Pure Honey Test: ಜೇನುತುಪ್ಪ ಅಸಲಿಯೋ ಅಥವಾ ನಕಲಿಯೋ? ಮನೆಯಲ್ಲೇ ಪರೀಕ್ಷಿಸಲು ಇಲ್ಲಿದೆ 5 ಸುಲಭ ಮಾರ್ಗ! – Kannada News | Pure Honey Test: Simple Home Methods to Identify Real Honey and Avoid Fakes

ಆರೋಗ್ಯಕ್ಕೆ ಜೇನುತುಪ್ಪದ ಮಹತ್ವ ಅಪಾರ. ತೂಕ ಇಳಿಸುವುದರಿಂದ ಹಿಡಿದು ರೋಗನಿರೋಧಕ ಶಕ್ತಿ ಹೆಚ್ಚಿಸುವವರೆಗೆ ಜೇನುತುಪ್ಪ ರಾಮಬಾಣವಾಗಿ ಕೆಲಸ ಮಾಡುತ್ತದೆ. ಆದರೆ, ಇಂದು ಮಾರುಕಟ್ಟೆಯಲ್ಲಿ ಸಿಗುವ ಜೇನುತುಪ್ಪದಲ್ಲಿ ಸಕ್ಕರೆ ಪಾಕ ಅಥವಾ ಸಿರಪ್‌ಗಳನ್ನು ಬೆರೆಸಿ ಕಲಬೆರಕೆ ಮಾಡಲಾಗುತ್ತಿದೆ. ಹಾಗಾದರೆ ನೀವು ಕೊಂಡುಕೊಂಡ ಜೇನುತುಪ್ಪ ನಿಜವೋ ಅಥವಾ ನಕಲಿಯೋ ಎಂದು ಪತ್ತೆ ಹಚ್ಚುವುದು ಹೇಗೆ? ಅದಕ್ಕಾಗಿ ನೀವು ಯಾವುದೇ ಪ್ರಯೋಗಾಲಯಕ್ಕೆ (Lab) ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಕೆಲವು ನಿಮಿಷಗಳಲ್ಲಿ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬಹುದು. ಅದಕ್ಕೆ ಬೇಕಾದ ಸರಳ ಪರೀಕ್ಷೆಗಳು ಇಲ್ಲಿವೆ:

ನೀರಿನ ಲೋಟದ ಪರೀಕ್ಷೆ:

ಜೇನುತುಪ್ಪವು ನಿಜವೇ ಎಂದು ಪರೀಕ್ಷಿಸಲು ಇದು ಅತ್ಯಂತ ತ್ವರಿತ ಮತ್ತು ನಿಖರವಾದ ಮಾರ್ಗವಾಗಿದೆ. ಒಂದು ಗಾಜಿನ ಲೋಟಕ್ಕೆ ನೀರನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಕೆಲವು ಹನಿ ಜೇನುತುಪ್ಪವನ್ನು ಹಾಕಿ. ನಿಜವಾದ ಮತ್ತು ಶುದ್ಧವಾದ ಜೇನುತುಪ್ಪವು ನೀರಿನ ತಳಕ್ಕೆ ಹೋಗಿ ಮುಳುಗುತ್ತದೆ ಮತ್ತು ಬೇಗನೆ ಕರಗುವುದಿಲ್ಲ. ಅದೇ ನಕಲಿ ಅಥವಾ ಕಲಬೆರಕೆ ಜೇನುತುಪ್ಪವಾಗಿದ್ದರೆ, ಅದು ನೀರಿನಲ್ಲಿ ತಕ್ಷಣವೇ ಕರಗಿ ಹೋಗುತ್ತದೆ.

ರುಚಿ ಮತ್ತು ನೈಸರ್ಗಿಕ ಸುವಾಸನೆ:

ನಿಜವಾದ ಜೇನುತುಪ್ಪವು ನೈಸರ್ಗಿಕ ಮತ್ತು ಸೌಮ್ಯವಾದ ಹೂವಿನ ಪರಿಮಳವನ್ನು ಹೊಂದಿರುತ್ತದೆ. ಅದನ್ನು ಸವಿದಾಗ ಅದರ ವಿಶಿಷ್ಟ ರುಚಿ ತಿಳಿಯುತ್ತದೆ. ಒಂದು ವೇಳೆ ಜೇನುತುಪ್ಪವು ಕೇವಲ ಸಕ್ಕರೆ ಅಥವಾ ಬೆಲ್ಲದ ಸಿರಪ್ ಮಿಶ್ರಣದಂತೆ ವಾಸನೆ ಬಂದರೆ, ಅದು ನಕಲಿ ಜೇನುತುಪ್ಪವಾಗಿರಬಹುದು ಎಂದು ನೀವು ಸುಲಭವಾಗಿ ಊಹಿಸಬಹುದು.

ಇದನ್ನೂ ಓದಿ: ಗಟ್ ಹೆಲ್ತ್ ಸುಧಾರಿಸಲು ಆಹಾರದಲ್ಲಿ ಮಾಡಬೇಕಾದ ಬದಲಾವಣೆಗಳು!

ಕಾಗದ ಅಥವಾ ಟಿಶ್ಯೂ ಪೇಪರ್ ಪರೀಕ್ಷೆ:

ಸ್ವಲ್ಪ ಜೇನುತುಪ್ಪವನ್ನು ಒಂದು ಬಿಳಿ ಕಾಗದ ಅಥವಾ ಟಿಶ್ಯೂ ಪೇಪರ್ ಮೇಲೆ ಹಾಕಿ. ಜೇನುತುಪ್ಪವು ಅಸಲಿಯಾಗಿದ್ದರೆ, ಕಾಗದವು ಅದನ್ನು ಹೀರಿಕೊಳ್ಳುವುದಿಲ್ಲ ಮತ್ತು ಜೇನುತುಪ್ಪದ ಹನಿ ಹಾಗೆಯೇ ಉಳಿಯುತ್ತದೆ. ಆದರೆ ಕಲಬೆರಕೆ ಜೇನುತುಪ್ಪದಲ್ಲಿ ನೀರಿನ ಅಂಶ ಹೆಚ್ಚಿರುವುದರಿಂದ, ಅದು ತಕ್ಷಣವೇ ಕಾಗದದೊಳಗೆ ಹೀರಲ್ಪಡುತ್ತದೆ ಮತ್ತು ಕಾಗದ ಒದ್ದೆಯಾಗುತ್ತದೆ.

ಬೆಂಕಿಕಡ್ಡಿ ಪರೀಕ್ಷೆ:

ಒಂದು ಒಣಗಿದ ಬೆಂಕಿಕಡ್ಡಿಯ ತುದಿಗೆ ಸ್ವಲ್ಪ ಜೇನುತುಪ್ಪವನ್ನು ಹಚ್ಚಿ, ನಂತರ ಅದನ್ನು ಗೀರಲು (ಬೆಳಗಲು) ಪ್ರಯತ್ನಿಸಿ. ಜೇನುತುಪ್ಪವು ಶುದ್ಧವಾಗಿದ್ದರೆ, ಬೆಂಕಿಕಡ್ಡಿ ತಕ್ಷಣವೇ ಉರಿಯುತ್ತದೆ. ಒಂದು ವೇಳೆ ಜೇನುತುಪ್ಪದಲ್ಲಿ ತೇವಾಂಶ ಅಥವಾ ಸಕ್ಕರೆ ನೀರು ಮಿಶ್ರಣವಾಗಿದ್ದರೆ, ಬೆಂಕಿಕಡ್ಡಿ ಸುಡುವುದಿಲ್ಲ.

ಗಾಜಿನ ಲೋಟದಲ್ಲಿ ನೊರೆಯ ಪರೀಕ್ಷೆ:

ನೀರು ತುಂಬಿದ ಗಾಜಿನ ಲೋಟಕ್ಕೆ ಕೆಲವು ಹನಿ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಮಿಶ್ರಣವನ್ನು ಕಲಕಿದಾಗ ಅದರಲ್ಲಿ ನೊರೆ (Foam) ಬರಲು ಪ್ರಾರಂಭಿಸಿದರೆ, ಆ ಜೇನುತುಪ್ಪದಲ್ಲಿ ಸಕ್ಕರೆ ಅಥವಾ ಇನ್ಯಾವುದೋ ರಾಸಾಯನಿಕ ಪದಾರ್ಥಗಳು ಮಿಶ್ರಣವಾಗಿವೆ ಎಂದರ್ಥ. ಶುದ್ಧ ಜೇನುತುಪ್ಪವು ನೀರಿನಲ್ಲಿ ನೊರೆ ಬರುವುದಿಲ್ಲ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:54 am, Sat, 4 July 26

Source link

ಜು.24ಕ್ಕೆ ‘ಸರ್ಕಾರಿ ನ್ಯಾಯ ಬೆಲೆ ಅಂಗಡಿ’ ಸಿನಿಮಾ ತೆರೆಗೆ; ಕನ್ನಡದಲ್ಲೊಂದು ಹೊಸ ಪ್ರಯತ್ನ – Kannada News | Sarkari Nyaya Bele Angadi Movie To Release one July Highlights Food and Ration System

‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು’ ಸಿನಿಮಾ ಆರಂಭದಲ್ಲಿ ಟೈಟಲ್ ಮೂಲಕ ಗಮನ ಸೆಳೆದಿತ್ತು. ಈಗ ‘ಸರ್ಕಾರಿ ನ್ಯಾಯ ಬೆಲೆ ಅಂಗಡಿ’ ಹೆಸರಿನ ವಿಭಿನ್ನ ಸಿನಿಮಾ ಜುಲೈ 24ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಮನುಷ್ಯನ ಮೂಲಭೂತ ಅಗತ್ಯಗಳಾದ ನೀರು ಮತ್ತು ಆಹಾರದ ಮಹತ್ವವನ್ನು ಸಾರುವ ಹಾಗೂ ಸರ್ಕಾರದ ಪಡಿತರ ವ್ಯವಸ್ಥೆಯ ಹಿನ್ನೆಲೆಯನ್ನು ಇದು ಒಳಗೊಂಡಿದೆ ಎಂಬುದು ವಿಶೇಷ. ರೇಷನ್ ಅಂಗಡಿಗಳ ಪ್ರಾಮುಖ್ಯತೆ ಮತ್ತು ಅವುಗಳ ಸುತ್ತ ನಡೆಯುವ ಕಥಾಹಂದರ ಹೊಂದಿರುವ ದೇಶದ ಮೊದಲ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಇತ್ತೀಚೆಗೆ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಎಚ್. ಮುನಿಯಪ್ಪ ಅವರು ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿದರು. ಇದೇ ವೇಳೆ ಚಿತ್ರತಂಡಕ್ಕೆ ಶುಭ ಹಾರೈಸಿದ ಸಚಿವರು. ಚಿತ್ರದ ತಾಂತ್ರಿಕ ವರ್ಗದ ಪ್ರಯತ್ನವನ್ನು ಶ್ಲಾಘಿಸಿದರು.

ಕುಮಾರ್ ಬಂಗಾರಪ್ಪ – ರಾಗಿಣಿ ದ್ವಿವೇದಿ ಮುಖ್ಯ ಭೂಮಿಕೆ

ಜಯಶಂಕರ್ ಟಾಕೀಸ್ ಬ್ಯಾನರ್ ಅಡಿಯಲ್ಲಿ ತೇಜು ಚೆಲುವಮೂರ್ತಿ ಮತ್ತು ಪದ್ಮಾವತಿ ಚಂದ್ರಶೇಖರ್ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸಿದ್ದಾರೆ. ಮಾಜಿ ಸಚಿವ ಹಾಗೂ ನಟ ಕುಮಾರ್ ಬಂಗಾರಪ್ಪ, ಗ್ಲಾಮರಸ್ ನಟಿ ರಾಗಿಣಿ ದ್ವಿವೇದಿ ಮತ್ತು ಹಿರಿಯ ನಟ ದೊಡ್ಡಣ್ಣ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಭಾ.ಮಾ. ಹರೀಶ್ ಹಾಗೂ ಚಲನಚಿತ್ರ ನಿರ್ಮಾಪಕರ ಸಂಘದ ಹಾಲಿ ಕಾರ್ಯದರ್ಶಿ ಭಾ.ಮಾ. ಗಿರೀಶ್ ಅವರು ತಂಡಕ್ಕೆ ಬೆಂಬಲ ನೀಡಿದ್ದಾರೆ.

ಹಿರಿಯ ನಿರ್ದೇಶಕ ಬಿ. ರಾಮಮೂರ್ತಿ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದಿದ್ದು, ಸಾತ್ವಿಕ್ ಪವನ್ ಅವರು ನಿರ್ದೇಶನ ಹಾಗೂ ಛಾಯಾಗ್ರಹಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅನಂತ್ ಆರ್ಯನ್ ಮತ್ತು ಪ್ರವೀಣ್ ಅವರ ಜಂಟಿ ಸಂಗೀತ ನಿರ್ದೇಶನವಿದ್ದು, ನವೀನ್ ಸಜ್ಜು, ಅನುರಾಧ ಭಟ್ ಮತ್ತು ಶಮಿತಾ ಮಲ್ನಾಡ್ ಕಂಠಸಿರಿಯಲ್ಲಿ ಮೂಡಿಬಂದಿರುವ ಹಾಡುಗಳು ಈಗಾಗಲೇ ಸದ್ದು ಮಾಡುತ್ತಿವೆ.

ಇದನ್ನೂ ಓದಿ: ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಶೀರ್ಷಿಕೆ ಗೀತೆ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ

ಇತ್ತೀಚೆಗೆ ಚಿತ್ರದ ‘ಟೈಟಲ್ ಟ್ರ್ಯಾಕ್’ ಬಿಡುಗಡೆಯಾಗಿ ಗಮನ ಸೆಳೆದಿದೆ. ಸಿನಿಮಾಗೆ ಸಂಬಂಧಿಸಿದ ಅಪ್ಡೇಟ್‌ಗಳನ್ನು ‘Aiplex Music’ ಯುಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದಾಗಿದೆ. ‘ಶ್ರೀಧರ್ ಕೃಪ ಕಂಬೈನ್ಸ್’ ಸಂಸ್ಥೆಯ ಶ್ರೀಧರ್ ಅವರು ಈ ಚಿತ್ರವನ್ನು ಇಡೀ ಕರ್ನಾಟಕದಾದ್ಯಂತ ವಿತರಣೆ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:54 am, Sat, 4 July 26

Source link

ಕರ್ನಾಟಕ SIR ವಿವಾದ: ಕಾಂಗ್ರೆಸ್ ಸರ್ಕಾರದ ವಿರುದ್ಧ ಜಂಟಿ ಸಮರಕ್ಕೆ ಬಿಜೆಪಿ, ಜೆಡಿಎಸ್‌ ಸಿದ್ಧತೆ – Kannada News | Karnataka SIR Controversy: BJP and JDS Join Hands For Joint Protest Against Congress Govt

ಬೆಂಗಳೂರು, ಜುಲೈ 4: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಕರ್ತವ್ಯ ಲೋಪಗಳು ರಾಜ್ಯ ರಾಜಕಾರಣದಲ್ಲಿ ತೀವ್ರ ಕಿಚ್ಚು ಹಚ್ಚಿವೆ. ಎಸ್​ಐಆರ್​​ಗಾಗಿ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಬದಲು, ಮಸೀದಿಗಳು, ದೇವಸ್ಥಾನಗಳು, ಸಮುದಾಯ ಭವನಗಳು ಮತ್ತು ಚೌಲ್ಟ್ರಿಗಳಲ್ಲಿ ಸಾಮೂಹಿಕವಾಗಿ ಜನರನ್ನು ಸೇರಿಸಿ ಎಸ್ಐಆರ್ ನಡೆಸಲಾಗುತ್ತಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ಆರೋಪಿಸಿವೆ. ಈ ಅಕ್ರಮಗಳನ್ನು ಸರ್ಕಾರದ ವಿರುದ್ಧದ ಪ್ರಮುಖ ಅಸ್ತ್ರವನ್ನಾಗಿ ಪರಿಗಣಿಸಿ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಜಂಟಿ ಸಮರಕ್ಕೆ ಸಿದ್ಧತೆ ನಡೆಸಿವೆ. ಜೆಡಿಎಸ್ ನಾಯಕ, ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಈ ವಿಚಾರದಲ್ಲಿ ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸಿದ್ದು, ಜಂಟಿ ಹೋರಾಟದ ರೂಪರೇಷೆಗಳ ಬಗ್ಗೆ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ತೆರಳಲಿದ್ದಾರೆ. ಈ ಹೋರಾಟದ ಮೂಲಕ ರಾಜ್ಯಾದ್ಯಂತ ಸಂಚಲನ ಮೂಡಿಸಿ, ಎಸ್ಐಆರ್ ಪ್ರಕ್ರಿಯೆಯಲ್ಲಿ ಲೋಪಗಳಿವೆ ಎಂಬ ಸಂದೇಶವನ್ನು ಜನರಿಗೆ ತಲುಪಿಸುವುದು ವಿಪಕ್ಷಗಳ ಮುಖ್ಯ ಉದ್ದೇಶವಾಗಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ, ಕೋಲಾರದಲ್ಲಿ ಮತದಾರರನ್ನು ಗುಂಪು ಸೇರಿಸಿ ಎಸ್ಐಆರ್ ನಡೆಸಿದ ಆರೋಪದ ಮೇಲೆ ತಹಶೀಲ್ದಾರ್, ಉಪ ವಿಭಾಗಾಧಿಕಾರಿ ಸೇರಿದಂತೆ ಐವರು ಬಿಎಲ್‌ಓಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕೋಲಾರ ಜಿಲ್ಲಾಧಿಕಾರಿ ರವಿ ಅವರು ಚುನಾವಣಾ ಆಯೋಗದ ನಿಯಮಾನುಸಾರ ಎಸ್ಐಆರ್ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಎಂಟಿಸಿ ಹೊಸ ಪ್ಲ್ಯಾನ್‌: ಬಸ್ಸಿನೊಳಗೆ ಸ್ಪೀಕರ್ ಮೂಲಕ ಜಾಹೀರಾತು ನೀಡಲು ಮುಂದು, ಪ್ರಯಾಣಿಕರು ಗರಂ! – Kannada News | BMTC to Launch In Bus Audio Advertisements to Beat Financial Crisis; Passengers Express Anger

ಬಿಎಂಟಿಸಿ ಹೊಸ ಪ್ಲ್ಯಾನ್‌ಗೆ ಪ್ರಯಾಣಿಕರು ಗರಂ

ಬೆಂಗಳೂರು, ಜುಲೈ 04: ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ವಿಲವಿಲ ಒದ್ದಾಡುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ಸಾಲದ ಸುಳಿಯಿಂದ ಹೊರಬರಲು ಈಗ ಹೊಸದೊಂದು ಆದಾಯದ ಮೂಲವನ್ನು ಹುಡುಕಿಕೊಂಡಿದೆ. ಈಗಾಗಲೇ ಬಸ್ಸುಗಳ ಹೊರಭಾಗ ಹಾಗೂ ಟಿಕೆಟ್‌ಗಳ ಹಿಂಭಾಗದಲ್ಲಿ ಜಾಹೀರಾತು ಪ್ರದರ್ಶಿಸಲು ಟೆಂಡರ್ ಕರೆದಿರುವ ನಿಗಮ, ಇದೀಗ ದೇಶದಲ್ಲೇ ಮೊದಲ ಬಾರಿಗೆ ಬಸ್ಸಿನ ಒಳಗಡೆ ಸ್ಪೀಕರ್‌ಗಳ (ಅನೌನ್ಸರ್‌ಗಳು) ಮೂಲಕ ಆಡಿಯೋ ಜಾಹೀರಾತು ಹಾಕಲು ಭರ್ಜರಿ ಪ್ಲ್ಯಾನ್ ಮಾಡಿದೆ. ಆದರೆ, ಬಿಎಂಟಿಸಿಯ ಈ ನಿರ್ಧಾರಕ್ಕೆ ಪ್ರಯಾಣಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಆದಾಯಕ್ಕಾಗಿ ಬಿಎಂಟಿಸಿ ಕಸರತ್ತು

ಡೀಸೆಲ್ ದರ ಏರಿಕೆ ಹಾಗೂ ಶಕ್ತಿ ಯೋಜನೆಯ ಬಾಕಿ ಹಣ ಸಕಾಲಕ್ಕೆ ಬಾರದೆ ತತ್ತರಿಸಿರುವ ಬಿಎಂಟಿಸಿ, ನಷ್ಟ ಸರಿದೂಗಿಸಲು ಈಗಾಗಲೇ ಟಿಕೆಟ್ ದರ ಏರಿಕೆಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಸದ್ಯ ಸಂಸ್ಥೆಯು ತನ್ನ ವ್ಯಾಪ್ತಿಯಲ್ಲಿರುವ ಸುಮಾರು 6,800 ಡೀಸೆಲ್ ಹಾಗೂ ಎಲೆಕ್ಟ್ರಿಕ್ ಬಸ್ಸುಗಳ ಮೂಲಕ ಪ್ರತಿದಿನ 45 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಇಷ್ಟೊಂದು ಬೃಹತ್ ಸಂಖ್ಯೆಯ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಕೋಟ್ಯಂತರ ರೂಪಾಯಿ ಆದಾಯ ಗಳಿಸಲು ಈ ಆಡಿಯೋ ಜಾಹೀರಾತು ಪ್ರಸ್ತಾವನೆಯನ್ನು ಸಾರಿಗೆ ಸಚಿವರಿಗೆ ಸಲ್ಲಿಸಲಾಗಿದ್ದು, ಸದ್ಯದಲ್ಲೇ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆಯಿದೆ.

ಪ್ರಯಾಣಿಕರ ಆಕ್ರೋಶಕ್ಕೆ ಕಾರಣವೇನು?

ಬಿಎಂಟಿಸಿಯ ಈ ಹೊಸ ಆಲೋಚನೆಗೆ ನಿತ್ಯ ಪ್ರಯಾಣಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಸ್ಸಿನೊಳಗೆ ನಿರಂತರವಾಗಿ ಸ್ಪೀಕರ್ ಮೂಲಕ ಜಾಹೀರಾತು ಪ್ರಸಾರ ಮಾಡಿದರೆ ಪ್ರಯಾಣಿಕರ ನೆಮ್ಮದಿಗೆ ಭಂಗ ಉಂಟಾಗುತ್ತದೆ ಎಂಬುದು ಸಾರ್ವಜನಿಕರ ದೂರು.

ಬಸ್ಸುಗಳಲ್ಲಿ ಬಹುತೇಕ ಬಡವರು ಮತ್ತು ಮಧ್ಯಮ ವರ್ಗದವರೇ ಪ್ರಯಾಣಿಸುತ್ತಾರೆ. ಈಗಾಗಲೇ ಬಸ್ಸುಗಳಲ್ಲಿ ಗದ್ದಲ ಹೆಚ್ಚಿರುತ್ತದೆ. ಇದರ ನಡುವೆ ಸ್ಪೀಕರ್‌ನಲ್ಲಿ ಜಾಹೀರಾತು ಹಾಕುತ್ತಾ ಹೋದರೆ, ಪ್ರಯಾಣಿಕರಿಗೆ ಮುಂದಿನ ಸ್ಟಾಪ್ ಯಾವುದು, ಎಲ್ಲಿ ಇಳಿಯಬೇಕು ಎಂಬುದೇ ತಿಳಿಯದಂತಾಗುತ್ತದೆ ಎಂದು ಬಿಎಂಟಿಸಿ ಪ್ರಯಾಣಿಕರಾದ ವಿದ್ಯಾಸಾಗರ್ ಮತ್ತು ಕಾಸಿರೇಗೌಡ ಅಸಮಾಧಾನ ಹೊರಹಾಕಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ದಿಢೀರ್ ಆಸ್ಪತ್ರೆಗೆ ದಾಖಲು – Kannada News | Maharashtra Deputy CM Eknath Shinde Admitted to Jupiter Hospital in Thane Due to Fever

ಮುಂಬೈ, ಜುಲೈ 4: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಆರೋಗ್ಯದಲ್ಲಿ ಏರುಪೇರಾಗಿದ್ದು, ಶನಿವಾರ (ಜುಲೈ 4) ಥಾಣೆಯ ಜುಪಿಟರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರದಿಂದಲೇ ಅವರು ಲಘು ಜ್ವರ, ಮೈಕೈ ನೋವು ಮತ್ತು ತೀವ್ರ ಸುಸ್ತಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯರ ಸಲಹೆಯ ಮೇರೆಗೆ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ನಿಯಮಿತ ಆರೋಗ್ಯ ತಪಾಸಣೆ: ಆತಂಕ ಬೇಡ ಎಂದ ವೈದ್ಯರು

ಆಸ್ಪತ್ರೆಯ ಮೂಲಗಳ ಪ್ರಕಾರ, ಏಕನಾಥ್ ಶಿಂಧೆಗೆ ಸದ್ಯ ರೂಟಿನ್ ಹೆಲ್ತ್ ಚೆಕಪ್ (ನಿಯಮಿತ ಆರೋಗ್ಯ ತಪಾಸಣೆ) ಮಾಡಲಾಗುತ್ತಿದೆ. ಅವರ ಆರೋಗ್ಯ ಸ್ಥಿರವಾಗಿದ್ದು, ಸಾರ್ವಜನಿಕರು ಹಾಗೂ ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಜ್ವರ ಮತ್ತು ಸುಸ್ತಿಗೆ ನಿಖರ ಕಾರಣ ತಿಳಿಯಲು ವೈದ್ಯರ ತಂಡವು ವಿವಿಧ ರಕ್ತ ಪರೀಕ್ಷೆಗಳನ್ನು ನಡೆಸುತ್ತಿದ್ದು, ಆರೋಗ್ಯದ ಮೇಲೆ ನಿರಂತರ ನಿಗಾ ಇರಿಸಿದೆ. ಸದ್ಯಕ್ಕೆ ಆಸ್ಪತ್ರೆಯ ಕಡೆಯಿಂದಾಗಲಿ ಅಥವಾ ಉಪಮುಖ್ಯಮಂತ್ರಿಗಳ ಕಚೇರಿಯಿಂದಾಗಲಿ ಯಾವುದೇ ಅಧಿಕೃತ ವೈದ್ಯಕೀಯ ಬುಲೆಟಿನ್ ಬಿಡುಗಡೆಯಾಗಿಲ್ಲ.

ಶೀಘ್ರದಲ್ಲೇ ಕೆಲಸಕ್ಕೆ ವಾಪಸ್

ಮಹಾರಾಷ್ಟ್ರದಲ್ಲಿ ಸದ್ಯ ಮುಂಗಾರು ಚುರುಕಾಗಿದ್ದು, ಸಾಂಕ್ರಾಮಿಕ ಜ್ವರ ಮತ್ತು ವೈರಲ್ ಇನ್ಫೆಕ್ಷನ್ ಪ್ರಕರಣಗಳು ಹೆಚ್ಚಾಗುತ್ತಿವೆ. ಶಿಂಧೆ ಅವರಿಗೂ ಇದೇ ರೀತಿಯ ಹವಾಮಾನ ಬದಲಾವಣೆಯ ಜ್ವರ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಶಿವಸೇನೆಯ ಹಿರಿಯ ನಾಯಕರು ಮತ್ತು ಸರ್ಕಾರಿ ಅಧಿಕಾರಿಗಳು ಆಸ್ಪತ್ರೆಯ ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ಇದನ್ನೂ ಓದಿ: ‘ಆಪರೇಷನ್ ರಾಮ ಮಂದಿರ್’; ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ಗಂಭೀರ ಆರೋಪ

ಉಪಮುಖ್ಯಮಂತ್ರಿಗಳು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ವೈದ್ಯಕೀಯ ತಪಾಸಣೆಗಳು ಪೂರ್ಣಗೊಂಡ ತಕ್ಷಣವೇ ಡಿಸ್ಚಾರ್ಜ್ ಆಗಿ ಮರಳಿ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೇರಾ ಫೇರಿ ನಿರ್ಮಾಪಕರಿಂದ ಅಪಮಾನ; ನಿರ್ದೇಶಕ ಪ್ರಿಯದರ್ಶನ್ ಬೇಸರ – Kannada News | Hera Pheri 3: Director Priyadarshan Accuses Producer Firoz Nadiadwala of Insult After Exit

‘ಹೇರಾ ಫೇರಿ 3’ ಸಿನಿಮಾಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಈ ಚಿತ್ರದ ನಿರ್ದೇಶನದಿಂದ ಪ್ರಿಯದರ್ಶನ್ ಹೊರನಡೆದಿದ್ದಾರೆ. ಕಾನೂನು ಸಂಘರ್ಷಗಳ ಕಾರಣದಿಂದ ಈ ಸಿನಿಮಾ ಥಿಯೇಟರ್‌ಗೆ ಬರುವುದು ಅನುಮಾನ ಎಂದು ಅವರು ಹೇಳಿದ್ದಾರೆ. ಈಗ ಅವರು ನಿರ್ಮಾಪಕ ಫಿರೋಜ್ ನಡಿಯಾಡ್ವಾಲಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಪ್ರಿಯದರ್ಶನ್ ಜೊತೆ ಸಿನಿಮಾ ಮಾಡಬೇಡಿ ಎಂದಿದ್ದ ನಿರ್ಮಾಪಕ

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಿಯದರ್ಶನ್ ತಮ್ಮ ಅಳಲು ತೋಡಿಕೊಂಡಿದ್ದಾರೆ. ನಿರ್ಮಾಪಕ ಫಿರೋಜ್ ತಮಗೆ ಹಲವು ಬಾರಿ ಅಪಮಾನ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ‘ಪ್ರಿಯದರ್ಶನ್ ಜೊತೆ ಎಂದಿಗೂ ಹೇರಾ ಫೇರಿ 3 ಮಾಡಬೇಡಿ ಎಂದು ಫಿರೋಜ್ ಅವರು ಅಕ್ಷಯ್ ಕುಮಾರ್‌ಗೆ ಹೇಳಿದ್ದರು. ನಾನು ಮಾಡಿದ ಮೊದಲ ಭಾಗದ ಎಡಿಟಿಂಗ್ ಕಳಪೆಯಾಗಿತ್ತು ಎಂದು ಫಿರೋಜ್ ಟೀಕಿಸಿದ್ದರು. ನಾನು ಮಾಡಿದ 5 ಗಂಟೆಯ ಸಿನಿಮಾವನ್ನು ತಾವೇ ಎಡಿಟ್ ಮಾಡಿದ್ದಾಗಿ ಅವರು ಹೇಳಿಕೊಂಡಿದ್ದರು’ ಎಂದು ಪ್ರಿಯದರ್ಶನ್ ನೆನಪಿಸಿಕೊಂಡಿದ್ದಾರೆ.

ದೊಡ್ಡ ಸಿನಿಮಾ ಮಾಡುವ ಆಸೆ ಇತ್ತು

ಈ ಫ್ರಾಂಚೈಸಿಯನ್ನು ದೇಶದ ದೊಡ್ಡ ಸಿನಿಮಾವನ್ನಾಗಿ ಮಾಡುವ ಆಸೆ ತಮಗಿತ್ತು ಎಂದು ಪ್ರಿಯದರ್ಶನ್ ಹೇಳಿದ್ದಾರೆ. ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ ಮತ್ತು ಪರೇಶ್ ರಾವಲ್ ಅವರ ಕೋರಿಕೆಯ ಮೇರೆಗೆ ಅವರು ಮೂರನೇ ಭಾಗಕ್ಕೆ ಒಪ್ಪಿಕೊಂಡಿದ್ದರು. ಕಥೆ ಕೇಳಿ ನಟರೆಲ್ಲರೂ ಉತ್ಸುಕರಾಗಿದ್ದರು. ಆದರೆ ಈಗಿನ ಪರಿಸ್ಥಿತಿಯಲ್ಲಿ ಸಿನಿಮಾ ಸೆಟ್ಟೇರುವುದು ಕಷ್ಟ ಎಂದು ಪ್ರಿಯದರ್ಶನ್ ತಿಳಿಸಿದ್ದಾರೆ. ತಾವಿಲ್ಲದಿದ್ದರೂ ಪರವಾಗಿಲ್ಲ, ಆದರೆ ಕಾನೂನು ಮತ್ತು ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಸಿನಿಮಾ ಬರುವುದು ಅನುಮಾನ ಎಂದಿದ್ದಾರೆ.

ಇದನ್ನೂ ಓದಿ: ‘ಹೇರಾ ಫೇರಿ 3’ ಚಿತ್ರ ಸೆಟ್ಟೇರೋದೇ ಡೌಟ್; ಅಕ್ಷಯ್ ಜೊತೆ ಬೇರೆ ಸಿನಿಮಾ ಶುರು

‘ಹೇರಾ ಫೇರಿ 3’ ಚಿತ್ರಕ್ಕೆ ಕಾಡುತ್ತಿರುವ ಸಮಸ್ಯೆಗಳೇನು?

ಈ ಸಿನಿಮಾದ ಹಕ್ಕುಗಳ ವಿಚಾರವಾಗಿ ಸದ್ಯ ಕಾನೂನು ಹೋರಾಟ ನಡೆಯುತ್ತಿದೆ. ದಕ್ಷಿಣ ಭಾರತದ ಪ್ರೊಡಕ್ಷನ್ ಹೌಸ್ ‘ಸೆವೆನ್ ಆರ್ಟ್ಸ್ ಇಂಟರ್ನ್ಯಾಷನಲ್’ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ. ಫಿರೋಜ್ ನಡಿಯಾಡ್ವಾಲಾ ಅವರಿಗೆ ಕೇವಲ ಮಲಯಾಳಂನ ‘ರಾಮ್‌ಜೀ ರಾವ್ ಸ್ಪೀಕಿಂಗ್’ ಚಿತ್ರವನ್ನು ರಿಮೇಕ್ ಮಾಡಲು ಮಾತ್ರ ಹಕ್ಕು ಇತ್ತು ಎಂದು ಸಂಸ್ಥೆ ವಾದಿಸಿದೆ. ಆದರೆ ನಿರ್ಮಾಪಕರು ನಿಯಮ ಮೀರಿ ಎರಡನೇ ಭಾಗ ಮಾಡಿದರು. ಈಗ ಮೂರನೇ ಭಾಗದ ಹಕ್ಕನ್ನು ಅಕ್ಷಯ್ ಕುಮಾರ್ ಅವರ ಸಂಸ್ಥೆಗೆ ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:11 am, Sat, 4 July 26

Source link

ಆಗಸ್ಟ್ 15ಕ್ಕೆ ಬೆಂಗಳೂರಲ್ಲಿ ‘ಟಾಕ್ಸಿಕ್’ ಭರ್ಜರಿ ಈವೆಂಟ್? ಹೇಳಿದ್ದನ್ನು ಮಾಡಿ ತೋರಿಸಿದ ಯಶ್ – Kannada News | Yash Toxic Movie: Bengaluru Hosts Global Pre Release Event and Pan World Hype

ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಅತ್ಯಂತ ಭಾರಿ ಹೈಪ್ ಸೃಷ್ಟಿಸಿರುವ, ದುಬಾರಿ ಬಜೆಟ್ ಸಿನಿಮಾ ಎಂದರೆ ಅದು ‘ಟಾಕ್ಸಿಕ್’(Toxic Movie) . ಯಶ್ ನಟನೆಯ ಈ ಪ್ಯಾನ್-ವರ್ಲ್ಡ್ ಸಿನಿಮಾ ಕುರಿತು ದಿನಕ್ಕೊಂದು ಹೊಸ ಅಪ್‌ಡೇಟ್‌ಗಳು ಹೊರಬರುತ್ತಿವೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದ ಪ್ರತಿಯೊಂದು ಹೆಜ್ಜೆಯೂ ಸಿನಿಪ್ರೇಮಿಗಳಲ್ಲಿ ತೀವ್ರ ಕುತೂಹಲ ಮೂಡಿಸುತ್ತಿದೆ. ಸದ್ಯ ಚಿತ್ರತಂಡವು ಸಿನಿಮಾದ ಭರ್ಜರಿ ಪ್ರಚಾರ ಕಾರ್ಯಗಳಿಗೆ ಬಿಗ್ ಪ್ಲಾನ್ ಮಾಡಿಕೊಳ್ಳುತ್ತಿದ್ದು, ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಒಂದು ಬೃಹತ್ ಈವೆಂಟ್ ಆಯೋಜಿಸಲು ಸಜ್ಜಾಗಿದೆ.

ದೇಶ-ವಿದೇಶದ ಪತ್ರಕರ್ತರ ಸಮಾಗಮ

ವಿಶೇಷವೆಂದರೆ, ಈ ಸಿನಿಮಾ ರಿಲೀಸ್ ಆಗಲು ಕೇವಲ 11 ದಿನ ಬಾಕಿ ಇರುವಾಗಈ ಅದ್ಧೂರಿ ಈವೆಂಟ್ ಜರುಗಲಿದೆ. ‘ಟಾಕ್ಸಿಕ್’ ಸಿನಿಮಾ ಕೇವಲ ಭಾರತೀಯ ಭಾಷೆಗಳಲ್ಲಿ ಮಾತ್ರವಲ್ಲದೆ, ಇಂಗ್ಲಿಷ್ ಭಾಷೆಯಲ್ಲೂ ಜಾಗತಿಕ ಮಟ್ಟದಲ್ಲಿ ರಿಲೀಸ್ ಆಗುತ್ತಿರುವುದರಿಂದ ಈ ಕಾರ್ಯಕ್ರಮವನ್ನು ಅತ್ಯಂತ ಜಾಗತಿಕ ಮಟ್ಟದಲ್ಲೇ ಪ್ಲಾನ್ ಮಾಡಲಾಗುತ್ತಿದೆ. ಈ ಹೈ-ಪ್ರೊಫೈಲ್ ಈವೆಂಟ್‌ಗಾಗಿ ಭಾರತದ ಮೂಲೆ ಮೂಲೆಗಳ ಪತ್ರಕರ್ತರು ಮಾತ್ರವಲ್ಲದೆ, ವಿದೇಶಿ ಮಾಧ್ಯಮಗಳ ಪ್ರತಿನಿಧಿಗಳು ಹಾಗೂ ಪ್ರಮುಖ ಜಾಗತಿಕ ಪತ್ರಕರ್ತರು ಕೂಡ ಬೆಂಗಳೂರಿಗೆ ಲಗ್ಗೆ ಇಡಲಿದ್ದಾರೆ ಎನ್ನಲಾಗುತ್ತಿದೆ

ಹೇಳಿದ್ದನ್ನು ಮಾಡಿ ತೋರಿಸಿದ ಯಶ್

‘ನಾನು ಬೇರೆ ಭಾಷೆಗೆ ಹೋಗಲ್ಲ, ಅವರನ್ನೇ ಇಲ್ಲಿಗೆ ಕರೆಸುತ್ತೇನೆ. ಎಲ್ಲರೂ ಇತ್ತ ತಿರುಗಿ ನೋಡುವಂತೆ ಮಾಡುತ್ತೇನೆ ’ ಎಂದು ಈ ಹಿಂದೆ ಯಶ್ ಹೇಳಿದ್ದ ಮಾತುಗಳನ್ನು ಈಗ ಅವರು ಅಕ್ಷರಶಃ ನಿಜ ಮಾಡಿ ತೋರಿಸುತ್ತಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳ ಪ್ರಚಾರಕ್ಕಾಗಿ ಮುಂಬೈ, ಹೈದರಾಬಾದ್ ಅಥವಾ ವಿದೇಶಗಳಿಗೆ ಹೋಗುವ ಇಂದಿನ ಟ್ರೆಂಡ್ ನಡುವೆ, ಯಶ್ ಜಾಗತಿಕ ಮಾಧ್ಯಮಗಳನ್ನು ಬೆಂಗಳೂರಿಗೇ ಕರೆತರುತ್ತಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದ ಗತ್ತನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನದಲ್ಲಿದ್ದಾರೆ.

ಇದನ್ನೂ ಓದಿ:  ‘ಟಾಕ್ಸಿಕ್’ ಟೀಸರ್​​ನಲ್ಲಿ ಅಷ್ಟು ದೊಡ್ಡ ಎಚ್ಚರಿಕೆ ಕೊಡಲು ಇದೆ ದೊಡ್ಡ ಕಾರಣ

‘ಕೆಜಿಎಫ್’ ಸರಣಿಯ ಜಾಗತಿಕ ಯಶಸ್ಸಿನ ನಂತರ ಯಶ್ ನಟಿಸುತ್ತಿರುವ ಚಿತ್ರ ಇದಾಗಿರುವುದರಿಂದ ‘ಟಾಕ್ಸಿಕ್’ ಮೇಲಿನ ನಿರೀಕ್ಷೆಗಳು ಗಗನ ಮುಟ್ಟಿವೆ. ಚಿತ್ರದಲ್ಲಿ ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ ಸೇರಿದಂತೆ ಪ್ರಮುಖ ನಟ-ನಟಿಯರು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಡ್ರಗ್ ಮಾಫಿಯಾ ಮತ್ತು ಆಕ್ಷನ್ ಹಿನ್ನೆಲೆಯುಳ್ಳ ವಿಭಿನ್ನ ಕಥಾಹಂದರ ಹೊಂದಿರುವ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದು, ಆಗಸ್ಟ್ 26ರಂದು ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

K.R Circle Bus accident: ಕೆ. ಆರ್ ಸರ್ಕಲ್ ಟ್ರಾಫಿಕ್ ಸಿಗ್ನಲ್​ನಲ್ಲಿ ನಿಂತಿದ್ದ ಎಸಿ ಬಸ್​ಗೆ ಮತ್ತೊಂದು ಬಸ್ ಡಿಕ್ಕಿ! – Kannada News | Bengaluru K.R. Circle BMTC Bus Accident: Two Buses Collide at Traffic Signal

ಬೆಂಗಳೂರು, ಜುಲೈ 04: ನಗರದ ಕೆ.ಆರ್. ಸರ್ಕಲ್‌ನಲ್ಲಿ ಎರಡು ಬಿಎಂಟಿಸಿ ಬಸ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಸಿಗ್ನಲ್‌ನಲ್ಲಿ ನಿಂತಿದ್ದ ಎಸಿ ಬಸ್‌ಗೆ ಹಿಂಬದಿಯಿಂದ ಮತ್ತೊಂದು ಬಸ್ ಡಿಕ್ಕಿ ಹೊಡೆದಿದ್ದು, ಮುಂಭಾಗ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಎಂಟು ಜನ ಪ್ರಯಾಣಿಕರು ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ತೀವ್ರ ಗಾಯಗೊಂಡ ಚಾಲಕ ಹಾಗೂ ಯುವತಿಯನ್ನು ರಕ್ಷಿಸಿ ಸೇಂಟ್ ಮಾರ್ಥಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿಯ ಎಡಗಾಲಿಗೆ ಬಲವಾದ ಪೆಟ್ಟು ಬಿದ್ದಿದೆ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದುಬಾರಿ ವೆಚ್ಚ ಕೇಳುತ್ತಿರುವುದರಿಂದ ಗಾಯಾಳುಗಳ ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಪಘಾತದಿಂದಾಗಿ ಸ್ಥಳದಲ್ಲಿ ಭಾರಿ ವಾಹನ ದಟ್ಟಣೆ ಉಂಟಾಗಿದ್ದು, ಕ್ರೇನ್ ಬಳಸಿ ಬಸ್‌ಗಳನ್ನು ತೆರವುಗೊಳಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರಿ ಕೆಲಸ ಕೊಡಿಸುವ ನೆಪದಲ್ಲಿ ವಂಚನೆ: ಟಿವಿ9 ವರದಿ ಬಳಿಕ ಆರೋಪಿಗಳ ಬಂಧನ! – Kannada News | TV9 Impact: Couple Arrested for Multi Crore Government Job Scam Targeting Aspirants

ಬೆಂಗಳೂರು, ಜುಲೈ 04: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಅಮಾಯಕ ಉದ್ಯೋಗಾಕಾಂಕ್ಷಿಗಳಿಂದ ಕೋಟಿಗಟ್ಟಲೆ ಹಣ ವಂಚಿಸಿದ್ದ ಗ್ಯಾಂಗ್ ಅನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ. ಟಿವಿ9 ವಾಹಿನಿಯು ಈ ಖದೀಮರ ವಂಚನೆಯ ಕುರಿತು ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆಗಿಳಿದು ಪ್ರಮುಖ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಸಚಿನ್ ಮತ್ತು ಸುಜಾತಾ ಎಂಬ ದಂಪತಿ ಈ ವಂಚನೆ ಜಾಲದ ಮುಖ್ಯಸ್ಥರಾಗಿದ್ದು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳ ಜನರನ್ನು ಟಾರ್ಗೆಟ್ ಮಾಡಿದ್ದರು. ಎಫ್‌ಡಿಸಿ, ಎಸ್‌ಡಿಸಿ, ಅರಣ್ಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗಳಲ್ಲಿ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ 50ಕ್ಕೂ ಹೆಚ್ಚು ಜನರಿಂದ ಸುಮಾರು 1.2 ಕೋಟಿ ರೂಪಾಯಿ ವಸೂಲಿ ಮಾಡಿದ್ದರು. ಪ್ರತಿ ಉದ್ಯೋಗಾಕಾಂಕ್ಷಿಯಿಂದ 3.5 ಲಕ್ಷ ರೂಪಾಯಿ ಪಡೆದು ನಕಲಿ ದಾಖಲೆಪತ್ರಗಳು, ಐಡಿ ಕಾರ್ಡ್‌ಗಳು ಮತ್ತು ನೇಮಕಾತಿ ಪತ್ರಗಳನ್ನು ನೀಡಿದ್ದರು. ನಕಲಿ ದಾಖಲೆಗಳನ್ನು ಮುದ್ರಿಸಲು ದುರ್ಗಿಗುಡಿಯ ಶ್ರೀಸಾಯಿ ಆಫ್‌ಸೆಟ್ ಪ್ರಿಂಟರ್ಸ್‌ ಅನ್ನು ಬಳಸಿಕೊಳ್ಳಲಾಗಿತ್ತು. ಟಿವಿ9 ವರದಿ ಪ್ರಸಾರವಾದ ನಂತರ ದೊಡ್ಡಪೇಟೆ ಪೊಲೀಸರು ದಾಳಿ ನಡೆಸಿ ಸಚಿನ್ ಮತ್ತು ಸುಜಾತಾ ಅವರನ್ನು ಬಂಧಿಸಿದ್ದಾರೆ.  ಮುಂದುವರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಂಡ್ಯ ಫೈರಿಂಗ್ ಪ್ರಕರಣ: ಪ್ರಭಾವಿ ಪುತ್ರನ ಬೆನ್ನಿಗೆ ನಿಂತ್ರಾ ಎಸ್‌ಪಿ ಶೋಭಾರಾಣಿ? ಭಾರೀ ಚರ್ಚೆ – Kannada News | Mandya Shootout Case: SP Shobharani Faces Backlash Over Alleged Soft Corner For Accused Rohan Gowda

ಮಂಡ್ಯ, ಜುಲೈ 4: ಮಂಡ್ಯ ಬಳಿ ನಡೆದ ಟ್ರಕ್ ಮೇಲಿನ ಗುಂಡಿನ ದಾಳಿ ಪ್ರಕರಣದಲ್ಲಿ, ಪ್ರಭಾವಿ ಪುತ್ರ ರೋಹನ್ ಗೌಡನಿಗೆ ಮಂಡ್ಯ ಎಸ್‌ಪಿ ಡಾ. ಶೋಭಾರಾಣಿ ಬೆಂಬಲವಾಗಿ ನಿಂತಿದ್ದಾರೆ ಎಂಬ ಅನುಮಾನಗಳು ವ್ಯಾಪಕವಾಗಿದ್ದು, ಆರೋಪಗಳೂ ವ್ಯಕ್ತವಾಗಿವೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್‌ನಲ್ಲಿ ಪ್ರಮುಖ ಸೆಕ್ಷನ್‌ಗಳನ್ನು ಕೈಬಿಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದಕ್ಕೆ ಎಸ್‌ಪಿ ಮತ್ತು ಆರೋಪಿ ರೋಹನ್ ಕುಟುಂಬದ ನಡುವಿನ ಆತ್ಮೀಯತೆ ಕಾರಣ ಎನ್ನಲಾಗಿದೆ. ಆರೋಪಿ ರೋಹನ್ ಗೌಡ ಮಂಡ್ಯ ಎಸ್‌ಪಿ ಶೋಭಾರಾಣಿ ಅವರನ್ನು ಇನ್​ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿದ್ದರು. ಅಲ್ಲದೆ, ಮಂಡ್ಯಕ್ಕೆ ವರ್ಗಾವಣೆಯಾದಾಗ ರೋಹನ್ ಅವರೇ ಶೋಭಾರಾಣಿಗೆ ಅದ್ದೂರಿ ಸ್ವಾಗತ ಕೋರಿ, ಬಳ್ಳಾರಿಯಿಂದ ತಮ್ಮ ಕಾರಿನಲ್ಲಿ ಕರೆತಂದಿದ್ದರು. ಈ ಆಪ್ತ ಸಂಬಂಧವೇ ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿವೆ.

ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದರೂ, ವೈದ್ಯಕೀಯ ತಪಾಸಣೆಗೆ ಒಂದು ದಿನ ವಿಳಂಬ ಮಾಡಿದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಲ್ಲದೆ, ಗುಂಡಿನ ದಾಳಿಯನ್ನು ‘ಫನ್ ಗೋಸ್ಕರ’ ಮಾಡಲಾಗಿದೆ ಎಂದು ಎಸ್‌ಪಿ ಹೇಳಿರುವುದು ಮತ್ತು ಏರ್‌ಗನ್ ವಶಕ್ಕೆ ಪಡೆಯಲಾಗಿದೆ ಎಂದು ಎಫ್‌ಎಸ್‌ಎಲ್ ವರದಿ ಬರುವ ಮುನ್ನವೇ ಘೋಷಿಸಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಎಸ್‌ಪಿ ಶೋಭಾರಾಣಿ ಕರ್ತವ್ಯವನ್ನೇ ಮರೆತು ಪ್ರಭಾವಿ ಪುತ್ರನ ಬೆನ್ನಿಗೆ ನಿಂತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಮಂಡ್ಯ ಟ್ರಕ್ ಮೇಲಿನ ಗುಂಡಿನ ದಾಳಿ ಪ್ರಕರಣದ ಮತ್ತಷ್ಟು ವಿವರ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version