ಬೆಂಗಳೂರಿಗರೇ ಗಮನಿಸಿ: ಕೆಲ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ; ಬದಲಿ ರಸ್ತೆಗಳ ಮಾಹಿತಿ ಇಲ್ಲಿದೆ – Kannada News | Bengaluru Road Closures: MG Road Resurfacing and University Road Diversions from Tomorrow
ಬೆಂಗಳೂರು, ಮಾರ್ಚ್ 04: ಬಹುಕಾಲದ ನಿರೀಕ್ಷೆಯಾಗಿರುವ ಎಂ.ಜಿ. ರಸ್ತೆಯ ಮರು ಡಾಂಬರೀಕರಣ ಕಾಮಗಾರಿಯನ್ನು ಗುರುವಾರದಿಂದ ಆರಂಭಿಸಲು ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್ ಸಜ್ಜಾಗಿದೆ. ಮೊದಲ ಹಂತದಲ್ಲಿ ಟ್ರಿನಿಟಿ ಸರ್ಕಲ್‌ನಿಂದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವೃತ್ತದವರೆಗೆ 2.2 ಕಿಮೀ ಉದ್ದದ ರಸ್ತೆಯ ಮರು ಡಾಂಬರೀಕರಣ ನಡೆಯಲಿದೆ. ಮಾಹಿತಿಯ ಪ್ರಕಾರ, ಮಾರ್ಚ್ 4ರ ಸಂಜೆ (ಇಂದು) ಪೂರ್ವಸಿದ್ಧತಾ ಕಾಮಗಾರಿಗಳು ಆರಂಭವಾಗಲಿವೆ. ಟ್ರಾಫಿಕ್ ಪೊಲೀಸ್ ಅನುಮತಿ ಬಾಕಿ ಇರುವುದರಿಂದ ಸ್ವಲ್ಪ ವಿಳಂಬ ಸಾಧ್ಯತೆ ಇದೆ. ಹೀಗಿದ್ದರೂ 15 ದಿನಗಳೊಳಗೆ ಕಾಮಗಾರಿ…