‘ರುದ್ರಾಭಿಷೇಕಂ’ ಸಿನಿಮಾ ಬಗ್ಗೆ ವಿಜಯ್ ರಾಘವೇಂದ್ರ ಭಾವುಕ ಮಾತು – Kannada News | Vijay Raghavendra talks about his Rudrabhishekam movie

ವಿಜಯ್ ರಾಘವೇಂದ್ರ (Vijay Raghavendra) ನಟನೆಯ ‘ರುದ್ರಾಭಿಷೇಕಂ’ ಸಿನಿಮಾದ ಹಾಡೊಂದು ಇಂದು (ಮೇ 09) ಬಿಡುಗಡೆ ಆಯ್ತು. ಸಿನಿಮಾ ತಂಡ ವಿಜಯ್ ಅವರಿಗೆ ‘ನ್ಯಾಚುರಲ್ ಸ್ಟಾರ್’ ಎಂಬ ಬಿರುದು ನೀಡಿ ಗೌರವಿಸಿತು. ಆದರೆ ಅದನ್ನು ವಿನಯದಿಂದ ನಿರಾಕರಿಸಿದ ವಿಜಯ್ ರಾಘವೇಂದ್ರ, ನಾನು ‘ಚಿನ್ನಾರಿ ಮುತ್ತ’ನಾಗಿಯೇ ಇರುತ್ತೀನಿ ಎಂದರು. ವಿಜಯ್ ರಾಘವೇಂದ್ರ ಅವರು ‘ರುದ್ರಾಭಿಷೇಕಂ’ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಇರುವುದಾಗಿ ಹೇಳಿದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಬಲಿಗಾಗಿ ಕಾದಿವೆ ಅಪಾಯಕಾರಿ ಗೋಡೆಗಳು? ಜೋರು ಮಳೆ ಬಂದ್ರೆ ಕುಸಿಯುವುದು ಗ್ಯಾರಂಟಿ – Kannada News | Dangerous Walls Turning Deadly; Structures May Collapse if Heavy Rains Hit

ಬೆಂಗಳೂರು, ಮೇ 09: ಇತ್ತೀಚೆಗೆ ನಗರದಲ್ಲಿ ಸುರಿದ ಮಳೆಗೆ ಬೋರಿಂಗ್ ಆಸ್ಪತ್ರೆಯ ಗೋಡೆ ಕುಸಿದು 8 ಮಂದಿ ಮೃತಪಟ್ಟಿದ್ದರು. ಘಟನೆಯ ಬಳಿಕ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಧಿಕಾರಿಗಳು ಕಾಟಾಚಾರಕ್ಕೆ ಸಮೀಕ್ಷೆ ನಡೆಸಿ ಗೋಡೆಗಳ ಪರಿಶೀಲನೆ ಮಾಡಿದ್ದರು. ಆದರೆ ಕೆಲವು ಗೋಡೆಗಳು ಕುಸಿಯುವ ಹಂತದಲ್ಲಿದ್ದರೂ ಅಧಿಕಾರಿಗಳು ಅತ್ತ ಕಡೆ ಗಮನ ಹರಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿವೆ ಅಪಾಯಕಾರಿ ಗೋಡೆಗಳು: GBA ನಿರ್ಲಕ್ಷ್ಯ ಏಕೆ?
  • ಬಿರುಕು ಬಿಟ್ಟ ಕಾಂಪೌಂಡ್‌ಗಳಿಂದ ಆತಂಕ
  • ಅನಾಹುತ ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳುವಂತೆ ಆಗ್ರಹ

ಬಿರುಕು ಬಿಟ್ಟಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ

ನಗರದಲ್ಲಿ ಗೋಡೆಗಳು ಬಲಿಗಾಗಿ ಕಾದುಕುಳಿತಿವೆ. ಯಾವುದೇ ಕ್ಷಣದಲ್ಲಾದರೂ ಕುಸಿಯುವ ಸ್ಥಿತಿಯಲ್ಲಿವೆ. ಗೋಡೆಗಳು, ಕಾಂಪೌಂಡ್​ಗಳು ಬಿರುಕು ಬಿಟ್ಟಿದ್ದರೂ ಜಿಬಿಎ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಆಸ್ಪತ್ರೆ, ಕಾಲೇಜು, ಶಾಲೆಗಳ ಕಾಂಪೌಂಡ್ ಗೋಡೆಗಳು ಬಿರುಕು ಬಿಟ್ಟಿದ್ದರೂ ಯಾವುದೇ ಅಧಿಕಾರಿಗಳು ಪರಿಶೀಲಿಸುತ್ತಿಲ್ಲ. ಇದಕ್ಕೆ ಉದಾಹರಣೆಯೆಂದರೆ ಬೆಂಗಳೂರಿನ ಕಿಮ್ಸ್ ಆಸ್ಪತ್ರೆ ಬಳಿ ಇರುವ ಕಾಲೇಜಿನ ಕಾಂಪೌಂಡ್. ಗೋಡೆ ನಿರ್ಮಿಸಿ ಹಲವು ವರ್ಷಗಳೇ ಕಳೆದಿದ್ದು, ಸದ್ಯ ಕುಸಿಯುವ ಹಂತದಲ್ಲಿದೆ. ಆದರೂ ಸಂಬಂಧಪಟ್ಟವರು ಗೋಡೆಯ ಕಡೆ ತಿರುಗಿಯೂ ನೋಡುತ್ತಿಲ್ಲ.

ಇದನ್ನೂ ಓದಿ: ಆಟವಾಡುತ್ತಿದ್ದ ಮಕ್ಕಳ ಮೇಲೆ ಗೇಟ್ ಬಿದ್ದು ದುರಂತ: ಐದು ವರ್ಷದ ಮಗು ಸಾವು

ದುರ್ಘಟನೆ ಸಂಭವಿಸಿ ಪರಿಹಾರ ನೀಡುವುದಕ್ಕಿಂತ ಮೊದಲೇ ಎಚ್ಚೆತ್ತುಕೊಂಡು ಈ ರೀತಿಯ ಅಪಾಯಕಾರಿ ಗೋಡೆಗಳನ್ನು ಮೊದಲು ತೆರವು ಮಾಡಬೇಕಿದೆ. ಜಿಬಿಎ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಈ ರೀತಿ ಗೋಡೆಗಳು ಬಿರುಕು ಬಿಟ್ಟ ಸ್ಥಿತಿಯಲ್ಲಿದ್ದರು ಕೂಡ ಒಬ್ಬ ಅಧಿಕಾರಿಗಳು ಈ ಕಡೆ ಗಮನ ಹರಿಸುತ್ತಿಲ್ಲ.

ಸೂಕ್ತ ಕ್ರಮಕ್ಕೆ ಸ್ಥಳೀಯರು ಒತ್ತಾಯ

ಇನ್ನು ಗೋಡೆಯ ಪಕ್ಕದಲ್ಲೇ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದಾರೆ. ಪಾದಚಾರಿ ಮಾರ್ಗದಲ್ಲಿ ಜನರು ಓಡಾಡುತ್ತಿದ್ದಾರೆ. ಮಳೆ ಬಂದರೆ ಸಾಕು ಈ ಗೋಡೆಗಳು ಕುಸಿದು ಬೀಳುವ ಆತಂಕವಿದೆ. ಹಾಗಾಗಿ ಅನಾಹುತ ಸಂಭವಿಸುವ ಮೊದಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಹೊಸ ಮನೆ ಕಟ್ಟುವ ಆಸೆ ಮಣ್ಣುಪಾಲು; ಗೋಡೆ ಕುಸಿದು ಮಾಲೀಕ ಸ್ಥಳದಲ್ಲೇ ಸಾವು!

ಒಟ್ಟಾರೆ ಅಧಿಕಾರಿಗಳು ಕೂಡಲೇ ಈ ರೀತಿಯ ಅಪಾಯಕಾರಿ ಗೋಡೆಗಳನ್ನು ಪರಿಶೀಲಿಸಿ ತೆರವುಗೊಳಿಸಿ, ಹೊಸ ಗೋಡೆಗಳನ್ನು ನಿರ್ಮಿಸುವ ಮೂಲಕ ಮುಂದಾಗಬಹುದಾದ ದುರ್ಘಟನೆಗಳನ್ನು ತಪ್ಪಿಸಬೇಕಿದೆ.

ವರದಿ: ನಟರಾಜ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹವಾಮಾನ ಬದಲಾವಣೆಯಿಂದ ರೋಗನಿರೋಧಕ ಶಕ್ತಿ ಕುಂದದಂತೆ ನೋಡಿಕೊಳ್ಳಲು ಈ ಸಲಹೆಯನ್ನು ತಪ್ಪದೆ ಪಾಲಿಸಿ – Kannada News | Seasonal Weather Shifts: How to Boost Immunity Naturally

ದೇಶದ ಹಲವು ರಾಜ್ಯಗಳಲ್ಲಿ ಕಳೆದ ಕೆಲವು ದಿನಗಳಿಂದ ಹವಾಮಾನದಲ್ಲಿ ನಿರಂತರ ಬದಲಾವಣೆ ಕಂಡುಬರುತ್ತಿದೆ. ಕೆಲವೊಮ್ಮೆ ತೀವ್ರ ಬಿಸಿಲು, ಮತ್ತೊಮ್ಮೆ ಮಳೆ ಮತ್ತು ತಣ್ಣನೆಯ ಗಾಳಿ ದೇಹದ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಆರೋಗ್ಯ ತಜ್ಞರ ಪ್ರಕಾರ, ಇಂತಹ ಹವಾಮಾನ ಬದಲಾವಣೆಗಳಿಂದ ದೇಹದ ರೋಗನಿರೋಧಕ ಶಕ್ತಿ (Immunity) ಕುಂದುವ ಸಾಧ್ಯತೆ ಹೆಚ್ಚಿದ್ದು, ಇದರಿಂದ ಶೀತ, ಕೆಮ್ಮು, ಜ್ವರ ಮತ್ತು ವಿವಿಧ ಸೋಂಕುಗಳ ಅಪಾಯ ಹೆಚ್ಚಾಗಬಹುದು. ವೈದ್ಯರ ಪ್ರಕಾರ, ಹವಾಮಾನ ಪದೇಪದೇ ಬದಲಾಗುವಾಗ ದೇಹವು ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಲು ಹೆಚ್ಚು ಶ್ರಮಪಡಬೇಕಾಗುತ್ತದೆ. ಇದರಿಂದ ಇಮ್ಯುನಿಟಿ ಶಕ್ತಿ ಮೇಲೆ ಒತ್ತಡ ಉಂಟಾಗಿ ದೇಹ ಬೇಗ ದುರ್ಬಲಗೊಳ್ಳಬಹುದು. ಸಾಕಷ್ಟು ನಿದ್ರೆ ಮಾಡದೇ ಇರುವುದು, ಕಡಿಮೆ ನೀರು ಕುಡಿಯುವುದು ಮತ್ತು ಪೌಷ್ಟಿಕ ಆಹಾರ ಸೇವಿಸದೇ ಇರುವುದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಹಾಗಾದರೆ ಇಮ್ಯುನಿಟಿ ಕಡಿಮೆಯಾದಾಗ ದೇಹದಲ್ಲಿ ಯಾವ ರೀತಿಯ ಲಕ್ಷಣಗಳು ಕಂಡುಬರುತ್ತದೆ, ಈ ಸಮಸ್ಯೆ ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಇಮ್ಯುನಿಟಿ ದುರ್ಬಲವಾದಾಗ ಕಾಣಿಸುವ ಲಕ್ಷಣಗಳು:

ತಜ್ಞರ ಪ್ರಕಾರ, ಪದೇಪದೇ ಶೀತ ಮತ್ತು ಕೆಮ್ಮು ಕಾಣಿಸಿಕೊಳ್ಳುವುದು, ಬೇಗ ದಣಿವಾಗುವುದು, ಗಂಟಲು ನೋವು ಹಾಗೂ ದೇಹದಲ್ಲಿ ನೋವು ಕಾಣಿಸುವುದು ದುರ್ಬಲ ರೋಗನಿರೋಧಕ ಶಕ್ತಿಯ ಲಕ್ಷಣಗಳಾಗಿರಬಹುದು. ಗಾಯ ನಿಧಾನವಾಗಿ ಗುಣಮುಖವಾಗುವುದು, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಂಡುಬರುವುದು ಮತ್ತು ದಿನಪೂರ್ತಿ ಸುಸ್ತಾಗಿರುವುದು ಕೂಡ ಗಮನಿಸಬೇಕಾದ ಸೂಚನೆಗಳಾಗಿವೆ.

ಇದನ್ನೂ ಓದಿ: ಆರೋಗ್ಯವಾಗಿರಲು ಮಾತ್ರೆ ತಗೋಳೋದು ಬಿಟ್ಟು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವತ್ತ ಗಮನಕೊಡಿ!

ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

  • ಬದಲಾಗುತ್ತಿರುವ ಹವಾಮಾನದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಮತೋಲನ ಆಹಾರ ಸೇವನೆ ಅತ್ಯಗತ್ಯ. ತಾಜಾ ಹಣ್ಣು, ತರಕಾರಿ ಮತ್ತು ವಿಟಮಿನ್‌ ಸಮೃದ್ಧ ಆಹಾರ ದೇಹವನ್ನು ಬಲವಾಗಿಡಲು ಸಹಾಯ ಮಾಡುತ್ತದೆ. ದಿನದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಸರಿಯಾಗಿ ನಿದ್ರೆ ಮಾಡುವುದು ಅಗತ್ಯ.
  • ಇದರ ಜೊತೆಗೆ, ನಿಯಮಿತ ವ್ಯಾಯಾಮ, ಸ್ವಚ್ಛತೆ ಮತ್ತು ಹವಾಮಾನಕ್ಕೆ ತಕ್ಕ ಬಟ್ಟೆ ಧರಿಸುವುದು ಮುಖ್ಯ. ಅತಿಯಾಗಿ ಜಂಕ್ ಫುಡ್ ಸೇವನೆ ಮತ್ತು ಅಸಮರ್ಪಕ ದಿನಚರಿಯನ್ನು ತಪ್ಪಿಸುವುದು ಬಹಳ ಉತ್ತಮ.
  • ಆರೋಗ್ಯ ತಜ್ಞರ ಪ್ರಕಾರ, ಪದೇಪದೇ ಅನಾರೋಗ್ಯ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಸರಿಯಾದ ಜೀವನಶೈಲಿ ಮತ್ತು ಆರೋಗ್ಯಕರ ಅಭ್ಯಾಸಗಳಿಂದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಿಂದಿಗೆ ಹಾರಿದ ರಾಜ್ ಬಿ ಶೆಟ್ಟಿ, ಮೊದಲ ಸಿನಿಮಾದ ಟ್ರೈಲರ್ ಬಿಡುಗಡೆ – Kannada News | Raj B Shetty’s first Hindi movie trailer released

ರಾಜ್ ಬಿ ಶೆಟ್ಟಿ (Raj B Shetty) ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ದೇಶಕರು. ನಿರ್ಮಾಪಕರಾಗಿಯೂ ದೊಡ್ಡ ಯಶಸ್ಸನ್ನು ‘ಸು ಫ್ರಂ ಸೋ’ ಸಿನಿಮಾದ ಮೂಲಕ ಗಳಿಸಿದ್ದಾರೆ. ‘ಒಂದು ಮೊಟ್ಟೆಯ ಕತೆ’, ‘ಗರುಡ ಗಮನ ವೃಷಭ ವಾಹನ’ ಸಿನಿಮಾಗಳ ಮೂಲಕ ಹೊಸ ಅಲೆಯನ್ನೇ ಎಬ್ಬಿಸಿದ್ದ ರಾಜ್ ಬಿ ಶೆಟ್ಟಿ ಅವರು ನಟನಾಗಿ ಕನ್ನಡ ಮಾತ್ರವಲ್ಲದೇ ಪರ ಭಾಷೆಗಳಲ್ಲಿಯೂ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಈಗಾಗಲೇ ಮಲಯಾಳಂನ ಕೆಲ ಸಿನಿಮಾಗಳಲ್ಲಿ ನಟಿಸಿರುವ ಬಂದಿರುವ ರಾಜ್ ಬಿ ಶೆಟ್ಟಿ ಇದೀಗ ಹಿಂದಿಗೆ ಕಾಲಿಟ್ಟಿದ್ದಾರೆ.

ರಾಜ್ ಬಿ ಶೆಟ್ಟಿ ಅವರು ಹಿಂದಿಯಲ್ಲಿ ನಟಿಸಿರುವ ಮೊದಲ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದ್ದು, ಉತ್ತರ ಭಾರತದ ಸಿನಿಮಾ ಪ್ರೇಮಿ ಇನ್​ಫ್ಲ್ಯುಯೆನ್ಸರ್​​ಗಳು ರಾಜ್ ಬಿ ಶೆಟ್ಟಿಯ ಮೇಲೆ ಕಣ್ಣಿಟ್ಟಿದ್ದಾರೆ. ರಾಜ್ ಬಿ ಶೆಟ್ಟಿ, ‘ಬಂದರ್’ ಹೆಸರಿನ ಹಿಂದಿ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಟ್ರೈಲರ್​​ನಲ್ಲಿ ರಾಜ್ ಬಿ ಶೆಟ್ಟಿ ಸಹ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ

‘ಬಂದರ್’ ಭಿನ್ನ ಕತೆಯ ಸಿನಿಮಾ ಎಂಬುದು ಸಿನಿಮಾದ ಟ್ರೈಲರ್​​ನಿಂದಲೇ ತಿಳಿದು ಬರುತ್ತಿದೆ. ಸಿನಿಮಾದ ಮುಖ್ಯ ಪಾತ್ರದಲ್ಲಿ ಖ್ಯಾತ ಬಾಲಿವುಡ್ ನಟ ಬಾಬಿ ಡಿಯೋಲ್ ನಟಿಸಿದ್ದಾರೆ. ಟ್ರೈಲರ್​, ಕತೆಯ ಸುಳಿವುನ್ನು ಬಿಟ್ಟುಕೊಡುತ್ತಿಲ್ಲವಾದರೂ ಕತೆಯಂತೂ ಬಹಳ ಭಿನ್ನವಾಗಿರುವುದು ತಿಳಿದು ಬರುತ್ತಿದೆ. ಸೆಲೆಬ್ರಿಟಿ ಒಬ್ಬ ಡೇಟಿಂಗ್ ಆಪ್​​ನಿಂದಾಗಿ ಜೈಲು ಸೇರುವ ಕತೆಯನ್ನು ಸಿನಿಮಾ ಒಳಗೊಂಡಿದೆ.

ರಾಜ್ ಬಿ ಶೆಟ್ಟಿ ಅವರ ‘ಗರುಡ ಗಮನ’ ದಲ್ಲಿದ್ದ ರೀತಿಯ ಪಾತ್ರದಲ್ಲಿಯೇ ಕಾಣಿಸಿಕೊಂಡಿರುವಂತಿದೆ. ಶೆಟ್ಟರು ಜೈಲಿನಲ್ಲಿ ಸಹ ಖೈದಿಯೊಬ್ಬನ ಜೊತೆಗೆ ಖುಷಿಯಿಂದ ಡ್ಯಾನ್ಸ್ ಮಾಡುತ್ತಿರುವ ಸಣ್ಣ ದೃಶ್ಯದ ತುಣುಕು ಟ್ರೈಲರ್​​ನಲ್ಲಿದೆ. ವಿಲನ್ ಗುಂಪಿನ ಸದಸ್ಯರಾಗಿ ರಾಜ್ ಬಿ ಶೆಟ್ಟಿ ನಟಿಸಿದಂತಿದೆ.

ಸಿನಿಮಾವನ್ನು ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದಾರೆ. ಸಹ ನಿರ್ದೇಶಕ ಸಾಕ್ಷಿ ಮೆಹ್ತಾ ಅವರದ್ದು. ಕತೆ ಬರೆದಿರುವುದು ಸುದೀಪ್ ಶರ್ಮಾ, ಅಭಿಷೇಕ್ ಬ್ಯಾನರ್ಜಿ. ಸಿನಿಮಾನಲ್ಲಿ ಬಾಬಿ ಡಿಯೋಲ್, ರಾಜ್ ಬಿ ಶೆಟ್ಟಿ, ‘ದಂಗಲ್’ ನಟಿ ಸಾನ್ಯಾ ಮಲ್ಹೋತ್ರಾ, ಇಂದ್ರಜಿತ್ ಸುಕುಮಾರನ್ ಇನ್ನೂ ಹಲವು ಪ್ರತಿಭಾವಂತ ನಟರು ನಟಿಸಿದ್ದಾರೆ. ಸಿನಿಮಾ ಜೂನ್ 5 ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾಡುತ್ತಿದೆ ‘ಕೊಲೆಯ ನೆನಪು’ ಈ ಬಾರಿ ಜಾರ್ಜ್ ಕುಟ್ಟಿಯ ಪ್ಲ್ಯಾನ್ ಏನು? – Kannada News | Mohanlal starrer Drishyam 3 movie trailer released

‘ದೃಶ್ಯಂ’ (Drishyam) ಸಿನಿಮಾ ಭಾರತ ಸಿನಿಮಾ ಇತಿಹಾಸದಲ್ಲೇ ಅತಿ ಹೆಚ್ಚು ರೀಮೇಕ್​​ಗಳನ್ನು ಕಂಡ ಸಿನಿಮಾ. ಮಾತ್ರವಲ್ಲದೆ, ಭಾರತೀಯ ಚಿತ್ರರಂಗದ ಅತ್ಯುತ್ತಮ ಕ್ರೈಂ ಥ್ರಿಲ್ಲರ್ ಸಹ ಹೌದು. ಆ ಸಿನಿಮಾದ ಭಿನ್ನತೆ, ಸರಳತೆಗೆ ಪ್ರೇಕ್ಷಕರು ಫಿದಾ ಆಗಿದ್ದರು. ಮೋಹನ್​​ಲಾಲ್ ನಟಿಸಿ, ಜಿತು ಜೋಸೆಫ್ ನಿರ್ದೇಶನ ಮಾಡಿದ್ದ ಈ ಸಿನಿಮಾದ ಎರಡನೇ ಭಾಗ 2022 ರಲ್ಲಿ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗಿತ್ತು. ಇದೀಗ ಈ ಸಿನಿಮಾದ ಮೂರನೇ ಭಾಗ ನಿರ್ಮಾಣವಾಗಿದ್ದು, ಬಿಡುಗಡೆಗೆ ರೆಡಿಯಾಗಿದೆ. ಇದೀಗ ಈ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಉಂಟು ಮಾಡಿದೆ.

ಈಗ ಬಿಡುಗಡೆ ಆಗಿರುವ ‘ದೃಶ್ಯಂ 3’ ಟ್ರೈಲರ್‌ನಲ್ಲಿ ಜಾರ್ಜ್‌ಕುಟ್ಟಿ ತನ್ನ ಹಿಂದಿನ ಕೃತ್ಯಗಳ ಬಗ್ಗೆ ಪಶ್ಚಾತ್ತಾಪ ಪಡುತ್ತಿರುವುದು ಕಂಡುಬರುತ್ತದೆ. ತನ್ನ ಮಕ್ಕಳು ತನ್ನನ್ನು ಒಬ್ಬ ಅಪರಾಧಿ ಎಂದು ಭಾವಿಸುತ್ತಿರಬಹುದೇ ಎಂಬ ಆತಂಕ ಅವನನ್ನು ಕಾಡುತ್ತಿದೆ. ಪೊಲೀಸರಿಂದ ತನ್ನ ಕುಟುಂಬವನ್ನು ರಕ್ಷಿಸಲು ಹೂತಿದ್ದ ಸತ್ಯಗಳು ಈಗ ಮತ್ತೆ ಮುನ್ನೆಲೆಗೆ ಬರುತ್ತಿದ್ದು, ಈ ಬಾರಿ ತನ್ನನ್ನು ಮತ್ತು ತನ್ನ ಕುಟುಂಬವನ್ನು ಕಾನೂನಿನಿಂದ ತಪ್ಪಿಸಲು ಜಾರ್ಜ್‌ಕುಟ್ಟಿ ಈ ಬಾರಿ ಯಾವ ರೀತಿಯ ಹೊಸ ತಂತ್ರಗಳನ್ನು ರೂಪಿಸುತ್ತಾನೆ ಎಂಬುದು ಕಥೆಯ ಮುಖ್ಯ ಎಳೆಯಾಗಿದೆ.

ನಿರ್ದೇಶಕ ಜೀತು ಜೋಸೆಫ್ ಈ ಭಾಗದಲ್ಲಿ ಕಥೆಯನ್ನು ಮತ್ತಷ್ಟು ರೋಚಕಗೊಳಿಸಿದ್ದಾರೆ. ಟ್ರೈಲರ್‌ನಲ್ಲಿ ತೋರಿಸಿರುವಂತೆ, ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಜಾರ್ಜ್‌ಕುಟ್ಟಿ ಮಾಡುವ ಪ್ರತಿಯೊಂದು ನಡೆ ಕೂಡ ಅನಿರೀಕ್ಷಿತ ತಿರುವುಗಳಿಂದ ಕೂಡಿದೆ. ತನ್ನ ಕುಟುಂಬದ ಮೇಲಿನ ಪ್ರೀತಿ ಮತ್ತು ಸಮಾಜದಲ್ಲಿ ಗೌರವ ಉಳಿಸಿಕೊಳ್ಳುವ ಹೋರಾಟದ ನಡುವೆ ಅವನು ಸಿಲುಕಿಕೊಂಡಿದ್ದಾನೆ. ಆದರೆ ಈ ಬಾರಿ ಪೊಲೀಸರ ಜೊತೆಗೆ ಪತ್ರಕರ್ತರು ಇನ್ನೂ ಕೆಲವರು ಜಾರ್ಜ್ ಕುಟ್ಟಿಯ ಹಿಂದೆ ಬಿದ್ದಿದ್ದಾರೆ.

ಇದನ್ನೂ ಓದಿ: ‘ದೃಶ್ಯಂ 3’ ಟೀಸರ್: ಜಾರ್ಜ್ ಕುಟ್ಟಿಗೆ ಮೊದಲ ಬಾರಿ ಭಯವಾಗಿದೆ

ಮೋಹನ್ ಲಾಲ್ ಅವರು ಜಾರ್ಜ್‌ಕುಟ್ಟಿಯ ಪಾತ್ರದಲ್ಲಿ ಎಂದಿನಂತೆ ಅದ್ಭುತವಾಗಿ ನಟಿಸಿದ್ದು, ಅವರ ಮುಖದಲ್ಲಿನ ಆತಂಕ ಮತ್ತು ಸ್ಥಿತಪ್ರಜ್ಞೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಚಿತ್ರದ ಮೊದಲ ಎರಡು ಭಾಗಗಳು ಸೂಪರ್ ಹಿಟ್ ಆಗಿರುವುದರಿಂದ, ಈ ಮೂರನೇ ಭಾಗದ ಮೇಲೆ ಚಿತ್ರರಂಗದಲ್ಲಿ ಮತ್ತು ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆಗಳಿವೆ. ಪೊಲೀಸರು ಜಾರ್ಜ್‌ಕುಟ್ಟಿಯನ್ನು ಈ ಬಾರಿ ಹೇಗೆ ಹಿಡಿಯುತ್ತಾರೆ ಅಥವಾ ಅವನು ಮತ್ತೆ ತನ್ನ ಬುದ್ಧಿವಂತಿಕೆಯಿಂದ ಪಾರಾಗುತ್ತಾನೆಯೇ ಎಂಬ ಪ್ರಶ್ನೆಗೆ ಸಿನಿಮಾ ಉತ್ತರ ನೀಡಲಿದೆ. ಟ್ರೈಲರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಲಯಾಳಂ ಚಿತ್ರರಂಗದ ಈ ಕ್ರೈಮ್ ಥ್ರಿಲ್ಲರ್ ಸಿನಿಮಾ ನೋಡಲು ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾ ಮೇ 21 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಫುಟ್‌ಪಾತ್ ಅಂಗಡಿಗಳ ತೆರವು ವೇಳೆ ಇಳಕಲ್​​ನಲ್ಲಿ ಹೈಡ್ರಾಮಾ: ವ್ಯಾಪಾರಿಗಳಿಂದ ತೀವ್ರ ಆಕ್ರೋಶ – Kannada News | Ilkal Footpath Shop Demolition Sparks Heated Protests by Traders

ಬಾಗಲಕೋಟೆ, ಮೇ 09: ಇಳಕಲ್ ನಗರದಲ್ಲಿ ಫುಟ್‌ಪಾತ್ ಅಂಗಡಿಗಳ ತೆರವು ಕಾರ್ಯಾಚರಣೆಯು ಆರಂಭಗೊಂಡಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ನಗರದಲ್ಲಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕಾರ್ಯಾಚರಣೆಯನ್ನು ನಗರಸಭೆ ಅಧಿಕಾರಿಗಳು ಹಮ್ಮಿಕೊಂಡಿದ್ದರು.  ಆದರೆ, ಈ ಕ್ರಮದಿಂದ ತಮ್ಮ ಜೀವನೋಪಾಯಕ್ಕೆ ಧಕ್ಕೆಯಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ ವ್ಯಾಪಾರಿಗಳು, ನಗರಸಭೆ ಅಧಿಕಾರಿಗಳೊಂದಿಗೆ ತೀವ್ರ ವಾಗ್ವಾದಕ್ಕಿಳಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಅಂಗಡಿಗಳನ್ನು ತೆರವುಗೊಳಿಸದಂತೆ ಮನವಿ ಮಾಡಿಕೊಂಡರೂ ಅಧಿಕಾರಿಗಳು ಕ್ರಮ ಕೈಗೊಂಡಾಗ, ವ್ಯಾಪಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಅಂಗಡಿಗಳನ್ನು ತೆರವುಗೊಳಿಸಿದರೆ, ತಾವು ವಿಷ ಕುಡಿದು ಸಾಯಬೇಕಾಗುತ್ತದೆ. ತಮ್ಮ ಸಾವಿಗೆ ನಗರಸಭೆ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ವ್ಯಾಪಾರಿಗಳ ಪ್ರತಿಭಟನೆ ತೀವ್ರಗೊಂಡು ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಲಕ್ಷಣಗಳು ಕಂಡುಬಂದ ಬೆನ್ನಲ್ಲೇ ಇಳಕಲ್ ನಗರ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದು, ಬಳಿಕ ಅವರ ಭದ್ರತೆಯಲ್ಲಿಯೇ ಕಾರ್ಯಾಚರಣೆ ಮುಂದುವರಿದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಆರೋಗ್ಯ ಮಾಹಿತಿ ಪಡೆಯಲು ಎಐ ಬಳಕೆ ಹೆಚ್ಚಳ: ಪ್ರತಿ 4ರಲ್ಲಿ ಒಬ್ಬರು ಎಐ ಮೇಲೆ ಅವಲಂಬನೆ – Kannada News | AI Health Advice Trend: Benefits, Risks, and What Medical Experts Say

ಇಂದಿನ ಡಿಜಿಟಲ್ ಯುಗದಲ್ಲಿ ಕೃತಕ ಬುದ್ಧಿಮತ್ತೆ (AI) ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗ ಜನರು ಆರೋಗ್ಯ ಸಂಬಂಧಿತ ಮಾಹಿತಿಗಾಗಿ ಕೂಡ ಎಐ ಸಾಧನಗಳನ್ನು ಹೆಚ್ಚು ಬಳಸುತ್ತಿರುವುದು ಹೊಸ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಹೌದು, ಹೆಮಟಾಲಜಿ ಅಡ್ವೈಸರ್ (Hematology Advisor) ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪ್ರತಿ ನಾಲ್ಕು ಜನರಲ್ಲಿ ಒಬ್ಬರು ಆರೋಗ್ಯದ ಬಗ್ಗೆ ಮಾಹಿತಿಗಾಗಿ ಎಐ ಆಧಾರಿತ ಟೂಲ್ಸ್ ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ. ವಿಶೇಷವಾಗಿ ಯುವಜನತೆ ಆರೋಗ್ಯ ವಿಷಯದಲ್ಲಿ ಎಐ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ.

ಅನಾರೋಗ್ಯದ ಲಕ್ಷಣಗಳು, ಆಹಾರ ಪದ್ಧತಿ, ಔಷಧಿಗಳ ಮಾಹಿತಿ, ತೂಕ ಇಳಿಕೆ ಸಲಹೆಗಳು ಮತ್ತು ಮಾನಸಿಕ ಆರೋಗ್ಯದ ಕುರಿತ ಪ್ರಶ್ನೆಗಳಿಗೆ ಜನರು ಎಐ ನೆರವು ಪಡೆಯುತ್ತಿದ್ದಾರೆ. ತಕ್ಷಣ ಉತ್ತರ ಸಿಗುವುದು ಮತ್ತು ಸುಲಭ ಭಾಷೆಯಲ್ಲಿ ಮಾಹಿತಿ ಲಭ್ಯವಾಗುವುದು ಇದರ ಜನಪ್ರಿಯತೆಗೆ ಪ್ರಮುಖ ಕಾರಣವಾಗಿದೆ. ಆದರೆ ವೈದ್ಯಕೀಯ ತಜ್ಞರು ಕೇವಲ ಎಐ ಮಾಹಿತಿಯನ್ನು ಸಂಪೂರ್ಣವಾಗಿ ನಂಬಬಾರದು ಎಂದು ಎಚ್ಚರಿಸಿದ್ದಾರೆ. ಎಐ ಸಾಮಾನ್ಯ ಮಾಹಿತಿ ನೀಡಬಹುದಾದರೂ, ಪ್ರತಿಯೊಬ್ಬರ ಆರೋಗ್ಯ ಪರಿಸ್ಥಿತಿ ವಿಭಿನ್ನವಾಗಿರುತ್ತದೆ. ಕೆಲವೊಮ್ಮೆ ಎಐ ತಪ್ಪು ಅಥವಾ ಅಪೂರ್ಣ ಮಾಹಿತಿ ನೀಡುವ ಸಾಧ್ಯತೆ ಇದೆ. ಜೊತೆಗೆ ಸ್ವಯಂ ಔಷಧಿ ಸೇವನೆಯ ಅಪಾಯವೂ ಹೆಚ್ಚಬಹುದು.

ಆರೋಗ್ಯ ಸಲಹೆಗೆ ಕೇವಲ ಎಐ ಅವಲಂಬಿಸುವುದು ಸರಿಯೇ?

ತಜ್ಞರ ಪ್ರಕಾರ, ಜ್ವರ, ಉಸಿರಾಟದ ತೊಂದರೆ, ತೀವ್ರ ನೋವು ಅಥವಾ ದೀರ್ಘಕಾಲದ ಕಾಯಿಲೆಗಳಂತಹ ಗಂಭೀರ ಸಮಸ್ಯೆಗಳಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಎಐ ನೀಡುವ ಮಾಹಿತಿಯನ್ನು ಕೇವಲ ಸಾಮಾನ್ಯ ಮಾರ್ಗದರ್ಶನವಾಗಿ ಮಾತ್ರ ಪರಿಗಣಿಸಬೇಕು. ಇದಲ್ಲದೆ, ಆರೋಗ್ಯ ಮಾಹಿತಿ ಪಡೆಯುವಾಗ ವಿಶ್ವಾಸಾರ್ಹ ಮೂಲಗಳನ್ನು ಮಾತ್ರ ಬಳಸುವುದು ಮುಖ್ಯ. ಯಾವುದೇ ಔಷಧಿ ಅಥವಾ ಸಪ್ಲಿಮೆಂಟ್ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು ಎಂದು ತಜ್ಞರು ಸೂಚಿಸಿದ್ದಾರೆ. ತಂತ್ರಜ್ಞಾನ ಆರೋಗ್ಯ ಜಾಗೃತಿ ಹೆಚ್ಚಿಸಲು ಸಹಾಯಕವಾದರೂ, ವೈದ್ಯಕೀಯ ಪರಿಣಿತರಿಗೆ ಪರ್ಯಾಯವಲ್ಲ ಎಂಬ ಅರಿವು ಜನರಲ್ಲಿ ಮೂಡುವುದು ಅಗತ್ಯವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RR vs GT: ಶತಕದ ಮೇಲೆ ಶತಕ.. ಗಿಲ್- ಸುದರ್ಶನ್ ಜೊತೆಯಾಟಕ್ಕೆ ದಾಖಲೆಗಳೆಲ್ಲ ಧ್ವಂಸ – Kannada News | Sai Sudharsan and Shubman Gill Break IPL Record: Fastest Duo to Six Century Opening Stands for GT

ಗಮನಾರ್ಹವಾಗಿ, ಶುಭ್​ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಕೇವಲ 28 ಪಂದ್ಯಗಳಲ್ಲಿ ಆರು ಶತಕ ಪಾಲುದಾರಿಕೆಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಅತಿ ಕಡಿಮೆ ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಲ್ಲದೆ, ಇವರಿಬ್ಬರ ನಡುವೆ ಇದುವರೆಗೆ 9 ಶತಕದ ಜೊತೆಯಾಟಗಳು ನಡೆದಿವೆ. ಆದರೆ ಉಳಿದ 3 ಶತಕದ ಜೊತೆಯಾಟಗಳು ಅರಂಭಿಕ ವಿಕೆಟ್​ಗೆ ಬಂದಿಲ್ಲ (PC- PTI).

Source link

ಬಿಎಸ್​​​ವೈ ಅಭಿಮಾನೋತ್ಸವ: ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತೆ; ಪ್ರಲ್ಹಾದ್​ ಜೋಶಿ – Kannada News | BSY Abhimanotsava: BJP Will Return to Power in Karnataka Under Yediyurappa’s Leadership, Says Pralhad Joshi

ಚಿತ್ರದುರ್ಗ, ಮೇ 09: ಕರ್ನಾಟಕದಲ್ಲಿ ಮುಂದೆ ಬಿಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಹೇಳಿದ್ದಾರೆ. ನಗರದಲ್ಲಿ ನಡೆದ ಬಿಎಸ್​ ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 21ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದಿದೆ. ಮುಂದೆ ಮತ್ತೆ ಬಿಜೆಪಿ ಆಡಳಿತಕ್ಕೆ ಬರಲಿದೆ ಎಂದರು. ರೈತರಿಗೆ ‌ನ್ಯಾಯ ಒದಗಿಸಿದ ರಾಜಾಹುಲಿ ಯಾರಾದರೂ ಇದ್ದರೆ ಅದು ಯಡಿಯೂರಪ್ಪ. ಪ್ರಧಾನಿ ನರೇಂದ್ರ ಮೋದಿ ಅವರು ಯಡಿಯೂರಪ್ಪರವರಿಗೆ ಶುಭಾಶಯ ಕೋರಿ ಸಂದೇಶ ಕಳುಹಿಸಿದ್ದಾರೆ ಎಂದು ಹೇಳಿದರು. ಇನ್ನು ಇಂದಿನ ಹೋರಾಟ ಸಾಮಾಜಿಕ ಜಾಲತಾಣಕ್ಕೆ‌ ಸೀಮಿತ ಆಗಿದೆ. ಆದರೆ ಹೋರಾಟಕ್ಕೆ ಹೊಸ ಪರಿಕಲ್ಪನೆ ಕೊಟ್ಟಿದ್ದು ಬಿಎಸ್​ ಯಡಿಯೂರಪ್ಪ ಅವರು. ನಾವೆಲ್ಲಾ ಅವರಿಂದ ಪ್ರೇರಣೆ ಪಡೆಯಬೇಕು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಹೈಕಮಾಂಡ್​​ ಸಭೆ ಬಳಿಕವೂ ಆಗದ ಅಂತಿಮ ನಿರ್ಧಾರ: ಕೇರಳದ ನೂನತ ಸಿಎಂ ಯಾರೆಂಬುದು ಇನ್ನೂ ಸಸ್ಪೆನ್ಸ್​! – Kannada News | Kerala CM Race: UDF Wins Big, But Congress High Command Delays Final Decision

ಸಿಎಂ ರೇಸ್​​ನಲ್ಲಿರುವ ನಾಯಕರು.Image Credit source: mathrubhumi.com

ತಿರುವನಂತಪುರಂ/ನವದೆಹಲಿ: ಕೇರಳ ವಿಧಾನಸಭಾ ಚುನಾವಣೆಯಲ್ಲಿ 140 ಕ್ಷೇತ್ರಗಳ ಪೈಕಿ ಕಾಂಗ್ರೆಸ್​​ (Congress) ನೇತೃತ್ವದ ಯುಡಿಎಫ್​​ (UDF) 102 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿದೆ. ಹೀಗಿದ್ದರೂ ಕೇರಳದ ಮುಂದಿನ ಮುಖ್ಯಮಂತ್ರಿ (Chief Minister) ಯಾರು ಎಂಬ ಕುತೂಹಲ ಇನ್ನೂ ಮುಂದುವರಿದಿದ್ದು, ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿ ನಡೆಸಿದ ಸುದೀರ್ಘ ಸಭೆ ಬಳಿಕವೂ ಈ ಬಗ್ಗೆ ಯಾವುದೇ ಅಂತಿಮ ತೀರ್ಮಾನ ಹೊರಬಂದಿಲ್ಲ.

ಸಭೆ ಬಳಿಕ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕೇರಳ ಕಾಂಗ್ರೆಸ್ ಉಸ್ತುವಾರಿ ದೀಪಾ ದಾಸ್ ಮುನ್ಶಿ, ಮುಖ್ಯಮಂತ್ರಿ ಆಯ್ಕೆ ಕುರಿತ ಚರ್ಚೆ ಇನ್ನೂ ನಡೆಯುತ್ತಿದೆ. ಯುಡಿಎಫ್ ಸರ್ಕಾರದ ನಾಯಕರನ್ನು ಆಯ್ಕೆ ಮಾಡುವ ಸಂಪೂರ್ಣ ಅಧಿಕಾರವನ್ನು ಕಾಂಗ್ರೆಸ್ ಹೈಕಮಾಂಡ್‌ಗೆ ನೀಡುವ ಕುರಿತ ನಿರ್ಣಯಕ್ಕೆ ಎಲ್ಲಾ ಕಾಂಗ್ರೆಸ್ ಶಾಸಕರು ಸಹಿ ಹಾಕಿದ್ದಾರೆ. ಹೀಗಾಗಿ ಸಿಎಂ ಯಾರಾಗಲಿದ್ದಾರೆ ಎಂಬ ಅಂತಿಮ ನಿರ್ಣಯವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್​​ ವರಿಷ್ಠ ರಾಹುಲ್​​ ಗಾಂಧಿ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಸಿಎಂ ಆಗಿ ನಾಳೆ ವಿಜಯ್​ ಪ್ರಮಾಣವಚನ; ಸಮಯ, ಸ್ಥಳದ ಮಾಹಿತಿ ಇಲ್ಲಿದೆ

ಸಭೆಯಲ್ಲಿ ಯಾರೆಲ್ಲ ಭಾಗಿ?

ಸಿಎಂ ಆಯ್ಕೆ ಸಂಬಂಧ ದೆಹಲಿಯ ರಾಜಾಜಿ ಮಾರ್ಗದಲ್ಲಿರುವ ಖರ್ಗೆ ನಿವಾಸದಲ್ಲಿ ನಡೆದ ಮಹತ್ವದ ಸಭೆಯಲ್ಲಿ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೇರಳ ಕಾಂಗ್ರೆಸ್ ಉಸ್ತುವಾರಿ ದೀಪದಾಸ್ ಮುನ್ಶಿ, ಕೇರಳಂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸನ್ನಿ ಜೋಸೆಫ್, ಶಾಸಕರಾದ ಸತೀಸನ್, ರಮೇಶ್ ಚೆನ್ನಿತ್ತಲ ಸೇರಿದಂತೆ ಎಐಸಿಸಿ ವೀಕ್ಷಕರಾದ ಮುಕುಲ್ ವಾಸ್ನಿಕ್ ಮತ್ತು ಅಜಯ್ ಮಾಕೆನ್ ಕೂಡ​ ಉಪಸ್ಥಿತರಿದ್ದರು.

ಗದ್ದುಗೆಗಾಗಿ ಗುದ್ದಾಟ

ಯುಡಿಎಫ್ ಭರ್ಜರಿ ಗೆಲುವಿನ ಬಳಿಕ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಒಳಗಡೆ ಭಾರೀ ಲಾಬಿ ಹಾಗೂ ಗುಂಪು ರಾಜಕೀಯ ಜೋರಾಗಿದೆ. ಸತೀಶನ್, ವೇಣುಗೋಪಾಲ್ ಮತ್ತು ಚೆನ್ನಿತ್ತಲ ಪರ ಬೆಂಬಲಿಗರು ಪೋಸ್ಟರ್, ಫ್ಲೆಕ್ಸ್‌, ಮೆರವಣಿಗೆಗಳ ಮೂಲಕ ತಮ್ಮ ನಾಯಕರ ಪರ ಅಭಿಯಾನ ನಡೆಸುತ್ತಿದ್ದಾರೆ. 140 ಸದಸ್ಯರ ಕೇರಳ ವಿಧಾನಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ 102 ಸ್ಥಾನಗಳನ್ನು ಗೆದ್ದು ಬೀಗಿದೆ. ಎಲ್‌ಡಿಎಫ್ 35 ಸ್ಥಾನಗಳಿಗೆ ಕುಸಿದರೆ, ಬಿಜೆಪಿ 3 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಹೀಗಾಗಿ ಜನರ ಚಿತ್ತ ದೆಹಲಿಯತ್ತ ನೆಟ್ಟಿದ್ದು, ಕಾಂಗ್ರೆಸ್ ಹೈಕಮಾಂಡ್ ಶೀಘ್ರದಲ್ಲೇ ಘೋಷಿಸಲಿರುವ ಕೇರಳದ ಮುಂದಿನ ಮುಖ್ಯಮಂತ್ರಿ ಯಾರೆಂಬ ಕುತೂಹಲ ಹೆಚ್ಚಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version