರು ಮಳೆಯ ಪರಿಣಾಮ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಉತ್ತಮ ಮಳೆಯೇ ಈ ಪರಿಸ್ಥಿತಿಗೆ ಪರಿಹಾರ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ವರದಿ: ನಟರಾಜ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೆಮಿಫೈನಲ್​ನಲ್ಲಿ ಸೋತ ಫ್ರಾನ್ಸ್ ತಂಡಕ್ಕಿದೆ ಮತ್ತೊಂದು ಪಂದ್ಯ..! – Kannada News | France Eyes Bronze in WC 3rd Place Playoff

ಫಿಫಾ ವಿಶ್ವಕಪ್ 2026ರ ಮೊದಲ ಸೆಮಿಫೈನಲ್‌ನಲ್ಲಿ ಸ್ಪೇನ್ ವಿರುದ್ಧ 2-0 ಗೋಲುಗಳ ಅಂತರದಿಂದ ಸೋತಿರುವ ಫ್ರಾನ್ಸ್ ತಂಡದ ವಿಶ್ವಕಪ್ ಕಮರಿದೆ. ಇದಾಗ್ಯೂ ಫ್ರಾನ್ಸ್​ ಪಡೆಯ ವಿಶ್ವಕಪ್ ಅಭಿಯಾನ ಅಂತ್ಯವಾಗಿಲ್ಲ. ಬದಲಿಗೆ ಕಿಲಿಯನ್ ಎಂಬಾಪೆ ಪಡೆ ಮೂರನೇ ಸ್ಥಾನಕ್ಕಾಗಿ ಮತ್ತೆ ಕಣಕ್ಕಿಳಿಯಲಿದ್ದಾರೆ.

ಅಂದರೆ ಫಿಫಾ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಸೋಲುವ ತಂಡಗಳ ನಡುವೆ ಮೂರನೇ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡವು ಕಂಚಿನ ಪದಕದೊಂದಿಗೆ 3ನೇ ಸ್ಥಾನ ಪಡೆದರೆ, ಸೋಲುವ ತಂಡವು 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ತನ್ನ ವಿಶ್ವಕಪ್ ಅಭಿಯಾನವನ್ನು ಅಂತ್ಯಗೊಳಿಸಲಿದೆ. ಈ ಪಂದ್ಯದ ಸಂಪೂರ್ಣ ವಿವರಗಳು ಈ ಕೆಳಗಿನಂತಿದೆ…

3ನೇ ಸ್ಥಾನದ ಪಂದ್ಯದ ವಿವರಗಳು:

  • ಪಂದ್ಯ: ಫಿಫಾ ವಿಶ್ವಕಪ್ 2026 – ಮೂರನೇ ಸ್ಥಾನದ ಪ್ಲೇ-ಆಫ್
  • ದಿನಾಂಕ: ಶನಿವಾರ, ಜುಲೈ 18, 2026
  • ಸಮಯ: ಭಾರತೀಯ ಕಾಲಮಾನ (IST) ಭಾನುವಾರ, ಜುಲೈ 19 ರ ಮುಂಜಾನೆ 2:30 ಕ್ಕೆ (ಅಮೆರಿಕದ ಕಾಲಮಾನ ಶನಿವಾರ ಸಂಜೆ 5:00 ET)
  • ಕ್ರೀಡಾಂಗಣ: ಹಾರ್ಡ್ ರಾಕ್ ಸ್ಟೇಡಿಯಂ (ಮಿಯಾಮಿ ಸ್ಟೇಡಿಯಂ), ಫ್ಲೋರಿಡಾ, ಅಮೆರಿಕ.

ಎದುರಾಳಿ ಯಾರು?

ಫ್ರಾನ್ಸ್ ತಂಡಕ್ಕೆ ಎದುರಾಳಿ ಯಾರು ಎಂಬುದು ಇನ್ನೂ ಅಧಿಕೃತವಾಗಿ ನಿರ್ಧಾರವಾಗಿಲ್ಲ. ಅಂದರೆ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿರುವ ಬಲಿಷ್ಠ ಇಂಗ್ಲೆಂಡ್ ಮತ್ತು ಅರ್ಜೆಂಟೀನಾ ತಂಡಗಳ ನಡುವಿನ ಪಂದ್ಯದಲ್ಲಿ ಸೋಲುವ ತಂಡವು, ಮೂರನೇ ಸ್ಥಾನಕ್ಕಾಗಿ ಫ್ರಾನ್ಸ್ ವಿರುದ್ಧ ಸೆಣಸಾಡಲಿದೆ.

ಒಂದು ವೇಳೆ ಅರ್ಜೆಂಟೀನಾ ಸೋತರೆ, ಫ್ರಾನ್ಸ್ ಮತ್ತು ಅರ್ಜೆಂಟೀನಾ ನಡುವಿನ ಮತ್ತೊಂದು ರೋಚಕ ಹೈ-ವೋಲ್ಟೇಜ್ ಪಂದ್ಯಕ್ಕೆ ಮಿಯಾಮಿ ಸಾಕ್ಷಿಯಾಗಲಿದೆ.

ಫ್ರಾನ್ಸ್ ತಂಡದ ಪ್ರತಿಷ್ಠೆ:

ಕಿಲಿಯನ್ ಎಂಬಾಪೆ ನೇತೃತ್ವದ ಫ್ರಾನ್ಸ್ ತಂಡಕ್ಕೆ ಈ ಪಂದ್ಯ ಕೇವಲ ಔಪಚಾರಿಕತೆಯಲ್ಲ. ಕಳೆದ ಬಾರಿಯ ರನ್ನರ್-ಅಪ್ ತಂಡವಾಗಿರುವ ಫ್ರಾನ್ಸ್, ಈ ಬಾರಿ ಮೂರನೇ ಸ್ಥಾನವನ್ನು ಗೆದ್ದು ಟೂರ್ನಿಯನ್ನು ಜಯದೊಂದಿಗೆ ಮುಗಿಸಲು ಎದುರು ನೋಡುತ್ತಿದೆ.

ಈ ಮೂಲಕ ಬ್ಯಾಕ್ ಟು ಬ್ಯಾಕ್ ಮೂರು ವಿಶ್ವಕಪ್​ನಲ್ಲಿ ಚಾಂಪಿಯನ್ (2018), ರನ್ನರ್ ಅಪ್ (2022) ಹಾಗೂ ಥರ್ಡ್​ ಪ್ಲೇಸ್ (2026) ಪಡೆದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಳ್ಳಲು ಫ್ರಾನ್ಸ್ ಪಡೆ ಸಜ್ಜಾಗಿ ನಿಂತಿದೆ.

ಇದನ್ನೂ ಓದಿ: ಸ್ನಾಯು ಸೆಳೆತದಿಂದ ಕೈ ತಪ್ಪಿದ ಐತಿಹಾಸಿಕ ದಾಖಲೆ..!

ನೇರ ಪ್ರಸಾರ ಎಲ್ಲಿ ವೀಕ್ಷಿಸಬಹುದು?

ಫಿಫಾ ವಿಶ್ವಕಪ್ 2026 ರ ಎಲ್ಲಾ ಪಂದ್ಯಗಳನ್ನು ಭಾರತದಲ್ಲಿ ZEE5 ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ. ಹಾಗೆಯೇ  Unite8 ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್​ಗಳಲ್ಲಿ ಈ ಪಂದ್ಯವನ್ನು ಲೈವ್ ವೀಕ್ಷಿಸಬಹುದು.

Source link

Exit mobile version