ನಿಮಗೆ ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಸರ್ಕಾರದ ವಿರುದ್ಧ ಪ್ರಲ್ಹಾದ್​ ಜೋಶಿ ಕಿಡಿ

ಬೆಂಗಳೂರು, ಮೇ 14: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್​​ಗೆ ಮತ್ತೆ ಅವಕಾಶ ನೀಡಿರುವುದಕ್ಕೆ ಬಿಜೆಪಿ ಕೆರಳಿ ಕೆಂಡವಾಗಿದೆ. ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನ ತೀವ್ರವಾಗಿ ಖಂಡಿಸಿದೆ. ಈ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಜಟಾಪಟಿ ಶುರುವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಲ್ಹಾದ್​​​​​ ಜೋಶಿ, ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ನಿಮಗೆ ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ತುಷ್ಠಿಕರಣದ ರಾಜಕಾರಣ ಮಾಡಿರುವವರನ್ನು ಜನರು ಮನೆಗೆ ಕಳುಹಿಸಿದ್ದಾರೆ ಎಂದರು. ದೇಶದಲ್ಲಿ ಈಗಲೂ ಶೇಕಡಾ 80ರಷ್ಟು ಹಿಂದೂಗಳಿದ್ದಾರೆ. ಓಲೈಕೆ ರಾಜಕಾರಣದಿಂದ TMC, DMK ಮನೆಗೆ ಹೋಗಿವೆ. ಕಾಂಗ್ರೆಸ್ ಸ್ಥಿತಿ ಈಗ ಹೇಗಾಗಿದೆ ಎನ್ನುವುದು ಸ್ಪಷ್ಟವಾಗಿದೆ. ಹಿಜಾಬ್ ಧರಿಸುವ ಬಗ್ಗೆ ಪ್ರಕರಣ ಕೋರ್ಟ್​ನಲ್ಲಿದೆ. ಕೂಡಲೇ ನಿಮ್ಮ ಆದೇಶ ಹಿಂಪಡೆಯಿರಿ ಎಂದು ಆಗ್ರಹಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Source link

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು, ಎದುರಾದ ಆತಂಕವೇನು?

ಬೆಂಗಳೂರು, (ಮೇ 14): ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ಮಹಾನಗರ ಪಾಲಿಕೆಗಳ ಚುನಾವಣೆಗೆ ಮತ್ತಷ್ಟು ವಿಳಂಬ ಆಗುವ ಸಾಧ್ಯತೆ ದಟ್ಟವಾಗಿದೆ. ಚುನಾವಣೆ ಮುಂದೂಡಿಕೆಗೆ ಸಕಾರಣಗಳೊಂದಿಗೆ ಸುಪ್ರೀಂ ಕೋರ್ಟ್‌ ಮೊರೆ ಹೋಗಲು ರಾಜ್ಯ ಸರ್ಕಾರ ತಯಾರಿ ಮಾಡಿಕೊಂಡಿದೆ. ಇದರ ನಡುವೆ ಇದೀಗ ಕರ್ನಾಟಕದಲ್ಲೂ ಸಹ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಗೆ ದಿನಾಂಕ ನಿಗದಿಯಾಗಿದೆ. ಹೀಗಾಗಿ ಜಿಬಿಎ ಚುನಾವಣೆಗೆ ಎಸ್​ಐಆರ್​ ಅಡ್ಡಿಯಾಗುವ ಆತಂಕ ಎದುರಾಗಿದೆ.

SIR ಪ್ರಕ್ರಿಯೆಗೆ ಹೆಚ್ಚಿನ ಆಡಳಿತ ಸಿಬ್ಬಂದಿ, ಅಧಿಕಾರಿಗಳ ಬಳಕೆ ಮಾಡಲಾಗುತ್ತಿದೆ. ಇದರಿಂದ ಜಿಬಿಎ ಚುನಾವಣೆಗೆ ಸಿಬ್ಬಂದಿ ವರ್ಗದ ಕೊರತೆ ಎದುರಾಗುವ ಸಾಧ್ಯೆಗಳಿವೆ. ಈ ಹಿನ್ನೆಲೆಯಲ್ಲಿ ಜಿಬಿಎ ಚುನಾವಣೆ ಮುಂದೂಡಿಕೆಗೆ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗದಿಂದಲೇ ಕೋರ್ಟ್​ಗೆ ಮನವರಿಕೆ ಮಾಡಿಕೊಡುವ ಸಾಧ್ಯತೆಗಳಿವೆ.

ಇದನ್ನೂ ಓದಿ: Karnataka SIR: ಕರ್ನಾಟಕದಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ: ಎಂದಿನಿಂದ? ಹೇಗೆಲ್ಲಾ ನಡೆಯುತ್ತೆ? ಇಲ್ಲಿದೆ ವಿವರ

Source link

ಲಿಥಿಯಂ ಮತ್ತು ವಿರಳ ಭೂಖನಿಜಗಳಿಗೆ ರಷ್ಯಾ ಜೊತೆ ಶೀಘ್ರದಲ್ಲೇ ಭಾರತದ ಮಹತ್ವದ ಒಪ್ಪಂದ – Kannada News | India to Secure Critical Minerals: Russia Partnership for Lithium & Rare Earths Supply

ನವದೆಹಲಿ, ಮೇ 14: ಭಾರತ ಮತ್ತು ರಷ್ಯಾ ದೇಶಗಳು ‘ಪ್ರಮುಖ ಖನಿಜಗಳ’ (Critical Minerals) ಪೂರೈಕೆ ಮತ್ತು ತಂತ್ರಜ್ಞಾನ ಹಂಚಿಕೆಗೆ ಸಂಬಂಧಿಸಿದಂತೆ ಮಹತ್ವದ ಪ್ರಾಥಮಿಕ ಒಪ್ಪಂದಕ್ಕೆ ಸಹಿ ಹಾಕಲು ಸಜ್ಜಾಗಿವೆ. ಇಂಧನ ಪರಿವರ್ತನೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಅತ್ಯಗತ್ಯವಾಗಿರುವ ಲಿಥಿಯಂ ಮತ್ತು ಅಪರೂಪದ ಭೂ ಖನಿಜಗಳ (Rare Earth Elements) ಪೂರೈಕೆಯನ್ನು ಖಚಿತಪಡಿಸಿಕೊಳ್ಳುವುದು ಈ ಒಪ್ಪಂದದ ಮುಖ್ಯ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಅಂತಿಮ ಹಂತಗಳ ಮಾತುಕತೆಯಲ್ಲಿರುವ ಈ ಒಪ್ಪಂದವು ಕೇವಲ ಖನಿಜಗಳ ಖರೀದಿಗಷ್ಟೇ ಸೀಮಿತವಾಗಿರದೆ, ಖನಿಜಗಳ ಅನ್ವೇಷಣೆ, ಹೊರತೆಗೆಯುವಿಕೆ ಮತ್ತು ಸುಧಾರಿತ ಸಂಸ್ಕರಣಾ ತಂತ್ರಜ್ಞಾನದಲ್ಲಿ ಸಹಯೋಗವನ್ನು ಒಳಗೊಂಡಿದೆ.

ಲಿಥಿಯಂ ಮತ್ತು ರೇರ್ ಅರ್ಥ್ ವಸ್ತುಳ ಮಹತ್ವ

ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ತಯಾರಿಕೆಗೆ ಲಿಥಿಯಂ ಬೇಕು. ಯುದ್ಧೋಪಕರಣಗಳು ಹಾಗೂ ಎಲೆಕ್ಟ್ರಾನಿಕ್ಸ್, ಸೋಲಾರ್ ಕ್ಷೇತ್ರಕ್ಕೆ ವಿರಳ ಖನಿಜಗಳು ಅಗತ್ಯ ಇದೆ. ಈ ವಸ್ತುಗಳ ಪೂರೈಕೆ ಪಡೆಯಲು ಭಾರತ ಈ ಒಪ್ಪಂದದ ಮೂಲಕ ಪ್ರಯತ್ನಿಸುತ್ತಿದೆ.

ಇದನ್ನೂ ಓದಿ: ಕಲ್ಲಿದ್ದಲು ಅನಿಲೀಕರಣ ಯೋಜನೆಗೆ ಸಂಪುಟದಿಂದ 37,500 ರೂ ಅನುಮೋದನೆ; ಏನಿದರ ಉಪಯೋಗ?

ಭಾರತ ಮತ್ತು ಚೀನಾ, ಉಭಯ ದೇಶಗಳ ಸರ್ಕಾರಗಳು ಖಾಸಗಿ ಮತ್ತು ಸಾರ್ವಜನಿಕ ವಲಯದ ಕಂಪನಿಗಳು ಪರಸ್ಪರರ ಗಣಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹ ನೀಡಲಿವೆ. ಈಗಾಗಲೇ ಭಾರತವು ಒಪ್ಪಂದದ ಕರಡು ಪ್ರತಿಯನ್ನು ರಷ್ಯಾಕ್ಕೆ ಹಂಚಿಕೊಂಡಿದ್ದು, ಮುಂದಿನ ಎರಡು ತಿಂಗಳೊಳಗೆ ಅಧಿಕೃತವಾಗಿ ಸಹಿ ಬೀಳುವ ನಿರೀಕ್ಷೆಯಿದೆ.

ಚೀನಾ ಮೇಲಿನ ಅವಲಂಬನೆ ತಗ್ಗಿಸುವ ಗುರಿ

ಜಾಗತಿಕವಾಗಿ ಪ್ರಮುಖ ಖನಿಜಗಳ ಪೂರೈಕೆ ಮತ್ತು ಸಂಸ್ಕರಣೆಯಲ್ಲಿ ಚೀನಾ ಪ್ರಸ್ತುತ ಪ್ರಾಬಲ್ಯ ಸಾಧಿಸಿದೆ. ಭಾರತವು ತನ್ನ ಇಂಧನ ಅಗತ್ಯಗಳಿಗಾಗಿ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಈ ಕಾರ್ಯತಂತ್ರದ ಹೆಜ್ಜೆ ಇರಿಸಿದೆ. ಈಗಾಗಲೇ ಅರ್ಜೆಂಟೀನಾ, ಆಸ್ಟ್ರೇಲಿಯಾ ಮತ್ತು ಜಪಾನ್‌ನೊಂದಿಗೆ ಭಾರತ ಇಂತಹ ಒಪ್ಪಂದಗಳನ್ನು ಮಾಡಿಕೊಂಡಿದ್ದು, ಈಗ ರಷ್ಯಾ ಈ ಪಟ್ಟಿಗೆ ಸೇರುತ್ತಿದೆ.

ರಷ್ಯಾದಲ್ಲಿನ ಖನಿಜ ಸಂಪತ್ತು ಮತ್ತು ಭಾರತದ ಆಸಕ್ತಿ

ರಷ್ಯಾವು ವಿಶ್ವದ ಅತಿದೊಡ್ಡ ಖನಿಜ ಸಂಪನ್ಮೂಲಗಳನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ರಷ್ಯಾದ ನೈಸರ್ಗಿಕ ಸಂಪನ್ಮೂಲ ಸಚಿವಾಲಯದ ಪ್ರಕಾರ, ಅಲ್ಲಿ ಸುಮಾರು 2.85 ಕೋಟಿ ಮೆಟ್ರಿಕ್ ಟನ್ ಅಪರೂಪದ ಖನಿಜಗಳ ನಿಕ್ಷೇಪವಿದೆ. ರಷ್ಯಾದ ಸರ್ಕಾರಿ ಸ್ವಾಮ್ಯದ ಪರಮಾಣು ಸಂಸ್ಥೆ ‘ರೋಸಾಟಮ್’ (Rosatom) ಜೊತೆಗೆ ತಂತ್ರಜ್ಞಾನ ಸಹಯೋಗ ಪಡೆಯಲು ಭಾರತ ಉತ್ಸುಕವಾಗಿದೆ.

ಇದನ್ನೂ ಓದಿ: ಇಂಧನ ಕಡಿಮೆ ಬಳಸಿ ಎನ್ನುತ್ತಿರೋದು ಮೋದಿ ಮಾತ್ರವಲ್ಲ, ವಿವಿಧ ದೇಶಗಳು ಜಾರಿಗೊಳಿಸಿರುವ ಸಂಗತಿಗಳೇ

2023 ರಲ್ಲಿ ಭಾರತ ಸರ್ಕಾರವು ಲಿಥಿಯಂ ಸೇರಿದಂತೆ 20 ಕ್ಕೂ ಹೆಚ್ಚು ಖನಿಜಗಳನ್ನು ದೇಶದ ಆರ್ಥಿಕ ಭದ್ರತೆ ಮತ್ತು ಇಂಧನ ಪರಿವರ್ತನೆಗೆ ‘ಅತ್ಯಗತ್ಯ’ ಎಂದು ಗುರುತಿಸಿತ್ತು. ಮಾಲಿ (Mali) ದೇಶದಲ್ಲಿ ರಷ್ಯಾದ ಕಂಪನಿ ಕೈಗೊಂಡಿದ್ದ ಲಿಥಿಯಂ ಯೋಜನೆಯಿಂದ ಹಿಂದೆ ಸರಿದಿದ್ದ ಭಾರತ, ಈಗ ರಷ್ಯಾ ಜೊತೆಗಿನ ಈ ನೇರ ಒಪ್ಪಂದದ ಮೂಲಕ ಮತ್ತೆ ಆ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಿಡುಗಡೆ ಆಗಲಿಲ್ಲ ‘ಕರುಪ್ಪು’ ಸಿನಿಮಾ, ಕಣ್ಣೀರು ಹಾಕಿದ ನಿರ್ದೇಶಕ ಬಾಲಾಜಿ – Kannada News | Suriya’s Karuppu movie release cancel director cried and asked apology

ಸೂರ್ಯ (Suriya), ತ್ರಿಷಾ ಕೃಷ್ಣನ್ (Trisha Krishnan) ನಟನೆಯ ಬಹುನಿರೀಕ್ಷಿತ ‘ಕರುಪ್ಪು’ ಸಿನಿಮಾ ಇಂದು (ಮೇ 14) ಬಿಡುಗಡೆ ಆಗಬೇಕಿತ್ತು. ಸೂರ್ಯ ಅಭಿಮಾನಿಗಳು ಮುಂಗಡವಾಗಿ ಟಿಕೆಟ್ ಖರೀದಿ ಮಾಡಿ ಸಿನಿಮಾ ನೋಡಲು ಕಾದಿದ್ದರು, ಆದರೆ ಸಿನಿಮಾ ಬಿಡುಗಡೆ ಆಗಲಿಲ್ಲ. ಆರ್ಥಿಕ ಸಂಕಷ್ಟದ ಕಾರಣದಿಂದಾಗಿ ಸಿನಿಮಾ ಬಿಡುಗಡೆ ವಿಳಂಬ ಆಗಿದೆ. ಚಿತ್ರತಂಡವು ಬೆಳಿಗ್ಗೆ 9 ಗಂಟೆಯ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿತ್ತು. ಮತ್ತು ಉಳಿದ ಪ್ರದರ್ಶನಗಳು ನಿಗದಿತ ಸಮಯಕ್ಕೆ ನಡೆಯಲಿವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಬಳಿಕ ಮಧ್ಯಾಹ್ನದ ಪ್ರದರ್ಶನಗಳು ಕೂಡ ರದ್ದಾದವು. ಇದು ಅಭಿಮಾನಿಗಳನ್ನು ಕೆರಳಿಸಿತು, ಚಿತ್ರತಂಡದ ವಿರುದ್ಧ ಟೀಕೆ ಸಹ ವ್ಯಕ್ತವಾಯ್ತು. ಇದೀಗ ಸಿನಿಮಾದ ನಿರ್ದೇಶಕ ಆರ್​​ಜೆ ಬಾಲಾಜಿ ಸಿನಿಮಾ ಪ್ರೇಮಿಗಳಲ್ಲಿ ಕ್ಷಮೆ ಕೇಳಿದ ಜೊತೆಗೆ ಕಣ್ಣೀರು ಹಾಕಿದ್ದಾರೆ.

ಆರ್​​ಜೆ ಬಾಲಾಜಿ, ಕಾರಿನಲ್ಲಿ ಕುಳಿತು ವಿಡಿಯೋ ಒಂದನ್ನು ಮಾಡಿದ್ದಾರೆ, ವಿಡಿಯೋನಲ್ಲಿ ಮಾತನಾಡುತ್ತಾ, ‘ನಾನು ನನ್ನ ಕಾರಿನಿಂದ ನಿಮಗೆ ಮತ್ತೊಂದು ಅಪ್‌ಡೇಟ್ ನೀಡುತ್ತಿದ್ದೇನೆ. ಇದು ಕೊನೆಯ ಅಪ್‌ಡೇಟ್ ಆಗಿರಲಿ ಎಂದು ಆಶಿಸುತ್ತೇನೆ. ಎಲ್ಲಾ ಅಭಿಮಾನಿಗಳಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಹೀಗಾಗಬಾರದಿತ್ತು. ತಮಿಳುನಾಡು, ಆಂಧ್ರಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಬೆಳಿಗ್ಗೆ 9 ಗಂಟೆಗೆ ಸಿನಿಮಾ ನೋಡಲು ನೀವು ದೂರದ ಊರುಗಳಿಂದ ಚಿತ್ರಮಂದಿರಗಳಿಗೆ ಬಂದಿರುತ್ತೀರಿ. ಇದು ನಡೆಯಬಾರದಿತ್ತು, ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ’ ಎಂದು ಹೇಳಿದ್ದಾರೆ.

ಮಾತು ಮುಂದುವರಿಸುತ್ತಾ ಭಾವುಕರಾದ ಅವರು, ‘ಜನರು ತಮ್ಮ ಜೀವನದ ಚಿಂತೆಗಳನ್ನು ಮರೆಯಲು ಸಿನಿಮಾ ನೋಡುತ್ತಾರೆ. ಸಿನಿಮಾ ನೋಡಲು ಸಾಧ್ಯವಾಗದ ಕಾರಣ ಮನನೊಂದಿರುವ ಎಲ್ಲರಿಗೂ ನಾನು ಕ್ಷಮೆಯಾಚಿಸುತ್ತೇನೆ. ನಾನು ಕೂಡ ಇದನ್ನು ನಿರೀಕ್ಷಿಸಿರಲಿಲ್ಲ. ‘ಕರುಪ್ಪು’ ಸಿನಿಮಾ ಮೇ 14 ರಂದು ಬಿಡುಗಡೆಯಾಗಿ ಬ್ಲಾಕ್‌ಬಸ್ಟರ್ ಆಗುತ್ತದೆ ಎಂದು ನಾನು ನಂಬಿದ್ದೆ. ನನಗೆ ಈಗಲೂ ಭರವಸೆ ಇದೆ. ನನಗೆ ನೋವಾಗುತ್ತಿದೆ, ಅದಕ್ಕೇ ಕಣ್ಣೀರು ಬರುತ್ತಿದೆ. ಇಂದು ಸಂಜೆ 6 ಗಂಟೆಗೆ ಚಿತ್ರವನ್ನು ಬಿಡುಗಡೆ ಮಾಡಲು ಎಲ್ಲರೂ ಶ್ರಮಿಸುತ್ತಿದ್ದಾರೆ’ ಎಂದಿದ್ದಾರೆ. ಈ ವೇಳೆ ಬಾಲಾಜಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ:ವಿಶೇಷ ದಿನದ ಸೀರೆಗೆ ‘ಪ್ರೀತಿ’ಯ ಕ್ಯಾಪ್ಶನ್ ಕೊಟ್ಟ ತ್ರಿಷಾ ಕೃಷ್ಣನ್

ಬಾಲಾಜಿ ಈ ಪೋಸ್ಟ್ ಹಾಕಿದ ಬೆನ್ನಲ್ಲೇ ನಟ ದುಲ್ಕರ್ ಸಲ್ಮಾನ್ ಬೆಂಬಲ ಸೂಚಿಸಿದ್ದು, ‘ಎಲ್ಲವೂ ಒಳ್ಳೆಯದೇ ಆಗುತ್ತದೆ ಸಹೋದರ, ಯಾವಾಗಲೂ ನಿಮ್ಮೊಂದಿಗೆ ಇರುತ್ತೇನೆ’ ಎಂದು ಕಾಮೆಂಟ್ ಮಾಡಿದ್ದಾರೆ. ದುಲ್ಕರ್ ಸಲ್ಮಾನ್ ಮಾತ್ರವೇ ಅಲ್ಲದೆ ಇನ್ನೂ ಹಲವರು ಬಾಲಾಜಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಿನಿಮಾ ನಿರ್ದೇಶಿಸಿರುವ ಬಾಲಾಜಿ ಸ್ವತಃ ತಮಿಳಿನ ಜನಪ್ರಿಯ ಹಾಸ್ಯ ನಟರಾಗಿದ್ದು, ಬಹಳ ಕಷ್ಟಪಟ್ಟು ಸಿನಿಮಾಗಳಿಗೆ ಬಂದವರು. ಹಾಗಾಗಿ ಅವರಿಗೆ ಸಾಕಷ್ಟು ಬೆಂಬಲ, ಸಿಂಪತಿ ಸಹ ದೊರೆತಿದೆ.

ಭಾರಿ ಪ್ರಮಾಣದ ಅಡ್ವಾನ್ಸ್ ಬುಕಿಂಗ್ ಆಗಿದ್ದರೂ ಸಹ, ಚಿತ್ರದ ಹಣಕಾಸುದಾರರು ಮತ್ತು ನಿರ್ಮಾಣ ಸಂಸ್ಥೆಯ ನಡುವಿನ ಬಗೆಹರಿಯದ ಆರ್ಥಿಕ ವಿವಾದದ ಕಾರಣದಿಂದಾಗಿ ಭಾರತ ಮತ್ತು ವಿದೇಶಗಳ ಅನೇಕ ಚಿತ್ರಮಂದಿರಗಳಲ್ಲಿ ಪ್ರದರ್ಶನಗಳನ್ನು ನಿಲ್ಲಿಸಲು ಒತ್ತಾಯಿಸಲಾಯಿತು. ವರದಿಗಳ ಪ್ರಕಾರ, ನಿರ್ಮಾಣ ಸಂಸ್ಥೆಯು 50 ಕೋಟಿಗೂ ಹೆಚ್ಚು ಸಾಲವನ್ನು ಹೊಂದಿದ್ದು, ಇದರಿಂದ ಉಂಟಾದ ಹಣಕಾಸಿನ ಬಿಕ್ಕಟ್ಟಿನ ಕಾರಣ ಚಿತ್ರಮಂದಿರ ಮಾಲೀಕರು ಬುಕಿಂಗ್ ನಿಲ್ಲಿಸಿ ಪ್ರೀಮಿಯರ್ ಶೋಗಳನ್ನು ರದ್ದುಗೊಳಿಸಿದ್ದಾರೆ. ಸದ್ಯ ಚಿತ್ರತಂಡವು ಈ ಸಮಸ್ಯೆಯನ್ನು ಬಗೆಹರಿಸಿ ಭಾರತ ಮತ್ತು ಅಮೆರಿಕದಾದ್ಯಂತ ಇಂದು ಸಂಜೆ 6 ಗಂಟೆಯ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 5:40 pm, Thu, 14 May 26

Source link

ಇರಾನ್​ ನಟಿಗೆ ಮೆಸೇಜ್ ಮಾಡಿದ್ದಕ್ಕೆ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್​ಗೆ ಹೆಂಡತಿಯಿಂದ ಕಪಾಳಮೋಕ್ಷ! ಹಳೆಯ ವಿಡಿಯೋ ವೈರಲ್ – Kannada News | French president Macrons Wife Slapped him Over Flirty message With Iranian Actor Old Video Viral

ಪ್ಯಾರಿಸ್, ಮೇ 14: ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಕಳೆದ ವರ್ಷ ಹೆಂಡತಿಯ ಜೊತೆಗಿನ ವಿದೇಶ ಪ್ರವಾಸದ ಸಮಯದಲ್ಲಿ ಮುಜುಗರಕ್ಕೀಡಾಗಿದ್ದರು. ವಿಮಾನದಿಂದ ಇಳಿಯುವಾಗಲೇ ಮ್ಯಾಕ್ರನ್ (Emmanuel Macron) ಅವರ ಪತ್ನಿ ಬ್ರಿಗಿಟ್ಟೆ ಮ್ಯಾಕ್ರನ್ ತನ್ನ ಗಂಡನಿಗೆ ಕಪಾಳಮೋಕ್ಷ ಮಾಡಿದ್ದರು. ಅದಕ್ಕೆ ಕಾರಣವೇನೆಂಬುದು ಬಯಲಾಗಿದೆ. ಬಿಡುಗಡೆಯಾಗಿರುವ ಹೊಸ ಪುಸ್ತಕದ ಪ್ರಕಾರ, ಫ್ರೆಂಚ್ ಅಧ್ಯಕ್ಷ ಮತ್ತು ಇರಾನ್ ಮೂಲದ ನಟಿ ಗೋಲ್‌ಶಿಫ್ಟೆಹ್ ಫರಹಾನಿ ನಡುವೆ ನಡೆದ ಚಾಟ್ ಅನ್ನು ನೋಡಿದ್ದ ಫ್ರೆಂಚ್ ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರನ್ ಕಳೆದ ವರ್ಷ ವಿದೇಶಿ ಪ್ರವಾಸದ ಸಮಯದಲ್ಲಿ ವಿಮಾನದಿಂದ ಇಳಿಯುವಾಗ ಪತಿ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ತಳ್ಳಿ ಕೆನ್ನೆಗೆ ಹೊಡೆದಿದ್ದರು.

ಕಳೆದ ವರ್ಷ ದಂಪತಿಯ ವಿಯೆಟ್ನಾಂ ಭೇಟಿಯ ಸಂದರ್ಭದಲ್ಲಿ ನಡೆದ ಘಟನೆಯು ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿತು. ಇದು ದಂಪತಿಗಳ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಊಹಾಪೋಹಗಳಿಗೆ ಕಾರಣವಾಯಿತು. ಆದರೆ, ತಮಾಷೆಯಿಂದ ಆ ರೀತಿ ಮಾಡಿದ್ದು ಎಂದು ಮ್ಯಾಕ್ರನ್ ದಂಪತಿ ಆ ವದಂತಿಗೆ ತೆರೆ ಎಳೆದಿದ್ದರು. ಇದೀಗ ಆ ಹಳೆಯ ವಿಡಿಯೋ ಮತ್ತೆ ಚರ್ಚೆಗೆ ಬಂದಿದೆ.

Macron With Iran Actress

ಫ್ರೆಂಚ್ ಪತ್ರಕರ್ತರಾದ ಫ್ಲೋರಿಯನ್ ಟರ್ಡಿಫ್ ಅವರ “ಪರ್ಫೆಕ್ಟ್ ಕಪಲ್ (ಪರಿಪೂರ್ಣ ಜೋಡಿ)” ಎಂಬ ಹೊಸ ಪುಸ್ತಕದಲ್ಲಿ ಈ ಬಗ್ಗೆ ಬರೆಯಲಾಗಿದೆ. ಮ್ಯಾಕ್ರನ್ ಮತ್ತು ಇರಾನ್ ನಟಿ ಫರಾಹಾನಿ ಹಲವಾರು ತಿಂಗಳಿಂದ ಸಂಪರ್ಕದಲ್ಲಿದ್ದರು. ಅವರಿಗೆ ಫ್ಲರ್ಟಿಂಗ್ ಮೆಸೇಜ್ ಮಾಡುತ್ತಿದ್ದರು. ನೀನು ಬಹಳ ಸುಂದರವಾಗಿದ್ದೀಯ ಎಂದು ಮ್ಯಾಕ್ರನ್ ಚಾಟ್ ಮಾಡಿದ್ದನ್ನು ಅವರ ಪತ್ನಿ ನೋಡಿದ್ದರು. ಇದೇ ಕಾರಣಕ್ಕೆ ಅವರು ಕೋಪದಿಂದ ಗಂಡನಿಗೆ ಕಪಾಳಮೋಕ್ಷ ಮಾಡಿದ್ದರು ಎಂದು ಪುಸ್ತಕದಲ್ಲಿ ಟಾರ್ಡಿಫ್ ಹೇಳಿದ್ದಾರೆ.

ಇದನ್ನೂ ಓದಿ: ಮುಂಬೈನಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್​​ಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ

ಬುಧವಾರ ಬಿಡುಗಡೆಯಾದ ಈ ಪುಸ್ತಕ ಇರಾನ್-ಫ್ರೆಂಚ್ ನಟಿಯ ನಡುವಿನ ಫೋನ್ ಚಾಟ್ ಅನ್ನು ನೋಡಿದ್ದ ಬ್ರಿಗಿಟ್ಟೆ ಕೋಪಗೊಂಡಿದ್ದರು ಎಂದು ತಿಳಿಸಲಾಗಿದೆ. ಒಂದು ಮೆಸೇಜ್​ನಲ್ಲಿ ಫರಾಹಾನಿ ಮ್ಯಾಕ್ರನ್‌ಗೆ “ನೀವು ಬಹಳ ಹ್ಯಾಂಡ್ಸಮ್ ಆಗಿದ್ದೀರಿ” ಎಂದು ಹೇಳಿದ್ದರು. ಮ್ಯಾಕ್ರನ್ ಕೂಡ ಫರಹಾನಿಗೆ “ನೀವು ತುಂಬಾ ಸುಂದರವಾಗಿದ್ದೀರಿ” ಎಂದು ಹೇಳಿದ್ದರು. ಇದೇ ಅವರಿಬ್ಬರ ನಡುವೆ ಮುನಿಸಿಗೆ ಕಾರಣವಾಗಿತ್ತು.

ಕಳೆದ ವರ್ಷ ಮೇ ತಿಂಗಳಲ್ಲಿ ವಿಯೆಟ್ನಾಂನ ಹನೋಯ್‌ನಲ್ಲಿ ದಂಪತಿ ತಮ್ಮ ವಿಮಾನವನ್ನು ಇಳಿಯಲು ಸಿದ್ಧರಾಗುವ ಮೊದಲು ಬ್ರಿಗಿಟ್ಟೆ ತನ್ನ ಪತಿಯ ಫೋನ್‌ನಲ್ಲಿ ಫರಾಹಾನಿಯಿಂದ ಸಂದೇಶವನ್ನು ಓದಿದ್ದರು. ಇದೇ ಕಾರಣಕ್ಕೆ ಕೋಪಗೊಂಡ ಅವರು ವಿಮಾನದಿಂದ ಇಳಿಯುವ ಮೊದಲು ಗಂಡನ ಕೆನ್ನೆಗೆ ಹೊಡೆದಿದ್ದರು. ಕೊನೆಗೆ ಇಬ್ಬರೂ ಒಳಗೆ ಹೋಗಿ ಸ್ವಲ್ಪ ಸಮಯದ ಬಳಿಕ ನಗುತ್ತಾ ಮಾಧ್ಯಮಗಳಿಗೆ ಕೈ ಬೀಸುತ್ತಾ ವಿಮಾನವನ್ನು ಇಳಿದಿದ್ದರು. ಈ ಘಟನೆಯ ಹಿಂದಿನ ಕಾರಣ ಇದೀಗ ಬಯಲಾದಂತಾಗಿದೆ.

ಇದನ್ನೂ ಓದಿ: ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಜೊತೆ ಪ್ರಧಾನಿ ಮೋದಿ ಮಾತುಕತೆ

ಆದರೆ, ನಟಿ ಫರಾಹಾನಿ ಮ್ಯಾಕ್ರನ್ ಜೊತೆಗಿನ ಸಂಬಂಧದ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಗೋಲ್ಶಿಫ್ತೆಹ್ ಫರಹಾನಿ ಇರಾನ್ ಮತ್ತು ಫ್ರೆಂಚ್ ನಟಿ. ಹಲವಾರು ಪ್ರಸಿದ್ಧ ಚಲನಚಿತ್ರಗಳಲ್ಲಿನ ಅಭಿನಯದ ಮೂಲಕ ಜನಪ್ರಿಯರಾಗಿದ್ದಾರೆ. ಅವರು ಇರಾನ್‌ನಲ್ಲಿ ಇಸ್ಲಾಮಿಸ್ಟ್ ಆಡಳಿತದ ತೀವ್ರ ಟೀಕಾಕಾರರೂ ಆಗಿದ್ದಾರೆ. ಫರಾಹಾನಿ ಮತ್ತು ಮ್ಯಾಕ್ರನ್ ನಡುವಿನ ಆಪ್ತ ಸಂಬಂಧ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕದಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ: ಎಂದಿನಿಂದ? ಹೇಗೆಲ್ಲಾ ನಡೆಯುತ್ತೆ? ಇಲ್ಲಿದೆ ವಿವರ – Kannada News | Karnataka Voter List Revision: Key Dates for Enrollment and Corrections

ಬೆಂಗಳೂರು, ಮೇ 14: ಚುನಾವಣಾ ಆಯೋಗವು ದೇಶದಲ್ಲಿ 3ನೇ ಹಂತದ ಮತದಾರರ ಪಟ್ಟಿ ಪರಿಷ್ಕರಣೆ (SIR) ಘೋಷಿಸಿದ್ದು, ಕರ್ನಾಟಕಕ್ಕೂ ಇದು ಅನ್ವಯವಾಗಲಿದೆ. ಈ ಸಂಬಂಧ ಜೂ.20ರಿಂದ 29ರವರೆಗೆ ಅಧಿಕಾರಿಗಳಿಗೆ ತರಬೇತಿ ಮತ್ತು ಪೂರ್ವ ಸಿದ್ಧತೆ ನಡೆಯಲಿದ್ದು, ಜೂನ್ 30ರಿಂದ ಜುಲೈ 29ರವರೆಗೆ ಮನೆ ಮನೆ ಭೇಟಿ ಮತ್ತು ಸಮೀಕ್ಷೆ ನಡೆಯಲಿದೆ. ಆ ಬಳಿಕ ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟಣೆ ಆಗಲಿದ್ದು, ಆ.5ರಿಂದ ಸೆ.4ರವರೆಗೆ ಆಕ್ಷೇಪಣೆ, ಹೊಸ ಸೇರ್ಪಡೆ, ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 7ರಂದು ಪ್ರಕಟವಾಗಲಿದೆ.

ಯಾಕಾಗಿ ಮತದಾರರ ಪಟ್ಟಿ ಪರಿಷ್ಕರಣೆ?

  • ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು.
  • ಮತದಾರರ ಪಟ್ಟಿಯಲ್ಲಿನ ಹೆಸರು, ವಯಸ್ಸು, ವಿಳಾಸ ಮುಂತಾದ ತಪ್ಪುಗಳನ್ನು ಸರಿಪಡಿಸುವುದು.
  • ಮೃತಪಟ್ಟವರು, ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡವರು ಅಥವಾ ನಕಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವುದು.
  • ಮುಂಬರುವ ಚುನಾವಣೆಗಳಿಗಾಗಿ ಅತ್ಯಂತ ನಿಖರವಾದ ಮತ್ತು ನವೀಕೃತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು.
  • ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಲು ಮತ್ತು ಅಗತ್ಯವಿದ್ದರೆ ಬದಲಾವಣೆ ಮಾಡಲು ಅವಕಾಶ ನೀಡುವುದು

ಇದನ್ನೂ ಓದಿ: ಮೇ 30ರಿಂದ 3ನೇ ಹಂತದ SIR; ಕರ್ನಾಟಕ ಸೇರಿ 16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ

2025ರ ಅಪಡೇಟ್ ಪ್ರಕಾರ ರಾಜ್ಯದಲ್ಲಿ ಒಟ್ಟು 5 ಕೋಟಿ 57ಲಕ್ಷದ 36 ಸಾವಿರದ 561 ಮತದಾರರಿದ್ದಾರೆ ಎನ್ನಲಾಗಿದೆ. ಈ ಪೈಕಿ ಮೃತರು, ನಕಲಿ ಮತದಾರರು ಸೇರಿದಂತೆ ಸ್ಥಳಾಂತರಗೊಂಡಿರುವವ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯುವ ಮತ್ತು ಪಟ್ಟಿಯಲ್ಲಿ ಸೇರ್ಪಡೆ ಆಗದವರ ಹೆಸರನ್ನು ಸೇರಿಸುವ ಕಾರ್ಯ ಮತದಾರರ ಪಟ್ಟಿ ಪರಿಷ್ಕರಣೆ (SIR) ವೇಳೆ ನಡೆಯಲಿದೆ,

ಪರಿಷ್ಕರಣೆ ಪ್ರಕ್ರಿಯೆ ಹೇಗೆ?

  • 2025ರ ಮತದಾರರ ಪಟ್ಟಿಯಲ್ಲಿರುವಂತೆ ಮತದಾರರ ವಿವರ, ಗಣತಿ ನಮೂನೆಗಳನ್ನು ದ್ವಿಪ್ರತಿಯಲ್ಲಿ ಮುದ್ರಿಸಿ BLOಗಳಿಗೆ ಹಂಚಿಕೆ
  • BLOಗಳ ಮೂಲಕ ಪ್ರತಿಯೊಂದು ಮತದಾರರ ಮನೆಗೆ ಭೇಟಿ ನೀಡಿ ಮತದಾರರಿಗೆ ವಿತರಿಸಿ ಸ್ವೀಕೃತಿ ಪಡೆಯುವುದು
  • ಮತದಾರರು ತಾವು ಸ್ವೀಕರಿಸಿದ ಗಣತಿ ನಮೂನೆಯಲ್ಲಿನ ತಮ್ಮ ವಿವರಗಳನ್ನು ಪರಿಶೀಲಿಸಿ ಸರಿಯೆಂದು ದೃಢಪಡಿಸಬೇಕು
  • ನಂತರ ಸಹಿ ಮಾಡಿ ಗಣತಿ ನಮೂನೆಗಳನ್ನು BLOರವರಿಗೆ ಮರಳಿಸಬೇಕು, ಈ ಹಂತದಲ್ಲಿ ಮತದಾರರಿಂದ ಯಾವುದೇ ದಾಖಲೆಗಳನ್ನು ಸಂಗ್ರಹಿಸಲಾಗುವುದಿಲ್ಲ.
  • ಗಣತಿ ನಮೂನೆಗಳನ್ನು ಭರ್ತಿ ಮಾಡಿ ಸಹಿ ಮಾಡಿ BLOರವರಿಗೆ ಹಿಂತಿರುಗಿಸಿದ ಎಲ್ಲಾ ಮತದಾರರು ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುತ್ತಾರೆ.
  • ಗಣತಿ ನಮೂನೆ ಹಿಂದಿರುಗಿಸದೇ ಇರುವ ಮತದಾರರ ಕುರಿತು ಆಯೋಗ ಮುಂದಿನ ಕ್ರಮ ಜರುಗಿಸುತ್ತದೆ
  • 2025ರ ಮತದಾರರ ಪಟ್ಟಿಯಲ್ಲಿರುವ ಮತದಾರರು ಗಣತಿ ನಮೂನೆಗಳನ್ನು ಹಿಂದಿರುಗಿಸದೇ ಇರುವವರನ್ನು ಪ್ರತ್ಯೇಕವಾಗಿ ಸಂಭವನೀಯ ಗೈರುಹಾಜರಿದಾರರು , ಸಂಭವನೀಯ ಮೃತರು , ಸಂಭವನೀಯ ನಕಲಿ, ಸಂಭವನೀಯ ಸ್ಥಳಾಂತರಗೊಂಡವರು ಎಂದು ವಿಂಗಡಿಸಲಾಗುತ್ತದೆ.
    ಅಂತಹವರ ಪಟ್ಟಿಯನ್ನು BLOರವರು ತಯಾರಿಸಿ EROರ ವರಿಗೆ ಮುಂದಿನ ಕ್ರಮಕ್ಕೆ ಸಲ್ಲಿಸುತ್ತಾರೆ
  • ಸಂಭವನೀಯ ಗೈರುಹಾಜರಿದಾರರು / ಸಂಭವನೀಯ ಮೃತರು / ಸಂಭವನೀಯ ನಕಲಿ / ಸಂಭವನೀಯ ಸ್ಥಳಾಂತರಗೊಂಡ ಮತದಾರರ ಮತಗಟ್ಟೆವಾರು ಪಟ್ಟಿಗಳನ್ನು, ಸಂಬಂಧಿತ ಮತಗಟ್ಟೆ/ ಗ್ರಾಮ ಪಂಚಾಯತ್ /ನಗರ ಸ್ಥಳೀಯ ಸಂಸ್ಥೆ ಕಚೇರಿಗಳ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಲಾಗುತ್ತದೆ
  • ಇದರಿಂದ ಸಾರ್ವಜನಿಕರಿಗೆ ಹೆಸರು ಸೇರಿಸದಿರುವ ಕಾರಣಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ
  • ಈ ಪಟ್ಟಿಗಳನ್ನು ಕ್ರೋಢೀಕರಿಸಿ ಮುಖ್ಯ ಚುನಾವಣಾಧಿಕಾರಿಗಳ (CEO) ವೆಬ್‌ಸೈಟ್‌ನಲ್ಲಿ ಸಹ ಪ್ರಕಟಿಸಲಾಗುತ್ತದೆ
  • ಸದರಿ ಪಟ್ಟಿಗಳನ್ನು ಮಾನ್ಯತೆ ಪಡೆದ ಮತ್ತು ನೋಂದಾಯಿತ ರಾಜಕೀಯ ಪಕ್ಷಗಳಿಗೆ ಒದಗಿಸಲಾಗುತ್ತದೆ.
  • ನಂತರ EROರವರು ಅಂತಹ ಮತದಾರರಿಗೆ ನಿಯಮಾನುಸಾರ ನೋಟೀಸ್ ನೀಡಿ ಭಾರತ ಚುನಾವಣಾ ಆಯೋಗವು ನಿರ್ಧಿಷ್ಟ ಪಡಿಸಿರುವ 12 ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ಸಲ್ಲಿಸಲು ಸೂಚಿಸುತ್ತಾರೆ.
  • ERO ವಿಚಾರಣೆ ನಡೆಸಿ ಅರ್ಹರಿದ್ದಲ್ಲಿ ಅಂತಹ ಮತದಾರರನ್ನು ಅಂತಿಮ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಕುರಿತು ನಿರ್ಧರಿಸಿ, ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
  • ನೋಂದಣಾಧಿಕಾರಿಗಳ ಆದೇಶದಿಂದ ಬಾಧಿತರಾದವರು ಸಂಬಂಧಪಟ್ಟ ಜಿಲ್ಲಾ ಚುನಾವಣಾಧಿಕಾರಿಗಳಿಗೆ 15 ದಿನಗಳ ಒಳಗಾಗಿ ಪ್ರಥಮ ಮೇಲ್ಮನವಿಯನ್ನು ಸಲ್ಲಿಸಬಹುದು.
  • ಪ್ರಥಮ ಮೇಲ್ಮನವಿಯ ಆದೇಶದಿಂದ ಬಾಧಿತರಾದವರು ರಾಜ್ಯದ ಮುಖ್ಯ ಚುನಾವಣಾಧಿಕಾರಿಯವರಿಗೆ ದ್ವಿತೀಯ ಮೇಲ್ಮನವಿಯನ್ನು 30 ದಿನಗಳೊಳಗಾಗಿ ಸಲ್ಲಿಸಬಹುದು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:31 pm, Thu, 14 May 26

Source link

ದರ್ಶನ್​​ಗೆ ಶುಭವಾಗುತ್ತಾ ಶುಕ್ರವಾರ? ಸುಪ್ರೀಂ ಕೈಯಲ್ಲಿದೆ ಭವಿಷ್ಯ – Kannada News | Darshan bail application, Supreme court may pass order on May 15

ನಟ ದರ್ಶನ್ (Darshan), ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಬಾರಿ ಜೈಲು ಸೇರಿ ವರ್ಷವಾಗುತ್ತಾ ಬಂದಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ದರ್ಶನ್, ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿತ್ತು. ಇದೀಗ ನಟ ದರ್ಶನ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಸಾಕ್ಷ್ಯಗಳ ವಿಚಾರಣೆ ತಡವಾಗುತ್ತಿದ್ದು, ತಮಗೆ ಜಾಮೀನು ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಸಹ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಕಳೆದ ಕೆಲ ದಿನಗಳಲ್ಲಿ ಈ ಸಂಬಂಧ ವಿಚಾರಣೆ ನಡೆದಿದ್ದು, ಜಾಮೀನು ಅರ್ಜಿ ಕುರಿತಂತೆ ನಾಳೆ (ಮೇ 15) ಸುಪ್ರೀಂಕೋರ್ಟ್ ಆದೇಶ ನೀಡುವ ಸಾಧ್ಯತೆ ಇದೆ.

ಕಾರಾಗೃಹದ ಅವ್ಯವಸ್ಥೆ ಮತ್ತು ಸಹ ಕೈದಿಗಳಿಂದ ಬೆದರಿಕೆ, ಕಿರುಕುಳ ಸೇರಿದಂತೆ ಇನ್ನೂ ಕೆಲವು ಸಮಸ್ಯೆಗಳನ್ನು ದರ್ಶನ್, ಸುಪ್ರೀಂಕೋರ್ಟ್ ಮುಂದೆ ಹೇಳಿಕೊಂಡಿದ್ದರು. ಈ ಸಂಬಂಧ ಕಾರಾಗೃಹ ಇಲಾಖೆಯಿಂದ ವರದಿಯನ್ನು ಸುಪ್ರೀಂಕೋರ್ಟ್ ಕೇಳಿತ್ತು. ಇದೀಗ ಎಸ್​​ಪಿಪಿ ಅವರು ಈ ಕುರಿತು ನ್ಯಾಯಾಲಯಕ್ಕೆ ಕೆಲವು ವಿಡಿಯೋ ಸಾಕ್ಷ್ಯಗಳ ಸಹಿತ ವಾದ ಮಂಡಿಸಿದ್ದು, ದರ್ಶನ್ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ದರ್ಶನ್​​ಗೆ ಇತರೆ ಕೈದಿಗಳೊಟ್ಟಿಗೆ ಸಂಪರ್ಕ ಇಲ್ಲವೆಂದು, ಅವರನ್ನು ಪ್ರತ್ಯೇಕ ಸೆಲ್​​ನಲ್ಲಿ ಇರಿಸಲಾಗಿದೆ ಎಂದಿದ್ದಾರೆ. ನ್ಯಾಯಾಲಯಕ್ಕೆ ಸಿಸಿಟಿವಿ ಮತ್ತು ಬಾಡಿಕ್ಯಾಮ್​​ಗಳ ದೃಶ್ಯಗಳನ್ನು ಸಹ ಸಲ್ಲಿಕೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಇವುಗಳ ಜೊತೆಗೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಮಾಡುತ್ತಿಲ್ಲ, 270 ಸಾಕ್ಷ್ಯಗಳಲ್ಲಿ 10 ಸಾಕ್ಷ್ಯಗಳ ವಿಚಾರಣೆಯನ್ನೂ ಮಾಡಲಾಗಿಲ್ಲ ವಿಚಾರಣೆ ನಡೆಯುವವರೆಗೆ ತಮಗೆ ಜಾಮೀನು ನೀಡಬೇಕು ಎಂದು ಸಹ ದರ್ಶನ್ ಮನವಿ ಮಾಡಿದ್ದರು. ಈ ಬಗ್ಗೆಯೂ ಸಹ ಸುಪ್ರೀಂಕೋರ್ಟ್ ವರದಿ ಕೇಳಿತ್ತು. ಅದನ್ನೂ ಸಹ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಸುಪ್ರೀಂಕೋರ್ಟ್​​ಗೆ ಸಲ್ಲಿಕೆ ಮಾಡಿದ್ದಾರೆ. ಅಲ್ಲದೆ, ದರ್ಶನ್ ಸಲ್ಲಿಕೆ ಮಾಡಿದ್ದ ಇತರೆ ಅರ್ಜಿಗಳ ಕಾರಣಕ್ಕೆ ಮುಖ್ಯ ಆರೋಪದ ವಿಚಾರಣೆ ತಡವಾಗಿದೆ ಎಂದು ಎಸ್​​ಪಿಪಿ ವಾದ ಮಂಡಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಹೊಸ ಫೋಟೋಗಳಲ್ಲಿ ಮಿಂಚಿದ ವಿಜಯಲಕ್ಷ್ಮೀ ದರ್ಶನ್

ರೇಣುಕಾ ಸ್ವಾಮಿ ಕೊಲೆಯಾಗಿ ಎರಡು ವರ್ಷಗಳಾಗುತ್ತಾ ಬಂದಿದೆ. (ಜೂನ್ 08, 2024) ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇನ್ನೂ ಹಲವು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದರು. 2024ರ ಅಕ್ಟೋಬರ್ ತಿಂಗಳಲ್ಲಿ ವೈದ್ಯಕೀಯ ಚಿಕಿತ್ಸೆ ಕಾರಣ ನೀಡಿ ದರ್ಶನ್ ಜಾಮೀನು ಪಡೆದಿದ್ದರು. ಆ ಬಳಿಕ ಪವಿತ್ರಾ ಸೇರಿದಂತೆ ಇತರೆ ಕೆಲವು ಆರೋಪಿಗಳಿಗೂ ಜಾಮೀನು ನೀಡಲಾಯ್ತು. ಬಳಿಕ ದರ್ಶನ್ ‘ಡೆವಿಲ್’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡು, ಚಿತ್ರೀಕರಣವನ್ನೂ ಮುಗಿಸಿದರು. ಆದರೆ ಬೆಂಗಳೂರು ಪೊಲೀಸರು ದರ್ಶನ್ ಜಾಮೀನು ರದ್ದು ಮಾಡುವಂತೆ ಸುಪ್ರೀಂಕೋರ್ಟ್​​ಗೆ ಮನವಿ ಸಲ್ಲಿಸಿದ್ದರು, ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ದರ್ಶನ್ ಹಾಗೂ ಇತರೆ ಕೆಲ ಆರೋಪಿಗಳ ಜಾಮೀನನ್ನು 2025ರ ಆಗಸ್ಟ್ ತಿಂಗಳಲ್ಲಿ ರದ್ದು ಮಾಡಿತು. ಆಗಿನಿಂದಲೂ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ತ್ರಿಕೋನ ಸರಣಿಗೆ ಭಾರತ ಎ ತಂಡ ಪ್ರಕಟ; ವೈಭವ್ ಸೂರ್ಯವಂಶಿಗೆ ತಂಡದಲ್ಲಿ ಸ್ಥಾನ – Kannada News | IPL Stars Join India A Squad for Sri Lanka Tri Series: Parag and Suryavanshi Included

2026 ರ ಐಪಿಎಲ್ (IPL 2026) ಮುಗಿಯುವ ಹಂತಕ್ಕೆ ಬಂದಿದೆ. ಕೆಲವೇ ದಿನಗಳಲ್ಲಿ ಪ್ಲೇಆಫ್ ಸುತ್ತು ಆರಂಭವಾಗಲಿದೆ. ಐಪಿಎಲ್ ಅಂತ್ಯದೊಂದಿಗೆ ಟೀಂ ಇಂಡಿಯಾದ (Team India) ಅಂತರರಾಷ್ಟ್ರೀಯ ಕ್ಯಾಲೆಂಡರ್ ಕೂಡ ಶುರುವಾಗಲಿದೆ. ಅದರಂತೆ, ಭಾರತ ಎ ತಂಡವು ಶ್ರೀಲಂಕಾ ಪ್ರವಾಸ ಮಾಡಲಿದ್ದು, ಈ ಪ್ರವಾಸದಲ್ಲಿ ಶ್ರೀಲಂಕಾ ಎ, ಭಾರತ ಎ ಮತ್ತು ಅಫ್ಘಾನಿಸ್ತಾನ ಎ ತಂಡಗಳನ್ನು ಒಳಗೊಂಡ ಏಕದಿನ ತ್ರಿಕೋನ ಸರಣಿ (Tri-Series) ನಡೆಯಲಿದೆ. ಇದೀಗ ಬಿಸಿಸಿಐ ಈ ಸರಣಿಗೆ ಭಾರತ ಎ ತಂಡವನ್ನು ಪ್ರಕಟಿಸಿದೆ. ಐಪಿಎಲ್‌ನಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿರುವ ವೈಭವ್ ಸೂರ್ಯವಂಶಿ ಸೇರಿದಂತೆ ಹಲವಾರು ಯುವ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಭಾರತ ಎ ತಂಡ ಪ್ರಕಟ

ಈ ಸರಣಿಗೆ ತಿಲಕ್ ವರ್ಮಾ ಅವರನ್ನು ಭಾರತ ಎ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ, ರಿಯಾನ್ ಪರಾಗ್ ಉಪನಾಯಕರಾಗಿದ್ದಾರೆ. ಸರಣಿಯ ನಂತರ ಭಾರತ ಎ, ಶ್ರೀಲಂಕಾ ಎ ವಿರುದ್ಧ ಎರಡು ಬಹು-ದಿನದ (ರೆಡ್-ಬಾಲ್) ಪಂದ್ಯಗಳನ್ನು ಸಹ ಆಡಲಿದೆ. ಈ ಟೆಸ್ಟ್ ಪಂದ್ಯಗಳಿಗೆ ತಂಡವನ್ನು ನಂತರ ಪ್ರಕಟಿಸಲಾಗುವುದು. ತ್ರಿಕೋನ ಸರಣಿಯು ಜೂನ್ 9 ರಂದು ಪ್ರಾರಂಭವಾಗಲಿದ್ದು, ಜೂನ್ 21 ರಂದು ಅಂತಿಮ ಪಂದ್ಯ ನಡೆಯಲಿದೆ. ಎಲ್ಲಾ ತಂಡಗಳು ಪರಸ್ಪರ ಎರಡು ಬಾರಿ ಮುಖಾಮುಖಿಯಾಗಲಿದ್ದು, ಅಗ್ರ ಎರಡು ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಐಪಿಎಲ್‌ನಲ್ಲಿ ರನ್ ಮಳೆ ಹರಿಸುತ್ತಿರುವ ಪ್ರಿಯಾಂಶ್ ಆರ್ಯ, ಆಯುಷ್ ಬಡೋನಿ ಮತ್ತು ಪ್ರಭ್ಸಿಮ್ರಾನ್ ಸಿಂಗ್ ಅವರಂತಹ ಯುವ ಆಟಗಾರರನ್ನು ಸಹ ಏಕದಿನ ತ್ರಿಕೋನ ಸರಣಿಗೆ ಆಯ್ಕೆ ಮಾಡಲಾಗಿದೆ. ಏತನ್ಮಧ್ಯೆ, ಯಶ್ ಠಾಕೂರ್, ಯುಧ್ವೀರ್ ಸಿಂಗ್, ಅನ್ಶುಲ್ ಕಾಂಬೋಜ್ ಮತ್ತು ಅರ್ಷದ್ ಖಾನ್ ಅವರಂತಹ ಯುವ ಬೌಲರ್‌ಗಳಿಗೂ ಈ ಸರಣಿಯಲ್ಲಿ ದೊಡ್ಡ ಅವಕಾಶ ಸಿಗಲಿದೆ.

ತ್ರಿಕೋನ ಸರಣಿಗೆ ಭಾರತ ಎ ತಂಡ

  • ತಿಲಕ್ ವರ್ಮಾ (ನಾಯಕ)
  •  ಪ್ರಿಯಾಂಶ್ ಆರ್ಯ
  • ​ ವೈಭವ್ ಸೂರ್ಯವಂಶಿ
  •  ರಿಯಾನ್ ಪರಾಗ್ (ಉಪನಾಯಕ)
  •  ಆಯುಷ್ ಬದೋನಿ
  • ನಿಶಾಂತ್ ಸಿಂಧು
  •  ಹರ್ಷ ದುಬೆ
  • ಸೂರ್ಯಾಂಶ್ ಶೆಡ್ಜ್
  •  ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್)
  •  ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್)
  • ವಿಪ್ರಜ್ ನಿಗಮ್
  • ಯಶ್ ಠಾಕೂರ್
  •  ಯುದ್ಧವೀರ್ ಸಿಂಗ್
  •  ಅಂಶುಲ್ ಕಾಂಬೋಜ್
  • ಅರ್ಷದ್ ಖಾನ್

ತ್ರಿಕೋನ ಸರಣಿ ವೇಳಾಪಟ್ಟಿ

  • ಜೂನ್ 9: ಭಾರತ ಎ vsಶ್ರೀಲಂಕಾ ಎ
  • ಜೂನ್ 11: ಭಾರತ ಎ vs ಅಫ್ಘಾನಿಸ್ತಾನ ಎ
  • ಜೂನ್ 13: ಅಫ್ಘಾನಿಸ್ತಾನ ಎ vs ಶ್ರೀಲಂಕಾ ಎ
  • ಜೂನ್ 15: ಭಾರತ ಎ ವಿರುದ್ಧ ಶ್ರೀಲಂಕಾ ಎ
  • ಜೂನ್ 17: ಭಾರತ ಎ vs ಅಫ್ಘಾನಿಸ್ತಾನ ಎ
  • ಜೂನ್ 19: ಅಫ್ಘಾನಿಸ್ತಾನ ಎ vs ಶ್ರೀಲಂಕಾ ಎ
  • ಜೂನ್ 21: ಫೈನಲ್ ಪಂದ್ಯ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೋಕ್ಸೋ ಕೇಸ್: ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ – Kannada News | Pocso case: Doctor Talks about Vachananda Swamiji medical check up

ದಾವಣಗೆರೆ, (ಮೇ 14): ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ (Vachananda Swamiji) ವಿರುದ್ಧ ಮಠದಲ್ಲಿ ಕಲಿಯುತ್ತಿದ್ದ ಬಾಲಕನಿಗೆ ಬೆದರಿಕೆ ಹಾಕಿ, ದೌರ್ಜನ್ಯ ಎಸಗಿದ ಆರೋಪದಡಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಬಾಲಕನ ತಾಯಿಯ ದೂರಿನ ಮೇರೆಗೆ ಹರಿಹರ ಗ್ರಾಮಾಂತರ ಪೊಲೀಸರು ಇಂದು (ಮೇ 14) ಸತತ 3 ಗಂಟೆಗಳ ಕಾಲ ಸ್ವಾಮೀಜಿಯನ್ನು ವಿಚಾರಣೆ ನಡೆಸಿ ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯ್ತು. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ರಾಘವೇಂದ್ರ ದುರ್ಗೋಜಿ ಅವರು ವಚನಾನಂದ ಸ್ವಾಮೀಜಿಯನ್ನು ವೈದ್ಯಕೀಯ ಪರೀಕ್ಷೆ ಮಾಡಿದ್ದು, ವರದಿ ಪಾಸಿಟಿವ್ ಬರುವ ಸಾಧ್ಯತೆ ಕಡಿಮೆ ಎಂದಿದ್ದಾರೆ.

ಈ ಬಗ್ಗೆ ಟಿವಿ9 ಜತೆ ಮಾತನಾಡಿರುವ ಡಾ.ರಾಘವೇಂದ್ರ ದುರ್ಗೋಜಿ , ಘಟನೆ ನಡೆದು ಬಹಳ ದಿ‌ನವಾಗಿದೆ. ಇದರಿಂದ ವರದಿ ಪಾಸಿಟಿವ್ ಬರುವ ಸಾಧ್ಯತೆ ಕಡಿಮೆ. ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಚನಾನಂದ ಸ್ವಾಮೀಜಿ ಉಗುರು ಕೂದಲು ಮಾದರಿ, ಪುರುಷತ್ವ, ರಕ್ತ ಮಾದರಿ ಸಂಗ್ರಹ ಸೇರಿದಂತೆ ತನಿಖಾಧಿಕಾರಿಗಳ ಬೇಡಿಕೆಗೆ ಅನುಗುಣವಾಗಿ ಪರೀಕ್ಷೆ ಮಾಡಲಾಗಿದೆ. ಸ್ವಾಮೀಜಿ ಎಲ್ಲ ರೀತಿ ಸದೃಢ ಆಗಿದ್ದಾರೆ. ಅವರಿಗೆ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ನೋಡಿ: ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​: ಸ್ವಾಮೀಜಿ ಹೇಳಿದ್ದಿಷ್ಟು

Source link

ಬೆಂಗಳೂರಿನಿಂದ 18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಟ್ರಾಫಿಕ್: ಅಧಿಕಾರಿಗಳ ಸಬೂಬಿಗೆ ಜನ ಹೈರಾಣ – Kannada News | Nelamangala Traffic Chaos: Illegal Parking and Street Vendors Cause Trouble for Pedestrians and Motorists

ನೆಲಮಂಗಲ, ಮೇ 14: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಮುಖ ಕೇಂದ್ರ ಹಾಗೂ ಸುಮಾರು 18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ನೆಲಮಂಗಲ (Nelamangala) ತಾಲೂಕು ಕೇಂದ್ರದಲ್ಲಿ ಸಂಚಾರ (Traffic) ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ನಗರಸಭೆ ಅಧಿಕಾರಿಗಳು ಮತ್ತು ಸಂಚಾರಿ ಪೊಲೀಸರ ಪರಸ್ಪರ ನಿರ್ಲಕ್ಷ್ಯದಿಂದಾಗಿ ಇಲ್ಲಿನ ವಾಹನ ಸವಾರರು ಮತ್ತು ಪಾದಚಾರಿಗಳ ಜೀವನಕ್ಕೆ ಕುತ್ತು ಬಂದೊದಗಿದೆ.

ಮುಖ್ಯಾಂಶಗಳು

  • ನೆಲಮಂಗಲದಲ್ಲಿ ದಿನೇ ದಿನೇ ಉಲ್ಬಣಗೊಳ್ಳುತ್ತಿರುವ ಟ್ರಾಫಿಕ್ ಸಮಸ್ಯೆ
  • ಅಧಿಕಾರಿಗಳ ನಿರ್ಲಕ್ಷ್ಯ ಆರೋಪ ದಶಕದ ಸಮಸ್ಯೆಗೆ ಮುಕ್ತಿ ಯಾವಾಗ ಎಂದ ಜನ?
  • ಅವೈಜ್ಞಾನಿಕ ಪಾರ್ಕಿಂಗ್​​​ನಿಂದಾಗಿ ಸವಾರರು ಹೈರಾಣು

ಇದನ್ನೂಓದಿ: ಲಾಂಗ್ ವೀಕೆಂಡ್ ಎಫೆಕ್ಸ್: ಬೆಂಗಳೂರು-ನೆಲಮಂಗಲ ಹೈವೇಯಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್!

ನೆಲಮಂಗಲ ಟೌನ್​​ನಲ್ಲಿ ವಾಹನ ಸಂಚಾರ ಮಾಡುವುದು ಸವಾರರಿಗೆ ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಲ್ಲಿ ಸಮಸ್ಯೆ ಕಣ್ಣ ಮುಂದೆ ಇದ್ದರು ಕೂಡ ಅಧಿಕಾರಿಗಳು ಕೆಸರೆರಚಾಟ ನಡೆಸಿದ್ದಾರೆ. ನೆಲಮಂಗಲ ಟೌನ್​ನಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಿದ್ದು, ವಾಹನ ಸವಾರರು ಹೈರಾಣಾಗಿದ್ದಾರೆ. ಇನ್ನು ಪಾದಚಾರಿಗಳಂತೂ ಜೀವ ಕೈಯಲ್ಲಿ ಹಿಡಿದು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲಾ ಕಾರಣ ಬೇಕಾಬಿಟ್ಟಿ ಪಾರ್ಕಿಂಗ್ ಮಾಡುತ್ತಿರುವುದು ಹಾಗೂ ಫುಟ್‌ಪಾತ್‌ಗಳನ್ನು ರಸ್ತೆ ಬದಿ ವ್ಯಾಪಾರಿಗಳು ಅತಿಕ್ರಮಿಸಿಕೊಂಡಿದ್ದಾರೆ.

ಅಧಿಕಾರಿಗಳ ಕೆಸರೆರಚಾಟ: ಹೇಳಿದ್ದಿಷ್ಟು

ಸಮಸ್ಯೆ ಕಣ್ಣಮುಂದೆಯೇ ಇದ್ದರೂ ಅಧಿಕಾರಿಗಳು ಮಾತ್ರ ಒಬ್ಬರ ಮೇಲೊಬ್ಬರು ಸಬೂಬು ಹೇಳುತ್ತಾ ಕಾಲ ಕಳೆಯುತ್ತಿದ್ದಾರೆ. ಈ ಬಗ್ಗೆ ನೆಲಮಂಗಲ ನಗರಸಭೆ ಅಧ್ಯಕ್ಷ ಗಣೇಶ್​​ರನ್ನು ಪ್ರಶ್ನಿಸಿದರೆ, ‘ನಾವು ಸಂಚಾರಿ ಪೊಲೀಸರಿಗೆ ಈಗಾಗಲೇ ಎರಡು ಬಾರಿ ಪತ್ರ ಬರೆದಿದ್ದೇವೆ’ ಎಂದು ಪೊಲೀಸರ ಮೇಲೆ ಹೊಣೆ ಹೊರಿಸಿದ್ದಾರೆ. ಇನ್ನು ಫುಟ್‌ಪಾತ್ ವ್ಯಾಪಾರಿಗಳ ತೆರವು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಸಭೆ ನಡೆಸಿದ್ದೇವೆ, ಒಂದೂವರೆ ತಿಂಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗುವುದು’ ಎಂಬ ಸಿದ್ಧ ಉತ್ತರ ನೀಡಿ ನುಣುಚಿಕೊಂಡರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಟ್ರಾಫಿಕ್ ದಂಡ ತಪ್ಪಿಸಲು ಬಾಣಲೆಯನ್ನೇ ಹೆಲ್ಮೆಟ್ ಮಾಡಿಕೊಂಡ ಯುವಕ!

‘ಇಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಹೋಗುತ್ತಾರೆ, ಕೇಳುವವರಿಲ್ಲ. ಫುಟ್‌ಪಾತ್ ಮೇಲೆ ಅಂಗಡಿಗಳಿರುವುದರಿಂದ ನಮಗೆ ಓಡಾಡಲು ಜಾಗವೇ ಇಲ್ಲದಂತಾಗಿದೆ’ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಶಕಗಳಿಂದ ಇರುವ ಈ ಸಮಸ್ಯೆಯನ್ನು ಬಗೆಹರಿಸದ ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇನ್ನಾದರೂ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಿದೆ.

ವರದಿ: ಮಂಜುನಾಥ್ ಟಿವಿನೈನ್ ನೆಲಮಂಗಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version