PBKS vs MI IPL 2026 Live Score: ನಾಯಕನಾಗಿ ಟಾಸ್ ಗೆದ್ದ ಬುಮ್ರಾ ಬೌಲಿಂಗ್ ಆಯ್ಕೆ – Kannada News | Punjab Kings vs Mumbai Indians IPL 2026 Live Cricket Score PBKS vs MI Match on 14th May latest news in Kannada

ಐಪಿಎಲ್ 2026 ರ 58ನೇ ಪಂದ್ಯ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿದೆ.ಇದು ಉಭಯ ತಂಡಗಳ 12 ನೇ ಪಂದ್ಯವಾಗಿದೆ. ಪ್ಲೇಆಫ್‌ನಿಂದ ಮುಂಬೈ ಹೊರಬಿದ್ದಿರುವುದರಿಂದ ಈ ಪಂದ್ಯ ಕೇವಲ ಔಪಚಾರಿಕವಾಗಿದೆ. ಇತ್ತ ಪಂಜಾಬ್‌ ಪ್ಲೇಆಫ್​ ರೇಸ್​ನಲ್ಲಿ ಉಳಿಯಲು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

Source link

‘ಲವ್ ಮಾಕ್ಟೆಲ್ 3’ ಸೆಟ್​ನಲ್ಲಿ ದಿಲೀಪ್ ರಾಜ್: ಸುಂದರ ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ – Kannada News | Darling Krishna shared video of Dileep Raj from Love Mocktail 3 set

ಇತ್ತೀಚೆಗಷ್ಟೆ ನಿಧನರಾದ ನಟ ದಿಲೀಪ್ ರಾಜ್ (Dileep Raj) ಅವರು ‘ಲವ್ ಮಾಕ್ಟೆಲ್ 3’ ಸಿನಿಮಾನಲ್ಲಿ ಪ್ರಮುಖವಾದ ಪಾತ್ರದಲ್ಲಿ ನಟಿಸಿದ್ದರು. ಇದೀಗ ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ, ದಿಲೀಪ್ ಅವರು ಸಿನಿಮಾನಲ್ಲಿ ನಟಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದು, ‘ದಿಲೀಪ್ ಒಬ್ಬ ಅದ್ಭುತ ನಟರಾಗಿದ್ದರು, ಅವರಿಗೆ ಹಲವು ಬಾರಿ ಸೆಟ್​ನಲ್ಲಿ ಈ ವಿಷಯ ಹೇಳಿದ್ದೆ, ಅವರು ನಾಚಿ ಸುಮ್ಮನಾಗಿದ್ದರು. ಒಳ್ಳೆಯ ನಟ ಆಗಿರುವ ಜೊತೆಗೆ ಅವರು ಬಹಳ ಒಳ್ಳೆಯ ವ್ಯಕ್ತಿಯೂ ಆಗಿದ್ದರು. ಕೊನೆಯದಾಗಿ ಹೇಳುತ್ತಿದ್ದೇನೆ, ‘ದಿಲೀಪ್ ಸರ್ ನೀವು ಅದ್ಭುತ ನಟ’ ಎಂದು ಡಾರ್ಲಿಂಗ್ ಕೃಷ್ಣ ಹೇಳಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪಾಕ್ ಸೂಪರ್ ಲೀಗ್ ಆಡಿದ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡ ಸಿಎಸ್​ಕೆ – Kannada News | IPL 2026: CSK Signs Dion Forrester for Injured Jamie Overton

ಐಪಿಎಲ್ 2026 ರಲ್ಲಿ ಲೀಗ್ ಹಂತ ಮುಗಿಯುವ ಹತ್ತಿರದಲ್ಲಿದೆ. ಹೀಗಾಗಿ ಪ್ಲೇಆಫ್ ರೋಚಕತೆ ಹೆಚ್ಚಾಗಿದೆ. ಈವರೆಗೆ 3 ತಂಡಗಳು ಪ್ಲೇಆಫ್​ನಿಂದ ಹೊರಬಿದ್ದಿದ್ದು, ಉಳಿದ 7 ತಂಡಗಳು ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು ಹೋರಾಡುತ್ತಿವೆ. ಆ 7 ತಂಡಗಳ ಪೈಕಿ ಸಿಎಸ್​ಕೆ ಕೂಡ ಒಂದು. ಲೀಗ್​ನಲ್ಲಿ ಕಳಪೆ ಆರಂಭ ಪಡೆದುಕೊಂಡಿದ್ದ ಸಿಎಸ್​ಕೆ ಇತ್ತೀಚೆಗೆ ಲಯ ಕಂಡುಕೊಂಡಿದೆ. ಆದರೆ ತಂಡದಲ್ಲಿನ ಆಟಗಾರರ ಇಂಜುರಿ ಸಮಸ್ಯೆ ಮಾತ್ರ ಹಾಗೆಯೇ ಮುಂದುವರೆದಿದೆ. ಕೆಲವು ದಿನಗಳ ಹಿಂದೆ ಬಲ ತೊಡೆಯ ಗಾಯದಿಂದಾಗಿ ಇಂಗ್ಲೆಂಡ್ ವೇಗದ ಬೌಲರ್ ಜೇಮೀ ಓವರ್ಟನ್ ಲೀಗ್​ನಿಂದಲೇ ಹೊರಬಿದ್ದಿದ್ದರು. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಅವರ ಬದಲಿ ಆಟಗಾರನನ್ನು ಘೋಷಿಸಿದೆ. ಕೆಲವು ದಿನಗಳ ಹಿಂದೆ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡುತ್ತಿದ್ದ ದಕ್ಷಿಣ ಆಫ್ರಿಕಾದ ಆಟಗಾರನನ್ನು ಸಿಎಸ್​ಕೆ ತಂಡಕ್ಕೆ ಸೇರಿಸಿಕೊಂಡಿದೆ.

ಬದಲಿಯಾಗಿ ಬಂದಿದ್ಯಾರು?

ಚೆನ್ನೈ ಸೂಪರ್ ಕಿಂಗ್ಸ್, ಜೇಮೀ ಓವರ್ಟನ್ ಬದಲಿಗೆ ದಕ್ಷಿಣ ಆಫ್ರಿಕಾದ ಯುವ ಆಲ್‌ರೌಂಡರ್ ಡಯಾನ್ ಫಾರೆಸ್ಟರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. 25 ವರ್ಷದ ಡಯಾನ್ ಫಾರೆಸ್ಟರ್ 75 ಲಕ್ಷ ರೂಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಇದು ಅವರ ಮೊದಲ ಐಪಿಎಲ್ ಸೀಸನ್ ಆಗಿದೆ. ಕೆಲವು ದಿನಗಳ ಹಿಂದೆ, ಪಾಕಿಸ್ತಾನ ಸೂಪರ್ ಲೀಗ್​ನಲ್ಲಿ ರಾವಲ್ಪಿಂಡಿ ಪರ ಆಡಿದ್ದ ಡಯಾನ್ ಫಾರೆಸ್ಟರ್, ಆರು ಪಂದ್ಯಗಳಲ್ಲಿ 44.00 ಸರಾಸರಿಯಲ್ಲಿ 144 ರನ್ ಮತ್ತು ಎರಡು ವಿಕೆಟ್‌ಗಳನ್ನು ಸಹ ಪಡೆದಿದ್ದರು.

2026 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಡಯಾನ್ ಫಾರೆಸ್ಟರ್ ಇಲ್ಲಿಯವರೆಗೆ, ಐದು ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು 83 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿಯೂ ಸಮರ್ಥರಾಗಿರುವ ಫಾರೆಸ್ಟರ್ ಮಧ್ಯಮ ಕ್ರಮಾಂಕದಲ್ಲಿ ಉಪಯುಕ್ತ ಕೊಡುಗೆ ನೀಡಬಹುದು ಮತ್ತು ವೇಗದ ಬೌಲಿಂಗ್ ಆಯ್ಕೆಯನ್ನು ಒದಗಿಸಬಹುದು.

ಸಿಎಸ್​ಕೆ ನವೀಕರಿಸಿದ ತಂಡ:

ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್‌ವಾಡ್ (ನಾಯಕ), ಉರ್ವಿಲ್ ಪಟೇಲ್, ಕಾರ್ತಿಕ್ ಶರ್ಮಾ, ಡೆವಾಲ್ಡ್ ಬ್ರೂವಿಸ್, ಡಿಯೋನ್ ಫಾರೆಸ್ಟರ್, ಅಕೇಲ್ ಹುಸೇನ್, ನೂರ್ ಅಹ್ಮದ್, ಅನ್ಶುಲ್ ಕಾಂಬೋಜ್, ಮುಖೇಶ್ ಚೌಧರಿ, ಗುರ್ಜಪ್ನೀತ್ ಸಿಂಗ್, ಎಂಎಸ್ ಧೋನಿ, ಮಾತ್ ಹೆನ್ರಿ, ಮಾತ್ ಹೆನ್ರಿ, ಮಾತ್ ಹೆನ್ರಿ, ಮಾತ್ ಹೆನ್ರಿ, ಮಾತ್ ಹೆನ್ರಿ, ಮಾತ್ ಹೆನ್ರಿ, ದುಬೆ, ರಾಹುಲ್ ಚಾಹರ್, ಸ್ಪೆನ್ಸರ್ ಜಾನ್ಸನ್, ಆಕಾಶ್ ಮಾಧ್ವಲ್, ಅಮನ್ ಖಾನ್, ಜಕಾರಿ ಫೌಲ್ಕ್ಸ್, ಪ್ರಶಾಂತ್ ವೀರ್, ಮೆಕ್‌ನೀಲ್ ಹ್ಯಾಡ್ಲಿ ನೊರೊನ್ಹಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹವಾಮಾನ ವರದಿ: ವಾರಾಂತ್ಯಕ್ಕೆ ಬೆಂಗಳೂರಲ್ಲಿ ವರುಣನ ಅಬ್ಬರ, ಮೇ 17ರ ವರೆಗೆ ರಾಜ್ಯದ ವಿವಿಧೆಡೆ ಮಳೆ – Kannada News | Karnataka Weather Update: Heavy Rainfall Likely in Bengaluru May 15–17

ಮಡಿಕೇರಿಯಲ್ಲಿ ಸುರಿದ ಮಳೆImage Credit source: Tv9 Kannada

ಬೆಂಗಳೂರು, ಮೇ 14: ಈ ವಾರಾಂತ್ಯದಲ್ಲಿ ಮುಂಗಾರು ಪೂರ್ವ ಮಳೆಯ ಚಟುವಟಿಕೆ ಬೆಂಗಳೂರಲ್ಲಿ (Bengaluru) ಹೆಚ್ಚುವ ಸಾಧ್ಯತೆ ಇದ್ದು, ಮೇ 15ರಿಂದ 17ರವರೆಗೆ ಮಧ್ಯಮದಿಂದ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಕಳೆದ ಸುಮಾರು ಒಂದು ವಾರದದಿಂದ ಬಿಸಿಲಿನ ಬೇಗೆಗೆ ತತ್ತರಿಸಿರುವ ನಗರದ ಜನತೆಗೆ ವರುಣ ತಂಪೆರೆಯಲಿದ್ದಾನೆ ಎಂದು ಹವಾಮಾನ ವೀಕ್ಷಣಾ ಕೇಂದ್ರಗಳು ಮಾಹಿತಿ ನೀಡಿವೆ.

ಮುಖ್ಯಾಂಶಗಳು

  • ವಾರಾಂತ್ಯದಲ್ಲಿ ಮುಂಗಾರು ಪೂರ್ವ ಮಳೆ ಚಟುವಟಿಕೆ ಹೆಚ್ಚಳ
  • ಮೇ 15ರಿಂದ 17ರವರೆಗೆ ಬೆಂಗಳೂರಿನಲ್ಲಿ ಮಳೆಯ ಸಾಧ್ಯತೆ
  • ರಾಜ್ಯದ ಹಲವೆಡೆ ಮಳೆ ಸಾಧ್ಯತೆ ಎಂದ ಹವಾಮಾನ ಇಲಾಖೆ

ಏಪ್ರಿಲ್ 30ರಂದು ಬೆಂಗಳೂರಿನಲ್ಲಿ ಸುಮಾರು 111 ಮಿ.ಮೀ ಮಳೆಯಾಗಿತ್ತು. ಇದರಿಂದ ನಗರದ ಹಲವೆಡೆ ನೀರು ನಿಂತು ಸಂಚಾರ ದಟ್ಟಣೆ ಉಂಟಾಗಿತ್ತು. ಆದರೆ ಬಳಿಕ ಮಳೆಯ ಚಟುವಟಿಕೆ ಗಣನೀಯವಾಗಿ ಕುಂಠಿತಗೊಂಡಿತ್ತು. ಮಾಹಿತಿ ಪ್ರಕಾರ, ಮೇ ಮೊದಲ 13 ದಿನಗಳಲ್ಲಿ ಬೆಂಗಳೂರು ನಗರ ವೀಕ್ಷಣಾಲಯದಲ್ಲಿ ಕೇವಲ 31 ಮಿ.ಮೀ ಮಳೆಯಾಗಿದ್ದು, HAL ವೀಕ್ಷಣಾಲಯದಲ್ಲಿ ಮಾಸಿಕ ಸರಾಸರಿ ಕೇವಲ 8.2 ಮಿ.ಮೀ ಮಳೆಯಾಗಿದೆ. ಮಳೆಯ ಕೊರತೆಯ ಕಾರಣ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಾಪಮಾನ ಮತ್ತೆ ಏರಿಕೆಯಾಗಿದೆ. ಈ ನಡುವೆ ಹವಾಮಾನ ಇಲಾಖೆ ಉತ್ತಮ ಮಳೆಯ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: ಬೆಳಗಾವಿ, ಚಿಕ್ಕಮಗಳೂರು ಸೇರಿ ಕರ್ನಾಟಕದ ಹಲವೆಡೆ ಭಾರಿ ಮಳೆ; ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿ

ರಾಜ್ಯದ ಹಲವೆಡೆಯೂ ಮಳೆಯ ಎಚ್ಚರಿಕೆ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) ಕೂಡ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯ ಎಚ್ಚರಿಕೆ ನೀಡಿದೆ. ಮೇ 16ರವರೆಗೆ ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಗಂಟೆಗೆ 40-50 ಕಿಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಕರಾವಳಿ ಕರ್ನಾಟಕದಲ್ಲಿಯೂ ಮೇ 17ರವರೆಗೆ ಮಿಂಚು-ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:32 pm, Thu, 14 May 26

Source link

ಸ್ಮಾರ್ಟ್ ವಾಚ್ ನಂಬಿ ಎದೆ ನೋವು ನಿರ್ಲಕ್ಷ್ಯ ಮಾಡಿದ್ರಾ ನಟ ದಿಲೀಪ್ ರಾಜ್? – Kannada News | Dileep Raj reportedly ignored Chest Pain after Heart Rate shows normal in Smartwatch

ನಟ ದಿಲೀಪ್ ರಾಜ್ (Dileep Raj) ಅವರು ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಅವರಿಗೆ ಯಾವುದೇ ಕೆಟ್ಟ ಅಭ್ಯಾಸಗಳು ಇರಲಿಲ್ಲ. ಹಾಗಿದ್ದರೂ ಕೂಡ ಅವರು ಹೃದಯಾಘಾತದಿಂದ ನಿಧನರಾದರು. ಮೇ 13ರಂದು ದಿಲೀಪ್ ರಾಜ್ ಅವರ ಮರಣದ ಸುದ್ದಿ ಕೇಳಿ ಎಲ್ಲರಿಗೂ ಆಘಾತ ಆಯಿತು. ಫಿಟ್ ಆಗಿದ್ದ ಅವರು 47ನೇ ವಯಸ್ಸಿಗೆ ಕೊನೆಯುಸಿರು ಎಳೆದಿದ್ದು ನೋವಿನ ಸಂಗತಿ. ಮೇ 12ರ ರಾತ್ರಿಯೇ ದಿಲೀಪ್ ರಾಜ್ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಆದರೆ ಸ್ಮಾರ್ಟ್ ವಾಚ್ (Smartwatch) ನಂಬಿ ಅವರು ತಪ್ಪು ಮಾಡಿದರು ಎನ್ನಲಾಗಿದೆ.

ಎದೆ ನೋವು ಕಾಣಿಸಿಕೊಂಡಿದ್ದರಿಂದ ತಮ್ಮ ಹೃದಯಬಡಿತ ಹೇಗಿದೆ ಎಂಬುದನ್ನು ಸ್ಮಾರ್ಟ್ ವಾಚ್ ಮೂಲಕ ದಿಲೀಪ್ ರಾಜ್ ಅವರು ನೋಡಿಕೊಂಡಿದ್ದರು. ಅದರಲ್ಲಿ ಎಲ್ಲವೂ ನಾರ್ಮಲ್ ಎಂದು ತೋರಿಸಿದ್ದರಿಂದ ಅವರು ಸುಮ್ಮನಾಗಿದ್ದಾರೆ. ಮೇ 13ರ ಬೆಳಗ್ಗೆ ವೈದ್ಯರ ಅಪಾಯಿಂಟ್​ಮೆಂಟ್ ತೆಗೆದುಕೊಂಡಿದ್ದರು. ಆದರೆ ಚೆಕಪ್ ಮಾಡಿಸುವುದರೊಳಗೆ ಅವರಿಗೆ ತೀವ್ರ ಹೃದಯಾಘಾತ ಆಯಿತು.

ದಿಲೀಪ್ ರಾಜ್ ಅವರು ಹಾರ್ಟ್ ಬೀಟ್ ಸರಿಯಾಗಿದೆ ಎಂದು ಸ್ಮಾರ್ಟ್ ವಾಚ್ ತೋರಿಸಿದ್ದನ್ನು ನಂಬಿಕೊಂಡು ಸುಮ್ಮನಾಗುವ ಬದಲು, ರಾತ್ರಿಯೇ ವೈದ್ಯರ ಬಳಿ ಹೋಗಿದ್ದರೆ ಅವರು ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತಿತ್ತು. ಆದರೆ ಅವರು ನಿರ್ಲಕ್ಷ್ಯ ಮಾಡಿದರು. ಅದು ಅವರ ಪ್ರಾಣಕ್ಕೆ ಮುಳುವಾಯಿತು. ದಿಲೀಪ್ ರಾಜ್ ಅಗಲಿಕೆಯಿಂದ ಅವರ ಕುಟುಂಬಕ್ಕೆ ತೀವ್ರ ನೋವಾಗಿದೆ.

ಆರೋಗ್ಯದ ಕಾಳಜಿ ಇರುವ ಅನೇಕರು ಸ್ಮಾರ್ಟ್ ವಾಚ್ ಬಳಸುತ್ತಾರೆ. ಹೃದಯ ಬಡಿತ, ರಕ್ತದಲ್ಲಿನ ಆಮ್ಲಜನಕ ಮಟ್ಟ, ನಿದ್ರೆಯ ಅವಧಿ, ದೈಹಿಕ ಚುಟುವಟಿಕೆಗಳ ಲೆಕ್ಕ, ದೇಹದ ಉಷ್ಣಾಂಶ ಸೇರಿದಂತೆ ಹಲವು ಬಗೆಯ ಮಾಹಿತಿಯನ್ನು ಸ್ಮಾರ್ಟ್ ವಾಚ್​ಗಳು ನೀಡುತ್ತವೆ. ಆದರೆ ಅವುಗಳು ತೋರಿಸುವ ಮಾಹಿತಿಯನ್ನು ಎಷ್ಟರಮಟ್ಟಿಗೆ ನಂಬಬೇಕು ಎಂಬ ಚರ್ಚೆ ಈಗ ಜೋರಾಗಿದೆ.

ಇದನ್ನೂ ಓದಿ: ‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್

ಕಿರುತೆರೆ ಮತ್ತು ಸಿನಿಮಾಗಳಲ್ಲಿ ದಿಲೀಪ್ ರಾಜ್ ಅವರು ಫೇಮಸ್ ಆಗಿದ್ದರು. ನಟನೆ ಮಾತ್ರವಲ್ಲದೇ ಡಬ್ಬಿಂಗ್ ಕಲಾವಿದನಾಗಿ, ಧಾರಾವಾಹಿ ನಿರ್ಮಾಪಕನಾಗಿ ಅವರು ಗುರುತಿಸಿಕೊಂಡಿದ್ದರು. ಚಿತ್ರರಂಗದಲ್ಲಿ ಸಾಧನೆ ಮಾಡಬೇಕು ಎಂಬ ಅಪಾರ ಕನಸು ಕಟ್ಟಿಕೊಂಡಿದ್ದ ಅವರು ಈಗ ಬಾರದ ಲೋಕಕ್ಕೆ ತೆರಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್ಸ್ ಮಾದರಿಯಲ್ಲಿ ಬಾಂಡ್ ವಿತರಕರ ಜಾಲ ಬೆಳೆಸಲು ಸೆಬಿ ಸಜ್ಜು – Kannada News | SEBI Plans Bond Distributor Model to Boost Retail Investment in Debt Market

ಮುಂಬೈ, ಮೇ 14: ಷೇರು ಮಾರುಕಟ್ಟೆಯಂತೆ ಬಾಂಡ್ (ಸಾಲಪತ್ರ) ಮಾರುಕಟ್ಟೆಯಲ್ಲೂ ಸಾಮಾನ್ಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೂಡಿಕೆ ಮಾಡುವಂತೆ ಉತ್ತೇಜಿಸಲು ಸೆಕ್ಯೂರಿಟೀಸ್ ನಿಯಂತ್ರಕ ಸಂಸ್ಥೆಯಾದ ಸೆಬಿ (SEBI) ಮಹತ್ವದ ಕ್ರಮಕ್ಕೆ ಮುಂದಾಗಿದೆ. ಮ್ಯೂಚುವಲ್ ಫಂಡ್ ವಿತರಕರ ಮಾದರಿಯಲ್ಲೇ ‘ಬಾಂಡ್ ವಿತರಕರಿಗಾಗಿ’ (Bond Distributors) ಪ್ರತ್ಯೇಕ ವಿಭಾಗವೊಂದನ್ನು ಸೃಷ್ಟಿಸಲು ಸೆಬಿ ಯೋಜಿಸುತ್ತಿದೆ.

ಮುಂಬೈನಲ್ಲಿ ನಡೆದ ಎಫ್​ಐಸಿಸಿಐ (FICCI) ಹಣಕಾಸು ಉತ್ಪನ್ನಗಳ ವಿತರಣಾ ಶೃಂಗಸಭೆಯಲ್ಲಿ ಮಾತನಾಡಿದ ಸೆಬಿಯ ಪೂರ್ಣಾವಧಿ ಸದಸ್ಯ ಅಮರ್ಜೀತ್ ಸಿಂಗ್, ಈ ಕುರಿತು ಮಾಹಿತಿ ನೀಡಿದರು. ಆ ಪ್ರಕಾರ, ಮ್ಯೂಚುವಲ್ ಫಂಡ್ ವಿತರಕರಂತೆಯೇ, ಈ ಹೊಸ ಬಾಂಡ್ ವಿತರಕರು ಕೂಡ ಸಾಮಾನ್ಯ ಹೂಡಿಕೆದಾರರಿಗೆ ಕೆವೈಸಿ (KYC) ಪ್ರಕ್ರಿಯೆ, ದಾಖಲಾತಿ ಮತ್ತು ವ್ಯವಹಾರಗಳನ್ನು ನಡೆಸಲು ಸಹಾಯ ಮಾಡಲಿದ್ದಾರೆ.

ಪ್ರಸ್ತುತ ಡೆಟ್ ಮಾರ್ಕೆಟ್ ಅಥವಾ ಸಾಲಪತ್ರಗಳ ಮಾರುಕಟ್ಟೆಯಲ್ಲಿ ಸಾಂಸ್ಥಿಕ ಹೂಡಿಕೆದಾರರದ್ದೇ ಮೇಲುಗೈ ಇದೆ. ಸಾಮಾನ್ಯ ಜನರಿಗೆ ಈ ಮಾರುಕಟ್ಟೆಯನ್ನು ತಲುಪುವಂತೆ ಮಾಡುವುದು ಸರ್ಕಾರದ ಗುರಿಯಾಗಿದೆ.

ಇದನ್ನೂ ಓದಿ: ಲಿಥಿಯಂ ಮತ್ತು ವಿರಳ ಭೂಖನಿಜಗಳಿಗೆ ರಷ್ಯಾ ಜೊತೆ ಶೀಘ್ರದಲ್ಲೇ ಭಾರತದ ಮಹತ್ವದ ಒಪ್ಪಂದ

ಇತ್ತೀಚಿನ ವರ್ಷಗಳಲ್ಲಿ ಡೆಟ್ ಆಧಾರಿತ ಮ್ಯೂಚುವಲ್ ಫಂಡ್‌ಗಳ ಮೇಲಿನ ತೆರಿಗೆ ನಿಯಮಗಳು ಬದಲಾಗಿರುವುದರಿಂದ, ಚಿಲ್ಲರೆ ಹೂಡಿಕೆದಾರರು ಈ ಕಡೆಗೆ ಬರಲು ಹಿಂಜರಿಯುತ್ತಿದ್ದಾರೆ. ಇದನ್ನು ಸರಿಪಡಿಸಲು ಸುಲಭ ಹೂಡಿಕೆ ಮಾರ್ಗಗಳನ್ನು ಒದಗಿಸುವುದು ಅತ್ಯಗತ್ಯವಾಗಿದೆ ಎಂದು ಅಮರ್ಜೀತ್ ಸಿಂಗ್ ವಿವರಿಸಿದರು.

ವಿತರಕರ ಪಾತ್ರದ ಬಗ್ಗೆ ಎಚ್ಚರಿಕೆ

ವಿತರಕರ ಸಂಖ್ಯೆ ಹೆಚ್ಚಾದಂತೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ತಪ್ಪು ಮಾಹಿತಿ ಹರಡುವ ಸಾಧ್ಯತೆಯ ಬಗ್ಗೆಯೂ ಅಮರ್ಜೀತ್ ಸಿಂಗ್ ಎಚ್ಚರಿಸಿದ್ದಾರೆ. “ಮಾರುಕಟ್ಟೆಯಲ್ಲಿನ ಹೂಡಿಕೆಯು ಸಾಮಾಜಿಕ ಮಾಧ್ಯಮಗಳ ಟ್ರೆಂಡ್ ಅಥವಾ ಪ್ರಭಾವದಿಂದ ನಡೆಯಬಾರದು. ಬದಲಿಗೆ ಸರಿಯಾದ ಮಾಹಿತಿ ಮತ್ತು ದೀರ್ಘಕಾಲದ ಯೋಜನೆಯ ಆಧಾರದ ಮೇಲೆ ನಡೆಯಬೇಕು” ಎಂದು ಅವರು ತಿಳಿಸಿದರು.

ಅಲ್ಲದೆ, ಹಣಕಾಸು ಉತ್ಪನ್ನಗಳಲ್ಲಿ ಕೃತಕ ಬುದ್ಧಿಮತ್ತೆ (AI) ಬಳಕೆಯ ಬಗ್ಗೆಯೂ ಅವರು ಮಾತನಾಡಿದ್ದು, ಕಂಪನಿಗಳು ತಮ್ಮ ತಾಂತ್ರಿಕ ಸಾಮರ್ಥ್ಯವನ್ನು ಅತಿಶಯೋಕ್ತಿಯಾಗಿ ಬಿಂಬಿಸಬಾರದು (AI Washing) ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಕಲ್ಲಿದ್ದಲು ಅನಿಲೀಕರಣ ಯೋಜನೆಗೆ ಸಂಪುಟದಿಂದ 37,500 ರೂ ಅನುಮೋದನೆ; ಏನಿದರ ಉಪಯೋಗ?

ಮಾರುಕಟ್ಟೆ ಚಿತ್ರಣ ಹೇಗಿದೆ?

ಮಾರ್ಚ್ 2026ರ ವೇಳೆಗೆ ಭಾರತದ ಮ್ಯೂಚುವಲ್ ಫಂಡ್ ಉದ್ಯಮದ ಒಟ್ಟು ಆಸ್ತಿ ಮೌಲ್ಯ 91 ಟ್ರಿಲಿಯನ್ ರೂಪಾಯಿ ತಲುಪಿದೆ. ಅಂದರೆ ಇದರಲ್ಲಿ ಮಾಡಲಾಗಿರುವ ಹೂಡಿಕೆಯ ಮೊತ್ತ ಇಷ್ಟಿದೆ. ಇದರಲ್ಲಿ ಶೇ. 54ರಷ್ಟು ಹೂಡಿಕೆಗಳು ವಿತರಕರ ಮೂಲಕವೇ ನಡೆಯುತ್ತಿವೆ. ಈಗ ಇದೇ ಯಶಸ್ಸನ್ನು ಬಾಂಡ್ ಮಾರುಕಟ್ಟೆಯಲ್ಲೂ ಮರುಕಳಿಸಲು ಸೆಬಿ ಸನ್ನದ್ಧವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸಮುದ್ರದ ನೀರಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ಪಾಲಿಗೆ ದೇವರಾದ ಕ್ರಿಕೆಟ್​​ ಆಡುತ್ತಿದ್ದ ಯುವಕರು – Kannada News | Karwar Youths Heroically Rescue Two Drowning Tourists at Rabindranath Tagore Beach

ಕಾರವಾರ, ಮೇ 14: ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಸ್ಥಳೀಯ ಯುವಕರು ರಕ್ಷಿಸಿದ್ದಾರೆ. ಈಜಲೆಂದು ಸಮುದ್ರಕ್ಕೆ ಇಳಿದಿದ್ದ ಇಬ್ಬರು ಪ್ರವಾಸಿಗರು, ಅಲೆಗಳ ಅಬ್ಬರಕ್ಕೆ ಸಿಲುಕಿ ನೀರಲ್ಲಿ ಮುಳುಗಲು ಪ್ರಾರಂಭಿಸಿದ್ದರು. ಈ ಸಂದರ್ಭದಲ್ಲಿ, ಕಡಲತೀರದಲ್ಲಿ ಕ್ರಿಕೆಟ್ ಆಡುತ್ತಿದ್ದ ಐವರು ಯುವಕರು ಪ್ರವಾಸಿಗರು ಮುಳುಗುತ್ತಿರುವುದನ್ನು ಗಮನಿಸಿ ತಕ್ಷಣ ಅವರ ಸಹಾಯಕ್ಕೆ ಧಾವಿಸಿದ್ದಾರೆ. ಗೌತಮ್ ಬಾನಾವಳಿ, ಸಾಯಿನಾಥ್, ವಿಘ್ನೇಶ್, ಅಮನ್ ಮತ್ತು ಅಜಯ್ ಎಂಬ ಯುವಕರು ಅಪಾಯದಲ್ಲಿದ್ದ ಪ್ರವಾಸಿಗರನ್ನು ಸುರಕ್ಷಿತವಾಗಿ ನೀರಿಂದ ಹೊರ ತರುವಲ್ಲಿ ಯಶಸ್ವಿಯಾಗಿದ್ದಾರೆ. ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು, 25ಕ್ಕೂ ಹೆಚ್ಚು ಮಂದಿಗೆ ಗಾಯ – Kannada News | 3 people dead over 25 injured in Madhya Pradesh Dewas firecracker factory blast

ನವದೆಹಲಿ, ಮೇ 14: ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಭಾರೀ ಸ್ಫೋಟ (Blast) ಸಂಭವಿಸಿದೆ. ದೇವಾಸ್‌ನ ಟೋಂಕ್ ಕಲಾನ್ ಪ್ರದೇಶದಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಉಂಟಾದ ಸ್ಫೋಟದಲ್ಲಿ ಧೀರಜ್, ಸನ್ನಿ ಮತ್ತು ಸುಮಿತ್ ಎಂಬ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ, ಇತರ 25 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 13 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ.

ಸ್ಫೋಟದ ಪರಿಣಾಮದಿಂದ ದೇಹದ ಭಾಗಗಳು 20-25 ಅಡಿ ದೂರದಲ್ಲಿ ಹಾರಿಬಿದ್ದಿವೆ. ಇದರಿಂದ ಅನೇಕ ಕಾರ್ಮಿಕರಿಗೆ ತೀವ್ರವಾದ ಸುಟ್ಟ ಗಾಯಗಳಾಗಿವೆ. ಪಟಾಕಿ ಕಾರ್ಖಾನೆಯಲ್ಲಿ 200ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಸ್ಫೋಟದ ಸಮಯದಲ್ಲಿ 15-25 ಕಾರ್ಮಿಕರು ಘಟಕದೊಳಗೆ ಇದ್ದರು ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಮಗೆ ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಸರ್ಕಾರದ ವಿರುದ್ಧ ಪ್ರಲ್ಹಾದ್​ ಜೋಶಿ ಕಿಡಿ

ಬೆಂಗಳೂರು, ಮೇ 14: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್​​ಗೆ ಮತ್ತೆ ಅವಕಾಶ ನೀಡಿರುವುದಕ್ಕೆ ಬಿಜೆಪಿ ಕೆರಳಿ ಕೆಂಡವಾಗಿದೆ. ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನ ತೀವ್ರವಾಗಿ ಖಂಡಿಸಿದೆ. ಈ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಜಟಾಪಟಿ ಶುರುವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಲ್ಹಾದ್​​​​​ ಜೋಶಿ, ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ನಿಮಗೆ ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ತುಷ್ಠಿಕರಣದ ರಾಜಕಾರಣ ಮಾಡಿರುವವರನ್ನು ಜನರು ಮನೆಗೆ ಕಳುಹಿಸಿದ್ದಾರೆ ಎಂದರು. ದೇಶದಲ್ಲಿ ಈಗಲೂ ಶೇಕಡಾ 80ರಷ್ಟು ಹಿಂದೂಗಳಿದ್ದಾರೆ. ಓಲೈಕೆ ರಾಜಕಾರಣದಿಂದ TMC, DMK ಮನೆಗೆ ಹೋಗಿವೆ. ಕಾಂಗ್ರೆಸ್ ಸ್ಥಿತಿ ಈಗ ಹೇಗಾಗಿದೆ ಎನ್ನುವುದು ಸ್ಪಷ್ಟವಾಗಿದೆ. ಹಿಜಾಬ್ ಧರಿಸುವ ಬಗ್ಗೆ ಪ್ರಕರಣ ಕೋರ್ಟ್​ನಲ್ಲಿದೆ. ಕೂಡಲೇ ನಿಮ್ಮ ಆದೇಶ ಹಿಂಪಡೆಯಿರಿ ಎಂದು ಆಗ್ರಹಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Source link

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು, ಎದುರಾದ ಆತಂಕವೇನು?

ಬೆಂಗಳೂರು, (ಮೇ 14): ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ಮಹಾನಗರ ಪಾಲಿಕೆಗಳ ಚುನಾವಣೆಗೆ ಮತ್ತಷ್ಟು ವಿಳಂಬ ಆಗುವ ಸಾಧ್ಯತೆ ದಟ್ಟವಾಗಿದೆ. ಚುನಾವಣೆ ಮುಂದೂಡಿಕೆಗೆ ಸಕಾರಣಗಳೊಂದಿಗೆ ಸುಪ್ರೀಂ ಕೋರ್ಟ್‌ ಮೊರೆ ಹೋಗಲು ರಾಜ್ಯ ಸರ್ಕಾರ ತಯಾರಿ ಮಾಡಿಕೊಂಡಿದೆ. ಇದರ ನಡುವೆ ಇದೀಗ ಕರ್ನಾಟಕದಲ್ಲೂ ಸಹ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಗೆ ದಿನಾಂಕ ನಿಗದಿಯಾಗಿದೆ. ಹೀಗಾಗಿ ಜಿಬಿಎ ಚುನಾವಣೆಗೆ ಎಸ್​ಐಆರ್​ ಅಡ್ಡಿಯಾಗುವ ಆತಂಕ ಎದುರಾಗಿದೆ.

SIR ಪ್ರಕ್ರಿಯೆಗೆ ಹೆಚ್ಚಿನ ಆಡಳಿತ ಸಿಬ್ಬಂದಿ, ಅಧಿಕಾರಿಗಳ ಬಳಕೆ ಮಾಡಲಾಗುತ್ತಿದೆ. ಇದರಿಂದ ಜಿಬಿಎ ಚುನಾವಣೆಗೆ ಸಿಬ್ಬಂದಿ ವರ್ಗದ ಕೊರತೆ ಎದುರಾಗುವ ಸಾಧ್ಯೆಗಳಿವೆ. ಈ ಹಿನ್ನೆಲೆಯಲ್ಲಿ ಜಿಬಿಎ ಚುನಾವಣೆ ಮುಂದೂಡಿಕೆಗೆ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗದಿಂದಲೇ ಕೋರ್ಟ್​ಗೆ ಮನವರಿಕೆ ಮಾಡಿಕೊಡುವ ಸಾಧ್ಯತೆಗಳಿವೆ.

ಇದನ್ನೂ ಓದಿ: Karnataka SIR: ಕರ್ನಾಟಕದಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ: ಎಂದಿನಿಂದ? ಹೇಗೆಲ್ಲಾ ನಡೆಯುತ್ತೆ? ಇಲ್ಲಿದೆ ವಿವರ

Source link

Exit mobile version