ತುಂಗಭದ್ರಾ ಡ್ಯಾಂ ನೂತನ ಕ್ರಸ್ಟ್​ ಗೇಟ್​​ಗಳ ಲೋಕಾರ್ಪಣೆ: ಕಾಂಗ್ರೆಸ್​​ ಸಿಎಂಗಳ ಎದುರೇ ಮೋದಿ ಗುಣಗಾನ ಮಾಡಿದ ಚಂದ್ರಬಾಬು ನಾಯ್ಡು – Kannada News | Tungabhadra Milestone: Chandrababu Naidu Hails PM Modi’s ‘Perfect Timing’ in Front of Congress CMs at Crest Gates Inauguration

ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡುImage Credit source: Tv9 Kannada

ಕೊಪ್ಪಳ, ಜೂನ್​​ 25: ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್​ ಗೇಟ್​​ಗಳ ಲೋಕಾರ್ಪಣೆ ಹಿನ್ನೆಲೆ ಕೊಪ್ಪಳ ತಾಲೂಕಿನ ಮುನಿರಾಬಾದ್​ನಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ರೈತ ಬಾಂಧವರಿಗೆ ನಮಸ್ಕಾರ ಅಂತಾ ಕನ್ನಡದಲ್ಲೇ ಭಾಷಣ ಆರಂಭಿಸಿದ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಕಾಂಗ್ರೆಸ್​​ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್​​ ಮತ್ತು ರೇವಂತ್​​ ರೆಡ್ಡಿ ಎದುರೇ ಪ್ರಧಾನಿ ಮೋದಿ ಗುಣಗಾನ ಮಾಡಿದ್ದಾರೆ. ನದಿಗಳ ಜೋಡಣೆಯಿಂದ ನೀರಿನ ಸಮಸ್ಯೆಗೆ ಪರಿಹಾರ ದೊರೆಯಲಿದ್ದು ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಇದು ನಡೆಯುವ ವಿಶ್ವಾಸ ತನಗಿದೆ ಎಂದವರು ಹೇಳಿದ್ದಾರೆ.

ಚಂದ್ರಬಾಬು ನಾಯ್ಡು ಹೇಳಿದ್ದೇನು?

ನನಗೆ ಕನ್ನಡ ಬಂದಿದ್ರೆ ಇನ್ನೂ ಚೆನ್ನಾಗಿ ಮಾತನಾಡುತ್ತಿದ್ದೆ ಎಂದ ನಾಯ್ಡು, ತುಂಗಭದ್ರಾ ತಾಯಿಗೆ ಶಿರಭಾಗಿ ನಮಸ್ಕಾರ ಮಾಡ್ತೀನಿ. ತುಂಗಾ ಪಾನಃ ಗಂಗಾ ಸ್ನಾನಃ ಎಂಬ ಮಾತಿದೆ. ತುಂಗಾ ನೀರು ಕುಡಿಯಲು ಶುದ್ಧ ಎಂದೇ ಪ್ರಸಿದ್ದಿ ಪಡೆದಿದೆ. ಕೊಚ್ಚಿ ಹೋಗಿದ್ದರಿಂದ ನೂತನ ಕ್ರಸ್ಟ್‌ ಗೇಟ್‌ ಲೋಕಾರ್ಪಣೆ ಆಗಿದೆ. ಕೊಚ್ಚಿ ಹೋಗಿದ್ದ ಒಂದು ಗೇಟ್‌ನ್ನು ಮಾತ್ರ ಹೊಸದಾಗಿ ಅಳವಡಿಸಿಲ್ಲ. ಬದಲಾಗಿ ಜಲಾಶಯದ ಎಲ್ಲಾ 33 ಗೇಟ್ ಹೊಸದಾಗಿ ಅಳವಡಿಸಲಾಗಿದೆ. ಕೇವಲ ಆರು ತಿಂಗಳಲ್ಲಿ ಈ ಕೆಲಸ ಮುಗಿದಿದ್ದಕ್ಕೆ ಹೆಮ್ಮೆ ಇದೆ. ಮೂವರು ಸಿಎಂಗಳು ಒಂದೇ ವೇದಿಕೆಯಲ್ಲಿ ಸೇರಿದ್ದು ಒಂದು ಇತಿಹಾಸ. ಹೊಸ ಕ್ರಸ್ಟ್‌ ಗೇಟ್‌ ಅಳವಡಿಕೆ ವಿಳಂಬವಾಗಿದ್ದರೆ ಭಾರಿ ಅಪಾಯ ಆಗುತ್ತಿತ್ತು. ಇದೀಗ ಆ ಅಪಾಯ ದೂರವಾಗಿದೆ. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶ ಬಹಳ ವೇಗವಾಗಿ ಮುನ್ನಡೆಯುತ್ತಿದೆ. ಸರಿಯಾದ ವ್ಯಕ್ತಿ, ಸರಿಯಾದ ಸ್ಥಳ ಮತ್ತು ಸರಿಯಾದ ಸಮಯ ಇದ್ದರೆ ಎಲ್ಲ ಸಾಧ್ಯವೆಂದು ಪ್ರತಿದಾರಿ ಬಾರಿ ನಾನು ಹೇಳುತ್ತೇನೆ.  ಅದು ನರೇಂದ್ರ ಮೋದಿ ಎಂದವರು ಹೇಳಿದ್ದಾರೆ.

ಇದನ್ನೂ ಓದಿ: ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಂದ ತುಂಗಭದ್ರಾ ಜಲಾಶಯದ ಹೊಸ ಗೇಟ್‌ಗಳ ಉದ್ಘಾಟನೆ

12 ಜನರಿಗೆ ಸನ್ಮಾನ

ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್​​ ಗೇಟ್​​ಗಳನ್ನು ಯಶಸ್ವಿಯಾಗಿ ಅಳವಡಿಕೆ ಮಾಡಿದ ಕನ್ನಯ್ಯ ನಾಯ್ಡು ಸೇರಿದಂತೆ 12 ಜನರಿಗೆ ಕಾರ್ಯಕ್ರಮದ ವೇದಿಕೆಯಲ್ಲಿ ಸನ್ಮಾನ ನೆರವೇರಿಸಲಾಗಿದೆ. ಮೂರು ರಾಜ್ಯಗಳ ಸಿಎಂ ಹಾಗೂ ಕೇಂದ್ರ ಜಲಶಕ್ತಿ ಸಚಿವರು ಗೌರವ ಸಮರ್ಪಣೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಮೂರು ರಾಜ್ಯಗಳ ಸಿಎಂಗಳು ಭಾಗಿಯಾಗಿದ್ದು ವಿಶೇಷವಾಗಿತ್ತು. ಜೊತೆಗೆ ಕೇಂದ್ರ ಜಲಶಕ್ತಿ ಸಚಿವ ಸಿ. ಆರ್. ಪಾಟೀಲ್ ಸೇರಿ ಆಂಧ್ರ ಮತ್ತು ತೆಲಂಗಾಣ ಎರಡೂ ರಾಜ್ಯಗಳ ಜಲಸಂಪನ್ಮೂಲ ಸಚಿವರು ಕೂಡ ಈ ವೇಳೆ ಉಪಸ್ಥಿತರಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ತುಂಗಭದ್ರಾ ಡ್ಯಾಂ ನೂತನ ಕ್ರಸ್ಟ್​ ಗೇಟ್​​ಗಳ ಲೋಕಾರ್ಪಣೆಗೆ ಜಲಸಂಪನ್ಮೂಲ ಸಚಿವರೇ ಗೈರು: ಸ್ಪಷ್ಟನೆ ನೀಡಿದ ರಾಮಲಿಂಗಾರೆಡ್ಡಿ – Kannada News | Ramalinga Reddy Clarifies Reason for Absence at Tungabhadra Dam Inauguration

ಸಚಿವ ರಾಮಲಿಂಗಾರೆಡ್ಡಿImage Credit source: tv9 kannada

ಕೊಪ್ಪಳ, ಜೂನ್​​ 25: ರೈತರ ಜೀವನಾಡಿ ತುಂಗಭದ್ರಾ ಜಲಾಶಯದ (TB Dam) ನೂತನ ಕ್ರಸ್ಟ್ ಗೇಟ್​​​ಗಳ ಲೋಕಾರ್ಪಣೆ ಆಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಮೂರು ರಾಜ್ಯದ ಮುಖ್ಯಮಂತ್ರಿಗಳು ಸಾಕ್ಷಿಯಾದರು. ಆದರೆ ಕಳೆದ ವಾರ ಕಾರ್ಯಕ್ರಮದ ಪೂರ್ವ ಸಿದ್ಧತೆ ಸಭೆ ಮಾಡಿದ್ದ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಮಾತ್ರ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ತಮ್ಮ ಖಾತೆ ಬಗ್ಗೆ ಮತ್ತೆ ಮುನಿಸಿಕೊಂಡ್ರಾ ಎಂಬ ಮಾತುಗಳು ಕೇಳಿಬಂದಿವೆ. ಈ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ರಾಮಲಿಂಗಾರೆಡ್ಡಿ ಮಗನ ಮದುವೆ ಇದ್ದ ಕಾರಣದಿಂದ ಕಾರ್ಯಕ್ರಮಕ್ಕೆ ಗೈರಾಗಿದ್ದೇನೆ ಎಂದಿದ್ದಾರೆ.

ಸಚಿವ ರಾಮಲಿಂಗಾರೆಡ್ಡಿ ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ?

ಈ ಬಗ್ಗೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಮಗನ ಮದುವೆ ಇದ್ದ ಕಾರಣದಿಂದ ಕಾರ್ಯಕ್ರಮಕ್ಕೆ ಗೈರಾಗಿದ್ದೇನೆ. ಒಂದು ವರ್ಷದ ಹಿಂದೆಯೇ ಮಗನ ಮದುವೆ ನಿಗದಿಯಾಗಿತ್ತು. ತಿರುಪತಿಯಲ್ಲಿ ಮದುವೆ ಇದಿದ್ದರಿಂದ ಕಾರ್ಯಕ್ರಮಕ್ಕೆ ಗೈರಾಗಿದ್ದೇನೆ. ಈ ಬಗ್ಗೆ ಸಿಎಂ ಡಿಕೆ ಶಿವಕುಮಾರ್​, ಸಂಬಂಧಿಸಿದವರ ಗಮನಕ್ಕೆ ತರಲಾಗಿತ್ತು. ಜೂನ್ 18ರಂದೇ ಸ್ಥಳಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲನೆ ನಡೆಸಿದ್ದೆ. ಕಾರ್ಯಕ್ರಮ ನಡೆಯಲು ಎಲ್ಲ ರೀತಿಯ ಸಭೆ ನಡೆಸಿ ಕ್ರಮ ಕೈಗೊಂಡಿದ್ದೇನೆ ಎಂದು ಸಚಿವ ರಾಮಲಿಂಗಾರೆಡ್ಡಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಂಗಭದ್ರಾ ಡ್ಯಾಂ ಕ್ರಸ್ಟ್​ ಗೇಟ್​​ಗಳ ಲೋಕಾರ್ಪಣೆ ವಿಚಾರಕ್ಕೆ ಆರ್‌.ಅಶೋಕ್ ಕಿಡಿ

ಇನ್ನು ತುಂಗಭದ್ರಾ ಡ್ಯಾಂ ಕ್ರಸ್ಟ್​ ಗೇಟ್​​ಗಳ ಲೋಕಾರ್ಪಣೆ ವಿಚಾರದ ಬಗ್ಗೆ ವಿಧಾನಸೌಧದಲ್ಲಿ ವಿಪಕ್ಷ ನಾಯಕ ಆರ್‌.ಅಶೋಕ್ ಕಿಡಿಕಾರಿದ್ದಾರೆ. ಕ್ರಸ್ಟ್ ಗೇಟ್ ಅಳವಡಿಸಬೇಕೆಂದು ಡಿಮ್ಯಾಂಡ್ ಮಾಡಿದ್ದು ನಾನು. ಗೇಟ್ ಅಳವಡಿಕೆಗೆ ಹಣ ಬಿಡುಗಡೆ ಮಾಡಿದ್ದು ಸಿದ್ದರಾಮಯ್ಯ. ಒತ್ತಾಯ ಮಾಡಿದವರು ಮತ್ತು ಹಣ ಬಿಡುಗಡೆ ಮಾಡಿದವರನ್ನು ಕರೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಂದ ತುಂಗಭದ್ರಾ ಜಲಾಶಯದ ಹೊಸ ಗೇಟ್‌ಗಳ ಉದ್ಘಾಟನೆ

ನಾನು ಮೂರು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದ್ದೇನೆ. ಸಿದ್ದರಾಮಯ್ಯರನ್ನು ಮೂಲೆಗುಂಪು ಮಾಡಲು ಆಹ್ವಾನ ಮಾಡಿಲ್ಲ. ಸಿದ್ದರಾಮಯ್ಯರನ್ನು ಸಿಎಂ ಡಿಕೆ ಶಿವಕುಮಾರ್​ ಮೂಲೆಗುಂಪು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ವೈಶಾಖ್ ಸಾವು, ಆಪ್ತ ಗೆಳೆಯ ಹೇಳಿದ್ದೇನು? – Kannada News | Krishi Thapanda friend Vaishak death, here is his old talks about it

ನಟಿ ಕೃಷಿ ತಾಪಂಡ (Krishi Tapanda) ಅವರ ಮನೆಯಲ್ಲಿ ಉದ್ಯಮಿ ವೈಶಾಖ್ ನಿಧನ ಹೊಂದಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ನಟಿ ಕೃಷಿ ತಾಪಂಡಗೆ ಸಂದೇಶ ಕಳಿಸಿ, ವೈಶಾಖ್ ನಿಧನ ಹೊಂದಿದ್ದಾರೆ. ಆರ್​​ಆರ್​ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ವೈಶಾಖ್ ಉದ್ಯಮಿ ಆಗಿದ್ದು, ಈ ಹಿಂದೆ ಕೃಷಿ ತಾಪಂಡ ಮತ್ತು ಉದ್ಯಮಿ ಅರವಿಂದ್ ರೆಡ್ಡಿ ನಡುವಿನ ವಿವಾದದಲ್ಲಿ ಪೊಲೀಸರಿಂದ ಬಂಧನಕ್ಕೂ ಒಳಗಾಗಿದ್ದರು. ವೈಶಾಖ್ ನಿಧನದ ಬಗ್ಗೆ ಅವರ ಆಪ್ತ ಗೆಳೆಯ, ವೈಶಾಖ್ ಅನ್ನು ಬಹಳ ವರ್ಷಗಳಿಂದ ಬಲ್ಲ ಗೆಳೆಯರೊಬ್ಬರು ಟಿವಿ9 ಜೊತೆಗೆ ಮಾತನಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭಯೋತ್ಪಾದಕ ಎಂಬ ಪದ ಬಳಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ – Kannada News | Congress Leader Rahul Gandhi Seeks Dharmendra Pradhans Resignation Over Terrorist Jibe

ನವದೆಹಲಿ, ಜೂನ್ 25: ಸಂಸತ್ತಿನಲ್ಲಿ ಮತ್ತು ರಾಜಕೀಯ ವಲಯದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ವಾಕ್ಸಮರ ತೀವ್ರಗೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ಪ್ರತಿಭಟನಾಕಾರರನ್ನು ‘ಭಯೋತ್ಪಾದಕ’ ಎಂದು ಕರೆದಿದ್ದಾರೆ ಎಂದು ಆರೋಪಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, “ಸಚಿವ ಧರ್ಮೇಂದ್ರ ಪ್ರಧಾನ್ ಅಧಿಕಾರದ ಅಹಂಕಾರದಲ್ಲಿ ಮುಳುಗಿದ್ದಾರೆ” ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದರೊಂದಿಗೆ ಧರ್ಮೇಂದ್ರ ಪ್ರಧಾನ್ ತಕ್ಷಣವೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಪರೀಕ್ಷಾ ಅಕ್ರಮಗಳ ಕುರಿತು ನ್ಯಾಯ ಕೇಳುತ್ತಿರುವ ವಿದ್ಯಾರ್ಥಿಗಳನ್ನು ನಿಂದಿಸುವ ಮಟ್ಟಿಗೆ ಸರ್ಕಾರವು ಅಹಂಕಾರದಿಂದ ಕೂಡಿದೆ ಎಂದು ದೂರಿದ್ದಾರೆ. “ಅಧಿಕಾರದ ಅಹಂಕಾರದಲ್ಲಿ ಮುಳುಗಿರುವ ಮೋದಿ ಸರ್ಕಾರವು ಈಗ ಎಂತಹ ಸ್ಥಿತಿಗೆ ತಲುಪಿದೆ ಎಂದರೆ, ಕೇವಲ ತಮ್ಮ ಹಕ್ಕುಗಳು, ಪಾರದರ್ಶಕ ಪರೀಕ್ಷೆಗಳು ಮತ್ತು ಸುರಕ್ಷಿತ ಭವಿಷ್ಯಕ್ಕಾಗಿ ಒತ್ತಾಯಿಸುತ್ತಿರುವ ವಿದ್ಯಾರ್ಥಿಗಳನ್ನು ಶಿಕ್ಷಣ ಸಚಿವರೇ ‘ಭಯೋತ್ಪಾದಕರು’ ಎಂದು ಕರೆಯುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಇದನ್ನೂ ಓದಿ: ಮೋದಿಯನ್ನು ಬೆಂಬಲಿಸುವ ಮೂಲಕ ರಾಹುಲ್ ಗಾಂಧಿಗೆ ಶಶಿ ತರೂರ್​​ ಜನ್ಮದಿನದ ಗಿಫ್ಟ್ ನೀಡಿದ್ದಾರೆ; ಬಿಜೆಪಿ ಲೇವಡಿ

ಅಹಂಕಾರದ ಪರಮಾವಧಿ:

ಕೇಂದ್ರ ಸಚಿವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, “ಬಿಜೆಪಿ ನಾಯಕರು ಅಧಿಕಾರದ ಮದ ಮತ್ತು ಅಹಂಕಾರದಲ್ಲಿ ಸಂಪೂರ್ಣವಾಗಿ ಮುಳುಗಿಹೋಗಿದ್ದಾರೆ. ಪ್ರತಿಭಟನೆ ಮಾಡುವ ಯುವಕರನ್ನು ಭಯೋತ್ಪಾದಕ ಎಂದು ಕರೆಯುವುದು ಅವರ ಸಂಸ್ಕಾರ ಮತ್ತು ಅಹಂಕಾರವನ್ನು ತೋರಿಸುತ್ತದೆ” ಎಂದು ಕಿಡಿಕಾರಿದ್ದಾರೆ.

ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ನೀಟ್ (NEET) ಪರೀಕ್ಷಾ ಹಗರಣ ಮತ್ತು ಮರುಪರೀಕ್ಷೆಯ ವಿಚಾರದಲ್ಲಿ ಶಿಕ್ಷಣ ಸಚಿವಾಲಯದ ವೈಫಲ್ಯವನ್ನು ಮುಚ್ಚಿಹಾಕಲು ಬಿಜೆಪಿ ಇಂತಹ ದ್ವೇಷದ ರಾಜಕಾರಣ ಮತ್ತು ವೈಯಕ್ತಿಕ ನಿಂದನೆಗೆ ಇಳಿದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಇದನ್ನೂ ಓದಿ: ‘ರಫೇಲ್ ಯುದ್ಧ ವಿಮಾನಗಳ ಬಗ್ಗೆ ಪಾಕಿಸ್ತಾನದ ಸುಳ್ಳು ಬಯಲು’; ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ

ರಾಜೀನಾಮೆಗೆ ಪಟ್ಟು:

ದೇಶದ ಶಿಕ್ಷಣ ವ್ಯವಸ್ಥೆಯನ್ನು ಸರಿಯಾಗಿ ನಿಭಾಯಿಸಲಾಗದ ಮತ್ತು ವಿರೋಧ ಪಕ್ಷದ ನಾಯಕರ ವಿರುದ್ಧ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವ ಧರ್ಮೇಂದ್ರ ಪ್ರಧಾನ್ ಅವರಿಗೆ ಸಚಿವರಾಗಿ ಮುಂದುವರಿಯುವ ಯಾವುದೇ ನೈತಿಕ ಹಕ್ಕಿಲ್ಲ, ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ರಾಹುಲ್ ಗಾಂಧಿ ಪಟ್ಟು ಹಿಡಿದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

IND A vs SL A: ಎಡವಿದ ಪಡಿಕ್ಕಲ್; ಭರ್ಜರಿ ಶತಕ ಬಾರಿಸಿದ ಸಾಯಿ ಸುದರ್ಶನ್ – Kannada News | India A vs SL A: Sai Sudharsan Hits Century in Unofficial Test Opener in Galle

ಶ್ರೀಲಂಕಾದಲ್ಲಿ ನಡೆದ ಏಕದಿನ ತ್ರಿಕೋನ ಸರಣಿಯನ್ನು ಗೆದ್ದುಕೊಂಡಿದ್ದ ಭಾರತ ಎ ತಂಡ ಇದೀಗ ಅದೇ ಶ್ರೀಲಂಕಾದಲ್ಲಿ (India A vs Sri Lanka A) ಆತಿಥೇಯ ತಂಡದ ವಿರುದ್ಧ ಎರಡು ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಇಂದಿನಿಂದ ಗಾಲೆಯಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಎ ತಂಡದ ನಾಯಕ ಧೃವ್ ಜುರೇಲ್ ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿದರು. ಅದರಂತೆ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ಸಾಯಿ ಸುದರ್ಶನ್ (Sai Sudharsan) ಭರ್ಜರಿ ಶತಕ ಸಿಡಿಸಿದ್ದಾರೆ. ಈ ಹಿಂದೆ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಶತಕ ವಂಚಿತರಾಗಿದ್ದ ಸುದರ್ಶನ್, ಇದೀಗ ಶ್ರೀಲಂಕಾ ವಿರುದ್ಧ ಶತಕದ ಇನ್ನಿಂಗ್ಸ್ ಆಡಿದ್ದಾರೆ.

ಇನ್ನಿಂಗ್ಸ್ ಕಟ್ಟಿದ ಸುದರ್ಶನ್

ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಸಾಯಿ ಸುದರ್ಶನ್ ಹಾಗೂ ಆಯುಷ್ ಪಾಂಡೆ ಮೊದಲ ವಿಕೆಟ್​ಗೆ 82 ರನ್​ಗಳ ಜೊತೆಯಾಟ ನೀಡಿದರು. ಆಯುಷ್ 25 ರನ್​ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರೆ, ಆ ಬಳಿಕ ಬಂದ ಕನ್ನಡಿಗ ದೇವದತ್ ಪಡಿಕ್ಕಲ್ 12 ರನ್​ಗಳಿಗೆ ಸುಸ್ತಾದರು. ಹೀಗಾಗಿ ಭಾರತ ಎ ತಂಡ ಕೇವಲ 14 ರನ್​ಗಳ ಅಂತರದಲ್ಲಿ ತನ್ನ ಎರಡನೇ ವಿಕೆಟ್ ಕಳೆದುಕೊಂಡಿತು. ನಂತರ ರುತುರಾಜ್ ಜೊತೆಗೂಡಿ ತಂಡವನ್ನು 150 ರನ್​ಗಳ ಗಡಿ ದಾಟಿಸಿದ ಸುದರ್ಶನ್ ತಮ್ಮ ಶತಕವನ್ನು ಸಹ ಪೂರೈಸಿದರು.

130 ಎಸೆತಗಳಲ್ಲಿ ಶತಕ ಪೂರ್ಣ

ಇಬ್ಬರ ಜೊತೆಯಾಟ ಶತಕ ಮುಟ್ಟುವ ಮೊದಲೆ ರುತುರಾಜ್ ಗಾಯಕ್ವಾಡ್ 22 ರನ್​ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಹೀಗಾಗಿ ಟೀಂ ಇಂಡಿಯಾ 181 ರನ್​ಗಳಿಗೆ ತನ್ನ ಮೂರನೇ ವಿಕೆಟ್ ಕಳೆದುಕೊಂಡಿತು. ನಂತರ ನಾಯಕನ ಜೊತೆ ಸೇರಿ ತಂಡದ ಇನ್ನಿಂಗ್ಸ್ ನಿಭಾಯಿಸುತ್ತಿರುವ ಸಾಯಿ ತಂಡವನ್ನು 200 ರನ್​ಗಳ ಗಡಿ ದಾಟಿಸಿದ್ದಾರೆ. ಈ ಸುದ್ದಿ ಬರೆಯುವ ಹೊತ್ತಿಗೆ 161 ಎಸೆತಗಳಲ್ಲಿ 121 ರನ್ ಬಾರಿಸಿರುವ ಸುದರ್ಶನ್ 17 ಬೌಂಡರಿಗಳನ್ನು ಕಲೆಹಾಕಿದ್ದಾರೆ.

ನೆರೆಯ ದೇಶದ ವಿರುದ್ಧ ಟೆಸ್ಟ್ ಸರಣಿಯನ್ನಾಡಲಿದೆ ಭಾರತ; ಸ್ವಾತಂತ್ರ್ಯ ದಿನದಂದು ಮೊದಲ ಪಂದ್ಯ

ಉಭಯ ತಂಡಗಳು

ಭಾರತ ಎ ತಂಡ: ಸಾಯಿ ಸುದರ್ಶನ್, ಆಯುಷ್ ಪಾಂಡೆ, ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ಧ್ರುವ್ ಜುರೆಲ್ (ನಾಯಕ), ಶೇಕ್ ರಶೀದ್, ಹರ್ಷ ದುಬೆ, ಸರನ್ಶ್ ಜೈನ್, ಅಂಶುಲ್ ಕಾಂಬೋಜ್, ಯಶ್ ಠಾಕೂರ್, ಆಕಿಬ್ ನಬಿ ದಾರ್.

ಶ್ರೀಲಂಕಾ ಎ ತಂಡ: ಪವಂತ ವೀರಸಿಂಗ್, ನಿರೋಶನ್ ಡಿಕ್ವೆಲ್ಲಾ, ನುವಾನಿಡು ಫೆರ್ನಾಂಡೋ, ಅಶೇನ್ ಬಂಡಾರ, ಸಹನ್ ಅರಚ್ಚಿಗೆ (ನಾಯಕ), ರವಿಂದು ಫೆರ್ನಾಂಡೋ, ಅಂಜಲಾ ಬಂಡಾರ, ಕವಿಂದು ಪತಿರತ್ನ, ದುಲಾಜ್ ಸಮುದಿತ, ಚಾಮಿಕಾ ಗುಣಶೇಖರ, ದಿಲುಂ ಸುದೀರ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಲಿಷ್ಠ ದಾಂಡಿಗರ ದಂಡು: ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11 – Kannada News | India Playing XI For 1st T20 Against Ireland

ಐರ್ಲೆಂಡ್ ಮತ್ತು ಭಾರತ ನಡುವಣ 2 ಪಂದ್ಯಗಳ ಟಿ20 ಸರಣಿಯು ನಾಳೆಯಿಂದ (ಜೂ. 26) ಶುರುವಾಗಲಿದೆ. ಬೆಲ್​ಫಾಸ್ಟ್​ನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಶ್ರೇಯಸ್ ಅಯ್ಯರ್ ಭಾರತ ಟಿ20 ತಂಡದ ನಾಯಕನಾಗಿ ಪಾದಾರ್ಪಣೆ ಮಾಡಲಿದ್ದಾರೆ. ಹಾಗೆಯೇ ಈ ಮ್ಯಾಚ್​ ಮೂಲಕ 15 ವರ್ಷದ ಯುವ ದಾಂಡಿಗ ವೈಭವ್ ಸೂರ್ಯವಂಶಿ ಕೂಡ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸುವ ಸಾಧ್ಯತೆ ಹೆಚ್ಚಿದೆ.

ಅದರಂತೆ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ಇನಿಂಗ್ಸ್ ಆರಂಭಿಸುವುದನ್ನು ಎದುರು ನೋಡಬಹುದು. ಮೂರನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಕಣಕ್ಕಿಳಿದರೆ, ವಿಕೆಟ್ ಕೀಪರ್ ಬ್ಯಾಟರ್ ಆಗಿ ಸಂಜು ಸ್ಯಾಮ್ಸನ್ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಹೆಚ್ಚು.

ಹಾಗೆಯೇ ಐದನೇ ಕ್ರಮಾಂಕದಲ್ಲಿ ಉಪನಾಯಕ ತಿಲಕ್ ವರ್ಮಾ ಕಣಕ್ಕಿಳಿದರೆ, ಆಲ್​ರೌಂಡರ್​ಗಳಾಗಿ ಶಿವಂ ದುಬೆ, ಅಕ್ಷರ್ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಈ ಸರಣಿಯಿಂದ ಗಾಯದ ಕಾರಣ ಹಾರ್ದಿಕ್ ಪಾಂಡ್ಯ ಹಾಗೂ ನಿತೀಶ್ ಕುಮಾರ್ ರೆಡ್ಡಿ ಹೊರಗುಳಿದಿದ್ದಾರೆ. ಹೀಗಾಗಿ ಸೂರ್ಯಂಶ್ ಶೆಡ್ಗೆ ಈ ಪಂದ್ಯದ ಮೂಲಕ ಪಾದಾರ್ಪಣೆ ಮಾಡುವುದನ್ನು ಎದುರು ನೋಡಬಹುದು.

ಬೌಲರ್​ಗಳಾಗಿ ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ ಕಾಣಿಸಿಕೊಳ್ಳುವುದು ಖಚಿತ. ಇವರೊಂದಿಗೆ ಸ್ಪಿನ್ನರ್ ಆಗಿ ರವಿ ಬಿಷ್ಣೋಯ್ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  1. ಅಭಿಷೇಕ್ ಶರ್ಮಾ
  2. ವೈಭವ್ ಸೂರ್ಯವಂಶಿ
  3. ಶ್ರೇಯಸ್ ಅಯ್ಯರ್ (ನಾಯಕ)
  4. ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
  5. ತಿಲಕ್ ವರ್ಮಾ (ಉಪನಾಯಕ)
  6. ಶಿವಂ ದುಬೆ
  7. ಅಕ್ಷರ್ ಪಟೇಲ್
  8. ಸೂರ್ಯಂಶ್ ಶೆಡ್ಗೆ
  9. ಅರ್ಷದೀಪ್ ಸಿಂಗ್
  10. ಹರ್ಷಿತ್ ರಾಣಾ
  11. ರವಿ ಬಿಷ್ಣೋಯ್.

ಇದನ್ನೂ ಓದಿ: ವೈಭವ್ ಶತಕ ಬಾರಿಸಿದ್ರೆ ಬೆತ್ತಲಾಗುವೆ: ಪಾಕ್ ಮಾಜಿ ಕ್ರಿಕೆಟಿಗನ ಸವಾಲು!

ಭಾರತ ಟಿ20 ತಂಡ:  ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ, ಪ್ರಸಿದ್ಧ್ ಕೃಷ್ಣ, ಸೂರ್ಯಂಶ್ ಶೆಡ್ಗೆ.

Published On – 3:04 pm, Thu, 25 June 26

Source link

ಪೆಟ್ರೋಲ್ ಬೆಲೆ ಏರಿಕೆ ಸಿಟ್ಟಿಗೆ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಬೆಂಕಿ ಹಚ್ಚಿದ ಕಿರಾತಕರು – Kannada News | Gwalior Petrol Pump Attack: Worker Set Ablaze Over Fuel Price Rage, Father Injured

ಭೋಪಾಲ್, ಜೂನ್ 25: ಪೆಟ್ರೋಲ್(Petrol) ಬೆಲೆ ಏರಿಕೆಯ ಕೋಪಕ್ಕೆ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಬೆಂಕಿ ಹಚ್ಚಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಡೆದಿದೆ. ಬೆಂಕಿಯ ಜ್ವಾಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಮಗನನ್ನು ರಕ್ಷಿಸಲು ಹೋಗಿದ್ದ ತಂದೆಗೂ ಬೆಂಕಿ ತಗುಲಿದೆ. ಗ್ವಾಲಿಯರ್‌ನ ಪೆಟ್ರೋಲ್ ಪಂಪ್‌ನಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಆಕಾಶ್ ಸೆಂಗಾರ್ ಹಲ್ಲೆಗೆ ಒಳಗಾದ ದುರ್ದೈವಿ.
ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಮೂವರು ಯುವಕರು ಬುಲೆಟ್ ಬೈಕ್‌ನಲ್ಲಿ ಪೆಟ್ರೋಲ್ ಹಾಕಿಸಲು ಬಂದಿದ್ದರು. ಇಂಧನದ ದರದ ವಿಚಾರವಾಗಿ ಅವರು ಬಂಕ್ ಸಿಬ್ಬಂದಿ ಆಕಾಶ್ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ.

ಈ ವೇಳೆ ಕ್ರೂರಿಗಳಾದ ಆ ಯುವಕರು ಇದ್ದಕ್ಕಿದ್ದಂತೆ ಆಕಾಶ್ ದೇಹದ ಮೇಲೆ ಪೆಟ್ರೋಲ್ ಸುರಿದು, ಲೈಟರ್‌ನಿಂದ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಆಕಾಶ್ ಬೆಂಕಿಯ ಜ್ವಾಲೆಯಲ್ಲಿ ಸಿಲುಕಿ ರಕ್ಷಣೆಗಾಗಿ ಜೋರಾಗಿ ಕಿರುಚಾಡಲಾರಂಭಿಸಿದ್ದಾನೆ.

ಇದೇ ಪೆಟ್ರೋಲ್ ಪಂಪ್‌ನ ಪಕ್ಕದಲ್ಲಿರುವ ಟ್ರಾವೆಲ್ಸ್ ಕಚೇರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಆಕಾಶ್ ತಂದೆ ರಾಮಚಂದ್ರ ಸೆಂಗಾರ್, ಮಗನ ಕಿರುಚಾಟ ಕೇಳಿ ಓಡಿ ಬಂದಿದ್ದಾರೆ. ಉರಿಯುತ್ತಿದ್ದ ಮಗನನ್ನು ಅಪ್ಪಿಕೊಂಡು ಬೆಂಕಿ ನಂದಿಸಲು ಹತಾಶ ಪ್ರಯತ್ನ ನಡೆಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅವರ ಎರಡೂ ಕಾಲುಗಳು ಭೀಕರವಾಗಿ ಸುಟ್ಟುಹೋಗಿವೆ.

ಮತ್ತಷ್ಟು ಓದಿ: ಪೆಟ್ರೋಲ್ ಡೀಸೆಲ್ ದರ ಏರಿಕೆ: ನಯಾರಾ ಪೆಟ್ರೋಲ್ ಬಂಕ್​ನತ್ತ ಸುಳಿಯದ ವಾಹನ ಸವಾರರು

ಸ್ಥಳೀಯರು ತಕ್ಷಣ ಧಾವಿಸಿ ಬೆಂಕಿ ನಂದಿಸಿ, ತಂದೆ-ಮಗ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕಾಶ್ ದೇಹದ ಶೇ. 37 ರಷ್ಟು ಭಾಗ ಸುಟ್ಟುಹೋಗಿದ್ದು, ಆತನ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಭೀಕರ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಡೋಲಿ ಅಲಿಯಾಸ್ ಅನುಜ್ ಗುರ್ಜರ್ ಮತ್ತು ಸಚಿನ್ ಗುರ್ಜರ್ ಎಂಬ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಮೂರನೇ ಆರೋಪಿ ಅರವಿಂದ್ ಛವಾಯಿ ಪ್ರಸ್ತುತ ತಲೆಮರೆಸಿಕೊಂಡಿದ್ದು, ಆತನಿಗಾಗಿ ತೀವ್ರ ಹುಡುಕಾಟ ನಡೆದಿದೆ. ಪೊಲೀಸರು ಘಟನೆಯ ನಿಖರವಾದ ಘಟನೆ ತಿಳಿಯಲು ಪಂಪ್‌ನಲ್ಲಿರುವ ಸಿಸಿಟಿವಿ ಪರಿಶೀಲಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೃಷಿ ತಾಪಂಡ ಗೆಳೆಯ ವೈಶಾಖ್ ಆತ್ಮಹತ್ಯೆ, ದೂರು ನೀಡಿದ ಪತ್ನಿ – Kannada News | Vaishak death in Krishi Tapanda home, Complaint registered by wife

ನಟಿ ಕೃಷಿ ತಾಪಂಡ (Krishi Tapanda) ಅವರ ಮನೆಯಲ್ಲಿ ಅವರ ಗೆಳೆಯ, ಉದ್ಯಮಿ ವೈಶಾಖ್ ನಿಧನ ಹೊಂದಿದ್ದಾರೆ. ಕೃಷಿ ತಾಪಂಡ ಅವರಿಗೆ ಕೊನೆಯದಾಗಿ ಸಂದೇಶವೊಂದನ್ನು ಕಳಿಸಿ ಕೃಷಿ ತಾಪಂಡ ಅವರ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈಶಾಖ್, ಉದ್ಯಮಿ ಆಗಿದ್ದು ಅವರಿಗೆ ಪತ್ನಿ, ತಂದೆ-ತಾಯಿ ಇದ್ದಾರೆ. ಇದೀಗ ವೈಶಾಖ್ ನಿಧನದ ಬೆನ್ನಲ್ಲೆ ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.

ವೈಶಾಖ್ ಅವರ ಸಾವು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ವೈಶಾಖ್, ಕೃಷಿ ತಾಪಂಡ ಅವರ ಮನೆಯಲ್ಲಿ ಏಕೆ ಆತ್ಮಹತ್ಯೆ ಮಾಡಿಕೊಂಡರು, ಆತ್ಮಹತ್ಯೆಗೆ ಕಾರಣಗಳೇನು? ಎಂಬಿತ್ಯಾದಿ ವಿಷಯಗಳು ಬೆಳಕಿಗೆ ಬರಬೇಕಿವೆ. ಘಟನೆ ನಡೆದ ಬಳಿಕ ನಟಿ ಕೃಷಿ ತಾಪಂಡ ಅವರೇ ಖುದ್ದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದೀಗ ಮೃತ ವೈಶಾಖ್ ಅವರ ಪತ್ನಿ ಮೇಘನಾ ಅವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೃಷಿ ತಾಪಂಡ ಹಾಗೂ ನಿರ್ಮಾಪಕ ಅರವಿಂದ್ ರೆಡ್ಡಿ ನಡುವೆ ಉಂಟಾಗಿದ್ದ ವಿವಾದದಲ್ಲಿ ವೈಶಾಖ್ ಹೆಸರು ಸಹ ಕೇಳಿ ಬಂದಿತ್ತು. ಅರವಿಂದ್ ರೆಡ್ಡಿಗೆ ಕರೆ ಮಾಡಿ ಬೆದರಿಕೆ ಹಾಕಿದ ಪ್ರಕರಣದಲ್ಲಿ ವೈಶಾಖ್ ಪೊಲೀಸರಿಂದ ಬಂಧನಕ್ಕೂ ಒಳಗಾಗಿದ್ದರು. ವೈಶಾಖ್ ಹಾಗೂ ಕೃಷಿ ತಮ್ಮಿಂದ ಹಣ ದೋಚಲು ಯತ್ನಿಸಿದ್ದಾರೆ ಎಂದು ಉದ್ಯಮಿ ಅರವಿಂದ್ ರೆಡ್ಡಿ ದೂರು ಸಹ ದಾಖಲಿಸಿದ್ದರು. ಹೀಗಾಗಿ ವೈಶಾಖ್ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿವೆ.

ಇದನ್ನೂ ಓದಿ:ಉದ್ಯಮಿಗೆ ಬೆದರಿಕೆ ಪ್ರಕರಣ: ನಟಿ ಕೃಷಿ ತಾಪಂಡಗೆ ನೊಟೀಸ್

ವೈಶಾಖ್, ಗೆಳೆಯರೊಬ್ಬರು ಟಿವಿ9 ಜೊತೆಗೆ ಮಾತನಾಡಿದ್ದು, ವೈಶಾಖ್, ಖಿನ್ನತೆಗೆ ಜಾರುವ ವ್ಯಕ್ತಿಯಲ್ಲ. ವೈಶಾಖ್ ಧೈರ್ಯವಂತ, ಆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ನಂಬಲು ಆಗುತ್ತಿಲ್ಲ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Viral: ಆರ್ಡರ್ ಮಾಡಿದ್ದು ಸ್ಮಾರ್ಟ್‌ ಫೋನ್, ಆದ್ರೆ ಮನೆಗೆ ಬಂದ ಪಾರ್ಸೆಲ್ ನೋಡಿ ಯುವಕ ಫುಲ್ ಶಾಕ್ – Kannada News |  A young man ordered a smartphone online, but received a soap bar

ಇತ್ತೀಚೆಗಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ (Online shopping) ಕಾಮನ್ ಆಗಿದೆ. ಹೀಗಾಗಿ ಕುಳಿತಲ್ಲಿಂದಲೇ ಬೇಕಾದ ವಸ್ತುಗಳನ್ನು ಆನ್ಲೈನ್ ನಲ್ಲೇ ಆರ್ಡರ್ ಮಾಡುತ್ತಾರೆ. ಆನ್ಲೈನ್ ಶಾಪಿಂಗ್ ಮಾಡಲು ಹೋಗಿ ಲಕ್ಷ ರೂಪಾಯಿ ಕಳೆದು ಕೊಂಡವರು ಇದ್ದಾರೆ. ಇದೀಗ ಯುವಕನೊಬ್ಬ 35,000 ಬೆಲೆ ಬಾಳುವ ಸ್ಮಾರ್ಟ್ ಫೋನ್ ಆರ್ಡರ್ ಮಾಡಿದ್ದು ಎಡವಟ್ಟು ಆಗಿದೆ. ಆನ್ಲೈನ್ ನಲ್ಲಿ ಆರ್ಡರ್ ಮಾಡಿದ್ದು ಸ್ಮಾರ್ಟ್ ಫೋನ್ ಆಗಿದ್ರೂ, ಮನೆಗೆ ಬಂದಿದ್ದು ಸೋಪ್‌ ಬಾಕ್ಸ್. ಈ ಪೋಸ್ಟ್‌ ಸದ್ಯ ವೈರಲ್ ಆಗಿದ್ದು, ಇನ್ನೆಂದಿಗೂ ಆನ್‌ ಲೈನ್‌ ಶಾಪಿಂಗ್‌ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.

ಐಶ್ವರ್ಯ (Aishwariya) ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ನಲ್ಲಿ ಆನ್‌ಲೈನ್‌ ವಂಚನೆಗೆ ಒಳಗಾದ ಘಟನೆ ಬಗ್ಗೆ ಉಲ್ಲೇಖಿಸಲಾಗಿದೆ. ಯುವಕನೊಬ್ಬ ಆನ್‌ಲೈನ್‌ನಲ್ಲಿ 35,000 ರೂಪಾಯಿ ಮೌಲ್ಯದ ವಿವೋ ಸ್ಮಾರ್ಟ್‌ಫೋನ್ ಆರ್ಡರ್ ಮಾಡಿದ್ದಾನೆ. ತಮ್ಮ ಹೊಸ ಸ್ಮಾರ್ಟ್‌ ಫೋನ್‌ಗಾಗಿ ಕಾಯುತ್ತಿದ್ದ. ಆದರ, ಮನೆ ಬಾಗಿಲಿಗೆ ಬಂದ ಆರ್ಡರ್‌ನ್ನು ಯುವಕ ಓಪನ್ ಮಾಡಿದ್ದು, ಸೋಪ್ ಬಾರ್ ಕಂಡು ಶಾಕ್ ಆಗಿದ್ದಾನೆ. ತಕ್ಷಣವೇ ಈ ಕುರಿತು ಇ-ಕಾಮರ್ಸ್ ಸಂಸ್ಥೆಯ ಗ್ರಾಹಕ ಸೇವಾ ಕೇಂದ್ರಕ್ಕೆ ದೂರು ನೀಡಿದ್ದು, ಈ ಘಟನೆಯ ಬಗ್ಗೆ ಹೇಳಲಾಗಿದೆ.

ವೈರಲ್‌ ಪೋಸ್ಟ್‌ ಇಲ್ಲಿದೆ

ಇದನ್ನೂ ಓದಿ: ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಶ್ಲಾಘಿಸಿದ ವಿದೇಶಿ ಮಹಿಳೆ

ಈ ಪೋಸ್ಟ್ ನಾಲ್ಕು ಸಾವಿರಕ್ಕೂ ಅಧಿಕ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಆನ್ಲೈನ್ ಶಾಪಿಂಗ್ ಸೇಫ್ ಅಲ್ಲ ಎಂದಿದ್ದಾರೆ. ಇನ್ನೊಬ್ಬರು, ಪಾರ್ಸೆಲ್ ಬಂದ ಕೂಡ್ಲೇ ಡೆಲಿವರಿ ಬಾಯ್ ಎದುರು ಓಪನ್ ಮಾಡಿದ್ರೆ ಒಳ್ಳೆಯದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಆನ್ಲೈನ್ ಶಾಪಿಂಗ್ ನಲ್ಲಿ ವಂಚನೆಗಳು ಹೆಚ್ಚಾಗಿವೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:52 pm, Thu, 25 June 26

Source link

ಪಠ್ಯಪುಸ್ತಕ ವಿವಾದದ ಬೆನ್ನಲ್ಲೇ ಸ್ಪಷ್ಟನೆ: ಎಲ್ಲ ಆರೋಪಗಳಿಗೂ ಉತ್ತರಕೊಟ್ಟ NCERT – Kannada News | NCERT Clarifies Textbook Row: ‘Krishna’ Refers to a River, No Bias Against Non Veg Food in Class 6 Syllabus

ಬೆಂಗಳೂರು, ಜೂನ್​​ 25: ಎನ್.ಸಿ.ಇ.ಆರ್.ಟಿ (NCERT) ಮತ್ತು ಸಿ.ಬಿ.ಎಸ್.ಇ (CBSE) ಪಠ್ಯಪುಸ್ತಕಗಳಲ್ಲಿ ಕೇಸರೀಕರಣ ಆರೋಪ ಕೇಳಿಬಂದಿದ್ದು, ಬಿಜೆಪಿ ಸರಕಾರವು ಮಕ್ಕಳ ಮನಸ್ಸಿನ ಮೇಲೆ ಸೈದ್ಧಾಂತಿಕ ವಿಚಾರಗಳನ್ನು ಹೇರಿಕೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಮಾಜಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡ ಆರೋಪಿಸಿದ್ದರು. ಈ ವಿವಾದ ಸಂಬಂಧ ಈಗ ಸ್ವತಃ NCERT ಇಂದಲೇ ಸ್ಪಷ್ಟನೆ ಸಿಕ್ಕಿದೆ. ಪಠ್ಯಪುಸ್ತಕಕ್ಕೆ ಇಡಲಾದ ಹೆಸರು, ಕರ್ನಾಟಕದ ಪ್ರಾದೇಶಿಕ ಸೊಗಡನ್ನು ಕಡೆಗಣಿಸಿರುವ ಆರೋಪ ವಿಚಾರ ಸೇರಿ ಎಲ್ಲದಕ್ಕೂ ಉತ್ತರ ನೀಡಲಾಗಿದೆ.

ಕನ್ನಡ ಪಠ್ಯಪುಸ್ತಕಕ್ಕೆ ‘ಕೃಷ್ಣ’ ಎಂದು ಹೆಸರೇಕೆ?

6ನೇ ತರಗತಿ ಕನ್ನಡ R3 ಪಠ್ಯಪುಸ್ತಕಕ್ಕೆ ಇಡಲಾದ ಕೃಷ್ಣ ಎಂಬ ಹೆಸರು ದೇವರಿಗೆ ಸಂಬಂಧಿಸಿದ್ದಲ್ಲ. ಬದಲಾಗಿ ಕರ್ನಾಟಕದ ಪ್ರಮುಖ ನದಿಯಾದ ಕೃಷ್ಣಾ ನದಿಯ ಹೆಸರಾಗಿದೆ. ಎಲ್ಲಾ ಭಾಷಾ ಪಠ್ಯಪುಸ್ತಕಗಳಿಗೂ ಭಾರತದ ಪ್ರಮುಖ ನದಿಗಳ ಹೆಸರನ್ನೇ ಇಡಲಾಗಿದೆ. ಹಿಂದಿಗೆ ಗಂಗಾ, ಇಂಗ್ಲಿಷ್​​ಗೆ ಕಾವೇರಿ, ಉರ್ದುವಿಗೆ ಜಮುನಾ ಮತ್ತು ಕನ್ನಡಕ್ಕೆ ಕೃಷ್ಣ ಹೆಸರನ್ನು ಪಠ್ಯ ಪುಸ್ತಕಗಳಿಗೆ ಇಟ್ಟಿದ್ದೇವೆ ಎಂದು NCERT ತಿಳಿಸಿದೆ.

ಇದನ್ನೂ ಓದಿ: NCERT ಮತ್ತು CBSE ಪಠ್ಯದಲ್ಲಿ ಕೇಸರೀಕರಣ ವಿವಾದ; ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕಿಡಿ

ಆಹಾರ ಸಂಬಂಧಿ ವಿವಾದಕ್ಕೆ ಉತ್ತರವೇನು?

6ನೇ ಅಧ್ಯಾಯ ‘Health is Wealth’ನಲ್ಲಿ ಸಮತೋಲನ ಆಹಾರ (Balanced Diet) ಕುರಿತು ಮಾತ್ರ ಪಾಠವಿದೆ. ಹೀಗಾಗಿ ಹಾಲು, ಹಸಿರು ಸೊಪ್ಪು, ತರಕಾರಿಗಳು, ಹಣ್ಣುಗಳು ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಉಲ್ಲೇಖಿಸಲಾಗಿದೆ. ಪುಟ 63ರಲ್ಲಿ ಸಸ್ಯಾಹಾರ ಹಾಗೂ ಮಾಂಸಾಹಾರ ಎರಡನ್ನೂ ಒಳಗೊಂಡ ಚಿತ್ರವಿದೆ. ಪಠ್ಯದಲ್ಲಿ ಸಸ್ಯಾಹಾರವನ್ನು ಸಮರ್ಥಿಸಿಲ್ಲ, ಮಾಂಸಾಹಾರವನ್ನು ವಿರೋಧಿಸಿಲ್ಲ. ವಿದ್ಯಾರ್ಥಿಗಳಿಗೆ ಆರೋಗ್ಯಕರ ಆಹಾರದ ಬಗ್ಗೆ ಅರಿವು ಮೂಡಿಸುವುದೇ ಅಧ್ಯಾಯದ ಉದ್ದೇಶ ಎಂದೂ ಎಂದು ಸ್ಪಷ್ಟಪಡಿಸಲಾಗಿದೆ.

ಅಲ್ಲದೆ ಪಠ್ಯಪುಸ್ತಕವು NEP 2020 ಮತ್ತು NCF-SE 2023ರ ಸ್ಥಳೀಯತೆ ಹಾಗೂ ಸಾಂಸ್ಕೃತಿಕ ಸಂಪರ್ಕದ ಉದ್ದೇಶಕ್ಕೆ ಅನುಗುಣವಾಗಿದೆ. NCERT ಗುಣಮಟ್ಟದ ಪಠ್ಯಪುಸ್ತಕಗಳನ್ನು ನೀಡಲು ಬದ್ಧವಾಗಿದ್ದು, ಶಿಕ್ಷಣ ತಜ್ಞರು ಹಾಗೂ ಸಾರ್ವಜನಿಕರಿಂದ ಬರುವ ರಚನಾತ್ಮಕ ಸಲಹೆಗಳನ್ನು ಸ್ವಾಗತಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:55 pm, Thu, 25 June 26

Source link

Exit mobile version