ಕರ್ನಾಟಕ ಬಂದ್‌ಗೆ ಬ್ರೇಕ್? ಆಗಸ್ಟ್ 13ರ ಬಂದ್ ಬಹುತೇಕ ರದ್ದು ಸಾಧ್ಯತೆ – Kannada News | Karnataka Bandh on August 13 Likely to Be Cancelled Amid Cauvery Protest

ಬೆಂಗಳೂರು, ಆಗಸ್ಟ್ 10: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವುದನ್ನು ಪ್ರತಿಭಟಿಸಿ (Cauvery Dispute) ಆಗಸ್ಟ್ 13ರಂದು ಕರೆ ನೀಡಲಾಗಿದ್ದ ಕರ್ನಾಟಕ ಬಂದ್‌ಗೆ (Karnataka Bandh) ಇದೀಗ ಅನಿಶ್ಚಿತತೆ ಎದುರಾಗಿದೆ. ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ಸಮಸ್ಯೆ ಸದ್ಯಕ್ಕೆ ತೀವ್ರವಾಗಿಲ್ಲ ಎಂಬ ಕಾರಣ ನೀಡಿ, ಕೆಲ ಕನ್ನಡ ಪರ ಹಾಗೂ ರೈತಪರ ಸಂಘಟನೆಗಳು ಬಂದ್‌ನಿಂದ ಹಿಂದೆ ಸರಿಯುವ ಸೂಚನೆ ನೀಡಿವೆ.

ವಾಟಾಳ್ ನಾಗರಾಜ್ ಬಣದೊಂದಿಗೆ ಗುರುತಿಸಿಕೊಂಡಿರುವ ಸಾರಾ ಗೋವಿಂದ್, ಬಂದ್‌ಗೆ ತಮ್ಮ ಬೆಂಬಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಅವರು ಈಗಾಗಲೇ, ‘ಬಂದ್‌ಗೆ ಬೆಂಬಲ ನೀಡುವುದಿಲ್ಲ’ ಎಂದು ಹಿಂದೆ ಸರಿದಿದ್ದಾರೆ. ಪ್ರವೀಣ್ ಶೆಟ್ಟಿ ಬಣ ಕೂಡ ಬಂದ್‌ನಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಓಲಾ-ಉಬರ್ ಅಸೋಸಿಯೇಷನ್‌ ಬೆಂಬಲವೂ ಇಲ್ಲ

ಇನ್ನು ಓಲಾ-ಉಬರ್ ಅಸೋಸಿಯೇಷನ್‌ನಿಂದಲೂ ಇದುವರೆಗೆ ಬಂದ್‌ಗೆ ಬೆಂಬಲ ವ್ಯಕ್ತವಾಗಿಲ್ಲ. ಬಂದ್ ನಡೆಸುವುದರಿಂದ ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಹೊಡೆತ ಬೀಳುವುದಲ್ಲದೆ, ದಿನಗೂಲಿ ಕಾರ್ಮಿಕರು, ರೈತರು, ಬೀದಿ ಬದಿ ವ್ಯಾಪಾರಿಗಳು ಹಾಗೂ ಹೋಟೆಲ್ ಉದ್ಯಮವನ್ನೇ ಅವಲಂಬಿಸಿರುವವರಿಗೆ ಸಮಸ್ಯೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನೂ ಓದಿ: ಕಾವೇರಿ ಜಲ ವಿವಾದ: ಆ.13ರಂದು ಅಖಂಡ ಕರ್ನಾಟಕ ಬಂದ್​​ಗೆ ಕರೆ ನೀಡಿದ ಕನ್ನಡಪರ ಸಂಘಟನೆಗಳು

ಈ ಹಿನ್ನೆಲೆಯಲ್ಲಿ ಬಂದ್‌ಗೆ ಸಾರ್ವಜನಿಕ ವಲಯದಲ್ಲೂ ವಿರೋಧ ವ್ಯಕ್ತವಾಗುತ್ತಿದೆ. ಹಲವು ಸಂಘಟನೆಗಳು ಬೆಂಬಲದಿಂದ ಹಿಂದೆ ಸರಿಯುತ್ತಿರುವುದರಿಂದ ಆಗಸ್ಟ್ 13ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ ಬಹುತೇಕ ರದ್ದಾಗುವ ಸಾಧ್ಯತೆ ಇದೆ. ಆದರೆ ಅಂತಿಮ ನಿರ್ಧಾರವನ್ನು ಸಂಘಟನೆಗಳು ಅಧಿಕೃತವಾಗಿ ಪ್ರಕಟಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಪರೇಷನ್ ಮುಕ್ತ: ಬೆಂಗಳೂರಲ್ಲಿ 105 ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಪತ್ತೆ – Kannada News | Operation Mukta: 105 Illegal Bangladeshi Nationals Detected in Bengaluru Police Sweep

ಬೆಂಗಳೂರು, ಆಗಸ್ಟ್​​ 10: ಆಪರೇಷನ್ ಮುಕ್ತ ಕಾರ್ಯಾಚರಣೆ ಅಡಿಯಲ್ಲಿ 105 ಮಂದಿ ಅಕ್ರಮ ಬಾಂಗ್ಲಾದೇಶ ವಲಸಿಗರನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಲಾಗಿದೆ ಎಂದು ಬೆಂಗಳೂರು ನಗರ ಪೊಲೀಸರು ಮಾಹಿತಿ ನೀಡಿದ್ದಾರೆ. ಮೂರು ವಿಭಾಗದಲ್ಲಿ ಅಕ್ರಮ ವಲಸಿಗರ ಪರಿಶೀಲನೆ ನಡೆಸಲಾಗಿತ್ತು. ಎಲೆಕ್ಟ್ರಾನಿಕ್ ಸಿಟಿ ವಿಭಾಗದಲ್ಲಿ 1909 ಜನರ ಪರಿಶೀಲನೆ ನಡೆಸಿ, 43 ಅಕ್ರಮ ಬಾಂಗ್ಲಾದೇಶ ವಲಸಿಗರನ್ನು ಪತ್ತೆ ಮಾಡಲಾಗಿದೆ. ಅದೇ ರೀತಿ, ವೈಟ್‌ಫೀಲ್ಡ್ ವಿಭಾಗದಲ್ಲಿ 1035 ಜನರ ಪರಿಶೀಲನೆ ನಡೆಸಿದಾಗ, 62 ಅಕ್ರಮ ಬಾಂಗ್ಲಾದೇಶ ವಲಸಿಗರು ಪತ್ತೆಯಾಗಿದ್ದಾರೆ. ಪತ್ತೆಯಾದ ಒಟ್ಟು 105 ಅಕ್ರಮ ವಲಸಿಗರ ಬಗ್ಗೆ ಎಫ್‌ಆರ್‌ಆರ್‌ಓ (ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ) ಗೆ ಮಾಹಿತಿ ನೀಡಲಾಗಿದ್ದು, ಅವರನ್ನು ವಲಸಿಗರ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಸಂಗೀತ ನಿರ್ದೇಶಕ ಗುರುಕಿರಣ್ ತಾಯಿ ರತ್ನಕಾಂತಿ ಶೆಟ್ಟಿ ನಿಧನ – Kannada News | Music Director Gurukiran Mother Ratnakanti Shetty Passes Away; Industry Mourns The Loss

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ತಾಯಿ ರತ್ನಕಾಂತಿ ಶೆಟ್ಟಿ ಅವರು ನಿಧನರಾಗಿದ್ದಾರೆ. ತಾಯಿಯ ಅಗಲಿಕೆಯಿಂದ ತೀವ್ರ ದುಃಖಿತರಾಗಿರುವ ಗುರುಕಿರಣ್, ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ಮಾತೃವಂದನೆ ಸಲ್ಲಿಸಿದ್ದಾರೆ. ಅವರಿಗೆ ಎಲ್ಲರೂ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಕೆಲವರು ತಾಯಿ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

‘ನನ್ನ ಪ್ರೀತಿಯ ತಾಯಿ ರತ್ನಕಾಂತಿ ಶೆಟ್ಟಿ ಅವರು ನಿಧನರಾಗಿದ್ದಾರೆ ಎಂಬ ಹೃದಯವಿದ್ರಾವಕ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ. ಜೀವನದಲ್ಲಿ ಏನೇ ಆಗಿದ್ದರೂ, ಏನೇ ಸಾಧಿಸಿದ್ದರೂ ಅದಕ್ಕೆಲ್ಲಾ ನನ್ನ ತಾಯಿಯೇ ಕಾರಣ’ ಎಂದು ಗುರುಕಿರಣ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಗುರುಕಿರಣ್ ಕುಟುಂಬಕ್ಕೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಹಾಗೂ ಆತ್ಮೀಯರು ಕಂಬನಿ ಮಿಡಿದು, ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಸಂತಾಪ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ:  ‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್

ಗುರುಕಿರಣ್ ವೃತ್ತಿಜೀವನ

ಸ್ಯಾಂಡಲ್‌ವುಡ್‌ನ ಟ್ರೆಂಡ್ ಸೆಟ್ಟರ್ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ಗುರುಕಿರಣ್, 90ರ ದಶಕದ ಕೊನೆಯಲ್ಲಿ ‘ಎ’ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ‘ಉಪೇಂದ್ರ’, ‘ಆಪ್ತಮಿತ್ರ’, ‘ಅಪ್ಪು’, ‘ಜೋಗಿ’, ಸೇರಿದಂತೆ ಸಾಲು ಸಾಲು ಹಿಟ್ ಸಿನಿಮಾಗಳಿಗೆ ನೀಡಿದ ವಿಭಿನ್ನ ಹಾಗೂ ಎನರ್ಜಿಟಿಕ್ ರಾಗಗಳಿಂದ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದರು. ಸಂಗೀತ ನಿರ್ದೇಶನದ ಜೊತೆಗೆ ಗಾಯಕನಾಗಿ, ನಟನಾಗಿಯೂ ಕನ್ನಡಿಗರ ಮನಗೆದ್ದಿರುವ ಇವರು, ರಾಜ್ಯ ಸರ್ಕಾರಿ ಪ್ರಶಸ್ತಿ ಹಾಗೂ ಸಾಲು ಸಾಲು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅವರ ಸಾಧನೆಯ ಹಾದಿಗೆ ತಾಯಿಯೇ ಶಕ್ತಿಯಾಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2027: ಗಂಗೂಲಿ, ಯುವರಾಜ್ ಹೆಗಲಿಗೆ ಕೋಚಿಂಗ್ ನೊಗ! – Kannada News | IPL 2027: Ganguly, Yuvraj to Take the DC Coaching Reins

ಐಪಿಎಲ್ 2027ರ ಮೆಗಾ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡದ ಕೋಚಿಂಗ್ ವಿಭಾಗದಲ್ಲಿ ಮಹತ್ವದ ಬದಲಾವಣೆಗಳಾಗುತ್ತಿದ್ದು, ಸೌರವ್ ಗಂಗೂಲಿ ಮತ್ತು ಯುವರಾಜ್ ಸಿಂಗ್ ಹೊಸ ಜವಾಬ್ದಾರಿ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಬೆಂಗಳೂರಿನ ‘ಜಸ್ಟ್ ಕ್ರಿಕೆಟ್ ಅಕಾಡೆಮಿ’ಯಲ್ಲಿ ನಡೆದ ಆಟಗಾರರ ಆಯ್ಕೆ ಟ್ರಯಲ್ಸ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಈ ಇಬ್ಬರು ದಿಗ್ಗಜರು, ಮುಂಬರುವ ಸೀಸನ್‌ಗಾಗಿ ಭರ್ಜರಿ ಸಿದ್ಧತೆಗಳನ್ನು ಆರಂಭಿಸಿದ್ದಾರೆ.

ಬೆಂಗಳೂರಿನಲ್ಲಿ DC  ಟ್ರಯಲ್ಸ್:

ಬೆಂಗಳೂರಿನಲ್ಲಿ ನಡೆದ ಟ್ರಯಲ್ಸ್ ಕ್ಯಾಂಪ್‌ನಲ್ಲಿ ಸೌರವ್ ಗಂಗೂಲಿ ಮತ್ತು ಯುವರಾಜ್ ಸಿಂಗ್ ಸಕ್ರಿಯವಾಗಿ ಭಾಗವಹಿಸಿದ್ದರು. ನೆಟ್ಸ್‌ನಲ್ಲಿ ದೇಶಿ ಆಟಗಾರರ ಬ್ಯಾಟಿಂಗ್ ಶೈಲಿಯನ್ನು ಯುವರಾಜ್ ಸಿಂಗ್ ಹತ್ತಿರದಿಂದ ಗಮನಿಸಿ, ಅವರಿಗೆ ಪವರ್-ಹಿಟ್ಟಿಂಗ್ ತಂತ್ರಗಳ ಬಗ್ಗೆ ಮಾರ್ಗದರ್ಶನ ನೀಡಿದರು.

ಮತ್ತೊಂದೆಡೆ, ಗಂಗೂಲಿ ಅವರು ಭವಿಷ್ಯದ ತಂಡದ ಯೋಜನೆಗಳ ಬಗ್ಗೆ ಮುಂಚೂಣಿಯಲ್ಲಿ ನಿಂತು ಉಸ್ತುವಾರಿ ವಹಿಸಿದ್ದರು. ಇವರೊಂದಿಗೆ ಭಾರತದ ಮಾಜಿ ಸ್ಪಿನ್ನರ್ ಅಮಿತ್ ಮಿಶ್ರಾ ಕೂಡ ಕಾಣಿಸಿಕೊಂಡಿದ್ದು ಕುತೂಹಲ ಮೂಡಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್ ಹೊಸ ಕೋಚ್​ಗಳು (ಸಂಭಾವ್ಯ):

ಡೆಲ್ಲಿ ಕ್ಯಾಪಿಟಲ್ಸ್ ಮೂಲಗಳ ಪ್ರಕಾರ, ಮುಂಬರುವ ಸೀಸನ್​ನಲ್ಲಿ ಡಿಸಿ ತಂಡದ ನೂತನ ಕೋಚಿಂಗ್ ಲೈನ್-ಅಪ್ ಈ ಕೆಳಗಿನಂತೆ ಇರಲಿದೆ:

  • ಮುಖ್ಯ ಕೋಚ್ / ಕ್ರಿಕೆಟ್ ನಿರ್ದೇಶಕ: ಸೌರವ್ ಗಂಗೂಲಿ
  • ಬ್ಯಾಟಿಂಗ್ ಕೋಚ್ / ಮೆಂಟರ್: ಯುವರಾಜ್ ಸಿಂಗ್
  • ಸ್ಪಿನ್ ಬೌಲಿಂಗ್ ಕೋಚ್: ಅಮಿತ್ ಮಿಶ್ರಾ

ಮಾಲೀಕತ್ವವೂ ಬದಲಾವಣೆ:

ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಜಂಟಿ ಮಾಲೀಕತ್ವದ ಒಪ್ಪಂದದ ಪ್ರಕಾರ, ಮುಂಬರುವ ಎರಡು ವರ್ಷಗಳ ಅವಧಿಗೆ (2027 ಮತ್ತು 2028) ಪುರುಷರ ತಂಡದ ಸಂಪೂರ್ಣ ಕಾರ್ಯಾಚರಣೆಯ ಜವಾಬ್ದಾರಿಯನ್ನು ‘JSW ಸ್ಪೋರ್ಟ್ಸ್’ ಸಂಸ್ಥೆಯು ‘GMR ಗ್ರೂಪ್’ನಿಂದ ವಹಿಸಿಕೊಳ್ಳುತ್ತಿದೆ.

ಜಿಎಂಆರ್ ಗ್ರೂಪ್ ನೇಮಕ ಮಾಡಿದ್ದ ಕೋಚಿಂಗ್ ಸಿಬ್ಬಂದಿಗಳಾದ ಹೇಮಂಗ್ ಬದಾನಿ (ಮುಖ್ಯ ಕೋಚ್), ವೇಣುಗೋಪಾಲ್ ರಾವ್ ಮತ್ತು ಮುನಾಫ್ ಪಟೇಲ್ ಅವರ ಸ್ಥಾನಕ್ಕೆ ಈಗ ಜೆಎಸ್‌ಡಬ್ಲ್ಯೂ ಸಂಸ್ಥೆಯು ಗಂಗೂಲಿ ಮತ್ತು ಯುವರಾಜ್ ಜೋಡಿಯನ್ನು ಕರೆತರುತ್ತಿದೆ.

ಡಿಸಿ ತಂಡಕ್ಕೆ ಯುವರಾಜ್ ಎಂಟ್ರಿ ಏಕೆ ಮುಖ್ಯ?

ಕಳೆದ ಕೆಲವು ಸೀಸನ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ-ಆಫ್ ತಲುಪಲು ವಿಫಲವಾಗಿ ನಿರಾಸೆ ಮೂಡಿಸಿದೆ. ಶುಭ್‌ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಅವರಂತಹ ಯುವ ತಾರೆಗಳಿಗೆ ವೈಯಕ್ತಿಕವಾಗಿ ಮಾರ್ಗದರ್ಶನ ನೀಡಿ ಯಶಸ್ವಿಯಾಗಿಸಿರುವ ಯುವರಾಜ್ ಸಿಂಗ್ ಅವರ ಮೆಂಟರ್‌ಶಿಪ್ ಕೌಶಲ್ಯವು ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಯುವ ಬ್ಯಾಟರ್‌ಗಳಿಗೆ ಹೊಸ ಶಕ್ತಿ ನೀಡಬಲ್ಲದು.  ಅತ್ತ ಗಂಗೂಲಿ ಅವರು ಈಗಾಗಲೇ ಜೆಎಸ್‌ಡಬ್ಲ್ಯೂ ಮಾಲೀಕತ್ವದ ಪ್ರಿಟೋರಿಯಾ ಕ್ಯಾಪಿಟಲ್ಸ್ (SA20) ತಂಡದೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿರುವುದರಿಂದ ತಂಡ ಮುನ್ನಡೆಸುವುದು ಸುಲಭವಾಗಲಿದೆ.

ಇದನ್ನೂ ಓದಿ: ಟೀಮ್ ಇಂಡಿಯಾ ಆಟಗಾರರು ಗಾಯಗೊಳ್ಳಲು IPL ಕಾರಣ!

ಒಟ್ಟಾರೆಯಾಗಿ, ಐಪಿಎಲ್ 2027ರ ಮೆಗಾ ಹರಾಜಿಗೂ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಹೊಸ ಪ್ರತಿಭೆಗಳನ್ನು ಸೆಳೆಯಲು ಮತ್ತು ಬಲಿಷ್ಠ ಕೋಚಿಂಗ್ ಸಾಮ್ರಾಜ್ಯವನ್ನು ನಿರ್ಮಿಸಲು ಈ ಮಾಸ್ಟರ್ ಪ್ಲಾನ್ ರೂಪಿಸಿದೆ. ಸೌರವ್ ಗಂಗೂಲಿ ಮತ್ತು ಯುವರಾಜ್ ಸಿಂಗ್ ಅವರಂತಹ ದಿಗ್ಗಜರ ಮಾರ್ಗದರ್ಶನದಲ್ಲಿ ಕಣಕ್ಕಿಳಿಯಲಿರುವ ಡೆಲ್ಲಿ ಕ್ಯಾಪಿಟಲ್ಸ್, ಮುಂಬರುವ ಸೀಸನ್‌ನಲ್ಲಿ ಹೊಸ ಇತಿಹಾಸ ಬರೆಯಲು ಈಗಿನಿಂದಲೇ ಭರ್ಜರಿ ತಾಲೀಮು ಆರಂಭಿಸಿದೆ.

Source link

ಬಿಡದಿ ಟೌನ್​ಶಿಪ್ ವಿರೋಧಿಸಿ ಜೆಡಿಎಸ್ ಪಾದಯಾತ್ರೆ: ಪ್ರಾಯಶ್ಚಿತ್ತ ಯಾತ್ರೆ ಅನ್ನೋರಿಗೆ ದೇವೇಗೌಡರಿಂದ ತಿರುಗೇಟು! – Kannada News | HD Deve Gowda Hits Back at Congress Over Bidadi Township Protest ‘Repentance Yatra’ Remark

ರಾಮನಗರ, ಆಗಸ್ಟ್ 10: ಕರ್ನಾಟಕ ಸರ್ಕಾರದ ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆಯ ಎರಡನೇ ದಿನ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಭಾಗವಹಿಸಿ ಕಾಂಗ್ರೆಸ್​​ಗೆ ಟಾಂಗ್ ನೀಡಿದರು. ‘ಟಿವಿ9’ ಪ್ರತಿನಿಧಿ ಜತೆ ಮಾತನಾಡಿದ ಅವರು, ಜೆಡಿಎಸ್ ಪಾದಯಾತ್ರೆಯನ್ನು ‘ಪ್ರಾಯಶ್ಚಿತ್ತ ಯಾತ್ರೆ’ ಎಂದು ಕರೆಯುತ್ತಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು. ಯಾರಿಗೆ ಪ್ರಾಯಶ್ಚಿತ್ತ ಆಗುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಿ ಎಂದರು. ಕಾಂಗ್ರೆಸ್ ಸರ್ಕಾರದ ಈ ನಡವಳಿಕೆಯಿಂದ ಮುಂಬರುವ ದಿನಗಳಲ್ಲಿ ಯಾರಿಗೆ ಹಾನಿಯಾಗಲಿದೆ ಎಂಬುದನ್ನು ಕಾಲವೇ ಉತ್ತರಿಸಲಿದೆ. ತಾವು ರೈತನ ಮಗನಾಗಿ ಹುಟ್ಟಿದ್ದು, ತಮ್ಮ ಜೀವನ ಪೂರ್ತಿ ರೈತರ ಪರವಾಗಿಯೇ ಹೋರಾಟ ನಡೆಸಿಕೊಂಡು ಬಂದಿದ್ದೇನೆ. ನನ್ನ ದೇಹಕ್ಕೆ ವಯಸ್ಸಾಗಿದೆ ಆದರೆ ಬುದ್ಧಿಗಲ್ಲ. ವ್ಹೀಲ್​ಚೇರ್‌ನಲ್ಲಾದರೂ ಸರಿ, ರೈತರ ನ್ಯಾಯಕ್ಕಾಗಿ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ ಎಂದು ದೇವೇಗೌಡರು ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡು ಕಲಾಪದಲ್ಲಿ ಸರ್ವಾನುಮತದ ತೀರ್ಮಾನ: ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ನಾಡಗೀತೆಯೇ ಮೊದಲು – Kannada News | TN Assembly Unanimously Passes Resolution: State Song Mandatory at Functions

ಚೆನ್ನೈ ಆ,10 : ತಮಿಳುನಾಡಿನ ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯಗಳು, ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಆಯೋಜಿಸುವ ಎಲ್ಲಾ ಅಧಿಕೃತ ಕಾರ್ಯಕ್ರಮಗಳ ಆರಂಭದಲ್ಲಿ ರಾಜ್ಯದ ಅಧಿಕೃತ ಗೀತೆಯಾದ ‘ತಮಿಳು ತಾಯಿ ವಾಳ್ತ್ತು’ (Tamil Thai Vazthu) ಅನ್ನು ಕಡ್ಡಾಯವಾಗಿ ಮೊದಲು ಹಾಡಬೇಕು ಎಂದು ಆಗ್ರಹಿಸುವ ವಿಶೇಷ ನಿರ್ಣಯವನ್ನು ತಮಿಳುನಾಡು ವಿಧಾನಸಭೆ ಇಂದು ಸರ್ವಾನುಮತದಿಂದ ಅಂಗೀಕರಿಸಿದೆ.

ಕೇಂದ್ರ ಸರ್ಕಾರದ ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಯನ್ನು ಮೊದಲಿಗೆ ಹಾಡಬೇಕೆಂಬ ನಿರ್ದೇಶನಕ್ಕೆ ಪ್ರತಿಯಾಗಿ, ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಈ ಪ್ರಸ್ತಾವನೆಯನ್ನು ಸದನದಲ್ಲಿ ಮಂಡಿಸಿದರು. ವಿಪಕ್ಷಗಳಾದ ಡಿಎಂಕೆ (DMK) ಹಾಗೂ ಎಐಎಡಿಎಂಕೆ (AIADMK) ಸೇರಿದಂತೆ ಸದನದ ಎಲ್ಲಾ ಪಕ್ಷಗಳು ಈ ನಿರ್ಣಯಕ್ಕೆ ಸಂಪೂರ್ಣ ಬೆಂಬಲ ಸೂಚಿಸಿವೆ.

ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್ ಅವರು ನಿರ್ಣಯವು ಸರ್ವಾನುಮತದಿಂದ ಅಂಗೀಕಾರಗೊಂಡಿದೆ ಹಾಗೂ ಇದನ್ನು ಜಾರಿಗೆ ತರಲು ಯಾರ ಅನುಮತಿಯ ಅಗತ್ಯವೂ ಇಲ್ಲ ಎಂದು ಘೋಷಿಸಿದರು. ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿ ಮಾತನಾಡಿದ ಮುಖ್ಯಮಂತ್ರಿ ವಿಜಯ್, “ರಾಜ್ಯದ ಭಾಷಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ವಿಷಯದಲ್ಲಿ ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ತಮಿಳು ಎಂದರೆ ನಮಗೆ ಬರಿ ಭಾಷೆಯಷ್ಟೇ ಅಲ್ಲ, ಅದು ನಮ್ಮ ಜೀವ ಮತ್ತು ಭಾವನೆ. ತಾಯಿ ಎಷ್ಟು ಪವಿತ್ರವೋ, ಮಾತೃಭಾಷೆಯೂ ಅಷ್ಟೇ ಪವಿತ್ರ.” ಎಂದು ಹೇಳಿದ್ದಾರೆ.

“ತಮಿಳು ಎಂದರೆ ಹೆಮ್ಮೆ, ತಮಿಳು ಎಂದರೆ ಶಕ್ತಿ. ‘ತಮಿಳು’ ಎನ್ನುವ ಹೆಸರೆತ್ತಿದ ತಕ್ಷಣ ಇಡೀ ತಮಿಳುನಾಡು ಒಂದಾಗಿ ನಿಲ್ಲುತ್ತದೆ. ನಮ್ಮ ರಾಜ್ಯದಲ್ಲಿ ‘ತಮಿಳು ತಾಯಿ ವಾಳ್ತ್ತು’ ಗೀತೆಗೆ ಪ್ರಥಮ ಸ್ಥಾನ ಸಿಗುವುದು ನಮ್ಮ ಹಕ್ಕು. ಇದನ್ನು ಮೊದಲಿಗೆ ಹಾಡುವುದು ದೇಶದ ಐಕ್ಯತೆಗೆ ಅಥವಾ ರಾಜಕೀಯ ವ್ಯವಸ್ಥೆಗೆ ವಿರುದ್ಧವಾದದ್ದಲ್ಲ,” ಎಂದು ಅವರು ಪ್ರತಿಪಾದಿಸಿದರು.

ಇದನ್ನೂ ಓದಿ: ಜಮೀನಿನಲ್ಲಿ ಹೂತುಹಾಕಿದ್ದ 5 ಲಕ್ಷ ರೂ. ನೋಟುಗಳನ್ನು ತಿಂದ ಗೆದ್ದಲು: ಮರೆವಿನಿಂದ ರೈತನಿಗೆ ಎದುರಾಯ್ತು ಬಹುದೊಡ್ಡ ಸಂಕಷ್ಟ

ಹಿನ್ನೆಲೆ ಮತ್ತು ವಿವಾದವೇನು?:

ಕೇಂದ್ರ ಗೃಹ ಸಚಿವಾಲಯವು ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆಗೆ ಮೊದಲು ‘ವಂದೇ ಮಾತರಂ’ ಗೀತೆಯನ್ನು ಕಡ್ಡಾಯವಾಗಿ ಪ್ರಥಮವಾಗಿ ಹಾಡಬೇಕೆಂದು ಜುಲೈ 9 ರಂದು ಮಾರ್ಗದರ್ಶಿ ಸೂಚಿ ಹೊರಡಿಸಿತ್ತು. ಇತ್ತೀಚೆಗೆ ವಿಶ್ವವಿದ್ಯಾಲಯವೊಂದರ ಪದವಿ ಪ್ರದಾನ ಸಮಾರಂಭ ಹಾಗೂ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ತಮಿಳು ನಾಡಗೀತೆಯನ್ನು ಮೂರನೇ ಸ್ಥಾನಕ್ಕೆ ತಳ್ಳಲಾಗಿತ್ತು. ಇದು ತಮಿಳುನಾಡಿನಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. 1891 ರಲ್ಲಿ ಮನೋನ್ಮಣಿಯಂ ಸುಂದರನಾರ್ ಅವರು ರಚಿಸಿದ ಈ ಗೀತೆಯನ್ನು, 1970 ರಲ್ಲಿ ಸರ್ಕಾರಿ ಕಾರ್ಯಕ್ರಮಗಳ ಆರಂಭದಲ್ಲಿ ಹಾಡಲು ಆದೇಶಿಸಲಾಗಿತ್ತು ಹಾಗೂ 2021 ರಲ್ಲಿ ಅಧಿಕೃತ ರಾಜ್ಯ ಗೀತೆಯಾಗಿ (State Song) ಘೋಷಿಸಲಾಗಿತ್ತು.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಾಂಬರು, ನಿರ್ಮಾಣ ಸಾಮಗ್ರಿ ಬೆಲೆ ಏರಿಕೆ: 1,000 ಕೋಟಿಗೂ ಅಧಿಕ ಮೌಲ್ಯದ ಕಾಮಗಾರಿ ಸ್ಥಗಿತಗೊಳಿಸಿದ ಗುತ್ತಿಗೆದಾರರು – Kannada News | Rs 1,000 Crore Infra Projects Halted in Bengaluru as Bitumen and Raw Material Prices Soar

1,000 ಕೋಟಿಗೂ ಅಧಿಕ ಮೌಲ್ಯದ ಕಾಮಗಾರಿ ಸ್ಥಗಿತ

ಬೆಂಗಳೂರು, ಆಗಸ್ಟ್​​ 10: ಬಿಟುಮಿನ್ (ಡಾಂಬರು) ಸೇರಿದಂತೆ ವಿವಿಧ ನಿರ್ಮಾಣ ಸಾಮಗ್ರಿಗಳ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ (Bengaluru) 1,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ನಾಗರಿಕ ಹಾಗೂ ಮೂಲಸೌಕರ್ಯ ಕಾಮಗಾರಿಗಳನ್ನು ಗುತ್ತಿಗೆದಾರರು ಸ್ಥಗಿತಗೊಳಿಸಿದ್ದಾರೆ. ಈಗಾಗಲೇ ಟೆಂಡರ್‌ ಆಗಿರುವ ಕಾಮಗಾರಿಗಳಿಗೂ ‘ಸ್ಟಾರ್‌ ರೇಟ್‌’ ವ್ಯವಸ್ಥೆ ಜಾರಿಗೊಳಿಸುವಂತೆ ಗ್ರೇಟರ್‌ ಬೆಂಗಳೂರು ಸಿಟಿ ಕಾರ್ಪೊರೇಷನ್ಸ್‌ ಕಂಟ್ರಾಕ್ಟರ್ಸ್‌ ಅಸೋಸಿಯೇಷನ್‌ ಸರ್ಕಾರವನ್ನು ಒತ್ತಾಯಿಸಿದೆ. ಟೆಂಡರ್‌ ನೀಡಿದ ಸಂದರ್ಭದಲ್ಲಿ ನಿಗದಿಪಡಿಸಿದ ದರದಲ್ಲೇ ಕಾಮಗಾರಿ ನಿರ್ವಹಿಸುತ್ತಿರುವುದರಿಂದ ಭಾರಿ ನಷ್ಟವಾಗುತ್ತಿದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.

ಬಿಟುಮಿನ್‌ ಬೆಲೆ ಕ್ವಿಂಟಲ್‌ಗೆ 92,000ಕ್ಕೆ ಏರಿಕೆ

ಅಮೆರಿಕ-ಇರಾನ್‌ ಯುದ್ಧದ ಹಿನ್ನೆಲೆಯಲ್ಲಿ ಬಿಟುಮಿನ್‌ ಬೆಲೆ ಕ್ವಿಂಟಲ್‌ಗೆ 45,000ರಿಂದ 92,000ಕ್ಕೆ ಏರಿಕೆಯಾಗಿದೆ. ಸಿಮೆಂಟ್‌, ಜಲ್ಲಿ, ಉಕ್ಕು ಸೇರಿದಂತೆ ಇತರ ನಿರ್ಮಾಣ ಸಾಮಗ್ರಿಗಳ ಬೆಲೆಯೂ ಹೆಚ್ಚಾಗಿದೆ. ಹೀಗಾಗಿ ಟೆಂಡರ್‌ ನೀಡಿದ ಸಂದರ್ಭದಲ್ಲಿ ನಿಗದಿಯಾಗಿದ್ದ ದರದಲ್ಲೇ ಕಾಮಗಾರಿ ನಡೆಸುತ್ತಿರುವುದರಿಂದ ಗುತ್ತಿಗೆದಾರರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಜಿ.ಎಂ. ನಂದಕುಮಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ: ಪಿಓಪಿ ಗಣೇಶ ಮೂರ್ತಿಗಳ ಮಾರಾಟ, ಬಳಕೆಗೆ ಜಿಬಿಎ ನಿಷೇಧ

ಕಾಮಗಾರಿಗಳ ಅನುಷ್ಠಾನ ವಿಳಂಬವಾಗುವುದರಿಂದ ನಗರದಾದ್ಯಂತ ರಸ್ತೆ ನಿರ್ವಹಣೆ ಹಾಗೂ ಮೂಲಸೌಕರ್ಯ ಕಾಮಗಾರಿಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದ್ದು, ರಸ್ತೆ ಗುಂಡಿಗಳ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಬಹುದು ಎಂದು ಗುತ್ತಿಗೆದಾರರು ಆತಂಕ ವ್ಯಕ್ತಪಡಿಸಿದ್ದಾರೆ. ಡಾಂಬರೀಕರಣ ಕಾಮಗಾರಿಗಳಿಗೆ ಮೂರು ತಿಂಗಳ ಅವಧಿಗೆ ‘ಸ್ಟಾರ್‌ ರೇಟ್‌’ ಜಾರಿಗೊಳಿಸುವಂತೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (GBA) ಆದೇಶಿಸಿದೆ. ಆದರೆ ಈ ದರವನ್ನು ಹೇಗೆ ಜಾರಿಗೊಳಿಸಬೇಕು ಎಂಬ ಬಗ್ಗೆ ಜಿಬಿಎ ಅಧಿಕಾರಿಗಳಲ್ಲೇ ಸ್ಪಷ್ಟತೆ ಇಲ್ಲ ಎಂದು ಸಂಘ ಆರೋಪಿಸಿದೆ. ಅಲ್ಲದೆ, ಸಂಘದ ನಿಯೋಗ ಇತ್ತೀಚೆಗೆ ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರನ್ನು ಭೇಟಿಯಾಗಿ ಪ್ರಸ್ತುತ ಪರಿಸ್ಥಿತಿಯ ಕುರಿತು ಮಾಹಿತಿ ನೀಡಿದೆ ಎಂದು ನಂದಕುಮಾರ್‌ ಅವರು ತಿಳಿಸಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಆಲ್ಬರ್ಟ್ ಅಬ್ಬರ: ಆರು ಎಸೆತಗಳಲ್ಲಿ 6 ಸಿಕ್ಸ್​..! – Kannada News | Toby Albert Smashes 6 Sixes in 6 Balls

ಮೆಟ್ರೋ ಬ್ಯಾಂಕ್ ಒನ್-ಡೇ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಯುವ ದಾಂಡಿಗ ಟೋಬಿ ಆಲ್ಬರ್ಟ್ ಸತತ 6 ಸಿಕ್ಸ್ ಸಿಡಿಸಿ ಅಬ್ಬರಿಸಿದ್ದಾರೆ. ಸಸೆಕ್ಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಹ್ಯಾಂಪ್‌ಶೈರ್ ಪರ ಬ್ಯಾಟ್ ಬೀಸಿದ ಟೋಬಿ ಆಲ್ಬರ್ಟ್ (Toby Albert) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು.

225 ರನ್‌ಗಳ ಜೊತೆಯಾಟ:

ಹೋವ್‌ನ ‘ಫಸ್ಟ್ ಸೆಂಟ್ರಲ್ ಕೌಂಟಿ ಗ್ರೌಂಡ್’ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹ್ಯಾಂಪ್‌ಶೈರ್ ತಂಡಕ್ಕೆ ಆರಂಭಿಕ ಆಟಗಾರರಾದ ಅಲಿ ಓರ್ (105 ರನ್) ಮತ್ತು ಬೆನ್ ಮೇಯಸ್ (109 ರನ್) 225 ರನ್‌ಗಳ ಬೃಹತ್ ಜೊತೆಯಾಟದ ಮೂಲಕ ಉತ್ತಮ ಆರಂಭ ಒದಗಿಸಿದ್ದರು. ಆದರೆ, ಪಂದ್ಯದ ನೈಜ ರೋಮಾಂಚನ ಆರಂಭವಾಗಿದ್ದು ಟೋಬಿ ಆಲ್ಬರ್ಟ್ ಕ್ರೀಸ್​ಗೆ ಇಳಿದ ನಂತರ.

ಆಲ್ಬರ್ಟ್​ ಅಬ್ಬರ:

ಈ ಪಂದ್ಯದಲ್ಲಿ ಟೋಬಿ ಆಲ್ಬರ್ಟ್ ಸತತ 6 ಸಿಕ್ಸ್​ ಸಿಡಿಸಿ ಅಕ್ಷರಶಃ ಅಬ್ಬರಿಸಿದರು. ನಾಂಟೆಸ್ ಊಸ್ಟ್‌ಹ್ಯೂಜೆನ್ ಎಸೆದ 44ನೇ ಓವರ್‌ನ 5ನೇ ಮತ್ತು 6ನೇ ಎಸೆತಗಳಲ್ಲಿ ಆಲ್ಬರ್ಟ್ 2 ಸಿಕ್ಸರ್ ಸಿಡಿಸಿದರು. ಓಲಿ ಕಿರ್ಟ್ಲಿ  ಎಸೆದ 45ನೇ ಓವರ್​ನ ಮೊದಲ ಎಸೆತದಲ್ಲಿ ಫೆಲಿಕ್ಸ್ ಆರ್ಗನ್ 1 ರನ್​ ಗಳಿಸಿದರು.

ಈ ಒಂದು ರನ್‌ನಿಂದಾಗಿ ಮತ್ತೆ ಸ್ಟ್ರೈಕ್​ಗೆ ಬಂದ ಟೋಬಿ ಆಲ್ಬರ್ಟ್ ಬ್ಯಾಕ್ ಟು ಬ್ಯಾಕ್ 4 ಸಿಕ್ಸ್ ಸಿಡಿಸಿದರು. ಈ ಮೂಲಕ ಕೇವಲ 6 ಎಸೆತಗಳಲ್ಲಿ 36 ರನ್ ಕಲೆಹಾಕಿದರು.

ಇನ್ನು ಈ ಪಂದ್ಯದಲ್ಲಿ ಕೇವಲ 37 ಎಸೆತಗಳನ್ನು ಎದುರಿಸಿದ ಆಲ್ಬರ್ಟ್ 8 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ  86 ರನ್ ಸಿಡಿಸಿದರು. ಈ ಸ್ಫೋಟಕ ಬ್ಯಾಟಿಂಗ್​ ನೆರವಿನೊಂದಿಗೆ ಹ್ಯಾಂಪ್‌ಶೈರ್ ತಂಡವು 50 ಓವರ್​ಗಳಲ್ಲಿ 383/9 ರನ್ ಕಲೆಹಾಕಿತು.

ಇದನ್ನೂ ಓದಿ: ಟೀಮ್ ಇಂಡಿಯಾ ಆಟಗಾರರು ಗಾಯಗೊಳ್ಳಲು IPL ಕಾರಣ!

384 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಸಸೆಕ್ಸ್ ತಂಡದ ಪರವಾಗಿ ಚಾರ್ಲಿ ಟಿಯರ್ (111 ರನ್) ಮತ್ತು ಜಾಕ್ ಲೀನಿಂಗ್ (92 ರನ್) ಅತ್ಯುತ್ತಮ ಪ್ರದರ್ಶನ ನೀಡಿದರು. ಆದರೆ ಹ್ಯಾಂಪ್‌ಶೈರ್‌ನ ಬೌಲರ್ ಎಡ್ಡಿ ಜಾಕ್ (58 ರನ್‌ಗಳಿಗೆ 4 ವಿಕೆಟ್) ಅವರ ಮಾರಕ ದಾಳಿಗೆ ಸಿಲುಕಿದ ಸಸೆಕ್ಸ್ 48.5 ಓವರ್‌ಗಳಲ್ಲಿ 332 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಹ್ಯಾಂಪ್‌ಶೈರ್ ತಂಡವು 51 ರನ್‌ಗಳ ಭರ್ಜರಿ ಜಯ ಸಾಧಿಸಿತು.

Source link

 Video: ಸಫಾರಿಗೆ ತೆರಳಿದ್ದ ಪ್ರವಾಸಿಗರನ್ನು ಗತ್ತಿನಿಂದಲೇ ಹೆದರಿಸಿ ಓಡಿಸಲು ಪ್ರಯತ್ನಿಸಿದ ಮರಿಯಾನೆ – Kannada News | A baby elephant tried to scare tourists who had gone on a safari.

ಮರಿಯಾನೆಗಳು (baby elephant) ಏನು ಮಾಡಿದ್ರು ಮುದ್ದಾಗಿ ಕಾಣಿಸುತ್ತವೆ. ಅವುಗಳ ಆಟ ತುಂಟಾಟಗಳನ್ನು ನೋಡಲು ಎರಡು ಕಣ್ಣು ಸಾಲಲ್ಲ.. ಇದೀಗ ಮರಿಯಾನೆ ತನ್ನ ಜತೆಗೆ ಅಮ್ಮ ಇದ್ದಾಳೆ ಅನ್ನೋ ಧೈರ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರನ್ನು ಹೆದರಿಸಲು ಪ್ರಯತ್ನಿಸಿದೆ. ಈ ಮರಿಯಾನೆಯ ಕ್ಯೂಟ್ ರಿಯಾಕ್ಷನ್ ಕಂಡು ವಾಹನದಲ್ಲಿದ್ದ ಪ್ರವಾಸಿಗರು ಖುಷಿ ಪಟ್ಟಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಜೋಡಿ ಫಾರ್ಡ್ (Jodi Ford) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರನ್ನು ಹೆದರಿಸಲು ಪ್ರಯತ್ನಿಸುತ್ತಿರುವ ದೃಶ್ಯ ನೋಡಬಹುದು. ಹಿಂಬದಿ ತಾಯಾನೆ ಇರುವ ಧೈರ್ಯದಲ್ಲಿ ಮುಂದಕ್ಕೆ ಓಡೋಡಿ ಬಂದು ತಲೆ ಅಲ್ಲಾಡಿಸುತ್ತ ಪ್ರವಾಸಿಗರನ್ನು ಹೆದರಿಸಿದೆ.  ಆದರೆ ಈ ಮರಿಯಾನೆ ಕ್ಯೂಟ್ ನೆಸ್‌ಗೆ ಪ್ರವಾಸಿಗರು ಫುಲ್ ಫಿದಾ ಆಗಿದ್ದು, ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಈ ದೃಶ್ಯವನ್ನು ಸೆರೆ ಹಿಡಿಯುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: Video: ತೊಟ್ಟಿಯಲ್ಲಿದ್ದ ನೀರು ಕುಡಿಯಲು ಕಷ್ಟ ಪಡುತ್ತಿದ್ದ ಕಂದಮ್ಮನನ್ನು ಬೀಳದಂತೆ ತಡೆದ ತಾಯಾನೆ

ಈ ವಿಡಿಯೋ ಇದುವರೆಗೆ 17 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ಪುಟಾಣಿ ಮರಿಯಾನೆ ಅಮ್ಮ ಇದ್ದಾಳೆ ಎನ್ನುವ ಧೈರ್ಯ ಎಂದಿದ್ದಾರೆ. ಇನ್ನೊಬ್ಬರು ಕ್ಯೂಟಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಅಟ್ಯಾಕ್ 99 ಪೆರ್ಸೆಂಟ್, ಡ್ಯಾಮೇಜ್ 1 ಪರ್ಸೆಂಟ್ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್ ಸೇರಿದಂತೆ 6 ಆರೋಪಿಗಳು ವಿಚಾರಣೆಗೆ ಹಾಜರು

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಆರೋಪಿ ದರ್ಶನ್ ಸೇರಿದಂತೆ ಒಟ್ಟು ಆರು ಮಂದಿ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದಾರೆ. ಪ್ರಮುಖ ಬೆಳವಣಿಗೆಯೆಂದರೆ, ಪ್ರಕರಣದ ಎ14 ಆರೋಪಿ ಪ್ರದೂಶ್ ಈಗಾಗಲೇ ಮಾಫಿ ಸಾಕ್ಷಿಯಾಗುವುದಾಗಿ ಅರ್ಜಿ ಸಲ್ಲಿಸಿದ್ದಾರೆ.

ಪ್ರದೂಶ್ ಅವರ ಈ ಅರ್ಜಿಯನ್ನು ಆಕ್ಷೇಪಿಸಿ ದರ್ಶನ್ ಪರ ವಕೀಲರು ಸಹ ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದು, ಇಂದು ಅದರ ಬಗ್ಗೆ ಕೋರ್ಟ್ ನಿರ್ಧಾರ ಕೈಗೊಳ್ಳಲಿದೆ. ಆಕ್ಷೇಪಣೆ ಸಲ್ಲಿಸಲು ದರ್ಶನ್ ವಕೀಲರಿಗೆ ಅವಕಾಶ ನೀಡಲಾಗುವುದೇ ಅಥವಾ ಪ್ರದೂಶ್‌ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಲಾಗುವುದೇ ಎಂಬ ಕುತೂಹಲ ಮನೆ ಮಾಡಿದೆ. ಪ್ರದೂಶ್ ತನ್ನ ಅರ್ಜಿಯಲ್ಲಿ, ದರ್ಶನ್‌ನಿಂದ ಒತ್ತಡ, ಕೊಲೆ ನಡೆಯುವಾಗ ತಡೆಯುವ ಪ್ರಯತ್ನ, ದೇಹವನ್ನು ಸಾಗಿಸಿದ ರೀತಿ ಮತ್ತು ಗನ್‌ನಿಂದ ಬೆದರಿಕೆ ಕುರಿತು ಹಲವು ಅಂಶಗಳನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಅಂಶಗಳನ್ನು ಕೋರ್ಟ್ ಯಾವ ರೀತಿ ಪರಿಗಣಿಸುತ್ತದೆ ಎಂಬುದರ ಮೇಲೆ ಮುಂದಿನ ಬೆಳವಣಿಗೆಗಳು ನಿರ್ಧಾರವಾಗಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Source link

Exit mobile version