ಪರಿಷತ್​ ಚುನಾವಣೆಯಲ್ಲಿ ಅಡ್ಡ ಮತದಾನ: ರಾಜ್ಯ ನಾಯಕರಿಗೆ ಮಹತ್ವದ​​ ಸೂಚನೆ ನೀಡಿದ ಬಿಜೆಪಿ ಹೈಕಮಾಂಡ್​​ – Kannada News | Council Election Cross Voting: BJP High Command Demands Report by June 25; Party Drops Dharmasthala Oath Plan

ರಾಜ್ಯ ನಾಯಕರಿಗೆ ಮಹತ್ವದ​​ ಸೂಚನೆ ನೀಡಿದ ಬಿಜೆಪಿ ಹೈಕಮಾಂಡ್​​Image Credit source: Tv9 Kannada and PTI

ನವದೆಹಲಿ/ಬೆಂಗಳೂರು, ಜೂನ್​​ 23: ಪರಿಷತ್​ ಚುನಾವಣೆಯಲ್ಲಿ ಬಿಜೆಪಿ ಶಾಸಕರಿಂದ ಅಡ್ಡಮತದಾನ ವಿಚಾರ ಸಂಬಂಧ ವಿಪಕ್ಷ ನಾಯಕ ಆರ್​. ಅಶೋಕ್​​ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರನ್ನು ದೆಹಲಿಗೆ ಕರೆಸಿಕೊಂಡಿದ್ದ ಹೈಕಮಾಂಡ್​​ ಮಹತ್ವದ ಸೂಚನೆ ನೀಡಿದೆ. ಕ್ರಾಸ್​​ ವೋಟಿಂಗ್​​ ಸಂಬಂಧ ಜೂನ್ 25ರ ಒಳಗೆ ತುರ್ತಾಗಿ ಸಂಪೂರ್ಣ ವರದಿ ನೀಡಲು ಸಿ.ಟಿ.ರವಿ ಸಮಿತಿಗೆ ಸೂಚಿಸಿದೆ. ಈ ಸಂಬಂಧ ಅಶೋಕ್​​ ಮತ್ತು ವಿಜಯೇಂದ್ರ ಅವರಿಗೆ ಸ್ಪಷ್ಟ ಮಾಹಿತಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ರವಾನಿಸಿದ್ದಾರೆ.

ನಿತಿನ್ ನಬಿನ್ ಸೂಚನೆ ಏನು?

ವರದಿಯಲ್ಲಿ ಅಡ್ಡಮತದಾನ ಮಾಡಿದ ಶಾಸಕರ ಹೆಸರು ಸಮೇತ ಮಾಹಿತಿ ನೀಡುವ ಜೊತೆಗೆ ಕ್ರಾಸ್​​ ವೋಟಿಂಗ್​​ ಮಾಡಿದ ಕಾರಣವನ್ನೂ ವಿವರವಾಗಿ ನೀಡುವಂತೆ ನಿತಿನ್​​ ನಬಿನ್​​ ರಾಜ್ಯ ಘಟಕಕ್ಕೆ ಸೂಚಿಸಿದ್ದಾರೆ. ಪ್ರಕರಣವನ್ನು ಬಿಜೆಪಿ ಹೈಕಮಾಂಡ್‌ ಗಂಭೀರವಾಗಿ ಪರಿಗಣಿಸಿದ್ದು, ಸಮಿತಿ ನೀಡುವ ವರದಿ ಆಧರಿಸಿ ತುರ್ತು ಕ್ರಮ ಕೈಗೊಳ್ಳಲು ನಿರ್ಧರಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಪರಿಷತ್​​ ಚುನಾವಣೆಯಲ್ಲಿ ಕ್ರಾಸ್​​ ವೋಟಿಂಗ್​; ಆಣೆ ಪ್ರಮಾಣಕ್ಕೆ ಮುಂದಾದ ಬಿಜೆಪಿಗರಿಗೆ ಹೆಚ್​​.ಡಿ. ಕುಮಾರಸ್ವಾಮಿ ಕಿವಿಮಾತು

ಇಂದೇ ಪ್ರಾಥಮಿಕ ಮಾಹಿತಿ ರವಾನೆ?

ಮತ್ತೊಂದೆಡೆ ಸಾಂದರ್ಭಿಕ ಸಾಕ್ಷಿ ಮತ್ತು ಹೇಳಿಕೆ ಪರಾಮರ್ಶಿಸಿ ಸಿ.ಟಿ.ರವಿ ನೇತೃತ್ವದ ಸಮಿತಿ ಪ್ರಾಥಮಿಕ ವರದಿ ಸಿದ್ಧಪಡಿಸಲಿದ್ದು, ದೆಹಲಿಯಿಂದ ಸೂಚನೆ ಬಂದರೆ ಇಂದೇ ಪ್ರಾಥಮಿಕ ಮಾಹಿತಿ ರವಾನೆ ಸಾಧ್ಯತೆ ಇದೆ. ಇಲ್ಲದಿದ್ದರೆ ಬಿವೈ ವಿಜಯೇಂದ್ರ ದೆಹಲಿಯಿಂದ ಹಿಂತಿರುಗಿದ ಬಳಿಕ ವರದಿ ಸಲ್ಲಿಕೆ ನಡೆಯಲಿದೆ. ಆದರೆ ಅಡ್ಡ ಮತದಾನ ಮಾಡಿದವರ ಹೆಸರು ಉಲ್ಲೇಖಿಸುವುದು ಕಷ್ಟಸಾಧ್ಯದ ವಿಚಾರವಾಗಿದ್ದು, ಬಹುತೇಕ ಎಲ್ಲಾ ಶಾಸಕರನ್ನು ದೂರವಾಣಿ ಮೂಲಕ ಅದಾಗಲೇ ಸಮಿತಿ ಸಂಪರ್ಕಿಸಿದೆ. ಜೂನ್ 25ರೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಜೂನ್ 19ರಂದೇ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಆದೇಶಿಸಿದ್ದರು.

ಆಣೆ ಪ್ರಮಾಣ ನಿರ್ಧಾರ ವಾಪಸ್​​

ಸ್ವಪಕ್ಷೀಯ ಕೆಲ ನಾಯಕರಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೇ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದಲೂ ಬಿಜೆಪಿ ಹಿಂದೆ ಸರಿದಿದೆ. ಎಂಎಲ್‌ಸಿ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ಕುರಿತು ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಸುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ. ಧರ್ಮಸ್ಥಳವನ್ನು ರಾಜಕೀಯ ಕ್ಷೇತ್ರ ಮಾಡುವುದು ಬೇಡ ಎಂದು ಸ್ಪಷ್ಟಪಡಿಸಿದ ಅವರು, ಪಕ್ಷದ ಆಂತರಿಕ ವಿಚಾರಗಳನ್ನು ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಟಾಕ್ಸಿಕ್’ ಸಿನಿಮಾದಲ್ಲೇ ‘ರಾಮಾಯಣ’ ಪ್ರಚಾರ; ಯಶ್ ಮಾಸ್ಟರ್ ಪ್ಲ್ಯಾನ್ – Kannada News | Yash’s Master Plan: Ramayana Teaser with Toxic Release! Double Dhamaka for Fans

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ (Toxic) ಆಗಸ್ಟ್ 26 ರಂದು ವಿಶ್ವಾದ್ಯಂತ ಭರ್ಜರಿಯಾಗಿ ತೆರೆಗೆ ಬರುತ್ತಿದೆ. ಈ ಚಿತ್ರದ ಬಿಡುಗಡೆಯ ಜೊತೆಗೆ ಯಶ್ ಅಭಿಮಾನಿಗಳಿಗೆ ಮತ್ತೊಂದು ಬಂಪರ್ ಗಿಫ್ಟ್ ಸಿಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಯಶ್ ನಟನೆಯ ಮತ್ತೊಂದು ಬಿಗ್ ಬಜೆಟ್ ಚಿತ್ರ ‘ರಾಮಾಯಣ’ದ ಟೀಸರ್ ಅಥವಾ ಟ್ರೇಲರ್ ಅನ್ನು ‘ಟಾಕ್ಸಿಕ್’ ಸಿನಿಮಾದೊಂದಿಗೆ ಅಟ್ಯಾಚ್ ಮಾಡಿ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ

‘ಟಾಕ್ಸಿಕ್’ ಚಿತ್ರವನ್ನು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ವೀಕ್ಷಿಸಲಿದ್ದಾರೆ. ಹೀಗಾಗಿ, ಈ ಸಿನಿಮಾದ ಥಿಯೇಟರ್ ರನ್ ಬಳಸಿಕೊಂಡೇ ‘ರಾಮಾಯಣ’ ಚಿತ್ರದ ಪ್ರಚಾರವನ್ನು ಮಾಡಲು ಯಶ್ ಮುಂದಾಗಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದಲ್ಲಿ ಯಶ್ ಅವರು ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಮೇಲೆ ಈಗಾಗಲೇ ದೇಶಾದ್ಯಂತ ಭಾರಿ ಕುತೂಹಲವಿದೆ. ಎರಡೂ ಸಿನಿಮಾಗೆ ಯಶ್ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿರುವುದರಿಂದ ಅವರಿಗೆ ಹೆಚ್ಚಿನ ಜವಾಬ್ದಾರಿ ಇದೆ. ಹೀಗಾಗಿ, ಈ ನಿರ್ಧಾರ ಮಾಡಿದ್ದಾರೆ.

ಆಗಸ್ಟ್ 26ಕ್ಕೆ ಡಬಲ್ ಧಮಾಕಾ

ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26 ರಂದು ಬಿಡುಗಡೆಯಾಗುತ್ತಿರುವುದು ಈಗಾಗಲೇ ಅಧಿಕೃತವಾಗಿದೆ. ಅದೇ ದಿನವೇ ‘ರಾಮಾಯಣ’ದ ಅಪ್‌ಡೇಟ್ ಕೂಡ ಸಿಕ್ಕರೆ ಯಶ್ ಅಭಿಮಾನಿಗಳ ಸಭ್ರಮ ಡಬಲ್ ಆಗುವುದರಲ್ಲಿ ಸಂಶಯವಿಲ್ಲ. ಒಂದೇ ಸಮಯದಲ್ಲಿ ತಮ್ಮ ಎರಡು ದೊಡ್ಡ ಸಿನಿಮಾಗಳನ್ನು ಪ್ರೇಕ್ಷಕರ ಮುಂದೆ ತರುತ್ತಿರುವ ಯಶ್ ಅವರ ಈ ಮಾಸ್ಟರ್ ಪ್ಲಾನ್ ಸದ್ಯ ಸಿನಿಮಾ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರವನ್ನು ತುಳಿಯಲು ಬಾಲಿವುಡ್​​ನಲ್ಲಿ ನಡೀತಿದೆ ಸೀಕ್ರೆಟ್ ಪ್ಲ್ಯಾನ್?

‘ಟಾಕ್ಸಿಕ್’ ಬಗ್ಗೆ

‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಜೊತೆ ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್ ಸೇರಿದಂತೆ ಐವರು ನಾಯಕಿಯರು ಇದ್ದಾರೆ. ಈ ಸಿನಿಮಾ ತುಂಬಾನೇ ಪವರ್​​ಫುಲ್ ಆಗಿದೆ ಎಂದು ಊಹಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಮಹಿಳೆಯರಿಗೆ ಇದು ಸುರಕ್ಷಿತ ದೇಶ; ಬೆಳಗ್ಗಿನ ಜಾವ 4.30 ಕ್ಕೆ ಒಂಟಿಯಾಗಿ ಫ್ರಾನ್ಸ್ ಬೀದಿಯಲ್ಲಿ ಓಡಾಡಿದ ಯುವತಿ – Kannada News | France: Young woman says France is safer for girls compared to India

ಫ್ರಾನ್ಸ್, ಜೂನ್ 23: ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಸೇಫ್ಟಿ ಅನ್ನೋದೇ ಇಲ್ಲ. ಹೀಗಾಗಿರುವಾಗ ಫ್ರಾನ್ಸ್ ನಲ್ಲಿ (France) ನೆಲೆಸಿರುವ ಯುವತಿಗೆ (young woman) ಈ ದೇಶ ಸುರಕ್ಷಿತ ಎನ್ನುವ ಅನುಭವವಾಗಿದೆ. ಭಾರತೀಯ ಯುವತಿ ಬೆಳಗಿನ ಜಾವ 4.30 ಕ್ಕೆ ಕಾಲೇಜು ಘಟಿಕೋತ್ಸವ ಮುಗಿಸಿ ಮನೆಗೆ ನಡೆದುಕೊಂಡೇ ಹೋಗಿದ್ದಾಳೆ. ತನಗೆ ಯಾವುದೇ ಸಮಸ್ಯೆ ಆಗಿಲ್ಲ, ಯಾರು ತೊಂದರೆ ಮಾಡಿಲ್ಲ ಎಂದು ಹೇಳಿದ್ದಾಳೆ. ಈ ವಿಡಿಯೋ ಸದ್ಯ ಆನ್ಲೈನ್‌ನಲ್ಲಿ ಚರ್ಚೆ ಹುಟ್ಟು ಹಾಕಿದೆ. ನೆಟ್ಟಿಗರು ಈ ಯುವತಿಯ ಮಾತನ್ನು ಒಪ್ಪಿಕೊಂಡಿದ್ದಾರೆ.

ಶುಭಂಗಿ ವ್ಯಾಸ್ (Shubhangi Vyas) ಎಂಬ ಯುವತಿ ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ. ಈ ಕ್ಲಿಪಿಂಗ್ ನಲ್ಲಿ ಯುವತಿ ಘಟಿಕೋತ್ಸವ ಸಮಾರಂಭದ ನಂತರ ಕಾಲೇಜು ವಿದ್ಯಾರ್ಥಿಗಳಿಗಾಗಿ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಹೀಗಾಗಿ ಈ ಕಾರ್ಯಕ್ರಮ ಮುಗಿದ ನಂತರ ಬೆಳಗಿನ ಜಾವ 4.30 ಕ್ಕೆ ಮನೆಗೆ ನಡೆದುಕೊಂಡು ಹೋಗಲು ನಿರ್ಧಾರ ಮಾಡಿದೆ. ಈಗ ಸಮಯ ಬೆಳಗ್ಗೆ 4:30 ಆಗಿದೆ. ನಾನು ಮನೆಗೆ ನಡೆಯುತ್ತಾ ಹೋಗುತ್ತಿದ್ದೇನೆ. ಯಾರೂ ನನಗೆ ಇಲ್ಲಿ ತೊಂದರೆ ನೀಡುತ್ತಿಲ್ಲ, ಕಿರುಕುಳ ನೀಡುತ್ತಿಲ್ಲ, ನನ್ನನ್ನು ಯಾರು ಕೂಡ ಪ್ರಶ್ನಿಸುತ್ತಿಲ್ಲ. ಈ ರೀತಿಯ ಸುರಕ್ಷತೆ ಮತ್ತು ಸ್ವಾತಂತ್ರ್ಯವನ್ನು ನಾವು ಬೇರೆಲ್ಲಿ ಸಿಗುತ್ತದೆ ಎಂದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: Video: ಮೊದಲ ಬಾರಿಗೆ ಅಜ್ಜ ಅಜ್ಜಿಯನ್ನು ಲಂಡನ್‌ಗೆ ಕರೆದೊಯ್ದ ಮೊಮ್ಮಗಳು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಭಾರತಕ್ಕೆ ಹೋಲಿಸಿದ್ರೆ ವಿದೇಶವೇ ಹೆಣ್ಣು ಮಕ್ಕಳಿಗೆ ಸೇಫ್ ಎಂದಿದ್ದಾರೆ. ಇನ್ನೊಬ್ಬರು, ನಮ್ಮ ದೇಶದಲ್ಲಿ ರಾತ್ರಿ ಬಿಡಿ ಹಗಲಿನಲ್ಲಿ ಓಡಾಡುವುದೇ ಕಷ್ಟ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಮ್ಮ ದೇಶದಲ್ಲಿ ಇಷ್ಟು ಸುರಕ್ಷಿತವಾಗಿ ಓಡಾಡುವುದು ಕನಸಿನ ಮಾತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ಆರೋಗ್ಯ ಸಮಸ್ಯೆ ಇದ್ದಾಗ ಡೆಂಗ್ಯೂ ಸೋಂಕು ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು ಎಚ್ಚರ! – Kannada News | Why Dengue Is More Dangerous For People With Chronic Diseases

ಮಳೆಗಾಲ ಆರಂಭವಾಗುತ್ತಿದ್ದಂತೆ ಡೆಂಗ್ಯೂ (Dengue) ಜ್ವರದ ಪ್ರಕರಣಗಳು ಹೆಚ್ಚಾಗುತ್ತವೆ. ಸಾಮಾನ್ಯವಾಗಿ ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆದರೆ ಡೆಂಗ್ಯೂ ನಿಯಂತ್ರಣಕ್ಕೆ ಬರುತ್ತದೆ. ಆದರೆ ಕೆಲವರಿಗೆ ಮಾತ್ರ ಇದು ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ಹೌದು, ಕೆಲವು ಆರೋಗ್ಯ ಸಮಸ್ಯೆಗಳಿರುವವರಲ್ಲಿ ಡೆಂಗ್ಯೂ ಸೋಂಕು ಗಂಭೀರ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆ ಹೆಚ್ಚು ಎಂದು ವೈದ್ಯರು ಎಚ್ಚರಿಸಿದ್ದಾರೆ. ಹಾಗಾದರೆ ಯಾವ ಆರೋಗ್ಯ ಸಮಸ್ಯೆಗಳಿದ್ದವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಮತ್ತು ಈ ರೀತಿಯ ಸಮಸ್ಯೆ ಇರುವವರಲ್ಲಿ ಡೆಂಗ್ಯೂನ ಪ್ರಮುಖ ಲಕ್ಷಣಗಳು ಯಾವವು, ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಡೆಂಗ್ಯೂನ ಪ್ರಮುಖ ಲಕ್ಷಣಗಳು

  • ತೀವ್ರ ಜ್ವರ (104°F ವರೆಗೆ)
  • ತಲೆನೋವು ಮತ್ತು ಕಣ್ಣಿನ ಹಿಂಭಾಗದಲ್ಲಿ ನೋವು
  • ಸ್ನಾಯು ಹಾಗೂ ಸಂಧಿ ನೋವು
  • ವಾಕರಿಕೆ ಮತ್ತು ವಾಂತಿ
  • ಚರ್ಮದ ಮೇಲೆ ಕೆಂಪು ದದ್ದುಗಳು
  • ದೇಹದಲ್ಲಿ ತೀವ್ರ ಆಯಾಸ

ತೀವ್ರ ಪರಿಸ್ಥಿತಿಯಲ್ಲಿ ರಕ್ತಸ್ರಾವ, ರಕ್ತದೊತ್ತಡ ಕುಸಿತ ಮತ್ತು ಅಂಗಾಂಗ ವೈಫಲ್ಯದಂತಹ ಅಪಾಯಗಳು ಉಂಟಾಗಬಹುದು.

ಯಾರಿಗೆ ಅಪಾಯ ಹೆಚ್ಚು?

ಮಧುಮೇಹ ರೋಗಿಗಳು: ಮಧುಮೇಹ ಇರುವವರಲ್ಲಿ ಡೆಂಗ್ಯೂ ಸೋಂಕು ತೀವ್ರವಾಗುವ ಸಾಧ್ಯತೆ ಹೆಚ್ಚು. ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಿರುವುದರಿಂದ ಸೋಂಕಿನ ವಿರುದ್ಧ ಹೋರಾಡುವುದು ಕಷ್ಟವಾಗಬಹುದು.

ಅಧಿಕ ರಕ್ತದೊತ್ತಡ ಇರುವವರು: ಬಿಪಿ ಇರುವವರ ರಕ್ತನಾಳಗಳು ಈಗಾಗಲೇ ದುರ್ಬಲವಾಗಿರಬಹುದು. ಡೆಂಗ್ಯೂನಿಂದ ಉಂಟಾಗುವ ಉರಿಯೂತ ಮತ್ತು ದ್ರವ ಸೋರಿಕೆಯಿಂದ ಗಂಭೀರ ಸಮಸ್ಯೆಗಳು ಎದುರಾಗಬಹುದು.

ಇದನ್ನೂ ಓದಿ: ಏನಿದು ಶಿಗೆಲ್ಲೋಸಿಸ್ ಸೋಂಕು? ಕೇರಳದಲ್ಲಿ ಹೊಸ ವೈರಲ್ ಸೋಂಕಿಗೆ ಜನ ಹೆದರುತ್ತಿರುವುದಕ್ಕೆ ಕಾರಣವೇನು?

ಸ್ಥೂಲಕಾಯತೆ ಹೊಂದಿರುವವರು: ಅಧಿಕ ತೂಕವು ರೋಗನಿರೋಧಕ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ. ಇದರಿಂದ ಸೋಂಕಿನ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ.

ಮೂತ್ರಪಿಂಡದ ಕಾಯಿಲೆ ಇರುವವರು: ದೀರ್ಘಕಾಲದ ಕಿಡ್ನಿ ಸಮಸ್ಯೆ ಇರುವವರಿಗೆ ಡೆಂಗ್ಯೂ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು. ದೇಹದ ದ್ರವ ಮತ್ತು ಎಲೆಕ್ಟ್ರೋಲೈಟ್ ಸಮತೋಲನ ಹದಗೆಡುವ ಅಪಾಯ ಹೆಚ್ಚಿರುತ್ತದೆ.

ಹೇಗೆ ಮುನ್ನೆಚ್ಚರಿಕೆ ವಹಿಸಬೇಕು?

ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳಲು ದೇಹ ಮುಚ್ಚುವಂತಹ ಬಟ್ಟೆ ಧರಿಸಿ ಹಾಗೂ ಸೊಳ್ಳೆ ನಿವಾರಕಗಳನ್ನು ಬಳಸಿ. ಜ್ವರ ಅಥವಾ ಡೆಂಗ್ಯೂ ಲಕ್ಷಣಗಳು ಕಂಡುಬಂದರೆ ಸ್ವಯಂ ಚಿಕಿತ್ಸೆ ಮಾಡದೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಸುರಕ್ಷಿತ.

ಗಮನಿಸಿ: ಈ ಮಾಹಿತಿ ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದರೆ ವೈದ್ಯರ ಸಲಹೆ ಪಡೆಯುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮನೆಗೆ ನುಗ್ಗಿ ಮೀನು, ಮಾಂಸದೂಟ ಕದಿಯೋ ಮಂಗನ ಕಾಟಕ್ಕೆ ಜನ ಹೈರಾಣು: ಮಂಗಳೂರಿನಲ್ಲೊಂದು ನಾನ್ ವೆಜ್ ಪ್ರಿಯ ಕೋತಿ! – Kannada News | Mangaluru: Meet the Non Veg Lover Monkey Stealing Meat and Fish Dishes From Houses in Mannagudda

ಮಂಗಳೂರು, ಜೂನ್ 23: ಯಾತ್ರಾ ಸ್ಥಳಗಳಲ್ಲಿ ಅಥವಾ ಪ್ರವಾಸಿ ತಾಣಗಳಲ್ಲಿ ಮಂಗಗಳು ಜನರಿಂದ ಮೊಬೈಲ್, ವಾಟರ್ ಬಾಟಲ್ ಕಸಿದುಕೊಂಡು ಓಡಿಹೋಗುವ ಬಗ್ಗೆ ಆಗಾಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋಗಳು ವೈರಲ್ ಆಗುತ್ತಿರುವುದನ್ನು ನೋಡಿರುತ್ತೇವೆ. ಆದರೆ, ಸಸ್ಯಾಹಾರಿಯಾಗಿಯೇ ಗುರುತಿಸಿಕೊಂಡಿರುವ ಮಂಗ (Monkey) ಮಾಂಸಹಾರಕ್ಕಾಗಿ ಮನೆಗೆ ನುಗ್ಗುವುದನ್ನು ಎಲ್ಲಾದರೂ ಕೇಳಿದ್ದೀರಾ? ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮಂಗಳೂರಿನ (Mangalore) ಮಣ್ಣಗುಡ್ಡೆ ಪ್ರದೇಶದಲ್ಲಿ ನಾನ್ ವೆಜ್ (Non Veg) ಪ್ರಿಯ ಕೋತಿಯೊಂದು ಮನೆಗಳಿಗೆ ನುಗ್ಗಿ ಮಾಂಸದೂಟ ಕದ್ದುಕೂಂಡು ಹೋಗುತ್ತಿದ್ದು, ಜನರ ನಿದ್ದೆಗೆಡಿಸಿದೆ. ಮೀನಿನಿಂದ ಮಾಡಿದ ಇದರ ಫೇವರೆಟ್ ಆಹಾರವಂತೆ!

ನಾನ್-ವೆಜ್ ಪ್ರಿಯ ಕೋತಿಯ ಕಾಟ ತಾಳಲಾರದೇ, ಮಂಗಳೂರಿನ ಮಣ್ಣಗುಡ್ಡೆಯ ಕಾಂತರಾಜ್ ಲೇನ್‌ನ ನಿವಾಸಿಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ, ಪೊಲೀಸರಿಗೆ ದೂರು ನೀಡಿದ್ದರು. ಅದ್ಯಾವುದೂ ಪ್ರಯೋಜನವಾಗಿಲ್ಲ. ಕಳೆದ ಎರಡು ವರ್ಷಗಳಿಂದ ನಾನ್ ವೆಜ್ ಪ್ರಿಯ ಕೋತಿಯ ಕಾಟ ತಾಳಲಾರದ ನಿವಾಸಿಗಳು ಇದೀಗ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಶಾಸಕರಿಗೂ ಪತ್ರ ಬರೆದು ಸಂಕಷ್ಟ ತೋಡಿಕೊಂಡಿದ್ದಾರೆ.

ಒಂಟಿ ಕೋತಿ ಮೀನು ಮತ್ತು ಮಾಂಸದ ರುಚಿಯನ್ನು ಬೆಳೆಸಿಕೊಂಡಿದ್ದು, ಈ ಪ್ರದೇಶವನ್ನು ನಿಯಮಿತ ಆವಾಸಸ್ಥಾನವನ್ನಾಗಿ ಮಾಡಿಕೊಂಡಿದೆ. ಮನೆಗಳಿಗೆ ನುಗ್ಗಿ, ಆಹಾರ, ಬಟ್ಟೆ ಮತ್ತು ಇತರ ಗೃಹೋಪಯೋಗಿ ವಸ್ತುಗಳನ್ನು ತೆಗೆದುಕೊಂಡು ಹೋಗಿ, ನಿವಾಸಿಗಳನ್ನು ಹೆದರಿಸುವ ಮೂಲಕ ಇದು ತೊಂದರೆ ಉಂಟುಮಾಡುತ್ತಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಮಾಂಸಾಹಾರದ ಘಮ ಬಂದಾಗಲೆಲ್ಲ ಮನೆಗೆ ನುಗ್ಗಲೆತ್ನಿಸುವ ಕೋತಿ

ಬಾಗಿಲು ತೆರೆದಿರುವಾಗಲೆಲ್ಲಾ ಕೋತಿ ಮನೆಗಳಿಗೆ ಪ್ರವೇಶಿಸುತ್ತದೆ. ಮಾಂಸಾಹಾರದ ಘಮ ಬಂದರೆ ಮನೆಗಳಿಗೆ ನುಗ್ಗಲು ಯತ್ನಿಸುತ್ತದೆ. ಮನೆಗಳಿಗೆ ನುಗ್ಗಿದರೆ ಬಟ್ಟೆ, ಆಹಾರ ಮತ್ತು ಸಿಕ್ಕಿದ ಯಾವುದೇ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತದೆ. ಕಾಂತರಾಜ್ ಲೇನ್‌ನಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಮರಗಳಿದ್ದು, ಅವುಗಳಿಗೆ ತಾಗಿಕೊಂಡೇ ಅನೇಕ ಮನೆಗಳಿವೆ. ಕೋತಿ ಹೆಚ್ಚಾಗಿ ಈ ಮರಗಳಿಂದ ನೇರವಾಗಿ ಮನೆಗಳಿಗೆ ಜಿಗಿಯುತ್ತದೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

ಸಾಕು ನಾಯಿಗಳ ಜತೆ ಫ್ರೆಂಡ್​ಶಿಪ್!

ಈ ಪ್ರದೇಶದಲ್ಲಿ ಕೆಲವು ಸಾಕು ನಾಯಿಗಳೊಂದಿಗೆ ಈ ಮಾಂಸಾಹಾರ ಪ್ರಿಯ ಕೋತಿ ಸ್ನೇಹ ಬೆಳೆಸಿಕೊಂಡಿದೆ. ಆದರೆ, ಮನೆಗಳಿಗೆ ನುಗ್ಗುವಾಗ ಬೊಗಳಿ ಅಡ್ಡಿಮಾಡಿದರೆ ಅವುಗಳ ಮೇಲೂ ದಾಳಿ ಮಾಡುತ್ತದೆ ಎಂದು ನಿವಾಸಿಗಳು ಹೇಳಿದ್ದಾರೆ. ಕೆಲವು ನಾಯಿಗಳ ಮೇಲೆ ದಾಳಿ ಮಾಡಿ ಅವುಗಳ ಬಾಲ, ಚರ್ಮಕ್ಕೆ ತರಚು ಗಾಯ ಮಾಡಿದೆ ಎಂದೂ ಅವರು ಹೇಳಿದ್ದಾರೆ.

ಮಹಿಳೆ ಮೇಲೆ ಕೋತಿ ದಾಳಿ

ಇತ್ತೀಚೆಗೆ ಕಾಂತರಾಜ್ ಲೇನ್‌ನ ನಿವಾಸಿ ಬಬಿತಾ ಎಂಬವರ ಮೇಲೆ ಈ ಕೋತಿ ದಾಳಿ ನಡೆಸಿತ್ತು. ಬಳಿಕ ವೈದ್ಯರ ಬಳಿಗೆ ಹೋಗಿ 12 ಇಂಜೆಕ್ಷನ್​ಗಳನ್ನು ತೆಗೆದುಕೊಳ್ಳಬೇಕಾಯಿತು. ಮಂಗಗಳ ದಾಳಿಯ ಬಗ್ಗೆ ಜಾಗರೂಕರಾಗಿರಲು ವೈದ್ಯರು ಸಲಹೆ ನೀಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳನ್ನು ನಮ್ಮನ್ನು ಸಮಸ್ಯೆಯಿಂದ ಪಾರುಮಾಡಬೇಕು ಎಂದು ಬಬಿತಾ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಟೋಲ್ ಕಟ್ಟಲ್ಲ ಅಂದ್ರೆ ಒನ್ ವೇ ನಲ್ಲಿ ನುಗ್ತೀರಾ?: ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ

ಮಕ್ಕಳು ಬೆಳಿಗ್ಗೆ ಶಾಲೆಗೆ ಹೋಗುವಾಗ ಅಥವಾ ಸಂಜೆ ಮನೆಗೆ ಹಿಂತಿರುಗಿದಾಗ ಕೋತಿ ಅವರನ್ನು ಬೆನ್ನಟ್ಟುತ್ತದೆ. ಇದರಿಂದ ಮಕ್ಕಳನ್ನು ಹೊರಗೆ ಕಳುಹಿಸುವುದೇ ಕಷ್ಟವಾಗಿದೆ ಎಂದು ಮಹಿಳೆಯರು ಅಳಲು ತೋಡಿದ್ದಾರೆ. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಕೋತಿಯನ್ನು ಹಿಡಿಯಲು ಬೋನು ಮತ್ತು ಬಲೆಗಳನ್ನು ಅಳವಡಿಸಿ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಯ ಆಗ್ತಿದೆ… ವೈಭವ್​ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಸೌತ್ ಆಫ್ರಿಕಾ ಕ್ರಿಕೆಟಿಗ! – Kannada News | Darryl cullinan concern about Vaibhav Sooryavanshi

ಕ್ರಿಕೆಟ್ ಲೋಕದ ಹೊಸ ಸೆನ್ಸೇಷನ್ ವೈಭವ್ ಸೂರ್ಯವಂಶಿ ಸಿಡಿಲಬ್ಬರ ಮುಂದುವರೆದಿದೆ. ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದ ಯುವ ದಾಂಡಿಗ ಇತ್ತೀಚೆಗೆ ಶ್ರೀಲಂಕಾ ಎ ವಿರುದ್ಧದ ಏಕದಿನ ಪಂದ್ಯದಲ್ಲೂ ಅಬ್ಬರಿಸಿದ್ದಾರೆ. ಅದು ಕೂಡ ಕೇವಲ 29 ಎಸೆತಗಳಲ್ಲಿ 94 ರನ್​ ಚಚ್ಚುವ ಮೂಲಕ. ಈ ಸ್ಫೋಟಕ ಇನಿಂಗ್ಸ್ ಬೆನ್ನಲ್ಲೇ ಸೌತ್ ಆಫ್ರಿಕಾದ ಮಾಜಿ ದಿಗ್ಗಜ ಬ್ಯಾಟರ್ ಡ್ಯಾರಿಲ್ ಕಲ್ಲಿನನ್ ಅವರು ವೈಭವ್ ಭವಿಷ್ಯದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಡ್ಯಾರಿಲ್ ಕಲ್ಲಿನನ್, ವೈವೈಭವ್ ಸೂರ್ಯವಂಶಿಯ ಬ್ಯಾಟಿಂಗ್ ಶೈಲಿ ಮತ್ತು ಅವರ ಫಿಟ್‌ನೆಸ್ ಬಗ್ಗೆ ನಾನು ತೀವ್ರ ಕಳವಳವಿದೆ. ಏಕೆಂದರೆ ಈ ಹುಡುಗನ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಆತನ ಕೆರಿಯರ್​ ಅಪಾಯಕ್ಕೆ ಸಿಲುಕಲಿದೆ ಎಂದಿದ್ದಾರೆ. ಇದಕ್ಕೆ ಅವರು ಕಾರಣಗಳನ್ನು ಸಹ ನೀಡಿದ್ದಾರೆ.

  • ಭಾರವಾದ ಬ್ಯಾಟ್: 15 ವರ್ಷದ ಸಣ್ಣ ವಯಸ್ಸಿನಲ್ಲೇ ವೈಭವ್ ಸೂರ್ಯವಂಶಿ ಅತ್ಯಂತ ಭಾರವಾದ ಬ್ಯಾಟ್ ಬಳಸಿ ವೇಗವಾಗಿ ಬೀಸುತ್ತಿದ್ದಾರೆ. ಇದರಿಂದ ಅವರ ಮಣಿಕಟ್ಟು, ಮೊಣಕೈ ಹಾಗೂ ಕೀಲುಗಳ ಮೇಲೆ ವಿಪರೀತ ಒತ್ತಡ ಬೀಳುತ್ತಿದೆ ಡ್ಯಾರಿಲ್ ಕಲ್ಲಿನನ್ ಎಂದು ಹೇಳಿದ್ದಾರೆ.
  •  ದೈಹಿಕ ಸಮಸ್ಯೆ: ವೈಭವ್ ಸೂರ್ಯವಂಶಿ ಇನ್ನೂ ಸಣ್ಣ ಹುಡುಗ. ಅವರ ದೇಹ ಇನ್ನೂ ಸಹ ಸಂಪೂರ್ಣವಾಗಿ ಬೆಳೆಯುವ ಹಂತದಲ್ಲಿದೆ. ಇಂತಹ ಸಮಯದಲ್ಲಿ ಅತಿಯಾದ ಆಕ್ರಮಣಕಾರಿ ಪವರ್-ಹಿಟ್ಟಿಂಗ್​ ಮಾಡುವುದರಿಂದ ಮೂಳೆಗಳು ಮತ್ತು ಮಾಂಸಖಂಡಗಳಿಗೆ ಭವಿಷ್ಯದಲ್ಲಿ ಗಂಭೀರ ಹಾನಿಯಾಗಬಹುದು ಎಂದು ಡ್ಯಾರಿಲ್ ಕಲ್ಲಿನನ್ ಎಚ್ಚರಿಸಿದ್ದಾರೆ.

ಡ್ಯಾರಿಲ್ ಕಲ್ಲಿನನ್ ತಮ್ಮ ವಾದಕ್ಕೆ ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಉದಾಹರಣೆಯನ್ನು ನೀಡಿದ್ದಾರೆ. 2004ರಲ್ಲಿ ಸಚಿನ್ ಅವರು ಭಾರವಾದ ಬ್ಯಾಟ್ ಬಳಸಿದ್ದರಿಂದಲೇ ಭೀಕರ ‘ಟೆನ್ನಿಸ್ ಎಲ್ಬೋ’ ಗಾಯಕ್ಕೆ ತುತ್ತಾಗಿ, ವೃತ್ತಿಜೀವನವೇ ಕೊನೆಗೊಳ್ಳುವ ಹಂತ ತಲುಪಿತ್ತು ಎಂಬುದನ್ನು ನೆನಪಿಸಿದ್ದಾರೆ. ಇದೇ ಕಾರಣದಿಂದಾಗಿ ಯುವ ದಾಂಡಿಗ ಕೆರಿಯರ್ ಬೇಗನೆ ಕೊನೆಗೊಳ್ಳುತ್ತಾ ಎಂಬ ಭಯ ಕಾಡ್ತಿದೆ ಎಂದು ಕಲ್ಲಿನನ್ ಹೇಳಿದ್ದಾರೆ.

ಅದರಲ್ಲೂ ಈ ವಯಸ್ಸಿನಲ್ಲೇ ಅತಿಯಾಗಿ ಪಂದ್ಯಗಳನ್ನು ಆಡುವುದು ಮತ್ತು ನಿರಂತರವಾಗಿ ಸಿಕ್ಸರ್-ಬೌಂಡರಿಗಳ ಮೇಲೆಯೇ ಅವಲಂಬಿತವಾಗುವುದು ಕೂಡ ದೀರ್ಘಾವಧಿಯ ವೃತ್ತಿಜೀವನಕ್ಕೆ ಒಳ್ಳೆಯದಲ್ಲ ಎಂಬುದನ್ನು ಸಹ ಕಲ್ಲಿನನ್ ಒತ್ತಿ ಹೇಳಿದ್ದಾರೆ. ಹೀಗಾಗಿ ವೈಭವ್ ಸೂರ್ಯವಂಶಿ ಈ ಬಗ್ಗೆ ಈಗಲೇ ಎಚ್ಚರಿಕೆ ವಹಿಸಿಕೊಳ್ಳುವುದು ಉತ್ತಮ ಎಂದಿದ್ದಾರೆ.

ಇದನ್ನೂ ಓದಿ: ವಿಸ್ಫೋಟಕ ಸೆಂಚುರಿ ಸಿಡಿಸಿದ ನಿಕಿನ್ ಜೋಸ್: ಪಾಂಡೆ ಪಡೆಗೆ ಸೋಲು!

ಒಟ್ಟಾರೆಯಾಗಿ, ಡ್ಯಾರಿಲ್ ಕಲ್ಲಿನನ್ ಅವರು ವೈಭವ್ ಸೂರ್ಯವಂಶಿ ಅವರ ಅದ್ಭುತ ಪ್ರತಿಭೆಯನ್ನು ಒಪ್ಪಿಕೊಂಡಿದ್ದಾರೆ. ಆದರೆ, ಈ ಯುವ ಆಟಗಾರ ಕಾರ್ಯೊತ್ತಡವನ್ನು ಸರಿಯಾಗಿ ನಿರ್ವಹಿಸದಿದ್ದರೆ, ಗಾಯಗಳ ಸಮಸ್ಯೆಯಿಂದಾಗಿ ಅವರ ಸುದೀರ್ಘ ಕ್ರಿಕೆಟ್ ಭವಿಷ್ಯಕ್ಕೆ ಧಕ್ಕೆಯಾಗಬಹುದು ಎಂದು ಎಚ್ಚರಿಸಿದ್ದಾರೆ.

Source link

ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ: ಶ್ರೀಗಳ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ – Kannada News | Mummadi Nirvana Swamijis Demise: DK Shivakumar Pays Emotional Tributes in Kanakapura

ರಾಮನಗರ, ಜೂನ್​​ 23: ವಯೋಸಹಜ ಕಾಯಿಲೆಯಿಂದ ಲಿಂಗೈಕ್ಯರಾಗಿರುವ ಕನಕಪುರದ ದೇಗುಲ ಮಠದ ಮಠಾಧೀಶರಾದ ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿ ಅವರ ಅಂತಿಮ ದರ್ಶನವನ್ನು ಸಿಎಂ ಡಿಕೆ ಶಿವಕುಮಾರ್ ಮತ್ತು ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರು ಮುಮ್ಮಡಿ ನಿರ್ವಾಣ ಸ್ವಾಮೀಜಿಗಳ ಪಾದುಕೆಗಳಿಗೆ ನಮಸ್ಕರಿಸಿ ಭಾವುಕರಾದ ಪ್ರಸಂಗ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸತ್ತವರನ್ನೂ ಬಿಡದ ಕಳ್ಳರು, ಸಮಾಧಿ ಅಗೆದು ಹೆಣದ ಮೇಲಿದ್ದ ಬಂಗಾರ ದೋಚಿದ ಪಾಪಿಗಳು – Kannada News | Coimbatore Grave Robbery: Thieves Steal Gold Chain from Buried Body

ಚಿನ್ನದ ಸರ-ಸಾಂದರ್ಭಿಕ ಚಿತ್ರ Image Credit source: News Arena

ಕೊಯಮತ್ತೂರು, ಜೂನ್ 23: ಸಮಾಧಿ ಅಗೆದು ಹೆಣದ ಮೇಲಿದ್ದ ಬಂಗಾರ(Gold)ವನ್ನು ಕಳ್ಳರು ದೋಚಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಇತ್ತೀಚೆಗಷ್ಟೇ ಮೀನು ಮಾರಾಟಗಾರರೊಬ್ಬರು ನಿಧನರಾಗಿದ್ದರು. ಅವರ ಕೊರಳಲ್ಲಿದ್ದ 24 ಗ್ರಾಂ ಚಿನ್ನದ ಸರವನ್ನು ತೆಗೆಯುವುದು ಬೇಡವೆಂದು ಕುಟುಂಬದವರು ಶವದ ಜತೆ ಮಣ್ಣು ಮಾಡಿದ್ದರು. ಅದನ್ನು ತಿಳಿದಿದ್ದ ಕಳ್ಳರು ರಾತ್ರಿ ಸಮಾಧಿಯನ್ನು ಅಗೆದು ಚಿನ್ನದ ಸರವನ್ನು ದೋಚಿ ಪರಾರಿಯಾಗಿದ್ದಾರೆ. ಈ ಘಟನೆ ಮೃತರ ಕುಟುಂಬಸ್ಥರನ್ನು ಹಾಗೂ ಸ್ಥಳೀಯರನ್ನು ತೀವ್ರ ದಿಗ್ಭ್ರಮೆಗೊಳಿಸಿದೆ.

ಕೊಯಮತ್ತೂರಿನ ಸೌರಿಪಾಳ್ಯಂ ನಿವಾಸಿಯಾಗಿದ್ದ 60 ವರ್ಷದ ಮೀನು ಮಾರಾಟಗಾರ ನಾಗರಾಜ್ ಅವರು ಜೂನ್ 6 ರಂದು ಅನಾರೋಗ್ಯದಿಂದ ನಿಧನರಾಗಿದ್ದರು. ಮರುದಿನ ಕುಟುಂಬಸ್ಥರು ಸಾಂಪ್ರದಾಯಿಕವಾಗಿ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದರು. ನಾಗರಾಜ್ ಅವರು ಬದುಕಿದ್ದಾಗ ಮೀನಿನ ಆಕಾರದ ಪೆಂಡೆಂಟ್ ಹೊಂದಿದ್ದ 24 ಗ್ರಾಂ ಚಿನ್ನದ ಸರವನ್ನು ಅತ್ಯಂತ ಪ್ರೀತಿಯಿಂದ ಸದಾ ಧರಿಸುತ್ತಿದ್ದರು.

ಆ ಸರದ ಮೇಲಿದ್ದ ಅವರ ಬಾಂಧವ್ಯ ಹಾಗೂ ಇಚ್ಛೆಗೆ ಗೌರವ ನೀಡಿ, ಕುಟುಂಬಸ್ಥರು ಅಂತ್ಯಕ್ರಿಯೆಯ ವೇಳೆಯೂ ಆಭರಣವನ್ನು ತೆಗೆಯದೆ ಹಾಗೇ ಸರದ ಸಮೇತ ನಾಗರಾಜ್ ಅವರ ದೇಹವನ್ನು ಮಣ್ಣು ಮಾಡಿದ್ದರು.

ಮತ್ತಷ್ಟು ಓದಿ: Video: ಚಿನ್ನದ ಸರ ಕಸಿದು ಪರಾರಿಯಾಗಲು ಯತ್ನಿಸಿದ ಕಳ್ಳ; ಬೈಕ್ ಸ್ಟಾರ್ಟ್ ಆಗದೆ ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಖದೀಮ!

ನಾಗರಾಜ್ ಅವರ ಮಗ ವೆಂಕಟೇಶ್ ಕುಮಾರ್ ಮತ್ತು ಸಂಬಂಧಿಕರು ಜೂನ್ 22ರ ಸುಮಾರಿಗೆ 16 ನೇ ದಿನದ ಪುಣ್ಯತಿಥಿ ಕಾರ್ಯಗಳನ್ನು ಮಾಡಲು ಸಮಾಧಿ ಜಾಗಕ್ಕೆ ಹೋಗಿದ್ದರು. ಈ ವೇಳೆ ಸಮಾಧಿಯ ಸುತ್ತಲಿನ ಮಣ್ಣು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡು, ಹೊಸದಾಗಿ ಅಗೆದಂತೆ ಕಾಣಿಸಿದೆ. ಇದರಿಂದ ಅನುಮಾನಗೊಂಡು ತನಿಖೆ ನಡೆಸಿದಾಗ ಕಳ್ಳತನದ ರಹಸ್ಯ ಬಯಲಾಗಿದೆ.

ಕುಟುಂಬಸ್ಥರು ಸ್ಮಶಾನದ ಉಸ್ತುವಾರಿ ನೋಡಿಕೊಳ್ಳುವ ಕಾರ್ತಿಕೇಯನ್ (27) ಎಂಬಾತನನ್ನು ತೀವ್ರವಾಗಿ ಪ್ರಶ್ನಿಸಿದಾಗ ಸತ್ಯ ಹೊರಬಿದ್ದಿದೆ. ತಡರಾತ್ರಿ ಇಬ್ಬರು ಸ್ಥಳೀಯ ವ್ಯಕ್ತಿಗಳು ಸ್ಮಶಾನಕ್ಕೆ ಅಕ್ರಮವಾಗಿ ನುಗ್ಗಿ, ನಾಗರಾಜ್ ಅವರ ಸಮಾಧಿಯನ್ನು ಅಗೆದು ಶವದ ಮೇಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಓಡಿಹೋಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.

ಪ್ರಸ್ತುತ ಮಗ ವೆಂಕಟೇಶ್ ಕುಮಾರ್ ನೀಡಿದ ದೂರಿನ ಮೇರೆಗೆ ಪೀಲಮೇಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಬೆಳಕಿಗೆ ಬಂದಾಗಿನಿಂದ ಸ್ಮಶಾನದ ಕೇರ್ ಟೇಕರ್ ಸೇರಿದಂತೆ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಅವರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸಚಿನ್​ರ ವಿಶ್ವ ದಾಖಲೆ ಮುರಿಯಲು ರೂಟ್ ಇನ್ನೆಷ್ಟು ರನ್ ಕಲೆಹಾಕಬೇಕು? – Kannada News | How many runs does Joe Root need to break Sachin Tendulkar’s world record?

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿರುವ ಟೆಸ್ಟ್​ ಕ್ರಿಕೆಟ್​ನ ಸಾರ್ವಕಾಲಿಕ ದಾಖಲೆಯೊಂದು ಶೀಘ್ರದಲ್ಲೇ ಪತನಗೊಳ್ಳುವ ಮುನ್ಸೂಚನೆ ಸಿಗುತ್ತಿದೆ. ಇಂಗ್ಲೆಂಡ್ ತಂಡದ ಅನುಭವಿ ಬ್ಯಾಟರ್ ಜೋ ರೂಟ್, ಸಚಿನ್ ಅವರ ‘ಅತಿ ಹೆಚ್ಚು ಟೆಸ್ಟ್ ರನ್’ಗಳ ಬೃಹತ್ ವಿಶ್ವ ದಾಖಲೆಯನ್ನು ಅಳಿಸಿ ಹಾಕುವತ್ತ ಹೆಜ್ಜೆಯನ್ನಿಟ್ಟಿದ್ದಾರೆ. (PC: Gettyimages)

Source link

ವಿಜಯ್-ತ್ರಿಷಾ ಮಧ್ಯೆ ಬ್ರೇಕಪ್? ನಡೆಯಿತು ಪ್ರಮುಖ ಬೆಳವಣಿಗೆ – Kannada News | Trisha Unfollows Thalapathy Vijay on Insta: Birthday Snub Fuels Rift Rumors

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಜನ್ಮದಿನದಂದು ನಟಿ ತ್ರಿಷಾ ಕೃಷ್ಣನ್ ಯಾವುದೇ ಶುಭಾಶಯದ ಪೋಸ್ಟ್ ಹಾಕದಿರುವುದು ತೀವ್ರ ಕುತೂಹಲ ಮೂಡಿಸಿದೆ. ಟ್ರೋಲ್ ಹಾಗೂ ಅನಗತ್ಯ ಚರ್ಚೆಗಳನ್ನು ತಪ್ಪಿಸಲು ತ್ರಿಷಾ ಈ ರೀತಿ ದೂರ ಉಳಿದಿದ್ದಾರೆ ಎನ್ನಲಾಗುತ್ತಿತ್ತು. ಆದರೆ, ಇದೀಗ ತ್ರಿಷಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯ್ ಅವರನ್ನು ಫಾಲೋ ಮಾಡುತ್ತಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದ್ದು, ಇದು ಸಿನಿಮಾ ರಂಗದಲ್ಲಿ ಚರ್ಚೆಯ ಕೇಂದ್ರ ಬಿಂದುವಾಗಿದೆ.

ಕೆಲವು ತಿಂಗಳುಗಳ ಹಿಂದೆ ದಳಪತಿ ವಿಜಯ್ ಹಾಗೂ ಅವರ ಪತ್ನಿ ಸಂಗೀತಾ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು ಸ್ಪಷ್ಟವಾಗಿತ್ತು. ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಬೆನ್ನಲ್ಲೇ ವಿಜಯ್ ಹಾಗೂ ತ್ರಿಷಾ ಇಬ್ಬರೂ ಒಟ್ಟಿಗೆ ಓಡಾಡುತ್ತಿರುವುದು ಹಲವು ಬಾರಿ ಕಂಡುಬಂದಿತ್ತು. ಇವರಿಬ್ಬರ ಆಪ್ತತೆ ಗಾಸಿಪ್‌ಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ತಂದಿದ್ದವು.

ರಾಜಕೀಯ ಎಂಟ್ರಿ ವದಂತಿ:

ಇವರಿಬ್ಬರ ಸ್ನೇಹದ ವದಂತಿ ಯಾವ ಮಟ್ಟಕ್ಕೆ ಹೋಗಿತ್ತು ಎಂದರೆ, ವಿಜಯ್ ಅವರು ತಮ್ಮ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಮೂಲಕ ತ್ರಿಷಾ ಅವರನ್ನು ರಾಜಕೀಯಕ್ಕೆ ಪರಿಚಯಿಸುವ ಕೆಲಸ ಮಾಡಲಿದ್ದಾರೆ ಎಂಬ ಮಾತುಗಳು ಕೂಡ ರಾಜಕೀಯ ಹಾಗೂ ಸಿನಿಮಾ ವಲಯದಲ್ಲಿ ಬಲವಾಗಿ ಕೇಳಿಬಂದಿದ್ದವು. ವಿಜಯ್ ಬೆಂಬಲದೊಂದಿಗೆ ತ್ರಿಷಾ ಸಕ್ರಿಯ ರಾಜಕಾರಣಕ್ಕೆ ಧುಮುಕಲಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು.

ಇದನ್ನೂ ಓದಿ: ದಳಪತಿ ವಿಜಯ್​​ ಜನ್ಮದಿನಕ್ಕೆ ವಿಶ್ ಮಾಡಲೇ ಇಲ್ಲ ತ್ರಿಷಾ ಕೃಷ್ಣನ್ 

ನೆಟ್ಟಿಗರ ಕಾಮೆಂಟ್‌ಗಳು ಮತ್ತು ಸಂಸಾರ ಸುಧಾರಣೆಯ ಮುನ್ಸೂಚನೆ:

ತ್ರಿಷಾ ಅವರ ಈ ದಿಢೀರ್ ಅನ್‌ಫಾಲೋ ಮತ್ತು ಮೌನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ‘ಈಗ ತ್ರಿಷಾಗೆ ತಮ್ಮ ತಪ್ಪಿನ ಅರಿವಾಗಿದೆ, ಅದಕ್ಕೇ ವಿಜಯ್ ಅವರಿಂದ ದೂರ ಉಳಿಯುತ್ತಿದ್ದಾರೆ’ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಇದರ ನಡುವೆ, ವಿಜಯ್ ಹಾಗೂ ಸಂಗೀತಾ ಅವರ ವೈವಾಹಿಕ ಜೀವನದ ಸಂಸಾರ ಮತ್ತೆ ಸರಿಯಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ ಎಂಬ ಮಾತುಗಳು ಹರಿದಾಡುತ್ತಿವೆ. ಕುಟುಂಬದ ಹಿರಿಯರ ಸಂಧಾನದ ಬೆನ್ನಲ್ಲೇ ವಿಜಯ್ ತಮ್ಮ ಸಂಸಾರವನ್ನು ಮತ್ತೆ ಸರಿಪಡಿಸಿಕೊಳ್ಳಲು ಮುಂದಾಗಿದ್ದಾರೆ, ಇದೇ ಕಾರಣಕ್ಕೆ ತ್ರಿಷಾ ಈಗ ವಿಜಯ್ ಅವರಿಂದ ಸಂಪೂರ್ಣ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂದು ಕಾಲಿವುಡ್ ಅಂಗಳದಲ್ಲಿ ಗುಸುಗುಸು ಕೇಳಿಬರುತ್ತಿದೆ. ಎಲ್ಲದಕ್ಕೂ ಕಾಲವೇ ಉತ್ತರಿಸಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version