ಮೊದಲ ಬಾರಿ ತಳ್ಳಿದಾಗ ಪೊದೆ ಹಿಡಿದು ಬದುಕಿದ್ದ ವರ: ರಹಸ್ಯ ಮುಚ್ಚಿಹಾಕಲು ಹಾವಿನ ಕಥೆ ಕಟ್ಟಿ ಅಪ್ಪಿಕೊಂಡಿದ್ದ ಕಪಟ ಯುವತಿ – Kannada News | Lohagad Fort Case: Fiancée’s Deadly Plot with Lover Shocks Pune, Ketan Dies

ಪುಣೆ, ಜೂನ್ 24: ರಾಜಸ್ಥಾನದ ಉದಯಪುರದ ಅರಮನೆಯಲ್ಲಿ ಈ ವರ್ಷದ ಕೊನೆಯಲ್ಲಿ ಭರ್ಜರಿಯಾಗಿ ಮದುವೆಯಾಗಬೇಕಿದ್ದ ಜೋಡಿ. ಇಬ್ಬರ ಕುಟುಂಬಗಳೂ ಮದುವೆ(Marriage)ಯ ಸಂಭ್ರಮದಲ್ಲಿದ್ದವು. ಆದರೆ, ಯಾರೂ ಊಹಿಸದ ಕರಾಳ ಸಂಚೊಂದು ಸಂಭ್ರಮವನ್ನು ದುರಂತವಾಗಿ ಬದಲಿಸಿದೆ. 26 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ಅವರ ಭಾವಿ ಪತ್ನಿ ಸಿಯಾ ಗೋಯಲ್, ತನ್ನ ಸೀಕ್ರೆಟ್ ಪ್ರಿಯಕರನೊಂದಿಗೆ ಸೇರಿ ಲೋಹಗಡ್ ಕೋಟೆಯಿಂದ 400 ಅಡಿ ಆಳದ ಕಂದಕಕ್ಕೆ ತಳ್ಳಿ ಬರ್ಬರವಾಗಿ ಕೊಲೆ ಮಾಡಿದ್ದಾಳೆ.

ಮೊದಲು ಇದು ಕೇವಲ ಆಕಸ್ಮಿಕ ಅಪಘಾತ ಎಂದು ಬಿಂಬಿಸಲಾಗಿತ್ತು. ಆದರೆ ಪೊಲೀಸರ ತನಿಖೆ ತೀವ್ರಗೊಂಡಾಗ ಸಿಯಾ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ (22) ಅವರ ಕ್ರೂರ ಮುಖವಾಡ ಕಳಚಿ ಬಿದ್ದಿದೆ.

ಮೊದಲ ಕೊಲೆ ಯತ್ನ: ಹಾವಿನ ನೆಪ ಮತ್ತು ಅಪ್ಪುಗೆ

ಮೃತನ ತಂದೆ ವಿಶಾಲ್ ಅಗರ್ವಾಲ್ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಅತ್ಯಂತ ಬೆಚ್ಚಿಬೀಳಿಸುವ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ಜೂನ್ 18 ರಂದು ನಡೆದ ಕೊಲೆಗೆ ಕೇವಲ ನಾಲ್ಕು ದಿನಗಳ ಮುಂಚೆ, ಅಂದರೆ ಜೂನ್ 14 ರಂದೇ ಸಿಯಾ ಮೊದಲ ಬಾರಿಗೆ ಕೇತನ್‌ನನ್ನು ಕೊಲ್ಲಲು ಯತ್ನಿಸಿದ್ದಳು.

ಪಾಸ್‌ಪೋರ್ಟ್ ನಾಪತ್ತೆ: ಇಬ್ಬರೂ ವಿವಾಹಪೂರ್ವ ಪ್ರವಾಸಕ್ಕಾಗಿ ಬಾಲಿಗೆ ಹೋಗಲು ವಿಮಾನ ನಿಲ್ದಾಣಕ್ಕೆ ತಲುಪಿದ್ದರು. ಆದರೆ ಅಲ್ಲಿ ಹಠಾತ್ ಆಗಿ ಕೇತನ್‌ನ ಪಾಸ್‌ಪೋರ್ಟ್ ನಾಪತ್ತೆಯಾಗಿತ್ತು ಇದರಿಂದ ಪ್ರವಾಸ ರದ್ದಾಗಿ ಇಬ್ಬರೂ ಮನೆಗೆ ಮರಳಿದ್ದರು.

ಮತ್ತಷ್ಟು ಓದಿ: ಮದುವೆಗೂ ಸ್ವಲ್ಪ ಮುನ್ನ ಗೆಳೆಯನೊಂದಿಗೆ ಅಕ್ಕ ಪರಾರಿ, ತಂಗಿಗಾದರೂ ಕೊಟ್ಟು ಮದುವೆ ಮಾಡೋಣವೆಂದ್ರೆ ಆಕೆಯ ಪ್ರಿಯಕರನೂ ಪ್ರತ್ಯಕ್ಷ

ಕೋಟೆಯ ಮೇಲಿಂದ ತಳ್ಳಿದ್ದಳು: ಮೂರನೇ ದಿನ ಸಿಯಾ ಜಗಳವಾಡಿ, ತನ್ನೊಂದಿಗೆ ಲೋಹಗಡ್ ಕೋಟೆಗೆ ಬರುವಂತೆ ಕೇತನ್‌ನನ್ನು ಒಪ್ಪಿಸಿದಳು. ಕೋಟೆಯ ಮೇಲೆ ಇಬ್ಬರೇ ಇದ್ದಾಗ ಸಿಯಾ ಕೇತನ್‌ನನ್ನು ತಳ್ಳಿದ್ದಾಳೆ.

‘ಹಾವು, ಹಾವು’ ಎಂದು ನಾಟಕವಾಡಿ ಅಪ್ಪಿಕೊಂಡಳು: ಅದೃಷ್ಟವಶಾತ್ ಕೇತನ್ ಕೆಳಗೆ ಬೀಳುವಾಗ ಅಲ್ಲಿದ್ದ ಪೊದೆಯೊಂದನ್ನು ಗಟ್ಟಿಯಾಗಿ ಹಿಡಿದು ಪ್ರಾಣ ಉಳಿಸಿಕೊಂಡಿದ್ದ. ತಾನು ತಳ್ಳಿದ ರಹಸ್ಯ ಬಯಲಾಗಬಹುದು ಎಂದು ಹೆದರಿದ ಸಿಯಾ, ತಕ್ಷಣವೇ ‘ಹಾವು ಹಾವು’ ಎಂದು ಜೋರಾಗಿ ಕೂಗುತ್ತಾ ಓಡಿ ಬಂದು ಕೇತನ್‌ನನ್ನು ಬಿಗಿಯಾಗಿ ತಬ್ಬಿಕೊಂಡು ನಾಟಕವಾಡಿದ್ದಳು ಅಂದು ಕೇತನ್ ತನ್ನ ಭಾವಿ ಪತ್ನಿಯ ಕುತಂತ್ರವನ್ನು ಅರಿಯದೆ ಆಕೆಯನ್ನು ನಂಬಿಬಿಟ್ಟಿದ್ದ.

ಎರಡನೇ ಯತ್ನದಲ್ಲಿ ಪ್ರಿಯಕರನ ಎಂಟ್ರಿ; ಯಶಸ್ವಿಯಾದ ಸಂಚು

ಸಿಯಾ ತನ್ನ ಬೇಕರಿ ವ್ಯವಹಾರದ ಸಂಪರ್ಕದ ಮೂಲಕ ಪರಿಚಯವಾಗಿದ್ದ ಡ್ರೈ ಫ್ರೂಟ್ಸ್​ ಕಂಪನಿ ಮಾಲೀಕ ಚೇತನ್ ಚೌಧರಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ತಮಗೆ ಅಡ್ಡಿಯಾಗಿದ್ದ ಕೇತನ್‌ನನ್ನು ಮುಗಿಸಲು ಇಬ್ಬರೂ ಸ್ಕೆಚ್ ಹಾಕಿದ್ದರು.

ಜೂನ್ 18 ರಂದು ಸಿಯಾ ಮತ್ತೆ ಕೇತನ್‌ನನ್ನು ವಿಹಾರದ ನೆಪದಲ್ಲಿ ಲೋಹಗಡ್ ಕೋಟೆಗೆ ಕರೆದೊಯ್ದಳು. ಮೊದಲೇ ಪ್ಲಾನ್ ಮಾಡಿದಂತೆ ಆಕೆಯ ಪ್ರಿಯಕರ ಚೇತನ್ ಕೂಡ ಅಲ್ಲಿಗೆ ಬಂದಿದ್ದ. ಬಿರುಗಾಳಿ ಬೀಸುತ್ತಿದ್ದ ಸಮಯದಲ್ಲಿ ಇಬ್ಬರೂ ಸೇರಿ ಕೇತನ್‌ನನ್ನು ಕೋಟೆಯ ತುದಿಯಿಂದ 400 ಅಡಿ ಆಳದ ಕಂದಕಕ್ಕೆ ತಳ್ಳಿದ್ದಾರೆ. ತೀವ್ರವಾಗಿ ಗಾಯಗೊಂಡ ಕೇತನ್ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಕಳ್ಳಾಟ ಬಯಲು ಮಾಡಿದ್ದೇಗೆ?

ಕೊಲೆಯ ಬಳಿಕ ಸಿಯಾ ಪೊಲೀಸರ ಮುಂದೆ, ಕೋಟೆಯ ಮೇಲೆ ಜೋರಾಗಿ ಗಾಳಿ ಬೀಸುತ್ತಿತ್ತು, ಆಗ ಕೇತನ್ ಕಾಲು ಜಾರಿ ಆಕಸ್ಮಿಕವಾಗಿ ಬಿದ್ದರು ಎಂದು ಕಣ್ಣೀರು ಹಾಕಿದ್ದಳು. ಪೊಲೀಸರು ಮೊದಲು ಆಕಸ್ಮಿಕ ಸಾವು ಎಂದು ಕೇಸ್ ದಾಖಲಿಸಿದ್ದರು. ಆದರೆ, ಕೇತನ್ ತಂದೆಯ ಅನುಮಾನ ಮತ್ತು ಸ್ಥಳೀಯ ಅಪರಾಧ ವಿಭಾಗದ ತನಿಖೆಯ ವೇಳೆ ಚೇತನ್ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಚೇತನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಇಡೀ ಕೊಲೆ ಸಂಚನ್ನು ಒಪ್ಪಿಕೊಂಡಿದ್ದಾನೆ. ಆ ಮಾಹಿತಿಯ ಆಧಾರದ ಮೇಲೆ ಸಿಯಾಳನ್ನು ಕೂಡ ಬಂಧಿಸಲಾಗಿದೆ.

ಪುಣೆ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ ಪ್ರಕಾರ, ಕೋರ್ಟ್ ಇಬ್ಬರೂ ಆರೋಪಿಗಳನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಆಕ್ರಂದನ ಮುಗಿಲು ಮುಟ್ಟಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಪಂಚಾಯತ್’ ವೆಬ್ ಸರಣಿ ನಟರನ್ನು ಭೇಟಿಯಾದ ಪ್ರಧಾನಿ ಮೋದಿ; ‘ಬಿನೋದ್’ ಜೊತೆಗಿನ ರೀಲ್ ವೈರಲ್ – Kannada News | PM Modi Meets Panchayat Stars; Shares Reel With Theme Song

ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಅಮೆಜಾನ್ ಪ್ರೈಮ್ ವಿಡಿಯೋದ ಜನಪ್ರಿಯ ವೆಬ್ ಸರಣಿ ‘ಪಂಚಾಯತ್’. ಈಗ ಪ್ರಧಾನಿ ನರೇಂದ್ರ ಮೋದಿ ಅವರೂ ಈ ಸಾಲಿಗೆ ಸೇರಿಕೊಂಡಿದ್ದಾರೆ! ಇತ್ತೀಚೆಗೆ ನಡೆದ ರಿಪಬ್ಲಿಕ್ ಸಮಿಟ್‌ನಲ್ಲಿ ಪ್ರಧಾನಿ ಮೋದಿ ಅವರು ‘ಪಂಚಾಯತ್’ ಸರಣಿಯ ಪ್ರಮುಖ ನಟರನ್ನು ಭೇಟಿಯಾಗಿ ಸಂವಾದ ನಡೆಸಿದ್ದಾರೆ.

  • ‘ಪಂಚಾಯತ್’ ಸರಣಿ ನಟರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ.
  • ನಟ ‘ಬಿನೋದ್’ ಜೊತೆ ಪ್ರಧಾನಿ ಮೋದಿ ರೀಲ್ ವೈರಲ್.
  • ಶೀಘ್ರದಲ್ಲೇ ‘ಪಂಚಾಯತ್’ ಸೀಸನ್ ಐದು ಬಿಡುಗಡೆಗೆ ಸಿದ್ಧತೆ.

ಸರಣಿಯಲ್ಲಿ ‘ಭೂಷಣ್’ ಪಾತ್ರದ ಮೂಲಕ ಗಮನ ಸೆಳೆದ ದುರ್ಗೇಶ್ ಕುಮಾರ್ ಮತ್ತು ‘ಬಿನೋದ್’ ಪಾತ್ರದ ಮೂಲಕ ಮನೆಮಾತಾಗಿರುವ ಅಶೋಕ್ ಪಾಠಕ್ ಅವರೊಂದಿಗೆ ಪ್ರಧಾನಿ ಮೋದಿ ಕೈಕುಲುಕಿದರು. ಈ ವಿಶೇಷ ಭೇಟಿಯ ಸಂದರ್ಭದಲ್ಲಿ ಟಾಲಿವುಡ್ ನಟ ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಕೊನಿಡೇಲ ಕೂಡ ಉಪಸ್ಥಿತರಿದ್ದರು.

‘ಬಿನೋದ್’ ಜೊತೆ ಪ್ರಧಾನಿ ಮೋದಿ ರೀಲ್!

ಪ್ರಧಾನಿ ಮೋದಿ ಅವರು ಈ ನಟರೊಂದಿಗಿನ ಭೇಟಿಯ ಸುಂದರ ಕ್ಷಣಗಳ ವೀಡಿಯೋವನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ರೀಲ್‌ಗೆ ‘ಪಂಚಾಯತ್’ ಸರಣಿಯ ಪ್ರಸಿದ್ಧ ಥೀಮ್ ಮ್ಯೂಸಿಕ್ ಅನ್ನು ಬಳಸಲಾಗಿರುವುದು ಅಭಿಮಾನಿಗಳಿಗೆ ಮತ್ತಷ್ಟು ಖುಷಿ ನೀಡಿದೆ. ಅಷ್ಟೇ ಅಲ್ಲದೆ, ಈ ವೀಡಿಯೋಗೆ ಪ್ರಧಾನಿಯವರು ‘ಬಿನೋದ್ ಜೊತೆ ಕೆಲವು ಕ್ಷಣಗಳು’ ಎಂಬ ತಮಾಷೆಯ ಅಡಿಬರಹವನ್ನು ಬರೆದುಕೊಂಡಿದ್ದಾರೆ.

ಪ್ರಧಾನಿಯವರ ಈ ರೀಲ್‌ಗೆ ನಟ ಅಶೋಕ್ ಪಾಠಕ್ ಪ್ರತಿಕ್ರಿಯಿಸಿ, ‘ನಿಮ್ಮ ಪ್ರೀತಿ ಮತ್ತು ಆಶೀರ್ವಾದಕ್ಕೆ ಧನ್ಯವಾದಗಳು’ ಎಂದು ಹಿಂದಿಯಲ್ಲಿ ಬರೆದಿದ್ದಾರೆ. ಇನ್ನು ಅಭಿಮಾನಿಗಳು, ‘ಇದು ಈ ವರ್ಷದ ಅತ್ಯಂತ ಅನಿರೀಕ್ಷಿತ ಭೇಟಿ ಮತ್ತು ಕೊಲಾಬರೇಷನ್’, ‘ಇನ್ಮುಂದೆ ಫುಲೇರಾ ಗ್ರಾಮದ ಅಭಿವೃದ್ಧಿ ಖಂಡಿತ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತರಾವರಿ ಕಮೆಂಟ್ ಮಾಡುತ್ತಿದ್ದಾರೆ.

‘ಭೂಷಣ್’ ಮತ್ತು ‘ಬಿನೋದ್’ ಹಿನ್ನೆಲೆ

‘ಬನ್ರಾಕಸ್’ ಎಂದೇ ಕರೆಯಲ್ಪಡುವ ಭೂಷಣ್ (ದುರ್ಗೇಶ್ ಕುಮಾರ್) ಮತ್ತು ಬಿನೋದ್ (ಅಶೋಕ್ ಪಾಠಕ್) ‘ಪಂಚಾಯತ್’ ಸರಣಿಯ ವಿಭಿನ್ನ ಪಾತ್ರಗಳಾಗಿದ್ದು, ತಮ್ಮ ಹಾಸ್ಯಪ್ರಜ್ಞೆ ಮತ್ತು ವಿಶಿಷ್ಟ ನಟನೆಯ ಮೂಲಕ ಪ್ರೇಕ್ಷಕರ ನೆಚ್ಚಿನ ನಟರಾಗಿದ್ದಾರೆ.

ದುರ್ಗೇಶ್ ಕುಮಾರ್: ರಾಷ್ಟ್ರೀಯ ನಾಟಕ ಶಾಲೆ (NSD) ಹಳೆಯ ವಿದ್ಯಾರ್ಥಿಯಾಗಿರುವ ಇವರು ಇಮ್ತಿಯಾಜ್ ಅಲಿ ಅವರ ‘ಹೈವೇ’ (2014) ಚಿತ್ರದ ಮೂಲಕ ಗುರುತಿಸಿಕೊಂಡರು. ನಂತರ ಸುಲ್ತಾನ್, ಸಂಜು, ಧಡಕ್ ಚಿತ್ರಗಳಲ್ಲಿ ನಟಿಸಿದ್ದಾರೆ.

ಅಶೋಕ್ ಪಾಠಕ್: ಬಿಟ್ಟೂ ಬಾಸ್, ಶಾಂಘೈ, 102 ನಾಟ್ ಔಟ್ ನಂತಹ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದರೂ, ‘ಪಂಚಾಯತ್’ ಸರಣಿಯೇ ಇವರಿಗೆ ದೊಡ್ಡ ಬ್ರೇಕ್ ನೀಡಿತು.

ಇದನ್ನೂ ಓದಿ: ಪಂಚಾಯತ್ ನಟನ ಮೇಲೆ ಜಾತಿ ತಾರತಮ್ಯ; ಕರ್ನಾಟಕದ ದೇವಸ್ಥಾನದಲ್ಲಿ ಪ್ರವೇಶ ನಿರಾಕರಣೆ

ಈಗಾಗಲೇ 2025 ರಲ್ಲಿ ಈ ಸರಣಿಯ 4ನೇ ಸೀಸನ್ ಬಿಡುಗಡೆಯಾಗಿದ್ದು, ಸದ್ಯ ಸೀಸನ್ 5 ರ ಸಿದ್ಧತೆಗಳು ನಡೆಯುತ್ತಿದ್ದು 2026 ರಲ್ಲಿ ಪ್ರಸಾರವಾಗಲಿದೆ ಎಂದು ಪ್ರೈಮ್ ವಿಡಿಯೋ ಖಚಿತಪಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜುಲೈ 5ಕ್ಕೆ ಸರಳವಾಗಿ ಮದುವೆಯಾಗಲಿದ್ದಾರೆ ಆಮಿರ್ ಖಾನ್; ವೈಯಕ್ತಿಕ ಜೀವನದ ಚರ್ಚೆಗೆ ನಟ ಬೇಸರ – Kannada News | Aamir Khan Marries Gauri Spratt: Bollywood Star’s Third Wedding and Simple Ceremony

ಬಾಲಿವುಡ್‌ನ ‘ಮಿಸ್ಟರ್ ಪರ್ಫೆಕ್ಷನಿಸ್ಟ್’ ಆಮಿರ್ ಖಾನ್ ಅವರು ತಮ್ಮ ಮದುವೆಯ ಸುದ್ದಿಯ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಜುಲೈ 5ರಂದು ಅವರು ಗೌರಿ ಸ್ಪ್ರಾಟ್ ಅವರೊಂದಿಗೆ ವಿವಾಹವಾಗಲಿದ್ದಾರೆ. ಈ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದು, ಆಮಿರ್ ಖಾನ್ ಈ ಕುರಿತು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

  • ಗೌರಿ ಸ್ಪ್ರಾಟ್ ಜೊತೆ ಆಮಿರ್ ಖಾನ್ ಸರಳ ವಿವಾಹ.
  • ವೈಯಕ್ತಿಕ ಜೀವನದ ಅತಿಯಾದ ಚರ್ಚೆಗೆ ನಟನ ಬೇಸರ.
  • ಮಾಜಿ ಪತ್ನಿಯರೊಂದಿಗೆ ಆಮಿರ್ ಖಾನ್ ಉತ್ತಮ ಬಾಂಧವ್ಯ.

ಅಂತರರಾಷ್ಟ್ರೀಯ ಮಾಧ್ಯಮ ‘ವೆರೈಟಿ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆಮಿರ್ ಖಾನ್, ತಮ್ಮ ಮದುವೆಯ ಬಗ್ಗೆ ಜನರಿಗಿರುವ ಕುತೂಹಲಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ‘ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ಜನರು ಇಷ್ಟೊಂದು ಕುತೂಹಲ ಹೊಂದುವುದು ಏಕೆ ಎಂದು ನನಗೆ ಅರ್ಥವಾಗುತ್ತಿಲ್ಲ. ಜನರು ನಮ್ಮ ವೈಯಕ್ತಿಕ ಜೀವನಕ್ಕಿಂತ ಹೆಚ್ಚಾಗಿ ನಮ್ಮ ಕೆಲಸ, ಚಲನಚಿತ್ರಗಳು ಮತ್ತು ಕಲೆಯ ಬಗ್ಗೆ ಆಸಕ್ತಿ ತೋರಿಸಬೇಕು’ ಎಂದು ಅವರು ಅಭಿಪ್ರಾಯ ಹೊರಹಾಕಿದರು.

ತಮ್ಮ ವಿವಾಹದ ಬಗ್ಗೆ ಹರಡಿರುವ ವದಂತಿಗಳಿಗೆ ತೆರೆ ಎಳೆದಿರುವ ಆಮಿರ್ ಖಾನ್, ಯಾವುದೇ ಅದ್ಧೂರಿ ಸಮಾರಂಭವನ್ನು ಆಯೋಜಿಸುತ್ತಿಲ್ಲ ಎಂದು ಹೇಳಿದ್ದಾರೆ. ಈ ಮದುವೆಯು ಅತ್ಯಂತ ಸರಳ ಹಾಗೂ ಖಾಸಗಿಯಾಗಿ ನಡೆಯಲಿದೆ. ಮನೆಯಲ್ಲಿಯೇ ಕುಟುಂಬದ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಸರಳವಾಗಿ ನೋಂದಾಯಿತ ವಿವಾಹ ಮಾಡಿಕೊಳ್ಳುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಹಿಂದಿನ ವೈವಾಹಿಕ ಜೀವನ:

ಆಮಿರ್ ಖಾನ್ ಈ ಹಿಂದೆ ರೀನಾ ದತ್ತಾ ಅವರನ್ನು ವಿವಾಹವಾಗಿದ್ದರು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ನಂತರ ಅವರು ಚಲನಚಿತ್ರ ನಿರ್ಮಾಪಕಿ ಕಿರಣ್ ರಾವ್ ಅವರನ್ನು ಮದುವೆಯಾಗಿದ್ದರು ಮತ್ತು ಅವರಿಗೆ ಒಬ್ಬ ಮಗನಿದ್ದಾನೆ. ಕೆಲವು ವರ್ಷಗಳ ಹಿಂದೆ ಕಿರಣ್ ರಾವ್ ಮತ್ತು ಆಮಿರ್ ಖಾನ್ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದಿದ್ದರು. ಆದಾಗ್ಯೂ, ಇಬ್ಬರು ಮಾಜಿ ಪತ್ನಿಯರೊಂದಿಗೆ ಆಮಿರ್ ಇಂದಿಗೂ ಉತ್ತಮ ಸ್ನೇಹ ಮತ್ತು ಗೌರವಯುತ ಸಂಬಂಧವನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ:  ಆಮಿರ್ ಖಾನ್ 3ನೇ ಮದುವೆ: ಗೌರಿ ಜತೆ ಮನೆಯಲ್ಲೇ ನಡೆಯಲಿದೆ ರಿಜಿಸ್ಟರ್ ಮ್ಯಾರೇಜ್

ಈಗ ಗೌರಿ ಸ್ಪ್ರಾಟ್ ಅವರೊಂದಿಗೆ ಮೂರನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಆಮಿರ್ ಖಾನ್ ಅವರ ಮದುವೆಯ ಸುದ್ದಿ ಸದ್ಯ ಸಿನಿಮಾ ವಲಯದಲ್ಲಿ ಮುನ್ನೆಲೆಗೆ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳ ಇಂದಿನ ವಾಯು ಗುಣಮಟ್ಟ ಉತ್ತಮ – Kannada News | Bengaluru AQI Update: Air Quality Improves Across Karnataka Cities Due to Rain

ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳ ಇಂದಿನ ವಾಯು ಗುಣಮಟ್ಟ ಉತ್ತಮ

ಬೆಂಗಳೂರು, ಜೂನ್ 24: ಕರ್ನಾಟಕದಾದ್ಯಂತ ಮುಂಗಾರು ಮಳೆ ಚುರುಕಾಗಿರುವುದರಿಂದ ರಾಜ್ಯದ ಬಹುತೇಕ ನಗರಗಳಲ್ಲಿ ವಾಯು ಮಾಲಿನ್ಯದ ಮಟ್ಟ (AQI) ಗಣನೀಯವಾಗಿ ಕಡಿಮೆಯಾಗಿದೆ. ಮಳೆ ಹಾಗೂ ಬಲವಾದ ಗಾಳಿಯ ಹಿನ್ನೆಲೆಯಲ್ಲಿ ವಾತಾವರಣದಲ್ಲಿರುವ ಧೂಳಿನ ಕಣಗಳು ನೆಲಕಚ್ಚಿದ್ದು, ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟವು ಉತ್ತಮ ವಲಯದಲ್ಲೇ ಮುಂದುವರಿದಿದೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಇಂದಿನ ವಾಯು ಗುಣಮಟ್ಟ ಸೂಚ್ಯಂಕ ಉತ್ತಮ ಮಟ್ಟದಲ್ಲಿ ದಾಖಲಾಗಿದೆ.
  • ನಿರಂತರ ಮಳೆಯಿಂದಾಗಿ ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯ ಗಣನೀಯ ಇಳಿಕೆ.
  • ಮಡಿಕೇರಿಯಲ್ಲಿ ಅತ್ಯಂತ ಶುದ್ಧ ಗಾಳಿ ದಾಖಲಾಗಿದ್ದು, ಧಾರವಾಡದಲ್ಲಿ ಸಾಧಾರಣ ವಲಯದಲ್ಲಿದೆ.

ಬೆಂಗಳೂರಿನಲ್ಲಿ ನಿರಾಳ ವಾತಾವರಣ

ರಾಜಧಾನಿ ಬೆಂಗಳೂರಿನಲ್ಲಿ ಇಂದು ಜೂನ್ 24 ರಂದು ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು 54 ರಷ್ಟಿದ್ದು, ಇದು ಸಾಧಾರಣ ಮತ್ತು ಕೆಲವು ಭಾಗಗಳಲ್ಲಿ ಉತ್ತಮ ಶ್ರೇಣಿಯಲ್ಲಿದೆ. ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದಾಗಿ ನಗರದ ಒಟ್ಟಾರೆ ವಾಯು ಮಾಲಿನ್ಯದ ಪ್ರಮಾಣ ಇಳಿಕೆಯಾಗಿದೆ.

ನಗರದ ವಿವಿಧ ಪ್ರಮುಖ ಪ್ರದೇಶಗಳ ಇಂದಿನ AQI

  • ಬಿಟಿಎಂ ಲೇಔಟ್: 60 AQI (ಸಾಧಾರಣ)
  • ಜಯನಗರ: 46 AQI (ಉತ್ತಮ)
  • ಸಿಲ್ಕ್ ಬೋರ್ಡ್ : 52 AQI (ಸಾಧಾರಣ)
  • ಹೆಬ್ಬಾಳ: 39 AQI (ಉತ್ತಮ)
  • ಬಸವನಗುಡಿ: 42 AQI (ಉತ್ತಮ)

ನಗರದಲ್ಲಿ ಪ್ರಮುಖ ಮಾಲಿನ್ಯಕಾರಕಗಳಾದ PM2.5 ಮತ್ತು PM10 ಪ್ರಮಾಣವು ನಿಯಂತ್ರಣದಲ್ಲಿದ್ದು, ಉಸಿರಾಟದ ತೊಂದರೆ ಇರುವವರಿಗೂ ಸಹ ಇಂದು ಹೊರಾಂಗಣ ಚಟುವಟಿಕೆಗಳಿಗೆ ಯಾವುದೇ ಪ್ರಮುಖ ಆರೋಗ್ಯ ಅಪಾಯಗಳಿಲ್ಲ ಎಂದು ವರದಿ ತಿಳಿಸಿದೆ.

ಕರ್ನಾಟಕದ ಇತರೆ ನಗರಗಳ AQI ಸ್ಥಿತಿ

  • ಮಡಿಕೇರಿ: 33 AQI – ಪ್ರಸ್ತುತ ರಾಜ್ಯದಲ್ಲೇ ಅತ್ಯಂತ ಶುದ್ಧವಾದ ಮತ್ತು ‘ಉತ್ತಮ’ ಗಾಳಿ ಹೊಂದಿರುವ ನಗರವಾಗಿದೆ.
  • ಮೈಸೂರು: 52 AQI (ಸಾಧಾರಣ)
  • ಮಂಗಳೂರು: 59 AQI (ಸಾಧಾರಣ)
  • ಧಾರವಾಡ: 90 AQI – ಉತ್ತರ ಒಳನಾಡಿನ ಈ ಭಾಗದಲ್ಲಿ ಒಣ ಹವೆ ಇರುವುದರಿಂದ ಮಾಲಿನ್ಯದ ಮಟ್ಟ ಸ್ವಲ್ಪ ಹೆಚ್ಚಾಗಿದ್ದು ‘ಸಾಧಾರಣ’ ವಲಯದ ಕೊನೆಯಲ್ಲಿದೆ.
  • ಕಲಬುರಗಿ: 77 AQI (ಸಾಧಾರಣ)
  • ಬಾಗಲಕೋಟೆ ಮತ್ತು ಗದಗ: 74 AQI (ಸಾಧಾರಣ)
  • ವಿಜಯಾಪುರ: 68 AQI (ಸಾಧಾರಣ)

AQI ಸೂಚ್ಯಂಕವು 0-50 ರಷ್ಟಿದ್ದರೆ ಅದನ್ನು ‘ಉತ್ತಮ’ ಎಂದು, 51-100 ರಷ್ಟಿದ್ದರೆ ‘ಸಾಧಾರಣ’ ಎಂದು ಪರಿಗಣಿಸಲಾಗುತ್ತದೆ. ಸದ್ಯಕ್ಕೆ ರಾಜ್ಯದ ಯಾವುದೇ ನಗರದಲ್ಲಿ ಮಾಲಿನ್ಯವು ಅಪಾಯಕಾರಿ ಮಟ್ಟವನ್ನು ತಲುಪಿಲ್ಲದಿರುವುದು ಸಾರ್ವಜನಿಕರಿಗೆ ನಿರಾಳ ತಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಕ್ರಿಸ್ಟಿಯಾನೊ ರೊನಾಲ್ಡೊ – Kannada News | Cristiano Ronaldo Creates New World Record In Fifa World Cup 2026

ಫುಟ್‌ಬಾಲ್ ಸಾಮ್ರಾಜ್ಯದ ಅಧಿಪತಿ, ದಾಖಲೆಗಳ ಸರದಾರ, ಮೈದಾನದಲ್ಲಿ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಜಗದೇಕ ವೀರ ಜಗದೇಕ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಮತ್ತೆ ತಲೆ ಎತ್ತಿ ನಿಂತಿದ್ದಾರೆ. ಆದರೆ ಈ ಬಾರಿ ನಿಂತಿರುವುದು ವಿಶ್ವಕಪ್​ ಇತಿಹಾಸದಲ್ಲೇ ಯಾರಿಂದಲೂ ಸಾಧ್ಯವಾಗದ ಅಪರೂಪದ ವಿಶ್ವ ದಾಖಲೆ ನಿರ್ಮಿಸುವ ಮೂಲಕ ಎಂಬುದು ವಿಶೇಷ. (PC: AFP)

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ವಿರುದ್ಧದ ಪಂದ್ಯದಲ್ಲಿ ಒಂದೇ ಒಂದು ಗೋಲು ಗಳಿಸದೇ ಟೀಕಾಗಾರರ ಬಾಯಿಗೆ ಆಹಾರವಾಗಿದ್ದ ಕ್ರಿಸ್ಟಿಯಾನೊ ರೊನಾಲ್ಡೊ ಇದೀಗ ಒಂದೇ ಮ್ಯಾಚ್​ನಲ್ಲಿ ಎರಡು ಗೋಲು ಬಾರಿಸಿ ಮಿಂಚಿದ್ದಾರೆ. ಹೂಸ್ಟನ್‌ನ ಎನ್‌ಆರ್‌ಜಿ ಸ್ಟೇಡಿಯಂನಲ್ಲಿ ನಡೆದ ಉಜ್ಬೇಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಕ್ರಿಸ್ಟಿಯಾನೊ ಅದ್ಭುತ ಪ್ರದರ್ಶನದೊಂದಿಗೆ 6ನೇ ನಿಮಿಷದಲ್ಲೇ ಮೊದಲು ಗೋಲು ಬಾರಿಸಿದ್ದರು. (PC: gettyimages)

ಇದಾದ ಬಳಿಕ 39ನೇ ನಿಮಿಷದಲ್ಲಿ ಬ್ರೂನೋ ಫೆರ್ನಾಂಡಿಸ್ ನೀಡಿದ ನಿಖರವಾದ ಪಾಸ್ ಅನ್ನು ಬಳಸಿಕೊಂಡ ಕ್ರಿಸ್ಟಿಯಾನೊ ರೊನಾಲ್ಡೊ ಅದ್ಭುತ ಸ್ಲೈಡ್ ಶಾಟ್​ನೊಂದಿಗೆ ತಮ್ಮ ಎರಡನೇ ಗೋಲು ಗಳಿಸಿದರು. ಈ ಎರಡು ಗೋಲುಗಳೊಂದಿಗೆ ಕ್ರಿಸ್ಟಿಯಾನೊ (10 ಗೋಲು) ಪೋರ್ಚುಗಲ್​ ಪರ ವಿಶ್ವಕಪ್​ನಲ್ಲಿ ಅತ್ಯಧಿಕ ಗೋಲು ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. (PC: gettyimages)

ಅಷ್ಟೇ ಅಲ್ಲದೆ ವಿಶ್ವಕಪ್ ಇತಿಹಾಸದಲ್ಲೇ ಸತತ 6 ಆವೃತ್ತಿಗಳಲ್ಲಿ ಗೋಲು ಬಾರಿಸಿದ ವಿಶ್ವದ ಏಕೈಕ ಕಾಲ್ಚೆಂಡು ಚತುರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅಂದರೆ ರೊನಾಲ್ಡೊ ಅವರನ್ನು ಹೊರತುಪಡಿಸಿ ವಿಶ್ವದ ಯಾವುದೇ ಆಟಗಾರ ಸತತ 6 ವಿಶ್ವಕಪ್​ನಲ್ಲಿ ಗೋಲು ಬಾರಿಸಿಲ್ಲ. (PC: gettyimages)

ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಈವರೆಗೆ 6 ಫಿಫಾ ವಿಶ್ವಕಪ್ ಆಡಿದ್ದರೂ, ಅವರು 2010ರ ವಿಶ್ವಕಪ್‌ನಲ್ಲಿ ಯಾವುದೇ ಗೋಲು ದಾಖಲಿಸಿರಲಿಲ್ಲ. ಇದೀಗ ಮೆಸ್ಸಿಗೆ ಸಾಧ್ಯವಾಗದ ಅಪರೂಪದ ವಿಶ್ವ ದಾಖಲೆಯನ್ನು ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮದಾಗಿಸಿಕೊಂಡಿದ್ದಾರೆ. (PC: gettyimages)

ಕ್ರಿಸ್ಟಿಯಾನೋ ರೊನಾಲ್ಡೊ 2006 (ಜರ್ಮನಿ), 2010 (ಸೌತ್ ಆಫ್ರಿಕಾ), 2014 (ಬ್ರೆಝಿಲ್), 2018 (ರಷ್ಯಾ), 2022 (ಖತರ್)  ಫಿಫಾ ವಿಶ್ವಕಪ್‌ಗಳಲ್ಲಿ ಗೋಲು ಬಾರಿಸಿದ್ದರು. ಇದೀಗ ಯುಎಸ್​ಎ-ಮೆಕ್ಸಿಕೋ-ಕೆನಡಾ ಜಂಟಿಯಾಗಿ ಆಯೋಜಿಸುತ್ತಿರುವ ವಿಶ್ವಕಪ್​ನಲ್ಲೂ ಗೋಲು ದಾಖಲಿಸಿ ಸತತ 6 ಫಿಫಾ ವಿಶ್ವಕಪ್​ನಲ್ಲಿ ಗೋಲು ಬಾರಿಸಿದ ವಿಶ್ವದ ಏಕೈಕ ಆಟಗಾರ ಎಂಬ ಸಾರ್ವಕಾಲಿಕ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. (PC: gettyimages)

Published On – 8:00 am, Wed, 24 June 26

Source link

Hindu Ritual: ಮದುವೆಯಲ್ಲಿ ತಾಳಿ ಕಟ್ಟುವಾಗ ‘ಮೂರು ಗಂಟು’ ಯಾಕೆ ಹಾಕ್ತಾರೆ? ಅಸಲಿ ಕಾರಣ ಇಲ್ಲಿದೆ! – Kannada News | Why Three Knots? The Spiritual Significance in Hindu Mangalya Dharane Ritual

ಮದುವೆಯಲ್ಲಿ ತಾಳಿ ಕಟ್ಟುವಾಗ ‘ಮೂರು ಗಂಟು’Image Credit source: Getty Images

ಹಿಂದೂ ಧರ್ಮದಲ್ಲಿ ವಿವಾಹಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಮದುವೆ ಎನ್ನುವುದು ಕೇವಲ ಗಂಡು-ಹೆಣ್ಣಿನ ಎರಡು ಹೃದಯಗಳ ಸಂಬಂಧವಲ್ಲ, ಬದಲಿಗೆ ಎರಡು ಭಿನ್ನ ವಂಶಗಳು ಹಾಗೂ ಕುಟುಂಬಗಳು ಒಂದಾಗುವ ಮಹೋತ್ಸವ. ಮದುವೆಯ ಶಾಸ್ತ್ರಗಳಲ್ಲಿ ಅತ್ಯಂತ ಪ್ರಮುಖವಾದದ್ದು ಮಾಂಗಲ್ಯ ಧಾರಣೆ ಅಥವಾ ತಾಳಿ ಕಟ್ಟುವ ಶುಭ ಮುಹೂರ್ತ. ತಾಳಿ ಕಟ್ಟುವಾಗ ಮೂರು ಮುಡಿ ಅಥವಾ ಮೂರು ಗಂಟುಗಳನ್ನು ಹಾಕಲಾಗುತ್ತದೆ. “ಯಾಕೆ ಮೂರು ಗಂಟುಗಳನ್ನೇ ಹಾಕಬೇಕು?” ಎಂಬ ಪ್ರಶ್ನೆಗೆ ಜ್ಯೋತಿಷ್ಯ ಶಾಸ್ತ್ರ ಮತ್ತು ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಅದ್ಭುತವಾದ ಕಾರಣಗಳಿವೆ.

ಸಂಖ್ಯೆ 3 ಮತ್ತು ಗುರು ಗ್ರಹದ ಕೃಪೆ:

ಹಿಂದೂ ಸಂಪ್ರದಾಯ ಮತ್ತು ಜ್ಯೋತಿಷ್ಯದಲ್ಲಿ ‘ಮೂರು’ (3) ಎಂಬ ಸಂಖ್ಯೆಗೆ ವಿಶೇಷ ಪ್ರಾಮುಖ್ಯತೆ ಇದೆ. ಸಂಖ್ಯಾಶಾಸ್ತ್ರದ ಪ್ರಕಾರ 1 ಸೂರ್ಯನನ್ನು, 2 ಚಂದ್ರನನ್ನು ಪ್ರತಿನಿಧಿಸಿದರೆ, 3 ಎಂಬುದು ‘ಗುರು ಗ್ರಹದ’ (ಬೃಹಸ್ಪತಿ) ಸಂಖ್ಯೆಯಾಗಿದೆ. ಗುರುವನ್ನು ಜ್ಞಾನ, ಧರ್ಮ ಮತ್ತು ವೈವಾಹಿಕ ಬದುಕಿನ ಕಾರಕ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮೂರು ಗಂಟುಗಳನ್ನು ಹಾಕುವುದರಿಂದ ದಾಂಪತ್ಯದಲ್ಲಿ ಗುರುವಿನ ಅನುಗ್ರಹ ಸದಾ ಇರುತ್ತದೆ ಎಂಬ ನಂಬಿಕೆ ಇದೆ.

ತ್ರಿವಳಿಗಳ ಪವಿತ್ರ ಸಂಕೇತ:

ನಮ್ಮ ಸಂಸ್ಕೃತಿಯಲ್ಲಿ ‘ಮೂರು’ ಎಂಬುದು ಪ್ರಕೃತಿಯ ನಿಯಮಗಳನ್ನು ಬಿಂಬಿಸುತ್ತದೆ. ಈ ಮೂರು ಗಂಟುಗಳು ಪ್ರಮುಖವಾಗಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಪ್ರತಿನಿಧಿಸುತ್ತವೆ. ಮನುಷ್ಯನಲ್ಲಿರುವ ಸತ್ವಗುಣ, ರಜೋಗುಣ ಮತ್ತು ತಮೋಗುಣಗಳನ್ನು ಸಮತೋಲನದಲ್ಲಿಡಲು ಇದು ಸಂಕೇತವಾಗಿದೆ. ಇದಲ್ಲದೇ ತ್ರಿಕಾಲ ಮತ್ತು ತ್ರಿಲೋಕ ಅಂದರೆ ಭೂತ, ಭವಿಷ್ಯತ್ ಹಾಗೂ ವರ್ತಮಾನ ಕಾಲಗಳಲ್ಲೂ ದಂಪತಿಗಳು ಒಂದಾಗಿರಲಿ ಎಂಬ ಆಶಯ ಇದರ ಹಿಂದೆ ಇರುತ್ತದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಮೂರು ಶರೀರಗಳ ಬೆಸೆಯುವ ಬಂಧನ:

ಆಧ್ಯಾತ್ಮಿಕ ಲೆಕ್ಕಾಚಾರದ ಪ್ರಕಾರ, ಮನುಷ್ಯನಿಗೆ ಕೇವಲ ಹೊರಗಣ್ಣಿಗೆ ಕಾಣುವ ದೇಹ ಮಾತ್ರವಲ್ಲದೆ ಮೂರು ರೀತಿಯ ಶರೀರಗಳಿರುತ್ತವೆ. ತಾಳಿ ಕಟ್ಟುವಾಗ ಹಾಕುವ ಮೂರು ಗಂಟುಗಳು ಈ ಮೂರು ಶರೀರಗಳನ್ನು ಒಂದಕ್ಕೊಂದು ಬೆಸೆಯುವ ಪ್ರಕ್ರಿಯೆಯಾಗಿದೆ:

  • ಸ್ಥೂಲ ಶರೀರ (ಭೌತಿಕ ದೇಹ): ಮೊದಲನೇ ಗಂಟು ಹೊರಗೆ ಕಾಣುವ ಭೌತಿಕ ಶರೀರಕ್ಕೆ ಸಂಬಂಧಿಸಿದ್ದಾಗಿದೆ.
  • ಸೂಕ್ಷ್ಮ ಶರೀರ: ಎರಡನೇ ಗಂಟು ಮನುಷ್ಯನ ಒಳಗಿರುವ ಆಲೋಚನೆ, ಮನಸ್ಸು ಮತ್ತು ಸೂಕ್ಷ್ಮ ಶರೀರವನ್ನು ಪ್ರತಿನಿಧಿಸುತ್ತದೆ.
  • ಕಾರಣ ಶರೀರ: ಮೂರನೇ ಗಂಟು ಆತ್ಮ ಮತ್ತು ಕಾರಣ ಶರೀರಕ್ಕೆ ಸಂಬಂಧಿಸಿದ್ದಾಗಿದೆ.

ಒಂದು ಪವಿತ್ರ ಜವಾಬ್ದಾರಿ:

ಗಂಡು ಹೆಣ್ಣಿಗೆ ಈ ಮೂರು ಗಂಟುಗಳನ್ನು ಹಾಕುವ ಮೂಲಕ, “ನಿನ್ನ ಸ್ಥೂಲ, ಸೂಕ್ಷ್ಮ ಮತ್ತು ಕಾರಣ ಶರೀರ ಎಂಬ ಮೂರನ್ನೂ ನಾನು ಗೌರವಿಸುತ್ತೇನೆ, ನಿಭಾಯಿಸುತ್ತೇನೆ ಮತ್ತು ಅದಕ್ಕೆ ಬೇಕಾದ ಶಕ್ತಿ ನನ್ನಲ್ಲಿದೆ” ಎಂಬ ಮೂರು ಪಟ್ಟು ಬಲವಾದ ಜವಾಬ್ದಾರಿಯನ್ನು ಪಂಚಭೂತಗಳ ಸಾಕ್ಷಿಯಾಗಿ ವಹಿಸಿಕೊಳ್ಳುತ್ತಾನೆ.

ಇತ್ತೀಚಿನ ದಿನಗಳಲ್ಲಿ ಮದುವೆಯ ಶಾಸ್ತ್ರಗಳನ್ನು ಕೇವಲ ಸಾಂಕೇತಿಕವಾಗಿ ಮಾಡಲಾಗುತ್ತಿದೆ. ಆದರೆ ನಮ್ಮ ಹಿರಿಯರು ಹಾಕಿಕೊಟ್ಟ ಪ್ರತಿಯೊಂದು ಸಂಪ್ರದಾಯದ ಹಿಂದೆ ಆಳವಾದ ಆಧ್ಯಾತ್ಮಿಕ ಮತ್ತು ಮಾನಸಿಕ ಅರ್ಥ ಅಡಗಿದೆ. ಈ ಮೂರು ಗಂಟುಗಳು ಕೇವಲ ಹಳದಿ ದಾರದ ಬಂಧನವಲ್ಲ, ಅದು ಎರಡು ಜೀವಗಳನ್ನು ಒಂದಾಗಿಸುವ ಜನ್ಮ ಜನ್ಮಾಂತರದ ಬಂಧ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕ್ರಾಸ್ ವೋಟಿಂಗ್ ಮಾಹಿತಿ ನೀಡಿದ ಬಿಜೆಪಿ ನಾಯಕರಿಗೆ ಹೈಕಮಾಂಡ್​ನಿಂದ ಸಾಲು ಸಾಲು ಪ್ರಶ್ನೆಗಳು! – Kannada News | BJP Cross Voting: High Command Grills Karnataka Leaders in Delhi, Demands Detailed Report With Evidence

ಆರ್ ಅಶೋಕ್ ಹಾಗೂ ವಿಜಯೇಂದ್ರImage Credit source: tv9

ಬೆಂಗಳೂರು, ಜೂನ್ 24: ಅಡ್ಡ ಮತದಾನದ ಕುರಿತು ವರಿಷ್ಠರಿಗೆ ಮಾಹಿತಿ ನೀಡಲು ನವದೆಹಲಿಗೆ ತೆರಳಿದ್ದ ರಾಜ್ಯ ಬಿಜೆಪಿ (BJP) ನಾಯಕರು ಬೆಂಗಳೂರಿಗೆ ವಾಪಸಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಒಬ್ಬರೇ ದೆಹಲಿಯಲ್ಲಿ ಉಳಿದುಕೊಂಡಿದ್ದಾರೆ. ಬಿಜೆಪಿ ಕೇಂದ್ರ ಕಚೇರಿಯಲ್ಲಿ 45 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಉಪಸ್ಥಿತಿಯಲ್ಲೇ ವರಿಷ್ಠರು ಪರಿಷತ್ ಚುನಾವಣೆ ಘೋಷಣೆಯಾದಾಗಿನಿಂದ ಮತದಾನದವರೆಗೆ ಕೈಗೊಂಡ ಕ್ರಮಗಳ ಬಗ್ಗೆ ಶಾಸಕಾಂಗ ಪಕ್ಷದ ನಾಯಕ ಮತ್ತು ರಾಜ್ಯಾಧ್ಯಕ್ಷರಿಂದ ಮಾಹಿತಿ ಕೇಳಿದ್ದಾರೆ. ಅಡ್ಡ ಮತದಾನ ಮಾಡಿರುವವರು ಹಣ ಪಡೆದೇ ವಿಪ್ ಉಲ್ಲಂಘಿಸಿದ್ದಾರೆ ಎಂದು ವರಿಷ್ಠರಿಗೆ ಮಾಹಿತಿ ನೀಡಿದ್ದು, ಖಚಿತ ಮಾಹಿತಿಯೊಂದಿಗೆ ವರದಿ ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ.

ಹೈಕಮಾಂಡ್ ಕೇಳಿದ ಪ್ರಶ್ನೆಗಳೇನು?

  • ಚುನಾವಣೆ ಘೋಷಣೆಯಾದ ಬಳಿಕ ಎಷ್ಟು ಸಭೆ ನಡೆಸಿದ್ದೀರಿ?
  • ಶಾಸಕಾಂಗ ಪಕ್ಷದ ಸಭೆ ಯಾವಾಗ ಮಾಡಿದ್ದೀರಿ?
  • ಮತಗಳ ಹಂಚಿಕೆ ಯಾವ ರೀತಿ ಮಾಡಿದ್ದೀರಿ?
  • ಶಾಸಕರಿಗೆ ವಿಪ್ ಯಾವಾಗ ಕೊಟ್ಟಿದ್ದೀರಿ?
  • ನಿಮ್ಮ ಸಿದ್ಧತೆ ಯಾವ ರೀತಿ ಇತ್ತು?
  • ಸಿ.ಟಿ. ರವಿ ನೇತೃತ್ವದ ಸಮಿತಿ ವರದಿಯಿಂದ ಏನು ಮಾಹಿತಿ ಸಿಗಲಿದೆ?
  • ಶಾಸಕಾಂಗ ಪಕ್ಷದ ಸಭೆಯನ್ನು 2-3 ದಿನ ಮೊದಲೇ ಮಾಡಬಹುದಿತ್ತಲ್ವಾ?
  • ಜೆಡಿಎಸ್ ಜೊತೆ ಎಷ್ಟು ಸಭೆ ಮಾಡಿದ್ದೀರಿ?
  • ಜೆಡಿಎಸ್​ಗೆ ಹಾಕುವ ಮತಗಳ ಬಗ್ಗೆ ಅವರಿಗೆ ಮೊದಲೇ ಮಾಹಿತಿ ಕೊಟ್ಟಿದ್ರಾ?
  • ಅನುಮಾನ ಇದ್ದವರ ಜೊತೆ ಮತ್ತೆ ಮಾತುಕತೆ ಮಾಡಿದ್ರಾ?

ವರಿಷ್ಠರ ಪ್ರಶ್ನಾವಳಿಗಳಿಗೆ ಉತ್ತರಿಸಿರುವ ರಾಜ್ಯ ನಾಯಕರು, ಶಾಸಕಾಂಗ ಪಕ್ಷದ ಸಭೆ ನಡೆಸಿದ ವಿಚಾರ, ಅಭ್ಯರ್ಥಿಗಳಿಗೆ 30 ಮತಗಳ ನಿಗದಿ ಮತ್ತು ಮೊದಲೇ ವಿಪ್ ಯಾಕೆ ಕೊಟ್ಟಿರಲಿಲ್ಲ ಎಂಬುದನ್ನು ಸಭೆಯಲ್ಲಿ ವಿವರಿಸಿದ್ದಾರೆ.

ರಾಜ್ಯ ನಾಯಕರು ವರಿಷ್ಠರಿಗೆ ಹೇಳಿದ್ದೇನು?

  • ಹಣ ಪಡೆದು ಅಡ್ಡ ಮತದಾನ ಮಾಡಲಾಗಿದೆ.
  • ಇನ್ನಷ್ಟು ಖಚಿತ ಮಾಹಿತಿಯೊಂದಿಗೆ ವರದಿ ಸಲ್ಲಿಸುತ್ತೇವೆ.
  • ನಮಗೆ ಇನ್ನೂ ಸ್ವಲ್ಪ ಸಮಯ ಬೇಕು.
  • ಜೆಡಿಎಸ್​ಗೆ ಪೂರ್ಣ ಮಾಹಿತಿ ನೀಡಲಾಗಿತ್ತು.
  • ಕಾಂಗ್ರೆಸ್​ಗೆ ಮಾಹಿತಿ ತಿಳಿಯಬಾರದು ಎಂಬ ಕಾರಣಕ್ಕೆ ಕೊನೆಯ ಕ್ಷಣದಲ್ಲಿ ವಿಪ್ ನೀಡಲಾಗಿತ್ತು.
  • ಪ್ರತಿಯೊಬ್ಬ ಶಾಸಕರ ಜೊತೆ ಮಾತನಾಡಿಯೇ ವಿಪ್ ನೀಡಲಾಗಿತ್ತು.

ಹೈಕಮಾಂಡ್ ನಿರ್ದೇಶನ ಏನು?

  • ಶೀಘ್ರ ಸಿ.ಟಿ. ರವಿ ಸಮಿತಿ ವರದಿ ಕಳುಹಿಸಿ.
  • ಅಗತ್ಯ ಬಿದ್ದರೆ ಮತ್ತೆ ದೆಹಲಿಗೆ ಕರೆಯುತ್ತೇವೆ.
  • ಅಶೋಕ್ ಮತ್ತು ವಿಜಯೇಂದ್ರ ಇನ್ನಷ್ಟು ತಯಾರಿ ಮಾಡಿಕೊಳ್ಳಬಹುದಾಗಿತ್ತು.
  • ನಿಮ್ಮ ಬಳಿ ಹೆಚ್ಚಿನ ಮಾಹಿತಿ ಇದ್ದರೆ ಕಳುಹಿಸಿ.
  • ನಮ್ಮ ಮೂಲಗಳಿಂದಲೂ ಮಾಹಿತಿ ಸಂಗ್ರಹಿಸುತ್ತಿದ್ದೇವೆ.
  • ಸೂಕ್ತ ಸಮಯ ‌ನೋಡಿ ಕ್ರಮ ಕೈಗೊಳ್ಳುತ್ತೇವೆ.

ಇದನ್ನೂ ಓದಿ: ಪರಿಷತ್​ ಚುನಾವಣೆಯಲ್ಲಿ ಅಡ್ಡ ಮತದಾನ: ರಾಜ್ಯ ನಾಯಕರಿಗೆ ಮಹತ್ವದ​​ ಸೂಚನೆ ನೀಡಿದ ಬಿಜೆಪಿ ಹೈಕಮಾಂಡ್​​

ಸಭೆಯ ವೇಳೆ, ಅಡ್ಡ ಮತದಾನದಿಂದ ಪಕ್ಷಕ್ಕೆ ಮುಜುಗರವಾಗಿದೆ ಎಂಬ ರೀತಿಯಲ್ಲೇ ರಾಜ್ಯ ನಾಯಕರ ಜೊತೆ ಚರ್ಚೆ ನಡೆಸಿರುವ ಹೈಕಮಾಂಡ್, ವಿಪ್ ಉಲ್ಲಂಘಿಸಿದ ಶಾಸಕರ ಪತ್ತೆಯಾದ ಬಳಿಕ ಕ್ರಮ ಕೈಗೊಳ್ಳುವ ಬಗ್ಗೆ ಸೂಚ್ಯವಾಗಿ ತಿಳಿಸಿದೆ. ಆದರೆ ಸಭೆಯಲ್ಲಿ ಅಡ್ಡ ಮತದಾನ ಮಾಡಿದ ಶಾಸಕರು ಯಾರು ಎಂದು ನಿರ್ದಿಷ್ಟವಾಗಿ ಯಾವುದೇ ಶಾಸಕರ ಹೆಸರು ಪ್ರಸ್ತಾಪವಾಗಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅದೇ ಕಟ್ಟಡದಲ್ಲಿ ಮೊಳಕೆಯೊಡೆದ ಪ್ರೀತಿ, ಅದೇ ಕಟ್ಟಡದ ಬೆಂಕಿಯಲ್ಲಿ ಭಸ್ಮವಾಯ್ತು, ಪ್ರೇಮಿಗಳ ದುರಂತ ಕಥೆ ಓದಿ – Kannada News | Lucknow Aliganj Tragedy: Engaged Couple’s Tragic Love Story Ends in Blaze

ಲಕ್ನೋ, ಜೂನ್ 24: ಬದುಕಿನಲ್ಲಿ ಹೊಸ ಭರವಸೆ, ಉದ್ಯೋಗದಲ್ಲಿ ಬಡ್ತಿ, ಕೈತುಂಬಾ ಸಂಬಳ, ಜತೆಗೆ ಕೈಹಿಡಿಯಲಿರುವ ಪ್ರೇಯಸಿಯೊಂದಿಗೆ ಸಾಗಲಿರುವ ಸುಂದರ ಸಂಸಾರದ ಕನಸು. 27 ವರ್ಷದ ನೀಲೇಶ್ ಕುಮಾರ್ ಜೀವನದಲ್ಲಿ ಎಲ್ಲವೂ ಅಂದುಕೊಂಡಂತೆ ಸಾಗುತ್ತಿತ್ತು. ಆದರೆ, ಲಕ್ನೋದ ಅಲಿಗಂಜ್‌ನಲ್ಲಿ ಸೋಮವಾರ ಸಂಭವಿಸಿದ ಆ ಒಂದು ಭೀಕರ ಅಗ್ನಿ ದುರಂತ(Fire Accident) ಆತನ ಇಡೀ ಪ್ರಪಂಚವನ್ನೇ ಸುಟ್ಟು ಬೂದಿ ಮಾಡಿದೆ. ಯಾವ ಕೋಚಿಂಗ್ ಸೆಂಟರ್‌ನಲ್ಲಿ ಇಬ್ಬರೂ ಭೇಟಿಯಾಗಿ ಪ್ರೀತಿಯಲ್ಲಿ ಬಿದ್ದಿದ್ದರೋ, ಅದೇ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ನೀಲೇಶ್ ಹಾಗೂ ಆತನ ಭಾವಿ ಪತ್ನಿ, 30 ವರ್ಷದ ಅನಾಮಿಕಾ ಸಮಂತ ಇಬ್ಬರೂ ಸಜೀವ ದಹನವಾಗಿದ್ದಾರೆ.

ಕೆಲಸದ ಸ್ಥಳದಲ್ಲೇ ಚಿಗುರಿದ್ದ ಪ್ರೀತಿ
ಮೂಲತಃ ಲಕ್ನೋದವರಾದ ನೀಲೇಶ್ ಅತ್ಯಂತ ಕಠಿಣ ಪರಿಶ್ರಮಿ, ಪಶ್ಚಿಮ ಬಂಗಾಳದ ಅನಾಮಿಕಾ ಸಮಂತ ಅವರು ಅದೇ ಅಲಿಗಂಜ್ ಕಟ್ಟಡದ ಅನಿಮೇಷನ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಜತೆಯಾಗಿ ಕೆಲಸ ಮಾಡುವಾಗ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಈ ವರ್ಷವಷ್ಟೇ ನೀಲೇಶ್‌ಗೆ ಉದ್ಯೋಗದಲ್ಲಿ ಬಡ್ತಿ ಸಿಗುವ ಜೊತೆಗೆ ಸಂಬಳವೂ ಹೆಚ್ಚಾಗಿತ್ತು. ಮದುವೆಗೂ ಮುನ್ನ ಹಣ ಉಳಿಸಿ, ಕುಟುಂಬಕ್ಕೆ ಒಂದು ಹೊಸ ಮನೆ ಕಟ್ಟಿಸಿಕೊಡಬೇಕೆಂಬುದು ಆತನ ದೊಡ್ಡ ಕನಸಾಗಿತ್ತು. ಆ ಮನೆ ಮುಂದಿನ ವರ್ಷ ಪೂರ್ಣಗೊಂಡ ತಕ್ಷಣ ಮದುವೆಯಾಗಲು ನಿರ್ಧರಿಸಿದ್ದರು.

ಕಳೆದ ವಾರವಷ್ಟೇ ನಡೆದಿತ್ತು ನಿಶ್ಚಿತಾರ್ಥ
ಕಳೆದ ವಾರವಷ್ಟೇ ಅನಾಮಿಕಾಳ ಪೋಷಕರು ಪಶ್ಚಿಮ ಬಂಗಾಳದಿಂದ ಲಕ್ನೋಗೆ ವಿಮಾನದ ಮೂಲಕ ಬಂದಿದ್ದರು. ನೀಲೇಶ್ ಮನೆಯಲ್ಲಿ ಇಬ್ಬರ ಪ್ರೀತಿಗೂ ಒಪ್ಪಿಗೆ ಸಿಗುವ ಮೂಲಕ ಅತ್ಯಂತ ಹರ್ಷಚಿತ್ತದಿಂದ ನಿಶ್ಚಿತಾರ್ಥ ಶಾಸ್ತ್ರ ಮುಗಿದಿತ್ತು. ಮದುವೆಯ ಮುಂದಿನ ಮಾತುಕತೆಗಾಗಿ ನೀಲೇಶ್ ಕುಟುಂಬದವರು ಮುಂದಿನ ವಾರ ಪಶ್ಚಿಮ ಬಂಗಾಳಕ್ಕೆ ಹೋಗಲು ರೈಲು ಟಿಕೆಟ್‌ಗಳನ್ನೂ ಬುಕ್ ಮಾಡಿದ್ದರು.

ಮತ್ತಷ್ಟು ಓದಿ: ಲಕ್ನೋ ಕೋಚಿಂಗ್ ಸೆಂಟರ್​​ನಲ್ಲಿ ಭೀಕರ ಬೆಂಕಿ ದುರಂತ; ಕಿಟಕಿಯಿಂದ ಹಾರಿದ ವಿದ್ಯಾರ್ಥಿಗಳು

ಆಸ್ಪತ್ರೆಯ ಹೊರಗೆ ಕುಟುಂಬದವರ ಆಕ್ರಂದನ
ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದ ಆಸ್ಪತ್ರೆಯ ಹೊರಗೆ ನಿಂತು ಕಣ್ಣೀರು ಹಾಕುತ್ತಿದ್ದ ನೀಲೇಶ್ ಸಹೋದರ ಅಭಿಷೇಕ್, ನಾವೆಲ್ಲರೂ ಮದುವೆಯ ಸಿದ್ಧತೆಯಲ್ಲಿದ್ದೆವು. ಕೆಲವು ದಿನಗಳ ಹಿಂದೆ ನಮ್ಮ ಮನೆಯಲ್ಲೇ ಚಿಕ್ಕದೊಂದು ಸಮಾರಂಭ ನಡೆದಿತ್ತು. ಅನಾಮಿಕಾ ತುಂಬಾ ನಗುನಗುತ್ತಾ ಎಲ್ಲರೊಂದಿಗೂ ಬೆರೆತಿದ್ದಳು. ಆದರೆ ಒಂದು ಬೆಂಕಿ ಈಗ ಎಲ್ಲವನ್ನೂ ಕಿತ್ತುಕೊಂಡಿದೆ ಎಂದು ಶೋಕ ವ್ಯಕ್ತಪಡಿಸಿದರು.

ಸೋಮವಾರ ಸಂಭವಿಸಿದ ಈ ಭೀಕರ ದುರಂತದಲ್ಲಿ ನೀಲೇಶ್ ಮತ್ತು ಅನಾಮಿಕಾ ಸೇರಿದಂತೆ ಒಟ್ಟು 15 ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ ಹೆಚ್ಚಿನವರು ತಮ್ಮ ಕಣ್ಣುಗಳಲ್ಲಿ ನೂರಾರು ಕನಸುಗಳನ್ನು ಹೊತ್ತು ಕಲಿಯಲು ಬಂದಿದ್ದ ಅಮಾಯಕ ವಿದ್ಯಾರ್ಥಿಗಳಾಗಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Karnataka Weather Forecast: ಕರಾವಳಿಯಲ್ಲಿ ವರುಣನ ಆರ್ಭಟ: ಉಡುಪಿ, ಉತ್ತರ ಕನ್ನಡಕ್ಕೆ ಆರೆಂಜ್ ಅಲರ್ಟ್! – Kannada News | Karnataka Weather Forecast: Heavy Rain Alert for Coastal Districts, Orange Alert Issued

ಬೆಂಗಳೂರು, ಜೂನ್ 23: ಕರ್ನಾಟಕದ ವಿವಿಧ ಭಾಗಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಭಾರಿ ಮಳೆಯಾಗುವ (Weather) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜ್ಯದ ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹಲವೆಡೆ ಅಲರ್ಟ್ ಘೋಷಿಸಲಾಗಿದೆ.

ಮುಖ್ಯಾಂಶಗಳು

  • ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆ, ಆರೆಂಜ್ ಅಲರ್ಟ್ ಘೋಷಣೆ.
  • ದಕ್ಷಿಣ ಕನ್ನಡ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ.
  • ಒಳನಾಡಿನ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಸಾಧ್ಯತೆ, ಜನರಿಗೆ ಎಚ್ಚರಿಕೆ ಸೂಚನೆ.

ಕರಾವಳಿಗೆ ಆರೆಂಜ್ ಅಲರ್ಟ್

ಕರಾವಳಿ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದ್ದು, ಕರಾವಳಿಯ ಭಾಗಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆ, ಗುಡುಗು ಸಹಿತ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಮಳೆಯ ಸಮಯದಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಮುನ್ಸೂಚನೆ ಇದೆ.

ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಗುಡುಗು, ಮಿಂಚು ಹಾಗೂ ಬಲವಾದ ಗಾಳಿ (ಗಂಟೆಗೆ 30-40 ಕಿ.ಮೀ) ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯ ಇನ್ನುಳಿದ ಭಾಗಗಳಿಗೆ ಎಚ್ಚರಿಕೆಯ ಭಾಗವಾಗಿ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಉತ್ತರ ಒಳನಾಡು ಹವಾಮಾನ ಮುನ್ಸೂಚನೆ

ಉತ್ತರ ಒಳನಾಡಿನ ಜಿಲ್ಲೆಗಳಲ್ಲೂ ವ್ಯಾಪಕ ಮಳೆಯಾಗುವ ಮುನ್ಸೂಚನೆ ಇದ್ದು, ಯೆಲ್ಲೋ ಅಲರ್ಟ್ ಜಾರಿಯಲ್ಲಿದೆ. ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಹಾಗೂ 30-40 ಕಿ.ಮೀ ವೇಗದ ಗಾಳಿ ಬೀಸುವ ಸಾಧ್ಯತೆಯಿದೆ. ಹಾವೇರಿ, ಗದಗ ಮತ್ತು ಬಾಗಲಕೋಟೆ ಭಾಗದ ಹಲವು ಪ್ರದೇಶಗಳಲ್ಲಿ ಸಾಧಾರಣ ಪ್ರಮಾಣದ ಮಳೆ ಹಾಗೂ ಗುಡುಗು ಸಹಿತ ಗಾಳಿ ಬೀಸುವ ನಿರೀಕ್ಷೆಯಿದೆ.

ಬೀದರ್, ಕಲ್ಬುರ್ಗಿ, ಕೊಪ್ಪಳ, ರಾಯಚೂರು, ವಿಜಯಾಪುರ ಮತ್ತು ಯಾದಗಿರಿ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದ್ದು, ಮಳೆಯೊಂದಿಗೆ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ.

ಸಾರ್ವಜನಿಕರಿಗೆ ಸೂಚನೆ

ಕರಾವಳಿಯ ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಆರೆಂಜ್ ಅಲರ್ಟ್ ಇರುವುದರಿಂದ ಹಾಗೂ ರಾಜ್ಯದ ಉಳಿದೆಡೆ ಯೆಲ್ಲೋ ಅಲರ್ಟ್ ಘೋಷಿಸಿರುವುದರಿಂದ ಸಾರ್ವಜನಿಕರು ಮತ್ತು ಮೀನುಗಾರರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಗುಡುಗು-ಮಿಂಚಿನ ಸಂದರ್ಭದಲ್ಲಿ ಮರಗಳ ಕೆಳಗೆ ಅಥವಾ ವಿದ್ಯುತ್ ಕಂಬಗಳ ಬಳಿ ಆಶ್ರಯ ಪಡೆಯಬಾರದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟೀಮ್ ಇಂಡಿಯಾಗೆ 23 ವರ್ಷದ ಯುವ ಆಲ್​ರೌಂಡರ್ ಎಂಟ್ರಿ..! – Kannada News | Suryansh Shedge replaces injured Nitish Kumar Reddy in Team India

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆಯಾಗಿದೆ. ಈ ಬದಲಾವಣೆಯೊಂದಿಗೆ 23 ವರ್ಷದ ಯುವ ಆಲ್​ರೌಂಡರ್ ಸೂರ್ಯಂಶ್ ಶೆಡ್ಗೆ ಭಾರತ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಟೀಮ್ ಇಂಡಿಯಾ ಆಲ್​ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಗಾಯಗೊಂಡಿದ್ದು, ಹೀಗಾಗಿ ಅವರು ಮುಂಬರುವ ಸರಣಿಗಳಿಂದ ಹೊರಗುಳಿದಿದ್ದಾರೆ.

  • ನಿತೀಶ್ ಕುಮಾರ್ ರೆಡ್ಡಿ ಅವರ ಬದಲಿಗೆ ಇದೀಗ ಸೂರ್ಯಂಶ್ ಶೆಡ್ಗೆ ಅವರನ್ನು ಭಾರತ ಟಿ20 ತಂಡಕ್ಕೆ ಆಯ್ಕೆ ಮಾಡಲಾಗಿದೆ.
  • ಸೂರ್ಯಂಶ್ ಶೆಡ್ಗೆ ಮುಂಬೈ ಮೂಲದ ಯುವ ಆಲ್​ರೌಂಡರ್​.
  • ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿದಿದ್ದರು.

ನಿತೀಶ್ ಕುಮಾರ್ ರೆಡ್ಡಿಗೆ ಏನಾಗಿದೆ?

ಅಫ್ಘಾನಿಸ್ತಾನ್ ವಿರುದ್ಧದ ಕೊನೆಯ ಏಕದಿನ ಪಂದ್ಯದ ವೇಳೆ ನಿತೀಶ್ ಕುಮಾರ್ ರೆಡ್ಡಿ ಎಡಗಾಲಿನ ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಅವರ ಸ್ಕ್ಯಾನಿಂಗ್‌ ರಿಪೋರ್ಟ್​ನಲ್ಲಿ ಎಡಗಾಲಿನ ಸ್ನಾಯುವಿನಲ್ಲಿ ತೀವ್ರವಾದ ಊತ ಮತ್ತು  ಹಾನಿಯಾಗಿರುವುದು ದೃಢಪಟ್ಟಿದೆ. ಹೀಗಾಗಿ ವೈದ್ಯರು ಕನಿಷ್ಠ ಒಂದು ತಿಂಗಳುಗಳ ಕಾಲ ವಿಶ್ರಾಂತಿ ಸೂಚಿಸಿದ್ದಾರೆ. ಹೀಗಾಗಿ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗಳಿಂದ ನಿತೀಶ್ ಕುಮಾರ್ ರೆಡ್ಡಿ  ಹೊರಗುಳಿದಿದ್ದಾರೆ.

ಸೂರ್ಯಂಶ್ ಶೆಡ್ಗೆ ಆಯ್ಕೆ ಯಾಕೆ?

ಸೂರ್ಯಂಶ್ ಶೆಡ್ಗೆ ವೇಗದ ಬೌಲಿಂಗ್ ಹಾಗೂ ಬ್ಯಾಟಿಂಗ್ ಮಾಡಬಲ್ಲ ಆಟಗಾರ. 23 ವರ್ಷದ ಮುಂಬೈ ಆಲ್‌ರೌಂಡರ್ ಇತ್ತೀಚಿನ ದೇಶಿ ಹಾಗೂ ಐಪಿಎಲ್ ಟೂರ್ನಿಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ.

  • ಐಪಿಎಲ್ 2026 ರಲ್ಲಿ ಪಂಜಾಬ್ ಕಿಂಗ್ಸ್ ಪರ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಸೂರ್ಯಂಶ್ 7 ಇನ್ನಿಂಗ್ಸ್‌ಗಳಲ್ಲಿ 175.55 ರ ಸ್ಟ್ರೈಕ್ ರೇಟ್‌ನಲ್ಲಿ 158 ರನ್ ಚಚ್ಚಿದ್ದರು.
  • ಶ್ರೀಲಂಕಾದಲ್ಲಿ ನಡೆದ ಭಾರತ ಎ ತಂಡದ ಸರಣಿಯಲ್ಲಿ ಒಂದು ಅರ್ಧಶತಕ (72 ರನ್) ಸೇರಿದಂತೆ ಒಟ್ಟು 147 ರನ್ ಗಳಿಸಿ, 23 ಓವರ್‌ಗಳ ಬೌಲಿಂಗ್ ಜವಾಬ್ದಾರಿಯನ್ನೂ ನಿಭಾಯಿಸಿದ್ದರು.
    * ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಲ್​ರೌಂಡರ್ ಆಟದೊಂದಿಗೆ ಮುಂಬೈ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಈ ಎಲ್ಲಾ ಕಾರಣಗಳಿಂದಾಗಿ ನಿತೀಶ್ ಕುಮಾರ್ ರೆಡ್ಡಿ ಅವರ ಸ್ಥಾನಕ್ಕೆ ಸೂರ್ಯಂಶ್ ಶೆಡ್ಗೆ ಅವರನ್ನು ಆಯ್ಕೆ ಮಾಡಲಾಗಿದೆ. ಅದರಂತೆ ಇದೇ ಮೊದಲ ಬಾರಿಗೆ ಸೂರ್ಯಂಶ್ ಭಾರತ ತಂಡದಲ್ಲಿ ಕಾಣಿಸಿಳ್ಳಲಿದ್ದಾರೆ.

ಇದನ್ನೂ ಓದಿ: ಸಚಿನ್​ರ ವಿಶ್ವ ದಾಖಲೆ ಮುರಿಯಲು ರೂಟ್ ಇನ್ನೆಷ್ಟು ರನ್ ಕಲೆಹಾಕಬೇಕು?

ಭಾರತ ಟಿ20 ತಂಡ:  ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ, ಪ್ರಸಿದ್ಧ್ ಕೃಷ್ಣ, ಸೂರ್ಯಂಶ್ ಶೆಡ್ಗೆ.

Published On – 7:16 am, Wed, 24 June 26

Source link

Exit mobile version