AI Agents: 2027ರ ವೇಳೆಗೆ ಟೆಕ್ ತಂಡಗಳನ್ನು ಬದಲಾಯಿಸಲಿವೆ ‘AI ಏಜೆಂಟ್‌ಗಳು’; ಏನಿದು ಹೊಸ ಟೆಕ್ನಾಲಜಿ? – Kannada News | Demand for skills in managing ai agents as ai powered systems transforming the tech industry

ಅರ್ಟಿಫಿಶಿಯಲ್ ಇಂಟೆಲಿಜೆನ್ಸ್Image Credit source: Getty Images

ನವದೆಹಲಿ, ಜೂನ್ 29: ಇದುವರೆಗೆ ನಾವು ಬಳಸುತ್ತಿದ್ದ ಚಾಟ್‌ಬಾಟ್‌ಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ, ತಾವಾಗಿಯೇ ಯೋಚಿಸಿ ಕೆಲಸ ಮಾಡುವ “ಏಜೆಂಟಿಕ್ ಎಐ” (Agentic AI) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಜಾಗತಿಕ ಕಂಪನಿಗಳು ಭಾರಿ ಪೈಪೋಟಿ ನಡೆಸುತ್ತಿವೆ. ಈ ಕುರಿತು 27 ದೇಶಗಳ 2,500 ತಂತ್ರಜ್ಞಾನ ಅಧಿಕಾರಿಗಳನ್ನು (Tech Executives) ಸಮೀಕ್ಷೆ ನಡೆಸಿ KPMG ವರದಿ ಸಿದ್ಧಪಡಿಸಿದೆ. 2025ರಲ್ಲಿ ಕಂಪನಿಗಳ ತಂತ್ರಜ್ಞಾನ ತಂಡಗಳಲ್ಲಿ AI ಡಿಜಿಟಲ್ ಅಸಿಸ್ಟೆಂಟ್‌ಗಳ ಪಾಲು ಶೇ. 28 ರಷ್ಟಿತ್ತು. ಆದರೆ ಇದು 2027ರ ವೇಳೆಗೆ ಶೇ. 36 ಕ್ಕೆ ಏರಲಿದೆ ಎಂದು ಅಂದಾಜಿಸಲಾಗಿದೆ. ಅಂದರೆ ಟೆಕ್ ತಂಡದ ಮೂರನೇ ಒಂದು ಭಾಗದಷ್ಟು ಕೆಲಸವನ್ನು AI ಏಜೆಂಟ್‌ಗಳೇ ನಿಭಾಯಿಸಲಿವೆ.

ಶೇ. 88 ರಷ್ಟು ಕಾರ್ಪೊರೇಟ್ ಕಂಪನಿಗಳು ಈಗಾಗಲೇ ತಮ್ಮ ದೈನಂದಿನ ಕಾರ್ಯವ್ಯವಸ್ಥೆಯಲ್ಲಿ ಈ ಸ್ವಯಂಚಾಲಿತ AI ಏಜೆಂಟ್‌ಗಳನ್ನು ಅಳವಡಿಸಲು ದೊಡ್ಡ ಮಟ್ಟದ ಬಂಡವಾಳ ಹೂಡಿಕೆ ಮಾಡುತ್ತಿವೆ.

ಮ್ಯಾನೇಜರ್‌ಗಳಿಗೆ ಹೊಸ ಸವಾಲು: ಎಐ ಏಜೆಂಟ್​ಗಳನ್ನು ನಿರ್ವಹಿಸುವ ಪರಿಣಿತಿ

ಶೇ. 92 ರಷ್ಟು ಟೆಕ್ ಅಧಿಕಾರಿಗಳ ಪ್ರಕಾರ, ಇನ್ನು ಮುಂದೆ ಕಂಪನಿಗಳಲ್ಲಿ ಮ್ಯಾನೇಜರ್ ಆಗುವವರಿಗೆ ಕೇವಲ ಮನುಷ್ಯರನ್ನು ನಿಭಾಯಿಸುವುದು ಮಾತ್ರವಲ್ಲ, ಈ “ಸ್ವಯಂಚಾಲಿತ AI ಏಜೆಂಟ್‌ಗಳನ್ನು ಮುನ್ನಡೆಸುವುದು, ಅವುಗಳ ಕೆಲಸವನ್ನು ಆಡಿಟ್ ಮಾಡುವುದು ಮತ್ತು ನಿರ್ದೇಶಿಸುವುದು” ಅತ್ಯಗತ್ಯ ಕೌಶಲ್ಯವಾಗಲಿದೆ.

ಸಣ್ಣ ಮತ್ತು ಚುರುಕಾದ ತಂಡಗಳು

AI ತಜ್ಞರ ಪ್ರಕಾರ, ಈ ತಂತ್ರಜ್ಞಾನದಿಂದಾಗಿ ಕಂಪನಿಗಳು ಭವಿಷ್ಯದಲ್ಲಿ ದೊಡ್ಡ ದೊಡ್ಡ ಟೀಮ್‌ಗಳ ಬದಲಾಗಿ, ಅತ್ಯಂತ ಸಣ್ಣ ಮತ್ತು ಚುರುಕಾದ (Flatter and Agile) ತಂಡಗಳನ್ನು ಹೊಂದಲಿವೆ. ಡೇಟಾ ಸುರಕ್ಷತೆ, ಗೌಪ್ಯತೆ ಮತ್ತು ಮೂರನೇ ವ್ಯಕ್ತಿಯ ತಂತ್ರಜ್ಞಾನದ ಮೇಲಿನ ಅತಿಯಾದ ಅವಲಂಬನೆ ಕಂಪನಿಗಳಿಗೆ ಹೊಸ ಸವಾಲನ್ನು ತಂದೊಡ್ಡಲಿದೆ ಎಂದೂ ವರದಿ ಎಚ್ಚರಿಸಿದೆ.‘

ಇದನ್ನೂ ಓದಿ: ಚಿನ್ನದ ಬೆಲೆ ಕಡಿಮೆ ಆಗಲು ಕಾರಣಗಳೇನು? ಬಂಗಾರ ಈಗ ಸುರಕ್ಷಿತ ಸರಕಾಗಿ ಉಳಿದಿಲ್ಲವಾ?

AI ಏಜೆಂಟ್‌ಗಳು ಹೇಗೆ ಕೆಲಸ ಮಾಡುತ್ತವೆ?

ನಾವು ಸಾಮಾನ್ಯವಾಗಿ ಬಳಸುವ ಚಾಟ್‌ಜಿಪಿಟಿ (ChatGPT), ಜೆಮಿನೈ (Gemini) ನಂತಹ ಸಾಂಪ್ರದಾಯಿಕ AI ಕೇವಲ ನಾವು ಕೇಳಿದ ಪ್ರಶ್ನೆಗೆ ಉತ್ತರ ಬರೆಯುತ್ತದೆ (Text Generation). ಆದರೆ AI ಏಜೆಂಟ್ ಹಾಗಲ್ಲ; ಅದು ಮನುಷ್ಯರ ಪ್ರಾಂಪ್ಟ್ (ಆದೇಶ) ಇಲ್ಲದೆಯೇ ತಾನಾಗಿಯೇ ನಿರ್ಧಾರಗಳನ್ನು ತೆಗೆದುಕೊಂಡು, ಒಂದು ನಿರ್ದಿಷ್ಟ ಗುರಿಯನ್ನು ತಲುಪಲು ಕೆಲಸ ಮಾಡುತ್ತದೆ.

ಇದರ ಕಾರ್ಯವೈಖರಿಯನ್ನು 4 ಮುಖ್ಯ ಹಂತಗಳಲ್ಲಿ ಅರ್ಥಮಾಡಿಕೊಳ್ಳಬಹುದು:

  1. ಗುರಿ (Goal)
  2. ಗ್ರಹಿಕೆ (Perception)
  3. ಆಲೋಚನೆ (Reasoning)
  4. ಕ್ರಿಯೆ (Action)

ಗುರಿಯನ್ನು ಸ್ವೀಕರಿಸುವುದು (Goal Setting)

ಮನುಷ್ಯರು ಈ ಏಜೆಂಟ್‌ಗೆ ಒಂದು ಅಂತಿಮ ಗುರಿಯನ್ನು ನೀಡುತ್ತಾರೆ. ಉದಾಹರಣೆಗೆ: “ಬೆಂಗಳೂರಿನಿಂದ ಮುಂಬೈಗೆ ಜುಲೈ 5 ರಂದು ಹೋಗಲು ₹5,000 ಒಳಗಿನ ಅತ್ಯುತ್ತಮ ವಿಮಾನ ಟಿಕೆಟ್ ಬುಕ್ ಮಾಡಿ, ಹೋಟೆಲ್ ರಿಸರ್ವ್ ಮಾಡು” ಎಂದು ನಿರ್ದೇಶನ ನೀಡಬಹುದು.

ಪರಿಸರವನ್ನು ಗ್ರಹಿಸುವುದು (Perception/Data Gathering)

ಈ ಏಜೆಂಟ್‌ಗಳು ಇಂಟರ್ನೆಟ್, ಕಂಪನಿಯ ಡೇಟಾಬೇಸ್ ಅಥವಾ ಸಾಫ್ಟ್‌ವೇರ್‌ಗಳಿಗೆ ಕನೆಕ್ಟ್ ಆಗಿರುತ್ತವೆ. ಇವು ವಿವಿಧ ವಿಮಾನಯಾನ ಸಂಸ್ಥೆಗಳ ವೆಬ್‌ಸೈಟ್‌ಗಳು, ಹೋಟೆಲ್ ದರಗಳು ಮತ್ತು ಲಭ್ಯತೆಯನ್ನು ನೈಜ ಸಮಯದಲ್ಲಿ (Real-time) ಪರಿಶೀಲಿಸುತ್ತವೆ.

ಆಲೋಚನೆ ಮತ್ತು ಯೋಜನೆ (Reasoning & Planning)

ಇದು ಕೇವಲ ಮಾಹಿತಿಯನ್ನು ಹುಡುಕುವುದಿಲ್ಲ, ಬದಲಿಗೆ ಯೋಜನೆ ರೂಪಿಸುತ್ತದೆ. “ವಿಮಾನ ಬೆಳಗ್ಗೆ 9ಕ್ಕೆ ಇದ್ದರೆ ಉತ್ತಮವೇ ಅಥವಾ ಸಂಜೆ 6ಕ್ಕಾ? ಹೋಟೆಲ್ ವಿಮಾನ ನಿಲ್ದಾಣಕ್ಕೆ ಹತ್ತಿರವಿದೆಯೇ?” ಎಂದು ತಾನಾಗಿಯೇ ಯೋಚಿಸಿ, ಬಜೆಟ್‌ಗೆ ಹೊಂದುವ ಅತ್ಯುತ್ತಮ ನಿರ್ಧಾರಕ್ಕೆ ಬರುತ್ತದೆ.

ಕಾರ್ಯಗತಗೊಳಿಸುವಿಕೆ (Action/Execution)

ಯಾವುದೇ ಮನುಷ್ಯನ ಸಹಾಯವಿಲ್ಲದೆ, ಎಐ ಏಜೆಂಟ್ ತಾನಾಗಿಯೇ ವೆಬ್‌ಸೈಟ್‌ ಫಾರ್ಮ್‌ಗಳನ್ನು ಭರ್ತಿ ಮಾಡಿ, ಟಿಕೆಟ್ ಬುಕ್ ಮಾಡಿ, ಇನ್ವಾಯ್ಸ್ ಅನ್ನು ನಿಮ್ಮ ಇಮೇಲ್‌ಗೆ ಕಳುಹಿಸುತ್ತದೆ.

ಇದನ್ನೂ ಓದಿ: ದಿ ಫೌಂಡ್ರಿ- 5,000 ರೂ ಶುಲ್ಕ, 90 ದಿನ ವಸತಿ, ಹೊಸ ಸ್ಟಾರ್ಟಪ್ ಕಟ್ಟಿ, ಹೂಡಿಕೆದಾರರ ಬೆಂಬಲವೂ ಪಡೆಯಿರಿ

ಉದಾಹರಣೆಗೆ, ಸಾಂಪ್ರದಾಯಿಕ AI ನಿಮಗೆ “ಅಡುಗೆ ಮಾಡುವುದು ಹೇಗೆ” ಎಂದು ರೆಸಿಪಿ ಹೇಳಿಕೊಟ್ಟರೆ, AI ಏಜೆಂಟ್ ನಿಮ್ಮ ಫ್ರಿಡ್ಜ್‌ನಲ್ಲಿ ಏನಿದೆ ಎಂದು ನೋಡಿ, ಇಲ್ಲದಿರುವುದನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ, ಸ್ಮಾರ್ಟ್ ಓವನ್ ಆನ್ ಮಾಡಿ ಅಡುಗೆಯನ್ನೇ ಮುಗಿಸಿಡುತ್ತದೆ!

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಜುಲೈ 2026 ಮಾಸ ಭವಿಷ್ಯ: ಈ ರಾಶಿಯ ಜನರಿಗೆ ಪರಿವರ್ತನಾ ಯೋಗ; ಜುಲೈ ತಿಂಗಳಲ್ಲಿ ಶುಭವೋ ಶುಭ – Kannada News | July 2026 Monthly Horoscope | Aries to Pisces July Month Jyeshtha and Ashadha Masa Bhavishya

ಜುಲೈ 2026 ರಲ್ಲಿ ಗ್ರಹಗಳ ಪರಿವರ್ತನೆಯಿಂದ ಪರಿವರ್ತನಾ ಯೋಗವೂ ಆಗಲಿದೆ. ಗುರುವು ಉಚ್ಚಸ್ಥಾನದಲ್ಲಿಯೂ ಬುಧನು ಸ್ವ ಸ್ಥಾನದಲ್ಲಿಯೂ ಇದ್ದಾನೆ. ಸೂರ್ಯನು ಚಂದ್ರನ ರಾಶಿಯಲ್ಲಿ ಇದ್ದು ಪತ್ನಿಯ ಸ್ಥಾನಕ್ಕೆ ಗ್ರಹನಾಯಕನು ವರ್ಷಕ್ಕೊಮ್ಮೆ ಬರುವ ಸಂದರ್ಭ. ಸೂರ್ಯನು ಉಚ್ಚಗಾಮಿಯಾಗಿ ಸಾಗುವ ಕಾರಣ ಸರ್ಕಾರದ ಉನ್ನತ ಸ್ಥಾನದಲ್ಲಿ ಇರುವವರಿಗೆ ಶುಭವೂ ಆಗಲಿದೆ.


ಮೇಷ ರಾಶಿ :
​ನಿಮ್ಮ ರಾಶ್ಯಾಧಿಪತಿ ಮಂಗಳ ದ್ವಿತೀಯದಲ್ಲಿದ್ದು, ಸೂರ್ಯ, ಗುರು ಚತುರ್ಥದಲ್ಲಿದ್ದಾರೆ. ಧನ ಲಾಭ ಮತ್ತು ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಆದರೆ ಶನಿ ೧೨ನೇ ಮನೆಯಲ್ಲಿ ವಕ್ರನಾಗಿರುವುದರಿಂದ ಅನಗತ್ಯ ಖರ್ಚು ಹಾಗೂ ದೂರದ ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಉದ್ಯೋಗದಲ್ಲಿ ಉತ್ತಮ ಪ್ರಗತಿ ಕಾಣಬಹುದು.

ವೃಷಭ ರಾಶಿ :
​ಮಂಗಳ ನಿಮ್ಮದೇ ರಾಶಿಯಲ್ಲಿದ್ದು, ಬುಧ ದ್ವಿತೀಯದಲ್ಲಿ ಹಾಗೂ ಶನಿ ಲಾಭ ಸ್ಥಾನದಲ್ಲಿದ್ದಾನೆ. ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗಲಿದೆ. ಆರ್ಥಿಕ ಪರಿಸ್ಥಿತಿ ಸದೃಢವಾಗಲಿದ್ದು, ಹಳೆಯ ಬಾಕಿ ವಸೂಲಾಗಲಿದೆ. ಉದ್ಯೋಗ ಬದಲಾವಣೆಗೆ ಇದು ಸಕಾಲ. ಆದರೆ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಳಿತು.

ಮಿಥುನ ರಾಶಿ :
​ಬುಧ ನಿಮ್ಮ ರಾಶಿಯಲ್ಲೇ ಸ್ವಗೃಹದಲ್ಲಿದ್ದಾನೆ. ಬುದ್ಧಿಮತ್ತೆ ಮತ್ತು ಕಾರ್ಯದಕ್ಷತೆ ಹೆಚ್ಚಲಿದೆ. ಸೂರ್ಯ ಮತ್ತು ಗುರು ದ್ವಿತೀಯ ಸ್ಥಾನದಲ್ಲಿರುವುದರಿಂದ ಆರ್ಥಿಕವಾಗಿ ಲಾಭದಾಯಕ ಸಮಯ. ಕೌಟುಂಬಿಕ ಸುಖ ವೃದ್ಧಿಯಾಗಲಿದೆ. ಹೊಸ ಹೂಡಿಕೆಗಳಿಗೆ ಈ ತಿಂಗಳು ಅತ್ಯಂತ ಅನುಕೂಲಕರವಾಗಿದೆ.


ಕರ್ಕಾಟಕ ರಾಶಿ :
​ನಿಮ್ಮ ರಾಶಿಯಲ್ಲಿ ಸೂರ್ಯ ಮತ್ತು ಗುರು ಜೊತೆಯಾಗಿದ್ದಾರೆ. ಗೌರವ, ಪ್ರತಿಷ್ಠೆ ಹೆಚ್ಚಾಗಲಿದೆ. ಆಧ್ಯಾತ್ಮಿಕ ಚಿಂತನೆಗಳು ಹೆಚ್ಚಾಗಲಿವೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಸಿಗಲಿವೆ. ಆರೋಗ್ಯದ ಕಡೆಗೆ ಸ್ವಲ್ಪ ಗಮನ ಕೊಡಿ, ವಿಶೇಷವಾಗಿ ಉಷ್ಣ ಸಂಬಂಧಿ ತೊಂದರೆಗಳು ಕಾಡಬಹುದು.

ಸಿಂಹ ರಾಶಿ :
​ಶುಕ್ರ ಮತ್ತು ಕೇತು ನಿಮ್ಮ ರಾಶಿಯಲ್ಲಿದ್ದಾರೆ. ಸೂರ್ಯ, ಗುರು ೧೨ನೇ ಮನೆಯಲ್ಲಿದ್ದಾರೆ. ವೆಚ್ಚಗಳು ಅಧಿಕವಾಗಲಿವೆ. ಅಷ್ಟಮ ಶನಿಯ ಪ್ರಭಾವವಿರುವುದರಿಂದ ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ. ವೃತ್ತಿ ಕ್ಷೇತ್ರದಲ್ಲಿ ಶತ್ರುಗಳ ಕಾಟವಿರಬಹುದು, ಆದರೆ ಶುಕ್ರನ ಪ್ರಭಾವದಿಂದ ಕಲಾತ್ಮಕ ಕ್ಷೇತ್ರಗಳ ಜನರಿಗೆ ಅನುಕೂಲವಾಗಲಿದೆ.

ಕನ್ಯಾ ರಾಶಿ :
​ಲಾಭ ಸ್ಥಾನದಲ್ಲಿ ಸೂರ್ಯ ಮತ್ತು ಗುರುವಿನ ಬಲವಿರುವುದರಿಂದ ಈ ತಿಂಗಳು ನಿಮಗೆ ಅತ್ಯಂತ ಯಶಸ್ವಿಯಾಗಲಿದೆ. ವ್ಯಾಪಾರದಲ್ಲಿ ಲಾಭ ದುಪ್ಪಟ್ಟಾಗಲಿದೆ. ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ಲಭಿಸಲಿದೆ. ಹಳೆಯ ಆರೋಗ್ಯ ಸಮಸ್ಯೆಗಳು ದೂರಾಗಲಿವೆ.

ತುಲಾ ರಾಶಿ :
​ದಶಮ ಸ್ಥಾನದಲ್ಲಿ ಸೂರ್ಯ ಮತ್ತು ಗುರುವಿನ ಸಂಯೋಜನೆ ಇದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಚಂಡ ಯಶಸ್ಸು ಸಿಗಲಿದೆ. ಹೊಸ ಉದ್ಯೋಗದ ಹುಡುಕಾಟದಲ್ಲಿದ್ದವರಿಗೆ ಶುಭ ವಾರ್ತೆ ಸಿಗಲಿದೆ. ಸಮಾಜದಲ್ಲಿ ಗೌರವ ಸಿಗಲಿದೆ. ತಂದೆಯವರ ಆರೋಗ್ಯದ ಕಡೆಗೆ ಗಮನ ಹರಿಸಿ.

ವೃಶ್ಚಿಕ ರಾಶಿ :
​ಭಾಗ್ಯ ಸ್ಥಾನದಲ್ಲಿ ಸೂರ್ಯ, ಗುರು ಇದ್ದಾರೆ. ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ದೀರ್ಘಕಾಲದ ಧಾರ್ಮಿಕ ಪ್ರವಾಸಗಳು ಕೈಗೂಡಲಿವೆ. ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಸಮಯ. ಆರ್ಥಿಕ ಸ್ಥಿತಿ ಸುಧಾರಿಸಲಿದ್ದು, ಸ್ಥಿರಾಸ್ತಿ ಖರೀದಿಸುವ ಯೋಗವಿದೆ.

ಇದನ್ನೂ ಓದಿ: ಜುಲೈನಲ್ಲಿ ಮಂಗಳ ಗ್ರಹ ವೃಷಭ ರಾಶಿಗೆ ಸಂಚಾರ; ಯಾವ ರಾಶಿಗೆ ಶುಭ, ಯಾರಿಗೆ ಅಶುಭ?

ಧನು ರಾಶಿ :
​ಸೂರ್ಯ ಮತ್ತು ಗುರು ಅಷ್ಟಮ ಸ್ಥಾನದಲ್ಲಿರುವುದರಿಂದ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗಬಹುದು. ಶನಿ ಚತುರ್ಥದಲ್ಲಿ ವಕ್ರನಾಗಿರುವುದರಿಂದ ಕೌಟುಂಬಿಕವಾಗಿ ಭಿನ್ನಾಭಿಪ್ರಾಯ ಮೂಡದಂತೆ ಶಾಂತವಾಗಿರಿ.


ಮಕರ ರಾಶಿ :

​ಸಪ್ತಮದಲ್ಲಿ ಸೂರ್ಯ ಮತ್ತು ಗುರು ಇರುವುದರಿಂದ ವೈವಾಹಿಕ ಜೀವನದಲ್ಲಿ ಮಿಶ್ರ ಫಲಿತಾಂಶವಿರಲಿದೆ. ಜಂಟಿ ವ್ಯಾಪಾರದಲ್ಲಿ ಲಾಭ ದೊರೆಯಲಿದೆ. ತೃತೀಯದಲ್ಲಿ ಶನಿಯ ಬಲವಿರುವುದರಿಂದ ಧೈರ್ಯದಿಂದ ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತೀರಿ. ಸಮಾಜದಲ್ಲಿ ನಿಮ್ಮ ಪ್ರಭಾವ ಹೆಚ್ಚಲಿದೆ.

ಕುಂಭ ರಾಶಿ :
​ನಿಮ್ಮ ರಾಶಿಯಲ್ಲಿ ರಾಹು ಮತ್ತು ಚಂದ್ರರಿದ್ದಾರೆ. ಶನಿ ದ್ವಿತೀಯದಲ್ಲಿದ್ದಾನೆ, ಮಾನಸಿಕ ಗೊಂದಲಗಳು ಹೆಚ್ಚಾಗಬಹುದು. ಆದರೆ ಸೂರ್ಯ, ಗುರು ಆರನೇ ಮನೆಯಲ್ಲಿರುವುದರಿಂದ ಶತ್ರುಗಳ ಮೇಲೆ ಜಯ ಸಿಗಲಿದೆ. ಕೋರ್ಟ್ ಕಚೇರಿ ಕೆಲಸಗಳಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಸಾಲದ ಹೊರೆ ಕಡಿಮೆಯಾಗಲಿದೆ.

ಮೀನ ರಾಶಿ :
​ನಿಮ್ಮದೇ ರಾಶಿಯಲ್ಲಿ ಶನಿ ವಕ್ರನಾಗಿದ್ದಾನೆ. ಪಂಚಮದಲ್ಲಿ ಸೂರ್ಯ ಮತ್ತು ಗುರು ಇದ್ದಾರೆ. ಬುದ್ಧಿ ಚುರುಕಾಗಲಿದ್ದು, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಮಕ್ಕಳ ಪ್ರಗತಿಯಿಂದ ಮನಸ್ಸಿಗೆ ಸಂತೋಷವಾಗಲಿದೆ. ಆದಾಗ್ಯೂ, ಜನ್ಮ ಶನಿಯ ಪ್ರಭಾವದಿಂದ ಕೆಲಸದಲ್ಲಿ ವಿಳಂಬ ಮತ್ತು ದೈಹಿಕ ಆಯಾಸ ಉಂಟಾಗಬಹುದು.

– ಲೋಹಿತ್ ಹೆಬ್ಬಾರ್

Published On – 4:08 pm, Mon, 29 June 26

Source link

ಹೋಂಸ್ಟೇನಲ್ಲಿ ಯುವತಿ ಶವಪತ್ತೆ: ನಂದಿಬೆಟ್ಟಕ್ಕೆ ಕರೆದೊಯ್ದು ಕೊಲೆ ಮಾಡಿದ್ನಾ ಅಲಿ? – Kannada News | Bengaluru Young Woman Dead Body found In Homestay at Nandi betta, mother alleges love jihad

ಚಿಕ್ಕಬಳ್ಳಾಪುರ, (ಜೂನ್ 29): ಚಿಕ್ಕಬಳ್ಳಾಪುರದ ನಂದಿಬೆಟ್ಟದ (Nandi Betta) ಹೋಮ್‌ಸ್ಟೇ ಒಂದರಲ್ಲಿ ಯುವತಿಯೋರ್ವಳ ಶವ ಪತ್ತೆಯಾಗಿದೆ. ಪ್ರೇಯಸಿ ಸುರಭಿಯನ್ನು ಕೊಲೆ ಮಾಡಿದ ಬಳಿಕ ಪ್ರಿಯಕರ ಸಂಜಿತ್ ಅಲಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಅಲಿಯನ್ನು ಚಿಕಿತ್ಸೆಗಾಗಿ  ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಸುರಭಿ ಲವ್ ಜಿಹಾದ್ ಗೆ ಬಲಿಯಾಗಿದ್ದಾಳೆ ಎನ್ನವ ಆರೋಪ ಕೇಳಿಬಂದಿದ್ದು, ಇನ್ನು ಸುರಭಿ ಸಾವನ್ನಪ್ಪಿದ ಹೋಮ್ ಸ್ಟೇಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸಿದ್ದಾರೆ. ಬೆಂಗಳೂರು ಮೂಲದ ಸಾಯಿ ಸುರಭಿ ಹಾಗೂ ಕೇರಳದ ಕೋಝಿಕ್ಕೋಡ್ ನಿವಾಸಿ, ಕ್ಯಾಬ್ ಡ್ರೈವರ್ ಸಂಜೀತ್ ಅಲಿ ಕಳೆದ ಶನಿವಾರ ಮುದ್ದೇನಹಳ್ಳಿ ಬಳಿಯ ಹೋಂ ಸ್ಟೇಗೆ ಬಂದು ತಂಗಿದ್ದರು. ಇಂದು (ಜೂನ್ 29) ಚೆಕ್-ಔಟ್ ಸಮಯ ಮುಗಿದರೂ ರೂಮ್ ಬಾಗಿಲು ತೆರೆಯದಿದ್ದಾಗ ಸಿಬ್ಬಂದಿ ಬಂದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಲವ್ ಜಿಹಾದ್ ಕೊಲೆ ಎಂದ ತಾಯಿ

ಯುವತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಲ್ಲದೆ ಸ್ಥಳದಲ್ಲಿ ಕೆಲವು ಮಾತ್ರೆಗಳು ಪತ್ತೆಯಾಗಿದ್ದು, ವಿಷ ಸೇವಿಸಿರುವ ಸಾಧ್ಯತೆಗಳೂ ದಟ್ಟವಾಗಿವೆ. ರೂಮ್‌ನಲ್ಲಿ ಒಂದು ಡೈರಿ ಸಿಕ್ಕಿದ್ದು, ಅದರಲ್ಲಿ ಹಲವು ವಿಚಾರಗಳನ್ನು ಬರೆಯಲಾಗಿದೆ. ಇದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಸುರಭಿ ಸಾವಿನ ಬೆನ್ನಲ್ಲೇ ತಾಯಿ ಗೀತಾ ಮಾಧ್ಯಮಗಳ ಎದುರು ಕಣ್ಣೀರು ಹಾಕಿದ್ದು, ಇದೊಂದು ಲವ್ ಜಿಹಾದ್ ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಡ್ರಗ್ಸ್ ಅಡಿಕ್ಟ್ ಮಾಡಿ ಕಿರುಕುಳ ನೀಡುತ್ತಿದ್ದನು ಎಂದು ಆರೋಪಿಸಿದ್ದಾರೆ.

ಮೃತ ಯುವತಿ ಸುರಭಿ ತಾಯಿ ಟಿ.ಆರ್.ಗೀತಾ ಪ್ರತಿಕ್ರಿಯಿಸಿದ್ದು, ಕೇರಳ ಮೂಲದ ಸಂಜಿತ್​ ಅಲಿ ಕ್ಯಾಬ್ ಡ್ರೈವರ್ ಆಗಿದ್ದ. ನನ್ನ ಮಗಳು ದಯಾನಂದ ಸಾಗರ್ ಕಾಲೇಜಿನಲ್ಲಿ ಓದುತ್ತಿದ್ದಳು. ಸಾಯಿ ಸುರಭಿ ಸ್ನೇಹಿತರ ಮೂಲಕ ಸಂಜಿತ್ ಪರಿಚಯ ಆಗಿದ್ದು, ಪ್ರೀತಿಸುವುದಾಗಿ ನನ್ನ ಮಗಳಿಗೆ ಸಂಜಿತ್​ ಅಲಿ ಕಿರುಕುಳ ಕೊಡುತ್ತಿದ್ದ. ಈ ಬಗ್ಗೆ ಕುಮಾರಸ್ವಾಮಿ ಲೇಔಟ್​ ಠಾಣೆಯಲ್ಲಿ ದೂರು ಕೊಟ್ಟಿದ್ದೆ.ಬಳಿಕ ಬನಶಂಕರಿ ಪೊಲೀಸರಿಗೆ ದೂರು ನೀಡಿದ್ದೆ. ಬಳಿಕ ಪೊಲೀಸರು ಸಹಾಯ ಮಾಡಿ ಮಗಳನ್ನು ನನ್ನ ಜೊತೆ ಕಳುಹಿಸಿದ್ದರು. ಸಂಜಿತ್ ಅಲಿ ನನ್ನ ಮಗಳಿಗೆ ಡ್ರಗ್ಸ್ ಅಡಿಕ್ಟ್ ಮಾಡಿದ್ದ. ಎರಡ್ಮೂರು ಕಡೆ ಚಿಕಿತ್ಸೆ ಕೊಡಿಸಿದ್ದೆ, ಈಗ ಆಕೆ ಆರೋಗ್ಯವಾಗಿದ್ದರು. ಆದ್ರೆ, ಇದೀಗ ಸಂಜಿತ್ ಅಲಿಯೇ ನನ್ನ ಮಗಳನ್ನು ಕೊಲೆ ಮಾಡಿದ್ದಾನೆ. ಮುದ್ದೇನಹಳ್ಳಿಯಲ್ಲಿ ಪಿಜಿಯೋಥೇರಾಪಿಸ್ಟ್ ಆಗಿ ಕೆಲಸ ಮಾಡ್ತಿದ್ದಳು. ಶನಿವಾರ ಸತ್ಸಂಗ ಇದೆ ಅಲ್ಲಿ ಇರುವುದಾಗಿ ಹೇಳಿದ್ದಳು. ನನ್ನ ಮಗಳನ್ನು ಪದೆ ಪದೆ ಹುಡುಕಿಕೊಂಡು ಬಂದು ಮರಳು ಮಾಡ್ತಿದ್ದ. ಅವನ ಮೇಲೆ ಕೇಸ್ ಗಳು ಇವೆ ಎಂದು ಆರೋಪಿಸಿದ್ದಾರೆ.

ಸುರಭಿ ಸಾವಿನ ಬಗ್ಗೆ ಚಿಕ್ಕಬಳ್ಳಾಪುರ ಎಸ್ಪಿ ಹೇಳಿದ್ದಿಷ್ಟು

ಇನ್ನು ಈ ಬಗ್ಗೆ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ಪ್ರತಿಕ್ರಿಯಿಸಿದ್ದು, ಕೇರಳ ಮೂಲದ ಕೊಯಿಕೊಡ ನಿವಾಸಿ ಸಂಜೀತ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಸಾಯಿ ಸುರಭಿ ಸಾವಿನ ಬಗ್ಗೆ ಅನುಮಾನಗಳು ಇವೆ. ನೇಣು ಬಿಗಿದ ಸ್ಥಿತಿಯಲ್ಲಿ ಮೇಲ್ನೋಟಕ್ಕೆ ಸಾಯಿ ಸುರಭಿ ಶವ ಕಾಣಿಸಿದೆ. ನೇಣು ಹಾಕಿದ್ದ ಹಗ್ಗ ಕತ್ತರಿಸಲಾಗಿದೆ. ಕೊಲೆಯೊ ಆತ್ಮಹತ್ಯೆಯೊ ತನಿಖೆ ನಡೆಯುತ್ತಿದೆ. ಇಬ್ಬರು ಆತ್ಮಹತ್ಯೆಗೆ ಯತ್ನಿಸಿ ಸಾಯಿ ಸುರಭಿ ಸತ್ತಿದ್ದಾಳಾ ತನಿಖೆ ನಡೆಯುತ್ತಿದ್ದು, ಸಂಜೀತ್ ಗೆ ಪ್ರಜ್ಞೆ ಬಂದ ಮೇಲೆ ಸ್ಪಷ್ಟ ಮಾಹಿತಿ ಲಭ್ಯವಾಗುತ್ತದೆ. ಸಾಜಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಟೊಗಳು ಇವರದೆ ಎನ್ನುವ ಮಾಹಿತಿ ಇದೆ. ಶನಿವಾರ ಹೋಮ್ ಸ್ಟೇ ನಲ್ಲಿ ತಂಗಿದ್ದರು. ಇಂದು ಕೇರ್ ಟೇಕರ್, ಚೆಕ್ ಹೌಟ್ ಗೆ ತಿಳಿಸಲು ಬಂದಾಗ ಪ್ರಕರಣ ಬಯಲಾಗಿದೆ. ನಂದಿಗಿರಿಧಾಮ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಕುಮಾರಸ್ವಾಮಿ ಲೇಯೊಟ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ಆಗಿತ್ತು ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 5:22 pm, Mon, 29 June 26

Source link

3 ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ 65 ವರ್ಷದ ವ್ಯಕ್ತಿಗೆ ಗಲ್ಲು ಶಿಕ್ಷೆ! – Kannada News | Rarest Of Rare Case; Pune Court Sentences 65 year old Man To Death For Rape and Murder Of 3 Year Old Girl

ಪುಣೆ, ಜೂನ್ 29: ತನ್ನ ಮೊಮ್ಮಗಳ ವಯಸ್ಸಿನ ಮಗುವಿನ ಮೇಲೆ ಅತ್ಯಾಚಾರವೆಸಗಿ ಕಾಮತೃಷೆ ತೀರಿಸಿಕೊಂಡು, ಬಳಿಕ ಆ ಮಗುವನ್ನು ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಿದ್ದ 65 ವರ್ಷದ ವ್ಯಕ್ತಿಗೆ ಪುಣೆ ಕೋರ್ಟ್ (Pune) ಗಲ್ಲುಶಿಕ್ಷೆ ವಿಧಿಸಿದೆ. ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಭೀಕರವಾಗಿ ಅತ್ಯಾಚಾರ ಎಸಗಿ, ನಂತರ ಆಕೆಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಪುಣೆ ನ್ಯಾಯಾಲಯವು ಇಂದು ಆರೋಪಿಗೆ ಮರಣದಂಡನೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಪುಣೆಯ ವೇಗಧೂತ ನ್ಯಾಯಾಲಯ ಘಟನೆ ನಡೆದ 2 ತಿಂಗಳಲ್ಲೇ ಈ ತೀರ್ಪು ನೀಡಿದೆ.

ಈ ಘೋರ ಅಪರಾಧವು ಇದೇ ವರ್ಷ ಮೇ 1ರಂದು ಪುಣೆ ಜಿಲ್ಲೆಯ ಭೋರ್ ತಹಸಿಲ್‌ನಲ್ಲಿರುವ ನಸ್ರಾಪುರ ಗ್ರಾಮದಲ್ಲಿ ನಡೆದಿತ್ತು. ಭೀಮರಾವ್ ಕಾಂಬ್ಳೆ ಎಂಬ 65 ವರ್ಷದ ಆರೋಪಿಯು 3 ವರ್ಷದ ಮಗುವನ್ನು ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದನು. ನಂತರ ಮಗು ಯಾರಿಗಾದರೂ ವಿಷಯ ತಿಳಿಸಬಹುದು ಎಂಬ ಭಯದಿಂದ ಮಗುವಿನ ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದನು. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೇವಲ 24 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.

ಇದನ್ನೂ ಓದಿ: ಅತ್ಯಾಚಾರ ನಡೆಸಿದ ತಂದೆ ವಿರುದ್ಧ ಒಬ್ಬಂಟಿಯಾಗಿ ಕಾನೂನು ಹೋರಾಟ ಗೆದ್ದ ಅಪ್ರಾಪ್ತೆ!: ಆರೋಪಿಗೆ 20 ವರ್ಷ ಜೈಲು ಶಿಕ್ಷೆ

“ಈ ಅಪರಾಧವನ್ನು ಅತ್ಯಂತ ಕ್ರೂರವಾಗಿ ಎಸಗಲಾಗಿದ್ದು, ಇದರಲ್ಲಿ ಸಂತ್ರಸ್ತ ಮಗುವಿಗೆ ಅಮಾನವೀಯ ಹಿಂಸೆ ನೀಡಲಾಗಿದೆ. ಸಂತ್ರಸ್ತೆ ಅತ್ಯಂತ ನಿರಪರಾಧಿ ಮತ್ತು ಅಸಹಾಯಕ ಮಗುವಾಗಿದ್ದಳು. ಕಾಮದ ಹಸಿವನ್ನು ನೀಗಿಸಿಕೊಳ್ಳಲು ಈ ಕೊಲೆ ಮಾಡಲಾಗಿದ್ದು, ಇದು ಸಂಪೂರ್ಣ ನೈತಿಕ ಪತನವನ್ನು ತೋರಿಸುತ್ತದೆ. ಇದು ಯಾವುದೇ ಪ್ರಚೋದನೆಯಿಲ್ಲದೆ ನಡೆದ ಕೊಲೆಯಾಗಿದೆ. ಈ ಅಪರಾಧವನ್ನು ಎಷ್ಟು ಕ್ರೂರವಾಗಿ ಮಾಡಲಾಗಿದೆಯೆಂದರೆ, ಇದು ಕೇವಲ ನ್ಯಾಯಾಂಗದ ಆತ್ಮಸಾಕ್ಷಿಯನ್ನು ಮಾತ್ರವಲ್ಲದೆ ಇಡೀ ಸಮಾಜದ ಆತ್ಮಸಾಕ್ಷಿಯನ್ನೇ ಬೆಚ್ಚಿಬೀಳಿಸಿದೆ” ಎಂದು ನ್ಯಾಯಾಧೀಶ ಸಾಳುಂಖೆ ಉಲ್ಲೇಖಿಸಿದ್ದಾರೆ.

ವಿಶೇಷ ಪೋಕ್ಸೋ (POCSO) ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಸಾಳುಂಖೆ ಅವರು ಈ ತೀರ್ಪನ್ನು ಪ್ರಕಟಿಸಿದ್ದಾರೆ. ಈ ಪ್ರಕರಣವನ್ನು “ಅಪರೂಪದಲ್ಲೇ ಅಪರೂಪದ ಪ್ರಕರಣ” ಎಂದು ವರ್ಗೀಕರಿಸಿದ ನ್ಯಾಯಾಲಯ, ಸಮಾಜದಲ್ಲಿ ಇಂತಹ ಘೋರ ಕೃತ್ಯಗಳಿಗೆ ಯಾವುದೇ ಕ್ಷಮೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಗಂಗಾವತಿ ಬಿಜೆಪಿ ಮುಖಂಡನ ಹತ್ಯೆ ಪ್ರಕರಣ: ಆರು ಜನ ಹಂತಕರಿಗೆ ಗಲ್ಲು ಶಿಕ್ಷೆ

ನ್ಯಾಯಾಲಯವು ಆರೋಪಿಗೆ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಪೋಕ್ಸೋ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮರಣದಂಡನೆ ಹಾಗೂ ಭಾರಿ ದಂಡವನ್ನು ವಿಧಿಸಿದೆ. ತನಿಖೆಯ ಸಂದರ್ಭದಲ್ಲಿ ಪೊಲೀಸರು ಮಂಡಿಸಿದ ಬಲವಾದ ವೈಜ್ಞಾನಿಕ ಮತ್ತು ವೈದ್ಯಕೀಯ ಸಾಕ್ಷ್ಯಾಧಾರಗಳು ಆರೋಪಿಗೆ ಗರಿಷ್ಠ ಶಿಕ್ಷೆಯಾಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಏನಿದು ಪ್ರಕರಣ?:

ಈ ಆಘಾತಕಾರಿ ಘಟನೆ 2026ರ ಮೇ 1ರಂದು ಪುಣೆ ಜಿಲ್ಲೆಯ ಭೋರ್ ತಹಸಿಲ್‌ನಲ್ಲಿರುವ ನಸ್ರಾಪುರ ಗ್ರಾಮದಲ್ಲಿ ನಡೆದಿತ್ತು. ಪ್ರಾಸಿಕ್ಯೂಷನ್ ಪ್ರಕಾರ, 3 ವರ್ಷದ ಮಗುವನ್ನು ಕಾಂಬ್ಳೆ ಆಮಿಷ ಒಡ್ಡಿ ಕರೆದೊಯ್ದು, ಕ್ರೂರವಾಗಿ ಲೈಂಗಿಕ ದೌರ್ಜನ್ಯ ನಡೆಸಿ ಕೊಂದಿದ್ದನು. ಆರೋಪಿಯು ಅಪ್ರಾಪ್ತ ಬಾಲಕಿಯ ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ, ನಂತರ ಆಕೆಯ ಶವವನ್ನು ಹಸುಗಳ ಕೊಟ್ಟಿಗೆಯಲ್ಲಿ ಬಚ್ಚಿಟ್ಟಿದ್ದನು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Personality Test: ಜುಲೈ ತಿಂಗಳಲ್ಲಿ ಜನಿಸಿದವರ ಗುಣ ಸ್ವಭಾವ ಹೇಗಿರುತ್ತೆ? ಇಲ್ಲಿದೆ ಈ ಕುರಿತ ಇಂಟರೆಸ್ಟಿಂಗ್‌ ಮಾಹಿತಿ – Kannada News | Personality Test: Secret personality of people born in July month; know how is their nature

ವ್ಯಕ್ತಿತ್ವ ಪರೀಕ್ಷೆImage Credit source: Getty Images

ಜ್ಯೋತಿಷ್ಯಶಾಸ್ತ್ರದಲ್ಲಿ ಹುಟ್ಟಿದ ಸಮಯ, ದಿನ, ಗ್ರಹಗಳ ಸ್ಥಾನ, ನಕ್ಷತ್ರಗಳ ಪ್ರಭಾವದ ಮೇರೆಗೆ ಒಬ್ಬ ವ್ಯಕ್ತಿಯ ಗುಣ ಸ್ವಭಾವ (nature) ಹೇಗಿದೆ, ಆತನ ಭವಿಷ್ಯ ಹೇಗಿದೆ ಎಂಬುದನ್ನು ಬಹಿರಂಗಪಡಿಸಲಾಗುತ್ತದೆ. ಅದೇ ಸಂಖ್ಯಾಶಾಸ್ತ್ರದಲ್ಲಿ ಹುಟ್ಟಿದ ದಿನಾಂಕ, ಇಸವಿ ಆಧಾರ ಮೇಲೆ ವ್ಯಕ್ತಿಯ ಗುಣ ಸ್ವಭಾವ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಇದು ಮಾತ್ರವಲ್ಲದೆ ದೇಹಾಕಾರ, ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ ಮೂಲಕ ನಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯುವಂತೆ ಹುಟ್ಟಿದ ತಿಂಗಳ ಆಧಾರದ ಮೇಲೂ ವ್ಯಕ್ತಿತ್ವದ ಸೀಕ್ರೆಟ್‌ ತಿಳಿದುಕೊಳ್ಳಬಹುದು. ಇನ್ನೇನೂ ಜುಲೈ ತಿಂಗಳು ಆರಂಭವಾಗುತ್ತಿದ್ದು, ಇಂದಿನ ಈ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಜುಲೈ ತಿಂಗಳಲ್ಲಿ ಜನಿಸಿದರವರ ಗುಣ ಸ್ವಭಾವ ಹೇಗಿದೆ ಎಂಬುದನ್ನು ನೋಡೋಣ.

ಜುಲೈ ತಿಂಗಳಲ್ಲಿ ಹುಟ್ಟಿದವರ ವ್ಯಕ್ತಿತ್ವ ಹೇಗಿರುತ್ತೆ?

ಜುಲೈನಲ್ಲಿ ಜನಿಸಿದವರ ವ್ಯಕ್ತಿತ್ವ ತುಂಬಾ ಆಸಕ್ತಿದಾಯಕ ಮತ್ತು ಆಕರ್ಷಕವಾಗಿವೆ. ನೀವು ಅವರನ್ನು ಬುದ್ಧಿವಂತರು ಎಂದು ಕರೆಯಬಹುದು. ಈ ತಿಂಗಳಲ್ಲಿ ಜನಿಸಿದವರು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ. ಜುಲೈನಲ್ಲಿ ಜನಿಸಿದ ವ್ಯಕ್ತಿಗಳು ಭಾವನಾತ್ಮಕ, ಸೂಕ್ಷ್ಮ ಮತ್ತು ಸೃಜನಶೀಲ ವ್ಯಕ್ತಿತ್ವವನ್ನು ಹೊಂದಿರುತ್ತಾರೆ.

ಭಾವನಾತ್ಮಕ ಮತ್ತು ಸಹಾನುಭೂತಿಯ ಸ್ವಭಾವ: ಜುಲೈನಲ್ಲಿ ಜನಿಸಿದವರು ಭಾವನಾತ್ಮಕ ವ್ಯಕ್ತಿಗಳು. ಅಲ್ಲದೆ ಅವರು ಅತ್ಯಂತ ಕಾಳಜಿಯುಳ್ಳವರು ಮತ್ತು ಸಹಾನುಭೂತಿಯುಳ್ಳವರು ಕೂಡ ಹೌದು. ಅವರು ಎಲ್ಲಕ್ಕಿಂತ ಹೆಚ್ಚಾಗಿ ಕುಟುಂಬಕ್ಕೆ ಆದ್ಯತೆ ನೀಡುತ್ತಾರೆ ಮತ್ತು ತಮ್ಮ ಪ್ರೀತಿಪಾತ್ರರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಶ್ರಮಿಸುತ್ತಾರೆ. ಯಾರಾದರೂ ದುಃಖಿತರಾಗಿರುವುದನ್ನು ಕಂಡರೆ, ಅದು ಅವರಿಗೂ ಕೂಡ ನೋವನ್ನು ಉಂಟು ಮಾಡುತ್ತದೆ. ಅಷ್ಟು ಸೂಕ್ಷ್ಮರಾಗಿರುತ್ತಾರೆ ಜುಲೈ ತಿಂಗಳಲ್ಲಿ ಜನಿಸಿದವರು.

ಸುಂದರವಾಗಿರುತ್ತಾರೆ: ಜುಲೈನಲ್ಲಿ ಜನಿಸಿದ ಜನರು ತುಂಬಾನೇ ಸುಂದರವಾಗಿರುತ್ತಾರಂತೆ. ಅವರು ಆಕರ್ಷಕ ಮುಖಭಾವ ಹೊಂದಿರುವುದು ಮಾತ್ರವಲ್ಲ ಅವರ ಮಾತು ಕೂಡ ತುಂಬಾನೇ ಸಿಹಿಯಾಗಿರುತ್ತದೆ. ಅಷ್ಟೇ ಅಲ್ಲದೆ ಇವರ ವ್ಯಕ್ತಿತ್ವವೂ ಇಷ್ಟೇ ಆಕರ್ಷಕವಾಗಿರುತ್ತದೆ.  ನೀವು ಒಮ್ಮೆ ಅವರೊಂದಿಗೆ ಮಾತನಾಡಿದರೆ, ನೀವು ಅವರೊಂದಿಗೆ ಮತ್ತೆ ಮತ್ತೆ ಮಾತನಾಡಲು ಬಯಸುತ್ತೀರಿ.

ಉದಾರ ಸ್ವಭಾವ: ಜುಲೈನಲ್ಲಿ ಜನಿಸಿದವರು ಆಶಾವಾದಿಗಳು, ಶಾಂತರು ಮತ್ತು ಉದಾರ ಸ್ವಭಾವದವರಾಗಿದ್ದಾರೆ. ಸಹಾನುಭೂತಿಯುಳ್ಳವರಾದ ಇವರು  ಯಾವಾಗಲೂ ಇತರರಿಗೆ ಸಹಾಯ ಮಾಡಲು ಸಿದ್ಧರಿರುತ್ತಾರೆ ಮತ್ತು ಸರಳ ಜೀವನವನ್ನು ನಡೆಸುವುದರಲ್ಲಿ ನಂಬಿಕೆ ಇಡುತ್ತಾರೆ.

ತೀಕ್ಷ್ಣ ಬುದ್ಧಿಯ ವ್ಯಕ್ತಿಗಳು: ಜುಲೈನಲ್ಲಿ ಜನಿಸಿದವರು ತುಂಬಾ ಚುರುಕು ಬುದ್ಧಿಯ ವ್ಯಕ್ತಿಗಳಾಗಿರುತ್ತಾರೆ. ಈ ಜನರು ತಮ್ಮ ಬುದ್ಧಿವಂತಿಕೆಯಿಂದ ಅತ್ಯಂತ ಕಷ್ಟಕರವಾದ ಸಮಸ್ಯೆಗಳನ್ನು ಸಹ ಪರಿಹರಿಸುತ್ತಾರೆ.

ಇದನ್ನೂ ಓದಿ: ತಪ್ಪಿಯೂ ರೀತಿಯ ಜನರಿಗೆ ಸಹಾಯ ಮಾಡಲು ಹೋಗ್ಬೇಡಿ

ಶಾಂತ ಸ್ವಭಾವದವರು: ಈ ಜನರು ಬಹಳ ಸಂಘಟಿತ ನಡವಳಿಕೆಯನ್ನು ಹೊಂದಿರುತ್ತಾರೆ. ಅವರು ಸಾಕಷ್ಟು ಶಾಂತ ವ್ಯಕ್ತಿಗಳು. ಜುಲೈನಲ್ಲಿ ಜನಿಸಿದವರ ಇನ್ನೊಂದು ಅತ್ಯಂತ ವಿಶಿಷ್ಟ ಲಕ್ಷಣವೆಂದರೆ ಅವರ ಸೌಮ್ಯ ಮತ್ತು ಕರುಣಾಳು ವರ್ತನೆ. ಅವರು ಎಂದಿಗೂ ಇತರರ ಬಗ್ಗೆ ಅಸೂಯೆ ಅಥವಾ ದ್ವೇಷವನ್ನು ಹೊಂದಿರುವುದಿಲ್ಲ. ಅವರು ಯಾವಾಗಲೂ ಇತರರ ಸಂತೋಷದಲ್ಲಿ ತಮ್ಮ ಸಂತೋಷವನ್ನು ಕಾಣುತ್ತಾರೆ ಮತ್ತು ಇತರರ ದುಃಖದಲ್ಲಿ ತಾವು ಸಹ ಪಾಲು ಪಡೆಯುತ್ತಾರೆ. ಯಾರಾದರೂ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಇವರುಗಳು ಯಾವಾಗಲೂ ಸಹಾಯ ಮಾಡಲು ಮುಂದೆ ಬರುತ್ತಾರೆ. ಈ ಗುಣಗಳು ಜುಲೈನಲ್ಲಿ ಜನಿಸಿದವರನ್ನು ವಿಶೇಷವಾಗಿಸುತ್ತವೆ.

ಜುಲೈನಲ್ಲಿ ಜನಿಸಿದವರ ದೌರ್ಬಲ್ಯಗಳು: ಜುಲೈನಲ್ಲಿ ಜನಿಸಿದವರು ತುಂಬಾನೇ ಭಾವನಾತ್ಮಕ ವ್ಯಕ್ತಿಗಳಾಗಿರುವುದರಿಂದ ಅವರ ಭಾವನಾತ್ಮಕತೆಯು ಕೆಲವೊಮ್ಮೆ ದೌರ್ಬಲ್ಯವಾಗಬಹುದು. ಅವರು ತಮ್ಮ ನಿರ್ಧಾರಗಳ ಬಗ್ಗೆ ಅತಿಯಾಗಿ ಯೋಚಿಸುತ್ತಾರೆ ಮತ್ತು ಕೆಲವೊಮ್ಮೆ ಭಾವನೆಗಳಿಂದ ಆಕರ್ಷಿತರಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಆದ್ದರಿಂದ, ಅವರು ತಮ್ಮ ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಜುಲೈನಲ್ಲಿ ಜನಿಸಿದವರು ಸಹೃದಯ, ಆಳವಾದ ಭಾವನೆಗಳು ಮತ್ತು ಸೃಜನಶೀಲ ಶಕ್ತಿಯೊಂದಿಗೆ ಜೀವನವನ್ನು ನಡೆಸುತ್ತಾರೆ. ಅವರು ತಮ್ಮ ಭಾವನೆಗಳನ್ನು ಸಮತೋಲನದಲ್ಲಿಡಲು ಸಾಧ್ಯವಾದರೆ, ಅವರು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

LA 2028 Olympics: ಕ್ರಿಕೆಟ್ ಅರ್ಹತಾ ನಿಯಮಗಳು ಪ್ರಕಟ; ಯಾವೆಲ್ಲ ತಂಡಗಳಿಗೆ ಸಿಕ್ಕಿದೆ ಸ್ಥಾನ? – Kannada News | LA28 Olympic Cricket: ICC and IOC Announce Qualification Criteria for Men’s and Women’s Teams

ಬರೋಬ್ಬರಿ 128 ವರ್ಷಗಳ ನಂತರ ಒಲಿಂಪಿಕ್ಸ್​ಗೆ ಕ್ರಿಕೆಟ್ ಮರಳುತ್ತಿದೆ. 2028 ರಲ್ಲಿ ನಡೆಯಲಿರುವ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಅನ್ನು ಕೂಡ ಒಂದು ಕ್ರೀಡೆಯಾಗಿ ಸೇರಿಸಲಾಗಿದೆ. ಇದೀಗ ಐಸಿಸಿ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅರ್ಹತಾ ಮಾನದಂಡಗಳನ್ನು ಘೋಷಿಸಿವೆ. ಅಂದರೆ 2028 ರ ಒಲಿಂಪಿಕ್ಸ್​ಗೆ ತಂಡಗಳನ್ನು ಯಾವ ಮಾನದಂಡಗಳ ಮೇಲೆ ಆಯ್ಕೆ ಮಾಡಲಾಗುತ್ತದೆ ಎಂಬುದನ್ನು ಈ ಎರಡು ಸಮಿತಿಗಳು ಜಂಟಿಯಾಗಿ ಸ್ಪಷ್ಟಪಡಿಸಿವೆ. ಅದರಂತೆ ಮುಂಬರುವ ಒಲಿಂಪಿಕ್ಸ್​ನಲ್ಲಿ ಪುರುಷ ಮತ್ತು ಮಹಿಳಾ ಎರಡೂ ವಿಭಾಗಗಳಲ್ಲಿ ತಲಾ ಆರು ತಂಡಗಳು ಭಾಗವಹಿಸಲಿವೆ. 2028 ರ ಜುಲೈ 22 ರಿಂದ ಜುಲೈ 29 ನಡುವೆ ಕ್ರಿಕೆಟ್ ಪಂದ್ಯಗಳು ನಡೆಯಲಿದ್ದು, ಜುಲೈ 29 ರಂದು ಫೈನಲ್ ಪಂದ್ಯ ನಡೆಯಲಿದೆ. ಪಂದ್ಯಗಳನ್ನು ಟಿ20 ಸ್ವರೂಪದಲ್ಲಿ ಆಡಿಸಲು ತೀರ್ಮಾನಿಸಲಾಗಿದೆ.

ತಲಾ 4 ತಂಡಗಳಿಗೆ ನೇರ ಪ್ರವೇಶ

ಮೇಲೆ ಹೇಳಿದಂತೆ ಪ್ರಪಂಚದಾದ್ಯಂತದ ಆರು ಪುರುಷ ಮತ್ತು ಆರು ಮಹಿಳಾ ತಂಡಗಳು ಮಾತ್ರ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅರ್ಹವಾಗಿರುತ್ತವೆ. ಅದರಂತೆ ಐಸಿಸಿ ಟಿ20 ಶ್ರೇಯಾಂಕದಲ್ಲಿ ನಾಲ್ಕು ಖಂಡಗಳಿಂದ ಅಗ್ರಸ್ಥಾನದಲ್ಲಿರುವ 4 ತಂಡಗಳು ಒಲಿಂಪಿಕ್ಸ್‌ನಲ್ಲಿ ನೇರ ಸ್ಥಾನ ಪಡೆಯುತ್ತವೆ. ಈ 4 ತಂಡಗಳನ್ನು ಡಿಸೆಂಬರ್ 31, 2026 ರಂದು ಐಸಿಸಿ ಶ್ರೇಯಾಂಕದ ಮೂಲಕ ನಿರ್ಧರಿಸಲಾಗುತ್ತದೆ. ಇದರ ಅಡಿಯಲ್ಲಿ, ಏಷ್ಯಾ, ಯುರೋಪ್, ಆಫ್ರಿಕಾ ಮತ್ತು ಓಷಿಯಾನಿಯಾದಿಂದ ತಲಾ ಒಂದು ತಂಡವು ನೇರವಾಗಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತದೆ. ಇದರರ್ಥ ಏಷ್ಯಾದಿಂದ ಭಾರತ, ಆಫ್ರಿಕಾದಿಂದ ದಕ್ಷಿಣ ಆಫ್ರಿಕಾ, ಯುರೋಪ್‌ನಿಂದ ಇಂಗ್ಲೆಂಡ್ ಮತ್ತು ಓಷಿಯಾನಿಯಾದಿಂದ ಆಸ್ಟ್ರೇಲಿಯಾ ನೇರ ಸ್ಥಾನ ಪಡೆಯುತ್ತವೆ. ಇಂಗ್ಲೆಂಡ್ ತಂಡವು ಗ್ರೇಟ್ ಬ್ರಿಟನ್ ಹೆಸರಿನಲ್ಲಿ ಒಲಿಂಪಿಕ್ಸ್‌ನಲ್ಲಿ ಆಡಲಿದೆ. ಇದರಲ್ಲಿ ಇಂಗ್ಲೆಂಡ್, ಐರ್ಲೆಂಡ್ ಮತ್ತು ವೇಲ್ಸ್‌ನ ಆಟಗಾರರು ಸೇರಿದ್ದಾರೆ.

ಆತಿಥೇಯ ದೇಶಕ್ಕೆ ಲಾಭ

ಉಳಿದಂತೆ ಆತಿಥೇಯರಾಗಿ, ಯುನೈಟೆಡ್ ಸ್ಟೇಟ್ಸ್ ಪುರುಷ ಮತ್ತು ಮಹಿಳಾ ತಂಡಗಳು ನೇರ ಪ್ರವೇಶವನ್ನು ಪಡೆಯಬಹುದು. ಆದರೆ ಇಲ್ಲೊಂದು ಷರತ್ತು ವಿಧಿಸಲಾಗಿದ್ದು, ಜೂನ್ 30, 2026 ಮತ್ತು ಡಿಸೆಂಬರ್ 31, 2026 ರ ನಡುವೆ ಈ ಎರಡು ತಂಡಗಳು ಐಸಿಸಿ ಟಿ20 ಶ್ರೇಯಾಂಕದಲ್ಲಿ ವಿಶ್ವದ ಅಗ್ರ 15 ತಂಡಗಳಲ್ಲಿ ಸ್ಥಾನ ಪಡೆದಿರಬೇಕು. ಒಂದು ವೇಳೆ ಯುಎಸ್ ತಂಡಗಳು ಅಗ್ರ 15 ರೊಳಗೆ ಸ್ಥಾನಗಳನ್ನು ತಲುಪಲು ವಿಫಲವಾದರೆ, ನೇರ ಪ್ರವೇಶ ಪಡೆಯುವ ಅವಕಾಶದಿಂದ ವಂಚಿತವಾಗುತ್ತವೆ. ಆ ಸ್ಥಾನವನ್ನು ಶ್ರೇಯಾಂಕದಲ್ಲಿ ಎರಡನೇ ಅತ್ಯುತ್ತಮ ತಂಡಕ್ಕೆ ನೀಡಲಾಗುತ್ತದೆ. ಇನ್ನು ಆರನೇ ತಂಡವನ್ನು ಒಲಿಂಪಿಕ್ ಗ್ಲೋಬಲ್ ಅರ್ಹತಾ ಪಂದ್ಯಾವಳಿಯ ಮೂಲಕ ನಿರ್ಧರಿಸಲಾಗುತ್ತದೆ. ಈ ಅರ್ಹತಾ ಪಂದ್ಯಾವಳಿ 2027 ರಲ್ಲಿ ನಡೆಯಲಿದ್ದು, ಈಗಾಗಲೇ ಒಲಿಂಪಿಕ್ಸ್​ಗೆ ಆಯ್ಕೆಯಾಗಿರುವ ಟಾಪ್ 4 ತಂಡಗಳನ್ನು ಹೊರತುಪಡಿಸಿ ಉಳಿದ 8 ತಂಡಗಳು ಈ ಸುತ್ತನ್ನು ಆಡಲಿವೆ. ಈ ಸುತ್ತಿನಲ್ಲಿ ಗೆದ್ದ ತಂಡ 6ನೇ ತಂಡವಾಗಿ ಒಲಿಂಪಿಕ್ಸ್​ಗೆ ಅರ್ಹತೆ ಪಡೆಯುತ್ತದೆ.

ವೆಸ್ಟ್ ಇಂಡೀಸ್ ತಂಡಕ್ಕೆ ಪ್ರತ್ಯೇಕ ನಿಯಮ

ಇಲ್ಲಿ ವೆಸ್ಟ್ ಇಂಡೀಸ್ ತಂಡವು ಮೊದಲ ಎಂಟು ಸ್ಥಾನಗಳಲ್ಲಿ ಸ್ಥಾನ ಪಡೆದರೆ, ಐಸಿಸಿ ವೆಸ್ಟ್ ಇಂಡೀಸ್ ನೇಷನ್ಸ್ ಪ್ರಾದೇಶಿಕ ಪಂದ್ಯಾವಳಿಯನ್ನು ಆಯೋಜಿಸುತ್ತದೆ. ಏಕೆಂದರೆ ವೆಸ್ಟ್ ಇಂಡೀಸ್ ಒಂದು ದೇಶವಲ್ಲ. ಬದಲಾಗಿ ಹಲವಾರು ಸಣ್ಣ ಕೆರಿಬಿಯನ್ ರಾಷ್ಟ್ರಗಳು ರಚಿಸಿದ ಸಂಯೋಜಿತ ತಂಡವಾಗಿದೆ. ಆದರೆ ಒಂದೇ ದೇಶದ ತಂಡ ಮಾತ್ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಬಹುದಾದ್ದರಿಂದ, ಯಾವುದೇ ತಂಡವು ವೆಸ್ಟ್ ಇಂಡೀಸ್ ಹೆಸರಿನಲ್ಲಿ ಒಲಿಂಪಿಕ್ಸ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ವಿಶೇಷ ನಿಯಮವನ್ನು ಮಾಡಲಾಗಿದೆ. ಡಿಸೆಂಬರ್ 31, 2026 ರೊಳಗೆ ವೆಸ್ಟ್ ಇಂಡೀಸ್ ತಂಡವು ವಿಶ್ವದ ಅಗ್ರ ಎಂಟು ತಂಡಗಳಲ್ಲಿ ಸ್ಥಾನ ಪಡೆದಿದ್ದರೆ, ಈ ಎಲ್ಲಾ ಕೆರಿಬಿಯನ್ ರಾಷ್ಟ್ರಗಳ ನಡುವೆ ಪ್ರತ್ಯೇಕ ಪಂದ್ಯಾವಳಿಯನ್ನು ನಡೆಸಲಾಗುತ್ತದೆ. ಈ ಪಂದ್ಯಾವಳಿಯನ್ನು ಗೆಲ್ಲುವ ದೇಶವನ್ನು ನಂತರದ ‘ಒಲಿಂಪಿಕ್ ಅರ್ಹತಾ’ ಪಂದ್ಯಗಳಲ್ಲಿ ಆಡಲು ಆಯ್ಕೆ ಮಾಡಲಾಗುತ್ತದೆ.

ಮಹಿಳಾ ತಂಡದ ಆಯ್ಕೆ ಹೇಗೆ?

2026 ರ ಮಹಿಳಾ ಟಿ20 ವಿಶ್ವಕಪ್ ಫಲಿತಾಂಶಗಳ ಆಧಾರದ ಮೇಲೆ ಒಲಿಂಪಿಕ್ಸ್‌ಗೆ ಮೊದಲ ನಾಲ್ಕು ಮಹಿಳಾ ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ನಿಯಮಗಳ ಪ್ರಕಾರ, ನಾಲ್ಕು ಖಂಡಗಳಿಂದ ತಲಾ ಒಂದು ಅತ್ಯುತ್ತಮ ಪ್ರದರ್ಶನ ನೀಡುವ ತಂಡವನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ, ಏಷ್ಯಾದಿಂದ ಭಾರತ, ಓಷಿಯಾನಿಯಾದಿಂದ ಆಸ್ಟ್ರೇಲಿಯಾ, ಯುರೋಪಿನಿಂದ ಇಂಗ್ಲೆಂಡ್ (ಗ್ರೇಟ್ ಬ್ರಿಟನ್) ಮತ್ತು ಆಫ್ರಿಕಾದಿಂದ ದಕ್ಷಿಣ ಆಫ್ರಿಕಾ ನೇರವಾಗಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿವೆ. ಉಳಿದ ತಂಡಗಳನ್ನು ಅರ್ಹತಾ ಪಂದ್ಯಗಳ ಮೂಲಕ ನಿರ್ಧರಿಸಲಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:41 pm, Mon, 29 June 26

Source link

ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: 25 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ, 17 ಪೆಡ್ಲರ್‌ಗಳ ಬಂಧನ – Kannada News | Mega Drug Bust in Bengaluru: CCB and Police Seize MDMA and Ganja Worth Rs 25 Crore, 17 Pedlars Including Arrested

ಬೆಂಗಳೂರು, ಜೂನ್ 29: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಯುವ ಪೀಳಿಗೆಯನ್ನು ಗುರಿಯಾಗಿಸಿಕೊಂಡು ನೆರೆಹೊರೆಯ ರಾಜ್ಯ ಹಾಗೂ ವಿದೇಶಗಳಿಂದ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಬೃಹತ್ ಡ್ರಗ್ಸ್ ಜಾಲವನ್ನು ಸಿಸಿಬಿ (CCB) ಹಾಗೂ ನಗರ ಪೊಲೀಸರು (Bengaluru Police) ಜಂಟಿ ಕಾರ್ಯಾಚರಣೆಯ ಮೂಲಕ ಧ್ವಂಸಗೊಳಿಸಿದ್ದಾರೆ. ನಗರದಾದ್ಯಂತ ನಡೆಸಲಾದ ಈ ಮೆಗಾ ಆಪರೇಷನ್‌ನಲ್ಲಿ ಬರೋಬ್ಬರಿ 25 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಮೂವರು ವಿದೇಶಿ ಪ್ರಜೆಗಳು ಸೇರಿದಂತೆ ಒಟ್ಟು 17 ಮಂದಿ ಕುಖ್ಯಾತ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಕೆಜಿಗಟ್ಟಲೆ ಎಂಡಿಎಂಎ (MDMA) ಕ್ರಿಸ್ಟಲ್ ಹಾಗೂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಲಗೇಜ್ ಬ್ಯಾಗ್‌ನಲ್ಲಿತ್ತು 21 ಕೋಟಿಯ ಎಂಡಿಎಂಎ!

ಈ ಇಡೀ ಕಾರ್ಯಾಚರಣೆಯಲ್ಲಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳವು ಅತಿ ದೊಡ್ಡ ಬೇಟೆಯಾಡಿದೆ. ಲಗೇಜ್ ಬ್ಯಾಗ್‌ಗಳ ಒಳಗೆ ಎಂಡಿಎಂಎ ಕ್ರಿಸ್ಟಲ್ ಅನ್ನು ಯಾರಿಗೂ ಅನುಮಾನ ಬಾರದಂತೆ ಅಡಗಿಸಿಟ್ಟುಕೊಂಡು ಬೆಂಗಳೂರಿಗೆ ತರುತ್ತಿದ್ದ ಮೂವರು ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಇವರಿಂದ ಬರೋಬ್ಬರಿ 21 ಕೋಟಿ ರೂಪಾಯಿ ಮೌಲ್ಯದ 10 ಕೆಜಿ 270 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟಲ್ ಅನ್ನು ಸೀಜ್ ಮಾಡಲಾಗಿದೆ. ಆರೋಪಿಗಳು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬೈಲಕೊನೇಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು.

ನೈಜೀರಿಯಾದಲ್ಲಿದ್ದ ಇತರ ಪೆಡ್ಲರ್‌ಗಳ ಮೂಲಕ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ ಆರೋಪಿಗಳು, ನಗರದ ಕಾಲೇಜು ವಿದ್ಯಾರ್ಥಿಗಳನ್ನು ಹಾಗೂ ಐಟಿ ಉದ್ಯೋಗಿಗಳನ್ನು ಸಂಪರ್ಕಿಸಿ ಮಾರಾಟ ಮಾಡುತ್ತಿದ್ದರು. ಇವರು ಮೆಡಿಕಲ್ ಮತ್ತು ಟೂರಿಸ್ಟ್ ವೀಸಾದಲ್ಲಿ ಭಾರತಕ್ಕೆ ಬಂದು, ವೀಸಾ ಅವಧಿ ಮುಗಿದಿದ್ದರೂ ಅನಧಿಕೃತವಾಗಿ ಬೆಂಗಳೂರಿನಲ್ಲೇ ನೆಲೆಸಿ ಈ ಕೃತ್ಯ ಎಸಗುತ್ತಿದ್ದರು ಎಂಬುದು ಬಯಲಾಗಿದೆ.

ವಾಹನ ಕಳ್ಳ ಈಗ ಗಾಂಜಾ ಕಿಂಗ್‌ಪಿನ್!

ಇನ್ನೊಂದೆಡೆ ಮಡಿವಾಳ ಪೊಲೀಸರು ನಡೆಸಿದ ದಾಳಿಯಲ್ಲಿ ಒಡಿಶಾದಿಂದ ಇಂಡಿಗೋ ಕಾರಿನಲ್ಲಿ 36 ಕೆಜಿ ಗಾಂಜಾ ಸಾಗಿಸುತ್ತಿದ್ದ ದಸ್ತಗಿರಿ ಅಲಿಯಾಸ್ ದಸ್ತು ಎಂಬಾತನನ್ನು ಬಂಧಿಸಲಾಗಿದೆ. ಈ ಹಿಂದೆ ವಾಹನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ಈತ ಈಗ ಗಾಂಜಾ ಪೆಡ್ಲರ್ ಆಗಿ ಬದಲಾಗಿದ್ದ. ಈತನಿಂದ 18 ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರಿನ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಭರ್ಜರಿ ಬೇಟೆ

  • ಆರ್.ಎಂ.ಸಿ. ಯಾರ್ಡ್ ಪೊಲೀಸರ ಕಾರ್ಯಾಚರಣೆ: ₹72.30 ಲಕ್ಷ ಮೌಲ್ಯದ 1 ಕೆಜಿ 33 ಗ್ರಾಂ ಹೈಡ್ರೋ ಗಾಂಜಾ ಜಪ್ತಿ.
  • ಸುಬ್ರಹ್ಮಣ್ಯನಗರ ಪೊಲೀಸರ ಕಾರ್ಯಾಚರಣೆ: ₹69 ಲಕ್ಷ ಮೌಲ್ಯದ 45.8 ಕೆಜಿ ಗಾಂಜಾ, 237 ಗ್ರಾಂ ಹೈಡ್ರೋ ಗಾಂಜಾ ಹಾಗೂ 36 ಗ್ರಾಂ ಎಂಡಿಎಂಎ ವಶ.
  • ತಿಲಕನಗರ ಮತ್ತು ವೈಟ್‌ಫೀಲ್ಡ್ ಪೊಲೀಸರ ಕಾರ್ಯಾಚರಣೆ: ಕ್ರಮವಾಗಿ 20.2 ಕೆಜಿ ಮತ್ತು 22 ಕೆಜಿ ಗಾಂಜಾ ಜಪ್ತಿ.
  • ಯಶವಂತಪುರ ಮತ್ತು ರಾಜಾಜಿನಗರ ಪೊಲೀಸರ ಕಾರ್ಯಾಚರಣೆ: 300 ಇ-ಸಿಗರೇಟ್‌ಗಳು, ಹುಕ್ಕಾ ಫ್ಲೇವರ್‌ಗಳು ಹಾಗೂ ₹15.84 ಲಕ್ಷ ಮೌಲ್ಯದ ನಿಷೇಧಿತ ತಂಬಾಕು ಉತ್ಪನ್ನಗಳ ಸೀಜ್.
  • ಇಂದಿರಾನಗರ ಪೊಲೀಸರ ಕಾರ್ಯಾಚರಣೆ: 3 ಕೆಜಿ 247 ಗ್ರಾಂ ಗಾಂಜಾ, ಮೊಬೈಲ್ ಹಾಗೂ ದ್ವಿಚಕ್ರ ವಾಹನ ವಶ.

ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ ಎಷ್ಟು ಆಳವಾಗಿ ಬೇರು ಬಿಟ್ಟಿದೆ ಎಂಬುದನ್ನು ಈ ಜಂಟಿ ಆಪರೇಷನ್ ಸಾಬೀತುಪಡಿಸಿದೆ. ಸದ್ಯ ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಈ ಇಡೀ ನೆಟ್‌ವರ್ಕ್‌ನ ಹಿಂದಿರುವ ಮುಖ್ಯ ಕಿಂಗ್‌ಪಿನ್‌ಗಳ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉತ್ತರ ಕನ್ನಡದಲ್ಲಿ ಹೈ ಅಲರ್ಟ್: ಕೊಮುಗಲಭೆ ಸುಳಿವು ನೀಡಿದ ಗುಪ್ತಚರ ಇಲಾಖೆ, ಕಠಿಣ ಕ್ರಮಕ್ಕೆ ಮುಂದಾದ ಜಿಲ್ಲಾಡಳಿತ! – Kannada News | Uttara Kannada on High Alert After Intelligence Warning; District Administration Steps Up strict action

ಕಾರವಾರ, ಜೂನ್​​ 29: ಮೂರಿನ್ ಕಟ್ಟೆ ಧ್ವಂಸ ವಿವಾದ (Moorin Katte Controversy) ಇತ್ತೀಚೆಗೆ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆ ಬಳಿಕ ಉತ್ತರ ಕನ್ನಡದ (Uttara kannada) ಭಟ್ಕಳದಲ್ಲಿ ಇಂದಿಗೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಿರುವಾಗ ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಭಟ್ಕಳದಲ್ಲಿ ಕೋಮು ಗಲಭೆ ನಡೆಯುವ ಸಾಧ್ಯತೆ ಕುರಿತಾಗಿ ಗುಪ್ತಚರ ಇಲಾಖೆ (ಇಂಟೆಲಿಜೆನ್ಸ್) ಸುಳಿವು ನೀಡಿದೆ. ಗುಪ್ತಚರ ಇಲಾಖೆ ಸುಳಿವು ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ ಹಾಗೂ ಭಟ್ಕಳ ಶಹರ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

60 ರೌಡಿ ಶೀಟರ್‌ಗಳಿಗೆ ನೋಟಿಸ್ 

ಗುಪ್ತಚರ ಇಲಾಖೆ ವರದಿ ಮತ್ತು ಪೊಲೀಸರು ನೀಡಿದ ಮಾಹಿತಿ ಆಧಾರದ ಮೇಲೆ ಭಟ್ಕಳ ತಹಶೀಲ್ದಾರ್ ಪ್ರವೀಣ್ ಕರಾಂಡೆ ಶಹರದ ಒಟ್ಟು 60 ರೌಡಿ ಶೀಟರ್‌ಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಇದರಲ್ಲಿ 40 ಮುಸ್ಲಿಂ ಹಾಗೂ 20 ಹಿಂದೂ ಸಮುದಾಯಕ್ಕೆ ಸೇರಿದ ರೌಡಿ ಶೀಟರ್‌ಗಳು ಸೇರಿದ್ದಾರೆ.

ಇದನ್ನೂ ಓದಿ: ಮೂರಿನ್ ಕಟ್ಟೆ ವಿವಾದ: ಬಕ್ರಿದ್ ಹಬ್ಬದ ದಿನ ಮದ್ಯ ಮಾರಾಟ ನಿಷೇಧ; ಸಂಘರ್ಷಕ್ಕೆ ಕಾರಣವಾದ ವಿಡಿಯೋ ವೈರಲ್​

ಗಣೇಶ ಹಬ್ಬ, ಈದ್ ಮಿಲಾದ್ ಸೇರಿದಂತೆ ಯಾವುದೇ ಹಬ್ಬಗಳ ಸಂದರ್ಭದಲ್ಲಿ ಯಾವುದೇ ರೀತಿಯ ಕೋಮು ಗಲಭೆ ಅಥವಾ ಅಶಾಂತಿ ಸೃಷ್ಟಿಸುವ ಕೃತ್ಯಗಳಲ್ಲಿ ಭಾಗಿಯಾಗುವುದಿಲ್ಲ ಮತ್ತು ಸಮಾಜದಲ್ಲಿ ದುರ್ವರ್ತನೆ ತೋರುವುದಿಲ್ಲ ಎಂದು ತಲಾ 50 ಸಾವಿರ ರೂಪಾಯಿಗಳ ಮುಚ್ಚಳಿಕೆ ಬಾಂಡ್ ಬರೆದುಕೊಡುವಂತೆ ನೋಟಿಸ್‌ನಲ್ಲಿ ಸೂಚನೆ ನೀಡಿದ್ದಾರೆ.

ತಹಶೀಲ್ದಾರ್ ನೀಡಿರುವ ನೋಟಿಸ್​ ಬಗ್ಗೆ ಕೆಲವರಿಂದ ಆಕ್ಷೇಪ

ಇನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ 129(ಇ) ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಆದರೆ, ತಹಶೀಲ್ದಾರ್ ನೀಡಿರುವ ಈ ನೋಟಿಸ್‌ಗೆ ಕೆಲವರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ, ಶಾಂತಿ ಸುವ್ಯವಸ್ಥೆ ಕಾಪಾಡಲು ನಿಮ್ಮಿಂದ ಏಕೆ ಬಾಂಡ್ ಬರೆಸಿಕೊಳ್ಳಬಾರದು? ಎಂಬ ಕುರಿತು ವಿಚಾರಣೆ ನಡೆಸಲು ತಹಶೀಲ್ದಾರ್ ನಿರ್ಧರಿಸಿದ್ದಾರೆ. ಆಕ್ಷೇಪಣೆ ಸಲ್ಲಿಸಿರುವ ಹಾಗೂ ನೋಟಿಸ್ ನೀಡಿದವರಿಗೆ ಇಂದು ಕೋರ್ಟ್‌ಗೆ ಖುದ್ದಾಗಿ ಹಾಜರಾಗುವಂತೆ ತಹಶೀಲ್ದಾರ್ ಖಡಕ್ ಸೂಚನೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಚಿನ್ನದ ಬೆಲೆ ಕಡಿಮೆ ಆಗಲು ಕಾರಣಗಳೇನು? ಬಂಗಾರ ಈಗ ಸುರಕ್ಷಿತ ಸರಕಾಗಿ ಉಳಿದಿಲ್ಲವಾ? – Kannada News | Gold not remained as pure safe haven asset, know why its price is going down

ನವದೆಹಲಿ, ಜೂನ್ 29: ಜಾಗತಿಕವಾಗಿ ಆರ್ಥಿಕ ಅಥವಾ ರಾಜಕೀಯ ಬಿಕ್ಕಟ್ಟು ಎದುರಾದಾಗ ಹೂಡಿಕೆದಾರರು ಬಂಗಾರವನ್ನು ಅತ್ಯಂತ ಸುರಕ್ಷಿತ ಹೂಡಿಕೆ (Safe Haven) ಎಂದು ಪರಿಗಣಿಸುವುದುಂಟು. ಆದರೆ ಇತ್ತೀಚಿನ ದಿನಗಳಲ್ಲಿ ಈ ಟ್ರೆಂಡ್ ಬದಲಾಗುತ್ತಿದ್ದು, ಚಿನ್ನದ ಬೆಲೆಯ (Gold) ಮೇಲಿನ ಹಿಡಿತ ಕೈತಪ್ಪುತ್ತಿದೆ. ಚಿನ್ನದ ಬೆಲೆ ಕಳೆದ ನಾಲ್ಕು ತಿಂಗಳಿಂದ ಬಹುತೇಕ ಸತತವಾಗಿ ಕುಸಿಯುತ್ತಾ ಬಂದಿದೆ. ಇರಾನ್ ಅಮೆರಿಕ ಯುದ್ಧ ಹಾಗೂ ನಂತರ ಅನಿಶ್ಚಿತ ಪರಿಸ್ಥಿತಿಯಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚುವ ಬದಲು ಇಳಿಕೆ ಆಗುತ್ತಿರುವುದು ಕೌತುಕ ಮೂಡಿಸಿದೆ. ಹೂಡಿಕೆದಾರರ ಈ ವರ್ತನೆಗೆ ಏನು ಕಾರಣ? ಚಿನ್ನದ ಆಕರ್ಷಣೆ ಯಾಕೆ ಕಡಿಮೆ ಆಗಿದೆ? ಚಿನ್ನದ ಬೆಲೆ ಕುಸಿಯಲು ಈ ಕೆಳಕಾಣಿಸಿದ ಸಂಭಾವ್ಯ ಕಾರಣಗಳಿವೆ:

ಅಮೆರಿಕದ ಫೆಡರಲ್ ರಿಸರ್ವ್ (Fed) ನೀತಿ

ಅಮೆರಿಕದ ಫೆಡರಲ್ ರಿಸರ್ವ್‌ನ ಹೊಸ ಮುಖ್ಯಸ್ಥರ ನೇತೃತ್ವದಲ್ಲಿ ಬಡ್ಡಿದರಗಳನ್ನು ಹೆಚ್ಚಿಸುವ ಅಥವಾ ಅವುಗಳನ್ನು ದೀರ್ಘಕಾಲದವರೆಗೆ ಮೇಲ್ಮಟ್ಟದಲ್ಲಿ ಕಾಯ್ದುಕೊಳ್ಳುವ ಮುನ್ಸೂಚನೆ ಸಿಕ್ಕಿದೆ. ಬಡ್ಡಿದರಗಳು ಹೆಚ್ಚಾದಾಗ ಹೂಡಿಕೆದಾರರು ಚಿನ್ನದ ಬದಲಾಗಿ ಬಾಂಡ್‌ಗಳತ್ತ ಮುಖ ಮಾಡುತ್ತಾರೆ, ಏಕೆಂದರೆ ಚಿನ್ನದ ಮೇಲೆ ಯಾವುದೇ ಬಡ್ಡಿ ಸಿಗುವುದಿಲ್ಲ.

ಇದನ್ನೂ ಓದಿ: ದಿ ಫೌಂಡ್ರಿ- 5,000 ರೂ ಶುಲ್ಕ, 90 ದಿನ ವಸತಿ, ಹೊಸ ಸ್ಟಾರ್ಟಪ್ ಕಟ್ಟಿ, ಹೂಡಿಕೆದಾರರ ಬೆಂಬಲವೂ ಪಡೆಯಿರಿ

ಬಲಿಷ್ಠಗೊಳ್ಳುತ್ತಿರುವ ಯುಎಸ್ ಡಾಲರ್ (US Dollar)

ಫೆಡರಲ್ ರಿಸರ್ವ್​ನ ಕಠಿಣ ನಿಲುವಿನಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಸೂಚ್ಯಂಕ (Dollar Index) ಅತ್ಯಂತ ಬಲಿಷ್ಠಗೊಳ್ಳುತ್ತಿದೆ. ಸಾಮಾನ್ಯವಾಗಿ ಡಾಲರ್ ಮತ್ತು ಚಿನ್ನದ ಬೆಲೆಗೆ ಉಲ್ಟಾ ಸಂಬಂಧವಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಷ್ಟೂ ಚಿನ್ನದ ಬೆಲೆಯ ಮೇಲೆ ಒತ್ತಡ ಹೆಚ್ಚಾಗಿ ಅದು ಕುಸಿಯತೊಡಗುತ್ತದೆ.

ಕಚ್ಚಾ ತೈಲ ಮತ್ತು ಮಧ್ಯಪ್ರಾಚ್ಯದ ಜಾಗತಿಕ ವಿದ್ಯಮಾನಗಳು

ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ನಡುವೆ ತಾತ್ಕಾಲಿಕ ಕದನ ವಿರಾಮ ಏರ್ಪಟ್ಟಿದ್ದರಿಂದಾಗಿ ಕಚ್ಚಾ ತೈಲ (Crude Oil) ಬೆಲೆಗಳು ನಿಯಂತ್ರಣಕ್ಕೆ ಬಂದಿವೆ. ಯುದ್ಧದ ಭೀತಿ ಕಡಿಮೆಯಾಗುತ್ತಿದ್ದಂತೆ, ಮಾರುಕಟ್ಟೆಯಲ್ಲಿದ್ದ ಆತಂಕ ದೂರವಾಗಿ ಚಿನ್ನಕ್ಕೆ ಇದ್ದ ಬೇಡಿಕೆ (War Premium) ಕಡಿಮೆಯಾಗಿದೆ.

ಹೂಡಿಕೆದಾರರ ಧೋರಣೆ ಬದಲಾವಣೆ

ಹೂಡಿಕೆದಾರರು ಈಗ ಕೇವಲ ಸುರಕ್ಷತೆಗಾಗಿ ಚಿನ್ನವನ್ನು ಖರೀದಿಸುತ್ತಿಲ್ಲ, ಬದಲಾಗಿ ಇಟಿಎಫ್​ಗಳ (ETF) ಮೂಲಕ ಲಾಭ ಗಳಿಸುವ ಉದ್ದೇಶ ಹೊಂದಿದ್ದಾರೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಷೇರುಗಳು ಕುಸಿದಾಗ, ಮಾರ್ಜಿನ್ ಕಾಲ್‌ಗಳನ್ನು ಸರಿದೂಗಿಸಲು ಚಿನ್ನವನ್ನೂ ಮಾರಾಟ ಮಾಡುತ್ತಿದ್ದಾರೆ. ಇದು ಚಿನ್ನದ ಸಾಂಪ್ರದಾಯಿಕ ರಕ್ಷಣಾತ್ಮಕ ಗುಣವನ್ನು ಕಡಿಮೆ ಮಾಡಿದೆ.

ಇದನ್ನೂ ಓದಿ: ಜುಲೈನಲ್ಲಿ ದೇಶಾದ್ಯಂತ 13 ಬ್ಯಾಂಕ್ ರಜಾ ದಿನಗಳು; ಕರ್ನಾಟಕದಲ್ಲೆಷ್ಟು?

ಮಾರುಕಟ್ಟೆಯ ಪ್ರಸ್ತುತ ಸ್ಥಿತಿ

ಕಳೆದ ಜನವರಿಯಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ್ದ ಚಿನ್ನದ ಬೆಲೆ, ಇತ್ತೀಚಿನ ವಾರಗಳಲ್ಲಿ ಭಾರಿ ಕುಸಿತ ಕಂಡಿದೆ. ತಜ್ಞರ ಪ್ರಕಾರ, ಯುಎಸ್ ಡಾಲರ್‌ನ ಅಬ್ಬರ ತಗ್ಗುವವರೆಗೆ ಅಥವಾ ಫೆಡರಲ್ ರಿಸರ್ವ್ ತನ್ನ ನೀತಿಯನ್ನು ಸಡಿಲಗೊಳಿಸುವವರೆಗೆ ಚಿನ್ನದ ಬೆಲೆಯ ಮೇಲಿನ ಈ ಒತ್ತಡ ಮುಂದುವರಿಯುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Viral: ತನಗಿಂತ ಸಣ್ಣ ವಯಸ್ಸಿನವರು ಹೆಚ್ಚು ಸಂಪಾದನೆ ಮಾಡ್ತಾರೆ; ವೃತ್ತಿ ಬದುಕಿನ ಕರಾಳ ಮುಖ ಬಿಚ್ಚಿಟ್ಟ ವ್ಯಕ್ತಿ – Kannada News | A man who paved the way for his personal and professional struggles

ಕೈ ತುಂಬಾ ಸಂಬಳ ಸಿಗೋ ದುಡಿಮೆ (job) ಹೊಂದಿದ್ದರೂ ಕೆಲವರಿಗೆ ತೃಪ್ತಿ ಅನ್ನೋದೆ ಇರಲ್ಲ. ಜೀವನ ಪರ್ಯಂತ ಕೊರತೆಯೊಂದು ಕಾಡುತ್ತಿರುತ್ತದೆ. ಇನ್ನು ಕೆಲವರು ಕೈಯಲ್ಲಿ ಉದ್ಯೋಗ ಹೊಂದಿದ್ರೂ ತಮ್ಮ ಸಂಬಳವನ್ನು ಬೇರೆಯವರ ಜತೆಗೆ ಹೋಲಿಕೆ ಮಾಡುವುದಿದೆ. ಇದೀಗ ವ್ಯಕ್ತಿಯೊಬ್ಬರು ನನ್ನ ಸಂಪಾದನೆಯನ್ನು ತನಗಿಂತ ಸಣ್ಣವರು ಮೀರಿಸುತ್ತಾರೆ. ತನ್ನ ವೃತ್ತಿಪರ ಪ್ರಯಾಣವು ತನ್ನ ಅನೇಕ ಗೆಳೆಯರಂತೆ ಸರಾಗವಾಗಿ ಪ್ರಾರಂಭವಾಗಲಿಲ್ಲ ಎಂದು ಬದುಕಿನ ಹೋರಾಟದ ಹಾದಿಯನ್ನು ತೆರೆದಿಟ್ಟಿದ್ದಾರೆ. ಈ ಎಕ್ಸ್ ಪೋಸ್ಟ್ ಗೆ ನೆಟ್ಟಿಗರು ಕಾಮೆಂಟ್ ಮಾಡಿ ಧೈರ್ಯ ತುಂಬಿದ್ದಾರೆ.

ಪರೇಶ್ ಪಿಸಿಪತಿ (paresh pisipati) ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ನಲ್ಲಿ ನಾನು 21 ನೇ ವಯಸ್ಸಿಗೆ ಕಾಲೇಜು ಮುಗಿಸಿ ಹೊರ ಬಂದಾಗ ಅನೇಕ ಸ್ನೇಹಿತರಂತೆ ನನಗೆ ಕೆಲಸವಿರಲಿಲ್ಲ. 26 ನೇ ವಯಸ್ಸಿನಲ್ಲಿ, ನನ್ನ ಸಂಬಳ 26,000 ರೂ ಆಗಿತ್ತು, ಆದರೆ ನನ್ನ ಸ್ನೇಹಿತರು ಹಾಗೂ ಮಾಜಿ ಸಹೋದ್ಯೋಗಿಗಳು ಈಗಾಗಲೇ ಎರಡು ಪಟ್ಟು ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸುತ್ತಿದ್ದರು ಎಂದಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಹೀಗಿರುವಾಗ ತಂದೆ ಕಿಮೊಥೆರಪಿಗೆ ಒಳಗಾಗಿದ್ದರಿಂದ ಆಸ್ಪತ್ರೆಗಳಲ್ಲಿ ತನ್ನ ಹೆಚ್ಚಿನ ಸಮಯವನ್ನು ಕಳೆದೆ. ಇತ್ತ ತನ್ನ ಪತ್ನಿಗೆ ರಸ್ತೆ ಅಪಘಾತವಾಯಿತು. ಹಾಗೂ ನನ್ನ ತಾಯಿಗೂ  ಅಪಘಾತವಾಯಿತು. ಈ ಎರಡು ಹೊಡೆತಗಳು ಒಟ್ಟಿಗೆ ಬಿದ್ದಿತು. ಸ್ವಲ್ಪ ಸಮಯದ ಬಳಿಕ ನಾನು ನನ್ನ ತಂದೆಯನ್ನು ಕಳೆದುಕೊಂಡೆ. ನನ್ನ ಪರಿಸ್ಥಿತಿಯನ್ನು ಇತರರೊಂದಿಗೆ ಹೋಲಿಸುವ ಮೂಲಕ ಕೆಟ್ಟದಾಗಿ ಭಾವಿಸುವ ನನ್ನ ಗೀಳು ಹಿಂದಿನದರಲ್ಲಿ ಸಿಲುಕಿಕೊಳ್ಳಲು ಕೇವಲ ಒಂದು ನೆಪ ಎಂದು ನನಗೆ ತಿಳಿಯಿತು. ನಂತರದ ವರ್ಷಗಳಲ್ಲಿ, ನನ್ನ ಗಮನವನ್ನು ಸಂಪೂರ್ಣವಾಗಿ ಕೃತಜ್ಞತೆ ಹಾಗೂ ತನ್ನ ಬಳಿಯಿರುವುದನ್ನು ಇನ್ನೊಬ್ಬರಿಗೂ ಕೊಡುವುದರ ಕಡೆಗೆ ಬದಲಾಯಿಸಿದೆ. ಸಂಬಂಧಗಳಿಗೆ ಹೆಚ್ಚು ಒತ್ತು ನೀಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 15 ದಿನಗಳಲ್ಲೇ ಕೆಲಸದಿಂದ ವಜಾಗೊಳಿಸಿದ ಕಂಪನಿ; ಕಹಿ ಅನುಭವ ಹಂಚಿಕೊಂಡ ಉದ್ಯೋಗಿ

ಈ ಪೋಸ್ಟ್ ಮೂವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರ, ಕೆಲವು ಘಟನೆಗಳು ನಮ್ಮನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಹೃದಯಕ್ಕೆ ಹತ್ತಿರವಾದ ಘಟನೆ. ನಿಮಗೆ ನನ್ನ ಸಲಾಂ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅರ್ಥಪೂರ್ಣ ಪೋಸ್ಟ್ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Source link

Exit mobile version