ಕೇಂದ್ರದ 4,500 ಎಲೆಕ್ಟ್ರಿಕ್ ಬಸ್‌ಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿಲ್ಲವೇಕೆ: ಕಾರಣ ಬಿಚ್ಚಿಟ್ಟ ತೇಜಸ್ವಿ ಸೂರ್ಯ – Kannada News | Karnataka Yet to Clear Centre’s 4,500 Electric Bus Proposal; Tejasvi Surya Reveals Why

ಬೆಂಗಳೂರು, ಜೂನ್​ 29: ನಗರದ ಬಿಎಂಟಿಸಿ ಬಸ್ (BMTC Bus) ಪ್ರಯಾಣಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ‘ಪಿಎಂ ಇ-ಡ್ರೈವ್’ ಯೋಜನೆಯಡಿ ಬರೋಬ್ಬರಿ 4,500 ಎಲೆಕ್ಟ್ರಿಕ್ ಬಸ್‌ಗಳನ್ನು ಮಂಜೂರು ಮಾಡಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಇದಕ್ಕೆ ಕ್ಯಾಬಿನೆಟ್​ನಲ್ಲಿ ಇನ್ನೂ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ. ಸರ್ಕಾರದ ಈ ನಿಲುವು ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejasvi Surya) ಖುದ್ದು ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕತ್ರಿಗುಪ್ಪೆಯಿಂದ ಬನಶಂಕರಿವರೆಗೆ ಬಸ್‌ನಲ್ಲಿ ಸಾಗಿದ ಸಂಸದ, ಈ ವೇಳೆ ಪ್ರಯಾಣಿಕರ ಅಳಲು ಆಲಿಸಿದರು.

ಪ್ರಯಾಣಿಕರ ಸಮಸ್ಯೆ ಆಲಿಸಿದ ಸಂಸದ ತೇಜಸ್ವಿ ಸೂರ್ಯ

ಕೇಂದ್ರ ಸರ್ಕಾರದಿಂದ ಪಿಎಂ ಇ-ಡ್ರೈವ್ ಯೋಜನೆಯಡಿ ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್‌ಗಳ
ಮಂಜೂರಾಗಿದೆ. ಆದರೆ ರಾಜ್ಯ ಸರ್ಕಾರ ಕ್ಯಾಬಿನೆಟ್​ನಲ್ಲಿ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿಲ್ಲ ಎನ್ನಲಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ಸಮಸ್ಯೆ ಎದುರಾಗುತ್ತಿದೆ. ಬಸ್​ಗಳು ಸಾಲುತ್ತಿಲ್ಲ ಎಂದು ಈ ಬಗ್ಗೆ ಖುದ್ದಾಗಿ ಪ್ರಯಾಣಿಕರ ಸಮಸ್ಯೆಯನ್ನು ಕೇಳಲು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಕತ್ರಿಗುಪ್ಪೆಯಿಂದ ಬನಶಂಕರಿ ವರೆಗೆ ಪ್ರಯಾಣ ಮಾಡಿದರು. ಈ ವೇಳೆ ಪ್ರಯಾಣಿಕರ ಸಮಸ್ಯೆಗಳನ್ನು ಆಲಿಸಿದರು.

ಬೇಸರ ವ್ಯಕ್ತಪಡಿಸಿದ ಮಹಿಳಾ ಪ್ರಯಾಣಿಕರು

ಈ ವೇಳೆ ಮಾತನಾಡಿದ ಮಹಿಳಾ ಪ್ರಯಾಣಿಕರಾದ ಚೈತ್ರಾ, ಸರಿಯಾದ ಸಮಯಕ್ಕೆ ಬಿಎಂಟಿಸಿ ಬಸ್​ಗಳು ಬರುತ್ತಿಲ್ಲ. ಇದರಿಂದ ಸರಿಯಾದ ಸಮಯಕ್ಕೆ ಕೆಲಸಕ್ಕೆ ಹೋಗಲು ಆಗುತ್ತಿಲ್ಲ. ಬಂದರೆ ಒಮ್ಮೆಲೆ ನಾಲ್ಕೈದು ಬಸ್​​ಗಳು ಒಟ್ಟಿಗೆ ಬರುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬೆಂಗಳೂರಿಗೆ ಕೇಂದ್ರ ನೀಡುವ 4,500 ಎಲೆಕ್ಟ್ರಿಕ್ ಬಸ್‌ಗಳಿಗೆ ರಾಜ್ಯದಿಂದ ಸಿಗ್ತಿಲ್ಲ ಅನುಮೋದನೆ: ತೇಜಸ್ವಿ ಸೂರ್ಯ ಗಂಭೀರ ಆರೋಪ

ಶಕ್ತಿ ಯೋಜನೆ ಆರಂಭವಾದ ಮೇಲೆ ಬಿಎಂಟಿಸಿಯಲ್ಲಿ ಪ್ರತಿದಿನ 45 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ. ಆದರೆ ಸದ್ಯ ಬಿಎಂಟಿಸಿಯಲ್ಲಿ 6800 ಸಾವಿರ ಬಸ್​ಗಳು ಮಾತ್ರ ಇದ್ದು, ಅವು ಸಾಲುತ್ತಿಲ್ಲ. ಕೇಂದ್ರ ಸರ್ಕಾರದ 4500 ಎಲೆಕ್ಟ್ರಿಕ್ ಬಸ್​ಗಳ ಪೈಕಿ 4100 ನಾರ್ಮಲ್ ಎಲೆಕ್ಟ್ರಿಕ್ ಬಸ್​​ಗಳು, 400 ಎಸಿ ಎಲೆಕ್ಟ್ರಿಕ್ ಬಸ್​ಗಳನ್ನು ನೀಡಲು ತೀರ್ಮಾನಿಸಿದೆ ಅಂತೆ.

ಸಂಸದ ತೇಜಸ್ವಿ ಸೂರ್ಯ ಹೇಳಿದ್ದಿಷ್ಟು 

ಇನ್ನು ಈ ಕುರಿತಾಗಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಈಗಾಗಲೇ ಕೇಂದ್ರ ಸರ್ಕಾರ ಬಿಎಂಟಿಸಿಗೆ 4500 ಬಸ್​ಗಳನ್ನು ನೀಡಿದೆ. ಆದರೆ ರಾಜ್ಯ ಸರ್ಕಾರ ಕ್ಯಾಬಿನೆಟ್​ನಲ್ಲಿ ಇದಕ್ಕೆ ಇನ್ನು ಅನುಮತಿ ನೀಡಿಲ್ಲ. ಈ ಬಸ್​​ಗಳನ್ನು ತೆಗೆದುಕೊಳ್ಳಲು ರಾಜ್ಯ ಸರ್ಕಾರವು ಒಂದಷ್ಟು ಹಣ ಹಾಕಬೇಕಿದೆ, ಹಾಗಾಗಿ ರಾಜ್ಯ ಸರ್ಕಾರ ಅನುಮೋದನೆ ನೀಡುತ್ತಿಲ್ಲ ಎಂದು ಹೇಳಿದರು.

ಈ ವಿಚಾರದಲ್ಲಿ ಈಗಾಗಲೇ ನಾನು ಸಂಸತ್ತಿನಲ್ಲಿ ಮಾತಾಡಿದ್ದೇನೆ. ಇದಕ್ಕೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಉತ್ತರ ನೀಡಿದರು. ರಾಜ್ಯ ಸರ್ಕಾರಕ್ಕೆ ಟನಲ್ ರೋಡ್​ಗಾಗಿ ಸಾವಿರಾರು ಕೋಟಿ ರೂ ಖರ್ಚು ಮಾಡಲು ಹಣವಿದೆ. ಆದರೆ ಸಾರ್ವಜನಿಕ ಸಾರಿಗೆಗೆ ಖರ್ಚು ಮಾಡಲು ಹಣವಿಲ್ವ? ರಾಜ್ಯ ಸರ್ಕಾರ ಐಷಾರಾಮಿ ಕಾರು ಮಾಲೀಕರಿಗೆ ಮಾತ್ರ. ಬಿಎಂಟಿಸಿ, ಮೆಟ್ರೋದಲ್ಲಿ ಪ್ರಯಾಣ ಮಾಡುವವರಿಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Free Bus Pass For All Students: ಇಂದಿನಿಂದ ಫ್ರೀ ಬಸ್ ಪಾಸ್​ಗೆ ಅರ್ಜಿ ಸಲ್ಲಿಕೆ

ಒಟ್ಟಿನಲ್ಲಿ ಕೇಂದ್ರ ಸರ್ಕಾರ 4500 ಎಲೆಕ್ಟ್ರಿಕ್ ಬಸ್​ಗಳನ್ನು ನೀಡಲು ಮುಂದಾಗಿದೆ. ಆದರೆ ತೇಜಸ್ವಿ ಸೂರ್ಯ ಆರೋಪ ಮಾಡುತ್ತಿರುವಂತೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿಲ್ಲವಂತೆ. ಒಂದು ವೇಳೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದರೆ, ಪ್ರಯಾಣಿಕರಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಆಗುವುದರಲ್ಲಿ ನೋ ಡೌಟ್.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕಾಶ್ಮೀರದ ಸರಳಾ ಭಟ್ ಅತ್ಯಾಚಾರ, ಕೊಲೆ ಪ್ರಕರಣ; 36 ವರ್ಷದ ಬಳಿಕ ಯಾಸಿನ್ ಮಲಿಕ್ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ! – Kannada News | Yasin Malik named in chargesheet 36 years after in Kashmiri Pandit nurse Sarla Bhat rape and murder

ಶ್ರೀನಗರ, ಜೂನ್ 29: ಕಾಶ್ಮೀರ ಕಣಿವೆಯಲ್ಲಿ ಜಿಹಾದಿ ಭಯೋತ್ಪಾದನೆ ತೀವ್ರಗೊಂಡಿದ್ದ ಸಂದರ್ಭದಲ್ಲಿ ನಡೆದಿದ್ದ ಅತ್ಯಂತ ಭೀಕರ ಹಾಗೂ ಆಘಾತಕಾರಿ ಅಪರಾಧವೊಂದಕ್ಕೆ ಸಂಬಂಧಿಸಿದಂತೆ ದಶಕಗಳ ನಂತರ ಮಹತ್ವದ ಕಾನೂನು ಬೆಳವಣಿಗೆಯಾಗಿದೆ. ಕಾಶ್ಮೀರಿ ಪಂಡಿತ್ ಸಮುದಾಯದ ನರ್ಸ್ ಸರಳಾ ಭಟ್ ಅವರ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 36 ವರ್ಷಗಳ ಬಳಿಕ ಇದೀಗ ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ (JKLF) ಮುಖ್ಯಸ್ಥ ಯಾಸಿನ್ ಮಲಿಕ್ (Yasin Malik) ವಿರುದ್ಧ ಜಮ್ಮುವಿನ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಕೆಯಾಗಿದೆ!.

ಏನಿದು ಘಟನೆ?:

1990ರ ಏಪ್ರಿಲ್ ತಿಂಗಳಲ್ಲಿ ಶ್ರೀನಗರದ ಸೌರಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (SKIMS) ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಸರಳಾ ಭಟ್ ಅವರನ್ನು ಭಯೋತ್ಪಾದಕರು ಅಪಹರಿಸಿದ್ದರು. ಆಸ್ಪತ್ರೆಯಲ್ಲಿದ್ದ ಕೆಲವು ಸಹೋದ್ಯೋಗಿಗಳಿಂದಲೇ ಭಯೋತ್ಪಾದಕರಿಗೆ ಇವರ ಬಗ್ಗೆ ಮಾಹಿತಿ ಸಿಕ್ಕಿತ್ತು ಎನ್ನಲಾಗಿದೆ. ಅಪಹರಣದ ನಂತರ ಸರಳಾ ಭಟ್ ಅವರನ್ನು ಸುದೀರ್ಘ ಕಾಲ ಕೂಡಿಟ್ಟು, ಅವರ ಮೇಲೆ ಅಮಾನುಷವಾಗಿ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ನಂತರ ಏಪ್ರಿಲ್ 19, 1990ರಂದು ಅವರನ್ನು ಗುಂಡಿಕ್ಕಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿ, ಶವವನ್ನು ರಸ್ತೆಗೆ ಎಸೆಯಲಾಗಿತ್ತು. ಕಾಶ್ಮೀರಿ ಪಂಡಿತರನ್ನು ಕಣಿವೆಯಿಂದ ಓಡಿಸಲು ನಡೆದ ವ್ಯವಸ್ಥಿತ ಹಿಂಸಾಚಾರಗಳಲ್ಲಿ ಈ ಘಟನೆಯೂ ಒಂದಾಗಿತ್ತು.

ಇದನ್ನೂ ಓದಿ: ನೀವು ಅಸಲಿ ಕಾಶ್ಮೀರಿಗಳಲ್ಲ; ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿಕೆಗೆ ಪಿಒಕೆಯಲ್ಲಿ ಭಾರಿ ಆಕ್ರೋಶ

ಈ ಘಟನೆ ನಡೆದ ಸಮಯದಲ್ಲಿ ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದರಿಂದ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ಪ್ರಕರಣದ ತನಿಖೆ ದಶಕಗಳ ಕಾಲ ನೆನೆಗುದಿಗೆ ಬಿದ್ದಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕಾಶ್ಮೀರದಲ್ಲಿ ನಡೆದ ಹಳೆಯ ಭಯೋತ್ಪಾದನಾ ಪ್ರಕರಣಗಳ ಮರುಸಂಘಟನೆ ಮತ್ತು ತನಿಖೆ ತೀವ್ರಗೊಂಡ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರ ರಾಜ್ಯ ತನಿಖಾ ಸಂಸ್ಥೆಯು (SIA) ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಯಾಸಿನ್ ಮಲಿಕ್ ಮತ್ತು ಆತನ ಸಹಚರರ ವಿರುದ್ಧ ಅಧಿಕೃತವಾಗಿ ಚಾರ್ಜ್‌ಶೀಟ್ ದಾಖಲಿಸಿದೆ.

ಇದನ್ನೂ ಓದಿ: ಪಿಒಕೆಯಲ್ಲಿ ಕಾಶ್ಮೀರಿಗಳ ಹತ್ಯಾಕಾಂಡಕ್ಕೆ ಪಾಕಿಸ್ತಾನವೇ ಹೊಣೆ; ಭಾರತ ಖಂಡನೆ

ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಯಾಸಿನ್ ಮಲಿಕ್ ಈಗಾಗಲೇ ದೋಷಿ ಎಂದು ಸಾಬೀತಾಗಿದ್ದು, ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಇದರೊಂದಿಗೆ 1990 ರಲ್ಲಿ ಭಾರತೀಯ ವಾಯುಸೇನೆಯ ಅಧಿಕಾರಿಗಳ ಹತ್ಯೆ ಮತ್ತು ಅಂದಿನ ಕೇಂದ್ರ ಗೃಹ ಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬಿಯಾ ಸಯೀದ್ ಅಪಹರಣ ಪ್ರಕರಣಗಳಲ್ಲೂ ಈತ ಪ್ರಮುಖ ಆರೋಪಿಯಾಗಿದ್ದಾನೆ. ಈಗ ಸರಳಾ ಭಟ್ ಪ್ರಕರಣದ ಚಾರ್ಜ್‌ಶೀಟ್ ಸಲ್ಲಿಕೆಯಾಗಿರುವುದು ಯಾಸಿನ್ ಮಲಿಕ್​​ಗೆ ಕಾನೂನು ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರಿ ಆಸ್ಪತ್ರೆಯ ವೈದ್ಯರ ಕಳ್ಳಾಟಕ್​ಕೆ ಬ್ರೇಕ್: ಇನ್ಮುಂದೆ ಸಿಬ್ಬಂದಿ ಹಾಜರತಿಗೆ ವೇತನ ಲಿಂಕ್! – Kannada News | Karnataka Health Department To Plan introduce facial attendance for Doctors And Staff

ಬೆಂಗಳೂರು, (ಜೂನ್ 29): ಸರ್ಕಾರಿ ಆಸ್ಪತ್ರೆಯ ವೈದ್ಯರ Governmnet Hospital Doctor)  ಕಳ್ಳಾಟ ಹೆಚ್ಚಾಗಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಡಾಕ್ಟರ್​​​ಗಳು ಆಸ್ಪತ್ರೆಯಲ್ಲೇ ಇರಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ಕರ್ನಾಟಕ ಆರೋಗ್ಯ ಇಲಾಖೆ (Karnataka Health Deparment), ವೈದ್ಯರು ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಆರೋಗ್ಯ ಇಲಾಖೆ ಹೊಸ ರೂಲ್ಸ್ ಜಾರಿಗೆ ಮುಂದಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲವು ವೈದ್ಯರು ಆಸ್ಪತ್ರೆಗೆ ಬಂದು ಅಟೆಂಡೆನ್ಸ್  (facial attendance) ಪಂಚ್ ಮಾಡಿ ಹೋಗುತ್ತಾರೆ, ಹೀಗೆ ಕಳ್ಳಾಟವಾಡುವ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಇನ್ಮುಂದೆ ಬೀಳಲಿದೆ ಬ್ರೇಕ್. ಹೌದು…ಮೊಬೈಲ್ ನಲ್ಲಿ ಫೇಸಿಯಲ್ ಅಟೆಂಡೆನ್ಸ್ ಸ್ಕ್ರೀನಿಂಗ್ ಆ್ಯಪ್ ಮೂಲಕ ವೈದ್ಯರ ಟ್ರ್ಯಾಕಿಂಗ್ ಮಾಡಲು ಪ್ಲ್ಯಾನ್ ಮಾಡಿದೆ.

ಸರ್ಕಾರಿ ವೈದ್ಯರಿಗೆ ಬಂತು ಫೇಸಿಯಲ್ ಅಟೆಂಡೆನ್ಸ್

ಇತ್ತೀಚೆಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದು ನೆಟ್ಟಗಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ. ವೈದ್ಯರು ಸರಿಯಾದ ಟೈಮ್ ಗೆ ಬರೋದಿಲ್ಲ. ಇನ್ನು ಕೆಲವು ವೈದ್ಯರು ಹಾಗೂ ಸಿಬ್ಬಂದಿ ಆಸ್ಪತ್ರೆಗೆ ಬಂದು ಬಯೋಮೇಟ್ರಿಕ್ ಪಂಚ್ ಮಾಡಿ ಬೇರೆ ಆಸ್ಪತ್ರೆಗೆ ಹೋಗುವುದು. ಡ್ಯೂಟಿ ಬಿಟ್ಟು ಬೇರೆ ಪರ್ಸನಲ್ ಕೆಲಸದಲ್ಲಿ ಭಾಗಿಯಾಗುವ ಆರೋಪ ಕೇಳಿ ಬಂದಿದೆ. ಹೀಗಾಗಿ ಆರೋಗ್ಯ ಇಲಾಖೆ, ಫೇಸಿಯಲ್ ಅಟೆಂಡೆನ್ಸ್ ಎನ್ನುವ ಸರ್ಜಿಕಲ್ ಸ್ಟ್ರೈಕ್ ಗೆ ಮುಂದಾಗಿದೆ. ಆರೋಗ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಆರೋಗ್ಯ ಸೌಧ ಸಿಬ್ಬಂದಿ, ಆರೋಗ್ಯ ಕೇಂದ್ರಗಳು, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಫೇಸಿಯಲ್ ಅಟೆಂಡೆನ್ಸ್ ಜಾರಿಗೆ ಮುಂದಾಗಿದೆ.

ಇದನ್ನೂ ಓದಿ: ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್: ಬಸ್ ಪಾಸ್ ಶುಲ್ಕ ಮರುಪಾವತಿಗೆ ಅವಕಾಶ; ಅರ್ಜಿ ಸಲ್ಲಿಸುವುದು ಹೇಗೆ?

ಹಾಜರತಿಗೆ ಲಿಂಕ್ ಆಗಲಿದೆ ಸಿಬ್ಬಂದಿ ವೇತನ!

ಮೊಬೈಲ್ ನಲ್ಲಿ ಫೇಸಿಯಲ್ ಅಟೆಂಡೆನ್ಸ್ ಸ್ಕ್ರೀನಿಂಗ್ ಆ್ಯಪ್ ಮೂಲಕ ಟ್ರ್ಯಾಕಿಂಗ್ ಮಾಡಲು ಮುಂದಾಗಿದೆ. ವೈದ್ಯರು ಡ್ಯೂಟಿ ಟೈಮ್ ನಲ್ಲಿ ನಿಗಧಿತ ಆಸ್ಪತ್ರೆ ವ್ಯಾಪ್ತಿಯಿಂದ ಹೊರ ಹೋದ್ರೆ ಮಾಹಿತಿ ಸಿಗಲಿದೆ. ಜೊತೆಗೆ ತಡವಾಗಿ ಕರ್ತವ್ಯಕ್ಕೆ ಬಂದ್ರೆ ಕೂಡಾ ಮಾಹಿತಿ ಸಿಗಲಿದ್ದು, ಇತಂಹ ವೈದ್ಯರ ವಿರುದ್ಧ ಕಾನೂನು ಶಿಸ್ತು ಕ್ರಮದ ಅಸ್ತ್ರ ಪ್ರಯೋಗಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಜೊತೆಗೆ ಸಿಬ್ಬಂದಿ ಹಾಜರಾತಿ ವೇತನಕ್ಕೆ ಲಿಂಕ್ ಆಗಲಿದ್ದು ಕೆಲಸಕ್ಕೆ ತಕ್ಕ ವೇತನ ನೀಡುವ ವ್ಯವಸ್ಥೆ ಜಾರಿಗೆ ತರಲು ತೀರ್ಮಾನಿಸಲಾಗಿದೆ.

ಒಟ್ನಲ್ಲಿ ಸಿಎಂ ಡಿಕೆ ಶಿವಕುಮಾರ್ ಸಿಎಂ ಆಗ್ತೀದ್ದಂತೆ ರಾಜ್ಯದ ಎಲ್ಲ ಸರ್ಕಾರಿ ಸಿಬ್ಬಂದಿಗೆ ಸರಿಯಾದ ಟೈಮ್ ಗೆ ಕಚೇರಿಗೆ ಬರುವಂತೆ ಎಚ್ಚರಿಕೆ ನೀಡಿದ್ದು,  ಇದರ ಬೆನ್ನಲ್ಲೇ  ಆರೋಗ್ಯ ಇಲಾಖೆ ಸಿಬ್ಬಂದಿಗೂ GPS ಬೇಸ್ಡ್ ಫೇಶಿಯಲ್ ಅಟೆಂಡೆನ್ ಪರಿಚಯಿಸಲು ಮುಂದಾಗಿದೆ. ಆದ್ರೆ, ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಎಂದು ಕಾದು ನೋಡಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರಲ್ಲಿ ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಸುರೇಶ್‌ಗೆ ಕಹಿ ಅನುಭವ; ಯುವಕನ ವಿಕೃತ ವರ್ತನೆ – Kannada News | Bigg Boss Kannada 8 fame Divya Suresh faces harassment on Kanakapura Road Bengaluru

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಆತಂಕ ಮೂಡುವಂತಹ ಘಟನೆಯೊಂದು ನಡೆದಿದೆ. ಖ್ಯಾತ ರಿಯಾಲಿಟಿ ಶೋ ‘ಬಿಗ್ ಬಾಸ್’ ಕನ್ನಡ ಸೀಸನ್ 8’ ಮಾಜಿ ಸ್ಪರ್ಧಿ ಹಾಗೂ ನಟಿ ದಿವ್ಯಾ ಸುರೇಶ್ (Divya Suresh) ಅವರಿಗೆ ತಡರಾತ್ರಿ ರಸ್ತೆಯಲ್ಲಿ ಹೋಗುವಾಗ ಅಪರಿಚಿತ ಯುವಕನೊಬ್ಬನಿಂದ ಕಹಿ ಅನುಭವ ಎದುರಾಗಿದೆ. ಈ ಘಟನೆಯ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ವಿವರ ನೀಡಿದ್ದಾರೆ.

ಭಾನುವಾರ ತಡರಾತ್ರಿ ನಗರದ ಕನಕಪುರ ರಸ್ತೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ನಟಿ ದಿವ್ಯಾ ಸುರೇಶ್ ಅವರು ತಮ್ಮ ಸಹೋದರಿಯೊಂದಿಗೆ ಕಾರಿನತ್ತ ನಡೆದುಕೊಂಡು ಹೋಗುತ್ತಿದ್ದಾಗ, ಅಪರಿಚಿತ ಯುವಕನೊಬ್ಬ ಇವರನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ. ಅಷ್ಟೇ ಅಲ್ಲದೆ, ಅವರಿಬ್ಬರ ಬಳಿ ಅತ್ಯಂತ ಅಸಭ್ಯವಾಗಿ ವರ್ತಿಸಿ ವಿಕೃತ ಚೇಷ್ಟೆ ತೋರಿದ್ದಾನೆ ಎಂದು ಆರೋಪಿಸಲಾಗಿದೆ.

ಯುವಕನ ಈ ವರ್ತನೆಯಿಂದ ತೀವ್ರ ಭಯಗೊಂಡ ನಟಿ ದಿವ್ಯಾ ಮತ್ತು ಅವರ ಸಹೋದರಿ ತಕ್ಷಣವೇ ಓಡಿಹೋಗಿ ತಮ್ಮ ಕಾರಿನೊಳಗೆ ಕುಳಿತುಕೊಂಡಿದ್ದಾರೆ. ಆದರೆ, ವಿಕೃತಿ ಮೆರೆದ ಆ ಯುವಕ ಅಷ್ಟಕ್ಕೇ ಸುಮ್ಮನಾಗದೆ, ಇವರು ಕಾರಿನೊಳಗೆ ಕುಳಿತಿದ್ದರೂ ಹೊರಗಡೆ ನಿಂತು ಸತತವಾಗಿ ದುರ್ವರ್ತನೆ ತೋರಿದ್ದಾನೆ. ಇಬ್ಬರು ಮಹಿಳೆಯರು ಒಂಟಿಯಾಗಿರುವುದನ್ನು ಕಂಡು ಆತ ಈ ರೀತಿ ಸತಾಯಿಸಿದ್ದಾನೆ ಎನ್ನಲಾಗಿದೆ.

ಇದೇ ವೇಳೆ ಇವರ ಕಿರುಚಾಟ ಹಾಗೂ ಯುವಕನ ಚೇಷ್ಟೆಯನ್ನು ಗಮನಿಸಿದ ಸಾರ್ವಜನಿಕರು ಮತ್ತು ಸ್ಥಳೀಯರು ತಕ್ಷಣವೇ ನಟಿಯ ನೆರವಿಗೆ ಧಾವಿಸಿದ್ದಾರೆ. ಸ್ಥಳದಲ್ಲಿದ್ದ ಜನರು ಆ ಅಪರಿಚಿತ ಯುವಕನನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಜನರ ಆಕ್ರೋಶಕ್ಕೆ ಹೆದರಿದ ಆತ ತಕ್ಷಣವೇ ಘಟನಾ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ವಿಡಿಯೋವನ್ನು ದಿವ್ಯಾ ಸುರೇಶ್ ಅವರು ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಅರವಿಂದ್ ಬೋಳಾರ್, ಶ್ರೀಹನ್‌ ದೀಪಕ್, ದಿವ್ಯಾ ಸುರೇಶ್ ಹೊಸ ಸಿನಿಮಾ ‘ಕೆಂಪು ಹಳದಿ ಹಸಿರು’

ಸದ್ಯ ಈ ಕಹಿ ಘಟನೆಯ ಕುರಿತು ದಿವ್ಯಾ ಸುರೇಶ್ ಅವರು ಪೊಲೀಸರಿಗೆ ಯಾವುದೇ ಅಧಿಕೃತ ದೂರನ್ನು ನೀಡಿಲ್ಲ. ಆದರೆ, ತಮಗೆ ಎದುರಾದ ಈ ಭೀಕರ ಹಾಗೂ ಕಹಿ ಅನುಭವವನ್ನು ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಹಾಗೂ ಅಭಿಮಾನಿಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ನಗರದಲ್ಲಿ ಮಹಿಳೆಯರ ರಕ್ಷಣೆ ಎಲ್ಲಿದೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬರಗಾಲದ ಸೂಚನೆ ಕೊಡುತ್ತಾ ನೇರಳೆ ಹಣ್ಣು? ಈ ವಿಚಿತ್ರ ನಂಬಿಕೆಯ ಅಸಲಿಯತ್ತು ಏನು? – Kannada News | Jamun Harvest Defies Drought Myth: Farmers Earn Profits Despite Monsoon Challenges

ಕೋಲಾರ, ಜೂನ್​​ 29: ಹಳ್ಳಿಗಳಲ್ಲಿ ಇಂದಿಗೂ ಪ್ರಕೃತಿಯ ಮುನ್ಸೂಚನೆಗಳನ್ನ ಕೆಲವು ಹಣ್ಣು, ಗಿಡಮರಗಳ ಫಸಲನ್ನು ನೋಡಿ ಅಂದಾಜಿಸುವ ಪದ್ಧತಿ ಇದೆ. ಅದರಲ್ಲೂ ವಿಶೇಷವಾಗಿ, ಜಂಬು ನೇರಳೆ (Jamun fruit) ಹಣ್ಣಿನ ಫಸಲು ಆ ವರ್ಷದ ಮಳೆ (Rain), ಬೆಳೆ ಮತ್ತು ಬರಗಾಲವನ್ನು ನಿರ್ಧರಿಸುತ್ತದೆ ಎನ್ನುವ ಬಲವಾದ ನಂಬಿಕೆ ಗ್ರಾಮೀಣ ಭಾಗದಲ್ಲಿದೆ. ಸದ್ಯ ಈ ವರ್ಷ ನೇರಳೆ ಹಣ್ಣಿನ ಫಸಲು ಯಥೇಚ್ಛವಾಗಿ ಬಂದಿದ್ದು, ಹೀಗಾಗಿ ಎಲ್ಲೆಡೆ ಬರಗಾಲ ಆವರಿಸುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಎಕರೆಗಟ್ಟಲೆ ಪ್ರದೇಶದಲ್ಲಿ ನೇರಳೆ ಹಣ್ಣು ಕೃಷಿ

ಕೋಲಾರ ಅಂದರೆ ನಮಗೆ ಥಟ್​ ಅಂತ ನೆನಪಿಗೆ ಬರುವುದು ಮಾವಿನ ತವರು, ಟೊಮ್ಯಾಟೊ, ರೇಷ್ಮೆ ಹಾಗೂ ಹಾಲು ಉತ್ಪಾದನೆಗೆ ಪ್ರಸಿದ್ಧಿ ಪಡೆದ ಜಿಲ್ಲೆ. ಆದರೆ ಈ ಚಿನ್ನದ ನಾಡಿನಲ್ಲಿ ಪ್ರಸಿದ್ದಿಗಳ ಸಾಲಿಗೆ ಮತ್ತೊಂದು ಹೊಸ ಸೇರ್ಪಡೆ ಅದು ನೇರಳೆ ಹಣ್ಣು. ಕೋಲಾರ ಜಿಲ್ಲೆಯಲ್ಲಿ ಕೇವಲ ಬಾರ್ಡರ್​ ಕ್ರಾಪ್​ ಆಗಿ ಬೆಳೆಯುತ್ತಿದ್ದ ನೇರಳೆ ಹಣ್ಣನ್ನು ಈಗ ರೈತರು ತೋಟಗಳಲ್ಲಿ ಎಕರೆಗಟ್ಟಲೆ ಪ್ರದೇಶದಲ್ಲಿ ಒಣ ಬೇಸಾಯ ವಿಧಾನದಲ್ಲಿ ಬೆಳೆಯಲು ಆರಂಭಿಸಿದ್ದಾರೆ.

ನಿರೀಕ್ಷೆಗೂ ಮೀರಿದ ಆದಾಯ: ರೈತರು ಖುಷ್​

ಈ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ಕೋಲಾರ ಜಿಲ್ಲೆಯಲ್ಲಿ ಸರಿಸುಮಾರು 100 ಎಕರೆಗೂ ಹೆಚ್ಚಿನ​ ಪ್ರದೇಶದಲ್ಲಿ ನೇರಳೆ ಹಣ್ಣನ್ನು ಬೆಳೆಯಲಾಗಿದೆ. ಈ ನಿಟ್ಟಿನಲ್ಲಿ ನೇರಳೆ ಬೆಳೆದಿರುವ ರೈತರು ಈ ವರ್ಷ ತಾವು ನಿರೀಕ್ಷೆಗೂ ಮೀರಿದ ಹೆಚ್ಚಿನ ಆದಾಯ ಪಡೆಯುವ ಮೂಲಕ ಫುಲ್​ ಖುಷಿಯಾಗಿದ್ದಾರೆ. ಅತೀ ಹೆಚ್ಚು ಔಷಧೀಯ ಗುಣ ಹೊಂದಿರುವ ನೇರಳೆ ಹಣ್ಣಿಗೆ ಕೆಜಿಗೆ 200 ರಿಂದ 250 ರೂವರೆಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಮುಂದುವರಿಯಲಿದೆ ಮಳೆ ಅಬ್ಬರ: ಆರೆಂಜ್ ಅಲರ್ಟ್ ಘೋಷಣೆ

ಇನ್ನು ಈ ವರ್ಷದ ಮಳೆ, ಬೆಳೆ, ಬರಗಾಲವನ್ನು ನೇರಳೆ ಫಸಲು ನಿರ್ಧಾರ ಮಾಡುತ್ತದೆ ಎಂದು ಹಳ್ಳಿಕಡೆ ಒಂದು ಮಾತಿದೆ. ಆ ಪ್ರಕಾರ ನೇರಳೆ ಫಸಲು ಚೆನ್ನಾಗಿ ಬಂದರೆ, ಆ ವರ್ಷ ಬರಗಾಲ ಬರುತ್ತದೆ ಎಂದು ಹೇಳುತ್ತಾರೆ. ಸದ್ಯ ಜೂನ್ ಆರಂಭದಿಂದ ಮಳೆ, ಹವಾಮಾನ ಮತ್ತು ನೇರಳೆ ಫಸಲನ್ನು ನೋಡಿದರೆ ಈ ವರ್ಷ ಆ ಮಾತು ನಿಜವಾಗುತ್ತಾ ಎನ್ನುವ ಅನುಮಾನ ಎಲ್ಲರಲ್ಲೂ ಮೂಡುತ್ತಿದೆ.

ಜೂನ್ ತಿಂಗಳು ಮುಗಿದರೂ ಮುಂಗಾರು ಮಳೆ ಬಾರದೆ ಜಿಲ್ಲೆಯಲ್ಲಿ ಇನ್ನು ಬಿತ್ತನೆ ಕಾರ್ಯ ಆರಂಭವಾಗಿಲ್ಲ. ಹಾಗಾಗಿ ಕಾಕತಾಳಿಯವೋ ಇಲ್ಲ, ಗಾದೆ ಮಾತೋ ಗೊತ್ತಿಲ್ಲ. ಆ ಹೇಳಿಕೆಗೂ, ಸದ್ಯದ ಪರಿಸ್ಥಿತಿಗೂ ತಾಳೆಯಾಗುತ್ತಿದೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗಲ್ಲ ಎಂಬ ಮಾಹಿತಿ ಇದೆ. ಹಾಗಾಗಿ ನೇರಳೆ ಹಣ್ಣು ಈ ಬಾರಿ ಉತ್ತಮ ಫಸಲು ಬಂದಿದೆ.

ರೈತರು ಹೇಳುವುದೇನು?

ಇನ್ನು ಮೊದಲು ನಾವು ಪರಿಸರವನ್ನು ಉಳಿಸಿ ಅರಣ್ಯ ಕೃಷಿ ಮಾಡುವುದನ್ನು ಕಲಿಯಬೇಕು. ಹೆಚ್ಚು ಹೆಚ್ಚಾಗಿ ಮರಗಿಡಗಳನ್ನು ಬೆಳೆಸಿದರೆ ಈ ರೀತಿ ಹವಾಮಾನ ವೈಪರೀತ್ಯವಾಗುವುದನ್ನು ತಪ್ಪಿಸಲು ಸಾಧ್ಯ ಎಂದು ಸಾವಯವ ಕೃಷಿಕರಾದ ಚಂದ್ರಶೇಖರ್​ ಅವರ ಮಾತು.

ಇದನ್ನೂ ಓದಿ: ಮಳೆಗಾಲದಲ್ಲಿ ಬರದ ಛಾಯೆ: ಕುರಿಗಳಿಗೆ ಮೇವು, ನೀರು ಸಿಗದೇ ಕುರಿಗಾಹಿಗಳು ಕಂಗಾಲು

ಒಟ್ಟಾರೆ ಇತ್ತೀಚೆಗೆ ಆರೋಗ್ಯ, ಮದುಮೇಹ ಹೀಗೆ ಹಲವು ಕಾರಣಗಳಿಂದ ನೇರಳೆ ಹಣ್ಣಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದ್ದು, ಈ ವರ್ಷ ನಿರೀಕ್ಷೆಗೂ ಮೀರಿದ ಫಸಲು ಕೂಡ ಬಂದಿದೆ. ಅದರಂತೆ ಸದ್ಯದ ಪರಿಸ್ಥಿತಿಯಲ್ಲಿ ಮಳೆ ಕೂಡ ಕೈಕೊಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಮೀಸೆ ತಿರುವಿ, ತೊಡೆ ತಟ್ಟಿ ಪ್ರಚೋದನೆ’ಆರೋಪ: ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದೂರು ದಾಖಲಿಸಿದ ಜೆಡಿಎಸ್ – Kannada News | JDS Files complaint against Chikkaballapur Congress MLA Pradeep Eshwar for provoking behavior

ಚಿಕ್ಕಬಳ್ಳಾಪುರ (ಜೂನ್.29): ಚಿಕ್ಕಬಳ್ಳಾಪುರ (Chikkaballapur) ಶಾಸಕ ಪ್ರದೀಪ್ ಈಶ್ವರ್  (Pradeep Eshwar) ಅವರ ವರ್ತನೆ ಈಗ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿ ಹಾಗೂ ಸಾರ್ವಜನಿಕವಾಗಿ ಮೀಸೆ ತಿರುವಿ, ತೊಡೆ ತಟ್ಟಿ ಕುಸ್ತಿಗೆ ಆಹ್ವಾನ ನೀಡಿದ ಆರೋಪದ ಮೇಲೆ ಶಾಸಕರ ವಿರುದ್ಧ ಜೆಡಿಎಸ್ (JDS) ದೂರು ದಾಖಲಿಸಿದೆ. ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ಮಾತನಾಡಿ, ತೊಡೆ ತಟ್ಟಿ ಸವಾಲೆಸೆದಿದ್ದಾರೆ. ಅಲ್ಲದೇ ಜಾತಿ ಹೆಸರಿನಲ್ಲಿ ವೈಷಮ್ಯ ಮೂಡಿಸುವಂತಹ ಹೇಳಿಕೆ ನೀಡಿ ಪ್ರಚೋದನಕಾರಿ ವರ್ತನೆ ತೋರಿದ್ದಾರೆ ಎಂದು ಜೆಡಿಎಸ್ ಕಾನೂನು ಘಟಕ ದೂರು ನೀಡಿದೆ.

ಚಿಕ್ಕಬಳ್ಳಾಪುರ ಎಸ್ಪಿಗೆ ದೂರು

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಎಸ್.ಪಿ. ಮತ್ತು ಜಿಲ್ಲಾಧ್ಯಕ್ಷ ಬಿ.ಎನ್. ಮುನಿಯಪ್ಪ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಎಸ್‌ಪಿ ಕಚೇರಿಗೆ ತೆರಳಿ ದೂರು ನೀಡಲಾಗಿದೆ. ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಶಾಸಕರು ಸಾರ್ವಜನಿಕವಾಗಿ ಇಂತಹ ಅಸಹ್ಯ ಸನ್ನೆಗಳನ್ನು ಮಾಡುವುದು ಮತ್ತು ಪ್ರಚೋದನೆ ನೀಡುವುದು ಕಾನೂನು ಬಾಹಿರ. ಆದ್ದರಿಂದ ಅವರ ಮೇಲೆ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪ್ರಕರಣ: ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ ನಾಲ್ವರ ಬಂಧನ; ಖರ್ಗೆ ಖಂಡನೆ

ಜೂನ್ 27, 2026 ರಂದು ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಲಾಗಿದ್ದ ‘ಕೆಂಪೇಗೌಡ ಜಯಂತಿ’ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಪ್ರದೀಪ್ ಈಶ್ವರ್ ಅವರನ್ನು ಸಾರ್ವಜನಿಕರು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಕುರಿತಾದ ಹಳೆಯ ಹೇಳಿಕೆಗಳ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಉದ್ವಿಗ್ನಗೊಂಡ ಶಾಸಕರು, ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಅತ್ಯಂತ ಕೀಳು ಮಟ್ಟದಲ್ಲಿ ವರ್ತಿಸಿದ್ದಾರೆ ಎಂಬುದು ಜೆಡಿಎಸ್ ಮುಖಂಡರ ಆರೋಪವಾಗಿದೆ.

ದೂರಿನಲ್ಲಿರುವ ಆರೋಪಗಳೇನು?

ಅವಹೇಳನಕಾರಿ ಮಾತು: ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಅತ್ಯಂತ ಹಗುರವಾಗಿ ಮತ್ತು ಏಕವಚನದಲ್ಲಿ ಮಾತನಾಡಿ ಅವಮಾನಿಸಿದ್ದಾರೆ.

ಪ್ರಚೋದನಕಾರಿ ವರ್ತನೆ: ಸಾರ್ವಜನಿಕವಾಗಿ ಕಾಫಿ ಕುಡಿಯುತ್ತಾ ತೋಳು ಏರಿಸುವುದು, ಮೀಸೆ ತಿರುಗಿಸುವುದು ಹಾಗೂ ಶರ್ಟ್ ಗುಂಡಿ ಬಿಚ್ಚಿ ತೊಡೆ ತಟ್ಟುವ ಮೂಲಕ ಜನರನ್ನು ಕುಸ್ತಿಗೆ ಅಥವಾ ಜಗಳಕ್ಕೆ ಆಹ್ವಾನಿಸುವಂತೆ ರೌಡಿ ವರ್ತನೆ ತೋರಿದ್ದಾರೆ.

ಜಾತಿ ವಿಷಬೀಜ: ತಾನೊಬ್ಬ ‘ಓಬಿಸಿ ಶಾಸಕ’ ಎಂದು ಪದೇ ಪದೇ ಹೇಳಿಕೊಳ್ಳುವ ಮೂಲಕ ಸಮಾಜದಲ್ಲಿ ಜಾತಿಗಳ ನಡುವೆ ವಿಷಬೀಜ ಬಿತ್ತಲು ಪ್ರಯತ್ನಿಸಿದ್ದಾರೆ.

ಮಾಧ್ಯಮಗಳ ಮುಂದೆ ದರ್ಪ: ಮಾಧ್ಯಮಗಳ ಮುಂದೆ ತಮ್ಮ ತಲೆಯ ಕೂದಲು ಕಿತ್ತು ‘ನನ್ನನ್ನು ಏನು ಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದು ಬದ್ಧತೆ ಇಲ್ಲದ ಮಾತುಗಳನ್ನು ಆಡಿ ಸಮಾಜದ ಶಾಂತಿ ಕದಡಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ತೀವ್ರ ವಿರೋಧದ ನಡುವೆಯೂ ಕಾರ್ಯಕ್ರಮ ಮುಗಿಸಿ ಭವನದಿಂದ ಹೊರಬಂದ ಶಾಸಕ ಪ್ರದೀಪ್ ಈಶ್ವರ್, ತಮ್ಮ ಕಾರು ಏರುವ ಮುನ್ನ ವಿರೋಧಿಗಳತ್ತ ನೋಡಿ ತೋಳು ತಟ್ಟಿ, ಮೀಸೆ ತಿರುವಿ ಸವಾಲು ಹಾಕಿದ್ದರು. ಇನ್ನೊಂದೆಡೆ ಮೆರವಣಿಗೆ ವೇಳೆ ಪ್ರದೀಪ್ ಈಶ್ವರ್ ಕಾರಿನ ಮೇಲೆ ವ್ಯಕ್ತಿಯೊಬ್ಬ ಚಪ್ಪಲಿ ಎಸೆದಿದ್ದು, ತಕ್ಷಣವೇ ಆತನನ್ನ ಬಂಧಿಸಿದ್ದರು. ಬಳಿಕ ಪ್ರದೀಪ್ ಈಶ್ವರ್ ಮಾತನಾಡಿ, ನಿನ್ನ ಚೇಲಾಗಳಿಗೆ ಹೆದರೋನು ನಾನು ಅಲ್ಲ . ನಾನೊಬ್ಬ ಒಬಿಸಿ ಶಾಸಕ ಎಂಬ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಅಂತಾ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಖಬರ್ದಾರ್ ಎಂದು ಗುಡುಗಿದ್ದರು.

Source link

ಮತ್ತೆ ಲಾಯರ್ ಪಾತ್ರ ಮಾಡಿದ ಶಿವರಾಜ್​ಕುಮಾರ್; ‘ಮಹಾನ್’ ಸಿನಿಮಾದಲ್ಲಿ ನಟನೆ – Kannada News | Shiva Rajkumar to do special role in Vijay Raghavendra starrer new movie Mahaan

‘ಹ್ಯಾಟ್ರಿಕ್ ಹೀರೋ’ ಶಿವರಾಜ್​ಕುಮಾರ್ (Shiva Rajkumar) ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಹಲವು ಪ್ರಾಜೆಕ್ಟ್​ಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಹೀರೋ ಆಗಿ ನಟಿಸುವುದರ ಜೊತೆಗೆ, ವಿಶೇಷ ಪಾತ್ರಗಳನ್ನು ಕೂಡ ಅವರು ಒಪ್ಪಿಕೊಳ್ಳುತ್ತಿದ್ದಾರೆ. ಈಗ ಅವರು ವಿಜಯ್ ರಾಘವೇಂದ್ರ ನಟನೆಯ ‘ಮಹಾನ್’ (Mahaan) ಸಿನಿಮಾದಲ್ಲಿ ಲಾಯರ್ ಪಾತ್ರ ಮಾಡಿದ್ದಾರೆ ಎಂಬ ವಿಷಯ ಗೊತ್ತಾಗಿದೆ. ಚಿತ್ರತಂಡವೇ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದೆ.

‘ಮಹಾನ್’ ಸಿನಿಮಾವನ್ನು ‘ಆಕಾಶ್ ಪಿಕ್ಚರ್ಸ್’ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ಅವರು ನಿರ್ಮಾಣ ಮಾಡುತ್ತಿದ್ದಾರೆ. ಪಿ.ಸಿ. ಶೇಖರ್ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ‘ಮಹಾನ್’ ಚಿತ್ರದ ವಿಶೇಷವಾದ ಒಂದು ಪಾತ್ರದಲ್ಲಿ ಶಿವರಾಜ್​ಕುಮಾರ್ ಅವರು ನಟಿಸಿದ್ದಾರೆ ಎಂಬ ವಿಷಯ ತಿಳಿದ ಕೂಡಲೇ ಅಭಿಮಾನಿಗಳಿಗೆ ಈ ಸಿನಿಮಾದ ಮೇಲಿನ ನಿರೀಕ್ಷೆ ಜಾಸ್ತಿ ಆಗಿದೆ.

ವಿಜಯ್ ರಾಘವೇಂದ್ರ ಅವರು ‘ಮಹಾನ್’ ಸಿನಿಮಾಗೆ ಹೀರೋ. ಇದೇ ಚಿತ್ರದಲ್ಲಿ ಶಿವಣ್ಣ ಅತಿಥಿ ಪಾತ್ರ ಮಾಡುವ ಮೂಲಕ ಬಹಳ ವರ್ಷಗಳ ನಂತರ ವಿಜಯ್ ರಾಘವೇಂದ್ರ ಜೊತೆ ಅವರು ತೆರೆಹಂಚಿಕೊಂಡಂತೆ ಆಗುತ್ತಿದೆ. ಈ ಮೊದಲು ‘ಭೈರತಿ ರಣಗಲ್’ ಸಿನಿಮಾದಲ್ಲಿ ಶಿವಣ್ಣ ಅವರು ಲಾಯರ್ ಪಾತ್ರ ಮಾಡಿದ್ದರು. ಈಗ ಮತ್ತೆ ‘ಮಹಾನ್’ ಸಿನಿಮಾದಲ್ಲಿ ಅವರು ಕಪ್ಪು ಕೋಟು ಧರಿಸಿದ್ದಾರೆ.

ಇದು ರೈತರ ಕುರಿತಾದ ಕಥೆ ಇರುವ ಸಿನಿಮಾ ಎಂದು ‘ಮಹಾನ್’ ಚಿತ್ರತಂಡ ಹೇಳಿದೆ. ಈ ಬಗ್ಗೆ ನಿರ್ದೇಶಕ ಪಿ.ಸಿ. ಶೇಖರ್ ಅವರು ಮಾತನಾಡಿದ್ದಾರೆ. ‘ಈ ಚಿತ್ರದಲ್ಲಿ ಬರುವ ಪ್ರತಿಯೊಂದು ಪಾತ್ರವೂ ಮುಖ್ಯ ಪಾತ್ರಗಳಾಗಿರುತ್ತದೆ. ಮನೆಯಲ್ಲಿ ನಾವೇನಾದರೂ ತಪ್ಪು ಮಾಡಿದರೆ, ನಮಗೆ ಬುದ್ಧಿ ಹೇಳಲು ತಂದೆ-ತಾಯಿ ಇರುತ್ತಾರೆ. ಅಂಥ ಪರಿಸ್ಥಿತಿ ಸಮಾಜದಲ್ಲಿ ನಿರ್ಮಾಣವಾದಾಗ ಅಲ್ಲಿನ ತೊಂದರೆಗಳನ್ನು ತಿದ್ದಲು ಮಹಾನ್ ವ್ಯಕ್ತಿಯ ಅಗತ್ಯವಿರುತ್ತದೆ. ಅಂತಹ ವ್ಯಕ್ತಿಯ ಪಾತ್ರದಲ್ಲಿ ಶಿವರಾಜ್​ಕುಮಾರ್ ಅಭಿನಯಿಸಿದ್ದಾರೆ’ ಎಂದಿದ್ದಾರೆ ಪಿ.ಸಿ. ಶೇಖರ್.

ಇದನ್ನೂ ಓದಿ: ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಹುಟ್ಟುಹಬ್ಬ ಆಚರಿಸಿದ ಶಿವಣ್ಣ ಫ್ಯಾನ್ಸ್

‘ಚಿತ್ರದಲ್ಲಿ ಈ ಪಾತ್ರ ಬಹಳ ಪ್ರಮುಖವಾದದ್ದು. ಎಲ್ಲಾ ನಿರ್ದೇಶಕರಿಗೂ ಶಿವರಾಜ್​ಕುಮಾರ್ ಅವರ ಸಿನಿಮಾಗೆ ನಿರ್ದೇಶನ ಮಾಡುವ ಆಸೆ ಇರುತ್ತದೆ. ನನಗೂ ಅದು ಬಹಳ ದಿನಗಳ ಹಂಬಲ. ಆ ಆಸೆ ಈಗ ಈಡೇರಿದೆ. ಶಿವರಾಜ್​ಕುಮಾರ್ ಅವರು ನಟಿಸಿರುವುದು ನಿರ್ಮಾಪಕ ಪ್ರಕಾಶ್ ಬುದ್ದೂರು ಅವರಿಗೂ ತುಂಬಾ ಸಂತೋಷ ತಂದಿದೆ. ಇಡೀ ‘ಮಹಾನ್’ ಚಿತ್ರತಂಡದಿಂದ ಶಿವಣ್ಣ ಅವರಿಗೆ ತುಂಬು ಹೃದಯದ ಧನ್ಯವಾದಗಳು’ ಎಂದು ಪಿ.ಸಿ. ಶೇಖರ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಉತ್ತರ ಪ್ರದೇಶದ ಕಾಸಗಂಜ್‌ನಲ್ಲಿ ತರಬೇತಿ ವಿಮಾನ ಪತನ; ಮಹಿಳಾ ಪೈಲಟ್‌ಗೆ ಗಂಭೀರ ಗಾಯ – Kannada News | Trainee aircraft crashes in Uttar Pradesh Kasganj woman pilot critically injured |

ಲಕ್ನೋ, ಜೂನ್ 29: ಉತ್ತರ ಪ್ರದೇಶದ ಕಾಸಗಂಜ್ ಜಿಲ್ಲೆಯ ನಿರ್ಮಾಣ ಹಂತದ ಹೆದ್ದಾರಿಯೊಂದರಲ್ಲಿ ಇಂದು ತರಬೇತಿ ವಿಮಾನವೊಂದು ಪತನಗೊಂಡಿದ್ದು (Plane Crash), ಸ್ಥಳೀಯವಾಗಿ ತೀವ್ರ ಆತಂಕ ಸೃಷ್ಟಿಸಿದೆ. ಈ ಘಟನೆಯು ಕ್ಯಾಂಪುರ್-ಬಹೇರಿಯಾ ಪ್ರದೇಶದ ಬಳಿ ನಡೆದಿದ್ದು, ವಿಮಾನವು ಹಠಾತ್ ಆಗಿ ಕೆಳಗೆ ಬಿದ್ದ ತಕ್ಷಣ ಅಪಘಾತದ ಸ್ಥಳದಲ್ಲಿ ಭಾರಿ ಜನಸಮೂಹ ಜಮಾಯಿಸಿತು. ಪ್ರಾಥಮಿಕ ಮಾಹಿತಿಯ ಪ್ರಕಾರ, ಅಪಘಾತದ ಸಮಯದಲ್ಲಿ ವಿಮಾನದಲ್ಲಿ ಮಹಿಳಾ ತರಬೇತಿ ಪೈಲಟ್ ಮಾತ್ರ ಇದ್ದರು. ಪತನದ ಪರಿಣಾಮವಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಅಪಘಾತ ನಡೆದ ತಕ್ಷಣ ಪೊಲೀಸರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಇಡೀ ಪ್ರದೇಶವನ್ನು ತಮ್ಮ ಸುಪರ್ದಿಗೆ ಪಡೆದರು. ವಿಮಾನದ ಅವಶೇಷಗಳನ್ನು ನೋಡಲು ಅಪಾರ ಸಂಖ್ಯೆಯ ಸ್ಥಳೀಯ ನಿವಾಸಿಗಳು ಜಮಾಯಿಸಿದ್ದರಿಂದ, ಜನಸಮೂಹವನ್ನು ನಿಯಂತ್ರಿಸಲು ಅಧಿಕಾರಿಗಳು ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಾದಾರ್ಪಣೆ ಪಂದ್ಯದ ಮೊದಲ ಎಸೆತದಲ್ಲೇ ಇತಿಹಾಸ ಸೃಷ್ಟಿಸಿದ ಪ್ರಿನ್ಸ್ ಯಾದವ್ – Kannada News | Prince Yadav’s T20 Debut: First Ball Six & Historic Bowling Record vs Ireland

ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ 2-0 ಅಂತರದಲ್ಲಿ ಸೋತಿದೆ. ತಂಡದ ಈ ಸೋಲಿಗೆ ಬ್ಯಾಟ್ಸ್‌ಮನ್​ಗಳ ವೈಫಲ್ಯವೇ ಪ್ರಮುಖ ಕಾರಣವಾಗಿತ್ತು. ಆದಾಗ್ಯೂ ಈ ಸರಣಿಯ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದ ಯುವ ವೇಗಿ ಪ್ರಿನ್ಸ್ ಯಾದವ್ ತಮ್ಮ ಮೊದಲ ಪಂದ್ಯದಲ್ಲೇ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದರು (PC-PTI).

ಐರ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಪ್ರಿನ್ಸ್ ಯಾದವ್ ಅದ್ಭುತ ಬೌಲಿಂಗ್ ಮಾಡಿದರು. ತಮ್ಮ ಖೋಟಾದ 4 ಓವರ್‌ಗಳಲ್ಲಿ ಕೇವಲ 22 ರನ್‌ಗಳನ್ನು ಬಿಟ್ಟುಕೊಟ್ಟ ಪ್ರಿನ್ಸ್ ಪ್ರಮುಖ ಮೂರು ವಿಕೆಟ್‌ಗಳನ್ನು ಪಡೆದರು. ಈ ಮೂಲಕ ಈ ಪಂದ್ಯದಲ್ಲಿ ಭಾರತದ ಅತ್ಯಂತ ಯಶಸ್ವಿ ಬೌಲರ್ ಕೂಡ ಎನಿಸಿಕೊಂಡರು (PC-PTI).

ಇನ್ನು ಈ ಪಂದ್ಯದಲ್ಲಿ ಪ್ರಿನ್ಸ್ ಯಾದವ್​ಗೆ ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ ಮಾಡುವ ಅವಕಾಶವೂ ಸಿಕ್ಕಿತು. ಭಾರತದ ಇನ್ನಿಂಗ್ಸ್​ನ ಕೊನೆಯ ಓವರ್​ನ ಕೊನೆಯ ಎಸೆತದಲ್ಲಿ ಬ್ಯಾಟಿಂಗ್​ಗೆ ಬಂದ ಪ್ರಿನ್ಸ್ ಯಾದವ್ ತಾವು ಎದುರಿಸಿದ ಮೊದಲ ಎಸೆತವನ್ನು ಸಿಕ್ಸರ್​ಗಟ್ಟಿದರು. ಆದಾಗ್ಯೂ ಟೀಂ ಇಂಡಿಯಾ ಈ ಪಂದ್ಯವನ್ನು ಒಂದು ರನ್ ನಿಂದ ಸೋತಿತು(PC-PTI).

ಆದರೆ ಚೊಚ್ಚಲ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಪ್ರಿನ್ಸ್ ಯಾದವ್ ತಮ್ಮ ಟಿ20 ವೃತ್ತಿಜೀವನದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವ ಮೂಲಕ ಇತಿಹಾಸ ನಿರ್ಮಿಸಿದರು. ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ ಮೂರನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು (PC-PTI).

ಪ್ರಿನ್ಸ್ ಯಾದವ್​ಗಿಂತ ಮೊದಲು, ಸೂರ್ಯಕುಮಾರ್ ಯಾದವ್ ಮತ್ತು ರಮಣದೀಪ್ ಸಿಂಗ್ ತಮ್ಮ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನುಸಿಕ್ಸರ್ ಬಾರಿಸುವ ಮೂಲಕ ಪ್ರಾರಂಭಿಸಿದ್ದರು. ಇದೀಗ ಪ್ರಿನ್ಸ್ ಯಾದವ್ ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು (PC-PTI).

Published On – 9:16 pm, Mon, 29 June 26

Source link

ಉತ್ತರ ಕನ್ನಡದಲ್ಲಿ ಮುಂದುವರಿಯಲಿದೆ ಮಳೆ ಅಬ್ಬರ: ಆರೆಂಜ್ ಅಲರ್ಟ್ ಘೋಷಣೆ – Kannada News | Heavy Rains to Continue in Uttara Kannada; Orange Alert Issued

ಕಾರವಾರ, ಜೂನ್​​ 29: ಕರ್ನಾಟಕದಲ್ಲಿ ಬಹುತೇಕ ಕಡೆ ಮಳೆ (Rain) ಇಲ್ಲದೆ ಬರಗಾಲದ ಛಾಯೆ ಆವರಿಸಿದೆ. ಆದರೆ ಇತ್ತ ಉತ್ತರ ಕನ್ನಡ ಜಿಲ್ಲೆಯಲ್ಲಿ (uttara kannada) ಮಾತ್ರ ಮಳೆ ಅಬ್ಬರಿಸುತ್ತಿದೆ. ಧಾರಾಕಾರ ಮಳೆಗೆ ಕೆಲ ಅವಾಂತರಗಳು ಸಂಭವಿಸಿವೆ. ರಸ್ತೆಗಳೆಲ್ಲಾ ಹಳ್ಳದಂತಾಗಿದ್ದು, ಪುರಾಣ ಪ್ರಸಿದ್ಧ ಗೋಕರ್ಣದ ಮಹಾಬಲೆಶ್ವರನ ಗರ್ಭಗುಡಿಗೆ ನೀರು ನುಗ್ಗಿದೆ. ಮಳೆ ಮುಂದುವರೆಯುವ ಮುನ್ಸೂಚನೆ ಹಿನ್ನೆಲೆ ನದಿ ದಡ ಹಾಗೂ ಕಡಲತೀರಕ್ಕೆ ಹೋಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಡಿಸಿ ಲಕ್ಷ್ಮೀಪ್ರಿಯಾ ಮನವಿ ಮಾಡಿದ್ದು, ಜಿಲ್ಲೆಯಲ್ಲಿ ಜು.2ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

36 ಗಂಟೆ ಸುರಿದ ಭಾರೀ ಮಳೆ

ಹವಾಮಾನ ಇಲಾಖೆ ವರದಿಯ ಪ್ರಕಾರ ಕಳೆದ 36 ಗಂಟೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ ಸುರಿದಿದೆ. ಹೀಗಾಗಿ ಜಿಲ್ಲೆಯ ಬಹುತೇಕ ಕಡೆ ಜಲಪ್ರಳಯ ಉಂಟಾಗಿದೆ. ಪುರಾಣ ಪ್ರಸಿದ್ಧ ಗೋಕರ್ಣದ ಮಹಾಬಲೇಶ್ವರ ಗರ್ಭಗುಡಿಗೆ ನೀರು ನುಗ್ಗಿ ಆತ್ಮಲಿಂಗ ಜಾಲವೃತವಾಗಿದೆ. ಹಾಗಾಗಿ ಆತ್ಮಲಿಂಗ ಸ್ಪರ್ಶ್ ದರ್ಶನಕ್ಕೆ ಮಧ್ಯಾಹ್ನ 12 ಗಂಟೆ ಬಳಿಕ ನಿರ್ಬಂಧ ಹೇರಲಾಯಿತು.

ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಮಳೆ ಆರ್ಭಟ: ಗೋಕರ್ಣ ಮಹಾಬಲೇಶ್ವರ ದೇಗುಲದ ಗರ್ಭಗುಡಿಗೆ ನುಗ್ಗಿದ ನೀರು, ಹಲವೆಡೆ ಸಂಚಾರ ವ್ಯತ್ಯಯ

ಅಷ್ಟೇ ಅಲ್ಲದೆ ನಿತ್ಯ ಮಧ್ಯಾಹ್ನ 12;30ರ ಸುಮಾರಿಗೆ ನಡೆಯುವ ಮಹಾಪೂಜೆ ಮಾಡುವುದಕ್ಕೂ ಆಗದ ಪರಿಸ್ಥಿತಿ ಉಂಟಾಯಿತು. ಬಳಿಕ ಪಂಪಸೆಟ್ ಮೂಲಕ ಗರ್ಭ ಗುಡಿಯಲ್ಲಿನ ನೀರನ್ನ ಹೊರತೆಗೆಯಲಾಯ್ತು. ಇನ್ನು ಗೋಕರ್ಣದ ಪ್ರಮುಖ ಬಿದಿಗಳು ಕೆರೆಯಂತಾಗಿದ್ದು, ದೂರ ದೂರಿನಿಂದ ಬಂದಿದ್ದ ಪ್ರವಾಸಿಗರು, ವಾಹನ ಸವಾರರಿಗೆ ಸಮಸ್ಯೆ ಉಂಟಾಯಿತು.

ಕುಮಟಾ -ಸಿದ್ಧಾಪುರ ರಾಜ್ಯ ಹೆದ್ದಾರಿ ಸಂಪೂರ್ಣ ಜಲಾವೃತ

ಮಳೆಯ ಅಬ್ಬರ ಕೇವಲ ಗೋಕರ್ಣಕ್ಕೆ ಮಾತ್ರ ಸೀಮಿತವಾಗಿದೆ ಜಿಲ್ಲೆಯ ಕರಾವಳಿಯ ನಾಲ್ಕು ತಾಲೂಕಿನಲ್ಲಿ 36 ಗಂಟೆ ನಿರಂತರ ಮಳೆ ಸುರಿದಿದೆ. ಇದರ ಪರಿಣಾಮದಿಂದ ಕುಮಟಾ -ಸಿದ್ಧಾಪುರ ರಾಜ್ಯ ಹೆದ್ದಾರಿ ಸಂಪೂರ್ಣ ಜಲಾವೃತವಾಗಿದ್ದು, ಕುಮಟಾ ತಾಲೂಕಿನ ವಾಲಗಳಿ ಬಳಿ ದ್ವಿಚಕ್ರ ವಾಹನ ಸವಾರರು ಮತ್ತು ಕೆಲ ಬೃಹತ್ ವಾಹನಗಳು ಪರದಾಡಿದರು. ಇನ್ನಷ್ಟು ಮಳೆ ಸುರಿದರೆ ಅಕ್ಕಪಕ್ಕದ ಮನೆ ಹಾಗೂ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಅಪಾರ ಹಾನಿ ಆಗುವ ಸಾಧ್ಯತೆ ಇತ್ತು. ಆದರೆ ಅದೃಷ್ಟವಶಾತ್ ಮಳೆ ಅಬ್ಬರ ಕಡಿಮೆ ಆದ ಹಿನ್ನೆಲೆ ಸಮಸ್ಯೆ ತಪ್ಪಿದೆ.

ಇದನ್ನೂ ಓದಿ: ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು; ಪಶ್ಚಿಮ ಘಟ್ಟಗಳ ನಿಸರ್ಗ ವೈಭವಕ್ಕೆ ಪ್ರವಾಸಿಗರು ಫುಲ್ ಫಿದಾ

ಒಟ್ಟಾರೆಯಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 36 ಗಂಟೆ ಸುರಿದ ಮಳೆಯಿಂದ ಭಾರೀ ಅವಾಂತರಗಳು ಸಂಭವಿಸಿದೆ. ಈ ಮಧ್ಯೆ ಮತ್ತೆ ಮಳೆ ಸುರಿದರೆ ಯಾವ ರೀತಿ ಅನಾಹುತ ಆಗಬಹುದೆಂಬ ಆತಂಕ ಜನರಿಗೆ ಕಾಡುತ್ತಿದೆ. ಜಿಲ್ಲಾಡಳಿತ ಇನ್ನಾದರೂ ಮಳೆಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version