ಅಮೆರಿಕ ಸೇನಾ ನೆಲೆ ಮೇಲೆ ಇರಾನ್ ಪ್ರತಿ ದಾಳಿ

ಇರಾನ್, ಮೇ 28: ಬಂದರ್ ಅಬ್ಬಾಸ್ ಬಳಿ ದಾಳಿಯ ಬಳಿಕ ಇರಾನ್(Iran) ಅಮೆರಿಕದ ಸೇನಾ ನೆಲೆ ಮೇಲೆ ಪ್ರತೀಕಾರದ ದಾಳಿ ನಡೆಸಿದೆ.
ಅಮೆರಿಕದ ದಾಳಿಗೆ ಪ್ರತೀಕಾರವಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಗುರುವಾರ ಅಮೆರಿಕದ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಬಂದರ್ ಅಬ್ಬಾಸ್ ವಿಮಾನ ನಿಲ್ದಾಣದ ಹೊರವಲಯದಲ್ಲಿರುವ ಸ್ಥಳದ ಮೇಲೆ ಇಂದು ಬೆಳಗ್ಗೆ ಅಮೆರಿಕ ಸೇನೆ ನಡೆಸಿದ ದಾಳಿ ಬಳಿಕ ಈ ದಾಳಿ ನಡೆದಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮವನ್ನು 60 ದಿನಗಳವರೆಗೆ ವಿಸ್ತರಿಸುವ ಒಪ್ಪಂದವು ಬಹುತೇಕ ಪೂರ್ಣಗೊಂಡಿದೆ ಎಂದು ಹೇಳಿಕೊಂಡ ನಾಲ್ಕು ದಿನಗಳ ನಂತರ, ಅಮೆರಿಕ ಮತ್ತು ಇರಾನ್ ನಡುವಿನ ದುರ್ಬಲವಾದ ಕದನ ವಿರಾಮವನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಸವಾಲು ಹಾಕಲಾಗುತ್ತಿದೆ. ಕರಾವಳಿ ಪ್ರದೇಶ, ಬಂದರ್ ಅಬ್ಬಾಸ್ ಮತ್ತು ದಕ್ಷಿಣದಲ್ಲಿ ಮತ್ತೆ ಹೊಸ ಉದ್ವಿಗ್ನತೆ ಹೆಚ್ಚುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯಪಾಲರ ಅನುಪಸ್ಥಿತಿಯಲ್ಲೂ ಸಿದ್ದರಾಮಯ್ಯ ರಾಜೀನಾಮೆ ನೀಡಬಹುದೇ? ಸಿಎಂ ಮುಂದೆ ಇದೆ ಈ ಒಂದು ಆಯ್ಕೆ!

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಸಿಎಂ ಸಿದ್ದರಾಮಯ್ಯImage Credit source: tv9

ಬೆಂಗಳೂರು, ಮೇ 28: ಕರ್ನಾಟಕ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಹೈಡ್ರಾಮಾ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಸಿಎಂ ಸಿದ್ದರಾಮಯ್ಯ  (Siddaramaiah)  ಅವರ ರಾಜೀನಾಮೆ ಸಲ್ಲಿಕೆಗೆ ಕ್ಷಣಗಣನೆ ಆರಂಭವಾಗಿದೆ. ಆದರೆ, ಇದೇ ಸಂದರ್ಭದಲ್ಲಿ ರಾಜ್ಯಪಾಲ (Karnataka Governor) ಥಾವರ್ ಚಂದ್ ಗೆಹ್ಲೋಟ್ ದಿಢೀರನೆ ಬೆಂಗಳೂರು ತೊರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ರಾಜಕೀಯ ವರ್ತುಲಗಳಲ್ಲಿ ಮೂಡಿದ್ದ ಈ ಗೊಂದಲಗಳ ನಡುವೆಯೇ, ರಾಜ್ಯಪಾಲರು ಕೇಂದ್ರ ಸ್ಥಾನದಲ್ಲಿ ಇಲ್ಲದಿದ್ದರೂ ಮುಖ್ಯಮಂತ್ರಿಗಳು ರಾಜೀನಾಮೆ ಪತ್ರವನ್ನು ಸಲ್ಲಿಸಲು ಸಂವಿಧಾನದಲ್ಲಿ ಅವಕಾಶವಿರುವುದು ಗೊತ್ತಾಗಿದೆ. ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ರಾಜಭವನದ (ಲೋಕಭವನ) ವಿಶೇಷ ಕಾರ್ಯದರ್ಶಿಗೆ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಲು ಗಂಭೀರ ಚಿಂತನೆ ನಡೆಸಿದ್ದಾರೆ.

ಮುಖ್ಯಾಂಶಗಳು

  • ರಾಜ್ಯಪಾಲರು ಬೆಂಗಳೂರಿನಲ್ಲಿ ಇಲ್ಲದಿದ್ದರೂ ಅವರ ವಿಶೇಷ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಲು ಮುಖ್ಯಮಂತ್ರಿಗೆ ಸಾಂವಿಧಾನಿಕ ಅವಕಾಶ.
  • ವಿಶೇಷ ಕಾರ್ಯದರ್ಶಿಗೆ ಪತ್ರ ನೀಡಿದರೆ, ರಾಜ್ಯಪಾಲರ ಅಧಿಕೃತ ಅಂಗೀಕಾರದ ಮಾತುಕತೆಗಾಗಿ ಸಿದ್ದರಾಮಯ್ಯ ಮತ್ತೊಮ್ಮೆ ಲೋಕಭವನಕ್ಕೆ ತೆರಳಬೇಕು.
  • ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಇಂದು ಲೋಕಭವನಕ್ಕೆ ಸಾರ್ವತ್ರಿಕ ರಜೆ ಇದ್ದರೂ ತುರ್ತು ಕರ್ತವ್ಯದ ಮೇರೆಗೆ ಕಚೇರಿಗೆ ಹಾಜರಾಗಲಿರುವ ಹಿರಿಯ ಅಧಿಕಾರಿಗಳು.

ಅಂಗೀಕಾರ ಪ್ರಕ್ರಿಯೆ ಮತ್ತು ರಾಜ್ಯಪಾಲರ ವಾಪಸಾತಿ

ಸಾಂವಿಧಾನಿಕ ನಿಯಮಗಳ ಪ್ರಕಾರ, ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಪತ್ರವನ್ನು ವಿಶೇಷ ಕಾರ್ಯದರ್ಶಿಗೆ ಸಲ್ಲಿಸಿದರೆ, ಅವರು ರಾಜ್ಯಪಾಲರು ಇಂದೋರ್ ಪ್ರವಾಸ ಮುಗಿಸಿ ವಾಪಸ್ ಬಂದ ತಕ್ಷಣ ಅದನ್ನು ಅವರ ವಿವೇಚನೆಗೆ ಕಳುಹಿಸಿಕೊಡಲಿದ್ದಾರೆ. ಆದರೆ, ಕೇವಲ ಪತ್ರ ತಲುಪಿದ ತಕ್ಷಣ ರಾಜೀನಾಮೆ ಅಂಗೀಕಾರವಾಗುವುದಿಲ್ಲ. ರಾಜೀನಾಮೆ ಅಂಗೀಕರಿಸುವ ಮುನ್ನ ರಾಜ್ಯಪಾಲರು ಮುಖ್ಯಮಂತ್ರಿಗಳನ್ನು ಖುದ್ದಾಗಿ ಲೋಕಭವನಕ್ಕೆ ಕರೆಸಿ, ಮುಖಾಮುಖಿ ಮಾತುಕತೆ ನಡೆಸಿದ ಬಳಿಕವಷ್ಟೇ ಅದಕ್ಕೆ ಅಧಿಕೃತ ಮುದ್ರೆ ಒತ್ತಲಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಲೋಕಭವನಕ್ಕೆ ಭೇಟಿ ನೀಡಬೇಕಾಗುತ್ತದೆ.

ಮತ್ತೊಂದೆಡೆ, ಇಂದು ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಲೋಕಭವನಕ್ಕೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಆದಾಗ್ಯೂ, ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿರುವುದರಿಂದ ತುರ್ತು ಕರೆ ಬಂದರೆ ತಕ್ಷಣವೇ ಕರ್ತವ್ಯಕ್ಕೆ ಹಾಜರಾಗುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಇಂದು ರಾತ್ರಿಯೇ ರಾಜ್ಯಪಾಲ ಗೆಹ್ಲೋಟ್ ವಾಪಸ್

ಇಂದು ರಾತ್ರಿಯೊಳಗಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬೆಂಗಳೂರಿಗೆ ಮರಳುವುದು ನಿಶ್ಚಿತ ಎನ್ನಲಾಗಿದೆ. ಏಕೆಂದರೆ ನಾಳೆ ಬೆಳಗ್ಗೆ 9 ಗಂಟೆಗೆ ಭಾರತದ ಉಪರಾಷ್ಟ್ರಪತಿ ರಾಧಾಕೃಷ್ಣನ್ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಶಿಷ್ಟಾಚಾರದ (Protocol) ಪ್ರಕಾರ ಹೆಚ್‌ಎಎಲ್ (HAL) ವಿಮಾನ ನಿಲ್ದಾಣದಲ್ಲಿ ಉಪರಾಷ್ಟ್ರಪತಿಗಳನ್ನು ಸ್ವಾಗತಿಸಲು ರಾಜ್ಯಪಾಲರು ಖುದ್ದಾಗಿ ತೆರಳಬೇಕಾಗಿರುವುದರಿಂದ, ಇಂದು ಸಂಜೆ ಅಥವಾ ತಡರಾತ್ರಿಯೊಳಗೆ ಗೆಹ್ಲೋಟ್ ಅವರು ಬೆಂಗಳೂರಿಗೆ ಮರಳಲಿದ್ದಾರೆ. ಹೀಗಾಗಿ, ಇಂದು ಸಂಜೆಯೊಳಗೆ ಕರ್ನಾಟಕದ ರಾಜಕೀಯ ಬಿಕ್ಕಟ್ಟಿಗೆ ಒಂದು ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

KCET Results 2026: ಶೀಘ್ರದಲ್ಲೇ ಕೆಸಿಇಟಿ ರಿಸಲ್ಟ್ ಪ್ರಕಟ; ಸ್ಕೋರ್‌ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!

ಬೆಂಗಳೂರು: ಕರ್ನಾಟಕದ ಇಂಜಿನಿಯರಿಂಗ್, ಫಾರ್ಮಸಿ ಮತ್ತು ಕೃಷಿ ವಿಜ್ಞಾನ ಕೋರ್ಸ್‌ಗಳ ಪ್ರವೇಶಕ್ಕಾಗಿ ಕಾಯುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪ್ರಮುಖ ಅಪ್ಡೇಟ್ ಇಲ್ಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಇಂದು ಅಥವಾ ನಾಳೆ KCET 2026 ರ ಪರೀಕ್ಷಾ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುವ ಸಾಧ್ಯತೆಯಿದೆ. ರಾಜ್ಯಾದ್ಯಂತ ಏಪ್ರಿಲ್ ತಿಂಗಳಲ್ಲಿ ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ (CET) ಫಲಿತಾಂಶಗಳು ಅಂತಿಮ ಹಂತಕ್ಕೆ ಬಂದಿದ್ದು, ವಿದ್ಯಾರ್ಥಿಗಳು ತಮ್ಮ ಲಾಗಿನ್ ವಿವರಗಳನ್ನು ಬಳಸಿ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಫಲಿತಾಂಶ ಪರಿಶೀಲಿಸಲು ಅಧಿಕೃತ ವೆಬ್‌ಸೈಟ್‌ಗಳು:

ಫಲಿತಾಂಶ ಪ್ರಕಟವಾದ ತಕ್ಷಣ ವೆಬ್‌ಸೈಟ್‌ನಲ್ಲಿ ಟ್ರಾಫಿಕ್ ಹೆಚ್ಚಾಗುವುದರಿಂದ, ಕೆಇಎ ಮೂರು ಪರ್ಯಾಯ ಲಿಂಕ್‌ಗಳನ್ನು ನೀಡಿದೆ:

cetonline.karnataka.gov.in/kea

kea.kar.nic.in

karresults.nic.in

KCET 2026 ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಚೆಕ್ ಮಾಡುವುದು ಹೇಗೆ?

ನಿಮ್ಮ ಸ್ಕೋರ್‌ಕಾರ್ಡ್ ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

  • ಮೊದಲು KEA ಅಧಿಕೃತ ವೆಬ್‌ಸೈಟ್ ಆದ cetonline.karnataka.gov.in/kea ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣಿಸುವ “UGCET 2026 Result” ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಹೊಸ ಪೇಜ್ ಓಪನ್ ಆದಾಗ, ನಿಮ್ಮ KCET ಅಪ್ಲಿಕೇಶನ್ ಸಂಖ್ಯೆ (Application Number) ಅನ್ನು ನಮೂದಿಸಿ.
  • ನಿಮ್ಮ ಹಾಲ್ ಟಿಕೆಟ್‌ನಲ್ಲಿರುವಂತೆ ನಿಮ್ಮ ಹೆಸರಿನ ಮೊದಲ 4 ಅಕ್ಷರಗಳನ್ನು ಟೈಪ್ ಮಾಡಿ.
  • ಕೊನೆಯದಾಗಿ ‘Submit’ ಬಟನ್ ಒತ್ತಿರಿ.
  • ನಿಮ್ಮ ಸ್ಕೋರ್‌ಕಾರ್ಡ್ ಪರದೆಯ ಮೇಲೆ ಪ್ರದರ್ಶನವಾಗುತ್ತದೆ. ವಿಷಯವಾರು ಅಂಕಗಳು ಮತ್ತು ರಾಂಕ್ ಅನ್ನು ಪರಿಶೀಲಿಸಿ, ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್ ತೆಗೆದುಕೊಳ್ಳಿ.

ರಾಂಕ್ ಲಿಸ್ಟ್ ಹೇಗೆ ಸಿದ್ಧವಾಗುತ್ತದೆ?

KCET ಇಂಜಿನಿಯರಿಂಗ್ ರಾಂಕಿಂಗ್ ಅನ್ನು ಕೇವಲ ಸಿಇಟಿ ಅಂಕಗಳ ಮೇಲಷ್ಟೇ ನಿರ್ಧರಿಸಲಾಗುವುದಿಲ್ಲ. ವಿದ್ಯಾರ್ಥಿಯ ದ್ವಿತೀಯ ಪಿಯುಸಿ (Class 12) ಬೋರ್ಡ್ ಪರೀಕ್ಷೆಯ ಪಿಸಿಎಂ (ಫಿಸಿಕ್ಸ್, ಕೆಮಿಸ್ಟ್ರಿ, ಮ್ಯಾಥ್ಸ್) ಅಂಕಗಳಿಗೆ ಶೇ.50 ಮತ್ತು KCET ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳಿಗೆ 50% ರಷ್ಟು ಸಮಾನ ಪ್ರಾಮುಖ್ಯತೆ (Weightage) ನೀಡಿ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ವಿದ್ಯಾರ್ಥಿಗಳ ಗಮನಕ್ಕೆ:

ನಿಮ್ಮ ರಿಸಲ್ಟ್ ಶೀಟ್ ಡೌನ್‌ಲೋಡ್ ಮಾಡಿದ ನಂತರ ಅದರಲ್ಲಿ ಈ ಕೆಳಗಿನ ವಿವರಗಳು ಸರಿಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ:

  • ಅಭ್ಯರ್ಥಿಯ ಹೆಸರು ಮತ್ತು ರೋಲ್ ನಂಬರ್
  • ಸಬ್ಜೆಕ್ಟ್ ವೈಸ್ ಮಾರ್ಕ್ಸ್ (PCM/PCB)
  • ಒಟ್ಟು ಪಡೆದ ಅಂಕಗಳು ಮತ್ತು KCET ರಾಂಕ್
  • ಮೀಸಲಾತಿ ವಿಭಾಗ (Category)

ಫಲಿತಾಂಶದ ನಂತರ ಮುಂದಿನ ಪ್ರಕ್ರಿಯೆ ಏನು?

ಕೌನ್ಸೆಲಿಂಗ್ ಪ್ರಕ್ರಿಯೆಯ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಇರುವ ಗೊಂದಲ ನಿವಾರಿಸಲು KEA ಸಂಸ್ಥೆಯು ಮೇ 25 ರಿಂದ ಮೇ 30 ರವರೆಗೆ “KEA ಮಂಥನ 2026” ಎಂಬ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಫಲಿತಾಂಶ ಬಂದ ಕೆಲವೇ ದಿನಗಳಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಆಫ್‌ಲೈನ್ ಅಥವಾ ಆನ್‌ಲೈನ್ ಮೂಲಕ ಡಾಕ್ಯುಮೆಂಟ್ ವೆರಿಫಿಕೇಶನ್ ಪ್ರಕ್ರಿಯೆ ಆರಂಭವಾಗಲಿದೆ.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಆಪ್ಷನ್ ಎಂಟ್ರಿ:

ಜೂನ್ ಮೊದಲ ವಾರದಲ್ಲಿ ಆನ್‌ಲೈನ್ ಕೌನ್ಸೆಲಿಂಗ್ ಪೋರ್ಟಲ್ ತೆರೆಯಲಿದ್ದು, ವಿದ್ಯಾರ್ಥಿಗಳು ತಮಗೆ ಬೇಕಾದ ಕಾಲೇಜು ಮತ್ತು ಕೋರ್ಸ್‌ಗಳನ್ನು ಆದ್ಯತೆಯ ಮೇರೆಗೆ ಆಯ್ಕೆ ಮಾಡಿಕೊಳ್ಳಬಹುದು.

ಸಹಾಯವಾಣಿ:

ರಿಸಲ್ಟ್ ನೋಡುವಾಗ ಯಾವುದೇ ತಾಂತ್ರಿಕ ತೊಂದರೆ ಎದುರಾದರೆ ವಿದ್ಯಾರ್ಥಿಗಳು ಕೆಇಎ ಸಹಾಯವಾಣಿ ಸಂಖ್ಯೆಗಳಾದ 080-23460460 ಅಥವಾ 080-23461575 ಅನ್ನು ಸಂಪರ್ಕಿಸಬಹುದು.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜಕೀಯ ಹೈವೋಲ್ಟೇಜ್ ಕೇಂದ್ರವಾದ ಡಿಕೆ ಶಿವಕುಮಾರ್ ನಿವಾಸ

ಬೆಂಗಳೂರು, ಮೇ 28: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಸದ್ದು ಜೋರಾಗಿದ್ದು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸದಾಶಿವನಗರ ನಿವಾಸ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿದೆ. ತಡರಾತ್ರಿ 1 ಗಂಟೆಯವರೆಗೂ ಆಪ್ತರೊಂದಿಗೆ ಚರ್ಚೆ ನಡೆಸಿದ ಡಿಕೆ ಶಿವಕುಮಾರ್, ಪ್ರಸ್ತುತ ವಿಶ್ರಾಂತಿ ಮುಗಿಸಿ ಸಿದ್ದರಾಮಯ್ಯ ಆಯೋಜಿಸಿರುವ ಉಪಾಹಾರ ಕೂಟಕ್ಕೆ ತೆರಳುತ್ತಿದ್ದಾರೆ. ಡಿಕೆ ಶಿವಕುಮಾರ್ ನಿವಾಸದ ಬಳಿ ಆಪ್ತರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇರುವುದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಸುಮಾರು 50ಕ್ಕೂ ಹೆಚ್ಚು ಪೊಲೀಸರು, ಶೇಷಾದ್ರಿಪುರಂ ಠಾಣೆಯ ಎಸಿಪಿ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಕೈಗೊಂಡಿದ್ದಾರೆ. ನಿವಾಸಕ್ಕೆ ಸಂಪರ್ಕಿಸುವ ಎರಡು ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗ್ಗೆ 9 ಗಂಟೆಗೆ ಆಯೋಜಿಸಿರುವ ಉಪಹಾರ ಕೂಟದಲ್ಲಿ ಮುಖ್ಯಮಂತ್ರಿ ನಿರ್ಧಾರ ಪ್ರಕಟವಾಗುವ ನಿರೀಕ್ಷೆಯಿದೆ. ಕಳೆದ ದಿನ ಮುಖ್ಯಮಂತ್ರಿ ನಿವಾಸದ ಬಳಿ ಇದ್ದ ಜನರ ಚಿತ್ತ, ಇಂದು ಡಿಸಿಎಂ ನಿವಾಸದತ್ತ ಶಿಫ್ಟ್ ಆಗಿರುವುದು ರಾಜ್ಯ ರಾಜಕಾರಣದ ಕುತೂಹಲ ಹೆಚ್ಚಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಹಠಾತ್ತನೆ ಯುವಕನ ಮೇಲೆ ದಾಳಿಗೆ ಬಂದ ನಾಯಿಗಳ ಹಿಂಡು, ಆಮೇಲಾಗಿದ್ದೇನು ನೋಡಿ?

ರಸ್ತೆಯಲ್ಲಿ ತನ್ನಷ್ಟಕ್ಕೆ ತಾನು ನಡೆದು  ಹೋಗುತ್ತಿದ್ದ ಯುವಕನ ಮೇಲೆ ನಾಯಿಗಳು ಹಠಾತ್ ದಾಳಿಗೆ ಮುಂದಾಗಿದ್ದ ವಿಡಿಯೋ ವೈರಲ್ ಆಗಿದೆ. ವರದಿಗಳ ಪ್ರಕಾರ, ನಾಯಿಗಳು ಆತನನ್ನು ಸುತ್ತುವರೆದು ಕಚ್ಚಲು ಮುಂದಾದಾಗ ಆತ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಆದರೆ, ಅದೇ ಹತಾಶೆ ಮತ್ತು ಪ್ರಾಣಭಯದ ಮಧ್ಯೆ ಆ ವ್ಯಕ್ತಿ ಸಮಯಪ್ರಜ್ಞೆ ಮೆರೆದಿದ್ದಾರೆ. ತನ್ನನ್ನು ಕಚ್ಚಲು ಬಂದ ನಾಯಿಗಳಲ್ಲಿ ಒಂದನ್ನು ಅತ್ಯಂತ ವೇಗವಾಗಿ ಕೈಯಿಂದ ಗಟ್ಟಿಯಾಗಿ ಹಿಡಿದು, ಅದನ್ನು ಉಳಿದ ನಾಯಿಗಳ ಕಡೆಗೆ ಬಲವಾಗಿ ಎಸೆದಿದ್ದಾರೆ. ಆತನ ಈ ಅನಿರೀಕ್ಷಿತ ತಿರುಗೇಟಿನಿಂದ ಗಾಬರಿಯಾದ ನಾಯಿಗಳ ಹಿಂಡು ಅಲ್ಲಿಂದ ತಕ್ಷಣವೇ ಓಡಿಹೋಗಿದೆ. ಪರಿಣಾಮವಾಗಿ, ಆ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Rakshasutra Colors: ಕೈಗೆ ಕಟ್ಟುವ ರಕ್ಷಾಸೂತ್ರ ನಿಮ್ಮ ಅದೃಷ್ಟವನ್ನೇ ಬದಲಾಯಿಸಬಹುದು; ಯಾವ ಬಣ್ಣ ಯಾವ ಗ್ರಹಕ್ಕೆ ಸಂಬಂಧಿಸಿದ್ದು ಗೊತ್ತಾ?

ಕೈಗೆ ಕಟ್ಟುವ ರಕ್ಷಾಸೂತ್ರImage Credit source: Pinterest

ಹಿಂದೂ ಧರ್ಮದಲ್ಲಿ ಶುಭ ಕಾರ್ಯ, ಪೂಜೆ ಮತ್ತು ಹಬ್ಬ ಹರಿದಿನಗಳ ಸಂದರ್ಭದಲ್ಲಿ ಕೈಗೆ ಪವಿತ್ರವಾದ ರಕ್ಷಾಸೂತ್ರವನ್ನು (ಕಾಲವ ಅಥವಾ ಕೈದಾರ) ಕಟ್ಟುವ ಸಂಪ್ರದಾಯವಿದೆ. ಇದನ್ನು ರಕ್ಷಣೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ರಕ್ಷಾಸೂತ್ರದ ಬಣ್ಣ ಮತ್ತು ಅದನ್ನು ಧರಿಸುವ ವಿಧಾನವು ವ್ಯಕ್ತಿಯ ದೇಹದ ಶಕ್ತಿ (Energy) ಮತ್ತು ಅದೃಷ್ಟದ ಮೇಲೆ ತೀವ್ರ ಪ್ರಭಾವ ಬೀರುತ್ತದೆ. ತಪ್ಪು ಬಣ್ಣ ಅಥವಾ ತಪ್ಪು ವಿಧಾನದಲ್ಲಿ ದಾರವನ್ನು ಕಟ್ಟಿಕೊಳ್ಳುವುದರಿಂದ ನಕಾರಾತ್ಮಕ ಪರಿಣಾಮಗಳು ಉಂಟಾಗಬಹುದು. ಆದ್ದರಿಂದ, ಯಾವ ಬಣ್ಣದ ದಾರ ಯಾವ ಗ್ರಹಕ್ಕೆ ಸಂಬಂಧಿಸಿದೆ ಮತ್ತು ಅದನ್ನು ಧರಿಸುವ ಸರಿಯಾದ ನಿಯಮಗಳೇನು ಎಂಬುದನ್ನು ತಿಳಿಯುವುದು ಅತ್ಯಗತ್ಯ.

ವಿವಿಧ ಬಣ್ಣಗಳ ರಕ್ಷಾಸೂತ್ರ ಮತ್ತು ಗ್ರಹಗಳ ನಂಟು:

ಹಳದಿ ಬಣ್ಣದ ರಕ್ಷಾಸೂತ್ರ (ಗುರು ಗ್ರಹ):

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ಗುರು ಗ್ರಹವು (ಬೃಹಸ್ಪತಿ) ದುರ್ಬಲವಾಗಿದ್ದರೆ ಹಳದಿ ಬಣ್ಣದ ರಕ್ಷಾಸೂತ್ರವನ್ನು ಧರಿಸುವುದು ಅತ್ಯಂತ ಶುಭ ತರಲಿದೆ. ಇದು ಬುದ್ಧಿವಂತಿಕೆ, ಜ್ಞಾನ, ಆಧ್ಯಾತ್ಮಿಕತೆ ಮತ್ತು ಮಾತುಗಾರಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಿ, ಜೀವನದಲ್ಲಿ ಧನಾತ್ಮಕ ಬದಲಾವಣೆ ತರುತ್ತದೆ ಎಂದು ನಂಬಲಾಗಿದೆ. ಹಳದಿ ರಕ್ಷಾಸೂತ್ರವನ್ನು ಕಟ್ಟಿಕೊಳ್ಳಲು ಗುರುವಾರ ಅತ್ಯಂತ ಪ್ರಶಸ್ತವಾದ ದಿನವಾಗಿದೆ.

ಹಸಿರು ಬಣ್ಣದ ರಕ್ಷಾಸೂತ್ರ (ಬುಧ ಗ್ರಹ):

ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಹಸಿರು ಬಣ್ಣದ ದಾರವು ಬುಧ ಗ್ರಹದ ಸಂಕೇತವಾಗಿದೆ. ಇದನ್ನು ಕೈಗೆ ಧರಿಸುವುದರಿಂದ ಬುದ್ಧಿಶಕ್ತಿ ಚುರುಕಾಗುತ್ತದೆ, ಸಂವಹನ ಕೌಶಲ್ಯಗಳು ಉತ್ತಮಗೊಳ್ಳುತ್ತವೆ ಮತ್ತು ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ. ವ್ಯಾಪಾರ ಮತ್ತು ವೃತ್ತಿಜೀವನದಲ್ಲಿ ಯಶಸ್ಸು ಕಾಣಲು ಹಸಿರು ದಾರ ಸಹಕಾರಿ. ಇದನ್ನು ಕಟ್ಟಿಕೊಳ್ಳಲು ಬುಧವಾರ ಅತ್ಯಂತ ಸೂಕ್ತ ದಿನ.

ಬಿಳಿ ಬಣ್ಣದ ರಕ್ಷಾಸೂತ್ರ (ಚಂದ್ರ ಮತ್ತು ಶುಕ್ರ ಗ್ರಹ):

ಬಿಳಿ ಬಣ್ಣವನ್ನು ಶಾಂತಿ ಮತ್ತು ಶುದ್ಧತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಬಿಳಿ ಬಣ್ಣದ ರಕ್ಷಾಸೂತ್ರವನ್ನು ಧರಿಸುವುದರಿಂದ ಚಂದ್ರ ಮತ್ತು ಶುಕ್ರ ಗ್ರಹಗಳ ಶುಭ ಫಲಗಳು ಹೆಚ್ಚಾಗುತ್ತವೆ. ಇದು ಮನಸ್ಸಿಗೆ ಶಾಂತಿ ನೀಡುವುದರ ಜೊತೆಗೆ ಜೀವನದಲ್ಲಿ ಸುಖ-ಸಮೃದ್ಧಿಯನ್ನು ತರುತ್ತದೆ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

ಕಿತ್ತಳೆ ಅಥವಾ ಕೇಸರಿ ದಾರ:

ಕೇಸರಿ ಅಥವಾ ಕಿತ್ತಳೆ ಬಣ್ಣವು ಬೆಂಕಿ, ಗ್ರಹಗಳು, ಸೂರ್ಯ ಮತ್ತು ಇತರ ಸಾರ್ವತ್ರಿಕ ಅಂಶಗಳ ಬಣ್ಣವಾಗಿದೆ. ಕೇಸರಿಯನ್ನು ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಬಣ್ಣವೆಂದು ಪರಿಗಣಿಸಲಾಗಿದೆ. ಈ ಬಣ್ಣವು ಗುರು ಗ್ರಹದ ಸಹಾಯದಿಂದ ಆಧ್ಯಾತ್ಮಿಕತೆಯನ್ನು ಹರಡಲು ಸಹಾಯ ಮಾಡುತ್ತದೆ. ಇದು ಹೆಸರು, ಖ್ಯಾತಿ, ಶಕ್ತಿ, ಸಮೃದ್ಧಿ ತರುವ ಜೊತೆಗೆ ದುಷ್ಟ ಕಣ್ಣುಗಳಿಂದ ವ್ಯಕ್ತಿಯನ್ನು ರಕ್ಷಿಸುತ್ತದೆ ಎಂದು ನಂಬಲಾಗಿದೆ.

ರಕ್ಷಾಸೂತ್ರ ಧರಿಸುವಾಗ ಪಾಲಿಸಬೇಕಾದ ಪ್ರಮುಖ ನಿಯಮಗಳು:

ರಕ್ಷಾಸೂತ್ರವನ್ನು ಕೈಗೆ ಕಟ್ಟುವ ಮೊದಲು ಅದನ್ನು ಗಂಗಾಜಲದಿಂದ ಪ್ರೋಕ್ಷಣೆ ಮಾಡಿ ಶುದ್ಧೀಕರಿಸುವುದು ಅತ್ಯಂತ ಶುಭ ತರುತ್ತದೆ.

ಯಾವ ಕೈಗೆ ಕಟ್ಟಬೇಕು?

ಧಾರ್ಮಿಕ ನಿಯಮಗಳ ಪ್ರಕಾರ, ಪುರುಷರು ಮತ್ತು ಅವಿವಾಹಿತ ಹೆಣ್ಣುಮಕ್ಕಳು ತಮ್ಮ ಬಲಗೈಗೆ ರಕ್ಷಾಸೂತ್ರವನ್ನು ಕಟ್ಟಿಕೊಳ್ಳಬೇಕು. ವಿವಾಹಿತ ಮಹಿಳೆಯರು ತಮ್ಮ ಎಡಗೈಗೆ ರಕ್ಷಾಸೂತ್ರವನ್ನು ಧರಿಸುವುದು ಶಾಸ್ತ್ರಬದ್ಧವಾಗಿದೆ. ಎಡಗೈಯು ಚಂದ್ರ ತತ್ವ ಮತ್ತು ಶಕ್ತಿಯ ಸಂಕೇತವಾಗಿದ್ದರೆ, ಬಲಗೈಯು ಕರ್ಮ ಮತ್ತು ಧರ್ಮದ ಸಂಕೇತವಾಗಿದೆ. ಕೈಗೆ ದಾರವನ್ನು ಕಟ್ಟುವಾಗ ಪವಿತ್ರವಾದ ರಕ್ಷಾ ಮಂತ್ರವನ್ನು ಜಪಿಸುವುದು ಉತ್ತಮ ಫಲ ನೀಡುತ್ತದೆ.

ಹಳೆಯ ದಾರವನ್ನು ಏನು ಮಾಡಬೇಕು?

ಕಾಲಾನಂತರದಲ್ಲಿ ರಕ್ಷಾಸೂತ್ರವು ಹಳೆಯದಾದಾಗ ಅಥವಾ ಬಣ್ಣ ಮಾಸಿದಾಗ ಅದನ್ನು ಬದಲಾಯಿಸಬೇಕು. ಹಳೆಯ ದಾರವನ್ನು ಎಲ್ಲೆಂದರಲ್ಲಿ ಬಿಸಾಡಬಾರದು; ಅದನ್ನು ಹರಿಯುವ ನೀರಿನಲ್ಲಿ ವಿಸರ್ಜಿಸಬೇಕು ಅಥವಾ ಯಾವುದಾದರೂ ಪವಿತ್ರವಾದ ಮರದ ಬೇರಿನ ಬಳಿ ಇಡಬೇಕು. ರಕ್ಷಾಸೂತ್ರವು ಕೇವಲ ಒಂದು ದಾರವಲ್ಲ, ಅದು ನಕಾರಾತ್ಮಕ ಶಕ್ತಿಗಳಿಂದ ನಮ್ಮನ್ನು ರಕ್ಷಿಸುವ, ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ನೆಲೆಸುವಂತೆ ಮಾಡುವ ಒಂದು ರಕ್ಷಾ ಕವಚವಾಗಿದೆ.

(ಗಮನಿಸಿ: ಈ ಮೇಲಿನ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಶಾಸ್ತ್ರದ ಸಾಮಾನ್ಯ ಸಿದ್ಧಾಂತಗಳನ್ನು ಆಧರಿಸಿದೆ.)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಇದು ಕರ್ಮ’; ಇಶನ್ ಕಿಶನ್​ಗೆ ಚೆನ್ನೈ ಫ್ಯಾನ್ಸ್ ತಿರುಗೇಟು

ಚೆನ್ನೈ vs ಎಸ್​​ಆರ್​ಎಚ್​ ಪಂದ್ಯದಲ್ಲಿ ಹೈದರಾಬಾದ್ ತಂಡ ಗೆದ್ದು ಬೀಗಿತ್ತು. ಇದಾದ ಬಳಿಕ ಇಶನ್ ಕಿಶನ್ ಅವರು ನಡೆದುಕೊಂಡ ರೀತಿ ಚರ್ಚೆಗೆ ಗ್ರಾಸವಾಗಿತ್ತು. ‘ವಿಸಿಲ್ ಹೊಡೆಯುತ್ತಾ ಮನೆಗೆ ಹೋಗಿ’ ಎಂದು ಕಿಶನ್ ಹೇಳಿದ್ದರು. ಅಲ್ಲದೆ, ಹೋಗಿ ಹೋಗಿ ಎಂದು ಸನ್ನೆ ಮಾಡಿದ್ದರು. ಈಗ ಎಲಿಮಿನೇಟರ್ ಪಂದ್ಯದಲ್ಲಿ ಇಶಾನ್ ತಂಡವೇ ಹೊರ ಹೋಗಿದ್ದಾರೆ. ಇದಾದ ಬಳಿಕ ಚೆನ್ನೈ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ಇದನ್ನು ಕರ್ಮ ಎಂದು ಕರೆದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bakrid: ವಾಹನ ಸವಾರರೇ ಗಮನಿಸಿ! ಬಕ್ರೀದ್ ಹಿನ್ನೆಲೆ ಬೆಂಗಳೂರಿನ ಈ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ

ಕ್ರೀದ್ ಹಿನ್ನೆಲೆ ಬೆಂಗಳೂರಿನ ಈ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ

ಬೆಂಗಳೂರು, ಮೇ 28: ನಗರದಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆ ಹಲವೆಡೆ ಸಂಚಾರ ಮಾರ್ಗಗಳಲ್ಲಿ ನಿರ್ಬಂಧ ವಿಧಿಸಲಾಗಿದೆ. ಈ ಬಗ್ಗೆ ಬೆಂಗಳೂರಿನ (Bengaluru) ದಕ್ಷಿಣ ವಿಭಾಗದ ಸಂಚಾರ ಪೊಲೀಸ್ ಉಪ ಆಯುಕ್ತರು ತಮ್ಮ ಅಧಿಕೃತ X ಖಾತೆಯಲ್ಲಿ ನಗರದ ವಾಹನ ಸವಾರರಿಗಾಗಿ ಪ್ರಮುಖ ಸಂಚಾರ ಸಲಹೆಯೊಂದನ್ನು ಹಂಚಿಕೊಂಡಿದ್ದಾರೆ. ರಸ್ತೆ ಕಾಮಗಾರಿಗಳ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಕೋರಲಾಗಿದ್ದು, ಪರ್ಯಾಯ ಮಾರ್ಗಗಳ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.

ಮುಖ್ಯಾಂಶಗಳು

  • ಬಕ್ರೀದ್ ಪ್ರಯುಕ್ತ ಬನ್ನೇರುಘಟ್ಟ ಮತ್ತು ಕನಕಪುರ ರಸ್ತೆಯಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ.
  • ಗುರಪ್ಪನಪಾಳ್ಯ ಹಾಗೂ ಕೆ.ಎಸ್ ಲೇಔಟ್ ಈದ್ಗಾ ಮೈದಾನದ ಸುತ್ತಮುತ್ತ ನಿರ್ಬಂಧ ಹೇರಲಾಗಿದೆ.
  • ವಾಹನ ಸವಾರರ ಸುಗಮ ಸಂಚಾರಕ್ಕಾಗಿ ಪೊಲೀಸರು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.

ಮೇ 28ರಂದು ಬೆಳಿಗ್ಗೆ 08-00 ಗಂಟೆಯಿಂದ 12-00 ಗಂಟೆಯವರೆಗೆ ಬಕ್ರೀದ್ ಹಬ್ಬದ ಪ್ರಯುಕ್ತ ಮೈಕೋಲೇಔಟ್ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಬನ್ನೇರುಘಟ್ಟ ಮುಖ್ಯ ರಸ್ತೆಯ, ಗುರಪ್ಪನಪಾಳ್ಯ ಜಂಕ್ಷನ್‌ನಲ್ಲಿ ಮತ್ತು ಕೆ.ಎಸ್ ಲೇಔಟ್ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಔಟರ್ ರಿಂಗ್ ರಸ್ತೆಯಲ್ಲಿರುವ ಈದಾ ಮೈದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಭಾಂದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದು, ಸಾರ್ವಜನಿಕ ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ಸಂಚಾರ ದಕ್ಷಿಣ ವಿಭಾಗ ವ್ಯಾಪ್ತಿಯ ಸಂಚಾರ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಕೆಳಕಂಡಂತೆ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿರುತ್ತದೆ ಎಂದು ಪೋಸ್ಟ್​ನಲ್ಲಿ ತಿಳಿಸಲಾಗಿದೆ.

ಮೈಕೋಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಚಾರ ನಿರ್ಬಂಧ

  1. ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಸಾಗರ್ ಆಸ್ಪತ್ರೆ ಜಂಕ್ಷನ್ ನಿಂದ ಗುರಪ್ಪನಪಾಳ್ಯ ಜಂಕ್ಷನ್ ವರೆಗೆ.
  2. ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಸಾಯಿರಾಂ ಜಂಕ್ಷನ್ ನಿಂದ ಗುರಪ್ಪನಪಾಳ್ಯ ಜಂಕ್ಷನ್ ವರೆಗೆ.
  3. 39ನೇ ಕ್ರಾಸ್ ರಸ್ತೆಯಲ್ಲಿ ಗುರಪ್ಪನಪಾಳ್ಯ ಜಂಕ್ಷನ್ ನಿಂದ ರೆಡ್ಡಿ ಆಸ್ಪತ್ರೆ ಜಂಕ್ಷನ್ ವರೆಗೆ.

ಪರ್ಯಾಯ ಮಾರ್ಗಗಳು

ಡೈರಿ ಸರ್ಕಲ್ ನಿಂದ ಬರುವ ವಾಹನಗಳು ಸಾಗರ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ತಿಲಕ ನಗರ ಮುಖ್ಯ ರಸ್ತೆಯಲ್ಲಿ ಚಲಿಸಿ ಸ್ವಾಗತ್ ಜಂಕ್ಷನ್ ನಲ್ಲಿ ಎಡ ತಿರುವು ಪಡೆದು, ಈಸ್ಟ್ ಎಂಡ್ ಮುಖ್ಯ ರಸ್ತೆಯಲ್ಲಿ ಚಲಿಸಿ, ಈಸ್ಟ್ ಎಂಡ್ ಜಂಕ್ಷನ್ ನಲ್ಲಿ ಎಡ ತಿರುವು ಪಡೆದು ಜಯದೇವಾ “ಯು” ಟರ್ನ ಜಂಕ್ಷನ್ನಲ್ಲಿ “ಯು” ತಿರುವು ಪಡೆದು ಹೊರ ರಿಂಗ್ ರಸ್ತೆಯಲ್ಲಿ ಚಲಿಸಿ ಜಯದೇವಾ ಜಂಕ್ಷನ್‌ ಸರ್ವಿಸ್ ರಸ್ತೆಯಲ್ಲಿ ಮುಕ್ತ ಎಡ ತಿರುವು ಪಡೆದು ಬನ್ನೇರುಘಟ್ಟ ಮುಖ್ಯ ರಸ್ತೆಗೆ ಸಂಪರ್ಕ ಪಡೆದು ಸಂಚರಿಸಬಹುದಾಗಿದೆ.

ಬನ್ನೇರುಘಟ್ಟ ಮುಖ್ಯ ರಸ್ತೆ ಜಿ ಡಿ ಮರ ಜಂಕ್ಷನ್ ( ನೆಕ್‌ಸ್‌ಸ್ ವೆಗಾ ಸಿಟಿ ಮಾಲ್ ಜಂಕ್ಷನ್ ಕಡೆಯಿಂದ ಡೈರಿ ಜಂಕ್ಷನ್ ಕಡೆಗೆ ಬರುವ ವಾಹನ ಸವಾರರು ಸಾಯಿ ರಾಂ ಜಂಕ್ಷನ ಸರ್ವಿಸ್ ರಸ್ತೆಯಲ್ಲಿ ಮುಕ್ತ ಎಡ ತಿರುವು ಪಡೆದು ಜಯದೇವಾ ಜಂಕ್ಷನ್ ನಲ್ಲಿ ಎಡ ತಿರುವು ಪಡೆದು. ಈಸ್ಟ್ ಎಂಡ್ ಜಂಕ್ಷನ್ ನಲ್ಲಿ ಬಲಕ್ಕೆ ತಿರುವು ಪಡೆದು, ಈಸ್ಟ್ ಎಂಡ್ ಮುಖ್ಯ ರಸ್ತೆಯ ಮುಖಾಂತರ ಸ್ವಾಗತ್ ಜಂಕ್ಷನ್ ತಲುಪಿ ಬಲ ತಿರುವು ಪಡೆದು, ಸಾಗರ್ ಜಂಕ್ಷನ್ ನಲ್ಲಿ ಎಡಕ್ಕೆ ತಿರುಗಿ ಬನ್ನೇರುಘಟ್ಟ ಮುಖ್ಯ ರಸ್ತೆಗೆ ಸಂಪರ್ಕ ಪಡೆದು, ಡೈರಿ ಜಂಕ್ಷನ್ ಕಡೆಗೆ ಸಂಚರಿಸಬಹುದಾಗಿದೆ.

ಇದನ್ನೂ ಓದಿ ಬಕ್ರೀದ್ ಹಬ್ಬ: ಕುರಿ, ಮೇಕೆಗಳ ವ್ಯಾಪಾರ ಜೋರು; ಮಾರುಕಟ್ಟೆಯಲ್ಲಿ ಅಮೀನಗಡ ಟಗರುಗಳದ್ದೇ ಹವಾ!

ಕೆ.ಎಸ್ ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿ ಸಂಚಾರ ನಿರ್ಬಂಧ

ಕನಕಪುರ ಮುಖ್ಯ ರಸ್ತೆ ಸಾರಕ್ಕಿ ಸಿಗ್ನಲ್ ನಿಂದ ಔಟರ್ ರಿಂಗ್ ರಸ್ತೆ ಕೆ.ಎಸ್. ಲೇಔಟ್ ಸಿಗ್ನಲ್ ವರೆಗೆ

ಪರ್ಯಾಯ ಮಾರ್ಗಗಳು

ಕನಕಪುರ ಮುಖ್ಯ ರಸ್ತೆ ಸಾರಕ್ಕಿ ಸಿಗ್ನಲ್ ನಿಂದ ಮುಂದೆ ಸಾಗಿ ಸಾರಕ್ಕಿ ಮಾರ್ಕೆಟ್-ಬನಶಂಕರಿ ಬಸ್ ನಿಲ್ದಾಣ (ಎಡ ತಿರುವು)- ಬೇಂದ್ರೆ ಸರ್ಕಲ್ ಮೂಲಕ ಔಟರ್ ರಿಂಗ್ ರಸ್ತೆ ತಲುಪಿ ಅವಶ್ಯಕ ಮಾರ್ಗಗಳಲ್ಲಿ ತೆರಳಬಹುದು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಮದುವೆ ಆಮಂತ್ರಣ ಪತ್ರಿಕೆImage Credit source: Pinterest

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋಗಳನ್ನು ಹಾಕುವ ಇತ್ತೀಚಿನ ಪ್ರವೃತ್ತಿ ಶುಭವೋ ಅಶುಭವೋ ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ನೀಡಿರುವ ಮಾಹಿತಿ ಇಲ್ಲಿದೆ. ಅನಾದಿ ಕಾಲದಿಂದಲೂ ವಿವಾಹ ಆಮಂತ್ರಣವನ್ನು ವೈಯಕ್ತಿಕವಾಗಿ ನೀಡುವುದು ಅಥವಾ ಕರೆಯುವ ಪದ್ಧತಿ ಇತ್ತು. ಕಲಿಯುಗದಲ್ಲಿ ಆಮಂತ್ರಣ ಪತ್ರಿಕೆಗಳ ಬಳಕೆ ಹೆಚ್ಚಾಗಿದೆ ಮತ್ತು ಕಾಲಕ್ಕೆ ತಕ್ಕಂತೆ ಕೆಲವು ಮಾರ್ಪಾಡುಗಳಾಗಿವೆ. ಸಾಂಪ್ರದಾಯಿಕವಾಗಿ, ಲಗ್ನ ಪತ್ರಿಕೆಗಳಲ್ಲಿ ಕುಲದೇವರು, ಇಷ್ಟದೇವರು, ಗಣಪತಿಯ ಚಿತ್ರಗಳು, ಹಾಗೂ ಹಿರಿಯರ, ಸ್ವಾಮೀಜಿಗಳ, ಮಠಾಧೀಶರ, ತಂದೆ-ತಾಯಿಗಳ ಹೆಸರುಗಳನ್ನು ಮುದ್ರಿಸುವ ಪದ್ಧತಿ ಇತ್ತು. ಇದು ಹಿರಿಯರ ಆಶೀರ್ವಾದ ಮತ್ತು ದೇವರ ಅನುಗ್ರಹವನ್ನು ಆಹ್ವಾನಿಸುವ ಸಂಕೇತವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ, ಕೆಲವು ಆಮಂತ್ರಣ ಪತ್ರಿಕೆಗಳಲ್ಲಿ ವಧು-ವರರ ಫೋಟೋಗಳನ್ನು ಹಾಕುವ ಪ್ರವೃತ್ತಿ ಪ್ರಾರಂಭವಾಗಿದೆ. ಇದು ಸರಿಯೇ ಅಥವಾ ತಪ್ಪೇ ಎಂಬುದು ಈ ಚರ್ಚೆಯ ಮೂಲ ವಿಷಯವಾಗಿದೆ.

ಹಿಂದೂ ಸಂಪ್ರದಾಯದ ಪ್ರಕಾರ, ಲಗ್ನ ಪತ್ರಿಕೆಗೆ ಅದರದೇ ಆದ ವಿಶಿಷ್ಟ ಸ್ಥಾನಮಾನವಿದೆ. ವಿವಾಹ ಕಾರ್ಯಕ್ರಮ ಪ್ರಾರಂಭವಾಗುವ ಮೊದಲು, ಲಗ್ನ ಪತ್ರಿಕೆಗೆ ಪೂಜೆ ಸಲ್ಲಿಸಿ, ನಾಲ್ಕು ಭಾಗಗಳಲ್ಲಿ ಅರಿಶಿಣ ಕುಂಕುಮವನ್ನಿಟ್ಟು, ಭಗವಂತನ, ಕುಲದೇವರ, ಇಷ್ಟದೇವರ, ಹಾಗೂ ವಿನಾಯಕನಿಗೆ ಅರ್ಪಿಸಿದ ನಂತರವೇ ಹಂಚಿಕೆ ಮಾಡಲಾಗುತ್ತದೆ. ಇದು ದೇವರ ಆಶೀರ್ವಾದವನ್ನು ಪಡೆಯುವ ಪವಿತ್ರ ಪ್ರಕ್ರಿಯೆಯಾಗಿದೆ. ಈ ಪವಿತ್ರವಾದ ಪತ್ರಿಕೆಯಲ್ಲಿ ಜೀವಂತ ವ್ಯಕ್ತಿಗಳಾದ ವಧು-ವರರ ಫೋಟೋಗಳನ್ನು ಹಾಕುವುದರಿಂದ ನಕಾರಾತ್ಮಕ ಪರಿಣಾಮಗಳು ಉಂಟಾಗಬಹುದು ಎಂದು ಹೇಳಲಾಗಿದೆ.

ವಧು-ವರರ ಫೋಟೋಗಳನ್ನು ಆಮಂತ್ರಣ ಪತ್ರಿಕೆಗಳಲ್ಲಿ ಹಾಕುವುದರಿಂದ ದೃಷ್ಟಿ ದೋಷ ಉಂಟಾಗುವ ಸಾಧ್ಯತೆ ಇದೆ ಎಂದು ವಿಡಿಯೋದಲ್ಲಿ ತಿಳಿಸಲಾಗಿದೆ. ಇದು ಅವರ ಆರೋಗ್ಯದಲ್ಲಿ ಏರುಪೇರು, ವೈವಾಹಿಕ ಜೀವನದಲ್ಲಿ ಮನಸ್ತಾಪಗಳು ಅಥವಾ ಮದುವೆಗೆ ವಿಘ್ನಗಳನ್ನು ತಂದೊಡ್ಡಬಹುದು. ಅನೇಕರಿಗೆ ತಿಳಿದಿಲ್ಲದಿದ್ದರೂ, ಇಂತಹ ಕಾರ್ಯಗಳು ಭವಿಷ್ಯದಲ್ಲಿ ತೊಂದರೆಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಲಾಗಿದೆ. ಡಿಜಿಟಲ್ ಯುಗದಲ್ಲಿ ಪ್ರಚಾರ, ಪ್ರಚಾರ, ಪ್ರಚಾರ ಎಂಬ ಮನೋಭಾವದಿಂದ ಎಲ್ಲವನ್ನೂ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಆದರೆ, ಇಂತಹ ಆತುರದ ನಿರ್ಧಾರಗಳು 100 ವರ್ಷಗಳ ಬಾಳ್ವೆ ನಡೆಸಬೇಕಾದ ದಂಪತಿಯ ಜೀವನದ ಮೇಲೆ ಪರಿಣಾಮ ಬೀರಬಹುದು.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

ಮದುವೆ ಮುಗಿದ ನಂತರ, ಆಮಂತ್ರಣ ಪತ್ರಿಕೆಗಳ ಸ್ಥಿತಿ ಸಾಮಾನ್ಯವಾಗಿ ಗಮನಾರ್ಹವಾಗಿದೆ. ಜನರು ಈ ಪತ್ರಿಕೆಗಳನ್ನು ಕಸದ ಬುಟ್ಟಿಗೆ ಹಾಕಬಹುದು, ಬಿಸಾಡಬಹುದು, ಅಥವಾ ರದ್ದಿ ಕಾಗದದ ಜೊತೆ ಸುಡಲು ಕೊಡಬಹುದು. ವಧು-ವರರ ಫೋಟೋಗಳು ಇರುವ ಪತ್ರಿಕೆಗಳು ಇಂತಹ ಪರಿಸ್ಥಿತಿಗಳನ್ನು ಎದುರಿಸಿದಾಗ, ಅದು ವಧು-ವರರ ಜೀವನಕ್ಕೆ ಸಂಕಷ್ಟ ತರುತ್ತದೆ ಎಂದು ಹೇಳಲಾಗಿದೆ. ದುಡ್ಡಿದೆ, ಅಧಿಕಾರವಿದೆ ಎಂದು ದರ್ಪದಿಂದ ಅಥವಾ ಪ್ರಚಾರಕ್ಕಾಗಿ ಇಂತಹ ಕೆಲಸಗಳನ್ನು ಮಾಡಬಾರದು. ಯಾವುದೇ ಕಾರಣಕ್ಕೂ ವಿವಾಹದ ಆಮಂತ್ರಣ ಪತ್ರಿಕೆಗಳಲ್ಲಿ ದೇವರ ಫೋಟೋಗಳನ್ನು ಹೊರತುಪಡಿಸಿ, ಬೇರೆ ಯಾವುದೇ ಜೀವಂತ ವ್ಯಕ್ತಿಗಳ ಫೋಟೋಗಳನ್ನು ಹಾಕಬಾರದು ಎಂದು ಸ್ಪಷ್ಟಪಡಿಸಲಾಗಿದೆ. ಇದು ಶುಭವಲ್ಲ ಮತ್ತು ಭವಿಷ್ಯದಲ್ಲಿ ವ್ಯಕ್ತಿಗಳಿಗೆ ಅನೇಕ ಸಂಕಷ್ಟಗಳನ್ನು ತಂದೊಡ್ಡಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:29 am, Thu, 28 May 26

Source link

ಮಹೇಶ್ ಬಾಬು ಕಾಲೇಜು ಐಡಿ ಕಾರ್ಡ್​ ಹಿಂದಿನ ಅಸಲಿಯತ್ತೇನು?

ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಕ್ರೇಜ್ ಬಗ್ಗೆ ಎಲ್ಲರಿಗೂ ಗೊತ್ತು. ವಯಸ್ಸಾಗುತ್ತಿದ್ದರೂ ಮತ್ತಷ್ಟು ಹ್ಯಾಂಡ್‌ಸಮ್ ಆಗಿ ಕಾಣುವ ಮಹೇಶ್, ಪ್ರಸ್ತುತ ಸ್ಟಾರ್ ನಿರ್ದೇಶಕ ರಾಜಮೌಳಿ ಅವರ ಬಹುನಿರೀಕ್ಷಿತ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ಹಾಗೂ ಮಲಯಾಳಂ ಸೂಪರ್‌ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಖಳನಾಯಕನಾಗಿ ನಟಿಸುತ್ತಿದ್ದಾರೆ. ಭರದಿಂದ ಚಿತ್ರೀಕರಣ ನಡೆಯುತ್ತಿರುವ ಈ ಸಿನಿಮಾ ಮುಂದಿನ ವರ್ಷದ ಬೇಸಿಗೆಯಲ್ಲಿ ತೆರೆಗೆ ಬರಲಿದೆ. ಈ ನಡುವೆ ಮಹೇಶ್ ಬಾಬು ಅವರ ಕಾಲೇಜು ದಿನಗಳ ಅಪರೂಪದ ಐಡಿ ಕಾರ್ಡ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಮಹೇಶ್ ಬಾಬು ಅವರು ಚೆನ್ನೈನ ಪ್ರಸಿದ್ಧ ‘ಲೊಯೊಲಾ ಕಾಲೇಜಿನಲ್ಲಿ’ ಬಿ.ಕಾಂ ಪದವಿ ವ್ಯಾಸಂಗ ಮಾಡಿದ್ದರು ಎನ್ನಲಾಗಿದ್ದು, ಅದಕ್ಕೆ ಸಂಬಂಧಿಸಿದ ಐಡಿ ಕಾರ್ಡ್ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಇದರಲ್ಲಿ ಅವರ ಪೂರ್ಣ ಹೆಸರು ಘಟ್ಟಮನೇನಿ ಮಹೇಶ್ ಬಾಬು ಎಂದು ಬರೆಯಲಾಗಿದೆ. ಅಲ್ಲದೆ ಐಡಿ ಸಂಖ್ಯೆ LCC/1997/4321, ರೋಲ್ ಸಂಖ್ಯೆ 97-1186 ಹಾಗೂ ಅವರು 1997 ರಿಂದ 2000 ರ ಬ್ಯಾಚ್‌ನಲ್ಲಿ ಓದುತ್ತಿದ್ದರು ಎಂಬ ಮಾಹಿತಿ ಕಾರ್ಡ್‌ನಲ್ಲಿದೆ. ಜುಲೈ 15, 1997 ರಂದು ವಿತರಿಸಲಾದ ಈ ಕಾರ್ಡ್ ಮೇ 2000 ರವರೆಗೆ ಮಾನ್ಯತೆ ಹೊಂದಿತ್ತು ಎಂದು ತೋರಿಸಲಾಗಿದೆ.

ಈ ಐಡಿ ಕಾರ್ಡ್‌ನಲ್ಲಿ ಮಹೇಶ್ ಬಾಬು ಅವರ ಜನ್ಮ ದಿನಾಂಕ 09-08-1975 ಮತ್ತು ರಕ್ತದ ಗುಂಪು ‘O +ve’ ಎಂದು ನಮೂದಿಸಲಾಗಿದೆ. ವಿಶೇಷವೆಂದರೆ, ಇದರಲ್ಲಿ ಅವರ ಮನೆಯ ವಿಳಾಸದ ಜಾಗದಲ್ಲಿ ಹೈದರಾಬಾದ್‌ನ ‘ಪದ್ಮಾಲಯ ಸ್ಟುಡಿಯೋಸ್, ರಸ್ತೆ ಸಂಖ್ಯೆ 12, ಬಂಜಾರ ಹಿಲ್ಸ್’ ಎಂದು ಮುದ್ರಿಸಲಾಗಿದೆ. ಅಂದಿನ ಪ್ರಾಂಶುಪಾಲರಾದ ಡಾ. ಎಫ್. ಆಂಡ್ರ್ಯೂ ಅವರ ಸಹಿಯೊಂದಿಗೆ ಮಹೇಶ್ ಬಾಬು ಅವರ ಸಹಿ ಮತ್ತು ಅವರ ಹಳೆಯ ಭಾವಚಿತ್ರವೂ ಈ ಗುರುತಿನ ಚೀಟಿಯಲ್ಲಿ ಕಂಡುಬಂದಿದೆ.

ಇದನ್ನೂ ಓದಿ:  ಯಶ್ ‘ರಾಮಾಯಣ’ ಟೀಸರ್ ನೋಡಿ ಮಹೇಶ್ ಬಾಬು ಅಭಿಮಾನಿಗಳಿಗೆ ಹೊಟ್ಟೆಕಿಚ್ಚು?

ಆದರೆ ಈ ವೈರಲ್ ಐಡಿ ಕಾರ್ಡ್ ಬಗ್ಗೆ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಕಾಲೇಜು ದಿನಗಳಲ್ಲೂ ಮಹೇಶ್ ಬಾಬು ತುಂಬಾ ಕ್ಯೂಟ್ ಆಗಿದ್ದರು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದರೆ, ಇನ್ನು ಹಲವರು ಇದು ಅಸಲಿ ಕಾರ್ಡ್ ಅಲ್ಲ, ಬದಲಿಗೆ ಎಐ ಇಂದ ಮಾಡಿರುವ ನಕಲಿ ಕಾರ್ಡ್ ಎಂದು ವಾದಿಸುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಇದು ನಕಲಿ ಐಡಿ ಕಾರ್ಡ್ ಎಂಬುದು ಸ್ಪಷ್ಟವಾಗಿದೆ. ಏಕೆಂದರೆ ಇದೇ ಮಾದರಿಯ ವಿನ್ಯಾಸವನ್ನು ಹೊಂದಿರುವ ಬೇರೆ ಬೇರೆ ಸ್ಟಾರ್ ನಟರ ಕಾಲೇಜು ಐಡಿ ಕಾರ್ಡ್‌ಗಳು ಕೂಡ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version