Headlines

ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ: ಸ್ವಂತ ದುಡಿಮೆಯಲ್ಲಿ ಕಾರು ಖರೀದಿಸಿದ ಮಂಗಳೂರಿನ ವಿಶೇಷ ಚೇತನ ಯುವಕ! – Kannada News | Physically Disabled Youth from Mangaluru Builds Online Business Empire

ಮಂಗಳೂರು, ಜನವರಿ 27: ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗುವುದಿಲ್ಲ ಎಂಬುದನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಬೀರ್ ಎಂಬ ಯುವಕ ಸಾಬೀತುಪಡಿಸಿದ್ದಾರೆ. ಅಬ್ಬಾಸ್ ಮತ್ತು ಅಮೀನಾ ದಂಪತಿಯ ಪುತ್ರರಾದ ಕಬೀರ್, ಒಂಭತ್ತು ತಿಂಗಳ ವಯಸ್ಸಿನಲ್ಲಿ ಜ್ವರದಿಂದ ದೇಹದ ಸ್ವಾಧೀನ ಕಳೆದುಕೊಂಡರು. ಪ್ರಸ್ತುತ 25 ವರ್ಷ ವಯಸ್ಸಿನ ಕಬೀರ್, ಕುತ್ತಿಗೆ ಮೇಲ್ಭಾಗದಲ್ಲಿ ಮತ್ತು ಹೆಬ್ಬೆರಳಿನಲ್ಲಿ ಮಾತ್ರ ಚಲನೆಯನ್ನು ಹೊಂದಿದ್ದಾರೆ. ಕೇವಲ ತಮ್ಮ ಹೆಬ್ಬೆರಳಿನ ಸಹಾಯದಿಂದ ಮೊಬೈಲ್‌ನಲ್ಲಿ ಫೋಟೋ ಎಡಿಟಿಂಗ್, ವಿಡಿಯೋ ಎಡಿಟಿಂಗ್ ಕಲಿತ ಇವರು, ಆನ್‌ಲೈನ್ ವ್ಯವಹಾರವನ್ನು ನಡೆಸುತ್ತಿದ್ದಾರೆ….

Read More

‘ಜನ ನಾಯಗನ್’ಗೆ ಮತ್ತೆ ಹಿನ್ನಡೆ: ಸಿನಿಮಾ ಬಿಡುಗಡೆ ಇನ್ನಷ್ಟು ವಿಳಂಬ – Kannada News | Jana Nayagan CBFC case again sent to single judge bench

ದಳಪತಿ ವಿಜಯ್ (Thalapathy Vijay) ನಟನೆಯ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ‘ಜನ ನಾಯಗನ್’ಗೆ ಹಿನ್ನಡೆಯ ಮೇಲೆ ಹಿನ್ನಡೆ ಆಗುತ್ತಿದೆ. ತೆಲುಗಿನ ‘ಭಗವಂತ ಕೇಸರಿ’ ಸಿನಿಮಾದ ರೀಮೇಕ್ ಆಗಿರುವ ‘ಜನ ನಾಯಗನ್’ ಜನವರಿ 10 ರಂದು ಬಿಡುಗಡೆ ಆಗಬೇಕಿತ್ತು, ಆದರೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಲು ನಿರಾಕರಿಸಿತು. ಸಿಬಿಎಫ್​​ಸಿ ವಿರುದ್ಧ ನಿರ್ಮಾಪಕರು ಹೈಕೋರ್ಟ್ ಮೆಟ್ಟಿಲೇರಿದರು. ಹೈಕೋರ್ಟ್​​ ಮೊದಲಿಗೆ ಪ್ರಮಾಣ ಪತ್ರ ನೀಡುವಂತೆ ಹೇಳಿತ್ತಾದರೂ ಬಳಿಕ ತನ್ನದೇ ಆದೇಶಕ್ಕೆ ತಾನೇ ತಡೆ ನೀಡಿತು. ಇಂದು ಮತ್ತೆ ಇದೇ ವಿಚಾರವಾಗಿ ಆದೇಶ…

Read More

ಕಾವ್ಯಾಗೆ ಅಭಿಮಾನಿಯ ಪತ್ರ: ಚಂದನ್-ನಿವೇದಿತಾ, ರಕ್ಷಿತ್-ರಶ್ಮಿಕಾ ಉದಾಹರಣೆ – Kannada News | Bigg Boss Kannada fame Kavya Shaiva shared fan’s letter

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿದಿದ್ದು ಗಿಲ್ಲಿ ನಟ ವಿನ್ನರ್ ಆಗಿದ್ದಾರೆ. ಗಿಲ್ಲಿ ನಟನಿಗೆ ಭಾರಿ ಜನಪ್ರಿಯತೆ ಶೋನಿಂದಾಗಿ ದೊರೆತಿದೆ. ಗಿಲ್ಲಿಗೆ ಮಾತ್ರವೇ ಅಲ್ಲದೆ ಫೈನಲಿಸ್ಟ್​​ಗಳಾಗಿದ್ದ ಕಾವ್ಯಾ, ರಘು, ಅಶ್ವಿನಿ ಇನ್ನೂ ಹಲವರಿಗೆ ಈ ಶೋನಿಂದ ಭಾರಿ ಜನಪ್ರಿಯತೆ ದೊರೆತಿದೆ. ಕಾವ್ಯಾ ಸಹ ಈಗ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ. ಬಿಗ್​​ಬಾಸ್ ಮನೆಯಲ್ಲಿದ್ದಾಗ ಗಿಲ್ಲಿಯ ನೆರಳು, ಗಿಲ್ಲಿಯಿಂದ ಮಿಂಚುತ್ತಿರುವ ಸ್ಪರ್ಧಿ ಎಂದೆಲ್ಲ ಟೀಕೆಗೆ ಒಳಗಾಗಿದ್ದ ಕಾವ್ಯಾಗೆ, ಈಗ ಹೊರ ಬಂದ ಮೇಲೆ ತಮ್ಮ ವ್ಯಕ್ತಿತ್ವಕ್ಕೆ ಪ್ರತ್ಯೇಕ…

Read More

ಹೃತಿಕ್ ರೋಷನ್​​ಗೆ ವಿಚಿತ್ರ ರೋಗ; ಇದ್ದಕ್ಕಿದ್ದಂತೆ ಕೆಲಸ ನಿಲ್ಲಿಸುತ್ತವೆ ಕಾಲುಗಳು – Kannada News | Hrithik Roshan’s Rare Disorder: Legs Randomly ‘Switch Off’ Explained

ಬಾಲಿವುಡ್‌ ನಟ ಹೃತಿಕ್ ರೋಷನ್ (Hrithik Roshan) ಇತ್ತೀಚೆಗೆ ನಟಿ ಸೋನಾಲಿ ಬೇಂದ್ರೆ ಅವರ ಪತಿ ಗೋಲ್ಡಿ ಬಹ್ಲ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ, ಹೃತಿಕ್ ಗೂನು ಬೆನ್ನು ಹಾಕಿ ನಡೆಯುತ್ತಿರುವುದು ಕಂಡುಬಂದಿತು . ಇದನ್ನು ನೋಡಿ ಫ್ಯಾನ್ಸ್ ಆತಂಕಗೊಂಡರು. ಹೃತಿಕ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಅನೇಕ ಜನರು ಅವರ ಆರೋಗ್ಯದ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಈಗ ಹೃತಿಕ್ ಸ್ವತಃ ಈ ನಿಟ್ಟಿನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ದೊಡ್ಡ ಪೋಸ್ಟ್ ಬರೆದಿದ್ದಾರೆ….

Read More

Namma Metro: ನಗರದ 9 ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್ ಸೌಲಭ್ಯ! – Kannada News | BMRCL Offers Free Cycle Parking at 9 Bangalore Metro Stations for Last Mile Connectivity

ನಗರದ 9 ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್ ಸೌಲಭ್ಯ! ಬೆಂಗಳೂರು, ಜನವರಿ 27: ಮೆಟ್ರೋ ನಿಲ್ದಾಣಗಳಿಗೆ ಲಾಸ್ಟ್–ಮೈಲ್ ಸಂಪರ್ಕವಾಗಿ ಸೈಕ್ಲಿಂಗ್‌ನ್ನು ಉತ್ತೇಜಿಸುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಗರದಲ್ಲಿನ ಒಂಬತ್ತು ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್ ಸೌಲಭ್ಯ ಒದಗಿಸಲು ನಿರ್ಧರಿಸಿದೆ. ನಿಗಮದ ಈ ಯೋಜನೆಗೆ ಸೈಕಲಿಸ್ಟ್​ಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಾರ್ಕಿಂಗ್ ಶುಲ್ಕಕ್ಕಿಂತ ಮೂಲಸೌಕರ್ಯದ್ದೇ ಬಾಧೆ ಈ ನಿರ್ಧಾರವನ್ನು ಮೆಟ್ರೋ ಪಾರ್ಕಿಂಗ್ ವ್ಯವಸ್ಥೆ ನಿರ್ವಹಣೆಗೆ ಸಂಬಂಧಿಸಿದಂತೆ ಬಿಎಂಆರ್‌ಸಿಎಲ್ ಇತ್ತೀಚೆಗೆ ಆಹ್ವಾನಿಸಿರುವ…

Read More

ಕೋಗಿಲು ಲೇಔಟ್ ರೀತಿ ನಾಗಮಂಗಲದಲ್ಲೂ ಭಾರಿ ಅಕ್ರಮ: ಆಂಧ್ರ, ಕೇರಳ ಮೂಲದವರಿಗೆ ನಕಲಿ ದಾಖಲೆ ಸೃಷ್ಟಿಸಿ ಭೂಮಿ ಹಂಚಿಕೆ ಆರೋಪ – Kannada News | Kogilu Layout Style Land Scam Alleged in Mandya Nagamangala: Fake Documents Used to Allot Land to Migrants

ಮಂಡ್ಯ, ಜನವರಿ 27: ಬೆಂಗಳೂರಿನ (Bangalore) ಕೋಗಿಲು ಲೇಔಟ್ (Kogilu Layout) ರೀತಿಯಲ್ಲೇ ಮಂಡ್ಯ (Mandya) ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿ ಭಾರೀ ಭೂಮಿ ಅಕ್ರ ನಡೆದಿರುವ ಶಂಕೆ ವ್ಯಕ್ತವಾಗಿದೆ. ವಲಸಿಗರಿಗೆ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಸಾಮಾಜಿಕ ಕಾರ್ಯಕರ್ತ ರವೀಂದ್ರ ಅವರು ಈ ಕುರಿತು ಗಂಭೀರ ಆರೋಪಗಳನ್ನು ಮಾಡಿದ್ದು, ಬಗರ್ ಹುಕುಂ ಯೋಜನೆಯಡಿ ಗರಿಷ್ಠ 4 ಎಕರೆ 38 ಗುಂಟೆ ಮಾತ್ರ ಸಕ್ರಮಗೊಳಿಸಲು ಅವಕಾಶವಿದೆ. ಆದಾಗ್ಯೂ…

Read More

Vasthu Tips: ನೀವು ಹಳೆಯ ಮನೆ ಖರೀದಿಸುತ್ತಿದ್ದೀರಾ? ಹಾಗಿದ್ರೆ ಮೊದಲು ಈ ಕೆಲಸ ಮಾಡಿ – Kannada News | Vastu Tips for Old Houses: Simple Remedies to Remove Defects and Boost Prosperity

ಹೊಸ ಮನೆ ಕಟ್ಟಲು ಸಾಧ್ಯವಾಗದೇ ಇರುವ ಸಾಕಷ್ಟು ಜನರು ಹಳೆಯ ಮನೆಗಳನ್ನು ಖರೀದಿಸುತ್ತಾರೆ. ಆದರೆ, ಹಳೆಯ ಮನೆಗಳನ್ನು ಖರೀದಿಸುವಾಗ ವಾಸ್ತು ಪ್ರಕಾರ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅಗತ್ಯ. ಹಳೆಯ ಮನೆಗಳಲ್ಲಿ ವಾಸ್ತು ದೋಷಗಳು ಇರುವುದು ಸಾಮಾನ್ಯ. ಈ ದೋಷಗಳನ್ನು ತೆಗೆದುಹಾಕದಿದ್ದರೆ, ಅವು ಸಂಪತ್ತು, ಶಾಂತಿ ಮತ್ತು ಕುಟುಂಬದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ತಜ್ಞರ ಸಲಹೆಯ ಪ್ರಕಾರ, ಕೆಲವು ಸರಳ ವಾಸ್ತು ಪರಿಹಾರಗಳನ್ನು ಅನುಸರಿಸುವ ಮೂಲಕ ಎಲ್ಲಾ ರೀತಿಯ ದೋಷಗಳನ್ನು ಸುಲಭವಾಗಿ ತೆಗೆದುಹಾಕಬಹುದು. ವಾಸ್ತು ದೋಷಗಳನ್ನು…

Read More

‘ನೀವು ದರ್ಶನ್ ಸಿನಿಮಾದಲ್ಲಿ ಕಪ್ಪೇ ಇದ್ರಲ್ಲ ಸರ್’; ಸತೀಶ್ ಶಾಕ್ – Kannada News | Darshan Movie Face Color Controversy Sathish explain why

21 ವರ್ಷಗಳ ಹಿಂದೆ ‘ದರ್ಶನ್’ ಹೆಸರಿನ ಚಿತ್ರದಲ್ಲಿ ದರ್ಶನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಬಿಗ್ ಬಾಸ್ ಸ್ಪರ್ಧಿ ಸತೀಶ್ ಕೂಡ ಇದ್ದರು. ತಮ್ಮನ್ನು ಈ ಸಿನಿಮಾದಲ್ಲಿ ಕಪ್ಪಾಗಿ ತೋರಿಸಲಾಗಿದೆ ಎಂದು ಆರೋಪಿಸಿದ್ದರು. ಈಗ ಅವರು ಈ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನ ನೀಡುವಾಗಲೇ ಸಿನಿಮಾದಲ್ಲಿ ಕೆಲಸ ಮಾಡಿದ ವ್ಯಕ್ತಿಯನ್ನು ಕರೆದು, ‘ನಾನು ಆಗ ಕಪ್ಪಿದ್ನಾ ಅಥವಾ ಬೆಳ್ಳಗಿದ್ನಾ’ ಎಂದು ಕೇಳಿದ್ದಾರೆ. ಇದಕ್ಕೆ ಅವರು ಕಪ್ಪಗೇ ಇದ್ರಲ್ಲ ಸರ್ ಎಂದಿದ್ದಾರೆ. ನಂತರ ಬಣ್ಣ ಹಚ್ಚಿ ಅವರನ್ನು ಕಪ್ಪು ಮಾಡಲಾಗಿತ್ತು…

Read More

Pariksha Pe Charcha 2026: ಈ ಬಾರಿಯ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮ ಹೊಸ ಮೈಲಿಗಲ್ಲು, 6.76 ಕೋಟಿ ಜನ ಭಾಗಿ – Kannada News | Ariksha Pe Charcha: PM Modi’s Program Transforms Student Stress Management and Life Skills

ದೆಹಲಿ, ಜ.27: ಪ್ರಧಾನಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಹನ ನಡೆಸುವ ಜನಪ್ರಿಯ ಕಾರ್ಯಕ್ರಮ ‘ಪರೀಕ್ಷಾ ಪೆ ಚರ್ಚಾ’ (Pariksha Pe Charcha ) 2026′ ರ 9ನೇ ಆವೃತ್ತಿಯು ಅತ್ಯಂತ ಯಶಸ್ವಿಯಾಗಿ ನಡೆದಿದೆ. ನವದೆಹಲಿಯ ಭಾರತ್ ಮಂಟಪಂನಲ್ಲಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಕೊಯಮತ್ತೂರು (ತಮಿಳುನಾಡು), ರಾಯ್‌ಪುರ (ಛತ್ತೀಸ್‌ಗಢ), ದೇವ್ ಮೋಗ್ರಾ (ಗುಜರಾತ್) ಮತ್ತು ಗುವಾಹಟಿ (ಅಸ್ಸಾಂ) ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂವಾದ ನಡೆಸಿದ್ದಾರೆ. ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮವು 2026ರಲ್ಲಿ ಒಂದು…

Read More

ಭಾರತದ ವಿರುದ್ಧದ ಪಂದ್ಯ ಬಾಯ್ಕಾಟ್: ಪಾಕಿಸ್ತಾನ್ ತಂಡದ ಕುತಂತ್ರ – Kannada News | Pakistan planning for India match boycott in T20 World Cup 2026

ಮುಂಬರುವ ಟಿ20 ವಿಶ್ವಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗುವುದಿಲ್ಲವೇ? ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗಬೇಕಿದ್ದರೆ ಫೆಬ್ರವರಿ 15 ರವರೆಗೆ ಕಾಯಲೇಬೇಕು. ಏಕೆಂದರೆ ಭಾರತದ ವಿರುದ್ಧದ ಪಂದ್ಯದಿಂದ ಹಿಂದೆ ಸರಿಯಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ತೆರೆಮರೆಯಲ್ಲೇ ಯೋಜನೆ ರೂಪಿಸುತ್ತಿದೆ. ಇಂತಹದೊಂದು ಕುತಂತ್ರಕ್ಕೆ ಕೈ ಹಾಕಲು ಮುಖ್ಯ ಕಾರಣ ಐಸಿಸಿ ನೀಡಿರುವ ಎಚ್ಚರಿಕೆ. ಬಾಂಗ್ಲಾದೇಶ್ ತಂಡವನ್ನು ಟಿ20 ವಿಶ್ವಕಪ್​ನಿಂದ ಹೊರಗಿಟ್ಟರೆ ಪಾಕಿಸ್ತಾನ್ ಕೂಡ ವಿಶ್ವಕಪ್ ಟೂರ್ನಿ ಆಡುವುದು ಅನುಮಾನ ಎಂದು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹೇಳಿತ್ತು. ಪಿಸಿಬಿಯ…

Read More