ಎಂಇಐಎಲ್-ಅನಾಲಾಗ್ ಸಹಭಾಗಿತ್ವ: ಭಾರತಕ್ಕೆ ಬರಲಿದೆ ‘ಫಿಸಿಕಲ್ ಇಂಟೆಲಿಜೆನ್ಸ್’ ತಂತ್ರಜ್ಞಾನ – Kannada News | MEIL and Analog Bring Physical Intelligence to India

ಮೇಘಾ ಎಂಜಿನಿಯರಿಂಗ್​ನ ಎಂಡಿ ಕೃಷ್ಣಾರೆಡ್ಡಿ ಮತ್ತು ಅನಾಲಾಗ್ ಸಿಇಒ ಕಿಪ್ಮನ್Image Credit source: TV9 Network

ಹೈದರಾಬಾದ್, ಜುಲೈ 1: ಮೇಘಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (MEIL) ಮತ್ತು ಅನಾಲಾಗ್ (Analog) ಸಂಸ್ಥೆಗಳು ಭಾರತದಾದ್ಯಂತ ‘ಫಿಸಿಕಲ್ ಇಂಟೆಲಿಜೆನ್ಸ್’ (Physical Intelligence) ತಂತ್ರಜ್ಞಾನವನ್ನು ಪರಿಚಯಿಸಲು ಮತ್ತು ಅಳವಡಿಸಲು ಇಂದು ಸಹಭಾಗಿತ್ವ (Strategic Partnership) ಘೋಷಿಸಿವೆ.

‘ಫಿಸಿಕಲ್ ಇಂಟೆಲಿಜೆನ್ಸ್’ ಎಂದರೆ ಯಂತ್ರಗಳು ನೈಜ ಜಗತ್ತನ್ನು ಗ್ರಹಿಸುವ, ಅರ್ಥಮಾಡಿಕೊಳ್ಳುವ ಮತ್ತು ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸುವ ಸಾಮರ್ಥ್ಯವಾಗಿದೆ. ಇದು ಯಾವುದೇ ಕಟ್ಟುನಿಟ್ಟಾದ ಪ್ರೋಗ್ರಾಮಿಂಗ್ ಮೂಲಕ ಕೆಲಸ ಮಾಡುವುದಿಲ್ಲ, ಬದಲಿಗೆ ನಿರಂತರ ಕಲಿಕೆಯ (Continuous learning) ಮೂಲಕ ಕಾರ್ಯನಿರ್ವಹಿಸುತ್ತದೆ. ಪ್ರತಿ ಸಂವಹನದೊಂದಿಗೆ ಹೆಚ್ಚು ಬುದ್ಧಿವಂತವಾಗಿ ಬೆಳೆಯುವ ಜಗತ್ತಿನ ಸಜೀವ ಮಾದರಿಯನ್ನು ಇದು ನಿರ್ಮಿಸುತ್ತದೆ.

ಈ ಪಾಲುದಾರಿಕೆಯು ಆ ಸಾಮರ್ಥ್ಯವನ್ನು ಭಾರತಕ್ಕೆ ದೊಡ್ಡ ಮಟ್ಟದಲ್ಲಿ ತರಲಿದೆ. ಎಂಇಐಎಲ್ ಸಂಸ್ಥೆಯು ತನ್ನ ವ್ಯಾಪಕ ನೆಟ್‌ವರ್ಕ್ ಮತ್ತು ರೀಚ್ ಅನ್ನು ಒದಗಿಸಿದರೆ, ಅನಾಲಾಗ್ ಸಂಸ್ಥೆಯು ತಂತ್ರಜ್ಞಾನದ ಬುದ್ಧಿವಂತಿಕೆಯನ್ನು ನೀಡಲಿದೆ. ಈ ಎರಡೂ ಸಂಸ್ಥೆಗಳು ಒಟ್ಟಾಗಿ ಮೂಲಸೌಕರ್ಯ, ಮೊಬಿಲಿಟಿ (ಸಾರಿಗೆ), ಕೈಗಾರಿಕಾ ವ್ಯವಸ್ಥೆಗಳು, ಸಾರ್ವಜನಿಕ ಸುರಕ್ಷತೆ, ನಗರ ರೂಪಾಂತರ ಮತ್ತು ಇಂಟೆಲಿಜೆಂಟ್ ಆಪರೇಷನ್ಸ್ ಕ್ಷೇತ್ರಗಳಲ್ಲಿ ಕೆಲಸ ಮಾಡಲಿವೆ.

ಈ ಒಪ್ಪಂದವು ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಡುವಿನ ತಂತ್ರಜ್ಞಾನ ಸಂಬಂಧ ಮತ್ತಷ್ಟು ಆಳವಾಗುತ್ತಿರುವುದನ್ನು ಸೂಚಿಸುತ್ತದೆ. ಅನಲಾಗ್ ಸಂಸ್ಥೆಯು ಅಬುಧಾಬಿ ಮೂಲದ್ದಾಗಿದ್ದು, ಅದರ ಸಿಇಒ ಅಲೆಕ್ಸ್ ಕಿಪ್ಮನ್.

ಪ್ರಗತಿಯ ಬುನಾದಿಯಾಗಿದೆ ಇನ್​ಫ್ರಾಸ್ಟ್ರಕ್ಚರ್: ಎಂಇಐಎಲ್ ಎಂಡಿ

ಎಂಇಐಎಲ್ (MEIL) ವ್ಯವಸ್ಥಾಪಕ ನಿರ್ದೇಶಕರಾದ ಪಿ.ವಿ. ಕೃಷ್ಣಾರೆಡ್ಡಿ ಅವರು ಅನಾಲಾಗ್ ಸಂಸ್ಥೆ ಜೊತೆ ಕೆಲಸ ಮಾಡಲು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

“ಮೂಲಸೌಕರ್ಯವು ಯಾವಾಗಲೂ ಪ್ರಗತಿಯ ಅಡಿಪಾಯವಾಗಿದೆ. ಮೂಲಸೌಕರ್ಯದ ಭವಿಷ್ಯವು ಇಂಟೆಲಿಜೆಂಟ್, ಕನೆಕ್ಟೆಡ್ ಮತ್ತು ಅಡಾಪ್ಟಿವ್ (ಹೊಂದಿಕೊಳ್ಳಬಲ್ಲ) ಆಗಿರುತ್ತದೆ. ಈ ಸಹಭಾಗಿತ್ವವು ಅದನ್ನೇ ನಿರ್ಮಿಸಲಿದೆ. ಭಾರತಕ್ಕೆ ‘ಫಿಸಿಕಲ್ ಇಂಟೆಲಿಜೆನ್ಸ್’ ತರಲು ಅನಾಲಾಗ್ ಸಂಸ್ಥೆಯೊಂದಿಗೆ ಕೆಲಸ ಮಾಡಲು ನಾವು ಹೆಮ್ಮೆಪಡುತ್ತೇವೆ” ಎಂದು ಕೃಷ್ಣಾರೆಡ್ಡಿ ಹೇಳಿದ್ದಾರೆ.

ಅನಾಲಾಗ್ ಸಿಇಒ ಹೇಳಿಕೆ

ಅನಾಲಾಗ್ ಸಂಸ್ಥೆಯ ಸ್ಥಾಪಕ ಮತ್ತು ಸಿಇಒ ಅಲೆಕ್ಸ್ ಕಿಪ್ಮನ್ ಅವರೂ ಇದೇ ಅಭಿಪ್ರಾಯವನ್ನು ಪುನರುಚ್ಚರಿಸಿದ್ದಾರೆ. “ಭಾರತವು ವಿಶ್ವದ ಅತ್ಯಂತ ಪ್ರಮುಖ ತಂತ್ರಜ್ಞಾನದ ಅವಕಾಶಗಳಲ್ಲಿ ಒಂದಾಗಿದೆ. ಇಲ್ಲಿನ ಎಂಜಿನಿಯರಿಂಗ್ ಪ್ರತಿಭೆ, ಮೂಲಸೌಕರ್ಯದ ಮಹತ್ವಾಕಾಂಕ್ಷೆ ಮತ್ತು ಉದ್ಯಮಶೀಲತೆಯ ಶಕ್ತಿ ಅಸಾಧಾರಣವಾದದ್ದು. ಈ ಕ್ಷಣಕ್ಕೆ ‘ಫಿಸಿಕಲ್ ಇಂಟೆಲಿಜೆನ್ಸ್’ ಅತ್ಯಂತ ಸೂಕ್ತವಾಗಿದೆ. ಇದನ್ನು ನಿರ್ಮಿಸಲು ನಮಗೆ ಸಹಾಯ ಮಾಡಲು ಎಂಇಐಎಲ್ ಸರಿಯಾದ ಪಾಲುದಾರ ಸಂಸ್ಥೆಯಾಗಿದೆ. ಎರಡೂ ಸಂಸ್ಥೆಗಳು ಸೇರಿ ಮಿತಿಯಿಲ್ಲದ ಭವಿಷ್ಯವನ್ನು ನಿರ್ಮಿಸುತ್ತಿದ್ದೇವೆ” ಎಂದು ಅನಾಲಾಗ್ ಸಿಇಒ ತಿಳಿಸಿದ್ದಾರೆ.

ಇದನ್ನೂ ಓದಿ: ಹೊಸ ಉದ್ಯೋಗ ಖಾತ್ರಿ ಸ್ಕೀಮ್; ಮನ್ರೇಗಾ ಬದಲು ವಿ ಬಿ ಜಿ ರಾಮ್ ಜಿ ಇಂದಿನಿಂದ ಅಧಿಕೃತ ಜಾರಿ

ಈ ಪಾಲುದಾರಿಕೆಯು ಇಂಟೆಲಿಜೆಂಟ್ ಮೂಲಸೌಕರ್ಯ ಮತ್ತು ಮೊಬಿಲಿಟಿ, ಸ್ಮಾರ್ಟ್ ಅರ್ಬನ್ ಸಿಸ್ಟಮ್ಸ್, ಸುಧಾರಿತ ಸೆನ್ಸಿಂಗ್, ರೋಬೋಟಿಕ್ಸ್ ಮತ್ತು ಸ್ಪೇಷಿಯಲ್ ಕಂಪ್ಯೂಟಿಂಗ್, ಕೈಗಾರಿಕಾ ರೂಪಾಂತರ, ಸಾರ್ವಜನಿಕ ಸುರಕ್ಷತೆ ಮತ್ತು ಎಐ-ಆಧಾರಿತ ನೈಜ-ಜಗತ್ತಿನ ಪರಿಸರಗಳಾದ್ಯಂತ ತಂತ್ರಜ್ಞಾನ ಅಳವಡಿಕೆಯನ್ನು ಉತ್ತೇಜಿಸಲಿದೆ.

ಕೇವಲ ತಂತ್ರಜ್ಞಾನ ಅಳವಡಿಕೆಯಷ್ಟೇ ಅಲ್ಲದೆ, ಈ ಜಂಟಿ ಸಹಯೋಗವು ಭಾರತದಲ್ಲಿ ದೀರ್ಘಕಾಲೀನ ಸಾಮರ್ಥ್ಯ ಸೃಷ್ಟಿ, ಪ್ರತಿಭೆಗಳ ಅಭಿವೃದ್ಧಿ ಮತ್ತು ಪರಿಸರ ವ್ಯವಸ್ಥೆಯ (Ecosystem) ನಿರ್ಮಾಣದಲ್ಲಿ ಹೂಡಿಕೆ ಮಾಡಲಿದೆ.

ತೆಲಂಗಾಣ ರೈಸಿಂಗ್ ಗ್ಲೋಬಲ್ ಸಮ್ಮಿಟ್‌ನಲ್ಲಿ (Telangana Rising Global Summit) ಸಹಿ ಹಾಕಲಾದ ಮೂಲಭೂತ ಒಪ್ಪಂದಗಳ ನಂತರ, ಈ ಪ್ರಕಟಣೆಯು ಸುಧಾರಿತ ತಂತ್ರಜ್ಞಾನ ಹೂಡಿಕೆಗೆ ಪ್ರಮುಖ ತಾಣವಾಗಿ ಹೈದರಾಬಾದ್ ಮತ್ತು ತೆಲಂಗಾಣದ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ.

ಮೇಘಾ ಎಂಜಿನಿಯರಿಂಗ್​ನ ಎಂಡಿ ಕೃಷ್ಣಾರೆಡ್ಡಿ ಮತ್ತು ಅನಾಲಾಗ್ ಸಿಇಒ ಕಿಪ್ಮನ್

ಎಂಇಐಎಲ್ (MEIL) ಬಗ್ಗೆ

ಮೇಘಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (MEIL) ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೂಲಸೌಕರ್ಯ ಮತ್ತು ಎಂಜಿನಿಯರಿಂಗ್ ದೈತ್ಯ ಸಂಸ್ಥೆಗಳಲ್ಲಿ ಒಂದಾಗಿದ್ದು, ತೆಲಂಗಾಣದ ಹೈದರಾಬಾದ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಕಳೆದ ಮೂರು ದಶಕಗಳಲ್ಲಿ, ಇದು ನೀರಾವರಿ, ಇಂಧನ, ಸಾರಿಗೆ, ಹೈಡ್ರೋಕಾರ್ಬನ್ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ ಭಾರತ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ಮತ್ತು ಸಂಕೀರ್ಣ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಹೆಗ್ಗಳಿಕೆಯನ್ನು ಹೊಂದಿದೆ. ಟನಲ್‌ಗಳು, ಬಂದರುಗಳು, ಹೆದ್ದಾರಿಗಳು, ನೀರು ಮತ್ತು ವಿದ್ಯುತ್ ವ್ಯವಸ್ಥೆಗಳಲ್ಲಿ ಇದು ಪರಿಣತಿ ಹೊಂದಿದೆ.

ಅನಾಲಾಗ್ (Analog) ಬಗ್ಗೆ

ತಂತ್ರಜ್ಞಾನವು ನೈಜ ಜಗತ್ತಿಗೆ ಸೇರಿದ್ದು ಎಂಬ ನಂಬಿಕೆಯಿಂದ ಹುಟ್ಟಿದ ಕಂಪನಿ ಅನಾಲಾಗ್. ಇದು ಜನರು, ಸ್ಥಳಗಳು ಮತ್ತು ವಸ್ತುಗಳನ್ನು ನಿರಂತರವಾಗಿ ಕಲಿಯುವ ವರ್ಲ್ಡ್ ಮಾಡಲ್​ಗೆ ಜನರನ್ನು, ಸ್ಥಳಗಳನ್ನು ಜೋಡಿಸುವ ‘ಫಿಸಿಕಲ್ ಇಂಟೆಲಿಜೆನ್ಸ್’ ಅನ್ನು ನಿರ್ಮಿಸುತ್ತಿದೆ. ಅಬುಧಾಬಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಈ ಸಂಸ್ಥೆಯು ಜಿ42 (G42) ನ ಪ್ರಮುಖ ಹೂಡಿಕೆಯನ್ನು ಹೊಂದಿದೆ. ಇದು ಭೌತಿಕ ಜಗತ್ತಿನಲ್ಲಿ ಯೋಚಿಸುವ ಮತ್ತು ಕಾರ್ಯನಿರ್ವಹಿಸುವ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಲು ಜಾಗತಿಕ ಉದ್ಯಮಗಳೊಂದಿಗೆ ಪಾಲುದಾರಿಕೆ ಹೊಂದಿದೆ.

ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ: www.analog.io; www.meil.in

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಾಷಿಂಗ್ ಮಷಿನ್​​ಗೆ ಹಾಕಿ ಮಕ್ಕಳಿಗೆ ಹಿಂಸೆ: ಬೇಬಿ ಕೇರ್ ಸೆಂಟರ್ ಕ್ರೂರತನ ಬಯಲಿಗೆ – Kannada News | Baby Care Centre Cruelty Exposed: Toddlers Allegedly Put Inside Washing Machine

ಬೆಂಗಳೂರು, ಜುಲೈ 01: ನಗರದ ಐಟಿ ಕಂಪನಿಯೊಂದರ ಆವರಣದಲ್ಲಿರುವ ಡೇ-ಕೇರ್ ಕೇಂದ್ರದಲ್ಲಿ (Baby care center) ಎರಡು ವರ್ಷದ ಪುಟ್ಟ ಮಕ್ಕಳಿಗೆ ದೈಹಿಕ ಹಿಂಸೆ, ಕಿರುಕುಳ ನೀಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಕ್ಕಳಿಗೆ ದೈಹಿಕ ಹಿಂಸೆ ನೀಡುವ ವಿಡಿಯೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿವೆ. ಆ ಬೆನ್ನಲ್ಲೇ ಮಕ್ಕಳ ಸಹಾಯವಾಣಿಗೆ ಈ ಬಗ್ಗೆ ದೂರು ಬಂದಿದೆ. ಸದ್ಯ ಡೇ-ಕೇರ್​ ಕೇಂದ್ರದ ಐವರು ಆಯಾಗಳ ವಿರುದ್ಧ ಹೆಚ್​ಎಎಲ್​ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.

ಆಯಾಗಳಿಂದ ಮಕ್ಕಳಿಗೆ ದೈಹಿಕ ಹಿಂಸೆ

ಹೆಚ್‌ಎಎಲ್ ಕ್ಯಾಂಪಸ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ ಕ್ಯಾಪ್‌ಜೆಮಿನಿ ಆವರಣದಲ್ಲಿರುವ ಬ್ರೂಕ್​ಫೀಲ್ಡ್​​ನಲ್ಲಿರೋ ಸೊಸೈಟಿ ಜನರಲ್ ಬೇಬಿ ಕೇರ್ ಸೆಂಟರ್​ನಲ್ಲಿ ಈ ಅಮಾನವೀಯ ಕೃತ್ಯ ನಡೆದಿದೆ. ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ಪುಟ್ಟ ಮಕ್ಕಳನ್ನು ನೋಡಿಕೊಳ್ಳಲು ಈ ಸೆಂಟರ್​ನಲ್ಲಿ ಬಿಟ್ಟು ಹೋಗುತ್ತಾರೆ. ಆದರೆ, ಅಲ್ಲಿನ ಆಯಾಗಳು ಮಾತ್ರ ಮಕ್ಕಳ ಮೇಲೆ ಮೃಗೀಯ ವರ್ತನೆ ತೋರಿದ್ದಾರೆ. ಮಕ್ಕಳು ಅಳುವಾಗ ಅಥವಾ ಗಲಾಟೆ ಮಾಡಿದಾಗ ಹಿಂಸೆ ನೀಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಕ್ಕಳನ್ನ ವಾಷಿಂಗ್ ಮಷಿನ್ ಒಳಗಡೆ ಹಾಕುವ ಸಿಬ್ಬಂದಿ

ಇನ್ನು ವೈರಲ್ ಆಗಿರುವ ವಿಡಿಯೋ ಮತ್ತಷ್ಟು ಭಯಾನಕವಾಗಿವೆ. ಮಕ್ಕಳನ್ನು ವಾಷಿಂಗ್ ಮಷಿನ್ ಒಳಗಡೆ ಹಾಕಿರುವುದು, ಬಲವಂತವಾಗಿ ಟಾಯ್ಲೆಟ್ ಜೆಟ್ ಸ್ಪ್ರೇ ಪೈಪ್​​ ಮೂಲಕ ನೇರವಾಗಿ ಮಕ್ಕಳ ಬಾಯಿಗೆ ತುರುಕಿ ನೀರು ಬಿಡುವ ಮೂಲಕ ಅತ್ಯಂತ ಅಮಾನುಷವಾಗಿ ನಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಶೌಚಾಲಯದೊಳಗೆ ಕೂಡಿ ಹಾಕುವುದಲ್ಲದೆ ಕಿರುಚಾಡದಂತೆ ಹೆದರಿಸಿದ್ದಾರೆ. ಆಯಾಗಳ ಈ ಕ್ರೂರ ಕೃತ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ. ಮಕ್ಕಳು ಭಯದಿಂದ ಅಳುತ್ತಿರುವ ವಿಡಿಯೋಗಳು ವೈರಲ್ ಆಗಿವೆ.

ಇದನ್ನೂ ಓದಿ: ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: 25 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ, 17 ಪೆಡ್ಲರ್‌ಗಳ ಬಂಧನ

ವಿಡಿಯೋಗಳು ವೈರಲ್​ ಬೆನ್ನಲ್ಲೇ ಮಕ್ಕಳ ಸಹಾಯವಾಣಿಗೆ ದೂರು ಬಂದಿದೆ. ಚೈಲ್ಡ್ ಹೆಲ್ಪ್‌ಲೈನ್ ನೀಡಿದ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು, ಐವರು ಆಯಾಗಳ ವಿರುದ್ಧ ಬಿಎನ್​​ಎಸ್​ ಮತ್ತು ಬಾಲಾಪರಾಧಿ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ಹೆಚ್​ಎಎಲ್ ಪೊಲೀಸರು ವಿಡಿಯೋ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Chanakya Niti: ಯೌವನಲ್ಲಿ ಕಲಿಯುವ ಈ ವಿಷಯಗಳು ನಿಮ್ಮ ಭವಿಷ್ಯದ ದಿಕ್ಕನ್ನು ನಿರ್ಧರಿಸುತ್ತದೆ – Kannada News | Chanakya Niti: Chanakya says it is very important to learn these things at young age

ಆಚಾರ್ಯ ಚಾಣಕ್ಯರು (Acharya Chanakya) 20 ರಿಂದ 30 ವರ್ಷ ವಯಸ್ಸಿನ ಅವಧಿಯನ್ನು ಜೀವನದ ಅತ್ಯಂತ ನಿರ್ಣಾಯಕ ಹಂತ ಎಂದು ಬಣ್ಣಿಸಿದ್ದಾರೆ. ಅವರ ಪ್ರಕಾರ, ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು, ಅಳವಡಿಸಿಕೊಳ್ಳುವ ಅಭ್ಯಾಸಗಳು ಇಡೀ ಭವಿಷ್ಯದ ದಿಕ್ಕನ್ನು ನಿರ್ಧರಿಸುತ್ತವೆ. ಆದ್ದರಿಂದ ಈ ಯೌವನದ ವಯಸ್ಸಿನಲ್ಲಿ ಸ್ನೇಹಿತರನ್ನು ಮಾಡುವುದರಿಂದ ಹಿಡಿದು ಸಮಯಕ್ಕೆ ಮೌಲ್ಯವನ್ನು ನೀಡುವುದರ ವರೆಗೆ ಕೆಲವೊಂದು ಪ್ರಮುಖ ಸಂಗತಿಗಳನ್ನು ಕಲಿಯಲೇಬೇಕು, ಇಲ್ಲದಿದ್ದರೆ ಭವಿಷ್ಯವೇ ಹಾಳಾಗಬಹುದು ಎಂದು ಎಚ್ಚರಿಸಿದ್ದಾರೆ. ಯಶಸ್ಸು ಗಳಿಕೆ, ಉತ್ತಮ ಭವಿಷ್ಯದ ದೃಷ್ಟಿಯಿಂದ 30 ವರ್ಷ ವಯಸ್ಸು ದಾಟುವ ಮುನ್ನ ಯುವಕರು ಯಾವೆಲ್ಲಾ ಪ್ರಮುಖ ಜೀವನ ಪಾಠವನ್ನು ಕಲಿಯಲೇಬೇಕು ಎಂಬುದನ್ನು ನೋಡೋಣ ಬನ್ನಿ.

ಯೌವನದಲ್ಲಿಯೇ ಈ ವಿಷಯಗಳನ್ನು ಕಲಿಯಬೇಕು:

ನಿಮ್ಮ ಸ್ನೇಹಿತರನ್ನು ಬುದ್ಧಿವಂತಿಕೆಯಿಂದ ಆರಿಸಿ: ಆಚಾರ್ಯ ಚಾಣಕ್ಯರು ಕೆಟ್ಟ ಸ್ನೇಹಿತ ಹಾವಿನಂತೆ, ಅವನು ಯಾವುದೇ ಸಮಯದಲ್ಲಿ ನಿಮ್ಮನ್ನು ಕಚ್ಚಬಹುದು ಎಂದು ಹೇಳಿದ್ದಾರೆ. ಅಲ್ಲದೆ ಅವರ ಪ್ರಕಾರ, ಜೀವನದಲ್ಲಿನ ಯಶಸ್ಸು ನೀವು ನಿಮ್ಮ ಸಮಯವನ್ನು ಕಳೆಯುವ ಜನರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುತ್ತದೆ. ನಿಮ್ಮ ಸ್ನೇಹಿತರು ನಕಾರಾತ್ಮಕ ಗುಣಗಳನ್ನು ಹೊಂದಿದ್ದರೆ, ಸೋಮಾರಿಯಾಗಿದ್ದರೆ ಅಥವಾ ಕೆಟ್ಟ ಅಭ್ಯಾಸಗಳನ್ನು ಹೊಂದಿದ್ದರೆ, ನೀವು ಜೀವನದಲ್ಲಿ ಎಂದಿಗೂ ಮುಂದುವರಿಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಜೀವನದಲ್ಲಿ ಯಾವಾಗಲೂ ಮುಂದುವರಿಯಲು ನಿಮ್ಮನ್ನು ಪ್ರೇರೇಪಿಸುವ ಮತ್ತು ನಿಮ್ಮ ಸರಿತಪ್ಪುಗಳ ಬಗ್ಗೆ ಉತ್ತಮ ಸಲಹೆ ನೀಡುವ ಜನರೊಂದಿಗೆ ಸ್ನೇಹ ಬೆಳೆಸಿಕೊಳ್ಳಿ.

ಹಣಕ್ಕೆ ಬೆಲೆ ಕೊಡುವುದನ್ನು ಕಲಿಯಿರಿ:  ಯೌವನದಲ್ಲಿ, ಅನೇಕರು ಪ್ರದರ್ಶನ ಮತ್ತು ಸಂತೋಷಕ್ಕಾಗಿ ಬಹಳಷ್ಟು ಹಣವನ್ನು ವ್ಯರ್ಥ ಮಾಡುತ್ತಾರೆ. ಇದು ಬಹುದೊಡ್ಡ ತಪ್ಪು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಅವರ ಪ್ರಕಾರ, 30 ವರ್ಷಕ್ಕಿಂತ ಮೊದಲು, ನೀವು ಹಣವನ್ನು ಗಳಿಸುವುದು ಮಾತ್ರವಲ್ಲದೆ ಹೂಡಿಕೆ ಮಾಡಲು ಮತ್ತು ಹಣವನ್ನು ಬುದ್ಧಿವಂತಿಕೆಯಿಂದ ಉಳಿಸಲು ಕಲಿಯಬೇಕು.

ರಹಸ್ಯಗಳನ್ನು ಮುಚ್ಚಿಡಲು ಕಲಿಯಿರಿ: ಇತ್ತೀಚಿನ ದಿನಗಳಲ್ಲಿ ಯುವಕರು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ನಿಜ ಜೀವನದಲ್ಲಿ ತಮ್ಮ ಎಲ್ಲಾ ರಹಸ್ಯಗಳನ್ನು ಹಂಚಿಕೊಳ್ಳುತ್ತಾರೆ. ಆಚಾರ್ಯ ಚಾಣಕ್ಯರು ನಿಮ್ಮ ಪ್ರಮುಖ ಜೀವನ ಯೋಜನೆಗಳು ಮತ್ತು ದೌರ್ಬಲ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ನೀವು ನಿಮ್ಮ ರಹಸ್ಯಗಳನ್ನು ಹಂಚಿಕೊಂಡಾಗ, ಇತರರು ಅವುಗಳನ್ನು ಬಳಸಿಕೊಳ್ಳಬಹುದು. ಆದ್ದರಿಂದ ಯಶಸ್ಸು ಸಾಧಿಸಲು ನಿಮ್ಮ ಯೋಜನೆಗಳನ್ನು ರಹಸ್ಯವಾಗಿಡುವುದನ್ನು ಕಲಿಯಿರಿ.

ಅಪಾಯಗಳನ್ನು ತೆಗೆದುಕೊಳ್ಳಲು ಕಲಿಯಿರಿ: ಚಾಣಕ್ಯ ನೀತಿಯ ಪ್ರಕಾರ, ನೀವು ಹೊಸದನ್ನು ಪ್ರಾರಂಭಿಸಲು ಬಯಸಿದರೆ, ವೈಫಲ್ಯದ ಭಯವನ್ನು ಬಿಟ್ಟುಬಿಡಬೇಕು ಎಂದಿದ್ದಾರೆ. ಸೋಲಿಗೆ ಹೆದರುವ ವ್ಯಕ್ತಿಯು ಎಂದಿಗೂ ದೊಡ್ಡ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ಯೌವನದಲ್ಲಿ ಯಶಸ್ಸನ್ನು ಸಾಧಿಸುವ ಸಲುವಾಗಿ ಪ್ರತಿಯೊಂದು ಅಪಾಯಗಳನ್ನು ತೆಗೆದುಕೊಳ್ಳಲು ಕಲಿಯಿರಿ.

ಇದನ್ನೂ ಓದಿ: ತಪ್ಪಿಯೂ ರೀತಿಯ ಜನರಿಗೆ ಸಹಾಯ ಮಾಡಲು ಹೋಗ್ಬೇಡಿ

ಎಲ್ಲರನ್ನೂ ನಂಬಬೇಡಿ: ನಮ್ಮ ಯೌವನದಲ್ಲಿ, ನಾವು ಜನರ ಸಿಹಿ ಮಾತುಗಳಿಗೆ ಬಲಿಯಾಗುತ್ತೇವೆ ಮತ್ತು ಎಲ್ಲರನ್ನೂ ಬೇಗನೆ ನಂಬುತ್ತೇವೆ. ಚಾಣಕ್ಯ ನೀತಿಯ ಪ್ರಕಾರ, ನಾವು ಯಾರನ್ನೂ ಸಂಪೂರ್ಣವಾಗಿ ಸಂಪೂರ್ಣವಾಗಿ ನಂಬಬಾರದು. ಕೆಲವೊಮ್ಮೆ ಜನರು ತಮ್ಮ ಸ್ವಂತ ಲಾಭಕ್ಕಾಗಿ ನಮ್ಮ ಹತ್ತಿರ ಬರುತ್ತಾರೆ ಮತ್ತು ಆದ್ದರಿಂದ, ನೀವು ಎಲ್ಲಾ ಸಮಯದಲ್ಲೂ ಜಾಗರೂಕರಾಗಿರಬೇಕು, ಭಾವನೆಗಳನ್ನು ನಿಯಂತ್ರಿಸಬೇಕು. ಅತಿಯಾಗಿ ನಂಬುವುದರಿಂದ ಮೋಸ ಹೋಗುವ ಸಾಧ್ಯತೆ ಇರುತ್ತದೆ.

ಸಮಯದ ಮೌಲ್ಯವನ್ನು ಅರ್ಥಮಾಡಿಕೊಳ್ಳಿ:ಆಚಾರ್ಯ ಚಾಣಕ್ಯರ ಪ್ರಕಾರ, ವ್ಯಕ್ತಿಯ ಅತ್ಯಂತ ಅಮೂಲ್ಯ ಆಸ್ತಿ ಎಂದರೆ ಸಮಯ. ಈ ಅಮೂಲ್ಯ ಸಮಯವನ್ನು ಸರಿಯಾಗಿ ಸದುಪಯೋಗ ಪಡಿಸುವುದುದನ್ನು ಯೌವನದಲ್ಲಿಯೇ ಕಲಿಯಬೇಕು. ಸೋಮಾರಿತನ, ಮೋಜು ಮಸ್ತಿಯಲ್ಲಿ ಟೈಮ್‌ ವೇಸ್ಟ್‌ ಮಾಡರೆ, ಸಮಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳುವವರು ಮಾತ್ರ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ.

ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಲು ಕಲಿಯಿರಿ: ಆಚಾರ್ಯ ಚಾಣಕ್ಯರ ಪ್ರಕಾರ, ಯುವಕರು ವೃತ್ತಿ ಮತ್ತು ಹಣ, ಯಶಸ್ಸಿನ ಹುಡುಕಾಟದಲ್ಲಿ ತಮ್ಮ ಆರೋಗ್ಯವನ್ನು ಹೆಚ್ಚಾಗಿ ನಿರ್ಲಕ್ಷಿಸುತ್ತಾರೆ. ಭವಿಷ್ಯದಲ್ಲಿ ಈ ಯಶಸ್ಸನ್ನು ಅನುಭವಿಸಲು ಆರೋಗ್ಯವೂ ಉತ್ತಮವಾಗಿರಬೇಕು ಆದ್ದರಿಂದ ಯುವಜನರು ಉತ್ತಮ ಆಹಾರ ಸೇವನೆ, ವ್ಯಾಯಾಮ ಮಾಡುವುದು, ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆ ಗಮನ ಹರಿಸಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: ಕೆಲಸ ಕಳೆದುಕೊಳ್ಳುತ್ತಿರುವುದಕ್ಕೆ ನಂಗೆ ಖುಷಿಯಾಗಿದೆ; ಉದ್ಯೋಗಿ ಹೀಗೆಂದಿದ್ದೇಕೆ? – Kannada News | Employee says he’s glad he’s losing his job

ಕಾರ್ಪೋರೇಟ್ ಹಾಗೂ ಖಾಸಗಿ ಕಂಪನಿಯಲ್ಲಿ (private company) ಕೆಲಸಮಾಡೋ ಉದ್ಯೋಗಿಗಳನ್ನು ಯಾವಾಗ ಬೇಕಾದ್ರೂ ವಜಾಗೊಳಿಸಬಹುದು. ಹೀಗಾದಾಗ ಕೆಲಸ ಕಳೆದುಕೊಂಡ ನೋವಿನ ನಡುವೆ ಮುಂದೇನು ಎನ್ನುವ ಪ್ರಶ್ನೆಯೊಂದು ಕಾಡುವುದು ಸಹಜ. ಆದರೆ ಇಲ್ಲೊಬ್ಬ ಮೈಕ್ ಸಾಫ್ಟ್ ಉದ್ಯೋಗಿಯನ್ನು ಕೆಲಸದಿಂದ ತೆಗೆದುಹಾಕಿದ್ದು ಸ್ವಲ್ಪ ಕೂಡ ಬೇಜಾರ್ ಇಲ್ಲ. ಹೌದು, ಮೈಕ್ರೋಸಾಫ್ಟ್ ಉದ್ಯೋಗಿಯೊಬ್ಬರು ತಾವು ಕೆಲಸದಿಂದ ತೆಗೆದುಹಾಕಲ್ಪಡುವ ನಿರೀಕ್ಷೆಯಿತ್ತು. ಅದರಿಂದ ನಿಜವಾಗಿಯೂ ನಿರಾಳರಾಗಿದ್ದೆ. ಕೆಲಸ ಹೋಗಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ. ಈ ಪೋಸ್ಟ್ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.

ವೃತ್ತಿಪರ ಸಮುದಾಯ ಬ್ಲೈಂಡ್‌ನಲ್ಲಿ(Tech Industry) ಹಂಚಿಕೊಂಡ ಪೋಸ್ಟ್‌ಗೆ ಮೈಕ್ರೋಸಾಫ್ಟ್‌ನಿಂದ ನನ್ನನ್ನು ವಜಾಗೊಳಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಶೀರ್ಷಿಕೆ ನೀಡಲಾಗಿದೆ. ಮೈಕ್ರೋಸಾಫ್ಟ್ ಉದ್ಯೋಗಿಯೊಬ್ಬರು ತಾವು ಕೆಲಸದಿಂದ ತೆಗೆದುಹಾಕಲ್ಪಡುವ ನಿರೀಕ್ಷೆಯಿತ್ತು, ಹೀಗಾಗಿ ಯಾವುದೇ ಟೆನ್ಶನ್ ಇಲ್ಲದೆ ನಿರಾಳವಾಗಿದ್ದೇ. ಈ ಉದ್ಯೋಗ ಕಡಿತಕ್ಕೆ ಮುಂಚಿತವಾಗಿ ಸ್ವಾಭಾವಿಕವಾಗಿ ಉಂಟಾಗುವ ಆತಂಕ ಹಾಗೂ ಚಿಂತೆಯಿಂದ ಮುಕ್ತಿ ಪಡೆದಿದ್ದಕ್ಕೆ ಸಂತೋಷವಾಗಿದೆ ಎಂದು ಉಲ್ಲೇಖಿಸಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

</>

ಕೆಲಸದಲ್ಲಿ ತನ್ನನ್ನು ಬದಿಗಿಡಲಾಗುತ್ತಿದೆ ಎಂಬ ಲಕ್ಷಣಗಳು ಕಾಣುತ್ತಿದ್ದಂತೆ ಈ ಪ್ರಾಜೆಕ್ಟ್‌ಗಳಿಂದ ಸದ್ದಿಲ್ಲದೆ ದೂರ ಸರಿಸಲಾಗುತ್ತಿರುವುದು ಹಾಗೂ ತನ್ನ ವ್ಯವಸ್ಥಾಪಕರಿಂದ ಕಡಿಮೆ ಪ್ರತಿಕ್ರಿಯೆಯನ್ನು ಪಡೆಯುತ್ತಿರುವುದು ಸೇರಿದಂತೆ, ಆ ಉದ್ಯೋಗಿ ಈ ಸುದ್ದಿಯನ್ನು ನಿರೀಕ್ಷಿಸುತ್ತಿದ್ದೆ. ಕೆಲಸ ಕಳೆದುಕೊಳ್ಳುವುದು ಸೂಕ್ತ ಸನ್ನಿವೇಶವಲ್ಲ ಎಂದು ಒಪ್ಪಿಕೊಂಡೆ. ಕೆಲಸದಿಂದ ತೆಗೆದು ಹಾಕಲಾಗುತ್ತದೆ ಎನ್ನುವ ದೀರ್ಘಕಾಲದ ಆತಂಕವು ಹೆಚ್ಚು ಬಳಲಿಕೆ ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ.

ಕೆಲವು ಕಾರಣಗಳೆಂದರೆ, ನನ್ನನ್ನು ನನ್ನ ಪ್ರಾಜೆಕ್ಟ್ ಗೆ ಸದ್ದಿಲ್ಲದೆ ಮರು ನಿಯೋಜಿಸಲಾಗಿದೆ. ಸಹೋದ್ಯೋಗಿಯೊಬ್ಬರು ಸಹಾಯಕ್ಕಾಗಿ ಬಂದರು. ಆದರೆ ಇದರ ಹಿಂದಿನ ಕಾರಣ ಏನೆಂದು ಅವರಿಗೂ ತಿಳಿಯುತ್ತಿಲ್ಲ. ನನ್ನ ಮ್ಯಾನೇಜರ್ ನನಗೆ ಕಡಿಮೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ನನಗೆ ನಿರಾಳವೆನಿಸುತ್ತದೆ, ಕೆಲಸ ಕಳೆದುಕೊಳ್ಳುವುದು ಖುಷಿ ಕೊಡುತ್ತದೆ ಎಂಬ ಕಾರಣಕ್ಕಲ್ಲ. ಮಾರುಕಟ್ಟೆ ಚೆನ್ನಾಗಿದೆ ಎಂಬ ಕಾರಣಕ್ಕಲ್ಲ. ನಾನು ಎಲ್ಲವನ್ನೂ ಅರ್ಥಮಾಡಿಕೊಂಡಿದ್ದೇನೆ ಎಂಬ ಕಾರಣಕ್ಕಲ್ಲ. ಅನಿಶ್ಚಿತತೆ ಕೊನೆಗೊಳ್ಳುತ್ತಿರುವುದರಿಂದ ನನಗೆ ನಿರಾಳತೆ ಉಂಟಾಗಿದೆ. ಕೆಲಸ ಹೋಗುತ್ತದೆ ಎಂಬ ಭಯ, ಅನಿಶ್ಚಿತತೆಯಿಂದ ತುಂಬಿದ ಪಾತ್ರದಲ್ಲಿ ಉಳಿಯುವುದಕ್ಕಿಂತ ಕಡಿಮೆ ಭಯಾನಕವೆನಿಸುತ್ತದೆ. ಆದರೆ ಇದೀಗ ಮತ್ತೆ ಹೊಸ ವೃತ್ತಿ ಜೀವನ ಪ್ರಾರಂಭಿಸಲು ಒಂದು ಅವಕಾಶ ಇದಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕೈ ತುಂಬಾ ಸಂಪಾದನೆಯಿದ್ರೂ ಕೆಲಸದಲ್ಲಿ ಖುಷಿಯಿಲ್ಲ; ಭ್ರಮನಿರಸ ಅನುಭವ ಬಿಚ್ಚಿಟ್ಟ ವ್ಯಕ್ತಿ

ಈ ಪೋಸ್ಟ್ ವೀಕ್ಷಣೆಗಳನ್ನು ಪಡೆದುಕೊಳ್ಳುತ್ತಿದ್ದಂತೆ ಒಬ್ಬ ಬಳಕೆದಾರ, ಎಲ್ಲವನ್ನು ಸ್ವೀಕರಿಸುವ ರೀತಿಯಿಂದ ನೀವು ಬೆಳೆಯುತ್ತೀರಿ ಎಂದಿದ್ದಾರೆ. ಇನ್ನೊಬ್ಬರು, ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಬೇರೆ ಉದ್ಯೋಗ ಹುಡುಕುವತ್ತ ಗಮನ ಕೊಡಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಖಾಸಗಿ ಕಂಪನಿಗಳಲ್ಲಿ ವಜಾಗೊಳಿಸುವಿಕೆ ಸಾಮಾನ್ಯ, ಎಲ್ಲವನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನವಜಾತ ಶಿಶುಗಳಿಗೆ ಅಭ್ಯಂಗ ಸ್ನಾನ ಮಾಡುವ ಸರಿಯಾದ ವಿಧಾನ ಮತ್ತು ಪಾಲಿಸಬೇಕಾದ ಎಚ್ಚರಿಕೆಗಳು – Kannada News | Abhyanga Snana for Newborns: Everything Parents Need to Know

ಆಯುರ್ವೇದದ ಪ್ರಕಾರ, ಅಭ್ಯಂಗವು ಅತ್ಯುತ್ತಮ ದಿನಚರ್ಯೆಗಳಲ್ಲಿ ಒಂದಾಗಿದೆ. ಅಭ್ಯಂಗ ಎಂದರೆ ಬೆಚ್ಚಗಿನ ಎಣ್ಣೆಯನ್ನು ನಿಯಮಿತವಾಗಿ ಇಡೀ ಶರೀರಕ್ಕೆ ಮರ್ಧನ ಮಾಡುವುದು. ಈ ವಿಧಾನವು ಜನನದಿಂದ ವೃದ್ಧಾಪ್ಯದವರೆಗೆ ಎಲ್ಲ ವಯಸ್ಸಿನವರಿಗೂ ಉಪಯುಕ್ತವಾದ, ಅತ್ಯಂತ ಸರಳ ಹಾಗೂ ಪರಿಣಾಮಕಾರಿ ಆರೈಕೆ ವಿಧಾನವಾಗಿದೆ. ಭಾರತೀಯ ಸಂಪ್ರದಾಯದಲ್ಲಿ ಅಭ್ಯಂಗವು ವಿಶಿಷ್ಟ ಸ್ಥಾನವನ್ನು ಹೊಂದಿದ್ದು, ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸುರಕ್ಷಿತ ಮತ್ತು ಪರಿಣಾಮಕಾರಿ ದಿನಚರ್ಯೆಯಾಗಿ ಪರಿಗಣಿಸಲಾಗುತ್ತದೆ. ಹಾಗಾದರೆ ಅಭ್ಯಂಗ ಸ್ನಾನದಿಂದ ಸಿಗುವ ಪ್ರಯೋಜನಗಳೇನು, ಯಾಕೆ ಇದು ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ಹಾಸನ ಎಸ್‌ಡಿಎಂ ಆಯುರ್ವೇದ ಮತ್ತು ಆಸ್ಪತ್ರೆಯ ಪಂಚಕರ್ಮ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಸಿಂಧೂರ ವಿ ಪ್ರಭು ಅವರು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ.

ಅಭ್ಯಂಗ ಸ್ನಾನದ ಪ್ರಯೋಜನಗಳು:

ಡಾ. ಸಿಂಧೂರ ಅವರು ಹೇಳುವ ಪ್ರಕಾರ, ನಿತ್ಯ ಅಭ್ಯಂಗ ಮಾಡುವುದರಿಂದ ಪ್ರಕುಪಿತ ವಾತದೋಷವನ್ನು, ದೇಹದ ಆಯಾಸವನ್ನು ಮತ್ತು ದೌರ್ಬಲ್ಯವನ್ನು ಶಮನಗೊಳಿಸಲು ಸಹಾಯವಾಗುತ್ತದೆ. ನವಜಾತ ಶಿಶುಗಳಿಗೆ ಶುದ್ಧ ನವನೀತ (ಬೆಣ್ಣೆ) ಬಳಸುವುದು ಅತ್ಯಂತ ಉಪಯುಕ್ತವೆಂದು ಪರಿಗಣಿಸಲಾಗುತ್ತದೆ. ಇದು ಚರ್ಮಕ್ಕೆ ಮೃದುವಾಗಿ ಹೊಂದಿಕೊಂಡು ಮಗುವಿನ ದೇಹದ ಸ್ವಾಭಾವಿಕ ಉಷ್ಣತೆಯನ್ನು ಕಾಪಾಡಲು ಸಹಕಾರಿಯಾಗುತ್ತದೆ. ಶುದ್ಧ ಎಳ್ಳೆಣ್ಣೆ ಚರ್ಮಕ್ಕೆ ಸಮರ್ಪಕ ಪೋಷಣೆಯನ್ನು ನೀಡುವುದರೊಂದಿಗೆ ದೇಹದ ಬಲವರ್ಧನೆಗೂ ಸಹಾಯಕವಾಗಿದೆ. ಶುದ್ಧ ಕೊಬ್ಬರಿ ಎಣ್ಣೆ ಶೀತ ಗುಣವನ್ನು ಹೊಂದಿರುವುದರಿಂದ ಬೇಸಿಗೆಯ ಸಮಯದಲ್ಲಿ ಬಳಸಲು ಅನುಕೂಲಕರವಾಗಿದೆ.

ಇದರ ಜೊತೆಗೆ ವಿವಿಧ ಔಷಧೀಯ ತೈಲಗಳ ಬಳಕೆಯೂ ಮಕ್ಕಳ ಆರೈಕೆಯಲ್ಲಿ ಮಹತ್ವವನ್ನು ಹೊಂದಿದೆ. ಕ್ಷೀರಬಲ ತೈಲವು ಮಾಂಸಖಂಡಗಳು, ಸ್ನಾಯುಗಳು ಹಾಗೂ ಸಂಧಿಗಳಿಗೆ ಬಲ ನೀಡಲು ಸಹಕಾರಿಯಾಗಿದ್ದು, ವಾತಶಮನ ಗುಣವನ್ನು ಹೊಂದಿದೆ. ಅಶ್ವಗಂಧಾ ತೈಲವು ದೇಹಕ್ಕೆ ಶಕ್ತಿ ಮತ್ತು ಪೋಷಣೆಯನ್ನು ಒದಗಿಸುವುದರೊಂದಿಗೆ ಉತ್ತಮ ನಿದ್ರೆಗೆ ಸಹ ಸಹಾಯ ಮಾಡುತ್ತದೆ. ಕೆಲವು ಮಕ್ಕಳು ಅತಿಯಾಗಿ ಅಳುವುದು, ಚಿಡಿಚಿಡಿತನ ಅಥವಾ ಅಶಾಂತಿಯನ್ನು ತೋರಿಸಬಹುದು. ಅಭ್ಯಂಗವು ಇಂತಹ ಲಕ್ಷಣಗಳನ್ನು ಕಡಿಮೆ ಮಾಡಲು ಸಹಕಾರಿ. ಮರ್ಧನದ ಸಮಯದಲ್ಲಿ ದೇಹದಲ್ಲಿ ರಕ್ತಸಂಚಾರ ಸುಧಾರಿಸಿ ನರಮಂಡಲವು ಶಾಂತಗೊಳ್ಳುತ್ತದೆ. ಇದರ ಪರಿಣಾಮವಾಗಿ ಮಗು ಹೆಚ್ಚು ಆರಾಮವಾಗಿದ್ದು, ಸುಖಕರ ನಿದ್ರೆ ಪಡೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ವಾರಕ್ಕೆ 150 ನಿಮಿಷ ವ್ಯಾಯಾಮ ಮಾಡಿದರೆ ಹೃದಯ ಮತ್ತು ಮೆದುಳು ಆರೋಗ್ಯವಾಗಿರುತ್ತದೆಯೇ?

ಆತಂಕವನ್ನು ದೂರ ಮಾಡಿ ಮನಸ್ಸಿಗೆ ಶಾಂತಿ ಮತ್ತು ತೃಪ್ತಿಯ ಭಾವನೆಯನ್ನು ನೀಡುತ್ತದೆ. ತಾಯಿ-ತಂದೆ ಮತ್ತು ಮಗುವಿನ ನಡುವೆ ಪ್ರೀತಿ, ಭದ್ರತೆ ಮತ್ತು ಆತ್ಮೀಯತೆಯ ಭಾವನೆ ಹೆಚ್ಚುತ್ತದೆ. ಈ ಸ್ಪರ್ಶದ ಆರೈಕೆ ಮಗುವಿಗೆ ಮಾನಸಿಕ ಬೆಳವಣಿಗೆಯಿಗೂ ಸಹಕಾರಿಯಾಗುತ್ತದೆ. ಮಕ್ಕಳು ಹೆಚ್ಚು ಆಟವಾಡುವುದು, ಓದುವುದು ಅಥವಾ ಪರದೆಗಳ (ಮೊಬೈಲ್/ಟಿವಿ) ಬಳಕೆ ಹೆಚ್ಚಿರುವುದರಿಂದ ಕಣ್ಣಿಗೆ ದಣಿವಾಗಬಹುದು. ಆದರೆ ಈ ಅಭ್ಯಂಗದಿಂದ ದೇಹ ಮತ್ತು ಮನಸ್ಸು ಆರಾಮ ಪಡೆಯುವುದರಿಂದ ಕಣ್ಣುಗಳಿಗೂ ವಿಶ್ರಾಂತಿ ದೊರೆಯುತ್ತದೆ.

ಮಕ್ಕಳಲ್ಲಿ ಕೆಲವೊಮ್ಮೆ ಅಜೀರ್ಣ, ಹೊಟ್ಟೆ ಉಬ್ಬರ, ಗಾಳಿ ತುಂಬುವುದು ಅಥವಾ ಹಸಿವು ಕಡಿಮೆಯಾಗುವಂತಹ ಸಮಸ್ಯೆಗಳು ಕಾಣಿಸಬಹುದು. ಅಭ್ಯಂಗದಿಂದ ಇಂತಹ ಸಮಸ್ಯೆಗಳು ಕಡಿಮೆಯಾಗಲು ಸಹಕಾರಿಯಾಗುತ್ತದೆ. ಅಷ್ಟೇಅಲ್ಲ, ಅಭ್ಯಂಗವು ಜೀರ್ಣಾಂಗಗಳ ಕಾರ್ಯಕ್ಷಮತೆಯನ್ನು ಉತ್ತೇಜಿಸುತ್ತದೆ. ಇದರಿಂದ ಜಠರಾಗ್ನಿ ಸಕ್ರಿಯವಾಗಿ ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಹಾಯವಾಗುತ್ತದೆ. ಜೀರ್ಣಕ್ರಿಯೆ ಸರಿಯಾಗಿರುವುದರಿಂದ ಪೋಷಕಾಂಶಗಳು ದೇಹಕ್ಕೆ ಸಮರ್ಪಕವಾಗಿ ಲಭ್ಯವಾಗುತ್ತವೆ. ಇದರಿಂದ ಮಗುವಿನ ಆರೋಗ್ಯ ಉತ್ತಮವಾಗುತ್ತದೆ. ಸರಿಯಾದ ವಿಧಾನದಲ್ಲಿ ಮತ್ತು ಸೂಕ್ತ ಎಣ್ಣೆಗಳನ್ನು ಬಳಸಿಕೊಂಡು ಅಭ್ಯಂಗ ಸ್ನಾನ ಮಾಡಿಸುವುದರಿಂದ ಮಕ್ಕಳ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬೆಳವಣಿಗೆ ಉತ್ತಮವಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತೀವ್ರ ಸ್ವರೂಪ ಪಡೆದ ಚಪ್ಪಲಿ ಎಸೆತ ಪ್ರಕರಣ: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಪರ ನಿಂತ ಅಹಿಂದ – Kannada News | Chikkaballapur slipper throwing incident: balija And ahinda Supports to Congress MLA Pradeep Eshwar

ಚಿಕ್ಕಬಳ್ಳಾಪುರ, (ಜುಲೈ 01): ಮೊನ್ನೆ ಚಿಕ್ಕಬಳ್ಳಾಪುರದಲ್ಲಿ (Chikkaballapur) ಕೆಂಪೇಗೌಡ ಜಯಂತಿ ಆಚರಣೆ ವೇಳೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಮೇಲೆ ಚಪ್ಪಲಿ ಎಸೆತ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು,  ಬಲಿಜ ಸಂಘ ಹಾಗೂ ಅಹಿಂದ ಪ್ರದೀಪ್ ಈಶ್ವರ್ ಬೆಂಬಲಕ್ಕೆ ನಿಂತಿವೆ. ಹೌದು…ಶಾಸಕ ಪ್ರದೀಪ್ ಈಶ್ವರ್ ಪರವಾಗಿ ಚಿಕ್ಕಬಳ್ಳಾಪುರ ತಾಲೂಕು ಬಲಿಜ ಸಂಘ ಬಹಿರಂಗವಾಗಿ ಬೆಂಬಲ ಸೂಚಿಸಿದ್ದು, ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದೆ. ಇನ್ನು ಇಂದು (ಜುಲೈ 01) ಚಿಕ್ಕಬಳ್ಳಾಪುರ ತಾಲೂಕು ಬಲಿಜ ಸಂಘವು ಹಾರೋಬಂಡೆ ಶಿರಡಿ ಸಾಯಿಬಾಬಾ ಆಶ್ರಮದಲ್ಲಿ ಸಭೆ ನಡೆಸಿದ್ದು, ಪಕ್ಷಾತೀತವಾಗಿ ಶಾಸಕ ಪ್ರದೀಪ್ ಈಶ್ವರ್ ಬೆಂಬಲಕ್ಕೆ ನಿಲ್ಲುವ ತೀರ್ಮಾನ ಕೈಗೊಂಡಿದೆ.

ಇದೆ ವೇಳೆ ಮಾತನಾಡಿದ ಚಿಕ್ಕಬಳ್ಳಾಪುರ ತಾಲೂಕು ಬಲಿಜ ಸಂಘದ ತಾಲೂಕು ಅದ್ಯಕ್ಷ ಮಂಜುನಾಥ್, ಕೆಂಪೇಗೌಡ ಜಯಂತಿ ಯಾವುದೇ ಒಂದು ಜಾತಿಗೆ ಸೀಮಿತವಾದ ಕಾರ್ಯಕ್ರಮವಲ್ಲ. ಶಾಸಕರು ಕೆಂಪೇಗೌಡರಿಗೆ ಹಾಗೂ ವೇದಿಕೆಯಲ್ಲಿದ್ದ ಗಣ್ಯರಿಗೆ ಗೌರವ ಸಲ್ಲಿಸಿದ್ದು, ಅವರಿಂದ ಯಾವುದೇ ಪ್ರಚೋದನೆ ನಡೆದಿಲ್ಲ. ಬದಲಾಗಿ ಕಾರ್ಯಕ್ರಮದಿಂದ ಹೊರಹೋಗುವಂತೆ ಕೂಗಾಡಿ ಪರಿಸ್ಥಿತಿಯನ್ನು ಹದಗೆಡಿಸಲಾಗಿದೆ ಎಂದು ಆರೋಪಿಸಿದರು.

ಇದನ್ನೂ ನೋಡಿ: ತೋಳು ತಟ್ಟಿ ಮೀಸೆ ತಿರುವಿದ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ

ಇನ್ನೂ ಸಭೆ ನಂತರ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿದ ಬಲಿಜ ಸಂಘದ ಮುಖಂಡರು, ಸಂಸದ ಡಾ. ಕೆ. ಸುಧಾಕರ್, ಬಿಜೆಪಿ ಮುಖಂಡ ಸಂದೀಪ್ ರೆಡ್ಡಿ ಹಾಗೂ ಪಿ.ಎನ್. ಕೇಶವರೆಡ್ಡಿ ವಿರುದ್ಧ ದೂರು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಶಾಸಕರ ವಿರುದ್ಧ ಪ್ರತಿಭಟನೆ ಮತ್ತು ಗಲಾಟೆಗೆ ಪ್ರಚೋದನೆ ನೀಡಲಾಗಿದೆ ಎಂದು ದೂರು ನೀಡಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗೆ ಅವಮಾನವಾಗಿರುವುದು ಖಂಡನೀಯ, ಗಲಾಟೆಗೆ ಪ್ರಚೋದನೆ ನೀಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಗಲಾಟೆ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೆಂಪೇಗೌಡ ಜಯಂತಿಯಲ್ಲಿ ನಡೆದ ಗಲಾಟೆ ಕೇವಲ ರಾಜಕೀಯ ವಿವಾದವಾಗಿ ಉಳಿಯದೆ, ವಿವಿಧ ಸಮುದಾಯಗಳ ಬೆಂಬಲ ಮತ್ತು ಪ್ರತಿಭಟನೆಗಳ ಮೂಲಕ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಒಂದು ಕಡೆ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದೂರು ದಾಖಲಿಸುವಂತೆ ಮತ್ತೊಂದೆಡೆ ಸಂಸದ ಡಾ. ಕೆ. ಸುಧಾಕರ್ ವಿರುದ್ದ ದುರು ದಾಖಲು ಮಾಡುವಂತೆ ಒತ್ತಾಯಗಳು ಕೇಳಿ ಬಂದಿದೆ.

ಇದನ್ನೂ ಓದಿ: ಚಪ್ಪಲಿ ಎಸೆತ ಪ್ರಕರಣ: ಮಾಜಿ ಸಿಎಂ ಸಿದ್ದರಾಮಯ್ಯ ಎದುರು ಶಾಸಕ ಪ್ರದೀಪ್​​ ಈಶ್ವರ್​​ ಕಣ್ಣೀರು

ಇನ್ನು ಈ ಬಗ್ಗೆ ಅಹಿಂದ‌ ಚಳವಳಿ ನಾಯಕ ವೆಂಕಟೇಶ್ ಗೌಡ‌ ಪ್ರತಿಕ್ರಿಯಿಸಿ, ಚಿಕ್ಕಬಳ್ಳಾಪುರದಲ್ಲಿ‌ ಪ್ರದೀಪ್ ಈಶ್ವರ್ ಮೇಲೆ ಹಲ್ಲೆ ಆಗಿದೆ. ಅಹಿಂದ ವರ್ಗಗಳ‌ ಸರ್ಕಾರ ಇದ್ದಾಗ ಹಲ್ಲೆ‌ ನಡೆದಿದೆ. ಎಂಎಲ್ ಎ ಮೇಲೆ ಚಪ್ಪಲಿ ಎಸೆದಿದ್ದಾರೆ. ನಿನ್ನೆ ನಡೆದ ಘಟನೆ ಅಕ್ಷಮ್ಯ ಅಪರಾಧ . ಇದು 224 ಶಾಸಕರಿಗೆ ಮಾಡಿದ ಅವಮಾನ. ಎಲ್ಲಾ 31 ಜಿಲ್ಲೆಗಳಲ್ಲೂ ಪ್ರದೀಪ್ ಈಶ್ವರ್ ಪರ ಪ್ರತಿಭಟನೆ ನಡೆಯಲಿದೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಪಿಚ್ಚರ್’ ಚಿತ್ರದ ಮೂಲಕ ಗಾಯಕಿಯಾದ ಶಿಲ್ಪಾ ಗಣೇಶ್; ಬರ್ತಿವೆ ಭರ್ಜರಿ ಆಫರ್ಸ್

ನಿರ್ಮಾಪಕಿ ಶಿಲ್ಪಾ ಗಣೇಶ್ ಅವರು ‘ಪಿಚ್ಚರ್’ ಚಿತ್ರದ ಮೂಲಕ ಮೊದಲ ಬಾರಿಗೆ ಗಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ತಮ್ಮ ಗಾಯನ ಪ್ರತಿಭೆಯನ್ನು ಈವರೆಗೆ ಹೆಚ್ಚು ಜನರಿಗೆ ಪರಿಚಯಿಸದಿದ್ದ ಶಿಲ್ಪಾ, ತಮ್ಮ ಕುಟುಂಬ ಮತ್ತು ಸ್ನೇಹಿತರ ಪ್ರೋತ್ಸಾಹದಿಂದ ಹಾಡಲು ಮುಂದಾದರು.

ಪತಿ ಗೋಲ್ಡನ್ ಸ್ಟಾರ್ ಗಣೇಶ್ ಅವರೇ ಈ ಚಿತ್ರದಲ್ಲಿ ಹಾಡುವಂತೆ ಪ್ರೇರಣೆ ನೀಡಿದರಂತೆ. ತಮ್ಮ ಹಾಡನ್ನು ಕೇಳಿದ ಬಳಿಕ, ಹಲವು ನಿರ್ದೇಶಕರು ಮತ್ತು ಸಂಗೀತ ನಿರ್ದೇಶಕರು ತಮ್ಮ ಮುಂದಿನ ಯೋಜನೆಗಳಿಗೆ ಹಾಡುವಂತೆ ಶಿಲ್ಪಾ ಗಣೇಶ್ ಅವರಿಗೆ ಆಫರ್ಸ್‌ಗಳನ್ನು ನೀಡಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅವರು, ಭವಿಷ್ಯದಲ್ಲಿ ಗಾಯನ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಸಂದೀಪ್ ನಿರ್ದೇಶನದ ಪಿಚ್ಚರ್ ಚಿತ್ರವು ಪ್ಯಾನ್ ಇಂಡಿಯಾ ಫ್ಯಾಮಿಲಿ ಎಂಬ ಟ್ಯಾಗ್‌ಲೈನ್ ಹೊಂದಿದೆ. ಈ ಚಿತ್ರ ಒಂದು ಫ್ಯಾಮಿಲಿ ಎಂಟರ್‌ಟೈನರ್ ಆಗಿದ್ದು, ಕಾಮಿಡಿ, ಭಾವನೆ ಮತ್ತು ಕುಟುಂಬದ ಮಹತ್ವವನ್ನು ಎತ್ತಿಹಿಡಿಯುತ್ತದೆ. ಸ್ವತಃ ಗಣೇಶ್ ಅವರೇ ಚಿತ್ರದ ಹಾಸ್ಯವನ್ನು ನೋಡಿ ಮೆಚ್ಚಿಕೊಂಡಿದ್ದಾರೆ ಎಂದು ಶಿಲ್ಪಾ ಹೇಳಿದ್ದಾರೆ. ಜುಲೈ 24ರಂದು ಪಿಚ್ಚರ್ ಚಿತ್ರವು ತೆರೆಕಾಣಲು ಸಜ್ಜಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ರಾಹುಲ್ ದ್ರಾವಿಡ್ ಒಡೆತನದ ತಂಡಕ್ಕೆ ಆರ್. ಅಶ್ವಿನ್ ನಾಯಕ

Source link

ಯಶ್ ಅಭಿಮಾನಿಗಳಿಗೆ ಶುರುವಾಗಿದೆ ಸಿಬಿಎಫ್​​ಸಿ ಭಯ – Kannada News | Toxic movie teaser released, Yash fans worried about CBFC

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಇಂದು (ಜುಲೈ 01) ಬಿಡುಗಡೆ ಆಗಿದೆ. ಇಂದು ಬಿಡುಗಡೆ ಆಗಿರುವ ಟೀಸರ್​​ನಲ್ಲಿ ಸಿನಿಮಾದ ನಟಿಯರ ಬಗ್ಗೆ ಪರಿಚಯ ನೀಡಲಾಗಿದೆ. ನಟಿಯರ ಪಾತ್ರಗಳ ಸಣ್ಣ ಗ್ಲಿಂಪ್ಸ್ ತೋರಿಸಲಾಗಿದೆ. ಆದರೆ ಈ ಟೀಸರ್​​ನಲ್ಲಿಯೂ ಸಹ ಲೈಂಗಿಕತೆಯ ದೃಶ್ಯಗಳು ಹಲವು ಇವೆ. ಯಶ್ ಪಾತ್ರ, ಬೇರೆ ಬೇರೆ ಯುವತಿಯರೊಟ್ಟಿಗೆ ‘ಕ್ರೀಡೆ’ಯಲ್ಲಿ ತೊಡಗಿರು ದೃಶ್ಯಗಳು ಟೀಸರ್​​ನಲ್ಲಿ ಬಂದು ಹೋಗುತ್ತಲೇ ಇರುತ್ತವೆ. ಮಾತ್ರವಲ್ಲದೆ, ಟೀಸರ್​​ನ ಹಿನ್ನೆಲೆ ಧ್ವನಿಯಲ್ಲೂ ಸಹ ಲೈಂಗಿಕತೆಗೆ ಸಂಬಂಧಿಸಿದ ಕೆಲ ಸಂಭಾಷಣೆಗಳು ಇವೆ. ‘ಟೀಸರ್’ ಇಷ್ಟವಾಗಿದೆಯಾದರೂ ಸಿಬಿಎಫ್​​ಸಿ ಬಗ್ಗೆ ಭಯ ಯಶ್ ಅಭಿಮಾನಿಗಳಿಗೆ ಶುರುವಾಗಿದೆ.

ಸಿಬಿಎಫ್​​ಸಿ, ಇತ್ತೀಚೆಗಿನ ದಿನಗಳಲ್ಲಿ ತೀರ ಕಟುವಾಗಿ ವರ್ತಿಸುತ್ತಿದೆ. ಹೀಗಿರುವಾಗ ‘ಟಾಕ್ಸಿಕ್’ ಸಿನಿಮಾನಲ್ಲಿ ಹಲವು ಲೈಂಗಿಕತೆ ದೃಶ್ಯಗಳಿವೆ, ಸಂಭಾಷಣೆಗಳಿವೆ, ತೀರ ವೈಯಲೆಂಟ್ ಆದ ಆಕ್ಷನ್ ದೃಶ್ಯಗಳು ಸಹ ಇವೆ. ಹೀಗಿರುವಾಗ ಸಿಬಿಎಫ್​​ಸಿ ಇವಕ್ಕೆಲ್ಲ ಬಿಡದೆ ಕತ್ತರಿ ಹಾಕಲಿದೆ. ಯಶ್ ಅವರು ತಮ್ಮ ಸಿನಿಮಾದ ಹಲವು ಭಾಗಗಳನ್ನು ಕತ್ತರಿಸಬೇಕಾಗಿ ಬರಬಹುದು ಎಂಬ ಭೀತಿ ಯಶ್ ಅಭಿಮಾನಿಗಳಿಗೆ ಈಗಾಗಲೇ ಶುರುವಾಗಿದೆ.

ಈ ಹಿಂದೆ ಸಿನಿಮಾದ ಮೊದಲ ಟೀಸರ್ ಬಿಡುಗಡೆ ಆಗಿದ್ದಾಗಲೇ ಕೆಲವರು ಸಿಬಿಎಫ್​​ಸಿಗೆ ಈ ಬಗ್ಗೆ ದೂರು ನೀಡಿದ್ದರು. ಮೊದಲ ಟೀಸರ್​​ನಲ್ಲಿ ಕಾರಿನಲ್ಲಿ ಯಶ್ ಯುವತಿಯೊಟ್ಟಿಗೆ ಲೈಂಗಿಕತೆಯಲ್ಲಿ ತೊಡಗಿಕೊಂಡಿರುವ ದೃಶ್ಯ ಇತ್ತು, ಅದರ ವಿರುದ್ಧ ಸಿಬಿಎಫ್​​ಸಿಗೆ ಪತ್ರ ಬರೆದು ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಬಾರದು ಎಂದು ಆಗ್ರಹಿಸಲಾಗಿತ್ತು. ಮಹಿಳಾ ಆಯೋಗಕ್ಕೂ ದೂರು ನೀಡಲಾಗಿತ್ತು. ಈಗ ಬಿಡುಗಡೆ ಆಗಿರುವ ಎರಡನೇ ಟೀಸರ್​​ನಲ್ಲೂ ಅದು ಮುಂದುವರೆದಿದೆ. ಇದು ಸಹಜವಾಗಿಯೇ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಶಾರುಖ್ ಖಾನ್ ಸಿನಿಮಾವನ್ನು ಹಿಂದಿಕ್ಕಿದ ಯಶ್ ಸಿನಿಮಾಗಳು

ಗೀತು ಮೋಹನ್​​ದಾಸ್ ಈ ಸಿನಿಮಾ ನಿರ್ದೇಶನ ಮಾಡಿದ್ದು, ಸಿನಿಮಾನಲ್ಲಿ ನಟಿಸಿರುವ ನಟಿಯರು ಬೇರೆ ಬೇರೆ ಸಂದರ್ಶನಗಳಲ್ಲಿ ಮಾತನಾಡಿರುವಂತೆ ‘ಟಾಕ್ಸಿಕ್’ ಮಹಿಳಾ ಪ್ರಧಾನ ಸಿನಿಮಾ. ಟೀಸರ್​​ನಲ್ಲಿ ತೋರಿಸಿರುವುದಕ್ಕೂ ಸಿನಿಮಾದ ಮುಖ್ಯ ಆಶಯಕ್ಕೂ ಯಾವುದೇ ಸಂಬಂಧ ಇಲ್ಲ. ನಾಯಕಿಯರೇ ಪ್ರಧಾನವಾಗಿರುವ ಕತೆಯನ್ನು ಸಿನಿಮಾ ಒಳಗೊಂಡಿದೆಯಂತೆ. ಆದರೆ ಈ ವರೆಗೆ ಬಿಡುಗಡೆ ಆಗಿರುವ ಟೀಸರ್​​ ಬೇರೆಯದ್ದೇ ಕತೆಯನ್ನು ಹೇಳುತ್ತಿವೆ. ಸಿನಿಮಾನಲ್ಲಿ ಐವರು ನಾಯಕಿಯರಿದ್ದಾರೆ. ನಯನತಾರಾ. ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್. ಸಿನಿಮಾನಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ, ರಾಯ ಮತ್ತು ಟಿಕೆಟ್ ಹೆಸರಿನ ಎರಡು ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಸಿನಿಮಾ ಆಗಸ್ಟ್ರರ 24ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 2:50 pm, Wed, 1 July 26

Source link

ಮಳೆಗಾಲದಲ್ಲಿ ಫ್ರಿಡ್ಜ್‌ನಲ್ಲಿ ಒಂದು ಬೌಲ್‌ ಕಲ್ಲುಪ್ಪು ಇಡುವುದರಿಂದ ಏನಾಗುತ್ತದೆ ಗೊತ್ತಾ? – Kannada News | What happens if you keep a bowl of salt in the fridge during the rainy season?

ಮಳೆಗಾಲದಲ್ಲಿ ವಾತಾವರಣವು ತುಂಬಾ ತುಂಬಾ ತಂಪಾಗಿರುತ್ತದೆ. ಜೊತೆಗೆ ವಾತಾವರಣದಲ್ಲಿ ತೇವಾಂಶವೂ ಹೆಚ್ಚಿರುತ್ತದೆ. ಈ ಆರ್ದ್ರತೆಯು ಎಲೆಕ್ಟ್ರಾನಿಕ್‌ ಸಾಧನಗಳಲ್ಲಿ ವಿಶೇಷವಾಗಿ ರೆಫ್ರಿಜರೇಟರ್‌ಗಳ  (refrigerator) ಒಳಗೆ ಆರ್ದ್ರತೆಯ ಮಟ್ಟ ತೀರಾ ಹೆಚ್ಚಾಗುತ್ತವೆ, ಇದರಿಂದಾಗಿ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿದ ತರಕಾರಿಗಳು ಮತ್ತು ಹಣ್ಣುಗಳು, ಮಸಾಲೆ ಪದಾರ್ಥಗಳು ಬೇಗನೆ ಹಾಳಾಗುತ್ತವೆ. ಇದಲ್ಲದೆ, ಬ್ಯಾಕ್ಟೀರಿಯಾದ ಬೆಳವಣಿಗೆಯ ಸಾಧ್ಯತೆಯೂ ಹೆಚ್ಚಾಗುತ್ತದೆ, ಇದರ ಪರಿಣಾಮವಾಗಿ ರೆಫ್ರಿಜರೇಟರ್‌ನಿಂದ ಅಹಿತಕ ವಾಸನೆ ಹೊರಹೊಮ್ಮುತ್ತದೆ. ಇದು ಇಡೀ ಅಡುಗೆಮನೆಯ ಪರಿಸರವನ್ನೇ ಹಾಳು ಮಾಡುತ್ತದೆ. ಹೀಗಿರುವಾಗ ಈ ಎಲ್ಲಾ ಸಮಸ್ಯೆಯಿಂದ ಮುಕ್ತಿ ಪಡೆಯಲು ಒಂದು ಬೌಲ್‌ ಉಪ್ಪನ್ನು ಫ್ರಿಡ್ಜ್‌ನಲ್ಲಿ ಇಡಬಹುದು. ಈ ಕಿಚನ್‌ ಹ್ಯಾಕ್‌ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಫ್ರಿಡ್ಜ್‌ನಲ್ಲಿ ಒಂದು ಬೌಲ್‌ ಉಪ್ಪು ಇಡುವುದರ ಪ್ರಯೋಜನಗಳೇನು?

ರೆಫ್ರಿಜರೇಟರ್‌ನಲ್ಲಿ ಒಂದು ಬೌಲ್‌ ಉಪ್ಪನ್ನು ಇಡುವುದರಿಂದ ಇದು ತೇವಾಂಶವನ್ನು ಹೀರಿಕೊಳ್ಳಲು ಸಹಾಯವಾಗುತ್ತದೆ. ನೀವು ರೆಫ್ರಿಜರೇಟರ್ ಒಳಗೆ ಒಂದು ಸಣ್ಣ ಬಟ್ಟಲಿನಲ್ಲಿ 100 ರಿಂದ 150 ಗ್ರಾಂ ಕಲ್ಲುಪ್ಪನ್ನು ಇರಿಸಿದಾಗ, ಅದು ಗಾಳಿಯಿಂದ ಹೆಚ್ಚುವರಿ ತೇವಾಂಶವನ್ನು ನಿಧಾನವಾಗಿ ಹೀರಿಕೊಳ್ಳುತ್ತದೆ. ಉಪ್ಪು ನೈಸರ್ಗಿಕ ತೇವಾಂಶ ಹೀರಿಕೊಳ್ಳುವ ಗುಣಗಳನ್ನು ಹೊಂದಿದ್ದು, ಇದು ರೆಫ್ರಿಜರೇಟರ್‌ನೊಳಗಿನ ತೇವಾಂಶವನ್ನು ಕಡಿಮೆ ಮಾಡುತ್ತದೆ, ರೆಫ್ರಿಜರೇಟರ್ ಅನ್ನು ಒಣಗಿಸಿ ಬ್ಯಾಕ್ಟೀರಿಯಾ ಮುಕ್ತವಾಗಿರಿಸುತ್ತದೆ.  ಜೊತೆಗೆ ಕೆಲವೊಂದಿಷ್ಟು ಲಾಭಗಳನ್ನೂ ನೀಡುತ್ತದೆ.

ಉಪ್ಪು ತೇವಾಂಶವನ್ನು ಹೀರಿಕೊಳ್ಳುತ್ತದೆ: ಮಳೆಗಾಲದಲ್ಲಿ ರೆಫ್ರಿಜರೇಟರನ್ನು ಆಗಾಗ್ಗೆ ತೆರೆದಾಗ, ಒಳಗೆ ತೇವಾಂಶ ಸಂಗ್ರಹವಾಗುತ್ತದೆ. ಈ ತೇವಾಂಶ ಹೆಚ್ಚಾದರೆ, ತರಕಾರಿಗಳು ಬೇಗನೆ ಹಾಳಾಗುತ್ತವೆ ಮತ್ತು ಬ್ಯಾಕ್ಟೀರಿಯಾಗಳು ಸಹ ಬೆಳೆಯಲು ಪ್ರಾರಂಭಿಸುತ್ತವೆ. ಉಪ್ಪು ತೇವಾಂಶವನ್ನು ಹೀರಿಕೊಳ್ಳುವ ಶಕ್ತಿಯನ್ನು ಹೊಂದಿದೆ. ಆದ್ದರಿಂದ, ರೆಫ್ರಿಜರೇಟರ್‌ನಲ್ಲಿ ಉಪ್ಪು ಇಡುವುದರಿಂದ ಇಡುವುದರಿಂದ ಇದು ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಹೂಕೋಸಿನಲ್ಲಿರುವ ಹುಳ, ಕೀಟಗಳನ್ನು ತೆಗೆದುಹಾಕಲು ಟಿಪ್ಸ್‌ ಅನುಸರಿಸಿ

ಉಪ್ಪು ವಾಸನೆಯನ್ನು ಹೋಗಲಾಡಿಸುತ್ತದೆ: ತರಕಾರಿಗಳು, ಹಣ್ಣುಗಳು, ಬೇಯಿಸಿದ ಆಹಾರ ಮತ್ತು ಡೈರಿ ಉತ್ಪನ್ನಗಳನ್ನು ರೆಫ್ರಿಜರೇಟರ್‌ನಲ್ಲಿ ದೀರ್ಘಕಾಲದವರೆಗೆ ಸಂಗ್ರಹಿಸಿದಾಗ, ಅವು ಅನಿಲಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತವೆ. ಈ ಅನಿಲವು ರೆಫ್ರಿಜರೇಟರ್‌ನಾದ್ಯಂತ ಹರಡಿ, ಕೆಟ್ಟ ವಾಸನೆಯನ್ನು ಉಂಟುಮಾಡುತ್ತದೆ. ಉಪ್ಪು ತೇವಾಂಶ ಮತ್ತು ವಾಸನೆಯನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದರಿಂದ ನೀವು ಒಂದು ಬೌಲ್‌ ಕಲ್ಲುಪ್ಪನ್ನು ಫ್ರಿಡ್ಜ್‌ನಲ್ಲಿ ಇಡಬಹುದು. ಈ ತಂತ್ರ ಫ್ರಿಡ್ಜ್‌ನ ವಾಸನೆಯನ್ನು ಕಡಿಮೆ ಮಾಡುತ್ತದೆ ಮತ್ತು ತೇವಾಂಶವನ್ನು ನಿಯಂತ್ರಣದಲ್ಲಿಡುವ ಮೂಲಕ, ರೆಫ್ರಿಜರೇಟರ್‌ನಲ್ಲಿ ಹೆಚ್ಚುವರಿ ಒತ್ತಡವನ್ನು ತಡೆಯುತ್ತದೆ.

ಫ್ರಿಡ್ಜ್‌ನಲ್ಲಿ ಉಪ್ಪನ್ನು ಸಂಗ್ರಹಿಸಿಡುವುದು ಹೇಗೆ?

ನಿಮ್ಮ ರೆಫ್ರಿಜರೇಟರ್‌ನಿಂದ ವಾಸನೆ ಮತ್ತು ತೇವಾಂಶವನ್ನು ತೆಗೆದುಹಾಕಲು, ಒಂದು ಸಣ್ಣ ಬೌಲ್‌ ಅಥವಾ ತೆರೆದ ಡಬ್ಬದಲ್ಲಿ 100 ರಿಂದ 150 ಗ್ರಾಂ ಅಥವಾ 3 ರಿಂದ 4 ಚಮಚ ಉಪ್ಪನ್ನು ಹಾಕಿ ಫ್ರಿಡ್ಜ್‌ನ ಒಂದು ಮೂಲೆಯಲ್ಲಿಡಿ. ಪುಡಿ ಉಪ್ಪಿಗಿಂತ ಕಲ್ಲುಪ್ಪು ಹೆಚ್ಚು ಪರಿಣಾಮಕಾರಿಯಾಗಿದೆ.  ಪ್ರತಿ 15 ರಿಂದ 20 ದಿನಗಳಿಗೊಮ್ಮೆ ಉಪ್ಪನ್ನು ಬದಲಾಯಿಸುತ್ತಿರಬೇಕು. ಉಪ್ಪಿನ ಬದಲಿಗೆ ಅಡಿಗೆ ಸೋಡಾವನ್ನು ಸಹ  ಬಳಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version