ಮಂಗಳೂರಿನಲ್ಲಿ ಬಂದಿಳಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್​: ರಸ್ತೆ ಮಾರ್ಗವಾಗಿ ಕೊಲ್ಲೂರಿಗೆ ಪ್ರಯಾಣ – Kannada News | Tamil Nadu CM Joseph Vijay Lands in Mangaluru; Minister UT Khader Welcomes Him Ahead of Kollur Mookambika Temple Visit

ಮಂಗಳೂರು, ಜೂನ್ 12: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವ ವಿಜಯ್ ಅವರಿಗೆ ವಿಮಾನ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ ಪರವಾಗಿ ಆರೋಗ್ಯ ಸಚಿವ ಯುಟಿ ಖಾದರ್ ಪುಷ್ಪಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ವಿಜಯ್ ಭೇಟಿಯ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರೊಂದಿಗೆ ತಮಿಳುನಾಡು ಪೊಲೀಸರು ಸಹ ಸೇರಿ ಹೈ-ಸೆಕ್ಯೂರಿಟಿ ಒದಗಿಸಿದ್ದಾರೆ. ವಿಮಾನ ನಿಲ್ದಾಣದಿಂದ ಹೊರಬಂದ ವಿಜಯ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಭದ್ರತಾ ದೃಷ್ಟಿಯಿಂದ ವಿಮಾನ ನಿಲ್ದಾಣದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಪ್ರಯಾಣ

ಮಂಗಳೂರು ಏರ್‌ಪೋರ್ಟ್‌ನಿಂದ ವಿಜಯ್ ನೇರವಾಗಿ ರಸ್ತೆ ಮಾರ್ಗದ ಮೂಲಕ ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ತೆರಳಿದರು. ಮಂಗಳೂರಿನಿಂದ ಸುಮಾರು 125 ಕಿ.ಮೀ ದೂರದ ಕೊಲ್ಲೂರಿಗೆ ರಸ್ತೆ ಮೂಲಕವೇ ಪ್ರಯಾಣ ಬೆಳೆಸಲಿರುವ ಅವರು, ಸಂಜೆ ಹೊತ್ತಿಗೆ ದೇವಸ್ಥಾನಕ್ಕೆ ತಲುಪಲಿದ್ದಾರೆ. ಅಲ್ಲಿ ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈಗಲೂ ಭಾರತವೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ವಿಶ್ವಬ್ಯಾಂಕ್ ವರದಿ – Kannada News | India Remains Fastest Growing Economy: World Bank Report Highlights Strong GDP Growth

ನವದೆಹಲಿ, ಜೂನ್ 12: ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ಮತ್ತು ಸವಾಲುಗಳಿದ್ದರೂ, ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ (India’s GDP growth) ಮುಂದುವರಿಯಲಿದೆ ಎಂದು ವಿಶ್ವಬ್ಯಾಂಕ್‌ನ ಇತ್ತೀಚಿನ ‘ಗ್ಲೋಬಲ್ ಎಕನಾಮಿಕ್ ಪ್ರಾಸ್ಪೆಕ್ಟ್ಸ್’ (World Bank Global Economic Prospects) ವರದಿ ತಿಳಿಸಿದೆ. ಭಾರತದ ಈ ಉತ್ತಮ ಬೆಳವಣಿಗೆಗೆ ಕೆಲ ಪ್ರಮುಖ ಕಾರಣಗಳನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಶ್ವಬ್ಯಾಂಕ್ ವರದಿಯಲ್ಲಿರುವ ಪ್ರಮುಖ 5 ಅಂಶಗಳು ಇಲ್ಲಿ ಪ್ರಸ್ತಾಪಿಸಲಾಗಿದೆ.

1) ಭಾರತವೇ ನಂಬರ್ ಒನ್ ಆರ್ಥಿಕತೆ

ಪ್ರಸಕ್ತ ಹಣಕಾಸು ವರ್ಷದಲ್ಲಿ (FY27) ಭಾರತದ ಆರ್ಥಿಕ ಬೆಳವಣಿಗೆಯ ದರವು (GDP) ಶೇಕಡಾ 6.6 ರಷ್ಟಿರಲಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ. ಹೆಚ್ಚಿನ ಇಂಧನ ಬೆಲೆಗಳು ಮತ್ತು ಇತರ ಉತ್ಪಾದನಾ ವೆಚ್ಚಗಳಿಂದಾಗಿ ಇದು ಕಳೆದ ವರ್ಷದ ಬೆಳವಣಿಗೆಗಿಂತ (ಶೇ. 7.7) ಸ್ವಲ್ಪ ಕಡಿಮೆಯಾಗಿದ್ದರೂ, ಜಗತ್ತಿನ ಬೇರೆಲ್ಲಾ ಪ್ರಮುಖ ದೇಶಗಳಿಗಿಂತ ಭಾರತದ ಆರ್ಥಿಕ ಬೆಳವಣಿಗೆಯ ವೇಗವೇ ಹೆಚ್ಚಾಗಿರಲಿದೆ.

2) ಮತ್ತೆ ವೇಗ ಪಡೆದುಕೊಳ್ಳಲಿರುವ ಭಾರತದ ಆರ್ಥಿಕತೆ

ಪ್ರಸ್ತುತ ಕಂಡುಬರುತ್ತಿರುವ ಜಾಗತಿಕ ಮಂದಗತಿ ತಾತ್ಕಾಲಿಕವಾಗಿದ್ದು, ಮುಂದಿನ ಹಣಕಾಸು ವರ್ಷದಲ್ಲಿ (FY28) ಭಾರತದ ಆರ್ಥಿಕತೆಯು ಶೇಕಡಾ 7.2 ರಷ್ಟು ಪ್ರಗತಿ ಸಾಧಿಸುವ ಮೂಲಕ ಮತ್ತೆ ಚೇತರಿಸಿಕೊಳ್ಳಲಿದೆ. ದೇಶೀಯ ಬೇಡಿಕೆ ಮತ್ತು ರಫ್ತು ವಲಯದಲ್ಲಿನ ಸುಧಾರಣೆ ಇದಕ್ಕೆ ಕಾರಣವಾಗಲಿದೆ.

ಇದನ್ನೂ ಓದಿ: ಡಾಲರ್ ಎದುರು ರುಪಾಯಿ ಮೌಲ್ಯ 67 ಪೈಸೆ ಜಿಗಿತ; 10 ದಿನದಲ್ಲಿ 100 ಪೈಸೆ ಮೌಲ್ಯ ಹೆಚ್ಚಳ

3) ದೇಶೀಯ ಬೇಡಿಕೆಯು ಆರ್ಥಿಕತೆಗೆ ಬಲ

ದೇಶದೊಳಗಿನ ಆರ್ಥಿಕ ಚಟುವಟಿಕೆಗಳು ಉತ್ತಮವಾಗಿವೆ. ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಜನರ ವೈಯಕ್ತಿಕ ಬಳಕೆ ಮತ್ತು ಖರೀದಿ ಸಾಮರ್ಥ್ಯ ಬಲವಾಗಿದೆ. ಜೊತೆಗೆ ನಗರ ಪ್ರದೇಶಗಳಲ್ಲೂ ಬೇಡಿಕೆ ಚೇತರಿಸಿಕೊಳ್ಳುತ್ತಿದ್ದು, ಇದು ಭಾರತದ ಆರ್ಥಿಕ ವಿಸ್ತರಣೆಗೆ ಪ್ರಮುಖ ಆಧಾರವಾಗಿದೆ.

4) ಗ್ರಾಹಕರಿಗೆ ನೆರವಾಗಲಿರುವ ಸರ್ಕಾರದ ನೀತಿಗಳು

ಸರಕು ಮತ್ತು ಸೇವಾ ತೆರಿಗೆ (GST) ದರಗಳಲ್ಲಿನ ಕಡಿತವು ಗ್ರಾಹಕರ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ವರದಿ ಹೇಳಿದೆ. ಇಂಧನ ತೆರಿಗೆ ಕಡಿತ ಸೇರಿದಂತೆ ಹಣದುಬ್ಬರವನ್ನು ನಿಯಂತ್ರಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಜನಸಾಮಾನ್ಯರಿಗೆ ಮತ್ತು ವ್ಯವಹಾರಗಳಿಗೆ ಸಹಕಾರಿಯಾಗಲಿವೆ.

5) ಮುಕ್ತ ವ್ಯಾಪಾರ ಒಪ್ಪಂದಗಳಿಂದ ರಫ್ತು ವಲಯಕ್ಕೆ ಲಾಭ

ಅಮೆರಿಕದ ಸುಂಕಗಳ ಕಡಿತ ಮತ್ತು ಹೊಸ ಮುಕ್ತ ವ್ಯಾಪಾರ ಒಪ್ಪಂದಗಳ (Free-Trade Agreements) ಅನುಷ್ಠಾನದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಮಂದಗತಿಯಿದ್ದರೂ ಭಾರತದ ರಫ್ತು ವಲಯಕ್ಕೆ ದೊಡ್ಡ ಮಟ್ಟದ ಹಿನ್ನಡೆಯಾಗುವುದಿಲ್ಲ. ಇದು ದೇಶದ ಭವಿಷ್ಯದ ಆರ್ಥಿಕ ಬೆಳವಣಿಗೆಗೆ ಪೂರಕವಾಗಲಿದೆ.

ಇದನ್ನೂ ಓದಿ: ಕೀನಾ ಏರ್​ಪೋರ್ಟ್ ಗುತ್ತಿಗೆ: ಅದಾನಿಗೆ ಸಿಗಬೇಕಿದ್ದ ಗುತ್ತಿಗೆ ಚೀನೀ ಕಂಪನಿ ಪಾಲಾಯ್ತು

ಈ ಮೇಲಿನವು ವಿಶ್ವಬ್ಯಾಂಕ್​ನ ವರದಿಯಲ್ಲಿ ತಿಳಿಸಲಾದ ಕೆಲ ಪ್ರಮುಖ ವಿಚಾರಗಳಾಗಿವೆ. ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ, ಹೆಚ್ಚಿನ ಇಂಧನ ಬೆಲೆಗಳಂತಹ ಜಾಗತಿಕ ಸವಾಲುಗಳ ನಡುವೆಯೂ ಭಾರತದ ಬಲವಾದ ದೇಶೀಯ ಬಳಕೆ, ಸರ್ಕಾರದ ಆರ್ಥಿಕ ನೀತಿಗಳು ಮತ್ತು ವ್ಯಾಪಾರ ಅವಕಾಶಗಳು ದೇಶದ ಆರ್ಥಿಕತೆಯನ್ನು ಮುಂಚೂಣಿಯಲ್ಲಿಡಲಿವೆ ಎಂದು ಈ ವರದಿಯಲ್ಲಿ ವಿಶ್ವಾಸ ವ್ಯಕ್ತಪಡಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Meenakshi Natarajan: ರಾಜ್ಯಸಭಾ ನಾಮಪತ್ರ ತಿರಸ್ಕಾರ ಪ್ರಶ್ನಿಸಿ ಮೀನಾಕ್ಷಿ ನಟರಾಜನ್ ಸಲ್ಲಿಸಿದ್ದ ಅರ್ಜಿ ಸುಪ್ರೀಂಕೋರ್ಟ್​​ನಲ್ಲಿ ವಜಾ – Kannada News | Supreme Court Upholds Meenakshi Natarajan’s Rajya Sabha Nomination Rejection

ನವದೆಹಲಿ, ಜೂನ್ 12: ರಾಜ್ಯಸಭಾ ಚುನಾವಣೆಯ ನಾಮಪತ್ರ ತಿರಸ್ಕಾರ ಪ್ರಶ್ನಿಸಿ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್(Meenakshi Natarajan) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಮೇಲ್ನೋಟಕ್ಕೆ ಇದು ಹಿನ್ನಡೆಯಾಗಿ ಕಂಡರೂ, ಈ ತೀರ್ಪಿನ ಹಿಂದೆ ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿಯುವ ಮತ್ತು ಕಾನೂನು ಪ್ರಕ್ರಿಯೆಯನ್ನು ಮತ್ತಷ್ಟು ಬಲಪಡಿಸುವ ಕೆಲವು ಅತ್ಯಂತ ಸಕಾರಾತ್ಮಕ ಭರವಸೆಗಳಿವೆ.
ವಿಚಾರಣೆ ನಡೆಸುವಾಗ, ಚುನಾವಣಾ ಅಧಿಕಾರಿಯೊಬ್ಬರು ಅಭ್ಯರ್ಥಿಯ ನಾಮಪತ್ರವನ್ನು ತಿರಸ್ಕರಿಸಿದರೆ, ಚುನಾವಣಾ ಆಯೋಗವನ್ನು ಸಂಪರ್ಕಿಸುವುದು ಸೂಕ್ತ ಪರಿಹಾರ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ.

ನಟರಾಜನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಅಭ್ಯರ್ಥಿಗಳು ಕನಿಷ್ಠ ಎರಡು ವರ್ಷಗಳ ಶಿಕ್ಷೆ ವಿಧಿಸಬಹುದಾದ ಕ್ರಿಮಿನಲ್ ಪ್ರಕರಣಗಳನ್ನು ಮಾತ್ರ ಬಹಿರಂಗಪಡಿಸಬೇಕಾಗುತ್ತದೆ ಮತ್ತು ಪ್ರಸ್ತುತ ಪ್ರಕರಣದಲ್ಲಿ ಸಮನ್ಸ್ ಮಾತ್ರ ಜಾರಿ ಮಾಡಲಾಗಿದೆ ಎಂದು ವಾದಿಸಿದರು.
ಮಧ್ಯಪ್ರದೇಶದ ರಾಜ್ಯಸಭಾ ಚುನಾವಣೆಗೆ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ತಪ್ಪಾಗಿ ತಿರಸ್ಕರಿಸಿದ್ದಾರೆ ಎಂದು ಅವರು ವಾದಿಸಿದರು. ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣವನ್ನು ಬಹಿರಂಗಪಡಿಸದ ಕಾರಣ ಅವರು ಅದನ್ನು ತಪ್ಪಾಗಿ ತಿರಸ್ಕರಿಸಿದ್ದಾರೆ.

ಮಧ್ಯಪ್ರದೇಶ ವಿಧಾನಸಭಾ ಅಧಿಕಾರಿಯೊಬ್ಬರ ಪ್ರಕಾರ, ಬಿಜೆಪಿ ಅಭ್ಯರ್ಥಿ ಮಹೇಶ್ ಕೆವಾತ್ ಅವರು ತೆಲಂಗಾಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಬಹಿರಂಗಪಡಿಸಲು ನಟರಾಜನ್ ವಿಫಲರಾಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

ಮತ್ತಷ್ಟು ಓದಿ: ಕಾಂಗ್ರೆಸ್​ ಎಡವಟ್ಟಿನಿಂದ ಮಧ್ಯಪ್ರದೇಶದ ಎಲ್ಲ ರಾಜ್ಯಸಭಾ ಸ್ಥಾನಗಳೂ ಬಿಜೆಪಿ ತೆಕ್ಕೆಗೆ

ಕಾನೂನಿನ ಸ್ಪಷ್ಟತೆ ಮತ್ತು ವ್ಯವಸ್ಥೆಯ ಮೇಲಿನ ನಂಬಿಕೆ
ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸುವ ಮೂಲಕ ದೇಶದ ಚುನಾವಣಾ ನಿಯಮಗಳು ಮತ್ತು ಉನ್ನತ ನ್ಯಾಯಾಂಗದ ಮಾರ್ಗಸೂಚಿಗಳು ಎಷ್ಟು ಸ್ಪಷ್ಟ ಹಾಗೂ ದೃಢವಾಗಿವೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಚುನಾವಣಾ ನಿಯಮಾವಳಿಗಳ ನಿಖರವಾದ ಪಾಲನೆಯು ಪ್ರಜಾಪ್ರಭುತ್ವದ ಅಡಿಪಾಯವನ್ನು ಗಟ್ಟಿಗೊಳಿಸುತ್ತದೆ. ಸುಪ್ರೀಂ ಕೋರ್ಟ್‌ನ ಈ ತೀರ್ಪು ಭವಿಷ್ಯದ ಎಲ್ಲಾ ಅಭ್ಯರ್ಥಿಗಳಿಗೆ ತಮ್ಮ ನಾಮಪತ್ರ ಸಲ್ಲಿಕೆಯ ವೇಳೆ ತಾಂತ್ರಿಕ ಮತ್ತು ಕಾನೂನು ಅಂಶಗಳನ್ನು ಮತ್ತಷ್ಟು ಪಾರದರ್ಶಕವಾಗಿ ನಿರ್ವಹಿಸಲು ಒಂದು ಸ್ಪಷ್ಟವಾದ ದಿಕ್ಸೂಚಿಯಾಗಿದೆ.

ತಾಂತ್ರಿಕ ಬಿಕ್ಕಟ್ಟಿಗೆ ಮುಕ್ತಿ ಮತ್ತು ಚುನಾವಣೆಗೆ ಚುರುಕು
ಈ ಕಾನೂನು ಹೋರಾಟಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ತಾರ್ಕಿಕ ಅಂತ್ಯ ಸಿಕ್ಕಿರುವುದರಿಂದ, ಮಧ್ಯಪ್ರದೇಶದ ರಾಜ್ಯಸಭಾ ಚುನಾವಣಾ ಪ್ರಕ್ರಿಯೆಯಲ್ಲಿ ಎದುರಾಗಿದ್ದ ತಾಂತ್ರಿಕ ಗೊಂದಲಗಳು ಈಗ ಸಂಪೂರ್ಣವಾಗಿ ನಿವಾರಣೆಯಾಗಿವೆ. ನ್ಯಾಯಾಲಯದ ಈ ತ್ವರಿತ ತೀರ್ಪಿನಿಂದಾಗಿ ಚುನಾವಣಾ ಆಯೋಗವು ಯಾವುದೇ ಅಡೆತಡೆಯಿಲ್ಲದೆ ಮುಂದಿನ ಪ್ರಕ್ರಿಯೆಗಳನ್ನು ಸುಗಮವಾಗಿ ಮತ್ತು ನಿಗದಿತ ಸಮಯದೊಳಗೆ ನಡೆಸಲು ಹಾದಿ ಸುಗಮವಾಗಿದೆ.

ಈ ತೀರ್ಪು ಕಾಂಗ್ರೆಸ್ ಪಕ್ಷಕ್ಕೆ ತನ್ನ ಪ್ರಾದೇಶಿಕ ಮತ್ತು ರಾಷ್ಟ್ರೀಯ ನಾಯಕತ್ವದ ಸಮೀಕರಣಗಳನ್ನು ಮರುರೂಪಿಸಿಕೊಳ್ಳಲು ಒಂದು ಹೊಸ ಪ್ರೇರಣೆಯನ್ನು ನೀಡಿದೆ. ಈ ಬೆಳವಣಿಗೆಯಿಂದಾಗಿ ಮುಂಬರುವ ದಿನಗಳಲ್ಲಿ ಇತರ ಯುವ ಅಥವಾ ಪ್ರಭಾವಿ ನಾಯಕರಿಗೆ ಸಂಸತ್ತನ್ನು ಪ್ರವೇಶಿಸಲು ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಮೀನಾಕ್ಷಿ ನಟರಾಜನ್ ಅವರು ಪ್ರಸ್ತುತ ತೆಲಂಗಾಣ ಕಾಂಗ್ರೆಸ್‌ನ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (AICC) ಉಸ್ತುವಾರಿಯಾಗಿಯೂ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿರುವುದರಿಂದ, ಅವರು ಈಗ ರಾಜ್ಯಸಭೆಯ ದೈನಂದಿನ ಕಲಾಪಗಳ ಒತ್ತಡವಿಲ್ಲದೆ ಮುಂಬರುವ ನಿರ್ಣಾಯಕ ವಿಧಾನಸಭಾ ಚುನಾವಣೆಗಳ ಸಂಘಟನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಮುಕ್ತವಾದ ಹಾದಿ ಸಿಕ್ಕಂತಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಡಾಲರ್ ಎದುರು ರುಪಾಯಿ ಮೌಲ್ಯ 67 ಪೈಸೆ ಜಿಗಿತ; 10 ದಿನದಲ್ಲಿ 100 ಪೈಸೆ ಮೌಲ್ಯ ಹೆಚ್ಚಳ – Kannada News | US Dollar vs Rupee, Indian currency value rises on Friday, know the reasons why

ಡಾಲರ್ ವರ್ಸಸ್ ರುಪಾಯಿImage Credit source: Shutterstock

ನವದೆಹಲಿ, ಜೂನ್ 12: ಡಾಲರ್ ಎದುರು ಸತತ ಕುಸಿಯುತ್ತಾ ಬಂದಿರುವ ಭಾರತದ ಕರೆನ್ಸಿ (Indian Rupee) ಶುಕ್ರವಾರದ (ಜೂನ್ 12) ವಹಿವಾಟಿನಲ್ಲಿ ಮೌಲ್ಯ ಹೆಚ್ಚಿಸಿಕೊಂಡಿದೆ. ಇಂದು ರೂಪಾಯಿ ಮೌಲ್ಯವು ಭಾರಿ ಚೇತರಿಕೆ ಕಂಡಿದ್ದು, ಬರೋಬ್ಬರಿ 67 ಪೈಸೆ ಏರಿಕೆಯೊಂದಿಗೆ 95.18 ರೂ. ಮಟ್ಟದಲ್ಲಿ ವಹಿವಾಟು ಆರಂಭಿಸಿದೆ. ಒಂದು ಹಂತದಲ್ಲಿ 100 ರೂ ಗಡಿ ದಾಟಬಹುದು ಎನ್ನುವ ಸ್ಥಿತಿ ಇತ್ತು. ಮೇ ತಿಂಗಳ ಮೂರನೇ ವಾರದಲ್ಲಿ ಡಾಲರ್ ಎದುರು ಭಾರತೀಯ ಕರೆನ್ಸಿ ಮೌಲ್ಯ 96.57 ಮಟ್ಟದಲ್ಲಿತ್ತು. ಅಲ್ಲಿಂದೀಚೆ ರುಪಾಯಿ 1.39 ನಷ್ಟು ಚೇತರಿಕೆ ಕಂಡಿದೆ.

ರೂಪಾಯಿ ಮೌಲ್ಯ ಹೆಚ್ಚಲು ಕಾರಣಗಳೇನು?

  • ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ: ಇರಾನ್ ಜೊತೆ ಶೀಘ್ರದಲ್ಲೇ ಶಾಂತಿ ಒಪ್ಪಂದ ಏರ್ಪಡಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ ಬೆನ್ನಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Crude Oil) ಬೆಲೆ ಇಳಿಕೆಯಾಗಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಕಳೆದ ಎರಡು ತಿಂಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಅಂದರೆ ಬ್ಯಾರೆಲ್‌ಗೆ 88.80 ಡಾಲರ್‌ಗೆ ಕುಸಿದಿದೆ.
  • ಭಾರತದ ಮೇಲಿನ ಆರ್ಥಿಕ ಒತ್ತಡ ಇಳಿಕೆ: ಭಾರತವು ತನ್ನ ಅಗತ್ಯದ ಬಹುಪಾಲು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ, ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾದಾಗ ಭಾರತಕ್ಕೆ ಡಾಲರ್ ಪಾವತಿಸುವ ಒತ್ತಡ ಕಡಿಮೆಯಾಗುತ್ತದೆ. ಇದು ರೂಪಾಯಿ ಮೌಲ್ಯ ಬಲಗೊಳ್ಳಲು ನೇರ ಕಾರಣವಾಗಿದೆ.
  • ಜಾಗತಿಕ ಮಾರುಕಟ್ಟೆಯ ಚೇತರಿಕೆ: ಟ್ರಂಪ್ ಅವರ ಹೇಳಿಕೆಯಿಂದಾಗಿ ಏಷ್ಯಾದ ಶೇರು ಮಾರುಕಟ್ಟೆಗಳು ಚೇತರಿಕೆ ಕಂಡಿದ್ದು, ಯುಎಸ್ ಟ್ರೆಜರಿ ಮೌಲ್ಯ ಮತ್ತು ಡಾಲರ್ ಸೂಚ್ಯಂಕ ಸ್ವಲ್ಪ ಮಟ್ಟಿಗೆ ಕುಸಿದಿದೆ.

ಇದನ್ನೂ ಓದಿ: ಕೀನಾ ಏರ್​ಪೋರ್ಟ್ ಗುತ್ತಿಗೆ: ಅದಾನಿಗೆ ಸಿಗಬೇಕಿದ್ದ ಗುತ್ತಿಗೆ ಚೀನೀ ಕಂಪನಿ ಪಾಲಾಯ್ತು

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿದ್ದ ಉದ್ವಿಗ್ನತೆಯಿಂದಾಗಿ ನಿನ್ನೆ ಗುರುವಾರ ರೂಪಾಯಿ ಮೌಲ್ಯವು 60 ಪೈಸೆ ಕುಸಿದು 95.85 ರೂ. ನಲ್ಲಿ ಮುಕ್ತಾಯಗೊಂಡಿತ್ತು. ಆದರೆ, ಇಂದಿನ ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೊದಲು 95.40 ರೂ. ನಲ್ಲಿ ಆರಂಭವಾಗಿ, ನಂತರ ಮತ್ತಷ್ಟು ಬಲಗೊಂಡು 95.18 ರೂ. ಗರಿಷ್ಠ ಮಟ್ಟವನ್ನು ತಲುಪಿತು.

ಆದಾಗ್ಯೂ, ಇರಾನ್ ಕಡೆಯಿಂದ ಅಧಿಕೃತ ಒಪ್ಪಂದದ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಹೊರಬೀಳದ ಕಾರಣ ಹೂಡಿಕೆದಾರರು ಸದ್ಯಕ್ಕೆ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹೆಸರು ಪ್ರಸ್ತಾಪವಾದರೆ ಕ್ರಿಮಿನಲ್ ಆಗಲ್ಲ: ಪ್ರಕಾಶ್ ರಾಜ್ ವಿರುದ್ಧ ಚಿನ್ನಯ್ಯ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ಫಸ್ಟ್ ರಿಯಾಕ್ಷನ್ – Kannada News | Priyank Kharge’s First Reaction to Chinnayya’s Allegations Against Prakash Raj in Dharmasthala Case

ಬೆಂಗಳೂರು, ಜೂನ್ 12: ಧರ್ಮಸ್ಥಳ ಬುರುಡೆ ಗ್ಯಾಂಗ್ ಪ್ರಕರಣಕ್ಕೆ ಸಂಬಂಧಿಸಿ ಮಾಸ್ಕ್​ಮ್ಯಾನ್ ಚಿನ್ನಯ್ಯ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ನಟ ಪ್ರಕಾಶ್ ರಾಜ್ ಹೆಸರು ಉಲ್ಲೇಖವಾಗಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಬಗ್ಗೆ ಗೃಹಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿಕ್ರಿಯಿಸಿದ್ದು, ಚಿನ್ನಯ್ಯನ ಮಾತಿನ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಿದೆ ಎಂದು ತಿಳಿಸಿದ್ದಾರೆ. ಎಷ್ಟು ಸತ್ಯ ಹೇಳುತ್ತಿದ್ದಾರೆ, ಎಷ್ಟು ಸುಳ್ಳಿದೆ ಗೊತ್ತಿಲ್ಲ ಎಂದು ಖರ್ಗೆ ಹೇಳಿದ್ದಾರೆ. ಪ್ರಕರಣವು ನ್ಯಾಯಾಲಯದಲ್ಲಿದ್ದು, ವಿಶೇಷ ತನಿಖಾ ದಳ (ಎಸ್ಐಟಿ)ಗೆ ಕೋರ್ಟ್ ಕೆಲವು ಪ್ರಶ್ನೆಗಳನ್ನು ಕೇಳಿದೆ. ಎಸ್ಐಟಿ ಮುಖ್ಯಸ್ಥರು ಆ ಪ್ರಶ್ನೆಗಳಿಗೆ ನ್ಯಾಯಾಲಯಕ್ಕೆ ಉತ್ತರ ನೀಡುತ್ತಾರೆ. ಅದನ್ನು ನಾವು ಸಾರ್ವಜನಿಕವಾಗಿ ಚರ್ಚೆ ಮಾಡಲು ಸಾಧ್ಯವಿಲ್ಲ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ನ್ಯಾಯಾಲಯಕ್ಕೆ ಉತ್ತರ ನೀಡಿದ ಬಳಿಕ ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮಾಧ್ಯಮಗಳಲ್ಲಿ ಮತ್ತು ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಮಾಹಿತಿ ಪ್ರಕಾರ 200 ಕೋಟಿ ರೂಪಾಯಿಗಳ ಆರೋಪದ ಕುರಿತು ಪ್ರಸ್ತಾಪವಾಗಿದೆ. ಇದು ಸಣ್ಣ ಮೊತ್ತವಲ್ಲ. ಆದರೆ ಅದು ಎಷ್ಟು ನಿಜವೋ ಎಷ್ಟು ಸುಳ್ಳೋ ಗೊತ್ತಿಲ್ಲ” ಎಂದು ಖರ್ಗೆ ಹೇಳಿದ್ದಾರೆ. ಅದೇ ವ್ಯಕ್ತಿ (ಚಿನ್ನಯ್ಯ) ಹಿಂದಿನ ಮತ್ತು ಈಗಿನ ಈ ಎಲ್ಲ ಹೇಳಿಕೆಗಳನ್ನು ನೀಡಿರುವುದರಿಂದ, ಅವುಗಳಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದನ್ನು ಪರಿಶೀಲಿಸುವುದು ಮುಖ್ಯ. ಯಾವುದೇ ಹೆಸರು ಪ್ರಸ್ತಾಪವಾದ ತಕ್ಷಣವೇ ಎಲ್ಲರೂ ಕ್ರಿಮಿನಲ್‌ಗಳಲ್ಲ. ಎಸ್ಐಟಿ ಮುಖ್ಯಸ್ಥರು ಮೊದಲು ನ್ಯಾಯಾಲಯಕ್ಕೆ ಉತ್ತರ ನೀಡಬೇಕು. ಆ ಬಗ್ಗೆ ಮಾಧ್ಯಮದಲ್ಲಿ ಚರ್ಚಿಸುವುದು ಸರಿಯಲ್ಲ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚುನಾವಣೆ ಗೆದ್ದರು ಸಿಎಂ ಆಗುವ ಆಸೆ ಇರಲಿಲ್ಲ ರಜನೀಕಾಂತ್​​ಗೆ, ಯೋಜನೆ ಏನಾಗಿತ್ತು? – Kannada News | Rajinikanth was not wanted to became CM said Raghav Lawrence

ತಮಿಳುನಾಡಿನ ವಿಧಾನಸಭೆ ಚುನಾವಣೆ ಇತ್ತೀಚೆಗಷ್ಟೆ ಮುಗಿದಿದ್ದು ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) ರಾಜಕೀಯ ಪಕ್ಷ ಭಾರಿ ಬಹುತದೊಂದಿಗೆ ಗೆದ್ದಿದ್ದು, ವಿಜಯ್ ಅವರು ತಮಿಳುನಾಡಿನ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಚುನಾವಣಾ ಫಲಿತಾಂಶ ಬಂದ ಬಳಿಕ ಹಲವು ರಜನೀಕಾಂತ್ ಅಭಿಮಾನಿಗಳು ಬಲು ಬೇಸರಿಸಿಕೊಂಡಿದ್ದರು. ರಜನೀಕಾಂತ್ ಅವರು ರಾಜಕೀಯ ಪಕ್ಷ ಸ್ಥಾಪಿಸಿ, ಚುನಾವಣೆ ಎದುರಿಸಲು ಮುಂದಾಗಿದ್ದರು. ಆದರೆ ಆರೋಗ್ಯ ಸಮಸ್ಯೆಯಿಂದಾಗಿ ರಜನೀಕಾಂತ್ ತಮ್ಮ ಪಕ್ಷವನ್ನು ರದ್ದು ಮಾಡಿದರು. ರಾಜಕೀಯದಿಂದ ದೂರ ಉಳಿದರು. ಒಂದೊಮ್ಮೆ ಅವರು ವಿಧಾನಸಭೆ ಚುನಾವಣೆ ಸ್ಪರ್ಧಿಸಿದ್ದರೆ ವಿಜಯ್ ಬದಲಿಗೆ ಅವರೇ ಗೆಲ್ಲುತ್ತಿದ್ದರು ಎಂಬ ಮಾತುಗಳು ಕೇಳಿ ಬಂದವು.

ಇದೀಗ ನಟ, ಕೊರಿಯೋಗ್ರಾಫರ್ ಮತ್ತು ರಜನೀಕಾಂತ್ ಅವರಿಗೆ ಆಪ್ತರೂ ಆಗಿರುವ ರಾಘವ್ ಲಾರೆನ್ಸ್, ವಿಜಯ್ ಅವರ ಟಿವಿಕೆಯಿಂದ ಚುನಾವಣೆಗೆ ಸ್ಪರ್ಧಿಸಲಿದ್ದು, ಈ ಕುರಿತು ಸುದೀರ್ಘವಾದ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋನಲ್ಲಿ ತಾವು ರಜನೀಕಾಂತ್ ಅವರ ಜೊತೆಗೇ ರಾಜಕೀಯ ಪ್ರವೇಶಿಸಲು ಉತ್ಸುಕರಾಗಿದ್ದು, ಆ ಸಮಯದಲ್ಲಿ ತಾವು ಖುದ್ದು ರಜನೀಕಾಂತ್ ಅವರ ಜೊತೆಗೆ ಈ ಬಗ್ಗೆ ಸಾಕಷ್ಟು ಮಾತನಾಡಿದ್ದಾಗಿಯೂ ರಾಘವ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಕೊಲ್ಲೂರು ದೇವಸ್ಥಾನಕ್ಕೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಭೇಟಿ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ

ಆಗ ರಜನೀಕಾಂತ್ ಅವರು ರಾಘವ್ ಬಳಿ ಹೇಳಿದ್ದರಂತೆ. ‘ಚುನಾವಣೆ ಗೆಲ್ಲುವುದಷ್ಟೆ ನನ್ನ ಉದ್ದೇಶ, ಆದರೆ ನಾನು ಸಿಎಂ ಆಗುವುದಿಲ್ಲ. ನಾನು ಹೆಚ್ಚು ಕಲಿತವನಲ್ಲ, ಬುದ್ಧಿವಂತನಲ್ಲ, ಒಬ್ಬ ಯೋಗ್ಯ, ಶಿಕ್ಷಿತ, ಕ್ಷಮತೆ ಹೊಂದಿರುವ ವ್ಯಕ್ತಿಯನ್ನು ಸಿಎಂ ಆಗಿ ಮಾಡುತ್ತೇನೆ’ ಎಂದಿದ್ದರಂತೆ. ಆದರೆ ಆ ವ್ಯಕ್ತಿ ಯಾರು ಎಂಬುದನ್ನು ರಜನೀಕಾಂತ್ ಹೇಳಿರಲಿಲ್ಲವಂತೆ. ರಜನೀಕಾಂತ್ ಅವರು ಯಾರನ್ನು ಸಿಎಂ ಆಗಿ ಮಾಡಲಿದ್ದರು ಎಂಬ ವಿಷಯ ಅವರ ಬಳಿಯೇ ಉಳಿದಿದೆ ಎಂದು ರಾಘವ್ ಲಾರೆನ್ಸ್ ಹೇಳಿದ್ದಾರೆ.

ತಾವು ಖುದ್ದು, ರಜನೀಕಾಂತ್ ಅವರ ಪಕ್ಷದಿಂದ ಚುನಾವಣೆ ಎದುರಿಸಲು ಉತ್ಸುಕರಾಗಿದ್ದಿದ್ದುದಾಗಿ ಹೇಳಿರುವ ರಾಘವ್, ಆದರೆ ತಮ್ಮ ತಾಯಿ ಬೇಡ ಎಂದ ಕಾರಣ ಸುಮ್ಮನಾದೆ, ಬಳಿಕ ರಜನೀಕಾಂತ್ ಅವರು ಖುದ್ದು ರಾಜಕೀಯದಿಂದ ಹಿಂದೆ ಸರಿದರು. ಆದರೆ ಈಗ ಅವರಷ್ಟೆ ಆಪ್ತವಾಗಿರುವ, ತಮ್ಮ ಗೆಳೆಯರೂ ಆಗಿರುವ ವಿಜಯ್ ಅವರು ಸಿಎಂ ಆಗಿದ್ದಾರೆ. ಹಣ, ಜಾತಿ, ಧರ್ಮ ಯಾವುದೂ ಇಲ್ಲದೆ ಗೆದ್ದು ಬಂದಿದ್ದಾರೆ. ವಿಜಯ್ ಗೆಲುವು ನೋಡಿ, ನನ್ನ ತಾಯಿ ಸಹ ನನಗೆ ಅನುಮತಿ ನೀಡಿದ್ದು, ಚುನಾವಣೆಗೆ ಸ್ಪರ್ಧಿಸಲು ನಿರ್ಣಯ ಮಾಡಿದ್ದೇನೆ. ಒಂದೊಮ್ಮೆ ಅಭಿಮಾನಿಗಳು ಒಪ್ಪಿಕೊಂಡರೆ ತಾವು ಚುನಾವಣೆಗೆ ಸ್ಪರ್ಧಿಸುವುದಾಗಿ ರಾಘವ್ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 1:17 pm, Fri, 12 June 26

Source link

ಖಾಸಗಿ ಜೆಟ್​​ನಲ್ಲಿ ಕುಟುಂಬದ ಜೊತೆ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್ ಅವರು ತಮ್ಮ ನಿವೃತ್ತಿ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಆದರೆ, ಕ್ರಿಕೆಟ್ ಮೇಲಿನ ಪ್ರೀತಿ ಅವರಿಗೆ ಕಡಿಮೆ ಆಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತಹ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಕುಟುಂಬದ ಜೊತೆ ವಿಮಾನದಲ್ಲಿ ಕ್ರಿಕೆಟ್ ಆಡಿದ್ದಾರೆ. ಈ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಜೀವನ ಅಂದ್ರೆ ಈ ರೀತಿ ಇರಬೇಕು ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ರಿಯಲ್ ಹೀರೋ: 7ನೇ ಮಹಡಿಯ ಗ್ರಿಲ್ ಹತ್ತಿ ಹೋಗಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಪ್ರಾಣ ಉಳಿಸಿದ ಸೂರತ್ ಪೊಲೀಸ್ – Kannada News | Gujarat Constable’s Swift Action Saves Man From Tragic Leap at High Rise Building

ಸೂರತ್, ಜೂನ್ 12: ಯಾರೋ ಒಬ್ಬರು ಕಷ್ಟದಲ್ಲಿದ್ದಾರೆ ಎಂದಾಗ ತಮ್ಮ ಜೀವವನ್ನೂ ಪಣಕ್ಕಿಟ್ಟು ಕಾಪಾಡುವವರನ್ನು ದೇವದೂತರು ಎಂದು ಕರೆಯಲಾಗುತ್ತದೆ. ಹಾಗೆಯೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಪೊಲೀಸ್(Police) ಅಧಿಕಾರಿಯೊಬ್ಬರು ದೇವರಂತೆ ಕಾಪಾಡಿರುವ ಘಟನೆ ಸೂರತ್​ನಲ್ಲಿ ನಡೆದಿದೆ. ಜೂನ್ 8ರಂದು ಈ ಘಟನೆ ನಡೆದಿದೆ.

ಸೂರತ್‌ನ ಲಸ್ಕಾನಾ ಪ್ರದೇಶದ ವಸತಿ ಕಟ್ಟಡವೊಂದರ 7ನೇ ಮಹಡಿಯ ಫ್ಲಾಟ್‌ನಲ್ಲಿ ವ್ಯಕ್ತಿಯೊಬ್ಬರು ತೀವ್ರ ಮಾನಸಿಕ ಒತ್ತಡದಿಂದಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರ ಪತ್ನಿ ಗಾಬರಿಯಿಂದ ತಕ್ಷಣವೇ ಪೊಲೀಸರ ತುರ್ತು ಸಂಖ್ಯೆ ‘ಡಯಲ್ 112’ ಗೆ ಕರೆ ಮಾಡಿ ಸಹಾಯ ಕೋರಿದ್ದರು.

ಮಾಹಿತಿ ಸಿಗುತ್ತಿದ್ದಂತೆಯೇ ಲಸ್ಕಾನಾ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದವು. ಆದರೆ ಅಪಾರ್ಟ್​​ಮೆಂಟ್​ನ ಮುಖ್ಯ ಬಾಗಿಲೇ ಒಳಗಿನಿಂದ ಲಾಕ್ ಆದ ಕಾರಣ ಯಾರಿಗೂ ಒಳಬರಲು ಸಾಧ್ಯವಾಗಲಿಲ್ಲ. ಪರಿಸ್ಥಿತಿಯ ಗಂಭೀರತೆ ಅರಿತ ಪೊಲೀಸ್ ಕಾನ್‌ಸ್ಟೆಬಲ್ ಶೈಲೇಶ್ ಚುಡಾಸಮಾ ಮತ್ತು ಚಾಲಕ ಕೃಪಾಲ್‌ಸಿನ್ಹ್ ಗೋಹಿಲ್ ತಕ್ಷಣವೇ ಒಂದು ಉಪಾಯ ಮಾಡಿದ್ದಾರೆ.

ಪಕ್ಕದ ಫ್ಲಾಟ್‌ನ ನಿವಾಸಿಗಳ ಸಹಾಯ ಪಡೆದ ಕಾನ್‌ಸ್ಟೆಬಲ್ ಶೈಲೇಶ್, 7ನೇ ಮಹಡಿಯ ಕಟ್ಟಡದ ಹೊರಭಾಗದಲ್ಲಿದ್ದ ಕಿರಿದಾದ ಸುರಕ್ಷತಾ ಗ್ರಿಲ್ (Safety Grill) ಅನ್ನು ಯಾವುದೇ ಸಪೋರ್ಟ್ ಇಲ್ಲದೆ ಅತ್ಯಂತ ಎಚ್ಚರಿಕೆಯಿಂದ ಹತ್ತಲಾರಂಭಿಸಿದರು.

ಮತ್ತಷ್ಟು ಓದಿ: ಹೃದಯಸ್ಪರ್ಶಿ ಘಟನೆ: ಮಳೆಯಲ್ಲಿ ರಸ್ತೆ ದಾಟಲು ಪರದಾಡುತ್ತಿದ್ದ ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್

ಸಣ್ಣ ತಪ್ಪು ಹೆಜ್ಜೆಯೂ ಪ್ರಾಣಕ್ಕೆ ಕುತ್ತು ತರಬಹುದಾಗಿದ್ದ ಆ ಎತ್ತರದಲ್ಲಿ ಧೈರ್ಯವಾಗಿ ಸಾಗಿದ ಅವರು, ಕಿಟಕಿಯ ಮೂಲಕ ಫ್ಲಾಟ್‌ನ ಒಳಗೆ ಪ್ರವೇಶಿಸುವಲ್ಲಿ ಯಶಸ್ವಿಯಾದರು. ನಾನು ಒಳಗೆ ಹೋದಾಗ ಆ ವ್ಯಕ್ತಿ ವಿಷ ಸೇವಿಸಿ ವಾಂತಿ ಮಾಡುತ್ತಿದ್ದ. ತಕ್ಷಣವೇ ಆತನ ಕೈಯಲ್ಲಿದ್ದ ಉಳಿದ ವಿಷದ ವಸ್ತುವನ್ನು ಕಿತ್ತುಕೊಂಡು, ಒಳಗಿನಿಂದ ಬಾಗಿಲು ತೆರೆದು ನಮ್ಮ ತಂಡವನ್ನು ಒಳಗೆ ಕರೆಸಿಕೊಂಡೆ ಎಂದು ಕಾನ್‌ಸ್ಟೆಬಲ್ ಶೈಲೇಶ್ ಆ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.

ವಿಡಿಯೋ

ಮಗುವನ್ನು ಎತ್ತಿಕೊಳ್ಳುವಂತೆ ಆ ವ್ಯಕ್ತಿಯನ್ನು ತಕ್ಷಣವೇ 7ನೇ ಮಹಡಿಯಿಂದ ಕೆಳಗೆ ಕರೆತಂದ ಪೊಲೀಸರು, ಆಂಬ್ಯುಲೆನ್ಸ್‌ಗಾಗಿ ಕಾಯುತ್ತಾ ಸಮಯ ವ್ಯರ್ಥ ಮಾಡದೆ ತಮ್ಮದೇ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅದೃಷ್ಟವಶಾತ್, ದಾರಿಯ ಮಧ್ಯದಲ್ಲೇ ಆಂಬ್ಯುಲೆನ್ಸ್ ಎದುರಾಗಿದ್ದರಿಂದ ತಕ್ಷಣವೇ ಆತನಿಗೆ ತುರ್ತು ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಆ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದ್ದಂತೆಯೇ, ಗುಜರಾತ್ ಗೃಹ ಸಚಿವ ಹರ್ಷ ಸಾಂಘವಿ ಅವರು ಪೊಲೀಸ್ ಅಧಿಕಾರಿಗಳ ಈ ಅಪ್ರತಿಮ ಸೇವೆ ಮತ್ತು ಧೈರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿ, ಅಧಿಕೃತವಾಗಿ ಅಭಿನಂದಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ದೆಹಲಿಯಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿಯಾದ ಸಿಎಂ ಡಿಕೆ ಶಿವಕುಮಾರ್ – Kannada News | Karnataka CM D.K. Shivakumar Meets President Droupadi Murmu and Vice President in Delhi

ನವದೆಹಲಿ, ಜೂನ್​​ 12: ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಉಪರಾಷ್ಟ್ರಪತಿ ರಾಧಾಕೃಷ್ಣನ್ ಅವರನ್ನು ಕೂಡ ಭೇಟಿಯಾಗಿ ಡಿಕೆ ಶಿವಕುಮಾರ್ ಅವರು ಚರ್ಚೆ ನಡೆಸಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ದೆಹಲಿಗೆ ತೆರಳಿರುವ ಡಿಕೆ ಶಿವಕುಮಾರ್ ಅವರು , ದೇಶದ ಗಣ್ಯಾತಿಗಣ್ಯ ನಾಯಕರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮೊದಲು ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನೂ ಡಿಕೆಶಿ ಭೇಟಿಯಾಗಿದ್ದರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅತ್ಯಾಚಾರ ನಡೆಸಿದ ತಂದೆ ವಿರುದ್ಧ ಒಬ್ಬಂಟಿಯಾಗಿ ಕಾನೂನು ಹೋರಾಟ ಗೆದ್ದ ಅಪ್ರಾಪ್ತೆ!: ಆರೋಪಿಗೆ 20 ವರ್ಷ ಜೈಲು ಶಿಕ್ಷೆ – Kannada News | Minor Fights Alone Against Father in POCSO Case, Bengaluru Court Sentences Accused to 20 Years Jail

ಬೆಂಗಳೂರು, ಜೂನ್​​ 12: ಮದ್ಯದ ಅಮಲಿನಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದ ತಂದೆಯ ವಿರುದ್ಧವೇ ಕಾನೂನು ಹೋರಾಟ ಮಾಡಿ ಆತನಿಗೆ ಶಿಕ್ಷೆ ಕೊಡಿಸುವಲ್ಲಿ ಅಪ್ರಾಪ್ತೆ ಸಫಲವಾಗಿರುವ ಘಟನೆ ಬೆಂಗಳೂರಲ್ಲಿ (Bengaluru) ನಡೆದಿದೆ. 16 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ದಿನಗೂಲಿ ಕಾರ್ಮಿಕನಿಗೆ ನಗರದ ವಿಶೇಷ ನ್ಯಾಯಾಲಯವು 20 ವರ್ಷಗಳ ಸರಳ ಕಾರಾಗೃಹ ಶಿಕ್ಷೆ ವಿಧಿಸಿದ್ದು, ಮೂರು ವರ್ಷಗಳ ಕಾಲ ನಡೆದ ಕಾನೂನು ಹೋರಾಟದಲ್ಲಿ ತಾಯಿ ಹಾಗೂ ಕುಟುಂಬದ ಬೆಂಬಲವಿಲ್ಲದಿದ್ದರೂ ಬಾಲಕಿ ಧೈರ್ಯದಿಂದ ಹೋರಾಡಿ ನ್ಯಾಯ ಪಡೆದಿದ್ದಾಳೆ.

ಆರೋಪಿ ಬಿಹಾರ ಮೂಲದ ದಿನಗೂಲಿ ಕಾರ್ಮಿಕನಾಗಿದ್ದು, ಪತ್ನಿ ಹಾಗೂ ನಾಲ್ವರು ಮಕ್ಕಳೊಂದಿಗೆ ಉತ್ತರ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ. ಸಂತ್ರಸ್ತೆ ಆತನ ಹಿರಿಯ ಮಗಳಾಗಿದ್ದು, 9ನೇ ತರಗತಿಯ ಬಳಿಕ ಶಾಲೆ ತೊರೆದಿದ್ದಳು. ತಂದೆ ಮದುವೆಗೆ ಒತ್ತಾಯಿಸುತ್ತಿದ್ದ ಕಾರಣ ಉತ್ತರ ಪ್ರದೇಶದಲ್ಲಿರುವ ಸಂಬಂಧಿಕರ ಮನೆಯಲ್ಲಿ ವಾಸಕ್ಕೆ ತೆರಳಿದ್ದಳು. ಈ ನಡುವೆ 2023ರ ಜೂನ್ 12ರಂದು ಆರೋಪಿಯ ತಾಯಿ ಬಿಹಾರದಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರೆಲ್ಲರೂ ಅಂತ್ಯಕ್ರಿಯೆಗಾಗಿ ಊರಿಗೆ ತೆರಳಿದ್ದರು. ಈ ವೇಳೆ ಮಗಳನ್ನು ಇನ್ನು ಮುಂದೆ ಮದುವೆಗೆ ಒತ್ತಾಯಿಸುವುದಿಲ್ಲ ಎಂದು ಆರೋಪಿ ಭರವಸೆ ನೀಡಿದ್ದ. ಬಳಿಕ ಆತ ಬೆಂಗಳೂರಿಗೆ ಹಿಂದಿರುಗಿದ್ದರೆ, ಮಗಳು ನಂತರ ಬೆಂಗಳೂರಿಗೆ ಬಂದಿದ್ದಳು.

ಇದನ್ನೂ ಓದಿ: ಪ್ರೇಯಸಿಯನ್ನು ಸೇತುವೆಯಿಂದ ತಳ್ಳಿ ಕೊಂದು, ಅಪಘಾತವೆಂದು ಬಿಂಬಿಸಿದ ಪ್ರೇಮಿ!

ಆಟೋ ಚಾಲಕನ ಸಹಾಯ ಪಡೆದು ದೂರು

2023ರ ಜೂನ್ 27ರ ರಾತ್ರಿ ಮದ್ಯದ ಅಮಲಿನಲ್ಲಿದ್ದ ಆರೋಪಿ, ಉತ್ತರ ಪ್ರದೇಶದಲ್ಲಿದ್ದಾಗ ಮಗಳಿಗೆ ಪ್ರೇಮ ಸಂಬಂಧವಿತ್ತು ಎಂಬ ಅನುಮಾನ ವ್ಯಕ್ತಪಡಿಸಿ, ಆಕೆಯನ್ನು ಪರೀಕ್ಷೆ ಮಾಡಬೇಕೆಂಬ ನೆಪದಲ್ಲಿ ಅತ್ಯಾಚಾರ ಎಸಗಿದ್ದ. ರಾತ್ರಿ ವೇಳೆ ಊಟ ತರಲು ಮನೆಬಿಟ್ಟು ಹೊರಗೆ ಹೋದ ಸಂದರ್ಭದಲ್ಲಿ ಬಾಲಕಿ ಅಲ್ಲಿಂದ ತಪ್ಪಿಸಿಕೊಂಡು ಸಮೀಪದ ಉದ್ಯಾನವನದಲ್ಲಿ ರಾತ್ರಿ ಕಳೆದಿದ್ದಳು. ಮರುದಿನ ಬೆಳಗ್ಗೆ ಆಟೋ ರಿಕ್ಷಾ ಚಾಲಕನೊಬ್ಬನನ್ನು ಕಂಡು ಸಮೀಪದ ಪೊಲೀಸ್ ಠಾಣೆಗೆ ಕರೆದೊಯ್ಯುವಂತೆ ಮನವಿ ಮಾಡಿದ್ದಳು. ಬಳಿಕ ಆಕೆ ಪೊಲೀಸರಿಗೆ ದೂರು ನೀಡಿದ್ದಳು.

ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿ ಆರೋಪಿಯನ್ನು ಬಂಧಿಸಿದ್ದರು. ಬಾಲಕಿಯನ್ನು ರಕ್ಷಣೆಗಾಗಿ ಸರ್ಕಾರಿ ಮಹಿಳಾ ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಪೊಲೀಸರು ತಾಯಿಯನ್ನು ಬೆಂಗಳೂರಿಗೆ ಕರೆಸಿದಾಗ, ಮಗಳಿಗೆ ಬೆಂಬಲ ನೀಡುವ ಬದಲು ತಂದೆಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಕ್ಕೆ ಆಕೆಯನ್ನು ಗದರಿಸಿದ್ದಳು ಎಂದು ತಿಳಿದುಬಂದಿದೆ. ಸಂತ್ರಸ್ತೆ ಈ ಹೋರಾಟವನ್ನು ಸಂಪೂರ್ಣವಾಗಿ ಒಬ್ಬಳೇ ನಡೆಸಿದ್ದು, ಕಿನಿಷ್ಠ ಆಕೆಯ ತಾಯಿಯೂ ಬೆಂಬಲ ನೀಡಿಲ್ಲ ಎನ್ನಲಾಗಿದೆ. ಅಂತಿಮವಾಗಿ ಪ್ರಕರಣ ಸಂಬಂಧ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆಯೊಂದಿಗೆ 1.10 ಲಕ್ಷ ರೂ. ದಂಡವನ್ನು ನ್ಯಾಯಾಲಯ ವಿಧಿಸಿದೆ. 2023ರ ಜೂನ್‌ನಲ್ಲಿ ಬಂಧನಕ್ಕೊಳಗಾದ ಆರೋಪಿಯು ಅಂದಿನಿಂದಲೂ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿದ್ದ. ಪ್ರಸ್ತುತ 19 ವರ್ಷದ ಯುವತಿಯಾಗಿರುವ ಸಂತ್ರಸ್ತೆ ಟೈಲರಿಂಗ್ ಕೆಲಸ ಮಾಡುತ್ತಿದ್ದಾಳೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version