ಮುತ್ತಪ್ಪ ರೈ ಮಗನ ಮತ್ತೊಂದು ಪುಂಡಾಟದ ವಿಡಿಯೋ ವೈರಲ್: ಸೈಲೆನ್ಸರ್‌ನಲ್ಲಿ ಬೆಂಕಿ ಉಗುಳುತ್ತಾ ಏರ್ಪೋರ್ಟ್ ರಸ್ತೆಯಲ್ಲಿ ಕಾರು ರೇಸಿಂಗ್ – Kannada News | Bengaluru Outrage: Ricky Rai’s Lamborghini Caught Overspeeding on KIA Road, Modified Exhaust

ರಿಕ್ಕಿ ರೈ ಲ್ಯಾಂಬೋರ್ಗಿನಿImage Credit source: Tv9 kannada

ಬೆಂಗಳೂರು, ಜೂ,13: ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಒಡೆತನದ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ಮತ್ತೊಮ್ಮೆ ಭಾರಿ ಸದ್ದು ಮಾಡಿದೆ. ಕೆಲವು ತಿಂಗಳುಗಳ ಹಿಂದಷ್ಟೇ ನಗರದ ಹೃದಯಭಾಗದಲ್ಲಿ ರೇಸಿಂಗ್ ಸ್ಟಂಟ್ (ಡ್ರಿಫ್ಟಿಂಗ್) ಮಾಡಿ ಸಿಕ್ಕಿಬಿದ್ದಿದ್ದ ಇದೇ ಕಾರು, ಇದೀಗ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ರಸ್ತೆಯಲ್ಲಿ ಅತಿವೇಗದ ಚಾಲನೆ ಮತ್ತು ಕರ್ಕಶ ಶಬ್ದದ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.

ರಿಕ್ಕಿ ರೈ ಅವರಿಗೆ ಸೇರಿದ KA 05 NR 0009 ನೋಂದಣಿ ಸಂಖ್ಯೆಯ ಲ್ಯಾಂಬೋರ್ಗಿನಿ ಕಾರನ್ನು ಏರ್ಪೋರ್ಟ್ ರಸ್ತೆಯಲ್ಲಿ ಅತ್ಯಂತ ಅಪಾಯಕಾರಿ ಹಾಗೂ ಅತಿ ವೇಗವಾಗಿ ಚಾಲನೆ ಮಾಡಲಾಗಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ವೀಡಿಯೋದಲ್ಲಿ ಕಾರಿನ ಸೈಲೆನ್ಸರ್ ಅನ್ನು ಮಾಡಿಫೈ (ಮಾರ್ಪಾಡು) ಮಾಡಿರುವುದು ಸ್ಪಷ್ಟವಾಗಿ ಕಾಣಿಸುತ್ತಿದ್ದು, ಕಾರು ವೇಗವಾಗಿ ಚಲಿಸುವಾಗ ಸೈಲೆನ್ಸರ್‌ನಿಂದ ಕರ್ಕಶ ಶಬ್ದದೊಂದಿಗೆ ಬೆಂಕಿ ಉಗುಳುವ ದೃಶ್ಯಗಳು ಸೆರೆಯಾಗಿವೆ. ಈ ಪುಂಡಾಟದ ವೀಡಿಯೋ ಭಾರಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಇಲ್ಲಿದೆ ನೋಡಿ ವಿಡಿಯೋ:

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋವನ್ನು ಆಧರಿಸಿ ಸಂಚಾರಿ ಪೊಲೀಸರು ಮತ್ತು ಕಾನೂನು ಸುವ್ಯವಸ್ಥೆ ಪೊಲೀಸರು ಜಂಟಿ ಪರಿಶೀಲನೆಗೆ ಮುಂದಾಗಿದ್ದಾರೆ. ಈ ಘಟನೆ ನಿಖರವಾಗಿ ಯಾವಾಗ ನಡೆದಿದೆ? ಆ ಸಮಯದಲ್ಲಿ ಕಾರಿನೊಳಗೆ ಯಾರ್ಯಾರು ಇದ್ದರು? ಕಾರನ್ನು ಸ್ವತಃ ರಿಕ್ಕಿ ರೈ ಚಲಾಯಿಸುತ್ತಿದ್ದರೇ ಅಥವಾ ಅವರ ಡ್ರೈವರ್ ಚಲಾಯಿಸುತ್ತಿದ್ದರೇ? ಎಂಬಿತ್ಯಾದಿ ಮಾಹಿತಿಗಳನ್ನು ಕಲೆಹಾಕಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಪ್ರಾಥಮಿಕ ತನಿಖೆ ನಡೆಸಿ, ಶೀಘ್ರದಲ್ಲೇ ಅತಿವೇಗದ ಚಾಲನೆ ಹಾಗೂ ಸೈಲೆನ್ಸರ್ ಮಾರ್ಪಾಡು ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಠಿಣ ಕ್ರಮ ಕೈಗೊಳ್ಳಲು ಸಾರಿಗೆ ಮತ್ತು ಪೊಲೀಸ್ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಇದೇ ಕಾರು ಈ ಹಿಂದೆ ಕಳೆದ ಮಾರ್ಚ್ 21 ರಂದು ಬೆಂಗಳೂರಿನ ಕುಂಬ್ಳೆ ಸರ್ಕಲ್ ಹಾಗೂ ಕಬ್ಬನ್ ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ಕಾರ್ ಡ್ರೈವಿಂಗ್ ಮಾಡಿ ‘ಡ್ರಿಫ್ಟಿಂಗ್’ ಪ್ರಕರಣದಲ್ಲಿ ಸಿಲುಕಿತ್ತು. ಘಟನೆ ನಡೆದ ಆರಂಭದಲ್ಲಿ “ಅಲ್ಲಿ ಇದ್ದದ್ದು ನಾನಲ್ಲ” ಎಂದು ರಿಕ್ಕಿ ರೈ ವಾದಿಸಿದ್ದರು. ಆದರೆ ಕಬ್ಬನ್ ಪಾರ್ಕ್ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ರಿಕ್ಕಿ ರೈ ಅವರೇ ಕಾರು ಓಡಿಸುತ್ತಿರುವುದು ಪತ್ತೆಯಾಗಿ ಎಫ್‌ಐಆರ್ (FIR) ದಾಖಲಾಗಿತ್ತು.

ಇದನ್ನೂ ಓದಿ: ಸಿನಿಮಾ ಸ್ಟೈಲ್​​ನಲ್ಲಿ ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್: ರಾಜಾರೋಷವಾಗಿ ರಸ್ತೆ ಮಧ್ಯೆ ಶೋಕಿ

ಆ ಸಮಯದಲ್ಲಿ ರಿಕ್ಕಿ ರೈ ಪರ ವಕೀಲರು, “ರಸ್ತೆ ಸರಿಯಿರಲಿಲ್ಲ, ಹಾಗಾಗಿ ಕಾರು ಸ್ಕಿಡ್ ಆಗಿದೆ. ಈ ವೇಳೆ ನಮ್ಮ ಕಕ್ಷಿದಾರರು ತಮ್ಮ ಚಾಲನಾ ನೈಪುಣ್ಯತೆ ಮೆರೆದು ಅಪಘಾತ ತಪ್ಪಿಸಿದ್ದಾರೆ” ಎಂದು ಕೋರ್ಟ್‌ನಲ್ಲಿ ವಾದಿಸಿದ್ದು ಭಾರಿ ಅಪಹಾಸ್ಯ ಹಾಗೂ ಟ್ರೋಲ್‌ಗೆ ಒಳಗಾಗಿತ್ತು. ನಂತರ ತಪ್ಪು ಒಪ್ಪಿಕೊಂಡು ಕೋರ್ಟ್ ಮುಂದೆ ದಂಡ ಕಟ್ಟಿದ್ದ ರಿಕ್ಕಿ ರೈ, ಈಗ ಮತ್ತೊಮ್ಮೆ ಅದೇ ಕಾರಿನೊಂದಿಗೆ ಸಂಚಾರ ನಿಯಮ ಉಲ್ಲಂಘಿಸಿ ಪೊಲೀಸರ ರಾಡಾರ್‌ಗೆ ಸಿಲುಕಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Thiruvarapu Krishna Temple: ನೈವೇದ್ಯ ತಡವಾದರೆ ಇಲ್ಲಿನ ಕೃಷ್ಣನ ಮೂರ್ತಿ ಸಣ್ಣಗಾಗುತ್ತೆ; ವಿಜ್ಞಾನಕ್ಕೂ ನಿಲುಕದ ವಿಸ್ಮಯ ದೇವಾಲಯವಿದು – Kannada News | Thiruvarappu Krishna Temple: Kerala’s Unique Shrine Where Idol Shrinks Without Food

ತಿರುವರಪ್ಪು ಶ್ರೀಕೃಷ್ಣ ಸ್ವಾಮಿ ದೇವಾಲಯImage Credit source: Pinterest

ಭಾರತವು ತನ್ನ ಪ್ರಾಚೀನ ಸಂಸ್ಕೃತಿ, ಭವ್ಯ ಇತಿಹಾಸ ಮತ್ತು ನಿಗೂಢ ದೇವಾಲಯಗಳಿಗೆ ಜಗತ್ಪ್ರಸಿದ್ಧಿಯಾಗಿದೆ. ನಮ್ಮ ದೇಶದಲ್ಲಿ ಇಂದಿಗೂ ಹಲವು ದೇವಾಲಯಗಳ ಚಮತ್ಕಾರ ಹಾಗೂ ರಹಸ್ಯಗಳು ವಿಜ್ಞಾನಕ್ಕೆ ಸವಾಲಾಗಿವೆ. ಅಂತಹದೇ ಒಂದು ಅಪರೂಪದ ಮತ್ತು ವಿಸ್ಮಯಕಾರಿ ದೇವಾಲಯ ದಕ್ಷಿಣ ಭಾರತದ ಕೇರಳ ರಾಜ್ಯದಲ್ಲಿದೆ. ಇದು ಭಗವಾನ್ ಶ್ರೀಕೃಷ್ಣನಿಗೆ ಸಮರ್ಪಿತವಾದ ಅತ್ಯಂತ ಪವಿತ್ರ ಕ್ಷೇತ್ರವಾಗಿದೆ.

ಇಲ್ಲಿನ ನಂಬಿಕೆಯ ಪ್ರಕಾರ, ದೇವರಿಗೆ ಒಂದು ದಿನ ನೈವೇದ್ಯ (ಭೋಜನ) ಅರ್ಪಿಸದಿದ್ದರೂ ಸಹ ಇಲ್ಲಿರುವ ಕೃಷ್ಣನ ವಿಗ್ರಹವು ದಿನದಿಂದ ದಿನಕ್ಕೆ ಸಣ್ಣಗಾಗುತ್ತಾ ಹೋಗುತ್ತದೆ. ಇದೇ ಕಾರಣಕ್ಕೆ ಇಲ್ಲಿ ದಿನದ 24 ಗಂಟೆಯೂ ಸಮಯಕ್ಕೆ ಸರಿಯಾಗಿ ಪೂಜೆ, ನೈವೇದ್ಯ ನಡೆಯುತ್ತದೆ. ರಾತ್ರಿ 9 ಗಂಟೆಗೆ ಮುಚ್ಚುವ ದೇವಸ್ಥಾನದ ಬಾಗಿಲನ್ನು, ಮಧ್ಯರಾತ್ರಿ 2 ಗಂಟೆಗೇ ತೆರೆಯಲಾಗುತ್ತದೆ ಮತ್ತು ಮುಂಜಾನೆ 3 ಗಂಟೆಗೆ ದೇವರಿಗೆ ಆಹಾರವನ್ನು ಅರ್ಪಿಸಲಾಗುತ್ತದೆ. ಈ ವಿಶಿಷ್ಟ ದೇವಾಲಯದ ರೋಚಕ ಕಥೆ ಇಲ್ಲಿದೆ:

ಗ್ರಹಣ ಕಾಲದಲ್ಲೂ ಮುಚ್ಚದ ಗರ್ಭಗುಡಿ:

ಸಾಮಾನ್ಯವಾಗಿ ಸೂರ್ಯಗ್ರಹಣ ಅಥವಾ ಚಂದ್ರಗ್ರಹಣದ ಸಮಯದಲ್ಲಿ ದೇಶದಾದ್ಯಂತ ಎಲ್ಲಾ ದೇವಾಲಯಗಳನ್ನು ಮುಚ್ಚಲಾಗುತ್ತದೆ. ಯಾವುದೇ ಪೂಜೆ ಅಥವಾ ನೈವೇದ್ಯಗಳು ನಡೆಯುವುದಿಲ್ಲ. ಆದರೆ, ಕೇರಳದ ತಿರುವರಪ್ಪು ಶ್ರೀಕೃಷ್ಣ ಸ್ವಾಮಿ ದೇವಾಲಯದಲ್ಲಿ (Thiruvarappu Sree Krishna Swamy Temple) ನಿಯಮಗಳೇ ಬೇರೆ!

ಕೇರಳದ ಮೀನಾಚಿಲ್ ನದಿಯ ದಂಡೆಯ ಮೇಲೆ ನೆಲೆಸಿರುವ ಈ ಸುಂದರ ದೇವಾಲಯವು ತನ್ನ ಭವ್ಯ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಹಿಂದೆ ಒಮ್ಮೆ ಸೂರ್ಯಗ್ರಹಣದ ಸಮಯದಲ್ಲಿ ಇತರ ದೇವಾಲಯಗಳಂತೆ ಈ ಮಂದಿರವನ್ನೂ ಮುಚ್ಚಲಾಗಿತ್ತು. ಆದರೆ ಮರುದಿನ ಅರ್ಚಕರು ಗರ್ಭಗುಡಿಯನ್ನು ತೆರೆದಾಗ ಕೃಷ್ಣನ ಮೂರ್ತಿಯನ್ನು ನೋಡಿ ದಂಗಾಗಿದ್ದರು. ದೇವರಿಗೆ ನೈವೇದ್ಯ ಸಿಗದೆ ಕೃಷ್ಣನ ಮೂರ್ತಿ ತೀರಾ ಸಣ್ಣದಾಗಿ, ಕೃಶವಾಗಿ ಕಂಡುಬಂದಿತ್ತು.

ಅರ್ಚಕರು ಕೈಯಲ್ಲಿ ಕೀ ಜೊತೆ ಸುತ್ತಿಗೆಯನ್ನು ಏಕೆ ಇಟ್ಟುಕೊಳ್ಳುತ್ತಾರೆ?

ಗ್ರಹಣದ ದಿನ ನಡೆದ ಈ ಘಟನೆಯಿಂದ ಅರ್ಚಕರೆಲ್ಲರೂ ಕಂಗಾಲಾಗಿದ್ದರು. ಅದೇ ಸಮಯದಲ್ಲಿ ಆದಿ ಶಂಕರಾಚಾರ್ಯರು ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅವರು ಜ್ಞಾನದೃಷ್ಟಿಯಿಂದ ನೋಡಿ, “ಶ್ರೀಕೃಷ್ಣನನ್ನು ಇಡೀ ದಿನ ಹಸಿದಿಟ್ಟಿದ್ದರಿಂದಲೇ ಮೂರ್ತಿ ಹೀಗಾಗಿದೆ” ಎಂದು ತಿಳಿಸಿದರು. ಅಂದಿನಿಂದ ಇಂದಿನವರೆಗೆ ಗ್ರಹಣವೇ ಇರಲಿ, ಯಾವುದೇ ಸೂತಕವೇ ಇರಲಿ ಈ ದೇವಾಲಯದಲ್ಲಿ ಕೃಷ್ಣನಿಗೆ ನೈವೇದ್ಯ ನಿಲ್ಲಿಸುವುದೇ ಇಲ್ಲ.

ವಿಶ್ವದಲ್ಲೇ ಅತಿ ಮುಂಜಾನೆ, ಅಂದರೆ ರಾತ್ರಿ 3 ಗಂಟೆಗೆ ದೇವರಿಗೆ ಭೋಜನ ಉಣಿಸುವ ಏಕೈಕ ಕೃಷ್ಣ ದೇವಾಲಯ ಇದಾಗಿದೆ. ಸರಿಯಾದ ಸಮಯಕ್ಕೆ ನೈವೇದ್ಯ ಅರ್ಪಿಸಬೇಕಾದ ಕಾರಣ, ರಾತ್ರಿ 2 ಗಂಟೆಗೇ ಗರ್ಭಗುಡಿಯ ಬಾಗಿಲು ತೆರೆಯಲಾಗುತ್ತದೆ. ದೇವಸ್ಥಾನದ ಮುಖ್ಯ ಅರ್ಚಕರು ಬಾಗಿಲಿನ ಚಾವಿ(Door Key) ಯ ಜೊತೆಗೆ ಕೈಯಲ್ಲಿ ಒಂದು ಸುತ್ತಿಗೆಯನ್ನು (Hammer) ಸದಾ ಹಿಡಿದುಕೊಂಡಿರುತ್ತಾರೆ. ಒಂದು ವೇಳೆ ಚಾವಿಯಿಂದ ಬಾಗಿಲು ತೆರೆಯುವುದು ತಡವಾದರೆ, ತಕ್ಷಣವೇ ಸುತ್ತಿಗೆಯಿಂದ ಬೀಗ ಮುರಿದು ಒಳಹೋಗಿ ದೇವರಿಗೆ ಆಹಾರ ನೀಡಲು ಈ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಭಕ್ತರಿಗಾಗಿ ಈ ದೇವಾಲಯ ಬೆಳಿಗ್ಗೆ 5 ರಿಂದ ಸಂಜೆ 7 ರವರೆಗೆ ತೆರೆದಿರುತ್ತವೆ.

ಇದನ್ನೂ ಓದಿ: ಅನುಷ್ಕಾ ಶರ್ಮಾ ಕತ್ತಿನಲ್ಲಿರುವ ತುಳಸಿ ಮಾಲೆ ಗಮನಿಸಿದ್ದೀರಾ? ಧರಿಸುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ

ಕೃಷ್ಣನಿಗೆ ನೈವೇದ್ಯ ಅರ್ಪಿಸುವುದು ಏಕೆ ಅಷ್ಟು ಕಡ್ಡಾಯ?

ಪುರಾಣಗಳ ಪ್ರಕಾರ, ಈ ದೇವಾಲಯದಲ್ಲಿ ಸ್ಥಾಪಿಸಲಾದ ಶ್ರೀಕೃಷ್ಣನ ಮೂರ್ತಿಯು ಕಂಸನನ್ನು ವಧಿಸಿದ ನಂತರದ ರೂಪವನ್ನು ಬಿಂಬಿಸುತ್ತದೆ. ಮಹಾ ಯುದ್ಧದ ನಂತರ ಶ್ರೀಕೃಷ್ಣನಿಗೆ ತೀವ್ರವಾದ ಹಸಿವು ಉಂಟಾಗಿತ್ತು ಎನ್ನಲಾಗುತ್ತದೆ. ಆದ್ದರಿಂದಲೇ ಇಲ್ಲಿನ ಕೃಷ್ಣನಿಗೆ ಸರಿಯಾದ ಸಮಯಕ್ಕೆ ಆಹಾರ ನೀಡುವುದು ಅತ್ಯಂತ ಕಡ್ಡಾಯವಾಗಿದೆ. ಇಲ್ಲದಿದ್ದರೆ ಮೂರ್ತಿ ಕರಗಲು ಆರಂಭವಾಗುತ್ತದೆ ಎಂಬುದು ಭಕ್ತರ ಗಾಢ ನಂಬಿಕೆ.

ಇಲ್ಲಿನ ಪ್ರಸಾದದ ವಿಶೇಷತೆ:

ಈ ದೇವಸ್ಥಾನಕ್ಕೆ ಬರುವ ಭಕ್ತರು ಇಲ್ಲಿನ ಪ್ರಸಾದವನ್ನು ಪಡೆದುಕೊಳ್ಳದೇ ವಾಪಸ್ ಹೋಗಬಾರದು ಎಂಬ ಕಠಿಣ ನಿಯಮವಿದೆ. ಇಲ್ಲಿನ ಪ್ರಸಾದವನ್ನು ಸೇವಿಸುವುದರಿಂದ ನವಗ್ರಹ ದೋಷ, ಗ್ರಹಣ ದೋಷ, ಸಂತಾನ ದೋಷ, ಸರ್ಪ ದೋಷ, ವಿವಾಹದ ಅಡೆತಡೆಗಳು ಮತ್ತು ಬ್ರಹ್ಮಹತ್ಯೆಯಂತಹ ಮಹಾ ಪಾಪಗಳೂ ಸಹ ನಿವಾರಣೆಯಾಗುತ್ತವೆ ಎಂದು ಸ್ಥಳೀಯರು ನಂಬುತ್ತಾರೆ.

ದೇವಾಲಯದ ಆವರಣದ ವಿಶೇಷತೆ:

ಈ ವಿಶಿಷ್ಟ ದೇವಾಲಯದ ನಾಲ್ಕೂ ದಿಕ್ಕುಗಳ ಗೋಡೆಗಳ ಮೇಲೆ ವಿವಿಧ ದೇವತೆಗಳ ಮೂರ್ತಿಗಳಿವೆ. ಮೂಡಣದಲ್ಲಿ (ಪೂರ್ವ) ಕೋಚಂಬಲಂ ಜಿ ದೇವಸ್ಥಾನವಿದ್ದರೆ, ಉತ್ತರದಲ್ಲಿ ಶಿವ ಮತ್ತು ನರಸಿಂಹ ಸ್ವಾಮಿಯ ಮೂರ್ತಿಗಳಿವೆ. ಪಶ್ಚಿಮದಲ್ಲಿ ಗಣಪತಿ, ಸುಬ್ರಹ್ಮಣ್ಯ ಹಾಗೂ ಶಾಸ್ತಾ (ಅಯ್ಯಪ್ಪ) ನೆಲೆಸಿದ್ದರೆ, ದಕ್ಷಿಣದಲ್ಲಿ ಯಕ್ಷ ಮತ್ತು ಗಂಧರ್ವರ ಸನ್ನಿಧಿಯಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದುಬೈ ರಸ್ತೆ ಅಪಘಾತ ಸಂತ್ರಸ್ತರಿಗೆ ನೆರವಾದ ಅನಿವಾಸಿ ಭಾರತೀಯ ಉದ್ಯಮಿ: 2.6 ಕೋಟಿ ರೂ. ನೆರವು ಘೋಷಿಸಿದ ಡಾ. ಶಂಶೀರ್ ವಯಾಲಿಲ್ – Kannada News | Dubai Road Accident: NRI Philanthropist Dr Shamsheer Vayalil Announces Rs 2.6 Crore Relief Package for Deceased Families

ದುಬೈನ ಎಮಿರೇಟ್ಸ್ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದ ಚಿತ್ರImage Credit source: tv9

ದುಬೈ, ಜೂನ್ 13: ದುಬೈನ ಎಮಿರೇಟ್ಸ್ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಾಗೂ ಗಾಯಗೊಂಡ ಕಾರ್ಮಿಕರ ಕುಟುಂಬಗಳಿಗೆ ನೆರವಾಗಲು ಪ್ರಮುಖ ಅನಿವಾಸಿ ಭಾರತೀಯ ಉದ್ಯಮಿ, ಬುರ್ಜೀಲ್ ಹೋಲ್ಡಿಂಗ್ಸ್ ಸಂಸ್ಥೆಯ ಚೇರ್ಮನ್ ಹಾಗೂ ಸಿಇಒ ಡಾ. ಶಂಶೀರ್ ವಯಾಲಿಲ್ 2.6 ಕೋಟಿ ರೂ. ಮೊತ್ತದ ಬೃಹತ್ ಪರಿಹಾರದ ಪ್ಯಾಕೇಜ್ ಘೋಷಿಸಿದ್ದಾರೆ. ಈ ಅಪಘಾತದಲ್ಲಿ ಮೃತಪಟ್ಟ ಏಳು ಕಾರ್ಮಿಕರ ಕುಟುಂಬಗಳು ಹಾಗೂ ಗಾಯಗೊಂಡ ಒಂಬತ್ತು ಮಂದಿಗೆ ಆರ್ಥಿಕ ಚೇತರಿಕೆ, ತುರ್ತು ಪ್ರಯಾಣ ಮತ್ತು ಮಕ್ಕಳ ಶಿಕ್ಷಣಕ್ಕಾಗಿ ಈ ನೆರವು ಒದಗಿಸಲಾಗುತ್ತಿದೆ.

ಮುಖ್ಯಾಂಶಗಳು

  • ಸಂತ್ರಸ್ತರ ಕುಟುಂಬಗಳಿಗೆ ಭಾರಿ ಆರ್ಥಿಕ ನೆರವು.
  • ಮೃತರ ಕುಟುಂಬಕ್ಕೆ ತಲಾ 26 ಲಕ್ಷ ರೂ.
  • ಗಾಯಾಳುಗಳ ವೈದ್ಯಕೀಯ ಚಿಕಿತ್ಸೆಗೆ ವಿಶೇಷ ಧನಸಹಾಯ.

ಯಾರಿಗೆ ಎಷ್ಟೆಷ್ಟು ಆರ್ಥಿಕ ಸಹಾಯ?

ಡಾ. ಶಂಶೀರ್ ವಯಾಲಿಲ್ ಅವರ ಈ ಮಾನವೀಯ ಕಾರ್ಯಕ್ರಮದ ಅಡಿಯಲ್ಲಿ, ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಏಳು ಸಂತ್ರಸ್ತರ ಕುಟುಂಬಗಳಿಗೆ ತಲಾ 26 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುವುದು. ಇನ್ನು ತೀವ್ರವಾಗಿ ಗಾಯಗೊಂಡಿರುವ ಒಂಬತ್ತು ಮಂದಿ ಬದುಕುಳಿದವರ ವೈದ್ಯಕೀಯ ಮತ್ತು ಚಿಕಿತ್ಸೆ ಅಗತ್ಯತೆಗಳ ಆಧಾರದ ಮೇಲೆ ಒಟ್ಟು 47 ಲಕ್ಷ ರೂ. ಹಣವನ್ನು ಹಂಚಿಕೆ ಮಾಡಲಾಗಿದೆ. ಇದರೊಂದಿಗೆ, ಸಂತ್ರಸ್ತರ ಕುಟುಂಬಸ್ಥರ ತುರ್ತು ದುಬೈ ಪ್ರಯಾಣ ಮತ್ತು ವಸತಿ ಸೌಕರ್ಯಕ್ಕಾಗಿ 18 ಲಕ್ಷ ರೂ. ಹಾಗೂ ಅಪಘಾತದಿಂದ ಆಧಾರ ಕಳೆದುಕೊಂಡ ಕುಟುಂಬಗಳ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕಾಗಿ 13 ಲಕ್ಷ ರೂ. ನೆರವನ್ನು ಮೀಸಲಿಡಲಾಗಿದೆ.

ಅಪಘಾತದ ಹಿನ್ನೆಲೆ ಮತ್ತು ಸಂತ್ರಸ್ತರ ವಿವರ

ದುಬೈ ಮೂಲದ ಕಂಪನಿಯೊಂದರ ಉದ್ಯೋಗಿಗಳನ್ನು ಹೊತ್ತೊಯ್ಯುತ್ತಿದ್ದ ಮಿನಿಬಸ್, ತಾಂತ್ರಿಕ ದೋಷದಿಂದ ರಸ್ತೆಯಲ್ಲಿ ನಿಂತಿದ್ದ ಟ್ರಕ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಾಗ ಈ ದುರಂತ ಸಂಭವಿಸಿತ್ತು. ಅಪಘಾತಕ್ಕೊಳಗಾದವರಲ್ಲಿ ಭಾರತ, ಶ್ರೀಲಂಕಾ ಮತ್ತು ನೇಪಾಳದ ಕಾರ್ಮಿಕರಿದ್ದಾರೆ. ಮೃತಪಟ್ಟ ಏಳು ಜನರಲ್ಲಿ ಆರು ಮಂದಿ ಭಾರತೀಯರು (ಮೂವರು ಉತ್ತರ ಪ್ರದೇಶ ಹಾಗೂ ಮೂವರು ತೆಲಂಗಾಣದವರು) ಮತ್ತು ಒಬ್ಬರು ಶ್ರೀಲಂಕಾದ ಪ್ರಜೆಯಾಗಿದ್ದಾರೆ. ಗಾಯಗೊಂಡ ಒಂಬತ್ತು ಜನರಲ್ಲಿ ಎಂಟು ಮಂದಿ ಭಾರತೀಯರಾಗಿದ್ದು (ಇಬ್ಬರು ಕೇರಳದವರು), ಒಬ್ಬರು ನೇಪಾಳದವರಾಗಿದ್ದಾರೆ. ಗಾಯಾಳುಗಳ ಪೈಕಿ ಐವರು ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಮೂವರು ಭಾರತೀಯರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರತೀಯ ರಾಯಭಾರ ಕಚೇರಿ ಜೊತೆ ಸಮನ್ವಯ

ಈ ಆರ್ಥಿಕ ಸಹಾಯವನ್ನು ಅರ್ಹ ಕುಟುಂಬಗಳಿಗೆ ಸಮರ್ಪಕವಾಗಿ ತಲುಪಿಸಲು ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ (Indian Consulate) ಸಮನ್ವಯ ಸಾಧಿಸಲಾಗುತ್ತಿದೆ. ‘ನಾವು ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದು, ಮಾನವೀಯತೆಯ ದೃಷ್ಟಿಯಿಂದ ಈ ಅಪಘಾತದಿಂದ ತೊಂದರೆಗೊಳಗಾದ ಎಲ್ಲಾ ದೇಶಗಳ ಸಂತ್ರಸ್ತರಿಗೂ ನೆರವು ವಿಸ್ತರಿಸಲಾಗುವುದು’ ಎಂದು ಡಾ. ಶಂಶೀರ್ ತಿಳಿಸಿದ್ದಾರೆ.

ಬುರ್ಜೀಲ್ ಹೋಲ್ಡಿಂಗ್ಸ್ ಸಂಸ್ಥೆಯ ಚೇರ್ಮನ್ ಹಾಗೂ ಸಿಇಒ ಡಾ. ಶಂಶೀರ್ ವಯಾಲಿಲ್

ಈ ಹಿಂದೆಯೂ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ವೈದ್ಯಕೀಯ ವಿದ್ಯಾರ್ಥಿಗಳ ಕುಟುಂಬಗಳಿಗೆ ಡಾ. ಶಂಶೀರ್ 6 ಕೋಟಿ ರೂ. ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಯುದ್ಧದ ನಡುವೆ ಫಿಫಾ ವಿಶ್ವಕಪ್​​ಗೆ ಇರಾನ್ ಎಂಟ್ರಿ..! – Kannada News | Iran football team arrives in Mexico for fifa World Cup 2026

2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಇರಾನ್ ಕಣಕ್ಕಿಳಿಯಲಿದೆಯಾ? ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಏಕೆಂದರೆ ಫಿಫಾ ವಿಶ್ವಕಪ್​ಗಾಗಿ ಈಗಾಗಲೇ ಇರಾನ್ ರಾಷ್ಟ್ರೀಯ ಫುಟ್‌ಬಾಲ್ ಮೆಕ್ಸಿಕೋದ ಟಿಜುವಾನಾ ನಗರಕ್ಕೆ ಬಂದು ತಲುಪಿದೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ವೀಸಾ ಗೊಂದಲಗಳಿಂದಾಗಿ ಈ ಬಾರಿ ಇರಾನ್ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿತ್ತು. ಆದರೆ ಇದೀಗ ಇರಾನ್ ಪಡೆ ವಿಶ್ವಕಪ್​ ಆಡಲು ಸಕಲ ರೀತಿಯಲ್ಲೂ ಸಜ್ಜಾಗಿ ನಿಂತಿದೆ.

ಇರಾನ್ ಹೋಗಿದ್ದು ಹೇಗೆ?

ಈ ಬಾರಿಯ ಫಿಫಾ ವಿಶ್ವಕಪ್ ಆಯೋಜಿಸುತ್ತಿರುವುದು ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ. ಆದರೆ ಇರಾನ್ ದೇಶದ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಇರಾನ್ ಏರ್ ವಿಮಾನಗಳು ಅಮೆರಿಕದ ವಾಯುಪ್ರದೇಶವನ್ನು ಪ್ರವೇಶಿಸಲು ಅನುಮತಿ ನೀಡಿರಲಿಲ್ಲ. ಹೀಗಾಗಿಯೇ ಇರಾನ್ ಈ ಬಾರಿ ಕಣಕ್ಕಿಳಿಯುವುದಿಲ್ಲ ಎಂದು ಎಲ್ಲರೂ ಭಾವಿಸಿದ್ದರು.

ಅದರಲ್ಲೂ ಇರಾನ್ ಮೇಲೆ ಅಮೆರಿಕ/ಇಸ್ರೇಲ್ ದಾಳಿ ಮಾಡುತ್ತಿದ್ದರಿಂದ ವಿಶ್ವಕಪ್​ಗೆ ತೆರಳುವುದು ಸವಾಲಾಗಿತ್ತು. ಆದರೆ ಎಲ್ಲರ ಲೆಕ್ಕಾಚಾರಗಳನ್ನು ತಲೆಕಳಗಾಗಿಸಿ ಇರಾನ್ ರಾಷ್ಟ್ರೀಯ ಫುಟ್​ಬಾಲ್ ತಂಡ ಪ್ರಯಾಣಿಸಿದೆ.

ಇರಾನ್​ನಿಂದ ಟರ್ಕಿಗೆ ತೆರಳಿದ ಇರಾನ್ ಫುಟ್​ಬಾಲ್ ತಂಡವು ಅಲ್ಲಿಂದೆ ಸ್ಲೇನ್​ಗೆ ಹೋಗಿದ್ದಾರೆ. ಸ್ಪೇನ್​ನಿಂದ ನೇರವಾಗಿ ಮೆಕ್ಸಿಕೋದ ಗಡಿ ನಗರವಾದ ಟಿಜುವಾನಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇದೀಗ ಮೆಕ್ಸಿಕೋದಲ್ಲಿ ಇರಾನ್ ತಂಡವು ಅಭ್ಯಾಸವನ್ನು ಆರಂಭಿಸಿದ್ದಾರೆ.

ಅಮೆರಿಕದ ವೀಸಾ ನಿರಾಕರಣೆ!

ವಿಶ್ವಕಪ್‌ನ ಗ್ರೂಪ್ ‘ಜಿ’ ನಲ್ಲಿರುವ ಇರಾನ್ ತಂಡದ ಎಲ್ಲಾ ಮೂರು ಪಂದ್ಯಗಳು ಅಮೆರಿಕದ ಮೈದಾನಗಳಲ್ಲೇ ನಿಗದಿಯಾಗಿವೆ. ಆದಾಗ್ಯೂ, ಇರಾನ್ ಆಟಗಾರರು ಮತ್ತು ಸಿಬ್ಬಂದಿಗೆ ಅಮೆರಿಕ ಕಠಿಣ ನಿಯಮಗಳನ್ನು ವಿಧಿಸಿದೆ.

ಇರಾನ್ ಫುಟ್‌ಬಾಲ್ ಫೆಡರೇಶನ್ ಮೊದಲು ಅರಿಜೋನಾದಲ್ಲಿ ತರಬೇತಿ ಪಡೆಯಲು ಯೋಜಿಸಿತ್ತು. ಆದರೆ ಅಮೆರಿಕ ಸರ್ಕಾರವು ಆಟಗಾರರಿಗೆ ವೀಸಾ ನೀಡಿದರೂ, ತಂಡದ ಮ್ಯಾನೇಜರ್ ಮಹ್ದಿ ಮೊಹಮ್ಮದ್ ನಬಿ ಮತ್ತು ಪ್ರಧಾನ ಕಾರ್ಯದರ್ಶಿ ಹೆದಾಯತ್ ಮೊಂಬೆನಿ ಸೇರಿದಂತೆ 15 ಪ್ರಮುಖ ಸಹಾಯಕ ಸಿಬ್ಬಂದಿಗೆ ವೀಸಾ ನಿರಾಕರಿಸಿದೆ. ಅಲ್ಲದೆ ಇರಾನ್ ತಂಡದ ಸದಸ್ಯರು ಅಮೆರಿಕದಲ್ಲಿ ರಾತ್ರಿ ತಂಗುವಂತಿಲ್ಲ ಎಂದು ತಿಳಿಸಿದೆ.

ಇದೀಗ ಇರಾನ್ ಆಟಗಾರರು ಪಂದ್ಯ ನಡೆಯುವ ದಿನದಂದೇ ಮೆಕ್ಸಿಕೋದಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಿ, ಪಂದ್ಯ ಮುಗಿದ ತಕ್ಷಣವೇ ವಾಪಸ್ ಮೆಕ್ಸಿಕೋಗೆ ಮರಳಲು ಯೋಜನೆ ರೂಪಿಸಿದ್ದಾರೆ. ಈ ಮೂಲಕ ಫಿಫಾ ವಿಶ್ವಕಪ್​ನಲ್ಲಿ ಕಣಕ್ಕಿಳಿಯುವುದನ್ನು ಇರಾನ್ ಖಚಿತಪಡಿಸಿದೆ.

ಇರಾನ್ ಅಭಿಮಾನಿಗಳಿಗೆ ನಿರ್ಬಂಧ!

ಇರಾನ್ ತಂಡಕ್ಕೆ ಅಮೆರಿಕಕ್ಕೆ ಬರಲು ನಿಯಮ ಸಡಿಸಿದರೂ, ಯುಎಸ್​ಎ ಇರಾನ್ ಅಭಿಮಾನಿಗಳಿಗೆ ನಿರ್ಬಂಧ ವಿಧಿಸಿದೆ. ಅಲ್ಲದೆ ಭದ್ರತಾ ಕಾರಣಗಳಿಂದಾಗಿ ಫಿಫಾ (FIFA) ಇರಾನ್ ಅಭಿಮಾನಿಗಳಿಗೆ ನಿಗದಿಪಡಿಸಿದ್ದ ಟಿಕೆಟ್ ಕೋಟಾವನ್ನು ರದ್ದುಗೊಳಿಸಿದೆ. ಇದರಿಂದಾಗಿ ಇರಾನ್ ತಂಡವು ಮೈದಾನದಲ್ಲಿ ಅಭಿಮಾನಿಗಳ ಬೆಂಬಲವಿಲ್ಲದೆ ಆಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2026ರ ಫಿಫಾ ವಿಶ್ವಕಪ್‌ನಲ್ಲಿ ಇರಾನ್ ಫುಟ್‌ಬಾಲ್ ತಂಡದ ಪಯಣವು ಕೇವಲ ಕ್ರೀಡೆಯಾಗಿ ಉಳಿದಿಲ್ಲ. ಬದಲಿಗೆ ರಾಜತಾಂತ್ರಿಕ ಸಂಘರ್ಷಗಳು ಮತ್ತು ಕಠಿಣ ಸವಾಲುಗಳ ನಡುವಿನ ಹೋರಾಟವಾಗಿ ಮಾರ್ಪಟ್ಟಿದೆ. ಅಮೆರಿಕದ ಕಠಿಣ ನಿರ್ಬಂಧಗಳ ನಡುವೆಯೂ ಮೆಕ್ಸಿಕೋವನ್ನು ತಮ್ಮ ತಾತ್ಕಾಲಿಕ ನೆಲೆಯಾಗಿಸಿಕೊಂಡಿರುವ ಇರಾನ್ ಆಟಗಾರರು, ಕೇವಲ ಎದುರಾಳಿ ತಂಡಗಳ ವಿರುದ್ಧ ಮಾತ್ರವಲ್ಲದೆ ಭೌಗೋಳಿಕ ಸವಾಲುಗಳ ವಿರುದ್ಧವೂ ಹೋರಾಡಬೇಕಿದೆ.  ಅಭಿಮಾನಿಗಳ ಅಬ್ಬರವಿಲ್ಲದ, ಸ್ವಂತ ತರಬೇತುದಾರರ ಬೆಂಬಲ ಕಳೆದುಕೊಂಡಿರುವ ಇರಾನ್ ತಂಡವು ಮೈದಾನದಲ್ಲಿ ಹೇಗೆ ಪ್ರದರ್ಶನ ನೀಡಲಿದೆ ಎಂಬುದು ಇಡೀ ವಿಶ್ವದ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: 7 ಭರ್ಜರಿ ದಾಖಲೆಗಳನ್ನು ಬದಿಗಿಟ್ಟು ನಿವೃತ್ತಿ ಘೋಷಿಸಿದ ಕೇನ್ ವಿಲಿಯಮ್ಸನ್!

ಇರಾನ್ ತಂಡದ ಪಂದ್ಯಗಳ ವೇಳಾಪಟ್ಟಿ (ಗ್ರೂಪ್ G):

  •  ಜೂನ್ 15: ಇರಾನ್ vs ನ್ಯೂಝಿಲೆಂಡ್ (ಲಾಸ್ ಏಂಜಲೀಸ್ ಸ್ಟೇಡಿಯಂ, ಕ್ಯಾಲಿಫೋರ್ನಿಯಾ)
  • ಜೂನ್ 21: ಇರಾನ್ vs ಬೆಲ್ಜಿಯಂ (ಲಾಸ್ ಏಂಜಲೀಸ್ ಸ್ಟೇಡಿಯಂ, ಕ್ಯಾಲಿಫೋರ್ನಿಯಾ)
  • ಜೂನ್ 26: ಇರಾನ್ vs ಈಜಿಪ್ಟ್ (ಸಿಯಾಟಲ್ ಸ್ಟೇಡಿಯಂ, ವಾಷಿಂಗ್ಟನ್)

Source link

ಪಿಯುಸಿ ಹಾಗೂ ಸಿಇಟಿ ವಿದ್ಯಾರ್ಥಿಗಳಿಗೆ ಕೆಇಎ ಬಿಗ್ ರಿಲೀಫ್: ಇನ್ಮುಂದೆ ‘ಒಂದು ಅರ್ಜಿ, ಎರಡು ಪರೀಕ್ಷೆ’; ಸಾಲು ಸಾಲು ಎಡವಟ್ಟುಗಳಿಗೆ ಬ್ರೇಕ್ – Kannada News | KEA Streamlines UG CET and 2nd PU Application: New Integrated System Launched

ಬೆಂಗಳೂರು, ಜೂ.13: ದ್ವಿತೀಯ ಪಿಯುಸಿ ಹಾಗೂ ಸಿಇಟಿ (UG-CET) ಪರೀಕ್ಷೆ ಬರೆಯುವ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಹಿ ಸುದ್ದಿ ನೀಡಿದೆ. ಪ್ರತಿ ವರ್ಷ ಸಿಇಟಿ ಅರ್ಜಿ ಸಲ್ಲಿಕೆ ವೇಳೆ ಸರ್ವರ್ ಸಮಸ್ಯೆ, ತಪ್ಪು ಮಾಹಿತಿ ಸಲ್ಲಿಕೆಯಂತಹ ಸಾಲು ಸಾಲು ಅವಾಂತರಗಳಿಂದ ಕಂಗಾಲಾಗುತ್ತಿದ್ದ ವಿದ್ಯಾರ್ಥಿಗಳ ನೆರವಿಗೆ ಧಾವಿಸಿರುವ ಪ್ರಾಧಿಕಾರ, ಇನ್ಮುಂದೆ ಪಿಯುಸಿ ಹಾಗೂ ಸಿಇಟಿ ಎರಡಕ್ಕೂ ಸೇರಿ ‘ಒಂದೇ ಅರ್ಜಿ’ ಸಲ್ಲಿಸುವ ಕ್ರಾಂತಿಕಾರಿ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ.

ವಿದ್ಯಾರ್ಥಿಗಳಿಗೆ ಸಿಇಟಿ ಬಗ್ಗೆ ಸಮಗ್ರ ಮಾಹಿತಿ ನೀಡಿ, ಸುಲಭವಾಗಿ ಅರ್ಜಿ ಸಲ್ಲಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಇಎ ಹಾಗೂ ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಗಳು ಕೈಜೋಡಿಸಿವೆ. ಹೊಸ ನಿಯಮದ ಪ್ರಕಾರ, ವಿದ್ಯಾರ್ಥಿಗಳು ಮುಂಬರುವ ಶೈಕ್ಷಣಿಕ ಸಾಲಿನಿಂದ ಸಾಮಾನ್ಯ ಪ್ರವೇಶ ಪರೀಕ್ಷೆಗೆ (UG-CET) ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. ಬದಲಾಗಿ, ದ್ವಿತೀಯ ಪಿಯುಸಿ ಪ್ರವೇಶ ಪಡೆಯುವ ಸಂದರ್ಭದಲ್ಲೇ ನೀಡಲಾಗುವ ಅರ್ಜಿಯಲ್ಲಿ ‘ಸಿಇಟಿ ಆಯ್ಕೆ’ಯನ್ನು ನಮೂದಿಸಬಹುದು. ಅಲ್ಲಿಯೇ ನಿಗದಿತ ಶುಲ್ಕ ಪಾವತಿಸಿದ ಬಳಿಕ ನೇರವಾಗಿ ಪ್ರವೇಶಪತ್ರ ಪಡೆಯುವ ಸರಳ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ.

ಸಾಮಾನ್ಯವಾಗಿ ದ್ವಿತೀಯ ಪಿಯುಸಿ ಪರೀಕ್ಷೆಯ ಸಿದ್ಧತೆಯ ಭರದಲ್ಲಿ ಮತ್ತು ತೀವ್ರ ಮಾನಸಿಕ ಒತ್ತಡದಲ್ಲಿರುವ ಕಾರಣ, ಬಹುತೇಕ ವಿದ್ಯಾರ್ಥಿಗಳು ಸಿಇಟಿಗೆ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಲು ವಿಫಲರಾಗುತ್ತಿದ್ದರು. ಸೈಬರ್ ಸೆಂಟರ್‌ಗಳ ಮೂಲಕ ಅರ್ಜಿ ಸಲ್ಲಿಸುವಾಗ ಹೆಸರು, ಜಾತಿ ಪ್ರಮಾಣಪತ್ರ, ಆರ್​ಡಿ ನಂಬರ್ ಸೇರಿದಂತೆ ಅನೇಕ ತಪ್ಪುಗಳನ್ನು ದಾಖಲಿಸಿ ಕೌನ್ಸಿಲಿಂಗ್ ವೇಳೆ ಪರದಾಡುತ್ತಿದ್ದರು.

ಆದರೆ, ವಿದ್ಯಾರ್ಥಿಗಳು ಪಿಯುಸಿಗೆ ದಾಖಲಾಗುವಾಗ ಕಾಲೇಜು ಪ್ರಾಂಶುಪಾಲರ ನೇರ ಉಸ್ತುವಾರಿಯಲ್ಲೇ ಕಂಪ್ಲೀಟ್ ಮಾಹಿತಿ ಹಾಗೂ ದಾಖಲೆಗಳನ್ನು ಸಲ್ಲಿಸುವುದರಿಂದ ಯಾವುದೇ ತಪ್ಪುಗಳಾಗುವ ಸಂಭವ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಪಿಯುಸಿ ಅರ್ಜಿಯನ್ನೇ ಸಿಇಟಿಗೂ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ಸಮಯ ವ್ಯಯವಾಗುವುದು ತಪ್ಪಲಿದ್ದು, ಮಾನಸಿಕ ಒತ್ತಡವೂ ನಿವಾರಣೆಯಾಗಲಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಎಚ್. ಪ್ರಸನ್ನ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ನೀಟ್ ಮರುಪರೀಕ್ಷೆ ಒತ್ತಡದಲ್ಲಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಈ ವರ್ಷ ಮೆಡಿಕಲ್, ಡೆಂಟಲ್ ಕೋರ್ಸ್ ಶುಲ್ಕ ಹೆಚ್ಚಳವಿಲ್ಲ

ರಾಜ್ಯದಲ್ಲಿ ಸಿಇಟಿ ಪರೀಕ್ಷೆ ಬರೆಯುವ ಒಟ್ಟು ವಿದ್ಯಾರ್ಥಿಗಳಲ್ಲಿ ಶೇಕಡಾ 85 ಕ್ಕಿಂತ ಹೆಚ್ಚು ಆಕಾಂಕ್ಷಿಗಳು ರಾಜ್ಯ ಪಠ್ಯಕ್ರಮದ ಹಿನ್ನೆಲೆಯುಳ್ಳವರಾಗಿದ್ದಾರೆ. ಹೀಗಾಗಿ ಪದವಿಪೂರ್ವ ನಿರ್ದೇಶನಾಲಯದ ಸಹಯೋಗದಲ್ಲಿ ಸಿದ್ಧವಾಗುತ್ತಿರುವ ಈ ಹೊಸ ಸ್ವರೂಪದ ಸಂಯೋಜಿತ ಅರ್ಜಿ ವ್ಯವಸ್ಥೆಯು ಗ್ರಾಮೀಣ ಹಾಗೂ ನಗರ ಭಾಗದ ವಿದ್ಯಾರ್ಥಿಗಳಿಗೆ ವರದಾನವಾಗಲಿದ್ದು, ಈ ನೂತನ ಪ್ರಯೋಗವು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:56 am, Sat, 13 June 26

Source link

ಬಿಡದಿ ಟೌನ್‌ಶಿಪ್ ಯೋಜನೆ: ರೈತರ ಆಕ್ರೋಶಕ್ಕೆ ಜೆಡಿಎಸ್-ಬಿಜೆಪಿ ಬೆಂಬಲ, ಜೂನ್ 20ಕ್ಕೆ ಬೃಹತ್ ಪ್ರತಿಭಟನೆ – Kannada News | Bidadi Township Dispute: BJP JDS Back Farmers’ Outrage Against Land Acquisition; Mega Protest Scheduled for June 20

ರಾಮನಗರ, ಜೂನ್ 13: ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ವಿಪಕ್ಷಗಳ ನಡುವೆ ಜಟಾಪಟಿ ಆರಂಭವಾಗಿದೆ. ರೈತರ ತೀವ್ರ ವಿರೋಧದ ನಡುವೆಯೂ, ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕಾಗಿ 516 ಎಕರೆ ಭೂಸ್ವಾಧೀನಕ್ಕೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಯೋಜನೆಗೆ ಸುಮಾರು 18,133 ಕೋಟಿ ರೂ. ವೆಚ್ಚವಾಗುವ ಅಂದಾಜಿದೆ. ಭೂಮಾಲೀಕರಿಗೆ ನಗದು ಪರಿಹಾರ ಅಥವಾ ಅಭಿವೃದ್ಧಿಪಡಿಸಿದ ನಿವೇಶನ ನೀಡುವ ಯೋಜನೆಯಿದೆ. ಆದರೆ, ಈ ಭೂಸ್ವಾಧೀನ ಪ್ರಕ್ರಿಯೆಗೆ ರೈತರು ತಮ್ಮ ಸಮ್ಮತಿ ನೀಡಿಲ್ಲ. ರೈತರ ಒಪ್ಪಿಗೆ ಇಲ್ಲದೆ ಭೂಸ್ವಾಧೀನ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿರುವ ವಿರೋಧ ಪಕ್ಷಗಳು, ಇದು ರೈತ ವಿರೋಧಿ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿವೆ. ರೈತರ ಹೋರಾಟಕ್ಕೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ದನಿಗೂಡಿಸಿದ್ದು, ಸರ್ಕಾರದ ಕ್ರಮವನ್ನು ದಬ್ಬಾಳಿಕೆ ಎಂದು ಕರೆದಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಕೂಡ ರೈತರ ಹೋರಾಟಕ್ಕೆ ಬೆಂಬಲ ಘೋಷಿಸಿವೆ.

ಸರ್ಕಾರ ಭೂಸ್ವಾಧೀನ ನಿರ್ಧಾರದ ವಿರುದ್ಧ ಜೂನ್ 20ರಂದು ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ. ಈ ಹೋರಾಟದಲ್ಲಿ ಏಳರಿಂದ ಎಂಟು ಜಿಲ್ಲೆಗಳ ರೈತರು ಭಾಗವಹಿಸುವ ನಿರೀಕ್ಷೆಯಿದೆ. ಬಿಡದಿ ಟೌನ್‌ಶಿಪ್ ಅನ್ನು ಗ್ರೇಟರ್ ಬೆಂಗಳೂರು ಟೌನ್‌ಶಿಪ್ ಎಂದು ಸಹ ಉಲ್ಲೇಖಿಸಲಾಗುತ್ತಿದ್ದು, ಇದು ಈಗ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಘರ್ಷಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಜನಿಕಾಂತ್‌ ಅವರ ಈ ಚಿತ್ರದಿಂದ ಸ್ಫೂರ್ತಿ ಪಡೆದಿದೆ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ – Kannada News | Samantha’s ‘Maa Inti Bangaram’: Basha Inspired Action Comedy Releasing June 19

ಟಾಲಿವುಡ್ ಸ್ಟಾರ್ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅಭಿನಯದ ಮುಂಬರುವ ಆ್ಯಕ್ಷನ್ ಕಾಮಿಡಿ ಸಿನಿಮಾ ‘ಮಾ ಇಂಟಿ ಬಂಗಾರಂ’ ಸದ್ಯ ಭಾರಿ ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ಕನ್ನಡದ ಹೀರೋ ದಿಗಂತ್ ಕೂಡ ನಟಿಸಿದ್ದಾರೆ. ಇದರ ನಡುವೆ ಚಿತ್ರದ ಕಥೆಯ ಬಗ್ಗೆ ಪ್ರಮುಖ ರಹಸ್ಯವೊಂದನ್ನು ನಿರ್ದೇಶಕಿ ನಂದಿನಿ ರೆಡ್ಡಿ ಬಿಚ್ಚಿಟ್ಟಿದ್ದಾರೆ. ಈ ಚಿತ್ರದ ಕಥೆಯು ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ‘ಬಾಷಾ’ ಸಿನಿಮಾದಿಂದ ಸ್ಫೂರ್ತಿ ಪಡೆದಿದೆ ಎಂದು ಅವರು ಹೇಳಿದ್ದಾರೆ.

ಮಾಧ್ಯಮವೊಂದರ ಜೊತೆ ಮಾತನಾಡಿರುವ ನಿರ್ದೇಶಕಿ ನಂದಿನಿ ರೆಡ್ಡಿ, ‘ಮಾ ಇಂಟಿ ಬಂಗಾರಂ ಸಿನಿಮಾ ಬಾಷಾ ರೀತಿಯ ಕಥೆಯನ್ನು ಹೊಂದಿದೆ. ಬಾಷಾ ಚಿತ್ರದಲ್ಲಿ ನಾಯಕನಿಗೆ ಒಂದು ಫ್ಲ್ಯಾಶ್‌ಬ್ಯಾಕ್ (ರಹಸ್ಯ ಹಿನ್ನೆಲೆ) ಇರುವಂತೆ, ಇಲ್ಲೂ ಕೂಡ ಮುಖ್ಯ ಪಾತ್ರಕ್ಕೆ ಒಂದು ದೊಡ್ಡ ಹಿನ್ನೆಲೆ ಇರುತ್ತದೆ. ಆದರೆ, ನಾವು ಆ ಟೆಂಪ್ಲೇಟ್‌ಗೆ ಸಣ್ಣದೊಂದು ಟ್ವಿಸ್ಟ್ ಕೊಟ್ಟಿದ್ದೇವೆ. ಓರ್ವ ಮಹಿಳೆ ಆ ಜಾಗದಲ್ಲಿದ್ದರೆ ಕಥೆ ಹೇಗೆ ಸಾಗುತ್ತದೆ ಎಂಬುದನ್ನು ಕೌತುಕವಾಗಿ ತೋರಿಸಿದ್ದೇವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಾಯಿ ಪಲ್ಲವಿ ಮಾಡಬೇಕಿದ್ದ ಪಾತ್ರ ಸಮಂತಾ ಪಾಲಾಗಿದ್ದು ಹೇಗೆ?

ಇತ್ತೀಚೆಗೆ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡು ಆಸಕ್ತಿದಾಯಕ ವಿಷಯವೊಂದನ್ನು ಹಂಚಿಕೊಂಡಿದ್ದರು. ನಿರ್ದೇಶಕಿ ನಂದಿನಿ ರೆಡ್ಡಿ ಅವರು ಮೊದಲು ಈ ಚಿತ್ರದ ಕಥೆಯನ್ನು ಸಾಯಿ ಪಲ್ಲವಿ ಮನಸ್ಸಿನಲ್ಲಿಟ್ಟುಕೊಂಡು ಬರೆದಿದ್ದರಂತೆ. ಆದರೆ, ಸಾಯಿ ಪಲ್ಲವಿ ಬೇರೆ ಸಿನಿಮಾಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರಿಂದ ಈ ಚಿತ್ರ ಮಾಡಲು ಸಾಧ್ಯವಾಗಲಿಲ್ಲ. ಆ ಬಳಿಕ ಚಿತ್ರಕಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಸಮಂತಾ ಅವರಿಗೆ ಸೂಟ್ ಆಗುವಂತೆ ಸಿದ್ಧಪಡಿಸಲಾಯಿತಂತೆ.

ಇದನ್ನೂ ಓದಿ: ಸಮಂತಾ ಸೆಟ್​​​ನಲ್ಲಿ ಹೇಗಿರ್ತಾರೆ? ವಿವರಿಸಿದ ದಿಗಂತ್ 

ಕನ್ನಡದವರಾದ ನಟ ದಿಗಂತ್ , ಗುಲ್ಶನ್ ದೇವಯ್ಯ ನಟಿಸಿದ್ದಾರೆ, ಗೌತಮಿ, ಶ್ರೀಮುಖಿ, ಆನಂದ್, ಲಕ್ಷ್ಮಿ, ಶ್ರೀನಿವಾಸ್ ಗವಿರೆಡ್ಡಿ ಮತ್ತು ಮಂಜುಷಾ ಪೋಷಕ ಪಾತ್ರಗಳಲ್ಲಿದ್ದಾರೆ. ಸಮಂತಾ ಅವರ ಸ್ವಂತ ನಿರ್ಮಾಣ ಸಂಸ್ಥೆಯಾದ ‘ಟ್ರಾಲಿಲಾ ಮೂವಿಂಗ್ ಪಿಕ್ಚರ್ಸ್’ ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಿದೆ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘ಯು/ಎ’ ಸರ್ಟಿಫಿಕೇಟ್ ಸಿಕ್ಕಿದ್ದು, ಚಿತ್ರದ ರನ್‌ಟೈಮ್ 2 ಗಂಟೆ, 34 ನಿಮಿಷ ಇರಲಿದೆ. ಜೂನ್ 19ರಂದು ಸಿನಿಮಾ ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Shani Sade Sati: 2027ರಲ್ಲಿ ಶನಿ ರಾಶಿ ಪರಿವರ್ತನೆ; ಈ ರಾಶಿಗಳ ಕಷ್ಟಕ್ಕೆ ಬೀಳಲಿದೆ ಪೂರ್ಣವಿರಾಮ! – Kannada News | Shani Sade Sati End 2027: Relief for Zodiac Signs from Dhaiya Troubles!

ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ದೇವನ ಸಾಡೇಸಾತಿ (Sadhe Sati) ಅವಧಿಯನ್ನು ಅತ್ಯಂತ ಕಠಿಣ ಪರಿಶ್ರಮ, ಹೋರಾಟ ಮತ್ತು ಪರೀಕ್ಷೆಯ ಸಮಯ ಎಂದು ಪರಿಗಣಿಸಲಾಗುತ್ತದೆ. ಆದರೆ, ಪ್ರಸಿದ್ಧ ಜ್ಯೋತಿಷಿ ಚಂದ್ರೇಶ್ ಶರ್ಮಾ ಅವರ ಪ್ರಕಾರ, ಮುಂಬರುವ ಗ್ರಹಗಳ ರಾಶಿ ಪರಿವರ್ತನೆಯು ಕೆಲವು ಅದೃಷ್ಟದ ರಾಶಿಗಳಿಗೆ ಎಲ್ಲಾ ಕಷ್ಟಗಳ ಅಂತ್ಯ ಮತ್ತು ಹೊಸ ಶುಭ ಆರಂಭದ ಸಂಕೇತವನ್ನು ನೀಡುತ್ತಿದೆ.

ಶನಿ ಸಾಡೇಸಾತಿ ಮತ್ತು ಧೈಯಾದ ಅಂತ್ಯ ಎಂದರೆ ಜೀವನದಲ್ಲಿ ನಡೆಯುತ್ತಿರುವ ಕಠಿಣ ಹೋರಾಟಗಳು, ಮಾನಸಿಕ ಒತ್ತಡ ಮತ್ತು ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ಸಿಗಲಿದೆ ಎಂದರ್ಥ. ಗ್ರಹಗಳ ಈ ಬದಲಾವಣೆಯಿಂದಾಗಿ ಬಾಧಿತ ರಾಶಿಯವರಿಗೆ ಸ್ಥಗಿತಗೊಂಡ ಕೆಲಸಗಳಲ್ಲಿ ಯಶಸ್ಸು, ಸಮಾಜದಲ್ಲಿ ಗೌರವ-ಪ್ರತಿಷ್ಠೆ ಮತ್ತು ಮಾನಸಿಕ ಶಾಂತಿ ಲಭಿಸುತ್ತದೆ. ಇದು ಜೀವನವನ್ನು ಮತ್ತೆ ಸುಸ್ಥಿತಿಗೆ ತಂದುಕೊಂಡು ಹೊಸ ಆರಂಭ ಮಾಡಲು ಸೂಕ್ತ ಸಮಯವಾಗಿದೆ.

2027ರಲ್ಲಿ ಮೇಷ ರಾಶಿಗೆ ಶನಿ ಪ್ರವೇಶ; ಯಾರಿಗೆ ಸಿಗಲಿದೆ ಮುಕ್ತಿ?

ನ್ಯಾಯ ಮತ್ತು ಕರ್ಮದ ದೇವನಾದ ಶನಿ ದೇವನು 2027ರಲ್ಲಿ ಮಂಗಳನ ಒಡೆತನದ ಮೇಷ ರಾಶಿಗೆ ಗೋಚರಿಸಲಿದ್ದಾನೆ (Shani Gochar 2027). ಇದರಿಂದಾಗಿ ಪ್ರಸ್ತುತ ಶನಿಯ ಕಠಿಣ ಪ್ರಭಾವವನ್ನು ಎದುರಿಸುತ್ತಿರುವ ಕೆಲವು ರಾಶಿಗಳಿಗೆ ದೊಡ್ಡ ರಿಲೀಫ್ ಸಿಗಲಿದೆ. ಪ್ರಸ್ತುತ ಕುಂಭ, ಮೀನ ಮತ್ತು ಮೇಷ ರಾಶಿಗಳ ಮೇಲೆ ಶನಿಯ ಸಾಡೇಸಾತಿಯ ಪ್ರಭಾವವಿದೆ. ಇದರೊಂದಿಗೆ ಧನು ರಾಶಿಯವರ ಮೇಲೆ ಶನಿಯ ಧೈಯಾ (ಕಂಟಕ ಶನಿ) ಮತ್ತು ಸಿಂಹ ರಾಶಿಯವರ ಮೇಲೆ ಅಷ್ಟಮ ಶನಿಯ ಧೈಯಾ ನಡೆಯುತ್ತಿದೆ.

ಆದರೆ, 2027ರಲ್ಲಿ ಶನಿ ದೇವನು ಮೇಷ ರಾಶಿಗೆ ಪ್ರವೇಶಿಸುತ್ತಿದ್ದಂತೆ, ಈ ಮೂರು ರಾಶಿಗಳವರು ಶನಿಯ ಭಾರಿ ಪ್ರಭಾವದಿಂದ ಸಂಪೂರ್ಣವಾಗಿ ಮುಕ್ತಿ ಪಡೆಯಲಿದ್ದಾರೆ. ಶನಿಯು ರಾಶಿ ಬದಲಾಯಿಸುತ್ತಿದ್ದಂತೆ ಕುಂಭ ರಾಶಿಯವರ ಸಾಡೇಸಾತಿ ಅವಧಿಯು ಸಂಪೂರ್ಣವಾಗಿ ಕೊನೆಗೊಳ್ಳಲಿದೆ. ಧನು ರಾಶಿಯ ಜಾತಕದವರಿಗೆ ಕಂಟಕ ಶನಿಯ ಧೈಯಾದಿಂದ ದೊಡ್ಡ ಮಟ್ಟದ ಪರಿಹಾರ ಸಿಗಲಿದೆ. ಸಿಂಹ ರಾಶಿಯವರ ಮೇಲೆ ನಡೆಯುತ್ತಿರುವ ಅಷ್ಟಮ ಶನಿಯ ಧೈಯಾ ಕೊನೆಗೊಳ್ಳಲಿದೆ.

ಈ ರಾಶಿಗಳ ಮೇಲಿನ ಶನಿಯ ಭಾರಿ ಪ್ರಭಾವ ದೂರವಾಗುತ್ತಿದ್ದಂತೆ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಪ್ರಾರಂಭವಾಗುತ್ತವೆ. ವೃತ್ತಿಜೀವನದಲ್ಲಿದ್ದ ಅಡೆತಡೆಗಳು ನಿವಾರಣೆಯಾಗುತ್ತವೆ, ಆರೋಗ್ಯ ಸುಧಾರಿಸುತ್ತದೆ ಮತ್ತು ದೀರ್ಘಕಾಲದಿಂದ ಸಿಲುಕಿಕೊಂಡಿದ್ದ ಹಣ ಕೈ ಸೇರುವ ಯೋಗಗಳು ನಿರ್ಮಾಣವಾಗುತ್ತವೆ.

ಇದನ್ನೂ ಓದಿ: ಶನಿಯ ಮನೆಯಲ್ಲಿ ರಾಹುವಿನ ನಕ್ಷತ್ರದಲ್ಲಿಯೇ ರಾಹುವಿನ ಸಂಚಾರ .. ಆಗಲಿದೆ ಅನೇಕ ಚಮತ್ಕಾರ…

ಮೇಷ ರಾಶಿಯವರು ಏನು ಮಾಡಬೇಕು?

ಮಂಗಳ ಗ್ರಹವು ಮೇಷ ರಾಶಿಯ ಅಧಿಪತಿಯಾಗಿದೆ. ಮಂಗಳ ಮತ್ತು ಶನಿಯ ಈ ಯುತಿಯು (ಸಂಯೋಗ) ಹಲವು ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ತರಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಅವಧಿಯಲ್ಲಿ ಮೇಷ ರಾಶಿಯ ಜಾತಕದವರು ತಮ್ಮ ಇಷ್ಟ ದೇವತೆ, ಭಗವಾನ್ ಹನುಮಂತ, ಕಾರ್ತಿಕೇಯ (ಸುಬ್ರಹ್ಮಣ್ಯ) ಮತ್ತು ಸೂರ್ಯ ದೇವನನ್ನು ವಿಶೇಷವಾಗಿ ಪೂಜಿಸಬೇಕು. ಈ ದೇವತೆಗಳ ಆರಾಧನೆಯು ಮೇಷ ರಾಶಿಯವರಿಗೆ ರಕ್ಷಣೆ ನೀಡುತ್ತದೆ.

ಶನಿ ದೋಷ ನಿವಾರಣೆಗೆ ಸರಳ ಪರಿಹಾರಗಳು:

ಯಾರ ಜಾತಕದಲ್ಲಿ ಶನಿ ಸಾಡೇಸಾತಿ, ಧೈಯಾ ಅಥವಾ ಶನಿ ಮಹಾದಶೆ ನಡೆಯುತ್ತಿದೆಯೋ, ಅವರು ಈ ಸರಳ ಕ್ರಮಗಳನ್ನು ಅನುಸರಿಸಬಹುದು. ಕಪ್ಪು ಬಣ್ಣದ ವಸ್ತ್ರಗಳನ್ನು ಧರಿಸುವುದು ಅಥವಾ ದಾನ ಮಾಡುವುದು ಒಳ್ಳೆಯದು. ಇದಲ್ಲದೇ ದಿನನಿತ್ಯ ನಿಯಮಿತವಾಗಿ ಹನುಮಾನ್ ಚಾಲೀಸಾ ಪಠಿಸುವುದರಿಂದ ರಾಹು, ಕೇತು ಮತ್ತು ಶನಿಯ ನಕಾರಾತ್ಮಕ ಪ್ರಭಾವಗಳು ಗಣನೀಯವಾಗಿ ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು: ಮುಂಗಾರು ಮಳೆಯ ಅಬ್ಬರಕ್ಕೆ ಕೆರೆಯಂತಾದ ರಸ್ತೆಗಳು, ವಾಹನ ಸವಾರರ ಪರದಾಟ – Kannada News | Bengaluru Rain Update: Heavy Monsoon Rains Lash City; Electronic City and Silk Board Roads Waterlogged

ಬೆಂಗಳೂರು, ಜೂನ್ 13: ಬೆಂಗಳೂರಿನಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಶುಕ್ರವಾರ ತಡರಾತ್ರಿ ಸುರಿದ ಭಾರಿ ಮಳೆಗೆ ನಗರದ ಹಲವೆಡೆ ಸಾರ್ವಜನಿಕ ಜೀವನ ಅಸ್ತವ್ಯಸ್ತಗೊಂಡಿದೆ. ರಾತ್ರಿಯಿಡೀ ಸುರಿದ ಮಳೆಯಿಂದಾಗಿ ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ತೀವ್ರ ಸಂಕಷ್ಟ ಎದುರಿಸುವಂತಾಯಿತು. ನಗರದ ಪ್ರಮುಖ ಭಾಗಗಳಾದ ಶಾಂತಿನಗರ, ಕಂಟೋನ್ಮೆಂಟ್, ವಸಂತನಗರ, ಸದಾಶಿವನಗರ, ಶೇಷಾದ್ರಿಪುರಂ, ಮಲ್ಲೇಶ್ವರಂ, ಮತ್ತಿಕೆರೆ, ದೊಮ್ಮಲೂರು, ಇಂದಿರಾನಗರ, ಹೆಬ್ಬಾಳ, ಕುಮಾರಸ್ವಾಮಿ ಲೇಔಟ್ ಹಾಗೂ ಉತ್ತರಹಳ್ಳಿ ಸೇರಿದಂತೆ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಮಳೆಯ ಅಬ್ಬರಕ್ಕೆ ತಗ್ಗು ಪ್ರದೇಶದ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯುಂಟಾಯಿತು.

ಎಲೆಕ್ಟ್ರಾನಿಕ್ ಸಿಟಿ, ಸರ್ಜಾಪುರ ರಸ್ತೆ, ಹೊಸೂರು ರಸ್ತೆ ಹಾಗೂ ಸಿಲ್ಕ್ ಬೋರ್ಡ್ ವ್ಯಾಪ್ತಿಯಲ್ಲಿ ಮಳೆ ನೀರು ರಸ್ತೆಯ ಮೇಲೆ ಹರಿದಿದ್ದರಿಂದ ವಾಹನ ಸವಾರರು ಪರದಾಡಿದರು. ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಮಂಡಿಯುದ್ದ ನೀರು ನಿಂತಿದ್ದರಿಂದ ಸವಾರರು ವಾಹನಗಳನ್ನು ತಳ್ಳಿಕೊಂಡು ಹೋಗುವ ದೃಶ್ಯಗಳು ಕಂಡುಬಂದವು. ಹವಾಮಾನ ಇಲಾಖೆಯ ವರದಿಯ ಪ್ರಕಾರ, ಮುಂದಿನ ಐದು ದಿನಗಳ ಕಾಲ ರಾಜ್ಯಾದ್ಯಂತ ಮಳೆ ಮುಂದುವರಿಯಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ‘ಯಲ್ಲೋ ಅಲರ್ಟ್’ ಘೋಷಿಸಿದೆ. ಇನ್ನು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Zodiac Signs: ಬೇರೆಯವರ ಮನಸ್ಸನ್ನು ಸುಲಭವಾಗಿ ಓದಬಲ್ಲರು ಈ ಮೂರು ರಾಶಿಯವರು; ಭವಿಷ್ಯದ ಮುನ್ಸೂಚನೆ ನೀಡುವ ಶಕ್ತಿ ಇವರಿಗಿದೆ! – Kannada News | Astrology: The 3 Most Spiritual Zodiac Signs with Divine Intuition and Foresight

ಬೇರೆಯವರ ಮನಸ್ಸನ್ನು ಸುಲಭವಾಗಿ ಓದಬಲ್ಲರು ಈ ಮೂರು ರಾಶಿಯವರುImage Credit source: Pinterest

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 12ರಾಶಿಗಳಲ್ಲಿ ಪ್ರತಿಯೊಂದು ರಾಶಿಯು ತನ್ನದೇ ಆದ ವಿಶಿಷ್ಟ ಗುಣಲಕ್ಷಣಗಳು ಮತ್ತು ಶಕ್ತಿಗಳನ್ನು ಹೊಂದಿದೆ. ಆದಾಗ್ಯೂ, ಕೆಲವು ರಾಶಿಗಳ ಜನರು ಸಾಮಾನ್ಯ ಮಿತಿಗಳನ್ನು ಮೀರಿ, ಆಳವಾದ ಆಲೋಚನೆಗಳು, ಬಲವಾದ ಆಂತರಿಕ ಭಾವನೆಗಳು ಮತ್ತು ದೈವಿಕ ಭಾವನೆಗಳೊಂದಿಗೆ ಬದುಕುತ್ತಾರೆ. ಇವರನ್ನು ಆಧ್ಯಾತ್ಮಿಕವಾಗಿ ಅತ್ಯಂತ ಶಕ್ತಿಶಾಲಿಗಳು ಎಂದು ಪರಿಗಣಿಸಲಾಗುತ್ತದೆ. ಅಂತಹ ಜನರು ಇತರರ ಭಾವನೆಗಳು ಮತ್ತು ಆಂತರಿಕ ಆಲೋಚನೆಗಳನ್ನು ಸುಲಭವಾಗಿ ಗ್ರಹಿಸುವ (Intuition Power) ಅಪೂರ್ವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇದಲ್ಲದೆ, ಭವಿಷ್ಯದ ಘಟನೆಗಳನ್ನು ಮುಂಚಿತವಾಗಿಯೇ ಊಹಿಸುವ ಶಕ್ತಿಯೂ ಇವರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಜ್ಯೋತಿಷ್ಯ ಜಗತ್ತಿನಲ್ಲಿ ವಿಶೇಷ ಸ್ಥಾನವನ್ನು ಗಳಿಸಿರುವ ಅಂತಹ 3 ಪ್ರಮುಖ ರಾಶಿಗಳ ವಿವರ ಇಲ್ಲಿದೆ:

ಮೀನ ರಾಶಿ (Pisces):

ಮೀನ ರಾಶಿಯಡಿಯಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿ ಬಹಳ ಸೂಕ್ಷ್ಮ ಮನಸ್ಸಿನವರು. ಅವರು ಸ್ವಪ್ನಶೀಲ ಸ್ವಭಾವ ಮತ್ತು ಬಲವಾದ ಕಲ್ಪನಾ ಶಕ್ತಿಯನ್ನು ಹೊಂದಿರುತ್ತಾರೆ. ಯಾರಾದರೂ ಏನನ್ನಾದರೂ ಹೇಳುವ ಮುನ್ನವೇ ಅವರ ಮನಸ್ಸಿನಲ್ಲಿ ಏನಿದೆ ಮತ್ತು ಅವರು ಏನು ಯೋಚಿಸುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳುವ ಅದ್ಭುತ ಶಕ್ತಿ ಇವರಿಗಿದೆ. ಮೀನ ರಾಶಿಯವರು ಸಾಮಾನ್ಯವಾಗಿ ಏಕಾಂಗಿಯಾಗಿ ಸಮಯ ಕಳೆಯಲು ಇಷ್ಟಪಡುತ್ತಾರೆ. ಈ ಸಮಯದಲ್ಲಿ ಅವರು ತಮ್ಮ ಆಂತರಿಕ ಆತ್ಮದೊಂದಿಗೆ ಸಂವಹನ ನಡೆಸುತ್ತಾರೆ. ಪ್ರಕೃತಿಯ ಸೌಂದರ್ಯ, ಶಾಂತಿಯುತ ಸಂಗೀತ ಮತ್ತು ಧ್ಯಾನದಂತಹ ವಿಷಯಗಳು ಇವರನ್ನು ಆಕರ್ಷಿಸುತ್ತವೆ. ಆಧ್ಯಾತ್ಮಿಕ ಮಾರ್ಗದಲ್ಲಿ ಉನ್ನತ ಸ್ಥಾನ ತಲುಪುವ ಇವರು, ದೈವಿಕ ಶಕ್ತಿಗಳಿಗೆ ಅತ್ಯಂತ ಹತ್ತಿರವಾಗಿದ್ದಾರೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಶನಿಯ ಮನೆಯಲ್ಲಿ ರಾಹುವಿನ ನಕ್ಷತ್ರದಲ್ಲಿಯೇ ರಾಹುವಿನ ಸಂಚಾರ .. ಆಗಲಿದೆ ಅನೇಕ ಚಮತ್ಕಾರ…

ವೃಶ್ಚಿಕ ರಾಶಿ (Scorpio):

ವೃಶ್ಚಿಕ ರಾಶಿಯವರು ಜನ್ಮಜಾತವಾಗಿ ರಹಸ್ಯ ಸ್ವಭಾವದವರು. ಇವರ ಆಳವಾದ ಆಲೋಚನೆಗಳು, ಶಾಂತ ಅಭ್ಯಾಸಗಳು ಮತ್ತು ಸೂಕ್ಷ್ಮ ವಿಷಯಗಳನ್ನು ಗಮನಿಸುವ ಸಾಮರ್ಥ್ಯವು ಇವರನ್ನು ಇತರರಿಗಿಂತ ವಿಭಿನ್ನವಾಗಿಸುತ್ತದೆ. ಇವರು ಜೀವನದ ಕಾಣದ ಮತ್ತು ನಿಗೂಢ ಅಂಶಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಜೀವನ, ಸಾವು, ಆತ್ಮ ಮತ್ತು ಪುನರ್ಜನ್ಮದಂತಹ ತಾತ್ವಿಕ ವಿಷಯಗಳ ಬಗ್ಗೆ ಇವರು ಹೆಚ್ಚಾಗಿ ಯೋಚಿಸುತ್ತಾರೆ. ವೃಶ್ಚಿಕ ರಾಶಿಯವರು ತಮ್ಮ ಭಾವನೆಗಳನ್ನು ಸುಲಭವಾಗಿ ಹೊರಹಾಕುವುದಿಲ್ಲ, ಆದರೆ ಜನರ ನಿಜವಾದ ಸ್ವರೂಪ ಮತ್ತು ಆಂತರಿಕ ಉದ್ದೇಶಗಳನ್ನು ಕ್ಷಣಾರ್ಧದಲ್ಲಿ ಗುರುತಿಸುತ್ತಾರೆ. ನೋವಿನಲ್ಲಿರುವವರಿಗೆ ಸರಿಯಾದ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡುವ ಇವರ ವಿಶ್ಲೇಷಣಾತ್ಮಕ ಸಾಮರ್ಥ್ಯವು ಇವರನ್ನು ಅತ್ಯುತ್ತಮ ಆಧ್ಯಾತ್ಮಿಕ ಮಾರ್ಗದರ್ಶಕರನ್ನಾಗಿ ಮಾಡುತ್ತದೆ.

ಧನು ರಾಶಿ (Sagittarius):

ಧನು ರಾಶಿಯವರು ಸ್ವಾತಂತ್ರ್ಯ ಮತ್ತು ಜ್ಞಾನವನ್ನು ಅತಿಯಾಗಿ ಪ್ರೀತಿಸುವವರು. ನಿರಂತರವಾಗಿ ಹೊಸ ವಿಷಯಗಳನ್ನು ಕಲಿಯಲು, ವಿವಿಧ ಸ್ಥಳಗಳಿಗೆ ಭೇಟಿ ನೀಡಲು ಇವರು ಬಯಸುತ್ತಾರೆ. ತತ್ವಶಾಸ್ತ್ರ, ಧಾರ್ಮಿಕ ನಂಬಿಕೆಗಳು ಮತ್ತು ಆಧ್ಯಾತ್ಮಿಕ ಸಿದ್ಧಾಂತಗಳ ಬಗ್ಗೆ ಆಳವಾಗಿ ಯೋಚಿಸುವುದು ಇವರ ಹವ್ಯಾಸ. ಪ್ರಕೃತಿಯೊಂದಿಗೆ ಸಮಯ ಕಳೆಯುವುದು ಇವರಿಗೆ ಅಪಾರ ಮನಸ್ಸಿನ ಶಾಂತಿಯನ್ನು ನೀಡುತ್ತದೆ. ಪ್ರಕೃತಿಯೊಂದಿಗಿನ ಗಾಢ ಸಂಪರ್ಕವು ಇವರಿಗೆ ಬಲವಾದ ಆಂತರಿಕ ಶಕ್ತಿಯನ್ನು ನೀಡುತ್ತದೆ. ಕೆಲವು ಸಂದರ್ಭಗಳಲ್ಲಿ ಇವರಿಗೆ ಭವಿಷ್ಯದ ಬಗ್ಗೆ ಸ್ಪಷ್ಟವಾದ ಮುನ್ಸೂಚನೆಗಳು ಲಭ್ಯವಾಗುತ್ತವೆ ಎಂದು ನಂಬಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮೀನ, ವೃಶ್ಚಿಕ ಮತ್ತು ಧನು ರಾಶಿಗಳು ಕೇವಲ ಜ್ಯೋತಿಷ್ಯ ಸಂಕೇತಗಳಲ್ಲ; ಅವು ಮಾನವ ಅನುಭವದ ಆಳವಾದ ಆಧ್ಯಾತ್ಮಿಕ ಅಂಶಗಳನ್ನು ಪ್ರತಿಬಿಂಬಿಸುವ ಕನ್ನಡಿಗಳು. ಇವರಲ್ಲಿರುವ ದೈವಿಕ ಒಳನೋಟ ಮತ್ತು ವಿಶಿಷ್ಟ ಗುಣಗಳು ಇವರನ್ನು ಆಧ್ಯಾತ್ಮಿಕ ಪ್ರಪಂಚದ ಉನ್ನತ ಸ್ಥಾನದಲ್ಲಿ ನಿಲ್ಲಿಸುತ್ತವೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version